೨೦೧೪ ಏಷ್ಯನ್ ಕ್ರೀಡಾಕೂಟ
XVII Asian Games | |||
---|---|---|---|
ಚಿತ್ರ:Incheon 2014 Asian Games logo.svg | |||
Host city | Incheon, South Korea | ||
Motto | Diversity Shines Here (Korean: 평화의 숨결, 아시아의 미래) | ||
Nations participating | 45 | ||
Athletes participating | 9,501 (5,823 men, 3,678 women) | ||
Events | 439 in 36 sports | ||
Opening ceremony | September 19 | ||
Closing ceremony | October 4 | ||
Officially opened by | President Park Geun-hye | ||
Athlete's Oath | Oh Jin-hyek Nam Hyun-hee | ||
Torch Lighter | Lee Young-ae | ||
Main venue | Incheon Asiad Main Stadium | ||
Website | Official website | ||
|
- ದಕ್ಷಿಣ ಕೊರಿಯಾದ ಇಂಚಿಯಾನ್ ನಗರದ ಆತಿಥ್ಯದಲ್ಲಿ 19-9-2014 ಶುಕ್ರವಾರದಿಂದ ಅ.4ರವರೆಗೆ 16 ದಿನಗಳು ನಡೆದ *17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಹಿಂದಿನ ಬಾರಿಗಿಂತಲು ಅತ್ಯುತ್ತಮ ಪ್ರದರ್ಶನ ತೋರಿದೆ.
ಕ್ರೀಡೆಯ ಮೂಲಕ ನಾವೆಲ್ಲರೂ ಒಂದಾಗೋಣ'- ಎಂಬ ಆದರ್ಶದೊಂದಿಗೆ, ಏಷ್ಯಾದ ರಾಷ್ಟ್ರಗಳ ನಡುವಿನ ಬಾಂಧವ್ಯ ಮತ್ತು ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸಲು ಏಷ್ಯನ್ ಕ್ರೀಡಾಕೂಟ ವೇದಿಕೆಯಾಗಲಿ ಎಂದು,ಮಾರ್ಚ್ ನಾಲ್ಕು 1951. ದೆಹಲಿಯಲ್ಲಿ ನಡೆದ ಚೊಚ್ಚಲ ಏಷ್ಯನ್ ಕ್ರೀಡಾಕೂಟ ಆರಂಬವಾಯಿತು. ಅದರ ಉದ್ಘಾಟನಾ ಸಮಾರಂಭ ದಲ್ಲಿ ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಮೇಲಿನ ಆದರ್ಶದ ಗುರಿಯನ್ನು ಹೊಂದಿದ ಹೇಳಿಕೆಯ ಸ್ಫೂರ್ತಿಯ ಮಾತುಗಳು.
ಹೀಗೆ ನಮ್ಮ ರಾಷ್ಟ್ರದ ರಾಜಧಾನಿಯಿಂದ ಆರಂಭವಾದ ಏಷ್ಯನ್ ಕೂಟದ ಪಯಣ ಈಗ ದಕ್ಷಿಣ ಕೊರಿಯದ ಇಂಚೆನ್ ವರೆಗೆ ಬಂದು ತಲುಪಿದೆ. ಮೊದಲ ಸಲ 11 ರಾಷ್ಟ್ರಗಳಷ್ಟೇ ಪಾಲ್ಗೊಂಡಿದ್ದ ಕೂಟದಲ್ಲಿ ಈಗ 45 ದೇಶಗಳ ಸ್ಪರ್ಧಿಗಳು ಕಣಕ್ಕಿಳಿದಿದ್ದಾರೆ. ಅಥ್ಲೀಟ್‌ಗಳ ಸಂಖ್ಯೆಯೂ ಹೆಚ್ಚಾಗಿದೆ. ಎರಡು ಸಲ (1951 ಮತ್ತು 1982ರಲ್ಲಿ) ಭಾರತದಲ್ಲಿ ಈ ಕೂಟ ನಡೆದಾಗ ಆತಿಥೇಯಭಾರತೀಯರು 50ಕ್ಕಿಂತಲೂ ಹೆಚ್ಚು ಪದಕ ಜಯಿಸಿದ್ದರು. ಆದರೆ, ವಿದೇಶಿ ನೆಲದಲ್ಲಿ ಪದಕ ಗಳಿಕೆಯಲ್ಲಿ ‘ಅರ್ಧಶತಕ’ ಬಾರಿಸಿದ್ದು 2010ರಲ್ಲಿ. ಚೀನಾದ ಗುವಾಂಗ್ ಜೌನಲ್ಲಿ ನಡೆದ ಕೂಟದಲ್ಲಿ ಭಾರತ ಒಟ್ಟು 65 ಪದಕಗಳನ್ನು ಜಯಿಸಿತ್ತು. ಇದುವರೆಗಿನ ಒಟ್ಟಾರೆ ಕೂಟಗಳಲ್ಲಿ ಭಾರತ ಹೆಚ್ಚು ಪದಕಗಳನ್ನು ಗೆದ್ದಿದ್ದು ಅಥ್ಲೆಟಿಕ್ಸ್‌ನಲ್ಲಿ. ಆದ್ದರಿಂದ ಈ 2014 ರ ಸ್ಪರ್ಧೆಯಲ್ಲಿಯೇ ನಿರೀಕ್ಷೆ ಹೆಚ್ಚಿದೆ.
1982ರಲ್ಲಿ ಕೊನೆಯ ಸಲ ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಏಷ್ಯನ್ ಕೂಟ ಜರುಗಿತ್ತು. ಕೊರಿಯ ಮೂರನೇ ಬಾರಿ ಕೂಟ ಸಂಘಟಿಸಿದೆ. 1986ರಲ್ಲಿ ಸೋಲ್‌ನಲ್ಲಿ ಮತ್ತು 2002ರಲ್ಲಿ ಬೂಸಾನ್‌ನಲ್ಲಿ ನಡೆದಿತ್ತು.
17ನೇ ಏಷ್ಯಾಡ್ 2014
ಬದಲಾಯಿಸಿದಕ್ಷಿಣ ಕೊರಿಯಾದ ಇಂಚಿಯಾನ್ ನಗರದ ಆತಿಥ್ಯದಲ್ಲಿ 19-9-2014 ಶುಕ್ರವಾರದಿಂದ ಅ.4ರವರೆಗೆ ನಡೆಯಲಿರುವ ಕೂಟದಲ್ಲಿ ಭಾರತ ಕಳೆದ ಬಾರಿಗಿಂತಲು ಅತ್ಯುತ್ತಮ ಪ್ರದರ್ಶನ ತೋರುವ ಇರಾದೆ ಹೊಂದಿದೆ. ಉದ್ಘಾಟನಾ ದಿನ ಸೇರಿದಂತೆ ಒಟ್ಟು 16 ದಿನಗಳು ಕ್ರೀಡಾ ಕೂಟ ಜರುಗಲಿದೆ.
- 27 ವರ್ಷ ವಯಸ್ಸಿನ ಜಿತು ಈಗ ಭಾರತದ ಅಗ್ರಮಾನ್ಯ ಶೂಟರ್. ಈ ವರ್ಷವೊಂದರಲ್ಲೇ ಅವರು ಏಳು ಪದಕ ಜಯಿಸಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಹಾಗೂ ಗ್ಲಾಸ್ಗೊ ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನ ಜಯಿಸಿದ್ದು ಅದರಲ್ಲಿ ಪ್ರಮುಖವಾದುದು. ಒಂದೇ ವಿಶ್ವಕಪ್‌ನಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಶೂಟರ್ ಕೂಡ.
- 10 ಮೀಟರ್ ಏರ್ ಪಿಸ್ತೂಲ್ ಹಾಗೂ 50 ಮೀಟರ್ ಪಿಸ್ತೂಲ್ ಅವರ ನೆಚ್ಚಿನ ಸ್ಪರ್ಧೆಗಳು. ಏರ್ ಪಿಸ್ತೂಲ್‌ನಲ್ಲಿ ವಿಶ್ವ ರ್‌್್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದರು. ಇಂಚೆನ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟವರು ಜಿತು. 50 ಮೀ. ಪಿಸ್ತೂಲ್‌ನ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಹಾಗೂ ತಂಡ ವಿಭಾಗದ 10ಮೀ. ಏರ್ ಪಿಸ್ತೂಲ್‌ನಲ್ಲಿ ಕಂಚಿನ ಪದಕ ಜಯಿಸಿದರು. 50 ಮೀ. ಪಿಸ್ತೂಲ್ ವಿಭಾಗದಲ್ಲಿ 1994ರ ಬಳಿಕ ಈ ಸಾಧನೆ ಮೂಡಿಬಂದಿದೆ. ಹಿರೋಶಿಮಾ ಏಷ್ಯನ್ ಕೂಟದಲ್ಲಿ ಜಸ್ಪಾಲ್ ರಾಣಾ 25 ಮೀ. ಪಿಸ್ತೂಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಆ ಬಳಿಕ ಯಾರೂ ಈ ಸಾಧನೆ ಮಾಡಿರಲಿಲ್ಲ.
- ಜಿತು ಸದ್ಯ ಲಖನೌದಲ್ಲಿ ನೆಲೆಸಿದ್ದಾರೆ. ಆದರೆ, ಅವರ ತಾಯ್ನಾಡು ನೇಪಾಳ. ಈಗಲೂ ಅವರ ತಾಯಿ ನೇಪಾಳದ ಇಟರಿಯಲ್ಲಿ ನೆಲೆಸಿದ್ದಾರೆ. ಭತ್ತದ ಗದ್ದೆಯಲ್ಲಿ ಕೆಲಸ ಮಾಡಿಕೊಂಡಿದ್ದ ಜಿತು, ತಮ್ಮ ತಂದೆಯ ನಿಧನದ ಬಳಿಕ ಭಾರತಕ್ಕೆ ವಲಸೆ ಬಂದರು. ಅವರೀಗ ಲಖನೌದಲ್ಲಿ ಗೂರ್ಖಾ ರೆಜಿಮೆಂಟ್‌ನಲ್ಲಿ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
- ‘ನಾನು ನೇಪಾಳದಲ್ಲಿ ಜನಿಸಿರಬಹುದು. ಆದರೆ, ನಾನು ಇವತ್ತು ಈ ಹಂತಕ್ಕೇರಲು ಕಾರಣವಾಗಿರುವುದು ಭಾರತ. ನನ್ನ ಸಾಧನೆ ಭಾರತಕ್ಕೆ ಅರ್ಪಣೆ’ ಎಂದಿದ್ದಾರೆ ಜಿತು ರಾಯ್.
", -ಸಾಪ್ತಾಹಿಕ ಪುರವಣಿ-ಕ್ರೀಡೆ/ಕೆ. ಓಂಕಾರ ಮೂರ್ತಿ [೩] 29/09/2014/ಪ್ರಜಾವಾಣಿ)
40 ಈ ಬಾರಿ 45 ರಾಷ್ಟ್ರಗಳ ಸುಮಾರು 9 ಸಾವಿರ ಸ್ಪರ್ಧಿಗಳು 36 ಕ್ರೀಡೆಗಳ 439 ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಿದ್ದಾರೆ. ಭಾರತ 8 ಕ್ರೀಡೆಗಳನ್ನು ಹೊರತುಪಡಿಸಿ 28 ಕ್ರೀಡೆಗಳಲ್ಲಿ ಕರ್ನಾಟಕದ 20 ಕ್ರೀಡಾಪಟುಗಳು ಒಳಗೊಂಡಂತೆ 515 ಸ್ಪರ್ಧಿಗಳು ಪದಕಕ್ಕಾಗಿ ಇಂಚಿಯಾನ್ ಏಷ್ಯಾಡ್ ಮುಖ್ಯ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಿದ್ದಾರೆ. ಇದೇ ವೇಳೆ 45 ರಾಷ್ಟ್ರಗಳ 10,000 ಅಥ್ಲೀಟ್‌ಗಳನ್ನು ಒಳಗೊಂಡ ಇಂಚಿಯಾನ್ ಏಷ್ಯನ್ ಗೇಮ್ಸ್‌ನ ವಿಷಯ ಸೂಚಿ 'ಒನ್ ಏಷ್ಯಾ' ಹಾಡನ್ನು ಪ್ರದರ್ಶಿಸಲಾಗುತ್ತದೆ. ಕಿಮ್ ಸಿಯಾಂಗ್ ಜೂ ಹಾಗೂ ಕೆಬಿಎಸ್ ಎಮ್‌ಸೀ ಯುನ್ ಸೂ ಯೆಯಾಂಗ್ ಉದ್ಘಾಟನಾ ಸಮಾರಂಭ ಹಾಗೂ ಅ.4 ರಂದು ನಡೆಯಲಿರುವ ಸಮಾರೋಪ ಸಮಾರಂಭದ ನಿರೂಪಣೆ ನಡೆಸಿಕೊಟ್ಟಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ಭಾರತದಿಂದ ಈ ಬಾರಿ 679 ಕ್ರೀಡಾ ಪ್ರತಿನಿಧಿಗಳು ತೆರಳಲಿದ್ದು ಈ ಪೈಕಿ 516 ಅಥ್ಲೀಟ್ ಗಳು 163 ಕೋಚ್ ಗಳು ಹಾಗೂ ಸಹಾಯಕ ಸಿಬ್ಬಂದಿ ಇದ್ದಾರೆ. ಭಾರತ ಈ ಬಾರಿ 28 ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದೆ. ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ಸುಮಾರು 45 ದೇಶಗಳು 39 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿವೆ. ಒಟ್ಟು 439 (gold medals) ಚಿನ್ನದ ಪದಕಗಳು ಇವೆ.
- ತ್ರಿವರ್ಣ ಧ್ವಜ
- ಭಾರತ ಪುರುಷರ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ಕೂಟದ ಉದ್ಘಾಟನಾ ಸಮಾರಂಭದಲ್ಲಿ ತ್ರಿವರ್ಣ ಧ್ವಜವನ್ನಿಡಿದು ಧ್ವಜಾಧಾರಿಯಾಗಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ.
ಘೋಷಾಲ್ ಚಾರಿತ್ರಿಕ ಸಾಧನೆ:
ಬದಲಾಯಿಸಿ- ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಸೌರವ್ ಘೋಷಾಲ್‌ಗೆ ಶಹಬ್ಬಾಸ್ ಹೇಳಲೇಬೇಕು. ಏಷ್ಯನ್ ಕ್ರೀಡಾಕೂಟದ ಸ್ಕ್ವಾಷ್‌ನಲ್ಲಿ ಭಾರತ ಬೆಳ್ಳಿ ಪದಕ ಪಡೆದದ್ದು ಇದೇ ಮೊದಲು
- ಕುವೈತ್‌ನ ಅಬ್ದುಲ್ಲಾ ಅಲ್ ಮುಜಾಯೆನ್ ವಿರುದ್ಧದ ಫೈನಲ್‌ನ ಮೊದಲ ಎರಡು ಗೇಮ್‌ಗಳಲ್ಲಿ ಭಾರತದ ಆಟಗಾರ 12-10, 11-2 ರಲ್ಲಿ ಜಯ ಪಡೆದಿದ್ದರು. ಮಾತ್ರವಲ್ಲ ಮೂರನೇ ಗೇಮ್‌ನಲ್ಲಿ 11-11 ರಲ್ಲಿ ಸಮಬಲ ಸಾಧಿಸಿದ್ದರು. ಚಿನ್ನದ ಪದಕ ಘೋಷಾಲ್ ಅವರಿಂದ ಕೇವಲ ಎರಡು ಪಾಯಿಂಟ್‌ಗಳ ಅಂತರದಲ್ಲಿತ್ತು.ಘೋಷಾಲ್‌ಗೆ ಚಿನ್ನ ಗೆಲ್ಲುವ ಅತ್ಯುತ್ತಮ ಅವಕಾಶವಿತ್ತು. ಆದರೆ ಅಲ್ಪ ಅಂತರದಲ್ಲಿ ಅದನ್ನು ಕಳೆದುಕೊಂಡಿದ್ದರು.
- 'ಚಿನ್ನದ ಪದಕ ಗೆಲ್ಲುವ ಉದ್ದೇಶದೊಂದಿಗೆ ಇಲ್ಲಿಗೆ ಬಂದಿದ್ದೆ. ಆದರೆ ಬೆಳ್ಳಿ ಪದಕ ಪಡೆಯಲು ಮಾತ್ರ ಶಕ್ತನಾಗಿ ದ್ದೇನೆ. ಇದರಿಂದ ತುಂಬಾ ನಿರಾಸೆಯಾಗಿದೆ’ ಎಂದು ಅವರು ಹೇಳಿದ್ದಾರೆ.(ಕ್ರೀಡೆ-ಪ್ರಜಾವಾಣಿ/೨೯-೯-೨೦೧೪)
- ಏಶ್ಯನ್ ಗೇಮ್ಸ್ ಮಹಿಳಾ ಹ್ಯಾಮರ್ ಥ್ರೋನಲ್ಲಿ ಮಂಜು ಬಾಲಾ ಕಂಚಿನ ಪದಕ ಜಯಿಸಿದ್ದಾರೆ. ಅವರು ರವಿವಾರದ ಅತ್ಲೆಟಿಕ್ಸ್ ವಿಭಾಗದ ಹ್ಯಾಮರ್ ಥ್ರೋ ಹೋರಾಟದಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದರು.
- ಸಾನಿಯಾ ಮಿರ್ಜಾ ಮತ್ತು ಸಾಕೇತ್ ಮೈನೇನಿ ಜೋಡಿ ಏಷ್ಯನ್ ಕ್ರೀಡಾಕೂಟದ ಟೆನಿಸ್ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು. - AT THE 17TH ASIAN GAMES IN INCHEON, SOUTH KOREA.]]
ಮಂಜುಬಾಲಾ
ಬದಲಾಯಿಸಿ- ಏಶ್ಯಾಡ್ ಮೇನ್ ಸ್ಡೇಡಿಯಂನಲ್ಲಿ ಮಂಜು ಬಾಲಾ ಮಹಿಳಾ ಹ್ಯಾಮರ್ ಥ್ರೋನಲ್ಲಿ 60.47 ಮೀ. ದೂರ ಎಸೆದು ಕಂಚಿಗೆ ಕೊರಳೊಡ್ಡಿದರು. ಮೊದಲ ಪ್ರಯತ್ನದಲ್ಲಿಯೇ ಅವರು ಅಷ್ಟು ದೂರ ಎಸೆದದ್ದು ವಿಶೇಷವಾಗಿತ್ತು.
- 2006ರ ದೋಹಾ ಏಷ್ಯನ್ ಕ್ರೀಡಾಕೂಟ ಮತ್ತು 2010ರ ಗುವಾಂಗ್‌ಜೌ ಕೂಟದಲ್ಲಿ ಸೌರವ್ ಕಂಚಿನ ಪದಕ ಗೆದ್ದುಕೊಂಡಿದ್ದರು. ಈ ಬಾರಿ ಅವರು ಒಂದು ಹೆಜ್ಜೆ ಮುಂದಿಟ್ಟು ಬೆಳ್ಳಿ ಗೆದ್ದಿದ್ದಾರೆ.
- ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪದಕ ಗೆದ್ದ ದೀಪಿಕಾ ಪಳ್ಳಿಕಲ್ ಅವರದ್ದು ಕೂಡಾ ಐತಿಹಾಸಿಕ ಸಾಧನೆ. ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಪದಕ ಲಭಿಸಿದ್ದು ಇದೇ ಮೊದಲು.
- ಇಂಚೆನ್ ನಲ್ಲಿ(ಐಎಎನ್ಎಸ್-ಪ್ರಜಾವಾಣಿ):ಕರ್ನಾಟಕದ ಅಥ್ಲೀಟ್ ವಿಕಾಸ್ ಗೌಡ ಅವರು ದಕ್ಷಿಣ ಕೊರಿಯದ ಇಂಚೆನ್‌ನಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದ ಪುರುಷರ ಡಿಸ್ಕಸ್ ಥ್ರೋ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು.
ಕ್ರೀಡಾಕೂಟದ ಪ್ರಮುಖ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ
- ಡಿಸ್ಕ್ ಅನ್ನು ವಿಕಾಸ್ 62.58 ಮೀಟರ್ ದೂರ ಎಸೆದು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು.
- 65.11ಮೀಟರ್ ದೂರ ಎಸೆದ ಇರಾನಿನ್ ಎಹ್ಸಾನ್ ಹದಾದಿ ಅವರು ಚಿನ್ನ ಗೆದ್ದರೆ ಕತಾರ್‌ನ ಮೊಹಮ್ಮದರ್ ಅಹ್ಮದ್ ದಹೀಬ್ ಅವರು 61.25 ಮೀಟರ್ ಎಸೆದು ಕಂಚಿನ ಪದಕ ಜಯಿಸಿದರು
- ಇಂಚೆನ್‌ನಲ್ಲಿ ಸೀಮಾ ಪೂನಿಯಾ ಸೋಮವಾರ ನಡೆದ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಬಂಗಾರ ತಂದುಕೊಟ್ಟ ರು (ಡಿಸ್ಕ್ ಎಸೆಯಲು ಮುಂದಾದ ಕ್ಷಣ –ಎಪಿ ಚಿತ್ರ)
- ಅಭಿಷೇಕ್ ವರ್ಮಾ ,ರಜತ್ ಚೌಹಾಣ್ ಮತ್ತು ಸಂದೀಪ್ ಕುಮಾರ್ ಅವರ ತಂಡವು ದಕ್ಷಿಣಾ ಕೋರಿಯಾದ ಪ್ರಭಲ ಎದುರಾಳಿಗಳ ಎದುರು 227-225 ಅಂಕಗಳ ಅಂತರದಿಂದ ರೋಚಕ ಗೆಲುವು ಸಾಧಿಸಿ ಚಿನ್ನದ ಪದಕ ಗಳಿಸಿದರು.
- ಭಾರತದ ಸ್ಕ್ವಾಷ್ ಸ್ಪರ್ಧಿಗಳು ಏಷ್ಯನ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸೌರವ್ ಘೋಷಾಲ್ ಮತ್ತು ದೀಪಿಕಾ ಪಳ್ಳಿಕಲ್ ಅವರಿಗೆ ದೊರೆತ ಪದಕ ದೇಶದ ಕ್ರೀಡಾ ಪ್ರೇಮಿಗಳ ಸಂತಸಕ್ಕೆ ಕಾರಣವಾಗಿದೆ.
,ಭಾರತದ ಸ್ಕ್ವಾಷ್ ಸ್ಪರ್ಧಿಗಳು ಮಿರಮಿರನೆ ಮಿಂಚಿದರು. ಛಲದ ಆಟ ತೋರಿ ಪದಕಗಳನ್ನು ‘ಬೇಟೆ’ಯಾಡಿದ್ದಾರೆ. ಏಷ್ಯಾ ದಲ್ಲಿ ಹೊಸ ಸ್ಕ್ವಾಷ್ ಶಕ್ತಿಯಾಗಿ ಹೊರಹೊಮ್ಮುವ ಎಲ್ಲ ಸೂಚನೆಗಳನ್ನು ನೀಡಲು ಭಾರತಕ್ಕೆ ಸಾಧ್ಯವಾಗಿದೆ. ಈ ಬಾರಿಯ ಕೂಟದಲ್ಲಿ ಸ್ಕ್ವಾಷ್‌ನ ನಾಲ್ಕೂ ಸ್ಪರ್ಧೆಗಳಲ್ಲಿ ಪದಕ ಜಯಿಸುವಲ್ಲಿ ಭಾರತ ಯಶ ಕಂಡಿದೆ. ವೈಯಕ್ತಿಕ ಮತ್ತು ತಂಡ ವಿಭಾಗದಲ್ಲಿ ತಲಾ ಎರಡು ಪದಕಗಳು ಬಂದಿವೆ. ಏಷ್ಯನ್ ಕ್ರೀಡಾ ಕೂಟದ ಇತಿಹಾಸದಲ್ಲಿ ಭಾರತದ ಸ್ಕ್ವಾಷ್ ಸ್ಪರ್ಧಿಗಳು ತೋರಿದ ಅತ್ಯುತ್ತಮ ಪ್ರದರ್ಶನವಿದು. ಈ ಸಾಧನೆ ದೇಶದ ಸ್ಕ್ವಾಷ್ ಕ್ರೀಡೆಯಲ್ಲಿ ಹೊಸ ಭರವಸೆಗೆ ಕಾರಣವಾಗಿದೆ. 1998ರ ಬ್ಯಾಂಕಾಕ್ ಕೂಟದಲ್ಲಿ ಮೊದಲ ಬಾರಿ ಸ್ಕ್ವಾಷ್‌ಗೆ ಅವಕಾಶ ಲಭಿಸಿತ್ತು. ಆ ಬಳಿಕ 2010ರ ವರೆಗೆ ಭಾರತ ಒಟ್ಟು ನಾಲ್ಕು ಪದಕಗಳನ್ನು (ಎಲ್ಲವೂ ಕಂಚು) ಜಯಿಸಿದೆ. ಇದೀಗ ಒಂದೇ ಕೂಟದಲ್ಲಿ ನಾಲ್ಕು ಪದಕಗಳನ್ನು ಗೆದ್ದುಕೊಂಡದ್ದು ಅಮೋಘ ಸಾಧನೆಯೇ ಸರಿ.
- ಭಾರತದ ಸ್ಕ್ವಾಷ್ ಸ್ಪರ್ಧಿಗಳು ಏಷ್ಯನ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸೌರವ್ ಘೋಷಾಲ್ ಮತ್ತು ದೀಪಿಕಾ ಪಳ್ಳಿಕಲ್ ಅವರಿಗೆ ದೊರೆತ ಪದಕ ದೇಶದ ಕ್ರೀಡಾ ಪ್ರೇಮಿಗಳ ಸಂತಸಕ್ಕೆ ಕಾರಣವಾಗಿದೆ.
12ನೇ ದಿನದಂತ್ಯಕ್ಕೆ
ಬದಲಾಯಿಸಿದಕ್ಷಿಣ ಕೊರಿಯಾದ ಇಂಚಿಯಾನ್‌ನಲ್ಲಿ ನಡೆಯುತ್ತಿರುವ 17 ಏಷ್ಯನ್ ಗೇಮ್ಸ್ 2014, ಕ್ರೀಡಾಕೂಟದಲ್ಲಿ ಮೇರಿ ಕೋಮ್ ಕಜಕಿಸ್ತಾನದ ಜೈನಾ ಶೆಕರ್‌ಬೆಕೋವಾ ವಿರುದ್ಧ 2-0 ಅಂತರದಲ್ಲಿ ಗೆದ್ದು ಇತಿಹಾಸ ಬರೆದರು. ಐದು ಬಾರಿ ವಿಶ್ವ ಚಾಂಪಿಯನ್ ಹಾಗೂ ಒಲಿಂಪಿಕ್ಸ್ ಕಂಚಿನ ಪದಕ ಗೆದ್ದಿರುವ ಮೇರಿ ಕೋಮ್ ಇಬ್ಬರು ಎರಡಗೈ ಬಾಕ್ಸರ್‌ಗಳ ಹೋರಾಟದಲ್ಲಿ ಮೊದಲೆರಡು ಸುತ್ತು ಹಿನ್ನಡೆ ಕಂಡಿದ್ದರು. ಆದರೆ ಮೂರು ಮತ್ತು ನಾಲ್ಕನೇ ಸುತ್ತಿನಲ್ಲಿ ಪ್ರಭುತ್ವ ಸಾಧಿಸಿದ ಭಾರತದ ಬಾಕ್ಸರ್ ಐತಿಹಾಸಿಕ ಸ್ವರ್ಣ ಪದಕ ಗೆದ್ದರು. ಮೇರಿಯ ಸಾಧನೆಯಿಂದಾಗಿ ಭಾರತ 12ನೇ ದಿನದಂತ್ಯಕ್ಕೆ 7 ಚಿನ್ನ, 9 ಬೆಳ್ಳಿ, 34 ಕಂಚಿನೊಂದಿಗೆ ಒಟ್ಟು 50 ಪದಕ ಗೆದ್ದು ಪಟ್ಟಿಯಲ್ಲಿ 10ನೇ ಸ್ಥಾನ ಕಾಯ್ದುಕೊಂಡಿದೆ
- ವನಿತೆಯರ 800 ಮೀ. ಓಟದಲ್ಲಿ ಟಿಂಚು ಲೂಕಾ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ವನಿತೆಯರ ಹಾಕಿ ತಂಡ ಜಪಾನ್ ವಿರುದ್ಧ 2-1 ಗೋಲಿನಿಂದ ಜಯ ಗಳಿಸಿ ಕಂಚಿನ ಪದಕ ಗೆದ್ದುಕೊಂಡಿತು. ವನಿತೆಯರ ಜಾವಲಿನ್ ಎಸೆತದಲ್ಲಿ ಅನ್ನು ರಾಣಿ ಕಂಚಿನ ಪದಕ ಪಡೆದಳು. 12ನೇ ದಿನದಂತ್ಯಕ್ಕೆ ಭಾರತಕ್ಕೆ ದೊರಕಿದ ನಾಲ್ಕೂ ಪದಕ ವನಿತೆಯರ ಕೊಡುಗೆಯಾಗಿದೆ.
ರಿಲೇ-ಹಾಕಿ-ಕಬಡ್ಡಿ
ಬದಲಾಯಿಸಿ- ಗುರುವಾರ
- ಕರ್ನಾಟಕದ ಎಂ.ಆರ್. ಪೂವಮ್ಮ- ಎಂ.ಆರ್.ಪೂವಮ್ಮ, ಪ್ರಿಯಾಂಕಾ ಪನ್ವಾರ್, ಟಿಂಟು ಲೂಕಾ ಮತ್ತು ಮನ್ದೀಪ್ ಕೌರ್ ಅವರನ್ನೊಳಗೊಂಡ ಭಾರತ ಮಹಿಳಾ ರಿಲೇ ತಂಡ 4X400ಮೀ. ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದುಕೊಂಡಿತು.
- ಇಂಚೆನ್ ಏಷ್ಯನ್ ಮುಖ್ಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪೈಪೋಟಿಯಲ್ಲಿ ಭಾರತ ತಂಡ ಮೂರು ನಿಮಿಷ 28.68 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಏಷ್ಯನ್ ಕೂಟದ ದಾಖಲೆಯನ್ನು ಉತ್ತಮ ಪಡಿಸಿಕೊಂಡಿತು. ಮೂರು ನಿಮಿಷ 29.02 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದು ಭಾರತ ತಂಡದ ಮೊದಲಿನ ಉತ್ತಮ ಸಾಧನೆ ಎನಿಸಿತ್ತು. ಈ ಸ್ಪರ್ಧೆಯಲ್ಲಿ ಭಾರತ ಚಿನ್ನ ಜಯಿಸಿದ್ದು ಇದು ನಾಲ್ಕನೇ ಬಾರಿ. 2002ರಲ್ಲಿ ಬೂಸಾನ್‌ನಲ್ಲಿ ಏಷ್ಯನ್ ಕೂಟದಿಂದಲೂ ಭಾರತ ಬಂಗಾರ ಜಯಿಸುತ್ತಾ ಬಂದಿದೆ.
- ಮೂರು ನಿಮಿಷ 30.80ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಜಪಾನ್ ಅಥ್ಲೀಟ್‌ಗಳು ಬೆಳ್ಳಿ ಬಾಚಿಕೊಂಡರೆ, ಚೀನಾ (ಕಾಲ:32.02ಸೆ.) ಕಂಚು ಜಯಿಸಿತು.
- ಮೊದಲು ಬ್ಯಾಟನ್ ಹಿಡಿದು ಓಡಿದ ಪ್ರಿಯಾಂಕಾ ಉತ್ತಮ ವೇಗ ಕಂಡುಕೊಂಡರು. ಇದಕ್ಕೆ ಜಪಾನ್ ಅಥ್ಲೀಟ್‌ಗಳು ಪ್ರಬಲ ಸವಾಲು ಒಡ್ಡಿದರು. 800ಮೀ. ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿರುವ ಟಿಂಟೂ ಲೂಕಾ ವೇಗವಾಗಿ ಓಡಿ ಮುನ್ನಡೆ ತಂದುಕೊಟ್ಟರು.
- ಇಂದರ್‌ಜಿತ್‌ಗೆ ಕಂಚು:
- ಗುರುವಾರ ನಡೆದ ಫೈನಲ್‌ನಲ್ಲಿ ಭಾರತದ ಇಂದರ್‌ಜಿತ್ ಐದನೇ ಅವಕಾಶದಲ್ಲಿ 19.63ಮೀ. ದೂರ ಎಸೆದು ಕಂಚು ಗೆದ್ದರು.
ಪೂವಮ್ಮಗೆ ಎರಡನೇ ಪದಕ
- ಕರ್ನಾಟಕದ ಅಥ್ಲೀಟ್ ಪೂವಮ್ಮ ಈ ಸಲದ ಏಷ್ಯನ್ ಕೂಟದಲ್ಲಿ ಗೆದ್ದ ಎರಡನೇ ಪದಕವಿದು.
- ಹೋದ ವರ್ಷ ಪುಣೆಯಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನ ರಿಲೇಯಲ್ಲಿ ಬಂಗಾರ ಜಯಿಸಿದ್ದ ಪೂವಮ್ಮ ಇಲ್ಲಿ 400ಮೀ. ಓಟದ ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದಾರೆ.
- ದಕ್ಷಿಣ ಕೊರಿಯಾದ ಇಂಚಾನ್‌ನಲ್ಲಿ ನಡೆದ: 17ನೇ ಏಷ್ಯನ್ ಕ್ರೀಡಾಕೂಟದ ಹಾಕಿ ಪಂದ್ಯಾವಳಿಯಲ್ಲಿ ಭಾರತ ಗೆಲವು ಸಾಧಿಸಿ ಚಿನ್ನ ಪಡೆದಿದೆ. ಪಾಕ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಅಂತರದಲ್ಲಿ ಭಾರತ ಗೆಲವು ಸಾಧಿಸಿದೆ.
- 16 ವರ್ಷಗಳ ಬಳಿಕ ಭಾರತ ತಂಡ ಹಾಕಿ ಕ್ರೀಡೆಯಲ್ಲಿ ಗೆಲವು ಸಾಧಿಸಿದ್ದು, 2016ರ ಒಲಂಪಿಕ್ಸ್ ಗೆ ಭಾರತ ತಂಡ ಅರ್ಹತೆ ಪಡೆದಿದೆ.
- 1998 ನಂತರ ಭಾರತಕ್ಕೆ ಹಾಕಿ ಪಂದ್ಯದಲ್ಲಿ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ಗೆಲವು ಸಾಧಿಸುವುದರ ಮೂಲಕ ಚಿನ್ನದ ಪದಕ ಒಲಿದು ಬಂದಿದ್ದು, 2016ರಲ್ಲಿ ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯಿತು.(ಟಿ.ಒ.ಐ.- ಸುದ್ದಿ ೨-೧೦-೨೦೧೪)
- ಭಾರತ, 2-10-2014 ರ ಅಂತ್ಯಕ್ಕೆ ೯/9ನೇ ಸ್ಥಾನ;9 ಚಿನ್ನ, 9 ಬೆಳ್ಳಿ, 37 ಕಂಚು, ಒಟ್ಟು 55ಪದಕ ಗಳಿಸಿದೆ.
- ಕಬಡ್ಡಿ
- 17ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಎರಡು ಸ್ವರ್ಣ ಪದಕಗಳು ಲಭ್ಯವಾಗಿದ್ದು, ಪುರುಷರ ಮತ್ತು ಮಹಿಳೆಯರ ಕಬಡ್ಡಿ ತಂಡಗಳು ಇರಾನ್ ತಂಡಗಳನ್ನು ಸೋಲಿಸಿ ಎರಡೂ ಸ್ವರ್ಣ ಪದಕವನ್ನು ಮುಡಿಗೇರಿಸಿಕೊಂಡಿವೆ. ಇದರೊಂದಿಗೆ ಭಾರತ ಒಟ್ಟು 57 ಪದಕಗಳನ್ನು ಗೆದ್ದಂತಾಯಿತು.
ಭಾರತದ ಮಹಿಳಾ ಕಬಡ್ಡಿ ತಂಡವು ಇರಾನ್ ಎದುರು 31-21 ಅಂಕಗಳಿಂದ ಗೆದ್ದು ಚಿನ್ನ ಗೆದ್ದರೆ, ಇರಾನ್ ಪುರುಷರೆದುರು ಭಾರತೀಯ ಪುರುಷರೂ 27-25 ಅಂತರದಿಂದ ಶುಕ್ರವಾರ ರೋಮಾಂಚಕ ವಿಜಯ ಸಾಧಿಸಿ ಸ್ವರ್ಣ ಪದಕ ಗೆದ್ದರು.
- ಪಟ್ಟಿ
ದಿನಾಂಕ | ಸ್ಥಾನ | ದೇಶ | ಚಿನ್ನ | ಬೆಳ್ಳಿ | ಕಂಚು | ಒಟ್ಟು ಪದಕ |
---|---|---|---|---|---|---|
3-10-2014 | 8 | ಇಂಡಿಯಾ | 11 | 9 | 37 | 57 |
ಭಾರತದ ಕ್ರೀಡೆಗೆ-ಪದಕ ಗಳಿಕೆ ವಿವರ-ಪಟ್ಟಿ
ಬದಲಾಯಿಸಿಕ್ರೀಡೆ | ಚಿನ್ನ | , ಬೆಳ್ಳಿ | ಕಂಚು | ಒಟ್ಟು |
---|---|---|---|---|
ಅತ್ಲೆಟಿಕ್ಸ್ | 2 | 4 | 7 | 13 |
ಕಬಡ್ಡಿ. | 2 | 0 | 0 | 2 |
ಸ್ಕ್ವಾಶ್/ Squash | 1 | 2 | 1 | 4 |
ಪಿಸ್ತೂಲು ಗುರಿ/ ಶೂಟಿಂಗ್ | 1 | 1 | 7 | 9 |
ಟೆನ್ನಿಸ್ | 1 | 1 | 3 | 5 |
ಕುಸ್ತಿ | 1 | 1 | 3 | 5 |
ಬಿಲ್ಲುಗಾರಿಕೆ | 1 | 1 | 2 | 4 |
ಬಾಕ್ಷಿಂಗ್, | 1 | 0 | 4 | 5 |
ಹಾಕಿ | 1 | 0 | 1 | 2 |
ರೊಯಿಂಗ್(ದೋಣಿ) | 0 | 0 | 3 | 3 |
ವೂಶು /Wushu | 0 | 0 | 2 | 2 |
ಬ್ಯಾಡಮಿಂಟನ್ | 0 | 0 | 1 | 1 |
Sailing/ ಸೈಲಿಂಗ್ (ದೋಣಿ) | 0 | 0 | 1 | 1 |
ಈಜು | 0 | 0 | 1 | 1 |
ಒಟ್ಟು ,/ Total | 11 | 10 | 36 | 57 |
17ನೇ ಏಷ್ಯನ್ ಕ್ರೀಡಾಕೂಟ 2014 ರಲ್ಲಿ ಕರ್ನಾಟಕ
ಬದಲಾಯಿಸಿ- ಕರ್ನಾಟಕದ ವಿಕಾಸ್ ಗೌಡ ಬೆಳ್ಳಿ ಗೆದ್ದರು . ಶೂಟರ್ ಪಿ.ಎನ್. ಪ್ರಕಾಶ್ ತಂಡ ಸ್ಪರ್ಧೆಯಲ್ಲಿ ಕಂಚು ಗೆದ್ದರು. ಅಥ್ಲೀಟ್ ಎಂ.ಆರ್. ಪೂವಮ್ಮ 400ಮೀ. ಸ್ಪರ್ಧೆಯಲ್ಲಿ ಕಂಚು ಪಡೆದರು. ಆದರೆ, ಕರ್ನಾಟಕದ ಅಶ್ವಿನಿ ಅಕ್ಕುಂಜಿ 400ಮೀ.
- ಭಾರತ ಪುರುಷರ ಹಾಕಿ ತಂಡದಲ್ಲಿ ಕರ್ನಾಟಕದ ವಿ.ಆರ್. ರಘುನಾಥ್, ಎಸ್.ವಿ. ಸುನಿಲ್ ಮತ್ತು ನಿಕಿನ್ ತಿಮ್ಮಯ್ಯ ಇದ್ದರು. ಈ ತಂಡ ಚಿನ್ನದ ಪದಕ ಗೆದ್ದುಕೊಂಡಿತು.
- ಮಹಿಳಾ ಕಬಡ್ಡಿ ತಂಡಕ್ಕೆ ಕನ್ನಡತಿ ತೇಜಸ್ವಿನಿ ಬಾಯಿ ನಾಯಕಿ. ರೈಲ್ವೆಯಲ್ಲಿ ಉದ್ಯೋಗಿಯಾಗಿರುವ ಕರ್ನಾಟಕದ ಮಮತಾ ಪೂಜಾರಿ, ಕೆಎಸ್ಪಿಯಲ್ಲಿರುವ ಸುಷ್ಮಿತಾ ಪವಾರ್ ಮತ್ತು ಜಯಂತಿ ಅವರು ತಂಡದಲ್ಲಿದ್ದರು.17ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಎರಡು ಸ್ವರ್ಣ ಪದಕಗಳು ಲಭ್ಯವಾಗಿದ್ದು, ಪುರುಷರ ಮತ್ತು ಮಹಿಳೆಯರ ಕಬಡ್ಡಿ ತಂಡಗಳು ಇರಾನ್ ತಂಡಗಳನ್ನು ಸೋಲಿಸಿ ಎರಡೂ ಸ್ವರ್ಣ ಪದಕವನ್ನು ಮುಡಿಗೇರಿಸಿಕೊಂಡಿವೆ.
ಕರ್ನಾಟಕದ ಎಂ.ಆರ್. ಪೂವಮ್ಮ, ಪ್ರಿಯಾಂಕಾ ಪನ್ವಾರ್, ಟಿಂಟು ಲೂಕಾ ಮತ್ತು ಮನ್ದೀಪ್ ಕೌರ್ ಅವರನ್ನೊಳಗೊಂಡ ಭಾರತ ಮಹಿಳಾ ರಿಲೇ ತಂಡ 4X400ಮೀ. ಸ್ಪರ್ಧೆಯಲ್ಲಿ ಎಂ.ಆರ್ ಪೂವಮ್ಮ, ರಿಲೇ ತಂಡದಲ್ಲಿ ಕೊನೆಯ ಲ್ಯಾಪ್‌ನಲ್ಲಿ ಓಡಿ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ.
- ಟಿ.ಒ.ಐ./ವಿಜಯ ಕರ್ನಾಕ/ ಪ್ರಜಾವಾಣಿ- ಸುದ್ದಿ ೩-೧೦-೨೦೧೪)
ಹಿಂದಿನ 16 ಕ್ರೀಡಾಕೂಟಗಳ ವಿವರ
ಬದಲಾಯಿಸಿಹಿಂದಿನ 16 ಕ್ರೀಡಾಕೂಟಗಳ & 2014 ರ 17ನೇ ಕ್ರೀಡಾಕೂಟದ ವಿವರ | ||||||||||||||
---|---|---|---|---|---|---|---|---|---|---|---|---|---|---|
ವರ್ಷ .. | ಆತಿಥ್ಯ ನಗರ | ದೇಶ | ಭಾಗವಹಿಸಿದ
ದೇಶಗಳು,ಸಂಖ್ಯೆ |
!ಅಥ್ಲೀಟ್‘ಗಳು - | ಕ್ರೀಡೆ | |||||||||
1951 | ನವದೆಹಲಿ | ಭಾರತ | 11 | 489 | 6 | |||||||||
1954 . | ಮನಾಲಿ | ಫಿಲಿಫೇನ್ಸ್ | 19 | 970 | 8 | |||||||||
1958 . | ಟೋಕಿಯೋ | ಜಪಾನ್ | 16 | 1820 | 13 | |||||||||
1962 . | ಜಕಾರ್ತಾ | ಇಂಡೋನೇಷ್ಯಾ | 12 | 1460 | 13 | |||||||||
1966 . | ಬ್ಯಾಂಕಾಕ್ | ಥಾಯ್‘ಲೆಂಡ್ | 16 | 1945 | 14 | |||||||||
1970 | ಬ್ಯಾಂಕಾಕ್ | ಥಾಯ್‘ಲೆಂಡ್ | 16 | 2400 | 13 | |||||||||
1974 . | ಟೆಹರಾನ್ | ಇರಾನ್ | 13 | 3010 | 16 | |||||||||
1978 . | ಬ್ಯಾಂಕಾಕ್ | ಥಾಯ್‘ಲೆಂಡ್ | 19 | 3842 | 19 | |||||||||
1982 | ನವದೆಹಲಿ | ಭಾರತ | 33 | 3411 | 21 | |||||||||
1986 .. | ಸೋಲ್ | ದಕ್ಷಣ ಕೊರಿಯಾ | 27 | 4839 | 25 | |||||||||
1990 . | ಬೀಜಿಂಗ್ | ಚೈನಾ | 36 | 6122 | 29 | |||||||||
1994 | ಹೊರೋಷಿಮಾ | ಜಪಾನ್ | 42 | 6828 | 34 | |||||||||
1998 | ಬ್ಯಾಂಕಾಕ್ | ಥಾಯ್‘ಲೆಂಡ್ | 41 | 6554 | 36 | |||||||||
2002 ... | ಬೂಸಾನ್ | ದಕ್ಷಣ ಕೊರಿಯಾ | 44 | 7711 | 38 | |||||||||
2006 . | ದೋಹಾ | ಕತಾರ್ | 45 | 9520 | 39 | |||||||||
2010 . | ಗುವಾಂಗ ಜೌ | ಚೀನಾ | 45 | 9704 | 42 | |||||||||
2014 . | ಇಂಚಿಯಾನ್ | ದಕ್ಷಿಣ ಕೊರಿಯಾ | 45 | 9501 | 36 |
ಹೆಚ್ಚು ಪದಕಗಳಮ್ಮು ಪಡೆದ 10 ದೇಶಗಳು
ಬದಲಾಯಿಸಿ. 16 ಏಷ್ಯನ್‘ ಕ್ರೀಡಾಕೂಟಗಳಲ್ಲಿ ಒಟ್ಟು ಹೆಚ್ಚು ಪದಕಗಳಮ್ಮು ಪಡೆದ 10 ದೇಶಗಳು . | ||||||||||||||
---|---|---|---|---|---|---|---|---|---|---|---|---|---|---|
ದೇಶ | ಚಿನ್ನ | ಬೆಳ್ಳಿ | ಕಂಚು | ಒಟ್ಟು | ||||||||||
1. ಚೀನಾ | 1191 | 792 | 570 | 2553 | ||||||||||
2. ಜಪಾನ್ | 910 | 904 | .836 | 2650 | ||||||||||
3.ದಕ್ಷಿಣ ಕೊರಿಯಾ | 617 | 535 | 677 | 1829 | ||||||||||
.4.ಇರಾನ್ | 128 | 143 | 157. | 438 | ||||||||||
5.ಭಾರತ. | 128 | 168 | 249. | 545 | ||||||||||
6.ಕಜಕಸ್ಥಾನ | 112 | 118. | 167 | 397 | ||||||||||
7. ಥಾಯ್‘ಲೆಂಡ್ | 109. | 152 | 205 | 466 | ||||||||||
.8. ಉತ್ತರ ಕೊರಿಯಾ | 87. | 121 | 152 | 360 | ||||||||||
.9 ಚೀನಾ ತೈಫೆ . | 72 | 107 | 222 | 401 | ||||||||||
.10. ಫಿಲಿಫೈನ್ಸ್‘ | 62 | 109 | 204 | 375 |
ಚಿನ್ನ ಗೆದ್ದವರ ಪಟ್ಟಿ
ಬದಲಾಯಿಸಿ,- | ಏಷಿಯಾಡ್2014ರಲ್ಲಿ | ಬಂಗಾರ (ಚಿನ್ನ) . | ವಿಜೇತರು . | |
---|---|---|---|---|
ಕ್ರಮ ಸಂಖ್ಯೆ | ಹೆಸರು | ಆಟ , | ಆಟದ ವಿಧ | ದಿನಾಂಕ 2014 |
1. | ಜಿತು ರಾಯ್ | ಶೂಟಿಂಗ್ | ಪುರುಷರ 50 ಮೀ. ಪಿಸ್ತೂಲು | 20 /9 |
2. | ರಜತ್` ಚೌಹಾನ್, | ಬಿಲ್ಲುಗಾರಿಕೆ | ಪುರುಷರ ಸಂಯುಕ್ತ-ವಿಭಾಗ | 27/ 9 |
2. | ಸಂದೀಪ್`ಕುಮಾರ್' | ಬಿಲ್ಲುಗಾರಿಕೆ | ಪುರುಷರ ಸಂಯುಕ್ತ-ವಿಭಾಗ | 27/ 9 |
2. | ಅಭಿಷೇಕ್`ವರ್ಮಾ | ಬಿಲ್ಲುಗಾರಿಕೆ | ಪುರುಷರ ಸಂಯುಕ್ತ-ವಿಭಾಗ | 27/ 9 |
3. | ಸೌ ರವ ಘೋಷಾಲ್, | ಸ್ಕ್ವಾಸ್ | ಪುರುಷರ ವಿಭಾಗ | 27 /9 |
3. | ಮಹೇಶ್ ಮಂಗಾವೋಂಕರ್` | , ಸ್ಕ್ವಾಸ್ | ಪುರುಷರ ವಿಭಾಗ | 27 /9 |
3. | ಹರೀಂದರ್`ಪಾಲ್,, | ಸ್ಕ್ವಾಸ್ | ಪುರುಷರ ವಿಭಾಗ | 27 /9 |
3. | ಕುಶ್` ಕುಮಾರ್ | ಸ್ಕ್ವಾಸ್ | ಪುರುಷರ ವಿಭಾಗ | 27 /9 |
4 | ಯೋಗೇಶ್ವರ ದತ್ತ್ | ಕುಸ್ತಿ | 65,ಕೆ.ಜಿ. ಪುರುಷರು- ಪ್ರೀಸ್ಟೈಲ್ | 28 /9 |
5. | ಸೀಮಾಪೂನಿಯಾ | ಅತ್ಲೆಟಿಕ್ಸ್` (ಆಟೋಟ) | ಮಹಿಳೆ,ಡಿಸ್ಕ್ ಎಸೆತ | 29 /9 |
6 | ಸಾನಿಯಾಮಿರ್ಜಾ ,
ಸಾಕೇತ್`ಮೈನೇನಿ |
ಟೆನ್ನಿಸ್` , | ಮಿಶ್ರ ಜೋಡಿ(ಇಬ್ಬರು) | 29/9. |
7 | ಮೇರಿಕೋಮ್` , | ಬಾಕ್ಷಿಂಗ್` | ಮಹಿಳೆ.51ಕೆ.ಜಿ.ವಿಭಾಗ | 1/10 |
8 | ಪುರುಷರ ಹಾಕಿ ತಂಡ | ಬಯಲು ಹಾಕಿ | ಪುರುಷರು | 2/10 |
9 | ಪ್ರಿಯಾಂಕಾ ಪವಾರ್ | ಅತ್ಲೆಟಿಕ್ಸ್/ಆಟೋಟ | ಮಹಿಳೆ-ರಿಲೇ 4x 400 | 2/10 |
9 | ಟಿಂಟು ಲೂಕಾ ; | ಅತ್ಲೆಟಿಕ್ಸ್/ಆಟೋಟ | ಮಹಿಳೆ-ರಿಲೇ 4x 400 | 2/10 |
9 | ಮನದೀಪ್ ಕೌರ್ ; | ಅತ್ಲೆಟಿಕ್ಸ್/ಆಟೋಟ | ಮಹಿಳೆ-ರಿಲೇ 4x 400 | 2/10 |
9 | ಎಂ.ಆರ್.ಪೂವಮ್ಮ | ಅತ್ಲೆಟಿಕ್ಸ್/ಆಟೋಟ | ಮಹಿಳೆ-ರಿಲೇ 4x 400 | 2/10 |
10 | ಮಹಿಳೆ-ಕಬಡ್ಡಿ ತಂಡ/ಟೀಮು | ಕಬಡ್ಡಿ | ಮಹಿಳೆ- | 3/10 |
11 | ಪುರುಷ- ಕಬಡ್ಡಿ ತಂಡ/ಟೀಮು | ಕಬಡ್ಡಿ | ಪುರುಷರು | 3/10 |
ಬೆಳ್ಳಿ ಪದಕ ವಿಜೇತರ ಪಟ್ಟಿ
ಬದಲಾಯಿಸಿ- ಏಷಿಯಾಡ್ ೨೦೧೪/2014 ರಲ್ಲಿ ಬೆಳ್ಳಿ ಪದಕ ವಿಜೇತರು.
,- | ಏಷಿಯಾಡ್2014ರಲ್ಲಿ | ಬೆಳ್ಳಿ (ಬೆಳ್ಳಿ) | ವಿಜೇತರು. | |
---|---|---|---|---|
ಕ್ರಮ ಸಂಖ್ಯೆ | ಹೆಸರು | ಆಟ , | ಆಟದ ವಿಧ | ದಿನಾಂಕ 2014 |
1 | ಸೌವರವ್ ಘೋಶಾಲ್ | ಸ್ಕ್ವಾಷ್ | ಪುರುಷರ ಏಕವ್ಯಕ್ತಿ | 23?9 |
2 | ಪೆಂಬಾ ತಮಾಂಗ್,
ವಿಜಯ್ ಕುಮಾರ್' ಗುರುಪ್ರೀತ್ ಸಿಂಗ್. |
ಶೂಟಿಂಗ್ | ಪುರುಷರ 25 ಮೀ.
ಕೇಂದ್ರ ಗುರಿ ಪಿಸ್ತೂಲ್ ಟೀಮು |
26/9 |
3 | ದೀಪಿಕಾ ಪಳ್ಳೀಕಾಲ್,
ಜೋಶ್ನಾ ಚಿನ್ನಪ್ಪ , ಅನಕಾ ಅಲಂಕಮೊಣಿ |
ಸ್ಕ್ವಾಶ್, | ಮಹಿಳೆ-ಟೀಮು | 27/9 |
4 | ಅಭಿಷೇಕ್ ವರ್ಮಾ | ಬಿಲ್ಲುಗಾರಿಕೆ | ಪುರುಷರ ವೈಯುಕ್ತಿಕ-ಸುತ್ತು | 27/9 |
5 | ಕುಶ್ಬೀರ್ ಕೌರ್ | ಅತ್ಲೆಟಿಕ್ಸ್ | ಮಹಿಳೆಯರ 20ಮೀ. ನಡಿಗೆ | 28/9 |
6 | ಮಂಜು ಬಾಲಾ | ಅತ್ಲೆಟಿಕ್ಸ್ | ಮಹಿಳೆ-ಹ್ಯಾಮರ್ ಎಸೆತ | 28/9 |
7 | ಸನಮ್ ಸಿಂಗ್ ,
ಸಾಕೇತ ಮೈನೇನಿ. |
ಟೆನ್ನಿಸ್ , | ಪುರುಷರ ಜೋಡಿ | 29/9 |
8 | ಬಜರಂಗ್ ಕುಮಾರ್ | ಕುಸ್ತಿ , | ಪುರುಷರ ಫ್ರೀಸ್ಟೈಲ್-61ಕೆ.ಜಿ | 29/9 |
9 | ವಿಕಾಸ್ ಗೌಡ | ಅತ್ಲೆಟಿಕ್ಸ್ | ಪುರುಷರ ದಿಸ್ಕಸ್ ಎಸೆತ | 30/9 |
10 | ತಿಂಟು ಲೂಕಾ. | ಅತ್ಲೆಟಿಕ್ | . ಮಹಿಳೆ-800 ಮೀ | 1/10 |
ಬೆಳ್ಳಿ ಕಂಚು ಬಂಗಾರ
ಕಂಚು ಪದಕ ವಿಜೇತರ ಪಟ್ಟಿ
ಬದಲಾಯಿಸಿ- ಏಷಿಯಾಡ್ ೨೦೧೪ ರಲ್ಲಿ ಕಂಚು ಪದಕ ವಿಜೇತರು
ಕ್ರಮ | ಏಷಿಯಾಡ್ 2014ರಲ್ಲಿ→ | ಕಂಚು→ | ವಿಜೇತರು: | ದಿನಾಂಕ↓ |
---|---|---|---|---|
ಸಂಖ್ಯೆ | ಹೆಸರು | ಆಟ , | ಆಟದ ವಿಧ | 2014 |
1 | ಸ್ವೇತಾ ಚೌಧರಿ | ಶೂಟಿಂಗ್ | ಮಹಿಳೆ 10ಮೀ . ಏರ್-ಪಿಸ್ತೂಲ್ | 20 /9 |
2 | ಜಿತುರಾಯ್ ,
ಸಮರೇಶ್ ಜಂಗ್, ಪ್ರಕಾಶ್ ನಂಜಪ್ಪ |
ಶೂಟಿಂಗ್, | ಪುರುಷರ 10ಮೀ.
ಏರ್-ಪಿಸ್ತೂಲ್ ಟೀಮು |
21 /9 |
3 | ಸೈನಾ ನೆಹವಾಲ್ ,
ಪಿ.ವಿ.ಸಿಂಧು, ಪಿ.ಸಿ.ತುಲಸಿ, ಪ್ರಜ್ಞಾ ಗಾದ್ರೆ |
ಬ್ಯಾದ್ಮಿಂಟನ್ | ಮಹಿಳೆ ಟೀಮು. | 21/9 |
4 | ರಾಹಿ ಸಮೋಬಾತ್,
ಅನೀಷಾ ಸಯ್ಯದ್, ಹೀನಾ ಸಿಧು |
ಶೂಟಿಂಗ್, | ಮಹಿಳೆ 25ಮೀ.
ಪಿಸ್ತೂಲ್ ಟೀಮು. |
22/9 |
5 | ದೀಪಿಕಾ ಪಳ್ಳಿಕಾಲ್ | ಸ್ಕ್ವಾಷ್ | ಮಹಿಳೆ- ಏಕ ವ್ಯಕ್ತಿ | 22 /9 |
6 | ಅಭಿನವ್ ಬಿಂದ್ರಾ ,
ರವಿ ಕುಮಾರ್ , ಸಂಜೀನ್ ರಾಜಪೂತ್ |
ಶೂಟಿಂಗ್ | ಪುರುಷ-10 ಮೀ. ಏರ್ರೈಫಲ್` ಟೀಮು | 23 /9 |
7 | ಅಭಿನವ್ ಬಿಂದ್ರಾ | ಶೂಟಿಂಗ್ | ಪುರುಷ-10 ಮೀ. ಏರ್ರೈಫಲ್ | 23 /9 |
8 | ಸನ್ನಾತೋಯೀ ದೇವೀ
ಯೂಮ್ ನಾಮ್ |
ವೂಶು | ಸಾಂಡಾ52,ಕೆ.ಜಿ.ಮಹಿಳೆ- | 23 /9 |
9 | ನರೇದರ್ಗ್ರೇವಾಲ್ | ವೂಶು | ಪುರುಷ- ಸಾಂಡಾ 60,ಕೆ.ಜಿ. | 23 /9 |
10 | ದುಷ್ಯಂತ ಚೌಹಾನ್, | ದೋಣಿ/Rowing | ಪುರುಷ-ಕಡಿಮೆ
ತೂಕದ ಏಕ ವ್ಯಕ್ತಿ ಎರಡು ಹುಟ್ಟಿನ ದೋಣಿ (sculls) |
24 /9 |
11 | ಸಾವಮ್`ಸಿಂಗ್ | ರೊವಿಂಗ್ | ಪುರುಷ ಏಕ ವ್ಯಕ್ತಿ
-sculls |
25 /9 |
ಕಂಚು ಪದಕ ವಿಜೇತರ ಪಟ್ಟಿ -2
ಬದಲಾಯಿಸಿ,- | ಏಷಿಯಾಡ್2014ರಲ್ಲಿ | (ಕಂಚು) | ವಿಜೇತರು. | |
---|---|---|---|---|
ಕ್ರಮ ಸಂಖ್ಯೆ | ಹೆಸರು | ಆಟ , | ಆಟದ ವಿಧ | ದಿನಾಂಕ 2014 |
12 | 1.ಕಪಿಲ್ ಶರ್ಮಾ
2.ರಣಜಿತ್ ಸಿಂಗ್, 3.ಬೈರಾಂಗಲಾಲ್ ಟkfkರ್ , 4. ರಾಬಿನ್ ಪನಚಿತನ್ನತು . 5.ಉಲಹಾನನ್ , 6.ಸಾವನ್ ಕುಮಾರ್,ಕಾಲ್ ಕಾಲ್, 7.ಮೊಹಮದ್ ಅಜಾದ್ , 8.ಮನೀಂದರ್ ಸಿಂಗ್ 9.ದಾವಿಂದರ್ ಸಿಂಗ್ , 10.ಮಹಮದ್,ಅಹಮದ್ |
ರೊವಿಂಗ್ | ಪುರುಷ ಎಂಟು ಜನರ
ಸ್ಪರ್ದೆ (coxed ) |
25 /9 |
13 | 1.ಶಾಗುನ್ ಚೌದರಿ,
2.ಶ್ರೇಯಸೀ ಸಿಂಗ್, 3.ವರ್ಷಾ ವಾಮನ್ |
ಶೂಟಿಂಗ್ | ಮಹಿಳೆ-ಇಬ್ಬರಟ್ರ್ಯಾಪ್ ಟೀಮು | 25/9 |
14 | ಸಂದೀಪ್ ಸೆಜ್ವಾಲ್ | ಈಜು | 50 ಮೀ ಎದೆ ಈಜು/
breaststroke |
26 /9 |
15 | 1.ತ್ರಿಶಾ ದೇಬ್,
2.ಪೂರ್ವಶಾ ಶಿಂದೆ , 3..ಜ್ಯೋತಿ ಸುರೇಖಾ ವೆನ್ನಮ್; |
ಬಿಲ್ಲುಗಾರಿಕೆ | ಮಹಿಳೆ ಟೀಮು ಸಂಯುಕ್ತ | 27/9 |
16 | ಚೈನ್ ಸಿಂಗ್, ,. | ಶೂಟಿಂಗ್ | ಪುರುಷರೈಫಲ್,
50ಮೀ ಮೂರು ಸ್ಥಳದಿಂದ; |
27/9 |
ಕಂಚು ಪದಕ ವಿಜೇತರ ಪಟ್ಟಿ -3
ಬದಲಾಯಿಸಿ.. | ಏಷಿಯಾಡ್2014ರಲ್ಲಿ | (ಕಂಚು) | ವಿಜೇತರು. | |
---|---|---|---|---|
ಕ್ರಮ ಸಂಖ್ಯೆ | ಹೆಸರು | ಆಟ , | ಆಟದ ವಿಧ | ದಿನಾಂಕ 2014 |
17 | ತ್ರಿಶಾ ದೇಬ್ | ಬಿಲ್ಲುಗಾರಿಕೆ | ಮಹಿಳೆ ವೈಯುಕ್ತಿಕ
ಸಂಯುಕ್ತ /compound |
27 /9 |
18 | ವಿನೇಶ್ ಫೋಗತ್, | ಕುಸ್ತಿ , | ಮಹಿಳೆ ಫ್ರೀ ಸ್ಟೈಲ್-48ಕೆಜಿ | 27/9 |
19 | ಗೀತಿಕಾ ಜಕ್ಕರ್ | ಕುಸ್ತಿ , | ಮಹಿಳೆ ಫ್ರೀ ಸ್ಟೈಲ್-63ಕೆಜಿ | 27 /9 |
20 | ಲಲಿತಾ ಬಾಬರ್ | ಅತ್ಲೆಟಿಕ್ಸ್ | ಮಹಿಳೆ-3000ಮೀ
ಅಟ್ಟಿಸವ ಓಟ steeplechase |
27/9 |
21 | ಯೂಕಿ ಬಾಂಬ್ರಿ ಪುರುಷ- | ಟೆನ್ನಿಸ್ , | ಪುರುಷ -ಏಕ ವ್ಯಕ್ತಿ | 28 /9 |
22 | 1.ಯೂಕಿ ಬಾಂಬ್ರಿ
2.ದಿವಿ ಶರಣ್ |
ಟೆನ್ನಿಸ್ , | ಪುರುಷ-ಜೋಡಿ | 28/9 |
23 | 1.ಸಾನಿಯಾ ಮಿgರ್ಜಾ
2.ಪ್ರರ್ಥನಾ ತೊಂಬರೆ |
ಟೆನ್ನಿಸ್ , | ಮಹಿಳೆ- ಜೋಡಿ | 28 /9 |
24 | ಎಂ.ಆರ್.ಪೂವಮ್ಮ . | ಅತ್ಲೆಟಿಕ್ಸ್ | ಮಹಿಳೆ- 400ಮೀ | 28/9 |
25 | ರಾಜೀವ ಅರೋಕಿಯ | ಅತ್ಲೆಟಿಕ್ಸ್ | ಪುರುಷ 400ಮೀ | 28/9 |
26 | ಒ.ಪಿ.ಜೈಷಾ , | ಅತ್ಲೆಟಿಕ್ಸ್ | ಮಹಿಳೆ 1200ಮೀ | 29/9 |
27 | ನರಸಿಂಗ್ ಪಂಚಮ್
ಸಿಂಗ್ ಯಾದವ್ |
ಕುಸ್ತಿ | ಪುರುಷರ
ಫ್ರೀಸ್ಟೈಲ್-74ಕೆ.ಜಿ |
29 /9 |
28 | ನವೀನ್ ಕೋಮರ್, Kumar | ಅತ್ಲೆಟಿಕ್ಸ್ | ಪುರಷ 3000 ಮೀ.
ತಡೆ/ನೀರು ಓಟ, |
29/9 |
29 | ಲಯಿಶ್ ರಾಮ್ ಸರಿತಾದೇವಿ | ಬಾಕ್ಷಿಂಗ್(ಮುಷ್ಟಿಯುದ್ಧ) | ಮಹಿಳೆ -60ಕೆಜಿ | 30/9 |
30 | ಪೂಜಾರಾಣಿ , | ಬಾಕ್ಷಿಂಗ್(ಮುಷ್ಟಿಯುದ್ಧ | ಮಹಿಳೆ -75ಕೆಜಿ | 30/9 |
ಕಂಚು ಪದಕ ವಿಜೇತರ ಪಟ್ಟಿ -4
ಬದಲಾಯಿಸಿ.. | ಏಷಿಯಾಡ್2014ರಲ್ಲಿ | (ಕಂಚು) | ವಿಜೇತರು. | |
---|---|---|---|---|
ಕ್ರಮ ಸಂಖ್ಯೆ | ಹೆಸರು | ಆಟ , | ಆಟದ ವಿಧ | ದಿನಾಂಕ 2014 |
31 | 1.ವರ್ಷ ಗೌತಮ್
2.ಐಶ್ವರ್ಯ 3.ನೆಡುಂಚಜಿಯನ್ |
ದೋಣಿ | ಮಹಿಳೆ-ಇಬ್ಬರ ಹುಟ್ಟು ದೋಣಿ | 30/9 |
32 | ಮಹಿಳೆ ಹಾಕಿ ಟೀಮು | ಬಯಲು ಹಾಕಿ, | ಮಹಿಳೆ | 1 /10 |
33 | ಅನ್ನು ರಾಣಿ | ಅತ್ಲೆಟಿಕ್ಸ್ | ಮಹಿಳೆ ಜಾವೆಲಿನ್ ಎಸೆತ | 1/10 |
34 | ಸತೀಶ್ ಕುಮಾರ್ | ಬಾಕ್ಸಿಂಗ್ | ಪುರಷ +91 ಕೆ.ಜಿ . | 2/10 |
35 | ವಿಕಾಸ್ ಕೃಷ್ಣ ಯಾದವ್ | ಬಾಕ್ಸಿಂಗ್ | ಪುರಷ 75 ಕೆಜಿ | 2/10 |
36 | ಇಂದ್ರಜೀತ್ ಸಿಂಗ್ | ಅತ್ಲೆಟಿಕ್ಸ್ | , ಪುರುಷ ಗುಂಡು ಎಸೆತ | 2/10 |
ಪದಕ | ಬಂಗಾರ~11 | ಬೆಳ್ಳಿ~10 | ಕಂಚು~36 | ಒಟ್ಟು, 57 |
ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ
ಆಧಾರ
ಬದಲಾಯಿಸಿ- ಪ್ರಜಾವಾಣಿ -19-9-2014 ಶುಕ್ರವಾರದಿಂದ ಅ.4, 2014ರವರೆಗೆ
- [೫]
- ವಿಜಯ ಕರ್ನಾಟಕ-[೬]
- ಟೈಮ್ಸ ಆಫ್ ಇಂಡಿಯಾ.- ಸುದ್ದಿ19-9-2014 ಶುಕ್ರವಾರದಿಂದ ಅ.4, 2014ರವರೆಗೆ
- ಒನ್ ಇಂಡಿಯಾ-ಕನ್ನಡ ಪತ್ರಿಕೆ.19-9-2014 ಶುಕ್ರವಾರದಿಂದ ಅ.4, 2014ರವರೆಗೆ
- India at the 2014 Asian Games [೭]
- 2014 Asian Games