ಸುರಹೊನ್ನೆ
Calophyllum tomentosum | |
---|---|
Conservation status | |
Scientific classification | |
ಸಾಮ್ರಾಜ್ಯ: | Plantae |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | Eudicots |
ಏಕಮೂಲ ವರ್ಗ: | Rosids |
ಗಣ: | ಮ್ಯಾಲ್ಪಿಘಿಯಾಲೆಸ್ |
ಕುಟುಂಬ: | ಕ್ಯಾಲೊಫಿಲೇಸೀ |
ಕುಲ: | ಕ್ಯಾಲೊಫಿಲಮ್ |
ಪ್ರಜಾತಿ: | C. tomentosum
|
Binomial name | |
Calophyllum tomentosum |
ಸುರಹೊನ್ನೆ (ಸುರಗೆ, ಸುರಗಿ) ಮರವು ಗಟ್ಟಿಫೆರೀ (ಕ್ಲೂಸಿಯೇಸೀ) ಕುಟುಂಬಕ್ಕೆ ಸೇರಿದ ಕಾಲೊಫಿಲ್ಲಂ ಟೊಮೆಂಟೋಸಮ್ ಪ್ರಭೇದದ ಸ್ತಂಭಾಕೃತಿಯ ಕಾಂಡದ ನಿತ್ಯಹರಿದ್ವರ್ಣದ ಮರ.
ಸಸ್ಯ ವಿವರಣೆ
ಬದಲಾಯಿಸಿ45ಮೀ ಎತ್ತರ 5ಮೀ ಸುತ್ತಳತೆಗೆ ಬೆಳೆಯುತ್ತದೆ. ಹಳದಿ ಮಿಶ್ರ ಬಣ್ಣದ ಉದ್ದನೆಯ ವಂಕಿಯಾದ ಸೀಳಿಕೆಗಳಿಂದ ಕೂಡಿದ ತೊಗಟೆಯಿಂದ ಈ ಮರದ ಗುರುತು ಹಚ್ಚುವುದು ಸುಲಭ.
ಬಿಳಿಯ ಸುವಾಸಿತ ಹೂಗಳು ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಮೂಡಿ, ಮೇ-ಜೂನ್ ತಿಂಗಳುಗಳಲ್ಲಿ ಕಾಯಿ ಪಕ್ವವಾಗುವುದು. ಮಳೆಗಾಲದಲ್ಲಿ ಬೀಜ ಮೊಳೆತು, ಸಸಿಗಳು ಸ್ವಾಭಾವಿಕವಾಗಿ ಉತ್ಪತ್ತಿಯಾಗುವುವು. ಈ ಮರಕ್ಕೆ ನೆರಳು ಹಿತ, ಬೆಂಕಿ ಬಹು ಹಾನಿಕರ.
ವ್ಯಾಪ್ತಿ
ಬದಲಾಯಿಸಿಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಕೊಡಗಿನವರೆಗೂ, ಅಣ್ಣಾಮಲೈ ಬೆಟ್ಟಗಳ 1,500 ಮೀ ಎತ್ತರದ ತೇವಮಯ ನಿತ್ಯಹರಿದ್ವರ್ಣದ ಕಾಡುಗಳಲ್ಲಿಯೂ ಕಂಡುಬರುತ್ತದೆ. ಬರಡು ಹಾಗೂ ಅಸ್ಥಿರಪರ್ಣಿ ಕಾಡುಗಳಲ್ಲಿ ಇದು ಬೆಳೆಯಲಾರದು.
ಉಪಯೋಗಗಳು
ಬದಲಾಯಿಸಿಚೌಬೀನೆ ಕೆಂಪು ಮಿಶ್ರ ಕಂದುಬಣ್ಣ ಹಾಗೂ ಕಪ್ಪುಗೆರೆಗಳಿಂದ ಕೂಡಿರುತ್ತದೆ. ಗಡಸು, ಶಕ್ತಿಯುತ, ಹದಮಾಡಲು ಸುಲಭ, ಬಾಳಿಕೆಯುತ. ಹೊರವಲಯದಲ್ಲಿ ಹಾಗೂ ನೆಲಕ್ಕೆ ತಾಗಿದಂತೆ ಉಪಯೋಗಿಸಬೇಕಾದಲ್ಲಿ ರಕ್ಷಕ ಸಂಸ್ಕರಣೆ ಬೇಕು. ಕೊಯ್ತುಕ್ಕೂ ಮರಗೆಲಸಕ್ಕೂ ಸುಲಭ. ಉದ್ದ ನೇರ ಕಾಂಡವಿರುವುದರಿಂದ ಹಡಗುಗಳ ಪಟಸ್ತಂಭ, ಕೂವೆ ಸ್ಪಾರ್‌ಗಳಿಗೂ, ಸೇತುವೆ ನಿರ್ಮಾಣದಲ್ಲಿಯೂ ಇದರ ಬಳಕೆ ಹೆಚ್ಚು.
ಉಲ್ಲೇಖಗಳು
ಬದಲಾಯಿಸಿ- ↑ World Conservation Monitoring Centre (1998). "Calophyllum tomentosum". IUCN Red List of Threatened Species. 1998: e.T30795A9574059. doi:10.2305/IUCN.UK.1998.RLTS.T30795A9574059.en. Retrieved 17 November 2021.