ಪಠಾನ್‍ಕೋಟ್
ಪಠಾನ್‍ಕೋಟ್ ಜಿಲ್ಲೆಯ ಪ್ರಧಾನ ಜಿಲ್ಲಾ ಕಾರ್ಯಾಲಯವಾಗಿರುವ ಪಠಾನ್‍ಕೋಟ್ ನಗರವು ಪಂಜಾಬ್ ರಾಜ್ಯದ ಮಹಾನಗರಗಳಲ್ಲಿ ಒಂದಾಗಿದೆ. ಕಂಗ್ರಾ ಹಾಗು ಡಾಲ್‍ಹೌಸಿಯ ಪರ್ವತಗಳ ಕೆಳ ತುದಿಯಲ್ಲಿ ನೆಲೆಸಿರುವ ಈ ನಗರವು ಹಿಮಾಲಯ ಪರ್ವತ ಶ್ರೇಣಿಗಳಿಗೆ ಹೆಬ್ಬಾಗಿಲಾಗಿ ಕಾರ್ಯ ನಿರ್ವಹಿಸುತ್ತದೆ. ಹಿಮಾಲಯಕ್ಕೆ ಹೊರಡುವ ಪ್ರವಾಸಿಗರು ಮೊದಲು ಇಲ್ಲಿಯೆ ತಂಗುತ್ತಾರೆ. 1849 ರ ಮುಂಚೆ ಪಠಾನ್‍ಕೋಟ್ ಪಠಾನಿಯಾ ಆಡಳಿತಗಾರರ ರಾಜಧಾನಿಯಾಗಿದ್ದ ನುರ್ಪುರ್ ನ ಭಾಗವಾಗಿತ್ತು.[೧]
Pathankot ਪਠਾਣਕੋਟ
पठानकोट | |
---|---|
![]() Pathankot | |
Nickname(s): PTK | |
Country | India |
State | Punjab |
District | Pathankot |
ಸರ್ಕಾರ | |
• Mayor | Anil Vasudeva (BJP) |
• Deputy commissioner | Shri Amit Kumar, I A S. |
• Member of Parliament | Vinod Khanna |
Area rank | 9th |
Elevation | ೩೩೧ m (೧,೦೮೬ ft) |
ಜನಸಂಖ್ಯೆ (2011) | |
• ಒಟ್ಟು | ೧,೫೫,೯೦೯ |
Languages: Punjabi, Hindi, Dogri, Himachali & urdu | |
• Official | Punjabi |
ಸಮಯ ವಲಯ | ಯುಟಿಸಿ+5:30 (IST) |
Pin Code | 145001 |
Telephone code | 0186 |
ವಾಹನ ನೋಂದಣಿ | PB-35 |
Largest city | Pathankot |
ಜಾಲತಾಣ | pathankot |
ಪಠಾನ್‍ಕೋಟ್ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು ಸಂಪಾದಿಸಿ
ಪಠಾನ್‍ಕೋಟ್ ಸುತ್ತ ಮುತ್ತ ಹಲವು ಆಕರ್ಷಣೀಯ ಸ್ಥಳಗಳಿದ್ದು ಇಲ್ಲಿನ ಪ್ರವಾಸೋದ್ಯಮಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡಿವೆ. 900 ಕ್ಕೂ ಅಧಿಕ ವರ್ಷಗಳ ಹಿಂದೆ ಪಠಾನಿಯಾ ರಜಪೂತರಿಂದ ನಿರ್ಮಿಸಲಾದ ನುರ್ಪುರ್ ಕೋಟೆ, ಶಹಾಪುರ್‍ಕಂಡಿ ಕೋಟೆ, ಶಿವನ ದೇವಾಲಯ ಹಾಗು ಕಥಗಡ್ ಮತ್ತು ಜುಗಿಯಲ್ ಟಾವ್ನ್ ಶಿಪ್ ಇಲ್ಲಿನ ಕೆಲವು ಹೆಸರಿಸಬಹುದಾದ ಆಕರ್ಷಣೆಗಳು. ಜ್ವಾಲಾಜಿ ಮತ್ತು ಚಿಂತಪೂರ್ಣಿ, ಪ್ರವಾಸಿಗರು ಪಠಾನ್‍ಕೋಟ್ ನಲ್ಲಿದ್ದಾಗ ಹೋಗಬಹುದಾದ ಇತರೆ ರಜಾ ತಾಣಗಳು.
ಪಠಾನ್‍ಕೋಟ್‍ನಲ್ಲಿದ್ದಾಗ ಮಾಡಬಹುದಾದ ಚಟುವಟಿಕೆಗಳು ಸಂಪಾದಿಸಿ
ವರ್ಷಪೂರ್ತಿ ಪ್ರವಾಸಿಗರನ್ನು ಕಾಣುವ ಈ ನಗರವು ತನ್ನಲ್ಲಿ ಹಲವು ಆರಾಮದಾಯಕ ಹೋಟೆಲುಗಳನ್ನು ಹೊಂದಿದ್ದು, ರುಚಿಕರವಾದ ಆಹಾರ್ ಖಾದ್ಯಗಳನ್ನು ಒದಗಿಸುತ್ತದೆ. ನಗರದ ಒಳಗೆ ಹಾಗು ಹೊರವಲಯದಲ್ಲಿರುವ ಧಾಬಾಗಳಲ್ಲಿ ಉತ್ತರಭಾರತ ಹಾಗು ಪಂಜಾಬಿ ಶೈಲಿಯ ಖಾದ್ಯಗಳನ್ನು ಸವಿಯಬಹುದು. ಇನ್ನುಳಿದಂತೆ ಖರೀದಿ ಪ್ರಿಯರಿಗೂ ಪಠಾನ್‍ಕೋಟ್ ಒಂದು ಉತ್ತಮ ಸ್ಥಳವಾಗಿದೆ. ಮಿಶನ್ ರೋಡ್, ಸುಜನ್ಪುರ್ ಮಾರ್ಕೇಟ್ ಮತ್ತು ಗಾಂಧಿ ಚೌಕ್ ಇಲ್ಲಿರುವ ಪ್ರಖ್ಯಾತ ಮಾರುಕಟ್ಟೆ ಪ್ರದೇಶಗಳು. ಇಲ್ಲಿನ ನೆನಪನ್ನು ಸದಾ ಹಸಿರಾಗಿಡಲು ಕೊಂಡುಕೊಳ್ಳಲೇಬೇಕಾದ ಒಂದು ವಸ್ತುವೆಂದರೆ ಪಶ್ಮಿನಾ ಶಾಲು. ಈ ಶಾಲುಗಳಿಗೆ ಈ ತಾಣ ತುಂಬಾ ಪ್ರಸಿದ್ಧ.
ತಲುಪುವ ಬಗೆ ಸಂಪಾದಿಸಿ
ರೈಲು ಹಾಗು ಬಸ್ಸುಗಳ ಮೂಲಕ ಪಠಾನ್‍ಕೋಟ್ ಭಾರತದ ಇತರೆ ಭಾಗಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಪಠಾನ್‍ಕೋಟ್ ಹಾಗು ಚಕ್ಕಿ ಬ್ಯಾಂಕ್ ಎಂಬ ಎರಡು ರೈಲು ನಿಲ್ದಾಣಗಳು ಇಲ್ಲಿದ್ದು ಚಕ್ಕಿ ಬ್ಯಾಂಕ್ ನಿಲ್ದಾಣವು ನಗರದಿಂದ ಕೇವಲ ನಾಲ್ಕು ಕಿ.ಮೀ ದೂರದಲ್ಲಿದೆ. ಪಠಾನ್‍ಕೋಟ್ ಬಸ್ ನಿಲ್ದಾಣವು ರೈಲು ನಿಲ್ದಾಣದ ಬಳಿಯಲ್ಲಿಯೆ ಇದ್ದು ಶಿಮ್ಲಾ, ದೆಹಲಿ, ಚಂದೀಗಡ್‍ನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಸಾಧಿಸುತ್ತದೆ.
ಭೇಟಿ ನೀಡಲು ಸೂಕ್ತ ಸಮಯ ಸಂಪಾದಿಸಿ
ದೇಶದ ಉತ್ತರ ಭಾಗದಲ್ಲಿ ನೆಲೆಸಿರುವ ಈ ನಗರವು ವಿಪರೀತ ಹವಾಗುಣವನ್ನು ಹೊಂದಿದೆ. ಅತಿ ಶಾಖಮಯ ಬೇಸಿಗೆ, ತೇವಭರಿತ ಮಳೆಗಾಲ ಹಾಗು ಹೆಪ್ಪುಗಟ್ಟಿಸುವಂತಹ ಚಳಿಗಾಲವನ್ನು ಇಲ್ಲಿ ಕಾಣಬಹುದು. ಅಕ್ಟೋಬರ್ ಹಾಗು ನವೆಂಬರ್ ಸಮಯವು ಇಲ್ಲಿಗೆ ಭೇಟಿ ನೀಡಲು ಸೂಕ್ತವಾದ ಸಮಯವಾಗಿದೆ.
Pathankotದ ಹವಾಮಾನ ದತ್ತಾಂಶ | |||||||||||||
---|---|---|---|---|---|---|---|---|---|---|---|---|---|
ತಿಂಗಳು | ಜ | ಫೆ | ಮಾ | ಏ | ಮೇ | ಜೂ | ಜು | ಆ | ಸೆ | ಆಕ್ಟೋ | ನ | ಡಿ | ವರ್ಷ |
Record high °C (°F) | 28 (82) |
29 (84) |
35 (95) |
43 (109) |
46 (115) |
49 (120) |
46 (115) |
41 (106) |
40 (104) |
40 (104) |
35 (95) |
29 (84) |
49 (120) |
ಅಧಿಕ ಸರಾಸರಿ °C (°F) | 18 (64) |
21 (70) |
26 (79) |
33 (91) |
37 (99) |
39 (102) |
34 (93) |
33 (91) |
33 (91) |
31 (88) |
25 (77) |
19 (66) |
29.1 (84.3) |
ಕಡಮೆ ಸರಾಸರಿ °C (°F) | 8 (46) |
11 (52) |
16 (61) |
22 (72) |
26 (79) |
29 (84) |
28 (82) |
28 (82) |
26 (79) |
21 (70) |
14 (57) |
9 (48) |
19.8 (67.7) |
Record low °C (°F) | −4 (25) |
0 (32) |
4 (39) |
10 (50) |
15 (59) |
19 (66) |
19 (66) |
20 (68) |
19 (66) |
9 (48) |
4 (39) |
−1 (30) |
−4 (25) |
Average precipitation mm (inches) | 71 (2.8) |
80 (3.15) |
81 (3.19) |
46 (1.81) |
34 (1.34) |
78 (3.07) |
356 (14.02) |
370 (14.57) |
140 (5.51) |
25 (0.98) |
16 (0.63) |
38 (1.5) |
೧,೩೩೫ (೫೨.೫೭) |
Average precipitation days | 5 | 7 | 8 | 5 | 3 | 4 | 12 | 13 | 8 | 2 | 1 | 3 | 71 |
[ಸೂಕ್ತ ಉಲ್ಲೇಖನ ಬೇಕು] |