ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್

ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್
 • ಹೆಸರು = ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್
  • ಸಂಕ್ಷಿಪ್ತ ರೂಪ = KSFA / ಕೆ ಎಸ್`ಎಫ್`ಎ
 • ರಚನೆ = 1946
 • ಉದ್ದೇಶ =ಫುಟ್ಬಾಲ್’ ಕ್ರೀಡೆ
 • ಪ್ರಧಾನ ಕಛೇರಿ = ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ
 • ಸ್ಥಳ = ಅಶೋಕ ನಗರ, ಬೆಂಗಳೂರು 560 025, ಕರ್ನಾಟಕ, ಭಾರತ
 • ಅಧ್ಯಕ್ಷ = ಎ ಆರ್ ಖಲೀಲ್
 • ಮಾತೃ ಸಂಸ್ಥೆ = ಅಖಿಲ ಭಾರತ ಫುಟ್ಬಾಲ್ ಫೆಡರೇಷನ್

ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ಸಂಪಾದಿಸಿ

 • ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ( KSFA / ಕೆ ಎಸ್`ಎಫ್`.ಎ ಸಂಕ್ಷಿಪ್ತ ರೂಪ), ಅಖಿಲ ಭಾರತ ಫುಟ್ಬಾಲ್ ಫೆಡರೇಷನ್’ಗೆ ನೊಂದಾಯಿಸಲ್ಪಟ್ಟ (ಅಫಿಲಿಯೇಟೆಡ್) 36 ರಾಜ್ಯ ಫುಟ್ ಬಾಲ್ ಅಸೋಸಿಯೇಶನ್’ಗಳಲ್ಲಿ ಒಂದಾಗಿದೆ.[೧]
 
International rules football field (metric)ಅಂತರ್ರಾಷ್ಟ್ರೀಯ ನಿಯಮದ ಫುಟ್ಬಾಲ್ ಮೈದಾನ

ಹಿನ್ನೆಲೆಸಂಪಾದಿಸಿ

 • ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ (ಏಈಂ/ಕೆಎಫ್’ಎ) ಕರ್ನಾಟಕ ರಾಜ್ಯದ ಫುಟ್ಬಾಲ್’ಕ್ರೀಡೆಯ ಆಡಳಿತ ಮಂಡಳಿಯಾಗಿದೆ. ಇದು 1946 ನೇ ವರ್ಷದಲ್ಲಿ ಆರಂಭಗೊಂಡಿತು. ಆಗ ಅದನ್ನು ಮೈಸೂರು ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ( MSFA ) ಎಂದು ಕರೆಯಲಾಗುತ್ತಿತ್ತು.[೨]

ಬೆಂಗಳೂರು ಎಫ್ಸಿ:೨೦೧೬ ರ ತಂಡಸಂಪಾದಿಸಿ

 • ರಾಜ್ಯ ಫುಟ್‌ಬಾಲ್‌ ಸಂಸ್ಥೆಯು ಸಂತೋಷ್‌ ಟ್ರೋಫಿಗಾಗಿ ನಡೆಯುವ 70ನೇ ರಾಷ್ಟ್ರೀಯ ಸೀನಿಯರ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌'ನಲ್ಲಿ ಭಾಗವಹಿಸುವ ತಂಡ. (೮-೨-೨೦೧೬ರ ಪ್ರಕಟಣೆ).

ಫೆಬ್ರುವರಿ 9 ರಿಂದ 14ರವರೆಗೆ ತಮಿಳುನಾಡಿನ ಚೆನ್ನೈನಲ್ಲಿ ನಡೆಯುವ ಈ ಚಾಂಪಿಯನ್‌ಷಿಪ್‌ನಲ್ಲಿ ಓಜೋನ್‌ ಕ್ಲಬ್‌ನ ಕೆ. ಅರುಣ್‌ ಪಾಂಡೆ ತಂಡದ ನಾಯಕ.

ಫುಟ್'ಬಾಲ್ ತಂಡ
 • ಗೋಲ್‌ಕೀಪರ್ಸ್‌: ಜಯಂತ್‌ ಕುಮಾರ್‌, ಟಿ. ಕಬೀರ್‌ ಮತ್ತು ವಿ. ದಿಲೀಪನ್‌. ಡಿಫೆಂಡರ್ಸ್‌: ಎಂ. ಸುನೀಲ್‌ ಕುಮಾರ್‌, ಎಸ್‌. ವಿವೇಕಾನಂದ, ಟಿ. ಎಸ್‌. ನೀಲಾ ಲೋಹಿತ್‌, ಎ.ಡಿ. ಕುಮಾರ್‌, ಆರ್‌. ವಿಜಯ್‌ ಮತ್ತು ಎಸ್‌. ನವೀನ್‌ ಕುಮಾರ್‌. ಮಿಡ್‌ಫೀಲ್ಡರ್ಸ್‌: ಬಿ. ಪ್ರಕಾಶ್‌, ಕೆ.
 • ಅರುಣ್‌ ಪಾಂಡೆ (ನಾಯಕ), ಡಾನ್‌ ಬಾಸ್ಕೊ, ಎನ್‌. ಸೊಲೈಮಲೈ, ರವಿ ಮತ್ತು ಲೋಕೇಶ್‌. ಫಾರ್ವರ್ಡ್ಸ್‌: ಬಿ.ಎಚ್‌. ಪ್ರವೃತ್‌, ಆರ್‌. ಸುಭಾಷ್‌, ಜಿ.;ಕಾರ್ತಿಕ್‌, ಆ್ಯಂಟೊ ಕ್ಸೇವಿಯರ್‌, ಮಣಿವಣ್ಣನ್‌, ಕೆ.ಸಿ. ಗೌರಿಶಂಕರ್‌, ಎಸ್‌. ಸಂಜುಕುಮಾರ್‌ ಮತ್ತು ವಿನೋದ್‌ ಕುಮಾರ್‌.
 • ಕೋಚ್‌: ಡಿ. ಮಣಿವಣ್ಣನ್‌ ಮತ್ತು ಜೆ.ಎಲ್‌. ಆ್ಯಂಡ್ರ್ಯೂ.

ತಂಡಸಂಪಾದಿಸಿ

ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡ.
 • ಮೊದಲ ತಂಡದಲ್ಲಿ
 • ಸುನಿಲ್ ಛೇತ್ರಿ, ಬೆಂಗಳೂರು ಎಫ್ಸಿ ಮೊದಲ ನಾಯಕ.
 • ಫೆಬ್ರವರಿ 2016 2 ರಂತೆ [26]
 • ಗಮನಿಸಿ: ಫೀಫಾ ಅರ್ಹತಾ ನಿಯಮಗಳ ಅಡಿಯಲ್ಲಿ ವ್ಯಾಖ್ಯಾನಿಸಲಾಗಿದೆ. (ಧ್ವಜಗಳು ರಾಷ್ಟ್ರೀಯ ತಂಡದ ಸೂಚಿಸುತ್ತದೆ). ಆಟಗಾರರು ಒಂದಕ್ಕಿಂತ ಹೆಚ್ಚು ಫಿಫಾ ಅಲ್ಲದ ರಾಷ್ಟ್ರೀಯತೆ ಹೊಂದಿರಬಹುದು.
ಈಗಿನ ತಾಂತ್ರಿಕ ಸಿಬ್ಬಂದಿ
 • ಡಿಸೆಂಬರ್ 2015 ರಲ್ಲಿ ಇದ್ದಂತೆ.
 • ಪೊಸಿಷನ್-- ದೇಶ- ಹೆಸರು
 • 1.ಮುಖ್ಯ ತರಬೇತುದಾರ: (ಇಂಗ್ಲೆಂಡ್ )ಆಶ್ಲೇ ವೆಸ್ಟ್ವುಡ್
 • 2.ಸಹಾಯಕ ಕೋಚ್:: (ಸ್ಕಾಟ್ಲೆಂಡ್) ಪ್ರದ್ಯುಮ್ ರೆಡ್ಡಿ
 • 3.ಗೋಲ್ಕೀಪಿಂಗ್ ಕೋಚ್ :: ಟರ್ಕಿ ಅಲಿ ಉಜನ್ನಾಸೊನಂಗಲು(Uzunhasanoglu)
 • 4.ಯುವಜನತೆಯ ಅಭಿವೃದ್ಧಿ ಮುಖ್ಯಸ್ಥ : 1 (ಭಾರತ) ರಿಚರ್ಡ್ ಹುಡ್
 • 4.ಯುವಜನತೆಯ ಅಭಿವೃದ್ಧಿ ಮುಖ್ಯಸ್ಥ : 2.(ಇಂಗ್ಲೆಂಡ್) ಮ್ಯಾಟ್ ಹಾಲೆಂಡ್
 • 5. 19 ರ ಒಳಗಿನ ತರಬೇತುದಾರ (ಇಂಗ್ಲೆಂಡ್) ಲೂಯಿಸ್ Nickson
 • 6.ಸಾಧನೆ ವಿಶ್ಲೇಷಕ (ಇಂಗ್ಲೆಂಡ್) ಮ್ಯಾಟ್ ಹಾಲೆಂಡ್
 • 7.ಅಂಗಮರ್ದನ : (ಇಂಗ್ಲೆಂಡ್) ಸ್ಯಾಮ್ಯುಯೆಲ್ ಕೋಲ್ಮನ್
 • 8.ಕ್ರೀಡಾ ವಿಜ್ಞಾನ (ಇಂಗ್ಲೆಂಡ್ )Donavan ಪಿಳ್ಳೈ ಮುಖ್ಯಸ್ಥ
 
ಆಶ್ಲೇ ವೆಸ್ಟ್ವುಡ್, ಬೆಂಗಳೂರು ಎಫ್ಸಿ ಮೊದಲ ಪ್ರಧಾನ ತರಬೇತುದಾರ
ನಂ/ದೇಶ/ಪೊಸಿಷನ್ /ಆಟಗಾರ
 • 1 ಭಾರತ ಜಿ.ಕೆ. ಅಮರಿಂದರ್ ಸಿಂಗ್ (ಪುಣೆ ಎರವಲು)
 • 3 ಭಾರತ ಡಿಎಫ್ ನಂಜನಗೂಡು ಶಿವನಂಜು ಮಂಜು
 • 4 ಕೀನ್ಯಾ ಡಿಎಫ್ ಕರ್ಟಿಸ್ ಓಸಾನೊ (Osano)
 • 5 ಭಾರತ ಎಂಎಫ್ ಕೀಗನ್ ಪೆರೇರಾ (ಎರವಲು ಮುಂಬಯಿ ನಗರದಿಂದ)
 • 6 ಇಂಗ್ಲೆಂಡ್ ಡಿಎಫ್ ಜಾನ್ ಜಾನ್ಸನ್
 • 7 ಉತ್ತರ ಕೊರಿಯಾ FW ಕಿಮ್ ಸಾಂಗ್-ಯಾಂಗ್
 • 8 ಐರ್ಲೆಂಡ್ ಗಣರಾಜ್ಯ ಎಂಎಫ್ ಮೈಕೆಲ್ ಕಾಲಿನ್ಸ್
 • 11 ಭಾರತ FW ಸುನಿಲ್ ಛೆಟ್ರಿ(ಎರವಲು ಮುಂಬಯಿ ನಗರದಿಂದ)
 • 12 ಭಾರತ ಎಂಎಫ್ ಥೊಯಿ (Thoi)ಸಿಂಗ್ (Chennaiyin ಎರವಲು)
 • 13 ಭಾರತ ಡಿಎಫ್ ರಿನೋ ಆಂಟೊ (Anto)
 • 14 ಭಾರತ ಎಂಎಫ್ ಯೂಜೆನ್ಸನ್ (Eugeneson Lyngdoh)
 • 15 ಭಾರತ ಡಿಎಫ್ ವಿಶಾಲ್ ಕುಮಾರ್
 • 16 ಭಾರತ ಎಂಎಫ್ ಶಂಕರ್ ಸಂಪಂಗಿರಾಜ್
 • 17 ಭಾರತ FW ಸೆಮಿನ್ಲೆನ್ಡಾಂಜೆಲ್(Seminlen Doungel)
 • 18 ಭಾರತ ಎಂಎಫ್ ಬೀಖೊಕೆ (Beikhokhei Beingaichho)
 • 19 ಭಾರತ ಎಂಎಫ್ ಸಿಯಾಮ್ ಉಂಗಾಲ್(Hanghal)
 • 20 ಭಾರತ ಎಂಎಫ್ ಅಲ್ವಿನ್ ಜಾರ್ಜ್
 • 21 ಭಾರತ FW ಉದಂತ ಸಿಂಗ್
 • 22 ಭಾರತ ಡಿಎಫ್ ನಿಶು ಕುಮಾರ್
 • 23 ಭಾರತ ಡಿಎಫ್ ಲಚ್ಯುಆನ್(Lalchhuan Mawia)
 • 24 ಭಾರತ ಡಿಎಫ್ ಸಲಾಮ್ ರಂಜನ್ ಸಿಂಗ್ (ಪುಣೆ ಎರವಲು)
 • 25 ಭಾರತ FW ಡೇನಿಯಲ್ ಲಾಲ್ಲಿಂಪುಆ(Lalhlimpuia)
 • 27 ಭಾರತ ಜಿ.ಕೆ. ನಿಖಿಲ್ ಬರ್ನಾರ್ಡ್
 • 28 ಭಾರತ ಜಿ.ಕೆ.ಲಾಲ್ತುಮ್ಮವಿಯ(Lalthuammawia) ರಾಲ್ಟೆ
 • 30 ಭಾರತ ಎಂಎಫ್.ಮಲಸ್ವಾಮ್ಜೂಲ( Malsawmzuala)
 • 31 ಭಾರತ FW ಸಿ.ಕೆ. ವಿನೀತ್

[೩][೪]

ಬಿಎಫ್‌ಸಿಗೆ ಐಲೀಗ್ ಪ್ರಶಸ್ತಿಸಂಪಾದಿಸಿ

ದಿ.18/04/2016; ಭಾನುವಾರ ರಾತ್ರಿ ಕಂಠೀ ರವ ಕ್ರೀಡಾಂಗಣದಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡ 2-0 ಅಂತರದಿಂದ ಸಲ್ಗಾಂವರ್ ತಂಡವನ್ನು ಸೋಲಿಸಿತು.ಐಲೀಗ್ ಟೂರ್ನಿಯ ಚಾಂಪಿಯನ್ ಆಗಿ ಸುನಿಲ್ ಚೆಟ್ರಿ ಬಳಗವು ಸಂಭ್ರಮಿಸಿತು. ಲೀಗ್ ಸುತ್ತಿನ ಪಂದ್ಯದಲ್ಲಿ ಬಿಎಫ್‌ಸಿ ತಂಡವು 2–0 ಗೋಲುಗ ಳಿಂದ ಗೋವಾದ ಸಲಗಾಂವ್ಕರ್ ಫುಟ್‌ಬಾಲ್ ಕ್ಲಬ್‌ ತಂಡವನ್ನು ಮಣಿಸಿತು. ಆ ಮೂಲಕ 32 ಅಂಕಗಳನ್ನು ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ, ಪ್ರಶಸ್ತಿಗೆ ಗೆದ್ದಿತು.ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ಚಾಂಪಿಯನ್ ಆದ ಸಾಧನೆ ಮಾಡಿತು. ಹೋದ ವರ್ಷ ನಿರ್ಣಾಯಕ ಪಂದ್ಯದಲ್ಲಿ ಮೋಹನ್ ಬಾಗನ್ ತಂಡದೆದುರು ಸೋತು ರನ್ನರ್ಸ್ ಅಪ್ ಆಗಿತ್ತು. ಪ್ರಸಕ್ತ ಋತುವಿನಲ್ಲಿ ಬಿಎಫ್‌ಸಿ ಹತ್ತನೇ ಜಯ ದಾಖಲಿಸಿತು. ಒಟ್ಟು 15 ಪಂದ್ಯಗಳನ್ನು ಆಡಿದ್ದ ಬಿಎಫ್‌ಸಿ ಎರಡರಲ್ಲಿ ಡ್ರಾ ಸಾಧಿಸಿತ್ತು. ಮೂರರಲ್ಲಿ ಸೋತಿತ್ತು. ಮೋಹನ್ ಬಾಗನ್ ತಂಡವು 27 ಅಂಕಗಳನ್ನು ಗಳಿಸಿದ್ದು ಇನ್ನೊಂದು ಲೀಗ್ ಪಂದ್ಯ ಆಡಬೇಕಿದೆ. ಏಪ್ರಿಲ್ 23ರಂದು ಬಿಎಫ್‌ಸಿ ತಂಡವನ್ನು ಸಿಲಿಗುರಿಯಲ್ಲಿ ಎದುರಿಸಲಿದೆ. ಬಾಗನ್ ತಂಡವು 15 ಪಂದ್ಯಗಳಲ್ಲಿ 7 ಜಯಿಸಿದೆ. ಆರರಲ್ಲಿ ಡ್ರಾ ಮಾಡಿಕೊಂಡಿದ್ದು, ಎರಡರಲ್ಲಿ ಸೋತಿದೆ.ತಂಡದ ಯುಗೆನ್ಸನ್ ಲಿಂಗ್ಡೊ (8ನೇ ನಿಮಿಷ) ತಂಡದ ಗೋಲಿನ ಖಾತೆ ತೆರೆದರು.88ನೇ ನಿಮಿಷದಲ್ಲಿ ಸೀಮಿನ್ಲೆನ್ ಡಾಂಗಲ್ ಇನ್ನೊಂದು ಗೋಲು ಹೊಡೆದರು. ಇದರೊಂದಿಗೆ ಬಿಎಫ್‌ಸಿ ಎರಡು ಗೋಲುಗಳಿಂದ ಜಯ ಪಡೆಯಿತು.[೫]

ಏಪ್ರಿಲ 2016ಐಲೀಗ್ ಟೂರ್ನಿಯ ಅಂಕಗಳುಸಂಪಾದಿಸಿ

 • ದಿ.18/04/2016; ಬೆಂಗಳೂರು ಭಾನುವಾರ ರಾತ್ರಿ ಕಂಠೀರವ ಕ್ರೀಡಾಂಗಣದಲ್ಲಿ ಫೈನಲ್ಸ್.
ಕ್ರ.ಸಂ. ಕ್ಲಬ್ P W D L GF GA GD PTS
1 ಬೆಂಗಳೂರು ಎಫ್ಸಿ 15 10 2 3 24 12 12 32
2 ಮೋಹನ್ ಬಗಾನ್ 15 7 6 2 27 16 16 27
3 ಪೂರ್ವ ಬಂಗಾಳದಿಂದ 15 7 4 4 22 17 17 25
4 ಸ್ಪೋರ್ಟಿಂಗ್ CLUBE ಡಿ ಗೋವಾ 14 4 6 4 19 18 18 18
5 ಮುಂಬಯಿ ಎಫ್ಸಿ 14 3 7 5 16 19 19 16
6 ಐಜ್ವಾಲ್(Aizawl) ಎಫ್ಸಿ 15 4 4 7 15 20 20 16
7 DSK ಶಿವಜೈನ್ಸ್ 15 3 6 6 16 21 21 15
8. ಶಿಲ್ಲಾಂಗ್ ಲಾಜೊಂಗ್(LAJONG) ಎಸ್ಸಿ 15 3 6 6 13 23 23 15
9. ಸಲಗಾಂವಕರ್ 14 3 4 7 18 24 24 13

ಐ ಲೀಗ್ ಟೂರ್ನಿ 2017ಸಂಪಾದಿಸಿ

23 Apr, 2017 ಹಾಲಿ ಚಾಂಪಿಯನ್ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದವರು ಐ ಲೀಗ್ ಟೂರ್ನಿಯ ಡಿಎಸ್‌ಕೆ ಶಿವಾಜಿಯನ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ದಿ.೨೨ ಶನಿವಾರ ನಡೆದ ಪಂದ್ಯದಲ್ಲಿ ಸುನಿಲ್‌ ಚೆಟ್ರಿ ನಾಯಕತ್ವದ ಬಿಎಫ್‌ಸಿ 7–0 ಗೋಲುಗಳಿಂದ ಜಯಿಸಿತು. ಕ್ಲಬ್ ಆರಂಭವಾದ ಬಳಿಕ ಬೆಂಗಳೂರಿನ ತಂಡ ಪಡೆದ ಹೆಚ್ಚು ಗೋಲುಗಳ ಅಂತರದ ಗೆಲುವು ಇದಾಗಿದೆ.[೬]

ಎಎಫ್‌ಸಿ ಕಪ್ ಫುಟ್‌ಬಾಲ್‌ ಟೂರ್ನಿ ೨೦೧೭ಸಂಪಾದಿಸಿ

 • ಟೂರ್ನಿಯಲ್ಲಿ ಹಿಂದೆ ಆಡಿದ್ದ ಮೂರೂ ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದ ಬಿಎಫ್‌ಸಿ 0–2 ಗೋಲುಗಳಲ್ಲಿ ಬಾಂಗ್ಲಾದೇಶದ ಅಬಹನಿ ತಂಡದ ಎದುರು ಸೋಲು ಅನುಭವಿಸಿದೆ. ಬಿಎಫ್‌ಸಿ 9 ಪಾಯಿಂಟ್ಸ್‌ ಗಳಿಂದ ಅಗ್ರಸ್ಥಾನದಲ್ಲಿ ಮುಂದುವರಿದಿದೆ.[೭]

ನೋಡಿಸಂಪಾದಿಸಿ

ಅಧಿಕೃತ ಜಾಲತಾಣಸಂಪಾದಿಸಿ

 • ಅಧಿಕೃತ ಜಾಲತಾಣ :[೧]
 • Bengaluru_FC-en.wiki:[೨]

ಉಲ್ಲೇಖಸಂಪಾದಿಸಿ

 1. https://www.the-aiff.com/state-associations-details.htm?id=21
 2. https://www.the-aiff.com/president.htm
 3. "Squad". Bengaluru Football Club. Retrieved 21 January 2016.
 4. "Bengaluru FC fortify first team staff". Bengaluru FC. 9 December 2015.
 5. [೩]
 6. ಬಿಎಫ್‌ಸಿಗೆ ಭರ್ಜರಿ ಗೆಲುವು;ಪ್ರಜಾವಾಣಿ ವಾರ್ತೆ;23 Apr, 2017
 7. http://www.prajavani.net/news/article/2017/05/04/488905.html