೨೦೧೯ ಪುಲ್ವಾಮಾ ದಾಳಿ

ಭಯೋತ್ಪಾದಕ ದಾಳಿ

ಫೆಬ್ರವರಿ 14, 2019 ರಂದು, ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನಕ್ಕೆ , ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರದಲ್ಲಿ (ಅವಾಂತಿಪೋರಾ ಬಳಿ) ಆತ್ಮಹತ್ಯಾ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು. ಈ ದಾಳಿಯಿಂದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯ ೪೦ ಮಂದಿ ಹುತಾತ್ಮರಾದರು. ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ ಮೂಲದ ಇಸ್ಲಾಮ್ ಉಗ್ರಗಾಮಿ ಗುಂಪು ಜೈಷ್–ಎ–ಮೊಹಮದ್ ಹೊತ್ತುಕೊಂಡಿದೆ. ಆದಿಲ್ ಅಹ್ಮದ್ ದಾರ್ ಎಂಬ ಹೆಸರಿನ ಸ್ಥಳೀಯ ಯುವಕನನ್ನು ಆಕ್ರಮಣಕಾರಿ ಎಂದು ಗುರುತಿಸಲಾಗಿದೆ. [೧] Archived 2019-02-18 ವೇಬ್ಯಾಕ್ ಮೆಷಿನ್ ನಲ್ಲಿ.

೨೦೧೯ ಪುಲ್ವಾಮಾ ದಾಳಿ
Part of ಜಮ್ಮು ಮತ್ತು ಕಾಶ್ಮೀರದ ಬಂಡಾಯ
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/India Jammu and Kashmir" does not exist.
ದಾಳಿಯ ಸ್ಥಳ
Location ಲೆಥ್ಪಾರ, ಪುಲ್ವಾಮಾ ಜಿಲ್ಲೆ, ಜಮ್ಮು ಮತ್ತು ಕಾಶ್ಮೀರ, ಭಾರತ
Coordinates33°57′53″N 74°57′52″E / 33.96472°N 74.96444°E / 33.96472; 74.96444 (Attack location)
Date14 ಫೆಬ್ರವರಿ 2019 (2019-02-14)
15:15 IST (UTC+05:30)
Targetಕೇಂದ್ರ ಮೀಸಲು ಪಡೆ ಯ ಭದ್ರತಾ ಸಿಬ್ಬಂದಿ
Attack type
ಆತ್ಮಾಹುತಿ ದಾಳಿ, ಕಾರು ಬಾಂಬ್ ದಾಳಿ
Deaths೪೦ ಮಂದಿ ಸಿಆರ್‌ಪಿಎಫ್ ಸಿಬ್ಬಂದಿ, ಒಬ್ಬ ಆಕ್ರಮಣಕಾರ
Non-fatal injuries
35
Perpetratorsಜೈಶ್-ಎ-ಮಹಮದ್
Assailantsಆದಿಲ್ ಅಹ್ಮದ್ ದಾರ್

ಹಿನ್ನಲೆ

ಬದಲಾಯಿಸಿ

2015 ರ ಆರಂಭದಲ್ಲಿ, ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಉಗ್ರಗಾಮಿಗಳು ಭಾರತೀಯ ಭದ್ರತಾ ಪಡೆಗಳ ವಿರುದ್ಧ ಹೆಚ್ಚು ಆತ್ಮಹತ್ಯೆ ದಾಳಿ ನಡೆಸಿದ್ದರು. ಜುಲೈ 2015 ರಲ್ಲಿ, ಗುರದಾಸ್ಪುರದಲ್ಲಿ ಬಸ್ ಮತ್ತು ಪೊಲೀಸ್ ಠಾಣೆಗೆ ಮೂರು ಬಂದೂಕುದಾರಿಗಳು ದಾಳಿ ಮಾಡಿದ್ದರು. 2016 ರ ಆರಂಭದಲ್ಲಿ ನಾಲ್ಕರಿಂದ ಆರು ಬಂದೂಕುದಾರಿಗಳು ಪಠಾನ್ಕೋಟ್ ಏರ್ ಫೋರ್ಸ್ ಸ್ಟೇಷನ್ ಅನ್ನು ಆಕ್ರಮಣ ಮಾಡಿದ್ದರು . ಫೆಬ್ರವರಿ ಮತ್ತು ಜೂನ್ 2016 ರಲ್ಲಿ, ಉಗ್ರಗಾಮಿಗಳು ಕ್ರಮವಾಗಿ 9 ಮತ್ತು 8 ಭದ್ರತಾ ಸಿಬ್ಬಂದಿಗಳನ್ನು ಪಾಂಪೋರ್ನಲ್ಲಿ ಕೊಂದಿದ್ದರು. ಸೆಪ್ಟೆಂಬರ್ 2016 ರಲ್ಲಿ, ನಾಲ್ಕು ಆಕ್ರಮಣಕಾರರು ಯುರಿ ಯಲ್ಲಿ ಭಾರತೀಯ ಸೈನ್ಯದ ಬ್ರಿಗೇಡ್ ಪ್ರಧಾನ ಕಾರ್ಯಾಲಯದಲ್ಲಿ 19 ಸೈನಿಕರನ್ನು ಕೊಂದರು. 31 ಡಿಸೆಂಬರ್ 2017 ರಂದು, ಲೆಥ್ಪಾರದಲ್ಲಿನ ಕಮಾಂಡೋ ತರಬೇತಿ ಕೇಂದದಲ್ಲಿ ಉಗ್ರಗಾಮಿಗಳು ಐದು ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದಾರೆ. ಈ ಎಲ್ಲಾ ದಾಳಿಯು ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿಯೆ ನಡೆಯಲಾಗಿದೆ.


2019 ರ ಫೆಬ್ರುವರಿ 14 ರಂದು, ಜಮ್ಮುವಿನಿಂದ ಶ್ರೀನಗರಕ್ಕೆ 2,500 ಕ್ಕಿಂತ ಹೆಚ್ಚು ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (ಸಿಆರ್ಪಿಎಫ್) ಸಿಬ್ಬಂದಿಗಳು 78 ವಾಹನಗಳಲ್ಲಿ ಪ್ರಯಾಣಿಸುತಿದ್ದರು. ಸುಮಾರು ಮಧ್ಯಾಹ್ನ ೩:೧೫ಕ್ಕೆ ಅವಾಂತಿಪುರ ಬಳಿಯ ಲೆತ್ಪೊರ ದಲ್ಲಿ , ಭದ್ರತಾ ಸಿಬ್ಬಂದಿಯನ್ನು ಸಾಗಿಸುತಿದ್ದ ಬಸ್ ಗೆ ಸ್ಪೋಟಕಗಳನ್ನು ಹೊಂದಿದ್ದ ಮಾರುತಿ ಇಕೋ ಕಾರೊಂದು ಗುದ್ದಿತು. [] ಇದರಿಂದ ಬಾಂಬ್ ಸ್ಪೋಟಗೊಂಡು, ೭೬ಬೆಟಾಲಿಯನ್ ನ ೪೦ ಮೀಸಲು ಪಡೆಯ ಯೋಧರು ಹುತಾತ್ಮರಾದರು.

ಪಾಕಿಸ್ತಾನ ಮೂಲದ ಉಗ್ರಗಾಮಿ ಗುಂಪು ಜೈಶ್-ಎ-ಮೊಹಮ್ಮದ್ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿತು. ನಂತರ ಆತ್ಮಾಹುತಿ ಆಕ್ರಮಣಕಾರ ಆದಿಲ್ ಅಹ್ಮದ್ (೨೨ ವರ್ಷ) ನ ವೀಡಿಯೊವನ್ನು ಬಿಡುಗಡೆ ಮಾಡಿತು [೨][ಶಾಶ್ವತವಾಗಿ ಮಡಿದ ಕೊಂಡಿ]. [] [] [] [] [] []

ಇದು 1989 ರಿಂದೀಚೆಗೆ ರಾಜ್ಯ ಭದ್ರತಾ ಸಿಬ್ಬಂದಿಗಳ ಮೇಲೆ ನಡೆದ ಭೀಕರ ಮಾರಣಾಂತಿಕ ಭಯೋತ್ಪಾದಕ ದಾಳಿಯಾಗಿದೆ. []

18 ವರ್ಷಗಳಿಂದ ಸಿಆರ್ ಪಿಎಫ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕಮಂಡ್ಯದ ಗುಡಿಗೆರೆಯ ಯೋಧ ಹೆಚ್ ಗುರು ಈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದರು. [೩] Archived 2019-02-17 ವೇಬ್ಯಾಕ್ ಮೆಷಿನ್ ನಲ್ಲಿ.

12 ಸದಸ್ಯರ ರಾಷ್ಟ್ರೀಯ ತನಿಖಾ ದಳ ತಂಡವು ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಈ ದಾಳಿಯ ತನಿಖೆ ನಡೆಸಲಿದೆ. [] []

 
2019 ರ ಪುಲ್ವಾಮಾ ಆಕ್ರಮಣದ ಹಿನ್ನೆಲೆಯಲ್ಲಿ ಗುಜರಾತ್ನಲ್ಲಿ ಶ್ರದ್ಧಾಂಜಲಿ

ಆರಂಭಿಕ ತನಿಖೆಯ ಪ್ರಕಾರ ಆತ್ಮಾಹುತಿ ದಾಳಿಯ ಕಾರು ೩೦೦ ಕೆಜಿ ಕ್ಕೂ ಹೆಚ್ಛು ಸ್ಫೋಟಕಗಳು, [] ೮೦ಕೆಜಿ ಕ್ಕೂ ಹೆಚ್ಛು ಆರ್ಡಿಎಕ್ಸ್ [] ಮತ್ತು ಅಮೋನಿಯಂ ನೈಟ್ರೇಟ್ [೧೦] ಅನ್ನು ಹೊಂದಿತ್ತು ಎನ್ನಲಾಗಿದೆ.

ಭಾರತದ ಪ್ರತಿಕ್ರಿಯೆ ಮತ್ತು ಬೆಳವಣಿಗೆ

ಬದಲಾಯಿಸಿ
  • ದಿ.೨೬-೨-೨೦೧೯ರ ಮುಂಜಾನೆ 3.30ರ ವೇಳೆ ಬಲಾಕೋಟ್ ಪ್ರದೇಶದಲ್ಲಿ ಭಾರತದ ವಾಯುಪಡೆ ಜೈಷ್-ಎ- ಮೊಹಮ್ಮದ್ ಉಗ್ರರ ಶಿಬಿರದಮೆಲೆ ಭಾರತದ ವಾಯುಪಡೆಯ ಜೆಟ್‍ಗಳು ದಾಳಿನೆಡಸಿದವು.[೧೧] ಬಲಾಕೋಟ್‍ನಲ್ಲಿ ವೈಮಾನಿಕ ದಾಳಿ ನಡೆಸಿ ಪಾಕ್‍ಗೆ ಪ್ರತ್ಯುತ್ತರ ನೀಡಿತು.[೧೨] ಪಾಕಿಸ್ತಾನವು 2 ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿ, ಪೈಲಟ್‌ ಬಂಧನ ಮಾಡಿರುವುದಾಗಿ 27 ಫೆಬ್ರವರಿ 2019 ರಂದು ಹೇಳಿಕೊಂಡಿದೆ.[೧೩] ಪಾಕಿಸ್ತಾನ ಧಾಳಿಯು ಜನರಹಿತ ಕಣಿವೆಯಲ್ಲಿ ಆಗಿದೆ; ಜನರಿಗೆ ಹಾನಿಯಾಗಿಲ್ಲ ಎಂದಿದೆ.[೧೪] [೧೫]

ಬಾಲಕೋಟ್ ದಾಳಿ

ಬದಲಾಯಿಸಿ

ಫೆಬ್ರವರಿ 26 ರಂದು, ಭಾರತೀಯ ವಾಯುಪಡೆಯ ಹನ್ನೆರಡು ಮಿರಾಜ್ 2000 ಜೆಟ್ಗಳು,ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಾಲಕೋಟ್ನಲ್ಲಿದ್ದ ಉಗ್ರಗಾಮಿ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿತು. ಇದು ಜೈಶ್-ಇ-ಮೊಹಮ್ಮದ್ ತರಬೇತಿ ಶಿಬಿರದ ಮೇಲೆ ನಡೆಸಿದ ದಾಳಿ ಮತ್ತು ಈ ದಾಳಿಯಲ್ಲಿ ಸುಮಾರು ೨೫೦ ಉಗ್ರಗಾಮಿಗಳು ಬಲಿಯಾದರು ಎಂದು ವರದಿ ಬಂದಿದೆ ಎಂದು ಉಪ ಸಚಿವ ವಿ.ಕೆ ಸಿಂಗ್‍ ಹೇಳಿದ್ದಾರೆ. [೪] Archived 2019-04-03 ವೇಬ್ಯಾಕ್ ಮೆಷಿನ್ ನಲ್ಲಿ.

ತಟಸ್ಥ ವರದಿಗಳು

ಬದಲಾಯಿಸಿ
  • (ಇಂಗ್ಲಿಷ್ ವಿಭಾಗದಿಂದ)-2019 Balakot airstrike
  • ತಟಸ್ಥ ಮೂಲಗಳು ಭಾರತೀಯರು ಹೊಡೆದಿದ್ದ ಯುದ್ಧಸಾಮಗ್ರಿಗಳು ಕಾಡಿನಲ್ಲಿರುವ ಪ್ರದೇಶಗಳಲ್ಲಿ ಹಲವಾರು ಮರಗಳನ್ನು ಹೊಡೆದಿದೆ ಮತ್ತೇನೂ ಹೆಚ್ಚು ಬೇರೆ ಅಲ್ಲ ಎಂದು ತೋರುತ್ತದೆ. ಆಕ್ರಮಣ ನಡೆದ ಪ್ರದೇಶಗಳಲ್ಲಿ ಯಾವುದೇ ಸಾವುನೋವುಗಳಿಲ್ಲ ಎಂದು ಅವರು ಹೇಳಿದ್ದಾರೆ. ಭಾರತೀಯ ವಾಯುಪಡೆಯು ಯಾವುದೇ ಉಗ್ರಗಾಮಿ ಶಿಬಿರವನ್ನು ಹೊಡೆದಿದೆ ಎಂದು ಅವರು ನಂಬುವುದಿಲ್ಲ ಎಂದು ಪಾಶ್ಚಾತ್ಯ ರಾಜತಾಂತ್ರಿಕರು ಹೇಳಿದ್ದಾರೆ. ಪಾಶ್ಚಾತ್ಯ ಭದ್ರತಾ ಅಧಿಕಾರಿಗಳು ಭಾರತೀಯ ವರದಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ ಮತ್ತು ಪಾಕಿಸ್ತಾನದಲ್ಲಿ ಅಂತಹ ದೊಡ್ಡ ಪ್ರಮಾಣದ ಉಗ್ರಗಾಮಿ ಶಿಬಿರಗಳಿಲ್ಲ ಎಂದು ಪ್ರತಿಪಾದಿಸಿದ್ದಾರೆ. [೧೬][೧೭]
  • ಈ ಪ್ರದೇಶದ ಹಳ್ಳಿಗರು ನಾಲ್ಕು ಬಾಂಬುಗಳು ಹತ್ತಿರದ ಅರಣ್ಯ ಮತ್ತು ಕ್ಷೇತ್ರವನ್ನು ಹೊಡೆದಿದ್ದು, ಒಂದು ಕಟ್ಟಡಕ್ಕೆ ಹಾನಿಯನ್ನುಂಟು ಮಾಡಿದೆ ಮತ್ತು ಸುಮಾರು ಬೆಲಗಿನಜಾವ 3:00 AM ನ ಸ್ಥಳೀಯ ಜನರನ್ನು ಗಾಯಗೊಳಿಸಿದೆ ಎಂದು ಹೇಳಿದ್ದಾರೆ.ಅಸೋಸಿಯೇಟೆಡ್ ಪ್ರೆಸ್ಗೆ ಸಂಬಂಧಿಸಿದ ಪತ್ರಕರ್ತರು ಫೆಬ್ರವರಿ 26 ರಂದು ಈ ಪ್ರದೇಶಕ್ಕೆ ಭೇಟಿ ನೀಡಿದರು ಮತ್ತು ಕುಳಿಗಳು ಮತ್ತು ಹಾನಿಗೊಳಗಾದ ಮರಗಳನ್ನು ನೋಡಿದರು. ಅವರು ಭೇಟಿಯಾದ ಹಳ್ಳಿಗರು ಯಾವುದೇ ಸಾವುನೋವುಗಳನ್ನು ವರದಿ ಮಾಡಲಿಲ್ಲ. [೧೮][೧೯][೨೦]

ಇದನ್ನು ಸಹ ನೋಡಿ

ಬದಲಾಯಿಸಿ

ಟಿಪ್ಪಣಿಗಳು

ಬದಲಾಯಿಸಿ


ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "Pulwama attack: India will 'completely isolate' Pakistan". BBC (in ಇಂಗ್ಲಿಷ್). 16 February 2019. Retrieved 16 February 2019.
  2. "India will 'completely isolate' Pakistan" (in English). BBC. 15 February 2019.{{cite web}}: CS1 maint: unrecognized language (link)
  3. ೩.೦ ೩.೧ ೩.೨ "Jaish terrorists attack CRPF convoy in Kashmir, kill at least 38 personnel". The Times of India. 15 February 2019. Retrieved 15 February 2019. {{cite web}}: Cite has empty unknown parameter: |dead-url= (help)
  4. Sharma, Neeta (15 February 2019). "Terrorist Lived 10 km From Site Where He Killed 40 Soldiers In Kashmir". NDTV. Retrieved 15 February 2019. {{cite web}}: Cite has empty unknown parameter: |dead-url= (help)
  5. Hussain, Ashiq (16 February 2019). "'Desperately wanted him to quit': Pulwama suicide bomber Adil Dar's mother" (in English). Hindustan Times. Retrieved 17 February 2019.{{cite web}}: CS1 maint: unrecognized language (link)
  6. "How far might India go to 'punish' Pakistan?" (in English). BBC. 15 February 2019.{{cite web}}: CS1 maint: unrecognized language (link)
  7. Dutt, Barkha. "Everything will change after the Kashmir attack" (in English). The Washington Post. Two decades later, Masood Azhar has not been brought to justice. Instead, he hides in plain sight in Bahawalpur, in Pakistan's Punjab Province, and is now allowed to address huge Islamist militant gatherings over audio speakers in other parts of Pakistan.{{cite web}}: CS1 maint: unrecognized language (link)
  8. "Deadliest Kashmir militant attack on troops". BBC News (in ಬ್ರಿಟಿಷ್ ಇಂಗ್ಲಿಷ್). 14 February 2019. Retrieved 15 February 2019.
  9. "Pulwama attack: Seven detained, 80 kg high-grade RDX used by Jaish terrorist". dna. 16 February 2019.
  10. "Pulwama attack: Traces of ammonium nitrate, RDX found at terror site". www.mynation.com. Retrieved 2019-02-17.
  11. ಬಲಾಕೋಟ್ ಪ್ರದೇಶದಲ್ಲಿ ಭಾರತದ ವಾಯುಪಡೆ ದಾಳಿ
  12. ಬಲಾಕೋಟ್‍ನಲ್ಲಿ ವೈಮಾನಿಕ ದಾಳಿ ನಡೆಸಿ ಪಾಕ್‍ಗೆ ಪ್ರತ್ಯುತ್ತರ ನೀಡಿದ ಭಾರತ
  13. 2 ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿ, ಪೈಲಟ್‌ ಬಂಧನ– ಪಾಕಿಸ್ತಾನ ಘೋಷಣೆ;27 ಫೆಬ್ರವರಿ 2019
  14. INDIA-PAKISTAN TENSIONS; An air strike and its aftermath;By Simon Scarr, Chris Inton and Han Huang;PDATED MARCH 6, 2019
  15. Satellite images show madrasa buildings still standing;Reuters, NEW DELHI/SINGAPORE, MAR 06 2019, 11:15AM IST UPDATED: MAR 06 2019, 12:42PM IST
  16. "Pakistani village asks: Where are bodies of militants India says it bombed?". Reuters. 28 February 2019
  17. By Basharat Peer-editor in the Opinion section. March 2, 2019
  18. THE EXPRESS TRIBUNE > PAKISTAN > K-P. No blood. No bodies. No debris. No tragedy
  19. India’s strike on Balakot: a very precise miss?27 Mar 2019
  20. "MARCH 7, 2019 / 11:00 PM / A MONTH AGONo access to Pakistan religious school that India says it bombed". Archived from the original on ಏಪ್ರಿಲ್ 2, 2019. Retrieved ಏಪ್ರಿಲ್ 3, 2019. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)