ಗುರುದಾಸ್ಪುರ್
ಗುರುದಾಸ್ಪುರ್ (ಪಂಜಾಬಿ:ਗੁਰਦਾਸਪੁਰ)ಎಂಬುದು ಗುರಿಯಾಜಿ ಎನ್ನುವವರ ಹೆಸರಿಂದ ಬಂದಿದೆ. ಗುರಿಯಾಜಿ ಅವರು 17ನೆೇ ಶತಮಾನದಲ್ಲಿ ಈ ನಗರವನ್ನು ಸ್ಥಾಪಿಸಿದರು. ಇದು ರಾವಿ ಹಾಗು ಸಟ್ಲೆಜ್ ನದಿಗಳ ನಡುವಿನ ಭೂಮಿಯಲ್ಲಿದೆ. ಇಲ್ಲಿನ ಪ್ರಜೆಗಳೆಲ್ಲರೂ ಪಂಜಾಬಿಯಲ್ಲಿ ಮಾತನಾಡುತ್ತಾರೆ. ಇಲ್ಲಿನ ಪ್ರವಾಸೋದ್ಯಮ ಪಂಜಾಬಿನ ಸಂಸ್ಕೃತಿಯ ಒಂದು ಭಾಗವೇ ಆಗಿದೆ. ಅದೇನೆಂದರೆ ಇಲ್ಲಿನ ಗುರುದ್ವಾರಗಳು, ಭಾಂಗ್ರಾ ನೃತ್ಯ ಸಾಂಪ್ರದಾಯಿಕ ಪಗಡಿ (ಪೇಟ), ಪರಾಂಡ (ಗಡ್ಡದ ವಸ್ತ್ರ ) ಮತ್ತು ಬಾಯಲ್ಲಿ ನೀರೂರಿಸುವ ಇಲ್ಲಿನ ಆಹಾರ. [೧]
Gurdaspur
ਗੁਰਦਾਸਪੁਰ | |
---|---|
City | |
Country | India |
State | Punjab |
District | Gurdaspur |
Area | |
• Total | ೧೦ km೨ (೪ sq mi) |
Elevation | ೨೪೧ m (೭೯೧ ft) |
Population (2011) | |
• Total | ೭೫,೫೪೯ |
• Density | ೬೪೯/km೨ (೧,೬೮೦/sq mi) |
Languages | |
• Official | Punjabi |
Time zone | UTC+5:30 (IST) |
PIN | 143521 |
Vehicle registration | PB 06 |
Website | gurdaspur |
ಸುತ್ತಮುತ್ತಲಿನ ಪ್ರವಾಸಿ ತಾಣಗಳು
ಬದಲಾಯಿಸಿಗುರುದಾಸ್ಪುರವು ಬಹಳಷ್ಟು ಪ್ರವಾಸೀ ತಾಣಗಳನ್ನೊಳಗೊಂಡಿದೆ. ಇದರಲ್ಲಿ ಬಹಳ ಪ್ರಸಿದ್ಧ ಸ್ಥಳಗಳೆಂದರೆ 'ದೇರಾ ಬಾಬಾ ನಾನಕ್', 'ಗುರುದಾಸ್ ನಂಗಲ್', ಮಹಾಕಾಳೇಶ್ವರ ದೇವಸ್ಥಾನ, ಮಾಧೋಪುರ, ಶಾಪುರ ಖಂಡಿಕೋಟೆ, ಮೀನಿನ ಉದ್ಯಾನ, ಅಚಲೇಶ್ವರ ದೇವಸ್ಥಾನ, ಗುರುದ್ವಾರ ಚೋಲಾ ಸಾಹಿಬ್' ಮತ್ತು ಕಾಡಾಸಾಹಿಬ್. 'ಕೀರ್ತನ್ ಆಸ್ಥಾನ್' ಎಂಬ ಜಾಗದಲ್ಲಿ ಗುರು ಅರ್ಜನ್ ದೇವ್ ಜಿ ಅವರು ಗುರುನಾನಕರ ಮೊಮ್ಮಗ ಬಾಬಾ ಧರ್ಮ ಚಂದ್ ಜಿ ಅವರ ಭೋಗ್ ನಲ್ಲಿ (ಅವರ ಸ್ಮರಣಾರ್ಥ ಗ್ರಂಥ ಸಾಹಿಬ್ ದ ಪಠಣ) ಹಾಡಿದ್ದರು.[೨]
ಅಲ್ಲದೆ, ಇಲ್ಲಿಗೆ ಎರಡು ಘಂಟೆಗಳ ದೂರದಲ್ಲಿ ಕೆಲವು ಪ್ರವಾಸಿ ತಾಣಗಳು ಉಂಟು, ಅವೆಂದರೆ 'ಡಾಲಹೌಸಿ', 'ಧರ್ಮಶಾಲಾ', 'ಮೆಕ್ಲಾಯ್ಡ್ ಗಂಜ್'
ಉತ್ಸವಗಳು ಮತ್ತು ಹಬ್ಬಗಳು
ಬದಲಾಯಿಸಿಇಲ್ಲಿನ ಪ್ರವಾಸೋದ್ಯಮ ಇಲಾಖೆ ಜನರನ್ನು ಆಕರ್ಷಿಸಲು ಇಲ್ಲಿ ಬಹಳಷ್ಟು ಜಾತ್ರೆ ಮತ್ತು ಹಬ್ಬಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಅದರಲ್ಲಿ ಬಹಳ ಮುಖ್ಯವಾಗಿರುವುದೆಂದರೆ ಗುರುನಾನಕ್ ಜಿ ಅವರ ಕಲ್ಯಾಣೋತ್ಸವ(ಗುರುನಾನಕರು ಸಿಖ್ಖರ ಮೊದಲ ಗುರು) , ಪಂಡೋರಿ ಮಹಾಂತನ್ ನಲ್ಲಿ ನಡೆಯುವ ಬೈಸಾಖಿ ಹಬ್ಬ, ಲೋಹ್ರಿ, ಬಾಬೇಹಾಲಿ ಚಿಂಜ್ಹ್ (ಕುಸ್ತಿ ಕಾಳಗ ) ಮತ್ತು ಶಿವರಾತ್ರಿ ಮೇಳ. [೩]
ಗುರುದಾಸ್ಪುರವನ್ನು ತಲುಪುವುದು ಹೇಗೆ
ಬದಲಾಯಿಸಿಈ ನಗರವನ್ನು ತಲುಪಲು ಜಲಂಧರ್, ಡಾಲ್‍ಹೌಸಿ, ಬಟಾಲ, ಪಟ್ನಿತೋಪ್, ನವ ದೆಹಲಿ ಹಾಗು ಪಂಜಾಬಿನ ಎಲ್ಲ ಮುಖ್ಯ ನಗರ ಪಟ್ಟಣಗಳಿಂದ ಬಸ್ ಮೂಲಕ ತಲುಪಬಹುದು.
ಗುರುದಾಸ್ಪುರದ ಹವಾಮಾನ
ಬದಲಾಯಿಸಿಇಲ್ಲಿ ಮೂರು ಋತುಗಳುಂಟು. ಬಿಸಿ ಬೇಸಿಗೆ, ತಂಪಾದ ಮಳೆಗಾಲ, ಅತ್ಯಂತ ಶೀತಲವಾದ ಚಳಿಗಾಲ. ಇಲ್ಲಿಗೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಬಂದರೆ ಉತ್ತಮ.
ಉಲ್ಲೇಖಗಳು
ಬದಲಾಯಿಸಿ- ↑ http://gurdaspur.nic.in/
- ↑ "About District". Gurdaspur.nic.in. Archived from the original on 2005-08-02. Retrieved March 2013.
{{cite web}}
: Check date values in:|accessdate=
(help) - ↑ "Gurdaspur District Population Census 2011, Punjab literacy sex ratio and density". Census2011.co.in. Retrieved March 2013.
{{cite web}}
: Check date values in:|accessdate=
(help)