ಸ್ಪಾ
ಅಂಗಮರ್ದನ ಅಥವಾ ಸ್ಪಾ ಎನ್ನುವುದು ಜಲಚಿಕಿತ್ಸೆಯೊಂದಿಗೆ ಹೊಂದಿಕೊಂಡ ಪದವಾಗಿದೆ. ಇದು ಬಾಲ್ನಿಯೋಥೆರಪಿ ಎಂದು ಕೂಡ ಕರೆಯಲ್ಪಡುತ್ತದೆ. ಸ್ಪಾ ನಗರಗಳು ಅಥವಾ ಸ್ಪಾ ಧಾಮಗಳು (ಬಿಸಿನೀರಿನ ಬುಗ್ಗೆಗಳ ಧಾಮಗಳು ಸೇರಿದಂತೆ) ಬಿಸಿ ಅಥವಾ ಖನಿಜಯುಕ್ತ ನೀರನ್ನು ಕುಡಿಯಲು ಮತ್ತು ಸ್ನಾನ ಮಾಡಲು ಒದಗಿಸುತ್ತವೆ. ಇದಲ್ಲದೆ ಅವು ಹಲವು ಆರೋಗ್ಯಕ್ಕೆ ಸಂಬಂಧಿಸಿದ ಚಿಕಿತ್ಸೆಗಳನ್ನೂ ನೀಡುತ್ತವೆ. ಖನಿಜಯುಕ್ತ ನೀರಿನ ಚಿಕಿತ್ಸಕ ಶಕ್ತಿಗಳಲ್ಲಿನ ಈ ನಂಬಿಕೆ ಪ್ರಾಗೈತಿಹಾಸಿಕ ಕಾಲಕ್ಕೆ ಹೋಗುತ್ತದೆ. ಆ ರೀತಿಯ ಆಚರಣೆಗಳು ಪ್ರಪಂಚದಾದ್ಯಂತ ಜನಪ್ರಿಯವಾಗಿದ್ದರೂ, ಅವುಗಳು ಯೂರೋಪ್ ಮತ್ತು ಜಪಾನ್‌ನಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. ಡೇ ಸ್ಪಾಗಳು ಕೂಡ ಅಷ್ಟೇ ಜನಪ್ರಿಯ ಮತ್ತು ಹಲವು ಚಿಕಿತ್ಸೆಯ ಸೌಲಭ್ಯಗಳನ್ನು ಒದಗಿಸುತ್ತವೆ.
ಪದದ ವ್ಯುತ್ಪತ್ತಿ
ಬದಲಾಯಿಸಿರೋಮನ್ನರ ಕಾಲದಲ್ಲಿ ಪ್ರಚಲಿತದಲ್ಲಿದ್ದ ಸ್ಪಾ, ಬೆಲ್ಜಿಯಂ ಎಂಬ ಪಟ್ಟಣದ ಹೆಸರಿನಿಂದ ಈ ಪದ ವ್ಯುತ್ಪತ್ತಿಯಾಗಿದ್ದು, ಆಗ ಅಲ್ಲಿನ ಸ್ಥಳವನ್ನು ಆಕ್ವಾ ಸ್ಪದನೆ,[೧] ಎಂದು ಕರೆಯಲಾಗುತ್ತಿತ್ತು. ಬಹುಶಃ ಇದು ಲ್ಯಾಟಿನ್ ಪದ "spargere", ಅರ್ಥ ಚೆದುರು, ಚಿಮುಕಿಸು ಅಥವಾ ಒದ್ದೆಯಾಗು, ಇವುಗಳಿಗೆ ಸಂಬಂಧಿಸಿದ್ದಿರಬಹುದು.[೨]
ಮಧ್ಯಯುಗದ ಕಾಲದಿಂದಲೂ ಕಬ್ಬಿಣದಂಶದ ಕೊರತೆಯಿಂದ ಕಾಣಿಸಿಕೊಂಡ ಕಾಯಿಲೆಗಳನ್ನು ಚಾಲಿಬೀಟ್ (ಕಬ್ಬಿಣದಂಶ ಹೊಂದಿದ) ಎಂಬ ಬುಗ್ಗೆಯ ನೀರಿನಿಂದ (1326ರಲ್ಲಿ, ಐರನ್‍ಮಾಸ್ಟರ್ ಕಾಲಿನ್ ಲೀ ಲೋಪ್,[೩] ಬುಗ್ಗೆಯನ್ನು ಎಸ್ಪಾ , ಒಂದು ವ್ಯಾಲೂನ್ ಎಂಬ ಪದವನ್ನು "ಚಿಲುಮೆ"ಗೆ[೩] ಸಮನಾರ್ಥವಾಗಿ ಕರೆಯುತ್ತಿದ್ದಾಗ), ಒಂದು ಚಿಕಿತ್ಸಾ ಪದ್ಧತಿಯನ್ನು ಕಂಡುಹಿಡಿದಿದ್ದೇನೆಂದು ಘೋಷಿಸಿದ.
16ನೇ ಶತಮಾನದ ಇಂಗ್ಲೇಡ್ನಲ್ಲಿ ಹಳೆಯ ರೋಮನ್ನ ವೈದ್ಯಕೀಯ ಸ್ನಾನದ ಕಲ್ಪನೆಗಳು ಬಾಥ್ ನಂತಹ ಪಟ್ಟಣಗಳಲ್ಲಿ ಪುನರುಜ್ಜೀವನಗೊಂಡವು ಮತ್ತು ೧೫೭೧ರಲ್ಲಿ ಬೆಲ್ಜಿಯನ್ ಪಟ್ಟಣ (ಸ್ಪಾ ಎಂದು ಕರೆದಿದ್ದ) ಕ್ಕೆ ಆಗಮಿಸಿದ್ದ ವಿಲಿಯಂ ಸ್ಲಿಂಗ್ಸ್ಬಿ ಚಾಲಿಬೀಟ್ ಬುಗ್ಗೆಯನ್ನು ಯಾರ್ಕ್ಷೈರ್ ಎಂಬಲ್ಲಿ ಕಂಡುಹಿಡಿದ. ಇಂಗ್ಲೆಂಡ್‌ನಲ್ಲಿ ಔಷಧಯುಕ್ತ ನೀರನ್ನುಕುಡಿಯಲು ಸ್ಥಾಪಿಸಲಾಗಿದ್ದ ಹ್ಯಾರೊಗೇಟ್ ಎಂದು ಕರೆಯಲ್ಪಟ್ಟಿದ್ದ ಮೊದಲ ವಿಶ್ರಾಂತಿಧಾಮದ್ದಲ್ಲಿ ಅವನು ಮುಚ್ಚಲ್ಪಟ್ಟ ಬಾವಿಯೊಂದನ್ನು ಕಟ್ಟಿಸಿದ್ದ. ನಂತರ ೧೫೯೬ರಲ್ಲಿ ಡಾ.ಟಿಮೊಥಿ ಬ್ರೈಟ್ ಈ ವಿಶ್ರಾಂತಿಧಾಮವನ್ನು ದಿ ಇಂಗ್ಲೀಷ್ ಸ್ಪಾ , ಎಂದು ಕರೆದು, (ಸ್ಪಾ ಎನ್ನುವ ಪದದ ಬಳಕೆಯನ್ನು ಬೆಲ್ಜಿಯನ್ ಪಟ್ಟಣದ ಒಂದು ಸ್ಥಳದ ಹೆಸರಿಗಿಂತ ಹೆಚ್ಚಾಗಿ ಒಂದು ವಿಶಿಷ್ಟ ಅರ್ಥದಲ್ಲಿ ಬಳಸಲು ಮೊದಲುಮಾಡಿದ. ಮೊದಲು ಈ ಪದವನ್ನು ಮುಖ್ಯವಾಗಿ ಸ್ನಾನ ಮಾಡುವುದಕ್ಕಿಂತ ನೀರು ಕುಡಿಯುವ ಧಾಮಗಳಿಗೆ ಬಳಸುವಂತಾಯಿತು, ಆದರೆ ಈ ವ್ಯತ್ಯಾಸ ಕ್ರಮೇಣ ಕಡಿಮೆಯಾಯಿತು ಮತ್ತು ಬಹಳಷ್ಟು ಸ್ಪಾಗಳು ಹೊರಗಿನ ಪರಿಹಾರಗಳನ್ನು ಕೂಡ ಒದಗಿಸಿದವು.[೪] ವ್ಯವಹಾರದ ಸಂದರ್ಭದಲ್ಲಿ ಸಾಮಾನ್ಯವಾಗಿ ಈ ಪದ ಬಹಳಷ್ಟು ಲ್ಯಾಟಿನ್ ಪದಪುಂಜಗಳಾದ "ಸಾಲಸ್ ಪರ್ ಆಕ್ವಂ" ಅಥವಾ "ಸಾನಿಟಸ್ ಪರ್ ಆಕ್ವಂ" ಎನ್ನುವ "ನೀರಿನ ಮೂಲಕ ಆರೋಗ್ಯ" ಎಂಬರ್ಥದ ಆಕ್ರೊನಿಮ್ ಎಂದು ಹೇಳಲಾಗುತ್ತಿತ್ತು.[೫] ಇದು ಬಹಳ ಅಸಂಭವನೀಯವಾದದ್ದು: ಶಬ್ದವ್ಯುತ್ಪತ್ತಿ 21ನೇ ಶತಮಾನಕ್ಕಿಂತ ಮೊದಲು ಕಾಣಿಸಿಕೊಳ್ಳಲಿಲ್ಲ ಮತ್ತು ಬಹುಶಃ ಇದು "ಬ್ಯಾಕ್ರೊನಿಮ್" ಏಕೆಂದರೆ 20ನೇ ಶತಮಾನಕ್ಕೆ ಮೊದಲು ಆಕ್ರೊನಿಮ್ಸ್ ಭಾಷೆಯ ಒಳನುಸುಳಿದ್ದಾವೆ;[೬] ಅಥವಾ ಆ ಸ್ಥಳಕ್ಕೆ ಗೊತ್ತಿರುವ ರೋಮನ್ ಹೆಸರು ಹೊಂದಿಕೆಯಾಗುತ್ತದೆ ಎಂಬುದಕ್ಕೆ ಯಾವುದೆ ಪುರಾವೆಗಳಿಲ್ಲ.
ಇತಿಹಾಸ
ಬದಲಾಯಿಸಿಕೆಲವು ವ್ಯಾದಿಗಳಿಗೆ ಚಿಕಿತ್ಸೆ ದೊರೆಯುತ್ತದೆಂಬ ಭರವಸೆಯೊಂದಿಗೆ ಬಿಸಿ ನೀರಿನ ಅಥವಾ ತಣ್ಣೀರಿನ ಬುಗ್ಗೆಗಳೆಡೆಗೆ ಪ್ರಯಾಣಿಸುವ ಪದ್ಧತಿಯನ್ನು ಪ್ರಾಗೈತಿಹಾಸಿಕ ಕಾಲಕ್ಕೆ ಗುರುತಿಸಬಹುದು. ಫ್ರಾನ್ಸ್ ಮತ್ತು ಜೆಕ್ ಗಣರಾಜ್ಯದ ಸನಿಹವಿರುವ ಬಿಸಿನೀರಿನ ಬುಗ್ಗೆಗಳ ಬಗೆಗಿನ ಪುರಾತತ್ವಶಾಸ್ತ್ರದ ಸಂಶೋಧನೆಗಳು ಕಂಚಿನ ಯುಗದ ಆಯುಧಗಳು ಮತ್ತು ಕಾಣಿಕೆಗಳ ಬಗ್ಗೆ ತಿಳಿಯಪಡಿಸಿದವು. ಗ್ರೇಟ್ ಬ್ರಿಟನ್‌ನಲ್ಲಿ, ಪುರಾತನ ದಂತಕಥೆಗಳು ಸೆಲ್ಟಿಕ್ ರಾಜರುಗಳು ಬಾಥ್, ಇಂಗ್ಲೇಂಡ್ನಲ್ಲಿ ಬಿಸಿನೀರಿನ ಬುಗ್ಗೆಗಳನ್ನು ಕಂಡುಹಿಡಿದಿದ್ದರು ಎಂಬ ಗೌರವವನ್ನು ನೀಡಿದ್ದವು.[೭]
ಪ್ರಪಂಚದಾದ್ಯಂತ ಬಹಳಷ್ಟು ಜನರು ನಿರ್ಧಿಷ್ಟ ಬುಗ್ಗೆ, ಬಾವಿ ಅಥವಾ ನದಿಯಲ್ಲಿ ಸ್ನಾನ ಮಾಡುವುದರಿಂದ ದೈಹಿಕ ಹಾಗು ಆಧ್ಯಾತ್ಮಿಕವಾಗಿ ಶುದ್ಧೀಕರಣವಾಗುತ್ತದೆ ಎಂದು ನಂಬಿದ್ದರು. ಶಾಸ್ತ್ರೋಕ್ತ ಶುದ್ಧೀಕರಣದ ವಿಧಾನಗಳು, ಮೂಲ ಅಮೇರಿಕನ್ನರು, ಪರ್ಷಿಯನ್ನರು, ಬ್ಯಾಬಿಲೋನಿಯನ್ನರು, ಈಜಿಪ್ಟಿಯನ್ನರು, ಗ್ರೀಕರು ಮತ್ತು ರೋಮನ್ನರಲ್ಲಿ ಅಸ್ಥಿತ್ವದಲ್ಲಿದ್ದವು. ಇಂದು, ನೀರಿನ ಮೂಲಕ ಶಾಸ್ತ್ರೋಕ್ತ ಶುದ್ಧೀಕರಣವನ್ನು ಯಹೂದಿಗಳ, ಮುಸ್ಲಿಂರ, ಕ್ರಿಶ್ಚಿಯನ್ರ, ಬೌದ್ಧರ ಮತ್ತು ಹಿಂದುಗಳ ಧಾರ್ಮಿಕ ಆಚರಣೆಗಳಲ್ಲಿ ಮಾತ್ರ ಕಾಣಬಹುದು. ಈ ಆಚರಣೆಗಳು ನೀರಿನ ಗುಣಪಡಿಸುವ ಮತ್ತು ಶುದ್ಧೀಕರಿಸುವ ಗುಣಲಕ್ಷಣಗಳ ಬಗೆಗಿನ ಪುರಾತನ ನಂಬಿಕೆಗಳನ್ನು ಪ್ರತಿಬಿಂಬಿಸುತ್ತವೆ. ಸಂಕೀರ್ಣವಾದ ಸ್ನಾನದ ಆಚರಣೆಗಳು ಪುರಾತನ ಈಜಿಪ್ಟ್, ಇತಿಹಾಸಪೂರ್ವ ನಗರಗಳಾದ ಇಂಡಸ್ ವ್ಯಾಲಿ, ಮತ್ತು ಏಜಿಯನ್ ನಾಗರಿಕತೆಗಳಲ್ಲಿ ಬಳಕೆಯಲ್ಲಿದ್ದವು. ಬಹಳಷ್ಟು ಸಂದರ್ಭ, ಪುರಾತನ ಜನರು ನೀರಿನ ಸುತ್ತಲೂ ಚಿಕ್ಕ ಕಟ್ಟಡಗಳನ್ನು ಕಟ್ಟಿದ್ದರು, ಮತ್ತು ಅವರು ಕಟ್ಟಿದ್ದು ಬಹಳ ತಾತ್ಕಾಲಿಕವಾಗಿದ್ದವು.[೭]
ಗ್ರೀಕ್ ಹಾಗೂ ರೋಮನ್ ಅವಧಿಯಲ್ಲಿ ಸ್ನಾನದ ಪ್ರಕ್ರಿಯೆ
ಬದಲಾಯಿಸಿಹಿಂದಿನ ಕೆಲವು ಪಾಶ್ಚಾತ್ಯ ಸ್ನಾನದ ಆಚರಣೆಗಳ ವಿವರಗಳು ಗ್ರೀಸ್‌ನಿಂದ ಬಂದವುಗಳು. ಗ್ರೀಕರು ಆರಂಭಿಸಿದ ಸ್ನಾನದ ಕಟ್ಟುಪಾಡುಗಳು ಆಧುನಿಕ ಸ್ಪಾದ ಕಾರ್ಯವಿಧಾನಗಳಿಗೆ ಭದ್ರ ಬುನಾದಿಯಾದವು. ಈ ಏಜಿಯನ್ ಜನರು ಚಿಕ್ಕ ಸ್ನಾನದ ತೊಟ್ಟಿಗಳು, ಕೈ ತೊಳೆದುಕೊಳ್ಳುವ ಬೊಗುಣಿಗಳು ಮತ್ತು ಕಾಲು ತೊಳೆಯುವ ಸ್ಥಳವನ್ನು ತಮ್ಮ ವೈಯಕ್ತಿಕ ಶುಚಿತ್ವಕ್ಕೆ ಬಳಸುತ್ತಿದ್ದರು. ಹಿಂದಿನ ಆ ರೀತಿಯ ಕುರುಹುಗಳೆಂದರೆ, ಕ್ರಿ.ಶ ಎರಡನೇ ಮಿಲೆನಿಯಂನ ಮಧ್ಯಭಾಗದಲ್ಲಿ ನಾಸಸ್ ಮತ್ತು ಕ್ರೇಟ್ ಎಂಬಲ್ಲಿನ ಅರಮನೆಯ ಸಂಕೀರ್ಣದಲ್ಲಿ ದೊರೆತ ಸ್ನಾನಗೃಹಗಳು, ಅಕ್ರೊಟಿರಿ ಮತ್ತು ಸ್ಯಾಟೋರಿನಿ ಎಂಬಲ್ಲಿ ಉತ್ಖನನದಿಂದ ತೆಗೆಯಲ್ಪಟ್ಟ ಅಮೃತಶಿಲೆಯ ವೈಭವೋಪೇತ ಸ್ನಾನಗೃಹಗಳು. ಕೆಲವು ಸ್ವಾಭಾವಿಕ ನೀರಿನ ಬುಗ್ಗೆಗಳನ್ನು ಅಥವಾ ಟೈಡಲ್ ಪೂಲ್ಗಳನ್ನು ದೇವರೆ ಕಾಯಿಲೆಗಳನ್ನು ಗುಣಪಡಿಸಲು ಕರುಣಿಸಿದ್ದಾನೆ ಎಂದು ಗ್ರೀಕ್ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ಪವಿತ್ರ ಕೊಳಗಳ ಸುತ್ತಲೂ, ಚಿಕಿತ್ಸೆ ಬಯಸುವವರಿಗಾಗಿ ಗ್ರೀಕರು ಸ್ನಾನಗೃಹದ ಸೌಲಭ್ಯಗಳನ್ನು ಒದಗಿಸಿದ್ದರು. ಬೇಡುವವರು ಈ ಸ್ಥಳಗಳಲ್ಲಿ ದೇವರುಗಳಿಗಾಗಿ ಕಾಣಿಕೆಗಳನ್ನು ಬಿಟ್ಟುಹೋಗುತ್ತಿದ್ದರು ಮತ್ತು ಕಾಯಿಲೆ ವಾಸಿಯಗುತ್ತದೆಂಬ ಭರವಸೆಯಲ್ಲಿ ಸ್ನಾನ ಮಾಡುತ್ತಿದ್ದರು. ಸ್ಪಾರ್ಟನ್ನರು ಒಂದು ಪುರಾತನ ಹಬೆಯ ಸ್ನಾನಗೃಹವನ್ನು ಅಭಿವೃದ್ಧಿಪಡಿಸಿದರು ಗ್ರೀಕ್‌ನ ಪ್ರಾಚೀನ ಬಾಲ್ನ್ಯೂಮ್ (ಸ್ನಾನಗೃಹ) ಸೆರಾಂಗೆಂ ದಲ್ಲಿ ಸ್ನಾನ ಮಾಡುವ ಕೋಣೆಗಳು ಗುಡ್ಡದ ಕಡೆಗೆ ತೆರೆದುಕೊಂಡಿರುತ್ತಿದ್ದವು ಮತ್ತು ಅದರಿಂದ ಬಿಸಿ ನೀರಿನ ಬುಗ್ಗೆಗಳು ಹೊರಬರುತ್ತಿದ್ದವು ಕೋಣೆಯ ಮೇಲ್ಬಾಗದಲ್ಲಿನ ಕಲ್ಲಿನವರೆಗೂ ನಿರ್ಮಿಸಲ್ಪಟ್ಟ ಗೂಡುಗಳಲ್ಲಿ ಸ್ನಾನ ಮಾಡುವವರ ಬಟ್ಟೆಗಳನ್ನುಇಡಲಾಗುತ್ತಿತ್ತು. ಅದರಲ್ಲಿ ಒಂದು ಸ್ನಾನಗೃಹದ ಕೋಣೆಯು ಒಬ್ಬ ಚಾಲಕ ಮತ್ತು ನಾಲ್ಕು ಕುದುರೆಗಳು ಎಳೆಯುತ್ತಿರುವ ರಥ, ಒಬ್ಬ ಹೆಂಗಸು, ಅವಳನ್ನು ಹಿಂಬಾಲಿಸಿ ಬರುತ್ತಿದ್ದ ಎರಡು ನಾಯಿಗಳು, ಮತ್ತು ಅದರ ಕೆಳಗೆ ಒಂದು ಡಾಲ್ಫಿನ್ನಿನ ಚಿತ್ರಗಳಿಂದ ಶೃಂಗರಿಸಿದ ನೆಲವನ್ನು ಹೊಂದಿತ್ತು. ಈ ರೀತಿಯಾಗಿ ಪುರಾತನ ಗ್ರೀಕರು ಸ್ವಾಭಾವಿಕ ಲಕ್ಷಣಗಳನ್ನು ಬಳಸಿದ್ದರೂ, ಅವುಗಳನ್ನು ವಿಸ್ತರಿಸಿದ್ದರು ಮತ್ತು ಅಲಂಕಾರಗಳು ಮತ್ತು ನಾಗವಂದಿಗೆಗಳು ಮುಂತಾದ ತಮ್ಮದೇ ಸೌಲಭ್ಯಗಳನ್ನು ಸೇರಿಸಿದ್ದರು. ನಂತರದ ಗ್ರೀಕರ ನಾಗರೀಕತೆಯಲ್ಲಿ, ಸ್ನಾನಗೃಹಗಳನ್ನು ವ್ಯಾಯಾಮ ಶಾಲೆಗಳಿಗೆ ಸೇರಿಕೊಂಡಂತೆ ಕಟ್ಟಲಾಗಿತ್ತು.[೭]
ರೋಮನ್ನರು ಗ್ರೀಕರ ಬಹಳಷ್ಟು ಸ್ನಾನದ ಆಚರಣೆಗಳನ್ನು ಅನುಕರಿಸಿದರು. ರೋಮನ್ನರು ಸ್ನಾನಗೃಹಗಳ ಅಳತೆ ಮತ್ತು ಸಂಕೀರ್ಣತೆಗಳಲ್ಲಿ ಗ್ರೀಕರನ್ನೇ ಮೀರಿಸಿದ್ದರು. ಇದಕ್ಕೆ ಹಲವು ಅಂಶಗಳು ಅಂದರೆ ದೊಡ್ಡ ಗಾತ್ರದ ಮತ್ತು ಹೆಚ್ಚು ಜನಸಂಖ್ಯೆ ಹೊಂದಿದ ರೋಮನ್ ನಗರಗಳು, ಕಟ್ಟುತ್ತಿದ್ದ ಕಾಲುವೆಗಳ ಕಡೆಗೆ ಹರಿಯುತ್ತಿದ್ದ ನೀರಿನ ಲಭ್ಯತೆ ಮತ್ತು ದೊಡ್ಡ ಭವನಗಳನ್ನು ತುಂಬಾ ಸುಲಭವಾಗಿ, ಸುರಕ್ಷಿತವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಭವನಗಳನ್ನು ಕಟ್ಟಲು ಕಾರಣವಾದ ಸಿಮೆಂಟ್ನ ಸಂಶೋಧನೆ ಕಾರಣವಾಗಿದ್ದವು. ಗ್ರೀಸ್‌ನಲ್ಲಿದ್ದಂತೆ, ರೋಮನ್ನಿನ ಸ್ನಾನಗೃಹಗಳು ಸಾಮಾಜಿಕ ಮತ್ತು ಮನರಂಜನಾ ಚಟುವಟಿಕೆಗಳಿಗೆ ಕೇಂದ್ರಸ್ಥಾನವಾಗಿದ್ದವು. ರೋಮನ್ ಸಾಮ್ರಾಜ್ಯ ವಿಸ್ತಾರವಾದಂತೆ, ಸಾರ್ವಜನಿಕ ಸ್ನಾನಗೃಹದ ಕಲ್ಪನೆ ಮೆಡಿಟರೇನಿಯನ್‌ನ ಎಲ್ಲ ಭಾಗಗಳಿಗೆ ಮತ್ತು ಯೂರೋಪ್ ಹಾಗು ಉತ್ತರ ಆಫ್ರಿಕಾದ ಹಲವು ಪ್ರದೇಶಗಳಿಗೆ ಹರಡಿತು. ಕಾಲುವೆಗಳ ನಿರ್ಮಾಣದೊಂದಿಗೆ, ರೋಮನ್ನರು ಕೇವಲ ಗೃಹೋಪಯೋಗಿ, ಕೃಷಿ ಮತ್ತು ಕೈಗಾರಿಕ ಉದ್ಧೇಶಗಳಿಗಲ್ಲದೆ, ಅವರ ಬಿಡುವಿನ ಪ್ರವೃತ್ತಿಗಳಿಗೂ ಸಾಕಾಗುವಷ್ಟು ನೀರನ್ನು ಹೊಂದಿದ್ದರು. ಈ ಕಾಲುವೆಗಳಿಂದ ಪಡೆಯಲಾಗುತ್ತಿದ್ದ ನೀರನ್ನು ನಂತರ ಬಿಸಿ ಮಾಡಿ ಸ್ನಾನಕ್ಕೆ ಬಳಸಲಾಗುತ್ತಿತ್ತು. ಇಂದು, ರೋಮನ್ನ ಸ್ನಾನ ಗೃಹದ ವಿಸ್ತರಣೆ ಯೂರೋಪ್, ಆಫ್ರಿಕಾ ಮತ್ತು ಮಧ್ಯ ಪ್ರಾಚ್ಯದವರೆಗೂ ಹರಡಿತ್ತು ಎಂದು ಅಲ್ಲಿನ ಅವಶೇಷಗಳಿಂದ ಮತ್ತು ಪುರಾತತ್ವ ಉತ್ಖನನದಿಂದ ತಿಳಿಯಲ್ಪಟ್ಟಿದೆ.[೭]
ರೋಮನ್ನರು ತಮ್ಮ ಕಾಲನಿಗಳಲ್ಲಿ ಸ್ನಾನಗೃಹಗಳನ್ನು ಅಭಿವೃದ್ಧಿಪಡಿಸುವದರೊಂದಿಗೆ, ಯೂರೋಪಿನಲ್ಲಿ ದೊರೆಯುತ್ತಿದ್ದ ಬಿಸಿನೀರಿನ ಬುಗ್ಗೆಗಳ ಉಪಯೋಗವನ್ನು ಪಡೆದು ಫ್ರಾನ್ಸ್‌ನ ಏಕ್ಸ್ ಮತ್ತು ವಿಚಿ, ಇಂಗ್ಲೇಂಡಿನ ಬಾಥ್ ಮತ್ತು ಬಕ್ಸ್ಟನ್, ಜರ್ಮನಿಯ ಆಚೆನ್ ಮತ್ತು ವೈಸ್ಬಾಡೆನ್, ಹಂಗೇರಿಯ ಬಾಡೆನ್, ಆಸ್ಟ್ರಿಯಾ ಮತ್ತು ಆಕ್ವಿಂಕಂ ಮೊದಲಾದ ಸ್ಥಳಗಳಲ್ಲಿ ಸ್ನಾನಗೃಹಗಳನ್ನು ಕಟ್ಟಿಸಲಾಯಿತು. ಈ ಸ್ನಾನಗೃಹಗಳು ರೋಮನ್ ಸಮುದಾಯಗಳಲ್ಲಿ ಮನೋರಂಜನೆ ಮತ್ತು ಸಾಮಾಜಿಕ ಚಟುವಟಿಕೆಗಳ ತಾಣಗಳಾಗಿ ಮಾರ್ಪಟ್ಟವು ಗ್ರಂಥಾಲಯಗಳು, ಉಪನ್ಯಾಸ ಕೋಣೆಗಳು, ವ್ಯಾಯಾಮಶಾಲೆಗಳು ಮತ್ತು ಸಾಮಾನ್ಯ ಕೈತೋಟಗಳು ಕೆಲವು ಸ್ನಾನಗೃಹಗಳ ಭಾಗವಾಗಿದ್ದವು ಇದರ ಜತೆಗೆ, ರೋಮನ್ನರು ತಮ್ಮ ಸಂದಿವಾತ, ಆರ್ಥೈಟಿಸ್ ಮತ್ತು ಆಹಾರ ಮತ್ತು ಮದ್ಯಪಾನದಲ್ಲಿ ಹೆಚ್ಚು ತೊಡಗುವುದರಿಂದಾಗುತ್ತಿದ್ದ ನೋವಿನಿಂದ ಬಿಡುಗಡೆ ಪಡೆಯಲು ಬಿಸಿ ನೀರನ್ನು ಉಪಯೋಗಿಸುತ್ತಿದ್ದರು. 337A.Dಯ ಆರಂಭದಲ್ಲಿ ಚಕ್ರವರ್ತಿ ಕಾನ್ಸ್ಟಂಟೈನ್ನ ಸಾವಿನೊಂದಿಗೆ ಪೂರ್ವದಲ್ಲಿ ರೋಮನ್ ಸಾಮ್ರಾಜ್ಯ ಅವನತಿಯೆಡೆಗೆ ಸಾಗಿದ್ದರಿಂದಾಗಿ, ರೋಮನ್ ಸೈನಿಕ ದಳ ತಮ್ಮ ಹೊರಗಿನ ಪ್ರಾಂತ್ಯಗಳನ್ನು ತೊರೆದವು ಮತ್ತು ಸ್ಥಳೀಯ ಜನರು ಸ್ನಾನಗೃಹಗಳನ್ನು ವಶಪಡಿಸಿಕೊಳ್ಳಲು ಅಥವಾ ನಾಶಪಡಿಸಲು ಬಿಟ್ಟರು.[೭]
ಈ ರೀತಿಯಾಗಿ, ರೋಮನ್ನರು ಸ್ನಾನಗೃಹಗಳನ್ನು ಒಂದು ಲಲಿತ ಕಲೆಯನ್ನಾಗಿ ಉತ್ತುಂಗಕ್ಕೇರಿಸಿದರು ಮತ್ತು ಅವರ ಸ್ನಾನಗೃಹಗಳು ಭೌತಿಕವಾಗಿ ಈ ಎಲ್ಲ ಉತ್ಕರ್ಷಗಳನ್ನು ಬಿಂಬಿಸುತ್ತಿದ್ದವು. ಉದಾಹರಣೆಗೆ ರೋಮನ್ ಸ್ನಾನಗೃಹಗಳು ಸರಳವಾದ ವಿಲೀನತೆ ಅಥವಾ ಬೆವರಿಳಿಸುವ ವಿಧಾನಗಳಿಗಿಂತ ತೀರಾ ಸಂಕೀರ್ಣ ಆಚರಣೆಗಳನ್ನು ಒಳಗೊಂಡಿದ್ದವು. ಬಹಳಷ್ಟು ಸ್ನಾನ ಪದ್ಧತಿಯ ಆಚರಣೆಗಳು- ಬಟ್ಟೆ ಕಳಚುವುದು, ಸ್ನಾನ ಮಾಡುವುದು, ಬೆವರನ್ನು ಬಸಿಯುವುದು, ಅಂಗಮರ್ಧನ ಮಾಡುವುದು ಮತ್ತು ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಬೇರೆ ಬೇರೆ ಕೋಣೆಗಳ ಅವಶ್ಯಕತೆಯಿತ್ತು ಮತ್ತು ಆ ಕಾರ್ಯಗಳನ್ನು ಮಾಡಲು ರೋಮನ್ನರು ಪ್ರತ್ಯೇಕ ಕೋಣೆಗಳನ್ನು ಕಟ್ಟಿಸಿದ್ದರು. ಸ್ತ್ರೀ- ಪುರುಷರ ವಿಂಡಣೆ ಮತ್ತು ಸ್ನಾನ ಪದ್ಧತಿಯೊಂದಿಗೆ ನೇರವಾಗಿ ಸಂಬಂಧ ಹೊಂದಿರದ ವಿಹಾರ-ವಿನೋದಗಳ ಕೂಡುವಿಕೆ ಸ್ನಾನಗೃಹಗಳ ಆಕಾರ ಮತ್ತು ಸ್ವರೂಪದ ಮೇಲೆ ನೇರ ಪರಿಣಾಮಗಳನ್ನು ಬೀರಿದ್ದವು. ಬಹು ವಿವರವಾದ ರೋಮನ್ ಸ್ನಾನ ಪದ್ಧತಿಯ ಆಚರಣೆಗಳು ಮತ್ತು ಅದರ ರೂಪವಾದ ವಾಸ್ತುಶಿಲ್ಪ ನಂತರದ ಯೂರೋಪಿಯನ್ ಮತ್ತು ಅಮೇರಿಕಾದ ಸ್ನಾನ ಪದ್ಧತಿಯ ಸೌಲಭ್ಯಗಳಿಗೆ ನಿದರ್ಶನಗಳಾಗಿ ಮಾರ್ಪಟ್ಟವು. ಹದಿನೆಂಟನೆಯ ಶತಮಾನದ ಕೊನೆಯ ಹೊತ್ತಿಗೆ ಸಾಮಾನ್ಯ ಕೈತೋಟದ ಸ್ಥಳಗಳು ಮತ್ತು ರೋಮನ್ನರಿಗೆ ಸರಿಸಮನಾದ ಶ್ರೀಮಂತ ವಾಸ್ತುಶಿಲ್ಪದ ವ್ಯವಸ್ಥೆಗಳು ಯೂರೋಪಿನಲ್ಲಿ ಪುನರ್‌ಕಾಣಿಸಿಕೊಂಡವು. ಅಮೇರಿಕಾದ ಪ್ರಮುಖ ಸ್ಪಾಗಳು ಒಂದು ಶತಮಾನದ ನಂತರ ಇದನ್ನು ಅನುಕರಿಸಿದವು.[೭]
ಮಧ್ಯಯುಗದಲ್ಲಿ ಸ್ನಾನದ ಪ್ರಕ್ರಿಯೆ
ಬದಲಾಯಿಸಿರೋಮನ್ ಸಾಮ್ರಾಜ್ಯದ ಅವನತಿಯ ನಂತರ ಸಾರ್ವಜನಿಕ ಸ್ನಾನಗೃಹಗಳು ವ್ಯಭಿಚಾರದಂತಹ ಚಟುವಟಿಕೆಗಳ ತಾಣಗಳಾದವು ಮತ್ತು ಅವು ರೋಗಗಳನ್ನು ಗುಣಪಡಿಸುವುದಕ್ಕೆ ಬದಲಾಗಿ ಹರಡುವುದಕ್ಕೆ ಕಾರಣವಾದವು. ಯೂರೋಪಿನ ಜನತೆಯಲ್ಲಿ ಬೆಳೆದ ಒಂದು ಸಾಮಾನ್ಯ ನಂಬಿಕೆಯೆಂದರೆ ಪದೇ ಪದೇ ಸ್ನಾನ ಮಾಡುವುದರಿಂದಾಗಿ ರೋಗಗಳು ಮತ್ತು ಅಸ್ವಸ್ಥತೆಯನ್ನು ಉತ್ತೇಜಿಸಿದಂತಾಗುತ್ತದೆ ಎಂದು. ಈ ನಂಬಿಕೆಯನ್ನು ಮಧ್ಯಯುಗದ ಚರ್ಚ್ಗಳು ಪ್ರೋತ್ಸಾಯಿಸುವುದರೊಂದಿಗೆ ಸಾರ್ವಜನಿಕ ಸ್ನಾನಗೃಹಗಳನ್ನು ಮುಚ್ಚಲಿಕ್ಕೆ ಎಲ್ಲಾ ಪ್ರಯತ್ನಗಳನ್ನೂ ಮಾಡಿದವು. ಸಾರ್ವಜನಿಕ ಸ್ನಾನಗೃಹಗಳು ಅನೈತಿಕತೆ ಮತ್ತು ಕಾಯಿಲೆಗಳನ್ನು ಸೃಷ್ಠಿಸುವ ವಾತಾವರಣವನ್ನು ನಿರ್ಮಾಣ ಮಾಡಿವೆ ಎಂದು ಚರ್ಚಿನ ಅಧಿಕಾರಿಗಳು ನಂಬಿದ್ದರು. ಯೂರೋಪನ್ನು ಸಿಫಿಲಿಸ್ ವ್ಯಾದಿಯಿಂದ ಪಾರುಮಾಡುವ ವ್ಯರ್ಥ ಪ್ರಯತ್ನದ ಭಾಗವಾಗಿ ರೋಮನ್ ಕ್ಯಾಥೋಲಿಕ್ ಚರ್ಚ್ ನ ಅಧಿಕಾರಿಗಳು ಸಾರ್ವಜನಿಕ ಸ್ನಾನಗೃಹಗಳನ್ನು ಕೂಡ ನಿಷೇದಿಸಿದ್ದರು. ಒಟ್ಟಿನಲ್ಲಿ, ಈ ಅವಧಿ ಸಾರ್ವಜನಿಕ ಸ್ನಾನಗೃಹದ ಅವನತಿಯನ್ನು ಪ್ರತಿನಿಧಿಸುವುದಾಗಿತ್ತು.[೭]
ಜನರು ತಮ್ಮ ಬಹಳಷ್ಟು ವ್ಯಾದಿಗಳನ್ನು ಗುಣಪಡಿಸುವ ಮಾರ್ಗವಾಗಿ ಪವಿತ್ರ ಬಾವಿಗಳೆಂದು ನಂಬಲಾಗಿದ್ದ ಕೆಲವು ಆಯ್ದ ಬಿಸಿ ನೀರಿನ ಮತ್ತು ತಣ್ಣೀರಿನ ಬುಗ್ಗೆಗಳನ್ನು ಹುಡುಕುವ ಪ್ರಯತ್ನವನ್ನು ಮುಂದುವರಿಸಿದ್ದರು. ಧಾರ್ಮಿಕತೆ ತೀವ್ರವಾಗಿದ್ದ ಕಾಲದಲ್ಲಿ, ನೀರಿನ ಉಪಯೋಗಗಳನ್ನು ದೇವರು ಅಥವಾ ಸಂತರೊಬ್ಬರಿಗೆ ಆರೋಪಿಸಿದ್ದರು. 1326 ರಲ್ಲಿ, ಬೆಲ್ಜಿಯಂನ ಲೀಜ್ನಲ್ಲಿರುವ ಐರನ್ಮಾಸ್ಟರ್ ಕಾಲಿನ್ ಲಿ ಲೋಪ್, ಚಾಲಿಬೀಟ್ ಎಂಬ ಖನಿಜಯುಕ್ತ ಜಲದ(ಸ್ಪಾ) ಬುಗ್ಗೆಗಳನ್ನು ಬೆಲ್ಜಿಯಂನಲ್ಲಿ ಕಂಡುಹಿಡಿದ. ಕೊನೆಗೆ ಈ ಬುಗ್ಗೆಗಳ ಸುತ್ತಮುತ್ತಲೂ ಒಂದು ಪ್ರಸಿದ್ಧವಾದ ಅರೋಗ್ಯಧಾಮ ಹುಟ್ಟಿಕೊಂಡಿತು ಮತ್ತು ಕ್ರಮೇಣ "ಸ್ಪಾ" ಎಂಬ ಈ ಪದ ಸ್ವಾಭಾವಿಕ ಬುಗ್ಗೆಗಳ ಸುತ್ತಲೂ ಇರುವ ಆರೋಗ್ಯ ಧಾಮಗಳನ್ನು ಉಲ್ಲೇಖಿಸಲು ಬಳಸುವಂತಾಯಿತು. ಈ ಅವಧಿಯಲ್ಲಿಯೇ ಒಂದೊಂದು ಬುಗ್ಗೆಯೂ ಅದು ಗುಣಪಡಿಸಬಹುದಾದ ವಿಶಿಷ್ಟವಾದ ವ್ಯಾದಿಯೊಂದಿಗೆ ಗುರುತಿಸಲ್ಪಟ್ಟಿತ್ತು.[೭] ಈ ಅವಧಿಯಲ್ಲಿಯೇ ಸ್ನಾನದ ಪ್ರಕಾರಗಳು ಬಹಳಷ್ಟು ಮಾರ್ಪಾಡಾದವು. ಹದಿನಾರನೆ ಶತಮಾನದ ವೇಳೆಗೆ,ಬೊಹೆಮಿಯಾದ ಕಾರ್ಲ್ಸಬಾದ್‌ನಲ್ಲಿ ವೈದ್ಯರು ಖನಿಜಯುಕ್ತ ನೀರನ್ನು ಬಾಹ್ಯವಾಗಿ ಮತ್ತು ಆಂತರಿಕವಾಗಿ ಔಷಧವಾಗಿ ಉಪಯೋಗಿಸಲು ಸೂಚಿಸಿದರು. ರೋಗಿಗಳು ಲೋಟಗಟ್ಟಲೆ ಖನಿಜಯುಕ್ತ ನೀರನ್ನು ಕುಡಿಯುವುದರೊಂದಿಗೆ ಬಿಸಿ ನೀರಿನಲ್ಲಿ ನಿಯಮಿತವಾಗಿ 10 ರಿಂದ 11 ಗಂಟೆ ಸ್ನಾನ ಮಾಡುತ್ತಿದ್ದರು. ಮೊದಲ ಸ್ನಾನದ ಅವಧಿ ಬೆಳಗ್ಗೆ ನಡೆಯುತ್ತಿದ್ದರೆ, ಎರಡನೆಯದು ಮಧಾಹ್ನದ ನಂತರ. ಈ ಚಿಕಿತ್ಸಾ ಪದ್ಧತಿಯು ಚರ್ಮದ ಮೇಲೆ ಗುಳ್ಳೆಗಳು/ ಸಿಡುಬುಗಳು ಎದ್ದು, ಅವು ಒಡೆದು ಅದರಲ್ಲಿನ ರೋಗಕ್ಕೆ ಕಾರಣವೆಂದು ನಂಬಲಾದ "ವಿಷ" ಸುರಿದು ಹೋಗುವವರೆಗೂ ಹಲವು ದಿನಗಳ ಕಾಲ ನಡೆಯುತ್ತಿತ್ತು. ಇದರ ನಂತರ, ಸೋಂಕು ಸಂಪೂರ್ಣ ತೊಳೆದುಹೋಗಲು ಮತ್ತು ಗುಳ್ಳೆಗಳು ವಾಸಿಯಾಗಲು ಮತ್ತೊಂದು ಅಲ್ಪವಾದ ಮತ್ತು ಬಿಸಿಯಾದ ಸರಣಿ ಸ್ನಾನವನ್ನು ಮಾಡಲಾಗುತಿತ್ತು.[೭]
1626 ರಲ್ಲಿ ಬ್ರಿಟನ್ನಿನ ಕರಾವಳಿಯ ಸ್ಕ್ಯಾರ್ಬರೋ ಪಟ್ಟಣದಲ್ಲಿ, ಶ್ರೀಮತಿ ಎಲಿಜಬೆತ್ ಫಾರೋ ಸಮುದ್ರ ದಂಡೆಯಲ್ಲಿರುವ ಕಡಿದಾದ ಬಂಡೆಯೆಡೆಯಿಂದ ಪಟ್ಟಣದ ದಕ್ಷಿಣದ ಕಡೆಗೆ ಹರಿಯುವ ಆಮ್ಲ ನೀರಿನ ತೊರೆಯೊಂದನ್ನು ಕಂಡುಹಿಡಿದರು. ಇದು ಆರೋಗ್ಯಕ್ಕೆ ಉಪಯುಕ್ತವಾಗುವ ಅಂಶಗಳನ್ನು ಹೊಂದಿದೆ ಎಂಬ ಅಭಿಪ್ರಾಯ ಹೊಂದಲಾಗಿತ್ತು ಮತ್ತು ಅದೇ ಸ್ಕ್ಯಾರ್ಬರೋ ಸ್ಪಾ ಹುಟ್ಟಿಗೆ ಕಾರಣವಾಯಿತು. ಖನಿಜಯುಕ್ತ ನೀರಿನ (ಸ್ಪಾ) ಬಗ್ಗೆ ಡಾ. ವಿಟ್ಟಿ 1660 ರಲ್ಲಿ ಬರೆದ ಪುಸ್ತಕ ಪ್ರವಾಹದೋಪಾದಿಯಲ್ಲಿ ಜನರನ್ನು ಆ ಪಟ್ಟಣದೆಡೆಗೆ ಆಕರ್ಷಿಸಿತು. ಸಮುದ್ರ ಸ್ನಾನವನ್ನು ರೋಗ ನಿವಾರಣೆಗೆ ಸೇರಿಸಲಾಯಿತು ಮತ್ತು ಸ್ಕ್ಯಾರ್ಬರೋ ಬ್ರಿಟನ್ನಿನ ಮೊದಲ ಸಮುದ್ರ ತೀರದ ವಿಶ್ರಾಂತಿಧಾಮವಾಯಿತು. ಮೊದಲ ಬಾರಿಗೆ 1735 ರಲ್ಲಿ ಸ್ನಾನಗಾರರಿಗೆ ಉರುಳುವ ಸ್ನಾನದ ಯಂತ್ರಗಳನ್ನು ಮರಳಿನ ಮೇಲೆ ಸ್ಥಾಪಿಸಲಾಯಿತು.[೮]
18ನೇ ಶತಮಾನದಲ್ಲಿ ಸ್ನಾನದ ಪ್ರಕ್ರಿಯೆ
ಬದಲಾಯಿಸಿ17ನೇ ಶತಮಾನದಲ್ಲಿ, ಬಹಳಷ್ಟು ಮೇರ್ಲ್ವಗದ ಯೂರೋಪಿಯನ್ನರು ಪದೇ ಪದೇ ನೀರಿನಿಂದ ತಮ್ಮ ಬಟ್ಟೆಗಳನ್ನು ತೊಳೆದುಕೊಳ್ಳುತ್ತಿದ್ದರು ಮತ್ತು ಸಂಪೂರ್ಣ ದೇಹವನ್ನು ತೊಳೆದುಕೊಳ್ಳುವುದು ಕೆಳಸ್ಥರದ ಜನರ ಕಾರ್ಯ ಎಂಬ ಭಾವನೆಯಲ್ಲಿ ಕೇವಲ ಮುಖವನ್ನು ಮಾತ್ರ ತೊಳೆದುಕೊಳ್ಳುತ್ತಿದ್ದರು (ನಾರುಬಟ್ಟೆಯಿಂದ). ಶ್ರೀಮಂತರು ನೀರು ಕುಡಿಯಲು ಮತ್ತು ನೀರಿನಲ್ಲಿ ಸ್ನಾನ ಮಾಡಲಿಕ್ಕೆ ಆರೋಗ್ಯಧಾಮಗಳಿಗೆ ಲಗ್ಗೆಯಿಡತೊಡಗಿದರು. 1702 ರಲ್ಲಿ ಇಂಗ್ಲೆಂಡ್‌ನ ರಾಣಿ ಅನ್ನೆ ಹಿಂದಿನ ರೋಮನ್ನರು ಅಭಿವೃದ್ಧಿಪಡಿಸಿದ ಬಾಥ್‌ಗೆ (ಸ್ನಾನಗೃಹಕ್ಕೆ) ಸ್ನಾನಮಾಡಲೋಸುಗ ಆಗಮಿಸಿದ್ದಳು. ಸ್ವಲ್ಪ ಸಮಯದ ನಂತರ ರಿಚರ್ಡ್ (ಬೀಯು) ನಾಶ್ ಕೂಡ ಬಾಥ್‌ಗೆ ಬಂದಿದ್ದ. ಅವನ ವ್ಯಕ್ತಿತ್ವದ ಬಲದಿಂದ, ನಾಶ್ ಇಂಗ್ಲೆಂಡ್‌ನಲ್ಲಿ ಉತ್ತಮ ಅಭಿರುಚಿಯ ಮತ್ತು ನಡವಳಿಕೆಯ ಮಧ್ಯಸ್ಥನಾದ. ಅವನು ಬಂಡವಾಳಗಾರ ರಾಲ್ಫ್ ಆಲೆನ್ ಮತ್ತು ವಾಸ್ತುಶಿಲ್ಪಿ ಜಾನ್ ವೂಡ್ ಸಹಾಯದೊಂದಿಗೆ ಬಾಥ್ ಅನ್ನು ಗ್ರಾಮೀಣ ಸ್ಪಾದಿಂದ ಇಂಗ್ಲೇಂಡಿನ ಸಾಮಾಜಿಕ ರಾಜಧಾನಿಯನ್ನಾಗಿ ಬದಲಾಯಿಸಿದ. ಬಾಥ್ ಯೂರೋಪಿನಲ್ಲಿನ ಇತರ ಸ್ಪಾಗಳು ಅನುಸರಿಸಬಹುದಾದ ಮಾದರಿಯನ್ನು ಹಾಕಿಕೊಟ್ಟಿತು. ಮೇಲ್ನೋಟಕ್ಕೆ ಶ್ರೀಮಂತ ಮತ್ತು ಪ್ರಸಿದ್ಧ ಜನರು ಅಯಾ ಕಾಲಕ್ಕೆ ತಕ್ಕಂತೆ ನೀರನ್ನು ಕುಡಿಯಲು ಮತ್ತು ಅದರಲ್ಲಿ ಸ್ನಾನ ಮಾಡಲು ಬರುವುದರೊಂದಿಗೆ ಅವರು ತಮ್ಮಲ್ಲಿನ ಸಂಪತ್ತನ್ನು ತೋರ್ಪಡಿಸಿಕೊಳ್ಳಲು ಕೂಡ ಬರುತ್ತಿದ್ದರು. ಬಾಥ್‌ನಲ್ಲಿ ಸಾಮಾಜಿಕ ಚಟುವಟಿಕೆಗಳಾದ ನೃತ್ಯಗಳು, ಸಂಗೀತ ಮೇಳಗಳು, ಇಸ್ಪೀಟ್, ಉಪನ್ಯಾಸಗಳು ಮತ್ತು ವಾಯುವಿಹಾರಗಳು ಒಳಗೊಂಡಿದ್ದವು.[೭]
ಬಾಥ್‌ನಲ್ಲಿನ ಒಂದು ಆದರ್ಶದ ದಿನವೆಂದರೆ ಬೆಳಗಿನ ಜಾವದ ಸಾಮೂಹಿಕ ಸ್ನಾನ ಮತ್ತು ಆ ನಂತರದ ಖಾಸಗೀ ಉಪಹಾರ ಸಭೆ. ಆ ನಂತರ, ಒಬ್ಬ ಪಂಪ್ ರೂಮಿನಲ್ಲಿ (ಬಿಸಿ ನೀರಿನ ಮೂಲದ ಮೇಲೆ ಕಟ್ಟಲಾದ ಕಟ್ಟಡ) ನೀರು ಕುಡಿಯುತ್ತಿದ್ದ ಅಥವಾ ಫ್ಯಾಷನ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದ. ವೈದ್ಯರು ಆರೋಗ್ಯಧಾಮಗಳ ಪೋಷಕರಿಗೆ ನೀರಿನಲ್ಲಿ ಸ್ನಾನ ಮಾಡುವುದು ಮತ್ತು ನೀರನ್ನು ಕುಡಿಯುವುದನ್ನು ಸಮಾನವಾಗಿ ಪ್ರೋತ್ಸಾಹಿಸಿದರು. ಆ ದಿನದ ಉಳಿದ ಹಲವು ಗಂಟೆಗಳನ್ನು ಶಾಪಿಂಗ್ನಲ್ಲಿ, ಗ್ರಂಥಾಲಯಕ್ಕೆ ಭೇಟಿ ನೀಡುತ್ತಾ, ಸಂಗೀತ ಮೇಳಗಳಲ್ಲಿ ಭಾಗವಹಿಸಿ ಅಥವಾ ಯಾವುದಾದರೊಂದು ಕಾಫಿ ಹೌಸ್‌ನಲ್ಲಿ ನಿಲ್ಲುವ ಮೂಲಕ ಕಳೆಯಬಹುದಿತ್ತು. ಸರಿಯಾಗಿ ಸಂಜೆ 4 ಗಂಟೆಗೆ ಶ್ರೀಮಂತರು ಮತ್ತು ಪ್ರಸಿದ್ಧ ಜನರು ಉತ್ತಮ ಉಡುಪುಗಳನ್ನು ಹಾಕಿಕೊಂಡು ದಾರಿಯುದ್ದಕ್ಕೂ ವಾಯುವಿಹಾರಕ್ಕೆ ಹೋಗುತ್ತಿದ್ದರು. ನಂತರ ರಾತ್ರಿಯ ಊಟ, ಮತ್ತಷ್ಟು ವಾಯುವಿಹಾರ ಮತ್ತು ನೃತ್ಯ ಅಥವಾ ಜೂಜಿನ ಸಂಜೆ.[೭] ಸಮಾನರೂಪದ ಈ ರೀತಿಯ ಕಾರ್ಯಚಟುವಟಿಕೆಗಳು ಯೂರೋಪಿನಾದ್ಯಂತ ಆರೋಗ್ಯಧಾಮಗಳಲ್ಲಿ ನಡೆದವು. ಸ್ಪಾಗಳು ವೇದಿಕೆಗಳಾದವು ಮತ್ತು ಅವುಗಳ ಮೇಲೆ ಯೂರೋಪಿಯನ್ನರು ಆಡಂಬರದ ಪ್ರದರ್ಶನ ನಡೆಸಿದರು. ಈ ವಿಶ್ರಾಂತಿಧಾಮಗಳು ಅಂತೆಕಂತೆಗಳ ಮತ್ತು ಹಗರಣಗಳ ತಾಣಗಳಾಗಿ ಕುಖ್ಯಾತಿಯನ್ನು ಗಳಿಸಿದವು. ಬಹಳಷ್ಟು ಸಾಮಾಜಿಕ ಹಾಗೂ ಆರ್ಥಿಕವಾಗಿ ಸ್ಥಿತಿವಂತರಾಗಿದ್ದ ಜನರು ವರ್ಷದ ರಜೆಯ ಅವಧಿಯಲ್ಲಿ ಕೆಲವು ನಿರ್ಧಿಷ್ಟ ಕಾಲಗಳನ್ನು ಆಯ್ಕೆಮಾಡಿಕೊಂಡು ಒಂದರಿಂದ ಹಲವು ತಿಂಗಳುಗಳವರೆಗೆ ಪ್ರತಿಯೊಂದು ವಿಶ್ರಾಂತಿಧಾಮಗಳಲ್ಲಿಯೂ ವಾಸ್ತವ್ಯ ಮಾಡುತ್ತಿದ್ದರು. ಒಂದು ಕಾಲದಲ್ಲಿ ಶ್ರೀಮಂತರು ವಿಶ್ರಾಂತಿಧಾಮಗಳನ್ನು ಆಕ್ರಮಿಸಿಕೊಂಡರೆ, ಮತ್ತೊಂದು ಸಮಯದಲ್ಲಿ ಸ್ಥಿತಿವಂತ ರೈತರು ಅಥವಾ ನಿವೃತ್ತ ಮಿಲಿಟರಿ ಅಧಿಕಾರಿಗಳು ಸ್ನಾನಗೃಹಗಳನ್ನು ಆಕ್ರಮಿಸಿಕೊಳ್ಳುತ್ತಿದ್ದರು. ಆಯಾ ವಿಶ್ರಾಂತಿಧಾಮಗಳ ಸಾಂಪ್ರದಾಯಿಕ ಕಾಲ ಬದಲಾಗುತ್ತಿದ್ದಂತೆ, ಶ್ರೀಮಂತರು ಮತ್ತು ಕ್ರಿಮಿನಲ್‌ಗಳು ಒಂದು ಸ್ಪಾದಿಂದ ಇನ್ನೊಂದಕ್ಕೆ ಹೋಗುತ್ತಿದ್ದರು.[೭]
18ನೇ ಶತಮಾನದಲ್ಲಿ, ಕೆಲವು ಇಟಾಲಿಯನ್, ಜರ್ಮನ್ ಮತ್ತು ಇಂಗ್ಲೀಷ್ ವೈದ್ಯರಲ್ಲಿ ಬುಗ್ಗೆಯ ನೀರಿನ ವೈದ್ಯಕೀಯ ಉಪಯೋಗಗಳ ಕುರಿತಂತೆ ಮಹತ್ತರ ಪುನರ್ಜಾಗೃತಿಯಾಯಿತು. ಈ ಪುನರುಜ್ಜೀವನ ಸ್ಪಾ ಚಿಕಿತ್ಸೆಯನ್ನು ತೆಗೆದುಕೊಳ್ಳುವ ರೀತಿಯನ್ನೇ ಬದಲಾಯಿಸಿತು. ಉದಾಹರಣೆಗೆ, ಕಾರ್ಲ್ಸ್ಬಾದ್ನಲ್ಲಿ, ಖನಿಜಯುಕ್ತ ನೀರನ್ನು ಕುಡಿಯುವ ಒಪ್ಪಿಕೊಂಡಂತಹ ವಿಧಾನವೆಂದರೆ, ಅದನ್ನು ದೊಡ್ಡ ಬ್ಯಾರೆಲ್‌ಗಳಲ್ಲಿ ತುಂಬಿ ಪ್ರತಿಯೊಂದು ಭೋಜನಶಾಲೆಗಳಿಗೆ ಕಳುಹಿಸಲಾಗುತ್ತಿತ್ತು. ಅಲ್ಲಿ ರೋಗಿಗಳು ವೈದ್ಯರು ಶಿಫಾರಸು ಮಾಡಿದಷ್ಟು ಪ್ರಮಾಣದ ನೀರನ್ನು ತಮ್ಮ ಕೊಠಡಿಗಳಲ್ಲಿ ಏಕಾಂತವಾಗಿ ಕುಳಿತು ಕುಡಿಯುತ್ತಿದ್ದರು. 1777 ರಲ್ಲಿ, ಡಾ. ಡೇವಿಡ್ ಬೀಚರ್ ಎಂಬುವನು ರೋಗಿಗಳು ನೀರಿಗಾಗಿ ನೀರಿನ ಬುಗ್ಗೆಯ ತುದಿಗೆ ಬರಬೇಕು ಮತ್ತು ಪ್ರತಿ ರೋಗಿಯು ಮೊದಲು ಕೆಲವು ಸೂಚಿಸಲ್ಪಟ್ಟ ವ್ಯಾಯಾಮಗಳನ್ನು ಮಾಡಬೇಕೆಂದು ಶಿಫಾರಸು ಮಾಡಿದ. ಈ ಸಂಶೋಧನೆ ಗಳಿಸಿಕೊಂಡ ವೈದ್ಯಕೀಯ ಉಪಯೋಗಗಳನ್ನು ಹೆಚ್ಚಿಸಿತು ಮತ್ತು ಕ್ರಮೇಣ ದೈಹಿಕ ಚಟುವಟಿಕೆ ಯೂರೋಪಿನ ಸ್ನಾನ ವ್ಯವಸ್ಥೆಯ ಭಾಗವಾಗಿಹೋಯಿತು 1797 ರಲ್ಲಿ ಇಂಗ್ಲೇಂಡ್‌ನ ಡಾ. ಜೇಮ್ಸ್ ಕರಿಯರ್ ನೀರಿನ, ಶೀತಲ ಮತ್ತು ಬೆಚ್ಚಗಿನ ಪರಿಣಾಮಗಳು- ಜ್ವರ ಮತ್ತು ಇತರ ರೋಗಗಳಿಗೆ ಒಂದು ಪರಿಹಾರ . ಎಂಬ ಪುಸ್ತಕವನ್ನು ಪ್ರಕಟಿಸಿದ. ಈ ಪುಸ್ತಕ ನೀರಿನ ಚಿಕಿತ್ಸೆಯಲ್ಲಿ ಮತ್ತಷ್ಟು ಕುತೂಹಲವನ್ನು ಕೆರಳಿಸುವುದರೊಂದಿಗೆ ಚಿಕಿತ್ಸೆಯ ಭಾಗವಾಗಿ ನೀರಿನ ಬಾಹ್ಯ ಮತ್ತು ಆಂತರಿಕ ಉಪಯೋಗವನ್ನು ಪ್ರತಿಪಾದಿಸಲಾಯಿತು[೭]
19 ಮತ್ತು 20ನೇ ಶತಮಾನಗಳಲ್ಲಿ ಸ್ನಾನದ ಪ್ರಕ್ರಿಯೆ
ಬದಲಾಯಿಸಿ19ನೇ ಶತಮಾನದಲ್ಲಿ, ಸ್ವಚ್ಚತೆಯಿಂದಾಗಬಹುದಾದ ಉಪಯೋಗಗಳನ್ನು ವೈದ್ಯರು ಅರ್ಥಮಾಡಿಕೊಂಡಿದ್ದರಿಂದಾಗಿ ಸ್ನಾನದ ಪ್ರಕ್ರಿಯೆ ಬಹಳಷ್ಟು ಒಪ್ಪಿತವಾದ ಆಚರಣೆಯಾಗಿದ್ದಿತು. 1842ರಲ್ಲಿ ಲಿವರ್ಪೂಲ್, ಇಂಗ್ಲೆಂಡ್ನಲ್ಲಿ ಕಾಣಿಸಿಕೊಂಡ ಕಾಲರಾ ರೋಗದಿಂದಾಗಿ ಆರೋಗ್ಯ ರಕ್ಷಣೆಯ ಪುನರುಜ್ಜೀವನ ಆರಂಭವಾಯಿತು. ಇದರಿಂದಾಗಿ ಹೆಚ್ಚು ಹೆಚ್ಚು ಜನರು ಸ್ನಾನ ಮತ್ತು ತಮ್ಮ ಬಟ್ಟೆಗಳನ್ನು ತಾವೇ ತೊಳೆದುಕೊಳ್ಳಲು ಆರಂಭಿಸಿದರು. ಅದೇ ವರ್ಷದಲ್ಲಿ, ಅಮೇರಿಕಾದ ಸಿನ್ಸಿನಾಟಿ, ಓಹಿಯೋದ ಮನೆಯೊಂದು ಮೊದಲ ಒಳಾಂಗಣ ಸ್ನಾನದ ತೊಟ್ಟಿಯನ್ನು ಪಡೆದುಕೊಂಡಿತು. ಆದರೂ, ಸ್ನಾನ ಪ್ರಕ್ರಿಯೆ ಒಂದು ಸಾರ್ವತ್ರಿಕವಾದ ಪದ್ಧತಿಯಾಗಿರಲಿಲ್ಲ. ಕೇವಲ ಒಂದು ವರ್ಷದ ನಂತರ, ಅಂದರೆ 1843ರಲ್ಲಿ ನವೆಂಬರ್ 1 ಮತ್ತು ಮಾರ್ಚ್ 15 ಮಧ್ಯದ ಅವಧಿಯಲ್ಲಿ ಆರೋಗ್ಯ ರಕ್ಷಣೆಯ ಕಾರ್ಯಕ್ರಮವಾಗಿ ಫಿಲಿಡೆಲ್ಫಿಯಾ, ಪೆನ್ಸಿಲ್ವೇನಿಯಾ ದಲ್ಲಿ ಸ್ನಾನ ಪ್ರಕ್ರಿಯೆಯನ್ನು ಬಹಿಷ್ಕರಿಸಲಾಗಿತ್ತು. 1845ರಲ್ಲಿ, ವೈದ್ಯರ ನೇರ ಸೂಚನೆ ಹೊರತುಪಡಿಸಿ, ಸ್ನಾನ ಪ್ರಕ್ರಿಯೆಯನ್ನು ಬೋಸ್ಟನ್, ಮೆಸ್ಸಾಚುಸೆಟ್ಸ್ನಲ್ಲಿ ನಿಷೇದಿಸಲಾಗಿತ್ತು. ಆದರೂ ಪರಿಸ್ಥಿತಿ ಸುಧಾರಣೆ ಕಂಡಿತ್ತು ಮತ್ತು 1867ರ ಹೊತ್ತಿಗೆ, ಫಿಲೆಡೆಲ್ಫಿಯಾದಲ್ಲಿ ಶ್ರೀಮಂತರ ಬಹಳಷ್ಟು ಮನೆಗಳು ತೊಟ್ಟಿಗಳು ಮತ್ತು ಒಳಾಂಗಣ ಪೈಪುಗಳನ್ನು ಹೊಂದಿದ್ದವು. ಇಂಗ್ಲೆಂಡ್‌ನಲ್ಲಿ 1880ರ ಹೊತ್ತಿಗೆ ಸೈನಿಕರ ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ಬಿಸಿ ನೀರಿನ ಶಾವರ್‌ಗಳನ್ನು ಸ್ಥಾಪಿಸಲಾಗಿತ್ತು. ವೈದ್ಯಕೀಯ ವಿಜ್ಞಾನದಲ್ಲಿ ಹೊಸ ಬೆಳವಣಿಗೆಗಳಾದಂತೆ ಸ್ನಾನ ಪದ್ಧತಿಯ ಬಗೆಗಿರುವ ಕಂದಾಚಾರಗಳು ಮರೆಯಾದವು ಮತ್ತು ಪ್ರಪಂಚದಾದ್ಯಂತ ವೈದ್ಯಕೀಯ ಸಮುದಾಯ ಸ್ನಾನದ ಉಪಯೋಗಗಳನ್ನು ಪ್ರೋತ್ಸಾಹಿಸಿತು. ಇದರೊಂದಿಗೆ, ಪರದೇಶದ ಬಗೆಗಿನ ವಿಕ್ಟೋರಿಯನ್ರ ರಸಿಕತೆ ಉಷ್ಣ ನೀರಿನ ಚಿಕಿತ್ಸಕ ಶಕ್ತಿಗಳ ಹುಡುಕಾಟಕ್ಕೆ ತಮ್ಮ ಕೊಡುಗೆಯನ್ನು ನೀಡಿತು.[೭]
ಬಹಳಷ್ಟು ಸಂಧರ್ಭಗಳಲ್ಲಿ, ಯೂರೋಪಿನ ಸ್ಪಾಗಳ ಸಾಂಪ್ರದಾಯಿಕ ವಾಸ್ತುಶಿಲ್ಪದ ಬೆಳವಣಿಗೆ 18 ಮತ್ತು 19 ನೇ ಶತಮಾನಗಳಲ್ಲಿ ನಡೆಯಿತು. ಇಂಗ್ಲೆಂಡಿನ ಬಾಥ್‌ಗಳ ವಾಸ್ತುಶಿಲ್ಪ, ಸಾಮಾನ್ಯವಾಗಿ ಪಲ್ಲಾಡಿಯನ್ ಸ್ವರೂಪವನ್ನು ಹೋಲುವ ಜಾರ್ಜಿಯನ್ ಮತ್ತು ನಿಯೋಕ್ಲಾಸಿಕಲ್ ಮಾದರಿಯಲ್ಲಿ ಅಭಿವೃದ್ಧಿ ಹೊಂದಿದ್ದಿತು. ಬಹು ಮುಖ್ಯವಾಗಿ ಗೋಚರಕ್ಕೆ ಬಂದ ವಾಸ್ತುಶಿಲ್ಪದ ಮಾದರಿಯೆಂದರೆ "ಕ್ರೆಸೆಂಟ್"- ಅಂದರೆ ಅರ್ಧ ಚಂದ್ರಾಕೃತಿಯ ದಾರಿಯ ನಕಾಶೆಯನ್ನು ಇಂಗ್ಲೇಡಿನ ಬಹಳಷ್ಟು ಪ್ರದೇಶಗಳಲ್ಲಿ ಬಳಸಿದ್ದರು. ಕಾರ್ಲ್ಸ್ ಬಾದ್, ಮರೀನ್‌ಬಾದ್, ಫ್ರಾಂಜೆನ್ ಬಾದ್, ಮತ್ತು ಬಾಡೆನ್-ಬಾಡೆನ್ನಲ್ಲಿನ ವಾಸ್ತುಶಿಲ್ಪ ಪ್ರಾಥಮಿಕವಾಗಿ ನಿಯೋಕ್ಲಾಸಿಕಲ್. ಆದರೆ 19ನೇ ಶತಮಾನದವರೆಗೂ ದೊಡ್ಡ ಸ್ನಾನಗೃಹಗಳನ್ನು ಕಟ್ಟಿಸಿರಲಿಲ್ಲ ಎಂದು ಸಾಹಿತ್ಯದಲ್ಲಿ ಸೂಚಿಸಿದಂತಿದೆ ಸ್ನಾನಕ್ಕೆ ಬದಲಾಗಿ ನೀರನ್ನು ಕುಡಿಯುವುದಕ್ಕೆ ಹೆಚ್ಚು ಒತ್ತು ನೀಡಿದ್ದರಿಂದಾಗಿ ಟ್ರಿಂಕಾನೆಲ್ (ಕುಡಿಯುವ ಕೋಣೆಗಳು) ಎಂದು ಕರೆಯಲ್ಪಡುವ ಪ್ರತ್ಯೇಕ ಕಟ್ಟಡಗಳು ಅಭಿವೃದ್ಧಿ ಹೊಂದಿದವು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಗಂಟೆಗಟ್ಟಲೆ ಬುಗ್ಗೆಯ ನೀರನ್ನು ಕುಡಿಯುತ್ತಾ ಕಾಲ ಕಳೆಯುತ್ತಿದ್ದರು.[೭] 19 ನೇ ಶತಮಾನದ ಮಧ್ಯಭಾಗದಲ್ಲಿ, ಈ ಪರಿಸ್ಥಿತಿ ನಾಟಕೀಯವಾಗಿ ಬದಲಾಯಿತು. ಯೂರೋಪಿಯನ್ ಸ್ಪಾಗಳಿಗೆ ಭೇಟಿ ನೀಡುತ್ತಿದ್ದ ಯಾತ್ರಿಕರು ನೀರನ್ನು ಕುಡಿಯುವುದರೊಂದಿಗೆ ಸ್ನಾನಕ್ಕೂ ಹೆಚ್ಚು ಒತ್ತು ನೀಡುತ್ತಿದ್ದರು. ಕಾರಂಜಿಗಳ ಜೊತೆಗೆ, ಪೆವಿಲಿಯನ್‌ಗಳು ಮತ್ತು ಟ್ರಿಂಕಾಲೆನ್ (ಸ್ನಾನಗೃಹಗಳು)ಗಳು ರೋಮನ್ನರ ಸ್ನಾನಗೃಹಗಳ ಮಾದರಿಯಲ್ಲಿಯೇ ಪುನರುಜ್ಜೀವನಗೊಂಡವು. ಪುರಾತನ ವಾಸ್ತುಶಿಲ್ಪವನ್ನು ವಿವರಿಸುವಂತಹ, 1930ರಲ್ಲಿ ತೆಗೆದುಕೊಂಡ 19ನೇ ಶತಮಾನದ ಸ್ಪಾ ಸಂಕೀರ್ಣದ ಛಾಯಾಚಿತ್ರಗಳು ಕಲ್ಲಿನಿಂದ ಮಾಡಿದ ಕಲಾಕೃತಿಯನ್ನು ಹೊಂದಿದ ನೆಲಗಳು, ಅಮೃತ ಶಿಲೆಯ ಗೋಡೆಗಳು, ಶಾಸ್ತ್ರೀಯ ಶಿಲ್ಪಗಳು, ಕಮಾನು ಹೊಂದಿದ ತೂತುಗಳು, ಗೋಲಾಕಾರದ ಛಾವಣಿಗಳು, ತುಂಡಾದ ಕಮಾನುಗಳು, ತ್ರಿಕೋನಾಕಾರದ ಮುಂಬಾಗಿಲ ಕಮಾನುಗಳು, ಕೋರಿಂಥಿಯನ್ ಸ್ತಂಭಗಳು, ಮತ್ತು ನಿಯೋಕ್ಲಾಸಿಕಲ್ ಪುನರುಜ್ಜೀವನದ ಎಲ್ಲ ಇತರ ಶೃಂಗಾರ ಸಾಮಾನುಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಕಟ್ಟಡಗಳು ಸಾಮಾನ್ಯವಾಗಿ ಚಟುವಟಿಕೆಗಳಿಗನುಗುಣವಾಗಿ, ಅಂದರೆ ಟ್ರಿಂಕಾಲೆ (ಸ್ನಾನದ ಮನೆ), ಹೊಗೆಯನ್ನು ಸೇದುವ ಉಪಕರಣ ಮತ್ತು ಕುರ್ಹಾಸ್ ಅಥವಾ ಎಲ್ಲ ಸಾಮಾಜಿಕ ಚಟುವಟಿಕೆಗಳ ಕೇಂದ್ರಸ್ಥಾನವಾಗಿದ್ದ ಕಾನ್ವರ್ಜೇಷನ್ ಹೌಸ್ ಮುಂತಾದವುಗಳಿಂದ ಪ್ರತ್ಯೇಕಿಸಲ್ಪಟ್ಟಿದ್ದವು. ಬಾಡೆನ್-ಬಾಡೆನ್ ಗಾಲ್ಫ್ ದಾರಿ ಮತ್ತು ಟೆನ್ನಿಸ್ ಅಂಕಣಗಳನ್ನು ಹೊಂದಿದ್ದು, "ವಾಹನ ಚಲಾಯಿಸಲು ಅತ್ತ್ಯುತ್ತಮ ರಸ್ತೆಗಳು, ಮತ್ತು ನಾವು ಮೋಹಕವಾದ ಬೀದಿಗುಂಟ ವಾಹನ ಓಡಿಸುವಾಗ ಜಿಂಕೆಗಳು ಹಸುಗಳಂತೆ ಸಾಮಾನ್ಯವಾಗಿ ಹೆದರಿಕೆಯಿಲ್ಲದೆ ಅಡ್ಡಾಡುತ್ತಿದ್ದವು".[೭]
ನಂತರ, ಯೂರೋಪಿಯನ್ನರು ಸರಳವಾದ ಚಿಲುಮೆಗಳಿಂದ ಪೆವಿಲಿಯನ್‌ವರೆಗೂ ಮತ್ತು ವಿಸ್ತಾರವಾದ ಟ್ರಿಂಕಾಲೆನ್‌ಗಳಂತಹ ಕುಡಿಯುವ ಚಟುವಟಿಕೆಗಳನ್ನು ಒಳಗೊಂಡಿರುವಂತಹ ಕಟ್ಟಡಗಳಲ್ಲಿ ಸ್ಪಾಗಳನ್ನು ಆರಂಭಿಸಿದರು. 19ನೇ ಶತಮಾನದ ಕೊನೆಯಲ್ಲಿ ಬದಲಾದ ಪ್ರಾಮುಖ್ಯತೆಗನುಗುಣವಾಗಿ ಕಾಯಿಲೆಗಳನ್ನು ಗುಣಪಡಿಸುವ ಬಹು ವಿಶೇಷತೆಗಳುಳ್ಳ ಸ್ನಾನದ ಆಚರಣೆಗಳಿಗಾಗಿ ಬಹು ದೊಡ್ಡ ಸ್ನಾನಗೃಹಗಳು ಹುಟ್ಟಿದವು ಮತ್ತು ಆರೋಗ್ಯ ಸುಧಾರಣೆ ಒಂದು ರೂಢಿಯಾಯಿತು. ಯೂರೋಪಿಯನ್ನರು ಅದೇ ರೀತಿಯ ನಿಯಮ, ಸಮರೂಪತೆ, ಕೆಲಸಗಳಿಗಾಗಿ ಪ್ರತ್ಯೇಕಗೊಳ್ಳುವ ಕೊಠಡಿಗಳು ಮತ್ತು ಅವರ ಸ್ನಾನಗೃಹಗಳಲ್ಲಿನ ಐಷಾರಾಮಿ ಒಳಾಂಗಣ ಮಾದರಿಗಳನ್ನು ನಕಲು ಮಾಡಿದರು. ಯೂರೋಪಿಯನ್ನರು ಅದೇ ರೀತಿಯ ನಿಯಮ, ಸಮರೂಪತೆ, ಕೆಲಸಗಳಿಗಾಗಿ ಪ್ರತ್ಯೇಕಗೊಳ್ಳುವ ಕೊಠಡಿಗಳು ಮತ್ತು ಅವರ ಸ್ನಾನಗೃಹಗಳಲ್ಲಿನ ಐಷಾರಾಮಿ ಒಳಾಂಗಣ ಮಾದರಿಗಳನ್ನು ನಕಲು ಮಾಡಿದರು. ಅವರು ತಮ್ಮ ವಿಶ್ರಾಂತಿಧಾಮಗಳಲ್ಲಿ ಚಿಲುಮೆಗಳು ಮತ್ತು ಸಾಂಪ್ರದಾಯಿಕ ಕೈತೋಟದ ಸ್ಥಳಗಳನ್ನು ಅನುಕರಿಸುವುದರೊಂದಿಗೆ ಹೊಸತಾದ ವಿಹಾರ-ವಿನೋದಗಳನ್ನು ಸೇರಿಸಿದರು. ಪ್ರವಾಸದ ಪುಸ್ತಕಗಳು ಯಾವಾಗಲೂ ಸನಿಹದಲ್ಲಿ ವಿಶಾಲವಾದ ಮತ್ತು ದಟ್ಟವಾದ ಕಾಡಿನ ಕಾಣಿಕೆಗಳನ್ನು ಸೂಚಿಸುವುದರೊಂದಿಗೆ ಅತೀ ಹತ್ತಿರದಲ್ಲಿನ ಸಂಜೆಯ ಮೋಜಿನ ತಾಣಗಳನ್ನು ಹೊಂದಿದ್ದವು.[೭]
19ನೇ ಶತಮಾನದ ಆರಂಭದ ಹೊತ್ತಿಗೆ, ಯೂರೋಪಿಯನ್ ಸ್ನಾನ ಪ್ರಕಾರದ ವ್ಯವಸ್ಥೆ ಬಹಳಷ್ಟು ಎರವಲು ಪಡೆದ ಸಂಪ್ರದಾಯಗಳನ್ನು ಹೊಂದಿತ್ತು. ಸ್ನಾನದ ಪ್ರಕ್ರಿಯೆ ಬಿಸಿ ನೀರಿನಲ್ಲಿ ತೋಯಿಸಿಕೊಳ್ಳುವುದು, ನೀರನ್ನು ಕುಡಿಯುವುದು, ಹಬೆಯ ಕೊಠಡಿಯಲ್ಲಿ ಕಾಯಿಸಿಕೊಳ್ಳುವುದು ಮತ್ತು ತಣ್ಣನೆ ಕೊಠಡಿಯಲ್ಲಿ ಸುಧಾರಿಸಿಕೊಳ್ಳುವುದನ್ನು ಒಳಗೊಂಡಿತ್ತು. ಇದರ ಜತೆಗೆ ವೈದ್ಯರು ರೋಗಿಗಳು ಬಿಸಿ ಅಥವಾ ತಣ್ಣೀರಿನಲ್ಲಿ ಮುಳುಗು ಹಾಕಬೇಕು ಮತ್ತು ಕಾಯಿಲೆ ವಾಸಿಯಾಗಲು ಆಯ್ದ ಪಥ್ಯವನ್ನು ಮಾಡಬೇಕು ಎಂದು ಸೂಚಿಸುತ್ತಿದ್ದರು. ಲೇಖಕರು ಯೂರೋಪಿನ ಪ್ರತಿಯೊಂದು ಆರೋಗ್ಯಧಾಮದಲ್ಲಿ ದೊರೆಯುವ ವೈದ್ಯಕೀಯ ಉಪಯೋಗಗಳು ಮತ್ತು ಸಾಮಾಜಿಕ ಸೌಲಭ್ಯಗಳ ಬಗ್ಗೆ ವಿವರಿಸಿ ಮಾರ್ಗದರ್ಶನದ ಪುಸ್ತಕಗಳನ್ನು ಬರೆಯಲು ಆರಂಭಿಸಿದರು. ಶ್ರೀಮಂತ ಯೂರೋಪಿಯನ್ನರು ಮತ್ತು ಅಮೇರಿಕಾನ್ನರು ಈ ವಿಶ್ರಾಂತಿಧಾಮಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮತ್ತು ಸ್ನಾನ ಪ್ರಕ್ರಿಯಯಲ್ಲಿ ಭಾಗವಹಿಸಲು ಬರಲಾರಂಭಿಸಿದರು.[೭] ಯೂರೋಪಿನ ಪ್ರತಿಯೊಂದು ಸ್ಪಾಗಳು ತಮ್ಮ ಕೆಲವು ವೈಶಿಷ್ಟಗಳನ್ನು ಕಾಯ್ದುಕೊಳ್ಳುತ್ತಲೇ ಸರಿಸಮನಾದ ಚಿಕಿತ್ಸೆಯನ್ನು ಕೊಡಲು ಆರಂಭಿಸಿದವು. ಕಾರ್ಲ್ಸ್‌ಬಾದ್‌ದಲ್ಲಿನ 19ನೇ ಶತಮಾನದ ಸ್ನಾನದ ಪ್ರಕಾರಗಳು ಆ ಶತಮಾನದಲ್ಲಿದ್ದ ಯೂರೋಪಿನ ಸ್ನಾನದ ಆಚರಣೆಗಳ ಸರ್ವಸಾಮಾನ್ಯವಾದ ಚಿತ್ರಣವನ್ನು ನೀಡುತ್ತಿದ್ದವು. ಯಾತ್ರಿಗಳು ಬೆಳಗಿನ 6 ಗಂಟೆಗೆ ಏಳುತ್ತಿದ್ದವು ಮತ್ತು ವಾದ್ಯ ಸಂಗೀತದೊಂದಿಗೆ ಬರಮಾಡಿಕೊಳ್ಳಲಾಗುತ್ತಿತ್ತು. ಅದರ ನಂತರ ಸಾಧಾರಣ ಉಪಹಾರ, ಸ್ನಾನ ಮತ್ತು ಮಧ್ಯಾಹ್ನದ ಊಟ. .ಕಾರ್ಲ್ಸ್‌ಬಾದ್‌ದಲ್ಲಿನ ವೈದ್ಯರು ಸಾಮಾನ್ಯವಾಗಿ ಪ್ರತಿ ಊಟಕ್ಕೂ ರೋಗಿಗಳಿಗೆ ಕೆಲವು ಆಹಾರ ಪದಾರ್ಥಗಳಿಗೆ ಸೀಮಿತಗೊಳಿಸುತ್ತಿದ್ದರು. ಮಧ್ಯಾಹ್ನದ ನಂತರ, ಯಾತ್ರಿಕರು ಪ್ರಕೃತಿ ವೀಕ್ಷಣೆಗೆ ಅಥವಾ ಸಂಗೀತ ಕಚೇರಿಗಳನ್ನು ನೋಡಲು ಹೋಗುತ್ತಿದ್ದರು. ಸಂಜೆಯ ಊಟದ ನಂತರ ರಾತ್ರಿ ರಂಗಭೂಮಿಯ ಪ್ರದರ್ಶನಗಳು ನಡೆಯುತ್ತಿದ್ದವು. ಇದು ರಾತ್ರಿ 9 ಕ್ಕೆ ಮುಕ್ತಾಯವಾದ ನಂತರ ರೋಗಿಗಳು ತಮ್ಮ ವಸತಿಗೃಹಗಳಿಗೆ ವಾಪಸಾಗುತ್ತಿದ್ದರು ಮತ್ತು ಮುಂದಿನ ದಿನದ ಬೆಳಗಿನ 6 ಗಂಟೆವರೆಗೆ ಮಲಗುತ್ತಿದ್ದರು. ಈ ಪ್ರಕಾರವು ಒಂದು ತಿಂಗಳವರೆಗೆ ಮುಂದುವರೆಯಿತು ಮತ್ತು ರೋಗಿಗಳು ನಂತರದ ವರ್ಷದಲ್ಲಿ ಮನೆಗೆ ತೆರಳಿದರು 19ನೇ ಶತಮಾನದ ಯೂರೋಪಿನ ಇತರ ಸ್ಪಾ ಪ್ರಕಾರಗಳೂ ಇದೇ ರೀತಿಯ ವೇಳಾಪಟ್ಟಿಯನ್ನು ಅನುಸರಿಸಿದವು.[೭]
20ನೇ ಶತಮಾನದ ಆರಂಭದಲ್ಲಿ, ಯೂರೋಪಿನ ಸ್ಪಾಗಳು ರೋಗಿಗಳಿಗೆ ಉಪಯೋಗವಾಗಲೆಂದು ಸಂಕೀರ್ಣ ಸ್ನಾನ ಪದ್ಧತಿಯ ಜೊತೆಗೆ ಕಟ್ಟುನಿಟ್ಟಾದ ಪಥ್ಯ ಮತ್ತು ವ್ಯಾಯಾಮದ ಪ್ರಕಾರಗಳನ್ನು ಸೇರಿಸಿಕೊಂಡವು. ಸ್ನಾನದ ಪ್ರಕ್ರಿಯಗಳಲ್ಲಾದ ಬದಲಾವಣೆಗಳನ್ನು ವಿಷದಪಡಿಸಲು ಒಂದು ಉದಾಹರಣೆ ಸಾಕು. ಸಂದಿವಾತಕ್ಕೆ ಚಿಕಿತ್ಸೆ ನೀಡುವಲ್ಲಿ ಪರಿಣಿತಿಪಡೆದ ಬಾಡೆನ್-ಬಾಡೆನ್ನಲ್ಲಿ ರೋಗಿಗಳಿಗೆ ಸ್ನಾನ ಮಾಡುವುದಕ್ಕೆ ಮೊದಲು ವೈದ್ಯರನ್ನು ನೋಡುವಂತೆ ಸೂಚಿಸಲಾಗಿತ್ತಿತ್ತು. ಒಮ್ಮೆ ಇದಾದ ನಂತರ, ರೋಗಿಗಳು ಮುಖ್ಯ ಸ್ನಾನಗೃಹಗಳೆಡೆಗೆ ತೆರಳುತ್ತಿದ್ದರು ಮತ್ತು ಅಲ್ಲಿ ತಮ್ಮ ಸ್ನಾನಕ್ಕಾಗಿ ಅವರು ಹಣವನ್ನು ಕಟ್ಟಿ ತಮಗೆ ಬಟ್ಟೆ ಕಳಚಲು ಸೂಚಿಸಲಾದ ಕೋಣೆಗೆ ತೆರಳುವ ಮುನ್ನ ತಮ್ಮಲ್ಲಿನ ಬೆಲೆಯುಳ್ಳ ವಸ್ತುಗಳನ್ನು ತೆಗೆದಿಡುತ್ತಿದ್ದರು. ಸ್ನಾನ ಮಾಡುವವರಿಗೆ ಸ್ನಾನಗೃಹದಲ್ಲಿ ಟವೆಲ್, ಹಾಳೆಗಳು ಮತ್ತು ಚಪ್ಪಲಿಗಳನ್ನು ಒದಗಿಸುತ್ತಿದ್ದರು.[೭] ಬಾಡೆನ್-ಬಾಡೆನ್ನಲ್ಲಿನ ಸ್ನಾನದ ಪ್ರಕ್ರಿಯೆ ಬೆಚ್ಚಗಿನ ತುಂತುರು ಮಳೆಯಿಂದ ಆರಂಭವಾಗುತ್ತಿತ್ತು. ಸ್ನಾನಗಾರರು ನಂತರ 20ನಿಮಿಷಗಳ ಕಾಲ ಸುಮಾರು 140 ಡಿಗ್ರಿ ಬಿಸಿ ಗಾಳಿಯಿರುವ ತಿರುಗುವ ಕೋಣೆಗೆ ತೆರಳುತ್ತಿದ್ದರು, ಮುಂದಿನ ಹತ್ತು ನಿಮಿಷಗಳನ್ನು 150 ಡಿಗ್ರಿ ಉಷ್ಣತೆಯಿರುವ ಇನ್ನೊಂದು ಕೋಣೆಯಲ್ಲಿ ಕಳೆಯುತ್ತಿದ್ದರು, 145 ಡಿಗ್ರಿ ಹಬೆ ಸ್ನಾನದಲ್ಲಿ ಪಾಲ್ಗೊಳ್ಳುತ್ತಿದ್ದರು, ನಂತರ ತುಂತುರು ಮಳೆ ಮತ್ತು ಸೋಪಿನಿಂದ ಅಂಗಮರ್ಧನ ಮಾಡಲಾಗುತ್ತಿತ್ತು. ಅಂಗಮರ್ಧನದ ನಂತರ, ದೇಹದ ಉಷ್ಣತೆಗೆ ಸರಿಹೊಂದುವಂತಹ ನೀರಿನ ಕೊಳದಲ್ಲಿ ಸ್ನಾನಗಾರರು ಈಜುತಿದ್ದರು. ಈಜಿನ ನಂತರ, ಸ್ನಾನಗಾರರು ಬೆಚ್ಚಗಿನ "ಸ್ಪ್ರೂಡೆಲ್" ಕೊಠಡಿಯ ಕೊಳದಲ್ಲಿ 15 ರಿಂದ 20 ನಿಮಿಷಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಈ ಕಡಿಮೆ ನೀರಿನ ಕೊಳದ ತಳಪಾಯ ಸ್ವಾಭಾವಿಕವಾಗಿ ಗುಳ್ಳೆಗಳಿಂದ ಕೂಡಿದ ಇಂಗಾಲಯುಕ್ತ ನೀರಿನೊಂದಿಗೆ ಮರಳಿನ ಒಂದು 8-inch (200 mm) ಪದರನ್ನು ಹೊಂದಿರುತ್ತಿತ್ತು. ಇದರ ನಂತರ ಕ್ರಮೇಣ ತಣ್ಣಗಾಗುವ ತುಂತುರು ನೀರಿನ ಮತ್ತು ಕೊಳದ ಸ್ನಾನದ ಸರಣಿ ಮುಂದುವರಿಯುತ್ತಿತ್ತು. ಅದಾದ ನಂತರ, ಸೇವಕರು ಬೆಚ್ಚಗಿನ ಟವೆಲ್‌ಗಳಿಂದ ಸ್ನಾನಗಾರರನ್ನು ಒರೆಸುತ್ತಿದ್ದರು ಮತ್ತು ನಂತರ ಹಾಳೆಗಳಿಂದ ಅವರನ್ನು ಸುತ್ತಿ ಕಂಬಳಿಯಿಂದ ಮುಚ್ಚಿ 20 ನಿಮಿಷಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಬಿಡುತ್ತಿದ್ದರು. ಇದರಿಂದ ಸ್ನಾನದ ಚಿಕಿತ್ಸೆಯ ಒಂದು ಭಾಗ ಪೂರ್ಣವಾಗುತ್ತಿತ್ತು. ಚಿಕಿತ್ಸೆಯ ಉಳಿದ ಭಾಗ ಸೂಚಿಸಿದ ಪಥ್ಯೆ, ವ್ಯಾಯಾಮ, ಮತ್ತು ನೀರು ಕುಡಿಯುವ ಕಾರ್ಯಕ್ರಮವನ್ನು ಹೊಂದಿರುತ್ತಿತ್ತು.[೭]
ಯೂರೋಪಿನ ಸ್ಪಾಗಳು ಜೂಜು, ಕುದುರೆ ಓಟ, ಮೀನು ಹಿಡಿಯುವುದು, ಶಿಕಾರಿ, ಟೆನ್ನಿಸ್, ಸ್ಕೇಟಿಂಗ್, ಸೃತ್ಯ ಮತ್ತು ಕುದುರೆ ಸವಾರಿಯಂತಹ ವಿವಿಧ ರೀತಿಯ ವಿನೋದಗಳನ್ನು ಅತಿಥಿಗಳಿಗೆ ಸ್ನಾನದ ನಂತರ ಒದಗಿಸಲಾಗುತ್ತಿತ್ತು. ಪ್ರಕೃತಿ ವೀಕ್ಷಣೆ ಮತ್ತು ರಂಗಭೂಮಿಯ ಪ್ರದರ್ಶನಗಳನ್ನು ಸ್ಪಾಗಳಿಗೆ ಹೋಗುವ ಜನರಿಗೆ ಹೆಚ್ಚಿನ ಉತ್ತೇಜಕ ವಸ್ತುಗಳನ್ನು ನೀಡಲಾಗುತ್ತಿತ್ತು. ಕೆಲವು ಯೂರೋಪಿಯನ್ ಸರ್ಕಾರಗಳು ಸ್ಪಾ ಚಿಕಿತ್ಸೆಯ ವೈದ್ಯಕೀಯ ಉಪಯೋಗಗಳನ್ನು ಗುರುತಿಸಿದ್ದವು ಮತ್ತಿ ರೋಗಿಯ ಖರ್ಚಿನ ಒಂದಂಶವನ್ನು ನೀಡುತ್ತಿದ್ದವು. ಬಹಳಷ್ಟು ಸಂಖ್ಯೆಯ ಸ್ಪಾಗಳು ಬೊಜ್ಜು ಮತ್ತು ಅತಿ ಹೆಚ್ಚು ತಿನ್ನುವುದು ಮತ್ತು ಕುಡಿಯುವುದರೊಂದಿಗೆ ಇತರ ಹಲವು ವೈದ್ಯಕೀಯ ತೊಂದರೆಗಳಿಂದ ಬಳಲುವವರ ಅಗತ್ಯಗಳನ್ನು ಪೂರೈಸುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ, ಹಿಂದಿನ ಶತಮಾನಗಳ ಸೌಂಧರ್ಯ ಮತ್ತು ಶೈಲಿ ಕಳೆಗುಂದಿರಬಹುದು, ಆದರೆ ಜನರು ಈಗಲೂ ಸಾರ್ವಜನಿಕ ಬಿಸಿನೀರಿನ ಬುಗ್ಗೆಗಳಿಗೆ ವಿಶ್ರಾಂತಿ ಹಾಗು ಆರೋಗ್ಯದ ದೃಷ್ಟಿಯಿಂದ ಹೋಗುತ್ತಿದ್ದರು.[೭]
ಅಮೇರಿಕನ್ ವಸಾಹತುಗಳಲ್ಲಿ ಸ್ಪಾಗಳು
ಬದಲಾಯಿಸಿಕೆಲವು ಯೂರೋಪಿನ ವಸಾಹತುಗಾರರು ವೈದ್ಯಕೀಯ ಉದ್ದೇಶಕ್ಕಾಗಿ ಬಿಸಿ ನೀರಿನ ಚಿಕಿತ್ಸೆಯ ಜ್ಞಾನವನ್ನು ತಮ್ಮೊಂದಿಗೆ ತಂದರು, ಮತ್ತೆ ಕೆಲವರು ಅಮೇರಿಕಾದ ಮೂಲ ನಿವಾಸಿಗಳಿಂದ ಬಿಸಿ ನೀರಿನ ಬುಗ್ಗೆಗಳ ಉಪಯೋಗಗಳನ್ನು ಕಲಿತರು. ಯೂರೋಪಿಯನ್ನರು ಕ್ರಮೇಣ ಬಹಳಷ್ಟು ಬಿಸಿ ಮತ್ತು ತಣ್ಣೀರಿನ ಬುಗ್ಗೆಗಳನ್ನು ಹಲವಾರು ಭಾರತದ ಆದಿವಾಸಿಗಳಿಂದ ವಶಪಡಿಸಿಕೊಂಡರು. ಆನಂತರ ಯೂರೋಪಿಯನ್ನರು ತಮಗೆ ಬೇಕಾದಂತೆ ಅವುಗಳನ್ನು ಅಭಿವೃದ್ಧಿಪಡಿಸಿಕೊಂಡರು. 1760ರ ಹೊತ್ತಿಗೆ, ಬ್ರಿಟಿಷ್ ವಸಾಹತುಶಾಹಿಗಳು ಕನೆಕ್ಟಿಕಟ್, ಪೆನ್ಸಿಲ್ವೇನಿಯಾ, ನ್ಯೂ ಯಾರ್ಕ್ ಮತ್ತು ವರ್ಜೀನಿಯಾದ ಬಿಸಿ ಮತ್ತು ತಣ್ಣೀರಿನ ಬುಗ್ಗೆಗಳೆಡೆಗೆ ನೀರಿನ ಚಿಕಿತ್ಸೆಯನ್ನರಸಿ ಪ್ರಯಾಣ ಬೆಳೆಸಿದರು. ನಿಯಮಿತವಾಗಿ ಭೇಟಿ ನೀಡುತ್ತಿದ್ದ ಈ ಬುಗ್ಗೆಗಳಲ್ಲಿ ಪೆನ್ಸಿಲ್ವೇನಿಯಾದ ಬಾಥ್, ಎಲ್ಲೋ, ಮತ್ತು ಬ್ರಿಸ್ಟಲ್ ಸ್ಪ್ರಿಂಗ್ಸ್, ನ್ಯೂಯಾರ್ಕ್ನ ಸರಟೋಗ ಸ್ಪ್ರಿಂಗ್ಸ್, ಕಿಂಡರ್ಹುಕ್ ಮತ್ತು ಬಾಲ್ಸ್ಟನ್ ಸ್ಪಾ; ಮತ್ತು ವರ್ಜೀನಿಯಾದ ವಾರ್ಮ್ ಸ್ಪ್ರಿಂಗ್ಸ್, ಹಾಟ್ ಸ್ಪ್ರಿಂಗ್ಸ್, ಮತ್ತು ವೈಟ್ ಸಲ್ಫರ್ ಸ್ಪ್ರಿಂಗ್ಸ್, ಪಶ್ಚಿಮ ವರ್ಜೀನಿಯ, ಈಗಿನ ಪಶ್ಚಿಮ ವರ್ಜೀನಿಯ, ಮುಖ್ಯವಾದವು.[೭]
ವಸಾಹತುಗಳ ವೈದ್ಯರು ಕ್ರಮೇಣ ವ್ಯಾದಿಗಳಿಗೆ ಬಿಸಿ ನೀರಿನ ಬುಗ್ಗೆಗಳನ್ನು ಬಳಸುವಂತೆ ಸಲಹೆ ನೀಡಿದರು. 1772 ರಲ್ಲಿ ಅಮೇರಿಕಾದ ಸ್ವದೇಶಾಭಿಮಾನಿ ಮತ್ತು ವೈದ್ಯ ಡಾ. ಬೆಂಜಮಿನ್ ರಷ್, ಪೆನ್ಸಿಲ್ವೇನಿಯಾದ ಬ್ರಿಷ್ಟಲ್ ಬುಗ್ಗೆಗಳನ್ನು ಹೊಗಳಿದ. 1782ರಲ್ಲಿ ಡಾ. ಸಾಮ್ಯುವೆಲ್ ಟೆನ್ನಿ, ಮತ್ತು 1792 ರಲ್ಲಿ ಡಾ. ವಾಲೆಂಟೈನ್ ಸೀಮನ್ ನ್ಯೂಯಾರ್ಕ್ನಲ್ಲಿನ ಸರಟೋಗ ಬುಗ್ಗೆಯ ನೀರನ್ನು ಪರೀಕ್ಷಿಸಿ ಅದರ ಸಾಧ್ಯವಾಗಬಲ್ಲ ಔಷಧೀಯ ಉಪಯೋಗಗಳ ಬಗ್ಗೆ ಬರೆದರು. .ವಿವಿಧ ಬುಗ್ಗೆಗಳ ಬಳಿ ಯಾತ್ರಿಗಳು ತಂಗಲು ಹೋಟೆಲ್‌ಗಳನ್ನು ಕಟ್ಟಲಾಯಿತು. ಉದ್ಯಮಿಗಳು ಯಾತ್ರಿಗಳು ತಂಗಬಹುದಾದ, ಊಟ ಮತ್ತು ದಾಹ ತೀರಿಸಿಕೊಳ್ಳಬಹುದಾದ ಸ್ಥಳಗಳಲ್ಲಿ ಛತ್ರಗಳನ್ನು ಆರಂಭಿಸಿದರು. ಈ ರೀತಿಯಾಗಿ, ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಅರೋಗ್ಯ ವಿಶ್ರಾಂತಿಧಾಮದ ಉದ್ಯಮ ಆರಂಭವಾಯಿತು.[೭]
19 ಹಾಗೂ 20ನೇ ಶತಮಾನದ ಅವಧಿಯಲ್ಲಿ ಅಮೆರಿಕೆಯಲ್ಲಿ ಸ್ನಾನದ ಪ್ರಕ್ರಿಯೆ
ಬದಲಾಯಿಸಿಅಮೇರಿಕಾ ಕ್ರಾಂತಿಯ, ನಂತರ, ಸ್ಪಾ ಉದ್ಯಮ ಹೆಚ್ಚು ಪ್ರಚಾರ ಪಡೆದುಕೊಳ್ಳಲು ಶುರುವಾಯ್ತು. 1850 ರ ಮಧ್ಯ ಭಾಗದ ಹೊತ್ತಿಗೆ, 20 ರಾಜ್ಯಗಳಲ್ಲಿ ಬಿಸಿ ಮತ್ತು ತಣ್ಣೀರಿನ ಬುಗ್ಗೆಗಳ ಧಾಮಗಳು ಆರಂಭವಾದವು. ಬಹಳಷ್ಟು ಈ ಧಾಮಗಳು ಒಂದೇ ತೆರನಾದ ವಾಸ್ತುಶಿಲ್ಪದ ಲಕ್ಷಣಗಳನ್ನು ಹೊಂದಿದ್ದವು. ಬಹಳಷ್ಟು ಆರೋಗ್ಯ ಧಾಮಗಳು ಬುಗ್ಗೆಗಳ ಹತ್ತಿರ ಅಥವಾ ಅದೇ ಸ್ಥಳದಲ್ಲಿಯೇ ದೊಡ್ಡದಾದ ಅಥವಾ ಎರಡಂತಸ್ತಿನ ಮುಖ್ಯ ಕಟ್ಟಡಗಳನ್ನು ಮತ್ತು ಸುತ್ತಲೂ ಚಿಕ್ಕಪುಟ್ಟ ಕಟ್ಟಡಗಳನ್ನು ಹೊಂದಿರುತ್ತಿದ್ದವು. ಮುಖ್ಯ ಕಟ್ಟಡ ಅತಿಥಿಗಳಿಗೆ ಊಟದ ಸೌಲಭ್ಯಗಳನ್ನು, ಮತ್ತು ಮೊದಲ ಮಹಡಿಯಲ್ಲಿ ನೃತ್ಯಕ್ಕೆ ಮತ್ತು ಎರಡನೆ ಮಹಡಿಯಲ್ಲಿ ಮಲಗುವ ಕೋಣೆಗಳನ್ನು ಒಳಗೊಂಡಿದ್ದವು. ಹೊರಗಿನ ಕಟ್ಟಡಗಳು ಅತಿಥಿಗಳಿಗೆ ಪ್ರತ್ಯೇಕ ಕೋಣೆಗಳನ್ನು ಮತ್ತು ಇತರ ಸಹಾಯಕ ಕಟ್ಟಡಗಳು ಒಂದು ಅರ್ಧ ವೃತ್ತಾಕಾರದ ಅಥವಾ ಯು- ಮಾದರಿಯ ಕಟ್ಟಡಗಳನ್ನು ದೊಡ್ಡ ಕಟ್ಟಡಗಳ ಸುತ್ತಲೂ ಹೊಂದಲಾಗಿತ್ತು. [೭]
ಈ ಧಾಮಗಳು ಸ್ನಾನದ ಸೌಲಭ್ಯಗಳ ಜೊತೆಗೆ, ಈಜುವುದು, ಮೀನು ಹಿಡಿಯುವುದು, ಶಿಕಾರಿ ಮಾಡುವುದು ಮತ್ತು ಕುದುರೆ ಸವಾರಿಯಂತಹ ಸೌಲಭ್ಯಗಳನ್ನು ಒದಗಿಸುತ್ತಿದ್ದವು. ವರ್ಜೀನಿಯದ ಧಾಮಗಳು, ಮುಖ್ಯವಾಗಿ ವ್ಹೈಟ್ ಸಲ್ಫರ್ ಸ್ಪ್ರಿಂಗ್ಸ್, ಸಿವಿಲ್ ವಾರ್‌ಗಿಂತ ಮೊದಲು ಮತ್ತು ನಂತರ ಪ್ರಚಲಿತಕ್ಕೆ ಬಂದವು. ಸಿವಿಲ್ ವಾರ್ ನಂತರ, ಯುದ್ಧದಿಂದ ಹಿಂದಿರುಗಿದ ಸೈನಿಕರು ತಮಗಾದ ಗಾಯಗಳನ್ನು ವಾಸಿಪಡಿಸಿಕೊಳ್ಳಲು ಸ್ನಾನ ಮಾಡುತ್ತಿದ್ದರಿಂದಾಗಿ ಮತ್ತು ಅಮೇರಿಕಾದ ಅರ್ಥವ್ಯವಸ್ಥೆ ಹೆಚ್ಚು ಬಿಡುವಿನ ಸಮಯವನ್ನು ಒದಗಿಸಿದ್ದರಿಂದಾಗಿ ಸ್ಪಾ ರಜೆಗಳು ಹೆಚ್ಚು ಹೆಚ್ಚು ಪ್ರಚಲಿತಕ್ಕೆ ಬಂದವು. ಈ ರೀತಿಯ ಚಟುವಟಿಕೆಗಳಿಗೆ ನ್ಯೂಯಾರ್ಕ್‌ನಲ್ಲಿನ ಸರಗೋಟ ಸ್ಪ್ರಿಂಗ್ಸ್ ಒಂದು ಮುಖ್ಯ ಕೇಂದ್ರವಾಯಿತು. ಬೆಚ್ಚಗಿನ ಮತ್ತು ಇಂಗಾಲಯುಕ್ತ ಬುಗ್ಗೆಯ ನೀರಿನಲ್ಲಿ ಸ್ನಾನ ಮಾಡುವುದು ಮತ್ತು ಅದನ್ನು ಕುಡಿಯುವುದು ಆಗಿನ ಕಾಲದಲ್ಲಿ ಬಹಳ ಆಸಕ್ತಿಯ ಸಾಮಾಜಿಕ ಚಟುವಟಿಕೆಗಳಾದ ಜೂಜು, ವಾಯುವಿಹಾರ, ಕುದುರೆ ಸವಾರಿ ಮತ್ತು ನೃತ್ಯಗಳಿಗೆ ಮುನ್ನುಡಿಯಾಯಿತು.[೭] 1830 ರ ಹೊತ್ತಿಗೆ, ಅಂದರೆ ಬಿಸಿ ನೀರಿನ ಬುಗ್ಗೆಗಳು, ಅರ್ಕಾನ್ಸಾಸ್ ದಲ್ಲಿನ ಕಟ್ಟಡಗಳು ಚಿಕ್ಕ ಮರದ ದಿಮ್ಮಿಗಳಿಂದ ಮತ್ತು ಚೌಕಟ್ಟಿನ ವಿನ್ಯಾಸಗಳನ್ನು ಹೊಂದಿದ್ದ ವೇಳೆಗೆ, ನ್ಯೂಯಾರ್ಕ್‍ನಲ್ಲಿನ ಸರಾಟೊಗ ಸ್ಪ್ರಿಂಗ್ಸ್ ಅತ್ಯುತ್ತಮವಾದ ವಾಸ್ತುಶಿಲ್ಪದ ಮಾದರಿಗಳನ್ನು ಹೊಂದಿದ್ದು, ಮನೆಯಲ್ಲಿರುವವರನ್ನು ಹೊರಗಿನ ಹವಮಾನದಿಂದ ರಕ್ಷಿಸಲಾಗುತ್ತಿತ್ತು. 1815 ರ ಹೊತ್ತಿಗೆ ಸರಗೋಟ ಬಹು ದೊಡ್ಡದಾದ ನಾಲ್ಕಂತಸ್ತಿನ ಗ್ರೀಕ್ ಪುನರುಜ್ಜೀವನದ ಹೋಟೆಲ್‍ಗಳನ್ನು ಹೊಂದಿತ್ತು. 1832ರ ವೇಳೆಗೆ ಆ ಸ್ಥಳಗಳಿಗೆ ಒದಗಿಸಲಾದ ರೈಲು ಮತ್ತು ಹಬೆಯ ಹಡಗಿನ ಸೇವೆಯಿಂದ ಬಹಳ ಸಂಖ್ಯೆಯ ಸುಶಿಕ್ಷಿತ ಗಿರಾಕಿಗಳು ಭೇಟಿನೀಡುತ್ತಿದ್ದರು. ಹೋಟೆಲ್‍ಗಳಿಗೆ ಹೊಂದಿಕೊಂಡಂತಿದ್ದ ವಸತಿಗೃಹಗಳಿಗೆ ಅಥವಾ ಚಿಕ್ಕ ಸ್ನಾನಗೃಹಗಳಿಗೆ ಒದಗಿಸಲಾದ ವಿಶೇಷವಾದ ಸ್ನಾನಗೃಹಳನ್ನು ಹೊರತುಪಡಿಸಿ, 19ನೇ ಶತಮಾನದಲ್ಲಿ ಸರಗೋಟದ ಬೆಳವಣಿಗೆ ಸ್ನಾನಗೃಹಗಳಿಗಿಂತ ಬಿಡುವಿನ ವೇಳೆಯ ಹುಡುಕಾಟದ ಮೇಲೆ ಅವಲಂಬಿತವಾಗಿತ್ತು. ಆದಾಗ್ಯೂ ನ್ಯೂಯಾರ್ಕ್‌ನ ಸರಾಟೊಗ ಮತ್ತು ಇತರೆ ಸ್ಪಾಗಳು ಆರೋಗ್ಯಕರ ಖನಿಜಯುಕ್ತ ನೀರನ್ನಾಧರಿಸಿದ ಚಿಕಿತ್ಸೆಗಳನ್ನು ವೃದ್ಧಿಗೊಳಿಸುವುದರಲ್ಲಿ ಕೇಂದ್ರೀಕರಿಸಿದ್ದಾರೆ. ಇದರ ಜೊತೆ ಸಾಮಾಜಿಕ ಜೀವನದ ವಿಷಯಗಳ ಬಗ್ಗೆಯೂ ಗಮನ ಹರಿಸಿದ್ದಾರೆ - ಪ್ಯಾರಿಸ್ ದೇಶದ ಒಂದು ಹೊಸ ವೈಶಿಷ್ಟ್ಯವಾದ ಕುದುರೆ ಓಟದ ಜೂಜಾಟವು ಕೂಡ ಇದರಲ್ಲಿ ಸೇರಿದೆ ಕೆಲ ಶ್ರೀಮಂತ ನಗರವಾಸಿಗಳು ಬೇಸಿಗೆಯಲ್ಲಿ ಪರ್ವತಪ್ರದೇಶಕ್ಕೆ ಸಾಮೂಹಿಕವಾಗಿ ಪ್ರಯಾಣಬೆಳೆಸುತ್ತಾರೆ, ಸರಾಟೊಗವು ಬೇಸಿಗೆ ಚಟುವಟಿಕೆಗಳ ತಾಣವಾಗಿ ಪರಿವರ್ತಿತಗೊಂಡಿತು. ನಾಟ್ಯ ಮಂದಿರಗಳು, ಒಪೆರಾ ಮಂದಿರಗಳು, ಅಂಗಡಿಗಳು , ಕ್ಲಬ್ ಹೌಸ್‌ಗಳನ್ನು ಹೊಂದಿದ ಖಾಸಗಿಯವರ ಭವ್ಯ ಹೋಟೆಲ್‌ಗಳು ಬಹು ದೊಡ್ಡ ಸಂಖ್ಯೆಯಲ್ಲಿ ಬೆಳವಣಿಗೆಯನ್ನು ಕಂಡವು. 1865ರಲ್ಲಿ ದಿ ಯೂನಿಯನ್ ಹೋಟೆಲ್ ತನ್ನ ಸ್ವತಃ ಮೈದಾನವನ್ನು ಹೊಂದಿತು, ಅದು ನೀರಿನ ಚಿಲುಮೆಗಳು ಮತ್ತು ಸಂಪ್ರದಾಯಬದ್ದ ರಮ್ಯಮನೋಹರ ಭೂದೃಶ್ಯಗಳು, ಮತ್ತು ಎರಡು ಸಣ್ಣ ಸ್ನಾನದ ಮನೆಗಳನ್ನು ಅದು ಹೊಂದಿದೆ. ಈವರೆಗೆ, 19ನೆಯ ಶತಮಾನದ ವೇಳೆಯಲ್ಲಿ ಸ್ನಾನಗೃಹಗಳ ರಚನೆ ಗೌಣವಾಗಿದ್ದಿತು ಮತ್ತು ಧಾಮಗಳ ಪ್ರಮುಖವಾದ ಆಕರ್ಷಣೆಗಳಾಗಿರಲಿಲ್ಲ.[೭]
19ನೆಯ ಶತಮಾನದ ಕೊನೆಯರ್ಧಭಾಗದಲ್ಲಿ ಪಾಶ್ಚಿಮಾತ್ಯ ಉದ್ಯಮಿಗಳು ಸ್ವಾಭಾವಿಕ ಬಿಸಿ ಹಾಗೂ ತಂಪು ನೀರಿನ ಬುಗ್ಗೆಗಳನ್ನು ಈ ಧಾಮಗಳಲ್ಲಿ ಪ್ರಗತಿಗೊಳಿಸಿದರು -ಮಿಸ್ಸಿಸಿಪ್ಪಿ ನದಿಯಿಂದ ಪಶ್ಚಿಮದ ಕಡಲ ತೀರದವರೆಗೂ. ಬಹಳಷ್ಟು ಸ್ಪಾಗಳು ಪ್ರತ್ಯೇಕವಾದ ಸ್ನಾನದ ಟಬ್‌ಗಳು, ಹಬೆ ಸ್ನಾನ, ಡಚ್ ಸ್ಪ್ರೇ , ಸೂಜಿ ಶಾವರ್ಸ್, ಮತ್ತು ಕೊಳದ ಸ್ನಾನಗಳನ್ನು ತನ್ನ ಅತಿಥಿಗಳಿಗೆ ಒದಗಿಸುತ್ತವೆ ದೇಶದಲ್ಲಿ ರೈಲ್ವೆ ಪ್ರಯಾಣವನ್ನು ಪ್ರೋತ್ಸಾಹಿಸಲು ಹಾಗೂ ಈ ಧಾಮಗಳನ್ನು ಉತ್ತೇಜಿಸಲು ಹಲವಾರು ರೈಲ್ವೆಮಾರ್ಗಗಳನ್ನು ನಿರ್ಮಿಸಿದೆ ಸೇಂಟ್ ಲೂಯಿಸ್ ಮತ್ತು ಚಿಕಾಗೊದ ದೊಡ್ಡ ಮೆಟ್ರೊಪಾಲಿಟನ್ ಪ್ರದೇಶಗಳಲ್ಲಿ ಬಿಸಿನೀರಿನ ಬುಗ್ಗೆಗಳು, ಆರ್ಕನ್‌ಸಾಸ್‌ಗಳು ಪ್ರಮುಖವಾದ ರೆಸಾರ್ಟ್‌ಗಳಾಗಿವೆ.[೭]
ಸ್ಪಾಗಳ ಜನಪ್ರಿಯತೆಯು 20ನೆಯ ಶತಮಾನದಲ್ಲೂ ಮುಂದುವರೆದಿದೆ. ಹೆಸರಾಂತ ಹಾಟ್ ಸ್ಪ್ರಿಂಗ್ಸ್, ವರ್ಜೀನಿಯಾ, ನ್ಯೂಯಾರ್ಕ್ ಮತ್ತು ಸರಾಟೊಗ ಸ್ಪ್ರಿಂಗ್ಸ್‌ಗಳಲ್ಲಿನ ಉಷ್ಣ ನೀರು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿಲ್ಲ ಎಂದು ಕೆಲವು ವೈದ್ಯಕೀಯ ವಿಮರ್ಶಕರು ಹೇಳಿದ್ದಾರೆ ಸ್ಪಾಗಳ ಒಡೆತನ ಹೊಂದಿರುವ ಹಲವರು ಈ ವಾದಗಳಿಂದಾಗಿ, ತಮ್ಮ ಸ್ಪಾಗಳ ರೋಗಿಗಳಿಗೆ ಉತ್ತಮ ಜಲಚಿಕಿತ್ಸೆ ಒದಗಿಸಲು ಅನೇಕ ಪ್ರಗತಿಪರ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಸರೊಟೊಗ ಸ್ಪಾದಲ್ಲಿ, ಹೃದಯ ಚಿಕಿತ್ಸೆಗಳಿಗೆ ಮತ್ತು ಕ್ರಮಬದ್ದವಲ್ಲದ ರಕ್ತಪರಿಚಲನೆಯ ಸಮಸ್ಯೆಗಳು,ರುಮಾಟಿಕ್ ಸ್ಥಿತಿಯಲ್ಲಿರುವವರು, ನರಗಳ ಸಮಸ್ಯೆಗಳು, ಮೆಟಾಬಾಲಿಕ್ ಕಾಯಿಲೆಗಳು, ಮತ್ತು ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದನ್ನು ವೃದ್ಧಿಗೊಳಿಸಿದ್ದಾರೆ. 1910ರಲ್ಲಿ ಪ್ರಮುಖ ಬುಗ್ಗೆಗಳಲ್ಲಿನ ಸಮಸ್ಯೆಗಳನ್ನು ತಡೆಯಲು ನ್ಯೂಯಾರ್ಕ್ ರಾಜ್ಯದ ಸರ್ಕಾರವು ಅವುಗಳನ್ನು ಕೊಂಡುಕೊಂಡಿತು. ಫ್ರಾಂಕ್ಲಿನ್ ಡೆಲನೊ ರೂಸ್‌ವೆಲ್ಟ್ ಎಂಬುವವರು ನ್ಯೂಯಾರ್ಕ್‌ನ ಗವರ್ನರ್ ಆದಾಗ, ಸರೊಟೊಗಾದಲ್ಲಿ ಯೂರೋಪಿಯನ್ ಶೈಲಿಯ ಸ್ಪಾವನ್ನು ಪ್ರಗತಿಗೊಳಿಸಿದರು. ವಾಸ್ತುಶಿಲ್ಪಿಗಳು ಹೊಸ ಸಂಕೀರ್ಣವನ್ನು ಸೃಷ್ಟಿಸಲು , ಯೂರೋಪಿ ಸ್ನಾನದ ತಾಂತ್ರಿಕ ವಿಷಯಗಳನ್ನು ಸುಮಾರು ಎರಡು ವರ್ಷಗಳ ಕಾಲ ಅಧ್ಯಯನ ನಡೆಸಿದರು. ಇದು 1933ರಲ್ಲಿ ಪೂರ್ಣಗೊಂಡಿತು. ಈ ಅಭಿವೃದ್ಧಿಯು ಮೂರು ಸ್ನಾನಗೃಹಗಳನ್ನು ಹೊಂದಿದೆ ಅವೆಂದರೆ - ಲಿಂಕನ್, ವಾಷಿಂಗ್ಟನ್, ಮತ್ತು ರೂಸ್‌ವೆಲ್ಟ್ -ಒಂದು ಕುಡಿಯುವ ಕೋಣೆ, ಚಿಲುಮೆಗಳ ಕೋಣೆ, ಮತ್ತು ಒಂದು ಸಿಮನ್ ಬಾರುಚ್ ರೀಸರ್ಚ್ ಇನ್ಸ್ಟಿಟ್ಯೂಟ್ ಕಟ್ಟಡವನ್ನೂ ಸಹ ಹೊಂದಿದೆ. ನಾಲ್ಕು ಅಧಿಕ ಕಟ್ಟಡಗಳೂ ಇದರಲ್ಲಿ ಸೇರಿವೆ, ಅವುಗಳೆಂದರೆ ಆಟ ಪಾಠಗಳ ಪ್ರದೇಶ ಮತ್ತು ಮೇಲ್ಚಾವಣಿ ಪ್ರದೇಶ ಮತ್ತು ನೀಲಿ ಬಣ್ಣದ ಪಿಂಗಾಣಿಯಿಂದ ಅಲಂಕೃತವಾದ ಒಂದು ಈಜುಕೊಳ ಸರೊಟೊಗ ಸ್ಪಾ ಸ್ಟೇಟ್ ಪಾರ್ಕ್‌ನಲ್ಲಿ ಲಂಬವಾಗಿ , ಸದೃಢವಾಗಿ ನಿರ್ಮಿಸಿದ ಮತ್ತು ಕಲ್ಲು ರೋಮನ್ ಮರುಹುಟ್ಟಿನ ವಿವರದ ಕಾಂಕ್ರೀಟಿನಿಂದ ನವ ಕ್ಲ್ಯಾಸಿಕಲ್ ಯುಗದ ಶೈಲಿಯ ಕಟ್ಟಡಗಳು ಭವ್ಯವಾಗಿ ತಲೆಯೆತ್ತಿವೆ. .ಈ ಸ್ಪಾ ಅಶ್ವಪಥವನ್ನೊಳಗೊಂಡ ಸ್ವಾಭಾವಿಕ ಪಾರ್ಕ್‌ನಿಂದ ಸುತ್ತುವರೆದಿದೆ. ಪಾರ್ಕಿನ ಸೌಂದರ್ಯವನ್ನು ಸವಿಯುವ ಎಲ್ಲ ಸೌಕರ್ಯಗಳು ಇವೆ, ಆದರೆ ರಮ್ಯಮನೋಹರ ಭೂದೃಶ್ಯಗಳು ಇಲ್ಲಿ ಕಾಣುವುದಿಲ್ಲ". ಆಕರ್ಷಣೆಗಳನ್ನು ಸ್ಪಾದ ಹೊರಭಾಗದಲ್ಲಿಯೇ ಉತ್ತೇಜಕ ಸಾಹಿತ್ಯಗಳಿಂದ ಜಾಹೀರುಪಡಿಸಲಾಗಿದೆ: ಮಾರಾಟದ ವಸ್ತುಗಳು, ಕುದುರೆಯ ಪಂದ್ಯಗಳು, ಮತ್ತು ಕ್ರಾಂತಿಕಾರಿ ಯುದ್ಧದ ಇತಿಹಾಸವನ್ನೊಳಗೊಂಡ ಐತಿಹಾಸಿಕ ತಾಣಗಳು. ನ್ಯೂಯಾರ್ಕ್‌ನ ಗವರ್ನರ್ ಹರ್ಬರ್ಟ್ ಲೆಹ್‌ಮನ್ ಎಂಬುವವರು ಹೊಸ ಸೌಲಭ್ಯಗಳನ್ನು ಜುಲೈ 1935ರಲ್ಲಿ ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಿದರು.[೭]
ಈ ಅವಧಿಯ ಇತರೆ ಪ್ರಮುಖ ಸ್ಪಾಗಳೆಂದರೆ ಫ್ರೆಂಚ್ ಲಿಕ್, ಇಂಡಿಯಾನ; ಹಾಟ್ ಸ್ಪ್ರಿಂಗ್ಸ್ ಮತ್ತು ವ್ಹೈಟ್ ಸಲ್ಫರ್ ಸ್ಪ್ರಿಂಗ್ಸ್, ವೆಸ್ಟ್ ವರ್ಜೀನಿಯಾ; ಹಾಟ್ ಸ್ಪ್ರಿಂಗ್ಸ್, ಆರ್ಕನ್‌ಸಾಸ್; ಮತ್ತು ವಾರ್ಮ್ ಸ್ಪ್ರಿಂತ್ಸ್, ಜಾರ್ಜಿಯಾ. ಫ್ರೆಂಚ್ ಲಿಕ್ ವಿಶೇಷವಾಗಿ ಸ್ಥೂಲತೆಗೆ ಮತ್ತು ಮಲಬದ್ಧತೆಗೆ ಚಿಕಿತ್ಸೆ ನೀಡುತ್ತದೆ. ಚಿಕಿತ್ಸೆಯು ಸ್ನಾನ , ನೀರು ಕುಡಿಯುವುದು ಮತ್ತು ವ್ಯಾಯಾಮಗಳಿಂದ ಕೂಡಿರುತ್ತದೆ. ಹಾಟ್ ಸ್ಪ್ರಿಂಗ್ಸ್ ವರ್ಜೀನಿಯಾ, ಜೀರ್ಣಾಂಗದ ಕಾಯಿಲೆಗಳು ಮತ್ತು ಹೃದಯದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ವಿಶೇಷತೆಯನ್ನು ಹೊಂದಿದೆ ಮತ್ತು ವ್ಹೈಟ್ ಸಲ್ಫರ್ ಸ್ಪ್ರಿಂಗ್ಸ್, ವರ್ಜೀನಿಯಾಅವು ಈ ಕಾಯಿಲೆಗಳ ಜೊತೆಯಲ್ಲಿ ಚರ್ಮ ರೋಗಗಳಿಗೂ ಚಿಕಿತ್ಸೆಯನ್ನು ನೀಡುತ್ತದೆ. ಎರಡೂ ಸ್ಪಾಗಳು ಆಳವಿಲ್ಲದ ಕೊಳದಲ್ಲಿ ರೋಗಿಗಳನ್ನು ಮಲಗಿಸಿ ನೀರನ್ನು ನಿರಂತರವಾಗಿ ಮೇಲೆ ಹರಿಸುವ ಚಿಕಿತ್ಸೆಯನ್ನು ನೀಡುತ್ತವೆ. ವಾರ್ಮ್ ಸ್ಪ್ರಿಂಗ್ಸ್, ಜಾರ್ಜಿಯಾ, ಶಿಶುಗಳಿಗಾಗುವ ಪಾರ್ಶ್ವವಾಯುವಿಗೆ ಸ್ನಾನದ ಮತ್ತು ವ್ಯಾಯಾಮದ ಚಿಕಿತ್ಸೆಯನ್ನು ನೀಡುವಲ್ಲಿ ಪ್ರಸಿದ್ಢಿ ಪಡೆದಿದೆ. ಅಧ್ಯಕ್ಷರಾದ ಫ್ರಾಂಕ್ಲಿನ್ ಡಿ.ರೂಸ್‌ವೆಲ್ಟ್, ಇವರು ಸರಾಟೊಗದ ಅಭಿವೃದ್ಧಿಗೆ ಶ್ರಮಿಸಿದ್ದರು, ನಂತರದಲ್ಲಿ ಅಲ್ಲಿಗೆ ಪದೇ ಪದೇ ಬೇಟಿ ನೀಡುತ್ತಿದ್ದರು.[೭]
ಸ್ಪಾ ಚಿಕಿತ್ಸೆಗಳು
ಬದಲಾಯಿಸಿದೇಹದ ಚಿಕಿತ್ಸೆ , ಸ್ಪಾ ಚಿಕಿತ್ಸೆ , ಅಥವಾ ಕಾಂತಿವರ್ಧಕ ಚಿಕಿತ್ಸೆ ಯು ವೈದ್ಯಕೀಯವಲ್ಲದ ದೇಹದ ಆರೋಗ್ಯಕ್ಕೆ ಸಹಾಯ ಮಾಡುವಂತಹ ಒಂದು ಪದ್ದತಿ. ಈ ಚಿಕಿತ್ಸೆಗಳನ್ನು ಸಾಮಾನ್ಯವಾಗಿ ರೆಸಾರ್ಟ್, ಡೆಸ್ಟಿನೇಶನ್ ಸ್ಪಾ, ಡೇ ಸ್ಪಾ, ಬ್ಯೂಟಿ ಸಲೂನ್ ಅಥವಾ ಶಾಲೆ ಗಳಲ್ಲಿ ನೀಡಲಾಗುತ್ತದೆ.
ಈ ವಿಶೇಷ ಚಿಕಿತ್ಸೆಗಳು ಕೆಳಕಂಡವುಗಳನ್ನೊಳಗೊಂಡಿವೆ:
- ಫೇಶಿಯಲ್ಗಳು — ವೈವಿದ್ಯಮಯ ಉತ್ಪನ್ನಗಳನ್ನುಪಯೋಗಿಸಿ ಮುಖವನ್ನು ಸ್ವಚ್ಛ ಗೊಳಿಸುವುದು.
- ಮಸಾಜ್
- ವ್ಯಾಕ್ಸಿಂಗ್ — ದೇಹದಲ್ಲಿರುವ ಕೂದಲುಗಳಾನ್ನು ಬಿಸಿಯಾದ ಮೇಣವನ್ನುಪಯೋಗಿಸಿ ತೆಗೆಯುವುದು.
- ಬಾಡಿ ವ್ರಾಪ್ಸ್ - ಬಿಸಿಯಾದ ನಾರುಬಟ್ಟೆಗಳಿಂದ , ಪ್ಲಾಸ್ಟಿಕ್ ಹಾಳೆ ಮತ್ತು ಕಂಬಳಿಗಳಿಂದ, ಅಥವಾ ಕೆಲವು ಮೂಲಿಕೆಗಳನ್ನು ಸೇರಿಸಿದ ಮಣ್ಣಿನ ವ್ರಾಪ್ಗಳಿಂದ, ದೇಹವನ್ನು ಸುತ್ತುವುದು.
- ಅರೋಮಾಥೆರಪಿ
- ಚರ್ಮದ ಎಕ್ಸ್ಫಾಲಿಯೇಶನ್ — ಇದರೊಂದಿಗೆ ಕೆಮಿಕಲ್ ಪೀಲ್ಗಳು ಮತ್ತು ಮೈಕ್ರೊಡರ್ಮಾಬ್ರೇಶನ್
- ಉಗುರುಗಳ ಶುಶ್ರೂಷೆ ಮೆನಿಕ್ಯೂರ್ಗಳು ಮತ್ತು ಪೆಡಿಕ್ಯೂರ್ಗಳು
- ಈ ಕೆಳಕಂಡ ಒಂದರಲ್ಲಿ ಸ್ನಾನ ಮಾಡುವುದು ಅಥವಾ ನೆನೆಯುವುದು:
- ನ್ಯೂಟಿಶನ್ ಮತ್ತು ತೂಕದ ಮಾರ್ಗದರ್ಶನ
- ವೈಯಕ್ತಿಕ ಶಿಕ್ಷಣ
- ಯೋಗ ಮತ್ತು ಧ್ಯಾನ
ಆಧುನಿಕ ವಿಧಾನಗಳು
ಬದಲಾಯಿಸಿ1930ರ ಕೊನೆಯ ಭಾಗದಲ್ಲಿ 2,೦೦೦ಕ್ಕಿಂತ ಬಿಸಿ- ಅಥವಾ ತಣ್ಣಗಿನ- ಸ್ಪ್ರಿಂಗ್ಸ್ ಆರೋಗ್ಯಧಾಮಗಳು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು ಈ ಸಂಖ್ಯೆಯು 1950ರ ವೇಳೆಗೆ ತುಂಬಾ ಕಡಿಮೆಯಾಯಿತು ಮತ್ತು ಎರಡು ದಶಕಗಳಲ್ಲಿ ಹಾಗೇ ಸಂಖ್ಯೆ ಇಳಿಮುಖವಾಗಿಯೇ ಇತ್ತು. ಇತ್ತೀಚಿನ ದಿನಗಳಲ್ಲಿ ಯು.ಎಸ್. ನಲ್ಲಿರುವ ಸ್ಪಾಗಳಲ್ಲಿ ಊಟದವ್ಯವಸ್ಥೆ, ವ್ಯಾಯಾಮಗಳು, ಅಥವಾ ಆಟಪಾಠಗಳ ಕಾರ್ಯಕ್ರಮಗಳು ಅದಕ್ಕಿಂತಲೂ ಹೆಚ್ಚಾಗಿ ಸ್ನಾನದ ಚಟುವಟಿಕೆಗಳು ಪ್ರಾಮುಖ್ಯತೆ ಪಡೆದಿವೆ. ಇಲ್ಲಿಯವರೆಗೂ, ಯು.ಎಸ್‌ನಲ್ಲಿ ಸಾರ್ವಜನಿಕ ಸ್ನಾನಗೃಹಗಳ ದುಡಿಮೆಯು ಮಂದಗತಿಯಲ್ಲಿ ಸಾಗಿದೆ.[೭] ಆದಾಗ್ಯೂ, ಯೂರೋಪ್‌ನಲ್ಲಿ ಚಿಕಿತ್ಸೆಗಳಿಂದ ಕೂಡಿದ ಸ್ನಾನಗಳು ಇಂದಿನವರೆಗೂ ಹೆಚ್ಚು ಜನಪ್ರಿಯತೆಯನ್ನು ಉಳಿಸಿಕೊಂಡಿವೆ. ಇದು ಜಪಾನ್ ದೇಶದಲ್ಲಿಯೂ ಕೂಡ ಸತ್ಯವಾಗಿದೆ. ಇಲ್ಲಿರುವ ಸಾಂಪ್ರದಾಯಿಕ ಬಿಸಿ ನೀರಿನ ಬುಗ್ಗೆಗಳ ಸ್ನಾನ ಆನ್‌ಸೆನ್ , ಭೇಟಿನೀಡುವ ಬಹಳಷ್ಟು ಜನರನ್ನು ಆಕರ್ಷಿಸುತ್ತದೆ.
ಯು.ಎಸ್.ನಲ್ಲಿ ಹೆಚ್ಚುತ್ತಿರುವ ಸ್ವಸ್ಥ ಆರೋಗ್ಯ ಹೊಂದುವ ಆಸಕ್ತಿಗಳಿಂದ ಈ ತರಹದ ಚಿಕಿತ್ಸೆಗಳು ಮತ್ತೆ ಜನಪ್ರಿಯವಾಗುತ್ತಿವೆ.[೯]
ಚಿಕಿತ್ಸೆಯ ಸ್ಥಳಗಳು ಅಥವಾ ನಿಸರ್ಗಧಾಮಗಳು
ಬದಲಾಯಿಸಿ- ಎ ಡೆಸ್ಟಿನೇಶನ್ ಸ್ಪಾ, ವೈಯಕ್ತಿಕವಾಗಿ ಕಾಳಜಿವಹಿಸುವಂತಹ ಚಿಕಿತ್ಸೆಗಳ ಒಂದು ಆರೋಗ್ಯಧಾಮ
- ಎ ಡೇ ಸ್ಪಾ, ಬ್ಯೂಟಿ ಸಲೂನ್‌ನ ಒಂದು ರೂಪ
- ಎ ಸ್ಪಾ ಟೌನ್, ರೋಗನಿರೋಧಕ ಗುಣವುಳ್ಳ ನೀರಿಗಾಗಿ ಬೇಟಿನೀಡಬಹುದಾದ ಒಂದು ಊರು.
ಚಿಕಿತ್ಸಾಕ್ರಮ ಅಥವಾ ಸಲಕರಣೆಗಳು
ಬದಲಾಯಿಸಿ- ಎ ಫುಟ್ ಸ್ಪಾ.
- ಎ ಹಾಟ್ ಟಬ್, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಳಕೆಯಲ್ಲಿದೆ
- ಎ ಸೋಡಾ ಫೌಂಟೆನ್, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಳಕೆಯಲ್ಲಿದೆ.
- ಸ್ಪಾ (ಮಿನರಲ್ ವಾಟರ್), ಸ್ಪಾದಲ್ಲಿನ ಮೂಲವಸ್ತುಗಳಿಂದ.
- ಸ್ಪಾಗಳು ಸಾಮಾನ್ಯವಾಗಿ ಮಣ್ಣಿನ ಸ್ನಾನದ ಸೇವೆಯನ್ನು ಉತ್ತಮ ಆರೋಗ್ಯಕ್ಕಾಗಿ , ಅಥವಾ ವಿವಿಧ ವೈದ್ಯಕೀಯ ಸ್ಥಿತಿಗಳಿಗಾಗಿ ಸೇವೆಗಳನ್ನು ಒದಗಿಸುತ್ತವೆ. ಇದನ್ನು 'ಫಂಗೋಥೆರಪಿ' ಎಂತಲೂ ಕರೆಯುತ್ತಾರೆ. ವೈವಿಧ್ಯಮಯ ಔಷಧಯುಕ್ತ ಮಣ್ಣುಗಳು ಮತ್ತು ಪೀಟ್ಗಳನ್ನು ಉಪಯೋಗಿಸಲಾಗುತ್ತದೆ.[೧೦]
ಅಂತಾರಾಷ್ಟ್ರೀಯ ಸ್ಪಾ ಸಹಕಾರಸಂಘದ ನಿರ್ವಚನೆಗಳು
ಬದಲಾಯಿಸಿಸ್ಪಾ - ಸಮಗ್ರವಾಗಿ ಯೋಗಕ್ಷೇಮ ವಿಚಾರಿಸಿಕೊಳ್ಳುವಂತಹ, ವೃತ್ತಿನಿರತ ಸೇವೆಗಳಿಂದ ಮನದಲ್ಲಿ, ದೇಹದಲ್ಲಿ ಹಾಗೂ ಜೀವನದಲ್ಲಿ ಹೊಸತನ ಮೂಡಿಸಲು ಹುರುದುಂಬುವಂತಹ ಪೂಜನೀಯ ಸ್ಥಳವಾಗಿದೆ.[೧೧]
ಸ್ಪಾದ ವಿಧಗಳು
ಬದಲಾಯಿಸಿ- ಕ್ಲಬ್ ಸ್ಪಾ - ಇದು ಒಂದು ಸೌಲಭ್ಯ, ಇದರ ಪ್ರಾಥಮಿಕ ಉದ್ದೇಶ ಫಿಟ್‌ನೆಸ್ ಮತ್ತು ವೃತ್ತಿನಿರತ ನಿರ್ವಹಣೆಯ ದಿನನಿತ್ಯದ ವಿವಿಧ ಸ್ಪಾ ಸೇವೆಗಳ ಬಗ್ಗೆ ಪ್ರಸ್ತಾಪವನ್ನು ಕ್ಲಬ್ ಸ್ಪಾ ಮಾಡುತ್ತದೆ.
- ಕ್ರೂಸ್ ಶಿಪ್ ಸ್ಪಾ – ಕ್ರೂಸ್ ಶಿಪ್ ಸ್ಪಾ ವೃತ್ತಿನಿರತ ನಿರ್ವಹಣೆಯ ಸ್ಪಾ ಸೇವೆಗಳನ್ನು ಒದಗಿಸುತ್ತದೆ, ಫಿಟ್‌ನೆಸ್ ಮತ್ತು ವೆಲ್‌ನೆಸ್ ಕಾಂಪೊನೆಂಟ್ಸ್ ಮತ್ತು ಸ್ಪಾ ಕೈಸಿನ್ ಮೆನು ಆಯ್ಕೆಗಳು.
- ಡೇ ಸ್ಪಾ – ವೃತ್ತಿನಿರತ ನಿರ್ವಹಣೆಯ ದಿನನಿತ್ಯದ ವಿವಿಧ ಸ್ಪಾ ಸೇವೆಗಳ ಬಗ್ಗೆ ಪ್ರಸ್ತಾಪವನ್ನು ಈ ಸ್ಪಾ ಮಾಡುತ್ತದೆ.
- ಡೆಂಟಲ್ ಸ್ಪಾ – ಪರವಾನಗಿ ಹೊಂದಿದ ಡೆಂಟಿಸ್ಟ್ರ ಮೇಲ್ವಿಚಾರಣೆಯಲ್ಲಿ ಒದಗಿಸುವ ಒಂದು ಸೌಲಭ್ಯ, ಇದು ಸ್ಪಾ ಸೇವೆಗಳ ಜೊತೆಗೆ ಒದಗಿಸುವ ಸಾಂಪ್ರದಾಯಿಕ ಹಲ್ಲಿನ ಚಿಕಿತ್ಸೆ.
- ಡೆಸ್ಟಿನೇಶನ್ ಸ್ಪಾ -ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಸ್ಪಾಗೆ ಹೋಗುವವರಿಗೆ ಮಾರ್ಗದರ್ಶನ ನೀಡುವುದು ಡೆಸ್ಟಿನೇಶನ್ ಸ್ಪಾದ ಪ್ರಾಥಮಿಕ ಉದ್ದೇಶ. ಐತಿಹಾಸಿಕವಾಗಿ ಏಳು ದಿನಗಳ ಕಾಲ- ಸ್ಪಾ ಸೇವೆಗಳು, ದೈಹಿಕ ಸಮತೋಲನಕ್ಕಾಗಿ ನಡೆಸುವ ಚಟುವಟಿಕೆಗಳು, ಉತ್ತಮ ಆರೋಗ್ಯದ ಶಿಕ್ಷಣ, ಆರೋಗ್ಯಕರ ಅಡುಗೆಗಳು, ಹಾಗೂ ವಿಶೇಷ ಆಸಕ್ತಿಯುಳ್ಳ ಕಾರ್ಯಕ್ರಮಗಳು ಇವೆಲ್ಲವುಗಳಿಂದ ಜೀವನಶೈಲಿಯಲ್ಲಿ ವ್ಯಾಪಕ ಬದಲಾವಣೆಯಾಗುತ್ತದೆ.
- ಮೆಡಿಕಲ್ ಸ್ಪಾ - ಪರವಾನಗಿ ಹೊಂದಿದ ವೃತ್ತಿನಿರತರಿಂದ ನಿರಂತರವಾದ ಮೇಲ್ವಿಚಾರಣೆಯಿಂದ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಒಂದು ಸೌಲಭ್ಯ. ವೈದ್ಯಕೀಯಾವಾಗಿ ಉತ್ತಮ ಆರೋಗ್ಯ ಹೊಂದುವ ದೃಷ್ಟಿಯಿಂದ ಹಾಗೂ ಒಂದು ಉತ್ತಮ ಪರಿಸರದಲ್ಲಿ ಚಿಕಿತ್ಸೆ ನೀಡುವುದು ಇದರ ಪ್ರಾಥಮಿಕ ಉದ್ದೇಶ, ಜೊತೆಯಲ್ಲಿಯೇ ಸಾಂಪ್ರದಾಯಿಕವಾಗಿ, ಪೂರಕವಾಗಿ ಮತ್ತು/ಅಥವಾ ಬದಲಿ ಚಿಕಿತ್ಸೆಗಳ ಸೇವೆಯನ್ನು ಒದಗಿಸುತ್ತದೆ ಸೌಂದರ್ಯದ ಕಾಳಜಿ/ಸೌಂದರ್ಯವರ್ಧಕಗಳು ಮತ್ತು ತಡೆಗಟ್ಟುವಿಕೆ/ಉತ್ತಮ ಆರೋಗ್ಯ ಹೊಂದುವಿಕೆ ಇವುಗಳನ್ನೊಳಗೊಂಡ ಸೇವೆಗಳು ಹಾಗೂ ಕಾರ್ಯವಿಧಾನಗಳನ್ನು ಇಲ್ಲಿನ ನೌಕರ ವರ್ಗದವರು ಅಭ್ಯಾಸದಲ್ಲಿಟ್ಟುಕೊಳ್ಳುವುದು ಈ ಸೌಲಭ್ಯದ ಒಂದು ಮುಖ್ಯ ದ್ಯೇಯವಾಗಿದೆ.
ವಿವಿಧ ರೀತಿಯ ಪೆಲಾಯ್ಡ್‌ಗಳನ್ನೊಳಗೊಂಡ ಸೇವೆಗಳೊಂದಿಗೆ ವಿಶಿಷ್ಟವಾದ ಬಾಲ್ನಿಯೋಥೆರಪಿಯನ್ನು ಈ ಸ್ಪಾಗಳು ಬಳಸಿಕೊಳ್ಳುತ್ತವೆ.
"ಬಾಲ್ನಿಯೋಥೆರಪಿ ಚಿಕಿತ್ಸೆಗಳು ವಿವಿಧ ಉದ್ದೇಶಗಳನ್ನು ಹೊಂದಿವೆ." ಸ್ಪಾ ವ್ಯವಸ್ಥೆಯಲ್ಲಿ, ಅವರು ಸಂದಿವಾತ ಮತ್ತು ಬೆನ್ನುನೋವುಗಳಂತಹ ಕಾಯಿಲೆಗಳಿಗೆ, ನೋವಿನಿಂದ ಅಥವಾ ಅನಾರೋಗ್ಯತೆಯಿಂದ ಬಳಲುತ್ತಿರುವವರಿಗೆ, ದೇಹದ ವ್ಯವಸ್ಥೆಯನ್ನು ಉತ್ತೇಜಿಸಲು ಚಿಕಿತ್ಸೆಯನ್ನು ನೀಡುತ್ತಾರೆ, ಇದರಿಂದ ಚಿಕಿತ್ಸೆ ಪಡೆದವರು ದಿನನಿತ್ಯದ ಒತ್ತಡವು ಶಮನವಾಗಿ ಆನಂದಭರಿತರಾಗುತ್ತಾರೆ."[೧೨]
- ಮಿನರಲ್ ಸ್ಪ್ರಿಂಗ್ಸ್ ಸ್ಪಾ - ಈ ಸ್ಪಾಗಳಲ್ಲಿ, ಸ್ವಾಭಾವಿಕವಾದ ಖನಿಜಯುಕ್ತ, ಬಿಸಿಯಾದ ಅಥವಾ ಸಮುದ್ರ ನೀರನ್ನು ಜಲಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
- ರೆಸಾರ್ಟ್/ಹೋಟೆಲ್ ಸ್ಪಾ - ಹೋಟೆಲ್ ಅಥವಾ ರೆಸಾರ್ಟ್‌ಗಳಲ್ಲಿರುವಂತಹ ಸ್ಪಾಗಳು. ಇಲ್ಲಿ ವೃತ್ತಿನಿರತವಾಗಿ ಸ್ಪಾ ಸೇವೆಗಳ, ದೈಹಿಕ ಆರೋಗ್ಯ ಸಮತೋಲನ ಮತ್ತು ಆರೋಗ್ಯಕರ ಅಂಶಗಳ ಹಾಗೂ ಊಟದ ಪಟ್ಟಿಯಲ್ಲಿ ಸ್ಪಾ ಅಡಿಗೆಗಳನ್ನು ಆಯ್ಕೆಮಾಡುವಂತಹ ಉತ್ತಮ ನಿರ್ವಹಣೆಯುಳ್ಳವಾಗಿವೆ.
ಟಿಪ್ಪಣಿಗಳು
ಬದಲಾಯಿಸಿ- ↑ Journal of the History of Medicine and Allied Sciences, George Rosen, Yale University Dept. of the History of Science and Medicine, Project Muse, H. Schuman, 1954
- ↑ A brief history of spa therapy, A van Tubergen and S van der Linden
- ↑ ೩.೦ ೩.೧ Medical Hydrology, Sidney Licht, Sidney Herman Licht, Herman L. Kamenetz, E. Licht, 1963 Google Books
- ↑ Discover the Spa Research Fellowship
- ↑ For instance, Leisure and Recreation Management , George Torkildsen, Routledge, 2005, ISBN 0415309956 "Sanitas+Per+Aqua" Google Books
- ↑ World Wide Words
- ↑ ೭.೦೦ ೭.೦೧ ೭.೦೨ ೭.೦೩ ೭.೦೪ ೭.೦೫ ೭.೦೬ ೭.೦೭ ೭.೦೮ ೭.೦೯ ೭.೧೦ ೭.೧೧ ೭.೧೨ ೭.೧೩ ೭.೧೪ ೭.೧೫ ೭.೧೬ ೭.೧೭ ೭.೧೮ ೭.೧೯ ೭.೨೦ ೭.೨೧ ೭.೨೨ ೭.೨೩ ೭.೨೪ ೭.೨೫ ೭.೨೬ ೭.೨೭ ೭.೨೮ ೭.೨೯ ೭.೩೦ Paige, John C (1987). Out of the Vapors: A Social and Architectural History of Bathhouse Row, Hot Springs National Park (PDF). U.S. Department of the Interior.
{{cite book}}
: Unknown parameter|coauthors=
ignored (|author=
suggested) (help) - ↑ "A Brief History of Scarborough Spa". Archived from the original on 2008-05-17. Retrieved 2008-06-16.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "The increasing focus on fitness and wellness has fuelled the reemergence of the spa industry..." Anne Williams, Spa bodywork: a guide for massage therapists. ಲಿಪ್ಪಿನ್‌ಕಾಟ್ ವಿಲಿಯಮ್ಸ್ ಮತ್ತು ವಿಲ್‌ಕಿನ್ಸ್, 2006. p. 173. ISBN 978-0751328868
- ↑ "The increasing focus on fitness and wellness has fuelled the reemergence of the spa industry and, with it, the use of fango [medicinal clay] for healing." ಅನ್ನೆ ವಿಲಿಯಮ್ಸ್, Spa bodywork: a guide for massage therapists. ಲಿಪ್ಪಿನ್‌ಕಾಟ್ ವಿಲಿಯಮ್ಸ್ ಮತ್ತು ವಿಲ್‌ಕಿನ್ಸ್, 2006. p. 173. ISBN 978-0751328868
- ↑ http://www.experienceispa.com Archived 2009-03-27 ವೇಬ್ಯಾಕ್ ಮೆಷಿನ್ ನಲ್ಲಿ. The International SPA Association
- ↑ Jane Crebbin-Bailey, John W. Harcup, John Harrington, The Spa Book: The Official Guide to Spa Therapy. Publisher: Cengage Learning EMEA, 2005. p. 1959 ISBN 1861529171
- 13.'ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು', ಬರೆದ 'ಅಂಗಮರ್ದನ' ವೆಂಬ ಪುಸ್ತಕದಲ್ಲಿ ಅದರ ವಿಶೇಷ ಸೌಲತ್ತುಗಳನ್ನು ವಿವರಿಸಿದ್ದಾರೆ. ಇಲ್ಲಿ ಅವರು ದಾಖಲಿಸಿದ 'ಅಂಗಮರ್ದನ'ದ ವಿಧಿ-ವಿಧಾನಗಳು, 'ಆಯುರ್ವೇದ' ಪ್ರಕಾರದವು. ಅವುಗಳ 'ವಿವರಣೆಗಳು ಸ್ವಲ್ಪ ಭಿನ್ನವಾಗಿವೆ.
ಇದನ್ನೂ ನೋಡಿರಿ
ಬದಲಾಯಿಸಿಗ್ರಂಥಸೂಚಿ
ಬದಲಾಯಿಸಿ- ನಾಥಾನಿಯಲ್ ಅಲ್ಟ್‌ಮನ್, Healing springs: the ultimate guide to taking the waters : from hidden springs to the world's greatest spas. Inner Traditions / Bear & Company, 2000. ISBN 978-0751328868
- ಡಿಯನ್ ಡಿಂಕಿನ್ ಬುಚ್‌ಮನ್, The complete book of water healing. 2nd ed., McGraw-Hill Professional, 2001. ISBN 978-0751328868
- Jane Crebbin-Bailey, John W. Harcup, John Harrington, The Spa Book: The Official Guide to Spa Therapy. ಪ್ರಕಾಶಕರು: Cengage Learning EMEA, 2005. ISBN 978-0751328868
- Esti Dvorjetski, Leisure, pleasure, and healing: spa culture and medicine in ancient eastern Mediterranean. , Brill, 2007 (illustrated). ISBN 978-0751328868
- Carola Koenig, Specialized Hydro-, Balneo-and Medicinal Bath Therapy. ಪ್ರಕಾಶಕರು: iUniverse, 2005. ISBN 978-0751328868
- ಆನ್ನೆ ವಿಲಿಯಮ್ಸ್, Spa bodywork: a guide for massage therapists. ಲಿಪ್ಪಿನ್‌ಕಾಟ್ ವಿಲಿಯಮ್ಸ್ ಮತ್ತು ವಿಲ್‌ಕಿನ್ಸ್, 2006. ISBN 978-0751328868