ಅಖಿಲ ಭಾರತ ಫುಟ್ಬಾಲ್ ಫೆಡರೇಷನ್

ಅಖಿಲ ಭಾರತ ಫುಟ್ಬಾಲ್ ಫೆಡರೇಷನ್
Simple Soccer Ball
  • ಹೆಸರು = ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್)
  • ಸಂಕ್ಷಿಪ್ತ ರೂಪ = AIFF=ಎಐಎಫ್ಎಫ್
  • ಸ್ಥಾಪನೆ = 23-6-1937
  • ಉದ್ದೇಶ =ಫುಟ್ಬಾಲ್’ ಕ್ರೀಡೆ
  • ಪ್ರಧಾನ ಕಛೇರಿ = ದೆಹಲಿಯ ದ್ವಾರಕಾ
  • ಸ್ಥಳ = ದೆಹಲಿ
  • ಅಧ್ಯಕ್ಷ = ಪ್ರಫುಲ್ ಪಟೇಲ್
  • ಪ್ರಾದೇಶಿಕ ಸಂಸ್ಥೆ = ಏಶಿಯನ್ ಫುಟ್ಬಾಲ್ ಕಾನ್ನ್ಪಿಡರೇಶನ್ (AFC)
  • ಪ್ರಾದೇಶಿಕ ಸಂಸ್ಥೆ ಗೆ ನೊಂದಣಿ =1997
  • ತರಬೇತುದಾರ = ಸವಯೋ ಮೆಡಿಯಿರಾ(ಪು)- ಮೊಹಮದ್ ಶಹೀದ್ ಜಬ್ಬಾರ್ (ಮಹಿಳೆ)
  • ಅಂತರ್ಜಾಲ ತಾಣ =www.the-aiff.com

ಎಐಎಫ್ಎಫ್/AIFF ಬದಲಾಯಿಸಿ

  • ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್)(The All India Football Federation (AIFF) ಭಾರತದಲ್ಲಿ ಅಸೋಷಿಯೇಷನ್ ನ ಫುಟ್ಬಾಲ್ ಆಟಗಳ ನಿರ್ವಹಣೆ ಮಾಡುವ ಒಂದು ಸಂಸ್ಥೆ.[೧] ಜೊತೆಗೆ ಚಾಲನೆಯಲ್ಲಿರುವ ಭಾರತ ರಾಷ್ಟ್ರೀಯ ಫುಟ್ಬಾಲ್ ತಂಡಗಳ ನಿರ್ವಹಣೆ ಮಾಡುತ್ತದೆ. ಐ-ಲೀಗ್’ ಗಳನ್ನು ಭಾರತದ ಪ್ರಧಾನ ದೇಶೀಯ ಕ್ಲಬ್ ಸ್ಪರ್ಧೆಯಲ್ಲಿ ನಿಯಂತ್ರಿಸುತ್ತದೆ ಮತ್ತು ವಿವಿಧ ಸ್ಪರ್ಧೆಗಳನ್ನು ಮತ್ತು ಈ ಬಗೆಯ ತಂಡಗಳನ್ನು ಕೂಡಾ ನಿಯಂತ್ರಿಸುತ್ತದೆ,
  • ಎಐಎಫ್ಎಫ್, 1937 ರಲ್ಲಿ ಸ್ಥಾಪಿಸಲಾಯಿತು, ಮತ್ತು 1948 ರಲ್ಲಿ ಫೀಫಾ ಸದಸ್ಯತ್ವವನ್ನು ಪಡೆಯಿತು 1947 ರಲ್ಲಿ ಭಾರತದ ಸ್ವಾತಂತ್ರ್ಯ ಪಡೆದ ನಂತರ, ಪ್ರಸ್ತುತ ಇದು ದಹಲಿಯ ದ್ವಾರಕಾದಲ್ಲಿ,ತನ್ನ ಕಚೇರಿಯನ್ನು ಹೊಂದಿದೆ. 1954 ರಲ್ಲಿ ಆರಂಭವಾದ ಏಷ್ಯನ್ ಫುಟ್ಬಾಲ್ ಒಕ್ಕೂಟದ ಸಂಸ್ಥಾಪಕ ಸದಸ್ಯರಲ್ಲಿ ಭಾರತವೂ ಸೇರಿದೆ.

ಎಐಎಫ್ಎಫ್-ಇತಿಹಾಸ ಬದಲಾಯಿಸಿ

  • ಫೌಂಡೇಶನ್
  • 23 ಜೂನ್ 1937 ರಂದು, ಭಾರತದ ಹಿಮಾಚಲ ಪ್ರದೇಶದ ಗುಡ್ಡಗಾಡು ರಾಜ್ಯದ ರಾಜಧಾನಿ ಮತ್ತು ಸೇನಾ ಕೇಂದ್ರ ಕಾರ್ಯಾಲಯವಾದ ಶಿಮ್ಲಾ ದಲ್ಲಿ ಆರು ಪ್ರದೇಶಗಳ ಫುಟ್ಬಾಲ್ ಸಂಘಗಳ ಪ್ರತಿನಿಧಿಗಳು ಸೇರಿದ ಸಭೆಯಲ್ಲಿ ಎಐಎಫ್ಎಫ್’’ ಆರಂಭವಾಯಿತು. ಆ ದಿನಗಳಲ್ಲಿ ಫುಟ್ಬಾಲ್ ಆಟ ತುಂಬಾ ಜನಪ್ರಿಯವಾಗಿತ್ತು. ಭಾರತೀಯ (ಇಂಡಿಯಾ) ಫುಟ್ಬಾಲ್ ಅಸೋಸಿಯೇಶನ್ (IFA). ಇದು ಆರು ಪ್ರದೇಶಗಳ ಆಟದ ಆಡಳಿತ ಮಂಡಳಿ (ಬಂಗಾಳ) ಇವುಗಳ ಪ್ರತಿನಿಧಿಗಳು : ಆರ್ಮಿ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್, ಯುನೈಟೆಡ್ ಪ್ರಾಂತ್ಯಗಳು, ಬಿಹಾರ್, ವಾಯುವ್ಯ ಭಾರತದ ಫುಟ್ಬಾಲ್ ಅಸೋಸಿಯೇಷನ್ ಮತ್ತು ದೆಹಲಿ (ಕ್ಲಬ್). ಎಐಎಫ್ಎಫ್ ಜನನದ ಮೊದಲು, ಯಾವುದೇ ಸರಿಯಾದ ರಾಷ್ಟ್ರೀಯ ಸಂಸ್ಥೆಯ ರಚನೆಯಾಗಿರಲಿಲ್ಲ. ಆದಾಗ್ಯೂ ಐಎಫ್ಎ ದೇಶದ ಈ ಹಳೆಯ ಅಸೋಸಿಯೇಷನ್’ನ್ನು ಫುಟ್ಬಾಲ್ ಪ್ರೇಮಿಗಳು ದೇಶದಾದ್ಯಂತ ಫುಟ್ಬಾಲ್ ಆಡಳಿತದ ಅಂಗವೆಂದು ಗುರುತಿಸಿದ್ದರು. ಆದ್ದರಿಂದ ಈಗಿನ ಎಐಎಫ್ಎಫ್’ ಸಂಸ್ಥೆಯು 1893 ರ ಐಎಫ್ಎ ನ ಹಿಂದಿನ ಒಂದು ಹರಿಕಾರ ಸಂಬಂಧವನ್ನು ಹೊಂದಿತ್ತು. ಐಎಫ್’ಎ (IFA) ಪರವಾಗಿ 27 ಮಾರ್ಚ್ 1937 ರಲ್ಲಿ ದಹಲಿಯಲ್ಲಿ ಕಾನ್ಫರೆನ್ಸ್, ಸೇರಿತು. ಇದರಲ್ಲಿ ಎಸ್.ಎನ್ ಬ್ಯಾನರ್ಜಿ, ಬಾರ್-ನಲ್ಲಿ-ಲಾ (ತರುವಾಯ 1940 ರಲ್ಲಿ ಐಎಫ್ಎ ಅಧ್ಯಕ್ಷ ಮಾರ್ಪಟ್ಟರು. ), ಮತ್ತು ಪಂಕಜ್ ಗುಪ್ತಾ ಮತ್ತು ಹೆಚ್.ಎನ್ ನಿಕೋಲ್ಸ್ ಜಂಟಿ ಗೌರವ ಕಾರ್ಯದರ್ಶಿಯವರು (ಉಪ ಐಎಫ್ಎ ಪರವಾಗಿ ಹಾಜರಿದ್ದರು ಅಧ್ಯಕ್ಷ ಐಎಫ್ಎ ತರುವಾಯ 1939 ರಲ್ಲಿ ಐಎಫ್ಎ ಅಧ್ಯಕ್ಷ ಮಾರ್ಪಟ್ಟರು). ಕಾನ್ಫರೆನ್ಸ್ ನಲ್ಲಿ ಹಾಜರಾದ ಇತರರು: ಬಾದ್ರುಳ್ ಇಸ್ಲಾಂ (ದೆಹಲಿ), ಬ್ರಾಂಡನ್ (ಬಾಂಬೆ) ಮತ್ತು ರಾಯ್ ಬಹಾದೂರ್ ಜೆಪಿ ಸಿನ್ಹಾ (ಅಖಿಲ ಭಾರತ ಫುಟ್ಬಾಲ್ ಅಸೋಸಿಯೇಷನ್ -AIFA/ಎಐಎಫ್’ಎಯ ಗೌರವ ಕಾರ್ಯದರ್ಶಿ). AIFA/ಎಐಎಫ್’ಎ. ಬ್ರಿಗೇಡಿಯರ್ ವಿ.ಎಹ್.ಬಿ.ಬ್ಯಾನರ್ಜಿ ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಅಧಿವೇಶನದಲ್ಲಿ ಇದು ಪ್ರತಿ ಫುಟ್ಬಾಲ್’ ಸಂಸ್ಥೆಯಿಂದ ಸಂಯೋಜಿತ (ಅಫಿಲಿಯೇಟೆಡ್) ಅಸೋಸಿಯೇಷನ್’ಅಗುವಂತೆ ಒಬ್ಬ ಪ್ರತಿನಿಧಿ ಮತ್ತು Iಈಂ ಮತ್ತು NSCB/ಎಎಸ್’ಸಿಬಿ ಯಿಂದ ಎರಡು ಪ್ರತಿನಿಧಿ ಹೊಂದಿದ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ರೂಪಿಸಲು ಮತ್ತು ಬದಲಿಗೆ "ಅಖಿಲ ಭಾರತ ಫುಟ್ಬಾಲ್ ಅಸೋಸಿಯೇಷನ್" ಮುಚ್ಚಿಬಿಡಲು ಒಪ್ಪಿಕೊಂಡಿದ್ದವು.
  • ಅಧ್ಯಕ್ಷ:ರಾದ ಬ್ರಿಗೇಡಿಯರ್: ಮೆಸರ್ಸ್ ಪಿ ಗುಪ್ತಾ ಮತ್ತು ಬ್ರ್ಯಾಂಡನ್’ಅವರಿಗೆ ಹೊಸ ಒಕ್ಕೂಟದ ನಿಯಮಗಳು ಕರಡು ತಯಾರಿಸಲು ಒಪ್ಪಿಸಲಾಯಿತು. ಈ ಆರಂಭಿಕ ಸಭೆಯಲ್ಲಿ ಕೆಳಗಿನ ಪದಾಧಿಕಾರಿಗಳು ಆಯ್ಕೆಯಾಗಿದ್ದರು ರ ಜೂನ್ 23, 1937 ರಂದು ಶಿಮ್ಲಾ ನಡೆಯಲಿರುವ ಉದ್ಘಾಟನಾ ಸಭೆಯಲ್ಲಿ ಆ ಕರಡನ್ನು ಮಂಡಿಸಿ ಪರಿಗಣನೆಗೆ ತೆಗೆದು ಕೊಳ್ಳಲು ನಿರ್ಧರಿಸಲಾಯಿತು. ಉದ್ಘಾಟನಾ ಸಭೆಯಲ್ಲಿ ಈ ಕೆಳಕಂಡವರನ್ನು ಪದಾಧಿಕಾರಿಗಳಾಗಿ ಆರಿಸಲಾಯಿತು. ಬ್ರಿಗೇಡಿಯರ್: ಮೆಸರ್ಸ್ - ,ಮೆಜೆಂಡೈನ್ ಡಿಎಸ್’ಒ(DSO) (ANCB-ಎಎಸ್’ಸಿಬಿ). ಅಧ್ಯಕ್ಷರು:; ಮೇಜರ್ ಎ.ಸಿ. ವಿಲ್ಸನ್ (ASCB/ಎಎಸ್’ ಸಿಬಿ)ಗೌರವ ಕಾರ್ಯದರ್ಶಿ: ಪಂಕಜ್ ಗುಪ್ತ (ಐಎಫ್ಎ). ಗೌರವ ಖಜಾಂಚಿ.
 
ಯೂರೋ 2016ರ ಇಂಗ್ಲೆಂಡ್ ಮತ್ತು ವೇಲ್ಸ್ ಆರಂಭ-ಸಿದ್ಧತೆ (ENG-WAL) 2016-06-16

1900 ರ ನಂತರ ಬದಲಾಯಿಸಿ

  • 1937 ರಲ್ಲಿ ಆಲ್ ಇಂಡಿಯಾ ಫುಟ್’ಬಾಲ್’ಫೆಡರೇಶನ್’ ರೂಪಿಸುವ ನಂತರ ಇದು ಎಐಎಫ್ಎಫ್ ಸಂಸ್ಥೆಯು ಫಿಫಾಕ್ಕೆ (The International Federation of Association Football) 1948 ರಲ್ಲಿ ಅಫಿಲಿಯೇಟ್’ಆಯಿತು. ಎಐಎಫ್ಎಫ್ 1948 ರ ಲಂಡನ್ ಒಲಿಂಪಿಕ್ಸ್’ನಲ್ಲಿ ಭಾರತದ ಮೊದಲ ಪ್ರಮುಖ ಅಂತಾರಾಷ್ಟ್ರೀಯ ಟೂರ್ನಮೆಂಟ್ ಆಡಿದರು. ಬರಿಕಾಲಿನಲ್ಲಿ (ಷೂ ಇಲ್ಲದೆ) ಆಡುತ್ತಿದ್ದ ಭಾರತ ತಂಡದ ಚಾರಣಿಗರು ಆರಂಭಿಕ ಪಂದ್ಯದಲ್ಲಿ ಫ್ರಾನ್ಸ್’ ಗೆ 2-1 ರಲ್ಲಿ ಸೋತರು ಎರಡು ಪೆನಾಲ್ಟಿಗಳನ್ನು ಗೋಲಾಗಿ ಪರಿವರ್ತಿಸಲು ವಿಫಲವಾದರು. ಅಲ್ಲಿ ಸಾರಂಗಪಾಣಿ ರಾಮನ್ ಮಾತ್ರ ಪಂದ್ಯದಲ್ಲಿ ಭಾರತದ ಮೊದಲ ಗೋಲು ಗಳಿಸಿದರು. ಇದುವರೆಗೆ ಹೀಗೆ ಅವರು ಮೊದಲ ಭಾರತೀಯ ಗೋಲನ್ನು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗಳಿಸಿದವರಾದರು.
  • ಅನೇಕ ದೇಶಗಳು ಆ ಪಂದ್ಯಾವಳಿಯಿಂದ ಹೊರಹೋದ ನಂತರ 1950 ರಲ್ಲಿ ಫಿಫಾ (ಅಂತರರಾಷ್ಟ್ರೀಯ ಫುಟ್’ಬಾಲ್’ ಫೆಡರೇಶನ್’ ಸಂಸ್ಥೆ) ಆ ವರ್ಷದ ಪಂದ್ಯಾವಳಿಯಲ್ಲಿ ಭಾಗವಹಿಸಲು ಬ್ರೆಜಿಲ್ ನಾಲ್ಕನೇ ವಿಶ್ವಕಪ್ ಮತ್ತು ಬ್ರೆಜಿಲಿಯನ್ ಫುಟ್ಬಾಲ್ ಫೆಡರೇಷನ್’ ಭಾರತವನ್ನು ಆಹ್ವಾನಿಸಿತು, ಆದರೆ ಭಾರತದ ಹೆಚ್ಚಿನ ಆಟಗಾರರು ಆ ತಂಡದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ; ಕಾರಣ ಅವರು ಬರಿಗಾಲಿನಲ್ಲಿ ಆಡುವವರಾಗಿದ್ದರು. ಈ ವಿಶ್ವದ ಸಂಸ್ಥೆಯ ಶರತ್ತು ಪ್ರಕಾರ ಚಾರಣಿಗರು, ಶೂಗಳನ್ನು ಧರಿಸಿ ಆಡುವುದು ಕಡ್ಡಾಯವಾಗಿತ್ತು. 1985 ರಲ್ಲಿ ಅವರು ಅರ್ಹತಾ ಭಾಗವಾಗಿ 13 ನೇ ಆವೃತ್ತಿಗೆ ಬಂದರು. 1986 ರಲ್ಲಿ ಮೆಕ್ಸಿಕೋದ ವಿಶ್ವ ಪಂದ್ಯಾವಳಿಯಲ್ಲಿ ಅರ್ಹತೆ ಪಡೆದಾಗ ನಾಲ್ಕನೇ ಸುತ್ತು ದಾಟಿ ಮುನ್ನಡೆಯಲು ಆಗಿಲ್ಲ. ಭಾರತ ನಾಲ್ಕು ವರ್ಷಕ್ಕೊಮ್ಮೆ ಬರುವ ಈ ಪಂದ್ಯಾವಳಿಗಳಲ್ಲಿ ಅರ್ಹತೆ ಪಡೆಯುವ ಪ್ರಯತ್ನವನ್ನು ವಾಸ್ತವವಾಗಿ 1994ರಿಂದ ಸತತ ಮಾಡಿದೆ. ಆದರೆ ಮೊದಲ ಸುತ್ತನ್ನು ಮೀರಿ ಹೆಚ್ಚಿನ ಅರ್ಹತೆ ಪಡೆಯಲು ವಿಫಲವಾಗಿದೆ.[೨]

ಅಖಿಲ ಭಾರತ ಫುಟ್ಬಾಲ್ ಫೆಡರೇಷನ್

೧೯೯೬-೨೦೧೬ ಬದಲಾಯಿಸಿ

1996 ರಲ್ಲಿ, ಅಖಿಲ ಭಾರತ ಫುಟ್ಬಾಲ್ ಫೆಡರೇಷನ್, ಹೊಸದಾಗಿ ನ್ಯಾಷನಲ್ ಫುಟ್ಬಾಲ್ ಲೀಗ್'ನ್ನು ಸ್ಥಾಪಿಸಿತು. ಇದು ಭಾರತದ ಮೊಟ್ಟ ಮೊದಲ ರಾಷ್ಟ್ರೀಯ ಲೀಗ್ ಆಗಿತ್ತು. 2007 ರಲ್ಲಿ ‘ಐ ಲೀಗ್’ ಎಂದು ಕರೆಯಲ್ಪಡುವ ಒಂದು ನೂತನ ‘ವೃತ್ತಿಪರ’ ಲೀಗ್ ನ್ನು ಸ್ಥಾಪಿಸಲಾಯಿತು. ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಮೊದಲಿದ್ದ ರಾಷ್ಟ್ರೀಯ ಫುಟ್ಬಾಲ್ ಲೀಗ್’ನ್ನು ಸ್ಥಗಿತ ಗೊಳಿಸಲಾಯಿತು.

ರಾಜ್ಯಗಳ ಫುಟ್'ಬಾಲ್ ಸಂಸ್ಥೆಗಳು ಬದಲಾಯಿಸಿ

  • ಈಗ ದೇಶದಲ್ಲಿ 33 ರಾಜ್ಯ ಫುಟ್'ಬಾಲ್ ಸಂಘಗಳು ಇವೆ. ಅವು ಎಐಎಫ್ಎಫ್ ಸಂಸ್ಥೆಗೆ ನೊಂದಾಯಿತವಾಗಿ ಮಾನ್ಯತೆಯನ್ನು ಪಡೆದಿವೆ. ಜೊತೆಗೆ, ‘ಸೇವೆಗಳು’ ಮತ್ತು ರೈಲ್ವೆ ಸ್ಪೋರ್ಟ್ಸ್ ಕಂಟ್ರೋಲ್ ಮಂಡಳಿಗಳು ಮತ್ತು ಮಹಿಳೆಯರ ಸಮಿತಿಗಳು ಕೂಡಾ ಎಐಎಫ್ಎಫ್ ಗೆ ಸಂಯೋಜಿತವಾಗಿವೆ. ಪಡೆಗೆ ಸೇರಿದವರು. ಇವಲ್ಲದೆ ಮೂರು ರಾಜ್ಯ ಅಸೋಸಿಯೇಷನ್ಸ್ ತಾತ್ಕಾಲಿಕವಾಗಿ ಸಂಯೋಜಿತವಾಗಿದ್ದು ಅಂತಿಮವಾಗಿ ಅಧಿಕೃತಗೊಳ್ಳಲು ಕಾಯುತ್ತಿವೆ.

ಅವು:

:ರಾಜ್ಯ ಅಸೋಸಿಯೇಷಶನ್'ಗಳ ಸ್ಥಿತಿ
  • ರಾಜ್ಯ ಅಸೋಸಿಯೇಶನ್'ಗಳು ತಮ್ಮ ಸಂವಿಧಾನ ಮತ್ತು ರಚನೆಯನ್ನು ಹೊಂದಿವೆ. ಕೆಲವೊಮ್ಮೆ, ಆ ನಿಯಮಾವಳಿಗಳು ಎಐಎಫ್ಎಫ್ ನಿಯಮಗಳ ಅನುಸರಣೆಯಲ್ಲಿಲ್ಲ.
  • ರಾಜ್ಯ ಗಾತ್ರವನ್ನು ಅವಲಂಬಿಸಿ, ರಾಜ್ಯ ಅಸೋಸಿಯೇಷನ್’ಗಳು ಅವಕ್ಕೆ ಸಂಯೋಜಿತವಾದ ಜಿಲ್ಲೆಯ ಸಂಘಗಳನ್ನು ಹೊಂದಿವೆ. ಅವು. ಕ್ಲಬ್,/ ಜಿಲ್ಲಾ ಸಂಘಗಳು ಎಂದು ಗುರುತಿಸಲ್ಪಟ್ಟಿವೆ. ಸಣ್ಣಗಾತ್ರದ ಸಂಸ್ಥಾನಗಳಲ್ಲಿನ ಕ್ಲಬ್ ನೇರವಾಗಿ ರಾಜ್ಯ ಅಸೋಸಿಯೇಷನ್ ಗೆ ಸಂಯೊಜಿಸಲ್ಪಟ್ಟಿದೆ.
  • ಪ್ರತಿ ರಾಜ್ಯ ತನ್ನದೇ ಆದ ಸ್ಪರ್ಧೆಗಳನ್ನು ನಡೆಸುತ್ತದೆ. ಸ್ಪರ್ಧೆಗಳು ಜಿಲ್ಲೆಯ ಮಟ್ಟದಲ್ಲಿವೆ. ಅಂತರ್ ಜಿಲ್ಲಾ ಸ್ಪರ್ಧೆಗಳೂ ಇವೆ.
  • ಅಲ್ಲಿ ರಾಜ್ಯ ಸಂಘದ ಕಾರ್ಯ ಬಹಳಷ್ಟು ಅಸಮಾನತೆ ಹೊಂದಿದೆ.ಸಂಪನ್ಮೂಲಗಳನ್ನು ಹೊಂದಿದ ಕೆಲವು ರಾಜ್ಯ ಸಂಘಗಳು ಸುಸಜ್ಜಿತ ಮತ್ತು ಕಾರ್ಯದರ್ಶಿ, ಸಿಬ್ಬಂದಿ ಕಚೇರಿ ಹೊಂದಿವೆ. ಕಾರ್ಯದರ್ಶಿ ಅಥವಾ ಯಾವುದೇ ಕಚೇರಿ ಧಾರಕ ಹೊಂದಿಲ್ಲದ ಇತರ ಸಂಘದಲ್ಲಿ ತನ್ನ ಅಧಕೃತ ಕೆಲಸ / ಕಚೇರಿಯ ಕೆಲಸ ಮುಗಿದ ನಂತರ ಕೇವಲ ಕೆಲವು ಗಂಟೆಗಳ ಕಾಲ ಕಚೇರಿ ಕೋಣೆಗೆ ಬರುವರು.
  1. ಮಣಿಪುರದ ಫುಟ್ಬಾಲ್ ಅಸೋಸಿಯೇಷನ್
  2. ಅಂಡಮಾನ್ ಮತ್ತು ನಿಕೋಬಾರ್ ಫುಟ್ಬಾಲ್ ಅಸೋಸಿಯೇಷನ್
  3. ಆಂಧ್ರ ಪ್ರದೇಶ ಫುಟ್ಬಾಲ್ ಅಸೋಸಿಯೇಷನ್
  4. ಅರುಣಾಚಲ ಪ್ರದೇಶ ಫುಟ್ಬಾಲ್ ಅಸೋಸಿಯೇಷನ್
  5. ಅಸ್ಸಾಂ ಫುಟ್ಬಾಲ್ ಅಸೋಸಿಯೇಷನ್
  6. ಬಿಹಾರ ಫುಟ್ಬಾಲ್ ಅಸೋಸಿಯೇಷನ್
  7. ಚಂಡೀಗಡ ಫುಟ್ಬಾಲ್ ಅಸೋಸಿಯೇಷನ್
  8. ಛತ್ತೀಸ್ಗಢ ಫುಟ್ಬಾಲ್ ಅಸೋಸಿಯೇಷನ್
  9. ದಮನ್ & ದಿಯು ಫುಟ್ಬಾಲ್ ಅಸೋಸಿಯೇಷನ್
  10. ದೆಹಲಿ ಸಾಕ್ಕರ್ ಅಸೋಸಿಯೇಷನ್
  11. ಫುಟ್ಬಾಲ್ ಅಸೋಸಿಯೇಷನ್ ಒಡಿಶಾ
  12. ಗೋವಾ ಫುಟ್ಬಾಲ್ ಅಸೋಸಿಯೇಷನ್
  13. ಗುಜರಾತ್ ರಾಜ್ಯ ಫುಟ್ಬಾಲ್ ಅಸೋಸಿಯೇಷನ್
  14. ಹರಿಯಾಣ ಫುಟ್ಬಾಲ್ ಅಸೋಸಿಯೇಷನ್
  15. ಹಿಮಾಚಲ ಪ್ರದೇಶ ಫುಟ್ಬಾಲ್ ಅಸೋಸಿಯೇಷನ್
  16. ಜಮ್ಮು ಮತ್ತು ಕಾಶ್ಮೀರ ಫುಟ್ಬಾಲ್ ಅಸೋಸಿಯೇಷನ್
  17. ಜಾರ್ಖಂಡ್ ಫುಟ್ಬಾಲ್ ಅಸೋಸಿಯೇಷನ್
  18. ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್
  19. ಕೇರಳ ಫುಟ್ಬಾಲ್ ಅಸೋಸಿಯೇಷನ್
  20. ಮಧ್ಯಪ್ರದೇಶ ಫುಟ್ಬಾಲ್ ಅಸೋಸಿಯೇಷನ್
  21. ಮೇಘಾಲಯ ಫುಟ್ಬಾಲ್ ಅಸೋಸಿಯೇಷನ್
  22. ಮಿಜೋರಾಂ ಫುಟ್ಬಾಲ್ ಅಸೋಸಿಯೇಷನ್
  23. ನಾಗಾಲ್ಯಾಂಡ್ ಫುಟ್ಬಾಲ್ ಅಸೋಸಿಯೇಷನ್
  24. ಪಾಂಡಿಚೇರಿ ಫುಟ್ಬಾಲ್ ಅಸೋಸಿಯೇಷನ್
  25. ಪಂಜಾಬ್ ಫುಟ್ಬಾಲ್ ಅಸೋಸಿಯೇಷನ್
  26. ರೈಲ್ವೆ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್
  27. ರಾಜಸ್ಥಾನ ಫುಟ್ಬಾಲ್ ಅಸೋಸಿಯೇಷನ್
  28. ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್
  29. ಸಿಕ್ಕಿಂ ಫುಟ್ಬಾಲ್ ಅಸೋಸಿಯೇಷನ್
  30. ತಮಿಳುನಾಡು ಫುಟ್ಬಾಲ್ ಅಸೋಸಿಯೇಷನ್
  31. ಭಾರತೀಯ ಫುಟ್ಬಾಲ್ ಅಸೋಸಿಯೇಷನ್ (ಪಶ್ಚಿಮ ಬಂಗಾಳ)
  32. ತ್ರಿಪುರ ಫುಟ್ಬಾಲ್ ಅಸೋಸಿಯೇಷನ್
  33. ಉತ್ತರ ಪ್ರದೇಶ ಫುಟ್ಬಾಲ್ ಸಂಘ
  34. ಉತ್ತರಖಂಡ ರಾಜ್ಯವನ್ನು ಫುಟ್ಬಾಲ್ ಅಸೋಸಿಯೇಷನ್
  35. ಪಶ್ಚಿಮ ಭಾರತ ಫುಟ್ಬಾಲ್ ಅಸೋಸಿಯೇಷನ್ (ಮಹಾರಾಷ್ಟ್ರ)

[೩]

ಪ್ರಶಸ್ತಿಗಳು ಮತ್ತು ಮಾನ್ಯತೆ ಬದಲಾಯಿಸಿ

ಫೆಬ್ರವರಿ 2014 ರಲ್ಲಿ, ಎಫ್ಐಸಿಸಿಐ ಅತ್ಯುತ್ತಮ ರಾಷ್ಟ್ರೀಯ ಕ್ರೀಡಾ ಫೆಡರೇಷನ್ ಪ್ರಶಸ್ತಿ ಪ್ರದಾನ.[೪]

ಸ್ಪರ್ಧೆಗಳು ಬದಲಾಯಿಸಿ

  • ಎಐಎಫ್ಎಫ್ ಹಲವಾರು ಸ್ಪರ್ಧೆಗಳನ್ನು ನಡೆಸುತ್ತದೆ:
  • ಇಂಡಿಯನ್ ಸೂಪರ್ ಲೀಗ್
  • ಐ-ಲೀಗ್
  • ಐ-ಲೀಗ್ 2 ನೇ ವಿಭಾಗ
  • ಡುರಾಂಡ್ ಕಪ್
  • ಸಂತೋಷ್ ಟ್ರೋಫಿ
  • ಐ-ಲೀಗ್ U18
  • ಐ-ಲೀಗ್ U15
  • ಸುಬ್ರೊತೊ Cup
  • ಬಿ.ಸಿ.ರಾಯ್ ಟ್ರೋಫಿ (19 ವರ್ಷದೊಳಗಿನ ರಾಷ್ಟ್ರೀಯ ಚಾಂಪಿಯನ್ಷಿಪ್)
  • ಭಾರತ ಮಹಿಳಾ ಫುಟ್ಬಾಲ್ ಚಾಂಪಿಯನ್ಷಿಪ್

ನಿರ್ದೇಶಕರ ಮಂಡಳಿ ಬದಲಾಯಿಸಿ

  • ಅಧ್ಯಕ್ಷ: ಪ್ರಫುಲ್ ಪಟೇಲ್
  • ಉಪಾಧ್ಯಕ್ಷ: ಅಂಕುರ್ ದತ್ತಾ †
  • ಪ್ರಧಾನ ಕಾರ್ಯದರ್ಶಿ: ಕುಶಾಲ್ ದಾಸ್
  • ತಾಂತ್ರಿಕ ನಿರ್ದೇಶಕ: ಸ್ಕಾಟ್ ಓಡೊನೆಲ್(O'Donell)
  • ಅಕಾಡೆಮಿ ಬೋಧಕ: ಸ್ಕಾಟ್ ಒಡೊನೆಲ್
  • *ಇತರ ಸದಸ್ಯರು:
  • ವಿನೋದ್ ಶರ್ಮಾ †
  • ಸುಬ್ರತಾ ದತ್ತಾ †
  • ಹರದೇವ್ ಜಡೇಜಾ ‡
  • ಜೊವಾಕ್ವಿಮ್ ಅಲೇಮೋ (Alemo) ‡
  • ಅಮಿತ್. ದೇವ್ †
  • ಸಿ.ಆರ್ ವಿಶ್ವನಾಥನ್ ‡
  • ಇಂದರ್ ಸಿಂಗ್ †
  • ಟೆಂಪೊ ಭುಟಿಯಾ *
  • ರಾಕೇಶ್ ಯಾದವ್ *
  • ಕೀ: † = ರಾಷ್ಟ್ರೀಯ ಗೇಮ್ ಪ್ರತಿನಿಧಿ ‡ = ಪ್ರೀಮಿಯರ್ ಲೀಗ್ ಪ್ರತಿನಿಧಿ * = ಫುಟ್ಬಾಲ್ ಲೀಗ್ ಪ್ರತಿನಿಧಿ

17 ವರ್ಷದೊಳಗಿನವರ ಚೊಚ್ಚಲ ಬ್ರಿಕ್ಸ್‌ ಫುಟ್‌ಬಾಲ್‌ ಟೂರ್ನಿ ಬದಲಾಯಿಸಿ

  • ಮಡಗಾಂವ್‌‍ನಲ್ಲಿ ವಿಕ್ಟರ್‌ ಗೇಬ್ರಿಯಲ್‌ ಮೌರಾ ಡಿ ಒಲಿವಿರಾ ತಂದಿತ್ತ ಎರಡು ಗೋಲುಗಳ ಬಲದಿಂದ ಬ್ರೆಜಿಲ್‌ ತಂಡ 17 ವರ್ಷದೊಳಗಿನವರ ಚೊಚ್ಚಲ ಬ್ರಿಕ್ಸ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದೆ.
  • ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್‌ ಹೋರಾಟದಲ್ಲಿ ಬ್ರೆಜಿಲ್‌ 5–1 ಗೋಲುಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಪರಾಭವಗೊಳಿಸಿತು.
  • ಬಲಿಷ್ಠ ಆಟಗಾರರ ಕಣಜ ಎನಿಸಿದ್ದ ಬ್ರೆಜಿಲ್‌ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿತು.[೫]

ಏಷ್ಯಾ ಫುಟ್‌ಬಾಲ್ ಕಪ್ (ಎಎಫ್‌ಸಿ) ಟೂರ್ನಿ 2016 ಬದಲಾಯಿಸಿ

  • 5 Nov, 2016:ದೋಹಾ:
  • ಭಾರತ ತಂಡವು 1951 ಮತ್ತು 1962ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿತ್ತು. ಆದರೆ ಅಲ್ಲಿಂದ ಸಾಧನೆಯು ಮೇಲ್ಮುಖವಾಗಲಿಲ್ಲ. ಇದೀಗ ಬಿಎಫ್‌ಸಿ ತಂಡವು ಏಷ್ಯಾ ಮಟ್ಟದಲ್ಲಿ ಇಂತಹದೊಂದು ಸಾಧನೆ ಮಾಡಿರುವುದು ಭಾರತದ ಫುಟ್‌ಬಾಲ್‌ ಕ್ರೀಡೆಯಲ್ಲಿ ಮಹತ್ವದ ಮೈಲುಗಲ್ಲಾಗಲಿದೆ.
  • ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡವು ಭಾರತದ ಫುಟ್‌ಬಾಲ್ ಕ್ರೀಡೆಯಲ್ಲಿ ಐತಿಹಾಸಿಕ ದಾಖಲೆ ಮಾಡಿತ್ತು. ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಟೂರ್ನಿಯ ಫೈನಲ್ ತಲುಪಿದ ಸಾಧನೆಯನ್ನು ಬಿಎಫ್‌ಸಿ ಮಾಡಿತ್ತು. ನವಂ.5 ಶನಿವಾರ ದೋಹಾದಲ್ಲಿ ನಡೆಯಲಿರುವ ಏಷ್ಯಾ ಫುಟ್‌ಬಾಲ್ ಕಪ್ (ಎಎಫ್‌ಸಿ) ಟೂರ್ನಿಯಲ್ಲಿ ಆಡಲಿದೆ. ಇರಾಕ್ ದೇಶದ ಅಲ್ ಖಾವಾ ಅಲ್ ಜಾವಿಯಾ (ಏರ್‌ಫೋರ್ಸ್ ಕ್ಲಬ್) ತಂಡವನ್ನು ಇಲ್ಲಿಯ ಸುಹೈಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ಎದುರಿಸಲಿದೆ.

ಇತಿಹಾಸ ಬದಲಾಯಿಸಿ

  • ಭಾರತ ತಂಡವು 1951 ಮತ್ತು 1962ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿತ್ತು. ಆದರೆ ಅಲ್ಲಿಂದ ಸಾಧನೆಯು ಮೇಲ್ಮುಖವಾಗಲಿಲ್ಲ. ಇದೀಗ ಬಿಎಫ್‌ಸಿ ತಂಡವು ಏಷ್ಯಾ ಮಟ್ಟದಲ್ಲಿ ಇಂತಹದೊಂದು ಸಾಧನೆ ಮಾಡಿರುವುದು ಭಾರತದ ಫುಟ್‌ಬಾಲ್‌ ಕ್ರೀಡೆಯಲ್ಲಿ ಮಹತ್ವದ ಮೈಲುಗಲ್ಲಾಗಲಿದೆ. ದೇಶದ ಫುಟ್‌ಬಾಲ್ ಕ್ರೀಡಾಭಿಮಾನಿಗಳಲ್ಲಿ ಭರವಸೆ ಮೂಡಿದೆ. ಆದರೆ, ಏಷ್ಯಾದ ಅಗ್ರಶ್ರೇಯಾಂಕದ ತಂಡವಾಗಿರುವ ಇರಾಕ್‌ನ ಬಲಿಷ್ಠ ಕ್ಲಬ್ ವಿರುದ್ಧ ಬಿಎಫ್‌ಸಿ ಈಗ ಸೆಣಸಲಿದೆ. ಆದ್ದರಿಂದ ಈ ಸವಾಲು ಮತ್ತಷ್ಟು ಕಠಿಣವಾಗಿದೆ. ಇರಾಕ್ ದೇಶದ ಅಲ್ ಶೊರ್ಟಾ (1971), ಅಲ್ ರಶೀದ್ (1989) ಎಎಫ್‌ಸಿ ಫೈನಲ್ ತಲುಪಿದ್ದವು. ಅಲ್ ತಲಬಾ (1995) ಮತ್ತು ಅಲ್ ಝವ್ರಾ (2000) ತಂಡಗಳು ಏಷ್ಯಾ ಕಪ್ ವಿನ್ನರ್ಸ್ ಫೈನಲ್‌ನಲ್ಲಿ ಸ್ಪರ್ಧಿಸಿದ್ದವು.
  • 2012 ಮತ್ತು 2014ರಲ್ಲಿ ಅರ್ಬಿಲ್ ಫುಟ್‌ಬಾಲ್ ಕ್ಲಬ್ ತಂಡವು ಇರಾಕ್ ಪ್ರತಿನಿಧಿತ್ವವನ್ನು ಉಳಿಸಿಕೊಂಡಿತ್ತು. ಆದರೆ ಪ್ರಶಸ್ತಿ ಗೆದ್ದಿರಲಿಲ್ಲ. 2013ರಲ್ಲಿ ರಚನೆಯಾದ ಬಿಎಫ್‌ಸಿ ತಂಡಕ್ಕೆ ದೊಡ್ಡ ಇತಿಹಾಸದ ಬಲವಿಲ್ಲ. ಆದರೆ ದೇಶದೊಳಗೆ ಮತ್ತು ಏಷ್ಯಾಮಟ್ಟದಲ್ಲಿ ನಡೆದ ಟೂರ್ನಿಗಳಲ್ಲಿ ತಂಡದ ಆಟಗಾರರು ಉತ್ತಮವಾಗಿ ಆಡಿದ್ದಾರೆ.

ಫೈನಲ್‍ಗೆ ಟೀಮು ಬದಲಾಯಿಸಿ

  • ಟೀಮಿನ ವಿವರ:ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್
  • ತಂಡದ ನಾಯಕ ಸುನಿಲ್ ಚೆಟ್ರಿ ಅವರು ಕಳೆದ ಪಂದ್ಯದಲ್ಲಿ ವಿಜೇತ ತಂಡವನ್ನೇ ಇಲ್ಲಿಯೂ ಕಣಕ್ಕಿಳಿಸುವ ಯೋಚನೆಯಲ್ಲಿದ್ದಾರೆ. ಸಿ.ಕೆ. ವಿನೀತ್, ಅಲ್ವೆರೊ ರುಬಿಯೊ, ಯುಗೇನ್ಸನ್ ಲಿಂಗ್ಡೊ ಮತ್ತು ಕ್ಯಾಮೆರಾನ್ ವಾಟ್ಸನ್ ಅವರು ಮಿಡ್‌ಫೀಲ್ಡ್‌ನಲ್ಲಿ ತಮ್ಮ ಕಾಲ್ಚಳಕ ತೋರಲಿದ್ದಾರೆ. ಆದರೆ, ಅಲ್ವಿನ್ ಜಾರ್ಜ್ ಅವರು ತಂಡಕ್ಕೆ ಲಭ್ಯರಾಗುವ ಕುರಿತು ಇನ್ನೂ ಖಚಿತವಾಗಿಲ್ಲ. ನವೆಂಬರ್ 2ರಂದು ಅವರು ದೋಹಾ ವಿಮಾನವನ್ನು ತಪ್ಪಿಸಿಕೊಂಡಿದ್ದರು. ಅವರ ವೀಸಾ ಸಮಸ್ಯೆಯಿಂದಾಗಿ ಅವರು ಇನ್ನೂ ಇಲ್ಲಿಗೆ ತಲುಪಿಲ್ಲ. ಲಾಲ್‌ಚುನಮವಿಯಾ ಅವರ ಅನುಪಸ್ಥಿತಿಯಲ್ಲಿ ಯುವ ಆಟಗಾರ ನಿಶು ಕುಮಾರ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
  • ಲೆಫ್ಟ್‌ ಬ್ಯಾಕ್‌ನಲ್ಲಿ ಅವರು ಆಡಲಿಳಿಯಬಹುದು. ಗೋಲ್‌ಕೀಪರ್ ಅಮರಿಂದರ್ ಸಿಂಗ್ ಅವರು ಅಮಾನತುಗೊಂಡಿ ರುವುದರಿಂದ ಲಾಲತುಮ್ಮಾವಿಯಾ ರಾಲ್ಟೆ ಅವರು ಗೋಲುಪೆಟ್ಟಿಗೆಯ ರಕ್ಷಣೆಗೆ ನಿಲ್ಲಲಿದ್ದಾರೆ. ಎದುರಾಳಿ ಏರ್‌ಫೋರ್ಸ್‌ ಕ್ಲಬ್‌ ತಂಡದಲ್ಲಿಯೂ ಪ್ರಮುಖ ಆಟಗಾರರ ಅನುಪಸ್ಥಿತಿ ಇದೆ. ಮಿಡ್‌ಫೀಲ್ಡರ್ ಬಷರ್ ರೆಸಾನ್ ಈ ಪಂದ್ಯದಲ್ಲಿಆಡುತ್ತಿಲ್ಲ. ಸೆಮಿಫೈನಲ್‌ನಲ್ಲಿ ರೆಡ್‌ ಕಾರ್ಡ್‌ ಪಡೆದಿದ್ದ ಅವರು ಈ ಪಂದ್ಯದ ಹೊರಗುಳಿದಿರುವುದು ತಂಡದ ಚಿಂತೆ ಹೆಚ್ಚಿಸುವ ಸಾಧ್ಯತೆ ಇದೆ. ಫಾರ್ವರ್ಡ್‌ ಆಟಗಾರ ಸಮಲ್ ಸಯೀದ್ ಕೂಡ ನಾಕ್‌ಔಟ್ ಹಂತದಲ್ಲಿ ಹಳದಿ ಕಾರ್ಡ್ ದರ್ಶನ ಮಾಡಿದ್ದರು. ಇದರಿಂದಾಗಿ ಅವರೂ ಈ ಪಂದ್ಯದಿಂದ ಹೊರಗುಳಿ ಯುವ ಶಿಕ್ಷೆ ಅನುಭವಿಸ ಲಿದ್ದಾರೆ.
  • ಆದರೆ, ನಾಯಕ ಬಸೀಮ್ ಖಾಸೀಂ ಮತ್ತು ಬಳಗವು ಈ ಕೊರತೆಗಳನ್ನು ಮೀರಿ ನಿಲ್ಲುವ ವಿಶ್ವಾಸದಲ್ಲಿದೆ. ಸ್ಟ್ರೈಕರ್ ಹಮ್ಮದಿ ಅಹಮದ್ ತಂಡದ ಅತ್ಯಂತ ಬಲಶಾಲಿ ಆಟಗಾರನಾಗಿದ್ದಾರೆ. ಇರಾಕ್ ರಾಷ್ಟ್ರೀಯ ತಂಡದ ಆಟಗಾರನಾಗಿರುವ ಅವರು ಈ ಋತುವಿನಲ್ಲಿ 15 ಗೋಲುಗಳನ್ನು ಹೊಡೆದಿದ್ದಾರೆ. ಇವರು ಬೆಂಗಳೂರು ತಂಡಕ್ಕೆ ಪ್ರಮುಖ ಸವಾಲಾಗುವ ಸಾಧ್ಯತೆ ಇದೆ. ಇವರನ್ನು ತಡೆಯಲು ಚೆಟ್ರಿ ಬಳಗವು ವಿಶೇಷ ಕಾರ್ಯತಂತ್ರ ಹೆಣೆಯುತ್ತಿದೆ. ಎಲ್ಲ ಅಡೆತಡೆಗಳನ್ನು ಎದುರಿಸಿ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅದರೊಂದಿಗೆ ಭಾರತದ ಫುಟ್‌ಬಾಲ್ ಕ್ಷೇತ್ರದಲ್ಲಿ ನೂತನ ಶಕೆ ಆರಂಭವಾಗಲಿದೆ. (ಪಂದ್ಯದ ಆರಂಭ:ರಾತ್ರಿ 9.30;ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್) [೬]

ಫೈನಲ್ ಪಂದ್ಯ ಬದಲಾಯಿಸಿ

  • ಟ್ರೋಫಿ : ಚಿತ್ರ:[೭]
  • 5-11-2016::ರಾತ್ರಿ 9.30:
  • ಭಾರತ (ಬಿಎಫ್‍ಸಿ) X ದೇಶದ ಅಲ್ ಖಾವಾ ಅಲ್ ಜಾವಿಯಾ (ಏರ್‌ಫೋರ್ಸ್ ಕ್ಲಬ್) ತಂಡ
  • ಭಾರತ : ಬಿಎಫ್‍ಸಿ :0 >< 1 ಇರಾಕ್: ಏರ್‌ಫೋರ್ಸ್‌ ಕ್ಲಬ್‌
  • ಎಎಫ್‌ಸಿ ಕಪ್‌ ಗೆಲ್ಲುವ ಚಾರಿತ್ರಿಕ ಅವಕಾಶ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ನ ಕೈತಪ್ಪಿತು. ಇರಾಕ್‌ನ ಏರ್‌ಫೋರ್ಸ್‌ ಕ್ಲಬ್‌ ತಂಡ (ಅಲ್‌ ಕ್ಯುವಾ ಅಲ್‌ ಜವಿಯಾ)ದ ಎದುರು ಬಿಎಫ್‌ಸಿ 0–1 ಗೋಲಿನಿಂದ ವೀರೋಚಿತ ಸೋಲು ಕಂಡಿತು. ಸುಹೇಮ್‌ ಬಿನ್‌ ಹಮಾದ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಕೊನೆಯ ಕ್ಷಣಗಳವರೆಗೂ ಬಿಎಫ್‌ಸಿ ಶಕ್ತಿಮೀರಿ ಹೋರಾಟ ನಡೆಸಿತು. 71ನೇ ನಿಮಿಷದಲ್ಲಿ ಹಮಾದಿ ಅಹಮ್ಮದ್‌ ಅಬ್ದುಲ್ಲಾ ಅವರು ಇರಾಕ್‌ ಕ್ಲಬ್‌ ಪರ ಗೋಲು ತಂದಿತ್ತು ಬಿಎಫ್‌ಸಿ ಕನಸನ್ನು ಛಿದ್ರಗೊಳಿಸಿದರು. [೮]

ಪ್ರೀಮಿಯರ್ ಫುಟ್‌ಬಾಲ್‌ ೨೦೧೬ ಬದಲಾಯಿಸಿ

ಬ್ರೆಜಿಲ್ ಫುಟ್‌ಬಾಲ್ ದಿಗ್ಗಜ ರೊನಾಲ್ಡಿನೊ ಅವರು ಬಾರಿಸಿದ ಐದು ಗೋಲುಗಳ ನೆರವಿನಿಂದ ಗೋವಾ ಫೈವ್ ತಂಡವು ಇಲ್ಲಿ ನಡೆಯುತ್ತಿರುವ ಪ್ರೀಮಿಯರ್ ಫುಟ್‌ಬಾಲ್‌ನಲ್ಲಿ ಜಯಿಸಿತು. ಭಾನುವಾರ ಇಲ್ಲಿಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೋವಾ ತಂಡವು 7–2 ಗೋಲುಗಳಿಂದ ಬೆಂಗಳೂರು ಫುಟ್‌ಬಾಲ್ ಫೈವ್ ಎದುರು ಗೆದ್ದಿತು. ರೊನಾಲ್ಡಿನೊ ಆಟ ನೋಡಲು ಉತ್ತಮ ಸಂಖ್ಯೆಯಲ್ಲಿ ಜನ ಸೇರಿದ್ದರು.[೯]

ದಕ್ಷಿಣ ಏಷ್ಯನ್ ಫುಟ್ಬಾಲ್ ಫೆಡರೇಶನ್ ಮಹಿಳೆಯರ ಕಪ್ ಬದಲಾಯಿಸಿ

  • 2016 ಎಸ್ಎಎಫ್ಎಫ್ ಮಹಿಳೆಯರ ಚಾಂಪಿಯನ್ಶಿಪ್, ಡಿಸೆಂಬರ್ 2016, 26 ರಿಂದ ಭಾರತದಲ್ಲಿ ನಡೆಯುತ್ತಿದೆ; ಮತ್ತು 2017 ಜನವರಿ 4 ರವರೆಗೆ ಮುಂದುವರೆಯಲಿವೆ.[೧೦][೧೦]

ಗ್ರನಾಟ್ಕಿನ್‌ ಸ್ಮಾರಕ ಕಪ್‌ ಫುಟ್‌ಬಾಲ್‌ ಟೂರ್ನಿ ೨೦೧೭ ಬದಲಾಯಿಸಿ

  • ಭಾರತದ 17 ವರ್ಷದೊಳಗಿನವರ ಬಾಲಕರ ತಂಡ ದವರು ರಷ್ಯಾದ ಮಾಸ್ಕೊದಲ್ಲಿ ನಡೆದ ಗ್ರನಾಟ್ಕಿನ್‌ ಸ್ಮಾರಕ ಕಪ್‌ ಫುಟ್‌ಬಾಲ್‌ ಟೂರ್ನಿಯ ‘ಪ್ಲೇ ಆಫ್‌’ ಪಂದ್ಯದಲ್ಲಿ ನಿರಾಸೆ ಕಂಡಿದ್ದಾರೆ. 20 ಜನ,ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ ತಂಡ 0–1 ಗೋಲಿನಿಂದ ತಜಿಕಿಸ್ತಾನ ತಂಡಕ್ಕೆ ಮಣಿಯಿತು. ಈ ಮೂಲಕ ಆಡಿದ ಐದು ಪಂದ್ಯಗಳಿಂದ ಒಂದು ಪಾಯಿಂಟ್‌ ಕಲೆಹಾಕಿ ಕೊನೆಯ ಸ್ಥಾನದೊಂದಿಗೆ ಸ್ಪರ್ಧೆ ಕೊನೆಗೊಳಿಸಿತು. ಟೂರ್ನಿಯಲ್ಲಿ ವಿವಿಧ ರಾಷ್ಟ್ರಗಳ 16 ತಂಡಗಳು ಭಾಗವಹಿಸಿದ್ದವು.[೧೧]

ಭಾರತದ ಆಟಗಾರರು ಬದಲಾಯಿಸಿ

  • ಪ್ರಸ್ತುತ ತಂಡ:(India national football team)
  • ಮಾರ್ಚ್ 2017ರಲ್ಲಿ ಈ ಕೆಳಗಿನ 24 ಆಟಗಾರರನ್ನು ಕಾಂಬೋಡಿಯಾ ಮತ್ತು ಮಯನ್ಮಾರ್ ವಿರುದ್ಧ ಎಎಪ್‍ಸಿ/AFC ಏಷಿಯನ್ ಕಪ್ ಅರ್ಹತಾ ಸೌಹಾರ್ದ ಅಭ್ಯಾಸ ಪಂದ್ಯದಲ್ಲಿ ಮದಲಿಗೆ ಕರೆಸಲಾಯಿತು.
  • ಕ್ಯಾಪ್ಸ್ ಮತ್ತು ಗೋಲ್‍ಗಳನ್ನು ಕಾಂಬೋಡಿಯ ಪಂದ್ಯದ ಬಳಿಕ ಮಾರ್ಚ್ 2017 23 ನವೀಕರಿಸಲಾಗುತ್ತದೆ.

ಆಟಗಾರರ ವಿವರ ಬದಲಾಯಿಸಿ

ಸರಣಿ ಸಂ ಸ್ಥಾನ ಆಟಗಾರ ಹುಟ್ಟಿದ ದಿನಾಂಕ (ವಯಸ್ಸು) ನಾಯಕ ಗೋಲುಗಳು ಕ್ಲಬ್
1 FW ಸುನಿಲ್ ಚೆಟ್ರಿ 3 -8-1984 (age 32) 92 52 ಬೆಂಗಳೂರು FC
2 GK ಸುಬ್ರತಾ ಪಾಲ್ 24-12- 1986 (age 30) 64 0 DSK ಶಿವಾಜಿಯನ್ಸ್
3 FW ಜೇಜೆ ಲಾಲ್ ಫೇಕ್ಲುವಾ 7 -1- 1991 (age 26) 38 17 ಮೋಹನಬಾಗಾನ್
4 DF ಅಮಾಬ್ ಮಂಡಲ್ 25 -9- 1989 (age 27) 26 1 ಪೂರ್ವ ಬಂಗಾಳ
5 FW ರಾಬಿನ್ ಸಿಂಗ್ 9 -5- 1990 (age 26) 25 4 ಬೆಂಗಳೂರು FC
6 MF ಯೂಜಿನೇಸನ್ ಲಿಂಗಧೊ 10 -9- 1986 (age 30) 16 0 ಬೆಂಗಳೂರು FC
7 DF ನಾರಾಯಣ ದಾಸ್ 25 -9- 1993 (age 23) 15 1 ಪೂರ್ವ ಬಂಗಾಳ
8 GK ಗುರುಪ್ರೀತ್ ಸಿಂಗ್ ಸಂಧು 3 -2- 1992 (age 25) 14 0 ಸ್ಟಾಬ್ಯಾಕ್/ Stabæk
9 DF ಪ್ರೀತಮ್ ಕೊತಲ್ ಕದನ 9 -8- 1993 (age 23) 14 0 ಮೋಹನಬಾಗಾನ್
10 DF ಸಂದೇಶ್ ಜಿಂಗನ್ 21 -7- 1993 (age 23) 13 3 ಬೆಂಗಳೂರು FC
11 MF ರಾಲಿನ್ ಬೋರ್ಗೇಸ್ 5 -6-1992 (age 24) 12 1 ಪೂರ್ವ ಬಂಗಾಳ
12 MF ಜಾಕಿಚಂದ್ ಸಿಂಗ್ 17 -3- 1992 (age 25) 9 1 ಪೂರ್ವ ಬಂಗಾಳ
13 MF ಹೋಲಿಚರನ್ ನರ್ಜರಿ 10 -5- 1994 (age 22) 8 0 DSK ಶಿವಾಜಿಯನ್ಸ್
14 MF ಸಿ.ಕೆ.ವಿನೀತ್ 28 -2-1988 (age 29) 7 0 ಬೆಂಗಳೂರು FC
15 DF ಧನಪಾಲ್ ಗಣೇಶ್ 13 -6- 1994 (age 22) 5 0  Chennai City
16 MF ಉದಾಂತ್ ಸಿಂಗ್ 14 -6- 1996 (age 20) 5 0 ಬೆಂಗಳೂರು FC
17 MF ಮೊಹಮದ್ರಫೀಕ್ 20 -9-1992 (age 24) 4 1 ಪೂರ್ವ ಬಂಗಾಳ
18 DF ಫಲಗಂಕೊ ಕಾರ್ಡೊಜೊ 23 -1- 1988 (age 29) 2 1  ಚರ್ಚ್ ಹಿಲ್ ಬ್ರದರ್ಸ್
19 DF ಅನಾಸ್ ಎಡತೋಡಿಕ 15 -2-1987 (age 30) 1 0 ಮೋಹನಬಾಗಾನ್
20 MF ಮಿಲನ್ ಸಿಂಗ್ 15 -5- 1992 (age 24) 1 0 DSK ಶಿವಾಜಿಯನ್ಸ್
21 FW ಡೇನಿಯಲ್ ಲಾಲ್ ಲಿಂಪುಇಯ 12 -9-1997 (age 19) 1 0 ಬೆಂಗಳೂರು FC
22 GK ರೆಹನೇಶ್ ಟಿಪಿ 13 -2 1993 (age 24) 0 0 ಪೂರ್ವ ಬಂಗಾಳ
23 DF ನಿಶುಕುಮಾರ್ 1 -1-1997 (age 20) 0 0  ಬೆಂಗಳೂರು FC
24 DF ಜೆರ್ರಿ ಲಾಲ್ ರಿಂಜುಆಲ 13 -7- 1998 (age 18) 0 0 DSK ಶಿವಾಜಿಯನ್ಸ್

[೧೨]

ಭಾರತದ ಮಹಿಳಾ ಫುಟ್ಬಾಲ್ ತಂಡ ಬದಲಾಯಿಸಿ

  • 4 Apr, 2017
  • ತೀರಾ ಕಳಪೆ ಆಟವಾಡಿದ ಭಾರತ ಮಹಿಳಾ ತಂಡದವರು ಇಲ್ಲಿ ನಡೆದ ಎಎಫ್‌ಸಿ ಏಷ್ಯಾ ಕಪ್‌ ಅರ್ಹತಾ ಸುತ್ತಿನ ಫುಟ್‌ಬಾಲ್‌ ಪಂದ್ಯದಲ್ಲಿ 0–8 ಗೋಲು ಗಳಿಂದ ಉತ್ತರ ಕೊರಿಯಾ ಎದುರು ಹೀನಾಯವಾಗಿ ಸೋಲು ಕಂಡಿದ್ದಾರೆ. ಈ ಗೆಲುವಿನ ಮೂಲಕ ಉತ್ತರ ಕೊರಿಯಾ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು. ಉಜ್ಬೇಕಿಸ್ತಾನ ಕೂಡ ಮೂರು ಪಾಯಿಂಟ್ಸ್‌ ಹೊಂದಿದ್ದು ಗೋಲು ಗಳಿಕೆಯ ಆಧಾರದ ಮೇಲೆ ಎರಡನೇ ಸ್ಥಾನದಲ್ಲಿದೆ. ‘ಬಿ’ ಗುಂಪಿನ ಪಂದ್ಯದಲ್ಲಿ ಉತ್ತರ ಕೊರಿಯಾದ ಆಟಗಾರ್ತಿಯರು ಪೂರ್ಣವಾಗಿ ಪ್ರಾಬಲ್ಯ ಮೆರೆದರು. ಈ ತಂಡ ವಿಶ್ವ ರ್‍ಯಾಂಕ್‌ನಲ್ಲಿ ಹತ್ತನೇ ಸ್ಥಾನದಲ್ಲಿದೆ. ಆದ್ದರಿಂದ ಭಾರತಕ್ಕೆ ಕಠಿಣ ಸವಾಲು ಎದುರಾಗುವುದು ನಿರೀಕ್ಷಿತವೇ ಆಗಿತ್ತು. ಮುಂದಿನ ಪಂದ್ಯ ದಲ್ಲಿ ಭಾರತ ತಂಡ ದಕ್ಷಿಣ ಕೊರಿಯಾ ಎದುರು ಪೈಪೋಟಿ ನಡೆಸಲಿದೆ. ಸಾಜಿದ್ ಯೂಸೂಫ್‌ ದಾರ್ ಭಾರತ ತಂಡದ ಮುಖ್ಯ ಕೋಚ್. [೧೩]

ಭಾರತ ಫುಟ್‌ಬಾಲ್ ತಂಡ ಫಿಫಾ ರ್‍ಯಾಂಕಿಂಗ್‌ನಲ್ಲಿ 101ನೇ ಸ್ಥಾನಕ್ಕೆ ಬದಲಾಯಿಸಿ

  • 7 Apr, 2017
  • ಇತ್ತೀಚಿನ ಟೂರ್ನಿಗಳಲ್ಲಿ ಗಮನ ಸೆಳೆ ಯುತ್ತಿರುವ ಭಾರತ ಫುಟ್‌ಬಾಲ್ ತಂಡ ಫಿಫಾ ರ್‍ಯಾಂಕಿಂಗ್‌ನಲ್ಲಿ 101ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಎರಡು ದಶಕಗಳ ಅವಧಿಯಲ್ಲಿ ತಂಡದ ಅತ್ಯುತ್ತಮ ಸಾಧನೆ ಇದಾಗಿದೆ. 2019ರಲ್ಲಿ ನಡೆಯಲಿರುವ ಎಎಫ್‌ಸಿ ಏಷ್ಯಾ ಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ತಂಡ 1–0 ಗೋಲಿ ನಿಂದ ಮ್ಯಾನ್ಮಾರ್ ಎದುರು ಗೆಲುವು ಪಡೆದಿತ್ತು. ಸೌಹಾರ್ದ ಪಂದ್ಯದಲ್ಲಿ ಕಾಂಬೋಡಿಯಾ ತಂಡವನ್ನು 3–2 ಗೋಲುಗಳಲ್ಲಿ ಮಣಿಸಿತ್ತು. ತವರಿನಲ್ಲಿ ನಡೆದ ಪಂದ್ಯದಲ್ಲಿ ಪೊರ್ಟೊರಿಕಾ ಎದುರು 4–1 ಗೋಲುಗಳಲ್ಲಿ ಜಯ ದಾಖಲಿಸಿತ್ತು. ಎರಡು ವರ್ಷಗಳ ಅವಧಿಯಲ್ಲಿ ಭಾರತ ತಂಡ ಆಡಿದ 13 ಪಂದ್ಯಗಳಲ್ಲಿ 11ರಲ್ಲಿ ಗೆಲುವು ಸಾಧಿಸಿದೆ. ಆದ್ದರಿಂದ 31 ಸ್ಥಾನಗಳ ಬಡ್ತಿ ಲಭಿಸಿದೆ.
  • 1996ರ ಫೆಬ್ರುವರಿಯಲ್ಲಿ ಭಾರತ ತಂಡ ರ್‍ಯಾಂಕಿಂಗ್‌ನಲ್ಲಿ 94ನೇ ಸ್ಥಾನದಲ್ಲಿ ಇದ್ದದ್ದು ಶ್ರೇಷ್ಠ ಸಾಧನೆಯಾಗಿದೆ. ಅದಕ್ಕೂ ಮೊದಲು 1993ರ ನವೆಂ ಬರ್‌ನಲ್ಲಿ 99ನೇ ಸ್ಥಾನದಲ್ಲಿತ್ತು. ಅದೇ ವರ್ಷದ ಅಕ್ಟೋಬರ್‌, ಡಿಸೆಂಬರ್‌ ಮತ್ತು 1996ರ ಏಪ್ರಿಲ್‌ನಲ್ಲಿ ನೂರನೇ ಸ್ಥಾನ ಹೊಂದಿತ್ತು. ಏಷ್ಯಾದ ತಂಡಗಳ ರ್‍ಯಾಂಕಿಂಗ್‌ನಲ್ಲಿ ಭಾರತ 11ನೇ ಸ್ಥಾನದಲ್ಲಿದೆ.
  • ಕಾನ್ಸ್‌ಟಂಟೈನ್ ಅವರು ಕೋಚ್ ಆಗಿ ನೇಮಕಗೊಂಡಾಗ ಭಾರತ ತಂಡ 171ನೇ ಸ್ಥಾನದಲ್ಲಿತ್ತು. ಬಳಿಕ ಆಡಿದ ಮೊದಲ ಪಂದ್ಯದಲ್ಲೇ 2–0 ಗೋಲು ಗಳಲ್ಲಿ ನೇಪಾಳ ಎದುರು ಜಯ ದಾಖಲಿ ಸಿತ್ತು. ಇದೇ ವರ್ಷದ ಜೂನ್ 7ರಂದು ಭಾರತ ತಂಡ ಲೆಬನಾನ್‌ ವಿರುದ್ಧ ಸೌಹಾರ್ದ ಪಂದ್ಯ ಆಡಲಿದೆ.[೧೪]

ಏಷ್ಯಾ ಕಪ್‌ ಅರ್ಹತಾ ಸುತ್ತಿನ ಫುಟ್‌ಬಾಲ್ ೨೦೧೭ ಬದಲಾಯಿಸಿ

  • 12 Apr, 2017;
  • ಪ್ಯಾಂಗ್ಯಾಂಗ್ : ಮೊದಲ ಮೂರೂ ಪಂದ್ಯಗಳಲ್ಲಿ ಸೋಲು ಕಂಡಿದ್ದ ಭಾರತ ಮಹಿಳಾ ತಂಡ ಎಎಫ್‌ಸಿ ಏಷ್ಯಾ ಕಪ್‌ ಫುಟ್‌ಬಾಲ್‌ ಟೂರ್ನಿಯ ತನ್ನ ಕೊನೆಯ ಪಂದ್ಯದಲ್ಲಿ ಗೆಲುವು ಪಡೆದಿದೆ. ೧೧-೪-೨೦೧೭ ಮಂಗಳವಾರ ನಡೆದ ಹಣಾಹಣಿ ಯಲ್ಲಿ ಭಾರತ 2–0 ಗೋಲುಗಳಿಂದ ಹಾಂಕಾಂಗ್ ತಂಡವನ್ನು ಮಣಿಸಿತು. ಸುಷ್ಮಿತಾ ಮಲಿಕ್‌ 68ನೇ ನಿಮಿಷ ದಲ್ಲಿ ಮೊದಲ ಗೋಲು ಗಳಿಸಿದರೆ, ರತನಬಾಲಾ ದೇವಿ 70ನೇ ನಿಮಿಷದಲ್ಲಿ ತಂಡಕ್ಕೆ ಎರಡನೇ ಗೋಲು ತಂದು ಕೊಟ್ಟು ಗೆಲುವಿಗೆ ಕಾರಣರಾದರು. ಇದರೊಂದಿಗೆ ಟೂರ್ನಿಯಲ್ಲಿ ಒಂದು ಗೆಲುವಿನೊಂದಿಗೆ ತಂಡ ತನ್ನ ಹೋರಾಟ ಮುಗಿಸಿತು.
  • ಆರಂಭದ ಮೂರು ಪಂದ್ಯಗಳಲ್ಲಿ ಭಾರತ ತಂಡ ಉತ್ತರ ಕೊರಿಯಾ, ದಕ್ಷಿಣ ಕೊರಿಯಾ ಮತ್ತು ಉಜ್ಬೇಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಸೋತಿದ್ದಾಗಲೇ ಟೂರ್ನಿಯಿಂದ ಹೊರಬಿದ್ದಿತ್ತು. ‘ಬಿ’ ಗುಂಪಿನಲ್ಲಿರುವ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ಮೂರು ಪಾಯಿಂಟ್ಸ್ ಸಂಗ್ರಹಿಸಿತು.[೧೫]

17 ವರ್ಷದ ಒಳಗಿನವರ ವಿಶ್ವ ಟೂರ್ನಿ 2017 ಬದಲಾಯಿಸಿ

 
Main Stand of the Indira Gandhi Athletic Stadium, Guwahati

17 Apr, 2017

  • ಫಿಫಾ ವಿಶ್ವಕಪ್‌ ಫುಟ್‌ಬಾಲ್‌ನಂಥ ಪ್ರತಿಷ್ಠಿತ ಟೂರ್ನಿಯಲ್ಲಿ ಆಡುವುದು ಸಣ್ಣ ವಿಷಯವೇನಲ್ಲ. ಇದೇ ವರ್ಷದ ಅಕ್ಟೋಬರ್‌ನಲ್ಲಿ ನಡೆಯಲಿರುವ 17 ವರ್ಷದ ಒಳಗಿನವರ ವಿಶ್ವ ಟೂರ್ನಿಯಲ್ಲಿ ಭಾಗವಹಿಸಲು ಆತಿಥೇಯ ರಾಷ್ಟ್ರ ಎನ್ನುವ ಕಾರಣಕ್ಕಾಗಿ ಭಾರತಕ್ಕೆ ಮೊದಲ ಬಾರಿಗೆ ಅವಕಾಶ ಲಭಿಸಿದೆ. ಇದು ನಮ್ಮ ದೇಶದ ಫುಟ್‌ಬಾಲ್‌ ಇತಿಹಾಸದಲ್ಲಿ ಸ್ಮರಣೀಯವಾಗಿ ಉಳಿಯುವ ಸಂದರ್ಭ.
  • ಫುಟ್‌ಬಾಲ್‌ನಲ್ಲಿ 1930ರಿಂದ ಸೀನಿಯರ್‌ ವಿಶ್ವಕಪ್ ಟೂರ್ನಿ ನಡೆಯುತ್ತಿದೆ. ವಿವಿಧ ವಯೋಮಿತಿಯೊಳಗಿನ ವಿಶ್ವಕಪ್‌ ಟೂರ್ನಿಗಳು ಹಿಂದೆ ಸಾಕಷ್ಟು ನಡೆದಿವೆ. 32 ವರ್ಷಗಳಿಂದ 17 ವರ್ಷದ ಒಳಗಿನವರ ವಿಶ್ವಕಪ್‌ ಕೂಡ ಜರುಗುತ್ತಿದೆ. ಈ ಟೂರ್ನಿಯಲ್ಲಿ ಭಾರತ ಒಮ್ಮೆಯೂ ಆಡುವ ಅರ್ಹತೆ ಪಡೆದುಕೊಂಡಿಲ್ಲ.
  • ಭಾರತದಲ್ಲಿ ಮೊದಲ ಬಾರಿಗೆ 17 ವರ್ಷದ ಒಳಗಿನವರ ವಿಶ್ವಕಪ್‌ ಆಯೋಜನೆಯಾಗಿದೆ. ಇದೇ ವರ್ಷದ ಅಕ್ಟೋಬರ್‌ 6ರಿಂದ 28ರ ವರೆಗೆ ಟೂರ್ನಿ ನಡೆಯಲಿದೆ. 24 ತಂಡಗಳು ಭಾಗವಹಿಸಲಿದ್ದು ಆರು ನಗರಗಳಲ್ಲಿ ಪಂದ್ಯಗಳು ಜರುಗಲಿವೆ.[೧೬]

ಏಷ್ಯಾ ಕಪ್ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ ೨೦೧೭ ಬದಲಾಯಿಸಿ

  • ಅರ್ಹತಾ ಸುತ್ತಿನ ಪಂದ್ಯಗಳು
  • ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ನ ನಿಶುಕುಮಾರ್ ಸೇರಿದಂತೆ 22 ವರ್ಷದೊಳಗಿನ ಎಂಟು ಮಂದಿ ಆಟಗಾರರನ್ನು ಏಷ್ಯಾ ಕಪ್ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನ ಪಂದ್ಯದ ಸಂಭಾವ್ಯ ತಂಡಕ್ಕೆ ಆಯ್ಕೆ ಮಾಡಲಾಗಿದೆ.
  • ಸಂಭಾವ್ಯ ತಂಡ–
  • ಗೋಲ್‌ಕೀಪರ್‌ಗಳು: ಗುರುಪ್ರೀತ್‌ ಸಿಂಗ್‌ ಸಂಧು, ಸುಬ್ರತಾ ಪಾಲ್‌, ದೇಬ್‌ಜಿತ್ ಮಜುಮ್‌ದಾರ್‌, ಅಮರಿಂದರ್‌ ಸಿಂಗ್‌, ಆಲ್ಬಿನೊ ಗೋ ಮ್ಸ್‌, ವಿಶಾಲ್ ಕೇತ್‌;
  • ಡಿಫೆಂಡರ್‌ ಗಳು: ಪ್ರೀತಮ್ ಕೊತಾಲ್‌, ನಿಶು ಕುಮಾರ್‌, ಅರ್ಣಾಬ್ ಮೊಂಡಲ್‌, ಸಂದೇಶ್ ಜಿಂಗಾನ್‌, ಅನಾಸ್ ಎಡ ತೋಡಿಕ, ಚಿಂಗ್ಲೆನ್‌ಸಾನಾ ಸಿಂಗ್‌, ಲಾಲ್‌ರುತಾರ, ಫುಲ್ಗಾಂಕೊ ಕಾರ್ಡೊಜೊ, ಸುಭಾಷಿಶ್‌ ಬೋಸ್‌, ನಾರಾಯಣ್ ದಾಸ್‌, ಜೆರಿ ಲಾಲ್‌ರಿನ್ಜುವಾಲ;
  • ಮಿಡ್‌ಫೀಲ್ಡರ್ಸ್‌: ಜಾಕಿಚಾಂದ್‌ ಸಿಂಗ್‌, ಉದಾಂತ ಸಿಂಗ್‌, ಲಾಲ್‌ದನ್‌ಮಾವ್ಯಾ ರಾಲ್ಟೆ, ಸೇತ್ಯಾಸೇನ್ ಸಿಂಗ್‌, ಯೂಜಿನೆಸನ್‌ ಲಿಂಗ್ಡೊ, ರೋಲಿ ನ್‌ ಬೋರ್ಜ್‌, ಕೆವಿನ್ ಲೋಬೊ, ಮಹ ಮ್ಮದ್ ರಫೀಕ್‌, ಧನ್‌ಪಾಲ್‌ ಗಣೇಶ, ಮಿಲನ್ ಸಿಂಗ್‌, ಐಸಾಕ್ ವನ್‌ಮಲ್‌ ಸಾವ್ಮ, ಹಲಿಚರಣ್‌ ನರ್ಜರಿ, ಬಿಕಾಸ್ ಜೈರು, ಫಾರ್ವರ್ಡ್‌
  • ಆಟಗಾರರು: ಸುನಿಲ್‌ ಛೆಟ್ರಿ, ಜೆಜೆ ಲಾಲ್‌ಪೆಖುಲಾ, ಡ್ಯಾನಿಯಲ್‌ಲಾಹ್ಲಿಂಪುಯಾ, ರಾಬಿನ್‌ ಸಿಂಗ್‌, ಸಿ.ಕೆ.ವಿನೀತ್‌.[೧೭]

96ನೇ ಸ್ಥಾನಕ್ಕೆ ಏರಿಕೆ ಬದಲಾಯಿಸಿ

  • 6 Jul, 2017
  • ಭಾರತ ಫುಟ್‌ಬಾಲ್‌ ತಂಡ ಅಂತರರಾಷ್ಟ್ರೀಯ ಫುಟ್‌ಬಾಲ್‌ ಒಕ್ಕೂಟ(ಫಿಫಾ) ಬಿಡುಗಡೆ ಮಾಡಿರುವ ನೂತನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 96ನೇ ಸ್ಥಾನಕ್ಕೆ ಏರಿಕೆ ಕಂಡಿದ್ದು, ಇದು ಕಳೆದ ಎರಡು ದಶಕಗಳಲ್ಲಿ ತಂಡ ಹೊಂದಿದ ಅತ್ಯುತ್ತಮ ಶ್ರೇಯಾಂಕ ಎನಿಸಿದೆ. ಭಾರತ ಇತ್ತೀಚೆಗೆ ಆಡಿದ 15 ಪಂದ್ಯಗಳ ಪೈಕಿ 13ರಲ್ಲಿ ಜಯ ಸಾಧಿಸಿರುವುದು ರ‍್ಯಾಂಕಿಂಗ್‌ ಏರಿಕೆ ಕಾರಣವಾಗಿದೆ. ಸದ್ಯ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 23ನೇ ಸ್ಥಾನದಲ್ಲಿರುವ ಇರಾನ್‌, ಏಷ್ಯಾ ತಂಡಗಳಲ್ಲಿ ಅತ್ಯುತ್ತಮ ಸ್ಥಾನ ಹೊಂದಿರುವ ತಂಡ ಎನಿಸಿದ್ದು, ಈ ಸಾಲಿನಲ್ಲಿ ಭಾರತ 12ನೇ ಸ್ಥಾನ ಗಳಿಸಿದೆ.‘ಎರಡು ವರ್ಷಗಳ ಹಿಂದೆ 173ನೇ ಸ್ಥಾನದಲ್ಲಿತ್ತು[೧೮]
  • ವಿಶ್ವ ಚಾಂಪಿಯನ್‌ ಜರ್ಮನಿ ತಂಡ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಕಾನ್ಫೆಡರೇಷನ್‌ ಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಜರ್ಮನಿ ತಂಡ ಒಟ್ಟು ಪಾಯಿಂಟ್ಸ್‌ ಅನ್ನು 1609ಕ್ಕೆ ಹೆಚ್ಚಿಸಿಕೊಂಡಿದ್ದು ಬ್ರೆಜಿಲ್‌ ತಂಡವನ್ನು ಹಿಂದಿಕ್ಕಿದೆ. ಬ್ರೆಜಿಲ್‌ ಖಾತೆಯಲ್ಲಿ 1603 ಪಾಯಿಂಟ್ಸ್‌ ಇವೆ. ಅರ್ಜೆಂಟೀನಾ (1413 ಪಾಯಿಂಟ್ಸ್‌) ತಂಡ ಮೂರನೇ ಸ್ಥಾನದಲ್ಲಿದ್ದು, ಪೋರ್ಚುಗಲ್‌ (1332) ಮತ್ತು ಸ್ವಿಟ್ಜರ್‌ಲೆಂಡ್‌ (1329) ತಂಡಗಳು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿವೆ. ಪೋಲೆಂಡ್‌, ಚಿಲಿ, ಕೊಲಂಬಿಯಾ, ಫ್ರಾನ್ಸ್‌ ಮತ್ತು ಬೆಲ್ಜಿಯಂ ತಂಡಗಳು ಕ್ರಮವಾಗಿ ಆರರಿಂದ ಹತ್ತನೇ ಸ್ಥಾನಗಳಲ್ಲಿವೆ.[೧೯]

ನೋಡಿ ಬದಲಾಯಿಸಿ


ಉಲ್ಲೇಖಗಳು ಬದಲಾಯಿಸಿ

  1. "BBC SPORT | Football | World Football | What's holding back Indian football?". BBC News. 2004-07-30. Retrieved 2012-08-27.
  2. Sankalp India Foundation. "In which year did India qualify for the soccer world cup? | Sankalp India Foundation". Sankalpindia.net. Retrieved 2012-08-27.
  3. "All India Football Federation — About AIFF — State Associations". AIFF. Retrieved 2012-03-25.
  4. "FICCI announces the Winners of India Sports Awards for 2014". IANS. news.biharprabha.com. Retrieved 14 February 2014.
  5. "ಬ್ರಿಕ್ಸ್‌ ಫುಟ್‌ಬಾಲ್‌: ಬ್ರೆಜಿಲ್‌ಗೆ ಪ್ರಶಸ್ತಿ16 Oct, 2016". Archived from the original on 2016-10-18. Retrieved 2016-10-16.
  6. "ಐತಿಹಾಸಿಕ ಜಯದ ಮೇಲೆ ಬಿಎಫ್‌ಸಿ ಕಣ್ಣು". Archived from the original on 2016-11-05. Retrieved 2016-11-05.
  7. http://timesofindia.indiatimes.com/live-afc-cup-final-bengaluru-fc-v-iraq-air-force-club/liveblog/55255849.cms
  8. ಬಿಎಫ್‌ಸಿಗೆ 0–1 ಗೋಲಿನಿಂದ ವೀರೋಚಿತ ಸೋಲು
  9. 18/07/2016:prajavani:ಫುಟ್‌ಸಾಲ್: ರೊನಾಲ್ಡಿನೊ ಮಿಂಚು
  10. ೧೦.೦ ೧೦.೧ "ಆರ್ಕೈವ್ ನಕಲು". Archived from the original on 2016-12-29. Retrieved 2017-01-16.
  11. ಫುಟ್‌ಬಾಲ್‌: ಭಾರತಕ್ಕೆ ಸೋಲು;ಪಿಟಿಐ;21 Jan, 2017
  12. All India Football Federation. AIFF. 18 March 2017. Retrieved 18 March 2017.
  13. ಉತ್ತರ ಕೊರಿಯಾಕ್ಕೆ ಸೋತ ಭಾರತ;4 Apr, 2017
  14. ಫಿಫಾ ರ್‍ಯಾಂಕಿಂಗ್‌;101ನೇ ಸ್ಥಾನಕ್ಕೇರಿದ ಭಾರತ;7 Apr, 2017
  15. ಭಾರತದ ವನಿತೆಯರಿಗೆ ಗೆಲುವುಪಿಟಿಐ;12 Apr, 2017
  16. "ಮೊದಲ ವಿಶ್ವಕಪ್‌ನ ಪುಳಕ...;ಪ್ರಮೋದ ಜಿ.ಕೆ.17 Apr, 2017". Archived from the original on 2017-04-28. Retrieved 2017-04-17.
  17. ಭಾರತ ಸಂಭಾವ್ಯ ಫುಟ್‌ಬಾಲ್‌ ತಂಡ14 May, 2017[ಶಾಶ್ವತವಾಗಿ ಮಡಿದ ಕೊಂಡಿ]
  18. http://www.prajavani.net/news/article/2017/07/06/504188.html
  19. http://www.prajavani.net/news/article/2017/07/07/504266.html

ಉಲ್ಲೇಖ ಬದಲಾಯಿಸಿ