ಸುನಿಲ್ ಛೇತ್ರಿ

ಭಾರತೀಯ ಫುಟ್‌ಬಾಲ್ ಆಟಗಾರ
(ಸುನಿಲ್ ಚೆಟ್ರಿ ಇಂದ ಪುನರ್ನಿರ್ದೇಶಿತ)
ಸುನಿಲ್ ಛೇತ್ರಿ (सुनिल छेत्री)
Sunil Chhetri.jpg
ಸುನಿಲ್ ಛೇತ್ರಿ (ಸುನಿಲ್‌ ಚೆಟ್ರಿ)
Personal information
ಪುರ್ಣ ಹೆಸರುಸುನಿಲ್ ಛೇತ್ರಿ
ಅಡ್ಡ ಹೆಸರು(ಗಳು)ಛೇತ್ರಿ
ರಾಷ್ರೀಯತೆಭಾರತೀಯ
ಜನನ (1984-08-03) 3 August 1984 (age 35)
ಸಿಕಂದರಾಬಾದು, ಭಾರತ
ಎತ್ತರ1.70 m (5 ft 7 in)
Sport
ದೇಶ ಭಾರತ
ಕ್ರೀಡೆಫುಟ್’ಬಾಲ್
ಕಾರ್ಯಕ್ರಮ(ಗಳು)striker(ಗೋಲು ಹೊಡೆಯುವವ)
ಕ್ಲಬ್ಬೆಂಗಳೂರು ಫುಟ್’ಬಾಲ್’ ಕ್ಲಬ್ (ಮುಂಬಯಿಯಿಂದ ಎರವಲು)
ತಂಡಬೆಂಗಳೂರು ಫುಟ್’ಬಾಲ್’ ಕ್ಲಬ್
Achievements and titles
ವೈಯಕ್ತಿಕ ಪರಮಶ್ರೇಷ್ಠ89 ಪಂದ್ಯ-50 ಗೋಲು
Updated on 5-6-2016.

ಫುಟ್‍ಬಾಲ್ ಕ್ರೀಡಾಪಟುಸಂಪಾದಿಸಿ

  • ಸುನಿಲ್ ಛೇತ್ರಿ (ಸುನಿಲ್ ಚೆಟ್ರಿ) (ನೇಪಾಳಿ:Sunil Chhetri;( सुनिल छेत्री; ಆಗಸ್ಟ್ 1984 3 ಜನನ)ಬೆಂಗಳೂರು ಫುಟ್’ಬಾಲ್’ ಕ್ಲಬ್ (ಎಫ್’ಸಿ.)ನ ಐ-ಲೀಗ್ ಭಾರತೀಯ ಸೂಪರ್ ಲೀಗ್'ನ ಒಬ್ಬ ಫುಟ್’ಬಾಲ್ ಆಟಗಾರ. ಮುಂಬಯಿ ನಗರದಿಂದ ಬೆಂಗಳೂರು ಫುಟ್’ಬಾಲ್’ ಕ್ಲಬ್'ಗೆ ಎರವಲು ಮೇಲೆ ಬಂದವರು. ಅವರು ಸ್ಟ್ರೈಕರ್ ಆಗಿ(ಗೋಲು ಹೊಡೆಯುವವ) ಆಡುತ್ತಿದ್ದಾರೆ. ಭಾರತದ ಓರ್ವ ವೃತ್ತಿಪರ ಫುಟ್ಬಾಲ್ ಆಟಗಾರ. ಅವರು 89 ಪಂದ್ಯಗಳಲ್ಲಿ 50 ಗೋಲುಗಳನ್ನು ಹೊಡೆದಿದ್ದಾರೆ. ಪ್ರಸ್ತುತ ಬೆಂಗಳೂರು ತಂಡಕ್ಕೆ ನಾಯಕರಾಗಿದ್ದಾರೆ, ಮತ್ತು ಭಾರತ ರಾಷ್ಟ್ರೀಯ ತಂಡಕ್ಕೆ ಸಾರ್ವಕಾಲಿಕ ಗರಿಷ್ಠ ಗೋಲು ಗಳಿಸುವ ಕ್ರೀಡಾಪಟು ,

ಕ್ರೀಡಾಪಟುಸಂಪಾದಿಸಿ

  • ಭಾರತದ ಪರ ಅತ್ಯಧಿಕ ಗೋಲು ಗಳಿಸಿದ ದಾಖಲೆ ಸುನಿಲ್‌ ಚೆಟ್ರಿ ಹೆಸರಿನಲ್ಲಿದೆ. ಚೆಟ್ರಿ,ಉತ್ತಮ ಆಟಗಾರನಾಗಿ ಜೊತೆಗೆ ನಾಯಕತ್ವದ ಜವಾಬ್ದಾರಿ ಹೊತ್ತು ರಾಷ್ಟ್ರೀಯ ಮತ್ತು ಬಿಎಫ್‌ಸಿ ತಂಡವನ್ನು ಯಶಸ್ಸಿನ ಪಥದಲ್ಲಿ ಮುನ್ನಡೆಸಿದ್ದಾರೆ. ತಮ್ಮ ಕಾಲ್ಚಳಕದ ಮೂಲಕ ಎದುರಾಳಿ ತಂಡದ ರಕ್ಷಣಾಕೋಟೆಯನ್ನು ಧ್ವಂಸಗೊಳಿಸಬಲ್ಲ ಸಾಮರ್ಥ್ಯ ಚೆಟ್ರಿ ಅವರಿಗೆ ಕರಗತವಾಗಿದೆ. ಅವರ ಪಾದರಸದಂತಹ ಚಲನೆ ಮತ್ತು ಚೆಂಡನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ಆವರಣದೊಳಗೆ ಲೀಲಾಜಾಲವಾಗಿ ನುಗ್ಗಿ ಚೆಂಡನ್ನು ಗುರಿ ಮುಟ್ಟಿಸುವಲ್ಲೂ ಚೆಟ್ರಿ ನಿಪುಣರು. ಅವರ ಆಟಕ್ಕೆ ಫುಟ್‌ಬಾಲ್‌ ಪ್ರೇಮಿಗಳು ಯಾರೇ ಆಗಲಿ ಮನಸೋಲುವರು.
  • 2002ರಲ್ಲಿ ಮೋಹನ್‌ ಬಾಗನ್‌ ಕ್ಲಬ್‌ ಪರ ಆಡುವ ಮೂಲಕ ಫುಟ್‌ಬಾಲ್‌ ವಲಯಕ್ಕೆ ಪರಿಚಿತರಾದ ಚೆಟ್ರಿ, 2007, 2009 ಮತ್ತು 2012ರ ನೆಹರೂ ಕಪ್‌ ಟೂರ್ನಿಗಳಲ್ಲಿ ಭಾರತ ತಂಡ ಚಾಂಪಿಯನ್‌ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2008ರ ಎಎಫ್‌ಸಿ ಚಾಲೆಂಜ್‌ ಕಪ್‌ನಲ್ಲಿ ಅಮೋಘ ಆಟ ಆಡಿದ್ದ ಚೆಟ್ರಿ ಭಾರತ ತಂಡ ಪ್ರಶಸ್ತಿ ಜಯಿಸಿ 27 ವರ್ಷಗಳ ಬಳಿಕ ಎಎಫ್‌ಸಿ ಏಷ್ಯಾ ಕಪ್‌ಗೆ ಅರ್ಹತೆ ಗಳಿಸಲು ಕಾರಣರಾಗಿದ್ದರು.[೧]

[೨]

ಪರಿಚಯಸಂಪಾದಿಸಿ

ಅವರ ತಂದೆ ಪೋಷಕರು : ಕೆ.ಬಿ. ಚೆಟ್ರಿ ಮತ್ತು ತಾಯಿ ಸುಶೀಲಾ ಚೆಟ್ರಿ. ಜನನ ಸ್ಥಳ ಸಿಕಂದರಾಬಾದ್‌. ಮೂಲತಃ ಅವರು ನೇಪಾಳಿಗಳು.ಅವರಿಗೆ ಇಬ್ಬರು ಸಹೋದರಿಯರು, ಸಶಾ ಮತ್ತು ಸುನಂದಾ. ಸುನಿಲ್‌ ಚೆಟ್ರಿ ಅವರ ಕುಟುಂಬದ ಎಲ್ಲರೂ ಫುಟ್‌ಬಾಲ್‌ ಆಟಗಾರರೇ. ಸುನಿಲ್‌ ಅವರ ತಂದೆ, ಭಾರತೀಯ ಸೇನಾ ತಂಡದಲ್ಲಿ ಆಡಿದ್ದರೆ, ತಾಯಿ ಮತ್ತು ಸಹೋದರಿಯರು ನೇಪಾಳ ರಾಷ್ಟ್ರೀಯ ಮಹಿಳಾ ತಂಡದ ಪರ ಹಲವು ಪಂದ್ಯಗಳನ್ನು ಆಡಿದ್ದಾರೆ.

 
ಸುನಿಲ್‌ ಚೆಟ್ರಿ ೨೦೦೮ ಎ.ಎಫ್.ಸಿ. ಛಾಲೇಂಜ್ ಕಪ್'ನಲ್ಲಿ ಗೋಲು ಹೊಡೆದಾಗ.(2008 AFC Challenge Cup)

ಸಾಧನೆಗಳುಸಂಪಾದಿಸಿ

"
ಸೀನಿಯರ್ ವಿಭಾಗದಲ್ಲಿ ಛೇತ್ರಿ ಸಾಧನೆ
ಇಸವಿ ತಂಡ ಆಡಿದ ಪಂದ್ಯ ಗಳಿಸಿದ ಗೋಲು
2002-2005 ಮೋಹನ್ ಬಾಗನ್ 18 8
2005-2008 ಜೆಸಿಟಿ 58 2
2008-2009 ಈಸ್ಟ್ ಬೆಂಗಾಲ್ 14 9
2009-2010 ಡೆಂಪೋಎಸ್.ಸಿ. 13 8
2010 ಕನ್ಸಾಸ್ ಸಿಟಿ ವಿಜರ್ಡಸ್ 0 0
2011 ಚಿರಾಗ್ ಯುನೈಟೆಡ್ 7 7
2011-2012 ಮೋಹನ್ ಬಾಗನ್ 14 8
2012-2013 ಸ್ಪೋರ್ಟಿಂಗ್ ಕ್ಲಬ್ ಡಿ.ಪೋರ್ಚುಗಲ್ ಬಿ 3
2013 ಚರ್ಚಿಲ್ ಬ್ರದರ್ಸ್ 8 4
2013-2015 ಬೆಂಗಳೂರು ಎಫ್.ಸಿ. 43 16
2015 ಮುಂಬಯಿ ಸಿಟಿ. 11 7
2016. ಬೆಂಗಳೂರು ಎಫ್ ಸಿ. 14 5
ರಾಷ್ಟ್ರೀಯ ತಂಡದಲ್ಲಿ ಸಾಧನೆ
2004. ಭಾರತ 20ವರ್ಷದೊಳಗಿನವರು 3 2
2005-2016. ಭಾರತ ಸೀನಿಯರ್ 89 50

ವಿವಿದ ಪಂದ್ಯಗಳ ಸಾಧನೆಸಂಪಾದಿಸಿ

ಆಡಿದ ಒಟ್ಟು ಲೀಗ್ ಪಂದ್ಯಗಳು 127
ಅದರಲ್ಲಿ ಗಳಿಸಿದ ಗೋಲುಗಳು 64
ಆಡಿದ ಕಪ್ ಪಂದ್ಯಗಳು 18
ಅದರಲ್ಲಿ ಗಳಿಸಿದ ಗೋಲುಗಳು 11
ಕಾಂಟಿನೆಂಟಲ್ ಟೂರ್ನಿ ಪಂದ್ಯಗಳು 15
ಅದರಲ್ಲಿ ಗಳಿಸಿದ ಗೋಲುಗಳು 8
ಕ್ಲಬ್’ಗಳ ಪರ ಆಡಿದ ಪಂದ್ಯಗಳು 160
ಅದರಲ್ಲಿ ಗಳಿಸಿದ ಗೋಲುಗಳು 83

ಸಾಧನೆಗೆ ಸಂದ ಗೌರವಗಳುಸಂಪಾದಿಸಿ

ಛೇತ್ರಿ ಸಾಧನೆಗೆ ಸಂದ ಗೌರವಗಳು
ವರ್ಷ ಉದ್ದೇಶ ವಿವರ ಸಂದ ಗೌರವ
2007; 2011; 2013; 2014. ಎ ಐ ಎಫ್ ಎಫ್ ವರ್ಷದ ಆಟಗಾರ
2008. ಎ ಎಫ್. ಸಿ.ಛಾಲೇಂಜ್ ಕಪ್ ಮೌಲ್ಯಯುತ ಆಟಗಾರ
2012 ಗರಿಷ್ಠ ಗೋಲು ಗಳಿಸಿದ ಆಟಗಾರ ನೆಹರೂ ಕಪ್
2011 ಗರಿಷ್ಠ ಗೋಲು ಗಳಿಸಿದ ಆಟಗಾರ ಸ್ಯಾಫ್ ಛಾಂಪಿಯನ್ಷಿಪ್
2011 ವರ್ಷದ ಶ್ರೇಷ್ಠ ಆಟಗಾರ ಸ್ಯಾಫ್ ಛಾಂಪಿಯನ್ಷಿಪ್
2019 (ಕ್ರೀಡಾ ಪಟು) ಕಾಲ್ಚೆಂಡು ಆಟಗಾರ ಪದ್ಮಶ್ರೀ

ಹೆಚ್ಚಿನ ಓದಿಗೆಸಂಪಾದಿಸಿ

  • ಫುಟ್‌ಬಾಲ್ ಅಂಗಳದ ಮಿನುಗುತಾರೆ -ಗಿರೀಶ ದೊಡ್ಡಮನಿ - 18 Mar, 2018:[೧]

ನೋಡಿಸಂಪಾದಿಸಿ

ಉಲ್ಲೇಖಸಂಪಾದಿಸಿ

  1. "Sunil Chhetri career stats". Soccerway. Retrieved 27 January 2016
  2. ದಿ.೬-೬-೨೦೧೬:www/prajavani.net/article/ಭಾರತ-ಫುಟ್‌ಬಾಲ್‌ಗೆ-ಚೆಟ್ರಿ-ಹೊಳಪು