ಬ್ಯಾಂಕಾಕ್
ಬ್ಯಾಂಕಾಕ್ ನಗರವು ಥೈಲ್ಯಾಂಡ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಥೈ ಭಾಷೆಯಲ್ಲಿ ಇದನ್ನು ಕ್ರುಂಗ್ ಥೆಪ್ ಮಾಹ ನಾಖೊನ್ (ಕೇಳಿ: กรุงเทพมหานคร (ಸಹಾಯ·ಮಾಹಿತಿ)) ಅಥವಾ ಚಿಕ್ಕದಾಗಿ ಕ್ರುಂಗ್ ಥೆಪ್ (
กรุงเทพฯ (ಸಹಾಯ·ಮಾಹಿತಿ)) ಎಂದು ಕರೆಯಲಾಗುತ್ತದೆ. ಛಾವೊ ಫ್ರಾಯ ನದಿಯ ತಟದಲ್ಲಿರುವ ಈ ಊರು, ಅಯುಥ್ಥಯ ರಾಜರ ಕಾಲದಲ್ಲಿ ಒಂದು ಚಿಕ್ಕ ವ್ಯಾಪಾರ ಕೇಂದ್ರವಾಗಿದ್ದು, ೧೭೬೮ರಲ್ಲಿ ರಾಜಧಾನಿಯಾದಾಗ ಪ್ರಾಮುಖ್ಯತೆ ಗಳಿಸಿತು.
ಬ್ಯಾಂಕಾಕ್
กรุงเทพมหานคร | |
---|---|
ನಗರ | |
ಕ್ರುಂಗ್ ಥೆಪ್ ಮಾಹ ನಾಖೊನ್ | |
![]() ರಾತ್ರಿಯಲ್ಲಿ ಬ್ಯಾಂಕಾಕ್ | |
![]() ಥೈಲ್ಯಾಂಡ್ ಭೂಪಟದಲ್ಲಿ ಬ್ಯಾಂಕಾಕ್ | |
ದೇಶ | ಥೈಲ್ಯಾಂಡ್ |
ಸ್ಥಾಪನೆ | ಅಯುಥ್ಥಯ ಕಾಲ |
ರಾಜಧಾನಿಯಾಗಿ ಸ್ಥಾಪನೆ | ಏಪ್ರಿಲ್ ೨೧ ೧೭೮೨ |
ಸರ್ಕಾರ | |
• ಮಾದರಿ | ವಿಶೇಷ ಆಡಳಿತ ಪ್ರದೇಶ |
• ರಾಜ್ಯಪಾಲ | ಅಪಿರಾಕ್ ಕೊಸಾಯೊಥಿನ್ |
Area | |
• ನಗರ | ೧,೫೬೮.೭೩೭ km೨ (೬೦೫.೬೯೩ sq mi) |
• ಮೆಟ್ರೋ | ೭,೭೬೧.೫೦ km೨ (೨,೯೯೬.೭೩ sq mi) |
Population (ಜುಲೈ ೨೦೦೭) | |
• ನಗರ | ೮೧,೬೦,೫೨೨ |
• ಸಾಂದ್ರತೆ | ೪,೦೫೧/km೨ (೧೦,೪೯೦/sq mi) |
• Metro | ೧,೦೦,೬೧,೭೨೬ |
• Metro density | ೧,೨೯೬.೩೬/km೨ (೩,೩೫೭.೬/sq mi) |
ಸಮಯ ವಲಯ | ಯುಟಿಸಿ+7 (ಥೈಲ್ಯಾಂಡ್) |
ISO 3166-2 | TH-10 |
ಜಾಲತಾಣ | http://www.bma.go.th |

ಕಳೆದ ೨೦೦ ವರ್ಷಗಳಲ್ಲಿ, ಬ್ಯಾಂಕಾಕ್ ನಗರವು ಥೈಲ್ಯಾಂಡ್ ದೇಶದ ಆಡಳಿತ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆದಿದೆ. ಬ್ಯಾಂಕಾಕ್ ನಗರವು ಜನಸಂಖ್ಯೆಯ ಪ್ರಕಾರ ವಿಶ್ವದಲ್ಲೆ ೨೨ನೆಯ ಅತ್ಯಂತ ದೊಡ್ಡ ನಗರವಾಗಿದ್ದು, ಸುಮಾರು ೮,೧೬೦,೫೨೨ ಜನರ ವಾಸಸ್ಥಳವಾಗಿದೆ. ಗ್ರೇಟರ್ ಬ್ಯಾಂಕಾಕ್ ಪ್ರದೇಶವು ಸುಮಾರು ೧೫ದಶಲಕ್ಷ ಜನಸಂಖ್ಯೆಯನ್ನು ಹೊಂದಿದೆ.
ಬ್ಯಾಂಕಾಕ್ ಮುಳುಗುವ ಭಯ ಸಂಪಾದಿಸಿ
- ಸಮುದ್ರ ಮಟ್ಟದಿಂದ 5 ಅಡಿ ಎತ್ತರ ದಲ್ಲಿರುವ ಹಿಂದೆ ಜೌಗು ಭೂಮಿಯಾಗಿದ್ದ ಪ್ರದೇಶದಲ್ಲಿ ಬ್ಯಾಂಕಾಕ್ ನಿರ್ಮಾಣವಾಗಿದೆ ವಿಶ್ವದಲ್ಲಿಯೇಅತಿ ಹೆಚ್ಚು ಹವಾಮಾನ ವೈಪರೀತ್ಯಕ್ಕೆ ತುತ್ತಾಗಲಿರುವ ನಗರ ಎಂದು ಹೇಳಲಾಗಿದೆ. ಜಕಾರ್ತ ಹಾಗೂ ಮನಿಲಾ ಸಹ ಇದೇ ಸಾಲಿಗೆ ಸೇರಿವೆ.
- ಭಾರಿ ಪ್ರಮಾಣದ ಮಳೆ, ಸಮುದ್ರ ಮಟ್ಟ ದಲಲಿ ಏರಿಕೆ, ಮತ್ತು ಹವಾಮಾನ ವೈಪರೀತ್ಯದಿಂದ 2030ರ ವೇಳೆಗೆ ರಾಜಧಾನಿ ಬ್ಯಾಂಕಾಕ್‌ನ ಶೇ 40ರಷ್ಟು ಭಾಗ ಮುಳುಗಿಹೋಗಲಿದೆ’ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ.
- ಪ್ರತಿ ವರ್ಷ ಬ್ಯಾಂಕಾಕ್‌ನಲ್ಲಿ ಸಮುದ್ರ ಮಟ್ಟ 1ರಿಂದ 2 ಸೆಂ.ಮೀನಷ್ಟು ಹೆಚ್ಚುತ್ತಲೇ ಇದೆ. ಸದ್ಯದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಉಂಟಾಗುವ ಅಪಾಯ ಇದೆ’ ಎಂದು ಗ್ರೀನ್‌ಪೀಸ್‌ನ ತಾರಾ ಬುವಾಕಂಸ್ರಿ ಹೇಳಿದ್ದಾರೆ.
- 2015ರ ಪ್ಯಾರಿಸ್ ಹವಾಮಾನ ಒಪ್ಪಂದವನ್ನು ಅನುಷ್ಠಾನಗೊಳಿಸುವ ಹೊಣೆ ಹೊತ್ತಿರುವ ಸರ್ಕಾರಗಳ ಮೇಲೆ ಒತ್ತಡ ಹೆಚ್ಚಲಿದೆ. 2011ರಲ್ಲಿ ಸಂಭವಿಸಿದ ಪ್ರವಾಹ ಈ ದಶಕದಲ್ಲಿಯೇ ಅತಿ ಹೆಚ್ಚು ಹಾನಿ ಉಂಟು ಮಾಡಿತ್ತು. ಇದರಿಂದಾಗಿ ನಗರದ ಐದನೇ ಒಂದು ಭಾಗ ಜಲಾವೃತವಾಗಿತ್ತು.
- ಬ್ಯಾಂಕಾಕ್‌ನಲ್ಲಿ ಸಮುದ್ರತೀರವನ್ನು ಒತ್ತುವರಿ ಮಾಡಿ ನಗರೀಕರಣಮಾಡಿದೆ. ಅದರಿಂದ ಅಲ್ಲಿನ ಜನರನ್ನು ಸಂಕಷ್ಟದ ಸ್ಥಿತಿಗೆ ಗುರಿಯಾಗಬಹುದು.. ಗಗನಚುಂಬಿ ಕಟ್ಟಡಗಳ ಸಂಖ್ಯೆ ಹೆಚ್ಚಾಗಿದೆ. ಇದರ ಕಾರಣ ಸಹ ನಗರ ಕ್ರಮೇಣ ಮುಳುಗುವ ಸಂಭವ ಹೆಚ್ಚಿದೆ. ಅತಿಯಾಗಿ ಅಭಿವೃದ್ಧಿ ಹೊಂದಿದ ಬ್ಯಾಂಕಾಕ್ ತನ್ನ ಅಭಿವೃದ್ಧಿಯು ತನಗೇ ಮುಳುವಾಗುತ್ತಿದೆ’ ಎಂಬುದು ತಜ್ಞರು ಪರಿಸರ ತಜ್ಞರ ಅಭಿಪ್ರಾಯ.[೧]
ನೋಡಿ ಸಂಪಾದಿಸಿ
ಹೊರಗಿನ ಸಂಪರ್ಕಗಳು ಸಂಪಾದಿಸಿ
- ಬ್ಯಾಂಕಾಕ್ ಮಹಾನಗರ ಆಡಳಿತ ಇಲಾಖೆ Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ.
- ಬ್ಯಾಂಕಾಕ್ ಪ್ರವಾಸೋದ್ಯಮ ಇಲಾಖೆ Archived 2017-05-12 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಕಿಟ್ರಾವೆಲ್ನಲ್ಲಿ ಬ್ಯಾಂಕಾಕ್