ಆನೈಮಲೈ ಪರ್ವತ ಶ್ರೇಣಿ
ಆನೈಮಲೈ ಪರ್ವತ ಶ್ರೇಣಿ ಯು ಕೇರಳ ಮತ್ತು ತಮಿಳು ನಾಡು ರಾಜ್ಯಗಳಲ್ಲಿ ಹಬ್ಬಿರುವ ಪಶ್ಚಿಮ ಘಟ್ಟದ ಒಂದು ಪರ್ವತ ಶ್ರೇಣಿ.ಅಣ್ಣಾಮಲೆ ಎಂಬ ಹೆಸರು ತಮಿಳು ಮತ್ತು ಮಲಯಾಳಂ ಭಾಷೆಯ ಆನೈ ಎಂದರೆ ಆನೆ ಎಂಬುದರಿಂದಲೂ ಮಲೈ ಎಂದರೆ ಮಲೆ ಅಥವಾ ಕಾಡು ಎಂಬ ಶಬ್ಧಗಳಿಂದ ಉತ್ಪತ್ತಿಯಾಗಿದೆ. ಈ ಶ್ರೇಣಿಯ ಉನ್ನತ ಶಿಖರವೆಂದರೆ ಆನೆಮುಡಿ ಶಿಖರ. ಇದು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿದೆ. ಪಶ್ಚಿಮ ಘಟ್ಟದ ಈ ಪ್ರದೇಶವನ್ನು ಇತರ ಪ್ರದೇಶಗಳೊಂದಿಗೆ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಗಿದೆ.
ಆನೈಮಲೈ ಪರ್ವತ ಶ್ರೇಣಿ | |
---|---|
Highest point | |
ಶಿಖರ | ಆನಮುಡಿ, ಕೇರಳ |
ಎತ್ತರ | 2,695 m (8,842 ft) |
ನಿರ್ದೇಶಾಂಕಗಳು | 10°12′56.0″N 76°52′39.3″E / 10.215556°N 76.877583°E 10°12'56.0"N 76°52'39.3"E[೧] |
Naming | |
ಸ್ಥಳೀಯ ಹೆಸರು | ஆனைமலை மலைத்தொடர் |
Geography | |
Location of Anamalai Hills | |
{{{ದೇಶ_ಪ್ರಕಾರ}}} | ಭಾರತ |
{{{ಉಪವಿಭಾಗ೨_ಪ್ರಕಾರ}}} | ತಮಿಳುನಾಡು and ಕೇರಳ |
ಶ್ರೇಣಿಯ ನಿರ್ದೇಶಾಂಕಗಳು | 10°10′12.0″N 77°03′40.9″E / 10.170000°N 77.061361°E10°10'12.0"N 77°03'40.9"E |
Parent range | ಪಶ್ಚಿಮ ಘಟ್ಟಗಳು |
Topo map | (Terrain) |
Geology | |
ಬಂಡೆಯ ವಯಸ್ಸು | Cenozoic 100 to 80 mya |
ಬಂಡೆಯ ಪ್ರಕಾರ | Fault[೨] |
ಭೌಗೋಳಿಕ
ಬದಲಾಯಿಸಿಈ ಪರ್ವತಶ್ರೇಣಿಯು 10° 13' ಮತ್ತು 10° 31' N. ಮತ್ತು 76° 52' ಮತ್ತು 77° 23' E., ಮಧ್ಯಬಿಂದು : 10°22′N 77°07.5′E / 10.367°N 77.1250°E. ಅಕ್ಷಾಂಶ ರೇಖಾಂಶಗಳ ಮಧ್ಯೆ .ಪಶ್ಚಿಮ ಘಟ್ಟದ ದಕ್ಷಿಣ ಭಾಗದಲ್ಲಿ .ಹರಡಿಕೊಂಡಿದೆ ಈ ಶ್ರೇಣಿಯು ಕೆಳಗಿನ ಮತ್ತು ಮೇಲಿನ ಎರಡು ಎತ್ತರಗಳಲ್ಲಿ ಹರಡಿದೆ.ಸರಾಸರಿ ೩೦೦೦ ಆಡಿಯಷ್ಟು ಎತ್ತರದ ಕೆಳಗಿನ ಅಥವಾ ಕಡಿಮೆ ಎತ್ತರದ ಬೆಟ್ಟಗಳ ಸಾಲು ಮತ್ತು ಸುಮಾರು ೮೦೦೦ ಅಡಿ ಎತ್ತರಗಳ ಹಲವಾರು ಶಿಖರಗಳನ್ನೊಳಗೊಂಡ ಮೇಲಿನ ಸಾಲಿನ ಮಧ್ಯೆ ಕಡಿದಾದ ಹಾಗೂ ದಟ್ಟ ಅರಣ್ಯಗಳೊಂದಿಗೆ ಸುಂದರ ದೃಶ್ಯಗಳನ್ನು ಹೊಂದಿದ ಕಣಿವೆ ಇದೆ.ಸಮೃದ್ಧವಾದ ಮಾನ್ಸೂನ್ ಮಳೆಯು ಈ ಪ್ರದೇಶದಲ್ಲಿ ಸರಾಸರಿ ೩೫೦೦ ಮಿ.ಮಿ.ನಷ್ಟು ಬೀಳುತ್ತದೆ.
ಸಸ್ಯ ಸಂಕುಲ
ಬದಲಾಯಿಸಿಇಲ್ಲಿ ಪಶ್ಛಿಮ ಘಟ್ಟಗಳಲ್ಲಿ ಕಂಡುಬರುವ ಸಾಮಾನ್ಯ ಸಸ್ಯ ಸಂಕುಲಗಳಲ್ಲದೆ ಅತ್ಯುತ್ತಮ ದರ್ಜೆಯ ಸಾಗುವಾನಿ ಮರಗಳು ಹೇರಳವಾಗಿ ಬೆಳೆಯುತ್ತವೆ.ಬೆಟ್ಟಗಳ ಇಳಿಜಾರಿನಲ್ಲಿ ಕಾಫಿ ಮತ್ತು ಚಹಾ ತೋಟಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಪ್ರಾಣಿ ಸಂಕುಲ
ಬದಲಾಯಿಸಿಈ ಪರ್ವತಶ್ರೇಣಿಯು ವೈವಿಧ್ಯಮಯ ಪ್ರಾಣಿಸಂಕುಲದಿಂದ ಪ್ರಸಿದ್ಧವಾಗಿದೆ. ಆನೆ, ಹುಲಿ, ಚಿರತೆ, ಕರಡಿ, ಮೊಸಳೆ, ಜಿಂಕೆ, ಹಸಿರು ಪಾರಿವಾಳ ಮುಂತಾದವುಗಳು ಸಾಮಾನ್ಯ. ಇಲ್ಲಿ ಎರವಿಕುಲಂ ರಾಷ್ಟ್ರೀಯ ಉದ್ಯಾನ.ಇಂದಿರಾ ಗಾಂಧಿ ವನ್ಯ ಮೃಗ ಧಾಮ ಮತ್ತು ರಾಷ್ಟ್ರೀಯ ಉದ್ಯಾನ,ಚಿನ್ನಾರ್ ಅಭಯಾರಣ್ಯ,ಮುಂತಾದ ಪ್ರದೇಶಗಳಲ್ಲಿ ಪ್ರಾಣಿ ಸಂಕುಲಗಳನ್ನು ರಕ್ಷಿಸಲಾಗುತ್ತಿದೆ.
ನದಿಗಳು
ಬದಲಾಯಿಸಿಅಣ್ಣಾಮಲೈ ಪರ್ವತ ಶ್ರೇಣಿಯಲ್ಲಿ ಹಲವಾರು ನದಿಗಳಿವೆ. ಅಳಿಯಾರ್ ನದಿ, ಚಿನ್ನಾರ್ ನದಿ, ಪಾಂಬಾರ್ ನದಿ ಮತ್ತು ಪರಂಬಿಕುಳಂ ನದಿ ಮುಖ್ಯವಾಗಿವೆ. ಈ ಪ್ರದೇಶದಲ್ಲಿ ಹಲವಾರು ಆಣೆಕಟ್ಟುಗಳಿದ್ದು, ಅಮರಾವತಿ ಆಣೆಕಟ್ಟು, ಶೋಲೆಯಾರ್ ಆಣೆಕಟ್ಟು, ಮತ್ತು ಭಾರತದಲ್ಲೇ ಅತ್ಯಂತ ಹೆಚ್ಚು ಸಂಗ್ರಹ ಸಾಮರ್ಥ್ಯದ ಪರಂಬಿಕುಳಂ ಆಣೆಕಟ್ಟು ಮುಖ್ಯವಾದವುಗಳು.
ಉಲ್ಲೇಖಗಳು
ಬದಲಾಯಿಸಿ- ↑ "Anaimudi/Anamudi, India". Peakbagger.com.
- ↑ Singh, A.P.; Kumar, Niraj; Singh, B. (2006). "Nature of the crust along Kuppam–Palani geotransect (South India) from Gravity studies: Implications for Precambrian continental collision and delamination". Gondwana Research. 10: 41–7. doi:10.1016/j.gr.2005.11.013.