ಸಿಮ್ಯುಲೇಶನ್ (=ಅನುಕರಣೆ)
ಸಿಮ್ಯುಲೇಶನ್: ಕೆಲವು ನೈಜ ಸಂಗತಿ, ಸ್ಥಿತಿಗತಿಗಳು ಅಥವಾ ಪ್ರಕ್ರಿಯೆಯ ತದ್ರೂಪವನ್ನು ಸೃಸ್ಟಿಸಿ ಅಂಥ ಸನ್ನಿವೇಶದಲ್ಲಿ ವಾಸ್ತವದ ಕಾರ್ಯ ನಿರ್ವಹಣೆ ಮಾಡುವುದಕ್ಕೆ ಸಿಮ್ಯುಲೇಶನ್(=ಅನುಕರಣೆ) ಎನ್ನುತ್ತಾರೆ. ಒಂದು ವಸ್ತುವಿನ ಪ್ರತಿಕೃತಿ ಮಾಡುವುದೆಂದರೆ ಆಯ್ದ ಭೌತಿಕ ಅಥವಾ ಅಮೂರ್ತ ವ್ಯವಸ್ಥೆಯ ಪ್ರಮುಖ ಲಕ್ಷಣಗಳು ಅಥವಾ ನಡವಳಿಕೆಗಳನ್ನು ಪ್ರತಿನಿಧಿಸುವುದು ಎಂಬ ಅರ್ಥವನ್ನು ನೀಡುವುದು.
ನೈಸರ್ಗಿಕ ವ್ಯವಸ್ಥೆಗಳು ಅಥವಾ ಮಾನವ ವ್ಯವಸ್ಥೆಗಳ ಮಾದರಿಯ ಕಾರ್ಯನಿರ್ವಹಣೆಯ ಕುರಿತು ಅರಿವನ್ನು ಗಳಿಸುವುದೂ ಸೇರಿದಂತೆ ಸಿಮ್ಯುಲೇಶನ್ ಅನ್ನು ಹಲವಾರು ಸಂದರ್ಭಗಳಲ್ಲಿ ಬಳಸಲಾಗುವುದು.[೧] ಸುರಕ್ಷತಾ ಇಂಜಿನಿಯರಿಂಗ್, ಪರೀಕ್ಷೆ, ತರಬೇತಿ ಮತ್ತು ಶಿಕ್ಷಣದಂತಹ ಇತರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಣೆಯ ಗರಿಷ್ಠ ಸಾಮರ್ಥ್ಯ ಪಡೆಯಲು,ತಂತ್ರಜ್ಞಾನದ ಸಿಮ್ಯುಲೇಶನ್ ಅನ್ನು ಬಳಕೆ ಮಾಡಲಾಗುತ್ತದೆ. ಉಂಟಾಗಬಹುದಾದ ವಾಸ್ತವ ಪರಿಣಾಮವೇನು ಎಂಬುದನ್ನು ಪರ್ಯಾಯ ಪರಿಸ್ಥಿತಿಯೊಂದರಲ್ಲಿ ತಿಳಿಯಲೂ ಸಿಮ್ಯುಲೇಶನ್ ನೆರವಾಗುತ್ತದೆ.
ಪ್ರಮುಖ ಲಕ್ಷಣಗಳು ಮತ್ತು ನಡವಳಿಕೆಗಳ ಆಯ್ಕೆಯ ಕುರಿತು ಸೂಕ್ತ ಮೂಲ ಮಾಹಿತಿಯನ್ನು ಸ್ವಾಧೀನಪಡಿಸಿಕೊಳ್ಳುವುದು, ಸರಳವಾದ ಅಂದಾಜು/ಊಹೆಗಳನ್ನು ಬಳಸುವುದು ಮತ್ತು ಸಿಮ್ಯುಲೇಶನ್‌ನಲ್ಲಿನ ಊಹೆಗಳು ಮತ್ತು ಸಿಮ್ಯುಲೇಶನ್‌ನಿಂದ ದೊರೆತ ಫಲಿತಾಂಶದ ವಸ್ತುನಿಷ್ಠತೆ ಮತ್ತು ವಾಯಿದೆಯು ಸಿಮ್ಯುಲೇಶನ್‌ಗಿರುವ ಪ್ರಮುಖ ಸಮಸ್ಯೆಗಳಾಗಿವೆ.
ವರ್ಗೀಕರಣ ಮತ್ತು ಪರಿಭಾಷೆ
ಬದಲಾಯಿಸಿಈ ಹಿಂದೆ ಬೃಹತ್ ಪ್ರಮಾಣದಲ್ಲಿ ಸ್ವತಂತ್ರವಾಗಿ ಅಭಿವೃದ್ಧಿಪಡಿಸಲಾದ ವಿವಿಧ ಕ್ಷೇತ್ರಗಳಲ್ಲಿ ಬಳಸಲಾದ ಸಿಮ್ಯುಲೇಶನ್ ಈಗ ಇತಿಹಾಸ. ಆದರೆ 20ನೇ ಶತಮಾನದಲ್ಲಿ ನಡೆದ ವ್ಯವಸ್ಥೆಗಳ ಸಿದ್ಧಾಂತ ಮತ್ತು ಸೈಬರ್ನೆಟಿಕ್ಸ್‌ನ ಅದ್ಯಯನದಿಂದಾಗಿ, ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚಳವಾದ ಕಂಪ್ಯೂಟರ್ ಬಳಕೆ ಸಿಮ್ಯುಲೇಶನ್ ಅನ್ನು ಸ್ವಲ್ಪ ಮಟ್ಟಿಗೆ ಏಕರೂಪಕ್ಕೆ ತಂದಿತು,ಮತ್ತು ವ್ಯವಸ್ಥಿಯ ಪರಿಕಲ್ಪನೆಯನ್ನು ಇನ್ನಷ್ಟು ಕ್ರಮಬದ್ಧಗೊಳಿಸಿತು.
ನೈಜ ವಸ್ತುಗಳಿಗೆ ಭೌತಿಕವಾದ ಬದಲಿಯನ್ನು ಬಳಸಿದಾಗ ಅದು ಭೌತಿಕ ಸಿಮ್ಯುಲೇಶನ್ ಅನಿಸಿಕೊಳ್ಳುತ್ತದೆ. (ಕೆಲವು ವಲಯಗಳಲ್ಲಿ[೨] ಈ ಪದವನ್ನು ಭೌತಶಾಸ್ತ್ರದ ಆಯ್ದ ನಿಯಮಗಳ ಕಂಪ್ಯೂಟರ್ ಸಿಮ್ಯುಲೇಶನ್ ಮಾದರಿಗೆ ಬಳಸುವರು. ಆದರೆ ಈ ಲೇಖನದಲ್ಲಿ ಹಾಗೆ ಬಳಸಿಲ್ಲ). ನೈಜ ವಸ್ತು ಅಥವಾ ವ್ಯವಸ್ಥೆಗಿಂತ ಚಿಕ್ಕ ಆಕಾರದ್ದೂ ಅಥವಾ ಅಗ್ಗದ್ದೂ ಎಂಬ ಕಾರಣಕ್ಕಾಗಿ ಇಂತಹ ಭೌತಿಕ ವಸ್ತುಗಳನ್ನು ಕೆಲವೊಮ್ಮೆ ಆಯ್ಕೆ ಮಾಡಲಾಗುತ್ತವೆ.
ಪರಸ್ಪರ ಕಾರ್ಯ ನಿರ್ವಹಿಸುವ ಸಿಮ್ಯುಲೇಶನ್ ವಿಶೇಷ ರೀತಿಯ ಭೌತಿಕ ಸಿಮ್ಯುಲೇಶನ್ ಆಗಿದೆ. ಕೆಲವೊಮ್ಮೆ ಇದನ್ನು ಮಾನವನ ನಿರ್ದಿಷ್ಟ ಆದೇಶ ಸರಣಿಯ ಸಿಮ್ಯುಲೇಶನ್ ಎಂದು ಹೇಳುತ್ತಾರೆ. ಇದರಲ್ಲಿ ವಿಮಾನ ಸಿಮ್ಯುಲೇಟರ್ ಅಥವಾ ಚಾಲನಾ ಸಿಮ್ಯುಲೇಟರ್ ಗಳು ಮಾನವ ಚಾಲಕರನ್ನೂ ಒಳಗೊಂಡಿದೆ.
ಮಾನವನ ನಿರ್ದಿಷ್ಟ ಆದೇಶ ಸರಣಿಯ ಚಾಲನೆಯ ಸಿಮ್ಯುಲೇಶನ್‌ನಲ್ಲಿ ಕಂಪ್ಯೂಟರ್ ಸಿಮ್ಯುಲೇಶನ್ ಅನ್ನು ಸೇರಿಸಬಹುದು. ಇದನ್ನು ಕೃತಕ ಸನ್ನಿವೇಶ ಎನ್ನಲಾಗಿದೆ.[೩]
ಕಂಪ್ಯೂಟರ್ ಸಿಮ್ಯುಲೇಶನ್
ಬದಲಾಯಿಸಿಕಂಪ್ಯೂಟರ್ ಸಿಮ್ಯುಲೇಶನ್(ಅಥವಾ "ಸಿಮ್") ಕಂಪ್ಯೂಟರ್‌ನಲ್ಲಿ ವಾಸ್ತವ ಜೀವನದ ಮಾದರಿ ಅಥವಾ ಕಾಲ್ಪನಿಕ ಸನ್ನಿವೇಶವನ್ನು ಸೃಸ್ಟಿಸುವ ಒಂದು ಪ್ರಯತ್ನವಾಗಿದ್ದು, ಇದರಲ್ಲಿ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಅದ್ಯಯನ ಮಾಡಬಹುದಾಗಿದೆ ಬದಲಾಗಬಹುದಾದ ಅಸ್ಥಿರ ಪ್ರವೃತ್ತಿಯಿಂದ, ವ್ಯವಸ್ಥೆಯೊಂದರ ವರ್ತನೆಯನ್ನು ಮುಂಗಾಣಬಹುದಾಗಿದೆ.[೧]
ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ[೪] ದಲ್ಲಿ ಹಲವು ಸ್ವಾಭಾವಿಕ ವ್ಯವಸ್ಥೆಗಳ ಮಾದರಿ ರಚನೆ ಮತ್ತು ಅರ್ಥಶಾಸ್ತ್ರ ಮತ್ತು ಸಮಾಜಿಕ ವಿಜ್ಞಾನದಲ್ಲಿ (ಜನಸಂಖ್ಯಾ ಸಮಾಜ ವಿಜ್ಞಾನ) ಮಾನವ ವ್ಯವಸ್ಥೆಗಳ ಮಾದರಿ ರಚನೆ; ಹಾಗೆಯೇ ಇಂಜಿನಿಯರಿಂಗ್‌ನಲ್ಲಿ ಈ ವ್ಯವಸ್ಥೆಗಳ ಕಾರ್ಯಾಚರಣೆಯ ಅರಿವನ್ನು ಪಡೆಯಲು ಕಂಪ್ಯೂಟರ್ ಸಿಮ್ಯುಲೇಶನ್ ಒಂದು ಉಪಯುಕ್ತ ಅಂಗವಾಗಿದೆ. ಕಂಪ್ಯೂಟರ್ ಅನ್ನು ಬಳಸಿ ಸಿಮ್ಯುಲೇಶನ್ ಉದಾಹರಣೆಯನ್ನು ಕಂಪ್ಯೂಟರ್ ಜಾಲ ಸಂಚಾರ ದಟ್ಟಣೆಯ ಸಿಮ್ಯುಲೇಶನ್ ಕ್ಷೇತ್ರದಲ್ಲಿ ಕಾಣಬಹುದು. ಇಂತಹ ಸಿಮ್ಯುಲೇಶನ್‌ಗಳಲ್ಲಿ, ಪರಿಸ್ಥಿತಿಗೆ ನಿಗದಿಪಡಿಸಿದ ಪ್ರಾಥಮಿಕ ಮಾನದಂಡಗಳ ವರ್ಗವನ್ನಾಧರಿಸಿ, ಮಾದರಿಯ ನಡವಳಿಕೆಯ ಪ್ರತಿಯೊಂದು ಸಿಮ್ಯುಲೇಶನ್ ಬದಲಾಗುತ್ತಿರುತ್ತದೆ.
ಸಾಂಪ್ರದಾಯಿಕವಾಗಿ ವ್ಯವಸ್ಥೆಗಳ ಮೂಲಭೂತ ಮಾದರಿಯು ಗಣಿತದ ಮಾದರಿಯ ಮೂಲಕ ರಚನೆಯಾಗುತ್ತದೆ. ಇದು ಮಾನದಂಡಗಳ ಗುಂಪು ಮತ್ತು ಆರಂಭಿಕ ನಿಬಂಧನೆಗಳನ್ನಾಧರಿಸಿ, ವ್ಯವಸ್ಥೆಯ ನಡವಳಿಕೆಯ ಭವಿಷ್ಯವನ್ನು ತಿಳಿಯುದರ ಮೂಲಕ ವಿಶ್ಲೇಷಕ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತದೆ. ಕಂಪ್ಯೂಟರ್ ಸಿಮ್ಯುಲೇಶನ್ ಅನ್ನು ಹೆಚ್ಚಾಗಿ ಸರಳವಾದ ಸೂಕ್ತ ವಿಶ್ಲೇಷಕ ಪರಿಹಾರಗಳು ದೊರೆಯದ ಮಾದರಿ ರಚನೆ ವ್ಯವಸ್ಥೆಗಳಿಗೆ ಸಹಾಯಕವಾಗಿ ಅಥವಾ ಬದಲಿಯಾಗಿ ಬಳಸಲಾಗುತ್ತದೆ. ಈಗ ವಿವಿಧ ಪ್ರಕಾರದ ಕಂಪ್ಯೂಟರ್ ಸಿಮ್ಯುಲೇಶನ್‌ಗಳು ಲಭ್ಯವಿದೆ. ಎಲ್ಲಾ ಸಿಮ್ಯುಲೇಶನ್‌ನಲ್ಲಿರುವ ಸಾಮಾನ್ಯ ಲಕ್ಷಣವೆಂದರೆ, ಎಲ್ಲವು ನಿಷೇಧಕ ಅಥವಾ ಅಸಾಧ್ಯವಾಗಬಹುದಾದ ಎಲ್ಲಾ ಸಂಭಾವ್ಯ ವಿಷಯಗಳ ಸಂಪೂರ್ಣ ಪಟ್ಟಿಯಲ್ಲಿ ಮಾದರಿಯು ಪ್ರತಿನಿಧಿಸುವ ಸನ್ನಿವೇಷಗಳ ಮಾದರಿಯನ್ನು ರಚಿಸಲು ಪ್ರಯತ್ನಿಸುವುದು.
ಕಂಪ್ಯೂಟರ್‌ನಲ್ಲಿ ಹೆಚ್ಚಿನ ತಂತ್ರಾಂಶ ಸಿಮ್ಯುಲೇಶನ್ ಮಾದರಿ ರಚನೆ ಆಧಾರಿತ ಪ್ಯಾಕೇಜ್‌ಗಳು ಕಾರ್ಯನಿರ್ವಹಿಸುತ್ತದೆ (ಉದಾ. ಮಾಂಟೆ ಕಾರ್ಲೊ ಸಿಮ್ಯುಲೇಶನ್, ಸ್ಟೋಕಾಸ್ಟಿಕ್ ಮಾದರಿ ರಚನೆ, ಬಹುವಿಧ ಮಾದರಿ ರಚನೆ AnyLogic)). ಇದು ಮಾದರಿ ರಚನೆಯನ್ನು ಸುಲಭವಾಗಿಸುತ್ತದೆ.
ವಾಸ್ತವವಾಗಿ ಯಾವುದೇ ಕಂಪ್ಯೂಟರ್-ಆಧಾರಿತ ಪ್ರಸ್ತುತಿಯು,ಆಧುನಿಕ ಸಮಾಜದಲ್ಲಿ,"ಕಂಪ್ಯೂಟರ್ ಸಿಮ್ಯುಲೇಶನ್" ಪದದ ಬಳಕೆಯನ್ನು ಒಳಗೊಂಡಿರುತ್ತದೆ.
ಕಂಪ್ಯೂಟರ್ ವಿಜ್ಞಾನ
ಬದಲಾಯಿಸಿಕಂಪ್ಯೂಟರ್ ವಿಜ್ಞಾನದಲ್ಲಿ, ಸಿಮ್ಯುಲೇಶನ್ ಕೆಲವು ವಿಶೇಷ ಅರ್ಥವನ್ನು ಹೊಂದಿದೆ. ಸ್ಥಿತಿ ಬದಲಾವಣೆಗಳು ಮತ್ತು ವಿಭಿನ್ನ ಸ್ಥಿತಿಯ ಯಂತ್ರಗಳು ಕಂಪ್ಯೂಟರ್‌ನ ದತ್ತ ಮಾಹಿತಿಗಳು ಮತ್ತು ಫಲಿತಾಂಶಗಳನ್ನು ವಿವರಿಸುವ ಸ್ಥಿತಿ ಬದಲಾವಣೆ ಕೋಷ್ಟಕವನ್ನು (ಆಧುನಿಕ ಪರಿಭಾಷೆಯಲ್ಲಿ, ಕಂಪ್ಯೂಟರ್ ಪ್ರೋಗ್ರಾಮ್‌ನ್ನು ಚಾಲನೆಗೊಳಿಸುವುದು) ಸಾರ್ವತ್ರಿಕ ಕಂಪ್ಯೂಟರ್ ಕಾರ್ಯಗತಗೊಳಿಸಿದಾಗ ಉಂಟಾಗುವ ಸನ್ನಿವೇಷವನ್ನು ವಿವರಿಸಲು ಅಲಾನ್ ಟ್ಯೂರಿಂಗ್ "ಸಿಮ್ಯುಲೇಶನ್" ಪದವನ್ನು ಬಳಸಿದ್ದಾರೆ. ಅಧೀನಕ್ಕೊಳಪಟ್ಟ ಯಂತ್ರವನ್ನು ಕಂಪ್ಯೂಟರ್ ಸಿಮ್ಯುಲೇಟ್ ಮಾಡುತ್ತದೆ. ಸೈದ್ಧಾಂತಿಕ ಕಂಪ್ಯೂಟರ್ ವಿಜ್ಞಾನದ ಪ್ರಕಾರ ಸಿಮ್ಯುಲೇಶನ್ ಎಂದರೆ ಸ್ಥಿತ್ಯಂತರಗಳ ವ್ಯವಸ್ಥೆ ನಡುವಿನ ಸಂಬಂಧವಾಗಿದ್ದು, ಕಾರ್ಯತ್ಮಕ ಶಬ್ಧಾರ್ಥ ವಿಜ್ಞಾನದ ಅದ್ಯಯನದಲ್ಲಿ ಇದು ಉಪಯುಕ್ತವಾಗಿದೆ.
ಕಂಪ್ಯೂಟರ್‌ಗಳನ್ನು ಬಳಸಿಯೇ, ಕಂಪ್ಯೂಟರ್ ಸಿಮ್ಯುಲೇಶನ್ ಅನ್ವಯ ಮಾಡುವುದೊಂದು ಸ್ವಾರಸ್ಯಕರ ಲಘು ಸಿದ್ಧಾಂತ. ಕಂಪ್ಯೂಟರ್ ರಚನೆಯಲ್ಲಿ ಎಮ್ಯುಲೇಟರ್ ಎನ್ನುವ ಸಿಮ್ಯುಲೇಟರ್ ಇರುವುದು. ಇದನ್ನು ಹೆಚ್ಚಾಗಿ ಸೂಕ್ತವಲ್ಲದ ಕಂಪ್ಯೂಟರ್‌ನಲ್ಲಿ ಪ್ರೋಗ್ರಾಮ್‌ಗಳನ್ನು ಕಾರ್ಯಗತಗೊಳಿಸಲು ಅಥವಾ ಕಟ್ಟೆಚ್ಚರದ ಪರೀಕ್ಷೆಯ ಸಂದರ್ಭದಲ್ಲಿ ಬಳಸುವರು (ಕಂಪ್ಯೂಟರ್ ಆರ್ಕಿಟೆಕ್ಚರ್ ಸಿಮ್ಯುಲೇಟರ್ ಮತ್ತು ಪ್ಲ್ಯಾಟ್‌ಫಾರ್ಮ್ ವರ್ಚ್ಯುವಲೈಸೇಶನ್ ನೋಡಿ). ಉದಾಹರಣೆಗೆ, ಯಂತ್ರದಲ್ಲಿ ಪ್ರೋಗ್ರಾಮ್ ಡೌನ್‌ಲೋಡ್ ಆಗುವ ಮೊದಲು, ಸೂಕ್ಷ್ಮ ಪ್ರೋಗ್ರಾಮ್ ಅಥವಾ ಕೆಲವೊಮ್ಮೆ ವಾಣಿಜ್ಯ ಅನ್ವಯಿಕೆ ಪ್ರೋಗ್ರಾಮ್‌ಗಳನ್ನು ಡೀಬಗ್(=ದೋಷ ತೆಗೆಯಲು) ಮಾಡಲು ಸಿಮ್ಯುಲೇಟರ್ ಅನ್ನು ಬಳಸುವರು. ಕಂಪ್ಯೂಟರ್ ಕಾರ್ಯಚರಣೆಯು ಸಿಮ್ಯುಲೇಶನ್ ಮಾಡುವವರೆಗೆ, ಕಂಪ್ಯೂಟರ್‌ನ ಕಾರ್ಯಚರಣೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಪ್ರೋಗ್ರಾಮರ್‌ಗೆ ನೇರವಾಗಿ ಲಭಿಸುವುದು ಮತ್ತು ಸಿಮ್ಯುಲೇಶನ್‌ನ ವೇಗ ಮತ್ತು ಕಾರ್ಯಾಚರಣೆಯನ್ನು ಇಚ್ಛಾನುಸಾರ ಬದಲಿಸಬಹುದು.
'ಫಾಲ್ಟ್ ಟ್ರೀ'ಗಳನ್ನು ಅರ್ಥೈಸಲು ಅಥವಾ VLSI ತರ್ಕಬದ್ಧ ವಿನ್ಯಾಸಗಳನ್ನು ಪರೀಕ್ಷಿಸಲು ರಚನೆಯ ಮುನ್ನವೇ ಸಿಮ್ಯುಲೇಟರ್‌ಗಳನ್ನು ಬಳಸಬಹುದಾಗಿದೆ. ತಿಳಿಯದ ಮೌಲ್ಯಗಳ ಅಸ್ಥಿರ ಅಂಶಗಳನ್ನು ಸಾಂಕೇತಿಕ ಸಿಮ್ಯುಲೇಶನ್‌ಗಳು ಬಳಸುವುದುಂಟು.
[[ಅತ್ಯಂತ ಲಾಭದಾಯಕ ಕ್ಷೇತ್ರದಲ್ಲಿ, ಭೌತಿಕ ಪ್ರಕ್ರಿಯೆಗಳ ಸಿಮ್ಯುಲೇಶನ್‌ಗಳನ್ನು ನಿಯಂತ್ರಣ ವಿಧಾನಗಳನ್ನು ಉತ್ತಮಗೊಳಿಸಲು ವಿಕಸನಾತ್ಮಕ ಎಣಿಕೆಕ್ರಮ|ಅತ್ಯಂತ ಲಾಭದಾಯಕ ಕ್ಷೇತ್ರದಲ್ಲಿ, ಭೌತಿಕ ಪ್ರಕ್ರಿಯೆಗಳ ಸಿಮ್ಯುಲೇಶನ್‌ಗಳನ್ನು ನಿಯಂತ್ರಣ ವಿಧಾನಗಳನ್ನು ಉತ್ತಮಗೊಳಿಸಲು ವಿಕಸನಾತ್ಮಕ ಎಣಿಕೆಕ್ರಮ]]ದೊಂದಿಗೆ ಹೆಚ್ಚಾಗಿ ಬಳಸಲಾಗುವುದು.
ಶಿಕ್ಷಣ ಮತ್ತು ತರಬೇತಿಯಲ್ಲಿ ಸಿಮ್ಯುಲೇಶನ್
ಬದಲಾಯಿಸಿಹೆಚ್ಚಾಗಿ ಸಿಮ್ಯುಲೇಶನ್ ಅನ್ನು ನಾಗರಿಕರಿಗೆ ಮತ್ತು ಸೈನಿಕ ಸಿಬ್ಬಂದಿಗೆ ತರಬೇತಿ ನೀಡವಲ್ಲಿ ಬಳಸುವರು.[೫] ನೈಜ ಸಾಧನಗಳನ್ನು ಬಳಸಿ, ವಿದ್ಯಾರ್ಥಿಗಳಿಗೆ ನೀಡುವ ತರಬೇತಿಯು ಭಾರೀ ವೆಚ್ಚದಾಯಕ ಅಥವಾ ಅತ್ಯಂತ ಅಪಾಯಕಾರಿ ಎನಿಸಿದಾಗ ಸಾಮಾನ್ಯವಾಗಿ ಈ ಸಿಮ್ಯುಲೇಶನ್ ವಿಧಾನವನ್ನು ಬಳಸಲಾಗುವುದು. ಇಂತಹ ಸದರ್ಭಗಳಲ್ಲಿ, "ಸುರಕ್ಷಿತ"ವಾದ ವಾಸ್ತವ ಸನ್ನಿವೇಶದಲ್ಲಿ ಕಾಲ ಹರಣ ಮಾಡುವುದರ ಜೊತೆ ಕಲಿಕೆಯೂ ಆಗುತ್ತದೆ. ಹೆಚ್ಚಾಗಿ ಈ ಸಿಮ್ಯುಲೇಶನ್ ವಿಧಾನವು ಸುರಕ್ಷಿತ-ಗಂಡಾಂತರ ವ್ಯವಸ್ಥೆಯ ತರಬೇತಿಗೆ ಸೂಕ್ತವಾಗಿದೆ. ಉದಾಹರಣೆಗೆ, ಸಿಮ್‌ಸ್ಕೂಲ್ ನಲ್ಲಿ ಶಿಕ್ಷಕರು ಅನುಕರಿಸಿದ/ಸಿಮ್ಉಲೇಶನ್‌ಗೆ ಒಳಪಟ್ಟ ವಿದ್ಯಾರ್ಥಿಗಳ ಮೇಲೆ ತರಗತಿ ನಿರ್ವಹಣೆ ಮತ್ತು ಕಲಿಕಾ ವಿಧಾನಗಳ ಅಭ್ಯಾಸ ನಡೆಸುವರು. ಇದು ಶಿಕ್ಷಕರ "ಕಲಿಸುವ ವೇಳೆಯಲ್ಲಿನ ಅಭ್ಯಾಸದಿಂದ" ವಿದ್ಯಾರ್ಥಿಗಳ ಮೇಲಾಗುವ ಹಾನಿಯನ್ನು ತಪ್ಪಿಸುವುದು. ತರಬೇತಿ ಮತ್ತು ಶೈಕ್ಷಣಿಕ ಸಿಮ್ಯುಲೇಶನ್‌ಗಳಿಗೆ ಬಳಸಿದ ಸಿಮ್ಯುಲೇಶನ್ ವಿಧಾನಗಳ ನಡುವೆ ವ್ಯತ್ಯಾಸವಿರುತ್ತದೆ.
ಈ ಕೆಳಗಿನ ಮೂರರಲ್ಲಿನ ಒಂದು ವರ್ಗದಲ್ಲಿ ತರಬೇತಿ ಸಿಮ್ಯುಲೇಶನ್ ಬರುವುದು:[೬]
- "ಜೀವಂತ" ಸಿಮ್ಯುಲೇಶನ್ (ಇದರಲ್ಲಿ ನೈಜ ಪರಿಸರದಲ್ಲಿ ಕೃತಕ (ಅಥವಾ "ಕೃತಕಾಕೃತಿ") ಸಾಧನವನ್ನು ವಾಸ್ತವ ಜಗತ್ತಿನಲ್ಲಿ ಜನರು ಬಳಸುವರು);
- "ವಾಸ್ತವಾಭಾಸದ" ಸಿಮ್ಯುಲೇಶನ್ (ಇದರಲ್ಲಿ ವಾಸ್ತವದ ಜನರು ಸೃಷ್ಟಿಸಲಾದ ಕೃತಕ ಪರಿಸರದಲ್ಲಿ ಅಥವಾ ಕೃತಕ ಸಾಧನವನ್ನು ಬಳಸುವರು)
- "ರಚನಾತ್ಮಕ" ಸಿಮ್ಯುಲೇಶನ್ (ಇದರಲ್ಲಿ ಪರ್ಯಾಯ ಜನರು ಪರ್ಯಾಯ ಪರಿಸರದಲ್ಲಿ ಪರ್ಯಾಯ ಸಾಧನವನ್ನು ಬಳಸುವರು). ಹೆಚ್ಚಾಗಿ ರಚನಾತ್ಮಕ ಸಿಮ್ಯುಲೇಶನ್ ಅನ್ನು "ಯುದ್ಧದ ಆಟ"ದಂತೆ ಉಲ್ಲೇಖಿಸಲಾಗುವುದು. ಏಕೆಂದರೆ ಇದು ಆಟಗಾರರು ಸೈನಿಕರು ಮತ್ತು ಯುದ್ಧೋಪಕರಣಗಳಿಗೆ ಗಡಿಯ ಸುತ್ತಲು ತಿರುಗುವಂತೆ ಆದೇಶಿಸುವುದನ್ನು ಒಳಗೊಂಡಿರುವ ಟೇಬಲ್-ಟಾಪ್ ಯುದ್ಧದ ಆಟಗಳಿಗೆ ಹೋಲುವುದು.
ಪ್ರಮಾಣಿತ ಪರೀಕ್ಷೆಗಳಲ್ಲಿ, "ಜೀವಂತ" ಸಿಮ್ಯುಲೇಶನ್ ಅನ್ನು "ಸಂಭಾವ್ಯ ಕಾರ್ಯಾಚರಣೆಗಳ ಮಾದರಿಗಳು" ಉತ್ಪಾದನೆ ಮಾಡುವುದರಿಂದ, ಕೆಲವೊಮ್ಮೆ ಇದನ್ನು "ಹೆಚ್ಚಿನ ವಸ್ತುನಿಷ್ಠತೆ" ಹೊಂದಿರುವ ಸಿಮ್ಯುಲೇಶನ್ ಎಂದು ಕರೆಯಲಾಗುವುದು. ಇದು "ಸಂಭಾವ್ಯ ಕಾರ್ಯನಿರ್ವಹಣೆಯ ಸಂಕೇತಗಳನ್ನು"[೭] ಮಾತ್ರ ಉತ್ಪಾದಿಸುವ "ಪೆನ್ಸಿಲ್-ಮತ್ತು-ಕಾಗದ" ಸಿಮ್ಯುಲೇಶನ್‌ಗಳ "ಕಡಿಮೆ ವಸ್ತುನಿಷ್ಠತೆ"ಯನ್ನು ವಿರೋಧಿಸುವುದು. ಆದರೆ ಹೆಚ್ಚು, ಮಧ್ಯಮ ಮತ್ತು ಕಡಿಮೆ ವಸ್ತುನಿಷ್ಠತೆಯು ನಿರ್ದಿಷ್ಟ ಹೋಲಿಕೆಯ ಸಂದರ್ಭವನ್ನು ಆಧರಿಸಿದೆ.
ಶಿಕ್ಷಣದಲ್ಲಿ ಸಿಮ್ಯುಲೇಶನ್‌ಗಳ ಬಳಕೆಯು ಸ್ವಲ್ಪ ಮಟ್ಟಿಗೆ ತರಬೇತಿ ಸಿಮ್ಯುಲೇಶನ್‌ಗಳನ್ನು ಹೋಲುವುದು. ಇದು ನಿರ್ದಿಷ್ಟ ಕಾರ್ಯಗಳ ಮೇಲೆ ಗಮನವನ್ನು ಕೇಂದ್ರೀಕರಿಸುವುದು. ಶೈಕ್ಷಣಿಕ ಸಿಮ್ಯುಲೇಶನ್‌ಗಳನ್ನು ಸೂಚಿಸಲು 'ಮೈಕ್ರೋವರ್ಲ್ಡ್' ಎಂಬ ಪದವನ್ನು ಬಳಸುವರು. ಇದು ನಿಜವಾದ ವಸ್ತು ಮತ್ತು ಪರಿಸರವನ್ನು ನಕಲಿಸುವ ಬದಲು ಕೆಲವು ಅಮೂರ್ತ ವಿಷಯಗಳ ಮಾದರಿಯಾಗಿದೆ, ಅಥವಾ ಕೆಲವು ಸಂದರ್ಭಗಳಲ್ಲಿ ಸರಳ ವಿಧಾನಗಳ ಮೂಲಕ ನೈಜ ಪರಿಸರದ ಮಾದರಿಯನ್ನು ರಚಿಸುವುದು. ಇದರಿಂದಾಗಿ ವಿದ್ಯಾರ್ಥಿಗಳು ಪ್ರಮುಖ ವಿಷಯಗಳನ್ನು ಅರ್ಥೈಸಿಕೊಳ್ಳಲು ಸುಲಭವಾಗುವುದು. ಸಾಮಾನ್ಯವಾಗಿ ಬಳಕೆದಾರನು ಮೈಕ್ರೋವರ್ಲ್ಡ್‌ನೊಳಗೆ ಕೆಲವು ರಚನೆಯನ್ನು ರಚಿಸಬಹುದು. ಅದು ಮಾದರಿ ರಚನೆಯಾಗುತ್ತಿರುವ ಕಲ್ಪನೆಗಳನ್ನು/ವಿಷಯಗಳನ್ನು ಸ್ಥಿರವಾದ ಮಾರ್ಗದಲ್ಲಿ ವರ್ತಿಸುವುದು. ಮೈಕ್ರೋವರ್ಲ್ಡ್ ಮತ್ತು ಲೋಗೋಮೌಲ್ಯಗಳನ್ನು ಪ್ರತಿಪಾದಿಸಿದವರಲ್ಲಿ ಸೆಮೊರ್ ಪೇಪರ್ಟ ಪ್ರಥಮರು . ಪೆಪರ್ಟ್ ಅಭಿವೃದ್ದಿಪಡಿಸಿದ ಲೋಗೋ (ಪ್ರೋಗ್ರಾಮಿಂಗ್ ಭಾಷೆ) ಪ್ರೋಗ್ರಾಮಿಂಗ್ ಪರಿಸರವು ಹೆಚ್ಚು ಜನಪ್ರಿಯ ಮೈಕ್ರೋವರ್ಲ್ಡ್‌ಗಳಲ್ಲಿ ಒಂದಾಗಿದೆ. ಇನ್ನೊಂದು ಉದಾಹರಣೆಯೆಂದರೆ, ಗ್ಲೋಬಲ್ ಚ್ಯಾಲೆಂಜ್ ಅವಾರ್ಡ್ ಆನ್‌ಲೈನ್ STEM ಕಲಿಕಾ ಜಾಲತಾಣವು ಮೈಕ್ರೋವರ್ಲ್ಡ್‌ನ ಸಿಮ್ಯುಲೇಶನ್‌ಗಳನ್ನು ಜಾಗತಿಕ ತಾಪಮಾನ ಏರಿಕೆ ಮತ್ತು ಶಕ್ತಿ ಸಂಪನ್ಮೂಲಗಳ ಭವಿಷ್ಯ ಎಂಬ ವಿಷಯಗಳಿಗೆ ಸಂಬಂಧಿಸಿದ ವಿಜ್ಞಾನ ವಿಷಯವನ್ನು ಕಲಿಸಲು ಬಳಸುವುದು. ಶಿಕ್ಷಣದಲ್ಲಿ ಸಿಮ್ಯುಲೇಶನ್‌ಗಳಿಗಿರುವ ಇತರ ಯೋಜನೆಗಳೆಂದರೆ ಓಪನ್ ಸೋರ್ಸ್ ಫಿಸಿಕ್ಸ್ ಮತ್ತು ಅದರ EJS ಪರಿಸರ.
ಇತ್ತೀಚಿನ ವರ್ಷಗಳಲ್ಲಿ ವ್ಯವಹಾರ ಶಿಕ್ಷಣಗಳು ಆಡಳಿತ ನಿರ್ವಹಣಾ ತಂತ್ರ ಗಳನ್ನು (ಅಥವಾ ವ್ಯಾಪಾರದ ಸಿಮ್ಯುಲೇಶನ್‌ಗಳು ) ನೆಚ್ಚಿಕೊಂಡಿದೆ.[೮] ವ್ಯವಹಾರ ಸಿಮ್ಯುಲೇಶನ್‌ಗಳು ಸುರಕ್ಷಿತ ಪರಿಸರದಲ್ಲಿ ವ್ಯವಹಾರದ ಯೋಜನೆಗಳೊಂದಿಗೆ ಪ್ರಯೋಗಗಳನ್ನು ಮಾಡುವ ಕ್ರಿಯಾಶೀಲಾ ಮಾದರಿಯನ್ನು ರಚಿಸುತ್ತವೆ ಮತ್ತು ವಿಷಯದ ಅದ್ಯಯನ ಚರ್ಚೆಗಳನ್ನು ವಿಸ್ತರಿಸುತ್ತವೆ.
ಪ್ರೌಢಶಾಲೆ ಅಥವಾ ವಿಶ್ವವಿದ್ಯಾಲಯ ಮಟ್ಟದಲ್ಲಿ ಅಂಥ್ರೊಪಾಲಜಿ(=ಶರೀರ ರಚನಾ ವಿಜ್ಞಾನ), ಅರ್ಥಶಾಸ್ತ್ರ, ಇತಿಹಾಸ, ರಾಜಕೀಯ ವಿಜ್ಞಾನ ಅಥವಾ ಸಮಾಜ ಶಾಸ್ತ್ರದ ಅದ್ಯಯನಗಳಲ್ಲಿ ಸಾಮಾಜಿಕ ಮತ್ತು ರಾಜಕೀಯ ಪ್ರಕ್ರಿಯೆಗಳನ್ನು ವಿವರಿಸಲು ಸಮಾಜ ವಿಜ್ಞಾನ ತರಗತಿಗಳಲ್ಲಿ ಸಾಮಾಜಿಕ ಸಿಮ್ಯುಲೇಶನ್ ಗಳನ್ನುಬಳಸುವರು. ಉದಾಹರಣೆಗೆ ಪೌರಶಾಸ್ತ್ರ ಸಿಮ್ಯುಲೇಶನ್‌ಗಳನ್ನು ತೆಗೆದುಕೊಂಡರೆ, ಅದರಲ್ಲಿ ಭಾಗವಹಿಸುವವರು ಮಾರುವೇಷದ ಸಮಾಜ ಪಾತ್ರಧಾರಿಗಳಾಗಿರುತ್ತಾರೆ ಅಥವಾ ಅಂತಾರಾಷ್ಟ್ರೀಯ ಸಂಬಂಧಗಳ ಸಿಮ್ಯುಲೇಶನ್‌ಗಳಲ್ಲಿ ಸಂಧಾನ, ಬಾಂಧವ್ಯ ಬೆಳೆಸುವಿಕೆ, ವ್ಯಾಪಾರ, ರಾಜತಂತ್ರ, ಮತ್ತು ಸೈನಿಕ ಬಲದ ಬಳಕೆಯಲ್ಲಿ ತೊಡಗಿರುತ್ತಾರೆ. ಅಂತಹ ಸಿಮ್ಯುಲೇಶನ್‌ಗಳು ಕಾಲ್ಪನಿಕ ರಾಜಕೀಯ ವ್ಯವಸ್ಥೆಗಳು ಅಥವಾ ಪ್ರಸ್ತುತ ಅಥವಾ ಐತಿಹಾಸಿಕ ಘಟನೆಗಳನ್ನು ಆಧರಿಸಿರಬಹುದು. ಬರ್ನಾರ್ಡ್ ಕಾಲೇಜ್‌ನ "ರಿಯಾಕ್ಟಿಂಗ್ ಟು ಪಾಸ್ಟ್" ಎನ್ನುವ ಶೈಕ್ಷಣಿಕ ಸಿಮ್ಯುಲೇಶನ್‌ಗಳ ಸರಣಿಯು ಸಾಮಾಜಿಕ ಸಿಮ್ಯುಲೇಶನ್‌ಗೆ ಇನ್ನೊಂದು ಉದಾಹರಣೆಯಾಗಿದೆ.[೯] "ರಿಯಾಕ್ಟಿಂಗ್ ಟು ದಿ ಪಾಸ್ಟ್" ಸರಣಿಯು ವಿಜ್ಞಾನದ ಶಿಕ್ಷಣವನ್ನು ವಿವರಿಸುವ ಸಿಮ್ಯುಲೇಶನ್ ತಂತ್ರಗಳನ್ನು ಒಳಗೊಂಡಿದೆ.
ಇತ್ತೀಚಿನ ವರ್ಷಗಳಲ್ಲಿ ಸಹಾಯ ಮತ್ತು ಅಭಿವೃದ್ಧಿ ಮಾದ್ಯಮಗಳಲ್ಲಿ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡುವುದಕ್ಕಾಗಿ ಸಾಮಾಜಿಕ ಸಿಮ್ಯುಲೇಶನ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಉದಾಹರಣೆಗೆ ಕರಾನ ಸಿಮ್ಯುಲೇಶನ್ ಅನ್ನು ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಮ್ ಮೊದಲ ಬಾರಿಗೆ ಅಭಿವೃದ್ಧಿಪಡಿಸಿತು. ಅದರ ಪರಿಸ್ಕರಿಸಿದ ಆವೃತ್ತಿಯನ್ನು, ಈಗ ವಿಶ್ವ ಬ್ಯಾಂಕ್ ತನ್ನ ಸಿಬ್ಬಂದಿಗಳಿಗೆ ದುರ್ಬಲವಾದ ಮತ್ತು ಯುದ್ಧದ ಪ್ರಭಾವಕ್ಕೆ ಒಳಗಾದ ದೇಶಗಳೊಂದಿಗೆ ವ್ಯವಹರಿಸಲು ತರಬೇತಿ ನೀಡುವುದಕ್ಕಾಗಿ ಬಳಸುತ್ತಿದೆ.[೧೦]
ವೈದ್ಯಕೀಯ ಆರೋಗ್ಯ ಮೇಲ್ವಿಚಾರಣಾ ಸಿಮ್ಯುಲೇಟರ್‌ಗಳು
ಬದಲಾಯಿಸಿವೈದ್ಯಕೀಯ ಸಿಮ್ಯುಲೇಟರ್‌ಗಳು ಇತ್ತೀಚೆಗೆ ಹೆಚ್ಚಾಗಿ ಅಭಿವೃದ್ಧಿ ಹೊಂದುತ್ತಿದ್ದು, ವೈದ್ಯಕೀಯ ವೃತ್ತಿಯಲ್ಲಿರುವ ಸಿಬ್ಬಂದಿಗಳಿಗೆ ಚಿಕಿತ್ಸೆ ಮತ್ತು ರೋಗನಿರ್ಣಯ ವಿಧಾನಗಳೂ ಸೇರಿದಂತೆ ವೈದ್ಯಕೀಯ ಪರಿಕಲ್ಪನೆಗಳು ಮತ್ತು ನಿರ್ಣಯ ತೆಗೆದುಕೊಳ್ಳುವುದರ ಕುರಿತು ತಿಳಿಸಲು ಅವುಗಳನ್ನು ಬಳಸಲಾಗುತ್ತಿದೆ. ದೇಹದಿಂದ ರಕ್ತ ತೆಗೆಯುವಂತಹ ಪ್ರಾಥಮಿಕ ಕಾರ್ಯಗಳಿಂದ ಉದರ ದರ್ಶಕ ಶಸ್ತ್ರ ಚಿಕಿತ್ಸೆ ಮತ್ತು ಅಪಘಾತದಲ್ಲಿ ಗಾಯಗೊಂಡವರ ಆರೈಕೆಯವರೆಗಿನ ಕಾರ್ಯವಿಧಾನದ ತರಬೇತಿ ನೀಡುವುದಕ್ಕಾಗಿ ಸಿಮ್ಯುಲೇಟರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಜೀವ-ವೈದ್ಯಕೀಯ ಇಂಜಿನಿಯರಿಂಗ್ ಸಮಸ್ಯೆಗಳಿಗಾಗಿ ಹೊಸ ಸಾಧನಗಳ ಮೂಲಮಾದರಿ ತಯಾರಿಸುವಲ್ಲಿ ಸಿಮ್ಯುಲೇಶನ್‌ನ ಸಹಾಯ ಮಾಡುವುದು. ಹೊಸ ಚಿಕಿತ್ಸೆಗಳು, ಔಷಧೋಪಚಾರ ಮತ್ತು ಔಷಧವನ್ನು ನೀಡುವ ಮೊದಲು ರೋಗ ನಿರ್ಣಯ ಕ್ಕಾಗಿ ಸಾಧನಗಳ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸಿಮ್ಯುಲೇಟರ್‌ಗಳನ್ನು ಬಳಸಿಕೊಳ್ಳವುದು ಸದ್ಯ ಚಾಲ್ತಿಯಲ್ಲಿದೆ.
ನಿರ್ದಿಷ್ಟ ಶರೀರ ರಚನೆಯ ಪ್ಲ್ಯಾಸ್ಟಿಕ್ ಸಿಮ್ಯುಲೇಷನ್ ಕಂಪ್ಯೂಟರ್ ಸಂಪರ್ಕ ಹೊಂದಿದ ಅನೇಕ ವೈದ್ಯಕೀಯ ಸಿಮ್ಯುಲೇಟರ್‌ಗಳನ್ನು ಒಳಗೊಂಡಿರುತ್ತವೆ. .[ಸೂಕ್ತ ಉಲ್ಲೇಖನ ಬೇಕು] ಈ ಪ್ರಕಾರದ ಅತ್ಯಾಧುನಿಕವಾದ ಸಿಮ್ಯುಲೇಟರ್‌ಗಳು ಸಹಜಗಾತ್ರದ ಪ್ರತಿಮೆಗಳನ್ನು ಒಳಗೊಂಡಿದ್ದು, ಅವುಗಳು ಚುಚ್ಚುಮುದ್ದಿನಿಂದ ನೀಡಿದ ಔಷಧಕ್ಕೆ ಪ್ರತಿಕ್ರಿಯಿಸುವುದಲ್ಲಿದೆ, ಜೈವಿಕ ಗಂಡಾಂತರದ ಸಂದರ್ಭದಲ್ಲಿ ಏನೆಲ್ಲಾ ಪ್ರತಿಕ್ರಯಿಸುತ್ತವೆ ಎಂಬುದು ಗೊತ್ತಾಗುವಂತೆ ಪ್ರೋಗ್ರಾಮ್ ಮಾಡಬಹುದಾಗಿದೆ. ಇತರ ಸಿಮ್ಯುಲೇಶನ್‌ಗಳಲ್ಲಿ, ಕಾರ್ಯವಿಧಾನದ ದೃಗ್ಗೋಚರ ಅಂಶಗಳನ್ನು ಕಂಪ್ಯೂಟರ್ ಗ್ರಾಫಿಕ್ಸ್ ತಂತ್ರಗಳಿಂದ ಮೂಡಿಸುತ್ತದೆ, ಬಳಕೆದಾರರ ಕಾರ್ಯಗಳಿಗೆ ಪ್ರತಿಕ್ರಿಯೆಯಾಗಿ ಭೌತಿಕ ಸಿಮ್ಯುಲೇಶನ್ ನಿಯತವಾಗಿ ನಡೆಯುವುದರೊಂದಿಗೆ ಸ್ಪರ್ಶ ಪ್ರತಿಕ್ರಿಯೆ ನೀಡುವ ಸಾಧನಗಳಿಂದ ಸ್ಪರ್ಶಾಧಾರಿತ ಅಂಶಗಳು ಹುಟ್ಟಿಬರುತ್ತವೆ. ರೋಗಿಯ ದತ್ತಾಂಶದ 3D CT ಅಥವಾ MRI ಸ್ಕ್ಯಾನ್‌ಗಳು ಈ ರೀತಿಯ ವೈದ್ಯಕೀಯ ಸಿಮ್ಯುಲೇಶನ್‌ಗಳನ್ನು ಬಳಸಿ ನಿಖರ ಮಾಹಿತಿಯನ್ನು ತಿಳಿಸುತ್ತವೆ. ಕೆಲವು ವೈದ್ಯಕೀಯ ಸಿಮ್ಯುಲೇಶನ್‌ಗಳನ್ನು ವಿಶಾಲವಾಗಿ ಬಳಸಲಾಗುತ್ತಿದೆ (ಪ್ರಮಾಣಿತ ವೆಬ್ ಬ್ರೌಸರ್‌ಗಳ ಮೂಲಕ ವಿಕ್ಷೀಸಬಹುದಾದ ಜಾಲ ಆಧಾರಿತ ಸಿಮ್ಯುಲೇಶನ್‌ಗಳು) ಮತ್ತು ಕೀಬೋರ್ಡ್ ಮತ್ತು ಮೌಸ್‌ನಂತಹ ಪ್ರಾಮಾಣಿತ ಕಂಪ್ಯೂಟರ್ ಅಂತರ್ವರ್ತನಾ ಸಾಧನಗಳನ್ನು ಬಳಸುವುದರ ಮೂಲಕ ಈ ಜಾಲ ಆಧಾರಿತ ಸಿಮ್ಯುಲೇಶನ್‌ಗಳೊಂದಿಗೆ ಪರಸ್ಪರ ಕಾರ್ಯನಿರ್ವಹಿಸಬಹುದಾಗಿದೆ.
ಪ್ಲಸಿಬೋ ಔಷಧವಸ್ತುವು ಇನ್ನೊಂದು ಪ್ರಮುಖ ವೈದ್ಯಕೀಯ ಸಿಮ್ಯುಲೇಟರ್ ಆಗಿದೆ. ಔಷಧದ ಸಾಮರ್ಥ್ಯವನ್ನು ಪರೀಕ್ಷಿಸಲು, ನೈಜ ಔಷಧವನ್ನು ಅನುಕರಿಸಲು ಬಳಸಲಾಗುವುದು (ಪ್ಲಸಿಬೋ (ತಾಂತ್ರಿಕ ಪದದ ಉಗಮ) ನೋಡಿ).
ಹೊಸ ಆವಿಷ್ಕಾರಗಳ ಮೂಲಕ ರೋಗಿಯ ಸುರಕ್ಷತಾ ಸುಧಾರಣೆ
ಬದಲಾಯಿಸಿವೈದ್ಯಕೀಯ ಕ್ಷೇತ್ರದಲ್ಲಿ ರೋಗಿಯ ಸುರಕ್ಷತೆಗೆ ಪ್ರಮುಖ ಸ್ಥಾನ. ಕಾರ್ಯನಿರ್ವಹಣೆಗೆ ಸಂಬಂಧಿಸಿದ ದೋಷ ಮತ್ತು ಆರೈಕೆಯ ಹಾಗೂ ತರಬೇತಿಯ ಕೊರತೆಯಿಂದಾಗಿ ರೋಗಿಯು ನೋವು ಅನುಭವಿಸುವನು ಹಾಗೂ ಮರಣ ಹೊಂದುವನೆಂದು ತಿಳಿದುಬಂದಿದೆ. ಬ್ಯುಲ್ಡಿಂಗ್ ಎ ನ್ಯಾಷನಲ್ ಎಜೆಂಡಾ ಫಾರ್ ಸಿಮ್ಯುಲೇಶನ್-ಬೇಸ್ಡ್ ಮೆಡಿಕಲ್ ಎಜ್ಯುಕೇಶನ್ ಪ್ರಕಾರ (ಎಡರ್-ವಾನ್ ಹೂಕ್, ಜಾಕೀ, 2004), “ಆರೋಗ್ಯ ಸೇವೆ ಒದಗಿಸುವವರ ಸಾಮರ್ಥ್ಯವು ಯುದ್ಧಭೂಮಿ, ಮುಕ್ತಹೆದ್ದಾರಿ ಅಥವಾ ಆಸ್ಪತ್ರೆಯ ತುರ್ತು ನಿಗಾ ಘಟಕ- ಇಂಥ ಯಾವುದೇ ಸಂದಿಗ್ಧ ಸ್ಥಳದಲ್ಲಿ ಘಟನೆಗಳು ಅನಿರೀಕ್ಷಿತ ಪರಿಸ್ಥಿತಿಯು ಎದುರಾದಲ್ಲಿ, ವೈದ್ಯಕೀಯ ಚಿಕಿತ್ಸೆಯನ್ನು ಹೇಗೆ ಸಕಾರಾತ್ಮಕ ಪರಿಹಾರ ಒದಗಿಸುವರು ಎನ್ನುವುದರ ಮೇಲೆ ಆಧರಿಸಿದೆ.” ಸಿಮ್ಯುಲೇಶನ್. ಪ್ರತಿ ವರ್ಷ ವೈದ್ಯಕೀಯ ದೋಷಗಳಿಂದಾಗಿ ಸುಮಾರು 98,000 ಜನರು ಸಾಯುತ್ತಾರೆ, ಇದಕ್ಕಾಗಿ $37 ಮತ್ತು $50 ದಶಲಕ್ಷ ವೈದ್ಯಕೀಯ ವೆಚ್ಚ ತಗಲುತ್ತದೆ, $17ರಿಂದ $29 ಶತಕೋಟಿಯನ್ನು ಭರಿಸಿದರೂ ಸಹ ಕೆಲವು ಅವಘಢಗಳನ್ನು ತಪ್ಪಿಸಲಾಗುವುದಿಲ್ಲ ಎಂದು ಎಡರ್-ವಾನ್ ಹೂಕ್ (2004) ಹೇಳುತ್ತಾನೆ,. ಎಡರ್-ವಾನ್ ಹೂಕ್‌ರವರ (2004) ಪ್ರಕಾರ “ತಪ್ಪಿಸಬಹುದಾದ ಪ್ರತಿಕೂಲ ಘಟನೆಗಳಿಂದಾಗುವ ಮರಣಗಳ ಪ್ರಮಾಣವು ಮೋಟರು ವಾಹನ ಅಪಘಾತ, ಸ್ತನ ಕ್ಯಾನ್ಸರ್, ಅಥವಾ AIDSನಿಂದ ಸಂಭವಿಸುವ ಮರಣದ ಪ್ರಮಾಣಕ್ಕಿಂತ ಹೆಚ್ಚಾಗಿದೆ”. ರೋಗಿಯ ಸುರಕ್ಷತಾ ಸುಧಾರಣೆಯು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖ ಉದ್ದೇಶವಾಗಿದೆ ಎಂದು ಈ ಅಂಕಿಅಂಶಗಳಿಂದ ತಿಳಿಯಬಹುದು.
ರೋಗಿಗಳ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವಾಗದಂತೆ ಸುರಕ್ಷತಾ ಕ್ರಮಗಳನ್ನು ಅಳವಡಿಸುವಲ್ಲಿ, ವೈದ್ಯಕೀಯ ವೃತ್ತಿಪರರಿಗೆ ತರಬೇತಿಯನ್ನು ನೀಡಲು ಹೊಸದಾಗಿ ಅವಿಷ್ಕಾರಣಗೊಂಡ ಸಿಮ್ಯುಲೇಶನ್ ತರಬೇತಿ ನಿವಾರಣೋಪಾಯಗಳನ್ನು ಬಳಸಲಾಗುವುದು. ಆದರೂ, ಲೇಖನದ ಪ್ರಕಾರ ಡಸ್ ಸಿಮ್ಯುಲೇಶನ್ ಇಂಪ್ರೂವ್ ಪೇಷಂಟ್ ಸೇಫ್ಟಿ? ಸ್ವಯಂ-ದಕ್ಷತೆ, ನೆಮ್ಮದಿ, ಕಾರ್ಯಾಚರಣೆಯ ನಿರ್ವಹಣೆ, ಮತ್ತು ರೋಗಿಯ ಸುರಕ್ಷತೆಯನ್ನು (ನಿಶಿಸಕಿ A., ಕೆರನ್ R., ಮತ್ತು ನದ್ಕರ್ನಿ, V., 2007), ನ್ಯಾಯ ಮಂಡಳಿ ಇನ್ನೂ ಪ್ರಕಟಿಸಿಲ್ಲ. ನಿಶಿಸಕಿರವರ ಪ್ರಕಾರ “ಮಾನವನಾಕೃತಿಗಳ ಒದಗಿಸುವವರು ಮತ್ತು ತಂಡದ ದಕ್ಷತೆ ಮತ್ತು ಸಾಮರ್ಥ್ಯವನ್ನು ಸಿಮ್ಯುಲೇಶನ್ ತರಬೇತಿಯು ಅಭಿವೃದ್ಧಿ ಹೊಂದುವುದು ಎನ್ನುವುದು ಉತ್ತಮ ಸಾಕ್ಷಿಯಾಗಿದೆ. ವೈದ್ಯಕೀಯ ವ್ಯವಸ್ಥೆಗಳಲ್ಲಿ ನೈಜ ಕಾರ್ಯಾಚರಣೆಯ ದಕ್ಷತೆಯನ್ನು ಸಿಮ್ಯುಲೇಶನ್ ಸೂಧಾರಣೆಗೊಳಪಡಿಸುತ್ತದೆ ಎನ್ನುವುದಕ್ಕೂ ಆಧಾರಗಳಿವೆ. ಆದರೂ, ಸಿಬ್ಬಂದಿಗಳಿಗೆ ಸಿಮ್ಯುಲೇಶನ್ ಮೂಲಕ ತರಬೇತಿಯನ್ನು ನೀಡುವುದರಿಂದ, ಅವರ ರೋಗಿಯೊಂದಿಗಿನ ಕಾರ್ಯನಿರ್ವಹಣೆಯಲ್ಲಿ ಅಭಿವೃದ್ಧಿ ಕಂಡುಬಂದಿದೆ ಎನ್ನುವುದರ ಕುರಿತು ಯಾವುದೇ ಸಾಕ್ಷ್ಯಗಳಿಲ್ಲ. ಹಾಗೆಯೇ ಸಿಮ್ಯುಲೇಶನ್ ತರಬೇತಿಗಳಿಂದ ರೋಗಿಯ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ ಎನ್ನುವುದಕ್ಕೂ ಸಹ ಯಾವುದೇ ಆಧಾರಗಳಿಲ್ಲ. ಆದರೂ ಸಹ, ಭವಿಷ್ಯದ ತರಬೇತಿ ಸಾಧನದಂತೆ ವೈದ್ಯಕೀಯ ಸಿಮ್ಯುಲೇಶನ್ ಕುರಿತ ನಂಬಿಕೆ ಹೆಚ್ಚುತ್ತಲೇ ಇದೆ.” ರೋಗಿಯ ಸುರಕ್ಷತೆಯನ್ನು ಹೆಚ್ಚಿಸುಲು ಕಾರಣವಾಗುವ ಸಿಮ್ಯುಲೇಶನ್ ಯಶಸ್ಸನ್ನು ಪರಿಣಾಮಕಾರಿಯಾಗಿ ನಿರ್ಧರಿಸುವ ಸಾಕಷ್ಟು ಸಂಶೋಧನಾ ಅಧ್ಯಯನವು ಈವರೆಗೆ ನಡೆದಿಲ್ಲ. ರೋಗಿಯ ಮೇಲ್ವಿಚಾರಣೆಯ [ಅದಕ್ಕಾಗಿ ನಿಧಿ ಸಂಗ್ರಹಣೆ] ಬಳಸಿದ ಸಂಶೋಧನಾ ಸುಧಾರಣಾ ಸಿಮ್ಯುಲೇಶನ್‌ಗಳ ಉದಾಹರಣೆಗಳನ್ನು [ಇತ್ತೀಚೆಗೆ ಕಾರ್ಯಗತಗೊಳಿಸಿದ] ಸಿಮ್ಯುಲೇಶನ್ ಸಂಶೋಧನೆಯ ಮೂಲಕ ರೋಗಿಯ ಸುರಕ್ಷತೆ ಸುಧಾರಣೆಯಲ್ಲಿ (US ಡಿಮಾರ್ಟ್‌ಮೆಂಟ್ ಆಫ್ ಹ್ಯುಮನ್ ಹೆಲ್ತ್ ಸರ್ವೀಸಸ್) ದೊರೆಯುವುದು http://www.ahrq.gov/qual/simulproj.htm.
ಸಿಮ್ಯುಲೇಶನ್ ತರಬೇತಿಯ ಬಳಕೆಯ ಮೂಲಕ ರೋಗಿಯ ಆರೋಗ್ಯವನ್ನು ಸುಧಾರಿಸುವ ಪ್ರಯತ್ನವು ಶಿಶು ವೈದ್ಯಕೀಯ ಸೇವೆ ಒದಗಿಸುವುದರ ಮೂಲಕ ನಡೆದಿದೆ, ಸಕಾಲದ-ಸೇವೆ ಮತ್ತು/ಅಥವಾ ಸೂಕ್ತ-ಸ್ಥಳದಲ್ಲಿನ-ಸೇವೆ ಒದಗಿಸುವುದರಲ್ಲಿ ಇದು ಬಳಕೆಯಾಗುತ್ತಿದೆ. ಕೆಲಸಗಾರರು ಕೆಲಸಕ್ಕೆ ಹಾಜರಾಗುವ ಮೊದಲ 20 ನಿಮಿಷಗಳ ತರಬೇತಿಯನ್ನು ನೀಡಲಾಯಿತು. ನಂತರ ಕಾರ್ಯವಿಧಾನದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಹೆಚ್ಚಿಸಿ, ನಕಾರಾತ್ಮಕ ಫಲಿತಾಂಶಗಳನ್ನು ಕಡಿಮೆ ಮಾಡುವುದೆಂದು ಭಾವಿಸಲಾಗಿತ್ತು. ಕೆಲಸ ಪ್ರಾರಂಭಿಸುವ ಮೊದಲು ತರಬೇತಿಯನ್ನು ನೀಡುವ ಮೂಲಕ ರೋಗಿಯ ಆರೋಗ್ಯವನ್ನು ಸುಧಾರಿಸುವುದು ಮತ್ತು ಬಾಯಿಯ ಮೂಲಕ ಶ್ವಾಸನಾಳದಲ್ಲಿ ಕಾರ್ಯನಿರ್ವಹಣೆ ಉತ್ತಮಪಡಿಸುವುದು ಮತ್ತು ದುರ್ಘಟನೆಗಳು ಸಂಭವವನ್ನು ಕಡಿಮೆ ಮಾಡಲು ಮತ್ತು “ಸಿಮ್ಯುಲೇಶನ್ ವ್ಯವಸ್ಥೆಯಲ್ಲಿ ತರಬೇತಿಯ ದಕ್ಷತೆ ಮತ್ತು ರೋಗಿಯ ಆರೋಗ್ಯ ಹೆಚ್ಚಿಸಬಹುದಾದ ಹೆಚ್ಚು ವಸ್ತುನಿಷ್ಠತೆ ಸಿಮ್ಯುಲೇಶನ್ ಕಲ್ಪನೆಯನ್ನು ಪರೀಕ್ಷಿಸುವುದು” ಈ ಅದ್ಯಯನದ ಉದ್ದೇಶವಾಗಿದೆ. ಅಬ್‌ಸ್ಟ್ರ್ಯಾಕ್ಟ್ ಪು.38ದಲ್ಲಿ ನಿರ್ಣಯವನ್ನು ಈ ರೀತಿ ಬರೆದಿದ್ದಾರೆ: ಕಾಂಪ್ರೋಮೈಸಿಂಗ್ ಪ್ರೊಸೆಜ್ಯುರಲ್ ಸಕ್ಸೆಸ್ ಆರ್ ಸೇಫ್ಟಿ ಇಲ್ಲದೆ ಜಸ್ಟ್-ಇನ್-ಟೈಮ್ ಸಿಮ್ಯುಲೇಶನ್ ಟ್ರೈನಿಂಗ್ ಇಂಪ್ರೂವ್ಸ್ ICU ಫಿಸಿಶಿಯನ್ ಟ್ರೈನಿ ಏರ್‌ವೇ ರೇಸಸಿಟೇಶನ್ ಪಾರ್ಟಿಸಿಪೇಶನ್ (ನಿಶಿಸಕಿ A., 2008). ಹಾಗೆಯೇ ಸಿಮ್ಯುಲೇಶನ್ ತರಬೇತಿಯಿಂದಾಗಿ ನೈಜ ಸಂದರ್ಭಗಳಲ್ಲಿ ಸೇವೆಯ ಗುಣಮಟ್ಟದಲ್ಲಿ ಯಾವುದೇ ರೀತಿಯ ನಷ್ಟವಾಗದೆ ವೈದ್ಯಕೀಯ ವಿದ್ಯಾರ್ಥಿಯ ಕಾರ್ಯವೈಖರಿಯಲ್ಲಿ ಅಭಿವೃದ್ಧಿಯಾಗಿದೆ. ಸಿಮ್ಯುಲೇಶನ್ ತರಬೇತಿಯನ್ನು ಪಡೆದ ವೈದ್ಯಕೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವುದರಿಂದ ರೋಗಿಗಳ ಸುರಕ್ಷತೆ ನಿಶ್ಚಿತವಾಗಿಯೂ ಹೆಚ್ಚಾಗುವುದು ಎಂದು ಊಹಿಸಲಾಗಿದೆ. ಈ ಊಹೆಯನ್ನು ದೃಢಪಡಿಸುವುದಕ್ಕಾಗಿ ಸಂಶೋಧನೆಯನ್ನು ನಡೆಸಲಾಯಿತು. ಆದರೆ ಇದರಿಂದ ದೊರೆತ ಫಲಿತಾಂಶವನ್ನು ಇತರ ಪರಿಸ್ಥಿತಿಗಳಿಗೆ ಸಾಮಾನ್ಯವಾಗಿರಬಹುದು ಅಥವಾ ಸಾಮಾನ್ಯವಾಗಿಲ್ಲದಿರಬಹುದು.
ಆರೋಗ್ಯ ರಕ್ಷಣೆಯ ಸಿಮ್ಯುಲೇಶನ್‌ನ ಇತಿಹಾಸ
ಬದಲಾಯಿಸಿಮೊದಲ ವೈದ್ಯಕೀಯ ಸಿಮ್ಯುಲೇಟರ್‌ಗಳು ಮಾನವ ರೋಗಿಗಳ ಸರಳ ಮಾದರಿಗಳಾಗಿದ್ದವು.[೧೧]
ರೋಗದ ವೈದ್ಯಕೀಯ ಲಕ್ಷಣ ಮತ್ತು ಮನುಷ್ಯರಲ್ಲಿ ಅವುಗಳು ಉಂಟುಮಾಡುವ ಪರಿಣಾಮವನ್ನು ವಿವರಿಸಲು ಮೊದಲೆಲ್ಲಾ ಬಳಸುತ್ತಿದ್ದುದು ಮಣ್ಣು ಅಥವಾ ಕಲ್ಲಿನಿಂದ ಮಾಡಿದ ಪ್ರತಿಕೃತಿಗಳನ್ನು . ಇಂತಹ ಮಾದರಿಗಳು ಹಲವಾರು ಖಂಡಗಳ ಅನೇಕ ಸಂಸ್ಕೃತಿಗಳಲ್ಲಿ (ನಾಗರಿಕತೆ) ಕಂಡುಬರುತ್ತದೆ. ಕೆಲವು ಸಂಸ್ಕೃತಿಗಳಲ್ಲಿ ಇಂತಹ ಸಾಧನಗಳನ್ನು (ಉದಾ., ಚೀನಾ ಸಂಸ್ಕೃತಿ) "ರೋಗ ನಿರ್ಣಯ" ಸಾಧನವಾಗಿ ಬಳಸುತ್ತಿದ್ದರು. ಹೀಗಾಗಿ ಸಮಾಜದ 'ಮಡಿವಂತ' ಕಾನೂನು ಅಸ್ಥಿತ್ವದಲ್ಲಿದ್ದಾಗ ಮಹಿಳೆಯರು ಪುರುಷ ವೈದ್ಯರ ಬಳಿ ಸಲಹೆ ಕೇಳಲು ಅನುವಾಗುತ್ತಿತ್ತು. ಸ್ನಾಯು ಮತ್ತು ಮೂಳೆಯ ವ್ಯವಸ್ಥೆಯನ್ನು ಮತ್ತು ಅಂಗಾಂಗ ರಚನಾ ವ್ಯವಸ್ಥೆಗಳಿಂದ ಕೂಡಿದ ದೇಹರಚನೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಸಹಾಯವಾಗುವಂತೆ ಇಂದು ಈ ಮಾದರಿಗಳನ್ನು ಬಳಸಲಾಗುವುದು.[೧೧]
ಮಾದರಿಗಳ ವಿಧಗಳು
ಬದಲಾಯಿಸಿ- ಸಕ್ರಿಯ ಮಾದರಿಗಳು
- ಸಕ್ರಿಯ ಮಾದರಿಗಳು ಸಜೀವವಾದ ದೇಹ ರಚನೆ ಅಥವಾ ದೈಹಿಕ ಕ್ರಿಯೆಯನ್ನು ಹೇಗಿದೆಯೋ ಹಾಗೆ ಉತ್ಪಾದಿಸುವಂಥ ಸುಧಾರಣೆ ಇತ್ತೀಚಿನ ದಿನಗಳ ಪ್ರಯತ್ನ. ಮೈಮಿ ವಿಶ್ವವಿದ್ಯಾಲಯವು ಜನಪ್ರಿಯ ಮಾದರಿ “ಹಾರ್ವೆ” ಮನ್ನೆಕಿನ್‌ಯನ್ನು ಅಭಿವೃದ್ಧಿಪಡಿಸಿತು ಮತ್ತು ಇದು ನಾಡಿ ಬಡಿತ, ಅಲಿಸುವಿಕೆ ಮತ್ತು ವಿದ್ಯುತ್‌ಹೃಲ್ಲೇಖನ (electrocardiography) ಸೇರಿದಂತೆ ಹೃದಯ ವಿಜ್ಞಾನಕ್ಕೆ(cardiology) ಸಂಬಧಿಸಿದ ತಪಾಸಣಾ ಫಲಿತಾಂಶವನ್ನು ತಿಳಿಸುವುದು.
- ಪರಸ್ಪರ ಕಾರ್ಯನಿರ್ವಹಿಸುವ ಮಾದರಿಗಳು
- ವಿದ್ಯಾರ್ಥಿಗಳು ಅಥವಾ ವೈದ್ಯರು ನೀಡಿದ ಚಿಕಿತ್ಸೆಗೆ ಪ್ರತಿಕ್ರಿಯಿಸುವ ಪರಸ್ಪರ ಕಾರ್ಯನಿರ್ವಹಿಸುವ ಮಾದರಿಗಳನ್ನು ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು] ಈವರೆವಿಗೂ, ಈ ಸಿಮ್ಯುಲೇಶನ್‌ಗಳು ದ್ವಿಮಿತೀಯ ಕಂಪ್ಯೂಟರ್ ಪ್ರೋಗ್ರಾಮ್‌ಗಳಾಗಿದ್ದವು, ಅವುಗಳು ರೋಗಿಯಂತಿರದೆ ಕೇವಲ ಪಠ್ಯ ಪುಸ್ತಕದಂತಿದ್ದವು. ಕಂಪ್ಯೂಟರ್ ಸಿಮ್ಯುಲೇಶನ್‌ಗಳು ವಿದ್ಯಾರ್ಥಿಗಳಿಗೆ ನಿರ್ಣಯವನ್ನು ತೆಗೆದುಕೊಳ್ಳಲು ಮತ್ತು ತಪ್ಪುಗಳನ್ನು ಮಾಡಲು ಅವಕಾಶ ನೀಡುತ್ತಿದ್ದವು. ರೋಗ ನಿರ್ಣಯ, ಮೌಲ್ಯಮಾಪನ, ನಿರ್ಧಾರ ತಗೆದುಕೊಳ್ಳುವಿಕೆ ಮತ್ತು ದೋಷ ಸರಿಪಡಿಸಿಕೊಳ್ಳುವಿಕೆ ಪಾರಸ್ಪರಿಕ ಕಲಿಕೆಯ ಪ್ರಕ್ರಿಯೆಯು ಚುರುಕಲ್ಲದ ಶಿಕ್ಷಣ ಬೋಧನೆಗಿಂತ ತುಂಬಾ ಪರಿಣಾಮಕಾರಿಯಾಗಿದೆ.
- ಕಂಪ್ಯೂಟರ್ ಸಿಮ್ಯುಲೇಟರ್‌ಗಳು
- ವಿದ್ಯಾರ್ಥಿಯ ವೈದ್ಯಕೀಯ ಕೌಶಲ್ಯ ಮೌಲ್ಯಮಾಪನ ಮಾಡಲು ಸಿಮ್ಯುಲೇಟರ್‌ಗಳು ಉತ್ತಮ ಸಾಧನವೆಂದು ಪರಿಗಣಿಸಲಾಗಿದೆ.
- ಹೆಚ್ಚಾಗಿ ದುರ್ಘಟನೆಯ ಅಣಕಗಳನ್ನು ಒಳಗೊಂಡಿರುವ ಪ್ರೋಗ್ರಾಮ್ ಮಾಡಿದ, ಕಲ್ಪಿತ ರೋಗಿಗಳ, ಮತ್ತು ಕೃತಕ ವೈದ್ಯಕೀಯ ಸನ್ನಿವೇಶ-ಇವುಗಳನ್ನು ಶಿಕ್ಷಣ ಮತ್ತು ಮೌಲ್ಯಮಾಪನದಲ್ಲಿ ಬಳಸುತ್ತಾರೆ. ಈ “ಜೀವಸದೃಶ” ಸಿಮ್ಯುಲೇಶನ್‌ಗಳು ವೆಚ್ಚದಾಯಕವಾಗಿದ್ದು, ಪ್ರತಿಸೃಸ್ಟಿಯ ಸಾಮರ್ಥ್ಯವನ್ನು ಹೊಂದಿಲ್ಲ. ಸಂಪೂರ್ಣ ಕಾರ್ಯನಿರ್ವಹಿಸುವ "3Di" ಸಿಮ್ಯುಲೇಟರ್‌ಗಳು ವೈದ್ಯಕೀಯ ಶಿಕ್ಷಣ ಮತ್ತು ಮೌಲ್ಯಮಾಪನಕ್ಕೆ ನಿರ್ದಿಷ್ಟವಾಗಿ ಬಳಸುವ ಸಾಧನವಾಗಿದೆ.
- ವೈದ್ಯರು ಅಥವಾ HCPಗೆ ರೋಗದ ಅನುಭವವನ್ನು ಪಡೆಯಲು ನೀರಿನಿಂದ ಹರಡುವ ರೋಗಗಳಿಗೆ ಸಂಬಂಧಪಟ್ಟ ಸಿಮ್ಯುಲೇಶನ್‌ಗಳು ಸಹಾಯ ಮಾಡುವುದು. ವೈದ್ಯಕೀಯ ವಿದ್ಯಾರ್ಥಿಗಳು ರೋಗದ ಪರಿಣಾಮಗಳನ್ನು ತಿಳಿಯಲು ಸಂವೇದಕಗಳು ಮತ್ತು ಸಂಜ್ಞಾಪರಿವರ್ತಕವನ್ನು ಬಳಸುವರು.
- ವಿದ್ಯಾರ್ಥಿಯ ವೈದ್ಯಕೀಯ ಅರ್ಹತೆಯನ್ನು ಅಳೆಯಲು ಪರೀಕ್ಷೆಗಳನ್ನು ನಡೆಸಲಾಗುವುದು. ಈ ಪರೀಕ್ಷೆಯಲ್ಲಿ ಸಿಮ್ಯುಲೇಟರ್‌ಗಳ ಬಳಕೆಯಿಂದ ಅದರ ಉದ್ದೇಶಗಳು ಪೂರ್ಣಗೊಳ್ಳುವುದು ಮತ್ತು ಪರೀಕ್ಷೆಯ ಗುಣಮಟ್ಟವು ಉತ್ತಮಗೊಳ್ಳುವುದು.[೧೨] "ಪ್ರಮಾಣಿತ ರೋಗಿಗಳನ್ನು" ಬಳಸುವ ಈ ವ್ಯವಸ್ಥೆಯು ಸಾಮಾನ್ಯ ಪರೀಕ್ಷೆಗಿಂತ ಉತ್ತಮವಾಗಿದೆ. ಏಕೆಂದರೆ ಇದರಲ್ಲಿ ಅದೇ ವಸ್ತುವನ್ನು ಪ್ರತಿಸೃಷ್ಟಿಸುವುದೂ ಸೇರಿದಂತೆ ವೈದ್ಯಕೀಯ ಕೌಶಲ್ಯವನ್ನು ಪರಿಮಾಣಾತ್ಮಕವಾಗಿ ಅಳೆಯಲಾಗುವುದು.[೧೩]
ಮನರಂಜನೆಯಲ್ಲಿ ಸಿಮ್ಯುಲೇಶನ್
ಬದಲಾಯಿಸಿಚಲನಚಿತ್ರ, ದೂರದರ್ಶನ, ವಿಡಿಯೋ ಆಟಗಳು ( ವಿಚಾರಾರ್ಹವಾದ ಆಟಗಳು ಸೇರಿದಂತೆ) ಮತ್ತು ಮನರಂಜನಾ ಉದ್ಯಾನಗಳಲ್ಲಿ ವಿವಿಧ ಸವಾರಿಗಳಂತಹ ಹಲವು ದೊಡ್ಡ ಮತ್ತು ಜನಪ್ರಿಯ ಉದ್ಯಮಗಳಲ್ಲಿ ಈ ಮನರಂಜನಾ ಸಿಮ್ಯುಲೇಶನ್ ಎಂಬ ಪದ ಆವರಿಸಿಕೊಂಡಿದೆ. ತರಬೇತಿ ಮತ್ತು ಸೈನ್ಯ ಕ್ಷೇತ್ರದಲ್ಲಿ ಆಧುನಿಕ ಸಿಮ್ಯುಲೇಶನ್ ಬೇರೂರಿದೆ ಎಂದೆಣಿಸಿದರೂ ಸಹ, 20ನೇ ಶತಮಾನದಲ್ಲಿ ಭೋಗವಾದೀ ಸಂಬಂಧದ ಸ್ವಭಾವವುಳ್ಳ ಉದ್ಯಮಗಳಲ್ಲಿ ಕೂಡಾ ಇದನ್ನು ಹೆಚ್ಚಾಗಿ ದುಡಿಸಿಕೊಳ್ಳಲಾಗಿದೆ. 1980 ಮತ್ತು 1990ನೇ ದಶಕದಲ್ಲಿ ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಸಿಮ್ಯುಲೇಶನ್ ಬಳಕೆ ಹೆಚ್ಚಾಯಿತು ಮತ್ತು ಇದನ್ನು ಜ್ಯುರಾಸಿಕ್ ಪಾರ್ಕ್ ನಂತಹ (1993) ಚಿತ್ರಗಳಲ್ಲಿ ಮತ್ತು ಅತಾರಿಯ ಬ್ಯಾಟಲ್‌ಜೋನ್ ನಂತಹ ಕಂಪ್ಯೂಟರ್ ಆಧಾರಿತ ಆಟಗಳಲ್ಲಿ ಬಳಸಲಾಯಿತು.
ಇತಿಹಾಸ
ಬದಲಾಯಿಸಿಆರಂಭಿಕ ಇತಿಹಾಸ (1940 ಮತ್ತು 50ನೇ ದಶಕ)
ಬದಲಾಯಿಸಿ1947ಗಿಂತ ಹಿಂದೆಯೆ ಥೋಮಸ್ T. ಗೋಲ್ಡ್‌ಸ್ಮಿತ್ Jr. ಮತ್ತು ಎಸ್ಟಲ್ ರೇ ಮಾನ್‌ರವರು ಮೊದಲ ಸಿಮ್ಯುಲೇಶನ್ ಆಟವನ್ನು ರಚಿಸಿದ್ದಿರಬಹುದು. ಇದು ಗುರಿಯತ್ತ ಸಿಡಿಮದ್ದುಗಳನ್ನು ಸಿಡಿಸುವ ಕ್ಷಿಪಣೆಯನ್ನು ಅನುಕರಣೆಯಂಥ ಸರಳ ಆಟವಾಟವಾಗಿತ್ತು. ಹಲವು ನಿಯಂತ್ರಕ ಗುಂಡಿಗಳನ್ನು ಬಳಸಿ, ಕ್ಷಿಪಣಿಯ ಬಾಗುವಿಕೆಯನ್ನೂ ಮತ್ತು ವೇಗವನ್ನೂ ಹೊಂದಿಸಬಹುದಾಗಿತ್ತು. 1958ರಲ್ಲಿ “ಟೆನ್ನಿಸ್ ಫಾರ್ ಟೂ ” ಎನ್ನುವ ಕಂಪ್ಯೂಟರ್ ಆಟವನ್ನು ವಿಲ್ಲಿ ಹಿಗ್ಗಿಂನ್‌ಬೋಥಮ್ ಎನ್ನುವವರು ರಚಿಸಿದರು. ಇದರಲ್ಲಿ ಕೈಯಲ್ಲಿರುವ ಗುಂಡಿ ಒತ್ತಿ ಏಕಕಾಲದಲ್ಲಿ ಇಬ್ಬರು ಆಟಗಾರರು ಟೆನ್ನಿಸ್ ಆಟ ಆಡಬಹುದಾದ ನಿಯಂತ್ರಣವಿತ್ತು, ಈ ಆಟವು ದೋಲದರ್ಶಕದಲ್ಲಿ ಗೋಚರಿಸುವಂತಿತ್ತು. ಇದು ಗ್ರಾಫಿಕಲ್ ನೋಟವನ್ನು ಬಳಸಿದ ಮೊದಲ ವಿದ್ಯುನ್ಮಾನ ವಿಡಿಯೋ ಆಟ.
ಆಧುನಿಕ ಸಿಮ್ಯುಲೇಶನ್ (1980ನೇ ದಶಕದಿಂದ ಇಲ್ಲಿಯವರೆಗೆ)
ಬದಲಾಯಿಸಿ1980ನೇ ದಶಕದಲ್ಲಿ ಆದ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಕಂಪ್ಯೂಟರ್‌ನ ಬೆಲೆ ಕಡಿಮೆಯಾಗಿತ್ತು ಮತ್ತು ಅವುಗಳು ಹಿಂದಿನ ದಶಕಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ್ದರಿಂದ,[೧೪] ಅದು ಕಂಪ್ಯೂಟರ್ ಆಟದ ಅಭಿವೃದ್ಧಿಗೆ ಅವಕಾಶ ಕಲ್ಪಿಸಿತು. 1970ನೇ ದಶಕದಲ್ಲಿ ಮೊದಲ ವಿಡಿಯೋ ಆಟ ಕನ್ಸೋಲ್‌ಗಳನ್ನು ಬಿಡುಗಡೆ ಮಾಡಲಾಯಿತು ಮತ್ತು 80ನೇ ದಶಕದ ಪ್ರಾರಂಭದಲ್ಲಿ, ಅಂದರೆ 1983ರಲ್ಲಿ ಈ ಉದ್ಯಮದಲ್ಲಿ ಕುಸಿತ ಉಂಟಾಯಿತು. ಆದರೆ 1985ರಲ್ಲಿ ನಿಂಟೆಂಡೊವು ನಿಂಟೆಂಡೊ ಎಂಟರ್‌ಟೈನ್‌ಮೆಂಟ್ ಸಿಸ್ಟಮ್ (NES) ಬಿಡುಗಡೆ ಮಾಡಿತು. ಇದು ವಿಡಿಯೋ ಆಟ ಇತಿಹಾಸದಲ್ಲಿ ಅತಿ ಹೆಚ್ಚು ಮಾರಾಟವಾದ ಕನ್ಸೋಲ್ ಆಗಿದೆ[೧೫]. 1990ನೇ ದಶಕದಲ್ಲಿ ದಿ ಸಿಮ್ಸ್ ಮತ್ತು ಕಮಾಂಡ್ ಆಂಡ್ ಕಾಂಕರ್ ನಂತಹ ಕಂಪ್ಯೂಟರ್ ಆಟಗಳು ಬಿಡುಗಡೆಯೊಂದಿಗೆ, ಅವುಗಳ ಜನಪ್ರಿಯತೆ ಹೆಚ್ಚಾಯಿತು. ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳ ಸಾಮರ್ಥ್ಯವು ಇಂದಿಗೂ ಹೆಚ್ಚಾಗುತ್ತಲೇ ಇದೆ. ಇಂದು ವರ್ಲ್ಡ್ ಆಫ್ ವಾರ್‌ಕ್ರ್ಯಾಫ್ಟ್ ನಂತಹ ಕಂಪ್ಯೂಟರ್ ಸಿಮ್ಯುಲೇಶನ್ ಆಟಗಳನ್ನು ವಿಶ್ವಾದ್ಯಂತ ಲಕ್ಷಾಂತರ ಜನರು ಆಡುತ್ತಿದ್ದಾರೆ.
1976ರ ಮೊದಲು ಕಂಪ್ಯೂಟರ್-ರಚಿತ ಆಕೃತಿಗಳನ್ನು ಅನುಕರಿಸಿದ ವಸ್ತುವಿನಂತೆ ಬಳಸಲಾಗಿತ್ತು, 1982ರಲ್ಲಿ ಟ್ರೋನ್ ಚಲನಚಿತ್ರದಲ್ಲಿ ಎರಡು ನಿಮಿಷಕ್ಕೂ ಹೆಚ್ಚು ಕಾಲ ಕಂಪ್ಯೂಟರ್-ರಚಿತ ಆಕೃತಿಯನ್ನು ಸೇರಿಸಲಾಗಿತ್ತು. ಆದರೂ, ಚಲನಚಿತ್ರವು ವಾಣಿಜ್ಯವಾಗಿ ವಿಫಲವಾದ್ದರಿಂದ, ಚಿತ್ರೋದ್ಯಮವು ಈ ತಂತ್ರಜ್ಞಾನದ ಬಳಕೆಯಿಂದ ಹಿಂಜರಿಯುವಂತೆ ಮಾಡಿತು[೧೬]. 1993ರಲ್ಲಿ, ಜ್ಯುರಾಸಿಕ್ ಪಾರ್ಕ್ ಚಲನಚಿತ್ರವು ಕಂಪ್ಯೂಟರ್-ರಚಿತ ಗ್ರಾಫಿಕ್ಸ್ ಅನ್ನು ವ್ಯಾಪಕವಾಗಿ ಬಳಸಿದ ಜನಪ್ರಿಯ ಚಿತ್ರವಾಗಿದ್ದು, ಚಿತ್ರದ ಹೆಚ್ಚಿನ ಸಾಹಸ ದೃಶ್ಯಗಳಲ್ಲಿ ಡೈನಾಸರ್‌ಗಳ ತದ್ರೂಪಿ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಇದು ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿತು; ' ಕೇವಲ ಕಂಪ್ಯೂಟರ್-ರಚಿತ ಚಿತ್ರಗಳನ್ನು ಬಳಸಿ, ಟಾಯ್ ಸ್ಟೋರಿ 1995ರಲ್ಲಿ ನಿರ್ಮಾಣಗೊಂಡ ಮೊದಲ ಚಲನಚಿತ್ರವಾಗಿದೆ ಮತ್ತು ಹೊಸ ಸಹಸ್ರವರ್ಷದಿಂದ ಕಂಪ್ಯೂಟರ್ ರಚಿತ ಗ್ರಾಫಿಕ್ಸ್ ಅನ್ನು ಚಿತ್ರಗಳಲ್ಲಿ ವಿಶೇಷ ಪರಿಣಾಮಗಳನ್ನು ನೀಡಲು ಹೆಚ್ಹೆಚ್ಚು ಬಳಸಲಾಯಿತು[೧೭].
1930ನೇ ದಶಕದ ಲಿಂಕ್ ಟ್ರೈನರ್‌ನಿಂದ ಇಂದಿನವರೆಗೂ ಸಿಮ್ಯುಲೇಟರ್‌ಗಳನ್ನು ಮನರಂಜನೆಯಲ್ಲಿ ಬಳಸಲಾಗುತ್ತಲೇ ಇದೆ[೧೮]. 1987ರಲ್ಲಿ ಮೊದಲ ಆಧುನಿಕ ಸಿಮ್ಯುಲೇಟರ್‌ವಾದ ಡಿಸ್ನಿಯ ಸ್ಟಾರ್ ಟೂರ್ಸ್ ಮನರಂಜನಾ ಉದ್ಯಾನದಲ್ಲಿ ಸವಾರಿಗೆ ಮುಕ್ತವಾಯಿತು. ಇದಾದ ನಂತರ 1990ರಲ್ಲಿ ಯುನಿವರ್ಸಲ್‌ನ ದಿ ಫಂಟಾಸ್ಟಿಕ್ ವರ್ಲ್ಡ್ ಆಫ್ ಹನ್ನಾ-ಬಾರ್ಬೆರಾವನ್ನು ಸವಾರಿಗೆ ಮುಕ್ತಗೊಳಿಸಲಾಯಿತು. ಇದು ಸಂಪೂರ್ಣ ಕಂಪ್ಯೂಟರ್ ಗ್ರಾಫಿಕ್ಸ್‌ನ್ನು ಬಳಸಿದ ಮೊದಲ ಸವಾರಿ.
ಮನರಂಜನಾ ಸಿಮ್ಯುಲೇಶನ್‌ಗಳ ಉದಾಹರಣೆಗಳು
ಬದಲಾಯಿಸಿಕಂಪ್ಯೂಟರ್ ಮತ್ತು ವಿಡಿಯೊ ಆಟಗಳು
ಬದಲಾಯಿಸಿಇತರ ಪ್ರಕಾರದ ವಿಡಿಯೋ ಮತ್ತು ಕಂಪ್ಯೂಟರ್ ಆಟಗಳು ವಿಡಿಯೋ ಪರಿಸರವನ್ನು ನಿಖರವಾಗಿ ಪ್ರತಿನಿಧಿಸುವ ಸಿಮ್ಯುಲೇಶನ್ ಆಟಗಳ ಪ್ರತಿರೋಧವನ್ನು ಎದುರಿಸಿದವು. ಅದಲ್ಲದೆ, ಆಡುತ್ತಿರುವ ವ್ಯಕ್ತಿಗಳು ಮತ್ತು ಪರಿಸರದೊಂದಿಗೆ ನೈಜ ರೀತಿಯಲ್ಲಿ ಪರಸ್ಪರ ಕಾರ್ಯ ನಿರ್ವಹಿಸುವುದನ್ನು ಪ್ರತಿನಿಧಿಸುವುದು. ಈ ಪ್ರಕಾರದ ಆಟಗಳನ್ನು ಆಡುವ ವಿಧಾನವು ಆಟ ಆಡುವುದು ಎಂಬರ್ಥದಲ್ಲಿ ತುಂಬಾ ಜಟಿಲವಾಗಿರುವುದು[೧೯]. ಎಲ್ಲಾ ವಯಸ್ಸಿನ ಜನರಲ್ಲಿ ಸಿಮ್ಯುಲೇಶನ್ ಆಟಗಳು ನಿರೀಕ್ಷೆಯನ್ನು ಮೀರಿ ಜನಪ್ರಿಯವಾಯಿತು ಮತ್ತು ಇದು ಆರ್ಥಿಕ ಕುಸಿತ ಸಂದರ್ಭದಲ್ಲಿ ತನ್ನ ಅಸ್ಥಿತ್ವ ಉಳಿಸಿಕೊಂಡ ಕೆಲವೇ ಉದ್ಯಮಗಳಲ್ಲಿ ಒಂದಾಗಿದೆ[೨೦].
ಜನಪ್ರಿಯ ಸಿಮ್ಯುಲೇಶನ್ ಆಟಗಳು
- ದಿ ಸಿಮ್ಸ್
- ಕಮಾಂಡ್ ಆಂಡ್ ಕಾಂಕರ್
- ಸಿಮ್ಸಿಟಿ
- ಬ್ಲಾಕ್ ಆಂಡ್ ವೈಟ್
- ಟೈಗರ್ ವುಡ್ಸ್ PGA ಟೂರ್
- ಟೋನಿ ಹಾಕ್ಸ್ ಪ್ರೊ ಸ್ಕೇಟರ್
- ನೀಡ್ ಫಾರ್ ಸ್ಪೀಡ್
- ವರ್ಲ್ಡ್ ಆಫ್ ವಾರ್‌ಕ್ರ್ಯಾಫ್ಟ್
ಸಿನಿಮಾ
ಬದಲಾಯಿಸಿ“ವಿಶೇಷ ಪರಿಣಾಮಗಳನ್ನು ನೀಡಲು 3D ಕಂಪ್ಯೂಟರ್ ಗ್ರಾಫಿಕ್ಸ್ ಅನ್ನು ಬಳಸುವ ಅನ್ವಯಿಕೆಯೇ” ಕಂಪ್ಯೂಟರ್-ರಚಿತ ಪ್ರತಿಮಾ ನಿರೂಪಣೆ ಎನಿಸಿದೆ. ಈ ತಂತ್ರಜ್ಞಾನವನ್ನು ದೃಗ್ಗೋಚರ ಪರಿಣಾಮಗಳಿಗೆ ಬಳಸಲಾಗುವುದು. ಏಕೆಂದರೆ ಅವುಗಳ ಗುಣಮಟ್ಟವು ಉತ್ತಮವಾಗಿದ್ದು, ನಿಯಂತ್ರಿಸಬಹುದಾಗಿದೆ ಮತ್ತು ಈ ತಂತ್ರಜ್ಞಾನದ ಮೂಲಕ ಇತರ ವಿಧಾನಗಳಿಗಿಂತ ಕಡಿಮೆ ವೆಚ್ಚ, ಸಂಪನ್ಮೂಲಗಳನ್ನು ಬಳಸಿ, ಹೆಚ್ಚು ಸುರಕ್ಷತೆಯೊಂದಿಗೆ ದೃಷ್ಟಿಗೋಚರ ಪರಿಣಾಮಗಳನ್ನು ರಚಿಸಬಹುದಾಗಿದೆ[೨೧]. ಈಗಿನ ಹೆಚ್ಚಿನ ಚಿತ್ರಗಳಲ್ಲಿ ಕಂಪ್ಯೂಟರ್-ರಚಿತ ಗ್ರಾಫಿಕ್ಸ್ ಅನ್ನು ಕಾಣಬಹುದಾಗಿದೆ. ವಿಶೇಷವಾಗಿ ಸಾಹಸ ಚಿತ್ರಗಳಲ್ಲಿ ಇದರ ಬಳಕೆ ಹೆಚ್ಚಿರುವುದು. ಕಂಪ್ಯೂಟರ್ ರಚಿತ ಪ್ರತಿಮೆಗಳು ಮಕ್ಕಳ ಚಿತ್ರಗಳಲ್ಲಿ ಬಳಸುವ ಡಿಸ್ನಿ-ಶೈಲಿಯ (ಕೈಯಲ್ಲಿ ಬಿಡಿಸಿದ) ಅನಿಮೇಷನ್‌ನ ಸ್ಥಾನವನ್ನು ಸಂಪೂರ್ಣವಾಗಿ ಆಕ್ರಮಿಸಿತು. ನಂತರ ಬಂದ ಹೆಚ್ಚಿನ ಚಿತ್ರಗಳು ಕಂಪ್ಯೂಟರ್ ರಚಿತ ಮಾತ್ರವಾಗಿದ್ದವು.
ಕಂಪ್ಯೂಟರ್-ರಚಿತ ಪ್ರತಿಮೆಗಳನ್ನು ಬಳಸಿದ ಚಲನಚಿತ್ರಗಳ ಉದಾಹರಣೆಗಳೆಂದರೆ:
ಮನರಂಜನಾ ಉದ್ಯಾನ ಸವಾರಿಗಳು
ಬದಲಾಯಿಸಿಸವಾರಿ ಸಿಮ್ಯುಲೇಟರ್ ಸೈನಿಕ ತರಬೇತಿ ಮತ್ತು ವಾಣಿಜ್ಯ ಸಿಮ್ಯುಲೇಟರ್‌ಗಳ ಉಗಮಕ್ಕೆ ಕಾರಣವಾಯಿತು. ಆದರೆ ಮೂಲಭೂತವಾಗಿ ಅವೆರಡೂ ವಿಭಿನ್ನ. ಸೈನಿಕ ತರಬೇತಿ ಸಿಮ್ಯುಲೇಟರ್‌ಗಳು ವಿದ್ಯಾರ್ಥಿ ನೀಡಿದ ದತ್ತ ಮಾಹಿತಿಗೆ ನೈಜವಾಗಿ ಏಕಕಾಲದಲ್ಲಿ ಪ್ರತಿಕ್ರಯಿಸುವಾಗ, ಸವಾರಿ ಸಿಮ್ಯುಲೇಟರ್‌ಗಳು ನಿಜವಾಗಲೂ ಚಲಿಸುವಂತೆ ಭಾಸವಾಗುವುದು ಮತ್ತು ಅವುಗಳು ಮೊದಲೇ ಮುದ್ರಿಸಲಾದ ಚಲನೆಯ ಸಾಹಿತ್ಯದ ಪ್ರಕಾರ ಚಲಿಸುವುದೇನೋ ಎನ್ನುವಂತೆ ಭಾಸವಾಗುವುದು. ಸ್ಟಾರ್ ಟೂರ್ಸ್ ಎಂಬುದು $32 ದಶಲಕ್ಷದಷ್ಟು ವೆಚ್ಚ ತಗುಲಿದ,ಮೊದಲ ಸಿಮ್ಯುಲೇಟರ್ ಸವಾರಿಗಳಲ್ಲಿ ಒಂದು, ಅವುಗಳಲ್ಲಿ ವಿಭಾಗಗಳಾಧರಿತ ಹೈಡ್ರಾಲಿಕ್ ಚಲನೆಯಯನ್ನು ಬಳಸಲಾಗಿದೆ. ಚಲನೆಯನ್ನು ಜಾಯ್‌ಸ್ಟಿಕ್ ಮೂಲಕ ಆಡುವಂತೆ ಪ್ರೋಗ್ರಾಮ್ ಮಾಡಲಾಗಿರುವುದು. 3D ಅಕೃತಿ, ಭೌತಿಕ ಪರಿಣಾಮಗಳು (ನೀರನ್ನು ಸಿಂಪಡಿಸುವಿಕೆ ಅಥವಾ ಪರಿಮಳ ದ್ರವ್ಯಗಳನ್ನು ಉತ್ಪಾದನೆ), ಮತ್ತು ಪರಿಸರದ ಮೂಲಕ ಚಲನೆಯಂತಹ ಸವಾರಿಗಳ ಮೂಲಕ ಅನುಭವ ಹೊಂದಿದ ಜಲದ ಪ್ರಮಾಣವನ್ನು ಏರಿಕೆಯ ಮೂಲಕ ಮನರಂಜನೆಯನ್ನು ನೀಡುವ ಅಂಶಗಳನ್ನು ಒಳಗೊಂಡಿರುವ ದಿ ಅಮೇಜಿಂಗ್ ಅಡ್ವೆಂಚರ್ಸ್ ಆಫ್ ಸ್ಪೈಡರ್-ಮ್ಯಾನ್‌ನಂತಹವುಗಳು ಪ್ರಸ್ತುತ ಸಿಮ್ಯುಲೇಟರ್ ಸವಾರಿಗಳಾಗಿವೆ.[೨೨]
ಸಿಮ್ಯುಲೇಶನ್ ಸವಾರಿಗಳು
- ಸೋರಿನ್’ ಓವರ್ ಕ್ಯಾಲಿಫೋರ್ನಿಯಾ
- ದಿ ಅಮೇಜಿಂಗ್ ಅಡ್ವೆಂಚರ್ಸ್ ಆಫ್ ಸ್ಪೈಡರ್ಮ್ಯಾನ್
- ಮಿಶನ್ ಸ್ಪೇಸ್
- ದಿ ಸಿಂಪ್ಸನ್ಸ್ ರೈಡ್
- ಸ್ಟಾರ್ ಟೂರ್ಸ್
ವಿವಿಧ ವಲಯಗಳಲ್ಲಿನ ಇನ್ನಷ್ಟು ಉದಾಹರಣೆಗಳು
ಬದಲಾಯಿಸಿನಗರ ಸಿಮ್ಯುಲೇಟರ್‌ಗಳು / ಪಟ್ಟಣ ಸಿಮ್ಯುಲೇಶನ್
ಬದಲಾಯಿಸಿನಗರ ಸಿಮ್ಯುಲೇಟರ್ Archived 2009-04-30 ವೇಬ್ಯಾಕ್ ಮೆಷಿನ್ ನಲ್ಲಿ. ಒಂದು ಆಟವಾಗಿದೆ. ಆದರೆ ವಿವಿಧ ನೀತಿ-ನಿರ್ಣಯಗಳಿಗೆ ಪ್ರತಿಕ್ರಿಯಿಸುವ ಮೂಲಕ ನಗರಗಳು ಹೇಗೆ ಬದಲಾಗುತ್ತದೆ ಎನ್ನುವುದನ್ನು ತಿಳಿಯಲು ನಗರ ಯೋಜಕರು ಬಳಸುವ ಸಾಧನವಿದು. ಅರ್ಬನ್‌ಸಿಮ್ Archived 2009-08-22 ವೇಬ್ಯಾಕ್ ಮೆಷಿನ್ ನಲ್ಲಿ. (ವಾಶಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಪಡಿಸಿದ್ದು), AnyLogic, ILUTE (ಟೊರೆಂಟೊ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಪಡಿಸಿದ್ದು) ಮತ್ತು ಡಿಸ್ಟ್ರಿಮೊಬ್ಸ್[permanent dead link] (ಬೊಲೊಗ್ನಾ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಪಡಿಸಿದ್ದು)- ಇವು ಪಟ್ಟಣ ಯೋಜಕರು ಬಳಸಲಿಕ್ಕಾಗಿ ವಿನ್ಯಾಸಗೊಳಿಸಿದ ಆಧುನಿಕ, ದೊಡ್ಡ-ಪ್ರಮಾಣದ ಪಟ್ಟಣ ಸಿಮ್ಯುಲೇಟರ್‌ಗಳಿಗೆ ಉದಾಹರಣೆಳು. ಸಾಮಾನ್ಯವಾಗಿ ನಗರ ಸಿಮ್ಯುಲೇಟರ್‌ಗಳು ಭೂ ಬಳಕೆಗೆ ಮತ್ತು ಸಾರಿಗೆಗಾಗಿ ಬಳಸುವ ಪರಾವಲಂಬಿ ಸಿಮ್ಯುಲೇಶನ್‌ಗಳಾಗಿವೆ.
ಭವಿಷ್ಯದ ಶಾಲಾ ಕೊಠಡಿ
ಬದಲಾಯಿಸಿ"ಭವಿಷ್ಯದ ಶಾಲಾ ಕೊಠಡಿ"ಯು ಪಠ್ಯ ಮತ್ತು ದೃಗ್ಗೋಚರ ಸಾಧನಗಳಲ್ಲದೆ, ಹಲವು ರೀತಿಯ ಸಿಮ್ಯುಲೇಟರ್‌ಗಳನ್ನು ಒಳಗೊಂಡಿರುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಉತ್ತಮ ತಯಾರಿ ಮತ್ತು ಹೆಚ್ಚಿನ ಕೌಶಲದೊಂದಿಗೆ ಶಿಕ್ಷಣ ಪ್ರಾರಂಭಿಸಲು ಇದರಿಂದಾಗಿ ಸಾಧ್ಯವಾಗುವುದು. ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಅಥವಾ ಸ್ನಾತಕೋತ್ತರ ವಿದ್ಯಾರ್ಥಿಗಳು ಹೆಚ್ಚು ಜ್ಞಾನವನ್ನು ಹೊಂದಿದ್ದು, ತಮ್ಮ ಕೌಶಲ್ಯಗಳೊಂದಿಗೆ ಗಳಿಸಿದ ಜ್ಞಾನವನ್ನು ಉಳಿಸಿಕೊಳುವ ವಿಧಾನ ಅಥವಾ ಹೊಸ ವೈದ್ಯಕೀಯ ಕಾರ್ಯವಿಧಾನಗಳನ್ನು ತಿಳಿದಿರುತ್ತಾರೆ.ಆಡಳಿತ ಮಂಡಳಿಗೆ ಮತ್ತು ವೈದ್ಯಕೀಯ ಸಂಸ್ಥೆಗಳಿಗೆ ವಿದ್ಯಾರ್ಥಿಯ ಅರ್ಹತೆ ಮತ್ತು ದಕ್ಷತೆಯನ್ನು ಕಂಡುಹಿಡಿಯುವುದು ಸುಲಭವಾಗುತ್ತದೆ.
ಭವಿಷ್ಯದ ತರಗತಿಯು ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರಿಸುವುದಕ್ಕಾಗಿ ವೈದ್ಯಕೀಯ ಕೌಶಲ್ಯಗಳನ್ನು ಆಧರಿಸಿದ ಒಂದು ಪ್ರಕಾರವಾಗಿದೆ, ಮತ್ತು ಇದೇ ರೀತಿಯಲ್ಲಿ ಆಗಾಗ ನಡೆಸುವ ವಿಮಾನ ಚಾಲನೆ ತರಬೇತಿಯು ವಿಮಾನ ಚಾಲಕರಿಗೆ ಸಹಾಯವಾಗುವುದು. ಹೀಗೆ ಅಭ್ಯಾಸ ಮಾಡಿದವರಿಗೆ ತಂತ್ರಜ್ಞಾನವು ಅವರ ವೃತ್ತಿಯಾದ್ಯಂತ ಸಹಾಯವನ್ನು ಮಾಡುವುದು.[ಸೂಕ್ತ ಉಲ್ಲೇಖನ ಬೇಕು]
"ಬಳಸುವ" ಪಠ್ಯ ಪುಸ್ತಕಕ್ಕಿಂತ ಸಿಮ್ಯುಲೇಟರ್ ಹೆಚ್ಚು ಪರಿಣಾಮಕಾರಿಯಾಗಿದ್ದು, ಅದು ವೈದ್ಯಕೀಯ ವೃತ್ತಿಯ ಒಂದು ಅಂಗವಾಗಿ ಬಿಟ್ಟಿದೆ.[ಸೂಕ್ತ ಉಲ್ಲೇಖನ ಬೇಕು] ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪಠ್ಯಕ್ರಮದ ಅಭಿವೃದ್ಧಿಗಾಗಿ ಸಿಮ್ಯುಲೇಟರ್ ಪರಿಸರವು ಒಂದು ಉತ್ತಮ ವೇದಿಕೆಯಾಗಿದೆ.
ಜೀವನಚಕ್ರದ ಡಿಜಿಟಲ್ ಸಿಮ್ಯುಲೇಶನ್
ಬದಲಾಯಿಸಿಸಿಮ್ಯುಲೇಶನ್ ಪರಿಹಾರಗಳು CAx (CAD, CAM, CAE....) ಪರಿಹಾರಗಳು ಮತ್ತು ಪ್ರಕ್ರಿಯೆಗಳೊಂದಿಗೆ ಹೆಚ್ಚಾಗಿ ಸಂಬಂಧಿಸಿದೆ. ಸಿಮ್ಯುಲೇಶನ್ ಉತ್ಪನ್ನವೊಂದರ ಬಳಕೆಯಚಕ್ರದಂತೆ ಪ್ರಯೋಜನಕ್ಕೆ ಬರುತ್ತದೆ. ಇದು ವಿಶೇಷವಾಗಿ ಉತ್ಪನ್ನದ ಪರಿಕಲ್ಪನೆ ಮತ್ತು ವಿನ್ಯಾಸ ಹಂತದ ಮೊದಲು ಬದಲಿ ಅನುಕೂಲಗಳನ್ನು ಒದಗಿಸುವ ಸಾಧ್ಯತೆಯನ್ನು ಹೊಂದಿರುವುದು. ಉತ್ಪನ್ನದ ಮೂಲಮಾದರಿ ತಯಾರಿಕೆಯಲ್ಲಿ ಮತ್ತು ಅಲ್ಪಾವಧಿಯಲ್ಲೇ ಉತ್ಪನ್ನಕ್ಕೆ ಮಾರುಕಟ್ಟೆ ಒದಗಿಸುವಲ್ಲಿ, ವೆಚ್ಚ ತಗ್ಗಿಸುವಲ್ಲಿ ಹಾಗೂ ಉತ್ಪನ್ನ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ಮತ್ತು ಹೆಚ್ಚಿನ ಲಾಭ ಗಳಿಸುವಂಥ ಅನುಕೂಲಗಳನ್ನು ಇದು ಒಳಗೊಂಡಿವೆ. ಆದರೂ, ಕೆಲವು ಕಂಪನಿಗಳು ಸಿಮ್ಯುಲೇಶನ್‌ನಿಂದ ನಿರೀಕ್ಷಿತ ಪ್ರಯೋಜನವನ್ನು ಪಡೆದಿಲ್ಲ.
ಈವರೆಗೆ ಯಾರು ಮಾಡದ 3 ಅಥವಾ 4 ಮಂದಗತಿಗಳಿಗೆ ಹೋಲಿಸಿದಂತೆ ವಿನ್ಯಾಸ ಪ್ರಕ್ರಿಯೆಯಲ್ಲಿ ಮೊದಲು ಅಬರ್ದೀನ್ ಗ್ರೂಪ್ ಸಂಶೋಧನಾ ಸಂಸ್ಥೆ ಸಿಮ್ಯುಲೇಶನ್ ಅನ್ನು ಬಳಕೆ ಮಾಡಿದ ಅತ್ಯುತ್ತಮ ಉತ್ಪಾದಕ ಸಂಸ್ಥೆಯಾಗಿದೆ.
ಉತ್ಪನ್ನದ ಜೀವನಚಕ್ರದ ಪ್ರಾರಂಭ ಹಂತದಲ್ಲಿ ಸಿಮ್ಯುಲೇಶನ್ ಯಶಸ್ವಿ ಬಳಕೆಯಾಗುತ್ತದೆ. ಈ ಹಂತದಲ್ಲಿ ಸಂಪೂರ್ಣವಾಗಿ CAD, CAM ಮತ್ತು PLM ಪರಿಹಾರದ ಗುಂಪಿನೊಂದಿಗೆ ಸಿಮ್ಯುಲೇಟರ್‌ಗಳನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುವುದು. ಸಿಮ್ಯುಲೇಶನ್ ಪರಿಹಾರಗಳು ಈಗ ಬಹು-CAD ಪರಿಸರದಲ್ಲಿ ವಿಸ್ತರಿತ ಉದ್ಯಮದಾದ್ಯಂತ ಕಾರ್ಯನಿರ್ವಹಿಸಬಹುದು ಮತ್ತು ನಿರ್ವಾಹಕ ಸಿಮ್ಯುಲೇಶನ್ ದತ್ತಾಂಶ ಮತ್ತು ಪ್ರಕ್ರಿಯೆಗಳಿಗೆ ಪರಿಹಾರಗಳು ಸೇರಿದಂತೆ ಉತ್ಪನ್ನದ ಜೀವನಚಕ್ರದ ಇತಿಹಾಸದ ಭಾಗವಾಗಿರುವ ಸಿಮ್ಯುಲೇಶನ್ ಫಲಿತಾಂಶಗಳನ್ನು ಖಚಿತಪಡಿಸುವುದು. ಸಿಮ್ಯುಲೇಶನ್ ಪ್ರಕ್ರಿಯೆ ಭಾಗವಾಗಿ ತಗೆದುಕೊಳ್ಳಲು ಎಲ್ಲಾ ಸೂಕ್ತ PLM ಭಾಗಿಗಳನ್ನು ಅನುವು ಮಾಡುವ ಸೂಕ್ತ ಬಳಕೆದಾರ ಅಂತರ್ವರ್ತನಗಳು ಮತ್ತು "ವಿಜಾರ್ಡ್"ಗಳಂತವು ಅಭಿವೃದ್ಧಿ ಹೊಂದಿದ ಅಂತರ್ವರ್ತನಗಳಾಗಿದ್ದು, ಇವುಗಳ ಮೂಲಕ ಸಂಪೂರ್ಣ ಜೀವನ ಚಕ್ರದಲ್ಲಿ ಸಿಮ್ಯುಲೇಶನ್ ಬಳಸುವ ಸಾಮರ್ಥ್ಯವನ್ನು ವೃದ್ಧಿಸಬಹುದು.
ಅನಾಹುತ ಎದುರಿಸುವ ಸಿದ್ಧತೆ ಮತ್ತು ಸಿಮ್ಯುಲೇಶನ್ ತರಬೇತಿ
ಬದಲಾಯಿಸಿಸಿಮ್ಯುಲೇಶನ್ ತರಬೇತಿಯು ಅನಾಹುತದ ಸಂದರ್ಭಗಳನ್ನು ಎದುರಿಸಲು ಜನರನ್ನು ಅಣಿಗೊಳಿಸುವ ವಿಧಾನವಾಗಿದೆ. ತುರ್ತು ಪರಿಸ್ಥಿತಿಗಳ ಪ್ರತಿಕೃತಿಯನ್ನು ಸಿಮ್ಯುಲೇಶನ್‌ಗಳು ಸೃಷ್ಟಿಸಬಲ್ಲದು ಮತ್ತು ಅವುಗಳಿಗೆ ವಿದ್ಯಾರ್ಥಿಯು ಹೇಗೆ ಪ್ರತಿಕ್ರಯಿಸುತ್ತಾನೆ ಎನ್ನುವುದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದು. ಭಯೋತ್ಪಾದಕರ ದಾಳಿ, ಪ್ರಕೃತಿ ವಿಕೋಪ, ಸಾಂಕ್ರಾಮಿಕ ರೋಗ ಹರಡುವಿಕೆ, ಅಥವಾ ಇತರ ಜೀವ ಬೆದರಿಕೆ ಸಂದರ್ಭಗಳನ್ನು ಹೇಗೆ ನಿಭಾಯಿಸುವುದು ಎನ್ನುವುದನ್ನು ಒಳಗೊಂಡಿರುವ ತರಬೇತಿಯಲ್ಲಿ ಅನಾಹುತ ಸಂದರ್ಭಗಳನ್ನು ಎದುರಿಸುವ ಪೂರ್ವ ತಯಾರಿಗಾಗಿ ಸಿಮ್ಯುಲೇಶನ್‌ಗಳನ್ನು ಬಳಸುವರು.
CADE (ಸೆಂಟರ್ ಫಾರ್ ಎಡ್ವಾನ್ಸ್‌ಮೆಂಟ್ ಆಫ್ ಡಿಸ್ಟೆನ್ಸ್ ಎಜ್ಯುಕೇಷನ್) ಎನ್ನುವ ಸಂಸ್ಥೆಯು ಅಪಾಯದ ಸಂದರ್ಭವನ್ನು ನಿಭಾಯಿಸುವ ಪೂರ್ವ ತಯಾರಿಗಾಗಿ ಸಿಮ್ಯುಲೇಶನ್ ತರಬೇತಿಯನ್ನು ಬಳಸಿದೆ. CADE[೨೩] ಸಂಸ್ಥೆಯು ತುರ್ತು ಪರಿಸ್ಥಿತಿ ನಿಭಾಯಿಸುವ ಕಾರ್ಯಕರ್ತರು ವಿವಿಧ ದಾಳಿಗಳಿಗೆ ತಯಾರಾಗಲು ವಿಡಿಯೋ ಗೇಮ್ ಅನ್ನು ಬಳಸಿತ್ತು. ”ತುರ್ತುಪರಿಸ್ಥಿತಿ ನಿಭಾಯಿಸುವ ಕಾರ್ಯಕರ್ತರು ಜೈವಿಕ ಭಯೋತ್ಪಾದನೆ, ಸಾಂಕ್ರಾಮಿಕ ಜ್ವರ, ಸಿಡುಬು ಮತ್ತು ಇತರ ದುರಂತಗಳನ್ನು ನಿಭಾಯಿಸಲು ಪೂರ್ವತಯಾರಿ ನಡೆಸಬೇಕು. ಈ ದುರಂತಗಳನ್ನು ಗುರುತಿಸಲು ವಿಡಿಯೊ ಗೇಮ್ ಸಿಮ್ಯುಲೇಶನ್‌ಗಳ ಮೊದಲ ಸರಣಿಯಾಗಿದೆ[೨೪]”ಎಂದು News-Medical.Net ವರದಿ ಮಾಡಿದೆ. ಚಿಕಾಗೊದಲ್ಲಿರುವ ಇಲಿನೊಯ್ಸ್ ವಿಶ್ವವಿದ್ಯಾಲಯದ (UIC) ತಂಡವು ಅಭಿವೃದ್ಧಿಸಿದ ಆಟವು ವಿದ್ಯಾರ್ಥಿಗಳಿಗೆ ಸುರಕ್ಷಿತ, ನಿಯಂತ್ರಿತ ಪರಿಸರದಲ್ಲಿ ತಮ್ಮ ತುರ್ತುಪರಿಸ್ಥಿಯ ಕೌಶಲ್ಯಗಳನ್ನು ಅಭ್ಯಾಸ ಮಾಡಲು ಅನುವು ಮಾಡಿಕೊಡುವುದು.
ಕೆನಡಾದ ಬ್ರಿಟಿಷ್ ಕೊಲಂಬಿಯಾದ ವ್ಯಾನ್‌ಕೋವರ್‌ನಲ್ಲಿರುವ ಬ್ರಿಟಿಷ್ ಕೊಲಂಬಿಯಾ ಇನ್‌ಸ್ಟಿಟ್ಯುಟ್ ಫಾರ್ ಟೆಕ್ನಾಲಜಿ (BCIT) ನಡೆದ ಎಮರ್ಜೆನ್ಸಿ ಸಿಮ್ಯುಲೇಶನ್ ಪ್ರೋಗ್ರಾಮ್ (ESP) ತುರ್ತು ಸ್ಥಿತಿಯ ತರಬೇತಿಯಲ್ಲಿ ಸಿಮ್ಯುಲೇಶನ್‌ನ ಬಳಕೆಗೆ ಇನ್ನೊಂದು ಉದಾಹರಣೆಯಾಗಿದೆ. ESPಯು ಈ ಕೆಳಗಿನ ತುರ್ತುಪರಿಸ್ಥಿತಿಗಳಿಗೆ ತರಬೇತಿ ನೀಡಲು ಸಿಮ್ಯುಲೇಶನ್ ಅನ್ನು ಬಳಸಲಾಗುವುದು: ಕಾಡ್ಗಿಚ್ಚನ್ನು ಆರಿಸುವ ಪ್ರಯತ್ನ, ತೈಲ ಅಥವಾ ರಸಾಯನಿಕ ಸೊರಿಕೆಗೆ ಪ್ರತಿಕ್ರಿಯೆ, ಭೂಕಂಪಕ್ಕೆ ಪ್ರತಿಕ್ರಿಯೆ, ಕಾನೂನು ವಿಧಿಸುವುದು, ಪುರಸಭೆ ಅಗ್ನಿ ದುರಂತ ನಿರ್ವಹಣೆ, ಅಪಾಯಕಾರಿ ವಸ್ತುಗಳ ನಿರ್ವಹಣೆ, ಸೈನಿಕ ತರಬೇತಿ, ಮತ್ತು ಭಯೋತ್ಪಾದಕರ ದಾಳಿಗೆ ಪ್ರತಿಕ್ರಿಯೆ.[೨೫] ಸಿಮ್ಯುಲೇಶನ್ ವ್ಯವಸ್ಥೆಯ ಒಂದು ವೈಶಿಷ್ಟ್ಯವೆಂದರೆ “ನೈಜ ಸಮಯ” ಕಾರ್ಯಗತಗೊಳಿಸುವಿಕೆಯಾಗಿದೆ. ಇದು ನಿರೀಕ್ಷಿಸಿದಂತೆ 'ನಕಲಿಸಿದ' ಸಮಯದ ಚೌಕಟ್ಟು, 'ವಿಸ್ತರಿಸಿದ' ಅಥವಾ 'ಸಂಕ್ಷೇಪಿಸಿದ' ಸಮಯದಲ್ಲಿ ಕಾರ್ಯನಿರ್ವಹಿಸಲು ಸಿಮ್ಯುಲೇಶನ್‌ಗಳನ್ನು ಅನುಮತಿಸುವುದು”[೨೫] ಇದಲ್ಲದೆ, ಪರೀಕ್ಷಾವಧಿ/ಸಿಮ್ಯುಲೇಶನ್ ನಡೆಸುವ ಅವಧಿಯ ದಾಖಲೆಗಳು, ಚಿತ್ರ-ಐಕಾನ್ ಆಧಾರಿತ ಸಂಚಾರ, ಪ್ರತಿ ಸಿಮ್ಯುಲೇಶನ್‌ಗಳ ಕಡತ ಸಂಗ್ರಹ, ಮಲ್ಟಿಮೀಡಿಯಾ ಅಂಶಗಳು, ಮತ್ತು ಬಾಹ್ಯ ಅನ್ವಯಿಕೆಗಳನ್ನು ಕಾರ್ಯಗತಗೊಳಿಸುವಿಕೆಯಂತವುಗಳನ್ನು ಈ ವ್ಯವಸ್ಥೆಯು ಅನುಮತಿಸುವುದು.
ಸಿಮ್ಯುಲೇಶನ್‌ಗಳ ಮೂಲಕ ನೀಡುವ ತುರ್ತುಪರಿಸ್ಥಿತಿ ತರಬೇತಿಯು ಶೈಕ್ಷಣಿಕವಾಗಿಯೂ ಪ್ರಯೋಜನಕರ. ಇದರಲ್ಲಿ ವ್ಯವಸ್ಥೆಯ ಮೂಲಕ ವಿದ್ಯಾರ್ಥಿಯ ಕಾರ್ಯ ಕ್ಷಮತೆಯನ್ನು ಪತ್ತೆ ಹಚ್ಚಬಹುದು. ಹೆಚ್ಚುವರಿ ಗಮನ ನೀಡಬೇಕಾದ ವಿಷಯದ ಮೇಲೆ ಶಿಕ್ಷಕರಿಗೆ ಅಗತ್ಯವಾದ ಹೊಂದಾಣಿಕೆಯನ್ನು ಮಾಡಿಕೊಳ್ಳಲು ಪ್ರೋಗ್ರಾಮ್ ಡೆವಲಪರ್‌ಗೆ ಅನುವುಮಾಡಿಕೊಡುತ್ತವೆ. ಮುಂದಿನ ತುರ್ತುಪರಿಸ್ಥಿತಿ ವಲಯಕ್ಕೆ ಕಾಲಿಡುವ ಮೊದಲು ಸರಿಯಾಗಿ ಹೇಗೆ ಪ್ರತಿಕ್ರಯಿಸ ಬೇಕು ಎನ್ನುವುದನ್ನು ವಿದ್ಯಾರ್ಥಿಗಳಿಗೆ ನಿರ್ದೇಶಿಸಬಹುದು ಅಥವಾ ತರಬೇತಿ ನೀಡಲು ಸಾಧ್ಯವಿರುವುದು ಈ ವ್ಯವಸ್ಥೆಯಲ್ಲಿರುವ ಇನ್ನೊಂದು ಪ್ರಯೋಜನ —ಈ ಒಂದು ಅಂಶವು ನೈಜ ಪರಿಸರದಲ್ಲಿ ಲಭ್ಯವಿಲ್ಲದಿರಬಹುದು. ಕೆಲವು ಸಿಮ್ಯುಲೇಟರ್‌ಗಳು ವಿಷಯವನ್ನು ಮತ್ತೆ ಕಲಿಯಲು ವಿದ್ಯಾರ್ಥಿಗಳಿಗೆ ಸಾರಾಂಶ ಮತ್ತು ಬೋಧನೆಯನ್ನು ಒದಗಿಸುತ್ತಿದ್ದು, ಇನ್ನೂ ಕೆಲವು ತುರ್ತುಪರಿಸ್ಥಿತಿ ತರಬೇತಿ ಸಿಮ್ಯುಲೇಟರ್‌ಗಳು ತ್ವರಿತ ಪ್ರತಿಕ್ರಿಯೆಯನ್ನು ನೀಡುತ್ತವೆ.
ನೈಜ ತುರ್ತು ಪರಿಸ್ಥಿತಿ ಸಂದರ್ಭವನ್ನು ಎದುರಿಸುವವರಿಗೆ ವ್ಯರ್ಥ ಮಾಡುಲು ಸಮಯ ಇರುವುದಿಲ್ಲ. ಆ ಸಂದರ್ಭದಲ್ಲಿ ಸಿಮ್ಯುಲೇಶನ್-ತರಬೇತಿಯು ವಿದ್ಯಾರ್ಥಿಗೆ ಹೆಚ್ಚಿನ ಮಾಹಿತಿಯನ್ನು ನೀಡುವುದಲ್ಲದೆ, ಸುರಕ್ಷಿತವಾಗಿ ಅಭ್ಯಾಸ ಮಾಡಲು ಅನುಮಾಡಿಕೊಡುವುದು. ಒಂದು ವೇಳೆ, ತಪ್ಪುಗಳು ಏನಾದರೂ ಸಂಭವಿಸಿದರೂ ಸಹ ಯಾವುದೇ ಜೀವಹಾನಿಯಂಥ ಗಂಡಾಂತರ ಸಂಭವಿಸುವುದಿಲ್ಲ ಮತ್ತು ನೈಜ ತುರ್ತು ಪರಿಸ್ಥಿತಿಗಾಗಿ ತಯಾರಾಗಲು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಅವಕಾಶವಿರುತ್ತದೆ.
ಇಂಜಿನಿಯರಿಂಗ್, ತಂತ್ರಜ್ಞಾನ ಅಥವಾ ಪ್ರಕ್ರಿಯೆ ಸಿಮ್ಯುಲೇಶನ್
ಬದಲಾಯಿಸಿಇಂಜಿನಿಯರಿಂಗ್ ವ್ಯವಸ್ಥೆಗಲ್ಲಿ ಅಥವಾ ಹಲವಾರು ಪ್ರಕ್ರಿಯೆಗಳನ್ನು ಒಳಗೊಂಡ ಯಾವುದೇ ವ್ಯವಸ್ಥೆಯಲ್ಲಿ ಸಿಮ್ಯುಲೇಶನ್ ಪ್ರಮುಖ ಪಾತ್ರವನ್ನು ಹೊಂದಿದೆ. ಉದಾಹರಣೆಗೆ,ಇಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ನೈಜ ಪ್ರಸಾರ ಮಾರ್ಗದಿಂದ ಉಂಟಾಗುವ ಪ್ರಸಾರ ವಿಳಂಬ ಮತ್ತು ಫೇಸ್ ಶಿಫ್ಟ್‌ನಿಂದ ಆಗುವ ವಿಳಂಬ ನಿವಾರಣೆಗಾಗಿ ಅದಕ್ಕಾಗಿಯೇ ಇರುವ ಮಾರ್ಗಗಳನ್ನು (ತಂತಿಗಳು) ಬಳಸುಬಹುದು. ಹಾಗೆಯೇ, ಕೃತಕ ಒತ್ತಡಗಳನ್ನು ಅನುಕರಿಸುವ ಪುನರುತ್ಪತ್ತಿಯಿಲ್ಲದೆ ಪ್ರತಿಭಾದೆಯನ್ನು ಅನುಕರಿಸಲು ಬಳಸಲಾಗುವುದು ಮತ್ತು ಅನಿರೀಕ್ಷಿತ ಪುನರುತ್ಪತ್ತಿ ಸಂದರ್ಭದಲ್ಲಿಯೂ ಇದನ್ನು ಬಳಸಲಾಗುವುದು. ಸಿಮ್ಯುಲೇಟರ್ ತಾನು ಅನುಕರಿಸುವ ಘಟಕದ ಕೆಲವು ಕಾರ್ಯಾಚರಣೆಗಳು ಮತ್ತು ಕ್ರಿಯೆಗಳನ್ನು ಮಾತ್ರ ಅನುಕರಿಸಬಲ್ಲವು. 'ಕಾಂಸ್ಟ್ರಸ್ಟ್ ವಿದ್ : ಎಮ್ಯುಲೇಟ್'.[೨೬]
ಹೆಚ್ಚಿನ ಇಂಜಿನಿಯರಿಂಗ್ ಸಿಮ್ಯುಲೇಶನ್‌ಗಳಿಗೆ ಗಣಿತದ ಮಾದರಿ ಮತ್ತು ಕಂಪ್ಯೂಟರ್ ತನಿಖಾ ಸಹಾಯದ ಅಗತ್ಯವಿದೆ. ಆದರೂ, ಇನ್ನೂ ಹಲವಾರು ಸಂದರ್ಭಗಳಲ್ಲಿ ಗಣಿತದ ಮಾದರಿಗಳು ವಿಶ್ವಾಸಾರ್ಹವಾಗಿಲ್ಲ. ಅಸ್ಥಿರ ಬಲವಿಜ್ಞಾನ ಸಮಸ್ಯೆಗಳಿಗೆ ಸಿಮ್ಯುಲೇಶನ್‌ಗೆ ಆಗಾಗ ಗಣಿತ ಮತ್ತು ಭೌತಿಕ ಸಿಮ್ಯುಲೇಶನ್‌ಗಳೆರಡೂ ಬೇಕಾಗುವುದು. ಈ ಸಂದರ್ಭಗಳಲ್ಲಿ ಭೌತಿಕ ಮಾದರಿಗಳಿಗೆ ಕ್ರಿಯಾಶೀಲವಾದ ಆಕೃತಿಯ ಹೋಲಿಕೆಯ ಅಗತ್ಯವಿದೆ. ಭೌತಿಕ ಮತ್ತು ರಸಾಯನಿಕ ಸಿಮ್ಯುಲೇಶನ್‌ಗಳನ್ನು ಸಂಶೋಧನಾ ಬಳಕೆಗಿಂತ ನೈಜ ಬಳಕೆಗಾಗಿ ಬಳಸಲಾಗುವುದು; ಉದಾಹರಣೆಗೆ ರಸಾಯನಿಕ ಇಂಜಿನಿಯರಿಂಗ್‌ನಲ್ಲಿ ತೈಲ ಸಂಸ್ಕರಕಗಳಂತಹ ರಸಾಯನಿಕ ಘಟಕಗಳಿಗೆ ಬಳಸಿದ ಸಂಸ್ಕರಣಾ ಪರಿಮಾಣವನ್ನು ನೀಡಲು ಸಂಸ್ಕರಣಾ ಸಿಮ್ಯುಲೇಶನ್‌ಗಳನ್ನು ಬಳಸುವರು.
ಉಪಗ್ರಹ ಸಂಚಾರ ನಿರ್ದೇಶನ ಸಿಮ್ಯುಲೇಟರ್‌ಗಳು
ಬದಲಾಯಿಸಿGNSS ಸಂಕೇತ ಸ್ವೀಕರಿಸುವ ಸಾಧನವನ್ನು ( ವಾಣಿಜ್ಯ ಜಗತ್ತಿನಲ್ಲಿ ಸಾಮಾನ್ಯವಾಗಿ ಸ್ಯಾಟ್-ನೇವ್ಸ್ ಎನ್ನಲಾಗಿದೆ) ಪರೀಕ್ಷಿಸಲಿರುವ ಸರಿಯಾದ ಏಕೈಕ ಮಾರ್ಗವೆಂದರೆ RF ಸಿಮ್ಯುಲೇಟರ್ ಪುಂಜವನ್ನು ಬಳಸುವುದಾಗಿದೆ. ಉದಾಹರಣೆಗೆ ವಿಮಾನಗಳಲ್ಲಿ ಬಳಸುವ ಸಂಕೇತ ಸ್ವೀಕರಿಸುವ ಸಾಧನವನ್ನು ಕ್ರಿಯಾತ್ಮಕ ಪರಿಸ್ಥಿತಿಯಡಿ ಪರೀಕ್ಷಿಸಲಾಗುವುದು ಮತ್ತು ಈ ಸಂದರ್ಭದಲ್ಲಿ ಯಾವುದೇ ನೈಜ ವಿಮಾನವನ್ನು ಬಳಸುವುದಿಲ್ಲ. ಪರೀಕ್ಷೆಯ ಸ್ಥಿತಿಯನ್ನು ನಿಖರವಾಗಿ ಪುನರಾವರ್ತನೆಗೊಳಿಸಬಹುದು ಮತ್ತು ಪ್ರಯೋಗದ ಎಲ್ಲಾ ಅಂಶಗಳ ಮೇಲೆ ಸಂಪೂರ್ಣ ನಿಯಂತ್ರಣ ಇರುತ್ತದೆ.ಇದು ನೈಜ ಸಂಕೇತಗಳನ್ನು ಬಳಸುವ 'ವಾಸ್ತವ-ಜಗತ್ತಿನ' ಸಂದರ್ಭದಲ್ಲಿ ಸಾಧ್ಯವಿಲ್ಲ. ಹೊಸದಾದ ಗೆಲಿಲಿಯೊ (ಉಪಗ್ರಹ ಸಂಚಾರ ನಿರ್ದೇಶನ) ಯಾವುದೇ ನೈಜ ಸಂಕೇತಗಳನ್ನು ಹೊಂದಿಲ್ಲದ ಕಾರಣ, ಪರೀಕ್ಷೆಯಲ್ಲಿರುವ ಸಂಕೇತ ಸ್ವೀಕರಿಸುವ ಸಾಧನಗಳಿಗೆ ಯಾವುದೇ ಬದಲಿ ಸಂಕೇತಗಳು ದೊರೆಯುವುದಿಲ್ಲ.
ಹಣಕಾಸು
ಬದಲಾಯಿಸಿಹಣಕಾಸಿನಲ್ಲಿ, ಹೆಚ್ಚಾಗಿ ಕಂಪ್ಯೂಟರ್ ಸಿಮ್ಯುಲೇಶನ್‌ಗಳನ್ನು ಯೋಜನೆ ತಯಾರಿಸುವ ಸಂದರ್ಭದಲ್ಲಿ ಬಳಸಲಾಗುವುದು. ಉದಾಹರಣೆಗೆ, ಆಪತ್ತಿಗೆ-ಹೊಂದಿಸಿದ ನಿವ್ವಳ ಪ್ರಸ್ತತ ದರವನ್ನು ನಿಖರವಾಗಿ ಲೆಕ್ಕ ಹಾಕಬಹುದು. ಆದರೆ ಸದಾಕಾಲ ಸ್ಥಿರವಾದ ದತ್ತ ಮಾಹಿತಿಯಿರುವುದಿಲ್ಲ. ಮೌಲ್ಯಮಾಪನದ ಯೋಜನೆಯ ಕಾರ್ಯಕ್ಷಮತೆಯನ್ನು ಅನುಕರಿಸುವುದರ ಮೂಲಕ, ರಿಯಾಯಿತಿ ದರಗಳು ಮತ್ತು ಇತರ ಅಸ್ಥಿರ ವ್ಯತ್ಯಾಸ ಪರಿಮಾಣಗಳ ವ್ಯಾಪ್ತಿಯ ಆಧಾರದ ಮೇಲೆ ಸಿಮ್ಯುಲೇಶನ್ NPV ವಿತರಿಸುವುದು.
ವಿಮಾನ ಸಿಮ್ಯುಲೇಟರ್
ಬದಲಾಯಿಸಿವಿಮಾನ ಚಾಲಕರಿಗೆ ಭೂಮಿಯ ಮೇಲೆ ತರಬೇತಿಯನ್ನು ನೀಡಲು ವಿಮಾನ ಸಿಮ್ಯುಲೇಟರ್ ಅನ್ನು ಬಳಸಲಾಗುವುದು. ಈ ತರಬೇತಿ ಸಮಯದಲ್ಲಿ ಚಾಲಕರಿಗೆ ಯಾವುದೇ ಗಾಯಗಳಾಗದಂತೆ ಚಾಲಕರು ವಿಮಾನವನ್ನು ಅಪಘಾತಕ್ಕೆ ಒಳಪಡಿಸುವ ಅಂಶವೂ ಸೇರಿದೆ. ಸಾಮಾನ್ಯವಾಗಿ ಪ್ರತಿ ಆರು ತಿಂಗಳಿಗೊಮ್ಮೆ ವಿಮಾನ ಚಾಲಕರು ಸಿಮ್ಯುಲೇಟರ್ ತರಬೇತಿಯನ್ನು ಪೂರ್ಣಗೊಳಿಸಬೇಕು. ನಿರ್ದಿಷ್ಟ ಪ್ರಕಾರದ ವಿಮಾನಕ್ಕೆ ಚಾಲಕರು ಹೊಸಬರಾಗಿದ್ದರೆ, ಸಾಮಾನ್ಯವಾಗಿ ಅವರು ಸಿಮ್ಯುಲೇಟರ್‌ದ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆಯಬೇಕು. ಹೆಚ್ಚಿನ ವಸ್ತುನಿಷ್ಟೆಯ ದೃಗ್ಗೋಚರ ವ್ಯವಸ್ಥೆ ಮತ್ತು ಹೌಡ್ರಾಲಿಕ್ ಚಲನೆಯ ವ್ಯವಸ್ಥೆಗಳನ್ನು ಅತಿ ಆಧುನಿಕ ಸಿಮ್ಯುಲೇಟರ್‌ಗಳು ಹೊಂದಿರುತ್ತವೆ. ಸಿಮ್ಯುಲೇಟರ್‌ನಲ್ಲಿ ತರಬೇತಿ ಪಡೆಯುವುದು ನೈಜ ವಿಮಾನ ತರಬೇತಿ ಪೆಯುವುದಕ್ಕಿಂತ ಅಲ್ಪವೆಚ್ಚದ್ದು.
ದೇಶೀ-ನಿರ್ಮಿತ ವಿಮಾನ ಸಿಮ್ಯುಲೇಟರ್‌ಗಳು
ಬದಲಾಯಿಸಿಸಿಮ್ಯುಲೇಟರ್ನ ಸಾಫ್ಟ್‌ವೇರ್, ಅದರಲ್ಲೂ ವಿಶೇಷವಾಗಿ ವಿಮಾನ ಸಿಮ್ಯುಲೇಟರ್‌ನ ಸಾಫ್ಟ್‌ವೇರ್ ಅನ್ನು ಬಳಸುವ ಕೆಲವರು ತಮ್ಮದೇ ಆದ ಸಿಮ್ಯುಲೇಟರ್‌ವನ್ನು ರಚಿಸಿರುವರು. ಕೆಲವರು ತಮ್ಮ ದೇಶಿಯ ಸಿಮ್ಯುಲೇಟರ್‌ದ ನೈಜತೆಯನ್ನು ಹೆಚ್ಚಿಸಲು, ಅವರು ಅದೇ ಸಾಫ್ಟ್‌ವೇರ್‌ನಿಂದ ಕಾರ್ಯನಿರ್ವಹಿಸುವ ಮೂಲ ಯಂತ್ರಗಳ ಕಾರ್ಡುಗಳು ಮತ್ತು ರಾಕ್‌ಗಳನ್ನು ಖರೀದಿಸುವರು. ಇದು ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅನ್ನು ಹೊಂದಿಸುವ ಸಮಸ್ಯೆಯನ್ನು ಪರಿಹರಿಸುವುದು ಮತ್ತು ನೂರಾರು ಕಾರ್ಡ್‌ಗಳನ್ನು ಹಲವು ರಾಕ್‌ಗಳಿಗೆ ಅಳವಡಿಸುವುದು ಸಮಸ್ಯೆಯಾಗಿದ್ದು, ಈ ಸಮಸ್ಯೆಗಳನ್ನು ಪರಿಹರಿಸುವುದು ಹೆಚ್ಚು ಲಾಭದಾಯಕವೆಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ನೈಜ ಸಿಮ್ಯುಲೇಶನ್ ಬಗ್ಗೆ ತುಂಬಾ ಗಂಭೀರವಾಗಿ ಚಿಂತಿಸುವ ಕೆಲವರು, ವಿಮಾನ ನಿಲ್ದಾಣಗಳಲ್ಲಿ ಸಂಪೂರ್ಣ ಹಳತಾದವಿಮಾನದ ಮುಂದಿನ ಭಾಗದಂತಹ ನೈಜ ಭಾಗಗಳನ್ನು ಖರೀದಿಸುವರು. ನಿಜ ಜೀವನದಲ್ಲಿ ಬೆನ್ನಟ್ಟಿ ಹೋಗಲಾಗದ ಹವ್ಯಾಸಗಳಿಗೆ ಇದು ಜನರನ್ನು ಪ್ರೇರೇಪಿಸುತ್ತದೆ.
ನೌಕಾ ಸಿಮ್ಯುಲೇಟರ್‌ಗಳು
ಬದಲಾಯಿಸಿನೌಕೆಯ ಸಿಬ್ಬಂದಿಗಳಿಗೆ ನೌಕಾ ಸಿಮ್ಯುಲೇಟರ್‌ಗಳ ಮೂಲಕ ನೀಡಲಾಗುವ ತರಬೇತಿಯು ವಿಮಾನ ಸಿಮ್ಯುಲೇಟರ್‌ಗಳಿಗೆ ಹೋಲಿಕೆಯಾಗುವಂತಿದೆ. ಈ ಕೆಳಗಿನವು ಸಾಮಾನ್ಯ ನೌಕಾ ಸಿಮ್ಯುಲೇಟರ್‌ಗಳಾಗಿವೆ:
- ನೌಕಾ ಸೇತುವೆ ಸಿಮ್ಯುಲೇಟರ್‌ಗಳು
- ಇಂಜಿನ್ ಕೊಠಡಿಯ ಸಿಮ್ಯುಲೇಟರ್‌ಗಳು
- ನೌಕಾ ಸರಕು ನಿರ್ವಹಣೆ ಸಿಮ್ಯುಲೇಟರ್‌ಗಳು
- ಸಂವಹನ / GMDSS ಸಿಮ್ಯುಲೇಟರ್‌ಗಳು
ಇಂತಹ ಸಿಮ್ಯುಲೇಟರ್‌ಗಳನ್ನು ಹೆಚ್ಚಾಗಿ ನೌಕಾ ಶಿಕ್ಷಣ ಕಾಲೇಜುಗಳು, ತರಬೇತಿ ಸಂಸ್ಥೆಗಳು ಮತ್ತು ನೌಕಾದಳದವರು ಬಳಸುತ್ತಾರೆ. ಕಾರ್ಯ ನಿರ್ವಹಣೆ ಹಡಗಿನ ಸೇತುವೆ ವೇದಿಕೆಯ ಪ್ರತಿಕೃತಿ ಮತ್ತು ಸುತ್ತಲಿನ ಪರಿಸರವನ್ನು ಪ್ರದರ್ಶಿಸುವ ಪರದೆಗಳನ್ನು ಹೆಚ್ಚಾಗಿ ಇವುಗಳು ಒಳಗೊಂಡಿರುತ್ತದೆ.
ಸೈನಿಕ ಸಿಮ್ಯುಲೇಶನ್‌ಗಳು
ಬದಲಾಯಿಸಿಸಮರಾಭ್ಯಾಸದ ಆಟಗಳೆಂದು ಅನೌಪಚಾರಿಕವಾಗಿ ಪರಿಗಣಿತವಾಗಿರುವ ಸೈನಿಕ ಸಿಮ್ಯುಲೇಶನ್‌ಗಳಾದ ಇವು ಯುದ್ಧದ ಒಂದು ಆಖಾಡದಂತಿದ್ದು,ವಾಸ್ತವವಾದ ಯಾವ ದ್ವೇಷಾಸೂಯೆ ಇಲ್ಲದೇ ಇಲ್ಲಿ ರಣ ತಂತ್ರಗಳನ್ನು ಪರೀಕ್ಷೆಗೊಡ್ಡುವ ಮತ್ತು ಪರಿಷ್ಕರಿಸುವ ಕಾರ್ಯ ಸಾಗುತ್ತದೆ. ಅವುಗಳ ವಿವಿಧ ಪ್ರಕಾರಗಳಲ್ಲಿದ್ದು, ನೈಜತೆಯ ಮಟ್ಟವು ಒಂದರಿಂದ ಇನ್ನೊಂದಕ್ಕೆ ಬದಲಾಗುತ್ತಿರುತ್ತದೆ. ಇತ್ತೀಚಿನ ದಿನಗಳಲ್ಲಿ, ಇವುಗಳ ವ್ಯಾಪ್ತಿಯು ಕೇವಲ ಸೈನಿಕ ಚಟುವಟಿಕೆಗಳಲ್ಲಿ ಮಾತ್ರವಲ್ಲದೆ, ರಾಜಕೀಯ ಮತ್ತು ಸಾಮಾಜಿಕ ಅಂಶಗಳಲ್ಲಿ ಸಹ ಚಾಚಿಕೊಂಡಿದೆ. (ಉದಾಹರಣೆಗೆ, ಲ್ಯಾಟಿನ್ ಅಮೆರಿಕಾದಲ್ಲಿನ ಸಮರತಂತ್ರಭ್ಯಾಸದ ನ್ಯಾಷನ್‌ಲ್ಯಾಬ್ ಸರಣಿಗಳು.[೨೭]) ಹಾಗೆಯೇ ಹಲವಾರು ಸರಕಾರಗಳು ಸಿಮ್ಯುಲೇಟರ್ ಅನ್ನು ವೈಯಕ್ತಿಕವಾಗಿ ಮತ್ತು ಇತರ ದೇಶಗಳ ಸಹಯೋಗದೊಂದಿಗೆ ಬಳಸುತ್ತಿವೆ. ಇವುಗಳು ವೃತ್ತಿ ಪರತೆಯ ವೃತ್ತದಾಚೆಗಿನ ಮಾದರಿಯ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ.
ರೋಬಾಟಿಕ್ಸ್ ಸಿಮ್ಯುಲೇಟರ್‌ಗಳು
ಬದಲಾಯಿಸಿರೋಬಾಟಿಕ್ಸ್ ಸಿಮ್ಯುಲೇಟರ್ ಅನ್ನು 'ನಿಜವಾದ' ರೋಬಾಟ್‌ನ್ನು ಆಧರಿಸದೆ ನಿರ್ದಿಷ್ಟ (ಅಥವಾ ನಿರ್ದಿಷ್ಟವಲ್ಲದ) ರೋಬಾಟ್‌ಗಳಿಗೆ ಹುದುಗಿಸಲಾದ ಅನ್ವಯಿಕೆಗಳನ್ನು ರಚಿಸಲು ಬಳಸಲಾಗುವುದು. ಕೆಲವು ಸಂದರ್ಭದಲ್ಲಿ, ಈ ಅನ್ವಯಿಕೆಗಳಲ್ಲಿ ಯಾವುದೇ ಮಾರ್ಪಾಡು ಮಾಡದೇ ನಿಜವಾದ ರೋಬಾಟ್‌ಗೆ (ಅಥವಾ ಮತ್ತೆ ರಚಿಸಿದ) ವರ್ಗಾಯಿಸಲಾಗುವುದು. ಸಂಪನ್ಮೂಲಕ್ಕೆ ತಗಲುವ ವೆಚ್ಚ, ಸಮಯ, ಅಥವಾ ಸಂಪನ್ಮೂಲಗಳ 'ಅನನ್ಯತೆ'ಯಿಂದಾಗಿ ನೈಜ ಜಗತ್ತಿನಲ್ಲಿ ರಚಿಸಲು ಸಾಧ್ಯವಾಗದ ಸಂದರ್ಭ / ಸನ್ನಿವೇಷಗಳನ್ನು ರಚಿಸಲು ರೋಬಾಟಿಕ್ಸ್ ಸಿಮ್ಯುಲೇಟರ್‌ಗಳು ಅನುವುಮಾಡಿಕೊಡುವುದು. ಸಿಮ್ಯುಲೇಟರ್ ವೇಗವಾಗಿ ರೋಬಾಟ್‌ನ ಮೂಲಮಾದರಿಯನ್ನು ಸಹ ರಚಿಸುವುದು. ಹಲವು ರೋಬಾಟ್ ಸಿಮ್ಯುಲೇಟರ್‌ಗಳು ರೋಬಾಟ್‌ನ ಕಾರ್ಯನಿರ್ವಹಣೆಯನ್ನು ಅನುಕರಿಸಲು ಭೌತಿಕ ಎಂಜಿನ್‌ಗಳನ್ನು ಒಳಗೊಂಡಿವೆ.
ಜೀವ ತಾಂತ್ರಿಕ ಸಿಮ್ಯುಲೇಟರ್‌ಗಳು
ಬದಲಾಯಿಸಿನಡಿಗೆಯ ಕ್ರಿಯೆಯನ್ನು ವಿಶ್ಲೇಷಿಸಲು, ಕ್ರೀಡಾ ಸಾಮರ್ಥ್ಯದ ಅದ್ಯಯನ ಮಾಡಲು, ಶಸ್ತ್ರ ಚಿಕಿತ್ಸೆಯ ವಿಧಾನಗಳನ್ನು ಅನುಕರಣೆ ಮಾಡಲು, ಜಂಟಿ ಭಾರಯನ್ನು ವಿಶ್ಲೇಷಿಸಲು, ವೈದ್ಯಕೀಯ ಸಾಧನಗಳನ್ನು ವಿನ್ಯಾಸಗೊಳಿಸಲು ಮತ್ತು ಮಾನವ ಮತ್ತು ಪ್ರಾಣಿಗಳ ಚಲನೆಯನ್ನು ಎನಿಮೇಟ್ ಮಾಡಲು ಜೀವತಾಂತ್ರಿಕ ಸಿಮ್ಯುಲೇಟರ್ ಅನ್ನು ಬಳಸಲಾಗುವುದು.
ಮಾರಾಟ ಪ್ರಕ್ರಿಯೆ ಸಿಮ್ಯುಲೇಟರ್‌ಗಳು
ಬದಲಾಯಿಸಿಮಾರಾಟ ಪ್ರಕ್ರಿಯೆ ಇಂಜಿನಿಯರಿಂಗ್ ಕ್ಷೇತ್ರದಲ್ಲಿರುವಂತೆ ಪರಿಪೂರ್ಣತೆಯನ್ನು ಸಾಧಿಸುವುದಕ್ಕಾಗಿ ವಿವಿಧ ಹಂತಗಳ ಮೂಲಕ ಗ್ರಾಹಕರ ಕೋರಿಕೆಯ ಹರಿವನ್ನು ಅಭ್ಯಸಿಸಲು ಮತ್ತು ಅಭಿವೃದ್ಧಿ ಪಡಿಸಲು(ಸರಕು/ಸೇವೆಗಳನ್ನು ಒದಗಿಸಲು ಮೊದಲ ಕೋರಿಕೆಯಿಂದ ಗ್ರಾಹಕರ ಕೋರಿಕೆಯನ್ನು ಸ್ವೀಕರಿಸಿ, ಮತ್ತು ಅದನ್ನು ಕಾರ್ಯಗತಗೊಳಿಸುವವರೆಗೆ), ವ್ಯಾಪಾರದ ಪ್ರಕ್ರಿಯೆಗಳ ಮೂಲಕ ವ್ಯವಹಾರದ ಹರಿವಿನ ಮಾದರಿ ರಚನೆಯಲ್ಲಿ ಸಿಮ್ಯುಲೇಶನ್‌ಗಳು ತಂಬಾ ಉಪಯುಕ್ತವಾಗಿದೆ. ಅಂತಹ ಸಿಮ್ಯುಲೇಶನ್‌ಗಳು ವಿಧಾನಗಳಲ್ಲಿ ಮಾಡಿದ ಅಭಿವೃದ್ಧಿಯು ಪ್ರಕ್ರಿಯೆಯಲ್ಲಿನ ವಿವಿಧ ಹಂತಗಳಲ್ಲಿನ ಅಸ್ಥಿರತೆ, ಉತ್ಪಾದನಾ ವೆಚ್ಚ, ಕೆಲಸದ ಅವಧಿ, ಮತ್ತು ವ್ಯವಹಾರಗಳ ಗಾತ್ರದ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ ಎನ್ನುವುದನ್ನು ತಿಳಿಯಲು ಇದು ಸಹಾಯ ಮಾಡುತ್ತದೆ. ಸ್ಪ್ರೇಡ್‌ಶೀಟ್ ಸಾಫ್ಟ್‌ವೇರ್, ಚೌಕಾಕಾರದ ಲೋಟಗಳ ನಡುವೆ ನಾಣ್ಯಗಳನ್ನು ವರ್ಗಾಯಿಸುವುದು, ಅಥವಾ ಚಮಚದೊಂದಿಗೆ ಬಣ್ಣದ ಮಣಿಗಳನ್ನು ಟಬ್ಬಿನೊಳಗೆ ಮುಳುಗಿಸುವ ವಿಧಾನ ಬಳಸಿ, ಸರಳವಾಗಿ ಶಿಕ್ಷಣವನ್ನು ಕಲಿಸುವ ಮಾದರಿಗಳನ್ನು ರಚಿಸಲು ಪರಿಪೂರ್ಣ ಕಂಪ್ಯೂಟರೀಕೃತ ಪ್ರಕ್ರಿಯೆ ಸಿಮ್ಯುಲೇಟರ್ ಅನ್ನು ಬಳಸುವರು[೨೮].
ಟ್ರಕ್ ಸಿಮ್ಯುಲೇಟರ್
ಬದಲಾಯಿಸಿಟ್ರಕ್ ಸಿಮ್ಯುಲೇಟರ್ ದೃಗ್ಗೋಚರ ಪರಿಸರದಲ್ಲಿ ನಿಜವಾದ ವಾಹನಗಳ ಎಲ್ಲ ಗುಣ ಲಕ್ಷಣಗಳನ್ನೂ ಹೊಂದಿರುತ್ತದೆ. ಇದು ವಾಹನದ ಬಾಹ್ಯ ಅಂಶಗಳು ಮತ್ತು ಸ್ಥಿತಿಗತಿಯನ್ನು ಹೊಂದಿರುವುದರಿಂದ,ಚಾಲಕನಿಗೆ ತನ್ನದೇ ಆದ ನೈಜ ವಾಹನವನ್ನು ಓಡಿಸುತ್ತಿರುವಂತೆ ಭಾಸವಾಗುತ್ತದೆ. ಇದರ ನೈಜತೆಯಿಂದ ಕೂಡಿರುವ ದೃಶ್ಯಗಳ ಮತ್ತು ಸಂದರ್ಭಗಳ ಪ್ರತಿಕೃತಿ ರಚಿಸುವುದರಿಂದ, ಚಾಲಕನಿಗೆ ಕೇವಲ ಶೈಕ್ಷಣಿಕ ಕಾರ್ಯಕ್ರಮವನ್ನು ವೀಕ್ಷಿಣೆ ಮಾಡಿದಂತಿರದೆ , ಚಾಲನೆಯ ಸಂಪೂರ್ಣ ತೊಡಗಿಕೊಂಡ ಅನುಭವವಾಗುತ್ತದೆ.
ಹೊಸ ಚಾಲಕರಿಗೆ ಸಿಮ್ಯುಲೇಟರ್ ರಚನಾತ್ಮಕ ಅನುಭವವನ್ನು ನೀಡುವುದು ಮತ್ತು ಅನನುಭವೀ ಚಾಲಕರಿಗೆ ಹೆಚ್ಚು ಜಟಿಲವಾದ ಅಭ್ಯಾಸವನ್ನು ನೀಡುವುದು. ಟ್ರಕ್ ಸಿಮ್ಯುಲೇಟರ್‌ಗಳು ಅನನುಭವೀ ಟ್ರಕ್ ಚಾಲಕರಿಗೆ ಉತ್ತಮ ಅಭ್ಯಾಸ ನೀಡುವುದರೊಂದಿಗೆ, ಉತ್ತಮ ವೃತ್ತಿ ಜೀವನವದ ಅವಕಾಶದ ಹೆಬ್ಬಾಗಿಲನ್ನು ತೆರೆಯುತ್ತದೆ. ಅನುಭವವಿರುವ ಚಾಲಕರಿಗೆ ತಮ್ಮ ಚಾಲನಾ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಸಾಮರ್ಥ್ಯವನ್ನು ಸಿಮ್ಯುಲೇಶನ್ ಒದಗಿಸುತ್ತದೆ ಅಥವಾ ಅವರ ದೋಷವನ್ನು ಪತ್ತೆಹಚ್ಚಿ, ಅದನ್ನು ಸರಿಪಡಿಸಿಕೊಳ್ಳುವ ಕ್ರಮಗಳನ್ನು ಸೂಚಿಸುತ್ತದೆ. ಕಂಪನಿ ಸಿಬ್ಬಂದಿಗಳಿಗೆ ಚಾಲನಾ ಕೌಶಲವನ್ನು ಈ ಸಿಮ್ಯುಲೇಶನ್ ಕಲಿಸುತ್ತದೆ. ಇದು ನಿರ್ವಹಣಾ ವೆಚ್ಚವನ್ನು ತಗ್ಗಿಸುವುದಲ್ಲದೆ, ಉತ್ಪಾದಕತೆಯನ್ನು ವೃದ್ಧಿಸುತ್ತದೆ. ಇದೆಲ್ಲದಕ್ಕಿಂತ ಮಿಗಿಲಾಗಿ ಯಾವುದೇ ಸಂದರ್ಭದಲ್ಲಿ ಸಿಬ್ಬಂದಿಗಳ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.
ಸಿಮ್ಯುಲೇಶನ್ ಮತ್ತು ಆಟಗಳು
ಬದಲಾಯಿಸಿಸಂಪ್ರದಾಯಿಕ ಮತ್ತು ಆಧುನಿಕ-ಎರಡೂ ಬಗೆಯ ಕಾರ್ಯತಂತ್ರದ ಆಟ ಸೈನಿಕ ಮತ್ತು ರಾಜಕೀಯ ನಾಯಕರ ತರಬೇತಿ ಉದ್ದೇಶಕ್ಕಾಗಿ ಅಮೂರ್ತ ನಿರ್ಣಯವನ್ನು ತಗೆದುಕೊಳ್ಳುವ ಸಿಮ್ಯುಲೇಶನ್‌ಗಳಂತೆ ಕಾಣಿಸಬಹುದು. (ಸಾಂಪ್ರದಾಯಿಕ ಉದಾಹರಣೆಗಾಗಿ ಹಿಸ್ಟರಿ ಆಫ್ ಗೋ ಅಥವಾ ಇತ್ತೀಚಿನ ಉದಾಹರಣೆಗಾಗಿ ಕ್ರೀಗ್ಸ್‌ಪೀಲ್ ಅನ್ನು ನೋಡಿ).
ಇತರ ಹಲವು ವಿಡಿಯೋ ಗೇಮ್‌ಗಳು ಯಾವುದಾದರೊಂದು ರೀತಿಯಲ್ಲಿ ಸಿಮ್ಯುಲೇಟರ್‌ಗಳಾಗಿರುತ್ತವೆ. ಇಂತಹ ಆಟಗಳು ವಾಣಿಜ್ಯದಿಂದ - ಸರಕಾರದವರೆಗೆ, ನಿರ್ಮಾಣದವರೆಗೆ, ವಿಮಾನದಂಥ ವಾಹನದವರೆಗೆ, ವಿವಿಧ ನಿಜಾಂಶಗಳ ಪ್ರತಿಕೃತಿಯನ್ನು ಮಾಮಾಡುತ್ತವೆ. (ಮೇಲಿನದ್ದನ್ನು ನೋಡಿ).
ಇದನ್ನೂ ಗಮನಿಸಿ
ಬದಲಾಯಿಸಿಆಕರಗಳು
ಬದಲಾಯಿಸಿ- ↑ ೧.೦ ೧.೧ ಅಥವಾ, ಕಂಪ್ಯೂಟರ್ ವಿಜ್ಞಾನದ ವಿಶ್ವಕೋಶದಲ್ಲಿ ಸಿಮ್ಯುಲೇಶನ್ ಲೇಖನ ದಲ್ಲಿ ಹೀಗೆ ತಿಳಿಸಲಾಗಿದೆ, "ನೈಜ ಅಥವಾ ಕಲ್ಪನಾ ವ್ಯವಸ್ಥೆಯ ಮಾದರಿಯನ್ನು ವಿನ್ಯಾಸಗೊಳಿಸುವುದು ಮತ್ತು ಆ ಮಾದರಿಗಳೊಂದಿಗೆ ಪ್ರಯೋಗಗಳನ್ನು ನಡೆಸುವುದು".
- ↑ ಉದಾಹರಣೆಗೆ ಕಂಪ್ಯೂಟರ್ ಗ್ರಾಫಿಕ್ಸ್‌ಗಳಲ್ಲಿ [೧] [೨] Archived 2007-10-12 ವೇಬ್ಯಾಕ್ ಮೆಷಿನ್ ನಲ್ಲಿ..
- ↑ ಸಿಂತೆಟಿಕ್ ಪರಿಸರವನ್ನು ತಲೆಸ್ ಹೀಗೆ ವ್ಯಾಖ್ಯಾನಿಸುತ್ತಾರೆ: "ಬಾಹ್ಯ ಅಂಶಗಳ ಸಿಮ್ಯುಲೇಶನ್ ಅನ್ನು ಪ್ರಭಾವ ಬೀರುವುದಕ್ಕಾಗಿ" "ಸಂವೇದಕಗಳು, ವೇದಿಕೆಗಳು ಮತ್ತು ಇತರ ಸಕ್ರಿಯೆ ವಸ್ತುಗಳ ಪಡಿಯಚ್ಚಿನ ಮಾದರಿಗಳಿಗೆ ಪೂರಕವಾಗಿದೆ." [೩] ಇತರ ಮಾರಾಟಗಾರರು ಹೆಚ್ಚು ದೃಗ್ಗೋಚರ, ದೃಗ್ಗೋಚರ ನೈಜತೆ-ಶೈಲಿ ಸಿಮ್ಯುಲೇಟರ್‌ಗಳು ಎಂಬ ಪದಗಳನ್ನು ಬಳಸುವರು[೪] Archived 2008-01-22 ವೇಬ್ಯಾಕ್ ಮೆಷಿನ್ ನಲ್ಲಿ..
- ↑ "ಕಂಪ್ಯೂಟರ್ ಸಿಮ್ಯುಲೇಶನ್ ನಿರ್ದಿಷ್ಟವಾಗಿ ಈ ಪ್ರಶ್ನೆಗಳಿಗೆ ಉತ್ತಮವಾಗಿ ಹೊಂದಿಕೆಯಾಗುವುದು"[೫] ಹಾಗಾಗಿ ಜೀವರಸಾಯನ ಕ್ಷೇತ್ರದಲ್ಲಿ ಹೆಚ್ಚು ಜನಪ್ರಿಯ ಸಂಶೋಧನೆಗಳು ದೊರೆಯುವುದು Folding@Home ಅನ್ನು ನೋಡಿ.
- ↑ ಶೈಕ್ಷಣಿಕ ತರಬೇತಿಗಾಗಿ ಸಿಮ್ಯುಲೇಟರ್, ಉದಾ. ಪರಸ್ಪರ ಕಾರ್ಯನಿರ್ವಹಿಸುವೆಡೆಗೆ ಕಟ್ಟಡ, ದೃಶ್ಯಾಧರಿತ ತರಬೇತಿ ಸಿಮ್ಯುಲೇಟರ್ Archived 2007-11-28 ವೇಬ್ಯಾಕ್ ಮೆಷಿನ್ ನಲ್ಲಿ., ವೈದ್ಯಕೀಯ ಅನ್ವಯಿಕೆಗಳಿಗೆ ಸಿಮ್ಯುಲೇಟರ್ ಮಾರಾಟಗಾರರಿಗೆ ಪ್ರಸ್ತುತ ಪಡಿಸಿದಂತೆ ವೈದ್ಯಕೀಯ ಸಿಮ್ಯುಲೇಶನ್ ತರಬೇತಿ ಪ್ರಯೋಜನಗಳು Archived 2007-12-17 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ಸಮರಾಭ್ಯಾಸಕ್ಕಾಗಿ ಸೆಂಟರ್ ಫಾರ್ ಇಂಟರ್ನ್ಯಾಷನಲ್ ಪಾಲಿಸಿ ಪ್ರಕಟಿಸಿದ ಎ ಸಿವಿಲಿಯಸ್ ಗೈಡ್ ಟು US ಡಿಫೆನ್ಸ್ ಆಂಡ್ ಸೆಕ್ಯುರಿಟಿ ಅಸಿಸ್ಟೆನ್ಸ್ ಟು ಲ್ಯಾಟಿನ್ ಅಮೆರಿಕಾ ಆಂಡ್ ದಿ ಕರಿಬಿಯನ್ ಅನ್ನು ನೋಡಿ.
- ↑ ಡಿಫೆನ್ಸ್ ಮಾಡೆಲಿಂಗ್ ಅಂಡ್ ಸಿಮ್ಯುಲೇಶನ್ ಆಫೀಸ್‌ನ ವರ್ಗೀಕರಣದ ಬಳಕೆ.
- ↑ ""ಹೈ ವರ್ಸಸ್ ಲೋ ಫಿಡೆಲಿಟಿ ಸಿಮ್ಯುಲೇಶನ್: ಡಸ್ ದಿ ಟೈಪ್ ಆಫ್ ಫಾರ್ಮೆಟ್ ಅಫೆಕ್ಟ್ ಕ್ಯಾಂಟಿಡೇಟ್ಸ್ ಪರ್ಫಾರ್ಮೆನ್ಸ್ ಆರ್ ಪರ್ಸೆಪ್ಶನ್ಸ್?"" (PDF). Archived from the original (PDF) on 2009-01-06. Retrieved 2010-01-28.
- ↑ ಉದಾಹರಣೆಗೆ ಎಲ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಸೋಸಿಯೆಷನ್ ವ್ಯವಹಾರದಲ್ಲಿ ಯಶಸ್ವಿಯಾಗುವುದಕ್ಕಾಗಿ ಹೊಸ ಪ್ರಕಾರವನ್ನು ರಚಿಸಿದೆ. ಅದರಂತೆ "ಗ್ರಹಿಕೆಯು ಒಂದು ಹೊಸ ಪ್ರಕಾರದ ಸ್ವರ್ಧಾತ್ಮಕ ನಡವಳಿಕೆಯಾಗಿದ್ದು, ಇಂದಿನ ಅಸ್ತವ್ಯಸ್ತವಾಗಿರುವ ವ್ಯಪಾರ ಪರಿಸ್ಥಿತಿಗೆ ಇದು ಸರಿಯಾದ ಪ್ರಕಾರವಾಗಿದೆ"[೬] ಮತ್ತು IBMನ ಪ್ರಕಾರ "ವರ್ಲ್ಡ್ ಆಫ್ ವಾರ್‌ಕ್ರ್ಯಾಫ್ಟ್‌ನಂತಹ ಬಹು ಆಟಗಾರರ ಡ್ರ್ಯಾಗನ್ ಕೊಲ್ಲುವ ಆಟಗಳನ್ನು ಆಡುವುದರಿಂದ ಕೌಶಲ್ಯಗಳು ಹೆಚ್ಚಾಗುವುದು ಮತ್ತು ಆಧುನಿಕ ಬಹುರಾಷ್ಟ್ರದಲ್ಲಿ ಆಡಳಿತ ನಿರ್ವಹಣೆ ಮಾಡಲು ಸಹಾಯವಾಗುವುದು".[೭]
- ↑ ""ರಿಯಾಕ್ಟಿಂಗ್ ಟು ದಿ ಪಾಸ್ಟ್ ಹೋಮ್ ಪೇಜ್"". Archived from the original on 2009-04-16. Retrieved 2010-01-28.
- ↑ 27 ಜನವರಿ 2009ರಲ್ಲಿ 'ಪಾಕ್ಸ್‌ಸಿಮ್ಸ್' ಬ್ಲಾಗ್‌ನಲ್ಲಿ "ಕರಾನ"
- ↑ ೧೧.೦ ೧೧.೧ ಮೆಲ್ಲರ್, G. (1997). ಎ ಟೈಪಾಲಜಿ ಆಫ್ ಸಿಮ್ಯುಲೇಟರ್ಸ್ ಫಾರ್ ಮೆಡಿಕಲ್ ಎಜುಕೇಷನ್. ಜರ್ನಲ್ ಆಫ್ ಡಿಜಿಟಲ್ ಇಮೇಜಿಂಗ್. http://www.medsim.com/profile/article1.html Archived 1999-11-27 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Vlaovic PD, Sargent ER, Boker JR; et al. (2008). "Immediate impact of an intensive one-week laparoscopy training program on laparoscopic skills among postgraduate urologists". JSLS. 12 (1): 1–8. PMID 18402731. Archived from the original on 2013-01-03. Retrieved 2008-08-26.
{{cite journal}}
: Explicit use of et al. in:|author=
(help)CS1 maint: multiple names: authors list (link) - ↑ Leung J, Foster E (2008). "How do we ensure that trainees learn to perform biliary sphincterotomy safely, appropriately, and effectively?". Curr Gastroenterol Rep. 10 (2): 163–8. doi:10.1007/s11894-008-0038-3. PMID 18462603. Archived from the original on 2009-01-22. Retrieved 2008-08-26.
{{cite journal}}
: Unknown parameter|month=
ignored (help) - ↑ "ಆರ್ಕೈವ್ ನಕಲು". Archived from the original on 2009-08-18. Retrieved 2010-01-28.
- ↑ "ಆರ್ಕೈವ್ ನಕಲು". Archived from the original on 2010-03-05. Retrieved 2010-01-28.
- ↑ "ಆರ್ಕೈವ್ ನಕಲು". Archived from the original on 2009-05-25. Retrieved 2010-01-28.
- ↑ "ಆರ್ಕೈವ್ ನಕಲು". Archived from the original on 2012-07-17. Retrieved 2010-01-28.
- ↑ http://www.starksravings.com/linktrainer/linktrainer.htm
- ↑ "ಆರ್ಕೈವ್ ನಕಲು". Archived from the original on 2020-10-09. Retrieved 2010-01-28.
- ↑ http://www.ibisworld.com/industry/retail.aspx?indid=2003&chid=1
- ↑ "ಆರ್ಕೈವ್ ನಕಲು". Archived from the original on 2015-04-24. Retrieved 2021-07-21.
- ↑ http://www.awn.com/mag/issue4.02/4.02pages/kenyonspiderman.php3
- ↑ CADE- http://www.uic.edu/sph/cade/ Archived 2009-09-07 ವೇಬ್ಯಾಕ್ ಮೆಷಿನ್ ನಲ್ಲಿ.
- ↑ News-Medical.Net article- http://www.news-medical.net/news/2005/10/27/14106.aspx
- ↑ ೨೫.೦ ೨೫.೧ http://www.straylightmm.com/
- ↑ ಫೆಡರಲ್ ಸ್ಟ್ಯಾಂಡರ್ಡ್ 1037C
- ↑ ಉದಾಹರಣೆಗೆ, ಯುನೈಟೆಡ್ ಸ್ಟೇಟ್ಸ್ ಜಾಯಿಂಟ್ ಫೋರ್ಸಸ್ ಕಮ್ಯಾಂಡ್ "ಮಲ್ಟಿನ್ಯಾಷನಲ್ ಎಕ್ಸ್‌ಪರಿಮೆಂಟ್ 4" Archived 2007-04-14 ವೇಬ್ಯಾಕ್ ಮೆಷಿನ್ ನಲ್ಲಿ. ಅನ್ನು ನೋಡಿ
- ↑ Paul H. Selden (1997). Sales Process Engineering: A Personal Workshop. Milwaukee, WI: ASQ Quality Press.
ಹೆಚ್ಚಿನ ಓದಿಗೆ
ಬದಲಾಯಿಸಿ- C. ಆಲ್ಡ್ರಿಚ್ (2003). ಲರ್ನಿಂಗ್ ಬೈ ಡೂಯಿಂಗ್: e-ಕಲಿಕೆ ಮತ್ತು ಇತರ ಶೈಕ್ಷಣಿಕ ಅನುಭವಗಳಲ್ಲಿನ ಸಿಮ್ಯುಲೇಶನ್‌ಗಳು, ಕಂಪ್ಯೂಟರ್ ಆಟಗಳು, ಮತ್ತು ಶಿಕ್ಷಣಶಾಸ್ತ್ರಕ್ಕೆ ಮೀಸಲಾದ ಒಂದು ವ್ಯಾಪಕ ಮಾರ್ಗದರ್ಶಿ. ಸ್ಯಾನ್ ಫ್ರಾನ್ಸಿಸ್ಕೊ: ಫೈಫರ್ — ಜಾನ್ ವೈಲಿ & ಸನ್ಸ್.
- C. ಆಲ್ಡ್ರಿಚ್ (2004). ಸಿಮ್ಯುಲೇಷನ್ಸ್ ಅಂಡ್ ಫ್ಯೂಚರ್ ಆಫ್ ಲರ್ನಿಂಗ್: ಆನ್ ಇನೊವೇಟಿವ್ (ಅಂಡ್ ಪರ್ಹ್ಯಾಪ್ಸ್ ರೆವಲ್ಯೂಷನರಿ) ಅಪ್ರೋಚ್ ಟು ಇ-ಲರ್ನಿಂಗ್. ಸ್ಯಾನ್ ಫ್ರಾನ್ಸಿಸ್ಕೊ: ಫೈಫರ್ — ಜಾನ್ ವೈಲಿ & ಸನ್ಸ್.
- ಸ್ಟೀವ್ ಕೋಹೆನ್ (2006). ವರ್ಚುಯಲ್ ಡಿಸಿಷನ್ಸ್. ಮಾಹ್ವಾ, ನ್ಯೂಜೆರ್ಸಿ: ಲಾರೆನ್ಸ್ ಎರ್ಲ್‌ಬೌಮ್ ಅಸೋಸಿಯೇಟ್ಸ್.
- R. ಫ್ರಿಗ್ ಮತ್ತು S.ಹಾರ್ಟ್‌ಮನ್ (2007). ಮಾಡೆಲ್ಸ್ ಇನ್ ಸೈನ್ಸ್. ಸ್ಟಾನ್‌ಫೋರ್ಡ್ ಎನ್‌ಸೈಕ್ಲೋಪೀಡಿಯಾ ಆಫ್ ಫಿಲಾಸಫಿ ಯಲ್ಲಿನ ಉಲ್ಲೇಖ.
- S. ಹಾರ್ಟ್‌ಮನ್ (1996). ಆರ್. ಹೆಗ್ಸೆಲ್ಮನ್ ಮತ್ತು ಇತರರು ಸಂಪಾದಿಸಿರುವ, ಮಾಡೆಲಿಂಗ್ ಅಂಡ್ ಸಿಮ್ಯುಲೇಷನ್ ಇನ್ ದಿ ಸೋಷಿಯಲ್ ಸೈನ್ಸಸ್ ಫ್ರಂ ದಿ ಫಿಲಾಸಫಿ ಆಫ್ ಸೈನ್ಸ್ ಪಾಯಿಂಟ್ ಆಫ್ ವ್ಯೂ ಕೃತಿಯಲ್ಲಿನ ದಿ ವರ್ಲ್ಡ್ ಆಸ್ ಎ ಪ್ರೋಸಸ್: ಸಿಮ್ಯುಲೇಷನ್ಸ್ ಇನ್ ದಿ ನ್ಯಾಚುರಲ್ ಅಂಡ್ ಸೋಷಿಯಲ್ ಸೈನ್ಸಸ್ ಎಂಬ ಲೇಖನ, ಥಿಯರಿ ಅಂಡ್ ಡಿಸಿಷನ್ಸ್ ಲೈಬ್ರರಿ. ಡಾರ್ಡ್ರೆಕ್ಟ್: ಕ್ಲೂವರ್ 1996, 77–100.
- J.P. ಹರ್ಟೆಲ್ (2002). ಯೂಸಿಂಗ್ ಸಿಮ್ಯುಲೇಷನ್ಸ್ ಟು ಪ್ರಮೋಟ್ ಲರ್ನಿಂಗ್ ಇನ್ ಹೈಯರ್ ಎಜುಕೇಷನ್. ಸ್ಟರ್ಲಿಂಗ್, ವರ್ಜೀನಿಯಾ: ಸ್ಟೈಲಸ್.
- P. ಹಂಫ್ರೇಸ್, ಎಕ್ಸ್‌ಟೆಂಡಿಂಗ್ ಅವರ್‌ಸೆಲ್ವ್‌ಸ್: ಕಂಪ್ಯುಟೇಷನಲ್ ಸೈನ್ಸ್, ಎಂಪಿರಿಸಿಸಂ, ಅಂಡ್ ಸೈಂಟಿಫಿಕ್ ಮೆಥಡ್ . ಆಕ್ಸ್‌ಫರ್ಡ್: ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, 2004.
- F. ಪೆರ್ಸಿವಲ್, S. ಲೋಜ್ & D. ಸೌಂಡರ್ಸ್ (1993). ದಿ ಸಿಮ್ಯುಲೇಷನ್ ಅಂಡ್ ಗೇಮಿಂಗ್ ಇಯರ್‌ಬುಕ್: ಡೆವಲಪಿಂಗ್ ಟ್ರಾನ್ಸ್‌ಫರಬಲ್ ಸ್ಕಿಲ್ಸ್ ಇನ್ ಎಜುಕೇಷನ್ ಅಂಡ್ ಟ್ರೇನಿಂಗ್. ಲಂಡನ್: ಕೋಗನ್ ಪೇಜ್.
- D. ಸೌಂಡರ್ಸ್ (ಸಂಪಾದಿತ). (2000). ದಿ ಇಂಟರ್‌ನ್ಯಾಷನಲ್ ಸಿಮ್ಯುಲೇಷನ್ ಅಂಡ್ ಗೇಮಿಂಗ್ ರಿಸರ್ಚ್ ಇಯರ್‌ಬುಕ್, ಸಂಪುಟ 8. ಲಂಡನ್: ಕೋಗನ್ ಪೇಜ್ ಲಿಮಿಟೆಡ್.
- ರೋಜರ್ D. ಸ್ಮಿತ್: ಸಿಮ್ಯುಲೇಶನ್ ಆರ್ಟಿಕಲ್, ಎನ್‌ಸೈಕ್ಲೋಪೀಡಿಯಾ ಆಫ್ ಕಂಪ್ಯೂಟರ್ ಸೈನ್ಸ್, ನೇಚರ್ ಪಬ್ಲಿಷಿಂಗ್ ಗ್ರೂಪ್, ISBN 0-333-77879-0.
- ರೋಜರ್ D. ಸ್ಮಿತ್: "ಸಿಮ್ಯುಲೇಷನ್: ದಿ ಎಂಜಿನ್ ಬಿಹೈಂಡ್ ದಿ ವರ್ಚುಯಲ್ ವರ್ಲ್ಡ್" Archived 2010-10-23 ವೇಬ್ಯಾಕ್ ಮೆಷಿನ್ ನಲ್ಲಿ., eMatter, ಡಿಸೆಂಬರ್, 1999.
- R. ಸೌತ್ (1688). "ಎ ಸರ್ಮಾನ್ ಡೆಲಿವರ್ಡ್ ಅಟ್ ಕ್ರೈಸ್ಟ್-ಚರ್ಚ್, ಆಕ್ಸನ್., ಬಿಫೋರ್ ದಿ ಯುನಿವರ್ಸಿಟಿ, ಅಕ್ಟೊಬ್. 14. 1688: ಪ್ರೋವ್. XII.22 ಲೇಯಿಂಗ್ ಲಿಪ್ಸ್ ಆರ್ ಎಬೊಮಿನೇಷನ್ ಟು ದಿ ಲಾರ್ಡ್", ದಕ್ಷಿಣದಲ್ಲಿ ಪುಟ ಸಂಖ್ಯೆ. 519–657, R., ಟ್ವೆಲ್ವ್ ಸರ್ಮನ್ಸ್ ಪ್ರೀಚ್ಡ್ ಅಪಾನ್ ಸೆವೆರಲ್ ಅಕೇಷನ್ಸ್ (ಸೆಕಂಡ್ ಎಡಿಷನ್), ಸಂಪುಟ I , ಥೋಮಸ್ ಬೆನ್ನೆಟ್‌ಗಾಗಿ S.D.ಯಿಂದ ಮುದ್ರಿಸಲ್ಪಟ್ಟಿದ್ದು. (ಲಂಡನ್), 1697.
- ಸಿಸ್ಮೊಂಡೊ, ಸರ್ಜಿಯೊ ಮತ್ತು ಸ್ನೈಟ್ ಗಿಸ್ಸಿಸ್‌ನಲ್ಲಿ (ಅವೃತ್ತಿ.)ಎರಿಕ್ ವಿನ್ಸ್‌ಬರ್ಗ್ (1999) ಸ್ಯಾಂಕ್ಷನಿಂಗ್ ಮಾಡೆಲ್ಸ್: ದಿ ಎಪಿಸ್ಟೆಮೊಲಜಿ ಆಫ್ ಸಿಮ್ಯುಲೇಷನ್, (1999), ಮಾದರಿ ರಚನೆ ಮತ್ತು ಸಿಮ್ಯುಲೇಶನ್. ಸಂದರ್ಭ 12ರಲ್ಲಿ ವಿಜ್ಞಾನ ವಿಶೇಷ ಸಂಪುಟ.
- ಎರಿಕ್ ವಿನ್ಸ್‌ಬರ್ಗ್ (2001), “ಸಿಮ್ಯುಲೇಷನ್ಸ್, ಮಾಡೆಲ್ಸ್ ಅಂಡ್ ಥಿಯರೀಸ್: ಕಾಂಪ್ಲೆಕ್ಸ್ ಫಿಸಿಕಲ್ ಸಿಸ್ಟಮ್ಸ್ ಅಂಡ್ ದೆರ್ ರೆಪ್ರೆಸೆಂಟೇಷನ್ಸ್”, ಫಿಲಾಸಫಿ ಆಫ್ ಸೈನ್ಸ್ 68 (ನಡಾವಳಿಗಳ ವರದಿ): 442-454.
- ಎರಿಕ್ ವಿನ್ಸ್‌ಬರ್ಗ್ (2003), ಸಿಮ್ಯುಲೇಟೆಡ್ ಎಕ್ಸ್‌ಪರಿಮೆಂಟ್ಸ್: ಮೆಥಡಾಲಜಿ ಫಾರ್ ಎ ವರ್ಚುಯಲ್ ವರ್ಲ್ಡ್, ಫಿಲಾಸಫಿ ಆಫ್ ಸೈನ್ಸ್ 70: 105–125.
- ಜೋಸೆಫ್ ವೋಲ್ಫ್ & ಡೇವಿಡ್ ಕ್ರೂಕಾಲ್ (1998). ಡೆವಲಪಿಂಗ್ ಎ ಸೈಂಟಿಫಿಕ್ ನಾಲೆಜ್ ಆಫ್ ಸಿಮ್ಯುಲೇಷನ್/ಗೇಮಿಂಗ್. ಸಿಮ್ಯುಲೇಷನ್ & ಗೇಮಿಂಗ್: ಆನ್ ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಥಿಯರಿ, ಡಿಸೈನ್ ಅಂಡ್ ರಿಸರ್ಚ್ , 29(1), 7–19.
- ಎಲೆನ್ K. ಲೆವಿ (2004) ಸಿಂಥೆಟಿಕ್ ಲೈಟಿಂಗ್: ಕಾಂಪ್ಲೆಕ್ಸ್ ಸಿಮ್ಯುಲೇಷನ್ಸ್ ಆಫ್ ನೇಚರ್ , ಫೋಟೋಗ್ರಫಿ ತ್ರೈಮಾಸಿಕ (#88) ಪುಟಗಳು 5–9
ಚಾರಿತ್ರಿಕ ಟಿಪ್ಪಣಿ
ಬದಲಾಯಿಸಿಈ ಪದವು ಮೊದಲು ಋಣಾತ್ಮಕ ಅರ್ಥವನ್ನು ಪಡೆದಿತ್ತು:
- …ವಿಭಿನ್ನತೆಯ ದೃಷ್ಟಿಯಿಂದ, ಪದಗಳಿಂದ ಮೋಸಗೊಳಿಸುವುದನ್ನು ಸಾಮಾನ್ಯವಾಗಿ ಸುಳ್ಳು ಎಂದು ಹೇಳುತ್ತೇವೆ ಮತ್ತು ವರ್ತನೆ, ದೇಹದ ಭಂಗಿ ಅಥವಾ ನಡವಳಿಕೆಗಳಿಂದ ಮೋಸಗೊಳಿಸುವುದನ್ನು ಸಿಮ್ಯುಲೇಶನ್ ಎನ್ನುವರು… ರಾಬರ್ಟ್ ಸೌತ್ (1643–1716)[೧]
ಆದರೂ ನಂತರ ಸಿಮ್ಯುಲೇಶನ್ ಮತ್ತು ಮರೆಮಾಚುವಿಕೆ ನಡುವಿನ ಸಂಪರ್ಕದ ವಿಷಯವು ಕಳೆಗುಂದಿತು ಮತ್ತು ಈಗ ಭಾಷಾಶಾಸ್ತ್ರದ ವಿಷಯ ಮಾತ್ರ ಆಗಿ ಉಳಿದಿದೆ.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಹೆಚ್ಚು ಉಲ್ಲೇಖಗಳನ್ನು ಒಳಗೊಂಡಿರುವ ಗ್ರಂಥಸೂಚಿಗಳನ್ನು ಸಿಮ್ಯಲೇಷನ್ & ಗೇಮಿಂಗ್ ನಿಯತಕಾಲಿಕದ ವೆಬ್ಸೈಟ್ನಲ್ಲಿ ಕಂಡುಕೊಳ್ಳಬಹುದು.
ಆಕರಗಳು
ಬದಲಾಯಿಸಿ- ↑ ಸೌತ್, 1697, ಪುಟ ಸಂಖ್ಯೆ.525.
- ಸುಳ್ಳು ಮತ್ತು ಪ್ರಾಮಾಣಿಕವಾಗಿ ಒಪ್ಪಿಕೊಂಡ ತಪ್ಪು ತಿಳಿವಿನ ನಡುವಿನ ವ್ಯತ್ಯಾಸದ ಬಗ್ಗೆ ಹೇಳುವಾಗ ಸೌತ್ ಹೀಗೆನ್ನುತ್ತಾರೆ:ಸುಳ್ಳು ಹೇಳಬೇಕೆಂದರೆ ಸತ್ಯವನ್ನು ತಿಳಿದಿರಬೇಕು, ಮತ್ತು ಸತ್ಯಕ್ಕೆ ವಿರುದ್ಧವಾದುದನ್ನು ತಿಳಿದೇ ಹೇಳಲಾಗುತ್ತದೆ.
- ಮತ್ತು ಇದರಿಂದ ಸುಳ್ಳಿ ನಲ್ಲಿ ಎಷ್ಟು ಪ್ರಮಾದದ ಪದಗಳಿರುತ್ತವೆ; ವಂಚನೆಯ ಕಾರ್ಯ, ವಂಚನೆಯ ದೇಹಭಂಗಿ, ಅಥವಾ ಮೋಸದ ನಡತೆಯು ಸಿಮ್ಯುಲೇಶನ್ ಅನ್ನು ಒಳಗೊಂಡಿರುತ್ತದೆ.
- ಒಂದು ವೇಳೆ ಸಿಮ್ಯುಲೇಶನ್ ಸುಳ್ಳಾಗಿದ್ದರೆ ಸತ್ಯವು ತಿಳಿದಿರಲೇ ಬೇಕೆಂದು ತೋರುತ್ತದೆ,(ಸತ್ಯ ಬಿಟ್ಟು ಬೇರೆಯದನ್ನು ಪ್ರಸ್ತುತ ಪಡಿಸುವ ಸಲುವಾಗಿ) ಮತ್ತು ಅದು ಸಿಮ್ಯುಲೇಶನ್ ಅನ್ನು ' ಸಿಮ್ಯುಲೇಟ್ ಮಾಡಲು.
- ಇಲ್ಲದಿದ್ದರೆ ಸಿಮ್ಯುಲೇಶನ್ ಏನನ್ನು ನೀಡುವುದು ಎನ್ನುವುದನ್ನು ತಿಳಿಯಲು ಅಸಾಧ್ಯ.
- ಬೇಕಾನ್‌ರ ಪ್ರಬಂಧ ಆಫ್ ಸಿಮ್ಯುಲೇಷನ್ ಆಂಡ್ ಡಿಸ್ಸಿಮ್ಯುಲೇಷನ್ ಮೇಲಿನದಕ್ಕೆ ಸಮಾನವಾದ ಅಭಿಪ್ರಾಯವನ್ನು ವ್ಯಕ್ತಪಡಿಸುವುದು; ಸ್ಯಾಮ್ಯುಲ್ ಜಾನ್ಸನ್ ವಿಚಾರವನ್ನು ಅವರ ಡಿಕ್ಷನರಿ ಆಫ್ ದಿ ಇಂಗ್ಲಿಷ್ ಲ್ಯಾಂಗ್ವೇಜ್ ನಲ್ಲಿ ಸಿಮ್ಯುಲೇಶನ್ ಸೌತ್‌ರ ವ್ಯಾಖ್ಯಾನವನ್ನು ಹೆಚ್ಚಾಗಿ ಅನುಸರಿಸುವುದರಿಂದ ಇದು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ.
- ಇಲ್ಲದಿದ್ದರೆ ಸಿಮ್ಯುಲೇಶನ್ ಏನನ್ನು ನೀಡುವುದು ಎನ್ನುವುದನ್ನು ತಿಳಿಯಲು ಅಸಾಧ್ಯ.
- ಒಂದು ವೇಳೆ ಸಿಮ್ಯುಲೇಶನ್ ಸುಳ್ಳಾಗಿದ್ದರೆ ಸತ್ಯವು ತಿಳಿದಿರಲೇ ಬೇಕೆಂದು ತೋರುತ್ತದೆ,(ಸತ್ಯ ಬಿಟ್ಟು ಬೇರೆಯದನ್ನು ಪ್ರಸ್ತುತ ಪಡಿಸುವ ಸಲುವಾಗಿ) ಮತ್ತು ಅದು ಸಿಮ್ಯುಲೇಶನ್ ಅನ್ನು ' ಸಿಮ್ಯುಲೇಟ್ ಮಾಡಲು.
- ಮತ್ತು ಇದರಿಂದ ಸುಳ್ಳಿ ನಲ್ಲಿ ಎಷ್ಟು ಪ್ರಮಾದದ ಪದಗಳಿರುತ್ತವೆ; ವಂಚನೆಯ ಕಾರ್ಯ, ವಂಚನೆಯ ದೇಹಭಂಗಿ, ಅಥವಾ ಮೋಸದ ನಡತೆಯು ಸಿಮ್ಯುಲೇಶನ್ ಅನ್ನು ಒಳಗೊಂಡಿರುತ್ತದೆ.
- ಸುಳ್ಳು ಮತ್ತು ಪ್ರಾಮಾಣಿಕವಾಗಿ ಒಪ್ಪಿಕೊಂಡ ತಪ್ಪು ತಿಳಿವಿನ ನಡುವಿನ ವ್ಯತ್ಯಾಸದ ಬಗ್ಗೆ ಹೇಳುವಾಗ ಸೌತ್ ಹೀಗೆನ್ನುತ್ತಾರೆ:ಸುಳ್ಳು ಹೇಳಬೇಕೆಂದರೆ ಸತ್ಯವನ್ನು ತಿಳಿದಿರಬೇಕು, ಮತ್ತು ಸತ್ಯಕ್ಕೆ ವಿರುದ್ಧವಾದುದನ್ನು ತಿಳಿದೇ ಹೇಳಲಾಗುತ್ತದೆ.