ಎಂ.ಆರ್. ಪೂವಮ್ಮ
ಪೂವಮ್ಮ,[೧] ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಫೆಡರೇಷನ್ ಕಪ್‌ನಲ್ಲಿ ೪೦೦ ಮೀ.ರಿಲೇ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 'ರಾಷ್ಟ್ರ ಮಟ್ಟದಲ್ಲಿ ಉತ್ತಮ ಓಟಗಾರ್ತಿ', ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ರಿಲೇಯಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕ, ಹಾಗೂ ಏಷ್ಯನ್ ಗೇಮ್ಸ್‌ನ ೪೦೦ ಮೀ. ಓಟದಲ್ಲಿ ಕಂಚಿನ ಪದಕ, ಜಕಾರ್ತಾ-2018 ರಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ, ಮಹಿಳಾ ಮತ್ತು ಮಿಶ್ರ 4x400 ಮೀಟರ್ ಪ್ರಸಾರಗಳಲ್ಲಿ ಚಿನ್ನದ ಮತ್ತು ಬೆಳ್ಳಿ ಪದಕ ಗೆದ್ದ ಹೆಗ್ಗಳಿಕೆಗೆ ಪಾತ್ರರು.
ವೈಯುಕ್ತಿಕ ಮಾಹಿತಿ | |||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ರಾಷ್ರೀಯತೆ | ಭಾರತೀಯ | ||||||||||||||||||||||||||||||||||
ಜನನ | 05-06-1990 ಗೋಣಿಕೊಪ್ಪಲು, ಕೊಡಗು, ಕರ್ನಾಟಕ,ಭಾರತ-India | ||||||||||||||||||||||||||||||||||
ಮರಣ | -- -- | ||||||||||||||||||||||||||||||||||
ಎತ್ತರ | 1.75 m (5 ft 9 in)1.75 ಮೀಟರ್/ತೂಕ-59 ಕೆ.ಜಿ | ||||||||||||||||||||||||||||||||||
ತೂಕ | 59 kg (130 lb)-ತೂಕ-59 ಕೆ.ಜಿ. | ||||||||||||||||||||||||||||||||||
Sport | |||||||||||||||||||||||||||||||||||
ದೇಶ | ಭಾರತIndia | ||||||||||||||||||||||||||||||||||
ಕ್ರೀಡೆ | ರಿಲೇ/ಟ್ರ್ಯಾಕ್ ಅಂಡ್ ಫೀಲ್ಡ್ | ||||||||||||||||||||||||||||||||||
ಸ್ಪರ್ಧೆಗಳು(ಗಳು) | ರಿಲೇ ಓಟSprints | ||||||||||||||||||||||||||||||||||
ಕಾಲೇಜು ತಂಡ | - | ||||||||||||||||||||||||||||||||||
ಕ್ಲಬ್ | ONGC/ಒ.ಎನ್.ಜಿ.ಸಿ. | ||||||||||||||||||||||||||||||||||
ತರಬೇತುದಾರರು | N. Ramesh/ಎನ್.ರಮೇಶ್ | ||||||||||||||||||||||||||||||||||
Achievements and titles | |||||||||||||||||||||||||||||||||||
ವೈಯಕ್ತಿಕ ಪರಮಶ್ರೇಷ್ಠ | 400 m: 51.75 (Lucknow 2013) | ||||||||||||||||||||||||||||||||||
ಪದಕ ದಾಖಲೆ
|
ಎಂ.ಆರ್.ಪೂವಮ್ಮ ಜೀವನ ವಿವರ
ಬದಲಾಯಿಸಿಕು.ಪೂವಮ್ಮ, ದಿನಾಂಕ- ೫, ಜೂನ್ ೧೯೯೦ ರಂದು ಶ್ರೀ ಎಂ.ಜಿ.ರಾಜು; ಹಾಗೂ ಶ್ರೀಮತಿ ಜಾಜೀ ದಂಪತಿಗಳ ಮಗಳಾಗಿ ಕೊಡಗಿನ 'ಗೋಣೀಕೊಪ್ಪಲಿ'ನಲ್ಲಿ ಜನಿಸಿದರು. ಅವರ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮತ್ತು ಮುಂದಿನ ಉನ್ನತ ವ್ಯಾಸಂಗವನ್ನು ಮಂಗಳೂರಿನಲ್ಲಿ ಮಾಡಿದರು. ಮಂಗಳೂರಿನ 'ಎಸ್.ಡಿ.ಎಮ್. ಬಿಜಿನೆಸ್ ಮ್ಯಾನೇಜ್ ಮೆಂಟ್ ಕಾಲೇಜ್'ನಲ್ಲಿ 'ಬಿಸಿನೆಸ್ ಮ್ಯಾನೇಜ್ಮೆಂಟ್ ಬ್ಯಾಚುಲರ್ ಪದವಿ' ಪಡೆದರು.
ಭಾರತದ-ಓಟದ ಕ್ರೀಡಾಪಟು
ಬದಲಾಯಿಸಿ೧೦೦ ಮೀಟರ್ ಹಾಗೂ (೨೦೦ ಮತ್ತು) ೪೦೦ ಮೀ. ಓಟಗಳಲ್ಲಿ ಭಾರತವನ್ನು ಸಮರ್ಥವಾಗಿ ಪ್ರತಿನಿಧಿಸುತ್ತಿರುವ ಭಾರತದ ಕ್ರೀಡಾಪಟು. ಫೂವಮ್ಮ ೨೦೦೮ ರ ಬೀಜಿಂಗ್ ಒಲಂಪಿಕ್ಸ್`ನಲ್ಲಿ ಭಾಗವಹಿಸಿದ್ದರು. ಅವರು ಈಗ ಏಷ್ಯಾ ವಿಭಾಗದಲ್ಲಿ ೪೦೦ ಮೀಟರ್ ಓಟದಲ್ಲಿ ನಂ.೨ ನೇ ಸ್ಥಾನದಲ್ಲಿದ್ದಾರೆ. ಈಗ, ಎಂ.ಆರ್ ಪೂವಮ್ಮ ಅವರನ್ನು ಆಂಗ್ಲಿಯನ್ ಮೆಡಲ್ ಹಂಟ್ ಕಂಪನಿಯು ಬೆಂಬಲಿಸುತ್ತಿದೆ(Anglian Medal Hunt Company)
- ಕರ್ನಾಟಕದ ಎಂ.ಆರ್. ಪೂವಮ್ಮ, ಪ್ರಿಯಾಂಕಾ ಪನ್ವಾರ್, ಟಿಂಟು ಲೂಕಾ ಮತ್ತು ಮನ್‌ದೀಪ್ ಕೌರ್ ಅವರನ್ನೊಳಗೊಂಡ ಭಾರತ ಮಹಿಳಾ ರಿಲೇ ತಂಡ ೪ X ೪೦೦ ಮೀ. ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದುಕೊಂಡಿತು. ಕರ್ನಾಟಕದ ಅಥ್ಲೀಟ್ ಪೂವಮ್ಮ ಈ ಸಲದ ಏಷ್ಯನ್ ಕೂಟದಲ್ಲಿ ಗೆದ್ದ ಎರಡನೇ ಪದಕವಿದು.
- ಹೋದ ವರ್ಷ ಪುಣೆಯಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನ ರಿಲೇಯಲ್ಲಿ ಬಂಗಾರ ಜಯಿಸಿದ್ದ ಪೂವಮ್ಮ ಇಲ್ಲಿ ೪೦೦ ಮೀ. ಓಟದ ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದಾರೆ.
- ಕರ್ನಾಟಕದ ಎಂ. ಆರ್. ಪೂವಮ್ಮ, ಪ್ರಿಯಾಂಕಾ ಪನ್ವಾರ್, ಟಿಂಟು ಲೂಕಾ ಮತ್ತು ಮನ್‌ದೀಪ್ ಕೌರ್ ಅವರನ್ನೊಳಗೊಂಡ ಭಾರತ ಮಹಿಳಾ ರಿಲೇ ತಂಡ ೪ X ೪೦೦ ಮೀ. ಸ್ಪರ್ಧೆಯಲ್ಲಿ ಎಂ.ಆರ್ ಪೂವಮ್ಮ, ರಿಲೇ ತಂಡದಲ್ಲಿ ಕೊನೆಯ ಲ್ಯಾಪ್‌ನಲ್ಲಿ ಓಡಿ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ.
- ಕರ್ನಾಟಕದ ಎಂ. ಆರ್. ಪೂವಮ್ಮ, ಇವರಿಗೆ ದಿನಾಂಕ.೧ ನವೆಂಬರ್ ೨೦೧೪/2014 ರಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು(ರಾಜ್ಯೋತ್ಸವ ೨೦೧೪)
ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷದ ನವೆಂಬರ್ ಒಂದರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿ ಒಂದು ಲಕ್ಷ ರೂಪಾಯಿ ಗೌರವಧನ, ಶಾಲು, ಪ್ರಶಸ್ತಿಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ |
ಇಂಡಿಯನ್ ಗ್ರ್ಯಾಂಡ್‌ಪ್ರಿಕ್ಸ್ ಅಥ್ಲೆಟಿಕ್ ಕೂಟ ದೆಹಲಿ ೨೦೧೭ರಲ್ಲಿ ಚಿನ್ನ
ಬದಲಾಯಿಸಿ- ೧೦-೫-೨೦೧೭;
- ಎಂ.ಆರ್.ಪೂವಮ್ಮ 52.10 ಸೆಕೆಂಡಿನಲ್ಲಿ ಗುರಿ ತಲುಪಿದ್ದರೆ ಪೂವಮ್ಮ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸುತ್ತಿದ್ದರು.
- ಕರ್ನಾಟಕದ ಎಂ.ಆರ್.ಪೂವಮ್ಮ ದೆಹಲಿಯಲ್ಲಿ ಗುರುವಾರ ಆರಂಭಗೊಂಡ ಇಂಡಿಯನ್ ಗ್ರ್ಯಾಂಡ್‌ಪ್ರಿಕ್ಸ್ ಅಥ್ಲೆಟಿಕ್ ಕೂಟದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ಆದರೂ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯಲು ವಿಫಲಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ 52.66 ಸೆಕೆಂಡಿನಲ್ಲಿ ಗುರಿ ತಲುಪಿದ ಪೂವಮ್ಮ ಕೂದಲೆಳೆ ಅಂತರದಲ್ಲಿ ಕೇರಳದ ಜಿಸ್ನಾ ಮ್ಯಾಥ್ಯೂ (52.67ಸೆ) ಅವರನ್ನು ಹಿಂದಿಕ್ಕಿದರು.[೨]
ನೋಡಿ
ಬದಲಾಯಿಸಿ- 17ನೇ ಏಷ್ಯನ್ ಕ್ರೀಡಾಕೂಟ 2014
- ವಿಕಾಸ್ ಗೌಡವಿಕಾಸ್ ಗೌಡ
- ಜಿತು ರಾಯ್
- 'ವಿಜಯ ಕರ್ನಾಟಕ ಪತ್ರಿಕೆ' ವರ್ಷ ೨೦೧೪ ರಲ್ಲಿ ಪಟ್ಟಿಮಾಡಿದ ೧೫ ಸಾಧಕರಲ್ಲೊಬ್ಬರಾಗಿ ಆಯ್ಕೆ.[೩]