ಜೂನೋ
ಜೂನೋ - ಅಲಾಸ್ಕದ ರಾಜಧಾನಿ, ರೇವುಪಟ್ಟಣ. ಗ್ಯಾಸ್ಟಿನೋ ಕಾಲುವೆಯ ಬದಿಯಲ್ಲಿ ಉ.ಅ. 58° 18' ಮತು ಪ.ರೇ. 134° 24' ಮೇಲೆ ಇದೆ. ಜನಸಂಖ್ಯೆ 13,223 (1970 ಅಂ.).
ಈ ನಗರದ ಹಿನ್ನೆಲೆಯಲ್ಲಿ 3,756 ಎತ್ತರದ ಕಡಿದಾದ ಜೂನೋ ಶಿಖರವಿದೆ. 1880ರಲ್ಲಿ ಚಿನ್ನದ ಪತ್ತೆಯಾದಾಗ ಇಲ್ಲಿಗೆ ಜನಪ್ರವಾಹ ನುಗ್ಗಿತು. ಚಿನ್ನ ಇರುವ ಕಲ್ಲನ್ನು ಅರೆಯಲು 1882ರಲ್ಲಿ ಒಂದು ಗಿರಣಿ ಸ್ಥಾಪಿತವಾಯಿತು. ಟ್ರೆಡ್‍ವೆಲ್ ಗಣಿಯಲ್ಲಿ 1917ರಲ್ಲಿ ಪ್ರವಾಹ ತುಂಬಿ ಅದರ ಕಾರ್ಯಾಚರಣೆ ನಿಂತುಹೋಯಿತು. ಅಲಾಸ್ಕ-ಜೂನೋ ಗಣಿ 1944ರವರೆಗೂ ನಡೆಯುತ್ತಿತ್ತು. ಜೂನೋ ಪ್ರದೇಶದಲ್ಲಿ ನಿಕಲ್ ಅದುರುಗಳೂ ಆಸ್ಬೆಸ್ಟಾಸ್ ನಿಕ್ಷೇಪಗಳೂ ಇವೆ. ಗಣಿಕೆಲಸ, ಕಟ್ಟಿಗೆಗಳನ್ನು ಕಡಿಯುವುದು. ಪ್ರಾಣಿಗಳ ಚರ್ಮದ ಕೆಲಸ, ಕಾಗದ ತಯಾರಿಕೆ, ಮೀನುಗಾರಿಕೆ ಇತ್ಯಾದಿ ಕೈಗಾರಿಕೆಗಳಿವೆ. ವಿಮಾನ ನಿಲ್ದಾಣವೂ ಇದೆ. ಅಲಾಸ್ಕ ಪ್ರಾಂತೀಯ ಐತಿಹಾಸಿಕ ಗ್ರಂಥಾಲಯವೂ ವಸ್ತುಸಂಗ್ರಹಾಲಯವೂ ಈ ಪಟ್ಟಣದಲ್ಲಿವೆ. ಎಸ್ಕಿಮೋ ಮತ್ತು ಇಂಡಿಯನ್ ಜನರ ಜೀವನ ಮತ್ತು ಕಲೆಗಳ ಸುಂದರ ಮಾದರಿಗಳು ಈ ವಸ್ತುಸಂಗ್ರಹಾಲಯದಲ್ಲುಂಟು. ಫೇರ್ ಬ್ಯಾಂಕ್ಸ್ ಬಳಿಯಲ್ಲಿರುವ ಅಲಾಸ್ಕ ವಿಶ್ವವಿದ್ಯಾಲಯವೂ ಅದಕ್ಕೆ ಸಂಲಗ್ನವಾಗಿರುವ ಸಾರ್ವಜನಿಕ ಕಾಲೇಜುಗಳೂ ಇವೆ.
ಹವಾಗುಣ
ಬದಲಾಯಿಸಿಇಲ್ಲಿಯದು ಸಮಶೀತೋಷ್ಣ ವಾಯುಗಣ. ಮಳೆ ಹಚ್ಚಾಗಿ ಬೀಳುತ್ತದೆ. ವಾರ್ಷಿಕ ಮಳೆ 90"; ಆದರೆ ವಿಮಾನನಿಲ್ದಾಣದಲ್ಲಿ 30" ಗೂ ಕಡಿಮೆ. ಜನವರಿಯ ಸರಾಸರಿ ಉಷ್ಣತೆ 29.5° ಈ (-1° ಅ), ಜುಲೈದು 56° ಈ. (13° ಅ). ಚಳಿಗಾಲದಲ್ಲಿ 1" ಕ್ಕಿಂತ ಹೆಚ್ಚು ದಪ್ಪ ಬರ್ಫ ಕಟ್ಟುವಂತೆ ಹಿಮಪಾತವಾಗುವುದಿಲ್ಲ. ಬಂದರು ಬರ್ಫಗಟ್ಟುವುದಿಲ್ಲ.