ಸುನಿತಾ ಜೈನ್ ಅವರು ಒಬ್ಬ ಭಾರತೀಯ ವಿದ್ವಾಂಸರು, ಕಾದಂಬರಿಕಾರರು, ಕಥೆಗಾರರು ಹಾಗೂ ಇಂಗ್ಲಿಷ್ ಮತ್ತು ಹಿಂದಿ ಸಾಹಿತ್ಯದ ಕವಯತ್ರಿಯಾಗಿದ್ದಾರೆ. ಇವರು ದೆಹಲಿಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಾಜಿ ಪ್ರಾಧ್ಯಾಪಕರಾಗಿದ್ದಾರೆ ಹಾಗೂ ಹ್ಯುಮಾನಿಟೀಸ್ ಮತ್ತು ಸೋಶಿಯಲ್ ಸೈನ್ಸ್ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಅವರು ೬೦ ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಅನೇಕ ಜೈನ ಬರಹಗಳನ್ನು ಇಂಗ್ಲಿಷ್ಗೆ ಭಾಷಾಂತರಿಸಿದ್ದಾರೆ.[]

ಸುನಿತಾ ಜೈನ್
Born13 July 1940
Died11 December 2017
ನವದೆಹಲಿ
Educationಬಿ.ಎ, ಎಂ.ಎ, ಪಿ.ಎಚ್.ಡಿ.
Alma materಇಂದ್ರಪ್ರಸ್ಥ ಕಾಲೇಜ್ (BA);
ಸ್ಟೋನಿ ಬ್ರೂಕ್ ಯೂನಿವರ್ಸಿಟಿ (MA);
ನೆಬ್ರಸ್ಕಾ ವಿಶ್ವವಿದ್ಯಾಲಯ (Ph.D)
Occupation(s)ಕವಯತ್ರಿ, ಕಥೆಗಾರರು, ಕಾದಂಬರಿಕಾರರು, ವಿದ್ವಾಂಸರು, ಪ್ರೊಫೆಸರ್
Years activeSince 1962
Spouseಅದೀಶ್ವರ್ ಲಾಲ್ ಜೈನ್
Childrenಅನು.ಕೆ.ಮಿತ್ತಲ್, ರವಿ.ಕೆ.ಜೈನ್, ಶಶಿ.ಕೆ.ಜೈನ್
Awardsಪದ್ಮಶ್ರೀ
ವ್ರೈಲ್ಯಾಂಡ್ (1969)
ಮೇರಿ ಸ್ಯಾಂಡೋಜ್ ಪ್ರೈರೀ ಸ್ನೂನರ್ ಫಿಕ್ಷನ್ ಪ್ರಶಸ್ತಿ
ಉತ್ತರ ಪ್ರದೇಶ ಹಿಂದಿ ಸಂಸ್ಥಾನ ಪ್ರಶಸ್ತಿ
ದೆಹಲಿ ಹಿಂದಿ ಅಕಾಡೆಮಿ ಪ್ರಶಸ್ತಿ
ನಿರಾಲಾ ನಮಿತ್ ಪ್ರಶಸ್ತಿ
ಸಾಹಿತ್ಯಕಾರ್ ಸಮ್ಮಾನ್
Mahadevi Varma Samman
ಪ್ರಭಾ ಖೇತಾನ್ ಪ್ರಶಸ್ತಿ
ಬ್ರಾಹ್ಮಿ ಸುಂದರಿ ಪ್ರಶಸ್ತಿ
ಸುಲೋಚಿನಿ ಬರಹಗಾರ ಪ್ರಶಸ್ತಿ
ಯುಪಿ ಸಾಹಿತ್ಯ ಭೂಷಣ ಪ್ರಶಸ್ತಿ
ವ್ಯಾಸ್ ಸಮ್ಮಾನ ಪ್ರಶಸ್ತಿ (2015)
WebsiteWebsite

ಸುನಿತಾ ಜೈನ್ ಅವರು ಜುಲೈ ೧೩, ೧೯೪೦ ರಂದು ಹರಿಯಾಣಅಂಬಾಲ ಜಿಲ್ಲೆಯಲ್ಲಿ, ಜೈನ ಕುಟುಂಬದಲ್ಲಿ ಜನಿಸಿದರು.[]

ವಿದ್ಯಾಭ್ಯಾಸ

ಬದಲಾಯಿಸಿ

ಸುನಿತಾ ಜೈನ್ ಅವರು ನ್ಯೂ ಯಾರ್ಕ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಅಮೇರಿಕನ್ ಇಂಗ್ಲಿಷ್ ಸಾಹಿತ್ಯದ ಕುರಿತು ತನ್ನ ಸ್ನಾತಕೋತ್ತರ ಅಧ್ಯಯನವನ್ನು ಮಾಡಿದರು. ೧೯೬೮ ರಲ್ಲಿ ಅವರು ನೆಬ್ರಸ್ಕಾಗೆ ಸ್ಥಳಾಂತರಗೊಂಡರು. ಅಲ್ಲಿ ಅವರು ನೆಬ್ರಸ್ಕಾ ವಿಶ್ವವಿದ್ಯಾಲಯದ ಡಾಕ್ಟರೇಟ್ ಡಿಗ್ರಿ (ಪಿ.ಎಚ್.ಡಿ) ಪಡೆದರು.ಇಂದ್ರಪ್ರಸ್ಥ ಕಾಲೇಜಿನಲ್ಲಿ ಮತ್ತು ಅರಬಿಂದೋ ಕಾಲೇಜಿನಲ್ಲಿ ಕಿರು ಬೋಧನೆ ನಡೆಸಿದ ಅವರು ನಂತರ ೧೯೭೨ ರಲ್ಲಿ ಭಾರತಕ್ಕೆ ಮರಳಿ ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಸೇರಿಕೊಂಡರು. ಅಲ್ಲಿ ಅವರು ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥರಾದರು. ನಂತರ ಅವರು ೨೦೦೨ ರಲ್ಲಿ ಇಂಗ್ಲಿಷ್ ಪ್ರೊಫೆಸರ್ ಆದರು. ದೆಹಲಿಯ ಐಐಟಿಯಲ್ಲಿದ್ದಾಗ, ಅವರು ಮಾನವಶಾಸ್ತ್ರ ವಿಭಾಗದ ವಿಸ್ತರಣೆಯ ಕುರಿತು ಪ್ರೋತ್ಸಾಹ ನೀಡುತ್ತಿದ್ದರು. ಅಲ್ಲದೆ ಮಾಸ್ಟರ್ಸ್ ಮತ್ತು ಪಿ.ಎಚ್.ಡಿ ಕಾರ್ಯಕ್ರಮವನ್ನು ಸೇರಿಸಲು ಪದವಿ ಕಾರ್ಯಕ್ರಮಗಳನ್ನು ವಿಶಾಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.[]

ಬರವಣಿಗೆ

ಬದಲಾಯಿಸಿ

ಸುನಿತಾ ಜೈನ್ ಅವರು ೨೨ ನೇ ವಯಸ್ಸಿನಲ್ಲಿ ಬರವಣಿಗೆಯನ್ನು ಪ್ರಾರಂಭಿಸಿದರು. ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಕಿರು-ಕಥೆಗಳನ್ನು, ಕಾದಂಬರಿಗಳನ್ನು ಹಾಗೂ ಕವಿತೆಗಳನ್ನು ಪ್ರಕಟಿಸಿದ್ದಾರೆ. ಇವರ ಇಂಗ್ಲಿಷ್ ಕೃತಿಗಳಲ್ಲಿ ೨೦೦೦ ರಲ್ಲಿ ಪ್ರಕಟವಾದ 'ಎ ಗರ್ಲ್ ಆಫ್ ಹರ್ ಏಜ್', ೧೯೮೦ ಮತ್ತು ೧೯೮೨ ರಲ್ಲಿ ಪ್ರಕಟವಾದ 'ಎ ವುಮನ್ ಈಸ್ ಡೆಡ್' ಮತ್ತು 'ಟೈಮ್ ಅಂಡ್ ಅದರ್ ಸ್ಟೋರೀಸ್' ಮುಂತಾದ ಕಥೆಗಳನ್ನು ಒಳಗೊಂಡಿದೆ. ಅಲ್ಲದೆ, ದಿ ಮಾಂಗೋ ಟ್ರೀ (೨೦೦೨) ಮತ್ತು ಸಾಹಿತ್ಯ ವಿಮರ್ಶೆ ಆಗಿರುವ, ಜಾನ್ ಸ್ಟೈನ್ಬೆಕ್ನ ಕಾನ್ಸೆಪ್ಟ್ ಆಫ್ ಮ್ಯಾನ್: ಎ ಕ್ರಿಟಿಕಲ್ ಸ್ಟಡಿ ಆಫ್ ಹಿಸ್ ನಾವೆಲ್ಸ್ ಎಂಬ ಹೆಸರಿನಡಿಯಲ್ಲಿ ಮಕ್ಕಳಿಗಾಗಿ ಪುಸ್ತಕವೊಂದನ್ನು ಬರೆದಿದ್ದಾರೆ. ಜೈನರ ಆತ್ಮಚರಿತ್ರೆಯನ್ನು ಹಿಂದಿ ಭಾಷೆಯಲ್ಲಿ ಐದು ಕಾದಂಬರಿಗಳನ್ನು, ಐದು ಸಣ್ಣ-ಕಥೆಯ ಕವಿತೆಯನ್ನು, ಸಂಕಲನಗಳನ್ನು ಮತ್ತು ಹಲವಾರು ಸಂಪುಟಗಳ ಕವಿತೆಯ ಸಂಗ್ರಹಗಳನ್ನು ಅವರು ಬರೆದಿದ್ದಾರೆ. ಇವರ ಪುಸ್ತಕ, ಇನ್ನರ್ ಲೈಟ್ (೧೯೯೯), ಧಾರ್ಮಿಕ ಆಲೋಚನೆಗಳ ಕುರಿತಾದ ಐದು ಸಂಪುಟಗಳ ಪುಸ್ತಕವಾಗಿದೆ. ಪ್ರೇಮ್ಚಂದ್: ಎ ಲೈಫ್ ಅಂಡ್ ಲೆಟರ್ಸ್ (೧೯೯೩) ಎಂಬ ಭಾಷಾಂತರದ ಕೃತಿಯನ್ನು ಪ್ರಕಟಿಸಿದ್ದಾರೆ.[]

ಪ್ರಶಸ್ತಿಗಳು

ಬದಲಾಯಿಸಿ

ಅವರು ೧೯೬೯ ರಲ್ಲಿ ನೆಬ್ರಸ್ಕಾ ವಿಶ್ವವಿದ್ಯಾಲಯದ ದಿ ವ್ರೈಲ್ಯಾಂಡ್ ಪ್ರಶಸ್ತಿಯನ್ನು, ೧೯೭೦ ಮತ್ತು ೧೯೭೧ ರಲ್ಲಿ ಎರಡು ಬಾರಿ ಮೇರಿ ಸ್ಯಾಂಡೋಜ್ ಪ್ರೈರೀ ಸ್ನೂನರ್ ಫಿಕ್ಷನ್ ಪ್ರಶಸ್ತಿ,೧೯೭೯ ಮತ್ತು ೧೯೮೦ ರಲ್ಲಿ ಉತ್ತರ ಪ್ರದೇಶ ಹಿಂದಿ ಸಂಸ್ಥಾನ ಪ್ರಶಸ್ತಿಯನ್ನು, ೧೯೯೬ ರಲ್ಲಿ ದೆಹಲಿ ಹಿಂದಿ ಅಕಾಡೆಮಿ ಪ್ರಶಸ್ತಿ, ೨೦೦೪ ರಲ್ಲಿ ಅವರು ಪದ್ಮಶ್ರೀ ಗೌರವವನ್ನು ಪಡೆದರು.ನಿರಾಲಾ ನಮಿತ್ ಪ್ರಶಸ್ತಿ (೧೯೮೦), ಸಾಹಿತ್ಯಕಾರ್ ಸಮ್ಮಾನ್ (೧೯೯೬), ಮಹಾದೇವಿ ವರ್ಮಾ ಸಮ್ಮಾನ್ (೧೯೯೭), ಪ್ರಭಾ ಖೇತಾನ್ ಪ್ರಶಸ್ತಿ, ಬ್ರಾಹ್ಮಿ ಸುಂದರಿ ಪ್ರಶಸ್ತಿ,ಸುಲೋಚಿನಿ ಬರಹಗಾರ ಪ್ರಶಸ್ತಿ ಮತ್ತು ಯುಪಿ ಸಾಹಿತ್ಯ ಭೂಷಣ ಪ್ರಶಸ್ತಿಯನ್ನು ಪಡೆದರು. ೨೦೧೫ ರಲ್ಲಿ ಅವರು ವ್ಯಾಸ್ ಸಮ್ಮಾನನ್ನು ಕೆ.ಕೆ. ಹಿಂದಿ ಭಾಷೆಯಲ್ಲಿ ಸಾಹಿತ್ಯಿಕ ಕೆಲಸಕ್ಕಾಗಿ ಪಡೆದರು.[]

ಸುನಿತಾ ಜೈನ್ ಅವರು ಡಿಸೆಂಬರ್ ೧೧,೨೦೧೭ ರಂದು ನವದೆಹಲಿಯಲ್ಲಿ ನಿಧನರಾದರು.[]

ಸಂಗ್ರಹಗಳು

ಬದಲಾಯಿಸಿ

ಸುನೀತಾ ಜೈನ್ ಅವರ ಬರಹಗಳು, ಪ್ರಶಸ್ತಿಗಳು, ಖಾಸಗಿ ಪತ್ರಿಕೆಗಳು ಇತ್ಯಾದಿಗಳ ಸಂಗ್ರಹವು ಪ್ರೇಮ್ಚಂದ್ ಆರ್ಚೀವ್ಸ್ ಹಾಗೂ ಲಿಟರರಿ ಸೆಂಟರ್ನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ದಾಖಲೆಗಳಲ್ಲಿನ ಶಾಶ್ವತ ಸಂಗ್ರಹಣೆಯ ಭಾಗವಾಗಿದೆ.[]

ಆಯ್ದ ಇಂಗ್ಲಿಷ್ ಗ್ರಂಥಸೂಚಿಗಳು

ಬದಲಾಯಿಸಿ
  • ಸುನಿತಾ ಜೈನ್ (೧೯೭೯). ಜಾನ್ ಸ್ಟೈನ್ಬೆಕ್ಸ್ ಕಾನ್ಸೆಪ್ಟ್ ಆಫ್ ಮ್ಯಾನ್ : ಎ ಕ್ರಿಟಿಕಲ್ ಸ್ಟಡಿ ಆಫ್ ಹಿಸ್ ನಾವೆಲ್ಸ್. ನ್ಯೂ ಸ್ಟೇಟ್ಸ್ಮನ್ ಪಬ್. ಕಂ ಪು. ೧೦೧. OCLC 5945681
  • ಸುನಿತಾ ಜೈನ್ (೧೯೮೦). ಎ ವುಮನ್ ಈಸ್ ಡೆಡ್. ರೈಟರ್ಸ್ ವರ್ಕ್ಷಾಪ್, ಕಲ್ಕತ್ತಾ. ಪು. ೭೩. OCLC 612785046
  • ಸುನಿತಾ ಜೈನ್ (೧೯೮೨). ಇನಚ್ ಆಫ್ ಟೈಮ್ ಆಂಡ್ ಅದರ್ ಸ್ಟೋರೀಸ್. ವಿಕಾಸ್ ಪಬ್ಲಿಷರ್ಸ್. ಪು. ೮೩. ISBN 9780706918816.
  • ಸುನಿತಾ ಜೈನ್ (೧೯೮೬). ಟಿಲ್ಲ್ ಐ ಫೈನ್ಡ್ ಮೈಸೆಲ್ಫ್. ನವ ದೆಹಲಿ ಸ್ಟರ್ಲಿಂಗ್ ಪಬ್ಲಿಷರ್ಸ್. OCLC 568753716
  • ಸುನಿತಾ ಜೈನ್ (೨೦೦೦). ಅ ಗರ್ಲ್ ಆಫ್ ಹರ್ ಏಜ್. ಆತ್ಮ ರಾಮ್ ಮತ್ತು ಸನ್ಸ್. ಪು. ೧೦೬. ASIN B0061SI354
  • ಸುನಿತಾ ಜೈನ್ (೨೦೦೦). ಸೆನ್ಸಮ್: ಕಲೆಕ್ಟೆಡ್ ಪೋಯಮ್ಸ್ ೧೯೬೫-೨೦೦೦. ಮೈ ವರ್ಡ್! ಪ್ರೆಸ್. ಪು. ೧೫೮. OCLC 156892219.
  • ಸುನಿತಾ ಜೈನ್ (೨೦೦೨). ದಿ ಮ್ಯಾಂಗೊ ಟ್ರೀ. ಓರಿಯಂಟ್ ಬ್ಲಾಕ್ವ್ಯಾನ್. ಪು. ೨೫. ISBN 9788125022695.
  • ಸುನಿತಾ ಜೈನ್ (೨೦೦೭). ಅಮೇರಿಕನ್ ದೇಸಿ ಮತ್ತು ಇತರ ಕವನಗಳು. ರೀಡ್ ಬುಕ್ಸ್. ಪು. ೭೨. ISBN 9788190475310.
  • ಕಾಳಿದಾಸ, ಸುನಿತಾ ಜೈನ್ (ಅನುವಾದಕ) (೨೦೧೦). ಕಾನ್ಫ್ಲುಯೆನ್ಸ್ ಆಫ್ ಸೀಸನ್ಸ್. ಕಿತಭಾಘರ ಪ್ರಕಾಶನ. ಪು. ೧೮೦. ISBN 9789380146683.

ಆಯ್ದ ಹಿಂದಿ ಗ್ರಂಥಸೂಚಿಗಳು

ಬದಲಾಯಿಸಿ
  • ಸುನಿತಾ ಜೈನ್ (೧೯೭೯). ಕೌನ್ ಸಾ ಆಕಾಶಾ. ಪರಾಗ್ ಪ್ರಕಾಶನ. ಪು. ೬೦. OCLC 6864318.
  • ಸುನಿತಾ ಜೈನ್ (೧೯೮೩). ಎಕಾ ಔರ್ ದಿನ್. ಅಭಿವ್ಯಂಜನ ಮುಖ್ಯಾ ವಿತರಕ ಹಿನ್ನಿ ಬುಕ ಸಾಯಿಂತಾರ. ಪು. ೬೪. OCLC 17984763.
  • ಸುನಿತಾ ಜೈನ್ (೧೯೯೪). ಕಹಾನ್ ಮಿಲೋಗಿ ಕವಿತಾ. ಪ್ರಕಾಶನ್ ಸಂಸ್ಥಾನ. ISBN 8185830207.
  • ಸುನಿತಾ ಜೈನ್ (೧೯೯೫). ಸುನೊ ಮಧು ಕಿಶ್ವರ. ಅಯನಾ ಪ್ರಕಾಶನ. ಪು. ೯೧. ISBN 9788174080424.
  • ಸುನಿತಾ ಜೈನ್ (೧೯೯೬). ಜೇನ್ ಲಾರಾಕಿ ಪಾಗ್ಲಿ. ಸಮನಂತರಾ ಪ್ರಕಾಶನ. ಪು. ೧೫೯. OCLC 610139227.
  • ಸುನಿತಾ ಜೈನ್ ಸಂಪಾದಕ ಕೃಷ್ಣ ದೇವ್ ಶರ್ಮಾ (೨೦೦೩). ಅಬ್ ತಕ್: ಕಂಪ್ಲೀಟ್ ವರ್ಕ್ಸ್ (೮ ವಾಲ್ಯೂಮ್ ಸೆಟ್). ಸಾರ್ತಕ ಪ್ರಕಾಶನ. ISBN 8181600002.
  • ಸುನಿತಾ ಜೈನ್ (೨೦೦೬). ಪ್ರೇಮ್ ಮೈನ್ ಸ್ಟ್ರಿ. ರೆಮಾಧವ್ ಪಬ್. ಪು. ೧೦೫. ISBN 9788189850081.
  • ಮುನಿ ಕ್ಷಮಾಸಾಗರಾ, ಸುನಿತಾ ಜೈನ್ (೨೦೦೬). ಮುಕ್ತಿ. ರೆಮಾಧವ ಪಬ್ಲಿಕೇಷನ್ಸ್. ಪು. ೧೨೮. OCLC 608132502.
  • ಸುನಿತಾ ಜೈನ್ (೨೦೦೭). ಬರೀಶ್ ಮೇನ್ ದಿಲ್ಲಿ. ಮೆಧಾ ಪುಸ್ತಕಗಳು. ಪು. ೯೬. ISBN 8181662091.
  • ಸುನಿತಾ ಜೈನ್ (೨೦೦೮). ಕ್ಷಮಾ. ರೆಮಾಧವ್ ಪಬ್ಲಿಕೇಷನ್ಸ್. ಪು. ೮೦. ISBN 9788189914684.
  • ಸುನಿತಾ ಜೈನ್ (೨೦೧೨). ಹುಯಿ ಸಂಜ್ ಕಿ ಬೇರ್. ರೆಮಾಧವ್ ಪಬ್ಲಿಕೇಷನ್ಸ್. ಪು. ೯೬. ISBN 9789381297032.

ಉಲ್ಲೇಖಗಳು

ಬದಲಾಯಿಸಿ