ಎರಕಹೊಯ್ಯುವಿಕೆಯಲ್ಲಿ, ಮಾದರಿ ಎಂದರೆ ಎರಕಹೊಯ್ಯಬೇಕಾದ ವಸ್ತುವಿನ ಪ್ರತಿಕೃತಿ. ಇದನ್ನು ಕುಳಿಯನ್ನು ಸಿದ್ಧಪಡಿಸಲು ಬಳಸಲಾಗುತ್ತದೆ. ಈ ಕುಳಿಯೊಳಗೆ ಎರಕಹೊಯ್ಯುವ ಪ್ರಕ್ರಿಯೆಯ ಅವಧಿಯಲ್ಲಿ ಕರಗಿದ ವಸ್ತುವನ್ನು ಸುರಿಯಲಾಗುತ್ತದೆ.[]

ಎರಕಹೊಯ್ದ ಕಬ್ಬಿಣದ ಗೇರ್‌ಗಾಗಿ ಕಟ್ಟಿಗೆಯ ಮಾದರಿ

ಮರಳು ಬಳಸಿದ ಎರಕಹೊಯ್ಯುವಿಕೆಯಲ್ಲಿ ಬಳಸಲಾದ ಮಾದರಿಗಳನ್ನು ಕಟ್ಟಿಗೆ, ಲೋಹ, ಪ್ಲಾಸ್ಟಿಕ್ ಅಥವಾ ಇತರ ವಸ್ತುಗಳಿಂದ ತಯಾರಿಸಿರಬಹುದು. ಮಾದರಿಗಳನ್ನು ನಿರ್ಮಾಣದ ಕರಾರುವಾಕ್ಕಾದ ಮಾನದಂಡಗಳಿಗೆ ತಕ್ಕಂತೆ ತಯಾರಿಸಲಾಗುತ್ತದೆ. ಹೀಗೆ ಮಾಡಿದಾಗ, ನಿರ್ಮಿಸಲಾಗುತ್ತಿರುವ ಮಾದರಿಯ ಗುಣಮಟ್ಟ ದರ್ಜೆಯ ಪ್ರಕಾರ, ಅವು ಸೂಕ್ತವಾದ ಕಾಲಾವಧಿಯವರೆಗೆ ಉಳಿಯುತ್ತವೆ ಮತ್ತು ಅವು ಪುನರಾವರ್ತಿತವಾಗಿ ಆಯಾಮರೀತ್ಯಾ ಸ್ವೀಕಾರಾರ್ಹವಾದ ಎರಕಹೊಯ್ದ ವಸ್ತುವನ್ನು ಒದಗಿಸುತ್ತವೆ.[]

ಬಳಸಲಾದ ವಸ್ತುಗಳು

ಬದಲಾಯಿಸಿ

ಸಾಮಾನ್ಯವಾಗಿ, ಮಾದರಿ ತಯಾರಿಗಾಗಿ ಬಳಸಲಾದ ವಸ್ತುಗಳೆಂದರೆ ಕಟ್ಟಿಗೆ, ಲೋಹ ಅಥವಾ ಪ್ಲಾಸ್ಟಿಕ್. ಮೇಣ ಮತ್ತು ಪ್ಯಾರಿಸ್ ಗಾರೆಯನ್ನು ಕೂಡ ಬಳಸಲಾಗುತ್ತದೆ, ಆದರೆ ವಿಶೇಷೀಕೃತ ಅನ್ವಯಗಳಿಗೆ ಮಾತ್ರ. ಶುಗರ್ ಪೈನ್ ಮಾದರಿಗಳಿಗಾಗಿ ಅತ್ಯಂತ ಸಾಮಾನ್ಯವಾಗಿ ಬಳಸಲಾದ ವಸ್ತುವಾಗಿದೆ, ಏಕೆಂದರೆ ಮುಖ್ಯವಾಗಿ ಇದು ಮೃದು, ಹಗುರ ಹಾಗೂ ಆಕಾರ ಕೊಡಲು ಸುಲಭವಾಗಿದೆ. ಹಾಂಡ್ಯೂರಸ್ ಮಹಾಗನಿಯನ್ನು ಉತ್ಪಾದನಾ ಭಾಗಗಳಿಗಾಗಿ ಬಳಸಲಾಗಿತ್ತು, ಏಕೆಂದರೆ ಇದು ಹೆಚ್ಚು ಗಟ್ಟಿಯಾಗಿದೆ ಮತ್ತು ಪೈನ್‍ಗಿಂತ ಹೆಚ್ಚು ಕಾಲದವರೆಗೆ ಬಾಳಿಕೆ ಬರುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Ammen, C. W. (1999). Metalcasting. McGraw-Hill Professional. pp. 159–176. ISBN 978-0-07-134246-9.
  2. http://mechanicalinventions.blogspot.com/2012/12/types-of-patterns.html


"https://kn.wikipedia.org/w/index.php?title=ಮಾದರಿ&oldid=1033788" ಇಂದ ಪಡೆಯಲ್ಪಟ್ಟಿದೆ