೧೬೯೬ರ ಇಂಗ್ಲೀಷ್‌ ಕ್ರಿಕೆಟ್‌ನ ಇತಿಹಾಸ

೧೭೨೫ರ ಕ್ರಿಕೆಟ್‌ ಇತಿಹಾಸ , ಗ್ರಹಿಸಲ್ಪಟ್ಟ ಮೂಲದಿಂದ ಇಂಗ್ಲೆಂಡಿನಲ್ಲಿ ಪ್ರಮುಖ ಆಟವಾಗಿ ಪರಿವರ್ತನೆ ಹೊಂದಿದ ಮತ್ತು ಇತರ ರಾಷ್ಟ್ರಗಳಿಗೂ ಪರಿಚಯಿಸಲ್ಪಟ್ಟ ಹಂತದವರೆಗಿನ ಕ್ರೀಡೆಗಳ ಬೆಳವಣಿಗೆಯನ್ನು ಗುರುತಿಸುತ್ತದೆ.

ಕ್ರಿಕೆಟ್‌ನ ಈ ಮೊದಲಿನ ಸ್ಪಷ್ಟವಾದ ಉಲ್ಲೇಖ ೧೫೯೮ರಲ್ಲಿಯೇ ದೊರಕಿತ್ತು ಮತ್ತು c.೧೫೫೦ರ ಸಮಯದಲ್ಲಿ ಈ ಕ್ರೀಡೆಯನ್ನು ಆಡಿಸಲಾಗಿತ್ತು ಎಂದು ಸ್ಪಷ್ಟವಾಗಿ ತಿಳಿಸುತ್ತದೆ, ಆದರೆ ಇದರ ನಿಜವಾದ ಮೂಲವು ರಹಸ್ಯವಾಗಿ ಉಳಿದಿದೆ. ಇಂಗ್ಲೆಂಡಿನ ಆಗ್ನೇಯ ಭಾಗ, ಕೆಂಟ್, ಸಸೆಕ್ಸ್‌ ಮತ್ತು ಸರ್ರೇ ರಾಷ್ಟ್ರಗಳಲ್ಲಿ ಅಥವಾ ಬಹುಷಹ ವ್ಹೀಲ್ಡ್‌ ಎಂದು ಗುರುತಿಸಲಾದ ಪ್ರದೇಶಗಳಲ್ಲಿ ಎಲ್ಲೋ ಒಂದು ಕಡೆ ಇದರ ಆರಂಭವು ೧೫೫೦ಕ್ಕಿಂತ ಬಹಳ ಹಿಂದೆಯೇ ಆಗಿತ್ತು ಎಂದು ನಿಶ್ಚಿತತೆಯ ಎಲ್ಲಾ ಸಮಂಜಸ ದೃಷ್ಟಿಕೋನದಿಂದ ಹೇಳಬಹುದು. ಬ್ಯಾಟ್ಸ್‌ಮನ್‌, ಬೌಲರ್‌ ಮತ್ತು ಫೀಲ್ಡರ್‌ಗಳನ್ನು ಹೊಂದಿರುವ, ಸ್ಟೂಲ್‌ಬಾಲ್‌ ಮತ್ತು ರೌಂಡರ್ಸ್‌ನಂತಹ ಇತರ ಕ್ರೀಡೆಗಳಂತಲ್ಲದೇ, ೧೭೬೦ ರ ವರೆಗೂ ಕ್ರಿಕೆಟ್‌ ಅನ್ನು ಸಾಪೇಕ್ಷವಾದ ಕಿರಿದಾದ ಹುಲ್ಲುಗಳ ಮೈದಾನದಲ್ಲಿ, ಅದರಲ್ಲೂ ಪ್ರಮುಖವಾಗಿ ಬಾಲನ್ನು ಮೈದಾನಕ್ಕನುಗುಣವಾಗಿ ಆಡಿಸಬಹುದಾಗಿತ್ತು. ಆದುದರಿಂದ, ಸಮತಲವಾದ ಅರಣ್ಯ ಪ್ರದೇಶ ಮತ್ತು ಕುರಿಗಳನ್ನು ಮೇಯಿಸಲಾಗುವ ಭೂಮಿ ಈ ಆಟವನ್ನು ಆಡಲು ಸೂಕ್ತವಾದ ಸ್ಥಳಗಳಾಗಬಹುದು.

ಕ್ರಿಕೇಟಿನ ಆರಂಭದ ವರ್ಷಗಳ ಬಗ್ಗೆ ದೊರೆತಿರುವ ವಿಳವಾದ ಮಾಹಿತಿಗಳು ಇದು ಮೂಲತಹವಾಗಿ ಮಕ್ಕಳ ಕ್ರಿಕೆಟ್‌ ಆಗಿತ್ತು ಎಂದು ಸಲಹೆಯನ್ನು ನೀಡುತ್ತವೆ. ನಂತರದಲ್ಲಿ, ೧೭ನೇ ಶತಮಾನದ ಆರಂಭದಲ್ಲಿ ಪುರುಷ ಕಾರ್ಮಿಕರ ಈ ಆಟವನ್ನು ಕೈಗೆತ್ತಿಕೊಂಡರು. ಚಾರ್ಲ್ಸ್‌ Iನ ರಾಜ್ಯಾಡಳಿತದ ಸಮಯದಲ್ಲಿ, ಸಜ್ಜನರು ಪ್ರೋತ್ಸಾಹಕರಾಗಿ ಮತ್ತು ಒಮ್ಮೊಮ್ಮೆ ಆಟಗಾರರಾಗಿ ವಿಸ್ತೃತವಾದ ಆಸಕ್ತಿಯನ್ನು ತೆಗೆದುಕೊಂಡರು. ಅವರಿಗಿದ್ದ ದೊಡ್ಡ ಆಕರ್ಷಣೆಯೆಂದರೆ ಜೂಜಾಟಕ್ಕೆ ಮತ್ತು ಹಲವಾರು ವರ್ಷಗಳವರೆಗೆ ಇದರ ಜೀರ್ಣೋದ್ಧಾರವನ್ನು ವರ್ಧಿಸಲು ಈ ಕ್ರೀಡೆಯು ಒದಗಿಸಿದ ಒಂದು ಸದವಕಾಶ. ಹ್ಯಾನೋವೇರಿಯನ್‌ ಶ್ರೇಣಿ ಹೂಡಿಕೆಯ ಸಮಯದಲ್ಲಿ ಕ್ರಿಕೆಟ್ ವೃತ್ತಿಪರ ಆಟಗಾರರನ್ನು ಮತ್ತು ಮೊದಲ ಪ್ರಮುಖ ಕ್ಲಬ್‌ಗಳನ್ನು ರಚಿಸಿತ್ತು, ಆಮೂಲಕ ಲಂಡನ್‌ ಮತ್ತು ದಕ್ಷಿಣ ಇಂಗ್ಲಂಡ್‌ನಲ್ಲಿ ಕ್ರೀಡೆಯನ್ನು ಒಂದು ಜನಪ್ರಿಯ ಸಾಮಾಜಿಕ ಚಟುವಟಿಕೆಯನ್ನಾಗಿ ನಿರ್ಮಿಸಲಾಯಿತು. ಆ ಸಮಯದಲ್ಲಾಗಲೇ, ಇಂಗ್ಲೀಷ್‌ ವಲಸೆಗಾರರು ಉತ್ತರ ಅಮೇರಿಕ ಮತ್ತು ವೆಸ್ಟ್ಟ್ ಇಂಡೀಸ್‌ಗಳಲ್ಲಿ ಕ್ರಿಕೇಟನ್ನು ಪರಿಚಯಿಸಿದ್ದರು; ಮತ್ತು ಈಸ್ಟ್ ಇಂಡಿಯಾ ಕಂಪನಿಯ ವ್ಯಾಪಾರಿಗಳು ಮತ್ತು ನಾವಿಕರು ಈ ಕ್ರೀಡೆಯನ್ನು ಭಾರತೀಯ ಉಪಖಂಡಗಳಿಗೂ ಕೂಡ ಪರಿಚಯಿಸಿದ್ದರು.

ಮಕ್ಕಳ ಆಟದ ರೂಪದಲ್ಲಿ ಕ್ರಿಕೆಟ್‌ನ ಉಗಮ ಬದಲಾಯಿಸಿ

ಮೂಲದ ಬಗೆಗಿನ ಸಿದ್ಧಾಂತಗಳು ಬದಲಾಯಿಸಿ

ಹೆಚ್ಚು ವಿಸ್ತೃವಾಗಿ ಸ್ವೀಕರಿಸಿದ ಕ್ರಿಕೇಟಿನ ಮೂಲದ ಬಗೆಗಿನ ಸಿದ್ಧಾಂತವೆಂದರೆ ಮಧ್ಯಯುಗೀನ ಆರಂಭದಲ್ಲಿ ಕೆಂಟ್ ಮತ್ತು ಸಸೆಕ್ಸ್‌ ಪ್ರದೇಶದ ಕೆಲವು ಭಾಗಗಳಲ್ಲಿನ ರೈತಾಪಿ ಮತ್ತು ಲೋಹದಿಂದ ವಸ್ತುಗಳನ್ನು ರಚಿಸುವ ಕಾರ್ಮಿಕ ವರ್ಗದವರಲ್ಲಿ ಅಭಿವೃದ್ಧಿ ಹೊಂದಿದ್ದ ಆಟದ ಬಗೆಗಿನ್ ಇತಿಹಾಸ.[೧] ಈ ಎಲ್ಲಾ ಕೌಂಟಿಗಳು ಮತ್ತು ನೆರೆಯ ಪ್ರದೇಶದ ಸರ್ರೆಗಳು ಹಿಂದಿನ ಆಟದ ಉತ್ಕೃಷ್ಟತೆಯ ಕೇಂದ್ರಗಳಾಗಿದ್ದವು ಮತ್ತು ಇವುಗಳ ಮೂಲಕವೇ ಈ ಆಟವು ಅದಕ್ಕೆ ಅಂತ್ಯವಾಗದ ಜನಪ್ರಿಯತೆಯನ್ನು ಗಳಿಸಿಕೊಟ್ಟ ಇಂಗ್ಲೆಂಡ್, ಮತ್ತು ಇತರ ದಕ್ಷಿಣ ರಾಷ್ಟ್ರಗಳಾದ ಬರ್ಕ್‌ಶೈರ್‌, ಎಸೆಕ್ಸ್‌, ಹ್ಯಾಂಪ್‌ಶೈರ್‌ ಮತ್ತು ಮಿಡಲ್‌ಎಸೆಕ್ಸ್‌ನಂತಹ ರಾಷ್ಟ್ರಗಳಿಗೆ ತಲುಪಿತು.[೨]

 
II ಎಡ್‌ವರ್ಡ್‌ ತನ್ನ ಯೌವನಾವಸ್ಥೆಯಲ್ಲಿ ಕ್ರೇಗ್‌ ಆಡಿದ್ದರು (ಕ್ಯಾಸೆಲ್‌ರವರ ಹಿಸ್ಟರಿ ಆಫ್‌ ಇಂಗ್ಲೆಂಡ್‌ನಲ್ಲಿ ಚಿತ್ರಿಸಲಾಗಿದೆ).

ಆ ಸಮಯದಲ್ಲಿ ಜನಸಾಮಾನ್ಯ ಬಳಕೆಯಲ್ಲಿದ್ದ ಕೆಲವೇ ಸಂಖ್ಯೆಯ ಅಕ್ಷರಗಳು "ಕ್ರಿಕೆಟ್" ಎಂಬ ಹೆಸರಿಗೆ ಸಾಧ್ಯತಾ ಮೂಲಗಳೆಂದು ತಿಳಿಯಲಾಗಿದೆ. ೧೫೯೮ರಲ್ಲಿ ಮುಂಚಿತವಾಗಿ ತಿಳಿಯಲ್ಪಟ್ಟ ಆಟಗಳ ಉಲ್ಲೇಖಗಳಲ್ಲಿ ಇದನ್ನು ಕ್ರೆಕೇಟ್ ಎಂದು ಕರೆಯಲಾಗಿತ್ತು. ಆಗ್ನೇಯ ಇಂಗ್ಲೆಂಡ್ ಮತ್ತು ಕೌಂಟಿ ಆಫ್ ಫ್ಲಾಂಡರ್ಸ್ ನಡುವಿನ ಮಧ್ಯಯುಗದ ತುಂಬ ದೃಢವಾದ ವ್ಯಾಪಾರೀ ಸಂಪರ್ಕಗಳನ್ನು ಗಮನದಲ್ಲಿಟ್ಟುಕೊಂಡಾಗ, ಮತ್ತು ಅವುಗಳಲ್ಲಿ ಕೊನೆಯದು ಡಚಿ ಆಫ್ ಬರ್ಗುಂಡಿಗೆ ಸಂಬಂಧಿಸಿದ್ದಾಗ, ಈ ಹೆಸರು ಮಧ್ಯ ಡಚ್[೩] ಕೋಲು ಎಂಬ ಅರ್ಥ ಕೊಡುವ krick (-e ) ಎಂಬ ಪದದಿಂದ ಬಂದಿದ್ದಿರಬಹುದು; ಅಥವಾ ಹಳೆಯ ಇಂಗ್ಲೀಷ್‌cricc ಅಥವಾ cryce ಎಂಬ ಒಂದು ಊರುಗೋಲು ಅಥವಾ ದೊಣ್ಣೆ ಎಂಬ ಅರ್ಥಗಳನ್ನು ಕೊಡುವ ಶಬ್ದದಿಂದ ಬಂದಿದ್ದಿರಬಹುದು.[೪] ಸ್ಯಾಮುಎಲ್‌ ಜಾನ್‌ಸನ್‌ನ ಡಿಕ್ಷ್‌ನರಿ ಆಫ್‌ ದಿ ಇಂಗ್ಲೀಷ್‌ ಲ್ಯಾಂಗ್ವೇಜ್‌‌ ನಲ್ಲಿ (೧೭೫೫) ಆತನು ಕ್ರಿಕೆಟ್ ಎಂಬ ಪದವನ್ನು "ಮರದ ಕಡ್ಡಿ ಏಂದು ಸೂಚಿಸುವ ಸ್ಯಾಕ್ಸೊನ್‌ನ ಕ್ರೈಸ್ ‌" ಎಂಬ ಪದದಿಂದ ಪಡೆದಿದ್ದನು.[೨] ಹಳೆಯ ಫ್ರೆಂಚ್‌ ಭಾಷೆಯಲ್ಲಿರುವ ಕ್ರಿಕ್ವೆಟ್‌ ಎಂಬ ಪದವು ಒಂದು ವಿದವಾದ ಕ್ಲಬ್‌ ಅಥವಾ ಕಡ್ಡಿ ಎಂದು ಅರ್ಥ ಸೂಚಿಸುವ ಪದವೆಂದು ಗುರುತಿಸಲಾಗಿತ್ತು, ಆದರೂ ಇದು ಕ್ರೊಕ್ವೆಟ್ ಎಬ ಪದದ ಮೂಲವೂ ಕೂಡ ಅಗಿರಬಹುದು.[೪] ಇನ್ನೊಂದು ಸಾದ್ಯತಾ ಮೂಲವೆಂದರೆ ಮದ್ಯಕಾಲೀನ ಡಚ್‌ ಪದವಾದ ಕ್ರಿಕ್‌ಸ್ಟೋಲ್‌ , ಇದರ ಅರ್ಥ ಚರ್ಚುಗಳಲ್ಲಿ ಗೌರವ ಸೂಚಿಸಲು ಮಂಡಿಯೂರಿ ಕುಳಿತುಕೊಳ್ಳಲು ಬಳಸಲ್ಪಡುತ್ತಿದ್ದ ಉದ್ದನೆಯ, ಹಗುರವಾದ ಒಂದು ಆಸನ, ಅದರ ಆಕಾರವು ಹಿಂದಿನ ದಿನಗಳಲ್ಲಿ ಬಳಸಲ್ಪಡುತ್ತಿದ್ದ ಕ್ರಿಕೇಟಿನ ಎರಡು ವಿಕೇಟ್, ಸ್ಟಂಪ್‌ಗಳನ್ನು ಹೋಲುತ್ತಿತ್ತು.[೫] ಬಾನ್‌ ವಿಶ್ವವಿದ್ಯಾಲಯದ ಯುರೋಪಿಯನ್‌ ಭಾಷಾ ತಜ್ಞರಾಗಿರುವ ಹೈನರ್‌ ಗಿಲ್‌ಮಿಸ್ಟರ್‌ ಅವರ ಪ್ರಕಾರ ಕ್ರಿಕೆಟ್‌ ಶಬ್ಧವನ್ನು ಹಾಕಿ ಆಟಕ್ಕಿರುವ ಮಧ್ಯಡಚ್‌ ನುಡಿಗಟ್ಟಾದ met de (ಕ್ರಿಕ್‌ ಕೆಟ್)sen (ಅಂದರೆ ಕೋಲಿನೊಂದಿಗೆ ಬೆನ್ನಟ್ಟು ) ಎಂಬುದರಿಂದ ಪಡೆಯಲಾಗಿದೆ.[೬] ಈ ಕ್ರೀಡೆಯು ಫ್ಲೆಮಿಶ್‌ ಭಾಷೆಯ ಮೂಲವನ್ನು ಹೊಂದಿದೆ ಆದರೆ ಈ ವಿಷಯಕ್ಕೆ ಸಂಬಂದಪಟ್ಟಂತೆ "ನ್ಯಾಯ ಮಂಡಳಿಯು ಇಂದಿಗೂ ಹೊರಗುಳಿದಿದೆ" ಎಂದು ಗಿಲ್‌ಮಿಸ್ಟರ್‌ ನಂಬಿದ್ದಾರೆ.[೭] ಕ್ರಿಕೆಟ್ ಇದು ಬಹುಷಹ ಮಕ್ಕಳಿಂದ ರಚಿಸಲ್ಪಟ್ಟಿದೆ ಮತ್ತು ಪ್ರಮುಖವಾಗಿ ಮಕ್ಕಳ ಆಟವಾಗಿ ಹಲವಾರು ತಲೆಮಾರುಗಳವೆರೆಗೆ ಉಳಿದುಕೊಂಡು ಬಂದಿದೆ.[೮] ಕ್ರಿಕೆಟ್ ಆಟವು ಚೆಂಡಾಟದಿಂದ ಹುಟ್ಟಿರಬಹುದಾಗಿದೆ, ಚೆಂಡಾಟದ ಕ್ರೀಡೆಯೇ ಕ್ರಿಕೆಟ್‌ಗಿಂತ ಪ್ರಾಚೀನವಾದದ್ದು ಎಂದು ಊಹಿಸಲಾಗಿದೆ. ಈ ಆಟಕ್ಕೆ, ಚೆಂಡು ಗುರಿ ತಲುಪಲು ತಡೆಯೊಡ್ಡುತ್ತ ಅದನ್ನು ಎದುರಿಸುವ ಬ್ಯಾಟ್ಸ್‌ಮನ್‌ನ ಪ್ರವೇಶವಾಗುವುದರೊಂದಿಗೆ ಈ ಆಟ ಹುಟ್ಟಿಕೊಂಡಿತು. ಆಡುಗಳನ್ನು ಮೇಯಿಸಿದ ಪ್ರದೇಶ ಅಥವಾ ಕಾಡಿನ ಬಯಲು ಪ್ರದೇಶಗಳಲ್ಲಿ ಆಡುವುದು, ಸಾಮಾನ್ಯವಾಗಿ ಕುರಿಗಳ ಉಣ್ಣೆಯಿಂದ ಮಾಡಿದ (ಒಂದು ಕಲ್ಲು ಅಥವಾ ಒಂದು ಚಿಕ್ಕ ಮರದ ತುಂಡನ್ನಾದರೂ ಬಳಸಬಹುದು) ಒಂದು ಹೊಪಿಲ್ಲದ ಉಂಡೆಯಂತಹ ಬಾಲ್ ಅನ್ನು ಮೂಲ ಪರಿಕರಗಳಾಗಿ ಬಳಸಿಕೊಂಡಿದ್ದು; ಒಂದು ಮರದ ಕಡ್ಡಿ ಅತವಾ ಒಂದು ಕೋಲು ಅಥವಾ ಬ್ಯಾಟ್‌ ರೀತಿಯಲ್ಲಿ ಯಾವುದಾದರೊಂದು ಉಪಕರಣವನ್ನು ಬಳಸಬಹುದು; ಮತ್ತು ಒಂದು ಗೇಟು (ಉದಾಹರಣೆಗೆ., ಒಂದು ವಿಕೇಟ್ ಗೇಟ್‌), ಒಂದು ಮರದ ಕಾಲುಮಣೆಯನ್ನು ಅಥವಾ ಒಂದು ಮರದ ತುಂಡನ್ನು ವಿಕೇಟ್ ಆಗಿ ಬಳಸಬಹುದು. ೧೩೦೦ಕಿಂತ ಮೊದಲು ನಾರ್ಮನ್‌ ಅಥವಾ ಪ್ಲ್ಯಾಂಟೆಜ್‌ನೆಟ್‌ ಸಮಯದಲ್ಲಿನ ಯಾವುದೇ ಸಂದರ್ಭದಲ್ಲಿ; ಅಥವಾ ೧೦೬೬ಕ್ಕಿಂತ ಮೊದಲು ಸ್ಯಾಕ್ಸೋನ್‌ ಸಮಯದಲ್ಲಿ ಕೂಡ ಈ ಆಟದ ಆವಿಷ್ಕಾರವಾಗಿರಬಹುದು.[೯] ಕ್ರಿಕೆಟ್ ಅವಶ್ಯವಾಗಿ ಸ್ಟೂಲ್‌ಬಾಲ್‌, ರೌಂಡರ್ಸ್‌ ಮತ್ತು ಬೇಸ್‌ಬಾಲ್‌ ನಂತಹ ಬ್ಯಾಟ್‌-ಮತ್ತು-ಬಾಲ್‌ ಆಟದ ಕುಟುಂಬಕ್ಕೆ ಸೇರಿದ ಆಟವಾಗಿದೆ ಆದರೆ ಅದಕ್ಕೆ ಪ್ರತಿಯಾಗಿ ಇದು ಆ ಆಟಗಳ ರೀತೀಯಲ್ಲಿಯೇ ಕ್ರಮವಾಗಿ ಬೆಳವಣಿಗೆ ಹೊಂದಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ನಿರ್ಧರಿತವಾಗಿಲ್ಲ.[೨] ಆಕ್ಸ್‌ಫರ್ಡ್‌ಶೈರ್‌ನಲ್ಲಿ ಹೆಸರಿಸಲ್ಪಟ್ಟ ಮೈದಾನದಲ್ಲಿ ಸ್ಟೂಲ್‌ಬಾಲ್‌ಗೆ ಸಂಬಂಧಿಸಿದಂತೆ ೧೫೨೩ ಉಲ್ಲೇಖಗಳಿವೆ; ಬಾಲನ್ನು ಬ್ಯಾಟ್‌ನಿಂದ ಅಥವಾ ಸ್ಟಿಕ್‌ನಿಂದ ಹೊಡೆಯಬಹುದಾದ ಯಾವುದೇ ಆಟಕ್ಕೆ ಸಂಬಂಧಿಸಿದಂತೆ ಇದು ಒಂದು ವಿಶಿಷ್ಟ ನಿಯಮವಾಗಿರಬಹುದು.[೧೦] ಕ್ರಿಕೆಟ್‌ನೊಂದಿಗೆ ಹೊಂದಿಕೊಂಡಿರುವ ಸ್ಟೂಲ್‌ಬಾಲ್‌ನ ೧೮ನೇ ಶತಮಾನದ ಉಲ್ಲೇಖಗಳು ಇದು ಒಂದು ಪ್ರತ್ಯೇಕವಾದ ಚಟುವಟಿಕೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ.[೧೧]

"ಕ್ರಿಯೇಗ್‌" ಬದಲಾಯಿಸಿ

೧೩೦೦, ಮಾರ್ಚ್‌ ೧೦ರ ಗುರುವಾರದಂದು (ಜೂಲಿಯನ್‌ ಕ್ಯಾಲೆಂಡರ್‌, ಬಹುಶಹ ೧೩೦೧ರ ಗ್ರೆಗೋರಿಯನ್‌ ವರ್ಷ ಕೂಡ ಇದ್ದಿರಬಹುದು) ರಾಜನಾದ ಇಂಗ್ಲೆಂಡಿನ ಮೊದಲನೆಯ ಎಡ್‌ವರ್ಡ್‌ನ ಉಡುಪಿನ ಕಪಾಟಿನಲ್ಲಿದ್ದ ಲೆಕ್ಕಪತ್ರಗಳು ಪ್ರಿನ್ಸ್‌ ಎಡ್‌ವರ್ಡ್‌ನಿಗೆ ವೆಸ್ಟ್‌ಮಿನ್ಸ್ಟರ್‌ ಮತ್ತು ನ್ಯೂವೆಂಡನ್‌ನಲ್ಲಿ "ಕ್ರಿಯೇಗ್‌ ಮತ್ತು ಇತರ ಆಟಗಳನ್ನು" ಆಡಲು ನೀಡಿದ್ದ ಹಣವನ್ನು ಮೊನೀಸ್‌ನ ಜಾನ್‌ ಡೆ ಲೀಕ್‌ನಿಗೆ ಮರುಪಾವತಿಸಿದ ಮಾಹಿತಿಗಳನ್ನು ಒಳಗೊಂಡಿದೆ.[೨] ಭವಿಷ್ಯದಲ್ಲಿ ವ್ಹೇಲ್ಸ್‌ನ ರಾಜನಾದ ಪ್ರಿನ್ಸ್‌ ಎಡ್‌ವರ್ಡ್‌ನಿಗೆ ಆಗ ಕೇವಲ ೧೫ ವರ್ಷ ವಯಸ್ಸು. ಕ್ರಿಯೇಗ್‌ ಅನ್ನು ಕ್ರಿಕೇಟಿನ ಮೊದಲಿನ ರೂಪ ಎಂದು ಸಲಹೆಯನ್ನು ನೀಡಲಾಗುತ್ತಿತ್ತು.[೧೨] ಆದರೆ ಈ ಭಾವನೆಯನ್ನು ಪ್ರೋತ್ಸಾಹಿಸುವಂತಹ ಯಾವುದೇ ಪುರಾವೆಗಳಿರಲಿಲ್ಲ ಮತ್ತು ಕ್ರಿಯೇಗ್‌ ಇನ್ನೂ ಹೆಚ್ಚು ವಿಭಿನ್ನವಾಗಿರಬಹುದಿತ್ತು.[೨] ಕ್ರಿಯೇಗ್‌ ಇದು ಕ್ರೆಯಿಕ್‌ [೪] ಎಂಬ ಪದದ ಮೊದಲ ಅಕ್ಷರವಾಗಿದೆ ಎಂದು ಕೂಡ ಸಲಹೆಯನ್ನು ನೀಡಲಾಗಿತ್ತು, ಇಲ್ಲಿ ಅದನ್ನು ಮೋಜು, ಮನೋರಂಜನೆ ಅಥವಾ ಆನಂದಿಸಬಹುದಾದ ಸಂಭಾಷಣೆ ಎಂಬ ಅರ್ಥಕೊಡುವ ಐರಿಶ್‌ ಪದವಾಗಿ ತೆಗೆದುಕೊಳ್ಳಲಾಗಿತ್ತು. ಈ ಕ್ರ್ಯಾಕ್‌ ಎಂಬ ಪದದ ಅರ್ಥವನ್ನು ಈಶಾನ್ಯ ಇಂಗ್ಲೆಂಡಿನ ಐರಿಶ್‌ ಇಂಗ್ಲೀಷ್‌, ಸ್ಕೋಟಿಶ್‌ ಇಂಗ್ಲೀಷ್‌ ಮತ್ತು ಜಿಯೊರೈಡ್‌ನಲ್ಲಿ ಗುರುತಿಸಲಾಯಿತು. ಐರ್ಲೆಂಡಿನಲ್ಲಿ ಇಂದು ಕ್ರ್ಯಾಕ್‌ ಎಂಬ ಪದಕ್ಕಿಂತ ಕ್ರೆಯಿಕ್‌ ಎಂಬ ಅಕ್ಷರದ ಬಳಕೆಯು ಹೆಚ್ಚು ಸಾಮಾನ್ಯವಾಗಿದೆ.[೧೩]

ಈ ಹಿಂದಿನ ಸ್ಪಷ್ಟವಾದ ಉಲ್ಲೇಖಗಳು ಬದಲಾಯಿಸಿ

 
ಜಾನ್‌ ಡೆರ್ರಿಕ್‌ ಮತ್ತು ಆತನ ಸ್ನೇಹಿತರು ಗಿಲ್‌ಫೋರ್ಡ್‌ನ ರಾಯಲ್‌ ಗ್ರಾಮರ್‌ ಸ್ಕೂಲಿನಲ್ಲಿ "ಕ್ರಿಕೆಟ್" ಆಡಿದ್ದರು.

ಯಾವುದೇ ಪ್ರದೇಶದಲ್ಲಿ ಆಡಿಸಬಹುದಾದ ಕ್ರಿಕೆಟಿಗೆ ಸಂಬಂಧಿಸಿದಂತೆ ಈ ಹಿಂದಿನ ಸ್ಪಷ್ಟವಾದ ಉಲ್ಲೇಖಗಳೆಂದರೆ ೧೫೯೮ರ ನ್ಯಾಯಾಲಯದ ಮೊಕದ್ದಮೆಯಲ್ಲಿ ನೀಡಲ್ಪಟ್ಟ ಸಾಕ್ಷಿಗಳು, ಅವು ೧೫೫೦ರ ಸುಮಾರಿಗೆ ಗಿಲ್ಡ್‌ಫೋರ್ಡ್‌, ಸರ್ರೆಯ ನಿರ್ಧಿಷ್ಟವಾದ ಭೂಮಿಯಲ್ಲಿ ಆಟವನ್ನು ಆಡಿಸಲಾಗಿತ್ತು ಎಂಬುದನ್ನು ದೃಢಪಡಿಸುತ್ತವೆ.[೨] ವಿವಾದಕ್ಕೆ ಸಂಬಂಧಿಸಿದ ಮೊಕದ್ದಮೆಯು ನಕ್ಷೆಯ ಭೂಮಿಯಲ್ಲಿದ್ದ ಶಾಲೆಯ ಒಡೆತದ ಪ್ರಶ್ನೆಯಾಗಿತ್ತು೧೫೯೭, ಜನೆವರಿ ೧೭ರ ಸೋಮವಾರದಂದು ಗಿಲ್‌ಫೋರ್ಡ್‌ ನ್ಯಾಯಾಲಯದಲ್ಲಿ ೫೯-ವರ್ಷ ವಯಸ್ಸಿನ ತನಿಕಾಧಿಕಾರಿ ಜಾನ್‌ ಡೆರಿಕ್‌, ಆತ ಮತ್ತು ಆತನ ಶಾಲಾ ಸ್ನೇಹಿತರು ಐವತ್ತು ವರ್ಷಕ್ಕೂ ಹಿಂದೆ ಒಂದು ಸಮತಟ್ಟಾದ ಜಾಗದಲ್ಲಿ ಕ್ರಿಕೆಟ್ಟನ್ನು ಆಡಿದ್ದರು ಎಂದು ಹೇಳಿಕೆಯನ್ನು ನೀಡಿದ್ದರು. ಆ ಶಾಲೆಯು ಗಿಲ್‌ಫೋರ್ಡ್ಡ್‌ನ ರಾಯಲ್‌ ಗ್ರಾಮರ್‌ ಸ್ಕೂಲ್‌ ಆಗಿತ್ತು.[೨] ೧೫೯೮ರ ಸಮಯದಲ್ಲಿ ಜಿಯೊವನ್ನಿ ಫ್ಲೊರಿಯೋನ ಇಟಾಲಿಯನ್‌-ಇಂಗ್ಲೀಷ್‌ ಶಬ್ಧಕೋಶದಲ್ಲಿ ಕ್ರಿಕೇಟಿನ ಬಗ್ಗೆ ಉಲ್ಲೇಖವಿತ್ತು. ಸ್ಗಿಲ್ಲೇರ್‌ ಎಂಬ ಪದದ ಬಗೆಗಿನ ಆತನ ಅರ್ಥವಿವರಣೆ ಎನೆಂದರೆ: "ಕ್ರಿಕೆಟ್‌ನ (ಹುಳು) ರೀತಿಯಲ್ಲಿ ಶಬ್ಧವನ್ನು ಮಾಡುವುದು, ಕ್ರಿಕೇಟ್‌-ಅ-ವಿಕೇಟ್‌ ಆಡುವುದು, ಮತ್ತು ಯಾವಾದಲೂ ಸಂತೋಷದಿಂದ ಇರುವುದು".[೧೪] ಹುಳು ಮತ್ತು ಆಟ ಎರಡಕ್ಕೂ ಸಂಬಂಧಿಸಿದಂತೆ ಕ್ರಿಕೇಟನ್ನು ಅರ್ಥೈಸಿದ ಬರಹಗಾರರಲ್ಲಿ ಫ್ಲೋರಿಯೊ ಮೊದಲನೆಯವನು. ೧೬೧೧ರಲ್ಲಿ ಆತನ ಶಬ್ದಕೋಶದ ನಂತರದ ಮುದ್ರಣಗಳಲ್ಲಿ ಫ್ಲೋರಿಯೊ "to play cricket-a-wicket" ಎಂಬುದು ಲೈಂಗಿಕತೆ ಸಂಪರ್ಕದ ಕುರಿತು ಹೇಳುತ್ತದೆ ಎಂದು ಹೇಳುತ್ತಾ frittfritt ಎಂಬುದನ್ನು "as we say cricket a wicket, ಅಥವಾ gigaioggie " ಎಂದು ವ್ಯಾಖ್ಯಾನಿಸುತ್ತಾನೆ ಮತ್ತು dibatticare , ನ್ನು "to thrum a wench lustily till the bed cry giggaioggie " ಎಂದು ವ್ಯಾಖ್ಯಾನಿಸುತ್ತಾನೆ.[೧೫]

ಗ್ರಾಮಾಂತರ ಕ್ರಿಕೇಟಿನ ಬೆಳವಣಿಗೆ: ೧೬೧೧–೧೬೬೦ ಬದಲಾಯಿಸಿ

ವಯಸ್ಕರು ಭಾಗವಹಿಸಲು ಪ್ರಾರಂಭಿಸಿದ ಮೊದಲ ದಿನಗಳು ಬದಲಾಯಿಸಿ

೧೬೧೧ರಲ್ಲಿ, ಕ್ರೋಸ್‌ ಎಂಬ ನಾಮಪದಕ್ಕೆ "ಒಂದು ವಕ್ರವಾದ ಕೋಲಿನ ಮೂಲಕ ಹುಡುಗರು ಆಡುವ ಕ್ರಿಕೆಟ್‌" ಎಂದು ಅರ್ಥೈಸಿದ ರೇಂಡಲ್‌ ಕಾಟ್‌ಗ್ರೇವ್‌ನಿಂದ ಒಂದು ಫ್ರೆಂಚ್‌-ಇಂಗ್ಲೀಷ್‌ ಶಬ್ಧಕೋಶವನ್ನು ಪ್ರಕಟಿಸಲ್ಪಟ್ಟಿತು.[೪] "ಕ್ರಿಕೆಟ್ ಆಡುವುದು" ಎಂಬ ಅರ್ಥವಿರುವ ಆ ಪದದ ಕ್ರಿಯಾ ರೂಪ ಕ್ರೋಸರ್ ‌.[೪] ಆದಾಗ್ಯೂ, ಮೇಲಿನ ಗಿಲ್‌ಫೋರ್ಡ್‌ ಶಾಲೆಯ ಹುಡುಗರ ರೀತಿಯಲ್ಲಿಯೇ ಕಾಟ್‌ಗ್ರೇವ್‌ನ ಶಬ್ಧಕೋಶದಲ್ಲಿ ಕ್ರಿಕೇಟನ್ನು ಹುಡುಗರ ಆಟ ಎಂದು ಅರ್ಥೈಸಲಾಗಿದೆ, ಇದು ವಯಸ್ಕರು ಭಾಗವಹಿಸಲು ಪ್ರಾರಂಭಿಸಿದ ಆರಂಭದ ಸಮಯವಾಗಿತ್ತು.[೪] ಸಸ್ಸೆಕ್ಸ್‌ನಲ್ಲಿನ ಕ್ರಿಕೆಟ್‌ ಬೆಗೆಗಿನ ಮೊದಲ ಸ್ಪಷ್ಟವಾದ ಹೇಳಿಕೆಯೂ ಕೂಡ ೧೬೧೧ರ ಸಮಯದ್ದು ಮತ್ತು ಇದು ಕ್ರೈಸ್ತಮತೀಯ ನ್ಯಾಯಾಲಯದ ದಾಖಲೆಗಳು ಹೇಳುವಂತೆ ಪಶ್ಚಿಮ ಸಸೆಕ್ಸ್‌ನ ಸಿಡ್ಲ್‌ಶಾಮ್‌ ಗ್ರಾಮದ ಇಬ್ಬರು ನಿವಾಸಿಗಳು ಕ್ರಿಕೆಟ್‌ ಆಡುತ್ತಿದ್ದುದರಿಂದ ಈಸ್ಟರ್‌ ಬಾನುವಾರದಂದು ಚರ್ಚ್‌ಗೆ ಹಾಜರಾಗುವುದಕ್ಕೆ ವಿಫಲರಾಗುತ್ತಾರೆ ಎಂಬುದಕ್ಕೆ ಸಂಬಂಧಿಸಿದೆ. ಅವರಿಗೆ ಪ್ರತಿಯೊಬ್ಬರಿಗೂ ೧೨ ಪೆನ್ಸ್‌ ನಸ್ಟು ದಂಡವನ್ನು ವಿಧಿಸಲಾಯಿತು ಮತ್ತು ಅವರು ದೇಹದಂಡನೆಗೆ ಒಳಗಾಗುವಂತೆ ಮಾಡಲಾಯಿತು. ೧೬೧೩ರಲ್ಲಿ, ಗಿಲ್ಡ್‌ಫೋರ್ಡ್‌ನ ಹತ್ತಿರದ ವ್ಯಾಂಗ್‌ಬೊರೋಹ್‌ನಲ್ಲಿ ಯಾವುದೋ ಒಬ್ಬ ವ್ಯಕ್ತಿಯ ಮೇಲೆ ಕ್ರಿಕೆಟ್ ದೊಣ್ಣೆಯ ಮೂಲಕ ಹಲ್ಲೆ ಮಾಡಲಾಗಿದೆ ಎಂಬ ಇನ್ನೊಂದು ಮೊಕದ್ದಮೆಯು ನ್ಯಾಯಾಲಯದಲ್ಲಿ ದಾಖಲಾಯಿತು.[೧೬] ಇದೇ ಸಮಯದಲ್ಲಿ, ಕೆಂಟ್‌ನಲ್ಲಿನ ಕ್ರಿಕೆಟ್ ಬಗೆಗಿನ ಮೊದಲ ಸ್ಪಷ್ಟ ಹೇಳಿಕೆಯೆಂದರೆ, ೧೬೪೦ರಲ್ಲಿ ನ್ಯಾಯಾಲಯದ ಮೊಕದ್ದಮೆಯಲ್ಲಿ ದಾಕಲಾದ ಸುಮಾರು ಮೂವತ್ತು ವರ್ಷಗಳ ವರೆಗೆ ಚೆವನಿಂಗ್‌ನಲ್ಲಿ ವ್ಹೀಲ್ಡ್‌ ಮತ್ತು ಅಪ್‌ಲ್ಯಾಂಡ್‌ ವಿರುದ್ಧ ಚಲ್‌ಖಿಲ್‌ ನಡುವೆ ನಡೆದ ಕ್ರಿಕೆಟ್ ಆಟದ ಮಾಹಿತಿ. (ಅಂದರೆ., C. ೧೬೧೦). ಇದು ಹಿಂದೆ ಪ್ರಚಲಿತದಲ್ಲಿದ್ದ ಹಳ್ಳಿ ಕ್ರಿಕೆಟ್ ಪಂದ್ಯ ಮತ್ತು ಈ ಸ್ಪರ್ಧೆಯು ಮುಂದೆ ೧೭ನೇ ಶತಮಾನದ ಮೊದಲಾರ್ಧದಲ್ಲಿ ಜನಪ್ರಿಯವಾಗಿತ್ತು. ಈ ಮೊಕದ್ದಮೆಯು ಆಟವನ್ನು ಆಡಿಸಲ್ಪಟ್ಟ ಭೂಮಿಗೆ ಸಂಬಂಧಿಸಿದ್ದಾಗಿತ್ತು.[೧೭] ೧೬೧೭ರಲ್ಲಿ, ೧೮-ವರ್ಷ ವಯಸ್ಸಿನ ಓಲಿವರ್ ಕ್ರೊಮ್‌ವೆಲ್‌ ಲಂಡನ್‌ ನಲ್ಲಿ ಕ್ರಿಕೆಟ್‌ ಮತ್ತು ಫು‍ಟ್‌ಬಾಲ್‌ ಆಡಿದ್ದನು.[೨] ೧೬೨೨ ರಲ್ಲಿ, ಪಶ್ಚಿಮ ಸಸೆಕ್ಸ್‌ನ ಚಿಚೆಸ್ಟರ್‌ ಹತ್ತಿರದ ಬಾಕ್ಸ್‌ಗ್ರೊವ್‌ನ ಹಲವಾರು ಗ್ರಾಮ ನಿವಾಸಿಗಳು ಮೇ ರ ಬಾನುವಾರದಂದು ಚರ್ಚ್‌ಯಾರ್ಡ್‌ನಲ್ಲಿ ಕ್ರಿಕೆಟ್ ಆಡಿದ್ದಕ್ಕಾಗಿ ಕಾನೂನಿನ ಮೂಲಕ ಶಿಕ್ಷೆಗೊಳಗಾದರು. ಅಲ್ಲಿ ಶಿಕ್ಷೆಗೊಳಗಾಗುವುದಕ್ಕೆ ಮೂರು ಕಾರಣಗಳಿದ್ದವು: ಮೊದಲನೆಯದು ಸ್ಥಳಿಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು; ಇನ್ನೊಂದು ಚರ್ಚಿನ ಕಿಡಕಿಯ ಒಡೆದ ಅಥವಾ ಒಡೆಯದೇ ಇದ್ದ ಬಾಗಿಲುಗಳಿಗೆ ದಂಬಂಧಿಸಿದ್ದು; ಮತ್ತು ಮೂರನೆಯದು ಒಂದು ಚಿಕ್ಕ ಮಗು ಆಡುವಾಗ ಆಕೆ ಕ್ರಿಕೆಟ್ ಬ್ಯಾಟ್‌ನಿಂದ ತನ್ನ ತಲೆಯನ್ನು ಒಡೆದುಕೊಂಡಿದ್ದು .[೧೬] ಆನಂತರದ ಕಾರ‍ಣಗಳೆಂದರೆ ಆ ಸಮಯದಲ್ಲಿ ಬ್ಯಾಟ್ಸ್‌ಮನ್‌ಗೆ ಬಾಲನ್ನು ಎರಡು ಬಾರಿ ಹೊಡೆಯಲು ಅವಕಾಶ ಮಾಡಿಕೊಟ್ಟ ನಿಯಮಗಳು ಮತ್ತು ಬ್ಯಾಟ್ಸ್‌ಮನ್‌ ಹತ್ತಿರದಲ್ಲಿ ಫೀಲ್ಡಿಂಗ್‌ ಮಾಡುವುದು ಬಹಳ ಅಪಾಯಕಾರಿಯಾಗಿತ್ತು, ಆ ನಂತರದ ಈ ಎರಡೂ ಘಟನೆಗಳು ತೀಕ್ಷ್ಣವಾಗಿ ಊರ್ಜಿತಗೊಂಡವು.೧೬೨೪ರಲ್ಲಿ, ಈಸ್ಟ್‌ ಸಸೆಕ್ಸ್‌ನ ಹಾರ್ಸ್‌ಟೇಡ್‌ ಕೀನ್ಸ್‌ ಎಂಬ ಹಳ್ಳಿಯಲ್ಲಿ ಎಡ್‌ವರ್ಡ್‌ ಟೈ ಎಂಬ ಬ್ಯಾಟ್ಸ್‌ಮನ್‌ ಔಟ್‌ ಅಗುವುದನ್ನು ತಪ್ಪಿಸಿಕೊಳ್ಳಲು ಬಾಲನ್ನು ಎರಡನೆಯ ಬಾರಿ ಹೊಡೆಯಲು ಪ್ರಯತ್ನಿಸುತ್ತಿದ್ದ ಸಮಯದಲ್ಲಿ ಜಾಸ್ಪರ್‌ ವಿನಾಲ್‌ ಎಂಬ ಫೀಲ್ಡರ್‌ನ ತಲೆಗೆ ಭಲವಾದ ಹೊಡೆತ ಬಿದ್ಧು ಮಾರಣಾಂತಿಕ ಅಪಘಾತ ಸಂಭವಿಸಿತ್ತು. ದಾಖಲಾದ ಕ್ರಿಕೇ‍ಟ್‌ ಅಪಘಾತಗಳಲ್ಲಿ ವರಲ್ಲಿ ವಿನಾಲ್‌ ಅವರು ಮೊಟ್ಟ ಮೊದಲನೆಯವರು. ದುರ್ಘಟನೆಯು ಅಧೀಕೃತ ನಿರ್ಣಯವಾಗಿ ಬದಲಾದ ಈ ಸಂಗತಿಯು ತನಿಖಾದಿಕಾರಿಯ ನ್ಯಾಯಾಲಯದಲ್ಲಿ ದಾಖಲಾಗಿತ್ತು.[೧೮] ೧೬೪೭ರಲ್ಲಿ ಪಶ್ಚಿಮ ಸಸೆಕ್ಸ್‌ನ ಸೆಲ್‌ಸೀ ನಲ್ಲಿ ಒಬ್ಬ ಬ್ಯಾಟ್ಸ್‌ಮನ್‌ ಬಾಲನ್ನು ಎರಡನೆಯ ಬಾರಿ ಹೊಡೆಯಲು ಪ್ರಯತ್ನಿಸುತ್ತಿದ್ದಾಗ ಹೆನ್ರಿ ಬ್ರಾಂಡ್‌ ಎಂಬ ಆಟಗಾರನ ತಲೆಗೆ ಭಲವಾದ ಪೆಟ್ಟು ಬೀಳುವುದರ ಮೂಲಕ ಈ ದುರಂತವು ಮತ್ತೊಮ್ಮೆ ಪುನರಾವರ್ತನೆಯಾಯಿತು.[೧೯] ಬಾಲನ್ನು ಎರಡು ಬಾರಿ ಹೊಡೆಯುವುದು ಕಾನೂನು ಬಾಹಿರವಾದುದು ಮತ್ತು ನಿಯಮವನ್ನು ಮೀರುವ ಬ್ಯಾಟ್ಸ್‌ಮನ್‌ ನನ್ನು ಔಟ್‌ ಎಂದು ತೀರ್ಮಾನಿಸಲಾಗುವುದು ಎಂಬ ಮೊದಲನೆಯ ಕ್ರಿಕೆಟ್‌ ನಿಯಮವನ್ನು ೧೭೪೪ರಲ್ಲಿ ರಚಿಸಲಾಯಿತ.[೨೦] ೧೬೨೪ರ ಮೊಕದ್ದಮೆಯ ದಾಖಲೆಯು ಹಾರ್ಸ್‌ಟೆಡ್‌ ಮತ್ತು ಪಶ್ಚಿಮ ಹೋಥ್ಲಿ ಎಂಬ ಎರಡು ಹಳ್ಳಿಗಳು ಪಂದ್ಯದಲ್ಲಿ ಭಾಗಿಯಾಗಿದ್ದವು ಮತ್ತು ಹಳ್ಳೀ ಕ್ರೀಕೇಟ್‌ನ ಬೇಳವಣಿಗೆಗೆ ಇವು ಸಾಕ್ಷಿಯಾಗಿದ್ದವು ಎಂಬುದನ್ನು ಖಚಿತಪಡಿಸುತ್ತದೆ.[೧೮] ೧೬೩೦ರಿಂದ ಪುನಃಸ್ಥಾಪನೆಯವರೆಗೆ ಅತೀ ಸಂಪ್ರದಾಯಸ್ಥರ ಪ್ರಭಾವದ ವರ್ಷಗಳ ಸಂದರ್ಭದಲ್ಲಿನ ಭಾನುವಾರದ ಆಟಗಳ ವಿಷಯಗಳು ಹಲವಾರು ಉಲ್ಲೇಖಗಳನ್ನು ಕ್ರೈಸ್ತಮತೀಯ ನ್ಯಾಯಾಲಯದ ದಾಖಲೆಗಳಲ್ಲಿ ಬಿಟ್ಟು ಹೋಗಿವೆ. ಇವುಗಳು ಅಂತರ-ಹೋಬಳಿ ಪಂದ್ಯಗಳನ್ನು ಆಡಿಸಲಾಗಿತ್ತು ಆದರೆ ೧೬೬೦ರಲ್ಲಿ ಪುನಃಸ್ಥಾಪನೆಗೂ ಹಿಂದೆ ಆರಂಭಗೊಂಡ ಕೌಂಟಿಗಳನ್ನು ಪ್ರತಿನಿಧಿಸುವ ಯಾವುದೇ ತಂಡವಾಗಿದ್ದರೂ ಅವುಗಳಿಗೆ ಸಲಹೆಯನ್ನು ನೀಡಲು ಯಾವುದೇ ಸಾಧ್ಯತೆಗಲಿರಲಿಲ್ಲ.[೨] ಇಂಗ್ಲೀಷ್‌ ಸಿವಿಲ್‌ ಯುದ್ಧಕ್ಕೂ ಮುನ್ನ ಮತ್ತು ೧೮ನೇ ಶತಮಾನದ ಪ್ರಾತಿನಿಧಿಕ ತಂಡಗಳ ರಚನೆಗೆ ಕಾರಣವಾದ ಸಂಗತಿಗಳಾಗಿದ್ದ ದೊಡ್ಡ ಪ್ರಮಾಣದ ಜೂಜಾಟ ಅಥವಾ ಪ್ರೋತ್ಸಾಹಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳಿರಲಿಲ್ಲ. ಇದು ಹೆಚ್ಚಾಗಿ ಮುಕ್ತಾಯವಾಗಿರಬಹುದು, ಹಾಗಾಗಿ ಯುದ್ದಕ್ಕೂ ಮುನ್ನ ಆಡಿಸಲಾದ ಆಟ ಕೆಳ ದರ್ಜೆಯದಾಗಿತ್ತು.: ಅದು ಹಳ್ಳಿ ಕ್ರಿಕೆಟ್ ಆಗಿತ್ತು.[೨] ಹಳ್ಳಿ ಕ್ರಿಕೆಟ್‌ ನೇ ಶತಮಾನದವರೆಗೂ ಯಶಸ್ವಿಯಾಗಿ ಮುಂದುವರೆದಿತ್ತು. ೧೭೧೭ರಲ್ಲಿ, ಸಸೆಕ್ಸ್‌ನ ಹರ್ಸ್‌ಪಿಯರ್‌ಪಾಯಿಂಟ್ ಪ್ರದೇಶದ ಥಾಮಸ್‌ ಮರ್ಚಂಟ್ ಎಂಬ ಒಬ್ಬ ಕೃಷಿಕ ತನ್ನ ದಿನಚರಿಯಲ್ಲಿ ಕ್ರಿಕೇಟನ್ನು ಮೊದಲಬಾರಿಗೆ ಬಳಸಿದ್ದ. ಈತನು ೧೭೨೭ರವರೆಗೆ ಆಟಗಳಿಗೆ, ಅದಕ್ಕೂ ಮುಖ್ಯವಾಗಿ ಸ್ಥಳೀಯ ಕ್ಲಬ್‌ಗೆ ಸಂಬಂಧಿಸಿದಂತೆ ಹಲವಾರು ಸಂಖ್ಯೆಯ ಉಲ್ಲೇಖಗಳನ್ನು ರಚಿಸಿದ್ದಾನೆ. ಆತನ ಮಗನು "ನಮ್ಮ ಹೋಬಳಿ"ಗಾಗಿ ಆಟವಾಡಿದ್ದನು ಹಾಗಾಗಿ ಆತನ್ನನು ಯಾವಾಗಲೂ ಹರ್ಸ್‌ಪಿಯರ್‌ಪಾಯಿಂಟ್ ತಂಡದ ಆಟಗಾರ ಎಂದು ಕರೆಯಲಾಗುತ್ತಿತ್ತು.[೨೧]

ಸಬ್ಬತ್ ಮುರಿಯುವಿಕೆ ಬದಲಾಯಿಸಿ

೧೬೪೨ರಲ್ಲಿ ಇಂಗ್ಲಿಷ್ ಅಂತಃಕಲಹದ ಪ್ರಾರಂಭವಾದ ಮೇಲೆ ಸಂಸತ್ತು ರಂಗಶಾಲೆಗಳ ಮೇಲೆ ವಿಧಿಸಿದ ನಿಷೇಧವು ಪ್ಯುರಿಟನ್ ರ ಅಸಮ್ಮತಿ ಅದಕ್ಕೆ ಲಭಿಸಿತು. ಕೆಲ ಕ್ರೀಡೆಗಳ ವಿರುದ್ಧ ಇದೇ ರೀತಿ ಕ್ರಮ ತೆಗೆದುಕೊಳ್ಳಲಾಯಿತಾದರೂ ಕ್ರಿಕೆಟ್ ಅನ್ನು ನಿಷೇಧಿಸಿದ ಕುರಿತು ಯಾವುದೇ ಪುರಾವೆಗಳಿಲ್ಲ. ಸಬ್ಬತ್ ಮುರಿಯಕೂಡದು ಎನ್ನುವುದರ ಹೊರತಾಗಿ ಆಟಕ್ಕೆ ಸಂಬಂಧಿಸಿದಂತೆ ಕಾಮನವೆಲ್ತ್ ಮುನ್ನ ಮತ್ತು ಅವಧಿಯಲ್ಲಿ ಇದಕ್ಕೆ ಸಹಮತ ಇತ್ತು ಎಂದು ಸೂಚಿಸುತ್ತದೆ. ಯುವಕನಾಗಿದ್ದ ವೇಳೆ ಕ್ರಾಮವೆಲ್ ಸ್ವತಃ ಕ್ರೀಡಾಪಟುವಾಗಿದ್ದ. ೧೭ನೇ ಶತಮಾನದಲ್ಲಿ ಉತ್ತರಾರ್ಧದ ಅವಧಿಯಲ್ಲಿ ವಿಶೇಷವಾಗಿ ಅದರಲ್ಲೂ ಈಶಾನ್ಯ ಕೌಂಟಿಗಳಲ್ಲಿ "ಆಟಕ್ಕೆ ನಿಜವಾದ ರೂಪ ಬರಲು" ಪ್ರಾರಂಭಿಸಿತು[೨೨] ಕಾಮನವೆಲ್ತ್ ಅವಧಿಯಲ್ಲಿ ಉನ್ನತ ವರ್ಗದವರು ತಮ್ಮ ಕಂಟ್ರಿ ಎಸ್ಟೇಟ್ ಗಳನ್ನು ಹಿಂಪಡೆದು ಸಮಯ ಕಳೆಯುವುದಕ್ಕೆ ಹಳ್ಳಿ ಕ್ರಿಕೆಟ್ ನಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದರು. ೧೬೬೦ರಲ್ಲಿ ಕಾಮನವೆಲ್ತ್ ವಿಸರ್ಜನೆಯಾದ ಮೇಲೆ ಅವರು ಅದನ್ನು ತಮ್ಮೊಂದಿಗೆ ತೆಗೆದುಕೊಂಡು ಲಂಡನ್ ಗೆ ಮರಳಿದರು.[೨೨] ೧೬೨೮ರಲ್ಲಿ ದಾಖಲಾದ ಚರ್ಚ್ ಮತ್ತು ಆಟಕ್ಕೆ ಸಂಬಂಧಿಸಿದ ಪ್ರಕರಣ ಭಾನುವಾರ ಆಡಿದ್ದರಿಂದ ವೆಸ್ಟ್ ಸಸ್ಸೆಕ್ಸ್ ನ ಚಿಂಚೆಸ್ಟರ್ ಹತ್ತಿರದ ಪೂರ್ವ ಲಾಂವಂಟ್ ನಲ್ಲಿ ದಾಖಲಾಯಿತು. ಒಬ್ಬ ಪ್ರತಿವಾದಿಯು ಸಾಯಂಕಾಲದ ಪ್ರಾರ್ಥನೆಯ ವೇಳೆ ಆಡಿಲ್ಲ, ಅದಕ್ಕಿಂತ ಮೊದಲು ಮತ್ತು ನಂತರ ಆಡಲಾಗಿದೆ ಎಂದು ವಾದಿಸಿದನು. ಆದರೂ ಇದು ಆತನಿಗೆ ಒಳ್ಳೆಯದನ್ನು ಮಾಡಲಿಲ್ಲ. ಇದಕ್ಕಾಗಿ ಆತನಿಗೆ ದಂಡ ವಿಧಿಸಿ ೧೨ ದಿನ ಉಪವಾಸ ಆಚರಿಸಲು ಆದೇಶಿಸಲಾಯಿತು. ಉಪವಾಸ ಆಚರಣೆಯಲ್ಲಿ ಅವನು, ಮುಂಬರುವ ಭಾನುವಾರ ಸೇರುವ ಸಮುದಾಯದ ಎದುರು ತನ್ನ ತಪ್ಪನ್ನು ಒಪ್ಪಿಕೊಳ್ಳುವುದು ಸೇರಿತ್ತು.[೨೩] ಅಂತಃಕಲಹಕ್ಕೆ ಮುನ್ನ ಮತ್ತಷ್ಟು ಮೂರು ಉಲ್ಲೇಖಗಳು ಈ ಕುರಿತು ದೊರೆಯುತ್ತವೆ. ವಿವಾದಕ್ಕೆ ಸಂಬಂಧಿಸಿದಂತೆ ೧೬೩೬ರಲ್ಲಿ ಕೋರ್ಟ್ ನಲ್ಲಿ ದಾಖಲಾದ ಪ್ರಕರಣದಲ್ಲಿ ಸರ್ರೆಯಲ್ಲಿನ ವೆಸ್ಟ್ ಹಾರ್ಸ್‌ಲಿಯ "ಇನ್ ದಿ ಪಾರ್ಕೆ" ಹೆನ್ರಿ ಮಾಬ್ಬಿಂಕ್ ಎಂಬ ವ್ಯಕ್ತಿ ಅವನು ಕ್ರಿಕೆಟ್ ಆಡಿದ್ದಾನೆ ಎಂದು ಪರೀಕ್ಷಿಸಲಾಯಿತು.[೨][೧೦] ಇನ್ನೊಂದು ಪ್ರಕರಣ ಭಾನುವಾರ ೨೬, ೧೬೩೭ರಲ್ಲಿ ಚರ್ಚಿಗೆ ಸಂಬಂಧಿಸಿದ ಪ್ರಕರಣ ವೆಸ್ಟ್ ಸಸ್ಸೆಕ್ಸ್ ನ ಮಿಧುರ್‌ಹಸ್ಟ್‌ನ ಪಾರಿಶೋಯನರ್ ನಲ್ಲಿ ದಾಖಲಾಯಿತು.[೨೪] ೧೬೪೦ರಲ್ಲಿ ಕ್ಯಾಂಟಬರ್ರಿ ಹತ್ತಿರದ ಮೈಡ್‌ಸ್ಟೋನ್ ಮತ್ತು ಹರ್ಬಲ್‌ಡೌನ್ ಧರ್ಮಶುದ್ಧಿವಾದಿ ಕ್ಲೆರಿಕ್ ಗಳು ಕ್ರಿಕೆಟ್ ‍ಅದರಲ್ಲೂ ವಿಶೇಷವಾಗಿ ಭಾನುವಾರ ಆಡಿದಲ್ಲಿ ಧರ್ಮ ವಿರೋಧಿಯಾಗುತ್ತದೆ ಎಂದು ಘೋಷಿಸಿದರು.[೨೫] ಹಿಂದಿನ ವರ್ಷವೇ ಕ್ರಾಮವೆಲ್ ನ ಸಂರಕ್ಷಕರು ಅಧಿಕಾರ ಸ್ಥಾಪಿಸಿದ್ದರಿಂದ ಧರ್ಮಶುದ್ಧಿವಾದಿ ಗಳು ಗಟ್ಟಿಯಾಗಿ ಅಧಿಕಾರದಲ್ಲಿದ್ದ ಪರಿಣಾಮವಾಗಿ ಭಾನುವಾರ ಕ್ರಿಕೆಟ್ ಆಡಿದ ಕಾರಣ, ೧೬೫೪ರಲ್ಲಿ ಕೆಂಟ್‌ನಲ್ ಎಲ್ಥಾಮ್ ನಲ್ಲಿ ಮೂವರನ್ನು ವಿಚಾರಣೆಗೆ ಒಳಪಡಿಸಲಾಯಿತು. ದಂಡವನ್ನು ೨೪ ಪೆನ್ಸ್ (ಎರಡು ಶಿಲ್ಲಿಂಗ್)ಗಳಿಗೆ ದ್ವಿಗುಣಗೊಳಿಸಲಾಯಿತು. ಎರಡು ವರ್ಷದ ನಂತರ ಕ್ರಾಮವೆಲ್‌ನ ಆಯುಕ್ತರು ಐರ್ಲೆಂಡ್ ನಲ್ಲಿ ಮೈದಾನದಲ್ಲಿ ಕಾನೂನು ವಿರೋಧಿ ಸೇರುವಿಕೆಯನ್ನು ನಿಷೇಧಿಸಿದರು.[೪] ಆ ನಿಷೇಧದಲ್ಲಿ ಕ್ರಿಕೆಟ್ ಸೇರ್ಪಡೆಯಾಗಿತ್ತು ಎನ್ನುವುದಕ್ಕೆ ಯಾವುದೇ ಸಾಕ್ಷಿಗಳು ಇಲ್ಲ. ಬಹುಶಃ ಆ ಸಮಯದ ಹೊತ್ತಿಗೆ ಐರ್ಲೆಂಡ್ ಅನ್ನು ಕ್ರಿಕೆಟ್ ಪ್ರವೇಶಿಸಿರಲಿಕ್ಕಿಲ್ಲ.[೨೬]

ಹವ್ಯಾಸಿ ಕ್ರಿಕೆಟ್‌‌ನ ಆರಂಭ ಬದಲಾಯಿಸಿ

ವೃತ್ತಿಪರರ ಮತ್ತು ಹವ್ಯಾಸಿಗಳ ನಡುವಿನ ಕ್ರಿಕೆಟ್ ನ ಸಾಮಾಜಿಕ ವಿಭಾಗದ ಪ್ರಾರಂಭವು ಸಭ್ಯಗ್ರಹಸ್ಥರು ಮತ್ತು ಕ್ರೀಡಾಪಟುಗಳು ನಡುವೆ ಅಂತಿಮವಾಗಿ ಸ್ಪರ್ಧೆಯ ಆಯೋಜನೆ ವಿಕಸಿತಗೊಂಡಿರುವುದನ್ನು ೧ನೇ ಚಾರ್ಲ್ಸ್ ಆಡಳಿತಾವಧಿಯಲ್ಲಿ ಕಾಣಬಹುದು. ೧೬೨೯ರಲ್ಲಿ ಕೆಟ್ ರಕ್ಕಿಂಗ್ ಕ್ಯೂರೇಟರ್ ಹೆನ್ರಿ ಕಫೀನ್ ಅನ್ನು ಭಾನುವಾರದ ಪ್ರಾರ್ಥನೆಯ ನಂತರ ಕ್ರಿಕೆಟ್ ಆಡಿದ ಕಾರಣ ಅರ್ಚೆಡೋನ್ ನ್ಯಾಯಾಲಯದಿಂದ ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆಯಲ್ಲಿ ಅವನು ತನ್ನ ಸಹ ಆಟಗಾರರು "ಘನತೆ ಮತ್ತು ಶೈಲಿಯನ್ನು " ಹೊಂದಿರುವ ಕ್ರಿಕೆಟಿಗರು ಎಂದು ವಾದಿಸಿದನು.[೨೭][೨೮] ಈ ಹೇಳಿಕೆಯು ಸಮಾಜದ ಪ್ರಭಾವಿ ವ್ಯಕ್ತಿಗಳಲ್ಲಿ ಕ್ರಿಕೆಟ್ ಜನಪ್ರಿಯತೆ ಗಳಿಸಲು ಪ್ರಾರಂಭಿಸಿತು ಎನ್ನುವುದಕ್ಕೆ ಮೊದಲ ಸಾಕ್ಷಿಯಾಯಿತು.[೨೭] ಕ್ರಿಕೆಟ್ ನಲ್ಲಿ ಜೂಜಾಟವನ್ನು ಪರಿಚಯಿಸಿದ್ದು ಸಮಾಜದ ಪ್ರಭಾವಿ ವ್ಯಕ್ತಿಗಳು, ತಮ್ಮ ಗೆಲವಿನ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಕೆಲ ಜೂಜುಗಾರರು ಪ್ರಾಯೋಜಕರಾಗುವುದಕ್ಕೆ ತಂಡಗಳನ್ನು ಆಯ್ಕೆ ಮಾಡುವುದಕ್ಕೆ ಪ್ರಾರಂಭಿಸಿದರು. ಕಾಮನ್ ವೆಲ್ತ್ ಅವಧಿಯಲ್ಲಿ ರಾಜಕೀಯ ಅವಶ್ಯಕತೆಯಿಂದಾಗಿ ಅಗತ್ಯವಾಗಿತ್ತು. ಕ್ರಿಕೆಟ್ ಪಂದ್ಯದ ಮೇಲಿನ ಜೂಜು ೧೬೪೬ರಲ್ಲಿ ಕಾಕ್ಸಹೆಥ್ ನಲ್ಲಿ ಅದೇ ವರ್ಷದ ಮೇ ೨೯ರಂದು ನಡೆದ ಆಟದಲ್ಲಿ ಕೂಲಿಗೆ ಹಣ ಪಾವತಿಸದ್ದರಿಂದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವುದು ದಾಖಲೆಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ಅಚ್ಚರಿಕರವೆಂದರೆ, ಆ ಸಮಯದಲ್ಲಿ ಹನ್ನೆರಡು ಕ್ಯಾಂಡಲ್‌ಗಳ ಪಣವಾಗಿತ್ತು ಮತ್ತು ಸ್ಥಳೀಯರು ಅದರಲ್ಲಿ ಭಾಗವಹಿಸಿದ್ದರು. ಕ್ರ್ಯಾನಬ್ರೂಕ್‌ನಲ್ಲಿ ೧೬೫೨ರಲ್ಲಿ ಜಾನ್ ರಾಬ್ಸನ್, ಎಸ್ಕ್ ಮತ್ತು ಇತರರ ವಿರುದ್ದ "ಕ್ರಿಕೆಟ್ ಎಂದು ಕರೆಯಲ್ಪಡುವ ಕೆಲ ಕಾನೂನು ವಿರೋಧಿ ಆಟ" ಎಂದು ಪ್ರಕರಣ ದಾಖಲಾಗಿದೆ. ರಾಬ್ಸನ್ ಸಮಾಜದ ಪ್ರಭಾವಿ ವ್ಯಕ್ತಿಯಾಗಿದ್ದರೆ ಉಳಿದ ಪ್ರತಿವಾದಿಗಳು ಎಲ್ಲರೂ ಕಾರ್ಮಿಕ ವರ್ಗದವರು ಆಗಿದ್ದರು.[೨೯] ಇಬ್ಭಾಗವಾಗಿರುವ ಎರಡು ವರ್ಗಗಳನ್ನು ಸೇರಿಸುವ ಕ್ರೀಡೆ ಎಂದು ಕ್ರಿಕೆಟ್ ಅನ್ನು ಬಹಳ ಹಿಂದೆಯೇ ಗುರುತಿಸಲಾಗಿದೆ. ಆದರೆ ತಮ್ಮ ನಡುವೆ ಮತ್ತು ಸಮಾಜದ ಕೆಳ ವರ್ಗಕ್ಕೆ ಸೇರಿರುವ ಕೆಲಸಗಾರರು ಮತ್ತು ವೃತ್ತಿಪರರ ನಡುವಿನ ಭಿನ್ನತೆಯನ್ನು ಗುರುತಿಸುವುದಕ್ಕೆ ಕ್ರಿಕೆಟ್ ಆಡುವ ಸಭ್ಯರನ್ನು "ಹವ್ಯಾಸಿ್" ಎಂದು ಕರೆಯಲು ಪ್ರಾರಂಭಿಸಲಾಯಿತು.[೩೦] ಹವ್ಯಾಸಿ್ ಎಂದರೆ, ತನ್ನ ಸಮಯವನ್ನು ಕಳೆಯುವುದಕ್ಕೆ ಕ್ರಿಕೆಟ್ ಆಡುವುದಷ್ಟೆ ಅಲ್ಲ ೧೯೬೨ರವರೆಗೆ ಅಸ್ತಿತ್ವದಲ್ಲಿದ್ದ ವಿಶಿಷ್ಟ ವರ್ಗದ ಮೊದಲ ವರ್ಗದ ಕ್ರಿಕೆಟರ್ ಆಗಿದ್ದ. ಹವ್ಯಾಸಿ್ ಮತ್ತು ವೃತ್ತಿಪರ ಕ್ರಿಕೆಟಿಗರು ಎನ್ನುವ ಭಿನ್ನತೆಯನ್ನು ತೆಗೆದು ಹಾಕಿದ ನಂತರ ಹೆಸರಿಗೆ ಮಾತ್ರ ಎಲ್ಲ ಕ್ರಿಕೆಟಿಗರು ವೃತ್ತಿಪರರು ಎಂದು ಗುರುತಿಸಲಾಯಿತು. ಸಂಭಾವನೆಯ ವಿಚಾರದಲ್ಲಿ ಹವ್ಯಾಸಿ ಕ್ರಿಕೆಟಿಗರರು ವೆಚ್ಚವನ್ನು ಪಡೆದುಕೊಂಡರೇ, ವೃತ್ತಿಪರರಿಗೆ ವೇತನ ಅಥವ ಶುಲ್ಕವನ್ನು ಪಾವತಿಸಲಾಯಿತು.[೩೧] ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಾಗಿ ಶಿಕ್ಷಣ ಕೇಂದ್ರಗಳು, ವಿಶ್ವವಿದ್ಯಾಲಯಗಳು ಮತ್ತು ಶಾಲೆಗಳಲ್ಲಿ ಆಡಲ್ಪಡುವ ಕ್ರಿಕೆಟ್, ಅಮೆಚೂರ್ ಕ್ರಿಕೆಟ್ ನ ಮುಂದುವರಿದ ಭಾಗವಾಯಿತು. ಈ ಮೂಲಕ ಶಾಲೆ ಮತ್ತು ವಿಶ್ವವಿದ್ಯಾಲಯಗಳು ಹೆಚ್ಚು ಕಡಿಮೆ ಎಲ್ಲ ಅಮೆಚೂರ್ ಆಟಗಾರರನ್ನು ರೂಪಿಸುವ ಮೂಲಕ "ಉತ್ಪಾದನಾ ಕೇಂದ್ರ"ಗಳು ಆಗಿ ರೂಪುಗೊಂಡವು.[೪]

 
ಒಬ್ಬ ನವ ಯುವಕನಾಗಿ ಜಾನ್‌ ಚರ್ಚಿಲ್‌.1660ರಲ್ಲಿಯೇ ಈತ ಶಾಲೆಯಲ್ಲಿ ಕ್ರಿಕೆಟ್ ಆಡಿದ್ದ.

ಶಾಲೆಯ ಸುತ್ತಲಿನ ಪರಿಸರದಲ್ಲಿ ಕ್ರಿಕೆಟ್ ಆಡಲಾಗುತ್ತಿತ್ತು ಎಂದು ೧೭ನೇ ಶತಮಾನದಲ್ಲಿ ಕೆಲ ಉಲ್ಲೇಖಗಳು ಇವೆ. ಆದರೆ, ಕಾಮನವೆಲ್ತ್ ಸಮಯದಲ್ಲಿ ಎಟಾನ್ ಕಾಲೇಜು ಮತ್ತು ವಿಂಚೆಸ್ಟರ್ ಕಾಲೇಜುಗಳಲ್ಲಿ ಇದನ್ನು ಗಮನಿಸಲಾಯಿತು.[೪] ಮಾರ್ಲಬರೋನ ಮೊದಲನೇ ಡ್ಯೂಕ್ ಜಾನ್ ಚರ್ಚಿಲ್ ಅಧ್ಯಯನ ಮಾಡಿದ ಲಂಡನ್ ನ ಸೆಂಟ್ ಫಾಲ್ ಸ್ಕೂಲ್ ನಲ್ಲಿ ೧೬೬೫ರಲ್ಲಿ ಕ್ರಿಕೆಟ್ ಗೆ ಸಂಬಂಧಿಸಿದ ಉಲ್ಲೇಖವಿದೆ.[೪] ಸೋಶಿಯಲ್ ಹಿಸ್ಟರಿ ಆಫ್ ಇಂಗ್ಲಿಷ್ ಕ್ರಿಕೆಟ್‌ ನಲ್ಲಿ ಡೆರೆಕ್ ಬಿರ್ಲೆ, "ಮಧ್ಯಂತರ ಅವಧಿಯಲ್ಲಿ ಶಾಲಾ ಕ್ರಿಕೆಟ್ ಚೆನ್ನಾಗಿದ್ದು ಉತ್ತಮ ಅಸ್ತಿತ್ವ ಹೊಂದಿತ್ತು" ಎಂದು ಪ್ರತಿಕ್ರಿಯಿಸಿದ್ದಾರೆ. (೧೬೪೯-೧೬೬೦). ಈ ಆಟವು "ಆಗ್ನೇಯ ಇಂಗ್ಲೆಂಡಿನ ಎಲ್ಲ ಶಾಲಾ ಬಾಲಕರಿಗೂ ಪರಿಚಿತವಿತ್ತು" ಅವರು ವಿಶ್ಲೇಷಿಸುತ್ತಾರೆ. ಆದರೆ ಕ್ರೀಡೆ ಈ ಸಮಯದಲ್ಲಿ ಶಾಲೆಯ ಪಠ್ಯದ ಭಾಗವಾಗಿತ್ತು ಎನ್ನುವುದನ್ನು ಸಂಶಯಿಸುತ್ತಾರೆ. ೧೭ನೇ ಶತಮಾನದ ಹೊತ್ತಿಗೆ ಎಟಾನ್ ಮತ್ತು ವೆಸ್ಟ್‌ಮಿನ್ಸ್‌ಟರ್ ಶಾಲೆಗಳು ಅಲ್ಲದೇ ಸ್ಥಳೀಯರನ್ನು ಕ್ರಿಕೆಟ್ ನಲ್ಲಿ ಸೇರ್ಪಡೆಗೊಳಿಸಲಾಗಿತ್ತು. ವರ್ಗ ಬೇಧವೂ ಇರಲಿಲ್ಲ. ಹೀಗಾಗಿ ಬಡವರ ಮತ್ತು ಶ್ರೀಮಂತರ ಮಕ್ಕಳು ಒಟ್ಟಿಗೆ ಆಡುತ್ತಿದ್ದರು.[೪] ಮೇಲೆ ವಿವರಿಸಲಾದ ೧೬೪೬ ಮತ್ತು ೧೬೫೨ರ ಕಾನೂನು ಪ್ರಕರಣಗಳಲ್ಲಿನ ಸಾಕ್ಷಿಗಳನ್ನು ಗಮನಿಸಿದಲ್ಲಿ ಸಮಾಜದ ಪ್ರಭಾವಿ ವ್ಯಕ್ತಿ ಮತ್ತು ಕಾರ್ಮಿಕರು ಒಟ್ಟಾಗಿ ಕ್ರಿಕೆಟ್ ಆಡುತ್ತಿದ್ದರು ಎನ್ನುವುದು ಸ್ಪಷ್ಟವಾಗುತ್ತದೆ.೧೬೪೭ರಲ್ಲಿ ವಿಂಚೆಸ್ಟರ್ ಕಾಲೇಜಿನಲ್ಲಿ ಕ್ರಿಕೆಟ್ ಆಡಲಾಗುತ್ತಿತ್ತು ಎಂಬ ಸಂಭವನಿಯತೆಯನ್ನು ಲ್ಯಾಟಿನ್ ಕವನವೊಂದು ಉಲ್ಲೇಖಿಸುತ್ತದೆ. ಇದು ಹ್ಯಾಂಪಷೈರ್ ನಲ್ಲಿ ಕ್ರಿಕೆಟ್ ಕುರಿತು ಮಾಡಿದ ಮೊಟ್ಟ ಮೊದಲ ಉಲ್ಲೇಖ.[೪] ೧೮ನೇ ಶತಮಾನದ ಮೊದಲ ಭಾಗದಲ್ಲಿ ಹೊರಾಸ್ ವಾಲಪೋಲ್ ಮಾಡಿರುವ ಪ್ರತಿಕ್ರಿಯೆಯಿಂದ ಎಟೋನ್ ಕಾಲೇಜಿನಲ್ಲಿ ಕ್ರಿಕೆಟ್ ಆಡಲಾಗುತ್ತಿತ್ತು ಎನ್ನುವುದನ್ನು ಖಚಿತಪಡಿಸುತ್ತಾರೆ.[೩೨] ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕ್ರಿಕೆಟ್ ಆಡಲಾಗುತ್ತಿತ್ತು ಎಂದು ೧೭೧೦ರಲ್ಲಿ ಮೊದಲ ಉಲ್ಲೇಖವಿದ್ದು ಎರಡೂ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿದ ವಿಲಿಯಂ ಗಾಲ್ಡವಿನ್ ೧೭೦೬ರಲ್ಲಿ ಗ್ರಾಮೀಣ ಕ್ರಿಕೆಟ್ ಕುರಿತು ೯೫ ಸಾಲುಗಳು ಉಳ್ಳ ಲ್ಯಾಟಿನ್ ಕವನವೊಂದನ್ನು ಬರೆದಿದ್ದಾರೆ. ಇದನ್ನು ಸೆರ್ಟಮನ್ ಪಿಲಾಯಿ (ಚೆಂಡಿನ ಆಟ) ಎಂದು ಕರೆಯಲಾಗುತ್ತಿತ್ತು. ಇದನ್ನು ಅವನು ಮುಸಾಯಿ ಜುವೆನಿಲ್ಸ್ ನಲ್ಲಿ ಪ್ರಕಟಿಸಿದ್ದಾರೆ.[೩೩] ಇದೇ ಸಮಯದ ಹೊತ್ತಿಗೆ ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ಕ್ರಿಕೆಟ್ ಆರಂಭವಾಗಿರಬೇಕು. ಆದಾಗ್ಯೂ ೧೭೨೯ರಲ್ಲಿ ಸ್ಯಾಮುಯೇಲ್ ಜಾನ್ಸನ್ ಅಲ್ಲಿ ಕ್ರಿಕೆಟ್ ಆಡುತ್ತಿದ್ದೆ ಎಂದು ಮೊಟ್ಟ ಮೊದಲು ಉಲ್ಲೇಖಿಸಿದ್ದಾರೆ.[೩೪]

ಪ್ರಾಚೀನ ಕ್ರಿಕೆಟ್ ನ ನಿಯಮಗಳು ಮತ್ತು ಉಪಕರಣಗಳು ಬದಲಾಯಿಸಿ

ಪ್ರಾರಂಭಿಕ ಕ್ರಿಕೆಟಿಗರು ತಮ್ಮ ನಿತ್ಯದ ತೊಡುಗೆಗಳಲ್ಲಿ ಆಡುತ್ತಿದ್ದರು ಮತ್ತು ಅವರು ಗ್ಲೋವ್ಸ್ ಅಥವ ಪ್ಯಾಡ್ ನಂತಹ ಯಾವುದೇ ಸಂರಕ್ಷಣಾತ್ಮಕ ಉಪಕರಣಗಳನ್ನು ಹೊಂದಿರಲಿಲ್ಲ. ಆರ್ಟಿಲರಿ ಮೈದಾನದಲ್ಲಿ ಆಡಲಾಗುತ್ತಿದ್ದ ೧೭೪೩ರ ಚಿತ್ರಕಲೆಯೊಂದರಲ್ಲಿ ಇಬ್ಬರು ಬ್ಯಾಟ್ಸ್ ಮನ್ ಗಳು ಮತ್ತು ಓರ್ವ ಬೌಲರ್ ಬಿಳಿ ಅಂಗಿ, ಮೊಣಕಾಲುವರೆಗಿನ ಚಡ್ಡಿ, ಸ್ಟಾಕಿಂಗ್ಸ್ ಮತ್ತು ಬಕಲ್ ಹೊಂದಿರುವ ಬೂಟುಗಳು ಇವೆ. ವಿಕೆಟ್ ಕೀಪರ್ ಕೂಡ ಇದೇ ರೀತಿಯ ಬಟ್ಟೆಯೊಂದಿಗೆ ಹೆಚ್ಚುವರಿಯಾಗಿ ವೇಸ್ಟ್ ಕೋಟ್ ಧರಿಸಿದ್ದಾನೆ. ಅಂಪೈರ್ ಮತ್ತು ಸ್ಕೋರರ್ ಮೊಣಕಾಲು ವರೆಗಿನ ಕೋಟು ಮತ್ತು ಟ್ರೈಕಾರ್ನ್ ಟೋಪಿಗಳನ್ನು ಧರಿಸಿರುವುದನ್ನು ಚಿತ್ರದಲ್ಲಿ ವಿವರಿಸಲಾಗಿದೆ. ಶರ್ಟ್ ಮತ್ತು ಸ್ಟಾಕಿಂಗ್ಸ್ ಹೊರತು ಪಡಿಸಿ ಉಳಿದ ಯಾವುದೇ ಬಟ್ಟೆಗಳು ಬಿಳಿಯಾದುದ್ದಿಲ್ಲ ಮತ್ತು ಯಾರೂ ಕೂಡ ಪ್ಯಾಡ್ ಅಥವ ಗ್ಲೋವ್ ಗಳನ್ನು ಧರಿಸಿಲ್ಲ. ಚೆಂಡನ್ನು ಮೈದಾನದಲ್ಲಿ ವೈವಿಧ್ಯಮಯವಾದ ವೇಗದಲ್ಲಿ ಎರಡು ಸ್ಟಂಪ್ ಗಳಿರುವ ಮೇಲ್ಬಾಗದಲ್ಲಿ ಅಡ್ಡಲಾಗಿರುವ ತುಂಡು ಇರುವ ವಿಕೆಟ್ ನತ್ತ ಬೌಲ್ ಮಾಡಲಾಗುತ್ತಿತ್ತು. ಬ್ಯಾಟ್ಸ್ ಮನ್, ಆಧುನಿಕ ಹಾಕಿ ಸ್ಟಿಕ್ ಅನ್ನು ಹೋಲುವ ಬ್ಯಾಟ್ ನಿಂದ ಪ್ರತ್ಯುತ್ತರ ನೀಡುತ್ತಿದ್ದನು. ಈ ಆಕಾರವು ಮೈದಾನದಲ್ಲಿ ಚೆಂಡನ್ನು ಎದುರಿಸುವುದಕ್ಕೆ ಸೂಕ್ತವಾದುದು ಆಗಿತ್ತು.[೩೫][೩೬]

 
1720ರ ಕ್ರಿಕೆಟ್ ಬ್ಯಾಟ್ ಶೈಲಿ ಇಂದಿನ ಆಧುನಿಕ ಹಾಕಿ ಸ್ಟಿಕ್‌ ಮಾದರಿಯಲ್ಲಿದ್ದು ಆ ಮೂಲಕ ನೆಲಕ್ಕೆ ಪಿಚ್‌ ಆಗದೇ ಬರುವ ಬಾಲನ್ನು ಹೊಡೆಯಲು ಅನುಕೂಲಕರವಾಗಿತ್ತು.

ಬಾಕ್ಸ್ ಗ್ರೋವ್ ನಲ್ಲಿ ೧೬೨೨ರಲ್ಲಿ ದಾಖಲಿಸಲಾದ ಪ್ರಕರಣದ ದಾಖಲೆಯಲ್ಲಿ ಕ್ರಿಕೆಟ್ ಬ್ಯಾಟ್ ಕುರಿತ ಮೊದಲ ಉಲ್ಲೇಖವಿದೆ. ಕೆಂಟ್ ಮತ್ತು ಸಸ್ಸೆಕ್ಸ್ ನಲ್ಲಿ ಉಪಯೋಗಿಸಲಾಗುವ "ಬ್ಯಾಟ್" ಶಬ್ದ ವಿಶಿಷ್ಟವಾದುದು ಆಗಿದೆ. ಇಲ್ಲಿ ಕರಾವಳಿ ತೀರದ ಕಳ್ಳಸಾಗಾಣಿಕೆದಾರರ ಬಳಿ ಇರುತ್ತಿದ್ದ ಆಯುಧದ ಕಾರಣ ಅವರನ್ನು ಬ್ಯಾಟ್ ಮೆನ್ ಎಂದು ಕರೆಯಲಾಗುತ್ತಿತ್ತು. ಏಕೆಂದರೆ ಚಪ್ಪಟೆ ಮುಖದ ಕುರಿತು ಮೊದಲ ಉಲ್ಲೇಖವು (ಸ್ಟಿಕ್ ನ ಕೆಳಭಾಗದಲ್ಲಿ ಐಸ್ ಹಾಕಿಯ ಶೈಲಿಯಲ್ಲಿ ಚಪ್ಪಟೆ ಇರುವ) ೧೬೨೨ರಲ್ಲಿ ಉಲ್ಲೇಖವಾಗುತ್ತದೆ.[೩೭] ೧೭೨೦ರವರೆಗೆ "ಬ್ಯಾಟ್" ಶಬ್ದ ವಿರಳವಾಗಿತ್ತು. ಸಾಮಾನ್ಯವಾಗಿ ಬಹುತೇಕ ಹೆಚ್ಚು ಬಾರಿ "ಸ್ಚಾಫ್ ", "ಸ್ಚೇವ್ " ಅಥವ "ಸ್ಚಿಕ್ " ಎಂದು ಉಪಯೋಗಿಸಲಾಗುತ್ತಿತ್ತು. ಪ್ರಾದೇಶಿಕವಾಗಿ ಇದನ್ನು ಉಪಯೋಗಿಸಲಾಗುತ್ತಿತ್ತು ಉದಾಹರಣೆಗೆ "ಸ್ಟೇವ್" ಶಬ್ದವನ್ನು ಗ್ಲುಸೇಷ್ಟರ್ ಪ್ರದೇಶದಲ್ಲಿ, ಮತ್ತು "ಬ್ಯಾಟ್" ಶಬ್ದವನ್ನು ಆಗ್ನೇಯದಲ್ಲಿ ಉಪಯೋಗಿಸಲಾಗುತ್ತಿತ್ತು. ಅದರಲ್ಲೂ "ಸ್ಟಾಫ್" ಮತ್ತು "ಸ್ಟಿಕ್" ಶಬ್ದಗಳನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತಿತ್ತು.[೬] "ಬ್ಯಾಟ್" ಶಬ್ದವು ಫ್ರೆಂಚ್ ಶಬ್ದ "ಬ್ಯಾಟಲ್ ಡೋರ್"ನಿಂದ ಬಂದಿದ್ದು, ಟೆಬಲ್ ಟೆನಿಸ್ ಬ್ಯಾಟ್ ನ ಆಕಾರದಲ್ಲಿರುವ ಇದನ್ನು ಅಗಸಗಿತ್ತಿಯರು ಬಟ್ಟೆ ತೊಳೆಯುವ ಸಂದರ್ಭದಲ್ಲಿ ಬಡಿಯುವುದಕ್ಕೆ ಉಪಯೋಗಿಸುತ್ತಿದ್ದರು.[೩೮]ಕ್ರಿಕೆಟ್ ಚೆಂಡಿನ ಕುರಿತು ಮೊದಲ ಉಲ್ಲೇಖವು ಎಡ್ವರ್ಡ್ ಫಿಲಿಪ್ಸ್ ಅವರ ಮಿಸ್ಟಿರಿಯಸ್ ಆಫ್ ಲವ್ ಆಂಡ್ ಎಲೋಕ್ವೆನ್ಸ್ ನಲ್ಲಿ ದೊರೆಯುತ್ತದೆ..[೨] ೧೭೪೪ರಲ್ಲಿ ತಿಳಿದಿರುವ ಮೊದಲ ನಿಯಮಗಳ ಪ್ರಕಾರ ಪಿಚ್ ೨೨ ಯಾರ್ಡ್ ಉದ್ದವಿರುತ್ತದೆ. (ಉದಾ: ಚೈನ್) ಮತ್ತು ೧೬೨೦ರಲ್ಲಿ ಗುಂಟರ್ಸ್ ಚೈನ್ ಪರಿಚಯಿಸಿದಾಗಿನಿಂದ ಇದೇ ಉದ್ದವನ್ನು ಉಪಯೋಗಿಸಲಾಗುತ್ತಿದೆ ಎಂದು ನಂಬಲಾಗಿದೆ.[೩೯][೪೦] ೧೯ನೇ ಶತಮಾನದವರೆಗೆ ಒಂದುಓವರ್ ನಾಲ್ಕು ಎಸೆತಗಳನ್ನು ಒಳಗೊಂಡಿತ್ತು.{2/}[೪೦] ೧೬೮೦ರಲ್ಲಿನ ಬೈಬಲ್ ವೊಂದರಲ್ಲಿ ಬರೆಯಲಾಗಿರುವ ಸಾಲಿನಲ್ಲಿ ಮೊದಲು ಉಲ್ಲೇಖಿಸಲಾಗಿದೆ ಎಂದು ತಿಳಿದಿರುವ ಉಲ್ಲೇಖವಾಗಿದ್ದು, ಅದರಲ್ಲಿನ ಆಹ್ವಾನದಲ್ಲಿ "ಕ್ರಿಕೆಟ್ ನಲ್ಲಿ ಉಲ್ಲಸಿತರಾಗುವುದಕ್ಕೆ ಮರ್ಡಾನ್‌ಗೆ ಬಂದು ನಿಮ್ಮ ವಿಕೆಟ್ ನಿಲ್ಲಿಸಿ" ಎನ್ನಲಾಗಿದೆ.[೪೧] ಮರ್ಡಾನ್ ಉತ್ತರ ಚಿಚೆಸ್ಟರ್ ನ ಪಶ್ಚಿಮ ಸಸ್ಸೆಕ್ಸ್ ನಲ್ಲಿದ್ದು, ಹ್ಯಾಂಬಲ್ಡನ್ ಗೆ ತೀರ ಹತ್ತಿರದಲ್ಲಿದೆ ಇದು ಹ್ಯಾಂಪಷೈರ್ ನ ಕಂಟ್ರಿ ಗಡಿಯಾಚೆ ಇದೆ. ೧೭೭೦ರವರೆಗೆ ವಿಕೆಟ್, ಎರಡು ಸ್ಟಂಪ್ ಮತ್ತು ಒಂದೇ ಬೇಲ್ ಅನ್ನು ಒಳಗೊಂಡಿತ್ತು ಅಲ್ಲದೇ ಆ ಸಮಯದಲ್ಲಿ ವಿಕೆಟ್ ಎತ್ತರ ಮತ್ತು ಕಿರಿದಾಗಿತ್ತು. ೧೭೪೪ರ ನಂತರ ಕ್ರಿಕೆಟ್ ನಿಯಮಗಳು ೨೨ ಇಂಚು ಎತ್ತರ ಮತ್ತು ೬ ಇಂಚು ಅಗಲ ಎಂದು ನಿರ್ಧಿಷ್ಟಪಡಿಸಿದವು. ಆದರೆ ೧೮ನೇ ಶತಮಾನದ ಪೂರ್ವಾರ್ಧದಲ್ಲಿನ ಚಿತ್ರಗಳು ವಿಕೆಟ್ ಚಿಕ್ಕದಾಗಿದ್ದು, ಮತ್ತು ಅಗಲವಾಗಿರುವುದನ್ನು ತೋರಿಸುತ್ತವೆ. ಬಹುಶಃ ಎರಡು ಅಡಿ ಅಗಲ ಒಂದು ಅಡಿ ಎತ್ತರದ್ದಿರಬೇಕು. ಹಗುರದಾದ ಬೇಲ್ ಗಳಿಗೆ ಬೆಂಬಲ ನೀಡುವುದಕ್ಕೆ ಸ್ಚಂಪ್ ಗಳ ತುದಿಗಳನ್ನು ಸಿಲುಕಿಸಲಾಗುತ್ತಿತ್ತು. ಮತ್ತು ಸ್ಟಂಪ್ ಗಳನ್ನು ಗಟ್ಟಿಯಾಗಿ ಮೈದಾನದಲ್ಲಿ ಉರುವುದಕ್ಕೆ ಮತ್ತು ಸೂಕ್ಷ್ಮವಾಗಿ ಬೇಲ್ ಗಳನ್ನು ಇರಿಸುವುದಕ್ಕೆ ನಿರ್ಧಿಷ್ಟ ಮಾನದಂಡಗಳು ಇದ್ದವು. ಈ ಮೂಲಕ ಸ್ಟಂಪ್ ಗೆ ತಾಗಿದಲ್ಲಿ ಸುಲಭವಾಗಿ ಬೇಲ್ ಬೀಳುವಂತೆ ಮಾಡುವುದಾಗಿತ್ತು.[೬] ವಿಕೆಟ್ ನ ಮೂಲದ ಕುರಿತು ಸಾಕಷ್ಟು ಅಂದಾಜುಗಳು ಇದ್ದು, ಆದರೆ, ೧೭ನೇ ಶತಮಾನದಲ್ಲಿ ವಿನ್ಯಾಸಗೊಳಿಸಲ್ಪಟ್ಟ ಆಕಾರವು ಚರ್ಚನಲ್ಲಿರುವ ಸ್ಟೂಲ್ ಗೆ ಸಂಬಂಧವನ್ನು ಹೊಂದಿದೆ. ಅದು ಕಿರಿದು ಮತ್ತು ಅಗಲವಾಗಿದೆ. ಮತ್ತದಲ್ಲದೇ, ಸ್ಟೂಲ್ ನ ಕಾಲುಗಳನ್ನು ಸ್ಟಂಪ್ ಗಳು ಎಂದು ಕರೆಯಲಾಗುತ್ತಿತ್ತು. ಇದು ಸ್ಟೂಲ್ ಗಳನ್ನು ಮೊದಲು ವಿಕೆಟ್ ಆಗಿ ಉಪಯೋಗಿಸಲಾಗುತ್ತಿತ್ತು ಎನ್ನುವ ಯೋಚನೆಗೆ ಮತ್ತಷ್ಟು ಪುಷ್ಠಿ ನೀಡುತ್ತದೆ.[೬] ಕೆಂಬ್ರಿಡ್ಜ್ ನ ಗ್ರೇಟ್ ಸೇಂಟ್ ಮೇರಿ ಚರ್ಚ್ ನ ಚರ್ಚ್ ವಾರ್ಡನ್ ಅವರ ಲೆಕ್ಕದ ಪ್ರಕಾರ, ಕೆಲ ಸಮಯ ನೈಋತ್ಯದಲ್ಲಿ ಚರ್ಚ್ ಸ್ಟೂಲ್ ಅನ್ನು "ಕ್ರೆಕೆಟ್ಟ್" ಎಂಬ ಡಚ್ ಹೆಸರಿನಲ್ಲಿ ಕರೆಯಲಾಗುತ್ತಿತ್ತು. ಇದೇ ಶಬ್ದವನ್ನು ಜಾನ್ ಡೆರ್ರಿಕ್ ಅವರಿಂದ ೧೫೯೭ರಲ್ಲಿ ಉಪಯೋಗಿಸಲ್ಪಟ್ಟಿದೆ.[೬] ೧೭ ಮತ್ತು ೧೮ನೇ ಶತಮಾನದಲ್ಲಿ ಪ್ರಮುಖವಾಗಿ ಎರಡು ಮಾದರಿಯ ಕ್ರಿಕೆಟ್ ಇತ್ತು. ಮೊದಲನೆಯದು ಒಂದೇ ವಿಕೆಟ್ ನದ್ದು, ಇದರ ಹೆಸರೇ ಹೇಳುವಂತೆ ಒಬ್ಬನೇ ಬ್ಯಾಟ್ಸಮನ್ ಇರುತ್ತಿದ್ದ, ಆದಾಗ್ಯೂ ಕೆಲವೊಂದು ಬಾರಿ ಮೂರರಿಂದ ಐದು ತಂಡಗಳು ಪಾಲ್ಗೊಳ್ಳುತ್ತಿದ್ದವು. "ಡಬಲ್ ವಿಕೆಟ್" ಮಾದರಿಯಲ್ಲಿ ಇಬ್ಬರು ಬ್ಯಾಟ್ಸಮನ್ ಗಳು ಇದ್ದು ಮತ್ತು ಹನ್ನೊಂದು ಜನರನ್ನು ಒಳಗೊಂಡ ತಂಡಗಳು ತಲಾ ಎರಡು ಇನ್ನಿಂಗ್ಸ್ ನಲ್ಲಿ ಆಡುವುದು ಬಹಳ ಹಿಂದಿನ ಕಾಲದಿಂದ ಇದೆ.ಪ್ರಾರಂಭದ ಕ್ರಿಕೆಟ್ ನಲ್ಲಿ ಇಂದಿನಂತೆ ಇಬ್ಬರು ಅಂಪೈರ್ ಗಳು ಇರುತ್ತಿದ್ದರು. ಆದರೆ ಆದರೆ ಆಧುನಿಕ ಕ್ರಿಕೆಟ್ ಸ್ಕ್ವೇರ್ ಲೆಗ್ ಅಂಪೈರ್ ಸ್ಟ್ರೈಕರ್ ಹತ್ತಿರವೇ ನಿಲ್ಲುತ್ತಿದ್ದ. ಇಬ್ಬರು ಅಂಪೈರ್ ಗಳು ಬ್ಯಾಟ್ ಇರುತ್ತಿತ್ತು. ರನ್ ಪೂರ್ಣಗೊಳಿಸುವುದಕ್ಕೆ ಬ್ಯಾಟ್ಸ್ ಮನ್ ಗಳನ್ನು ಅದನ್ನು ಮುಟ್ಟುವುದು ಅಗತ್ಯವಾಗಿತ್ತು.[೪೨] ಮೈದಾನದಲ್ಲಿ ಇಬ್ಬರು ಸ್ಕೋರರ್ ಗಳು ಟ್ಯಾಲಿಸ್ಟಿಕ್ ನಿಂದ ಸ್ಕೋರ್ ದಾಖಲಿಸುವುದಕ್ಕೆ ಇರುತ್ತಿದ್ದರು. ಇದೇ ಕಾರಣದಿಂದಲೇ ರನ್ ಗಳು ನಾಚ್ ಸ್ ಎಂದು ಪರಿಚಿತವಾಗಿದ್ದವು.[೪೩]

ಪ್ರಮುಖ ಕ್ರಿಕೆಟ್ ನ ಅಭಿವೃದ್ಧಿ: ೧೬೬೦-೧೭೦೦ ಬದಲಾಯಿಸಿ

೧೬೦೦ರಲ್ಲಿ ಇಂಗ್ಲೆಂಡಿನಲ್ಲಿ ಚಕ್ರಾದಿಪತ್ಯ ಸ್ಥಾಪಿಸಿದ ಕೂಡಲೇ ರಂಗಶಾಲೆಗಳ ಪುನಃ ತೆರೆದವು. ಮತ್ತು ಕ್ರೀಡೆಯ ಮೇಲೆ ಧರ್ಮಶುದ್ಧಿವಾದಿಗಳು ವಿಧಿಸಿದ್ದ ನಿಷೇಧವನ್ನು ಕೂಡ ತೆರವುಗೊಳಿಸಲಾಯಿತು.[೪೪] ಕ್ರಿಕೆಟ್ ಪ್ರಮುಖ ಮನರಂಜನೆಯಾಗಿತ್ತು ಮತ್ತು " ಕಾರ್ಮಿಕರಿಗೆ ಇದು ಸೂಕ್ತವಾದುದು" ಆಗಿತ್ತು.[೪೪] ಎರಡನೇ ಚಾರ್ಲ್ಸ್‌ನ ಅವಧಿಯಲ್ಲಿ ಆದಾಗ್ಯೂ ಕೆಲವೇ ಹರಿದು ಹಂಚಿಕೆಯಾಗಿರುವ ಉಲ್ಲೇಖಗಳು ಇವೆ. ಕ್ರಿಕೆಟ್ ನ ಜನಪ್ರಿಯತೆ ಹೆಚ್ಚುತ್ತಿತ್ತು ಮತ್ತು ಇದು ವಿಸ್ತಾರಗೊಳ್ಳುತ್ತಿತ್ತು ಎನ್ನುವುದು ಸ್ಪಷ್ಟವಾಗುತ್ತದೆ.[೪೫] ಪುನರ್ ಸ್ಥಾಪನೆಯು ಪರಿಣಾಮಕಾರಿ ೧೬೦೦ರ ವಸಂತ ಋತುವಿನಲ್ಲಿ ಪೂರ್ಣಗೊಂಡಿತು. ಮತ್ತು ಸಾಮಾನ್ಯವಾಗಿ ಸ್ವಾಸ್ಥ್ಯಭಾವ ಮನೆ ಮಾಡಿತು. ಇದರ ಜೊತೆಗೆ ಹಲವಾರು ಐತಿಹಾಸಿಕ ಘಟನೆಗಳು ನಡೆದವು. ಕ್ರಿಕೆಟ್ ಮತ್ತು ಇತರ ಕ್ರೀಡೆಗಳಲ್ಲಿ ಜೂಜನ್ನು ಮುಕ್ತವಾಗಿ ನಡೆಸಲಾಯಿತು.[೪೫] ಪಣಕ್ಕಿಟ್ಟ ದೊಡ್ಡ ಮೊತ್ತವು ಕೆಲ ಹೂಡಿಕೆದಾರರು ಪಾರಿಷ್ IX ತಂಡಕ್ಕಿಂತ ಪ್ರಬಲವಾದ ತಂಡವನ್ನು ರಚಿಸಿ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದರು.[೪೪] ಈ ಹೊತ್ತಿಗೆ ಉನ್ನತ ವರ್ಗವು ಕುದುರೆ ಓಟ ಮತ್ತು ಬಹುಮಾನಕ್ಕಾಗಿನ ಕಾದಾಟದಂತಹ ಆಟದೊಂದಿಗೆ ಕ್ರಿಕೆಟ್ ತಮ್ಮ ಮುಖ್ಯ ಕ್ರೀಡೆ ಎಂದು ಭಾವಿಸಿದ್ದರು.[೨೨] ಇದೇ ಪ್ರಾಯೋಜಕತ್ವದ ಪ್ರಾರಂಭಿಕ ಹಂತ ೧೮ನೇ ಶತಮಾನದವರೆಗೆ ಇದೇ ಮುಂದುವರಿದು ಕ್ರಿಕೆಟ್ ಅನ್ನು ನಿಯಂತ್ರಿಸಿತು.[೪೪] ಹಲವಾರು ಪಾರಿಷ್ ಗಳನ್ನು ಪ್ರತಿನಿಧಿಸುವ ಮತ್ತು ಇಡೀ ಕೌಂಟಿಯನ್ನು ಪ್ರತಿನಿಧಿಸುವ ತಂಡವನ್ನು ೧೬೬೦ರಲ್ಲಿ ರಚಿಸಲಾಯಿತು. ಮತ್ತು "ಪ್ರಸಿದ್ಧ ಪಂದ್ಯಗಳು" (sic ) ಇದೇ ಅವಧಿಯಲ್ಲಿ ದಾಖಲಿಸಲ್ಪಟ್ಟವು. ಹೀಗೆ ಈ ಕ್ರೀಡೆಯು ಗ್ರಾಮೀಣ ಕ್ರಿಕೆಟ್ ನಿಂದ ಪ್ರಮುಖ ಕ್ರಿಕೆಟ್ ವರೆಗೆ ವಿಕಸಿತಗೊಂಡಿತು.[೪೬] ಈ ವಿಕಾಸದ ಪ್ರಮುಖ ವೈಶಿಷ್ಟ್ಯವೆಂದರೆ ವೃತ್ತಿಪರತೆಯ ಪರಿಚಯ.[೪೪] ಪುನರ್ ಸ್ಥಾಪನೆಯ ಲಂಡನ್ ಗೆ ಮರಳಿದ ಉನ್ನತ ವರ್ಗದ ಸದಸ್ಯರು ಕ್ರಿಕೆಟ್ ಅನ್ನು ವೃತ್ತಿ ಆಟಗಾರರು ಎಂದು ಹಳ್ಳಿಗಳಿಂದ ಬಂದಿರುವ "ಸ್ಥಳೀಯ ಪರಿಣತರನ್ನು" ಈಗ ನೇಮಕ ಮಾಡಿಕೊಂಡು ಅಭಿವೃದ್ಧಿ ಪಡಿಸಲು ಉತ್ಸುಕರಾಗಿದ್ದರು.[೪೭] " ಕ್ಲಬ್‌ಗಳಿಂದ ಪಂದ್ಯಗಳನ್ನು ಆಯೋಜಿಸುವುದು ಲಂಡನ್ ಸೊಸೈಟಿಯಲ್ಲಿ ಒಂದು ಅಥವ ಎರಡು ವರ್ಷದ ಅವಧಿಯಲ್ಲಿ ವಿಚಾರವಾಗಿ ಪರಿಣಮಿಸಿತು.[೪೭] ಮುಂದಿನ ಶತಮಾನದಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಅಗತ್ಯವಿರುವ ಮಾದರಿಯನ್ನು ಉನ್ನತ ವರ್ಗ ಕ್ರೀಡೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೂಲಕ ಆಯಿತು. ಒಂದು ರೀತಿಯಲ್ಲಿ "ಉಳಿಗಮಾನ್ಯ ಪ್ರಾಯೋಜಕತ್ವ" ಸ್ಥಾಪನೆಯಾಯಿತು. ಕ್ರಿಕೆಟ್ ಒದಗಿಸಲಿರುವ ಜೂಜಿನ ಅವಕಾಶಗಳು ಉನ್ನತ ವರ್ಗ ಕ್ರಿಕೆಟ್ ನತ್ತ ಆಸಕ್ತಿಯನ್ನು ಬೆಳೆಸಿಕೊಂಡು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು.[೪೭] ಪುನರ್ ಸ್ಥಾಪನೆಯ ನಂತರ ಕೆಲ ಅತಿರೇಕಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ಸಂಸತ್ತು "ಕ್ಯಾವಿಲಿಯರ್"ನಿಂದ ೧೬೪೪ರಲ್ಲಿ ದಿ ಗೇಮಿಂಗ್ ಆಕ್ಟ್ ಪಾಸು ಮಾಡಲ್ಪಟ್ಟಿತು.[೪೮] ಇದು ಯಾವುದೇ ಸಂದರ್ಭದಲ್ಲಿ,[೪೫] ಸಮಯದಲ್ಲಿ ಅದೃಷ್ಟದ ಪಣವನ್ನು £ ೧೦೦NaN ಪೌಂಡುಗಳಿಗೆ ಸೀಮಿತಗೊಳಿಸಿತು. ಪೌಂಡುಗಳಿಗೆ ಸೀಮಿತಗೊಳಿಸಿತು.[೪೯] ೧೯೬೭ರ ಹೊತ್ತಿಗೆ ಕ್ರಿಕೆಟ್ ೫೦ ಗಿನಿ ಪಣಗಳನ್ನು ಆಕರ್ಷಿಸಬಲ್ಲುದು ಎನ್ನುವುದು ತಿಳಿದ ವಿಚಾರವಾಗಿತ್ತು ಮತ್ತು ಮುಂದಿನ ಶತಮಾನದುದ್ದಕ್ಕೂ ಇದಕ್ಕೆ ಜೂಜಿನ ಮುಖಾಂತರ ಅನುದಾನ ಲಭಿಸಲ್ಪಟ್ಟಿತು.[೫೦] ೧೭ನೇ ಶತಮಾನದ ನಂತರ ಅವಧಿಯಲ್ಲಿ ಉಲ್ಲೇಖಗಳ ಕೊರತೆ ೧೬೬೨ರ ಲೈಸೆನ್ಸಿಂಗ್ ಪ್ರೆಸ್ ಆಕ್ಟ್ ಕಾನೂನಿನ ಕಾರಣ ಉಂಟಾಯಿತು. ಇದು ಕ್ರಿಕೆಟ್ ಸೇರಿದಂತೆ ಕ್ರೀಡೆ ಮತ್ತು ಪತ್ರಿಕೋದ್ಯಮದ ಮೇಲೆ ಬಿಗಿಯಾದ ನಿಯಂತ್ರಣವನ್ನು ಸ್ಥಾಪಿಸಿತು.[೫೧] ಇದು ವರದಿ ಮಾಡುವ ವ್ಯಾಪ್ತಿಗೆ ಬರುವುದಿಲ್ಲ ಆದ್ದರಿಂದ ಕಚೇರಿ ದಾಖಲೆಗಳಲ್ಲಿ ಕೆಲವೇ ಉಲ್ಲೇಖಗಳು ಉದಾಹರಣೆಗೆ ಕೋರ್ಟ್ ಪ್ರಕರಣ ಅಥವಾ ಖಾಸಗಿ ಪತ್ರಗಳು ಮತ್ತು ಡೈರಿಗಳಲ್ಲಿ ದೊರೆಯುತ್ತವೆ.

 
1666ರಲ್ಲಿ ರಿಚ್‌ಮಂಡ್‌ ಗ್ರೀನ್‌ನಲ್ಲಿ ಕ್ರಿಕೇಟನ್ನು ಆಡಿಸಲಾಯಿತು.

೧೬೬೬ರಲ್ಲಿ ಸರ್ ರಾಬರ್ಟ್ ಪಾಸ್ಟೋನ್ ಅವರು ಬರೆದ ಪತ್ರದಲ್ಲಿ ೧೮ನೇ ಶತಮಾನದಲ್ಲಿ ಪ್ರಮುಖ ಸ್ಥಳವಾಗಿದ್ದ ರಿಚ್ಮಂಡ್ ಗ್ರೀನ್|ರಿಚ್ಮಂಡ್ ಗ್ರೀನ್ ನಲ್ಲಿನ ನಡೆದ ಆಟದ ಕುರಿತು ಉಲ್ಲೇಖಿಸುತ್ತದೆ.[೫೨] ೧೬೭೭ರಲ್ಲಿ ೧ನೇ ಅರ್ಲ್ ಆಫ್ ಸಸೆಕ್ಸ್ ಥಾಮಸ್ ಲಿನಾರ್ಡ್ ಬರೆದಿರುವ ಪತ್ರದಲ್ಲಿ ಪೂರ್ವ ಸಸ್ಸೆಕ್ಸ್ ನಲ್ಲಿನ ಹೆರ್ಸೆಟ್ಮಾಸ್ಯೂಕ್ಸ್ ಹತ್ತಿರವಿರುವ "ಯೆ ಡಿಕ್ಕರ್"ನಲ್ಲಿ ಆಡಲ್ಪಟ್ಟ ಕ್ರಿಕೆಟ್ ಪಂದ್ಯಕ್ಕೆ ಹೋಗಿದ್ದ ವೇಳೆ ಆತನಿಗೆ £೩ ನೀಡಲಾಯಿತು ಎಂದು ಉಲ್ಲೇಖವಾಗಿದೆ.[೫೩] ೧೬೭೧ರಲ್ಲಿ ಎಡ್ವರ್ಡ್ ಬೌಂಡ್ ಎಂಬ ವ್ಯಕ್ತಿ ಸಬ್ಬತ್ ದಂದು ಕ್ರಿಕೆಟ್ ಆಡಿದ ಕಾರಣಕ್ಕೆ ದಂಡ ವಿಧಿಸಲಾಯಿತು ಮತ್ತು ದೋಷಮುಕ್ತಗೊಳಿಸಿರುವುದು ಪುನರ್ ಸ್ಥಾಪನೆಯ ನಂತರ ಬದಲಾಗುತ್ತಿರುವ ದೃಷ್ಟಿಕೋನದ ಸೂಚಕವಾಗಿತ್ತು. ಈ ಕುರಿತು ಸರ್ರೆಯ ಶೇರೆಯಿಂದ ಪ್ರಕರಣವೊಂದು ವರದಿಯಾಗಿದೆ.[೫೪] ೧೬೯೪ರಲ್ಲಿ ಲೆವಿಸ್‌ನಲ್ಲಿ ನಡೆದ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದಂತೆ ಕಾರ್ಮಿಕನೊಬ್ಬನಿಗೆ ೨s ೬d ಪಾವತಿಸಿರುವುದನ್ನು ಸರ್ ಜಾನ್ ಪೆಹ್ಲಾಮ್ ದಾಖಲಿಸಿದ್ದಾರೆ.೧೬೮೫ರಲ್ಲಿ ಮಿಚಾಮ್ ಕ್ರಿಕೆಟ್ ಕ್ಲಬ್ ರಚಿಸಲಾಯಿತು. ಇಂದು ತಿಳಿದಿರುವಂತೆ ಕ್ಲಬ್ ಮಿಚಾಮ್ ಕ್ರಿಕೆಟ್ ಗ್ರೀನ್ ಎಂದು ಆಡುತ್ತದೆ. ಆಗಿನಿಂದ ಆ ಜಾಗದಲ್ಲಿ ಕ್ರಿಕೆಟ್ ಪಂದ್ಯಗಳ ಆತಿಥ್ಯ ವಹಿಸಿಕೊಳ್ಳುತ್ತಿದೆ.[೫೫] ಮಿಚಾಮ್ ಜಗತ್ತಿನ ಅತೀ ಪ್ರಾಚೀನ ಕ್ರಿಕೆಟ್ ಕ್ಲಬ್ ಆಗಿದ್ದು, ೧೬೮೫ಕ್ಕಿಂತ ಮುಂಚೆ ಯಾವುದೇ ಕ್ರಿಕೆಟ್ ಕ್ಲಬ್ ಸ್ಥಾಪನೆಯಾದ ಕುರಿತು ಸಾಕ್ಷಿಗಳು ಇಲ್ಲ.

ಕ್ರೊಯ್ಡಾನ್, ಡಾರ್ಟ್‌ಫೋರ್ಡ್ ಮತ್ತು ಲಂಡನ್ ಕ್ರಿಕೆಟ್ ಕ್ಲಬ್ ಗಳು ೧೭೨೦ರ ಹೊತ್ತಿಗೆ ಸ್ಥಾಪನೆಯಾಗಿವೆ. ಆದರೆ ಅವುಗಳ ಸ್ಥಾಪನೆಯ ದಿನಾಂಕ ಕಳೆದುಹೋಗಿದ್ದರೂ, ೧೭೨೨ರಲ್ಲಿ ಲಂಡನ್ ಕ್ಲಬ್ ಕುರಿತು ವಾಸ್ತವಿಕ ಉಲ್ಲೇಖವಿದೆ.[೫೬] ಲಂಡನ್ ಸಿಸಿ ಮುಖ್ಯವಾಗಿ ಫಿನ್ಸಬರ್ರಿಯ ಆರ್ಟಿಲರಿ ಗ್ರೌಂಡ್ ನೊಂದಿಗೆ ಸಹಯೋಗ ಹೊಂದಿತ್ತು.. ೧೭೨೫ರಲ್ಲಿ ಈ ಸ್ಥಳದ ಕುರಿತು ಮೊದಲು ಹೇಳಲಾಗಿದ್ದು, ಹಾನರೇಬಲ್ ಆರ್ಟಿಲರಿ ಕಂಪನಿಯು ಮೇ ೭ರಂದು ಇದನ್ನು ಕ್ರಿಕೆಟ್ ಆಡುವುದಕ್ಕೆ ಉಪಯೋಗಿಸಲಾಗುತ್ತಿತ್ತು ಎಂದು ಉಲ್ಲೇಖಿಸಿದೆ.[೫೭] ೧೮ನೇ ಶತಮಾನದ ಮಧ್ಯಭಾಗದ ಹೊತ್ತಿಗೆ ಈ ಸ್ಥಳವು ಕ್ರಿಕೆಟ್ ಪಂದ್ಯದ ಪ್ರಮುಖ ಸ್ಥಾನವಾಯಿತು.[೫೮] ೧೬೯೫ರಲ್ಲಿ ಸಂಸತ್ತು ೧೬೬೨ರ ಲೈಸೆನ್ಸಿಂಗ್ ಆಕ್ಟನ್ನು ಪುನರುಜ್ಜೀವನಗೊಳಿಸಿ ತೀರ್ಮಾನಿಸಿತು ಮತ್ತು ೧೬೯೬ರಲ್ಲಿ ಅವಧಿ ಮುಕ್ತಾಯವಾಗುವ ಫ್ರಿ ಪ್ರೆಸ್ ಕಾನೂನನ್ನು ಪಾಸು ಮಾಡಿತು.[೫೯] ೧೬೮೯ರಲ್ಲಿ ಜಾರಿಗೆ ಬಂದ ಬಿಲ್ ಆಫ್ ರೈಟ್ಸ್ ನ ಕಾರಣ ಸೆನ್ಸಾರ್ ಷಿಪ್ ಈಗಾಗಲೇ ಸಡಿಲಗೊಂಡಿತ್ತು.[೫೧] ಇಲ್ಲಿಂದ ನಂತರ ಕ್ರಿಕೆಟ್ ಸಂಬಂಧಿಸಿದ ಸುದ್ದಿಗಳನ್ನು ದಿನಪತ್ರಿಕೆಗಳಲ್ಲಿ ವರದಿ ಮಾಡಬಹುದಾಗಿತ್ತು. ಆದರೆ ಇದಕ್ಕಿಂತ ಮೊದಲೇ ಪತ್ರಿಕೋದ್ಯಮ ಸಮರ್ಪಕವಾಗಿ ಮತ್ತು ನಿಯಮಿತವಾಗಿ ಸಮಗ್ರ ವರದಿಯನ್ನು ನೀಡುವುದನ್ನು ಮೈಗೂಡಿಸಿಕೊಂಡಿತ್ತು.[೬೦] ಬುಧವಾರ ಜುಲೈ೭, ೧೬೯೭ರಲ್ಲಿ ಫಾರಿನ್ ಪೋಸ್ಟ್ ನಲ್ಲಿ ಪ್ರಕಟಿಸಿದ ಪಂದ್ಯದ ವರದಿಯು ಮೊಟ್ಟ ಮೊದಲ ವರದಿ ಎಂದು ತಿಳಿಯಲ್ಪಟ್ಟಿದೆ:

"ಕಳೆದ ವಾರದ ಮಧ್ಯದಲ್ಲಿ ಸಸ್ಸೆಕ್ಸ್ ನಲ್ಲಿ ಉತ್ಕೃಷ್ಟ ಕ್ರಿಕೆಟ್ ಪಂದ್ಯವನ್ನು ಆಡಲಾಯಿತು; ಎರಡು ತಂಡದಲ್ಲಿ ಹನ್ನೊಂದು ಕ್ರಿಕೆಟಿಗರು ಇದ್ದರು ಮತ್ತು ಅವರು ತಲಾ ೫೦ ಗಿನಿಗಾಗಿ ಆಡಿದರು".[೬೧]

ಆಹ್ವಾನಕ್ಕೆ ಇರುವ ಪಣವು ಪಂದ್ಯ ನಡೆಯುವ ಸ್ಥಳದ ಮಹತ್ವ ಮತ್ತು ಸಮತೋಲನದಿಂದ ಕೂಡಿರುವ ಎರಡು ಪ್ರಬಲ ತಂಡಗಳ ತಲಾ ೧೧ ಕ್ರಿಕೆಟಿಗರನ್ನು ಒಳಗೊಂಡಿರುವ ಸಂಗತಿಯನ್ನು ಸೂಚಿಸುತ್ತದೆ.[೬೧] ಇತರ ಯಾವುದೇ ಮಾಹಿತಿಗಳನ್ನು ನೀಡಿಲ್ಲವಾದರೂ, ಆದರೆ ವರದಿಗಳು ಪುನರ್ ಸ್ಥಾಪನೆಯ ನಂತರದ ದಿನಗಳಲ್ಲಿ "ಗ್ರೇಟ್ ಮ್ಯಾಚಸ್"ಗಳ ರೂಪದಲ್ಲಿ ಇರುವ ಉನ್ನತ ದರ್ಜೆಯ ಕ್ರಿಕೆಟ್ ಅನ್ನು ಹೆಚ್ಚಿನ ಪಣಕ್ಕಾಗಿ ಆಡುವುದು ಜೋರಾಗಿತ್ತು ಎನ್ನುವ ಅಭಿಪ್ರಾಯವನ್ನು ಪುಷ್ಠೀಕರಿಸುತ್ತವೆ.[೬೦] ಬಹುಶಃ ಇದು ಅಂತರ್ ಕೌಂಟಿ ಪಂದ್ಯವಾಗಿರಬೇಕು (ಉದಾ: ಸಸ್ಸೆಕ್ಸ್ ವಿರುದ್ಧ ಕೆಂಟ್ ಅಥವಾ ಸರ್ರೆ) ಮತ್ತು ಇದು ಮೊದಲು ತಿಳಿದಿರುವ ಪ್ರಥಮ ದರ್ಜೆ ಕ್ರಿಕೆಟ್ ಆಗಿದೆ. ರಿಚ್ಮಂಡ್ ನ 1ನೇ ಡ್ಯೂಕ್ ಚಾರ್ಲ್ಸ್ ಲೆನ್ನಾಕ್ಸ್ ಸಸ್ಸೆಕ್ಸ್ ಸ್ಥಳ ನೀಡಿರುವುದು ನಿಸ್ಸಂಶಯವಾಗಿ ಪ್ರಾಯೋಜಕ ಒಳಗೊಂಡಿರುವುದನ್ನು ಖಚಿತಗೊಳಿಸುತ್ತದೆ.[೬೦]

೧೮ನೇ ಶತಮಾನದ ಆರಂಭದಲ್ಲಿನ ಇಂಗ್ಲೀಷ್‌ ಕ್ರಿಕೆಟ್ ಬದಲಾಯಿಸಿ

ಪ್ರಾಯೋಜಕರು ಬದಲಾಯಿಸಿ

 
ಚಾರ್ಲ್ಸ್‌ ಲಿನಾಕ್ಸ್‌, ರಿಚ್‌ಮಂಡ್‌ನ 1ನೇ ಡ್ಯೂಕ್‌.

೧೭೦೨ರಲ್ಲಿ ಡ್ಯೂಕ್ ಆಫ್ ರಿಚ್ಮಂಡ್ XI ತಂಡವು ಅರುಂಡೆಲ್ XI ಅನ್ನು ಸಸ್ಸೆಕ್ಸ್ ನಲ್ಲಿ ಪರಾಭವಗೊಳಿಸಿತು. ಡಿಸೆಂಬರ್ ೧೪, ೧೭೦೨ರಲ್ಲಿ ಡ್ಯೂಕ್ ಅವರಿಗೆ ಸಾಲ್ ಬ್ರಾಡ್ಲೆ ಎಂಬ ವ್ಯಕ್ತಿ ಕಳುಹಿಸಿರುವ ಪಾವತಿಯು ಈ ಪಂದ್ಯದ ಮೂಲವಾಗಿದೆ. ಅರುಂಡೆಲ್ ನ ಜನರೊಂದಿಗೆ ನಿಮ್ಮ ತಂಡ ಕ್ರಿಕೆಟ್ ಆಡಿದ ಸಂದರ್ಭದಲ್ಲಿನ ಬ್ರಾಂಡಿಗಾಗಿ ಡ್ಯೂಕ್ ಪಾವತಿಸಿದ ಒಂದು ಶಿಲ್ಲಿಂಗ್ ಮತ್ತು 6 ಪೆನ್ಸ್ ನ ಮಾಹಿತಿಯನ್ನು ಪಾವತಿ ಒಳಗೊಂಡಿದೆ. ವಿಜಯೋತ್ಸವವನ್ನು ಆಚರಿಸುವುದಕ್ಕೆ ಬ್ರಾಂಡಿಯನ್ನು ತಂದಿರುವ ಸಾದ್ಯತೆ ಇದೆ.[೬೨] ೧೭೨೩ರಲ್ಲಿ ೧ನೇ ಡ್ಯೂಕ್ ಆಫ್ ರಿಚ್ಮಂಡ್ ತೀರಿಕೊಂಡ ನಂತರ ಅವನ ಮಗ 2ನೇ ಡ್ಯೂಕ್ ಚಾರ್ಲ್ಸ್ ಲೆನ್ನಾಕ್ಸ್‌ತಕ್ಷಣ ಅಧಿಕಾರಕ್ಕೆ ಬಂದು ಕ್ರಿಕೆಟ್ ನ ಮುಖ್ಯ ಪೋಷಕನಾದ ಮತ್ತು ಮುಂದಿನ ೩೦ ವರ್ಷಗಳ ಕಾಲ ಸಸ್ಸೆಕ್ಸ್ ಕ್ರಿಕೆಟ್ ನ ಪ್ರಖ್ಯಾತ ಪ್ರವರ್ತಕನಾದ. ಅವರ ತಂಡಗಳು ಹಲವಾರು ಬಾರಿ ಆಡಿದವು ಮತ್ತು ಅವರ ಮೊದಲ ಸ್ಪರ್ಧೆ ಮಂಗಳವಾರ ಜುಲೈ ೨೦, ೧೭೨೫ರಲ್ಲಿ ನಡೆದಿದೆ ಎಂದು ತಿಳಿಯಲ್ಪಟ್ಟಿದೆ. ೫ ದಿನಗಳ ನಂತರ ಸರ್ ವಿಲಿಯಂ ತಂಡವು ಅಪರಿಚಿತ ವಿರೋಧಿಗಳಿಂದ ಪರಾಭವಗೊಳಿಸಲ್ಪಟ್ಟಿತು. ಈ ಎರಡು ಪಂದ್ಯಗಳ ಕುರಿತ ನಮ್ಮ ಜ್ಞಾನವು ಜುಲೈ ೧೬ರಂದು ಸರ್ ವಿಲಿಯಂ ಅವರು ಬರೆದ ಎರಡು ವಿಡಂಬನಾತ್ಮಕ ಪತ್ರಗಳನ್ನು ಆಧರಿಸಿದೆ. ವರ್ಷದ ಮೊದಲ ಪಂದ್ಯದಲ್ಲಿ ನಾನು ಅತ್ಯಂತ ಹೀನಾಯವಾಗಿ ಸೋಲಿಸಲ್ಪಟ್ಟೆ ಎಂದು ದುಃಖಿಸುತ್ತಾನೆ ಆದರೆ ತನ್ನ ಎದುರಾಳಿಗಳ ಕುರಿತು ಏನನ್ನೂ ಹೇಳುವುದಿಲ್ಲ. ನಂತರ ಅವನು ಮುಂದಿನ ಮಂಗಳವಾರ ಡ್ಯೂಕ್ ತಂಡದೊಂದಿಗೆ ಆಡುವ ಪಂದ್ಯವನ್ನು ಎದುರು ನೋಡುತ್ತಾನೆ. ಮತ್ತು ಕ್ರಿಕೆಟ್ ಪಂದ್ಯದ ಎಲ್ಲದರಲ್ಲಿಯೂ ಯಶಸ್ಸು ದೊರೆಯಲಿ ಎಂದು ಹಾರೈಸುತ್ತಾನೆ.[೬೩] ರಿಚ್ಮಂಡ್ ಮತ್ತು ಗೇಜ್ ಅವರ ಪ್ರಮುಖ ವಿರೋಧಿಯಾಗಿದ್ದುದು ಮೇಡ್‌ಸ್ಟೋನ್ಎಡ್ವರ್ಡ್ ಸ್ಟೇಡ್ (ಕೆಲ ಬಾರಿ " ಎಡ್ವೀನ್ ಸ್ಟೀಡ್ ಎಂದು ಕರೆಯಲ್ಪಡುವ). ಕೆಂಟ್ ನ ಪ್ರವರ್ತಕ ಎಂದು ಮೊದಲು ಗುರುತಿಸಲಾಗಿದೆ. ಸಂಭಾವನೆಗೆ ಸಂಬಂದಿಸಿದಂತೆ ರಿಚ್ಮಂಡ್ ಮತ್ತು ಗೇಜ್ ಅವರ ಸಸ್ಸೆಕ್ಸ್ ತಂಡಗಳು ಅಂತರ ಕೌಂಟಿ ವೈರುಧ್ಯವನ್ನು ಕೌಂಟಿ ಚಾಂಪಿಯನ್ ಷಿಪ್ ಪರಿಕಲ್ಪನೆಯನ್ನು ಹುಟ್ಟು ಹಾಕಿದ ಸ್ಟೇಡ್ ನ ಕೆಂಟ್ ನೊಂದಿಗೆ ಅನುಭವಿಸಿದವು. (ನೋಡಿ ಕೌಂಟಿ ಚಾಂಪಿಯನ್ ಷಿಪ್)[೬೪][೬೫]

ಪಣದ ನಿಯಮಗಳು ಬದಲಾಯಿಸಿ

೧೮ನೇ ಶತಮಾನದಲ್ಲಿ ಪ್ರವರ್ತಕರು ಕ್ರಿಕೆಟಿಗೆ ಹಣಕಾಸು ನೀಡಿದರಾದರೂ ಆದರೆ ಅವರ ಆಸಕ್ತಿಯು ಕುದುರೆ ಓಟ ಮತ್ತು ಬಹುಮಾನದ ಕಾದಾಟಕ್ಕೂ ಸಮನಾಗಿ ಅನ್ವಯವಾಗುತ್ತದೆ ಎನ್ನುವುದನ್ನು ಖಾತ್ರಿಪಡಿಸಿಕೊಂಡಿರುವುದು ಕ್ರಿಕೆಟ್ ಜೂಜಿಗೆ ಅವಕಾಶ ನೀಡುತ್ತದೆ ಎನ್ನುವುದರ ಆಧಾರದ ಮೇಲೆ ಇತ್ತು. ೧೮ನೇ ಶತಮಾನದಲ್ಲಿ ಪ್ರಥಮ ದರ್ಜೆ ಆಗಲಿ ಅಥವಾ ಸಿಂಗಲ್ ವಿಕೆಟ್ ನ ಪ್ರತಿಯೊಂದು ಪಂದ್ಯಗಳನ್ನು ಪಣಕ್ಕಾಗಿ ಆಡಲಾಗುತ್ತಿತ್ತು. ಪ್ರಾರಂಭದ ದಿನಪತ್ರಿಕೆಗಳನ್ನು ಇದನ್ನು ಗುರುತಿಸಿ ಇತರ ವಿಷಯಗಳನ್ನು ಪ್ರಕಟಿಸುವಲ್ಲಿ ಆಸಕ್ತಿ ವಹಿಸಿದವು ವಿನಃ ಪಂದ್ಯದ ಸ್ಕೋರ್ ಅಲ್ಲ. ವರದಿಗಳು ಯಾರು ಪಣವನ್ನು ಗೆದ್ದರು ಎಂದು ಹೇಳುತ್ತಿದ್ದವೆ ವಿನಃ ಯಾರು ಪಂದ್ಯದಲ್ಲಿ ಗೆಲವು ಸಾಧಿಸಿದರು ಎಂದು ವರದಿಗಳು ಹೇಳುತ್ತಿದ್ದವು.[೪೬] ವಿರೋಧಿ ಹಿತಾಸಕ್ತಿಗಳು ತಮ್ಮ ಸಂಭಾವನೆಗೆ ಸಂಬಂಧಿಸಿದಂತೆ ಕಾನೂನಿನ ತೀರ್ಪು ಬೇಕು ಎನಿಸಿದ ಕೆಲ ಸಂದರ್ಭಗಳಲ್ಲಿ ಜೂಜು ವಿವಾದಕ್ಕೆ ಕಾರಣವಾಗಿ ಎರಡು ಪಂದ್ಯಗಳು ಕೋರ್ಟ್ ನಲ್ಲಿ ಅಂತ್ಯಗೊಳ್ಳುತ್ತಿದ್ದವು.ಇಸ್ಲಿಂಗ್ಟನ್ ನ ವೈಟ್ ಕಂಡ್ಯೂಟ್ ನಲ್ಲಿ ಲಂಡನ್ ಮತ್ತು ರಾಚೆಸ್ಟರ್ ಪಂಚ್ ಕ್ಲಬ್ ನಡುವೆ ಸೋಮವಾರ, ಸೆಪ್ಟಂಬರ್ ೧, ೧೭೧೮ರಲ್ಲಿ ನಡೆದ ಪಂದ್ಯದ ವೇಳೆ, ಪಂದ್ಯವನ್ನು ಅಪೂರ್ಣ ಎಂದು ಘೋಷಿಸುವ ಪ್ರಯತ್ನದಲ್ಲಿ ರಾಚೆಸ್ಟರ್ ಕ್ರಿಕೆಟಿಗರು ಮೈದಾನದಿಂದ ಹೊರಗೆ ನಡೆದರು. ಏಕೆಂದರೆ ಆ ಸಂದರ್ಭದಲ್ಲಿ ಇಂಗ್ಲೆಂಡ್ ಸ್ಪಷ್ಟವಾಗಿ ಗೆಲವು ಸಾಧಿಸುವ ಹಂತದಲ್ಲಿದ್ದರಿಂದ ತಮ್ಮ ಪಣದ ಹಣವನ್ನು ಉಳಿಸಿಕೊಳ್ಳುವುದಕ್ಕೆ ಅವರು ಹೀಗೆ ಮಾಡಿದ್ದರು. ಲಂಡನ್ ಕ್ರಿಕೆಟಿಗರು ಗೆಲವಿಗಾಗಿ ಗೋಗರೆದರು ಮತ್ತು ಸಂಭಾವನೆಯ ಸಮಸ್ಯೆ ಇರುವ ಕಾರಣ ಅಪೂರ್ಣಗೊಂಡ ಪಂದ್ಯವು ಕಾನೂನಿನ ವ್ಯಾಪ್ತಿಗೆ ಒಳಪಟ್ಟಿತು. ಕೊನೆಗೆ ನ್ಯಾಯಾಲಯ "ಆಟವನ್ನು ಮುಗಿಸಬೇಕು"ಎಂದು ತೀರ್ಪು ನೀಡಿತು ಇದು ಆಗಿದ್ದು ಜುಲೈ ೧೭೧೯ರಲ್ಲಿ. ೪ ವಿಕೆಟ್ ಗಳು ಇದ್ದ ರಾಚೆಸ್ಟರ್ ಗೆಲವಿಗಾಗಿ ೩೦ ರನ್ ಮಾಡಬೇಕಾಗಿತ್ತು ಆದರೆ ೨೧ ರನ್ ಗಳ ಅಂತರದಲ್ಲಿ ಸೋತಿತು.[೬೬] ೧೭೨೪ರಲ್ಲಿ ಚಿಂಗ್ ಫೋರ್ಡ್ ಮತ್ತು ಎಡ್ವರ್ಡ್ ಸ್ಟೇಡ್ XI ನಡುವೆ ನಡೆದ ಪಂದ್ಯದ ಬೇಗನೆ ಅಂತ್ಯವಾಯಿತು. ಎಕೆಂದರೆ ಸ್ಟೇಡ್ ತಂಡವು ಗೆಲವಿನ ಹಾದಿಯಲ್ಲಿದ್ದಾಗ ಚಿಂಗ್ ಪೋರ್ಡ್ ತಂಡವು ಆಡುವುದಕ್ಕೆ ನಿರಾಕರಿಸಿತು. ೧೭೧೮ರಲ್ಲಿ ಕೋರ್ಟ್ ಕೇಸ್ ದಾಖಲಾಗಿ ಅದು ಎಲ್ಲರಿಗೂ ಸಂಭಾವನೆ ನೀಡಬೇಕಾಗಿರುವ ಕಾರಣ ಪಂದ್ಯವನ್ನು ಆಡಬೇಕು ಎಂದು ಅದು ತೀರ್ಪು ನೀಡಿತು. ಲಾರ್ಡ್ ಮುಖ್ಯ ನ್ಯಾಯಾಧೀಶ ಪ್ರ್ಯಾಟ್ ಪ್ರಕರಣದ ವಿಚಾರಣೆ ನಡೆಸಿ ಡ್ರಾಟ್‌ಪೋರ್ಡ್ ಬ್ರೆಂಟ್ ನಲ್ಲಿ ಮುಂದಿನ ಆಟವನ್ನು ಮುಂದುವರಿಸಬೇಕು ಎಂದು ತೀರ್ಮಾನ ನೀಡಿದರು. ಆದಾಗ್ಯೂ ಮೋದಲು ಇಲ್ಲಿಯೇ ಆಡಲಾಗಿತ್ತು ಎನ್ನುವುದು ಅಸ್ಪಷ್ಟವಾಗಿದೆ.[೬೭] ೧೭೨೬ರಲ್ಲಿ ಆಟವನ್ನು ಪೂರ್ಣಗೊಳಿಸಲಾಯಿತು. ಚಿಂಗ್‌ಪೋರ್ಡ್ ಮೂಲ ಸ್ಥಳವಾಗಿತ್ತು ಎಂದು ತಿಳಿದಲ್ಲಿ ಎಸ್ಸೆಕ್ಸ್‌ನಲ್ಲಿ ಕ್ರಿಕೆಟ್ ಆಡಿದ ಕುರಿತು ಈ ಪಂದ್ಯ ಆಡಲಾಗಿತ್ತು ಇದು ಮೊದಲು ಉಲ್ಲೇಖಿಸುತ್ತದೆ.ಮತ್ತು ಎಸ್ಸೆಕ್ಸ್ ತಂಡವನ್ನು ಒಳಗೊಂಡಿತ್ತು ಎಂದು ಮಾಹಿತಿ ನೀಡುತ್ತದೆ.ಆರ್ಟಿಕಲ್ ಆಫ್ ಅಸೋಸಿಯೇಷನ್ ನ ಪರಿಚಯ ಹೆಚ್ಚು ಕಡಿಮೆ ಪ್ರವರ್ತಕರು ಮತ್ತು ಪಂದ್ಯ ಸಂಘಟಕರ ನಡುವಿನ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಪಂದ್ಯದ ಪ್ರಾರಂಭಕ್ಕೆ ಮುನ್ನ ಆರ್ಟಿಕಲ್ ಆಫ್ ಅಸೋಸಿಯೆಷನ್‌ನ ಪರಿಚಯವನ್ನು ಪಣದಾರರಿಂದ ಒಪ್ಪಿಕೊಳ್ಳಲಾಯಿತು. ಆಟದ ನಿಯಮಗಳನ್ನು ವಾಖ್ಯಾನಿಕರಣದಲ್ಲಿ ಇದು ಪ್ರಮುಖ ಪರಿಕಲ್ಪನೆಯಾಗಿದ್ದು, ನಂತರದ ದಿನಗಳಲ್ಲಿ ಇದನ್ನು ಕ್ರಿಕೆಟ್ ನ ನಿಯಮಗಳು ಎಂದು ನಿರ್ಧಿಷ್ಪಪಡಿಸಲಾಯಿತು..[೬೮]

೧೮ನೇ ಶತಮಾನದ ಪ್ರಾರಂಭದ ಪಂದ್ಯಗಳು ಬದಲಾಯಿಸಿ

೧೮ನೇ ಶತಮಾನದ ಪ್ರಾರಂಭದಲ್ಲಿ ದ ಪೋಸ್ಟ್‌ಬಾಯ್ ಮತ್ತು ದ ಪೋಸ್ಟ್‌ಮ್ಯಾನ್ ನಂತಹ ನಿಯತಕಾಲಿಕೆಗಳು ಕ್ರಿಕೆಟ್‌ನ ಜಾಹೀರಾತಿಗೆ ಉಪಯುಕ್ತವಾದ ಮೂಲಗಳು ಆಗಿದ್ದವು. ೧೭೦೦ರಲ್ಲಿ ಕ್ಲಾಫಮ್ ಕಾಮನ್ ನಲ್ಲಿ ಸರಣಿ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯವು ಈಸ್ಟರ್ ಸೋಮವಾರದಂದು ನಡೆಯಲಿದ್ದು £೧೦ ಮತ್ತು £೨೦ ಪಣಕ್ಕೆ ಇಡಲಾಗಿದೆ ಎಂದು {1}ದ ಪೋಸ್ಟ್ ಬಾಯ್{/1} ಮಾರ್ಚ್ ೩೦ರಂದು ಮೊದಲೇ ಪ್ರಕಟಿಸಿತು. ಯಾವುದೇ ಪಂದ್ಯದ ವರದಿಗಳು ದೊರೆಯದ ಕಾರಣ, ಫಲಿತಾಂಶ ಮತ್ತು ಸ್ಕೋರ್ ನ ಮಾಹಿತಿ ಸಿಕ್ಕಿಲ್ಲ. ತಲಾ ಒಂದು ತಂಡದಲ್ಲಿ ಹತ್ತು "ಸಭ್ಯರು" ಇದ್ದು, "ಸಭ್ಯರು ಮತ್ತು ಇತರರು " ಹಾಜರು ಇರಬೇಕು ಎಂದು ಆಹ್ವಾನದಲ್ಲಿ ಹೇಳಲಾಗಿರುವುದನ್ನು ಜಾಹೀರಾತು ಹೇಳುತ್ತದೆ. ೧೮ನೇ ಶತಮಾನದ ಅವಧಿಯಲ್ಲಿ ಕ್ರಿಕೆಟ್ ಪೋಷಣೆಯನ್ನು ಮತ್ತು ಅಂತ್ಯಗೊಳ್ಳದ ಪ್ರೇಕ್ಷಕರ ಮನವಿಯನ್ನು ಗಳಿಸಿತು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.[೬೯] ೨೪ ಜುಲೈ ೧೭೦೫ ರಂದು, ವೆಸ್ಟ್ ಆಫ್ ಕೆಂಟ್ ಮತ್ತು ಚೆಥಾಮ್ ನಡುವಿನ ಒಂದು ೧೧-ಒಂದು-ಕಡೆ ಆಟವನ್ನು ಮಾಲಿಂಗ್, ಕೆಂಟ್, ನಲ್ಲಿ ಆಡುವುದಾಗಿ ದ ಪೋಸ್ಟ್‌ಮ್ಯಾನ್ ಪ್ರಕಟಿಸಿತು.[೬೯] ಜುಲೈ ೧ ಮತ್ತು ೩, ೧೭೦೧ರಂದುಕ್ರೆಯ್ಡಾನ್ ಮತ್ತುಲಂಡನ್ ಎರಡು ಬಾರಿ ಆಡಿದವು. ಮೊದಲ ಪಂದ್ಯವು ಬಹುಶಃ ಕ್ರೆಯ್ಡಾನ್ಡಪ್ಪಾಸ್ ಹಿಲ್ ನಲ್ಲಿ ಆಡಬೇಕಾಯಿತು. ಎರಡನೆಯದ್ದನ್ನು ಹಾಲ್ ಬೋರ್ನ್ ನಲ್ಲಿರುವ ಲ್ಯಾಂಬ್ಸ್ ಕಂಡ್ಯೂಟ್ ಫೀಲ್ಡ್ ನಲ್ಲಿ ಆಡಲಾಯಿತು. "ಎರಡು ಪಂದ್ಯಗಳು ಲಂಡನ್ ಮತ್ತು ಕ್ರೆಯ್ಡಾನ್ ನಲ್ಲಿ ನಡೆಯಲಿದ್ದು (sic ), ಮೊದಲ ಪಂದ್ಯವು ಜುಲೈ ೧ರಂದು ಕ್ರೆಯ್ಡಾನ್ ನಲ್ಲಿ ನಡೆಯಲಿದೆ. ಮತ್ತು ಇನ್ನೊಂದು ಪಂದ್ಯವು ಲ್ಯಾಂಬ್ ನ ಹಾಲ್ ಬೋರ್ನ್ ನ ಕಂಡ್ಯೂಟ್ ಫೀಲ್ಡ್ ನಲ್ಲಿ ಜುಲೈ ೩ರಂದು ನಡೆಯಲಿದೆ ಎಂದು ಎರಡು ಪಂದ್ಯಗಳ ಕುರಿತು ದ ಪೋಸ್ಟ್ ಮ್ಯಾನ್ ನಲ್ಲಿ ಜಾಹೀರಾತು ನಡೆಯಿತು. ಆದರೆ ಪಂದ್ಯದ ವರದಿಗಳು ದೊರೆಯದ ಕಾರಣ ಫಲಿತಾಂಶ ಮತ್ತು ಸ್ಕೋರ್ ತಿಳಿದಿಲ್ಲ.[೬೯] ಜೂನ್ ೨೯, ೧೭೦೯ರಲ್ಲಿ ಡ್ರಾಟ್‌ಫೋರ್ಡ್ ಬ್ರೆಂಟ್‌ನಲ್ಲಿ ಕೆಂಟ್ ಮತ್ತು ಸರ್ರೆ ತಂಡಗಳ ನಡುವೆ ನಡೆದ ಪಂದ್ಯವು ನಿಶ್ಚಿತವಾಗಿ ಕೌಂಟಿ ತಂಡಗಳನ್ನು ಒಳಗೊಂಡಿದೆ ಎಂದು ಮೊದಲು ತಿಳಿಯಲ್ಪಟ್ಟಿದೆ. ಈ ಪಂದ್ಯವನ್ನು ಹಿಂದಿನ ಶನಿವಾರ ಪೋಸ್ಟ್ ಮ್ಯಾನ್ ಪ್ರಕಟಿಸಿದ ಜಾಹೀರಾತಿನಲ್ಲಿ ಶನಿವಾರ ನಡೆಯಲಿರುವ ಪಂದ್ಯಕ್ಕೆ £೫೦ ಪಣವಿಡಲಾಗಿದೆ ಎಂದು ಹೇಳಲಾಯಿತು. ಡ್ರಾಟ್‌ಫರ್ಡ್ ಬ್ರೆಂಟ್, ೧೮ನೇ ಶತಮಾನದಲ್ಲಿ ಕೆಂಟ್ ನ ಪ್ರಮುಖ ಸ್ಥಳವಾಗಿತ್ತು ಬಹುಶಃ ೧೭ನೇ ಶತಮಾನದಲ್ಲಿ ಪಂದ್ಯಗಳಿಗೆ ಇದೇ ಜಾಗವನ್ನು ಉಪಯೋಗಿಸಲಾಗುತ್ತಿತ್ತು. ಹೆಚ್ಚು ಕಡಿಮೆ ಈ ಅವಧಿಯಲ್ಲಿ ಡ್ರಾಟ್‌ಫೋರ್ಡ್, ಕೆಂಟ್ ನ ಪ್ರಮುಖ ಕ್ಲಬ್ ಆಗಿದ್ದ ಡ್ರಾಟ್ ಫೋರ್ಡ್, ಸ್ಥಳದ ಜೊತೆಗೆ ತಂಡಕ್ಕೆ ಪ್ರಮುಖ ಆಟಗಾರರನ್ನು ಪೂರೈಸಿರುವ ಸಾಧ್ಯತೆ ಇದೆ. ಇದೇ ವೇಳೆ ಸರ್ರೆ ತಂಡವು ಹಲವಾರು ಸರ್ರೆ ಪಾರಿಷ್ ಗಳಿಂದ ಮತ್ತು ಅವುಗಳ ಪ್ರವರ್ತಕರಿಂದ ಆಯ್ಕೆ ಮಾಡಲಾಗುತ್ತಿತ್ತು.[೭೦] ೧೭೦೯ರ ಪಂದ್ಯವೊಂದರಲ್ಲಿ ಡ್ರಾಟ್ ಫೋರ್ಡ್ ನ ವಿಲಿಯಂ ಬೆಡ್ಲೆ (೧೬೮೦-೧೭೬೮ರಲ್ಲಿ ಪಾಲ್ಗೊಂಡಿರಬಹುದು. ಪ್ರಾರಂಭದ ದಿನಗಳಲ್ಲಿ ಆತನು ಪ್ರಖ್ಯಾತ ಆಟಗಾರನಾಗಿದ್ದನು ಎಂದು ದಾಖಲೆಯಲ್ಲಿ ಹೇಳಲಾಗಿದೆ. ಆತನನ್ನು ಇಂಗ್ಲೆಂಡಿನ ಅತ್ಯಂತ ಪರಿಣತ ಕ್ರಿಕೆಟಿಗ ಎಂದು ಪರಿಗಣಿಸಲಾಗಿದೆ. ಆತನು ೧೭೦೦ರಿಂದ ೧೭೨೫ರ ಅವಧಿಯಲ್ಲಿ ಆಡಿರಬೇಕು.[೭೧] ೧೭೨೦ರ ಅವಧಿಯಲ್ಲಿ ಸಕ್ರಿಯವಾಗಿದ್ದ ಇತರ ಕ್ರಿಕೆಟಿಗರು ಎಂದರೆ ಕೆಂಟ್ ನ ಎಡ್ವರ್ಡ್ ಸ್ಟೇಡ್, ಸರ್ರೆಯ ಎಡ್ಮಂಡ್ ಕಾಪ್ಮನ್ ಮತ್ತು ಸ್ಪಿಫನ್ ಡಿಂಗಾಟೆ, ಸಸ್ಸೆಕ್ಸ್ ನ ಟಿಮ್ ಕೊಲ್ಮನ್ ಮತ್ತು ಥಾಮಸ್ ವೆಮಾರ್ಕ್.

ಡಾರ್ಟ್ ಫೋರ್ಡ್ ಮತ್ತು ಲಂಡನ್ ಬದಲಾಯಿಸಿ

ಕ್ರಿಕೆಟ್ ಇತಿಹಾಸದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಎಂದು ಗುರುತಿಸಿಕೊಂಡಿದ್ದು ಡಾರ್ಟ್ ಫೋರ್ಡ್ ಮತ್ತು ಲಂಡನ್ ಕ್ಲಬ್ ಗಳು ಇವುಗಳು ೧೭೨೨ರಲ್ಲಿ ಪ್ರಥಮ ಬಾರಿಗೆ ಪರಸ್ಪರ ಸೆಣಸಿದವು. ಬುಧವಾರ, ಆಗಸ್ಟ್ ೧೯, ೧೭೧೯ರಲ್ಲಿ ವೈಟ್ ಕಂಡ್ಯೂಟ್ ನಲ್ಲಿ ಲಂಡನ್ ಮತ್ತು ಕೆಂಟ್ ಪರಸ್ಪರ ಸೆಣಸಿದವು ಮತ್ತು ಕೆಂಟ್ ಗೆಲವು ಸಾಧಿಸಿತು. ಇದು ಮೊದಲು ತಿಳಿದಿರುವ ನಿಶ್ಚಿತ ಫಲಿತಾಂಶವಾಗಿದೆ. ಗಮನಾರ್ಹ ಮೊತ್ತದ ಹಣಕ್ಕಾಗಿ ಎರಡು ತಂಡಗಳು ಆಡಿದವು ಎಂದು ವರದಿ ಹೇಳುತ್ತದೆ.[೬೭] ಶನಿವಾರ ಜುಲೈ ೯ ೧೭೨೯ರಂದು ವೈಟ್ ಕಂಡ್ಯೂಟ್ ಮೈದಾನದಲ್ಲಿ ಲಂಡನ್ ಮತ್ತು ಕೆಂಟ್ ನಡುವೆ ನಡೆದ ಈ ಪಂದ್ಯದಲ್ಲಿ ಲಂಡನ್ ನ ಇಬ್ಬರು ಕ್ಷೇತ್ರ ರಕ್ಷಕರು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡರು.[೬೭] ಈ ಪಂದ್ಯದ ನಂತರ ಕ್ರಿಕೆಟ್ ನ ಜಾಹೀರಾತು ಮತ್ತು ವರದಿಗಾರಿಕೆ ಕೆಲ ವರ್ಷದವರೆಗೆ ಸ್ಥಗಿತಗೊಂಡಿತ್ತು ಎಂದು ಎಚ್.ಟಿ. ವಾಘರೋನ್ ಬರೆಯುತ್ತಾರೆ. ಮತ್ತು ಕ್ರೀಡೆ ಅಪಾಯಕಾರಿ ಎಂಬ ಅಭಿಪ್ರಾಯ ಪಡುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.[೬೭] ಆದರೆ ನಿಜವಾದ ಕಾರಣ ಮಾತ್ರ ಸೌತ್ ಸೀ ಬಬಲ್ ಆಗಿತ್ತು. ೧೭೨೦ರಲ್ಲಿ ಸೌಥ್ ಸೀ ಕಂಪನಿ ದಿವಾಳಿಯಾಗಿದೆ ಎಂದು ಕಂಡು ಬಂದ ನಂತರ ಅರ್ಥವ್ಯವಸ್ಥೆಯ ಭಾರೀ ಪ್ರಮಾಣದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದ್ದರಿಂದ ಕೆಲ ಕ್ರಿಕೆಟ್ ನ ಪ್ರವರ್ತಕರು ಸೇರಿದಂತೆ ಹಲವಾರು ಶ್ರೀಮಂತ ಹೂಡಿಕೆದಾರರು ಹಾಳಾದರು. ಹೀಗಾಗಿ ಕೆಲವೇ ಪಂದ್ಯಗಳಿಗೆ ಪ್ರಾಯೋಜಕತ್ವ ಮತ್ತು ವರದಿ ನೀಡಬೇಕಾಯಿತು. ಹೀಗಾಗಿ ಕೆಲವೇ ಪಂದ್ಯಗಳು ನಡೆದವು.[೭೨] ಬುಧವಾರ ಜುಲೈ ೧೮, ೧೭೨೨ರಲ್ಲಿ ಇಸ್ಲಿಂಗ್ಟನ್ ನಲ್ಲಿ ಲಂಡನ್ ಮತ್ತು ಡಾರ್ಟ್ ಫೋರ್ಡ್ ನಲ್ಲಿ ನಡೆದ ಪಂದ್ಯವು ಜುಲೈ ೨೧, ೧೭೨೨ರಲ್ಲಿ ಪ್ರಕಟಿತ ವೀಕ್ಲಿ ಜರ್ನಲ್ ನ ಪತ್ರದ ಸಾರಾಂಶವಾಯಿತು. ಪಂದ್ಯದ ಫಲಿತಾಂಶ ಗೊತ್ತಿಲ್ಲ. ೧೭೨೩ರಲ್ಲಿ ಟೋರಿ ಪಕ್ಷದ ಪ್ರಮುಖ ರಾಜಕಾರಣಿ ಅರ್ಲ್ ಆಫ್ ಆಕ್ಸಫರ್ಡ್, ರಾಬರ್ಟ ಹರ್ಲೆ ತನ್ನ ಜರ್ನಲ್ ನಲ್ಲಿ, ಡಾರ್ಟ್ ಫೋರ್ಡ್ ನಲ್ಲಿ ನಾವು ಪಟ್ಟಣದಿಂದ ಹೊರಬರುತ್ತಿರುವ ಸಂದರ್ಭದಲ್ಲಿ ಟಾನ್ ಬ್ರಿಡ್ಜ್ ನ ಜನರು ಮತ್ತು ಡಾರ್ಟ್ ಫೋರ್ಡ್ ನ ಜನರು ಕ್ರಿಕೆಟ್ ಆಟದಲ್ಲಿ ತಲ್ಲೀಣರಾಗಿದ್ದರು. ಇಂಗ್ಲೆಂಡಿನ ಜನರು ಮತ್ತು ಕೆಂಟಿಷ್ ನಿವಾಸಿಗಳು ಅತಿಯಾಗಿ ಇಷ್ಟಪಡುತ್ತಾರೆ. ಮತ್ತು ಎಲ್ಲ ಕೆಂಟಿಷ್ ನಿವಾಸಿಗಳು, ಡಾರ್ಟ್ ಫೋರ್ಡ್ ನ ಜನರು ಅತ್ತ್ಯುತ್ತಮವಾದುದನ್ನು ಸಾಧಿಸುತ್ತೇವೆ ಎಂದು ಪ್ರತಿಪಾದಿಸುತ್ತಾರೆ.[೭೩] ಇದರಲ್ಲಿ ಡಾರ್ಟ್ ಫೋರ್ಡ್ ನಲ್ಲಿ ನಡೆಯುತ್ತಿರುವ ಈ ಆಟವನ್ನು ಸೇರಿಸುವುದು ಸೂಕ್ತ ಎಂದು ದಾಖಲಿಸಿದ್ದಾರೆ.[೭೩] ಗುರುವಾರ ಜೂನ್ ೧೮, ೧೭೨೪ರಲ್ಲಿ ಇಂದಿನ ದ ಓವಲ್ ನಲ್ಲಿ ಲಂಡನ್ ಮತ್ತು ಡಾರ್ಟ್ ಫೋರ್ಡ್ ನಡುವೆ ನಡೆದ ಪಂದ್ಯವು ಕೆನ್ನಿಂಗ್ಟನ್ ಕಾಮನ್ ನಡೆದ ಮೊದಲ ಪಂದ್ಯ ಎಂದು ತಿಳಿಯಲ್ಪಟ್ಟಿದೆ. ಪಂದ್ಯದ ಫಲಿತಾಂಶ ಗೊತ್ತಿಲ್ಲ.[೭೪] ಸೋಮವಾರ ಆಗಸ್ಟ್ ೧೦, ೧೭೨೪ರಲ್ಲಿ ಇಸ್ಲಿಂಗ್ಟನ್ ನಲ್ಲಿ ನಡೆದ ಪಂದ್ಯದಲ್ಲಿ ಪೆನ್ಶಹರ್ಟ್, ಟನ್ ಬ್ರಿಡ್ಜ್, ವಾಧುರ್ ಹರ್ಸ್ಟ್ ನ ಪಾರಿಷ್ ಗಳನ್ನು ಒಳಗೊಂಡ ತಂಡಗಳ ವಿರುದ್ಧ ಡಾರ್ಟ್ ಫೋರ್ಡ್ ತಂಡ ಆಡಿತು. ಇದರ ಫಲಿತಾಂಶ ತಿಳಿದುಬಂದಿಲ್ಲ. ಇದನ್ನು ಜಾನ್ ಡಾಸನ್ ಎಂಬ ವ್ಯಕ್ತಿ ತನ್ನ ಡೈರಿಯಲ್ಲಿ ದಾಖಲಿಸಿದ್ದು, ಅವರು ಪಂದ್ಯವನ್ನು ನೋಡಿರಬಹುದು. ಯಾವುದೇ ಮಾಹಿತಿಗಳು ಇಲ್ಲದಿದ್ದರೂ ಇದು ಅತ್ತ್ಯುತ್ತಮ ಕ್ರಿಕೆಟ್ ಪಂದ್ಯ ಎಂದು ಹೇಳಲಾಗಿದೆ.[೭೫]

ಇಂಗ್ಲೆಂಡ್ ಮತ್ತು ವಿದೇಶಗಳಲ್ಲಿ ಕ್ರಿಕೆಟ್‌ ಬೆಳವಣಿಗೆ ಬದಲಾಯಿಸಿ

ಇಂಗ್ಲೆಂಡಿನಾಚೆ ಮೊದಲ ಬಾರಿಗೆ ಕ್ರಿಕೆಟ್ ಆಡಿದ ದಾಖಲೆ ಶನಿವಾರ ೬ ಮೇ ೧೬೭೬ರಲ್ಲಿ ದಾಖಲಾಗಿದೆ. ಹೇನ್ರಿ ಟಾಂಗ್ ಎಂಬ ಡೈರಿ ಲಿಪಿಕಾರ (ಈಗ ಸಿರಿಯಾದಲ್ಲಿರುವ) ಟರ್ಕಿಯಲ್ಲಿನ ಅಲೆಪ್ಪೊಗೆ ತೆರಳಿದ ಬ್ರಿಟಿಷ್ ಮಿಷನ್ ನಲ್ಲಿದ್ದ ಅವನು, ಕನಿಷ್ಠ ೪೦ ಇಂಗ್ಲಿಷರು ಮೋಜಿನ ಉದ್ದೇಶದಿಂದ ನಗರವನ್ನು ತೊರೆದರು ಮತ್ತು ತಮ್ಮ ಟೆಂಟ್ ಹಾಕುವುದಕ್ಕೆ ಉತ್ತಮವಾದ ಸ್ಥಳವನ್ನು ಕಂಡುಕೊಂಡ ನಂತರ ಅಲ್ಲಿ ಭೋಜನ ಮಾಡಿದರು ನಂತರ "ಸಮಯ ಕಳೆಯುವುದಕ್ಕೆ "ಕ್ರಿಕೆಟ್" ಸೇರಿದಂತೆ ಇತರ ಆಟಗಳನ್ನು" ಆಡಿದರು. ಆರಕ್ಕೆ "ಸರಿಯಾಗಿ ಅವರು ಮನೆಗೆ ಮರಳುತ್ತಿದ್ದರು".[೭೬] ಇದೇ ಹೊತ್ತಿಗೆ ಭಾರತ ಉತ್ತರ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್‌ಗಳಲ್ಲಿ ಕ್ರಿಕೆಟ್ ಪರಿಚಿತಗೊಂಡಿತು. ಆದರೆ ನಿರ್ಧಿಷ್ಟವಾದ ಉಲ್ಲೇಖವು ೧೮ನೇ ಶತಮಾನದಲ್ಲಿ ದೊರೆಯುತ್ತದೆ.[೭೭] ೧೭೦೯ರಲ್ಲಿ ಪೂರ್ವ ವರ್ಜಿನಿಯಾದ ಜೇಮ್ಸ್ ರೀವರ್ ಎಸ್ಟೇಟ್ ನಲ್ಲಿ ವೆಸ್ಟಹೋವರ್ ನ ವಿಲಿಯಂ ಬೈರ್ಡ್ ಕ್ರಿಕೆಟ್ ಆಡಿದರು. ಇದು ಹೊಸ ಜಗತ್ತಿನಲ್ಲಿ ಕ್ರಿಕೆಟ್ ಆಡಿದ ಕುರಿತ ಮೊದಲ ಉಲ್ಲೇಖವಾಗಿದೆ.[೭೮] ೧೭೨೧ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಇಂಗ್ಲಿಷ್ ನಾವಿಕರು ಬರೋಡಾದ ಹತ್ತಿರದ ಕ್ಯಾಂಬೆಯಲ್ಲಿ ಕ್ರಿಕೆಟ್ ಆಡಿದ ವರದಿ ಇದೆ. ಮತ್ತು ಇದು ಬಾರತದಲ್ಲಿ ಕ್ರಿಕೆಟ್ ಆಡಿದ ಕುರಿತ ಮೊದಲ ಉಲ್ಲೇಖವಾಗಿದೆ. ಈಸ್ಟ್ ಇಂಡಿಯಾ ಮೂಲಕ ಭಾರತಕ್ಕೆ ಪರಿಚಿತವಾದ ಕ್ರಿಕೆಟ್ ಸ್ಥಾಪನೆಯಾಯಿತು. ಮತ್ತು ನಂತರ ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಿಗೆ ನಂತರದ ದಿನಗಳಲ್ಲಿ ಪಸರಿಸಿತು. ಇದೀಗ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಇತರ ಮೂರು ದೇಶಗಳು ಇಂಗ್ಲಿಷ್ ವಸಾಹತುದಾರರನ್ನು ೧೭೨೫ರ ಹೊತ್ತಿಗೆ ಸ್ವೀಕರಿಸಲಿಲ್ಲ. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗಳು ಅಬೇಲ್ ತಾಸ್ಮನ್ ೧೬೪೦ರಲ್ಲಿ ಭಾಗಶಃ ಶೋಧಿಸಿದ್ದರು. ಆದರೆ ಇಂದಿಗೂ ಅವುಗಳು ಮೂಲನಿವಾಸಿಗಳು ಮತ್ತು ಮಾವೋರಿ ನಿವಾಸಿಗಳನ್ನು ಕ್ರಮವಾಗಿ ಹೊಂದಿದ್ದಾರೆ.[೭೯] ದಕ್ಷಿಣ ಆಫ್ರಿಕದಲ್ಲಿ ಮೊದಲ ಯುರೋಪಿಯನ್ ವಾಸಸ್ಥಾನವನ್ನು ಮಂಗಳವಾರ ಏಪ್ರಿಲ್ ೧೬೫೨ರಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿಯು ಟೇಬಲ್ ಬೇನಲ್ಲಿ ಕೇಪ್ ಕಾಲನಿ ಸ್ಥಾಪಿಸಲಾಯಿತು. ಸದ್ಯ ಇದು ಕೇಪ್ ಟೌನ್ ಹತ್ತಿರವಿದೆ.[೮೦] ಬ್ರಿಟಿಷ್ ದ್ವೀಪಗಳಲ್ಲಿ ಪಸರಿಸುವುದಕ್ಕಿಂತ ಮುಂಚೆಯೇ ಅಮೆರಿಕ ಮತ್ತು ಇಂಗ್ಲೆಡ್ ಗಳಲ್ಲಿ ಕ್ರಿಕೆಟ್ ಅನ್ನು ಪರಿಚಯಿಸಿರುವ ಸಂಭವನೀಯತೆ ಇದೆ. ೧೭೫೧ರವರೆಗೆ ಇಂಗ್ಲಿಷ್ ಆಟದ ಯಶಸ್ವಿ ಕ್ಲಬ್‌ನ ತವರು ಮನೆಯಾಗಿರುವ ಯಾರ್ಕಷೈರ್ ನಲ್ಲಿ ಕ್ರಿಕೆಟ್ ಕುರಿತು ದಾಖಲೆ ಇಲ್ಲ. ಐರ್ಲಂಡ್, ಸ್ಕಾಟಲ್ಯಾಂಡ್ ಮತ್ತು ವೇಲ್ಸ್ ನಲ್ಲಿ ಕೂಡ ಕ್ರಿಕೆಟ್ ಕುರಿತ ಮೊದಲ ಉಲ್ಲೇಖವು ೧೮ನೇ ಶತಮಾನದ ನಂತರ ದೊರೆಯುತ್ತದೆ.[೧೦] ಇಂಗ್ಲೆಂಡ್ ನ ಸಮುದ್ರಯಾನ ಮತ್ತು ವ್ಯವಹಾರಿಕ ವಿಚಾರಗಳು ಹೊರದೇಶದಲ್ಲಿ ಕ್ರಿಕೆಟ್ ಪಸರಿಸುವ ಕೆಲಸವನ್ನು ಮಾಡಿದವು. ಸ್ವಂತ ನೆಲದಲ್ಲಿ ಅತಿಯಾಗಿ ಸಾರಿಗೆ ಮತ್ತು ಸಂಪರ್ಕ ಮಾಧ್ಯಮಗಳ ಮೇಲೆ ಅವಲಂಬಿತವಾಗಿತ್ತು. ಬಹುತೇಕ ಹೆಚ್ಚಿನವುಗಳು ಜಲಸಾರಿಗೆಯಾಗಿದ್ದು, ಕರಾವಳಿ ಅಥವ ನದಿಯ ಹಡಗುಗಳನ್ನು ಉಪಯೋಗಿಸಿ ಸುದೀರ್ಘ ಪ್ರಯಾಣವನ್ನು ಕೈಗೆತ್ತಿಕೊಳ್ಳಬೇಕಾಗುತ್ತಿತ್ತು.[೮೧] ರಸ್ತೆ ಸಾರಿಗೆ ನಿಧಾನವಾಗಿ ಸುಧಾರಿಸುತ್ತಿತ್ತು. ೧೭೦೬ರಲ್ಲಿ ಸಂಸತ್ತು ಟರ್ನ್‌ಪೈಕ್ ಟ್ರಸ್ಟ್ ಅನ್ನು ಸ್ಥಾಪಿಸಿ ಉದ್ದವಾದ ರಸ್ತೆಗಳ ನಿಯಂತ್ರಣವನ್ನು ಸ್ಥಳೀಯ ಜಮೀನಿನ ಮಾಲೀಕರು ಮತ್ತು ವ್ಯಾಪಾರಿಗಳನ್ನು ಒಳಗೊಂಡ ಟ್ರಸ್ಟಿಗಳ ಕೈಯಲ್ಲಿರಿಸಿತು.[೮೨] ಟರ್ನ್ ಪೈಕ್ ಟ್ರಸ್ಟ್ ರಸ್ತೆಗಳ ನಿರ್ವಹಣೆಗೆ ಬಂಡವಾಳವನ್ನು ರಸ್ತೆ ಸುಂಕದ ರಕ್ಷಣೆಗೆ ಬದಲಾಗಿ ತಂದಿತು. ಈ ವ್ಯವಸ್ಥೆಯು ಮುಂದಿನ ೧೫೦ ವರ್ಷಗಳವರೆಗೆ ಸಾಮಾನ್ಯವಾಯಿತು. ಮತ್ತು ಸರಿಯಾದ ಸಮಯದಲ್ಲಿ ಇಂಗ್ಲೆಂಡ್ ಉದ್ದಕ್ಕೂ ಕ್ರಿಕೆಟ್ ಪಸರಿಸುವುದಕ್ಕೆ ನೆರವಾಯಿತು.[೮೧]

ಇವನ್ನೂ ನೋಡಿ ಬದಲಾಯಿಸಿ

ಟಿಪ್ಪಣಿ ಮತ್ತು ಉಲ್ಲೇಖಗಳು ಬದಲಾಯಿಸಿ

  1. ಅಂಡರ್‌ಡೌನ್‌, p. ೬.
  2. ೨.೦೦ ೨.೦೧ ೨.೦೨ ೨.೦೩ ೨.೦೪ ೨.೦೫ ೨.೦೬ ೨.೦೭ ೨.೦೮ ೨.೦೯ ೨.೧೦ ೨.೧೧ ಆಲ್ಥಮ್‌, ch. ೧.
  3. ಮಿಡಲ್‌ ಡಚ್‌ ಇದು ಆ ಸಮಯದಲ್ಲಿ ಫ್ಲ್ಯಾಂಡರ್ಸ್‌ನಲ್ಲಿ ಬಳಕೆಯಲ್ಲಿದ್ದ ಭಾಷೆಯಾಗಿತ್ತು.
  4. ೪.೦೦ ೪.೦೧ ೪.೦೨ ೪.೦೩ ೪.೦೪ ೪.೦೫ ೪.೦೬ ೪.೦೭ ೪.೦೮ ೪.೦೯ ೪.೧೦ ೪.೧೧ ಬಿರ್ಲೇ, ch. ೧.
  5. ಬೋವೆನ್‌, p. ೩೩.
  6. ೬.೦ ೬.೧ ೬.೨ ೬.೩ ೬.೪ ಡೇವಿಡ್ ಟೆರ್ರಿ, ದ ಸೆವೆಂಟೀನ್ಥ್ ಸೆಂಚುರಿ ಗೇಮ್ ಆಫ್ ಕ್ರಿಕೆಟ್‌: ಎ ರಿಕನ್‌ಸ್ಟ್ರಕ್ಷನ್ ಆಫ್ ದ ಗೇಮ್ Archived 2009-06-21 ವೇಬ್ಯಾಕ್ ಮೆಷಿನ್ ನಲ್ಲಿ.. ೨೫ ಸೆಪ್ಟೆಂಬರ್ ೨೦೦೮ ರಂದು ಪಡೆಯಲಾಯಿತು.
  7. "ಲೀಚ್‌ – 1597". Archived from the original on 2012-06-29. Retrieved 2010-05-06.. ೪ ಮಾರ್ಚ್ ೨೦೦೯ ರಂದು ಪಡೆಯಲಾಯಿತು.
  8. ಆಲ್ಥಮ್‌, p. ೨೪.
  9. ಜಾನ್ ಆರ್ಲಟ್ ಮತ್ತು ಫ್ರೆಡ್ ಟ್ರೂಮನ್, ಕ್ರಿಕೆಟ್ ಕುರಿತು‌ , ಬಿಬಿಸಿ ಬುಕ್ಸ್, ೧೯೭೭.
  10. ೧೦.೦ ೧೦.೧ ೧೦.೨ ಬೊವೆನ್‌, pp. ೨೬೧-೨೬೭.
  11. ಮೆಕ್ಯಾನ್‌, ಪ್ಯಾರಾಗಳು ೯೮, ೩೬೧ ಮತ್ತು ೩೭೭.
  12. ಬೋವೆನ್‌, p. ೨೯.
  13. ಆಕ್ಸ್‌ಫರ್ಡ್ ಇಂಗ್ಲೀಷ್‌ ಡಿಕ್ಷನರಿ – "ಕ್ರ್ಯಾಕ್ (ನೌನ್)" ಸೆನ್ಸ್ I.೫.c.
  14. ಜಿಯೋವಾನಿ ಫ್ಲೋರಿಯೋ ಐಟ್ಯಾಲಿಯನ್/ಇಂಗ್ಲೀಷ್‌ ಡಿಕ್ಷನರಿ: ಎ ವರ್ಲ್ಡ್ ಆಫ್ ವರ್ಡ್ಸ್ (೧೫೯೮). ೨೯ ಸೆಪ್ಟೆಂಬರ್ ೨೦೦೮ ರಂದು ಮರಳಿ ಪಡೆಯಲಾಯಿತು.
  15. ಜಿಯೋವಾನಿ ಫ್ಲೋರಿಯೋ, ಕ್ವೀನ್ ಅನ್ನಾಸ್ ನ್ಯೂ ವರ್ಲ್ಡ್ ಆಫ್ ವರ್ಡ್ಸ್ (೧೬೧೧), f. ೧೪೪ ಮತ್ತು f. ೧೯೮. ೨೯ ಸೆಪ್ಟೆಂಬರ್‌ ೨೦೦೮ ರಂದು ಮರಳಿ ಪಡೆಯಲಾಯಿತು.
  16. ೧೬.೦ ೧೬.೧ ಮೆಕ್ಯಾನ್‌, p. xxxi.
  17. ಅಂಡರ್‌ಡೌನ್‌, p. ೪.
  18. ೧೮.೦ ೧೮.೧ ಮೆಕ್ಯಾನ್‌, pp. xxxiii-xxxiv.
  19. ಮೆಕ್ಯಾನ್‌, p. xxxix.
  20. ಹೇಗರ್ಥ್‌, p. xvi.
  21. ಮೆಕ್ಯಾನ್‌, ಪ್ಯಾರಾಗಳು ೨-೨೪.
  22. ೨೨.೦ ೨೨.೧ ೨೨.೨ ವೆಬ್ಬರ್, p. ೧೦.
  23. ಮೆಕ್ಯಾನ್‌, pp. xxxiv-xxxvii.
  24. ಮೆಕ್ಯಾನ್‌, pp. xxxviii-xxxix.
  25. ಅಂಡರ್‌ಡೌನ್‌, pp. ೧೧-೧೨.
  26. ಬೋವೆನ್‌, p. ೨೬೭, ೧೭೯೨ ಅನ್ನು ಐರ್ಲೆಂಡಿನಲ್ಲಿ ಮೊತ್ತಮೊದಲ ಬಾರಿಗೆ ಈ ಆಟದ ಕುರಿತು ತಿಳಿಯಲಾಯಿತೆಂದು ದಾಖಲಿಸಲಾಗಿದೆ.
  27. ೨೭.೦ ೨೭.೧ ಬೋವೆನ್‌, p. ೪೫.
  28. ಬಿರ್ಲೇ, p. ೭.
  29. ಅಂಡರ್‌ಡೌನ್‌, p. ೧೫.
  30. ಬಿರ್ಲೇ, ch. ೩.
  31. ಬಿರ್ಲೇ, ch. ೧೮.
  32. ಆಲ್ಥಮ್‌, p. ೬೬.
  33. ಆಲ್ಥಮ್‌, pp. ೨೪-೨೫.
  34. ಮೇಜರ್, p. ೪೫.
  35. ಫ್ರಾನ್ಸಿಸ್ ಹೇಮನ್‌ನ ಕ್ರಿಕೆಟ್‌ ಅಟ್ ದ ಆರ್ಟಿಲ್ಲರಿ ಗ್ರೌಂಡ್ ಚಿತ್ರ, ೧೭೪೩. ಅದು ಲಾರ್ಡ್ಸ್ ಕ್ರಿಕೆಟ್‌ ಗ್ರೌಂಡ್‌ನಲ್ಲಿ ತೂಗಿಸಲ್ಪಟ್ಟಿದೆ.
  36. ಬಾಲರ್‌ಗಳು ಚೆಂಡನ್ನು ಪುಟಿಸಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದುದರಿಂದ ೧೭೬೦ ರ ದಶಕದಲ್ಲಿ ಆಧುನಿಕವಾದ ನೇರವಾದ ಬ್ಯಾಟ್ ಹುಟ್ಟಿತು.
  37. ಜಿ. ಡಿ. ಮಾರ್ಟೀನ್ಯೂ, ಬ್ಯಾಟ್, ಬಾಲ್, ವಿಕೆಟ್ ಮತ್ತು ಎಲ್ಲಾ , ಸ್ಪೋರ್ಟಿಂಗ್ ಹ್ಯಾಂಡ್‌ಬುಕ್ಸ್, ೧೯೫೦.
  38. ಆಕ್ಸ್‌ಫರ್ಡ್ ಡಿಕ್ಷನರಿ ಆಫ್ ಇಂಗ್ಲೀಷ್‌ – "ಬ್ಯಾಟಲ್‌ಡೋರ್".
  39. ಇಯಾನ್ ಕ್ರೇವಿನ್, ಮಾರ್ಟಿನ್ ಗ್ರೇ ಮತ್ತು ಜೆರಾಲ್ಡೀನ್ ಸ್ಟೋನ್‌ಹ್ಯಾಮ್ ಆಸ್ಟ್ರೇಲಿಯನ್ ಪಾಪ್ಯುಲರ್ ಕಲ್ಚರ್ , ಬ್ರಿಟೀಷ್ ಆಸ್ಟ್ರೇಲಿಯನ್ ಸ್ಟಡೀಸ್ ಅಸೋಸಿಯೇಶನ್, ೧೯೯೪. ಕೇಂಬ್ರಿಜ್‌ ಯೂನಿವರ್ಸಿಟಿ ಪ್ರೆಸ್ ಪಾಪ್ಯುಲರ್‌ ಕಲ್ಚರ್‌ ISBN ೦೫೨೧೪೬೬೬೭೯. ಪುಟ ೫೫ ೨೦೦೮ರ ಸೆಪ್ಟೆಂಬರ್‌ ೨೯ರಂದು ಪಡೆಯಲಾಯಿತು.
  40. ೪೦.೦ ೪೦.೧ ವಿಸ್ಡನ್ ಕ್ರಿಕೆಟರ್ಸ್ ಅಲ್ಮನೆಕ್ , "ಡೇಟ್ಸ್ ಇನ್ ಕ್ರಿಕೆಟ್‌ ಹಿಸ್ಟರಿ" (೧೯೭೮). ೨೯ ಸೆಪ್ಟೆಂಬರ್‌ ೨೦೦೮ ರಂದು ಪಡೆಯಲಾಯಿತು.
  41. ವ್ಯಾಗ್‌ಹೋರ್ನ್, p. ೩.
  42. ಆಲ್ಥಮ್‌, p. ೨೭.
  43. ಆಲ್ಥಮ್‌, p. ೨೮.
  44. ೪೪.೦ ೪೪.೧ ೪೪.೨ ೪೪.೩ ೪೪.೪ ttp://www.jl.sl.btinternet.co.uk/stampsite/cricket/ladstolords/1601.html#origin ಲೀಚ್‌ – ದಿ ಒರಿಜಿನ್‌ ಆಫ್‌ ಮೇಜರ್‌ ಕ್ರಿಕೆಟ್‌. ದಿನಾಂಕ 21 ಜನವರಿ 2007ರಂದು ಪುನರ್ಪಡೆದದ್ದು.
  45. ೪೫.೦ ೪೫.೧ ೪೫.೨ ಬಿರ್ಲೇ, p. ೧೧.
  46. ೪೬.೦ ೪೬.೧ ಬಿರ್ಲೇ, ch. ೨.
  47. ೪೭.೦ ೪೭.೧ ೪೭.೨ ಆಲ್ಥಮ್‌, p. ೨೩.
  48. ಲೀಚ್‌ – 1664. ದಿನಾಂಕ ೨೧ ಜನವರಿ ೨೦೦೭ರಂದು ಪುನರ್ಪಡೆದದ್ದು.
  49. UK CPI inflation numbers based on data available from Gregory Clark (2013), "What Were the British Earnings and Prices Then? (New Series)" MeasuringWorth.
  50. ಬಕಲೀ, p. ೧.
  51. ೫೧.೦ ೫೧.೧ ಲೀಚ್‌ – 1696. ದಿನಾಂಕ ೨೧ ಜನವರಿ ೨೦೦೭ರಂದು ಪುನರ್ಪಡೆದದ್ದು.
  52. ಓಲ್ಡ್‌ ಫಾದರ್‌ ಥೇಮಸ್‌ ಸೈಟ್‌ Archived 2011-09-18 ವೇಬ್ಯಾಕ್ ಮೆಷಿನ್ ನಲ್ಲಿ.. ೨೦೦೮ರ ಸೆಪ್ಟೆಂಬರ್ ೨೯ರಂದು ಪತ್ತೆಹಚ್ಚಲಾಯಿತು.
  53. ಮೆಕ್‌ಕ್ಯಾನ್‌, p. xl.
  54. ಮೇಜರ್‌, p. ೩೧.
  55. ಫಿಲ್‌ ಶಾವ್‌, ದಿ ಇಂಡಿಪೆಂಡೆಂಟ್, ೧೩ ಜುಅಲೈ ೨೦೦೩, ಕ್ರಿಕೆಟ್‌: ಆಪ್ಟರ್‌ 400 ಇಯರ್ಸ್‌, ಹಿಸ್ಟರಿ ಈಸ್‌ ಮೇಡ್ ನೆಕ್ಶ್ಟ್ ಟು ದಿ A323 Archived 2007-10-06 ವೇಬ್ಯಾಕ್ ಮೆಷಿನ್ ನಲ್ಲಿ.. ೧೨ ಫೆಬ್ರವರಿ ೨೦೧೦ ಪುನಃ ಸ್ವಾದೀನಪಡಿಸಿಕೊಂಡದ್ದು ಉಲ್ಲೇಖ: "ಮಿಚಾಮ್ ಗ್ರೀನ್ ನಿರಂತರವಾಗಿ ೩೧೭ ವರ್ಷಗಳಿಂದ ಕ್ರಿಕೆಟ್ ಕ್ರೀಡಾಂಗಣವಾಗಿ ಬಳಕೆಯಲ್ಲಿದೆ".
  56. ಇನ್‌ ಅ ಲೆಟರ್ ಟು ದಿ ವೀಕ್ಲಿ ಜರ್ನಲ್‌ (ಲಂಡನ್‌) ಡೇಟೆಡ್‌ ೨೧ ಜುಲೈ ೧೭೨೨.
  57. ಲೀಚ್‌ – 1725. ದಿನಾಂಕ ೨೧ ಜನವರಿ ೨೦೦೭ರಂದು ಪುನರ್ಪಡೆದದ್ದು.
  58. ಆಲ್ಥಮ್‌, pp. ೨೯-೩೦.
  59. ಲೀಚ್‌ – 1695. ದಿನಾಂಕ ೨೧ ಜನವರಿ ೨೦೦೭ರಂದು ಪುನರ್ಪಡೆದದ್ದು.
  60. ೬೦.೦ ೬೦.೧ ೬೦.೨ "ಲೀಚ್‌ – 1697". Archived from the original on 2012-08-02. Retrieved 2010-05-06.. ೨೦೦೮ರ ಸೆಪ್ಟೆಂಬರ್ ೨೮ರಂದು ಪತ್ತೆಹಚ್ಚಲಾಯಿತು.
  61. ೬೧.೦ ೬೧.೧ ಉಲ್ಲೇಖ ದೋಷ: Invalid <ref> tag; no text was provided for refs named McCann, p.xli
  62. ಮೆಕ್‌ಕ್ಯಾನ್‌, ಪ್ಯಾರಾಗ್ರಾಫ್‌ ೧.
  63. ಮೆಕ್‌ಕ್ಯಾನ್‌, ಪ್ಯಾರಾಗ್ರಾಫ್‌ ೧೯.
  64. ವ್ಯಾಗ್‌ಹೋರ್ನ್, p. ೭.
  65. "ಚಾಂಪಿಯನ್ ಕೌಂಟೀಸ್‌ ಫ್ರಾಮ್‌ 1728". Archived from the original on 2012-08-04. Retrieved 2010-05-06.. ೨೦೦೮ರ ಅಕ್ಟೋಬರ್ ೧೭ರಂದು ಗುರುತಿಸಲಾಯಿತು.
  66. ಬಕಲೀ, p. ೨.
  67. ೬೭.೦ ೬೭.೧ ೬೭.೨ ೬೭.೩ ವ್ಯಾಗ್‌ಹೋರ್ನ್, pp. ೫-೬.
  68. ಬಿರ್ಲೇ, pp. ೧೮-೧೯.
  69. ೬೯.೦ ೬೯.೧ ೬೯.೨ ವ್ಯಾಗ್‌ಹೋರ್ನ್‌, p. ೪.
  70. ಜಿ. ಬಿ. ಬಕಲೀ, ಫ್ರೇಶ್‌ ಲೈಟ್ ಆನ್‌ ಪ್ರೀ-ವಿಕ್ಟೋರಿಯನ್‌ ಕ್ರಿಕೆಟ್‌ , ಕಾಟರೆಲ್‌, ೧೯೩೭.
  71. ಬಕಲೀ, p. ೪೮.
  72. ಬಿರ್ಲೇ‍, p. ೧೬.
  73. ೭೩.೦ ೭೩.೧ ಡಾರ್ಟ್‌ಫೋರ್ಡ ಕ್ರಿಕೆಟ್‌ ಕ್ಲಬ್‌ ವೆಬ್‌ಸೈಟ್‌. ೨೦೦೮ರ ಸೆಪ್ಟೆಂಬರ್ ೨೯ರಂದು ಪತ್ತೆಹಚ್ಚಲಾಯಿತು.
  74. ಬಕಲೀ, p. ೩.
  75. ಮೆಕ್‌ಕ್ಯಾನ್‌, ಪ್ಯಾರಾಗ್ರಾಫ್‌ ೧೮.
  76. ಹೇಯ್‌ಗರ್ಥ್‌, p. vi.
  77. ಸೈಮೋನ್‌ ವೋರಲ್‌, ಕ್ರಿಕೆಟ್‌, ಎನಿಒನ್‌? , ಸ್ಮಿತ್‌ಸೋನಿಯನ್‌ ಇನ್‌ಸ್ಟಿಟ್ಯೂಶನ್‌ ಮ್ಯಾಗಜಿನ್‌, ಅಕ್ಟೋಬರ್‌ ೨೦೦೬. ೨೦೦೭ರ ಮಾರ್ಚ್ ೩೦ರಂದು ಗುರುತಿಸಲಾಯಿತು.
  78. ವಿಲಿಯಂ ಬೈರ್ಡ್‌, ದಿ ಸೀಕ್ರೆಟ್ ಡೈರಿ ಆಫ್‌ ವಿಲಿಯಂ ಬೈರ್ಡ್‌ ಆಫ್‍ ವೆಸ್ಟೋವರ್‌ , ಡಿಎಜ್‌ ಪಬ್ಲಿಕೇಶನ್‌, ೧೯೪೧, pp. ೧೪೪-೧೪೬.
  79. ಸಿ ತಸ್‌ಮನ್‌ ಪೇಜ್‌ ಅಟ್ ಪ್ರಾಜೆಕ್ಟ್‌ ಗುಟೆನ್‌ಬರ್ಗ್‌ ಆಫ್‌ ಆಸ್ಟ್ರೇಲಿಯಾ. ೨೦೦೮ರ ಸೆಪ್ಟೆಂಬರ್‌ ೨೯ರಂದು ಪತ್ತೆಹಚ್ಚಲಾಯಿತು.
  80. ರೋಜರ್‌ ಬಿ. ಬೆಕ್‌, ದಿ ಹಿಸ್ಟರಿ ಆಫ್‌ ಸೌಥ್‌ ಅಫ್ರಿಕಾ , ಗ್ರೀನ್‌ವುಡ್‌, ೨೦೦೦.
  81. ೮೧.೦ ೮೧.೧ ಲೀಚ್‌ – 1706. ೨೦೦೮ರ ಅಕ್ಟೋಬರ್ ೧೭ರಂದು ಪತ್ತೆ ಹಚ್ಚಲಾಯಿತು.
  82. ವಿಲಿಯಂ ಅಲ್ಬರ್ಟ್, ದಿ ಟರ್ನ್‌ಪೈಕ್‌ ರೋಡ್‌ ಸಿಸ್ಟಂ ಇನ್‌ ಇಂಗ್ಲೆಂಡ್‌ ೧೬೬೩-೧೮೪೦ , ಕೇಂಬ್ರಿಜ್‌ ಯುನಿವರ್ಸಿಟಿ ಪ್ರೆಸ್‌, ೧೯೭೨.

ಉಲ್ಲೇಖದ ಮೂಲಗಳು ಬದಲಾಯಿಸಿ