ವಿದ್ವಾಂಸ
ವಿದ್ವಾಂಸ (ಕೋವಿದ) ಎಂದರೆ ತನ್ನನ್ನು ಗಂಭೀರ ಅಧ್ಯಯನ ಚಟುವಟಿಕೆಗಳಲ್ಲಿ ಸಮರ್ಪಿಸಿಕೊಳ್ಳುವ ವ್ಯಕ್ತಿ, ವಿಶೇಷವಾಗಿ ತಾನು ಪಾಂಡಿತ್ಯ ಪಡೆದುಕೊಂಡಿರುವ ಕ್ಷೇತ್ರದ ಅಧ್ಯಯನದಲ್ಲಿ. ಈ ಪದವು ಸಾಮಾನ್ಯವಾಗಿ ಒಂದು ಸಂಶೋಧನಾ ಕ್ಷೇತ್ರದಲ್ಲಿ ಪಾಂಡಿತ್ಯ ಗಳಿಸಿರುವವರಿಗೆ ಅನ್ವಯಿಸುತ್ತದೆ. ವಿದ್ವಾಂಸನು ಹೆಚ್ಚಿನ ಬೌದ್ಧಿಕ ಸಾಮರ್ಥ್ಯವನ್ನು ಹೊಂದಿರುವ ವ್ಯಕ್ತಿ, ಮತ್ತು ಸ್ವತಂತ್ರ ಚಿಂತಕ ಹಾಗೂ ಸ್ವತಂತ್ರ ಕಾರ್ಯಭಾಗಿಯಾಗಿರುತ್ತಾನೆ. ಅವನ ವಿಚಾರಗಳು ಇತರರಿಗಿಂತ ಭಿನ್ನವಾಗಿರುತ್ತವೆ ಮತ್ತು ಅವನು ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳುವ ತನ್ನ ಅನ್ವೇಷಣೆಯಲ್ಲಿ ಹಟ ಸ್ವಭಾವವನ್ನು ಹೊಂದಿರುತ್ತಾನೆ. ಅವನು ವ್ಯವಸ್ಥಿತನಾಗಿದ್ದು, ಬೇಷರತ್ತಾದ ಪ್ರಾಮಾಣಿಕತೆಯನ್ನು ಹೊಂದಿರುತ್ತಾನೆ. ಅವನು ಕೆಲವು ಗಾಢನಂಬಿಕೆಗಳನ್ನು ಹೊಂದಿರುತ್ತಾನೆ ಮತ್ತು ಅವುಗಳನ್ನು ಬೆಂಬಲಿಸಲು ಒಬ್ಬನೇ ನಿಲ್ಲುತ್ತಾನೆ.[೧] ವಿದ್ವಾಂಸರು ವಿದ್ವತ್ತು ಅಥವಾ ಪಾಂಡಿತ್ಯಪೂರ್ಣ ವಿಧಾನವನ್ನು ಅವಲಂಬಿಸಿರಬಹುದು, ಅಂದರೆ ವಿದ್ವಾಂಸರು ವಿಶ್ವದ ಬಗ್ಗೆ ತಮ್ಮ ವಾದಗಳನ್ನು ಸಾಧ್ಯವಾದಷ್ಟು ಮಾನ್ಯ ಹಾಗೂ ವಿಶ್ವಾಸಾರ್ಹವಾಗಿ ಮಾಡಲು, ಮತ್ತು ಪಾಂಡಿತ್ಯಪೂರ್ಣ ಜನರಿಗೆ ತಿಳಿಯಪಡಿಸಲು ಬಳಸುವ ತತ್ವಗಳು ಹಾಗೂ ಅಭ್ಯಾಸಗಳ ಸಮೂಹ.
ಉಲ್ಲೇಖಗಳು
ಬದಲಾಯಿಸಿ- ↑ Afaf Ibrahim Meleis, Theoretical Nursing: Development and Progress (2011), p. 17.