ಸೌತ್‌ ಏಷ್ಯನ್‌ ಕ್ರೀಡಾಕೂಟ

ಮೊದಲ ದಕ್ಷಿಣ ಏಷ್ಯಾದ ಕ್ರೀಡಾಕೂಟವನ್ನು ೧೯೮೪ ನೇ ಇಸವಿಯಲ್ಲಿ ನೇಪಾಳದ ಕಠ್ಮಂಡುವಿನಲ್ಲಿ, ಆಯೋಜಿಸಲಾಗಿತ್ತು

ಕ್ರೀಡಾಕೂಟದ ಹೆಸರುಗಳು

ಬದಲಾಯಿಸಿ
ಸೌತ್‌ ಏಷ್ಯನ್‌ ಕ್ರೀಡಾಕೂಟ
  • ಕ್ರೀಡಾಕೂಟದ ಹೆಸರು = ದಕ್ಷಿಣ ಏಷ್ಯನ್ ಕ್ರೀಡಾಕೂಟ
  • ಅಥವಾ = ಸೌತ್ ಏಷ್ಯನ್ ಕ್ರೀಡಾಕೂಟ
  • ಆರಂಭ = 1983 ರಲ್ಲಿ
  • ಮೊದಲ ಕ್ರೀಡೆಗಳು =ಸೆಪ್ಟಮಬರ್ 1984
  • ಸ್ಥಳ = ಕಠ್ಮಂಡು -ನೇಪಾಳ
  • ಚಿನ್ಹೆ = ಲಾಗೋ: ಮೇಲಿನ ಹೆಸರು+(ಚಿನ್ಹೆ ಇಂ.ವಿಕಿ)
  • ಸಂಕ್ಷಿಪ್ತ ಹೆಸರು = ಎಸ್.ಎ.ಜಿ.SAG
  • ಅವಧಿ =2 ವರ್ಷಕ್ಕೊಮ್ಮೆ
  • ಹಿಂದಿನ ಕೂಟ= 2010
  • ಸ್ಥಳ = ಢಾಕಾ ಬಾಂಗ್ಲಾ ದೇಶ

ಇತಿಹಾಸ ಮತ್ತು ೨೦೧೬ ರ ಕ್ರೀಡಾಕೂಟ

ಬದಲಾಯಿಸಿ
  • ಮೊದಲ ದಕ್ಷಿಣ ಏಷ್ಯನ್ ಕ್ರೀಡಾಕೂಟ ವನ್ನು 1984 ರಲ್ಲಿ ನೇಪಾಳವು ಅತಥೇಯ ರಾಷ್ತ್ರವಾಗಿ ಆಯೋಜಿಸಿತು. ಕೆಲವು ಸಂದರ್ಭಗಳನ್ನು ಹೊರತುಪಡಿಸಿ ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಕ್ರೀಡಾಕೂಟ ವನ್ನು ನಡೆಸಲಾಗುತ್ತದೆ. 2004 ರಲ್ಲಿ ಇದು ‘ಸೌತ್ ಏಷ್ಯನ್ ಫೆಡರೇಷನ್ ಗೇಮ್ಸ್’.ಅಥವಾ ‘ದಕ್ಷಿಣ ಏಷ್ಯಾದ ಕ್ರೀಡೆಗಳು /ಆಟಗಳು’, ಈ ಹೆಸರನ್ನು ಮರುಹೆಸರಿಸಲು ದಕ್ಷಿಣ ಏಷ್ಯಾ ಕ್ರೀಡಾ ಕೌನ್ಸಿಲ್ನಲ್ಲಿ, 32 ನೇ ಸಭೆಯಲ್ಲಿ ನಿರ್ಧರಿಸಲಾಯಿತು ಫೆಡರೇಷನ್ ಪದ ಕ್ರಿಯೆಯನ್ನು ಚಿಕ್ಕದಾಗಿ ತೋರಿಸುವುದೆಂದು ಭಾವಿಸಿದರು.. [1] ಕಾರಣ ಈ ಆಟಗಳನ್ನು ಹೆಚ್ಚಾಗಿ ದಕ್ಷಿಣ ಏಷ್ಯಾ ಒಲಿಂಪಿಕ್ ಆವೃತ್ತಿಯಂತೆ ಪ್ರಚಾರ ಮಾಡಲಾಗುತ್ತದೆ. ಕ್ರೀಡೆ ಹಾಗೂ ಯುವ ವ್ಯವಹಾರಗಳ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ ಅವರು, ಅಸ್ಸಾಂ ಜೊತೆಗೆ ಮೇಘಾಲಯ ಗಳು ಜಂಟಿಯಾಗಿ 2016 ಜನವರಿ 10 ರಿಂದ 20 ವರೆಗೆ ದಕ್ಷಿಣ ಏಷ್ಯನ್ ಗೇಮ್ಸ್‍ನ್ನು ಅತಿಥೇಯರಾಗಿ ನಡೆಸುವರೆಂದು ದೃಢಪಡಿಸಿದರು. ಆದರೆ ಅದು ಕಾರಣಾಂತರದಿಂದ ಬದಲಾಗಿದೆ.
  • ಅನೇಕ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ 12ನೇ ಸೌತ್‌ ಏಷ್ಯನ್‌ ಕ್ರೀಡಾಕೂಟಕ್ಕೆ ದಿ.೫-೨-೨೦೧೬ ಶುಕ್ರವಾರ ಚಾಲನೆಯಾಗಿದೆ.ಶುಕ್ರವಾರ ಗುವಾಹಟಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಟಕ್ಕೆ ಚಾಲನೆ ನೀಡಲಿದ್ದಾರೆ. ದಕ್ಷಿಣ ಏಷ್ಯನ್‌ ಒಲಿಂಪಿಕ್ ಕೌನ್ಸಿಲ್‌ ಆಶ್ರಯದಲ್ಲಿ 12 ದಿನ ನಡೆಯುವ ಕೂಟದಲ್ಲಿ ಎಂಟು ಸಾರ್ಕ್‌ ರಾಷ್ಟ್ರಗಳ 2,500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
  • 12ನೇ ಆವೃತ್ತಿಯ ಕ್ರೀಡಾಕೂಟ 2012ರಲ್ಲಿ ನವದೆಹಲಿಯಲ್ಲಿ ನಡೆದಿತ್ತು. ದೆಹಲಿ ವಿಧಾನಸಭೆ ಚುನಾವಣೆಯ ಕಾರಣ ಕೂಟವನ್ನು ಮುಂದೂಡ ಲಾಗಿತ್ತು. 2012ರ ಡಿಸೆಂಬರ್‌ನಿಂದ 2014ರ ಫೆಬ್ರುವರಿಯವರೆಗೆ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯು ಭಾರತ ಒಲಿಂಪಿಕ್‌ ಸಂಸ್ಥೆಯನ್ನು ಅಮಾನತಿ ನಲ್ಲಿಟ್ಟಿತ್ತು. ಹೀಗಾಗಿ ಕೂಟ ನಡೆದಿರಲ್ಲ.

ಕ್ರೀಡಾಕೂಟ ಮತ್ತು ನೆಡೆದ ಸ್ಥಳ

ಬದಲಾಯಿಸಿ
Year/ವರ್ಷ Games/ಕ್ರೀದೆ Host City/ಅಥಿತೇಯ-ನಗರ-ದೇಶ Country
1984 I ಕಠ್ಮಂಡು-ನೇಪಾಳ  
Nepal
1985 II ಢಾಕಾ-ಬಾಂಗ್ಲಾದೇಶ  
Bangladesh
1987 III ಕಲ್ಕತ್ತಾ-ಭಾರತ  
India
1989 IV ಇಸ್ಲಾಮಾಬಾದ್-ಪಾಕಿಸ್ತಾನ  
ಪಾಕಿಸ್ತಾನ
1991 V ಕೊಲಂಬೊ-ಶ್ರೀಲಂಕಾ  
Sri Lanka
1993 VI ಢಾಕಾ-ಬಾಂಗ್ಲಾದೇಶ  
Bangladesh
1995 VII ಮದ್ರಾಸ್-ಭಾರತ  
India
1999 VIII ಕಠ್ಮಂಡು-ನೇಪಾಳ  
Nepal
2004 IX ಇಸ್ಲಾಮಾಬಾದ್-ಪಾಕಿಸ್ತಾನ  
ಪಾಕಿಸ್ತಾನ
2006 X ಕೊಲಂಬೊಶ್ರೀಲಂಕಾ  
Sri Lanka
2010 XI ಢಾಕಾಬಾಂಗ್ಲಾದೇಶ  
Bangladesh
2016 XII ಗೌಹಾತಿ ,ಶಿಲಾಂಗ್ -ಭಾರತ []  
India
2019 XIII Kathmandu  
Nepal

ಪದಕ ಗಳಿಕೆ ವಿವರ

ಬದಲಾಯಿಸಿ
Rank NOC Participated Gold Silver Bronze Total
1   ಭಾರತ 11 900 542 286 1728
2   ಪಾಕಿಸ್ತಾನಪಾಕಿಸ್ಥಾನ 11 311 375 336 1022
3  ಶ್ರೀಲಂಕಾ 11 185 288 455 928
4   ನೇಪಾಲ 11 76 99 238 413
5   ಬಾಂಗ್ಲಾದೇಶಬಾಂಗ್ಲಾ ದೇಶ 11 63 162 347 572
6   ಅಫ್ಘಾನಿಸ್ತಾನ ಆಫ್ಘಾನಿಸ್ತಾನ 2 13 16 34 64
7   ಭೂತಾನ್/ಭೂತಾನ 11 2 15 38 55
8   ಮಾಲ್ಡೀವ್ಸ್ಮಾಲ್ಡೀವ್ಸ್ 11 0 1 8 9

ಅಂತಿಮ 2012ಕ್ಕೆ:ಚಿನ್ನದ ಪದಕದ ವಿವರ

ಬದಲಾಯಿಸಿ
ದೇಶ ಅತಿಹೆಚ್ಚಿನ ಛಾಂಪಿಯನ್ನರು 2nd ಚಿನ್ನ 3rd ಚಿನ್ನ
  ಭಾರತ
11 Times
-
-
  ಪಾಕಿಸ್ತಾನ
-
7 Times
3 Times
 ಶ್ರೀಲಂಕಾ
-
3 Times
7 Times
  ನೇಪಾಲ
-
1 Time
-
  ಬಾಂಗ್ಲಾದೇಶ
-
-
1 Time

ಬೀಚ್ ಮತ್ತು ಚಳಿಗಾಲದ ಕ್ರೀಡೆಗಳು

ಬದಲಾಯಿಸಿ
ಕ್ರೀಡಾ ವಿಧ ವರ್ಷ ಕ್ರೀಡೆ ಅತಿಥೇಯ ನಗರ ದೇಶ
ದಕ್ಷಿಣ ಏಷ್ಯಾ ಬೀಚ್ ಗೇಮ್ಸ್ 2011 1 ಹಂಬನತಾತ ಶ್ರೀಲಂಕಾ 
ದಕ್ಷಿಣ ಏಷ್ಯಾ ವಿಂಟರ್ ಗೇಮ್ಸ್ 2011 1 ಡೆಹರಾಡೂನ್ ಮತ್ತು ಅವುಲಿ ಭಾರತ 
India

ಟೆಂಪ್ಲೇಟು:SRI

೨೦೧ ಏಷ್ಯನ್‌ ಕ್ರೀಡಾಕೂಟದ ವಿವರ

ಬದಲಾಯಿಸಿ
  • *ಭಾರತಕ್ಕೆ 12ನೇ ಸಮಗ್ರ ಪ್ರಶಸ್ತಿ:
  • *ಸ್ಥಳ:ಗುವಾಹಟಿ/ಶಿಲ್ಲಾಂಗ್
  • *ಆತಿಥೇಯ ಭಾರತ ತಂಡವು ಮಂಗಳವಾರ ಮುಕ್ತಾಯ ವಾದ 12ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. ಭಾರತವು ಸತತ 12ನೇ ಬಾರಿ ಈ ಸಾಧನೆ ಮಾಡಿದೆ.
  • *ಆತಿಥೇಯ ಕ್ರೀಡಾಪಟುಗಳು ಒಟ್ಟು 308 ಪದಕಗಳನ್ನು ಗೆದ್ದುಕೊಂಡಿದೆ. ಅದರಲ್ಲಿ 188 ಚಿನ್ನ, 99 ಬೆಳ್ಳಿ ಮತ್ತು 30 ಕಂಚಿನ ಪದಕಗಳು ಸೇರಿವೆ. 2010ರಲ್ಲಿ ನಡೆದಿದ್ದ ಕೂಟದಲ್ಲಿ ಭಾರತವು 175 ಪದಕಗಳನ್ನು ಜಯಿಸಿತ್ತು.
  • *ಈ ಬಾರಿಯ ಪದಕಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿರುವ ಶ್ರೀಲಂಕಾ 186 (25 ಚಿನ್ನ, 63 ಬೆಳ್ಳಿ ಮತ್ತು 98 ಕಂಚು) ಪದಕಗಳು, ಮೂರನೇ ಸ್ಥಾನ ಪಡೆದ ಪಾಕಿಸ್ತಾನ 106 ಪದಕಗಳನ್ನು (12 ಚಿನ್ನ, 37 ಬೆಳ್ಳಿ ಮತ್ತು 57 ಕಂಚು) ತಮ್ಮದಾಗಿಸಿಕೊಂಡಿವೆ.
  • ಮೇರಿ, ಸರಿತಾಗೆ ಚಿನ್ನ: ಕೂಟದ ಅಂತಿಮ ದಿನವೂ ಭಾರತದ ಕ್ರೀಡಾ ಪಟುಗಳು ಪದಕಗಳ ಬೇಟೆಯಾಡಿದರು. ಮಹಿಳೆಯರ ಬಾಕ್ಸಿಂಗ್‌ನಲ್ಲಿ; ಒಲಿಂಪಿಯನ್ ಎಂ.ಸಿ. ಮೇರಿ ಕೋಮ್ ಅವರು ಮಹಿಳೆಯರ ಬಾಕ್ಸಿಂಗ್‌ನ 51 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದರು. ಭುಜದ ಗಾಯದಿಂದಾಗಿ ಸುದೀರ್ಘ ವಿಶ್ರಾಂತಿ ಪಡೆದಿದ್ದ ಮೇರಿ ಕೋಮ್ ತಾವು ಬಾಕ್ಸಿಂಗ್ ರಿಂಗ್‌ಗೆ ಮರಳಿದ ಮೊದಲ ಸ್ಪರ್ಧೆಯಲ್ಲಿ ಜಯಭೇರಿ ಬಾರಿಸಿದರು.
  • ಫೈನಲ್‌ನಲ್ಲಿ ಶ್ರೀಲಂಕಾದ ಅನೂಷಾ ಕೊಡಿಟುವಕ್ಕೂ ದಿಲ್‌ರುಕ್ಷಿ ಅವರನ್ನು ಸೋಲಿಸಿದರು. ಕೇವಲ 90 ಸೆಕೆಂಡು ಗಳಲ್ಲಿ ಅವರು ತಮ್ಮ ಎದುರಾಳಿಯನ್ನು ನಾಕೌಟ್ ಮಾಡಿದರು. ಐದು ಬಾರಿಯ ವಿಶ್ವ ಚಾಂಪಿಯನ್ ಮೇರಿ ನೀಡಿದ ಬಲಶಾಲಿ ಪಂಚ್‌ಗೆ ಆಯ ತಪ್ಪಿ ಬಿದ್ದ ಶ್ರೀಲಂಕಾ ಬಾಕ್ಸರ್‌ ಮಂಡಿಗೆ ಪೆಟ್ಟಾಯಿತು. ಪ್ರಥಮ ಚಿಕಿತ್ಸೆಯಿಂದ ಚೇತರಿಸಿಕೊಳ್ಳದ ಅವರು ಸ್ಪರ್ಧೆಯಿಂದ ಹಿಂದೆ ಸರಿದರು.
  • 60 ಕೆಜಿ ವಿಭಾಗದಲ್ಲಿ ಭಾರತದ ಸರಿತಾದೇವಿ ಕೂಡ ಚಿನ್ನ ಗಳಿಸಿದರು. ಏಷ್ಯನ್ ಕ್ರೀಡಾಕೂಟದಲ್ಲಿ ನಡೆದಿದ್ದ ವಿವಾದದ ನಂತರ ಒಂದು ವರ್ಷ ಅಮಾನತು ಶಿಕ್ಷೆಯನ್ನು ಸರಿತಾ ಎದುರಿಸಿದರು. ಅದರ ನಂತರ ಅವರು ಈ ಕೂಟದಲ್ಲಿ ಸ್ಪರ್ಧಿಸಿದ್ದಾರೆ. ಫೈನಲ್‌ನಲ್ಲಿ ಅವರು ಶ್ರೀಲಂಕಾದ ಎಂ. ವಿದೂಷಿಕಾ ಪ್ರಬಾಧಿ ಅವರನ್ನು ಸೋಲಿಸಿದರು. ಸರಿತಾ 3–0 ಯಿಂದ ಜಯಿಸಿದರು.
  • ಏಷ್ಯನ್ ಕ್ರೀಡಾಕೂಟ ಪದಕವಿಜೇತ ಬಾಕ್ಸರ್ ಪೂಜಾ ಅವರು ಮಹಿಳೆಯರ ವಿಭಾಗದಲ್ಲಿ ಮತ್ತೊಂದು ಚಿನ್ನ ತಂದಿತ್ತರು. ಪೂಜಾ ಅವರು ನಿಲಾಂತಿ ಅಂದಾರವೀರ ಅವರನ್ನು ಕೇವಲ ಒಂದೇ ಬೌಟ್‌ನಲ್ಲಿ ಮಣಿಸುವ ಮೂಲಕ ನಾಕೌಟ್ ಜಯ ಪಡೆದರು.
  • ಜೂಡೊ ಪಟುಗಳ ಮಿಂಚು: ಭಾರತದ ಕ್ರೀಡಾಪಟುಗಳು ಜುಡೊ ಕ್ರೀಡೆ ಯಲ್ಲಿಯೂ ಪದಕಗಳನ್ನು ಗೆದ್ದರು. ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಜೂಡೊ ತಂಡವು ಎರಡು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಜಯಿಸಿತು.
  • ಪುರುಷರ 90 ಕೆಜಿ ವಿಭಾಗದಲ್ಲಿ ಅವತಾರ್ ಸಿಂಗ್ ಅವರು ಆಫ್ಘಾನಿ ಸ್ತಾನದ ಮೊಹಮ್ಮದ್ ಇಸ್ಮಾಯಿಲ್ ಕಾಕರ್ ಅವರನ್ನು ಹಣಿದು ಚಿನ್ನ ಗೆದ್ದರು. ಮಹಿಳೆಯರ 70 ಕೆಜಿ ವಿಭಾಗದಲ್ಲಿ ಪೂಜಾ ಪಾಕಿಸ್ತಾನದ ಬೀನಿಶ್ ಖಾನ್ ಅವರ ವಿರುದ್ಧ ಜಯಿಸಿದರು.
  • 78 ಕೆಜಿಯೊಳಗಿನ ವಿಭಾಗದಲ್ಲಿ ಇದ್ದ ನಾಲ್ವರು ಸ್ಪರ್ಧಿಗಳಲ್ಲಿ 210 ಪಾಯಿಂಟ್‌ಗಳನ್ನು ಗಳಿಸಿದ ಪಾಕಿಸ್ತಾನದ ಫೌಜಿಯಾ ಮುಮ್ತಾಜ್ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಅರುಣಾ (200 ಪಾಯಿಂಟ್ಸ್) ಬೆಳ್ಳಿ ಪದಕ ಜಯಿಸಿದರು. ಪುರುಷರ 100 ಕೆಜಿ ವಿಭಾಗದ ಫೈನಲ್‌ನಲ್ಲಿ ಭಾರತದ ಶುಭಂ ಕುಮಾರ್ ಅವರು ಹುಸೇನ್ ಷಾ ವಿರುದ್ಧ ಸೋಲನುಭವಿಸಿದರು. 29 ಸೆಕೆಂಡು ಗಳಲ್ಲಿ ಮುಗಿದ ಪಂದ್ಯದಲ್ಲಿ ಪಾಕ್‌ ಆಟಗಾರ ಚಿನ್ನದ ಪದಕ ಪಡೆದರು.
  • ಇದರೊಂದಿಗೆ ಭಾರತದ ಜೂಡೊ ತಂಡವು ಒಟ್ಟು ಒಂಬತ್ತು ಚಿನ್ನ, ಮೂರು ಬೆಳ್ಳಿ ಪದಕಗಳು ಸೇರಿದಂತೆ ಒಟ್ಟು 12 ಪದಕಗಳನ್ನು ಗೆದ್ದಿತು. ಪಾಕಿಸ್ತಾನ ಎರಡು ಚಿನ್ನ, ಎರಡು ಬೆಳ್ಳಿ, ಎಂಟು ಕಂಚು ಮತ್ತು ನೇಪಾಳ ಒಂದು ಚಿನ್ನ, ಎರಡು ಬೆಳ್ಳಿ, ಆರು ಕಂಚಿನ ಪದಕಗಳನ್ನು ಗಳಿಸಿ, ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದವು.
  • ಅನಾವರಣ: ಈಶಾನ್ಯ ರಾಜ್ಯಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಗಳ ವೈಭವ, ಸಂಜೆಯ ಆಗಸದಲ್ಲಿ ಪಟಾಕಿಗಳ ಬೆಳಕಿನ ಚಿತ್ತಾರದೊಂದಿಗೆ ಕ್ರೀಡಾಕೂಟಕ್ಕೆ ಭವ್ಯ ತೆರೆ ಬಿತ್ತು. ಕ್ರೀಡಾಕೂಟಕ್ಕೆ ಮುಕ್ತಾಯ ಘೋಷಿಸಿದ ಕೇಂದ್ರ ಕ್ರೀಡಾ ಸಚಿವ ಸರ್ಬಾನಂದ ಸೊನೊವಾಲ್, ‘ಹಿಂದೆಂ ದಿಗಿಂತಲೂ ಈ ಬಾರಿಯ ಕೂಟವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಸುಮಾರು ನಾಲ್ಕು ಸಾವಿರ ಅಥ್ಲಿಟ್‌ಗಳು ಭಾಗವಹಿಸಿದ್ದರು. ಗುವಾಹಟಿ ಮತ್ತು ಶಿಲ್ಲಾಂಗ್‌ಗಳಲ್ಲಿ ಸ್ಪರ್ಧೆಗಳು ಉತ್ತಮ ರೀತಿಯಲ್ಲಿ ಆಯೋಜನೆಯಾದವು’ ಎಂದು ಶ್ಲಾಘಿಸಿದರು.
  • ಬಾಕ್ಸಿಂಗ್ ಸ್ಪರ್ಧೆಯ ಫೈನಲ್ ವಿಳಂಬ
  • ಭಾರತೀಯ ಅಮೆಚೂರ್ ಬಾಕ್ಸಿಂಗ್ ಫೆಡರೇಷನ್ (ಎಐಬಿಎ) ತಾತ್ಕಾಲಿಕ ಸಮಿತಿಯು ಸಂಭಾವನೆ ನೀಡುವಲ್ಲಿ ವಿಳಂಬ ಮಾಡಿದೆ ಎಂದು ಆರೋಪಿಸಿ ತಾಂತ್ರಿಕ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಲಿಲ್ಲ. ಆದ್ದರಿಂದ ಮಂಗಳವಾರ ಮಹಿಳೆಯರ ಬಾಕ್ಸಿಂಗ್ ಫೈನಲ್‌ 40 ನಿಮಿಷ ತಡವಾಗಿ ಆರಂಭವಾಯಿತು.
  • ‘ತಾಂತ್ರಿಕ ಅಧಿಕಾರಿಗಳು ದಿನಭತ್ಯೆ ಹೆಚ್ಚಳ ಮಾಡಬೇಕು ಇಲ್ಲದಿದ್ದರೆ ಪಂದ್ಯ ನಡೆಸಲು ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡುತ್ತಿದ್ದಾರೆ. ಈ ಮೊದಲು ಅವರಿಗೆ ರೂ.3425 ನಿಗದಿಪಡಿಸಲಾಗಿತ್ತು. ಅದಕ್ಕಿಂತಲೂ ಹೆಚ್ಚಿನ ಭತ್ಯೆ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ, ಅವರೊಂದಿಗೆ ಮಾಡಿದ ಸಂಧಾನ ಮಾತುಕತೆ ಫಲಪ್ರದವಾಗಿದೆ. ಸಮಸ್ಯೆ ಬಗೆಹರಿದಿದೆ’ ಎಂದು ಶಿಲ್ಲಾಂಗ್‌ ಸಂಘಟನಾ ಸಮಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆರ್. ಕೆ. ಶರ್ಮಾ ತಿಳಿಸಿದ್ದಾರೆ

ಪದಕ ಪಡೆದ ವಿವರ

ಬದಲಾಯಿಸಿ
ದೇಶ ಚಿನ್ನ ಬೆಳ್ಳಿ ಕಂಚು ಒಟ್ಟು
ಭಾರತ 188 90 30 308
ಶ್ರೀಲಂಕಾ 25 63 98 186
ಪಾಕಿಸ್ಥಾನ 12 37 57 106
ಆಫ್ಘಾನಿಸ್ತಾನ 7 9 19 35
ಬಾಂಗ್ಲಾ ದೇಶ 4 15 56 75
ನೇಪಾಲ 3 23 34 60
ಮಾಲ್ಡೀ 0 2 1 3
ಭೂತಾನ 0 2 1 3

[] []

ಉಲ್ಲೇಖ

ಬದಲಾಯಿಸಿ
  1. "12th SAF Games Mantle Falls on State". The New Indian Express. Archived from the original on 25 ಡಿಸೆಂಬರ್ 2018. Retrieved 22 December 2014.
  2. "ಆರ್ಕೈವ್ ನಕಲು". Archived from the original on 2016-07-15. Retrieved 2016-07-15. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  3. http://www.prajavani.net/article/ಭಾರತಕ್ಕೆ-12ನೇ-ಸಮಗ್ರ-ಪ್ರಶಸ್ತಿ