ಹ್ಯಾನಿಬಲ್
ಹ್ಯಾನಿಬಲ್ (248-183 ಅಥವಾ 182 BC))[n ೧] ಹಮಿಲ್ಕಾರ್ ಬರ್ಕಾ ನ ಮಗ .[n ೨] ಈತ ಸಾಮಾನ್ಯವಾಗಿ ಹ್ಯಾನಿಬಲ್ ಎಂದೇ ಪರಿಚಿತನಾಗಿದ್ದ. (ಪ್ಯುನಿಕ್ ಭಾಷೆಯಲ್ಲಿ ḤNBʻL ಹ್ಯಾನಿಬಾಲ್ ಅಥವಾ ಹ್ಯಾನಿಬಲ್ [೭][೮] ಅಂದರೆ,"ಕರುಣಾಮಯಿ ಬಾಲ್"[೮][೯] ಅಥವಾ "ಬಾಲ್ ನ ಆಶೀರ್ವಾದ", ಎಂದು[೭] ಅಥವಾ ಅಂತಿಮವಾಗಿ ʼDNBʻL ಅಡ್ನಿಬಾಲ್ ಅಂದರೆ "ಬಾಲ್ ನನ್ನ ದೇವರು"[೧೦] )Greek: Ἁννίβας
Hannibal, son of Hamilcar Barca | |
---|---|
ಚಿತ್ರ:HannibalTheCarthaginian.jpg | |
ವ್ಯಾಪ್ತಿಪ್ರದೇಶ | Carthaginian Republic |
ಶ್ರೇಣಿ(ದರ್ಜೆ) | General, commander-in-chief of the Carthaginian armies |
ಭಾಗವಹಿಸಿದ ಯುದ್ಧ(ಗಳು) | Second Punic War: Battle of Lake Trasimene, Battle of Trebia, Battle of Cannae, Battle of Zama |
, ಹ್ಯಾನಿಬಸ್ ) . ಹ್ಯಾನಿಬಲ್ ಕಾರ್ತಿಜಿನಿಯನ್ ಮಿಲಿಟರಿಯ ದಂಡನಾಯಕ ಮತ್ತು ಯುದ್ಧತಂತ್ರನಿಪುಣನಾಗಿದ್ದು, ಇತಿಹಾಸದಲ್ಲಿಯೇ ಅತ್ಯಂತ ಪ್ರತಿಭಾನ್ವಿತ ದಂಡನಾಯಕರಲ್ಲಿ ಒಬ್ಬನಾಗಿದ್ದನು. ಇವನ ತಂದೆ ಹಮಿಲ್ಕಾರ್ ಬರ್ಕಾ ಮೊದಲನೇ ಪ್ಯುನಿಕ್ ಯುದ್ಧ ದಲ್ಲಿ ಕಾರ್ತಿಜಿನಿಯನ್ ರ ಪ್ರಮುಖ ದಂಡನಾಯಕನಾಗಿದ್ದನು. ಮೇಗೋ ಮತ್ತು ಹ್ಯಾಸ್ದ್ರುಬಾಲ್ ಇವನ ತಮ್ಮಂದಿರು. ಅಲ್ಲದೆ, ಇವನು ಹ್ಯಾಸ್ಡ್ರುಬಾಲ್ ದಿ ಫೇರ್ ನ ಸೋದರಳಿಯನಾಗಿದ್ದ.
ಹ್ಯಾನಿಬಲ್ ಜೀವಿಸಿದ್ದ ಸಮಯದಲ್ಲಿ ಮೆಡಿಟರೇನಿಯನ್ ನಲ್ಲಿ ತುಂಬಾ ಉದ್ವೇಗದ ವಾತಾವರಣವಿತ್ತು. ಅದೇ ಸಮಯದಲ್ಲಿ, ಬಲಶಾಲಿ ಸಾಮ್ರಾಜ್ಯವಾಗಿದ್ದ ಕಾರ್ತೇಜ್ ಮತ್ತು ಹೆಲನಿಸ್ಟಿಕ್ ಸಾಮ್ರಾಜ್ಯಗಳಾಗಿದ್ದ ಮೆಸಿಡೋನ್, ಸಿರಾಕ್ಯುಜ್ ಮತ್ತು ಸೆಲೆಸಿದ್ ಗಳ ಮೇಲೆ ರೋಮ್ (ಅಂದಿನ ರೋಮ್ ಗಣರಾಜ್ಯ) ತನ್ನ ಬಲಾಢ್ಯತೆಯನ್ನು ಸ್ಥಾಪಿಸಿತು. ಹ್ಯಾನಿಬಲ್ ನ ಅತಿ ಪ್ರಖ್ಯಾತ ಸಾಧನೆಗಳಲ್ಲಿ ಒಂದೆಂದರೆ, ಆತ ಯುದ್ಧದ ಆನೆ ಗಳನ್ನು ಒಳಗೊಂಡ ಸೈನ್ಯದೊಂದಿಗೆ ಎರಡನೇ ಪ್ಯುನಿಕ್ ಯುದ್ಧ ಹೊರಹೊಮ್ಮಿದ ಸಂದರ್ಭದಲ್ಲಿ ಐಬೇರಿಯಾ ದಿಂದ ಪಿರೆನಿ ಮತ್ತು ಆಲ್ಪ್ ಪರ್ವತಗಳ ಮೂಲಕ ಉತ್ತರ ಇಟಲಿ ಯ ಒಳಗೆ ತೆರಳಿದ್ದನು. ಅವನು ಇಟಲಿಯಲ್ಲಿದ್ದಾಗ, ಮೊದಲ ಕೆಲವು ವರ್ಷಗಳಲ್ಲಿಯೇ ಈತ ಟ್ರೆಬಿಯ, ಟ್ರಾಸಿಮಿನ್ ಮತ್ತು ಕ್ಯಾನಿ ಗಳ ಮೇಲೆ ಮೂರು ಗಮನಾರ್ಹ ಜಯಗಳನ್ನು ಗಳಿಸಿದ್ದಲ್ಲದೇ, ರೋಮ್‌ನ ಅನೇಕ ಮೈತ್ರಿಕೂಟಗಳ ವಿರುದ್ಧ ಜಯಗಳಿಸಿದ. ಇಟಲಿಯ ಬಹುತೇಕ ಭಾಗವನ್ನು 15 ವರ್ಷಗಳ ಕಾಲ ತನ್ನ ಸ್ವಾಧೀನದಲ್ಲಿಟ್ಟುಕೊಂಡಿದ್ದ ಹ್ಯಾನಿಬಲ್. ಆದಾಗ್ಯೂ, ರೋಮ್ ಉತ್ತರ ಆಫ್ರಿಕಾದ ಮೇಲೆ ಮಾಡಿದ ಪ್ರತಿದಾಳಿಯಿಂದಾಗಿ ಕಾರ್ತೇಜ್‌ಗೆ ತೆರಳಬೇಕಾಯಿತು. ಕಾರ್ತೇಜ್ ನಲ್ಲಿ ನಡೆದ ಜಾಮಾ ಯುದ್ಧ ದಲ್ಲಿ ಹ್ಯಾನಿಬಲ್‌ನನ್ನುಸಿಪಿಯೋ ಆಫ್ರಿಕಾನಸ್ ಎಂಬುವನು ಸೋಲಿಸಿದ. ಸಿಪಿಯೋ ಈ ಮೊದಲು ಹ್ಯಾನಿಬಲ್‌ನ ಸಹೋದರ ಹ್ಯಾಸ್ಡ್ರುಬಾಲ್ ನನ್ನು ಸೋಲಿಸಿ ಸ್ಪೇನ್ನಿಂದ ಹೊರಹಾಕಿದ್ದ. ಹ್ಯಾನಿಬಲ್ ನ ಯುದ್ಧ ತಂತ್ರಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದ ಸಿಪಿಯೋ, ತನ್ನ ಕೆಲವು ಕೌಶಲ್ಯಗಳನ್ನು ಬಳಸಿಕೊಂಡು ಜಾಮಾ ದಲ್ಲಿ ರೋಮ್‌ನ ಉಪದ್ರವವನ್ನು ಸೋಲಿಸಿದ.
ಯುದ್ಧದ ನಂತರ ಹ್ಯಾನಿಬಲ್ ಸುಫೆಟೆ ಯ ಕಚೇರಿಗೆ ಯಶಸ್ವಿಯಾಗಿ ಓಡಿಹೋದನು. ರೋಮ್ ಹೇರಿದ್ದ ಯುದ್ಧದ ಪರಿಹಾರ ಧನದ ಪಾವತಿ ಸಾಧ್ಯವಾಗಿಸಲು, ಅವನು ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದನು. ಆದರೂ, ಕಾರ್ತಿಜಿನಿಯನ್ ಶ್ರೀಮಂತ ವರ್ಗ ಮತ್ತು ರೋಮ್‌ನಲ್ಲಿ ಹ್ಯಾನಿಬಲ್‌ನ ಸುಧಾರಣೆಗಳು ಜನಪ್ರಿಯವಾಗಿರಲಿಲ್ಲ ಹಾಗೂ ಅವನು ಸ್ವಯಂ ದೇಶಭ್ರಷ್ಟನಾದನು. ತನ್ನ ದೇಶಭ್ರಷ್ಟತೆಯ ಅವಧಿಯಲ್ಲಿ, ಹ್ಯಾನಿಬಲ್ ಸೆಲೆಸಿದ್ ಸಾಮ್ರಾಜ್ಯದಲ್ಲಿ ವಾಸವಾಗಿದ್ದನು. ಅಲ್ಲಿ, ರೋಮ್ ವಿರುದ್ಧದ ಯುದ್ಧದಲ್ಲಿIII ನೇ ಎಂಟಿಯೆಚಸ್ ನಿಗೆ ಮಿಲಿಟರಿ ಸಲಹೆಗಾರನಾಗಿ ಕಾರ್ಯ ನಿರ್ವಹಿಸಿದ. ಎಂಟಿಯೆಚಸ್ ರೋಮ್ ವಿರುದ್ಧ ಸೋಲನುಭವಿಸಿ,ರೋಮ್ ನಿಯಮಗಳನ್ನು ಒಪ್ಪಿಕೊಳ್ಳಬೇಕಾದಾಗ, ಹ್ಯಾನಿಬಲ್ ಅಲ್ಲಿಂದ ಪರಾರಿಯಾಗಿ ಅರ್ಮಿನಿಯಾ ದಲ್ಲಿ ನೆಲೆಸಿದ. ಅವನ ಸಂಚಾರ ಕೊನೆಯಾದದ್ದುಬಿಥ್ಯಾನಿಯಾಪ್ರಾಂತ್ಯದಲ್ಲಿ. ಇಲ್ಲಿ, ಪರ್ಗಮಮ್ ನ ನೌಕಾ ಪಡೆಯ ವಿರುದ್ಧ ಮಹೋನ್ನತ ಜಯಗಳಿಸಿದ. ನಂತರ ಇವನನ್ನು ಮೋಸದಿಂದ ರೋಮನ್ನರಿಗೆ ಒಪ್ಪಿಸಲಾಯಿತು.
ಮಿಲಿಟರಿ ತಂತ್ರಗಳು ಮತ್ತು ಕೌಶಲ್ಯಗಳಲ್ಲಿ ಪರಿಣಿತನಾಗಿದ್ದ ಹ್ಯಾನಿಬಲ್‌ನನ್ನು ಪ್ರಾಚೀನ ಇತಿಹಾಸದಲ್ಲೇ ಮಹಾನ್ ಎನಿಸಿದ ದಂಡನಾಯಕರಲ್ಲಿ ಒಬ್ಬನೆಂದು ಪರಿಗಣಿಸಲಾಗಿದೆ. ಆದ್ದರಿಂದಲೇ, ನಂತರದ ದಿನಗಳಲ್ಲಿ ಇವನನ್ನು ಅಲೆಕ್ಸಾಂಡರ್ ದಿ ಗ್ರೇಟ್, ಜೂಲಿಯಸ್ ಸೀಜರ್, ಸಿಪಿಯೋ ಮತ್ತು ಇಪಿರಸ್‌ನ ಪೈರಸ್ ನಿಗೆ ಹೋಲಿಸಲಾಗುತ್ತದೆ. ಪ್ಲುಟಾರ್ಕ್ ನ ಪ್ರಕಾರ, ಯಾರು ಮಹಾನ್ ದಂಡನಾಯಕನೆಂದು ಸಿಪಿಯೋ ಹ್ಯಾನಿಬಲ್‌ನನ್ನು ಕೇಳಿದಾಗ, ಅಲೆಕ್ಸಾಂಡರ್, ಪೈರಸ್, ನಂತರ ತಾನು[೧೧] ಎಂದು ಹ್ಯಾನಿಬಲ್ ಉತ್ತರಿಸಿದ. ಘಟನೆಯ ಇನ್ನೊಂದು ವ್ಯಾಖ್ಯಾನದ ಪ್ರಕಾರ, ಪೈರಸ್, ಸಿಪಿಯೋ, ನಂತರ ತಾನು ಎಂದು ಉತ್ತರಿಸಿದನು.[೧೨] ಹ್ಯಾನಿಬಲ್‌ನ ದೊಡ್ಡ ಶತ್ರುವಾಗಿದ್ದ ರೋಮ್ ಸೈನ್ಯವು ತನ್ನ ಯುದ್ಧ ತಂತ್ರಗಳಲ್ಲಿ ಹ್ಯಾನಿಬಲ್ ಯುದ್ಧತಂತ್ರಗಳನ್ನು ಅಳವಡಿಸಿಕೊಂಡಿದ್ದರಿಂದ, ಮಿಲಿಟರಿ ಇತಿಹಾಸಕಾರನಾದ ಥಿಯೋಡರ್ ಆಯ್‌ರಾಲ್ಟ್ ಡಾಡ್ಜ್ ನು ಹ್ಯಾನಿಬಲ್ ನನ್ನು "ಯುದ್ಧ ತಂತ್ರದ ಪಿತಾಮಹ " [೧೩] ನೆಂದು ಕರೆದಿದ್ದಾನೆ. ಈ ಬಿರುದು ಆಧುನಿಕ ಜಗತ್ತಿನಲ್ಲಿ ಹ್ಯಾನಿಬಲ್ ನಿಗೆ ಹೆಚ್ಚಿನ ಕೀರ್ತಿಯನ್ನು ತಂದುಕೊಟ್ಟಿತು. ಅಲ್ಲದೇ, ನೆಪೋಲಿಯನ್ ಬೋನಾಪಾರ್ಟ್ ಮತ್ತು ಡ್ಯೂಕ್ ಆಫ್ ವೆಲ್ಲಿಂಗ್ಟನ್ ರಂತಹ ವ್ಯಕ್ತಿಗಳು ಇವನನ್ನು "ಸಹಜ ಪ್ರತಿಭೆಯ ಯುದ್ಧತಂತ್ರನಿಪುಣ" ಎಂದು ಪರಿಗಣಿಸಿದರು. ಇವನ ಜೀವನವನ್ನು ಆಧರಿಸಿ ಅನೇಕ ಚಲನಚಿತ್ರಗಳು ಮತ್ತು ಸಾಕ್ಷ್ಯ ಚಿತ್ರಗಳನ್ನು ತಯಾರಿಸಲಾಗಿವೆ.
ಹ್ಯಾನಿಬಲ್‌ನ ವ್ಯಕ್ತಿತ್ವ ವರ್ಣಿಸುವ ಪ್ರಸಿದ್ಧ ಉಕ್ತಿಯೆಂದರೆ- "ನಾವು ಒಂದೋ ದಾರಿಯನ್ನು ಕಂಡುಹಿಡಿಯೋಣ, ಇಲ್ಲವೇ ಒಂದನ್ನು ತಯಾರಿಸೋಣ."[dubious ]
ಹಿನ್ನೆಲೆ ಮತ್ತು ಜೀವನ
ಬದಲಾಯಿಸಿಹ್ಯಾನಿಬಲ್ ನು ಕಾರ್ತೇಜ್ ನ ಮುಖ್ಯಸ್ಥನಾಗಿದ್ದ ಹಮಿಲ್ಕಾರ್ ಬರ್ಕಾ ನ ಮಕ್ಕಳಲ್ಲಿ ಒಬ್ಬ. ಅವನಿಗೆ ಅನೇಕ ಸಹೋದರಿಯರೂ ಮತ್ತು ಹ್ಯಾಸ್ದ್ರುಬಲ್ ಮತ್ತು ಮೇಗೋ ಎಂಬ ಇಬ್ಬರು ಸಹೋದರರು ಇದ್ದರು. ಹ್ಯಾಸ್ದ್ರುಬಲ್ ದಿ ಫೇರ್ ಮತ್ತು ನ್ಯುಮಿಡಿಯಾ ದ ದೊರೆ ನರಾವಸ್ ಆತನ ಸೋದರಳಿಯರಾಗಿದ್ದರು. ಅವನ ಸಹೋದರಿಯರು ಮದುವೆಯಾದಾಗ ಹ್ಯಾನಿಬಲ್ ಇನ್ನೂ ಮಗುವಾಗಿದ್ದ. ಮರ್ಸೆನರಿ ಯುದ್ಧ ದಲ್ಲಿ ಮತ್ತು ಪ್ಯುನಿಕ್ ಐಬೇರಿಯಾ ವನ್ನು ಗೆದ್ದುಕೊಂಡ ಸಂದರ್ಭದಲ್ಲಿ, ಇವನ ಸೋದರಳಿಯಂದಿರು ತುಂಬಾ ಹತ್ತಿರದ ಸಂಬಂಧ ಹೊಂದಿದ್ದರು. ಹಮಿಲ್ಕಾರ್ ಬರ್ಕಾನ ಕುಲನಾಮವನ್ನು ಗಮನಿಸಿದ ಇತಿಹಾಸಕಾರರು ಹಮಿಲ್ಕಾರ್‌ನ ಕುಟುಂಬವನ್ನುಬರ್ಕಿಡ್ಸ್ ಎಂದು ಕರೆದಿದ್ದಾರೆ. ಆದರೂ, ಬರ್ಕಾ (ಇದರ ಅರ್ಥ, "ಸಿಡಿಲು") ಎಂಬ ಕುಟುಂಬದ ಹೆಸರು ಅಥವಾ ಕುಲನಾಮ ಕುರಿತು ಇರುವ ಚರ್ಚೆಯೆಂದರೆ,ಇದು ಬರೀ ಹಮಿಲ್ಕಾರ್ ಒಬ್ಬನಿಗೇ ಅನ್ವಯವಾಗುವ ಹೆಸರೋ ಅಥವಾ ಆತನ ಕುಟುಂಬದಲ್ಲಿ ಆನುವಂಶಿಕವಾಗಿ ಬಂದದ್ದೋ ಎಂಬುದು. ಒಂದು ವೇಳೆ ಅದು ಆನುವಂಶಿಕವಾಗಿ ಬಂದದ್ದೆ ಆದರೆ, 'ಬರ್ಕಾ' ಅನ್ನೋ ಹೆಸರನ್ನು ಹ್ಯಾನಿಬಲ್ ಮತ್ತು ಆತನ ಸಹೋದರರೂ ಸಹ ಹೊಂದುತ್ತಾರೆ.[೧೪]
ಮೊದಲನೇ ಪುನಿಕ್ ಯುದ್ಧ ದಲ್ಲಿ ಕಾರ್ತೇಜ್ ಸೋಲಿನ ನಂತರ, ಹಮಿಲ್ಕಾರ್‌ನು ತನ್ನ ಕುಟುಂಬ ಮತ್ತು ಕಾರ್ತೇಜ್ ಅದೃಷ್ಟವನ್ನು ಸುಧಾರಿಸುವಲ್ಲಿ ತೊಡಗಿದನು. ಈ ನಿರ್ಧಾರದೊಂದಿಗೆ ಹಮಿಲ್ಕಾರ್‌ನು ಐಬೇರಿಯಾ ಪೆನಿನ್ಸುಲಾ (ಕರಾವಳಿ ಪ್ರದೇಶ)ದ ಬುಡಕಟ್ಟು ಸಮೂಹಗಳನ್ನು ವಶಕ್ಕೆ ತೆಗೆದುಕೊಳ್ಳಲು ಪ್ರಾರಂಭಿಸುತ್ತಾನೆ. ಇದರಲ್ಲಿ ಗೇಡ್‌ರುಹಮಿಲ್ಕಾರ್‌ನಿಗೆ ಬೆಂಬಲ ನೀಡುತ್ತಾರೆ. ಕಾರ್ತೇಜ್ ಸ್ಥಿತಿ ಎಷ್ಟೊಂದು ಕೆಟ್ಟು ಹೋಗಿತ್ತೆಂದರೆ, ಅದರ ನೌಕಾ ಪಡೆಯು ಹಮಿಲ್ಕಾರ್‌ನ ಸೈನ್ಯವನ್ನು ಐಬೇರಿಯಾ (ಹಿಸ್ಪಾನಿಯಾ) ಗೆ ಸಾಗಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ, ಹಮಿಲ್ಕಾರ್ ಪಿಲರ್ಸ್ ಆಫ್ ಹರ್ಕ್ಯುಲಿಸ್ ಕಡೆಗೆ ದಂಡೆತ್ತಿ ಹೋಗಬೇಕಾಯಿತು ಮತ್ತು ತನ್ನ ಸೈನ್ಯವನ್ನು ಸ್ಟ್ರೇಟ್ ಆಫ್ ಜಿಬ್ರಾಲ್ಟರ್ (ಇಂದಿನ ಮೊರಕ್ಕೊ ಅಥವಾ ಸ್ಪೇನ್)ಮುಖಾಂತರ ಸಾಗಿಸಬೇಕಾಯಿತು. [ಸೂಕ್ತ ಉಲ್ಲೇಖನ ಬೇಕು]
ಲೈವಿ ಪ್ರಕಾರ, ಹ್ಯಾನಿಬಲ್ ಬಹಳ ತಡವಾಗಿ ಹೇಳಿದ್ದೇನೆಂದರೆ, ಆತ ತನ್ನನ್ನೂ ಜೊತೆಗೆ ಕರೆದುಕೊಂಡು ಹೋಗುವಂತೆ ತನ್ನ ತಂದೆಯನ್ನು ಬೇಡಿಕೊಂಡಾಗ, ಹೆಮಿಲ್ಕಾರ್ ಒಪ್ಪಿಕೊಂಡನು ಮತ್ತು ಅವನು ಜೀವಂತಇರುವ ತನಕ ರೋಮ್‌ನೊಂದಿಗೆ ಯಾವತ್ತಿಗೂ ಸ್ನೇಹ ಸಂಬಂಧ ಬೆಳೆಸಕೂಡದು ಎಂದು ಆತನಿಂದ ಮಾತು ತೆಗೆದುಕೊಂಡನು. ಇಷ್ಟೇ ಅಲ್ಲದೆ, ಅತೀ ಚಿಕ್ಕ ವಯಸ್ಸಿನಲ್ಲೇ ತನ್ನನ್ನು ಹೊರದೇಶಗಳ ಯುದ್ಧಗಳಿಗೆ ಕರೆದುಕೊಂಡು ಹೋಗುವಂತೆಯೂ ಆತ ತನ್ನ ತಂದೆಯನ್ನು ಬೇಡಿಕೊಂಡಿದ್ದಕ್ಕೆ ದಾಖಲೆಗಳಿವೆ. ಕಥೆಯಲ್ಲಿ, ಹ್ಯಾನಿಬಲ್‌ನ ತಂದೆಯು ಆತನನ್ನು ಒಂದು ಬಲಿ ಕೊಡುವ ಕೋಣೆಗೆ ಕರೆತರುತ್ತಾನೆ. ಹ್ಯಾನಿಬಲ್‌ನನ್ನು ಬೆಂಕಿಯ ಮುಂದೆ ಹಿಡಿದ ಹಮಿಲ್ಕಾರ್‌ನು ಆತ ಎಂದಿಗೂ ರೋಮ್‌ನೊಂದಿಗೆ ಸ್ನೇಹ ಸಂಬಂಧ ಬೆಳೆಸುವುದಿಲ್ಲವೆಂದು ಪ್ರಮಾಣ ಮಾಡುವಂತೆ ಮಾಡುತ್ತಾನೆ. ಇತರ ವರದಿಗಳ ಪ್ರಕಾರ, ಹ್ಯಾನಿಬಲ್ ತನ್ನ ತಂದೆಗೆ ಹೇಳುತ್ತಾನೆ, "ನನ್ನ ಆಯುಷ್ಯ ಮುಗಿಯುವವರೆಗೂ... ನಾನು ಬೆಂಕಿ ಮತ್ತು ಉಕ್ಕು ಗಳಿಂದ ರೋಮ್ ನ ಹಣೆಬರಹವನ್ನು ಬಂಧಿಸುವೆನು ."[೧೩][೧೫]
ಹ್ಯಾನಿಬಲ್ ನ ತಂದೆಯುಹಿಸ್ಪಾನಿಯಾ ವನ್ನೂ ಸಹ ಗೆದ್ದುಕೊಂಡನು. ಅವನ ತಂದೆ ಯುದ್ಧದಲ್ಲಿ ಹತ್ಯೆಯಾದ ಮೇಲೆ ಹ್ಯಾನಿಬಲ್‌ನ ಸೋದರಳಿಯ ಹ್ಯಾಸ್ದ್ರುಬಲ್ ಸೈನ್ಯದ ದಂಡನಾಯಕನಾಗುತ್ತಾನೆ ಮತ್ತು ಹ್ಯಾನಿಬಲ್ ಅವನ ಕೈ ಕೆಳಗಿನ ಒಬ್ಬ ಅಧಿಕಾರಿಯಾಗಿ ನೇಮಕವಾಗುತ್ತಾನೆ. ಹ್ಯಾಸ್ದ್ರುಬಲ್‌ನು ಕಾರ್ಥೇಜ್ ಐಬೇರಿಯಾದ ಬುಡಕಟ್ಟು ಸಮೂಹಗಳ ಹಿತಾಸಕ್ತಿ ಬಲಪಡಿಸುವ ನೀತಿಯನ್ನು ಅನುಸರಿಸುತ್ತಾನೆ. ಅಲ್ಲದೆ,ರೋಮ್ ಈಬ್ರೋ ನದಿಯ ದಕ್ಷಿಣಕ್ಕೆ ತನ್ನ ರಾಜ್ಯ ವಿಸ್ತಾರ ಮಾಡದಿರುವವರೆಗೆ ಈಬ್ರೋ ನದಿಯ ಉತ್ತರಕ್ಕೆ ಕಾರ್ತೇಜ್ ಸಾಮ್ರಾಜ್ಯವನ್ನು ವಿಸ್ತರಿಸುವುದಿಲ್ಲವೆಂದು ರೋಮ್ ನೊಂದಿಗೆ ಒಪ್ಪಂದ ಕೂಡ ಮಾಡಿಕೊಳ್ಳುತ್ತಾನೆ. ಅಷ್ಟೇ ಅಲ್ಲದೆ, ಸ್ಥಳೀಯ ಬುಡಕಟ್ಟು ಸಮೂಹಗಳೊಂದಿಗೆ ಉತ್ತಮ ಸಂಬಂಧ ಬೆಳೆಸುವುದರ ಮೂಲಕ ಕಾರ್ತೇಜ್ ಸಾಮ್ರಾಜ್ಯವನ್ನು ಪ್ರಬಲಗೊಳಿಸಲು ಹ್ಯಾಸ್ದ್ರುಬಲ್ ಗುರಿ ಹೊಂದಿದ್ದ. ತನ್ನ ಒಪ್ಪಂದಗಳ ಭಾಗವಾಗಿ ಹ್ಯಾಸ್ದ್ರುಬಲ್ ಹ್ಯಾನಿಬಲ್‌ನ ಮದುವೆಯನ್ನು ಇಮಿಲ್ಸೆ (Imilce) ಎಂಬ ಹೆಸರಿನ ಐಬೇರಿಯಾದ ರಾಜಕುಮಾರಿಯೊಂದಿಗೆ ಏರ್ಪಡಿಸುತ್ತಾನೆ.
ಹ್ಯಾಸ್ದ್ರುಬಲ್‌ನ ಹತ್ಯೆ(ಕ್ರಿ.ಪೂ. 221)ಯಾದ ನಂತರ, ಕಾರ್ತೇಜ್‌ನ ಸೇನೆಯು ಹ್ಯಾನಿಬಲ್‌ನನ್ನು ಸೈನ್ಯದ ಮುಖ್ಯ ದಂಡನಾಯಕನಾಗಿ ನೇಮಿಸುತ್ತದೆ. ರೋಮ್ ನ ಪ್ರಸಿದ್ಧ ವಿದ್ವಾಂಸ, ಲೈವಿ ಯು ಕಾರ್ತೇಜ್ ನ ಈ ಯುವಕನ ಕುರಿತು ವರ್ಣನೆ ನೀಡಿದ್ದಾನೆ:
No sooner had he arrived...the old soldiers fancied they saw Hamilcar in his youth given back to them; the same bright look; the same fire in his eye, the same trick of countenance and features. Never was one and the same spirit more skillful to meet opposition, to obey, or to command...[೧೬]
ಮುಖ್ಯ ದಂಡನಾಯಕನಾಗಿ ಜವಾಬ್ದಾರಿ ಹೊತ್ತ ಹ್ಯಾನಿಬಲ್ ನು ಎರಡು ವರ್ಷಗಳಲ್ಲಿ ತನ್ನ ಪ್ರಾಂತ್ಯಗಳನ್ನು ಒಟ್ಟುಗೂಡಿಸಿದನು ಮತ್ತು ಈಬ್ರೋ ದಕ್ಷಿಣದಲ್ಲಿ ಬರುವ ಹಿಸ್ಪಾನಿಯಾವನ್ನು ಗೆದ್ದುಕೊಂಡನು.[೧೭] ಐಬೀರಿಯದಲ್ಲಿ ಹ್ಯಾನಿಬಲ್ ನ ಪ್ರಬಲವಾದ ಬೆಳವಣಿಗೆಯನ್ನು ಕಂಡ ರೋಮ್ ತುಂಬಾ ಗಾಬರಿಗೊಂಡಿತು. ಕಾರಣ, ರೋಮ್ ಈಬ್ರೋ ನದಿಯ ದಕ್ಷಿಣಕ್ಕೆ ಸ್ವಲ್ಪ ದೂರದಲ್ಲಿ ಬರುವ ಸಾಗುಂಟಮ್ ನಗರ ದೊಂದಿಗೆ ಮೈತ್ರಿ ಬೆಳೆಸಿತು ಮತ್ತು ಸಾಗುಂಟಮ್‌ನನ್ನು ರೋಮ್ ತನ್ನ ರಕ್ಷಿತವಾದ ಪ್ರಾಂತ್ಯ ವೆಂದು ಘೋಷಿಸಿತು. ಹ್ಯಾಸ್ಡ್ರುಬಲ್‌ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಉಲ್ಲಂಘನೆ ಎಂದು ಇದನ್ನು ಗ್ರಹಿಸಿದ ಹಾನ್ನಿಬಾಲ್ ಈ ನಗರಕ್ಕೆಮುತ್ತಿಗೆ ಹಾಕಿದ. ಅದು ಎಂಟು ತಿಂಗಳುಗಳ ನಂತರ ಉರುಳಿತು. ಒಪ್ಪಂದದ ಸ್ಪಷ್ಟ ಉಲ್ಲಂಘನೆಗೆ ರೋಮ್ ಪ್ರತಿಕ್ರಿಯಿಸಿ,ಕಾರ್ಥೇಜ್‌ನಿಂದ ನ್ಯಾಯಕ್ಕಾಗಿ ಒತ್ತಾಯಿಸಿತು. ಹ್ಯಾನಿಬಲ್‌ನ ಅದ್ಭುತ ಜನಪ್ರಿಯತೆಯನ್ನು ಅರಿತಿದ್ದ ಕಾರ್ತೆಜ್‌ನ ಸರ್ಕಾರವು ಅವನ ಚಟುವಟಿಕೆಗಳನ್ನು ತಿರಸ್ಕರಿಸಲಿಲ್ಲ. ಅದೇ ವರ್ಷದ ಕೊನೆಗೆ, ಆತ ಬಯಸಿದ ಯುದ್ಧವನ್ನು ಘೋಷಿಸಲಾಯಿತು. ಹ್ಯಾನಿಬಲ್ ಇಟಲಿಯ ಹೃದಯಭಾಗಗಳ ಮೇಲೆ ದಾಳಿ ಮಾಡಲು ಸಂಕಲ್ಪಿಸಿ, ಹಿಸ್ಪಾನಿಯಾ ಮತ್ತು ದಕ್ಷಿಣ ಗೌಲ್ ಪ್ರಾಂತ್ಯಗಳ ಮೂಲಕ ಶೀಘ್ರ ದಂಡಯಾತ್ರೆ ನಡೆಸಿದ.
ಇಟಲಿಯಲ್ಲಿ ಎರಡನೇ ಪ್ಯುನಿಕ್ ಯುದ್ಧ (218-203BC)
ಬದಲಾಯಿಸಿಇಟಲಿಗೆ ಭೂಮಾರ್ಗವಾಗಿ ಪ್ರಯಾಣ
ಬದಲಾಯಿಸಿಈ ಪ್ರಯಾಣವನ್ನು ಮೂಲತಃ ಯೋಜಿಸಿದವನು ಹ್ಯಾನಿಬಲ್‌ನ ಸೋದರಳಿಯ ಹ್ಯಾಸ್ದ್ರುಬಲ್.
ಕ್ರಿ.ಪೂ.229 ರಲ್ಲಿ ಹ್ಯಾಸ್ದ್ರುಬಲ್ ಐಬೇರಿಯಾ ದಲ್ಲಿ ಕಾರ್ತೇಜ್ ದಂಡನಾಯಕನಾದನು. ಈ ಹುದ್ದೆಯನ್ನು ಆತ ಎಂಟು ವರ್ಷಗಳ ಕಾಲ ಅಂದರೆ, ಕ್ರಿ.ಪೂ.221 ರ ವರೆಗೆ ನಿರ್ವಹಿಸಿಕೊಂಡು ಹೋಗುತ್ತಾನೆ. ಆದರೆ ಬಹು ಬೇಗನೆ ಉತ್ತರ ಇಟಲಿಯಲ್ಲಿನ ಪೋ ನದಿ ಕಣಿವೆಯ ಸೆಲ್ಟ್ಸ್ ಮತ್ತು ಕಾರ್ತೇಜ್ ನಡುವೆ ಮೈತ್ರಿಯ ಬಗ್ಗೆ ರೋಮನ್ನರು ತಿಳಿದುಕೊಂಡರು. ಸೆಲ್ಟ್‌ರು ಕಾರ್ತೇಜ್‌ರ ಬೆಂಬಲದೊಂದಿಗೆ ಇಟಲಿಯ ಮೇಲೆ ದಾಳಿ ಮಾಡಲು ಸೈನ್ಯ ಕಟ್ಟುತ್ತಿದ್ದರು. ಇದರಿಂದಾಗಿ, ರೋಮನ್ನರು 225 BCಯಲ್ಲಿ ಅವರಿಗಿಂತ ಮೊದಲೇ ಪೋ ಪ್ರಾಂತ್ಯದ ಮೇಲೆ ದಾಳಿ ಮಾಡಿದರು. ಕ್ರಿ.ಪೂ.220BC ಹೊತ್ತಿಗೆ, ರೋಮನ್ನರು ಈ ಪ್ರದೇಶವನ್ನು ಗಲಿಲ ಸಿಸಾಲ್ಪಿನ ಎಂಬ ಹೆಸರಿನಿಂದ ವಿಲೀನಗೊಳಿಸಿದರು[೧೮]. ಸುಮಾರು ಇದೆ ಸಮಯದಲ್ಲಿ (221 BC) ಹ್ಯಾಸ್ದ್ರುಬಲ್ ನ ಹತ್ಯೆ ನಡೆಯುತ್ತದೆ. ಇದರಿಂದಾಗಿ ಹ್ಯಾನಿಬಲ್ ಬೆಳಕಿಗೆ ಬರುತ್ತಾನೆ. ಇಟಲಿಯ ಮೇಲೆ ಗೌಲೊ-ಕಾರ್ಥೇಜಿನಿಯನ್ ಆಕ್ರಮಣದ ಬೆದರಿಕೆಯನ್ನು ಸ್ಪಷ್ಟವಾಗಿ ನಿಭಾಯಿಸಿದ (ಮತ್ತು ಬಹುಶಃ ಕಾರ್ತೇಜ್‌ನ ಮೂಲ ದಂಡನಾಯಕ ಕೊಲೆಯಾಗಿದ್ದಕ್ಕಾಗಿ) ರೋಮನ್ನರು ತಾವು ಸುರಕ್ಷಿತವಾಗಿದ್ದೇವೆಂಬ ಭ್ರಮೆಯಲ್ಲಿದ್ದರು. ಹೀಗೆ,ತನ್ನ ಸೋದರಳಿಯ ಗೌಲೊ-ಕಾರ್ತೇಜಿಯನ್ ದಂಡಯಾತ್ರೆ ಯೋಜನೆಗೆ ಪುನಶ್ಚೇತನ ನೀಡಿ ಅದನ್ನು ಮಾರ್ಪಡಿಸುವ ಮೂಲಕ 218BC ಯಲ್ಲಿ ಹ್ಯಾನಿಬಲ್ ದಂಡಯಾತ್ರೆ ಕೈಕೊಂಡು ರೋಮನ್ನರನ್ನು ಚಕಿತಗೊಳಿಸಿದನು. [ಸೂಕ್ತ ಉಲ್ಲೇಖನ ಬೇಕು]
218BC[೧೯] ವಸಂತ ಋತುವಿನ ಕೊನೆಯಲ್ಲಿ ಹ್ಯಾನಿಬಲ್ ಹೊಸ ಕಾರ್ತೇಜ್ ನಿಂದ ನಿರ್ಗಮಿಸಿ,ಉತ್ತರ ಬುಡಕಟ್ಟು ಪ್ರದೇಶದ ಮೂಲಕ ಪಿರೆನಿ ಗೆ ದಂಡಯಾತ್ರೆ ಹೋಗಿ, ಚತುರತೆಯ ಪರ್ವತ ತಂತ್ರಗಳು ಮತ್ತು ಜಗ್ಗದ ಹೋರಾಟದ ಮೂಲಕ ಬುಡಕಟ್ಟು ಜನರನ್ನು ನಿಗ್ರಹಿಸಿದರು. 11,000 ಸೈನಿಕರ ಪಡೆಯನ್ನು ಹೊಸದಾಗಿ ಗೆದ್ದುಕೊಂಡ ಪ್ರದೇಶವನ್ನು ರಕ್ಷಿಸಲು ಬಿಟ್ಟು ಹೋದನು. ಇನ್ನೂ 11,000 ಐಬೇರಿಯಾ ಸೈನಿಕರ ಪಡೆಗಳನ್ನು ಪಿರೆನೀಸ್‌ನಲ್ಲಿ ಬಿಟ್ಟನು. ಈ ಪಡೆಗಳ ಸೈನಿಕರು ತಮ್ಮ ತಾಯ್ನಾಡನ್ನು ಬಿಡಲು ಹಿಂಜರಿದರು. ಒಂದು ವರದಿಯ ಪ್ರಕಾರ, 40,000 ಕಾಲ್ದಳ ಮತ್ತು 12,000 ಅಶ್ವದಳಗಳೊಂದಿಗೆ ಹ್ಯಾನಿಬಲ್ ಗೌಲ್‌ನ್ನು ಪ್ರವೇಶಿಸಿದನು.[೨೦]
ಇನ್ನೂ ಪಿರೆನಿ ಪರ್ವತಗಳು, ಆಲ್ಪ್ ಪರ್ವತಗಳು ಮತ್ತು ಅನೇಕ ಪ್ರಮುಖ ನದಿಗಳನ್ನು ದಾಟಿ ಹೋಗಬೇಕಾಗುವುದೆಂದು ಹ್ಯಾನಿಬಲ್‌ಗೆ ಮನವರಿಕೆಯಾಯಿತು. ಹೆಚ್ಚುವರಿಯಾಗಿ ಅವನು ಗೌಲ್ ಪ್ರದೇಶವನ್ನು ಹಾದುಹೋಗುವುದರಿಂದ ಗೌಲ್ ಜನರ ಪ್ರತಿರೋಧವನ್ನು ಎದುರಿಸಬೇಕಾಗಿತ್ತು. ಕ್ರಿ.ಪೂ.218 ರ ವಸಂತ ಋತುವಿನಲ್ಲಿ ಯುದ್ಧ ಪ್ರಾರಂಭಿಸಿದ ಹ್ಯಾನಿಬಲ್ ಬಹು ಸುಲಭವಾಗಿ ಉತ್ತರದ ಬುಡಕಟ್ಟು ಸಮೂಹಗಳನ್ನು ಸೋಲಿಸಿ ಪಿರೆನಿ ಪರ್ವತಗಳಿಗೆ ತಲುಪಿದನು. ಈ ಮಾರ್ಗದಲ್ಲಿ ಹ್ಯಾನಿಬಲ್ ಗೌಲ್‌ನ ಮುಖ್ಯಸ್ಥರೊಂದಿಗೆ ಸಂಧಾನ ಮಾಡಿಕೊಂಡ. ನಂತರ, ರೋಮನ್ನರು ಆತನ ಮುನ್ನಡೆಗೆ ಅಡ್ಡಿಯುಂಟು ಮಾಡುವ ಮೊದಲೇ ಅವನು ರೋನ್ ನದಿ ಯನ್ನು ತಲುಪಿದನು. ಸೆಪ್ಟೆಂಬರ್ ನಲ್ಲಿ ರೋನ್ ತಲುಪಿದ ಸಮಯದಲ್ಲಿ, ಹ್ಯಾನಿಬಲ್ ಸೇನೆಯಲ್ಲಿ 38,000 ಕಾಲ್ದಳ, 8,000 ಅಶ್ವದಳ ಮತ್ತು 37 ಯುದ್ಧದ ಆನೆಗಳಿದ್ದವು.[೨೧]
ತಾನು ದಾಟುವುದನ್ನು ತಡೆಯಲು ಬಂದ ಸ್ಥಳೀಯರನ್ನು ತನ್ನ ಚಾಣಾಕ್ಷತನದಿಂದ ಸೋಲಿಸಿದ ಹ್ಯಾನಿಬಲ್ ರೋನ್ ನದಿ ಕಣಿವೆಯ ಒಳಮಾರ್ಗದ ಮೂಲಕ ಪ್ರಯಾಣ ಮಾಡಿ, ಮೆಡಿಟರೇನಿಯನ್ ತೀರ ಪ್ರದೇಶದಿಂದ ಬರುತ್ತಿದ್ದ ರೋಮ್ ಸೈನ್ಯದಿಂದ ತಪ್ಪಿಸಿಕೊಂಡನು. ಆಲ್ಪ್ ಪರ್ವತಗಳ ಮೂಲಕ ಹಾಯ್ದು ಹೋಗುವ ದಾರಿಯ ಬಗ್ಗೆ ಅವನಿಗೆ ಇದ್ದ ತಿಳುವಳಿಕೆಯ ಕುರಿತು ಇಂದಿಗೂ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. (ಹ್ಯಾನಿಬಲ್‌ನ ಈ ದಂಡಯಾತ್ರೆಯ ಕುರಿತು ಇರುವ ನಂಬಲರ್ಹವಾದ ಪೋಲಿಬಿಯಸ್ ದಾಖಲೆಯ ಪ್ರಕಾರ, ಈ ದಾರಿಯ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ.) ಇತ್ತೀಚಿನ ಪ್ರಭಾವಿ ಸಂಶೋಧನೆಗಳು, ಡ್ರೋಮ್ ಕಣಿವೆಯ ಮೂಲಕ ಮಾಡಿದ ದಂಡ ಯಾತ್ರೆ ಮತ್ತು ಕೋಲ್ ಡಿ ಮೊಂಟ್ ಜಿನೀವರ್‌ಮೇಲೆ ಹಾಯ್ದು ಹೋಗುವ ದಕ್ಷಿಣ ಆಧುನಿಕ ಹೆದ್ದಾರಿಯ ಮುಖ್ಯ ಶ್ರೇಣಿಯನ್ನು ದಾಟಿದ ಮತ್ತು ಐಸಿಯರ್ ಕಣಿವೆಗಳ ಉತ್ತರದಲ್ಲಿ ದೂರದವರೆಗೆ ಮತ್ತು ಈಗಿನ ಕೋಲ್ ಡಿ ಮೊಂಟ್ ಸೆನಿಸ್ ಅಥವಾ ಲಿಟಲ್ ಸೇಂಟ್ ಬರ್ನಾರ್ಡ್ ಪಾಸ್ ಹತ್ತಿರ ಹಾಯ್ದು ಹೋಗಿರುವ ಆರ್ಕ್ ವರೆಗೆ ಮಾಡಿದ ದಂಡಯಾತ್ರೆಯನ್ನು ನಿಜವೆಂದು ತೋರಿಸುತ್ತವೆ.[೨೨]
ಲೈವಿಯ ಪ್ರಕಾರ, ಈ ಯಾತ್ರೆಯನ್ನು ಅಪಾರ ಕಷ್ಟಗಳನ್ನು ಎದುರಿಸುವ ಮೂಲಕ ಸಾಧಿಸಲಾಯಿತು.[೨೩] ದಾರಿಯನ್ನು ಮುಚ್ಚಿ ಹಾಕಿದ್ದ ದೊಡ್ಡ ಬಂಡೆಗಳನ್ನು ಒಡೆಯಲು ವಿನಿಗರ್ ಮತ್ತು ಬೆಂಕಿಯನ್ನು ಬಳಸುವ ಮೂಲಕ ಕಷ್ಟಗಳನ್ನು ಹ್ಯಾನಿಬಲ್ ಚಾತುರ್ಯದಿಂದ ನಿಭಾಯಿಸಿದ.[೨೪] ಪೋಲಿಬಿಯಸ್‌ನ ಪ್ರಕಾರ, ಹ್ಯಾನಿಬಲ್ ಇಟಲಿಗೆ ಬಂದಾಗ ಅವನ ಜೊತೆಗೆ ಇದ್ದದ್ದು 20,000 ಕಾಲ್ದಳ, 4,000 ಕುದುರೆ ಸವಾರರು ಮತ್ತು ಕೆಲವೇ ಆನೆಗಳು. ಹ್ಯಾನಿಬಲ್ ಸೈನ್ಯವನ್ನು ಕುರಿತು ಪೋಲಿಬಿಯಸ್ ತಿಳಿಸಿದ ಸಂಖ್ಯೆಗಳು ಒಂದು ವೇಳೆ ಸರಿಯಾಗಿದ್ದರೆ, ಇದರ ಅರ್ಥ ಹ್ಯಾನಿಬಲ್ ರೋನ್ ನದಿ ಕಣಿವೆಯನ್ನು ದಾಟಿ ಬರುವಾಗ ಅವನು ಅರ್ದದಷ್ಟು ಸೈನ್ಯವನ್ನು ಕಳೆದುಕೊಂಡಿದ್ದ. ಸರ್ಜ್ ಲಾನ್ಸೆಲ್‌ರಂತಹ ಇತಿಹಾಸಕಾರರು ಹ್ಯಾನಿಬಲ್ ಹಿಸ್ಪಾನಿಯಾದಿಂದ ಹೊರಟಾಗ ಆತ ಹೊಂದಿದ್ದ ಪಡೆಗಳ ಅಂಕಿಅಂಶಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ.[೨೫] ಅವನು ಹಿಸ್ಪಾನಿಯಾದಿಂದ ಯಾವುದೇ ಸಹಾಯವಿಲ್ಲದೆ ದಂಡಯಾತ್ರೆ ಮಾಡಬೇಕಾಗುವುದು ಎಂದು ಮೊದಲೇ ಲೆಕ್ಕಾಚಾರ ಹಾಕಿದ್ದಂತೆ ಕಂಡುಬರುತ್ತದೆ.
ಟ್ರೆಬಿಯಾ ಯುದ್ಧ
ಬದಲಾಯಿಸಿಅನೇಕ ಅಪಾಯಗಳಿಂದ ಕೂಡಿದ್ದ ದಂಡಯಾತ್ರೆಯ ನಂತರ ಹ್ಯಾನಿಬಲ್ ರೋಮ್ ಪ್ರದೇಶಕ್ಕೆ ಪ್ರವೇಶಿಸಿದ. ವಿದೇಶಿ ನೆಲದಲ್ಲಿ ಮುಖ್ಯ ವಿಷಯದ ಬಗ್ಗೆ ಕಾದಾಡಿ ಬಗೆಹರಿಸುವ ಶತ್ರುಗಳ ಪ್ರಯತ್ನಗಳನ್ನು ನಿಷ್ಪಲಗೊಳಿಸಿದ. ಎಲ್ಲಕ್ಕಿಂತ ಹೆಚ್ಚಾಗಿ, ಹ್ಯಾನಿಬಲ್ ಪೋ ಕಣಿವೆಯ ಗೌಲ್ ನಡುವೆ ಹಠಾತ್ತನೆ ಬಂದಿದ್ದರಿಂದಾಗಿ ರೋಮನ್ನರಿಗೆ ಅವರು ತೋರಿದ ಹೊಸ ನಿಷ್ಠೆಯಿಂದ ಬೇರ್ಪಡಿಸಲು ಸಾಧ್ಯವಾಯಿತು. ದಂಗೆಯನ್ನು ಹತ್ತಿಕ್ಕಲು ರೋಮನ್ನರು ಕ್ರಮಗಳನ್ನು ಕೈಗೊಳ್ಳುವ ಮುನ್ನವೇ ಇದು ಸಾಧ್ಯವಾಯಿತು.
ಹ್ಯಾನಿಬಲ್ ಮತ್ತು ಸಿಪಿಯೋ ಆಫ್ರಿಕಾನಸ್‌ನ ತಂದೆಯನ್ನು ಎದುರಿಸಲು ಕಳಿಸಿದ ರೋಮನ್ ಪಡೆಯ ಅಧಿಪತ್ಯ ವಹಿಸಿದ ಕಾನ್ಸಲ್ ಪಬ್ಲಿಯಸ್ ಕಾರ್ನೆಲಿಯಸ್ ಸಿಪಿಯೋ ನಿಗೆ ಹ್ಯಾನಿಬಲ್ ಆಲ್ಪ್ ಪರ್ವತಗಳನ್ನು ದಾಟಿಬರುವ ಪ್ರಯತ್ನ ಮಾಡುತ್ತಾನೆಂದು ನಿರೀಕ್ಷಿಸಿರಲಿಲ್ಲ. ಏಕೆಂದರೆ ರೋಮನ್ನರು ಐಬೇರಿಯಾ ದಲ್ಲಿ ಯುದ್ಧ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಸಿಪಿಯೋ ಗೌಲ್ ನಲ್ಲಿದ್ದ ತನ್ನ ಸಣ್ಣ ಸೈನಿಕ ತಂಡದ ಸಹಾಯದಿಂದ ಹ್ಯಾನಿಬಲ್‌ನನ್ನು ಎದುರಿಸುವ ಪ್ರಯತ್ನ ಮಾಡಿದ. ತನ್ನ ಧೃಡ ನಿರ್ಧಾರದಿಂದ ಮತ್ತು ಮಿಂಚಿನ ವೇಗದಿಂದ ಸೈನ್ಯವನ್ನು ಸಮುದ್ರ ಮಾರ್ಗದಿಂದ ಇಟಲಿಗೆ ಸ್ಥಳಾಂತರಿಸಲು ಯಶಸ್ವಿಯಾಗಿ,ಹ್ಯಾನಿಬಲ್‌ನನ್ನು ಸಕಾಲದಲ್ಲಿ ಎದುರಿಸಿದ. ಪೋ ಕಣಿವೆಯ ಮೂಲಕವಾಗಿ ಹಾದುಹೋದ ಹ್ಯಾನಿಬಲ್ ಪಡೆಗಳು ಟಿಸಿನಸ್ ಎಂಬಲ್ಲಿ ಒಂದು ಸಣ್ಣ ಹೋರಾಟದಲ್ಲಿ ನಿರತವಾಯಿತು. ಇಲ್ಲಿ, ಹ್ಯಾನಿಬಲ್ ತನ್ನ ಶ್ರೇಷ್ಠ ಮಟ್ಟದ ಅಶ್ವದಳ ದ ಸಹಾಯದಿಂದ ಲೊಂಬಾರ್ಡಿ ಬಯಲು ಪ್ರದೇಶದಿಂದ ರೋಮನ್ನರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದ.[೨೬] ಈ ಗೆಲುವು ಅಷ್ಟೊಂದು ಪ್ರಮುಖವಾಗಿರದಿದ್ದರೂ, ಇದರಿಂದಾಗಿ ಗೌಲ್ ಪ್ರದೇಶದ ಜನರು ಮತ್ತು ಲಿಗರ್ ಪ್ರದೇಶದ ಜನರು ಕಾರ್ತೇಜ್‌ನ ಹೋರಾಟಕ್ಕೆ ಜತೆಗೂಡಲು ಪ್ರೋತ್ಸಾಹಿಸಿತು. ಅಲ್ಲದೆ,ಅವರ ಪಡೆಗಳ ಸೇರ್ಪಡೆಯಿಂದ ಸೇನೆಯು 40,000 ಸೈನಿಕರಿಂದ ಬಲಗೊಂಡಿತು. ಈ ಸಮಯದಲ್ಲಿ, ಸಿಪಿಯೋ ಗಂಭೀರವಾಗಿ ಗಾಯಗೊಳ್ಳುತ್ತಾನೆ. ಕೆಳಗೆ ಬಿದ್ದ ತಂದೆಯನ್ನು ಯುದ್ಧಭೂಮಿಗೆ ಮರಳಿ ಧಾವಿಸಿ ರಕ್ಷಿಸಿದ ಅವನ ಪುತ್ರನ ಶೌರ್ಯವು ಸಿಪಿಯೊನ ಜೀವವುಳಿಸಿತು. ನಂತರ, ಸಿಪಿಯೋ ಹಾನಿಗೊಳಗಾಗದ ತನ್ನ ಸೇನೆಯೊಂದಿಗೆ ಟ್ರಾಬಿಯಾ ನದಿಯನ್ನು ದಾಟಿ ಪ್ಲಾಸೆನ್ಷಾ ದಲ್ಲಿ ಬೀಡುಬಿಟ್ಟ.[೨೬]
ಇನ್ನೊಂದು ರೋಮ್ ನ ಕಾನ್ಸಲರ್ ಸೈನ್ಯವು ಪೋ ಕಣಿವೆಗೆ ಧಾವಿಸುತ್ತದೆ. ಟಿಸಿನಸ್‌ನಲ್ಲಿ ಈ ಸೋಲಿನ ಸುದ್ದಿ ರೋಮ್ ತಲುಪುವ ಮೊದಲೇ ಸೆನೆಟ್ ಅಥವಾ ರೋಮ್ ಪರಿಷತ್ತು ಸಿಸಿಲಿಯಲ್ಲಿದ್ದ ನಿಯೋಗಿ ಸೆಮ್ಪ್ರಾನಿಯಸ್ ಲಾಂಗಸ್ ನಿಗೆ ಅವನ ಸೇನೆಯನ್ನು ಸಿಸಿಲಿಯಿಂದ ವಾಪಸ್ ತಂದು ಸಿಪಿಯೊನನ್ನು ಭೇಟಿಮಾಡಿ,ಹ್ಯಾನಿಬಾಲ್‌ನನ್ನು ಎದುರಿಸುವಂತೆ ಆದೇಶ ನೀಡಿತು. ಆದರೆ ಹ್ಯಾನಿಬಲ್ ಚಾಣಾಕ್ಷತೆಯಿಂದ ಅವನನ್ನು ಎದುರಿಸುವ ಸ್ಥಾನದಲ್ಲಿದ್ದ.ಪ್ಲಾಸೆಂಟಿನಾ ಮತ್ತು ಆರ್ಮಾನಿಯಂ ನಡುವಿನ ನೇರ ರಸ್ತೆಯಲ್ಲಿ ಅವನು ಬೀಡುಬಿಟ್ಟಿದ್ದ. ಸಿಪಿಯೊ ಸೇನೆಯನ್ನು ಬಲಪಡಿಸಲು ಸೆಂಪ್ರೋನಿಯಸ್ ಅದೇ ಮಾರ್ಗದಲ್ಲಿ ಹಾದುಹೋಗಬೇಕಿತ್ತು. ನಂತರ ಅವನು ಕ್ಲಾಸ್ಟಿಡಿಯಂ ವಶಪಡಿಸಿಕೊಂಡು,ತನ್ನ ಕಡೆಯ ಸೈನಿಕರಿಗೆ ಅಪಾರ ಪ್ರಮಾಣದ ದಿನಸಿಯನ್ನು ಸಂಗ್ರಹಿಸಿದ. ಈ ಗೆಲುವಿನ ಹಿಂದೆಯೇ ಹ್ಯಾನಿಬಲ್ ನಷ್ಟ ಎದುರಿಸಬೇಕಾಯಿತು. ಏಕೆಂದರೆ, ಸೆಮ್ಪ್ರಾನಿಯಸ್ ಹ್ಯಾನಿಬಲ್ ಹದ್ದಿನ ಕಣ್ಣಿನಿಂದ ಪಾರಾಗಿ,ಪ್ಲಾಸೆನ್ಷಾ ದ ಹತ್ತಿರ ಟ್ರಾಬಿಯಾ ನದಿ ಯ ಸಮೀಪ ನೆಲೆಯೂರಿದ್ದ ತನ್ನ ಸಹೋದ್ಯೋಗಿಯ ಜೊತೆ ಸೇರಿಕೊಂಡ. ಅದೇ ವರ್ಷ ಡಿಸೆಂಬರ್ ತಿಂಗಳಲ್ಲಿ, ಟ್ರಾಬಿಯಾ ದಲ್ಲಿ ತನ್ನ ಮಿಲಿಟರಿ ಕೌಶಲ್ಯವನ್ನು ತೋರಿಸುವ ಅವಕಾಶ ಹ್ಯಾನಿಬಲ್‌ನಿಗೆ ಸಿಕ್ಕಿತು.ಅತ್ಯುತ್ತಮ ರೋಮನ್ ಕಾಲ್ದಳವನ್ನು ಬಳಲಿಸಿದ ನಂತರ, ಸೇನೆಗೆ ಬದಿಯಿಂದ ದಿಢೀರ್ ಮುತ್ತಿಗೆ ಹಾಕುವ ಮೂಲಕ ರೋಮನ್ ಸೈನ್ಯವನ್ನು ತುಂಡರಿಸಿದ.
ಟ್ರ್ಯಾಸಿಮಿನ್ ಸರೋವರದ ಕಾಳಗ
ಬದಲಾಯಿಸಿಉತ್ತರ ಇಟಲಿಯಲ್ಲಿ ಈ ಗೆಲುವಿನ ಮೂಲಕ ತನ್ನ ಸ್ಥಾನ ಭದ್ರಪಡಿಸಿಕೊಂಡ ಹಾನ್ನಿಬಾಲ್,ಚಳಿಗಾಲದಲ್ಲಿ ಗೌಲ್ಸ್ ಜತೆ ತನ್ನ ಪಡೆಗಳಿಗೆ ಆಶ್ರಯ ಕಲ್ಪಿಸಿದ.ಅವನಿಗೆ ಗೌಲ್ಸ್ ಬೆಂಬಲ ಕುಸಿಯುತ್ತಾ ಬಂದಿತ್ತು. ಕ್ರಿ.ಪೂ. 217 ರ ವಸಂತ ಋತುವಿನಲ್ಲಿ, ದೂರದ ದಕ್ಷಿಣದಲ್ಲಿ ಕಾರ್ಯಾಚರಣೆಗೆ ಹೆಚ್ಚು ವಿಶ್ವಾಸಾರ್ಹ ನೆಲೆಯನ್ನು ಹುಡುಕಲು ನಿರ್ಧರಿಸಿದ. ಹ್ಯಾನ್ನಿಬಾಲ್ ರೋಮ್ ಮೇಲೆ ದಾಳಿ ಮಾಡಬಹುದೆಂದು ನಿರೀಕ್ಷಿಸಿದ್ದ ನೇಯಸ್ ಸರ್ವಿಲಿಯಸ್ ಮತ್ತು ಗೇಯಸ್ ಫ್ಲಾಮಿನಿಯಸ್(ರೋಮನ್ನರ ಹೊಸ ಕಾನ್ಸಲರು) ರೋಮ್‌ಗೆ ತೆರಳಲು ಬಳಸುತ್ತಿದ್ದ ಪೂರ್ವ ಮತ್ತು ಪಶ್ಚಿಮ ಮಾರ್ಗಗಳಿಗೆ ತಡೆ ವಿಧಿಸಲು ತಮ್ಮ ಸೇನೆಯನ್ನು ಒಯ್ದರು.[ಸೂಕ್ತ ಉಲ್ಲೇಖನ ಬೇಕು]
ಆರ್ನೋದ ಪ್ರವೇಶದಲ್ಲಿ ಮಧ್ಯ ಇಟಲಿಗೆ ಏಕೈಕ ಪರ್ಯಾಯ ಮಾರ್ಗವಿತ್ತು. ಈ ಮಾರ್ಗವು ಒಂದು ದೊಡ್ಡ ಪ್ರಮಾಣದ ಜೌಗು ಪ್ರದೇಶವಾಗಿದ್ದು, ಆ ನಿರ್ದಿಷ್ಟ ಋತುವಿನಲ್ಲಿ ಸಾಮಾನ್ಯಕ್ಕಿಂತಲೂ ಹೆಚ್ಚು ತುಂಬಿ ಹರಿಯುತ್ತಿತ್ತು. ಈ ದಾರಿಯನ್ನು ಕ್ರಮಿಸುವುದು ತುಂಬಾ ಕಠಿಣವಾದ ಕೆಲಸವೆಂದು ಹ್ಯಾನಿಬಲ್‌ನಿಗೆ ತಿಳಿಯಿತು. ಆದರೂ ಮಧ್ಯ ಇಟಲಿಯನ್ನು ಬೇಗ ತಲುಪಲು ಇದ್ದ ದಾರಿ ಅದೊಂದೇ ಆಗಿತ್ತು. ಪೋಲಿಬಿಯಸ್ ಹೇಳುವಂತೆ, ಹ್ಯಾನಿಬಲ್‌ನ ಸೈನಿಕರು ನಾಲ್ಕು ದಿನ ಮತ್ತು ಮೂರು ರಾತ್ರಿಗಳವರೆಗೆ ನೀರಿನಲ್ಲಿ ಮುಳುಗಿಹೋಗಿದ್ದ ದಾರಿಯನ್ನು ಕ್ರಮಿಸಿದ್ದರಿಂದ ವಿಪರೀತ ದಣಿವು ಮತ್ತು ನಿದ್ರೆಯಿಲ್ಲದೇ ಬಳಲಿದರು. ಅವನು ಏಪನಿನ್ಸ್ (ಇದನ್ನು ದಾಟಿ ಹೋಗುವಾಗಲೇ ಕಂಜಕ್ಟಿವಿಟಿಸ್‌ನಿಂದಾಗಿ ಅವನು ತನ್ನ ಬಲಗಣ್ಣನ್ನು[೨೭] ಕಳೆದುಕೊಂಡ)ಮತ್ತು ದುರ್ಗಮವಾದ ಆರ್ನೋವನ್ನು ಪ್ರತಿರೋಧವಿಲ್ಲದೇ ಯಶಸ್ವಿಯಾಗಿ ದಾಟಿದ. ಆದರೆ ಆರ್ನೋದ ಜೌಗು ಕೆಳಪ್ರದೇಶದಲ್ಲಿ ಆತ ತನ್ನ ಉಳಿದ ಆನೆಗಳೊಂದಿಗೆ ಸೇನೆಯ ಬಹುಭಾಗವನ್ನು ಕಳೆದುಕೊಂಡ.[೨೮]
ಎಟ್ರುರಿಯಾ ಎಂಬಲ್ಲಿ 217 BCಯ ವಸಂತ ಕಾಲದಲ್ಲಿ ಹ್ಯಾನಿಬಲ್ ಆಗಮಿಸಿದ.ಫ್ಲಾಮಿನಿಯಸ್ ನೇತೃತ್ವದ ಮುಖ್ಯ ರೋಮನ್ ಸೇನೆಯನ್ನು ಪ್ರಬಲಯುದ್ಧದ ಮೂಲಕ ತತ್ತರಗೊಳಿಸಲು ಹಾನ್ನಿಬಾಲ್ ನಿರ್ಧರಿಸಿ,ಫ್ಲಾಮಿಯನ್ ಕಣ್ಣೆದುರಿನಲ್ಲೇ ಅವನು ರಕ್ಷಿಸಬೇಕಾಗಿದ್ದ ಪ್ರದೇಶವನ್ನು ನಾಶಗೊಳಿಸಿದ. ಪೋಲಿಬಿಯಸ್ ಹೇಳುವಂತೆ, "ಫ್ಲಾಮಿನಿಯಸ್ ನ ಶಿಬಿರವನ್ನು ದಾಟಿ ಮೇಲ್ಭಾಗದಲ್ಲಿ ಬರುವ ಜಿಲ್ಲೆಯನ್ನು ಪ್ರವೇಶಿಸಿದರೆ,ಫ್ಲಾಮಿನಿಯಸ್ (ಆಂಶಿಕವಾಗಿ ಜನಪ್ರಿಯ ಅಪಕೀರ್ತಿಗೆ ಮತ್ತು ಆಂಶಿಕವಾಗಿ ವೈಯಕ್ತಿಕ ಕಿರುಕುಳಕ್ಕೆ ಗುರಿಯಾಗುವ ಭಯದಿಂದ)ತನ್ನ ರಾಜ್ಯವು ನಿಷ್ಕ್ರಿಯತೆಯಿಂದ ನಾಶವಾಗುವುದನ್ನು ನೋಡುವುದನ್ನು ಸಹಿಸಲಾಗದೇ ಸಹಜವಾಗಿ ತನ್ನನ್ನು ಅನುಸರಿಸಿ ದಾಳಿ ಮಾಡಲು ಅವಕಾಶಗಳನ್ನು ಕಲ್ಪಿಸುತ್ತಾನೆಂದು ಹ್ಯಾನಿಬಾಲ್ ಲೆಕ್ಕಾಚಾರ ಹಾಕಿದ" [೨೯] ಅದೇ ಸಂದರ್ಭದಲ್ಲಿ, ಫ್ಲಾಮಿನಿಯಸ್ ನು ಅವುಗಳನ್ನು ರಕ್ಷಿಸಲು ಅಸಮರ್ಥ ಎಂದು ತೋರಿಸಿ ರೋಮ್ ಅನ್ನು ಬೆಂಬಲಿಸುತ್ತಿದ್ದ ಮೈತ್ರಿಕೂಟಗಳ ನಿಷ್ಠೆಯನ್ನು ಒಡೆಯಲು ಹ್ಯಾನಿಬಲ್ ಪ್ರಯತ್ನಿಸಿದ. ಇಷ್ಟಾದರೂ, ಫ್ಲಾಮಿನಿಯಸ್ ಎರಿಟಿಯಮ್‌ನಲ್ಲಿ ಬೀಡು ಬಿಟ್ಟಿದ್ದನ್ನು ಹ್ಯಾನಿಬಾಲ್ ಗಮನಿಸಿದ. ಹ್ಯಾನಿಬಲ್ ಕೇವಲ ನಾಶದಿಂದ ಫ್ಲಾಮಿನಿಯಸ್‌ನನ್ನು ಯುದ್ಧಕ್ಕೆ ಪ್ರೇರೇಪಿಸುವಲ್ಲಿ ಅಸಮರ್ಥನಾಗಿ,ತನ್ನ ವೈರಿ ಸೇನೆಯ ಘಟಕದ ಎಡಬದಿಗೆ ದಿಟ್ಟತನದಿಂದ ಆಕ್ರಮಣ ಮಾಡಿ,ರೋಮ್‌ನಿಂದ ಆತನನ್ನು ಪರಿಣಾಮಕಾರಿಯಾಗಿ ಬೇರ್ಪಡಿಸಿದ(ಹೀಗೆ ಮಿಲಿಟರಿ ಇತಿಹಾಸದಲ್ಲಿ ದಾಖಲಾದ ಪ್ರಥಮ ತಿರುವಿನ ಬೆಳವಣಿಗೆಯನ್ನು ಅನುಷ್ಠಾನಕ್ಕೆ ತಂದ). ಎಟ್ರುರಿಯಾ ದ ಎತ್ತರದ ಪ್ರದೇಶಗಳ ಮುಖಾಂತರ ಮುಂದುವರೆದ ಹ್ಯಾನಿಬಲ್ ಫ್ಲಾಮಿನಿಯಸ್ ತನ್ನನ್ನು ಬೆನ್ನಟ್ಟುವಂತೆ ಪ್ರಚೋದಿಸಿದ. ಟ್ರ್ಯಾಸಿಮಿನಸ್ ಸರೋವರ ದ ದಡದ ಇಕ್ಕಟ್ಟಾದ ದಾರಿ ಯಲ್ಲಿ ಫ್ಲಾಮಿನಿಯಸ್‌ನನ್ನು ಸೆರೆಹಿಡಿದ.ಸರೋವರದ ನೀರಿನಲ್ಲಿ ಅಥವಾ ನೆರೆಯಲ್ಲಿದ್ದ ಇಳಿಜಾರುಗಳಲ್ಲಿ ಅವನ ಸೇನೆಯನ್ನು ನಾಶಮಾಡಿದ,ಜತೆಗೆ ಫ್ಲಾಮಿನಿಯಸ್‌ನನ್ನು ಹತ್ಯೆ ಮಾಡಿದ. (ಟ್ರ್ಯಾಸಿಮಿನ್ ಸರೋವರದ ಯುದ್ಧ ನೋಡಿ). ಪಾರ್ಥಿಯನ್ನರ ವಿರುದ್ಧ ನಡೆದ ಕೆರಾಯಿ ಯುದ್ಧಕ್ಕಿಂತ ಮೊದಲು ರೋಮನ್ನರು ಎದುರಿಸಿದ ಅತ್ಯಂತ ದುಬಾರಿಯಾದ ಹಠಾತ್ ದಾಳಿ ಇದಾಗಿತ್ತು. ರೋಮ್‌ಗೆ ತನ್ನ ಮುನ್ನಡೆಯನ್ನು ತಡೆಯುವ ಏಕೈಕ ಸೇನಾಪಡೆಯನ್ನು ಅವನು ಈಗ ಫೈಸಲು ಮಾಡಿದ್ದ.ಆದರೆ ಸೀಜ್ ಇಂಜಿನ್(ಕೋಟೆ ಗೋಡೆಗಳನ್ನು ಒಡೆಯಲು ಬಳಸುವ ಸಾಧನ)ಗಳಿಲ್ಲದೆ ರೋಮ್ ವಶಪಡಿಸಿಕೊಳ್ಳುವುದು ಅಸಾಧ್ಯವೆಂದು ಅರಿತ ಹ್ಯಾನಿಬಲ್ ಮಧ್ಯ ಮತ್ತು ದಕ್ಷಿಣ ಇಟಲಿ ಪ್ರವೇಶಿಸಿ ಅದರ ಸಾರ್ವಭೌಮ ಅಧಿಕಾರದ ವಿರುದ್ಧ ಸಾಮಾನ್ಯ ದಂಗೆಗೆ ಪ್ರೋತ್ಸಾಹಿಸುವ ಮೂಲಕ ಜಯ ಸಾಧಿಸಲು ಆದ್ಯತೆ ನೀಡಿದ. ಟ್ರ್ಯಾಜಿಮಿನ್ ಸರೋವರದ ಯುದ್ಧದ ನಂತರ ಹ್ಯಾನಿಬಲ್ ಹೀಗೆ ಹೇಳುತ್ತಾನೆ, "ನಾನು ಇಟಲಿ ಜನರೊಂದಿಗೆ ಸೆಣಸಲು ಬಂದಿಲ್ಲ. ಇಟಲಿಯನ್ನರ ಪರವಾಗಿ ರೋಮ್ ವಿರುದ್ಧ ಹೋರಾಡಲು ಬಂದಿದ್ದೇನೆ." [೩೦]
ಫೇಬಿಯಸ್ ಮ್ಯಾಕ್ಸಿಮಸ್ ನನ್ನು ರೋಮನ್ನರು ಸರ್ವಾಧಿಕಾರಿಯಾಗಿ ಆಯ್ಕೆಮಾಡಿದರು. ರೋಮನ್ ಮಿಲಿಟರಿ ಸಂಪ್ರದಾಯದಿಂದ ನಿರ್ಗಮಿಸಿದ ಫೇಬಿಯಸ್ ತನ್ನದೇ ಹೆಸರಿನ ಫೇಬಿಯಸ್ ಯುದ್ಧ ನೀತಿಯನ್ನು ಅನುಸರಿಸಿ, ವೈರಿ ಜೊತೆಗೆ ನೇರವಾಗಿ ಯುದ್ಧಕ್ಕೆ ನಿರಾಕರಿಸಿ,ಅವನ ಚಲನವಲನವನ್ನು ನಿಯಂತ್ರಿಸಲು ಅವನಿದ್ದ ಸುತ್ತಮುತ್ತಲ ಪ್ರದೇಶದಲ್ಲಿ ಹಲವಾರು ರೋಮನ್ ಸೇನೆಗಳನ್ನು ಇರಿಸಿದ.
ಫೇಬಿಯಸ್‌ನನ್ನು ಯುದ್ಧಕ್ಕೆ ಪ್ರಚೋದಿಸದೇ ಅಪೂಲಿಯಾವನ್ನು ಹ್ಯಾನಿಬಲ್ ನಾಶಪಡಿಸಿದ. ನಂತರ, ಸಾಮ್ನಿಯಮ್ ನ್ನು ದಾಟಿ ಹೋಗಿ ಇಟಲಿಯ ಶ್ರೀಮಂತ ಮತ್ತು ಫಲವತ್ತಾದ ಪ್ರದೇಶ ಕ್ಯಾಮ್ಪೆನಿಯಾ ವನ್ನು ನಾಶಪಡಿಸಲು ಯೋಜಿಸಿದ. ಈ ವಿನಾಶದಿಂದ ಫೇಬಿಯಸ್‌ನನ್ನು ಯುದ್ಧಕ್ಕೆ ಪ್ರಚೋದಿಸಬಹುದೆಂದು ಆಶಿಸಿದ. ಹ್ಯಾನಿಬಲ್‌ನ ವಿನಾಶದ ಮಾರ್ಗವನ್ನು ಫೇಬಿಯಸ್ ಸಮೀಪದಲ್ಲೇ ಅನುಸರಿಸಿದರೂ,ಸ್ವತಃ ಯುದ್ಧ ಮಾಡಲು ನಿರಾಕರಿಸಿ,ರಕ್ಷಣಾಸ್ಥಾನದಲ್ಲಿ ಉಳಿದ. ಫೇಬಿಯಸ್‌ನ ಈ ರೀತಿಯ ಯುದ್ಧ ನೀತಿಯು ಅನೇಕ ರೋಮನ್ನರಿಗೆ ಅಪ್ರಿಯವಾಗಿತ್ತು ಹಾಗೂ ಇದು ಹೇಡಿತನದ ರೂಪವೆಂದು ನಂಬಿದ್ದರು.
ಈಗಾಗಲೇ ನಾಶವಾಗಿ ಹೋಗಿದ್ದ ಕ್ಯಾಮ್ಪೆನಿಯಾದ ಕೆಳಪ್ರದೇಶದಲ್ಲಿ ಉಳಿದುಕೊಳ್ಳುವುದು ಹ್ಯಾನಿಬಲ್‌ನಿಗೆ ಸರಿ ಕಾಣಲಿಲ್ಲ. ಆದರೆ, ಕ್ಯಾಮ್ಪೆನಿಯಾದಿಂದ ಹೊರಗೆ ಹೋಗುವ ಎಲ್ಲ ಕಣಿವೆಮಾರ್ಗಗಳನ್ನು ಫೇಬಿಯಸ್ ಮುಚ್ಚಿಸಿದ್ದ. ಇದರಿಂದ ತಪ್ಪಿಸಿಕೊಳ್ಳಲು ಕಾರ್ತಾಜಿನಿಯನ್ ಸೈನ್ಯವು ಕಾಡಿನ ಮುಖಾಂತರ ತಪ್ಪಿಸಿಕೊಳ್ಳುತ್ತಿದೆ ಎಂಬ ಭ್ರಮೆ ಸೃಷ್ಟಿಸಿ, ಹ್ಯಾನಿಬಲ್ ರೋಮನ್ನರಿಗೆ ವಂಚಿಸಿದ. ಇದರಿಂದಾಗಿ, ರೋಮ್ ಸೈನ್ಯವು ಹ್ಯಾನಿಬಲ್ ಹಿಡಿಯಲು ಕಾಡಿನ ಕಡೆಗೆ ಧಾವಿಸಿತು.ಹ್ಯಾನಿಬಾಲ್ ಸೇನೆಯು ಕಣಿವೆಯನ್ನು ಆಕ್ರಮಿಸಿಕೊಂಡಿತು ಹಾಗೂ ಅವನ ಸೇನೆಯು ಯಾವುದೇ ಪ್ರತಿರೋಧವಿಲ್ಲದೇ ಕಣಿವೆಯನ್ನು ದಾಟಿತು. ಫೇಬಿಯಸ್ ದಾಳಿಮಾಡುವಷ್ಟು ಸಮೀಪದಲ್ಲಿದ್ದರೂ, ಅವನ ಒಳಮನಸ್ಸು ಎಚ್ಚರಿಸಿತು. ಕಾರ್ಯತಂತ್ರದ ವಾಸನೆಯನ್ನು ಗ್ರಹಿಸಿದ(ಸರಿಯಾಗಿ)ಅವನು ದಾಳಿ ಮಾಡದೇ ಉಳಿದ. ಚಳಿಗಾಲ ಕಳೆಯಲು ಹ್ಯಾನಿಬಲ್ ಅಪೂಲಿಯಾಸಮತಟ್ಟು ಪ್ರದೇಶದಲ್ಲಿ ಉಳಿದುಕೊಂಡ. ಎಡ್ರಿಯನ್ ಗೊಲ್ದ್ಸ್ ವರ್ದಿಯವರ ಪ್ರಕಾರ, "ಫೇಬಿಯಸ್‌ನಿಂದ ಪಾರಾಗುವ ಮೂಲಕ ಹ್ಯಾನಿಬಲ್‌ನ ಸಾಧನೆಯೇನೆಂದರೆ ಅದ್ಭುತ ಪ್ರಾಚೀನ ಸಮರತಂತ್ರವನ್ನು ಪ್ರದರ್ಶಿಸಿದ. ಅವನ ಯುದ್ಧ ನೀತಿಗಳು ಯುದ್ಧಗಳ ಬಗ್ಗೆ ಬರೆಯಲಾದ ಎಲ್ಲ ಇತಿಹಾಸಗಳಲ್ಲಿ ಉಲ್ಲೇಖಿಸಲಾದವಲ್ಲದೆ, ನಂತರದ ಅನೇಕ ಮಿಲಿಟರಿ ಕೈಪಿಡಿಗಳಲ್ಲಿ ಬಳಸಲಾಯಿತು." .[೩೧] ಇದು ಫೇಬಿಯಸ್ ಪ್ರತಿಷ್ಠೆಗೆ ತೀವ್ರ ಪೆಟ್ಟಾಗಿತ್ತು.ಇದಾದ ನಂತರ ಶೀಘ್ರದಲ್ಲೇ ಅವನು ಅಧಿಕಾರದ ಅವಧಿ ಮುಗಿಯಿತು.
ಕ್ಯಾನಿ ಯುದ್ಧ
ಬದಲಾಯಿಸಿ216 BCಯ ವಸಂತ ಕಾಲದಲ್ಲಿ, ಹ್ಯಾನಿಬಲ್ ಪ್ರಾರಂಭದ ಹೆಜ್ಜೆಯಿಟ್ಟು,ಅಪೂಲಿಯನ್ ಪ್ರದೇಶದ ಕ್ಯಾನೆಯ ದೊಡ್ಡ ಪ್ರಮಾಣದ ಪೂರೈಕೆ ಉಗ್ರಾಣವನ್ನು ಕೈವಶ ಮಾಡಿಕೊಂಡ. ಕ್ಯಾನೆಗೆ ಮುತ್ತಿಗೆ ಹಾಕುವ ಮೂಲಕ ಹ್ಯಾನಿಬಲ್ ರೋಮನ್ನರು ಮತ್ತು ಅವರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುವ ನಿರ್ಣಾಯಕ ಮೂಲದ ನಡುವೆ ಸ್ವತಃ ಸ್ಥಾನ ಆಕ್ರಮಿಸಿದ.[೩೨] ವರ್ಷ 216 BCಯಲ್ಲಿ ರೋಮ್ ಸೆನೆಟ್ ಕಾನ್ಸುಲರ್ ಚುನಾವಣೆಗಳನ್ನು ಆರಂಭಿಸಿದಾಗ,ಅವರು ಗೇಯಸ್ ಟೆರೆನ್ಶಿಯಸ್ ವಾರೋ ಮತ್ತು ಲುಸಿಯಸ್ ಎಮಿಲಿಯಸ್ ಪಾಲಿಸ್ ರನ್ನು ಕಾನ್ಸಲ್‌ಗಳಾಗಿ ಆಯ್ಕೆ ಮಾಡಿದರು. ಈ ಅವಧಿಯಲ್ಲಿ, ರೋಮ್ ಸೈನ್ಯಬಲದ ಮೂಲಕ ಯಶಸ್ಸು ಸಾಧಿಸುವ ಆಶಯದೊಂದಿಗೆ,ಅಭೂತಪೂರ್ವ ಗಾತ್ರದ ಹೊಸ ಸೇನೆಯನ್ನು ಕಟ್ಟಿತು. ಸೈನ್ಯದಲ್ಲಿ 1,00,000ದಷ್ಟು ಸೈನಿಕರಿದ್ದರೆಂದು ಕೆಲವರು ಅಂದಾಜು ಮಾಡಿದ್ದರು. ಆದರೆ, ಸರಿಸುಮಾರು 60-80,000 ಸೈನಿಕರು ಇದ್ದಿರಬಹುದಾದ ಸಂಭವನೀಯತೆ ಇತ್ತು.[೩೩]
ರೋಮನ್ ಮತ್ತು ಕಾನ್ಸಲರ ಮೈತ್ರಿ ಸೈನ್ಯದಳಗಳು ಹ್ಯಾನಿಬಲ್‌ನನ್ನು ಎದುರಿಸಲು ಸಂಕಲ್ಪಿಸಿ,ದಕ್ಷಿಣಾಭಿಮುಖವಾಗಿಅಪೂಲಿಯಾ ದತ್ತ ಮುನ್ನಡೆದವು. ತರುವಾಯ ಓಫಿಡಿಸ್ ನದಿಯ ಎಡದಂಡೆಯ ಮೇಲೆ ಹ್ಯಾನಿಬಲ್ ಉಪಸ್ಥಿತಿಯನ್ನು ಪತ್ತೆ ಮಾಡಿದ ರೋಮನ್ ಸೈನ್ಯಗಳು ಆರು ಮೈಲಿಗಳ (10 km) ದೂರದಲ್ಲಿ ಬೀಡುಬಿಟ್ಟವು. ಇಲ್ಲಿ ಇಬ್ಬರೂ ಕಾನ್ಸುಲ್ ಸೈನ್ಯಗಳನ್ನು ಒಂದುಗೂಡಿಸಲಾಯಿತು. ದಿನದ ಆಧಾರದಲ್ಲಿ ಸರದಿಯಂತೆ ಕಾನ್ಸಲರು ಸೇನೆಯ ಪರ್ಯಾಯ ಆಧಿಪತ್ಯ ವಹಿಸಿದರು. ಮೊದಲ ದಿನ ಆಧಿಪತ್ಯ ವಹಿಸಿದ ಕಾನ್ಸಲ್ ವಾರೋ, ದುಡುಕಿನ, ಅಹಂಕಾರದ ಸ್ವಭಾವ ಹೊಂದಿದ್ದ. ಇವನು ಹ್ಯಾನಿಬಲ್‌ನನ್ನು ಸೋಲಿಸಲು ಧೃಡ ನಿರ್ಧಾರ ಮಾಡಿದ.[೩೩] ವಾರೋನ ದೌರ್ಬಲ್ಯಗಳ ಲಾಭ ಪಡೆದ ಹ್ಯಾನಿಬಲ್ಸುತ್ತುಗಟ್ಟುವಿಕೆ ತಂತ್ರ (ಶತ್ರುಸೈನ್ಯದ ಎರಡೂ ಬದಿಯಲ್ಲಿ ಆಕ್ರಮಣ)ದ ಮೂಲಕ ಅವನನ್ನು ಬಲೆಗೆ ಕೆಡವಿದ. ಇದರಿಂದ ಯುದ್ಧ ನಡೆಯುವ ಪ್ರದೇಶವನ್ನು ಕುಗ್ಗಿಸುವ ಮೂಲಕ ರೋಮನ್ನರ ಸಂಖ್ಯಾಬಲದ ಅನುಕೂಲ ನಿವಾರಿಸಿತು. ಹ್ಯಾನಿಬಲ್ ಗ್ಯಾಲಿಕ್ ಮತ್ತು ನುಮಿಡಿಯನ್ ಕುದುರೆಗಳನ್ನು ಹೊಂದಿದ ದಳಗಳೊಂದಿಗೆ, ಮಧ್ಯದಲ್ಲಿ ಕಾಲ್ದಳವನ್ನು ಅರ್ಧವೃತ್ತಾಕಾರದಲ್ಲಿ ನಿಲ್ಲಿಸಿದ.[೩೩] ಹ್ಯಾನಿಬಲ್ ಸೈನ್ಯದ ದುರ್ಬಲ ಕೇಂದ್ರ ಭಾಗಕ್ಕೆ ರೋಮ್ ಸೈನ್ಯ ನುಗ್ಗಿತು.ಆದರೆ ದಳಗಳಲ್ಲಿದ್ದ ಲಿಬ್ಯನ್ ಬಾಡಿಗೆಬಂಟರು,ಮತ್ತೊಂದು ದಿಕ್ಕಿಗೆ ಚಲಿಸಿ ಶತ್ರುಸೈನ್ಯದ ಬದಿಗಳ ಮೇಲೆ ದಾಳಿ ಮಾಡಿದರು. ಹ್ಯಾನಿಬಲ್ ಅಶ್ವಸೈನ್ಯದ ದಾಳಿಯು ಎದುರಿಸಲು ಅಸಾಧ್ಯವಾಗಿತ್ತು. ಹ್ಯಾನಿಬಲ್ ಸೈನ್ಯದ ಬಲಭಾಗದಲ್ಲಿದ್ದ ನುಮಿಡಿಯನ್ ಅಶ್ವಾರೋಹದಳ ವನ್ನು ನಿರ್ವಹಿಸುತ್ತಿದ್ದ ಅಶ್ವಾರೋಹದ ಅಧಿಪತಿ ಮಹಾರ್ಬಲ್ ತಮ್ಮನ್ನು ಎದುರಿಸಿದ ರೋಮನ್ ಅಶ್ವಾರೋಹ ದಳವನ್ನು ನುಚ್ಚುನೂರು ಮಾಡಿದ. ಎಡಭಾಗದಲ್ಲಿ ಹ್ಯಾನೊ ನೇತೃತ್ವದ ಗ್ಯಾಲಿಕ್ ಮತ್ತು ಸ್ಪೇನ್‌ನ ಭಾರಿ ಅಶ್ವದಳಗಳು ರೋಮ್ನ ದೊಡ್ಡ ಪ್ರಮಾಣದ ಅಶ್ವದಳವನ್ನು ಸೋಲಿಸಿದವು. ನಂತರ, ಕಾರ್ತೇಜ್‌ನ ಭಾರೀ ಅಶ್ವದಳ ಮತ್ತು ನುಮಿಡಿಯನ್ ಸೈನ್ಯವು ಹಿಂದಿನಿಂದ ರೋಮನ್ ಸೈನ್ಯದ ಮೇಲೆ ದಾಳಿ ಮಾಡಿತು. ಇದರ ಫಲವಾಗಿ, ರೋಮ್ ಸೈನ್ಯವು ತಪ್ಪಿಸಿಕೊಳ್ಳಲು ಮಾರ್ಗಗಳಿಲ್ಲದೇ ತಡವರಿಸಿತು.
ಇಂತಹ ಅತ್ಯುತ್ತಮ ತಂತ್ರಗಳಿಂದ ಹ್ಯಾನಿಬಲ್ ಚಿಕ್ಕ ಸೈನ್ಯ ಹೊಂದಿದ್ದರೂ,ಶತ್ರುಗಳ ಅಲ್ಪಾವಶೇಷದ ಸೈನ್ಯವನ್ನು ಬಿಟ್ಟು ಉಳಿದ ಎಲ್ಲ ಸೈನ್ಯದ ಮೇಲೆ ಮುತ್ತಿಗೆ ಹಾಕಿ ನಾಶಪಡಿಸಲು ಶಕ್ತನಾದ. ಒಂದು ಮೂಲದ ಪ್ರಕಾರ, ರೋಮ್‌ನ 50,000-70,000 ಸೈನಿಕರು ಕ್ಯಾನಿಯಲ್ಲಿ ಹತರಾದರು ಅಥವಾ ಸೆರೆಹಿಡಿಯಲಾಯಿತು.[೧೩] ಮೃತರಾದವರಲ್ಲಿ ರೋಮನ್ ಕಾನ್ಸುಲ್ ಲುಸಿಯಸ್ ಎಮಿಲಿಯಸ್ ಪಾಲಿಯಸ್, ನಂತರದ ವರ್ಷದ ಇಬ್ಬರು ಭಾವಿ ಕಾನ್ಸುಲ್‌ಗಳು , ಇಬ್ಬರು ಕ್ವೆಸ್ಟರ್(ಸಾರ್ವಜನಿಕ ಅಧಿಕಾರಿ)ಗಳು,ನಲವತ್ತೆಂಟು ಮಿಲಿಟರಿ ಟ್ರಿಬ್ಯೂನ್‌ಗಳ ಪೈಕಿ ಇಪ್ಪತ್ತೊಂಭತ್ತು ಮಂದಿ ಹಾಗೂ ಹೆಚ್ಚುವರಿ ಎಂಬತ್ತು ಸೆನೆಟರುಗಳು(ರೋಮನ್ ಸೆನೆಟ್ 300ಕ್ಕಿಂತ ಹೆಚ್ಚು ಸದಸ್ಯರಿಲ್ಲದ ಸಂದರ್ಭದಲ್ಲಿ ಇದು ಆಡಳಿತ ವರ್ಗದ 25%-30%ರಷ್ಟು ಜನರನ್ನು ಒಳಗೊಂಡಿತ್ತು)ಸೇರಿದ್ದರು. ಈ ಕಾರಣದಿಂದ, ಕ್ಯಾನಿಯ ಯುದ್ದ ವು ಪ್ರಾಚೀನ ರೋಮ್ ಇತಿಹಾಸದಲ್ಲೇ ಒಂದು ಭಯಂಕರವಾದ ಸೋಲು ಮತ್ತು ಮಾನವ ಇತಿಹಾಸದಲ್ಲೇ ಅತೀ ಹೆಚ್ಚು ರಕ್ತಪಾತದ ಯುದ್ಧವಾಗಿ ಗುರುತಿಸಲ್ಪಡುತ್ತದೆ (ಒಂದೇ ದಿನದಲ್ಲಿ ಅಸಂಖ್ಯಾತ ಜೀವಗಳು ಬಲಿಯಾಗಿದ್ದಕ್ಕೆ ಸಂಬಂಧಿಸಿದಂತೆ).[೩೩] ಕ್ಯಾನಿ ಯುದ್ಧದ ನಂತರ, ಹ್ಯಾನಿಬಲ್‌ನನ್ನು ನೇರವಾಗಿ ಯುದ್ಧದಲ್ಲಿ ಎದುರಿಸಲು ರೋಮನ್ನರು ತೀವ್ರ ಹಿಂಜರಿದರು. ಬದಲಿಗೆ ತಮ್ಮ ಇಂಟೀರಿಯರ್ ಲೈನ್ಸ್(ಒಳ ಸೈನ್ಯಗಳು) ಪೂರೈಕೆ ಮತ್ತು ಸೈನ್ಯಬಲದ ಅನುಕೂಲಗಳನ್ನು ಅವಲಂಬಿಸಿ, ಅವನನ್ನು ದುರ್ಬಲಗೊಳಿಸಲು ಆದ್ಯತೆ ನೀಡಿದರು. ಇದರ ಫಲವಾಗಿ ಹ್ಯಾನಿಬಲ್ ಈ ಯುದ್ಧದ ನಂತರ ಇಟಲಿಯಲ್ಲಿ ಯಾವುದೇ ದೊಡ್ಡ ಯುದ್ಧ ಮಾಡಲಿಲ್ಲ. ಕಾರ್ತೇಜ್ ನಿಂದ ಸಾಕಷ್ಟು ಹಣ, ಯುದ್ಧ ಸಲಕರಣೆಗಳು ಮತ್ತು ಸೈನಿಕರ-ಮುಖ್ಯವಾಗಿ ಮುತ್ತಿಗೆಗಾರರ ಸಾಮಗ್ರಿಗಳ ಪೂರೈಕೆಯ ಬದ್ಧತೆಯ ಕೊರತೆಯಿಂದ ಹ್ಯಾನಿಬಲ್ ರೋಮ್ ಮೇಲೆ ದಾಳಿ ಮಾಡಲು ತಿರಸ್ಕರಿಸಿದನೆಂದು ನಂಬಲಾಗಿದೆ. ಕಾರಣಗಳೇನೇ ಇರಲಿ, ಈ ಆಯ್ಕೆಯು ಮಹಾರ್ಬಲ್ ಹೇಳಿಕೆಗೆ ಪ್ರೇರೇಪಣೆ ನೀಡಿತು., "ಹ್ಯಾನಿಬಲ್, ನಿನಗೆ ಜಯ ಗಳಿಸುವುದು ಗೊತ್ತೇ ಹೊರತು ಅದನ್ನು ಬಳಸಿಕೊಳ್ಳುವುದು ಗೊತ್ತಿಲ್ಲ." [೩೪]
ಈ ಗೆಲುವಿನ ಮನೋಸ್ಥೈರ್ಯದ ಪರಿಣಾಮ ಹ್ಯಾನಿಬಲ್ ಹೋರಾಟಕ್ಕೆ ಇಟಲಿಯ ಅನೇಕ ಭಾಗಗಳು ಹ್ಯಾನಿಬಲ್ ಜೊತೆಯಾದವು.[೩೫] ಪೋಲಿಬಿಯಸ್ ಹೇಳುವಂತೆ, "ರೋಮ್ ಮೈತ್ರಿಕೂಟಗಳ ವರ್ತನೆಯಿಂದ ಕ್ಯಾನಿ ಸೋಲು ಮುಂಚಿನ ಸೋಲುಗಳಿಗಿಂತ ಎಷ್ಟು ಗಂಭೀರ ಎನ್ನುವುದನ್ನು ಕಾಣಬಹುದು.ಆ ದುರ್ದಿನಕ್ಕಿಂತ ಮುಂಚೆ ಮಿತ್ರರ ನಿಷ್ಠೆಯು ಅಬಾಧಿತವಾಗಿತ್ತು. ರೋಮನ್ ಅಧಿಕಾರದ ಬಗ್ಗೆ ಅವರು ನಿರಾಶರಾದ ಸರಳ ಕಾರಣದಿಂದಾಗಿ ಅದು ಕಂಪಿಸಲು ಆರಂಭವಾಯಿತು" [೩೬] ಅದೇ ವರ್ಷ, ಸಿಸಿಲಿ ಯಲ್ಲಿ ಗ್ರೀಸ್ ನ ನಗರಗಳು ರೋಮ್ ಆಳ್ವಿಕೆ ವಿರುದ್ಧ ದಂಗೆ ಎದ್ದವು. ಅಲ್ಲದೆ,ಮೆಸಿಡೋನಿಯಾ ದ ದೊರೆ V ನೇ ಫಿಲಿಪ್ ನು ಹ್ಯಾನಿಬಲ್ ನಿಗೆ ಬೆಂಬಲ ಸೂಚಿಸುವುದರ ಮೂಲಕ ರೋಮ್ ವಿರುದ್ಧ ಮೊದಲನೇ ಮೆಸಿಡೋನಿಯಾ ಯುದ್ಧ ಕ್ಕೆ ಚಾಲನೆ ನೀಡಿದನು. ಇಷ್ಟೇ ಅಲ್ಲದೆ, ಹ್ಯಾನಿಬಲ್ . ಹೊಸದಾಗಿ ನೇಮಕಗೊಂಡಿದ್ದ ಸಿರಾಕ್ಯುಜ್ ನ ಹೈರೋನಿಮಸ್ ನ ಜತೆಗೂ ಮೈತ್ರಿ ಮಾಡಿಕೊಂಡ. ಒಂದು ವಾದದ ಪ್ರಕಾರ, ಒಂದು ವೇಳೆ ಕಾರ್ತೇಜ್‌ನಿಂದ ಹ್ಯಾನಿಬಲ್‌ನಿಗೆ ಸಾಕಷ್ಟು ಯುದ್ಧ ಸಲಕರಣೆಗಳು ಸಿಕ್ಕಿದ್ದಿದ್ದರೆ, ಅವನು ರೋಮ್ ಮೇಲೆ ನೇರ ದಾಳಿ ಮಾಡಿ ಗೆಲ್ಲಬಹುದಾಗಿತ್ತು. ಸದ್ಯಕ್ಕೆ ಅವನನ್ನು ವಿರೋಧಿಸಿದ ಕೋಟೆಗಳನ್ನು ಅಡಗಿಸುವುದರಲ್ಲಿ ತೃಪ್ತಿ ಕಂಡುಕೊಂಡ. 216 BCಯ ಏಕಮಾತ್ರ ಗಮನಾರ್ಹ ಘಟನೆಯೆಂದರೆ, ಇಟಲಿಯ ಎರಡನೇ ಮಹಾನಗರ ಕಾಪುವಾ ಸೇರಿದಂತೆ ಇಟಲಿಯ ಅನೇಕ ಪ್ರಾಂತ್ಯಗಳು ರೋಮ್‌ನಿಂದ ಬೆಂಬಲ ಹಿಂತೆಗೆದುಕೊಂಡದ್ದು ಮತ್ತು ಕಾಪುವಾವನ್ನು ಹ್ಯಾನಿಬಲ್ ತನ್ನ ಹೊಸ ನೆಲೆಯಾಗಿ ಮಾಡಿಕೊಂಡಿದ್ದು. ಆದರೂ, ಇಟಲಿಯ ಕೆಲವೇ ಕೆಲವು ನಗರ ರಾಜ್ಯಗಳು ಅವನಿಗೆ ಬೆಂಬಲ ಸೂಚಿಸಿದವು.
ಇಕ್ಕಟ್ಟಿನ ಸ್ಥಿತಿ
ಬದಲಾಯಿಸಿಇಟಲಿಯಲ್ಲಿನ ಈ ಮಹಾಯುದ್ಧವು ವ್ಯೂಹಾತ್ಮಕ ಬಿಕ್ಕಟ್ಟಿನಲ್ಲಿ ಉಳಿಯಿತು. ಹ್ಯಾನಿಬಲ್‌ನನ್ನು ಸೋಲಿಸುವ ಕಾರ್ಯಸಾಧ್ಯ ವಿಧಾನ ಫೇಬಿಯಸ್ ತಮಗೆ ಬೋಧಿಸಿದ ದುರ್ಬಲಗೊಳಿಸುವ ಯುದ್ಧತಂತ್ರಗಳನ್ನು ಬಳಸಿಕೊಳ್ಳುವುದು ಎಂದು ರೋಮನ್ನರಿಗೆ ಅಂತಿಮವಾಗಿ ಅರಿವಾಯಿತು.[೩೭] ಹ್ಯಾನಿಬಲ್ ನನ್ನು ನೇರವಾಗಿ ಎದುರಿಸದೆ, ಗೆರಿಲ್ಲಾ ತಂತ್ರಗಳಿಂದ ಎದುರಿಸಿದ್ದರಿಂದ ಫೇಬಿಯಸ್‌ಗೆ "ಕಂಕ್ಟೆಟರ್" ("ನಿಧಾನ ಗತಿಯವನು") ಎಂಬ ಅಡ್ಡ ಹೆಸರು ಇತ್ತು.[೩೮] ರೋಮನ್ನರು ಹ್ಯಾನಿಬಲ್‌ನನ್ನು ದೊಡ್ಡ ಪ್ರಮಾಣದ ಯುದ್ಧದಿಂದ ವಂಚಿತನನ್ನಾಗಿ ಮಾಡಿದರು. ಬದಲಿಗೆ, ಸಣ್ಣದಾದ ಬಹು ಸೈನ್ಯಗಳಿಂದ ದುರ್ಬಲಗೊಂಡ ಅವನ ಸೇನೆಯ ಮೇಲೆ ಆಕ್ರಮಣ ನಡೆಸಿ,ಅವನಿಗೆ ಬಳಲಿಕೆ ಉಂಟುಮಾಡಿದ್ದಲ್ಲದೇ,ಪಡೆಗಳಲ್ಲಿ ಅಶಾಂತಿ ಮೂಡಿಸಿದರು.[೧೩] ಮುಂದಿನ ಕೆಲವು ವರ್ಷಗಳವರೆಗೆ ಹ್ಯಾನಿಬಲ್ ಭೂದಹನ ಯುದ್ಧ ನೀತಿಯನ್ನು ಬಲವಂತದಿಂದ ತಾಳಿಕೊಳ್ಳಬೇಕಾಯಿತು ಹಾಗೂ ದಕ್ಷಿಣ ಇಟಲಿಯಾದ್ಯಂತ ಸುದೀರ್ಘ ಮತ್ತು ಪರಿಣಾಮಕಾರಿಯಲ್ಲದ ಕಾರ್ಯಾಚರಣೆಗೆ ಸ್ಥಳೀಯ ಆಹಾರ ದಾಸ್ತಾನು ಬಳಸಿಕೊಳ್ಳಬೇಕಾಯಿತು. ಅವನ ತಕ್ಷಣದ ಉದ್ದೇಶಗಳು ಕ್ಯಾಮ್ಪೆನಿಯಾ ದ ಸುತ್ತಲಿನ ನಗರಗಳ ಮೇಲೆ ಸಣ್ಣ ಕಾರ್ಯಾಚರಣೆಗಳಿಗೆ ಮಾತ್ರ ಕೇಂದ್ರೀಕತವಾದವು.
ಪಡೆಗಳು ಅವರ ಸೇನಾಧಿಕಾರಿಗಳಿಂದ ಪ್ರತ್ಯೇಕವಾದರು ಹಾಗೂ ಸೇನಾಧಿಕಾರಿಗಳಿಗೆ ತಮ್ಮ ಪಡೆಗಳನ್ನು ಉಳಿಸಿಕೊಳ್ಳುವುದು ಕಷ್ಟವಾಯಿತು. ಅವನ ನಷ್ಟಗಳನ್ನು ತುಂಬಿಕೊಡಲು ಅವನ ಸ್ವದೇಶಿ ಸರ್ಕಾರವಾಗಲಿ ಅಥವಾ ಹೊಸ ಮಿತ್ರ ಮೆಸೆಡೋನ್‌ನ ಫಿಲಿಪ್ V ನೆರವಾಗಲಿಲ್ಲ.ದಕ್ಷಿಣ ಇಟಲಿಯಲ್ಲಿ ಅವನ ಸ್ಥಾನಕ್ಕೆ ಹೆಚ್ಚೆಚ್ಚು ಕುಂದುಂಟಾಯಿತು ಹಾಗೂ ಅಂತಿಮವಾಗಿ ರೋಮ್ ನಗರವನ್ನು ಗೆಲ್ಲುವ ಅವಕಾಶ ಲವಲೇಶವೂ ಇಲ್ಲದಂತಾಯಿತು. ಕಾರ್ತೇಜ್ ನಿಂದ ಯಾವುದೇ ಸಹಾಯ ದೊರೆಯದಿದ್ದರೂ, ಹ್ಯಾನಿಬಲ್ ತನ್ನ ಸಣ್ಣ ಸೈನ್ಯದೊಂದಿಗೆ 212 BC ಯಲ್ಲಿ ಎರಡು ರೋಮನ್ ಸೈನ್ಯ ಪಡೆಗಳನ್ನು ನಾಶಪಡಿಸಿದನು. ಅಲ್ಲದೆ,ಒಂದು ಹಂತದಲ್ಲಿ 208 BC ಯ ಯುದ್ಧದಲ್ಲಿ, ಇಬ್ಬರು ಕಾನ್ಸುಲ್ ರನ್ನು (ಅವರಲ್ಲಿ ಪ್ರಸಿದ್ಧ ಮಾರ್ಕಸ್ ಕ್ಲಾಡಿಯಸ್ ಮಾರ್ಸೆಲಸ್ ಒಬ್ಬನು) ಕೊಂದನು. ಆದರೆ, ಹ್ಯಾನಿಬಲ್ ಅವನ ಮಿತ್ರಕೂಟಗಳಿಂದ ಯಾವುದೇ ಸಂಪನ್ಮೂಲಗಳ ಕೊಡುಗೆಯಿಲ್ಲದೇ,ಕಾರ್ತೇಜ್‌ನಿಂದ ಸೈನ್ಯಬಲದ ನೆರವಿಲ್ಲದೆ ಹ್ಯಾನಿಬಲ್‌ಗೆ ಯಾವುದೇ ಗಮನಾರ್ಹ ವಿಜಯಗಳು ಸಿಗಲಿಲ್ಲ. ಹೀಗೆ,ಇಟಲಿಯ ಮಿತ್ರಕೂಟಗಳ ಅಸಮರ್ಪಕ ಬೆಂಬಲದಿಂದ,ಸರ್ಕಾರದಿಂದ ಪರಿತ್ಯಕ್ತನಾಗಿ(ಅಸೂಯೆ ಅಥವಾ ಕಾರ್ತೇಜ್ ಅತಿಯಾಗಿ ವಿಳಂಬಿಸಿದ ಕಾರಣದಿಂದಾಗಿ)ರೋಮ್ ಸಂಪನ್ಮೂಲಗಳನ್ನು ಸರಿಗಟ್ಟಲು ಅಸಮರ್ಥನಾಗಿ,ಹ್ಯಾನಿಬಲ್ ನಿಧಾನವಾಗಿ ನೆಲೆ ಕಳೆದುಕೊಂಡ. ಅವಕಾಶ ಸಿಕ್ಕಾಗಲೆಲ್ಲಾ ರೋಮನ್ನರನ್ನು ಸೋಲಿಸುತ್ತಿದ್ದ ಹ್ಯಾನಿಬಲ್ ನಿಗೆ ನಿರಂತರ ವ್ಯೂಹಾತ್ಮಕ ಪರಿಣಾಮ ಬೀರಿದ ನಿರ್ಣಾಯಕ ಗೆಲುವು ಅವನಿಗೆ ಸಿಗಲಿಲ್ಲ.
ಕಾರ್ತೇಜ್‌ನ ರಾಜಕೀಯದ ಸೂತ್ರವು ಒಂದು ಚಿಕ್ಕ ಆಡಳಿತ ವರ್ಗದ ಕೈಯಲ್ಲಿತ್ತು. ಕಾರ್ತೇಜ್ ನಲ್ಲಿ ಒಂದು ಸೆನೆಟ್ ಇದ್ದರೂ,ನಿಜವಾದ ಅಧಿಕಾರವು ಒಳಗಿನ "30 ಗಣ್ಯರ ಮಂಡಳಿಯ" ಹಾಗೂ ನೂರಾ ನಾಲ್ಕು ಎಂದೇ ಹೆಸರಾದ ನ್ಯಾಯಾಧೀಶರ ಮಂಡಳಿಯು ರಾಜಕೀಯ ಕುಟುಂಬಗಳ ಸದಸ್ಯರನ್ನು ಒಳಗೊಂಡಿತ್ತು. ಈ ಎರಡು ಪ್ರಮುಖ ಅಂಗಗಳು ಕಾರ್ತೇಜ್ ನ ಶ್ರೀಮಂತ ವ್ಯಾಪಾರಿ ಕುಟುಂಬಗಳನ್ನು ಒಳಗೊಂಡಿದ್ದವು. ಕಾರ್ತೇಜ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎರಡು ರಾಜಕೀಯ ಬಣಗಳು:"ಬಾರ್ಸಿಡ್ " (ಹ್ಯಾನಿಬಲ್ ನ ಮನೆತನದ ಹೆಸರು)ಎಂದೇ ಹೆಸರಾದ ಯುದ್ಧ ಪಕ್ಷ ಹಾಗೂ ಹ್ಯಾನೊII ದಿ ಗ್ರೇಟ್ ನೇತೃತ್ವದ ಶಾಂತಿಪಾಲನಾ ಪಕ್ಷಗಳು. ಹ್ಯಾನೋ ಕ್ಯಾನಿ ಯುದ್ಧದ ನಂತರ ಹ್ಯಾನಿಬಲ್ ಕೇಳಿದ ಸೈನಬಲ ಹೆಚ್ಚಳದ ಮನವಿಯನ್ನು ನಿರಾಕರಿಸಲು ಕಾರಣಕರ್ತನಾದ.
ಕಾರ್ತೇಜ್ ಸರ್ಕಾರದ ಪೂರ್ಣ ಬೆಂಬಲವಿಲ್ಲದೆಯೇ, ಹ್ಯಾನಿಬಲ್ ಆ ಯುದ್ಧವನ್ನು ಪ್ರಾರಂಭಿಸಿದ. ಸಾಗೆಂಟಮ್ ಮೇಲೆ ಅವನು ಮಾಡಿದ ದಾಳಿಯಿಂದಾಗಿ, ಕಾರ್ತೇಜ್ ಸರ್ಕಾರ ರೋಮ್ ಜೊತೆಗೆ ಯುದ್ಧ ಮಾಡುವ ಅಥವಾ ಐಬೇರಿಯಾ ದಲ್ಲಿ ತನ್ನ ಗೌರವ ಕಳೆದುಕೊಳ್ಳುವ ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು. ಕಾರ್ತೇಜ್ ವ್ಯೂಹಾತ್ಮಕ ಸಂಪನ್ಮೂಲಗಳ ಸಂಪೂರ್ಣ ಅಧಿಕಾರ ಕಾರ್ತೇಜ್ ಸರ್ಕಾರದ ಕೈಯಲ್ಲಿತ್ತೆ ಹೊರತು ಹ್ಯಾನಿಬಲ್ ಏನೂ ಮಾಡಲು ಸಾಧ್ಯವಿರಲಿಲ್ಲ. ಐಬೇರಿಯಾ ಅಥವಾ ಉತ್ತರ ಆಫ್ರಿಕಾದಿಂದ ಹ್ಯಾನಿಬಲ್ ಮೇಲಿಂದ ಮೇಲೆ ಹೆಚ್ಚಿನಪಡೆಗಳ ನೆರವನ್ನು ಕೇಳಿದ. ಯುದ್ಧದಲ್ಲಿ ಸೋತ ಹ್ಯಾನಿಬಲ್ ಪಡೆಗಳ ಜಾಗಗಳಲ್ಲಿ ಅತೀ ಕಡಿಮೆ ತರಬೇತಿ ಪಡೆದ, ಬಾಡಿಗೆಸೈನಿಕರನ್ನು ಇಟಲಿ ಮತ್ತು ಗೌಲ್‌ನಿಂದ ಭರ್ತಿ ಮಾಡಲಾಯಿತು. ದಂಡಯಾತ್ರೆಯುದ್ಧಕ್ಕೂ ಕಾರ್ತೇಜಿಯನ್ ಸರ್ಕಾರದ ವಾಣಿಜ್ಯ ಹಿತಾಸಕ್ತಿಗಳಿಂದಾಗಿ ಹ್ಯಾನಿಬಾಲ್ ಬದಲಿಗೆ ಐಬೀರಿಯದ ಹೆಚ್ಚುವರಿಸೇನೆಗೆ ಆದೇಶ ನೀಡಿದವು.
ಇಟಲಿಯಲ್ಲಿ ಹ್ಯಾನಿಬಲ್ ಹಿನ್ನಡೆ
ಬದಲಾಯಿಸಿ212 BC ಯಲ್ಲಿ ಹ್ಯಾನಿಬಲ್ ಟಾರೆನ್ಟಮ್ ವಶಪಡಿಸಿಕೊಂಡನಾದರೂ, ಬಂದರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಪರಿಸ್ಥಿತಿ ನಿಧಾನವಾಗಿ ಅವನ ವಿರುದ್ಧ,ರೋಮ್ ಪರವಾಗಿ ತಿರುಗತೊಡಗಿತು.
211 BC ಯಲ್ಲಿ, ರೋಮನ್ನರು ಕಪುವಾವನ್ನು ಎರಡು ಬಾರಿ ಮುತ್ತಿಗೆ ಹಾಕಿ,ವಶಪಡಿಸಿಕೊಂಡರು. ಸಿರಾಕ್ಯುಜ್ ಪ್ರದೇಶದಲ್ಲಿ ಗೆಲುವನ್ನು ಪೂರ್ಣಗೊಳಿಸಿ,ಸಿಸಿಯಲ್ಲಿ ಕಾರ್ತೇಜಿಯನ್ ಸೇನೆಯನ್ನು ನಾಶಪಡಿಸಿದರು. ಇದಾದ ಸ್ವಲ್ಪ ಅವಧಿಯ ನಂತರ, ರೋಮನ್ನರು V ನೇ ಫಿಲಿಪ್‌ನನ್ನು ಸೋಲಿಸಲು ಸಿಸಿಲಿಯನ್ನು ಸಾಂತ್ವನಗೊಳಿಸಿಈಟೋಲಿಯನ್ ಲೀಗ್ ಜೊತೆಗೆ ಒಪ್ಪಂದ ಮಾಡಿಕೊಂಡ. V ನೇ ಫಿಲಿಪ್ ಇಟಲಿಯಲ್ಲಿ ರೋಮ್ ಆಕ್ರಮಣವನ್ನು ಬಳಸಿಕೊಂಡು ಇಲಿರಿಯಾ ವನ್ನು ಗೆಲ್ಲಲು ಯೋಜನೆ ಹಾಕಿದ್ದ. ಆದರೆ ಈಗ ಒಂದೇ ಬಾರಿಗೆ ಅನೇಕ ಕಡೆಗಳಿಂದ ದಾಳಿಗೆ ತುತ್ತಾದ ಹಾಗೂ ರೋಮ್ ಮತ್ತು ಅದರ ಗ್ರೀಕ್ ಮಿತ್ರಸೈನ್ಯಗಳಿಂದ ಸೋಲಪ್ಪಿದ. ಅತ್ತ ಅಪೂಲಿಯಾದಲ್ಲಿ, ಹ್ಯಾನಿಬಲ್ ಹರ್ಡನಿಯಾದ ಫಲ್ವಿಯಸ್‌ನನ್ನು ಸೋಲಿಸಿದ. ಆದರೆ, ಮರು ವರ್ಷವೇ ಅವನು ಟಾರೆಂಟಮ್ ಪ್ರದೇಶವನ್ನು ಕಳೆದುಕೊಂಡ.
210 BC ಯಲ್ಲಿ,ಹ್ಯಾನಿಬಲ್ ಅಪೂಲಿಯದ ಹರ್ಡೋನಿಯಕ್(ಆಧುನಿಕ ಒರ್ಡೋನಾ)ದಲ್ಲಿ ಪ್ರೊಕಾನ್ಸುಲರ್ ಸೇನೆಗೆ ತೀವ್ರ ಸೋಲನ್ನು ಉಂಟುಮಾಡಿ ಪ್ರಾಬಲ್ಯ ಮೆರೆದ. ಹ್ಯಾನಿಬಲ್ 208 BC ಯಲ್ಲಿ, ಲೋಕ್ರಿ ಎಪಿಜಫ್ರಿ(Locri Epizephyri)ಗೆ ಮುತ್ತಿಗೆ ಹಾಕುತ್ತಿದ್ದ ರೋಮನ್ ಸೈನ್ಯವನ್ನು ನಾಶಪಡಿಸಿದ. ಆದರೆ, 209 BC ಯಲ್ಲಿ ಅವನು ಟಾರೆಂಟಮ್ ಕಳೆದುಕೊಂಡ. ಅಲ್ಲದೆ, ಸಾಮ್ನಿಯಮ್ ಮತ್ತು ಲುಕಾನಿಯಾ ಗಳ ರೋಮನ್ನರು ತಾವು ಸೋತಿದ್ದ ಪ್ರದೇಶಗಳಲ್ಲಿ ಮರುವಿಜಯ ಸಾಧಿಸಿದರು.ಹೀಗಾಗಿ ದಕ್ಷಿಣ ಇಟಲಿಯಲ್ಲಿ ಹ್ಯಾನಿಬಲ್ ತನ್ನ ಹಿಡಿತವನ್ನು ಬಹುತೇಕ ಕಳೆದುಕೊಂಡ. 207 BCಯಲ್ಲಿ ಮತ್ತೆ ಅಪೋಲಿಯಾ ಪ್ರವೇಶಿಸಲು ಯಶಸ್ವಿಯಾದ ಹ್ಯಾನಿಬಲ್, ತನ್ನ ಸಹೋದರ ಹ್ಯಾಸ್ದ್ರುಬಲ್ ಬರ್ಕಾ ಜೊತೆ ಸೇರಿಕೊಂಡು ರೋಮ್ ಮೇಲೆ ದಾಳಿ ಮಾಡಲು ಒಪ್ಪಂದದ ಕ್ರಮಗಳಿಗೆ ಕಾದ. ಆದರೆ, ತನ್ನ ಸಹೋದರ ಮೆಟೋರೆಸ್ ನಲ್ಲಿ ಸೋತು,ಸಾವಪ್ಪಿದ ಸುದ್ದಿ ಕೇಳಿದ ಹ್ಯಾನಿಬಲ್ ಬ್ರಟಿಯಮ್ ಗೆ ತೆರಳಿ ನಂತರದ ವರ್ಷಗಳಲ್ಲಿ ಜೀವನ ಸಾಗಿಸಿದ. ಅವನ ಸೋದರನ ತಲೆ ಕಡಿದು ಇಟಲಿಯಾದ್ಯಂತ ಮೆರವಣಿಗೆಯಲ್ಲಿ ಒಯ್ಯಲಾಯಿತು ಹಾಗೂ ರೋಮನ್ ಗಣರಾಜ್ಯದ ಉಕ್ಕಿನ ಹೊದಿಕೆಯ ಇಚ್ಛಾಶಕ್ತಿಯ ಸಂದೇಶವಾಗಿ ಹ್ಯಾನಿಬಲ್ ಶಿಬಿರದ ಕಟೆಕಟೆಯೊಳಗೆ ತಲೆಯನ್ನು ಎಸೆಯಲಾಯಿತು. ಈ ಎಲ್ಲ ಘಟನೆಗಳ ಮಿಶ್ರಣವು ಇಟಲಿಯಲ್ಲಿ ಹ್ಯಾನಿಬಲ್ ಯಶಸ್ಸಿನ ಮುಕ್ತಾಯವನ್ನು ಸೂಚಿಸಿದವು. ಆತನ ಸಹೋದರ ಮಾಗೋ ಬರ್ಕಾ ಲಿಗಿರಿಯಾ ದಲ್ಲಿ (205 BC-203 BC) ಮತ್ತು ಮೆಸಿಡೋನ್ ನ ಫಿಲಿಪ್ ಜತೆ ಅವನ ಮಾತುಕತೆಗಳು ವಿಫಲಗೊಳ್ಳುವುದರೊಂದಿಗೆ, ಇಟಲಿಯಲ್ಲಿ ಅವನ ಪ್ರಾಬಲ್ಯಕ್ಕೆ ಚೈತನ್ಯ ನೀಡುವ ಕೊನೆಯ ಆಸೆ ಬತ್ತಿಹೋಯಿತು. ಸತತವಾಗಿ ಹದಿನೈದು ವರ್ಷಗಳವರೆಗೆ ಇಟಲಿಯಲ್ಲಿ ಹೋರಾಟ ಮಾಡಿ,ಕಾರ್ತೇಜ್‌ನ ಮಿಲಿಟರಿ ದೆಸೆಗಳು ಶೀಘ್ರಗತಿಯಲ್ಲಿ ಕುಸಿಯುತ್ತಿದ್ದಂತೆ, ರೋಮ್‌ನ ಸಿಪಿಯೋ ಆಫ್ರಿಕಾನಸ್ ನ ದಾಳಿಯಿಂದ ಕಾರ್ತೇಜ್‌ನ್ನು ರಕ್ಷಿಸಲು 203 BC ಯಲ್ಲಿ ಅವನನ್ನು ತಾಯ್ನಾಡಿಗೆ ಕರೆಸಿಕೊಳ್ಳಲಾಯಿತು.
ಎರಡನೇ ಪ್ಯುನಿಕ್ ಯುದ್ಧದ ಮುಕ್ತಾಯ (203-201 BC)
ಬದಲಾಯಿಸಿಮರಳಿ ಕಾರ್ತೇಜ್‌ಗೆ
ಬದಲಾಯಿಸಿ203 BC ಯಲ್ಲಿ, ಕಾರ್ತೇಜ್‌ನ ಯುದ್ಧದ ಪಕ್ಷವು ಹ್ಯಾನಿಬಲ್‌ನನ್ನು ಇಟಲಿಯಿಂದ ವಾಪಸು ಕರೆಸಿಕೊಂಡಿತು. ತಾನು ಸಾಹಸಯಾತ್ರೆಗಳ ದಾಖಲೆಗಳನ್ನು ಪ್ಯುನಿಕ್ ಮತ್ತು ಗ್ರೀಕ್ ಭಾಷೆಗಳಲ್ಲಿ ಕ್ರೋಟೋನಾದ ಜೂನೋ ದೇವಾಲಯದ ಕಂಚಿನ ಫಲಕಗಳ ಮೇಲೆ ಕೆತ್ತಿಸಿದ. ಇದಾದ ಮೇಲೆ ಅವನು ಸಮುದ್ರ ಮಾರ್ಗವಾಗಿ ಆಫ್ರಿಕಾಗೆ ತೆರಳಿದ.[೩೯] ಹ್ಯಾನಿಬಲ್‌ನ ಆಗಮನದಿಂದ ಪ್ರಾಬಲ್ಯ ಪಡೆದ ಯುದ್ಧ ಪಕ್ಷವು ಅವನನ್ನು ಆಫ್ರಿಕಾದ ಕಡ್ಡಾಯವಾಗಿ ನೇಮಿಕವಾದ ಸೈನಿಕ ಪಡೆ ಮತ್ತು ಇಟಲಿಯ ಬಾಡಿಗೆ ಸೈನಿಕರ ದಂಡನಾಯಕನನ್ನಾಗಿ ನೇಮಿಸಿತು. 202 BC ಯಲ್ಲಿ ಹ್ಯಾನಿಬಲ್ ಸಿಪಿಯೋನನ್ನು ಫಲಪ್ರದವಾಗದ ಶಾಂತಿ ಸಮಾವೇಶದಲ್ಲಿ ಭೇಟಿ ಮಾಡಿದ. ಪರಸ್ಪರ ಮೆಚ್ಚಿಗೆಯ ನಡುವೆ, ಕಾರ್ತೇಜರ ಅಪ್ರಾಮಾಣಿಕ ಭರವಸೆಗಳ ಬಗ್ಗೆ ರೋಮನ್ನರ ಆರೋಪಗಳಿಂದ ಮಾತುಕತೆಗಳು ವಿಫಲವಾದವು. ಸಾಗಂಟಮ್ ಮೇಲೆ ಕಾರ್ತೇಜ್ ಸೈನ್ಯದ ದಾಳಿಯಿಂದ ಪ್ರಥಮ ಪ್ಯುನಿಕ್ ಯುದ್ಧಕ್ಕೆ ತೆರೆಎಳೆದ ಒಪ್ಪಂದ ಹಾಗೂ ಸ್ಥಗಿತಗೊಂಡ ರೋಮನ್ ಸೈನ್ಯದ ಮೇಲೆ ಕಾರ್ತೇಜ್ ಸೈನ್ಯದ ದಾಳಿಗೆ ತೆರೆಎಳೆದ ಒಪ್ಪಂದವನ್ನು ಉಲ್ಲಂಘಿಸಲಾಯಿತೆಂದು ರೋಮನ್ನರು ಆರೋಪಿಸಿದ್ದರು. ಇದರ ಹಿನ್ನೆಲೆ ಏನೆಂದರೆ, ಸಿಪಿಯೋ ಮತ್ತು ಕಾರ್ತೇಜ್ ಒಂದು ಶಾಂತಿ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದಕ್ಕೆ ರೋಮ್ ಸಹ ಮಾನ್ಯತೆ ನೀಡಿತ್ತು. ಒಪ್ಪಂದದ ಷರತ್ತುಗಳು ಬಹಳ ಸರಳವಾಗಿದ್ದವು. ಆದರೆ ರೋಮನ್ನರ ಪಾಲಿಗೆ ಯುದ್ಧವು ತುಂಬಾ ಸುಧೀರ್ಘವಾಗಿತ್ತು. ಆಫ್ರಿಕಾದ ಪ್ರಾಂತ್ಯಗಳನ್ನು ಕಾರ್ತೇಜ್ ತನ್ನ ಅಧೀನದಲ್ಲಿ ಇಟ್ಟುಕೊಳ್ಳಬಹುದಾಗಿತ್ತು. ಆದರೆ ಹೊರದೇಶಗಳಲ್ಲಿ ತನ್ನ ಸಾಮ್ರಾಜ್ಯವನ್ನು ಕಳೆದುಕೊಳ್ಳಬೇಕಿತ್ತು. ಇದು ಒಂದು ಬದಲಿಸಲಾಗದ ಕೃತ್ಯ ವಾಗಿತ್ತು. ಮ್ಯಾಸಿನಿಸಾ (ನುಮಿಡಿಯಾ) ಸ್ವತಂತ್ರವಾಗಬೇಕಿತ್ತು. ಇಷ್ಟೇ ಅಲ್ಲದೆ, ಕಾರ್ತೇಜ್ ತನ್ನ ನೌಕೆಗಳ ಸಂಖ್ಯೆ ಕಡಿಮೆ ಮಾಡಿ, ಯುದ್ಧದ ಪರಿಹಾರ ಧನ ನೀಡಬೇಕಿತ್ತು. ಅದೇ ಸಂದರ್ಭದಲ್ಲಿ, ಕಾರ್ತೇಜ್ ಒಂದು ದೊಡ್ಡ ಪ್ರಮಾದ ಎಸಗಿತು. ಸುದೀರ್ಘ ಕಷ್ಟದಲ್ಲಿದ್ದ ಕಾರ್ತೇಜ್ ಜನರು ಗಲ್ಫ್ ಆಫ್ ಟ್ಯೂನ್ಸ್‌ನಲ್ಲಿ ನೆಲೆಗೊಂಡಿದ್ದ ಒಂದು ರೋಮನ್ ನೌಕಾ ಸೇನೆಯನ್ನು ವಶಪಡಿಸಿಕೊಂಡು ಅದರ ಪೂರೈಕೆಗಳನ್ನು ಕಸಿದುಕೊಂಡರು.ಇದು ಮಾತುಕತೆಗಳು ಎಡವುದಕ್ಕೆ ಉತ್ತೇಜನ ನೀಡಿತು. ಈ ಮಧ್ಯೆ, ಕಾರ್ತೇಜ್‌ನ ಸೆನೆಟ್ ಇಟಲಿಯಿಂದ ವಾಪಸು ಬರುವಂತೆ ಹ್ಯಾನಿಬಲ್‌ಗೆ ಕರೆ ನೀಡಿದ ನಂತರ ಅವನು ಸೈನ್ಯದೊಂದಿಗೆ ಮರಳಿದ. ಹ್ಯಾನಿಬಲ್ ಮತ್ತು ಅವನ ಸರಬರಾಜುಗಳಿಂದ ಹುರಿದುಂಬಿತರಾದ ಕಾರ್ತೇಜರು ರೋಮನ್ ಪ್ರತಿಭಟನೆಗಳನ್ನು ಮತ್ತು ಒಪ್ಪಂದವನ್ನು ಧಿಕ್ಕರಿಸಿದರು. ಇದಾದ ನಂತರವೇ ಜಾಮಾ ಯುದ್ಧವು ಪ್ರಾರಂಭವಾಯಿತು. ಈ ಯುದ್ಧದಿಂದಾಗಿ ಹ್ಯಾನಿಬಲ್‌ನ ಪ್ರಾಬಲ್ಯ ಕುಸಿಯಿತು.
ಜಾಮಾ ಕಾಳಗ
ಬದಲಾಯಿಸಿಎರಡನೇ ಪ್ಯುನಿಕ್ ಯುದ್ಧ ಕ್ಕೆ ಹೋಲಿಸಿ ನೋಡಿದಾಗ, ಜಾಮಾ ಕಾಳಗದ ಸಂದರ್ಭದಲ್ಲಿ ರೋಮನ್ನರ ಅಶ್ವದಳ ಬಲಾಢ್ಯವಾಗಿತ್ತು ಮತ್ತು ಕಾರ್ತೇಜ್ ಕಾಲ್ದಳದಲ್ಲಿ ಬಲಾಢ್ಯತೆ ಮೆರೆದಿತ್ತು. ರೋಮನ್ ಅಶ್ವದಳದ ಪ್ರಾಬಲ್ಯಕ್ಕೆ ಮ್ಯಾಸಿನಿಸಾ ವಂಚನೆ ಕಾರಣವಾಗಿತ್ತು. ಏಕೆಂದರೆ ಇದಕ್ಕೆ ಮುಂಚೆ ಐಬೇರಿಯಾದಲ್ಲಿ ಕಾರ್ತೇಜ್ ಪರವಾಗಿದ್ದ. ಆದರೆ ಕಾರ್ತೇಜ್ ಮಿತ್ರ ಸಿಫ್ಯಾಕ್ಸ್ ನೊಂದಿಗಿನ ವೈಯಕ್ತಿಕ ದ್ವೇಷದಿಂದಾಗಿ ಹಾಗೂ ಭೂಮಿ ನೀಡುವ ಭರವಸೆಯಿಂದಾಗಿ 206 BCಯಲ್ಲಿ ಅವನು ಸ್ಥಾನ ಬದಲಿಸಿದ. ಈ ದ್ರೋಹದಿಂದ ಕಾರ್ತೇಜಿಯನ್ನರಿಗಿದ್ದ ಅನುಕೂಲ ಸಿಪಿಯೋ ಆಫ್ರಿಕಾನಸ್‌ಗೆ ಉಂಟಾಯಿತು. ಇಟಲಿಯಲ್ಲಿನ ಹಲವು ವರ್ಷಗಳ ದಂಡಯಾತ್ರೆ ನಂತರ ಕುಸಿದ ಆರೋಗ್ಯ ಮತ್ತು ಮಾನಸಿಕ ಬಳಲಿಕೆಯನ್ನು ಇಳಿವಯಸ್ಸಿಗೆ ಕಾಲಿಡುತ್ತಿದ್ದ ಹ್ಯಾನಿಬಲ್ ಅನುಭವಿಸಿದರೂ,ಕಾರ್ತೇಜಿಯನ್ನರು ಸಂಖ್ಯಾಬಲದ ಅನುಕೂಲ ಪಡೆದಿದ್ದರು ಹಾಗೂ ಅವರ ಬಳಿ 70 ಸಮರಆನೆಗಳ ಉಪಸ್ಥಿತಿಯಿಂದ ಉತ್ತೇಜಿತರಾದರು.
ರೋಮನ್ ಅಶ್ವದಳವು ಕಾರ್ತೇಜಿಯನ್ ಅಶ್ವದಳವನ್ನು ಕ್ಷಿಪ್ರದಲ್ಲೇ ಹೊಸಕಿ ಹಾಕಿ ಆರಂಭದಲ್ಲೇ ಗೆಲುವು ಪಡೆಯಿತು.ಕಾರ್ತೇಜಿಯನ್ ಯುದ್ಧದ ಆನೆಗಳ ಪರಿಣಾಮಕಾರತ್ವವನ್ನು ಕುಂಠಿತಗೊಳಿಸುವಲ್ಲಿ ರೋಮನ್ ತಂತ್ರಗಳು ಯಶಸ್ವಿಯಾದವು. ಸಿಪಿಯೋ ಕಹಳೆಗಳನ್ನು ಊದಿಸಿ ಕಾರ್ತೇಜ್ ನ ಆನೆಗಳನ್ನು ಬೆದರಿಸಿ ಕಕ್ಕಾ ಬಿಕ್ಕಿಯಾಗಿ ಕಾರ್ತೇಜ್ ಸೈನ್ಯದ ಕಡೆಗೆ ಓಡುವಂತೆ ಮಾಡಿದ್ದ ಸಿಪಿಯೋನ ತಂತ್ರಗಳಲ್ಲಿ ಒಂದಾಗಿತ್ತು. ಆನೆಗಳು ರೋಮನ್ನರ ಬದಲು ಕಾರ್ತೇಜ್ ಸೈನಿಕರನ್ನು ನಾಶಪಡಿಸಿದವು ಎಂದು ಕೆಲವು ಇತಿಹಾಸಕಾರರು ಹೇಳುತ್ತಾರೆ. ಇಷ್ಟೆಲ್ಲದರ ಮಧ್ಯದಲ್ಲಿಯೂ ಹಣಾಹಣಿ ಕಾಳಗ ನಡೆಯಿತು. ಒಂದು ಹಂತದಲ್ಲಿ ಹ್ಯಾನಿಬಲ್ ಈ ಕಾಳಗವನ್ನು ಗೆಲ್ಲುವ ಅಂಚಿನಲ್ಲಿದ್ದ. ಆದರೆ, ಸಿಪಿಯೋ ತನ್ನ ಕಾಲ್ದಳ ಮತ್ತು ಅಶ್ವದಳಗಳನ್ನು ವ್ಯವಸ್ಥಿತವಾಗಿ ಸಂಘಟಿಸಿ, ಕಾರ್ತೇಜ್ ಅಶ್ವದಳವನ್ನು ಸದೆಬಡೆದನು. ನಂತರ, ಹ್ಯಾನಿಬಲ್ ನ ಸೈನ್ಯದ ಹಿಂದಿನ ಸಾಲಿನ ಮೇಲೆ ದಾಳಿ ಮಾಡಿದ. ಎರಡೂ ಕಡೆಯಿಂದಾದ ದಾಳಿಯಿಂದಾಗಿ ಕಾರ್ತೇಜ್ ನ ಸುಸಂಘಟಿತ ಸೈನ್ಯವು ಒಡೆದು ಕುಸಿಯಿತು. ಕಾರ್ತೇಜ್ ನ ಪ್ರಬಲ ದಂಡನಾಯಕ ಸೋತ ನಂತರ, ಆ ಸೈನ್ಯವು ರೋಮ್ ಸೋಲನ್ನು ಒಪ್ಪಿಕೊಂಡು ರೋಮ್‌ಗೆ ಶರಣಾಗದೇ ವಿಧಿಯಿರಲಿಲ್ಲ. ಕಾರ್ತೇಜ್ ತನ್ನ 20,000 ಸೈನಿಕರನ್ನು ಕಳೆದುಕೊಂಡಿತಲ್ಲದೆ, ಇನ್ನೂ 15,000 ಸೈನಿಕರು ಗಾಯಗೊಂಡರು. ಆದರೆ, ರೋಮನ್ನರ ಸೈನ್ಯದಲ್ಲಿ ಕೇವಲ 1,500 ಸೈನಿಕರು ಸಾವಪ್ಪಿದ್ದರು. ಈ ಸೋಲಿನಿಂದಾಗಿ ಕಾರ್ತೇಜ್ ನ ಜನರಿಗೆ ಹ್ಯಾನಿಬಲ್ ಬಗ್ಗೆ ಇದ್ದ ಗೌರವ ಹೊರಟುಹೋಯಿತು. ಇದು ಎರಡನೇ ಪ್ಯುನಿಕ್ ಯುದ್ಧದ ಕೊನೆಯ ಕಾಳಗವಾಯಿತು. ಇಲ್ಲಿ ರೋಮ್ ಗೆಲುವು ಸಾಧಿಸಿತು. ಕಾರ್ತೇಜ್ ಮೆಡಿಟರೇನಿಯನ್ ಬಲಾಢ್ಯತೆಗೆ ಹೋರಾಡಲು ಸಾಧ್ಯವಿಲ್ಲದಷ್ಟು ಸೋಲಿನ ಸ್ಥಿತಿಗಳಿತ್ತು.
ನಂತರದ ಜೀವನ
ಬದಲಾಯಿಸಿಶಾಂತಿ ಕಾಲದಲ್ಲಿ ಕಾರ್ತೇಜ್ (200-196 BC)
ಬದಲಾಯಿಸಿಹ್ಯಾನಿಬಲ್ ಇನ್ನೂ 43 ವರ್ಷದವನಾಗಿದ್ದನು. ಅವನು ಒಬ್ಬ ಉತ್ತಮ ರಾಜನೀತಿಜ್ಞ ಹಾಗೂ ಸೈನಿಕನಾಗುವ ಆಗುವ ಎಲ್ಲ ಲಕ್ಷಣಗಳೂ ಶೀಘ್ರದಲ್ಲೇ ತೋರಿಸಿದ. ಶಾಂತಿಯ ತೀರ್ಮಾನದ ಹಿನ್ನೆಲೆಯಲ್ಲಿ ಕಾರ್ತೇಜ್ ಮುಂಚಿನ ದೊಡ್ಡ ಸಾಮ್ರಾಜ್ಯ ಕೈತಪ್ಪಿಹೋಯಿತು. ಆದ್ದರಿಂದ, ಹ್ಯಾನಿಬಲ್ ಸ್ವಲ್ಪ ಸಮಯದವರೆಗೆ ಹಿಂದಿನ ಸಾಲಿನಲ್ಲಿ ಉಳಿಯಲು ಸಿದ್ಧನಾದ. ಕಾರ್ತೇಜ್‌ನ ಶ್ರೀಮಂತರ ಸಣ್ಣ ಸರ್ಕಾರ ದ ನಿಚ್ಚಳ ಭ್ರಷ್ಟಾಚಾರದಿಂದಾಗಿ ಹ್ಯಾನಿಬಲ್‌ಗೆ ಮತ್ತೆ ಎದ್ದುಬರಲು ಅವಕಾಶ ಸಿಕ್ಕಿತು. ಅವನು ಮುಖ್ಯ ಮ್ಯಾಜಿಸ್ಟ್ರೇಟ್ ಅಥವಾ ಸಫೆಟ್ ಆಗಿ ಚುನಾಯಿತನಾದ. ಪ್ರಾಮುಖ್ಯತೆ ಕಳೆದುಕೊಂಡಿದ್ದ ಕಚೇರಿಯಲ್ಲಿ ಅಧಿಕಾರ ಮತ್ತು ಸುವ್ಯವಸ್ಥೆಗಳನ್ನು ಹ್ಯಾನಿಬಲ್ ಮರುಸ್ಥಾಪಿಸಿದ. ಹ್ಯಾನಿಬಲ್ ವಿರುದ್ಧ ಸದಾ ಅಸೂಯೆಯಿಂದಿದ್ದ ಕಾರ್ತೇಜ್ ಸರ್ಕಾರವು, ಇಟಲಿಯಲ್ಲಿದ್ದಾಗ ಹ್ಯಾನಿಬಲ್ ರೋಮ್ ಸೋಲಿಸುವ ಅವಕಾಶ ಇದ್ದರೂ ನಿರ್ಲಕ್ಷ್ಯ ತೋರುವ ಮೂಲಕ ದೇಶದ ಹಿತಾಸಕ್ತಿಗಳಿಗೆ ದ್ರೋಹ ಬಗೆದನೆಂದು ಆರೋಪಿಸಿತು. ಹ್ಯಾನಿಬಲ್ ರೋಮನ್ನರು ಹೇರಿದ್ದ ಭಾರೀ ಕಪ್ಪದ ಹೊರೆಯನ್ನು ಹೆಚ್ಚುವರಿ,ಅಸಾಮಾನ್ಯ ತೆರಿಗೆಗಳಿಲ್ಲದೆ ಕಂತುಗಳಲ್ಲಿ ತುಂಬುವಂತೆ ಸಾಧ್ಯವಾಗಿಸುವ ಮೂಲಕ ಸುಧಾರಣೆಗಳನ್ನು ಪರಿಣಾಮಕಾರಿಯಾಗಿ ಕೈಗೊಂಡ. ನೂರಾ ನಾಲ್ಕು ಎಂಬ ಆಡಳಿತ ವರ್ಗವನ್ನು ಕೂಡ ಅವನು ಸುಧಾರಣೆ ಮಾಡಿದ. ಪರಸ್ಪರ ಒಪ್ಪಂದದ ಮೇರೆಗೆ ನಡೆಯುತ್ತಿದ್ದ ಸದಸ್ಯತ್ವದ ಆಯ್ಕೆಗಳನ್ನು ನಿಲ್ಲಿಸಿ, ನೇರ ಚುನಾವಣೆಯ ಮೂಲಕ ಆಯ್ಕೆ ನಡೆಯಬೇಕು ಎಂದು ನಿಗದಿ ಮಾಡಿದ. ಅಷ್ಟೇ ಅಲ್ಲದೆ, ಎಲ್ಲ ನಾಗರಿಕರ ಬೆಂಬಲ ಪಡೆದು ನೂರಾ ನಾಲ್ಕು ಆಡಳಿತ ವರ್ಗದ ಸದಸ್ಯತ್ವದ ಅವಧಿಯನ್ನು ಜೀವಮಾನದ ಅವಧಿಯಿಂದ ಎರಡು ವರ್ಷದ ಅವಧಿಗೆ ಸೀಮಿತಗೊಳಿಸಿದ.
ದೇಶಭ್ರಷ್ಟತೆ(195-183/181 BC)
ಬದಲಾಯಿಸಿಜಾಮಾ ಯುದ್ಧ ನಡೆದ 14 ವರ್ಷಗಳ ನಂತರ, ಕಾರ್ತೇಜ್ ನವೀಕೃತ ಸಮೃದ್ಧತೆಯನ್ನು ಕಂಡ ರೋಮನ್ನರು ಹ್ಯಾನಿಬಲ್ ನಿಗೆ ಶರಣಾಗುವಂತೆ ಒತ್ತಾಯಿಸಿದರು. ಆಗ ಹ್ಯಾನಿಬಲ್ ತರುವಾಯ ಸ್ವಯಂ ದೇಶಭ್ರಷ್ಟನಾದ. ಅವನು ಕಾರ್ತೇಜ್‌ನ ಕೇಂದ್ರ ನಗರವಾದ ಟಯರ್ ಮೂಲಕವಾಗಿ ಎಫಿಸಿಸ್ ಗೆ ಪ್ರಯಾಣ ಮಾಡಿದ. ಇಲ್ಲಿ ಸಿರಿಯಾ ದ III ನೇ ಎಂಟಿಯೋಕಸ್ ಹ್ಯಾನಿಬಲ್‌ನನ್ನು ಗೌರವದಿಂದ ಬರಮಾಡಿಕೊಂಡ. ಆಗ ಎಂಟಿಯೋಕಸ್ ರೋಮ್ ವಿರುದ್ಧ ಯುದ್ಧದ ತಯಾರಿ ನಡೆಸಿದ್ದನು. ಆದರೆ ರೋಮನ್ ಸೈನ್ಯಕ್ಕೆ ಸಿರಿಯಾದ ಸೈನ್ಯ ಸಾಟಿಯಲ್ಲ ಎಂದು ಹ್ಯಾನಿಬಲ್ ಅರಿತುಕೊಂಡ. ಒಂದು ನೌಕಾಪಡೆಯನ್ನು ಸುಸಜ್ಜಿತಗೊಳಿಸುವಂತೆ ಮತ್ತು ಸೈನ್ಯವನ್ನು ಇಟಲಿಯ ದಕ್ಷಿಣಕ್ಕೆ ಕಳುಹಿಸುವಂತೆ ಹ್ಯಾನಿಬಲ್ ಸಿರಿಯಾದ ದೊರೆಗೆ ಸಲಹೆ ನೀಡಿದನು. ಅಲ್ಲದೆ, ತಾನೇ ಸೈನ್ಯದ ನಿರ್ವಹಣೆ ಮಾಡುವುದಾಗಿ ಹೇಳಿದನು. ಆದರೆ, ಎಂಟಿಯೋಕಸ್ ಮೇಲೆ ಹ್ಯಾನಿಬಲ್ ಅಷ್ಟೊಂದು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಎಂಟಿಯೋಕಸ್ ಆಸ್ಥಾನಿಕರ ಮಾತನ್ನು ಕೇಳಿ ಹ್ಯಾನಿಬಲ್‌ನಿಗೆ ಯಾವುದೇ ಪ್ರಮುಖ ಅಧಿಕಾರವನ್ನು ವಹಿಸಿಕೊಡಲು ಸಿದ್ಧನಾಗಲಿಲ್ಲ.[ಸೂಕ್ತ ಉಲ್ಲೇಖನ ಬೇಕು] ಸಿಸೆರೋ ನ ಪ್ರಕಾರ, ಎಂಟಿಯೋಕಸ್ ಆಸ್ಥಾನದಲ್ಲಿದ್ದಾಗ, ಹ್ಯಾನಿಬಲ್ ಫಾರ್ಮಿಯೋ ಎಂಬ ತತ್ವಜ್ಞಾನಿ ಯ ಉಪನ್ಯಾಸ ಕೇಳಿದನು. ಆ ಉಪನ್ಯಾಸವು ಅನೇಕ ವಿಷಯಗಳನ್ನು ಒಳಗೊಂಡಿತ್ತು. ಒಬ್ಬ ದಂಡನಾಯಕನ ಕರ್ತವ್ಯಗಳ ಕುರಿತು ಫಾರ್ಮಿಯೋ ಮಾತನಾಡಿದ ನಂತರ ಹ್ಯಾನಿಬಲ್‌ನ ಅಭಿಪ್ರಾಯ ಕೇಳಲಾಯಿತು. ಅವನು ಹೀಗೆ ಉತ್ತರಿಸಿದನು,"ನನ್ನ ಜೀವನದಲ್ಲಿ ಅನೇಕ ಮುದಿ ಮೂರ್ಖರನ್ನು ನೋಡಿದ್ದೇನೆ. ಆದರೆ, ಮೂರ್ಖತನದಲ್ಲಿ ಅವರೆಲ್ಲರನ್ನೂ ಇವನು ಮೀರಿಸುತ್ತಾನೆ." ದೇಶಭ್ರಷ್ಟ(ಅಜ್ಞಾತವಾಸ)ನಾದ ಸಮಯಯಲ್ಲಿ ನಡೆದ ಇನ್ನೊಂದು ಘಟನೆಯು ಹ್ಯಾನಿಬಲ್ ಪ್ಯುನಿಕ್ ವಿಶ್ವಾಸಘಾತುಕತನಕ್ಕೆ ವಿಚಿತ್ರ ದೃಷ್ಟಿಕೋನವನ್ನು ನೀಡುತ್ತದೆ. III ನೇ ಎಂಟಿಯೋಕಸ್ ವಿಸ್ತಾರವಾದ ಮತ್ತು ಶಸ್ತ್ರಗಳಿಂದ ಉತ್ತಮವಾಗಿ ಸಜ್ಜಿತವಾಗಿದ್ದ ತನ್ನ ಸೈನ್ಯವನ್ನು ಹ್ಯಾನಿಬಲ್‌ಗೆ ತೋರಿಸಿ, ರೋಮನ್ ಗಣರಾಜ್ಯವನ್ನು ಎದುರಿಸಲು ಅಷ್ಟು ಸೈನ್ಯ ಸಾಕಾಗುವುದೇ ಎಂದು ಕೇಳಿದಾಗ ಹ್ಯಾನಿಬಲ್ ಹೀಗೆ ಉತ್ತರಿಸಿದ,"ಹೌದು, ರೋಮನ್ನರು ಎಷ್ಟೇ ದುರಾಸೆಯುಳ್ಳವರಾಗಿದ್ದರೂ, ಅವರಿಗೆ ಇಷ್ಟು ಪ್ರಮಾಣದ ಸೈನ್ಯ ಸಾಕು." ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಹ್ಯಾನಿಬಲ್‌ನಿಗೆ ಸೈನ್ಯದ ಕಾರ್ಯಭಾರ ವಹಿಸದೆ ಎಂಟಿಯೋಕಸ್ ತಾನೇ ಸ್ವತಃ ಯುದ್ಧದ ಯೋಜನೆ ತಯಾರಿಸಿದ್ದ ಮತ್ತು ಯುದ್ಧದಲ್ಲಿ ಎಂಟಿಯೋಕಸ್ ಸೋಲುತ್ತಾನೆ.[ಸೂಕ್ತ ಉಲ್ಲೇಖನ ಬೇಕು]
190 BC ಯಲ್ಲಿ ಯುರಿಮಿಡನ್ ನದಿಯ ಬಳಿಯ ಕಾಳಗ ದಲ್ಲಿ, ಹ್ಯಾನಿಬಲ್ ನನ್ನು ಸೆಲುಸಿಡ್ ನೌಕಾಪಡೆಯ ದಂಡನಾಯಕನಾಗಿ ಮಾಡಲಾಯಿತಾದರೂ ಸಿರಿಯಾಗೆ ಸೋಲುಂಟಾಯಿತು. ಸ್ಟ್ರಾಬೋ ಮತ್ತು ಪ್ಲುಟಾರ್ಕ್ ರ ಪ್ರಕಾರ, ಆರ್ಮೇನಿಯಾ ದ ದೊರೆ I ನೇ ಅರ್ಟಾಕ್ಷಿಯಸ್ ಆಸ್ಥಾನದಲ್ಲಿ ಕೂಡ ಹ್ಯಾನಿಬಲ್‌ನಿಗೆ ಒಳ್ಳೆಯ ಆತಿಥ್ಯ ಸಿಕ್ಕಿತು. ಇಲ್ಲಿ ಹೊಸ ರಾಜಧಾನಿ ಅರ್ಟಾಕ್ಸಟಾವನ್ನು ಕಟ್ಟುವಲ್ಲಿ ಹ್ಯಾನಿಬಲ್ ಹೇಗೆ ಯೋಜನೆ ರೂಪಿಸಿದ ಮತ್ತು ಮೇಲ್ವಿಚಾರಣೆ ವಹಿಸಿದ ಎಂಬ ಪ್ರಶ್ನಾರ್ಹ ಕಥೆಯನ್ನು ಈ ಇಬ್ಬರು ಇತಿಹಾಸಕಾರರು ವಿವರಿಸಿದ್ದಾರೆ.[೪೦] ಎಂಟಿಯೋಕಸ್ ಆಸ್ಥಾನವು ತನ್ನನ್ನು ರೋಮನ್ನರಿಗೆ ಒಪ್ಪಿಸಲು ಸಿದ್ಧತೆ ನಡೆಸುತ್ತಿರುವ ವಿಚಾರ ತಿಳಿದ ಹ್ಯಾನಿಬಲ್ ಕ್ರೀಟ್ ಗೆ ಪಲಾಯನ ಮಾಡಿದ. ಅಲ್ಲಿಂದ ಏಷಿಯಾ ಮೈನರ್ ಗೆ ವಾಪಸು ತೆರಳಿ ಬಿಥನಿಯಾದ ದೊರೆ Iನೇ ಪ್ರುಸಿಯಾಸ್ನಲ್ಲಿ ಆಶ್ರಯ ಪಡೆದ. ಆಗ ಪ್ರುಸಿಯಾಸ್ ರೋಮ್ ಬೆಂಬಲಿಗ ಪರ್ಗಮನ್ ದೊರೆ II ನೇ ಯುಮೇನಸ್ ವಿರುದ್ಧ ಯುದ್ಧದಲ್ಲಿ ತೊಡಗಿದ್ದ. ಈ ಯುದ್ಧದಲ್ಲಿ ಹ್ಯಾನಿಬಲ್ ಪ್ರುಶಿಯಾಸ್‍ಗೆ ಸೇವೆ ಸಲ್ಲಿಸಿದ. ಯುಮೇನೆಸ್ ವಿರುದ್ಧ ನೌಕಾದಳ ಜಯಗಳೊಂದರಲ್ಲಿ ಹ್ಯಾನಿಬಲ್ ಯುಮೆನಸ್ ನೌಕೆಗಳಲ್ಲಿ ವಿಷಕಾರಿ ಹಾವುಗಳನ್ನು ತುಂಬಿದ ದೊಡ್ಡ ಮಡಕೆಗಳನ್ನು ಎಸೆದಿದ್ದ.[೪೧] ನಂತರ, ಹ್ಯಾನಿಬಲ್ ತನ್ನ ಪೂರ್ವಜರ ಮನೆಯಾದ ಟಯರ್‍ಗೆ ಕೂಡ ಭೇಟಿ ನೀಡಿದ . ಆದಾಗ್ಯೂ, ಸಹ ರೋಮನ್ನರು ಅವನನ್ನು ಬೇಟೆಯಾಡಲು ನಿರ್ಧರಿಸಿದ್ದರು ಹಾಗೂ ಅವನು ಶರಣಾಗುವಂತೆ ಒತ್ತಾಯಿಸುತ್ತಿದ್ದರು.
ಮರಣ (183/181 BC)
ಬದಲಾಯಿಸಿಹ್ಯಾನಿಬಲ್ ನನ್ನು ರೋಮನ್ನರಿಗೆ ಒಪ್ಪಿಸಲು ಪ್ರಸಿಯಾಸ್ ಒಪ್ಪಿದನು. ಆದರೆ ತನ್ನ ವೈರಿಗಳ ಕೈಗೆ ಸಿಗಲು ಹ್ಯಾನಿಬಲ್ ಸಿದ್ಧನಿರಲಿಲ್ಲ. ಅಲ್ಲಿಂದ ಮಾರ್ಮರಾ ಸಮುದ್ರ ದ ಪೂರ್ವ ತೀರದಲ್ಲಿದ್ದ ಲೈಬಿಸಾ ಗೆ ಓಡಿ ಹೋಗಿ, ಬಹು ಸಮಯ ತನ್ನ ಉಂಗುರದಲ್ಲಿ ಒಯ್ಯುತ್ತಿದ್ದನೆಂದು ಹೇಳಲಾದ ವಿಷವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡ.[೪೨] . ಸಾಯುವ ಮುಂಚೆ ಒಂದು ಪತ್ರವನ್ನು ಬರೆದಿಟ್ಟನು. ಆ ಪತ್ರದಲ್ಲಿನ ಘೋಷಣೆ ಈ ಕೆಳಗಿನಂತಿದೆ:
“ಇಷ್ಟು ವರ್ಷಗಳವರೆಗೆ ಅನುಭವಿಸಿದ ಆತಂಕದಿಂದ ರೋಮನ್ನರನ್ನು ಮುಕ್ತವಾಗಿಸೋಣ. ಏಕೆಂದರೆ, ಒಬ್ಬ ಮುದುಕ ಸಾಯುವವರೆಗೆ ಕಾಯುವಷ್ಟು ತಾಳ್ಮೆಯೂ ಅವರಲ್ಲಿಲ್ಲ”. [ಸೂಕ್ತ ಉಲ್ಲೇಖನ ಬೇಕು]
ಹ್ಯಾನಿಬಲ್ ಸಾವಿನ ನಿಖರ ವರ್ಷ ತಿಳಿದುಬಂದಿಲ್ಲ. ತನ್ನ ಆನಲ್ಸ್ ನಲ್ಲಿ ಟೈಟಸ್ ಪಾಮ್ಪನಿಯಸ್ ಎಟಿಕಸ್ ಹೇಳುವಂತೆ, ಹ್ಯಾನಿಬಲ್ ಸತ್ತಿದ್ದು 183 BC [೪೩] ಯಲ್ಲಿ. ಲೈವಿ ಕೂಡ ಇದೇ ವರ್ಷವನ್ನು ತಿಳಿಸಿದ್ದಾನೆ. ಪೋಲಿಬಿಯಸ್ ಪ್ರಕಾರ 182 BC ಅವನು ಸತ್ತ ವರ್ಷವಾಗಿದೆ. ಸಲ್ಪಿಶಸ್ ಬ್ಲೈದೋ ನ ದಾಖಲೆಗಳ ಪ್ರಕಾರ ಹ್ಯಾನಿಬಲ್ ಸತ್ತದ್ದು 181 BC ಯಲ್ಲಿ.[೪೩]
ಸಮಾಧಿ ಇರುವ ಸ್ಥಳ
ಬದಲಾಯಿಸಿಇಂದಿನ ಟರ್ಕಿ (ಗೆಬ್ಜ್ ನ ದಕ್ಷಿಣದಲ್ಲಿ 60 km ದೂರದಲ್ಲಿರುವ(ಇಸ್ತಾಂಬುಲ್ ನ ಪೂರ್ವಕ್ಕೆ 38 ಮೈಲಿಗಳು) ಡಿಲಿಸ್ಕಲಾಸಿ ಸಮೀಪದ ಹಾಳುಪ್ರದೇಶದಲ್ಲಿ)ಯಲ್ಲಿ ಸೈಪ್ರಸ್ ಮರಗಳ ಕೆಳಗಿರುವ ಒಂದು ಸಣ್ಣ ಬೆಟ್ಟದ ಮೇಲಿರುವ ಒಂದು ಕೈಗಾರಿಕಾ ಎಸ್ಟೇಟ್‌ನಲ್ಲಿ ಆಸಕ್ತಿಕರ ಕೌತುಕ ಕಂಡುಬರುತ್ತದೆ. ಹ್ಯಾನಿಬಲ್ ಸಮಾಧಿಯೆಂದು ಖ್ಯಾತಿ ಗಳಿಸಿದ ಅದನ್ನು ಸಾಮ್ರಾಟ್ ಸೇಪ್ಟಿಮಿಯಸ್ ಸೇವರಸ್ (193 AD – 211 AD ವರೆಗೆ ಆಳ್ವಿಕೆ) ಬಹಳ ಕಾಳಜಿ ಪೂರ್ವಕವಾಗಿ ಕಾಪಾಡಿದ. ಆದರೆ ಈಗ ಅದು ಬರೀ ಕಲ್ಲುಗಳ ಗುಪ್ಪೆಯಾಗಿದೆ. ಜರ್ಮನಿಯ ಪುರಾತತ್ವಶಾಸ್ತ್ರಜ್ಞ ಥಿಯೋಡರ್ ವೀಗಂಡ್ 1906 ರಲ್ಲಿ ಭೂ ಉತ್ಖನನ ನಡೆಸಿದರು. ಆದರೆ, ಅದು ಹ್ಯಾನಿಬಲ್‌ನ ಸಮಾಧಿಯೆಂಬ ಬಗ್ಗೆ ಅವರಿಗೆ ಸಂದೇಹ ಉಂಟಾಗಿತ್ತು.[ಸೂಕ್ತ ಉಲ್ಲೇಖನ ಬೇಕು]
ಪ್ರಾಚೀನ ಜಗತ್ತಿನ ಪರಂಪರೆ
ಬದಲಾಯಿಸಿಬರವಣಿಗೆಗಳ ಪ್ರಕಾರ, ರೋಮನ್ನರಿಗೆ ಭಯ ಎಂದರೆ ಏನು ಎಂಬುದನ್ನು ಕಲಿಸಿದವನೇ ಹ್ಯಾನಿಬಲ್. ತಲೆಮಾರುಗಳವರೆಗೆ ರೋಮ್‌ನ ಮನೆಗಳಲ್ಲಿ ಮಕ್ಕಳು ಹಠ ಮಾಡಿದರೆ, ಆಯಾಗಳು ಹ್ಯಾನಿಬಲ್‌ನ ಕ್ರೌರ್ಯದ ಕಥೆಗಳನ್ನು ಹೇಳಿ ಹೆದರಿಸುತ್ತಿದ್ದರಂತೆ. ಹ್ಯಾನಿಬಲ್ ಭಯ ಯಾವ ಮಟ್ಟಿಗೆ ಬೆಳೆದಿತ್ತೆಂದರೆ, ಯಾವಾಗಲಾದರೂ ವಿನಾಶ ಸಂಭವಿಸಿದರೆ ರೋಮ್‌ನ ಸೆನೆಟರ್‌ಗಳು"ಹ್ಯಾನಿಬಲ್ ಎಂಟಿ ಪೋರ್ಟಸ್" ("ಬಾಗಿಲ ಹತ್ತಿರವೇ ಹ್ಯಾನಿಬಲ್!") ಎಂದು ತಮ್ಮ ಆತಂಕ ಅಥವಾ ಭಯವನ್ನು ವ್ಯಕ್ತಪಡಿಸಲು ಉದ್ಗರಿಸುತ್ತಿದ್ದರು. ಈ ಪ್ರಖ್ಯಾತ ಲ್ಯಾಟಿನ್ ಪದವು ಸಾಮಾನ್ಯ ಉದ್ಘಾರವಾಗಿ ಹುಟ್ಟಿಕೊಂಡಿತು. ಯಾರಾದರೂ ಕಕ್ಷಿಗಾರರು ಬಾಗಿಲ ಮೂಲಕ ಬಂದರೆ ಅಥವಾ ಯಾರಾದರೂ ವಿಕೋಪವನ್ನು ಎದುರಿಸಿದರೆ ಈ ಮಾತನ್ನು ಹೇಳಲಾಗುತ್ತಿತ್ತು.[೪೪] ಇದರಿಂದ ರೋಮ್ ನ ಸಂಸ್ಕೃತಿಯ ಮೇಲೆ ಹ್ಯಾನಿಬಲ್‌ನ ಉಪಸ್ಥಿತಿ ಎಷ್ಟೊಂದು ಗಾಢವಾದ ಮಾನಸಿಕ ಪ್ರಭಾವ ಬೀರಿತ್ತು ಎಂದು ತಿಳಿದುಬರುತ್ತದೆ.
ರೋಮನ್ ಬರಹಗಾರರಾದ ಲೈವಿ, ಫ್ರಾನ್ಟಿನಿಸ್ ಮತ್ತು ಜೂವೆನಲ್ ತಮ್ಮ ಕೃತಿಗಳಲ್ಲಿ ಹ್ಯಾನಿಬಲ್‌ನನ್ನು ಒಲ್ಲದ ಮನಸ್ಸಿನಿಂದ ಮೆಚ್ಚುಗೆ ವ್ಯಕ್ತಪಡಿಸಿರುವುದು ಸ್ಪಷ್ಟವಾಗಿದೆ. ರೋಮನ್ನರು ಗಂಭೀರ ವೈರಿಯ ಸೋಲನ್ನು ಪ್ರಚುರಪಡಿಸಲು ಕಾರ್ತೇಜ್‌ನ ದಂಡನಾಯಕನ ಮೂರ್ತಿಗಳನ್ನು ರೋಮ್‌ನ ಬೀದಿ ಬೀದಿಗಳಲ್ಲಿ ಸ್ಥಾಪಿಸಿದರು.[೪೫] ರೋಮ್ ಸಾಮ್ರಾಜ್ಯದಲ್ಲಿ ಅತೀ ಹೆಚ್ಚು ಭಯವನ್ನು ಹ್ಯಾನಿಬಲ್ ಹುಟ್ಟಿಸಿಸಿರುವುದು ಇದರಿಂದ ವ್ಯಕ್ತವಾಗುತ್ತದೆ. ಇಷ್ಟೆಲ್ಲಾ ಆದರೂ, ರೋಮನ್ನರು ಸೋಲಿನ ಸಾಧ್ಯತೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದರು ಮತ್ತು ಶಾಂತಿಯ ಎಲ್ಲ ಪ್ರಸ್ತಾಪಗಳನ್ನು ತಿರಸ್ಕರಿಸಿದರು ಹಾಗೂ ಕ್ಯಾನೆ ಯುದ್ಧದ ಬಳಿಕ ಯುದ್ಧ ಕೈದಿಗಳನ್ನು ಹಿಂತಿರುಗಿಸಲು ಒತ್ತೆಹಣ ನೀಡಬೇಕೆಂಬ ಬೇಡಿಕೆಯನ್ನು ಕೂಡ ಅವರು ನಿರಾಕರಿಸಿದರು.[೪೬]
ಯುದ್ಧದ ಸಮಯದಲ್ಲಿ, ರೋಮನ್ ನಾಗರಿಕರಲ್ಲಿ ಯಾವುದೇ ಕ್ರಾಂತಿಗಳ ನಡೆದ ಬಗ್ಗೆ ವರದಿಯಾಗಿಲ್ಲ, ಸೆನೆಟ್‌ರೊಂದಿಗೆ ಶಾಂತಿ ಬಯಸಿ ಒಡಕುಗಳು ಉಂಟಾದ ಬಗ್ಗೆ, ಕಾರ್ತೇಜ್ ಪರವಾಗಿ ರೋಮನ್ ಪಕ್ಷಾಂತರಗಳು ಮತ್ತು ಕ್ಷಿಪ್ರಕ್ರಾಂತಿಗಳ ಬಗ್ಗೆ ವರದಿಯಾಗಿಲ್ಲ.[೪೭][೪೮] ನಿಜವಾಗಿ ನೋಡಿದರೆ, ರೋಮ್‌ನ ಅಪಾಯಕಾರಿ ವೈರಿಯ ವಿರುದ್ಧ ಹೋರಾಡಲು ಅನೇಕ ರೋಮನ್ ಗಣ್ಯರು ಅಧಿಪತಿಯ ಸ್ಥಾನಮಾನಗಳಿಗಾಗಿ ಪರಸ್ಪರ ಭಯಂಕರ ಸ್ಪರ್ಧೆಯಲ್ಲಿ ತೊಡಗಿದರು. ಹ್ಯಾನಿಬಲ್‌ನ ಮಿಲಿಟರಿ ಸಾಮರ್ಥ್ಯವು ರೋಮ್‌ನ ಸುಸಂಘಟಿತ ರಾಜಕೀಯ ವ್ಯವಸ್ಥೆ ಮತ್ತು ರೋಮ್ ಜನರ ಒಟ್ಟು ರಾಜಕೀಯ ಮತ್ತು ಮಿಲಿಟರಿ ಬುದ್ಧಿಮತ್ತೆಯನ್ನು ನಿಜವಾಗಲೂ ವಿಚಲಿತಗೊಳಿಸಲು ಸಾಕಷ್ಟರಿರಲಿಲ್ಲ. ಲಾಜೆಂಬಿ ತಿಳಿಸುವಂತೆ, "ಅವರ ರಾಜಕೀಯ ಪ್ರಬುದ್ಧತೆ ಮತ್ತು ಸಂವಿಧಾನಾತ್ಮಕ ಸ್ವರೂಪಗಳಿಗೆ ಗೌರವದಿಂದ, ವಿನಾಶದ ನಡುವೆಯೂ ಸರ್ಕಾರದ ಸಂವಿಧಾನತ್ಮಕ ಯಂತ್ರಾಂಗ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿತು-ಕ್ಯಾನೆಯಂತ ಯುದ್ಧದಲ್ಲಿ ಸೋಲಪ್ಪಿದ ದಂಡನಾಯಕ ಸರ್ಕಾರದಲ್ಲಿ ಉಳಿಯುವ ಧೈರ್ಯ ಮತ್ತು ರಾಜ್ಯದ ಮುಖ್ಯಸ್ಥನಾಗಿ ಸಮಾನ ಗೌರವದಿಂದ ಅವನನ್ನು ಕಾಣುವುದು ಪ್ರಾಚೀನ ಜಗತ್ತಿನಲ್ಲಿ ಕೆಲವೇ ರಾಜ್ಯಗಳಲ್ಲಿ ಕಂಡಬಂದಿರಬಹುದು." [೪೯] ಇತಿಹಾಸಕಾರ ಲೈವಿ ಪ್ರಕಾರ, 211 BC[೫೦] ಯಲ್ಲಿ ರೋಮ್ ವಿರುದ್ಧ ಹ್ಯಾನಿಬಲ್ ದಂಡಯಾತ್ರೆ ಕೈಗೊಂಡ ಸಮಯದಲ್ಲಿ ಹ್ಯಾನಿಬಲ್ ಮಿಲಿಟರಿ ಬುದ್ಧಿಮತ್ತೆಯ ಬಗ್ಗೆ ರೋಮನ್ನರು ಭೀತರಾಗಿದ್ದರು. "ಫ್ರೀಗಲೈನಿಂದ ಎಲ್ಲಿಯೂ ನಿಲ್ಲದೆ ಹಗಲು,ರಾತ್ರಿ ಪ್ರಯಾಣ ಮಾಡಿ ರೋಮ್ ತಲುಪಿದ್ದ ಒಬ್ಬ ಧೂತನು ತಂದ ಸುದ್ದಿ ಇಡಿ ರೋಮ್ ನಗರದಲ್ಲಿ ಸಂಚಲನ ಮೂಡಿಸಿತ್ತು. ಅವನ ತಂದ ಸುದ್ದಿಯ ವ್ಯಾಪಕ ಉತ್ಪ್ರೇಕ್ಷಿತ ವಿವರಗಳೊಂದಿಗೆ ನಗರದಲ್ಲಿ ಓಡಾಡುತ್ತಿದ್ದ ಜನರಿಂದ ಉದ್ವೇಗವು ಹೆಚ್ಚಿತು. ವಿವಾಹಿತ ಸ್ತ್ರೀಯರ ಆರ್ತನಾದ ಎಲ್ಲಿಲ್ಲಿಯೂ ಕೇಳಿಬಂತು.ಖಾಸರಿ ಮನೆಗಳಲ್ಲದೇ ದೇವಸ್ಥಾನಗಳಲ್ಲಿ ಕೇಳಿಸಿತು. ಇಲ್ಲಿ ಮಂಡಿಯೂರಿ ಕೆದರಿದ ಕೂದಲಿಂದ ದೇವಸ್ಥಾನದ ನೆಲವನ್ನು ಗುಡಿಸಿ ಕೈಗಳನ್ನು ಮೇಲೆತ್ತಿ ದೈನ್ಯತೆಯಿಂದ ದೇವರಿಗೆ ಮನವಿ ಸಲ್ಲಿಸುತ್ತಾ,ಶತ್ರುವಿನ ಕೈಯಿಂದ ರೋಮ್ ನಗರವನ್ನು ಉಳಿಸುವಂತೆ ಹಾಗೂ ಗಾಯಗಳು ಮತ್ತು ಆಘಾತಗಳಿಂದ ತಾಯಂದಿರನ್ನು ಹಾಗೂ ಮಕ್ಕಳನ್ನು ಕಾಪಾಡುವಂತೆ ಪ್ರಾರ್ಥಿಸಿದರು."[೫೧] ಸೆನೆಟ್‌ನಲ್ಲಿ ಈ ಸುದ್ದಿಯು ಭಿನ್ನ ಮನೋಧರ್ಮದ ಜನರ ನಡುವೆ ವಿವಿಧ ಭಾವನೆಗಳಿಂದ ಸ್ವೀಕಾರವಾಯಿತು.[೫೨] ಕಪುವಾವನ್ನು ಮುತ್ತಿಗೆಯ ಸ್ಥಿತಿಯಲ್ಲಿಟ್ಟು,ರೋಮ್‌ಗೆ 15,000ಕಾಲ್ದಳ ಮತ್ತು 1000ಅಶ್ವಸೈನ್ಯದ ಹೆಚ್ಚುವರಿ ಪಡೆಯನ್ನು ಕಳಿಸಲು ನಿರ್ಧರಿಸಲಾಯಿತು.[೫೨].
ಲೈವಿಯ ಪ್ರಕಾರ, 211 BC ಯಲ್ಲಿ ರೋಮ್ ಹೊರಗಡೆ ಹ್ಯಾನಿಬಲ್ ಸೇನೆ ಆಕ್ರಮಿಸಿದ ಜಮೀನನ್ನು ಅದನ್ನು ಆಕ್ರಮಿಸಿದ ಸಂದರ್ಭದಲ್ಲಿ ಅದೇ ಬೆಲೆಗೆ ಮಾರಲಾಯಿತು.[೫೩] ಇದು ನಿಜವಲ್ಲದಿರಬಹುದು. ಆದರೆ ಲಾಜೆಂಬಿ ಹೇಳುತ್ತಾರೆ, "ಅಂತಿಮ ಜಯದಲ್ಲಿ ಅತೀವ ಆತ್ಮವಿಶ್ವಾಸವನ್ನು ರೋಮನ್ನರು ಪ್ರಕಟಿಸಿದರು ಮತ್ತು ಸಾಮಾನ್ಯ ಜನಜೀವನ ಮುಂದುವರಿದ ರೀತಿಯನ್ನು ಬಿಂಬಿಸುತ್ತದೆ.[೫೪]. ಕ್ಯಾನಿ ಯುದ್ಧದ ನಂತರ ವಿಪತ್ಕಾಲದಲ್ಲೂ ರೋಮನ್ನರು ಸತತ ದೃಢತೆಯನ್ನು ತೋರಿಸಿದರು. ಕ್ಯಾನೆ ವಿನಾಶದ ನಂತರ ರೋಮ್‌ಗೆ ಅಕ್ಷರಶಃ ರಕ್ಷಣೆಇಲ್ಲದಂತಾಗಿ ಉಳಿಯಿತು. ಆದರೆ ನಗರವನ್ನು ಬಲಪಡಿಸಲು ಹೊರದೇಶಗಳ ಪ್ರಾಂತದಲ್ಲಿದ್ದ ಒಂದೇ ಒಂದು ಸೈನ್ಯದ ತುಕಡಿಯನ್ನು ಹಿಂದೆಗೆದುಕೊಳ್ಳದಿರಲು ಸೆನೆಟ್ ನಿರ್ಧರಿಸಿತು. ಇದು ರೋಮ್ ಆತ್ಮವಿಶ್ವಾಸದ ನಿರಾಕರಿಸಲಾಗದ ಸಾಕ್ಷ್ಯದ ಪ್ರದರ್ಶನವಾಗಿದೆ. ವಾಸ್ತವವಾಗಿ,ಅವರು ಸೈನ್ಯವನ್ನು ಬಲಪಡಿಸಿ ಜಯ ಲಭಿಸುವ ತನಕ ದಂಡಯಾತ್ರೆಗಳನ್ನು ಕಾಯ್ದುಕೊಂಡರು ಕ್ಲಾಡಿಯಸ್ ಮಾರ್ಸೆಲಸ್ ನ ನಾಯಕತ್ವದಲ್ಲಿ ಮೊದಲಿಗೆ ಸಿಸಿಲಿಯನ್ನು ಗೆಲ್ಲಲಾಯಿತು. ನಂತರ, ಸಿಪಿಯೋ ಆಫ್ರಿಕಾನಸ್ ನ ನಾಯಕತ್ವದಲ್ಲಿ ಹಿಸ್ಪಾನಿಯಾವನ್ನು ಗೆಲ್ಲಲಾಯಿತು.[೫೫][೫೬] ಹ್ಯಾನಿಬಲ್ ಯುದ್ಧದ ಸುದೀರ್ಘಾವಧಿ ಪರಿಣಾಮಗಳು ಚರ್ಚಾಸ್ಪದವಾಗಿದ್ದರೂ,ರೋಮನ್ನರ ಪಾಲಿಗೆ ಇದು ಒಂದು ಅತ್ಯುತ್ತಮ ಕಾಲವಾಗಿತ್ತು.[೫೭][೫೮]
ಹ್ಯಾನಿಬಲ್ ಬಗ್ಗೆ ಇತಿಹಾಸಕಾರರಿಗೆ ಸಿಕ್ಕಿದ ಹೆಚ್ಚಿನ ಮೂಲಗಳು ರೋಮನ್ನರಿಗೆ ಸಂಬಂಧಿಸಿದೆ. ರೋಮ್ ಇದುವರೆಗೆ ಎದುರಿಸಿರದ ಪ್ರಚಂಡ ವೈರಿ ಎಂದು ಹ್ಯಾನಿಬಲ್‌ನನ್ನು ಪರಿಗಣಿಸಲಾಗಿತ್ತು. ಹ್ಯಾನಿಬಲ್ ಅತ್ಯಂತ ಕ್ರೂರಿಯಾಗಿದ್ದ ಎಂದು ಲೈವಿಅಭಿಪ್ರಾಯ ಹೊಂದಿದ್ದ. ಸಿಸೆರೋ ಕೂಡ ರೋಮ್ ನ ಇಬ್ಬರು ದೊಡ್ಡ ಶತ್ರುಗಳ ಬಗ್ಗೆ ಮಾತನಾಡುವಾಗ, ಹೇಳಿದ್ದು "ಗೌರವಾನ್ವಿತ" ಪಿರಸ್ ಮತ್ತು "ಕ್ರೂರ" ಹ್ಯಾನಿಬಲ್ ಬಗ್ಗೆ ಹೇಳಿದ. ಆದರೆ, ಕೆಲವು ಸಲ ಬೇರೆ ಚಿತ್ರಣಗಳು ವ್ಯಕ್ತವಾಗಿವೆ. ಯುದ್ಧದಲ್ಲಿ ಹ್ಯಾನಿಬಲ್ ಯಶಸ್ಸು ಇಬ್ಬರು ರೋಮನ್ ಕಾನ್ಸುಲರ ಸಾವನ್ನು ತಂದ ನಂತರ, ಅವನು ಗೆಯಸ್ ಫ್ಲಾಮಿನಿಯಸ್ ನ ದೇಹಕ್ಕಾಗಿ ಟ್ರ್ಯಾಜಿಮಿನ್ ಸರೋವರ ದ ದಡಗಳಲ್ಲಿ ಹುಡುಕುವ ನಿಷ್ಫಲ ಯತ್ನ ಮಾಡಿದ.ಲುಸಿಯಸ್ ಎಮಿಲಿಯಸ್ ಪೊಲಸ್ ನ ನೆನಪಿಗಾಗಿ ಅಂತ್ಯ ಸಂಸ್ಕಾರ ವಿಧಿ ವಿಧಾನಗಳನ್ನು ನೆರವೇರಿಸಿದ ಮತ್ತು ಮಾರ್ಸೆಲಸ್ ಶವದ ಬೂದಿಯನ್ನು ರೋಮನಲ್ಲಿದ್ದ ಅವನ ಕುಟುಂಬಕ್ಕೆ ಕಳಿಸಿಕೊಟ್ಟ. ಆದರೆ ಪೋಲಿಬಿಯಸ್ ನು ಹ್ಯಾನಿಬಲ್ ನ ಬಗ್ಗೆ ಅನುಕಂಪ ಹೊಂದಿರುವುದು ಸ್ಪಷ್ಟವಾಗಿದ್ದರಿಂದ ಪಾಲಿಬಿಯಸ್ ಕುರಿತು ಯಾವುದೇ ಪಕ್ಷಪಾತವು ಹೆಚ್ಚು ತೊಂದರೆದಾಯಕವಾಗಿತ್ತು. ಅದಾಗ್ಯೂ, ಪೋಲಿಬಿಯಸ್ ಇಟಲಿಯಲ್ಲಿ ಒತ್ತೆಯಾಳಾಗಿ ದೀರ್ಘ ಕಾಲ ಕಳೆದ ಹಾಗೂ ರೋಮನ್ ಮೂಲಗಳ ಮೇಲೆ ಹೆಚ್ಚಾಗಿ ಅವಲಂಬಿಸಿದ. ಹೀಗಾಗಿ, ಅವನು ರೋಮನ್ ಪ್ರಚಾರದ ವಸ್ತುಗಳನ್ನು ಪುನರುತ್ಪಾದಿಸುತ್ತಿರುವ ಸಾಧ್ಯತೆಯಿದೆ.
ಪರಂಪರೆ
ಬದಲಾಯಿಸಿಕಲೆ ಮತ್ತು ಜನಪ್ರಿಯ ಸಂಸ್ಕೃತಿಗಳಲ್ಲಿ ಹ್ಯಾನಿಬಲ್‌ನ ಹೆಸರು ತುಂಬಾ ಸಾಮಾನ್ಯವಾಗಿ ಬಿಂಬಿತವಾಗಿದೆ. ಪಾಶ್ಚಿಮಾತ್ಯ ಇತಿಹಾಸದ ಮೇಲೆ ಆತನ ವಿದೇಶಿ ಪ್ರಭಾವದ ವಸ್ತುನಿಷ್ಠ ಕ್ರಮವಾಗಿತ್ತು.
ಇತರ ಮಿಲಿಟರಿ ನಾಯಕರ ರೀತಿಯಲ್ಲಿ,ಬಲಾಢ್ಯ ಶಕ್ತಿಗಳ ವಿರುದ್ಧ ಅಂತಿಮವಾಗಿ ಸೋಲುವ ಸ್ಥಿತಿಯಲ್ಲಿದ್ದಾಗಲೂ, ಹ್ಯಾನಿಬಲ್ ಜಯಗಳು ನಿರಂತರ ಕೀರ್ತಿ ತಂದುಕೊಟ್ಟಿತು ಹಾಗೂ ಉತ್ತರ ಆಫ್ರಿಕಾದ ಅವನ ತಾಯ್ನಾಡಿನಲ್ಲಿ ಚಿರಕಾಲ ಉಳಿಯಿತು. ಆಲ್ಪ್ಸ್ ಪರ್ವತಗಳನ್ನು ದಾಟಿದ ಹ್ಯಾನಿಬಲ್ ಮಿಲಿಟರಿ ಸಾಧನೆಯು ಪ್ರಾಚೀನ ಯುದ್ಧದ ಇತಿಹಾಸದಲ್ಲಿ ಒಂದು ಸ್ಮರಣೀಯ ಮಿಲಿಟರಿ ಸಾಧನೆಯಾಗಿದೆ.ಆಗಿನಿಂದ ಜಗತ್ತಿನ ಕಲ್ಪನೆಗಳಲ್ಲಿ ಅದು ಆವರಿಸಿತು.(ಅನೇಕ ಚಿತ್ರಕಲಾವಿದರು ಅದನ್ನು ರಂಜನೀಯವಾಗಿ ಚಿತ್ರಿಸಿದ್ದಾರೆ.)
ಸಾಹಿತ್ಯ
ಬದಲಾಯಿಸಿಹ್ಯಾನಿಬಲ್ ಕುರಿತು ಹೇಳುವ ಕಾದಂಬರಿಗಳು
- 1308-21 ಬರೆಯಲಾದ, ಡಾನ್ಟೆ ನ ಡಿವೈನ್ ಕಾಮಿಡಿ , ಪದ್ಯ, ಇನ್ಫರ್ನೋ XXXI. 97-132, 115-124 (ಜಾಮಾದ ಕಾಳಗ) ಮತ್ತು ಪ್ಯಾರಡಿಸೋ VI
- 1726, ಗಲಿವರ್ಸ್ ಟ್ರ್ಯಾವೆಲ್ಸ್ , ವ್ಯಂಗ್ಯ ಕೃತಿ
- 1862, ಗುಸ್ಟಾವ್ ಫ್ಲೌಬರ್ಟ್ ನ ಸಾಲಾಂಬೋ , ಹಮಿಲ್ಕಾರ್ ಬರ್ಕಾ ನ ಸಂದರ್ಭದಲ್ಲಿ ಕಾರ್ತೇಜ್‌ನಲ್ಲಿ ಸಿದ್ಧಪಡಿಸಲಾಯಿತು. ಹ್ಯಾನಿಬಲ್ ಒಂದು ಚಿಕ್ಕ ಮಗುವಾಗಿ ಕಾಣಿಸಿಕೊಳ್ಳುತ್ತಾನೆ.
- 1996, ಎಲಿಸಬೆತ್ ಕ್ರಾಫ್ಟ್, ಎ ಸ್ಪೈ ಫಾರ್ ಹ್ಯಾನಿಬಲ್: ಎ ನಾವೆಲ್ ಆಫ್ ಕಾರ್ತೇಜ್ , 091015533X
- 1996-2000, ರಾಸ್ ಲೆಕಿ, ಕಾರ್ತೇಜ್ ಟ್ರೈಲಾಜಿ, 2008ರ ಚಲನಚಿತ್ರದ ಮೂಲ (1996, ಹ್ಯಾನಿಬಲ್: ಎ ನಾವೆಲ್, ISBN 0-89526-443-9; 1999, ಸಿಪಿಯೋ, ಒಂದು ಕಾದಂಬರಿ, ISBN 0-349-11238-X; ಕಾರ್ತೇಜ್, 2000, ISBAN 0-86241-944-1)
- 2005, ಟೆರಿ ಮ್ಯಾಕ್ಕಾರ್ತಿ, ದಿ ಸೋರ್ಡ್ ಆಫ್ ಹ್ಯಾನಿಬಲ್ , ISBN 0-446-61517-X
- 2006, ಡೇವಿಡ್ ಅಂಥನಿ ಡರ್ಹಮ್, ಪ್ರೈಡ್ ಆಫ್ ಕಾರ್ತೇಜ್: ಎ ನಾವೆಲ್ ಆಫ್ ಹ್ಯಾನಿಬಲ್ , ISBN 0-385-72249-4
- 2006, ಎಂಜಲಾ ರೆಂಡರ್, ಫೋರ್ಜ್ದ್ ಬೈ ಲೈಟನಿಂಗ್: ಎ ನಾವೆಲ್ ಆಫ್ ಹ್ಯಾನಿಬಲ್ ಅಂಡ್ ಸಿಪಿಯೋ , ISBN 1-4116-8002-2
ನಾಟಕಗಳು ಮತ್ತು ಒಪೆರಾಗಳು (ಗೀತ ನಾಟಕಗಳು)
ಬದಲಾಯಿಸಿ- ಹೆಕ್ಟರ್ ಬರ್ಲಿಯೋಜ್ನ 1858 ರ ಒಪೆರಾ ಲೆಸ್ ಟ್ರೋಯನ್ಸ್ ನಲ್ಲಿ ಡಿಡೋ ಎಂಬುವಳು ಸಾಯುವ ಮೊದಲು ಅವಳ ಕನಸಿನಲ್ಲಿ ಅವನು ಕಾಣಿಸಿಕೊಳ್ಳುತ್ತಾನೆ.
- ಎಂಡ್ರಿವ್ ಲಾಯ್ಡ್ ವೆಬರ್ 1986ರ ಒಪೆರಾ ದಿ ಫ್ಯಾಂಟಮ್ ಆಫ್ ದಿ ಒಪೆರಾ ಮತ್ತು 2004 ರಲ್ಲಿ ಇದನ್ನು ಆಧರಿಸಿ ತಯಾರಿಸಿದ ಚಲನಚಿತ್ರದಲ್ಲಿ ಬರುವ ಒಪೆರಾ ಪಾಪ್ಯುಲೆರ್ ಹ್ಯಾನಿಬಲ್ ಕುರಿತ ಒಪೆರಾಗೆ ಪೂರ್ವತಯಾರಿಯಾಗಿದೆ.(notclear
ಮಿಲಿಟರಿ ಇತಿಹಾಸ
ಬದಲಾಯಿಸಿಮಿಲಿಟರಿ ಕಾರ್ಯತಂತ್ರಗಳನ್ನು ಹೆಣೆಯುವುದರಲ್ಲಿ ಹ್ಯಾನಿಬಲ್ ಅತ್ಯುತ್ತಮ ಶ್ರೇಯಾಂಕ ಪಡೆದಿದ್ದ. ಅಪಿಯನ್ ಪ್ರಕಾರ, ಎರಡನೇ ಪ್ಯುನಿಕ್ ಯುದ್ಧ ಮುಗಿದ ಅನೇಕ ವರ್ಷಗಳ ನಂತರ, ಹ್ಯಾನಿಬಲ್ ಸೆಲುಸಿಡ್ ಸಾಮ್ರಾಜ್ಯದಲ್ಲಿ ಒಬ್ಬ ರಾಜಕೀಯ ಸಲಹೆಗಾರನಾಗಿದ್ದನು. ಈ ಸಾಮ್ರಾಜ್ಯಕ್ಕೆ ಸಿಪಿಯೋನನ್ನು ರೋಮ್‌ನಿಂದ ರಾಜತಾಂತ್ರಿಕ ನಿಯೋಗದಲ್ಲಿ ಕಳಿಸಲಾಗಿತ್ತು.
ಇವತ್ತಿಗೂ ಸಹ ಜಗತ್ತಿನಾದ್ಯಂತ ಮಿಲಿಟರಿ ಶಿಕ್ಷಣ ಸಂಸ್ಥೆಗಳಲ್ಲಿ
It is said that at one of their meetings in the gymnasium Scipio and Hannibal had a conversation on the subject of generalship, in the presence of a number of bystanders, and that Scipio asked Hannibal whom he considered the greatest general, to which the latter replied, 'Alexander of Macedonia.'
To this Scipio assented since he also yielded the first place to Alexander. Then he asked Hannibal whom he placed next, and he replied, 'Pyrrhus of Epirus,' because he considered boldness the first qualification of a general; "for it would not be possible," he said, 'to find two kings more enterprising than these.'
Scipio was rather nettled by this, but nevertheless he asked Hannibal to whom he would give the third place, expecting that at least the third would be assigned to him; but Hannibal replied, 'To myself; for when I was a young man I conquered Hispania and crossed the Alps with an army, the first after Hercules. I invaded Italy and struck terror into all of you, laid waste 400 of your towns, and often put your city in extreme peril, all this time receiving neither money nor reinforcements from Carthage.'
As Scipio saw that he was likely to prolong his self-laudation he said, laughing, 'Where would you place yourself, Hannibal, if you had not been defeated by me?' Hannibal, now perceiving his jealousy, replied, 'In that case I should have put myself before Alexander.' Thus Hannibal continued his self-laudation, but flattered Scipio in a delicate manner by suggesting that he had conquered one who was the superior of Alexander.
At the end of this conversation Hannibal invited Scipio to be his guest, and Scipio replied that he would be so gladly if Hannibal were not living with Antiochus, who was held in suspicion by the Romans. Thus did they, in a manner worthy of great commanders, cast aside their enmity at the end of their wars.[೫೯][೬೦]
ಹ್ಯಾನಿಬಲ್ ನ ಯುದ್ಧ ತಂತ್ರಗಳನ್ನು (ಮುಖ್ಯವಾಗಿ ಕ್ಯಾನಿ ಯಲ್ಲಿ ಆತ ಸಾಧಿಸಿದ ಗೆಲುವು) ಅಭ್ಯಸಿಸಲಾಗುತ್ತಿವೆ.
1911 ರ ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ ದಲ್ಲಿ ಪ್ರಕಟಗೊಂಡ ಮ್ಯಾಕ್ಸಿಮಿಲಿಯನ್ ಒಟೊ ಬಿಸ್ಮಾರ್ಕ್ ಕ್ಯಾಸ್ಪರಿ ಯ ಲೇಖನದಲ್ಲಿ, ಹ್ಯಾನಿಬಲ್ ನನ್ನು ಈ ಪದಗಳಲ್ಲಿ ಶ್ಲಾಘಿಸಿದ್ದಾನೆ:
As to the transcendent military genius of Hannibal there cannot be two opinions. The man who for fifteen years could hold his ground in a hostile country against several powerful armies and a succession of able generals must have been a commander and a tactician of supreme capacity. In the use of strategies and ambuscades he certainly surpassed all other generals of antiquity. Wonderful as his achievements were, we must marvel the more when we take into account the grudging support he received from Carthage. As his veterans melted away, he had to organize fresh levies on the spot. We never hear of a mutiny in his army, composed though it was of North Africans, Iberians and Gauls. Again, all we know of him comes for the most part from hostile sources. The Romans feared and hated him so much that they could not do him justice. Livy speaks of his great qualities, but he adds that his vices were equally great, among which he singles out his more than Punic perfidy and an inhuman cruelty. For the first there would seem to be no further justification than that he was consummately skillful in the use of ambuscades. For the latter there is, we believe, no more ground than that at certain crises he acted in the general spirit of ancient warfare. Sometimes he contrasts most favorably with his enemy. No such brutality stains his name as that perpetrated by Claudius Nero on the vanquished Hasdrubal. Polybius merely says that he was accused of cruelty by the Romans and of avarice by the Carthaginians. He had indeed bitter enemies, and his life was one continuous struggle against destiny. For steadfastness of purpose, for organizing capacity and a mastery of military science he has perhaps never had an equal.[೬೧]
ರೋಮನ್ ಇತಿಹಾಸಕಾರರು ಸಹ ಅವನ ಅತ್ಯುತ್ತಮ ಮಿಲಿಟರಿ ನಾಯಕತ್ವವನ್ನು ಹೊಗಳಿದ್ದಾರೆ. ಅವರು ಹೇಳುವಂತೆ, "ತನ್ನಿಂದ ಮಾಡಲು ಸಾಧ್ಯವಾಗುವ ಮತ್ತು ಸ್ವತಃ ಸಾಧ್ಯವಾಗದ ಕೆಲಸವನ್ನು ಬೇರೆಯವರು ಮಾಡಬೇಕೆಂದು ಅವನು ಬಯಸುತ್ತಿರಲಿಲ್ಲ".[೬೨] ಪೋಲಿಬಿಯಸ್ ಪ್ರಕಾರ, 23,13,ಪು.423: “ತನ್ನ ಆಯುಷ್ಯದ ಹದಿನೇಳು ವರ್ಷಗಳನ್ನು ಯುದ್ಧಗಳಲ್ಲಿ ಕಳೆದರೂ, ಮತ್ತು ಅನೇಕ ಬರ್ಬರ ದೇಶಗಳಲ್ಲಿ ಪ್ರಯಾಣಿಸಿದರೂ, ವಿವಿಧ ದೇಶಗಳ ಮತ್ತು ಭಾಷೆಗಳ ಅನೇಕ ಜನರು ಹತಾಶ ಮತ್ತು ಅಸಾಮಾನ್ಯ ಸಾಹಸಗಳಲ್ಲಿ ಅವನಿಗೆ ನೆರವಾಗಲು ನೇಮಕಗೊಂಡಿದ್ದರೂ,ಯಾರೂ ಕೂಡ ಅವನ ವಿರುದ್ಧ ಸಂಚು ನಡೆಸಲು ಕನಸುಮನಸಲ್ಲೂ ಎಣಿಸಲಿಲ್ಲ.ಒಂದೊಮ್ಮೆ ಅವನ ಸೈನ್ಯಕ್ಕೆ ಸೇರಿದವರು ಅಥವಾ ಅವನಿಗೆ ಶರಣಾದವರು ಅವನ ವಿರುದ್ಧ ಪಿತೂರಿ ನಡೆಸುವುದನ್ನು ಕನಸುಮನಸಲ್ಲೂ ಯೋಚಿಸಲಿಲ್ಲ. ಇದು ಹ್ಯಾನಿಬಲ್ ಸ್ವಭಾವತಃ ನಿಜವಾದ ನಾಯಕ ಮತ್ತು ರಾಜತಂತ್ರಜ್ಞತೆಯಲ್ಲಿ ಎಲ್ಲರಿಗಿಂತ ಮೇಲುಗೈ ಗಳಿಸಿದ್ದ ಎನ್ನುವುದಕ್ಕೆ ಗಮನಾರ್ಹ ಮತ್ತು ಸ್ಪಷ್ಟ ಪುರಾವೆಯನ್ನು ಒದಗಿಸುತ್ತದೆ."
ಕೌಂಟ್ ಆಲ್ಫ್ರೆಡ್ ವಾನ್ ಶ್ಲಿಯೆಫೆನ್ನಾಮಸೂಚಕ ಶಿರೋನಾಮೆಯ "ಶ್ಲಿಯೆಫೆನ್ ಯೋಜನೆ" ಯನ್ನು ಅವನ ಮಿಲಿಟರಿ ಅಧ್ಯಯನಗಳಿಂದ ಅಭಿವೃದ್ಧಿಪಡಿಸಲಾಯಿತು. ಕ್ಯಾನಿ ಯುದ್ಧದಲ್ಲಿ ರೋಮನ್ ಸೈನ್ಯವನ್ನು ಮುತ್ತಿಗೆ ಹಾಕಿ ಸೋಲಿಸಲು ಹ್ಯಾನಿಬಲ್ ಬಳಸಿದ ಮುತ್ತಿಗೆ ತಂತ್ರಕ್ಕೆ ಅವನು ವಿಶೇಷವಾಗಿ ಹೆಚ್ಚು ಮಹತ್ವ ನೀಡಿದ್ದ.[೬೩][೬೪] ಜಾರ್ಜ್ ಎಸ್. ಪ್ಯಾಟನ್ ತಾನು ಹ್ಯಾನಿಬಲ್ ಪುನರವತಾರ ಎಂದು ನಂಬಿದ್ದ.ಜತೆಗೆ ಅನೇಕ ಜನರು ಸೇರಿದಂತೆ ರೋಮನ್ ಸೈನಿಕ ಮತ್ತು ನೆಪೋಲಿಯನ್ ಸೈನಿಕ ಕೂಡ ಭಾವಿಸಿದ್ದರು. ಗಲ್ಫ್ ಯುದ್ಧದ ಸಮಯದಲ್ಲಿ ಜಂಟಿ ಪಡೆಗಳ ದಂಡನಾಯಕರಾಗಿದ್ದ ನಾರ್ಮನ್ ಶ್ವಾರ್ಜ್ ಕಾಫ್ ಹೇಳುವಂತೆ, "ಯುದ್ಧದ ತಾಂತ್ರಿಕತೆಯಲ್ಲಿ ಬದಲಾವಣೆಗಳಾಗಬಹುದು, ಶಸ್ತ್ರಾಸ್ತ್ರಗಳ ರಚನೆಯಲ್ಲಿಯೂ ಖಂಡಿತವಾಗಿ ಬದಲಾವಣೆಗಳಾಗುತ್ತವೆ. ಆದರೆ, ಯಾವ ಯುದ್ಧ ಸಿದ್ಧಾಂತಗಳನ್ನು ಹ್ಯಾನಿಬಲ್ ಕಾಲದಲ್ಲಿ ಬಳಸುತ್ತಿದ್ದರೋ, ಅದೇ ಸಿದ್ಧಾಂತಗಳನ್ನು ಇವತ್ತಿನ ಯುದ್ಧಗಳಲ್ಲಿಯೂ ಬಳಸಲಾಗುತ್ತಿದೆ."[೬೫]
ಮಿಲಿಟರಿ ಇತಿಹಾಸಕಾರ ಥಿಯೋಡೋರ್ ಐರಾಲ್ಟ್ ಡಾಜ್ ನ ಪ್ರಕಾರ,
Hannibal excelled as a tactician. No battle in history is a finer sample of tactics than Cannae. But he was yet greater in logistics and strategy. No captain ever marched to and fro among so many armies of troops superior to his own numbers and material as fearlessly and skillfully as he. No man ever held his own so long or so ably against such odds. Constantly overmatched by better soldiers, led by generals always respectable, often of great ability, he yet defied all their efforts to drive him from Italy, for half a generation. Excepting in the case of Alexander, and some few isolated instances, all wars up to the Second Punic War, had been decided largely, if not entirely, by battle-tactics. Strategic ability had been comprehended only on a minor scale. Armies had marched towards each other, had fought in parallel order, and the conqueror had imposed terms on his opponent. Any variation from this rule consisted in ambuscades or other stratagems. That war could be waged by avoiding in lieu of seeking battle; that the results of a victory could be earned by attacks upon the enemy’s communications, by flank-maneuvers, by seizing positions from which safely to threaten him in case he moved, and by other devices of strategy, was not understood... [However] For the first time in the history of war, we see two contending generals avoiding each other, occupying impregnable camps on heights, marching about each other's flanks to seize cities or supplies in their rear, harassing each other with small-war, and rarely venturing on a battle which might prove a fatal disaster—all with a well-conceived purpose of placing his opponent at a strategic disadvantage... That it did so was due to the teaching of Hannibal.[೧೩]
ಟಿ.ವಿ. ಮತ್ತು ಚಲನಚಿತ್ರ
ಬದಲಾಯಿಸಿಚಲನಚಿತ್ರ | ಇತರ ಬರಹಗಳು | |
1914 | ಕ್ಯಾಬರಿಯಾ | ಇಟಲಿಯ ಮೂಕಿ ಚಿತ್ರ |
1939 | ಸಿಪಿಯೋ ಆಫ್ರಿಕಾನಾಸ್ - ದಿ ಡಿಫೀಟ್ ಆಫ್ ಹ್ಯಾನಿಬಲ್ (ಸಿಪಿಯೋನೆ ಎಲ್'ಆಫ್ರಿಕಾನೋ) Archived 2006-01-18 ವೇಬ್ಯಾಕ್ ಮೆಷಿನ್ ನಲ್ಲಿ. | ಇಟಲಿಯ ಚಲನಚಿತ್ರ |
1955 | ಜುಪಿಟರ್ಸ್ ಡಾರ್ಲಿಂಗ್ | ಎಮ್ ಜಿ ಎಮ್ ನಿರ್ಮಿತ ಸಂಗೀತಮಯ ಚಿತ್ರ. ಹಾವರ್ಡ್ ಕೀಲ್ ಮತ್ತು ಎಸ್ತರ್ ವಿಲಿಯಮ್ಸ್ ನಟಿಸಿದ್ದಾರೆ. |
1960 | ಎನಿಬಲ್ | ಇಟಲಿಯ ಚಲನಚಿತ್ರ. ವಿಕ್ಟರ್ ಮಚೋರ್ ನಟಿಸಿದ್ದಾರೆ. |
1996 |
ಗಲಿವರ್`ಸ್ ಟ್ರ್ಯಾವೆಲ್ಸ್ |
ಗಲಿವರ್ ಒಂದು ಮಾಯಾ ಕನ್ನಡಿಯಿಂದ ಹ್ಯಾನಿಬಲ್‌ನನ್ನು ಹೊರ ಕರೆಯುತ್ತಾನೆ. |
1997 | ದಿ ಗ್ರೇಟ್ ಬ್ಯಾಟಲ್ಸ್ ಆಫ್ ಹ್ಯಾನಿಬಲ್ | ಬ್ರಿಟಿಷ್ ಸಾಕ್ಷ್ಯಚಿತ್ರ |
2001 | ಹ್ಯಾನಿಬಲ್: ದಿ ಮ್ಯಾನ್ ಹು ಹೇಟೆಡ್ ರೋಮ್ | ಬ್ರಿಟಿಷ್ ಸಾಕ್ಷ್ಯಚಿತ್ರ |
2005 | ದಿ ಟ್ರು ಸ್ಟೋರಿ ಆಫ್ ಹ್ಯಾನಿಬಲ್ | ಬ್ರಿಟಿಷ್ ಸಾಕ್ಷ್ಯಚಿತ್ರ |
2004 | [[ದಿ ಫ್ಯಾಂಟಮ್ ಆಫ್ ದಿ ಒಪೇರಾ
]] |
ಪ್ರಾರಂಭದ ಒಪೆರಾ ಪೂರ್ವಸಿದ್ಧತೆಯು ಹ್ಯಾನಿಬಲ್ ಕುರಿತಾಗಿದ್ದರಿಂದ ಅದಕ್ಕೆಹ್ಯಾನಿಬಲ್ ಎಂದು ಹೆಸರು ಕೊಡಲಾಯಿತು. |
2005 | ಹ್ಯಾನಿಬಲ್ vs.ರೋಮ್ | ನ್ಯಾಷನಲ್ ಜಿಯೋಗ್ರಾಫಿಕ್ ಚಾನಲ್ ನಲ್ಲಿ |
2006 | ಹ್ಯಾನಿಬಲ್ - ರೋಮ್ಸ್ ವರ್ಸ್ಟ್ ನೈಟ್ ಮೇರ್ | ಅಲೆಕ್ಸಾಂಡರ್ ಸಿಡಿಗ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಟಿ.ವಿ. ಚಿತ್ರ |
2008 | ಬ್ಯಾಟಲ್ಸ್ BC S01E01 | ಹಿಸ್ಟರಿ ಚಾನಲ್‌ನ ಟಿ. ವಿ. ಚಿತ್ರ |
2010/2011 | ಹ್ಯಾನಿಬಲ್ ದಿ ಕಾಂಕ್ವೈರರ್ | ವಿನ್ ಡೀಸಲ್ ಹ್ಯಾನಿಬಲ್ ಪಾತ್ರದಲ್ಲಿ ನಟಿಸಿರುವ ಮುಖ್ಯವಾಹಿನಿ ಚಿತ್ರ (ದೃಢಪಟ್ಟಿಲ್ಲ) |
ಕಾಮಿಕ್ಸ್ (ಮಕ್ಕಳ ಕಥೆಗಳು)
ಬದಲಾಯಿಸಿ-
ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಹ್ಯಾನಿಬಲ್ ಅಚ್ಚುಕಟ್ಟಾದ, ಉತ್ತಮ ಹೇಳಿಕೆಯೊಂದನ್ನು ನೀಡುತ್ತಾನೆ.
-
ಆಲ್ಪ್ಸ್ ದಾಟುತ್ತಿರುವ ಹ್ಯಾನಿಬಲ್.
-
ಹ್ಯಾನಿಬಲ್ ನ ಪ್ರತಿಜ್ಞೆ.
-
ಚಿಕ್ಕವನಾಗಿದ್ದಾಗಲೇ ಹ್ಯಾನಿಬಲ್ ತಾನು ಸಾಯುವವರೆಗೂ ರೋಮನ್ನರನ್ನು ದ್ವೇಷಿಸುವ ಪ್ರತಿಜ್ಞೆ ಮಾಡುತ್ತಾನೆ.
- ಹ್ಯಾನಿಬಲ್ ಗೋಸ್ ಟು ರೋಮ್ Archived 2011-07-28 ವೇಬ್ಯಾಕ್ ಮೆಷಿನ್ ನಲ್ಲಿ. ಒಂದು ವೆಬ್ ಕಾಮಿಕ್ (ಇಂಟರ್ನೆಟ್ ಮೇಲೆ ಪ್ರಕಟವಾಗುವ ಮಕ್ಕಳ ಕಥೆ) ಆಗಿದೆ. ಇಲ್ಲಿ ಹ್ಯಾನಿಬಲ್ ನ ಸಮುದ್ರ ಪ್ರಯಾಣವನ್ನು ಹಾಸ್ಯ ರೂಪದಲ್ಲಿ ತೋರಿಸಲಾಗಿದೆ.
- ಡೆವಿಲ್ಸ್ ಡ್ಯು ಪ್ರಕಟಿತ ಕಾಮಿಕ್ ನಲ್ಲಿ ಡಾಕ್ಟರ್ ಮೈಂಡ್ ಬೆನ್ಡರ್ ನು ಹ್ಯಾನಿಬಲ್ ನನ್ನು ಮರುಸೃಷ್ಟಿಸುತ್ತಾನೆ. ಹ್ಯಾನಿಬಲ್ ನು ದಿ ಕಾಯಿಲ್ ನ ಸದಸ್ಯನಾಗುತ್ತಾನೆ.
ಅನುಕ್ರಮ ಘಟನಾವಳಿಗಳು
ಬದಲಾಯಿಸಿಕೆಳಗಿನವುಗಳನ್ನು ಓದಬಹುದು
ಬದಲಾಯಿಸಿ- ಮಿಲಿಟರಿ ಹಿಸ್ಟರಿ
- ಫೇಮಸ್ ಮಿಲಿಟರಿ ಕಮಾನ್ದರ್ಸ್
- ಹ್ಯಾನಿಬಲ್ ಇನ್ ಬ್ಯಾಟಲ್ [೨]
ಲೇಖನಗಳು
ಬದಲಾಯಿಸಿ
ಉಲ್ಲೇಖಗಳು
ಬದಲಾಯಿಸಿ- ↑ Lancel, Serge (1995) Hannibal cover: "Roman bust of Hannibal. Museo Archeologico Nazionale. Naples"
- ↑ Goldsworthy, Adrian (2000) The Fall of Carthage cover: "Hannibal in later life"
- ↑ Goldsworthy, Adrian (2001) Cannae p.24: "a bust which may be a representation of Hannibal in later life, although there are no definite images of him"
- ↑ Goldsworthy, Adrian (2003) The Complete Roman Army p.41: "a bust that purports to show Hannibal in later life"
- ↑ Matyszak, Philip (2003) Chronicle of the Roman Republic p.95: "bust, thought to be of Hannibal, found in Capua"
- ↑ Ameling, Walter Karthago: Studien zu Militär, Staat und Gesellschaft p.81-82
- ↑ ೭.೦ ೭.೧ ಬೆಂಜ್, ಫ್ರಾಂಜ್ ಎಲ್. 1982. ಪರ್ಸನಲ್ ನೇಮ್ಸ್ ಇನ್ ದಿ ಫೋನಿಸಿಯನ್ ಅಂಡ್ ಪ್ಯುನಿಕ್ ಇನ್ ಸ್ಕ್ರಿಪ್ಶನ್ಸ್. ಪು. 313-314
- ↑ ೮.೦ ೮.೧ ಬೇಯರ್, ಥಾಮಸ್. 2004. ಸ್ಟಡೀಸ್ ಜು ಪ್ಲಾಟಸಸ್ ಪೋನುಲಸ್. P. 174
- ↑ ಫ್ರೆಡ್ರಿಕ್, ಜೋಹಾನ್ಸ್, ವುಲ್ಫ್ ಗ್ಯಾಂಗ್ ರಾಲಿಂಗ್, ಮರಿಯಾ ಜೂಲಿಯಾ ಎಮಡಾಸಿ, ಅಂಡ್ ವರ್ನರ್ ಆರ್. ಮೇಯರ್. 1999. Phönizisch-Punische Grammatik. ಪು. 53.
- ↑ ಬ್ರೌನ್, ಜಾನ್ ಪೇರ್ಮನ್. 2000. ಇಸ್ರೇಲ್ ಅಂಡ್ ಹೆಲ್ಲಸ್ : ಸೇಕ್ರೆಡ್ ಇನ್ಸ್ಟಿಟ್ಯುಶನ್ಸ್ ವಿತ್ ರೋಮನ್ ಕೌಂಟರ್ಪಾರ್ಟ್ಸ್. ಪು. 126-128
- ↑ ಪ್ಲುಟಾರ್ಕ್, ಮತ್ತು ಅವನು ಒಂದುವೇಳೆ ಸಿಪಿಯೋ ನನ್ನು ಸೋಲಿಸಿದರೆ ಆತನ ಮುಂದಿನ ಆಯ್ಕೆಗಳು ಯಾರು ಎಂದು ಕೇಳಿದಾಗ, ಅವರೆಲ್ಲರಿಗಿಂತಲೂ ತಾನೇ ಶ್ರೇಷ್ಠನಾಗುವೆನೆಂದು ಉತ್ತರಿಸಿದ. ಲೈಫ್ ಆಫ್ ಟೈಟಸ್ ಫ್ಲಾಮಿನಿಯಸ್ 21.3-4.
- ↑ ಪ್ಲುಟಾರ್ಕ್, ಲೈಫ್ ಆಫ್ ಪಿರಸ್ 8.2.
- ↑ ೧೩.೦ ೧೩.೧ ೧೩.೨ ೧೩.೩ ೧೩.೪ Ayrault Dodge, Theodore (1995). Hannibal: A History of the Art of War Among the Carthagonians and Romans Down to the Battle of Pydna, 168 BC. Da Capo Press.
- ↑ ಲ್ಯಾನ್ಸೆಲ್, ಎಸ್. ಹ್ಯಾನಿಬಲ್ ಪು. 6.
- ↑ ರಿವರ್ಸ್ ಸ್ಪಿನ್ಸ್ ಪ್ಯಾಟನ್, ದಿ ಸೆಕೆಂಡ್ ಕಮಿಂಗ್ ಆಫ್ ಹ್ಯಾನಿಬಲ್ .
- ↑ [೧] The History of Rome: Vol III, by Livy
- ↑ ಡಾಜ್, ಥಿಯೋಡೋರ್ ಐರಾಲ್ಟ್, ಹ್ಯಾನಿಬಲ್: ಎ ಹಿಸ್ಟರಿ ಆಫ್ ದಿ ಆರ್ಟ್ ಆಫ್ ವಾರ್ ಅಮಂಗ್ ದಿ ಕಾರ್ತಿಜಿನಿಯನ್ಸ್ ಅಂಡ್ ರೋಮನ್ಸ್ ಡೌನ್ ಟು ದಿ ಬ್ಯಾಟಲ್ ಆಫ್ ಪಡ್ನಾ, 168 B.C , ಪು. 143 Archived 2016-06-11 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಫೇಗನ್, ಗೆರೆಟ್ ಜಿ. " ದಿ ಹಿಸ್ಟರಿ ಆಫ್ ಏನ್ಸೀಂಟ್ ರೋಮ್". ಲೆಕ್ಚರ್ 13: "ದಿ ಸೆಕೆಂಡ್ ಪ್ಯುನಿಕ್ ವಾರ್". ಟೀಚಿಂಗ್ ಕಂಪನಿ, "ಗ್ರೇಟ್ ಕೋರ್ಸಸ್" ಸಿರೀಸ್.
- ↑ ಲ್ಯಾನ್ಸೆಲ್, ಸರ್ಜ್, ಹ್ಯಾನಿಬಲ್ , ಪು. 225
- ↑ ಪ್ರೆವಸ್, ಜಾನ್, ಹ್ಯಾನಿಬಲ್ ಕ್ರಾಸಸ್ ದಿ ಆಲ್ಪ್ಸ್: ದಿ ಇನ್ವೇಜನ್ ಆಫ್ ಇಟಲಿ ಅಂಡ್ ದಿ ಸೆಕೆಂಡ್ ಪ್ಯುನಿಕ್ ವಾರ್ , ಪು. 86
- ↑ ಲ್ಯಾನ್ಸೆಲ್, ಸರ್ಜ್, ಹ್ಯಾನಿಬಲ್ , ಪು.60
- ↑ ಮಾಂಟ್ಜಿನೀವರ್: ಪೀಟರ್ ಕೊನೋಲಿ, ಹ್ಯಾನಿಬಲ್ ಅಂಡ್ ದಿ ಎನಿಮೀಸ್ ಆಫ್ ರೋಮ್ (1978); (ಎಕ್ಸ್ಟೆನ್ಸಿವ್ ಸಮರಿ Archived 2010-06-26 ವೇಬ್ಯಾಕ್ ಮೆಷಿನ್ ನಲ್ಲಿ.); ಕೋಲ್ ಡಿ ಲಾ ಟ್ರಾವರ್ಸೆಟ್: ಗೆವಿನ್ ಡಿ ಬಿಯರ್, ಆಲ್ಪ್ಸ್ ಅಂಡ್ ಎಲಿಫೆನ್ಟ್ಸ್ ನೆಪೋಲಿಯನ್ III; ಮಹೇನಿ 2008, "ಹ್ಯಾನಿಬಲ್ಸ್ ಓಡಿಸ್ಸಿ; ಎನ್ವಿರಾನ್ಮೆಂಟಲ್ ಬ್ಯಾಗ್ರೌಂಡ್ ಟು ದಿ ಅಲ್ಪೈನ್ ಇನ್ವೇಶನ್ ಆಫ್ ಇಟಾಲಿಯಾ"; ಮಾಂಟ್ ಸೆನಿಸ್: ಡೆನಿಸ್ ಪ್ರಾಕ್ಟರ್, ಹ್ಯಾನಿಬಲ್ಸ್ ಮಾರ್ಚ್ ಇನ್ ಹಿಸ್ಟರಿ . ಇತರ ಸಿದ್ಧಾಂತಗಳು ಕೋಲ್ ಡ್ಯು ಕ್ಲೆಪಿಯರ್ ಒಳಗೊಂಡಿವೆ (ಸರ್ಜ್ ಲ್ಯಾನ್ಸೆಲ್, ಹ್ಯಾನಿಬಲ್ ಅಂಡ್ ಕೋಲ್ ಡ್ಯು ಪೆಟಿ ಬರ್ನಾರ್ಡ್ (ಬಾರ್ತ್ಹೋಲ್ಡ್ ನೀಬರ್).
- ↑ ಲೈವಿ ಹಿಸ್ಟರಿ ಆಫ್ ರೋಮ್ ಬುಕ್21 ,36
- ↑ ಲೈವಿ ಹಿಸ್ಟರಿ ಆಫ್ ರೋಮ್, ಬುಕ್ 21 ಸೆಕ್ಷನ್ಸ್ 32-36
- ↑ ಎಸ್. ಲ್ಯಾನ್ಸೆಲ್, ಹ್ಯಾನಿಬಲ್ (1995; ಇಂಗ್ಲಿಷ್ ಅನುವಾದ 1999) ಪುಟ 60.
- ↑ ೨೬.೦ ೨೬.೧ ಡಾಜ್, ಥಿಯೋಡೋರ್. ಹ್ಯಾನಿಬಲ್ . ಕೇಂಬ್ರಿಜ್ ಮೆಸಾಚುಸೆಟ್ಸ್: ಡಿ ಕಾಪೋ ಪ್ರೆಸ್, 1891 ISBN 0-306-81362-9
- ↑ John Selby Watson; Marcus Junianus; Justinus, Cornelius; Nepos, Eutropius (1853). Justin, Cornelius Nepos, and Eutropius: Literally Translated, with Notes. H. G. Bohn. p. 420. Retrieved 2008-07-23.
{{cite book}}
: CS1 maint: multiple names: authors list (link) - ↑ ಪೋಲಿಬಿಯಸ್,ಹಿಸ್ಟರೀಸ್, ಬುಕ್ III, ಪು74
- ↑ ಲಿಡಲ್ ಹಾರ್ಟ್, ಬಿ. ಎಚ್. , ಸ್ಟ್ರೆಟಜಿ , ನ್ಯೂ ಯಾರ್ಕ್ ಸಿಟಿ, ಪೆಂಗ್ವಿನ್ ಗ್ರೂಪ್, 1967
- ↑ USAWC Archived 2015-10-31 ವೇಬ್ಯಾಕ್ ಮೆಷಿನ್ ನಲ್ಲಿ. ಜೇಮ್ಸ್ ಪಾರ್ಕರ್ ನ ಕಂಪೆರಿಂಗ್ ಸ್ಟ್ರೆಟಜೀಸ್ ಆಫ್ ದಿ ಸೆಕೆಂಡ್ ಪ್ಯುನಿಕ್ ಪಾರ್ಕರ್ . HTML ನಲ್ಲಿ ನೋಡಿ
- ↑ ಗೊಲ್ಡ್ಸ್ ವರ್ದಿ, ಅಡ್ರಿಯನ್ ಕೆ. ದಿ ರೋಮನ್ ಆರ್ಮಿ ಅಟ್ ವಾರ್ 100 BC - AD 200 , ನ್ಯೂ ಯಾರ್ಕ್
- ↑ "Internet Ancient History Sourcebook". Archived from the original on 2006-02-13. Retrieved 2010-07-10.
- ↑ ೩೩.೦ ೩೩.೧ ೩೩.೨ ೩೩.೩ ಕಾಟ್ರೆಲ್, ಲಿಯೋನಾರ್ಡ್, ಎನಿಮಿ ಆಫ್ ರೋಮ್ , ಎವನ್ಸ್ ಬ್ರೋಸ್, 1965, ISBN 0-237-44320-1
- ↑ ಪ್ರೆವಸ್, ಜಾನ್, ಹ್ಯಾನಿಬಲ್ ಕ್ರಾಸಸ್ ದಿ ಆಲ್ಪ್ಸ್ , ಪು. xv
- ↑ ಚಾಪ್ಲಿನ್, ಜೇನ್ ಡನ್ಬಾರ್, ಲೈವಿಸ್ ಎಕ್ಸೆಮ್ಪ್ ರಿ ಹಿಸ್ಟರಿ , ಪು. 66
- ↑ ಪೋಲಿಬಿಯಸ್, ದಿ ಹಿಸ್ಟರೀಸ್ ಆಫ್ ಪೋಲಿಬಿಯಸ್, 2 ಸಂಪುಟಗಳು, ಅನುವಾದ ಈವಲಿನ್ ಎಸ್. ಶಕ್ಬರ್ಗ್ (ಲಂಡನ್: ಮ್ಯಾಕ್ ಮಿಲನ್, 1889), I. 264-275.
- ↑ ಪ್ರೆವಸ್, ಜಾನ್, ಹ್ಯಾನಿಬಲ್ ಕ್ರಾಸಸ್ ದಿ ಆಲ್ಪ್ಸ್: ದಿ ಇನ್ವೇಜನ್ ಆಫ್ ಇಟಲಿ ಅಂಡ್ ದಿ ಸೆಕೆಂಡ್ ಪ್ಯುನಿಕ್ ವಾರ್ , ಪು. 200
- ↑ ಪ್ಲಿನಿ, ಅನುವಾದ ಮೇರಿ ಬೀಗನ್ ಅವರಿಂದ, ದಿ ಎಲ್ಡರ್ ಪ್ಲಿನಿ ಆನ್ ದಿ ಹ್ಯುಮನ್ ಎನಿಮಲ್ , ಪು 361
- ↑ ಲೈವಿ, ದಿ ವಾರ್ ವಿತ್ ಹ್ಯಾನಿಬಲ್ , 28.46
- ↑ ಬೋರ್ನ್ಯುಶನ್, ಜಾರ್ಜ್ ಎ. (2006). ಎ ಕನ್ಸೈಸ್ ಹಿಸ್ಟರಿ ಆಫ್ ದಿ ಆರ್ಮೇನಿಯನ್ ಪೀಪಲ್: ಫ್ರಾಮ್ ಎನ್ಸಿಯಂಟ್ ಟೈಮ್ಸ್ ಟು ದಿ ಪ್ರೆಸೆಂಟ್ . ಕೋಸ್ಟಾ ಮೀಸಾ, CA: ಮಜ್ಡಾ, ಪು. 29. ISBN 1-5685-9141-1.
- ↑ ಕಾರ್ನೆಲಿಯಸ್ ನೆಪೋಸ್, ಹ್ಯಾನಿಬಲ್ 11.4-5.
- ↑ ಕಾರ್ನೆಲಿಯಸ್ ನೆಪೋಸ್, ಹ್ಯಾನಿಬಲ್ 12.5; ಜುವೆನಲ್, ಸಟೈರ್ಸ್ X. 164
- ↑ ೪೩.೦ ೪೩.೧ ಕಾರ್ನೆಲಿಯಸ್ ನೆಪೋಸ್, ಹ್ಯಾನಿಬಲ್ 13.1
- ↑ ಅಲನ್ ಎಮ್ರಿಕ್, ಪ್ರ್ಯಾಕ್ಟಿಕಲ್ ಲ್ಯಾಟಿನ್ Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಹಾಲಂಡ್, ರೋಮ್ ಅಂಡ್ ಹರ್ ಎನಿಮೀಸ್ 8
- ↑ ಲೈವಿ, ದಿ ವಾರ್ ವಿತ್ ಹ್ಯಾನಿಬಲ್ 22.61
- ↑ ಲಾಜೆಂಬಿ, ಹ್ಯಾನಿಬಲ್ಸ್ ವಾರ್ 237-8
- ↑ ಗೊಲ್ಡ್ಸ್ ವರ್ದಿ, ದಿ ಫಾಲ್ ಆಫ್ ಕಾರ್ತೇಜ್ 315
- ↑ ಜೆ. ಎಫ್. ಲಾಜೆಂಬಿ, ದಿ ಹ್ಯಾನಿಬಲಿಕ್ ವಾರ್, 254
- ↑ ಲೈವಿ, ದಿ ವಾರ್ ವಿತ್ ಹ್ಯಾನಿಬಲ್ 26.7 http://mcadams.posc.mu.edu/txt/ah/Livy/Livy26.html
- ↑ ಲೈವಿ, ದಿ ವಾರ್ ವಿತ್ ಹ್ಯಾನಿಬಲ್ 26.9 http://mcadams.posc.mu.edu/txt/ah/Livy/Livy26.html
- ↑ ೫೨.೦ ೫೨.೧ ಲೈವಿ, ದಿ ವಾರ್ ವಿತ್ ಹ್ಯಾನಿಬಲ್ 26.8 http://mcadams.posc.mu.edu/txt/ah/Livy/Livy26.html
- ↑ ಲೈವಿ, ದಿ ವಾರ್ ವಿತ್ ಹ್ಯಾನಿಬಲ್, 26.11
- ↑ ಜೆ. ಎಫ್. ಲಾಜೆಂಬಿ, ದಿ ಹ್ಯಾನಿಬಲಿಕ್ ವಾರ್ , ಪು. 254
- ↑ ಬೆಗ್ನಲ್, ದಿ ಪ್ಯುನಿಕ್ ವಾರ್ಸ್ 203
- ↑ ಲಾಜೆಂಬಿ, ಹ್ಯಾನಿಬಲ್ಸ್ ವಾರ್ 235
- ↑ ಲಾಜೆಂಬಿ ಹ್ಯಾನಿಬಲ್ಸ್ ವಾರ್ 254
- ↑ ಗೊಲ್ಡ್ಸ್ ವರ್ದಿ ದಿ ಫಾಲ್ ಆಫ್ ಕಾರ್ತೇಜ್ 366-7)
- ↑ Mary Macgregor. "The Death of Hannibal". The Story of Rome.
{{cite book}}
:|access-date=
requires|url=
(help); Unknown parameter|chapterurl=
ignored (help) - ↑ Appian, History of the Syrian Wars, §10 and §11 at Livius.org Archived 2015-12-27 ವೇಬ್ಯಾಕ್ ಮೆಷಿನ್ ನಲ್ಲಿ.
- ↑ M.O.B. Caspari, HANNIBAL ("grace of Baal") Archived 2007-10-11 ವೇಬ್ಯಾಕ್ ಮೆಷಿನ್ ನಲ್ಲಿ. 1911 Encyclopædia Britannica
- ↑ ಹ್ಯಾನಿಬಲ್ Archived 2016-01-01 ವೇಬ್ಯಾಕ್ ಮೆಷಿನ್ ನಲ್ಲಿ. ಅಟ್ CarpeNoctem.tv
- ↑ ಡೇಲಿ, ಗ್ರೆಗರಿ, ಕ್ಯಾನಿ: ದಿ ಎಕ್ಸ್ಪಿರಿಯನ್ಸ್ ಆಫ್ ಬ್ಯಾಟಲ್ ಇನ್ ದಿ ಸೆಕೆಂಡ್ ಪ್ಯುನಿಕ್ ವಾರ್ , ಪು.x
- ↑ ಕಾಟ್ರೆಲ್, ಲಿಯೋನಾರ್ಡ್, ಹ್ಯಾನಿಬಲ್: ಎನಿಮಿ ಆಫ್ ರೋಮ್ , ಪು. 134 Archived 2016-06-29 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಕಾರ್ಲ್ಟನ್, ಜೇಮ್ಸ್, ದಿ ಮಿಲಿಟರಿ ಕೊಟೇಶನ್ ಬುಕ್ , ನ್ಯೂ ಯಾರ್ಕ್ ಸಿಟಿ, ನ್ಯೂ ಯಾರ್ಕ್, ಥಾಮಸ್ ಡನ್ ಬುಕ್ಸ್, 2002
ಪ್ಯುನಿಕ್ ಯುದ್ಧಗಳ ಕುರಿತು ಇನ್ನಷ್ಟು ಕೃತಿಗಳು
ಬದಲಾಯಿಸಿ- ಬಿಕರ್ಮನ್, ಇಲಿಯಸ್ ಜೆ. "ಹ್ಯಾನಿಬಲ್ಸ್ ಕವೆನಂಟ್", ಅಮೆರಿಕನ್ ಜರ್ನಲ್ ಆಫ್ ಫಿಲಲಜಿ , Vol. 73, No. 1. (1952), ಪುಟಗಳು 1-23.
- ಬ್ರ್ಯಾಡ್ಫೋರ್ಡ್, ಈ, ಹ್ಯಾನಿಬಲ್ , ಲಂಡನ್, ಮ್ಯಾಕ್ ಮಿಲನ್ ಲಂಡನ್ ಲಿಮಿಟೆಡ್, 1981
- ಕೇವನ್, ಬಿ., ಪ್ಯುನಿಕ್ ವಾರ್ಸ್ , ಲಂಡನ್, ಜಾರ್ಜ್ ವರ್ಡನ್ಫೆಲ್ಡ್ ಅಂಡ್ ನಿಕಲ್ಸನ್ ಲಿಮಿಟೆಡ್, 1980
- ಕಾಟ್ರೆಲ್, ಲಿಯೋನಾರ್ಡ್, ಹ್ಯಾನಿಬಲ್: ಎನಿಮಿ ಆಫ್ ರೋಮ್ , ಡಾ ಕಾಪೋ ಪ್ರೆಸ್, 1992, ISBN 0-306-80498-0
- ಡೇಲಿ, ಗ್ರೆಗರಿ, ಕ್ಯಾನಿ: ದಿ ಎಕ್ಸಪಿರಿಯನ್ಸ್ ಆಫ್ ಬ್ಯಾಟಲ್ ಇನ್ ದಿ ಸೆಕೆಂಡ್ ಪ್ಯುನಿಕ್ ವಾರ್ , ಲಂಡನ್/ನ್ಯೂ ಯಾರ್ಕ್, ರೌಟ್ಲೆಜ್, 2002, ISBN 0-415-32743-1
- ಡೆಲ್ಬ್ರಕ್, ಹ್ಯಾನ್ಸ್, ವಾರ್ಫೆರ್ ಇನ್ ಎಂಟಿಕ್ವಿಟಿ , 1920, ISBN 0-8032-9199-X
- ಹೊಯೋಸ್, ಡೆಕ್ಸ್ಟರ್: ಹ್ಯಾನಿಬಲ್ಸ್ ಡೈನ್ಯಾಸ್ಟಿ: ಪವರ್ ಅಂಡ್ ಪೊಲಿಟಿಕ್ಸ್ ಇನ್ ದಿ ವೆಸ್ಟರ್ನ್ ಮೆಡಿಟರೇನಿಯನ್, 247-183 B.C. (ರೌಟ್ಲೆಜ್: ಲಂಡನ್ ಅಂಡ್ ನ್ಯೂ ಯಾರ್ಕ್, 2003; ಪೇಪರ್ ಬ್ಯಾಕ್ ಎಡಿಶನ್ ವಿತ್ ಮ್ಯಾಪ್ಸ್, 2005) - ಯುದ್ಧ ತಂತ್ರಗಳು ಮತ್ತು ಯೋಜನೆಗಳ ಕುರಿತು ಸಾಕಷ್ಟು ವಿವರಗಳನ್ನು ಹೊಂದಿದೆ.
- ಹೊಯೋಸ್, ಡೆಕ್ಸ್ಟರ್, ಹ್ಯಾನಿಬಲ್: ರೋಮ್ಸ್ ಗ್ರೇಟೆಸ್ಟ್ ಎನಿಮಿ , ಬ್ರಿಸ್ಟಲ್ ಫೀನಿಕ್ಸ್ ಪ್ರೆಸ್, 2005, ISBN 1-904675-46-8 (hbk) ISBN 1-904675-47-6 (pbk)
- ಲ್ಯಾಂಬ್, ಹೆರಾಲ್ಡ್, ಹ್ಯಾನಿಬಲ್: ಒನ್ ಮ್ಯಾನ್ ಅಗೆನ್ಸ್ಟ್ ರೋಮ್ , 1959.
- ಲ್ಯಾನ್ಸೆಲ್, ಸರ್ಜ್, ಹ್ಯಾನಿಬಲ್ , ಬ್ಲ್ಯಾಕ್ವೆಲ್ ಪಬ್ಲಿಷಿಂಗ್, 1999, ISBN 0631218483
- ಲೈವಿ, ಮತ್ತು ಡಿ ಸಲಿನ್ಕೋರ್ಟ್, ಔಬರಿ, ದಿ ವಾರ್ ವಿತ್ ಹ್ಯಾನಿಬಲ್: ಬುಕ್ಸ್ XXI-XXX ಆಫ್ ದಿ ಹಿಸ್ಟರಿ ಆಫ್ ರೋಮ್ ಫ್ರಾಮ್ ಇಟ್ಸ್ ಫೌಂಡೆಶನ್ , ಪೆಂಗ್ವಿನ್ ಕ್ಲಾಸಿಕ್ಸ್, ರೀಪ್ರಿಂಟ್ ಎಡಿಶನ್, ಜುಲೈ 30, 1965, ISBN 0-14-044145-X (pbk) (ಮತ್ತು 102)
- ಪ್ರೆವಸ್, ಜಾನ್, ಹ್ಯಾನಿಬಲ್ ಕ್ರಾಸಸ್ ದಿ ಆಲ್ಪ್ಸ್: ದಿ ಇನ್ವೇಶನ್ ಆಫ್ ಇಟಲಿ ಅಂಡ್ ದಿ ಸೆಕೆಂಡ್ ಪ್ಯುನಿಕ್ ವಾರ್ , 2001, ISBN 0306810700, ಅವನು ಯಾವ ಮಾರ್ಗವನ್ನು ಆಯ್ದುಕೊಂಡನು ಎಂಬುದನ್ನು ಪ್ರಶ್ನಿಸುತ್ತದೆ.
- ಟೆಲ್ಬರ್ಟ್, ರಿಚರ್ಡ್ ಜೆ. ಎ. , ಸಂ., ಅಟ್ಲಾಸ್ ಆಫ್ ಕ್ಲಾಸಿಕಲ್ ಹಿಸ್ಟರಿ , ರೌಟ್ಲೆಜ್, ಲಂಡನ್/ನ್ಯೂಯಾರ್ಕ್, 1985, ISBN 0-415-03463-9
- ಯಾರ್ಡ್ಲಿ, ಜೆ. ಸಿ. (ಟ್ರಾನ್ಸ್ಲೇಟರ್) ಅಂಡ್ ಹೊಯೋಸ್, ಡಿ. (ಇಂಟ್ರೋಡಕ್ಶನ್, ನೋಟ್ಸ್, ಮ್ಯಾಪ್ಸ್ ಅಂಡ್ ಅಪೆಂಡಿಕ್ಸ್ ಆನ್ ಹ್ಯಾನಿಬಲ್ಸ್ ಮಾರ್ಚ್ ಓವರ್ ದಿ ಆಲ್ಪ್ಸ್): ಲೈವಿ: ಹ್ಯಾನಿಬಲ್ಸ್ ವಾರ್: ಬುಕ್ಸ್ 21 ಟು 30 (ಆಕ್ಸ್ ಫರ್ಡ್ ವಲ್ದ್ಸ್ ಕ್ಲಾಸಿಕ್ಸ್: ಆಕ್ಸ್ ಫರ್ಡ್ ಯು. ಪ್ರೆಸ್, ಯು ಕೆ ಅಂಡ್ ಯು ಎಸ್ ಎ, 2006).
- ಡಾಜ್, ಥಿಯೋಡೋರ್. "ಹ್ಯಾನಿಬಲ್", ಹ್ಯಾನಿಬಲ್ ಡ್ಯುರಿಂಗ್ ದಿ ಸೆಕೆಂಡ್ ಪ್ಯುನಿಕ್ ವಾರ್ . ನ್ಯೂ ಯಾರ್ಕ್: ಬಾರ್ನ್ಸ್ ಅಂಡ್ ನೋಬಲ್
This article incorporates text from a publication now in the public domain: Chisholm, Hugh, ed. (1911). Encyclopædia Britannica (11th ed.). Cambridge University Press. {{cite encyclopedia}}
: Cite has empty unknown parameters: |separator=
and |HIDE_PARAMETER=
(help); Invalid |ref=harv
(help); Missing or empty |title=
(help)
ಹೊರ ಕೊಂಡಿಗಳು
ಬದಲಾಯಿಸಿ- ದಿ ಬಯೋಗ್ರಾಫಿ ಆಫ್ ಹ್ಯಾನಿಬಲ್ Archived 2011-05-14 ವೇಬ್ಯಾಕ್ ಮೆಷಿನ್ ನಲ್ಲಿ.
- ಹ್ಯಾನಿಬಲ್ , ಜೇಕಬ್ ಎಬಟ್ ರಿಂದ
- ಹ್ಯಾನಿಬಲ್ಸ್ ಲೈಫ್ ಬೈ ಕಾರ್ನೆಲಿಯಸ್ ನೆಪೋಸ್, ಲ್ಯಾಟಿನ್ ಟ್ರಾನ್ಸ್ ಕ್ರಿಪ್ಶನ್ ಅಂಡ್ ಟ್ರಾನ್ಸ್ ಲೇಶನ್ ಟು ಜರ್ಮನ್ Archived 2014-07-13 ವೇಬ್ಯಾಕ್ ಮೆಷಿನ್ ನಲ್ಲಿ.
- ನ್ಯಾಷನಲ್ ಜಿಯೋಗ್ರಾಫಿಕ್ ಚಾನಲ್ ನ ಸಾಕ್ಷ್ಯಚಿತ್ರ: ಹ್ಯಾನಿಬಲ್ ವರ್ಸಸ್ ರೋಮ್ ಪಾರ್ಟ್ I Archived 2009-11-29 ವೇಬ್ಯಾಕ್ ಮೆಷಿನ್ ನಲ್ಲಿ. ಅಂಡ್ ಪಾರ್ಟ್ II Archived 2009-11-29 ವೇಬ್ಯಾಕ್ ಮೆಷಿನ್ ನಲ್ಲಿ.