ಕೇಂದ್ರೀಯ ತನಿಖಾ ದಳ

(ಸಿಬಿಐ ಇಂದ ಪುನರ್ನಿರ್ದೇಶಿತ)

ಕೇಂದ್ರೀಯ ತನಿಖಾ ದಳ (ಸೆಂಟ್ರಲ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್‌-CBI ) ಎಂಬುದು ಭಾರತದ ಒಂದು ಸರ್ಕಾರಿ ಸಂಸ್ಥೆಯಾಗಿದ್ದು, ಒಂದು ಅಪರಾಧದ ತನಿಖಾ ಘಟಕವಾಗಿ, ರಾಷ್ಟ್ರೀಯ ಭದ್ರತಾ ಸಂಸ್ಥೆಯಾಗಿ ಮತ್ತು ಗುಪ್ತಚರ ಸಂಸ್ಥೆಯಾಗಿ ಅದು ಸೇವೆ ಸಲ್ಲಿಸುತ್ತದೆ. ೧೯೬೩ರ ಏಪ್ರಿಲ್‌ ೧ರಂದು ಇದು ಸ್ಥಾಪಿಸಲ್ಪಟ್ಟಿತು ಮತ್ತು ೧೯೪೧ರಲ್ಲಿ ಸಂಸ್ಥಾಪಿಸಲ್ಪಟ್ಟ ವಿಶೇಷ ಆರಕ್ಷಕ ಸಂಸ್ಥೆ ಯಿಂದ (ಸ್ಪೆಷಲ್‌ ಪೊಲೀಸ್‌ ಎಸ್ಟಾಬ್ಲಿಷ್‌ಮೆಂಟ್‌) ಇದು ವಿಕಸನಗೊಂಡಿತು. "ದುಡಿಮೆ, ನಿಷ್ಪಕ್ಷಪಾತತೆ, ಸಮಗ್ರತೆ" ಎಂಬುದು ಇದರ ಧ್ಯೇಯವಾಕ್ಯವಾಗಿದೆ.

ಕೇಂದ್ರೀಯ ತನಿಖಾ ದಳ
ಕೇಂದ್ರೀಯ ತನಿಖಾ ದಳದ ಮೊಹರು
ಸಾಮಾನ್ಯ ಹೆಸರುಕೇಂದ್ರೀಯ ತನಿಖಾ ದಳ
ಕಿರುರೂಪಸಿಬಿಐ
ಧ್ಯೇಯವಾಕ್ಯIndustry, Impartiality, Integrity
ಸಂಸ್ಥೆಯ ಮೇಲ್ನೋಟ
ಸ್ಥಾಪನೆ1 ಎಪ್ರಿಲ್ 1963
Preceding agency
  • ವಿಶೇಷ ಪೋಲಿಸ್ ಸಂಸ್ಥೆ (ಎಸ್‍ಪಿಇ) (1941)
ನ್ಯಾಯವ್ಯಾಪ್ತಿಯ ರಚನೆ
Federal agencyಭಾರತ
ಕಾರ್ಯಾಚರಣೆಯ ವ್ಯಾಪ್ತಿಭಾರತ
ಆಡಳಿತ ಮಂಡಳಿ[[ಟೆಂಪ್ಲೇಟು:Trim brackets]]
General natureFederal law enforcement
ಮುಖ್ಯ ಕಾರ್ಯಾಲಯನವದೆಹಲಿ, ಭಾರತ

ನಿರ್ವಹಣಾ ಮುಖ್ಯಸ್ಥರು
Parent agencyಸಿಬ್ಬಂದಿ ಮತ್ತು ತರಬೇತಿ ಇಲಾಖೆ
Child agency
ಪ್ರದೇಶs
Facilities
ಶಾಖೆs52
Notables
Person
Website
http://www.cbi.gov.in/index.php

ಒಕ್ಕೂಟ ಸರ್ಕಾರದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಖಾತೆ ಯಲ್ಲಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಯಿಂದ CBI ನಿಯಂತ್ರಿಸಲ್ಪಡುತ್ತದೆ; ಸದರಿ ಖಾತೆಗೆ ಸಾಮಾನ್ಯವಾಗಿ ಓರ್ವ ಕೇಂದ್ರ ಮಂತ್ರಿಯ ನೇತೃತ್ವವಿರುತ್ತದೆ ಹಾಗೂ ಈತ ಪ್ರಧಾನ ಮಂತ್ರಿಯವರಿಗೆ ನೇರವಾಗಿ ವರದಿ ಸಲ್ಲಿಸುತ್ತಾನೆ. ಸ್ವರೂಪದಲ್ಲಿ ಇದು FBIನ್ನು ಹೋಲುತ್ತದೆಯಾದರೂ, ಕಾಯಿದೆಗಳನ್ನು (ಮುಖ್ಯವಾಗಿ ೧೯೪೬ರ ದೆಹಲಿ ವಿಶೇಷ ಆರಕ್ಷಕ ಸಂಸ್ಥೆಯ ಕಾಯಿದೆ ) ಆಧರಿಸಿದ ನಿರ್ದಿಷ್ಟ ಅಪರಾಧಗಳಿಗೆ CBIನ ಅಧಿಕಾರಗಳು ಮತ್ತು ಕಾರ್ಯಚಟುವಟಿಕೆಗಳು ನಿಷ್ಠುರವಾಗಿ ಸೀಮಿತಗೊಳಿಸಲ್ಪಟ್ಟಿರುತ್ತವೆ. CBI, ಭಾರತಕ್ಕೆ ಸಂಬಂಧಿಸಿದಂತಿರುವ ಅಧಿಕೃತ ಇಂಟರ್‌ಪೋಲ್‌ ಘಟಕವಾಗಿದೆ. ಅಲೋಕ್ ಕುಮಾರ್ ವರ್ಮಾ CBIನ ಈಗಿನ ನಿರ್ದೇಶಕರಾಗಿದ್ದಾರೆ.

ಭಾರತ ಸರ್ಕಾರದ ವತಿಯಿಂದ ೧೯೪೧ರಲ್ಲಿ ಸ್ಥಾಪಿಸಲ್ಪಟ್ಟ ವಿಶೇಷ ಆರಕ್ಷಕ ಸಂಸ್ಥೆ ಯಲ್ಲಿ (ಸ್ಪೆಷಲ್‌ ಪೊಲೀಸ್‌ ಎಸ್ಟಾಬ್ಲಿಷ್‌ಮೆಂಟ್‌-SPE) (ಹಿಂದಿ: विशेष पुलिस संस्थापन ವಿಶೇಷ ಆರಕ್ಷಕ ಸಂಸ್ಥಾಪನ್‌ ) ಕೇಂದ್ರೀಯ ತನಿಖಾ ದಳದ ಮೂಲವಿದೆ ಎನ್ನಬಹುದು. IIನೇ ಜಾಗತಿಕ ಯುದ್ಧದ ಅವಧಿಯಲ್ಲಿ ಭಾರತದ ಯುದ್ಧ ಮತ್ತು ಪೂರೈಕೆ ಇಲಾಖೆಯೊಂದಿಗಿನ ವ್ಯವಹಾರ ನಿರ್ವಹಣೆಗಳಲ್ಲಿದ್ದ ಲಂಚಗುಳಿತನ ಮತ್ತು ಭ್ರಷ್ಟಾಚಾರದ ಪ್ರಕರಣಗಳ ಕುರಿತು ತನಿಖೆ ನಡೆಸುವುದು SPE ನ ಕಾರ್ಯಚಟುವಟಿಕೆಗಳಾಗಿದ್ದವು. SPEನ ಅಧೀಕ್ಷಕನಿಗೆ ಯುದ್ಧ ಇಲಾಖೆಯನ್ನು ವಹಿಸಲಾಗಿತ್ತು. ಯುದ್ಧವು ಕೊನೆಗೊಂಡ ನಂತರವೂ, ಕೇಂದ್ರ ಸರ್ಕಾರಿ ನೌಕರರ ಲಂಚಗುಳಿತನ ಮತ್ತು ಭ್ರಷ್ಟಾಚಾರದ ಪ್ರಕರಣಗಳ ಕುರಿತು ತನಿಖೆ ನಡೆಸಲು ಕೇಂದ್ರ ಸರ್ಕಾರದ ಸಂಸ್ಥೆಯೊಂದರ ಅಗತ್ಯವು ಕಂಡುಬಂತು. ಆದ್ದರಿಂದ ೧೯೪೬ರಲ್ಲಿ ದೆಹಲಿ ವಿಶೇಷ ಆರಕ್ಷಕ ಸಂಸ್ಥಾ ಕಾಯಿದೆ ಯನ್ನು ಜಾರಿಗೆ ತರಲಾಯಿತು. SPEನ ಮೇಲ್ವಿಚಾರಣೆಯನ್ನು ಈ ಕಾಯಿದೆಯು ಗೃಹ ಇಲಾಖೆಗೆ ವರ್ಗಾಯಿಸಿತು ಮತ್ತು ಭಾರತ ಸರ್ಕಾರದ ಎಲ್ಲಾ ಇಲಾಖೆಗಳೂ ಇದರ ವ್ಯಾಪ್ತಿಗೆ ಬರಲು ಅನುವಾಗುವಂತೆ ಇದರ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲಾಯಿತು. SPEನ ಅಧಿಕಾರವ್ಯಾಪ್ತಿಯು ಎಲ್ಲಾ ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಲ್ಪಟ್ಟಿತು ಮತ್ತು ಸಂಬಂಧಪಟ್ಟ ರಾಜ್ಯ ಸರ್ಕಾರದ ಒಪ್ಪಿಗೆಯೊಂದಿಗೆ ಇದನ್ನು ರಾಜ್ಯಗಳಿಗೂ ಸಹ ವಿಸ್ತರಿಸಬಹುದಾಗಿದೆ.

ಸಂಸ್ಥಾಪಕ ನಿರ್ದೇಶಕ

ಬದಲಾಯಿಸಿ

D.P. ಕೊಹ್ಲಿ ಎಂಬುವವರು CBIನ ಸಂಸ್ಥಾಪಕ ನಿರ್ದೇಶಕರಾಗಿದ್ದು, ಇವರು ೧೯೬೩ರ ಏಪ್ರಿಲ್‌ ೧ರಿಂದ ೧೯೬೮ರ ಮೇ ೩೧ರವರೆಗೆ ಅಧಿಕಾರದಲ್ಲಿದ್ದರು. ಇದಕ್ಕೂ ಮುಂಚಿತವಾಗಿ, ೧೯೫೫ರಿಂದ ೧೯೬೩ರವರೆಗೆ ಅವರು ವಿಶೇಷ ಆರಕ್ಷಕ ಸಂಸ್ಥೆಯ ಪ್ರಧಾನ ಆರಕ್ಷಕ ನಿರೀಕ್ಷಕ (ಇನ್ಸ್‌ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌) ಆಗಿದ್ದರು. ಅದಕ್ಕೂ ಮುಂಚೆ, ಮಧ್ಯ ಭಾರತ, ಉತ್ತರ ಪ್ರದೇಶ ಮತ್ತು ಭಾರತ ಸರ್ಕಾರದಲ್ಲಿನ ಆರಕ್ಷಕ ಇಲಾಖಾ ಕರ್ತವ್ಯಗಳಲ್ಲಿ ಜವಾಬ್ದಾರಿಯ ಸ್ಥಾನಗಳನ್ನು ಅವರು ನಿಭಾಯಿಸಿದ್ದರು. SPEಯನ್ನು ಸೇರುವುದಕ್ಕೆ ಮುಂಚಿತವಾಗಿ ಅವರು ಮಧ್ಯ ಭಾರತದಲ್ಲಿ ಆರಕ್ಷಕ ಮುಖ್ಯಸ್ಥರಾಗಿದ್ದರು. ಕೊಹ್ಲಿಯವರು ಸಲ್ಲಿಸಿದ ವಿಶಿಷ್ಟವಾದ ಸೇವೆಗಳಿಗಾಗಿ ಅವರಿಗೆ ೧೯೬೭ರಲ್ಲಿ 'ಪದ್ಮಭೂಷಣ' ಪ್ರಶಸ್ತಿಯನ್ನು ನೀಡಲಾಯಿತು.

ಕೊಹ್ಲಿಯವರು ಓರ್ವ ಕನಸುಗಾರರಾಗಿದ್ದರು; ರಾಷ್ಟ್ರೀಯ ಶೋಧಕ ಸಂಸ್ಥೆಯಾಗಿ ಬೆಳೆಯುವ ಸಾಮರ್ಥ್ಯವು ವಿಶೇಷ ಆರಕ್ಷಕ ಸಂಸ್ಥೆಯಲ್ಲಿ ಇರುವುದನ್ನು ಅವರಾಗಲೇ ಕಂಡಿದ್ದರು. ತಮ್ಮ ಸುದೀರ್ಘ ಸೇವಾವಧಿಯಲ್ಲಿ ಪ್ರಧಾನ ನಿರೀಕ್ಷಕರಾಗಿ ಮತ್ತು ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅವರು ಸಂಸ್ಥೆಯನ್ನು ಪೋಷಿಸಿದರು; ಅವರು ಹಾಕಿದ ಸುಭದ್ರ ಬುನಾದಿಯ ಮೇಲೆಯೇ ದಶಕಗಳವರೆಗೆ ಬೆಳೆದ ಈ ಸಂಸ್ಥೆಯು ತನ್ನ ಈಗಿನ ಮಟ್ಟವನ್ನು ಮುಟ್ಟಿದೆ.

ಆಕಾರವನ್ನು ಪಡೆದುಕೊಂಡ CBI

ಬದಲಾಯಿಸಿ
ಚಿತ್ರ:Cartooncbi.JPG
CBI ಕುರಿತಾದ ಒಂದು ವ್ಯಂಗ್ಯಚಿತ್ರ ಮಾಲಿಕೆ

ವರ್ಷಗಳು ಉರುಳುತ್ತಿದ್ದಂತೆ, ಸಂಕೀರ್ಣಗೊಂಡಿರುವ ಪ್ರಕರಣಗಳನ್ನು ನಿಭಾಯಿಸಲು ಸಾಕಷ್ಟಿರುವ ಸಂಪನ್ಮೂಲಗಳೊಂದಿಗೆ ಭಾರತದ ಪ್ರಧಾನ ತನಿಖಾ ಸಂಸ್ಥೆಯಾಗಿ ಒಂದು ಪ್ರಸಿದ್ಧಿಯನ್ನು CBI ತನ್ನ ದಾಖಲೆಯಲ್ಲಿ ಸೇರಿಸಿಕೊಳ್ಳುತ್ತಿದ್ದಂತೆ, ಕೊಲೆ, ಅಪಹರಣ, ಭಯೋತ್ಪಾದನೆಗಳಂಥ ಸಹಜವಲ್ಲದ ಅಪರಾಧಗಳ ಹೆಚ್ಚೆಚ್ಚು ಪ್ರಕರಣಗಳ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಅದರ ಮುಂದೆ ಬೇಡಿಕೆಗಳು ಸಲ್ಲಿಸಲ್ಪಟ್ಟವು. ಇಷ್ಟು ಮಾತ್ರವೇ ಅಲ್ಲದೆ, ದೇಶದ ಸರ್ವೋಚ್ಚ ನ್ಯಾಯಾಲಯ ಮತ್ತು ಅಷ್ಟೇ ಏಕೆ ಹಲವಾರು ಉಚ್ಚ ನ್ಯಾಯಾಲಯಗಳೂ ಸಹ, ಅನ್ಯಾಯಕ್ಕೊಳಗಾದ ಪಕ್ಷಸ್ಥರಿಂದ ಸಲ್ಲಿಸಲ್ಪಟ್ಟ ಮನವಿಗಳ ಆಧಾರದ ಮೇಲೆ ಇಂಥ ಪ್ರಕರಣಗಳ ತನಿಖೆಯನ್ನು CBIಗೆ ವಹಿಸಿಕೊಡುವ ಪರಿಪಾಠವನ್ನು ಪ್ರಾರಂಭಿಸಿದವು. ಈ ವರ್ಗದ ಅಡಿಯಲ್ಲಿ ಬರುವ ಹಲವಾರು ಪ್ರಕರಣಗಳನ್ನು ತನಿಖೆಗಾಗಿ CBI ಕೈಗೆತ್ತಿಕೊಳ್ಳುತ್ತಿತ್ತು ಎಂಬ ವಾಸ್ತವಾಂಶವನ್ನು ಪರಿಗಣನೆಗೆ ತೆಗೆದುಕೊಂಡು, ಸ್ಥಳೀಯ ಅಧಿಕಾರವ್ಯಾಪ್ತಿಯನ್ನು ಹೊಂದಿರುವ ಶಾಖೆಗಳಿಗೆ ಇಂಥ ಪ್ರಕರಣಗಳನ್ನು ವಹಿಸಿಕೊಡುವುದು ಯಥೋಚಿತ ಎಂಬುದು ಕಂಡುಬಂತು.

ಆದ್ದರಿಂದ CBIನಲ್ಲಿ ಎರಡು ತನಿಖಾ ವಿಭಾಗಗಳನ್ನು ರೂಪಿಸಲು ೧೯೮೭ರಲ್ಲಿ ನಿರ್ಧರಿಸಲಾಯಿತು. ಭ್ರಷ್ಟಾಚಾರ-ನಿರೋಧಿ ವಿಭಾಗ ಹಾಗೂ ವಿಶೇಷ ಅಪರಾಧಗಳ ವಿಭಾಗ ಎಂದು ಅವುಗಳಿಗೆ ಹೆಸರಿಸಲಾಯಿತು. ವಿಶೇಷ ಅಪರಾಧಗಳ ವಿಭಾಗವು ಆರ್ಥಿಕ ಅಪರಾಧಗಳ ಜೊತೆಜೊತೆಗೆ ಸಹಜವಲ್ಲದ ಅಪರಾಧದ ಪ್ರಕರಣಗಳೊಂದಿಗೂ ವ್ಯವಹರಿಸುತ್ತದೆ. ಭಾರತದ ಸಂವಿಧಾನದ ಅಡಿಯಲ್ಲಿ CBI ಒಂದು ಪ್ರಧಾನ ವಿಷಯವಾಗಿದ್ದು, ಇದು ಭಾರತದ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆಯೇ ಹೊರತು ಪ್ರತ್ಯೇಕ ರಾಜ್ಯಗಳಿಗಲ್ಲ ಎಂಬುದು ಇದರರ್ಥವಾಗಿದೆ.

ಪಾತ್ರ ಮತ್ತು ಕಾರ್ಯಚಟುವಟಿಕೆಗಳು

ಬದಲಾಯಿಸಿ

CBI, ಭಾರತದಲ್ಲಿನ ತನಿಖೆ ನಡೆಸುವ ಪ್ರಧಾನ ಆರಕ್ಷಕ ಸಂಸ್ಥೆಯಾಗಿದೆ. ಇದೊಂದು ಉತ್ಕೃಷ್ಟ ಪಡೆಯಾಗಿದ್ದು, ಸಾರ್ವಜನಿಕ ಜೀವನದಲ್ಲಿನ ಮೌಲ್ಯಗಳ ಸಂರಕ್ಷಣೆಯಲ್ಲಿ ವಹಿಸುತ್ತಿದೆ ಮತ್ತು ರಾಷ್ಟ್ರೀಯ ಆರ್ಥಿಕತೆಯ ಸ್ವಾಸ್ಥ್ಯವನ್ನು ಖಾತ್ರಿಪಡಿಸುವಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಇದು ಭಾರತದಲ್ಲಿನ ಆಯಕಟ್ಟಿನ ಆರಕ್ಷಕ ಸಂಸ್ಥೆಯೂ ಆಗಿದ್ದು, ಇಂಟರ್‌ಪೋಲ್‌ ಸದಸ್ಯ ದೇಶಗಳ ಪರವಾಗಿ ತನಿಖೆಗೆ ಹೊಂದಿಕೊಂಡು ಸುಸಂಘಟಿತವಾಗಿ ಕೆಲಸಮಾಡುತ್ತದೆ. ದೇಶದಲ್ಲಿ ನಡೆಯುವ ಎಲ್ಲಾ ಪ್ರಮುಖ ತನಿಖೆಗಳಿಗಾಗಿ ಇದರ ತನಿಖಾಧಿಕಾರಿಗಳ ಸೇವೆಗಳನ್ನು ಅಪೇಕ್ಷಿಸಲಾಗುತ್ತದೆ. ಒಂದು ಸಂಸ್ಥೆಯಾಗಿ CBI, ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯಗಳು, ಸಂಸತ್ತು ಮತ್ತು ಸಾರ್ವಜನಿಕರಿಂದ ಉನ್ನತ ಗೌರವವನ್ನು ಪಡೆದುಕೊಂಡಿದೆ. ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಶಾಖೋಪಶಾಖೆಗಳನ್ನು ಹೊಂದಿರುವ CBIಗೆ ದೇಶದಲ್ಲಿನ ಪ್ರಮುಖ ಅಪರಾಧಗಳ ಕುರಿತಾಗಿ ತನಿಖೆ ನಡೆಸಬೇಕಾಗಿ ಬರುತ್ತದೆ. ತನ್ನ ಕಾರ್ಯಾಚರಣೆಯ ಪೈಕಿಯ ಮೂರು ಮುಖ್ಯ ಕ್ಷೇತ್ರಗಳಾದ ಭ್ರಷ್ಟಾಚಾರ-ನಿರೋಧ, ಆರ್ಥಿಕ ಅಪರಾಧಗಳು ಮತ್ತು ವಿಶೇಷ ಅಪರಾಧಗಳಳಿಗೆ ಸಂಬದ್ಧವಾಗಿರುವ ಅಪರಾಧದ ಸುದ್ದಿಯ ಸಂಗ್ರಹದಲ್ಲಿಯೂ ಇದು ತೊಡಗಿಸಿಕೊಂಡಿದೆ.

ರಾಷ್ಟ್ರದ ರಾಜಕೀಯ ಮತ್ತು ಆರ್ಥಿಕ ಜೀವನದ ಮೇಲೆ CBI ತನಿಖೆಗಳು ಒಂದು ಪ್ರಮುಖ ಪ್ರಭಾವವನ್ನು ಹೊಂದಿವೆ. ಈ ಕೆಳಗೆ ನಮೂದಿಸಿರುವ ಅಪರಾಧದ ಪ್ರಕರಣಗಳ ವಿಸ್ತೃತ ವರ್ಗಗಳು CBIನಿಂದ ನಿಭಾಯಿಸಲ್ಪಡುತ್ತವೆ:

  • ಭ್ರಷ್ಟಾಚಾರ ವಿರೋಧಿ ವಿಭಾಗ : ಎಲ್ಲಾ ಕೇಂದ್ರ ಸರ್ಕಾರಿ ಇಲಾಖೆಗಳು, ಕೇಂದ್ರದ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಕೇಂದ್ರ ಹಣಕಾಸಿನ ಸಂಸ್ಥೆಗಳಿಗೆ ಸೇರಿದ ಸಾರ್ವಜನಿಕ ಸೇವೆಯಲ್ಲಿರುವವರಿಂದ ಎಸಗಲ್ಪಟ್ಟ ಭ್ರಷ್ಟಾಚಾರ ಹಾಗೂ ವಂಚನೆಯ ಪ್ರಕರಣಗಳು.
  • ಆರ್ಥಿಕ ಅಪರಾಧಗಳ ವಿಭಾಗ : ಬ್ಯಾಂಕ್‌ ವಂಚನೆಗಳು, ಹಣಕಾಸಿನ ವಂಚನೆಗಳು, ಆಮದು ರಫ್ತು ಮತ್ತು ವಿದೇಶಿ ವಿನಿಮಯದ ಉಲ್ಲಂಘನೆಗಳು, ಮಾದಕವಸ್ತುಗಳು, ಪುರಾತನ ಕಲಾಕೃತಿಗಳು, ಸಾಂಸ್ಕೃತಿಕ ಸ್ವತ್ತುಗಳ ಬೃಹತ್‌-ಪ್ರಮಾಣದ ಕಳ್ಳಸಾಗಾಣಿಕೆ ಹಾಗೂ ಇತರ ನಿಷಿದ್ಧ ವಸ್ತುಗಳ ಕಳ್ಳಸಾಗಾಣಿಕೆ ಇತ್ಯಾದಿಯನ್ನು ಒಳಗೊಂಡಿರುವ ಪ್ರಕರಣಗಳೊಂದಿಗೆ ಇದು ವ್ಯವಹರಿಸುತ್ತದೆ.
  • ವಿಶೇಷ ಅಪರಾಧಗಳ ವಿಭಾಗ : ಭಯೋತ್ಪಾದನೆ, ಬಾಂಬ್‌ ಸ್ಫೋಟಗಳು, ಕ್ಷೋಭೆಕಾರಿ ನರಹತ್ಯೆಗಳಂಥ ಪ್ರಕರಣಗಳು, ವಿಮೋಚನಾ ಹಣಕ್ಕಾಗಿ (ಬಿಡುಗಡೆಯ ಹಣಕ್ಕಾಗಿ) ಮಾಡಲಾಗುವ ಅಪಹರಣ, ಅಪರಾಧಿ ತಂಡ/ಭೂಗತಲೋಕದಿಂದ ಎಸಗಲ್ಪಟ್ಟ ಅಪರಾಧಗಳಂಥ ಪ್ರಕರಣಗಳೊಂದಿಗೆ ಇದು ವ್ಯವಹರಿಸುತ್ತದೆ.

CBIನ ಸ್ವರೂಪ

ಬದಲಾಯಿಸಿ

CBIಗೆ ಓರ್ವ ನಿರ್ದೇಶಕನ ನೇತೃತ್ವವಿರುತ್ತದೆ. ಈತ ಆರಕ್ಷಕ ಮಹಾನಿರ್ದೇಶಕ ಅಥವಾ ಆರಕ್ಷಕ (ರಾಜ್ಯ) ಆಯುಕ್ತರ ದರ್ಜೆಯ ಓರ್ವ IPS ಅಧಿಕಾರಿಯಾಗಿರುತ್ತಾನೆ. ೨೦೦೩ರ CVC ಕಾಯಿದೆಯಿಂದ ರೂಪಿಸಲ್ಪಟ್ಟಿರುವ ನಿರ್ವಹಣಾ ವಿಧಾನದ ಆಧಾರದ ಮೇಲೆ ನಿರ್ದೇಶಕನನ್ನು ಆರಿಸಲಾಗುತ್ತದೆ ಮತ್ತು ೨ ವರ್ಷಗಳವರೆಗಿನ ಒಂದು ಅಧಿಕಾರಾವಧಿಯನ್ನು ಹೊಂದಿರುತ್ತಾನೆ. CBIನಲ್ಲಿರುವ ಇತರ ಪ್ರಮುಖ ದರ್ಜೆಗಳೆಂದರೆ, ವಿಶೇಷ ನಿರ್ದೇಶಕ, ಹೆಚ್ಚುವರಿ ನಿರ್ದೇಶಕ, ಜಂಟಿ ನಿರ್ದೇಶಕ, ಉಪ ಪ್ರಧಾನ ಆರಕ್ಷಕ ನಿರೀಕ್ಷಕ, ಹಿರಿಯ ಆರಕ್ಷಕ ಅಧೀಕ್ಷಕ, ಆರಕ್ಷಕ ಅಧೀಕ್ಷಕ, ಹೆಚ್ಚುವರಿ ಆರಕ್ಷಕ ಅಧೀಕ್ಷಕ, ಆರಕ್ಷಕ ಉಪ ಅಧೀಕ್ಷಕ, ನಿರೀಕ್ಷಕ‌, ಉಪ-ನಿರೀಕ್ಷಕ‌, ಸಹಾಯಕ ಉಪ-ನಿರೀಕ್ಷಕ‌, ಮುಖ್ಯ ಪೇದೆ, ಹಿರಿಯ ಪೇದೆ ಮತ್ತು ಪೇದೆ.[]

ವಾರ್ಷಿಕ ವರದಿಗಳ ಅನುಸಾರ ಮಂತ್ರಿಯ ಸಿಬ್ಬಂದಿ, ಮಾಜಿ-ಮೂಲಪಡೆ ಹುದ್ದೆಗಳು, ಕಾರ್ಯಕಾರಿ ಸಿಬ್ಬಂದಿ ಮತ್ತು EDP ಸಿಬ್ಬಂದಿಗಳ ನಡುವೆ CBIನ ಸಿಬ್ಬಂದಿಯನ್ನು ಸಾಮಾನ್ಯವಾಗಿ ವಿಂಗಡಿಸಲಾಗುತ್ತದೆ; ಮಾಜಿ-ಮೂಲಪಡೆ ಹುದ್ದೆಗಳು ಸಾಮಾನ್ಯವಾಗಿ ತಾಂತ್ರಿಕ ಸ್ವರೂಪವನ್ನು ಹೊಂದಿರುತ್ತವೆ. ಹಿಂದಿ ಭಾಷಾ ಸಿಬ್ಬಂದಿಗಳು ಅಧಿಕೃತ ಭಾಷೆಗಳ ಇಲಾಖೆಗೆ ಸೇರಿದವರಾಗಿರುತ್ತಾರೆ.

ಮಂತ್ರಿಯ ಸಿಬ್ಬಂದಿಗಳಲ್ಲಿ LDC, UDC, ಅಪರಾಧ ಸಹಾಯಕರು ಇತ್ಯಾದಿಗಳು ಸೇರಿರುತ್ತಾರೆ. ಕಾರ್ಯಕಾರಿ ಸಿಬ್ಬಂದಿಗಳಲ್ಲಿ ಪೇದೆಗಳು, ASI, ಉಪ-ನಿರೀಕ್ಷಕ‌ರು, ನಿರೀಕ್ಷಕ‌ರು ಇತ್ಯಾದಿಗಳಿರುತ್ತಾರೆ. EDP ಸಿಬ್ಬಂದಿಗಳಲ್ಲಿ ದತ್ತಾಂಶ ನಮೂದಿಸುವ ನಿರ್ವಾಹಕರು, ದತ್ತಾಂಶ ಸಂಸ್ಕರಿಸುವ ಸಹಾಯಕರು, ಸಹಾಯಕ ಕಾರ್ಯಸೂಚಿ ಯೋಜಕರು, ಕಾರ್ಯಸೂಚಿ ಯೋಜಕರು ಮತ್ತು SSAಗಳು ಸೇರಿರುತ್ತಾರೆ.

ಆಡಳಿತವ್ಯಾಪ್ತಿಯ ಅಧಿಕಾರಗಳು, ಸವಲತ್ತುಗಳು ಮತ್ತು ಹೊಣೆಗಾರಿಕೆಗಳು

ಬದಲಾಯಿಸಿ

೧೯೪೬ರ DSPE ಕಾಯಿದೆಯಿಂದ CBI ತನಿಖೆಯ ಶಾಸನಬದ್ಧ ಅಧಿಕಾರಗಳನ್ನು ಪಡೆಯಲಾಗಿದೆ. ಕೇಂದ್ರಾಡಳಿತ ಪ್ರದೇಶಗಳ ಆರಕ್ಷಕ ಅಧಿಕಾರಿಗಳೊಂದಿಗೆ ದೆಹಲಿ ವಿಶೇಷ ಆರಕ್ಷಕ ಸಂಸ್ಥೆಯ (CBI) ಸದಸ್ಯರುಗಳ ಮೇಲೆ ಸಹವರ್ತಿ ಮತ್ತು ಸಮವ್ಯಾಪಕ ಅಧಿಕಾರಗಳು, ಕರ್ತವ್ಯಗಳು, ಸವಲತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಈ ಕಾಯಿದೆಯು ಪ್ರದಾನ ಮಾಡುತ್ತದೆ. ತನಿಖೆಗೆ ಸಂಬಂಧಿಸಿದ CBI ಸದಸ್ಯರ ಅಧಿಕಾರಗಳು ಮತ್ತು ಅಧಿಕಾರವ್ಯಾಪ್ತಿಯನ್ನು ಕೇಂದ್ರ ಸರ್ಕಾರವು ಕೇಂದ್ರಾಡಳಿತ ಪ್ರದೇಶಗಳ ಜೊತೆಜೊತೆಗೆ ಯಾವುದೇ ಕ್ಷೇತ್ರಕ್ಕೆ ವಿಸ್ತರಿಸಬಹುದು; ಆದರೆ ಇದಕ್ಕಾಗಿ ಸಂಬಂಧಪಟ್ಟ ರಾಜ್ಯದ ಸರ್ಕಾರದ ಒಪ್ಪಿಗೆಯನ್ನು ಪಡೆದುಕೊಳ್ಳುವುದು ಅಗತ್ಯ. ಇಂಥ ಅಧಿಕಾರಗಳನ್ನು ಚಲಾಯಿಸುವಾಗ, CBIನ ಸದಸ್ಯರನ್ನು ಅಥವಾ ಉಪ ನಿರೀಕ್ಷಕ‌ರ ದರ್ಜೆಗಿಂತ ಮೇಲಿರುವವರನ್ನು, ಸಂಬಂಧಪಟ್ಟ ಅಧಿಕಾರವ್ಯಾಪ್ತಿಗಳ ಆರಕ್ಷಕ ಠಾಣೆಗಳ ಮೇಲ್ವಿಚಾರಣೆ ಹೊಂದಿರುವ ಅಧಿಕಾರಿಗಳಾಗಿ ಪರಿಗಣಿಸಲಾಗುತ್ತದೆ. DSPE ಕಾಯಿದೆಯ ಅಡಿಯಲ್ಲಿ ಕೇಂದ್ರ ಸರ್ಕಾರದ ವತಿಯಿಂದ ತಿಳಿಯಪಡಿಸಲಾಗಿರುವ ಅಪರಾಧಗಳಂಥವನ್ನು ಮಾತ್ರವೇ CBI ತನಿಖೆ ನಡೆಸಬಹುದಾಗಿರುತ್ತದೆ.

ರಾಜ್ಯ ಆರಕ್ಷಕರಿಗೆ ಎದುರಾಗಿರುವ CBI ಅಧಿಕಾರವ್ಯಾಪ್ತಿ

ಬದಲಾಯಿಸಿ

ಕಾನೂನು ಮತ್ತು ಸುವ್ಯವಸ್ಥೆಯು ರಾಜ್ಯಕ್ಕೆ ಸಂಬಂಧಿಸಿದ ಒಂದು ವಿಷಯವಾಗಿದ್ದು, ಅಪರಾಧದ ತನಿಖೆ ನಡೆಸುವ ಮೂಲಭೂತ ಅಧಿಕಾರವು ರಾಜ್ಯ ಆರಕ್ಷಕರ ಬಳಿಯಲ್ಲಿ ಇರುತ್ತದೆ. ಜೊತೆಗೆ, ಸೀಮಿತಗೊಳಿಸಲ್ಪಟ್ಟ ಸಂಪನ್ಮೂಲಗಳ ಕಾರಣದಿಂದಾಗಿ, ಎಲ್ಲಾ ಬಗೆಯ ಅಪರಾಧಗಳ ತನಿಖೆ ನಡೆಸುವುದಕ್ಕೆ CBIನಿಂದ ಸಾಧ್ಯವಾಗುವುದಿಲ್ಲ. ಈ ಕೆಳಗೆ ನಮೂದಿಸಿರುವ ಸ್ವರೂಪದ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸಬಹುದು:

  • ಮೂಲಭೂತವಾಗಿ ಕೇಂದ್ರ ಸರ್ಕಾರಿ ನೌಕರರ ವಿರುದ್ಧವಾಗಿರುವ ಅಥವಾ ಕೇಂದ್ರ ಸರ್ಕಾರದ ಸಂಬಂಧಪಟ್ಟ ವ್ಯವಹಾರಗಳಿಗೆ ವಿರುದ್ಧವಾಗಿರುವ ಪ್ರಕರಣಗಳು ಮತ್ತು ಕೇಂದ್ರದ ಸಾರ್ವಜನಿಕ ವಲಯದ ಉದ್ಯಮಗಳು ಹಾಗೂ ಸಾರ್ವಜನಿಕ ವಲಯದ ಬ್ಯಾಂಕುಗಳ ನೌಕರರ ವಿರುದ್ಧವಾಗಿರುವ ಪ್ರಕರಣಗಳು.
  • ಕೇಂದ್ರ ಸರ್ಕಾರದ ಹಣಕಾಸಿನ ಹಿತಾಸಕ್ತಿಗಳನ್ನು ಒಳಗೊಂಡಿರುವ ಪ್ರಕರಣಗಳು.
  • ಕೇಂದ್ರದ ಕಾನೂನುಗಳ ಉಲ್ಲಂಘನೆಗಳಿಗೆ ಸಂಬಂಧಪಟ್ಟಿರುವ ಪ್ರಕರಣಗಳು; ಇಲ್ಲಿ ಸದರಿ ಕಾನೂನುಗಳ ಜಾರಿಮಾಡುವಿಕೆಗೆ ಭಾರತ ಸರ್ಕಾರವು ಮುಖ್ಯವಾಗಿ ಸಂಬಂಧಪಟ್ಟಿರುತ್ತದೆ.
  • ವಂಚನೆ, ಮೋಸಮಾಡುವಿಕೆ, ಹಣದ ದುರುಪಯೋಗದ ದೊಡ್ಡ ಪ್ರಕರಣಗಳು, ಮತ್ತು ಕಂಪನಿಗಳಿಗೆ ಸಂಬಂಧಪಟ್ಟಿರುವಂತೆ ಹೇಳುವುದಾದರೆ ಬೃಹತ್‌ ನಿಧಿಗಳನ್ನು ಒಳಗೊಂಡಿರುವ ದುರುಪಯೋಗದ ಪ್ರಕರಣಗಳು ಹಾಗೂ ಹಲವಾರು ರಾಜ್ಯಗಳಲ್ಲಿ ಶಾಖೋಪಶಾಖೆಗಳನ್ನು ಹೊಂದಿರುವ ಸಂಘಟಿತ ಗುಂಪುಗಳು ಅಥವಾ ವೃತ್ತಿಪರ ಅಪರಾಧಿಗಳಿಂದ ಎಸಗಲ್ಪಟ್ಟ ಇದೇ ರೀತಿಯ ಇತರ ಪ್ರಕರಣಗಳು.
  • ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಶಾಖೋಪಶಾಖೆಗಳನ್ನು ಹೊಂದಿರುವ ಹಾಗೂ ಹಲವಾರು ಅಧಿಕೃತ ಸಂಸ್ಥೆಗಳನ್ನು ಒಳಗೊಂಡಿರುವ ಪ್ರಕರಣಗಳು; ಇಂಥ ನಿದರ್ಶನಗಳಲ್ಲಿ ಎಲ್ಲಾ ದೃಷ್ಟಿಯಿಂದಲೂ ನೋಡಿದಾಗ, ಒಂದು ಏಕೈಕ ತನಿಖಾಸಂಸ್ಥೆಯು ತನಿಖೆಯ ಮೇಲ್ವಿಚಾರಣೆಯನ್ನು ಹೊಂದಿರಬೇಕು ಎಂಬುದು ಅವಶ್ಯಕವಾಗಿ ಪರಿಗಣಿಸಲ್ಪಡುತ್ತದೆ.

ಹಿಂದಿನ ನಿರ್ದೇಶಕರು (೧೯೬೧ರಿಂದ ಇಲ್ಲಿಯವರೆಗೆ)

ಬದಲಾಯಿಸಿ
ಹೆಸರು ಅವಧಿ ಟಿಪ್ಪಣಿಗಳು
D.P. ಕೊಹ್ಲಿ ೧೯೬೩–೬೮
F.V. ಅರುಳ್‌ ೧೯೬೮–೭೧
D. ಸೇನ್‌ ೧೯೭೧-೭೭
S.N. ಮಾಥುರ್‌‌ ೧೯೭೭ ಹಂಗಾಮಿ
C.V. ನರಸಿಂಹನ್‌ ೧೯೭೭ ಹಂಗಾಮಿ
ಜಾನ್‌ ಲೋಬೋ ೧೯೭೭–೭೯
R.D. ಸಿಂಗ್‌‌ ೧೯೭೯-೮೦
J.S. ಬಾಜ್ವಾ ೧೯೮೦–೮೫
M.G. ಕತ್ರೆ ೧೯೮೫-೮೯
A.P. ಮುಖರ್ಜಿ ೧೯೮೯–೯೦
R. ಶೇಖರ್‌‌ ೧೯೯೦ ಹಂಗಾಮಿ
ವಿಜಯ್‌ ಕರಣ್‌ ೧೯೯೦–೯೨
S.K. ದತ್ತಾ ೧೯೯೨–೯೩
K.V.R. ರಾವ್‌ ೧೯೯೩–೯೬
J. ಸಿಂಗ್‌‌ ೧೯೯೬–೯೭
R.C. ಶರ್ಮಾ ೧೯೯೭–೯೮
D.R. ಕಾರ್ತಿಕೇಯನ್‌ ೧೯೯೮ ಹಂಗಾಮಿ
T.N. ಮಿಶ್ರಾ ೧೯೯೮–೯೯
R.K. ರಾಘವನ್‌ ೧೯೯೯–೨೦೦೧
P.C. ಶರ್ಮಾ ೨೦೦೧–೨೦೦೩
U.S. ಮಿಶ್ರಾ ೨೦೦೩–೨೦೦೫
V.S. ತಿವಾರಿ ೨೦೦೫–೨೦೦೮
W. ಅಶ್ವಿನಿ ಕುಮಾರ್‌ ೨೦೦೮–೨೦೧೦
ವಿಕ್ರಮ್‌ ಪ್ರತಾಪ್‌‌ ಸಿಂಗ್‌‌ 2010-2012
ರಂಜಿತ್ ಸಿನ್ಹಾ 2012-2014
ಅನಿಲ್ ಸಿನ್ಹಾ 2014-2016
ರಾಕೇಶ್ ಅಸ್ತಾನ(incharge) 03/12/2016 - 19/01/2017
ಅಲೋಕ್ ಕುಮಾರ್ ವರ್ಮಾ 20/01/2017- present

CBIನಲ್ಲಿನ ಭ್ರಷ್ಟಾಚಾರ

ಬದಲಾಯಿಸಿ

ಅತಿಯಾದ ರಾಜಕೀಯ ಹಸ್ತಕ್ಷೇಪಗಳು ಇದರಲ್ಲಿ ಕಂಡುಬಂದ ಕಾರಣದಿಂದ, ಕ್ರಮವಾಗಿ ನಿರ್ದೇಶಕ ಮತ್ತು ಜಂಟಿ ನಿರ್ದೇಶಕರಾಗಿದ್ದ ಜೋಗೀಂದರ್‌ ಸಿಂಗ್‌‌ ಮತ್ತು B.R. ಲಾಲ್‌ರಂಥ ಇದರ ಹಿಂದಿನ ಪ್ರಮುಖರು ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಿದ್ದು, ಅವುಗಳ ಅನುಸಾರ ಸಂಸ್ಥೆಯು ಸ್ವಜನ ಪಕ್ಷಪಾತ, ದೋಷಪೂರಿತ-ನಿರ್ವಹಣೆ ಮತ್ತು ಸಾರಾಸಗಟು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದು ತಿಳಿದುಬಂದಿದೆ. ಓರ್ವ ಪ್ರಾಮಾಣಿಕ ಮತ್ತು ನೇರಸ್ವಭಾವದ ಅಧಿಕಾರಿಯಾಗಿದ್ದ B.R. ಲಾಲ್ 'ಹೂ ಓನ್ಸ್‌ CBI' ಎಂಬ ತಮ್ಮ ಪುಸ್ತಕದಲ್ಲಿ, ತನಿಖೆಯನ್ನು[] ದುರುಪಯೋಗಪಡಿಸಿಕೊಳ್ಳುವ ಮತ್ತು ಹಳಿತಪ್ಪಿಸುವ ಕಾರ್ಯವಿಧಾನವನ್ನು ವಿವರಿಸುತ್ತಾರೆ. RTI ಕಾಯಿದೆಯ ಅಡಿಯಲ್ಲಿ ಪಡೆಯಲಾದ ಮಾಹಿತಿಯು ಬಹಿರಂಗಪಡಿಸಿರುವ ವಿಷಯದ ಅನುಸಾರ, ಈ ಸಂಸ್ಥೆಯು ಭ್ರಷ್ಟಾಚಾರ ಎಂಬ ಪದದ ಪರ್ಯಾಯ ಪದವಾಗಿದೆ ಎಂಬುದು ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವಾಗಿದೆ. ಇಲ್ಲಿನ ಉನ್ನತ ದರ್ಜೆಯ ಮೇಲಧಿಕಾರಿಗಳೂ ಸಹ ಕಾನೂನುಬಾಹಿರವಾಗಿ ನಿಧಿಯನ್ನು ಬೇರೆಡೆಗಳಿಗೆ ತಿರುಗಿಸುವಂಥ ಕೀಳುಮಟ್ಟಕ್ಕಿಳಿಯುವುದಕ್ಕೆ ಹೆಸರಾಗಿದ್ದಾರೆ ಎಂಬ ಅಭಿಪ್ರಾಯವೂ ಇಲ್ಲಿ ಕಂಡುಬಂದಿದೆ.[]

ಸಿಬಿಐ ನಲ್ಲಿ ಲಂಚದ ಆರೋಪ

ಬದಲಾಯಿಸಿ
  • ೨೦೧೮
  • ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ನಡುವೆ ನಡೆಯುತ್ತಿದ್ದ ಕಿತ್ತಾಟ ಹೆಚ್ಚಾದ ಕೂಡಲೆ, ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ನಿರ್ದೇಶಕ ಅಲೋಕ್ ವರ್ಮಾ ಅವರನ್ನು ರಜೆ ಮೇಲೆ ತೆರಳುವಂತೆ ಕೇಂದ್ರ ಸರ್ಕಾರ 23-8-2018ರ ರಾತ್ರೋರಾತ್ರಿ ಸೂಚಿಸಿತು. ಗುಜರಾತು ಕೇಡರಿನ ಎಂ.ನಾಗೇಶ್ವರ ರಾವ್ ಅವರನ್ನು ಸಿಬಿಐನ ಹಂಗಾಮಿ ನಿರ್ದೇಶಕಕಾಗಿ ಸರ್ಕಾರ ನೇಮಕ ಮಾಡಿದೆ. ಅವರಲ್ಲಿ ಕಿತ್ತಾಟ ಹೆಚ್ಚಾದರಿಂದ ಮಂಗಳವಾರ ರಾತ್ರಿ 2 ಗಂಟೆಗೆ ಕೇಂದ್ರ ಸರ್ಕಾರ ತುರ್ತು ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿತ್ತು.ಸೆ.15ರಂದು ಸಿಬಿಐ ಲಂಚ ಪಡೆದ ಆರೋಪ ಹೊರಿಸಿ, ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ (ಮೋದಿ ಅವರ ಅಪ್ತ )ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಅಸ್ತಾನಾ ಗುಜರಾತ್ ಕೇಡರ್‌ನ ಐಪಿಎಸ್ ಅಧಿಕಾರಿ.[][] ಸುಪ್ರೀಂ ಕೋರ್ಟ್‌ ಮಧ್ಯಪ‍್ರವೇಶಿಸಿ, ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರನ್ನು ರಜೆಯ ಮೇಲೆ ಕಳುಹಿಸಿದ ಪ್ರಕರಣದಲ್ಲಿ ವರ್ಮಾ ಅವರ ವಿರುದ್ಧ ಇರುವ ಎಲ್ಲ ಆರೋಪಗಳ ತನಿಖೆಯನ್ನು ಎರಡು ವಾರಗಳಲ್ಲಿ ಪೂರ್ಣಗೊಳಿಸುವಂತೆ ಕೇಂದ್ರ ಜಾಗೃತ ಆಯೋಗಕ್ಕೆ (ಸಿವಿಸಿ) ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠ ನಿರ್ದೇಶನ ನೀಡಿದೆ.[]

ವಿವಾದಗಳು

ಬದಲಾಯಿಸಿ

CBIಗೆ ನಿಯೋಜಿಸಲ್ಪಟ್ಟ ಪ್ರಕರಣಗಳು ಸಾಮಾನ್ಯವಾಗಿ ಸೂಕ್ಷ್ಮವಾಗಿರುತ್ತವೆ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯಿಂದ ಕೂಡಿರುತ್ತವೆ. ತಮ್ಮ ಅಧಿಕಾರವ್ಯಾಪ್ತಿಯಲ್ಲಿ ಬರುವ ಯಾವುದೇ ಪ್ರಕರಣವನ್ನು ಮೊದಲಿಗೆ ದಾಖಲಿಸುವುದು ಸಂಬಂಧಪಟ್ಟ ರಾಜ್ಯ ಆರಕ್ಷಕ ಇಲಾಖೆಗಳಿಗೆ ಸಂಬಂಧಿಸಿದಂತಿರುವ ಒಂದು ಸಾಮಾನ್ಯ ಪರಿಪಾಠವಾಗಿದೆ, ಮತ್ತು ಒಂದು ವೇಳೆ ಅವಶ್ಯಕವೆಂದು ಕಂಡುಬಂದಲ್ಲಿ, ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯ ಮೂಲಕ ಪ್ರಕರಣಗಳನ್ನು CBIಗೆ ವರ್ಗಾಯಿಸಬಹುದಾಗಿದೆ. ಎಲ್ಲರ ಗಮನಕ್ಕೆ ಬೀಳುವಂಥ ಅನೇಕ ಪ್ರಕರಣಗಳನ್ನು CBI ನಿಭಾಯಿಸುತ್ತದೆ, ಮತ್ತು ಇದು ಎಂದಿಗೂ ವಿವಾದದಿಂದ ದೂರಸರಿದಿಲ್ಲ.

ಬೋಫೋರ್ಸ್ ಹಗರಣ

ಬದಲಾಯಿಸಿ

ರಾಜೀವ್‌ ಗಾಂಧಿಯವರ ಸರ್ಕಾರವನ್ನು ಕಳಂಕಗೊಳಿಸಿದ್ದ ೧೯೮೬ರ ಬೋಫೋರ್ಸ್‌‌ ಹಗರಣದಲ್ಲಿನ ಪ್ರಮುಖ ಆಪಾದಿತರ ಪೈಕಿ ಒಬ್ಬನೆನಿಸಿದ್ದ ಇಟಲಿಯ ವ್ಯವಹಾರಸ್ಥ ಒಟ್ಟಾವಿಯೋ ಕ್ವಟ್ರೋಚಿಯ ಬ್ಯಾಂಕ್‌ ಖಾತೆಗಳನ್ನು CBI ಸದ್ದಿಲ್ಲದೆ ನಗದಾಗಿಸಿತ್ತು ಎಂಬ ಅಂಶವು ೨೦೦೬ರ ಜನವರಿಯಲ್ಲಿ ಕಂಡುಬಂತು.[] ಬೋಫೋರ್ಸ್‌‌ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯ ಹೊಣೆಗಾರಿಕೆಯು ಕೇಂದ್ರೀಯ ತನಿಖಾ ದಳದ್ದಾಗಿದೆ. AB ಬೋಫೋರ್ಸ್ ಎಂಬ ಹೆಸರಿನ ಸ್ವೀಡನ್ನಿನ ಶಸ್ತ್ರಾಸ್ತ್ರ ಸಂಸ್ಥೆಯಿಂದ ೧೯೮೦ರ ದಶಕದ ಮಧ್ಯಭಾಗದಲ್ಲಿ ದಿವಂಗತ ಪ್ರಧಾನಮಂತ್ರಿ ರಾಜೀವ್‌ ಗಾಂಧಿಯವರ ಸಹವರ್ತಿಗಳಿಗೆ ಲಂಚ-ಸಂದಾಯಗಳು ನಡೆದಿದ್ದವು ಎಂದು ಆಪಾದಿಸಿ ಸಂಬಂಧ ಕಲ್ಪಿಸಲಾಗಿತ್ತು; ಈ ನಿಟ್ಟಿನಲ್ಲಿ ಬ್ರಿಟನ್‌ ಮತ್ತು ಪನಾಮಾದಿಂದ ರಹಸ್ಯ ಸ್ವಿಸ್‌ ಬ್ಯಾಂಕ್‌ಗಳಿಗೆ ರುಷುವತ್ತುಗಳ ರೂಪದಲ್ಲಿ ೪೦ ದಶಲಕ್ಷ $ನಷ್ಟು ಹಣವು ವರ್ಗಾವಣೆಯಾಗಿತ್ತು ಎಂದು ಹೇಳಲಾಗಿತ್ತು. ಸದರಿ ಮಾರಾಟದಲ್ಲಿನ ೧,೩೦೦ ದಶಲಕ್ಷ $ನಷ್ಟು ಮೌಲ್ಯದ ಶಸ್ತ್ರಾಸ್ತ್ರ ಖರೀದಿಯಲ್ಲಿ ಸೇರಿಕೊಂಡಿದ್ದ ೪೧೦ ಹೋವಿಟ್ಜರ್‌ ಕದನ ಬಂದೂಕುಗಳು, ಓರ್ವ ಫ್ರೆಂಚ್‌ ಪ್ರತಿಸ್ಪರ್ಧಿಯಿಂದ ಪ್ರಸ್ತಾವಿಸಲ್ಪಟ್ಟ ಬಂದೂಕುಗಳಿಗಿಂತ ಕಳಪೆಯಾಗಿದ್ದವು ಎಂದು ವರದಿಯಾಗಿತ್ತು.

ಬೋಫೋರ್ಸ್‌‌ ಹಗರಣದ ಆಪಾದಿತನಾದ ಒಟ್ಟಾವಿಯೋ ಕ್ವಟ್ರೋಚಿ ಮತ್ತು ಅವನ ಪತ್ನಿ ಮಾರಿಯಾ, ಲಂಡನ್‌ ಬ್ಯಾಂಕ್‌ ಒಂದರಲ್ಲಿ ಹೊಂದಿದ್ದ ಎರಡು ಖಾತೆಗಳಲ್ಲಿ ಬಚ್ಚಿಟ್ಟಿದ್ದ ೨೧ ಕೋಟಿ ರೂ.ಗಳ ಸ್ಥಗಿತ ಸ್ಥಿತಿಯನ್ನು ೨೦೦೬ರಲ್ಲಿ ತೆಗೆದುಹಾಕಿದ ಕೇಂದ್ರೀಯ ತನಿಖಾ ದಳವು (CBI), ಅವನನ್ನು "ಬೇಕಾಗಿದ್ದಾರೆ" ಪಟ್ಟಿಯಿಂದ ತೆಗೆದುಹಾಕುವಂತೆ ಇಂಟರ್‌ಪೋಲ್‌ನ್ನು ೨೦೦೯ರ ಏಪ್ರಿಲ್‌ ೨೯ರಂದು ಕೇಳಿಕೊಳ್ಳುವ ಮೂಲಕ, ಭೂಮಂಡಲದ ಉದ್ದಗಲಕ್ಕೂ ನಡೆಯುವ ಅವನ ಪರ್ಯಟನೆಯನ್ನು ಸರಾಗಗೊಳಿಸಿದೆ. CBIನಿಂದ ಬಂದ ಸಂದೇಶವೊಂದನ್ನು ಅನುಸರಿಸಿ, ಇಟಲಿಯ ಕ್ವಟ್ರೋಚಿಯ ವಿರುದ್ಧದ "ರೆಡ್‌ ಕಾರ್ನರ್‌ ನೋಟೀಸ್‌"ನ್ನು ಇಂಟರ್‌ಪೋಲ್‌ ಹಿಂತೆಗೆದುಕೊಂಡಿದೆ. ಮನ್‌ಮೋಹನ್‌ ಸಿಂಗ್‌‌ ಸರ್ಕಾರದ ಅಧಿಕಾರಾವಧಿಯು ಕೊನೆಗೊಳ್ಳುವುದಕ್ಕೆ ಕೇವಲ ಮೂರು ವಾರಗಳಷ್ಟು ಮುಂಚಿತವಾಗಿ ಕಂಡುಬಂದ ಬೆಳವಣಿಗೆಯು, ಬೋಫೋರ್ಸ್‌‌ ಹಗರಣದ ವಿಷಯವನ್ನು ಎಲ್ಲರ ಗಮನ ಸೆಳೆಯುವಂತೆ ಪ್ರಧಾನ ಚರ್ಚಾವಿಷಯವನ್ನಾಗಿಸಿದೆ.ಆಡಳಿತ ನಡೆಸುತ್ತಿರುವ ಸರ್ಕಾರಗಳು CBIನ ಕಾರ್ಯಪರಿಧಿಯಲ್ಲಿ ಹಸ್ತಕ್ಷೇಪ ಮಾಡುತ್ತವೆ ಎಂದು ಅನೇಕವೇಳೆ ಶಂಕಿಸಲಾಗಿದೆ, ಮತ್ತು ಅದೇನೇ ಇದ್ದರೂ ಕಾಂಗ್ರೆಸ್‌ ಸರ್ಕಾರ ಆಡಳಿತದ ಅಡಿಯಲ್ಲಿ CBIನಿಂದ ನಿಭಾಯಿಸಲ್ಪಟ್ಟ ಬೋಫೋರ್ಸ್‌‌ ತನಿಖೆಯು CBIಗೆ ಸಂಬಂಧಿಸಿದಂತೆ ಹೊಸತೊಂದು ಪರ್ಯಾಯ ಪದವನ್ನೇ ಸೃಷ್ಟಿಸಿದೆ. ಬೋಫೋರ್ಸ್‌ ಹಗರಣದ ಆಪಾದಿತರನ್ನು ಪರಿಧಿಯಿಂದ ಹೊರಹೋಗುವುದಕ್ಕೆ ಅವಕಾಶ ನೀಡಿದ ನಂತರ, CBIನ್ನು 'ಕಾಂಗ್ರೆಸ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್‌' (ಕಾಂಗ್ರೆಸ್‌ ತನಿಖಾ ದಳ) ಎಂದು ಕರೆಯುವಲ್ಲಿ ವಿರೋಧ ಪಕ್ಷಗಳಿಗೆ ಎಂದಿಗೂ ದಣಿವು ಕಂಡುಬಂದಿಲ್ಲ.

ISRO ಬೇಹುಗಾರ ವಲಯ ಪ್ರಕರಣ

ಬದಲಾಯಿಸಿ

ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಗೂಢಚಾರರು ಎಂಬುದಾಗಿ ವೃತ್ತಪತ್ರಿಕೆಗಳಿಂದ ಮೂಲತಃ ವಿವರಿಸಲ್ಪಟ್ಟಿದ್ದ ಮಾಲ್ಡೀವ್‌ನ ಇಬ್ಬರು ಮಹಿಳೆಯರೊಂದಿಗೆ ಹಣ ಮತ್ತು ಲೈಂಗಿಕ ಸಂಬಂಧದ ವ್ಯವಹಾರಗಳನ್ನು ನಡೆಸಿ ಅದಕ್ಕೆ ಪ್ರತಿಯಾಗಿ ಬಾಹ್ಯಾಕಾಶ ಸಂಬಂಧಿ ರಹಸ್ಯಗಳನ್ನು ಮಾರಾಟ ಮಾಡುವ ಸಂಚು ನಡೆಸಿದರು ಎಂದು ಆರೋಪಿಸಲ್ಪಟ್ಟ ಭಾರತದ ಬಾಹ್ಯಾಕಾಶ ಸಂಶೋಧನೆ ಸಂಸ್ಥೆಯ (ISRO) ಇಬ್ಬರು ವಿಜ್ಞಾನಿಗಳು ಮತ್ತು ಇಬ್ಬರು ಭಾರತೀಯ ಉದ್ಯಮಿಗಳನ್ನು ೧೯೯೪ರಲ್ಲಿ ಬಂಧಿಸಲಾಯಿತು. ಬೇಹುಗಾರ ವಲಯವೊಂದರ ಇರುವಿಕೆಯನ್ನು CBI ತನಿಖೆಯು ಬಹಿರಂಗಪಡಿಸಲಿಲ್ಲ, ಮತ್ತು ಈ ಪ್ರಕರಣವು ಹೆಚ್ಚಿನ ಮಟ್ಟಿಗೆ ಆರಕ್ಷಕರು ಮತ್ತು ಗುಪ್ತಚರ ದಳದವರ ಅನನುಭವ ಹಾಗೂ ಮಿತಿಮೀರಿದ ಉತ್ಸಾಹದ ಒಂದು ಫಲವಾಗಿತ್ತು ಎಂಬುದು ೧೯೯೫ರ ಆರಂಭದ ವೇಳೆಗೆ ಸ್ಪಷ್ಟವಾಯಿತು.ಮಾಲ್ಡೀವ್‌ನ ಮಹಿಳೆಯೊಂದಿಗೆ ಸಂಬಂಧಗಳನ್ನು ಹೊಂದಿದ್ದರು ಎಂಬ ಕಟ್ಟುಕಥೆಯನ್ನು ಹೊಸೆಯುವ ಮೂಲಕ ಆಗಿನ DGP ರಾಮೋನ್‌ Sರನ್ನು ತೆಗೆದುಹಾಕುವ ಒಂದು ಸುಯೋಜಿತ ಯೋಜನೆ ಇದಾಗಿತ್ತು. DGP ರಾಮೋನ್‌ ಓರ್ವ ನಿರ್ದಾಕ್ಷಿಣ್ಯದ ಸ್ವಭಾವದ ವ್ಯಕ್ತಿಯಾಗಿದ್ದರಿಂದ, ಅವರ ವಿರುದ್ಧ ಕೇರಳ ಆರಕ್ಷಕ ವಲಯಕ್ಕೆ ಸೇರಿದ್ದ ಕೆಲವೊಂದು ಅಧಿಕಾರಿಗಳ, ಮಾಧ್ಯಮಗಳ ಮತ್ತು ಮುಸ್ಲಿಂ ಲೀಗ್‌ನ ವತಿಯಿಂದ ಸದರಿ ಪಿತೂರಿಯು ಹೆಣೆಯಲ್ಪಟ್ಟಿತ್ತು.[ಸೂಕ್ತ ಉಲ್ಲೇಖನ ಬೇಕು]

ಹವಾಲಾ ಹಗರಣ

ಬದಲಾಯಿಸಿ

೧೯೯೧ರಲ್ಲಿ ಕಾಶ್ಮೀರದಲ್ಲಿನ ಭಯೋತ್ಪಾದಕರಿಗೆ ಸಂಬಂಧಪಟ್ಟಂತೆ ನಡೆಸಲಾದ ಬಂಧನವೊಂದು ಹವಾಲಾ ದಲ್ಲಾಳಿಗಳ ಮೇಲಿನ ಒಂದು ದಾಳಿಗೆ ಕಾರಣವಾಯಿತು; ಇದು ರಾಷ್ಟ್ರದ ರಾಜಕಾರಣಿಗಳಿಗೆ ಬೃಹತ್‌-ಪ್ರಮಾಣದ ಹಣದ ಪಾವತಿಗಳು ಆಗಿರುವುದರ ಪುರಾವೆಯನ್ನು ಬಹಿರಂಗಪಡಿಸಿತು. ಇದನ್ನು ಅನುಸರಿಸಿಕೊಂಡು ಬಂದ ಕಾನೂನು ಕ್ರಮವು ಸಾರ್ವಜನಿಕ ಹಿತಾಸಕ್ತಿ ಮನವಿಯೊಂದರಿಂದ (ನೋಡಿ: ವಿನೀತ್‌ ನಾರಾಯಣ್‌) ಭಾಗಶಃವಾಗಿ ಪ್ರೇರೇಪಿಸಲ್ಪಟ್ಟಿತ್ತು, ಮತ್ತು ಇಷ್ಟಾಗಿಯೂ ಹವಾಲಾ ಹಗರಣದ ನ್ಯಾಯಾಲಯ ಪ್ರಕರಣಗಳೆಲ್ಲವೂ ಅಪರಾಧದ ನಿರ್ಣಯಗಳಿಲ್ಲದೆಯೇ ಅಂತಿಮವಾಗಿ ಕುಸಿದವು. CBIನ ಪಾತ್ರವು ಮತ್ತೊಮ್ಮೆ ಟೀಕಿಸಲ್ಪಟ್ಟಿತು. ವಿನೀತ್‌ ನಾರಾಯಣ್‌ ಪ್ರಕರಣವನ್ನು ನಿರ್ಣಯಿಸುವ ಸಂದರ್ಭದಲ್ಲಿ ನಿರ್ದೇಶನವೊಂದನ್ನು ನೀಡಿದ ಭಾರತದ ಸರ್ವೋಚ್ಚ ನ್ಯಾಯಾಲಯವು ಕೇಂದ್ರೀಯ ಜಾಗರೂಕತಾ ಆಯೋಗಕ್ಕೆ CBI ಮೇಲೆ ಮೇಲ್ವಿಚಾರಣೆ ನಡೆಸುವ ಒಂದು ಪಾತ್ರವನ್ನು ನೀಡಬೇಕು ಎಂದು ತಿಳಿಸಿತು.[]

ಪ್ರಿಯದರ್ಶಿನಿ ಮಟ್ಟೂ ಕೊಲೆ ಪ್ರಕರಣ

ಬದಲಾಯಿಸಿ

ಪ್ರಿಯದರ್ಶಿನಿ ಮಟ್ಟೂ ಪ್ರಕರಣವನ್ನು ನಿಭಾಯಿಸುವುದಕ್ಕೆ ಸಂಬಂಧಿಸಿದಂತೆ ವಿಶ್ವಾಸ ಕಳೆದುಕೊಂಡ ಸ್ಥಿತಿಯನ್ನು CBI ತಲುಪಿದೆ. ಈ ಪ್ರಕರಣದಲ್ಲಿ ೨೨-ವರ್ಷ ವಯಸ್ಸಿನ ಓರ್ವ ಕಾನೂನು ವಿದ್ಯಾರ್ಥಿಯ ಕೊಲೆಗಾರನೆಂದು ಹೇಳಲ್ಪಟ್ಟವನನ್ನು ನಿರಪರಾಧಿಯೆಂದು ಘೋಷಿಸಲಾಯಿತು; ತನಿಖಾ ತಂಡದ "ಉದ್ದೇಶಪೂರ್ವಕ ನಿಷ್ಕ್ರಿಯತೆ"ಯೇ ಇದಕ್ಕೆ ಕಾರಣ ಎಂಬುದಾಗಿ ಪ್ರಕರಣದ ನ್ಯಾಯಮೂರ್ತಿಯು ಈ ಕುರಿತಾಗಿ ಉಲ್ಲೇಖಿಸಿದರು. ಸದರಿ ಪ್ರಕರಣದ ಆಪಾದಿತನು ಭಾರತೀಯ ಆರಕ್ಷಕ ಸೇವೆಯಲ್ಲಿನ ಓರ್ವ ಉನ್ನತ ದರ್ಜೆಯ ಅಧಿಕಾರಿಯ ಮಗನಾಗಿದ್ದು, ಈ ಕಾರಣದಿಂದಾಗಿ ಪ್ರಕರಣವನ್ನು ನಿಯತವಾದ ಆರಕ್ಷಕ ಪಡೆಯಿಂದ CBIಗೆ ವರ್ಗಾಯಿಸಲಾಗಿತ್ತು. ಆದಾಗ್ಯೂ, "ಆಪಾದಿತನ ತಂದೆಯ ಪ್ರಭಾವವು ಅಲ್ಲಿ ಹೇಗೆ ಕಾಣಿಸಿಕೊಂಡಿದೆ" ಎಂಬುದರ ಕುರಿತು ೧೯೯೯ರ ತೀರ್ಪು ವ್ಯಾಖ್ಯಾನಿಸಿತು. ಈ ತೀರ್ಪಿನಿಂದ ಇರುಸುಮುರುಸಿಗೆ ಒಳಗಾದ ಆಗಿನ CBI ನಿರ್ದೇಶಕ R.K. ರಾಘವನ್‌, ಸದರಿ ತೀರ್ಪಿನ ಕುರಿತು ಅಧ್ಯಯನ ನಡೆಸಬೇಕೆಂದು P.C. ಶರ್ಮಾ ಮತ್ತು G.H. ಆಚಾರಿ ಎಂಬ ಇಬ್ಬರು ವಿಶೇಷ ನಿರ್ದೇಶಕರಲ್ಲಿ ಮನವಿ ಮಾಡಿಕೊಂಡರು. ತರುವಾಯದಲ್ಲಿ, ನ್ಯಾಯದರ್ಶಿ ಮಂಡಲಿ ನೀಡಿದ ತೀರ್ಪಿನ ಕುರಿತಾಗಿ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ೨೦೦೦ನೇ ಇಸವಿಯಲ್ಲಿ CBI ಮೇಲ್ಮನವಿ ಸಲ್ಲಿಸಿತು. ಇದಾದ ನಂತರ ಉಚ್ಚ ನ್ಯಾಯಾಲಯವು ಆಪಾದಿತನ ವಿರುದ್ಧ ಒಂದು ಜಾಮೀನುಯೋಗ್ಯ ವಾರಂಟನ್ನು ನೀಡಿತು. ಮಾಧ್ಯಮಗಳು ಮಾಡಿದ ಅತೀವವಾದ ಪ್ರಸಾರ ಮತ್ತು ಸಾರ್ವಜನಿಕರ ವತಿಯಿಂದ ಹೊರಹೊಮ್ಮಿದ ಬಿಗಿಪಟ್ಟಿನ ನಂತರ, ಈ ಪ್ರಕರಣವು ೨೦೦೬ರಲ್ಲಿ ಮತ್ತೊಮ್ಮೆ ಬೆಳಕಿಗೆ ಬಂತು (CBIನಿಂದ ನಿಭಾಯಿಸಲ್ಪಡದ ಪ್ರಕರಣವಾಗಿದ್ದರೂ, ಎಲ್ಲರ ಗಮನಕ್ಕೆ ಬೀಳುವಂಥ ಮತ್ತೊಂದು ಪ್ರಕರಣದಲ್ಲಿ ಇದೇ ರೀತಿಯ ಒಂದು ಖುಲಾಸೆಯಾಗಿದ್ದು ಇದಕ್ಕೆ ಮುಖ್ಯ ಕಾರಣವಾಗಿತ್ತು). ೨೦೦೬ರ ಜುಲೈನಲ್ಲಿ ಸಾಕಷ್ಟು ಮುಂಚೆಯೇ ವಿಚಾರಣೆ ನಡೆಸಬೇಕೆಂದು ಕೋರಿ CBI ಅರ್ಜಿಯೊಂದನ್ನು ಸಲ್ಲಿಸಿತು. ಈ ಪ್ರಕರಣದಲ್ಲಿ, ಸಂತೋಷ್‌ ಕುಮಾರ್‌‌ ಸಿಂಗ್‌‌ ಎಂಬಾತ ಅತ್ಯಾಚಾರ ಮತ್ತು ಕೊಲೆಯನ್ನು ಎಸಗಿದ ತಪ್ಪಿತಸ್ಥ ಎಂಬುದಾಗಿ ಉಚ್ಚ ನ್ಯಾಯಾಲಯವು ತರುವಾಯದಲ್ಲಿ ಕಂಡುಕೊಂಡಿತು ಮತ್ತು ಈ ಅಪರಾಧಕ್ಕಾಗಿ ೨೦೦೬ರ ಅಕ್ಟೋಬರ್‌ನಲ್ಲಿ ಅವನಿಗೆ ಮರಣದಂಡನೆಯನ್ನು ವಿಧಿಸಲಾಯಿತು.

ನಿಥಾರಿ ಕೊಲೆಗಳು

ಬದಲಾಯಿಸಿ

UPಯ ನೋಯ್ಡಾ ಸಮೀಪದ ನಿಥಾರಿ ಹಳ್ಳಿಯಲ್ಲಿ ನಡೆದ ಡಜನ್‌ಗಟ್ಟಲೆ ಮಕ್ಕಳ ಕೊಲೆಗಳ ತನಿಖೆ ನಡೆಸುವ ಹೊಣೆಗಾರಿಕೆಯನ್ನು CBIಗೆ ವಹಿಸಲಾಯಿತು. ಸ್ಥಳೀಯ ಆರಕ್ಷಕರು ಅಸಮರ್ಥರಾಗಿದ್ದು, ತಮ್ಮ ತನಿಖಾಕಾರ್ಯಗಳಲ್ಲಿ ಅವರು ನಿರಾಸಕ್ತಿಯನ್ನು ತೋರುತ್ತಿದ್ದಾರೆ ಎಂಬುದು ಕಂಡುಬಂದ ಮೇಲೆ ಈ ಕ್ರಮವನ್ನು ಕೈಗೊಳ್ಳಲಾಯಿತು. ಸದರಿ ಕೊಲೆಗಳ ಆಪಾದಿತನಾದ ಮೋನಿಂದರ್‌‌ ಸಿಂಗ್‌‌ ಪಂಧರ್ ಎಂಬಾತನ ಮನೆಯ ಹೊರಭಾಗದಲ್ಲಿ ಕೊಳೆಯುತ್ತಿರುವ ದೇಹಗಳು ಕಂಡುಬಂದಿದ್ದರಿಂದ, ಈ ಸರಣಿ ಕೊಲೆಗಳ ಕುರಿತಾಗಿ ಭಾರತದ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ವಾರಗಟ್ಟಲೆ ಬಿತ್ತರಿಸಲಾಯಿತು. ರಾಜಕೀಯ ಪ್ರಭಾವದ ಕಾರಣದಿಂದಾಗಿ ಅವನು ಸದ್ಯಕ್ಕೆ ಓರ್ವ ಮುಕ್ತ ಮನುಷ್ಯನಾಗಿದ್ದಾನೆ.

ದಾವೂದ್‌ ಇಬ್ರಾಹಿಂ ಪ್ರಕರಣ

ಬದಲಾಯಿಸಿ

ಕರಾಚಿಯಲ್ಲಿನ ಅಧಿಕಾರ ವರ್ಗಗಳು ದಾವೂದ್‌ ಇಬ್ರಾಹಿಂನನ್ನು ಹಿಡಿದಿಟ್ಟಿರುವುದರ ಕುರಿತಾದ ಇತ್ತೀಚಿನ ಮಾಧ್ಯಮಗಳ ವರದಿಗಳ ಮೇಲೆ ವಿವರಣೆಗಳನ್ನು ನೀಡುವಂತೆ, ಪಾಕಿಸ್ತಾನದ ತನ್ನ ಸಹವರ್ತಿಯಾದ ಫೆಡರಲ್‌ ಇನ್ವೆಸ್ಟಿಗೇಷನ್‌ ಏಜೆನ್ಸಿಯನ್ನು CBI ೨೦೦೭ರ ಆಗಸ್ಟ್‌ನಲ್ಲಿ ಕೇಳಿಕೊಂಡಿತು.

ಸಿಸ್ಟರ್‌‌ ಅಭಯಾ ಕೊಲೆ ಪ್ರಕರಣ

ಬದಲಾಯಿಸಿ

ಸಿಸ್ಟರ್‌‌ ಅಭಯಾ ಕೊಲೆ ಪ್ರಕರಣವು ಓರ್ವ ಕ್ರೈಸ್ತ ಸನ್ಯಾಸಿನಿಗೆ ಸಂಬಂಧಪಟ್ಟಿರುವಂಥದ್ದಾಗಿದೆ. ೧೯೯೨ರ ಮಾರ್ಚ್‌ ೨೭ರಂದು ಕೇರಳದ ಕೊಟ್ಟಾಯಂನಲ್ಲಿರುವ ಸೇಂಟ್‌ ಪಯಸ್‌ X ಕಾನ್ವೆಂಟ್‌ ವಿದ್ಯಾರ್ಥಿನಿಲಯದಲ್ಲಿನ ನೀರಿನ ಬಾವಿಯೊಂದರಲ್ಲಿ ಈಕೆಯು ಸತ್ತುಬಿದ್ದಿರುವುದು ಕಂಡುಬಂದಿತ್ತು. ಒಟ್ಟಾರೆಯಾಗಿ ಹೇಳುವುದಾದರೆ, ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಐದು CBI ವಿಚಾರಣೆಗಳು ನಡೆದಿದ್ದರೂ ಸಹ, ಯಾವುದೇ ವಿಸ್ಪಷ್ಟವಾದ ಫಲಿತಾಂಶಗಳು ದೊರೆತಿಲ್ಲ. ಓರ್ವ ಪಾದ್ರಿ ಮತ್ತು ಓರ್ವ ಕ್ರೈಸ್ತ ಸನ್ಯಾಸಿನಿಯು ಈ ಪ್ರಕರಣದಲ್ಲಿ ಪಾಲ್ಗೊಂಡಿದ್ದ ಕಾರಣದಿಂದಾಗಿ, ಶಕ್ತಿಯುತವಾದ ಕ್ಯಾಥಲಿಕ್‌ ವಶೀಲಿಗುಂಪು ಸದರಿ ಪ್ರಕರಣವನ್ನು ಅಡಗಿಸಲು ತನ್ನ ಯುಕ್ತವಲ್ಲದ ಪ್ರಭಾವವನ್ನು ಪ್ರಯೋಗಿಸಿತ್ತು. ಅವರನ್ನು ಒಂದು ಹೊಂದಾಣಿಕೆಯ ಭಂಗಿಯಲ್ಲಿ ಅಭಯಾ ಹಿಡಿದಿರಿಸಿದ್ದಳು.[]

ಸೊಹ್ರಾಬುದ್ದೀನ್‌ ಪ್ರಕರಣ:(ಗುಜರಾತ್‌)- ಗೀತಾ ಜೋಹ್ರಿ

ಬದಲಾಯಿಸಿ

ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ (UPA) ಮೇಲ್ವಿಚಾರಣೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ CBI, ಅದರ ವಿರೋಧ ಪಕ್ಷವನ್ನು ಮುಖ್ಯವಾಗಿ BJPಯನ್ನು ಸಿಲುಕಿಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಆಪಾದನೆಗೆ ಒಳಗಾಗುತ್ತಲೇ ಬಂದಿದೆ. ಗುಜರಾತ್‌ನಲ್ಲಿನ ಸೊಹ್ರಾಬುದ್ದೀನ್‌ ಪ್ರಕರಣವನ್ನು ಕೈಗೆತ್ತಿಕೊಂಡಿರುವ CBI ಗೀತಾ ಜೋಹ್ರಿ ಎಂಬ ಓರ್ವ IPS ಅಧಿಕಾರಿಯನ್ನು ಪ್ರಶ್ನಿಸಿತು; "ಸೊಹ್ರಾಬುದ್ದೀನ್‌ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಹಿಂದಿನ ಗುಜರಾತ್‌ ಮಂತ್ರಿ ಅಮಿತ್‌ ಷಾರ ಹೆಸರನ್ನು ತಪ್ಪಾಗಿ ಸೂಚಿಸುವಂತೆ ಕೇಂದ್ರೀಯ ತನಿಖಾ ದಳವು ನನ್ನ ಮೇಲೆ ಒತ್ತಡ ಹೇರುತ್ತಿದೆ" ಎಂಬುದಾಗಿ ರಾಜ್‌ಕೋಟ್‌ ಆರಕ್ಷಕ ಆಯುಕ್ತೆಯಾದ ಗೀತಾ ಜೋಹ್ರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಆರೋಪಿಸಿದ್ದರು.[೧೦]

ಮಾಲಂಕಾರ ವರ್ಗೀಸ್‌ ಕೊಲೆ ಪ್ರಕರಣ

ಬದಲಾಯಿಸಿ

ಮಾಲಂಕಾರ ವರ್ಗೀಸ್‌ ಕೊಲೆ ಪ್ರಕರಣವು ಮಾಲಂಕಾರ ವರ್ಗೀಸ್‌ ಎಂದೂ ಕರೆಯಲ್ಪಡುತ್ತಿದ್ದ T.M.ವರ್ಗೀಸ್‌ ಸಾವಿಗೆ ಸಂಬಂಧಿಸಿರುವಂಥಾದ್ದಾಗಿದೆ. ೨೦೦೨ರ ಡಿಸೆಂಬರ್‌ ೫ರಂದು ಈ ಸಾವು ಸಂಭವಿಸಿತ್ತು. ಈತ ಮಾಲಂಕಾರ ಕಟ್ಟಾ ಸಂಪ್ರದಾಯಬದ್ಧ ಚರ್ಚಿನ ಆಡಳಿತ ಸಮಿತಿಯ ಓರ್ವ ಸದಸ್ಯನಾಗಿದ್ದ ಮತ್ತು ಓರ್ವ ಮರದ ದಿಮ್ಮಿ ವ್ಯಾಪಾರಿಯಾಗಿದ್ದ.೨೦೧೦ರ ಮೇ ತಿಂಗಳ ೯ರಂದು, ಫಾದರ್‌ ವರ್ಗೀಸ್‌ ಥೆಕ್ಕೆಕಾರ ಎಂಬಾತನ ಮೇಲೆ ಈ ಕೊಲೆಯ ಆರೋಪವನ್ನು ಹೊರಿಸಲಾಯಿತು. ಈತ ಜಾಕೋಬೈಟ್‌ ಸಿರಿಯನ್‌ ಕ್ರಿಶ್ಚಿಯನ್‌ ಚರ್ಚು (ಸಿರಿಯಾಕ್‌ ಕಟ್ಟಾ ಸಂಪ್ರದಾಯಬದ್ಧ ಚರ್ಚಿನ ಒಂದು ಭಾಗ) ಎಂಬ ಎದುರಾಳಿ ಚರ್ಚಿನಲ್ಲಿನ ಅಂಗಮಾಲಿ ಡಯೋಸಿಸುವಿನ ಓರ್ವ ಪಾದ್ರಿ ಮತ್ತು ವ್ಯವಸ್ಥಾಪಕನಾಗಿದ್ದ; ಮಾಲಂಕಾರ ವರ್ಗೀಸ್‌ನ ಕೊಲೆಯ ಪಿತೂರಿಯನ್ನು ಈತನ ಮೇಲೆ ಹೊರಿಸಿ, ಅವನನ್ನು ಪ್ರಮುಖ ಆಪಾದಿತನಾಗಿ ಹೆಸರಿಸಲಾಯಿತು.ಇಂದಿನವರೆಗೆ, ಪ್ರಮುಖ ಆಪಾದಿತನು ಇನ್ನೂ ಬಂಧಿಸಲ್ಪಟ್ಟಿಲ್ಲ; ಈ ವರ್ತನೆಗಾಗಿ ಕೇರಳದ ಉಚ್ಚ ನ್ಯಾಯಾಲಯ ಮತ್ತು ಮಾಧ್ಯಮಗಳಿಂದ CBI ತೀವ್ರವಾಗಿ ಟೀಕಿಸಲ್ಪಡುತ್ತಿದೆ.[೧೧]

ಭೋಪಾಲ್‌ ಅನಿಲ ದುರಂತ

ಬದಲಾಯಿಸಿ

ಭೋಪಾಲ್‌ ಅನಿಲ ದುರಂತ ಪ್ರಕರಣದಲ್ಲಿನ ತನಿಖೆಯಲ್ಲಿ CBI ಅತ್ಯಂತ ಅದಕ್ಷವಾಗಿ ನಡೆದುಕೊಂಡಿತು ಎಂಬುದು ಸಾರ್ವಜನಿಕರ ಗ್ರಹಿಕೆಯಾಗಿದೆ. ಹಿಂದಿನ CBI ನಿರ್ದೇಶಕನು ಈ ಕುರಿತು ಈಗ ಒಪ್ಪಿಕೊಂಡಿದ್ದು, ಯೂನಿಯನ್‌ ಕಾರ್ಬೈಡ್‌ CEO ಆಗಿದ್ದ ವಾರನ್‌ ಆಂಡರ್ಸನ್‌[೧೨] ಎಂಬಾತನನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಮೃದುಧೋರಣೆಯನ್ನು ತಳೆಯುವಂತೆ ತಿಳಿಸಲಾಗಿತ್ತೆಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಆಪಾದಿತನ ವಿರುದ್ಧದ ಖಂಡನೀಯ ನರಹತ್ಯೆಯ ಆಪಾದನೆಯೂ ಸೇರಿದಂತೆ ಆಪಾದನೆಗಳು ಕೈಬಿಡಲ್ಪಟ್ಟವು; ಆಪಾದಿತನು ಎರಡು ವರ್ಷದ ದಂಡನೆಯನ್ನಷ್ಟೇ ಸ್ವೀಕರಿಸಿದ.[ಸೂಕ್ತ ಉಲ್ಲೇಖನ ಬೇಕು] ಸದರಿ ಅನಿಲ ದುರಂತದ ಘಟನೆಗಳಿಂದಾಗಿ ೧೫೦೦೦ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.[ಸೂಕ್ತ ಉಲ್ಲೇಖನ ಬೇಕು]

ಅಪರಾಧ ನಿರ್ಣಯಗಳು

ಬದಲಾಯಿಸಿ

ಒಂದು ಉನ್ನತವಾದ ಅಪರಾಧ ನಿರ್ಣಯ ಪ್ರಮಾಣವನ್ನು CBI ಹೊಂದಿದೆ.

ವರ್ಷ ಅಪರಾಧ ನಿರ್ಣಯದ ಪ್ರಮಾಣ
2008 66.2% [೧೩]
೨೦೦೭ ೬೭.೭% [೧೪]

CBI ಅಕಾಡೆಮಿ

ಬದಲಾಯಿಸಿ

ಭಾರತದ ಉತ್ತರಪ್ರದೇಶದ ಘಾಜಿಯಾಬಾದ್‌ನಲ್ಲಿರುವ CBI ಅಕಾಡೆಮಿಯು ೧೯೯೬ರಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ಪ್ರಾರಂಭಿಸಿತು.ದೆಹಲಿಯ ಪೂರ್ವಭಾಗದ ಕಡೆಗೆ, ಉತ್ತರ ಪ್ರದೇಶದ[೧೫] ಘಾಜಿಯಾಬಾದ್‌ ಜಿಲ್ಲೆಯಲ್ಲಿ ಈ ಅಕಾಡೆಮಿಯು ನೆಲೆಗೊಂಡಿದ್ದು, ನವದೆಹಲಿಯ ರೈಲು ನಿಲ್ದಾಣದಿಂದ ಇಲ್ಲಿಗೆ ಸುಮಾರು ೪೦ ಕಿ.ಮೀ.ಗಳಷ್ಟು ಅಂತರವಿದ್ದರೆ, ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಲ್ಲಿಗೆ ಸುಮಾರು ೬೫ ಕಿ.ಮೀ.ಗಳಾಗುತ್ತವೆ. ೨೬.೫ ಎಕರೆಗಳಷ್ಟಿರುವ (೧೦೭,೦೦೦ m²) ಸಮೃದ್ಧ ಹಸಿರು ಹೊಲಗಳು ಮತ್ತು ತೋಟಗಳ ವ್ಯಾಪ್ತಿಯ ಮೇಲೆ ಇದು ಹರಡಿಕೊಂಡಿದ್ದು, ಆವರಿಸಲ್ಪಟ್ಟಿರುವ ಪ್ರದೇಶವು ಆಡಳಿತ ವಿಭಾಗ, ಶೈಕ್ಷಣಿಕ ವಿಭಾಗ, ವಿದ್ಯಾರ್ಥಿನಿಲಯ ಮತ್ತು ವಾಯಸೋಗ್ಯ ವಿಭಾಗಗಳನ್ನು ಒಳಗೊಂಡಿದೆ. ಅದಕ್ಕೂ ಮುಂಚಿತವಾಗಿ ನವದೆಹಲಿಯ ಲೋಕನಾಯಕ್‌ ಭವನ್‌ನಲ್ಲಿ ಒಂದು ಸಣ್ಣ ತರಬೇತಿ ಕೇಂದ್ರವು ಕಾರ್ಯಾತ್ಮಕವಾಗಿದ್ದು, ಬಳಕೆಯಲ್ಲಿರುವ ಅಲ್ಪಾವಧಿಯ ಪಠ್ಯಕ್ರಮಗಳನ್ನು ನಡೆಸುವುದಕ್ಕೆ ಮಾತ್ರವೇ ಇದು ಬಳಸಲ್ಪಡುತ್ತಿತ್ತು. Dy.SsP, SIಗಳು ಮತ್ತು ಪೇದೆಗಳಿಗೆ ಸಂಬಂಧಿಸಿದ ಮೂಲಭೂತ ಪಠ್ಯಕ್ರಮಗಳ ತರಬೇತಿಗೆ ಸಂಬಂಧಿಸಿದಂತೆ CBI ಆಗ ರಾಜ್ಯ ಆರಕ್ಷಕ ತರಬೇತಿ ಸಂಸ್ಥೆಗಳು ಮತ್ತು ಹೈದರಾಬಾದ್‌ನ NPA ಮೇಲೆ ಅವಲಂಬಿತವಾಗಿತ್ತು.CBIನ ಎಲ್ಲಾ ದರ್ಜೆಗಳ ತರಬೇತಿಯ ಅಗತ್ಯಗಳನ್ನು ಈ ಅಕಾಡೆಮಿಯು ಈಗ ಪೂರೈಸುತ್ತದೆ. ಕೆಲವೊಂದು ವಿಶಿಷ್ಟವಾಗಿಸಲ್ಪಟ್ಟ ಪಠ್ಯಕ್ರಮಗಳಿಗೆ ಸಂಬಂಧಿಸಿದ ತರಬೇತಿ ಸೌಕರ್ಯಗಳು ರಾಜ್ಯ ಆರಕ್ಷಕ ಇಲಾಖೆ, ಕೇಂದ್ರೀಯ ಆರಕ್ಷಕ ಸಂಸ್ಥೆಗಳು (ಸೆಂಟ್ರಲ್‌ ಪೊಲೀಸ್‌ ಆರ್ಗನೈಸೇಷನ್ಸ್‌-CPO), ಸಾರ್ವಜನಿಕ ವಲಯದ ಉದ್ಯಮಗಳ ಜಾಗರೂಕತಾ ಸಂಸ್ಥೆಗಳು , ಬ್ಯಾಂಕುಗಳು ಮತ್ತು ಸರ್ಕಾರಿ ಇಲಾಖೆಗಳು ಹಾಗೂ ಭಾರತದ ಸಶಸ್ತ್ರ ಪಡೆಗಳು ಇವೆಲ್ಲದರ ಅಧಿಕಾರಿಗಳಿಗೂ ಲಭ್ಯವಿವೆ.

ಜನಪ್ರಿಯ ಸಂಸ್ಕೃತಿಯಲ್ಲಿ

ಬದಲಾಯಿಸಿ
  • CBI ಫಿಲ್ಮ್‌ ಫ್ರಾಂಚೈಸ್‌ ಎಂಬುದು ಮಲಯಾಳಂ ಚಲನಚಿತ್ರಗಳ ಒಂದು ಸರಣಿಯಾಗಿದೆ. ಇದನ್ನು K. ಮಧು ನಿರ್ದೇಶಿಸಿದರೆ, S.N. ಸ್ವಾಮಿ ಚಿತ್ರಕಥೆಯನ್ನು ರಚಿಸಿದರು. ಸೇತುರಾಮ ಅಯ್ಯರ್‌ ಎಂಬ ಓರ್ವ ಹೆಸರಾಂತ ಕಾಲ್ಪನಿಕ CBI ಅಧಿಕಾರಿಯಾಗಿ ಮಮ್ಮೂಟಿ ಇದರಲ್ಲಿ ನಟಿಸಿದರು. ೨೦೧೧ರವರೆಗೆ ಈ ಸರಣಿಯಲ್ಲಿ ನಾಲ್ಕು ಚಲನಚಿತ್ರಗಳು ಬಿಡುಗಡೆಯಾಗಿದ್ದು, ಐದನೆಯ ಚಿತ್ರವು ನಿರ್ಮಾಣ ಹಂತದಲ್ಲಿದೆ. ಇದುವರೆಗೆ ಬಿಡುಗಡೆಯಾಗಿರುವ ಚಲನಚಿತ್ರಗಳು ಹೀಗಿವೆ: ಒರು CBI ಡೈರಿ ಕುರಿಪು (೧೯೮೮, ಒಂದು CBI ದಿನಚರಿಯ ಟಿಪ್ಪಣಿ), ಜಾಗ್ರತ (೧೯೮೯, ಎಚ್ಚರಿಕೆ), ಸೇತುರಾಮ ಅಯ್ಯರ್‌ CBI (೨೦೦೪) ಮತ್ತು ನೆರಾರಿಯನ್‌ CBI (೨೦೦೫, ಸತ್ಯದ ಬೆನ್ನಟ್ಟುವಿಕೆಯಲ್ಲಿ CBI).
  • ೧೯೯೩ರಲ್ಲಿ ಬಂದ ತಿರುಡಾ ತಿರುಡಾ ಎಂಬ ತಮಿಳು ಚಲನಚಿತ್ರದಲ್ಲಿ S.P. ಬಾಲಸುಬ್ರಹ್ಮಣ್ಯಂರವರು CBI ಅಧಿಕಾರಿ ಲಕ್ಷ್ಮೀನಾರಾಯಣ್‌ ಪಾತ್ರವನ್ನು ವಹಿಸಿದ್ದಾರೆ; ಈ ಚಿತ್ರದಲ್ಲಿ, RBIನ ಒಂದು ಕಳುವಾದ ಹಣದ ತಿಜೋರಿಯನ್ನು CBI ಬೆನ್ನಟ್ಟುತ್ತದೆ.
  • ೨೦೦೩ರಲ್ಲಿ ಬಂದ ಚುರಾ ಲಿಯಾ ಹೈ ತುಮ್ನೇ ಎಂಬ ಹಿಂದಿ ಚಲನಚಿತ್ರದಲ್ಲಿ ವಿಶಾಲ್‌ ಮಲ್ಹೋತ್ರಾ ಎಂಬ CBI ಅಧಿಕಾರಿಯ ಪಾತ್ರವನ್ನು ಝಾಯೇದ್‌ ಖಾನ್‌ ವಹಿಸಿದ್ದಾನೆ.
  • ೨೦೦೯ರಲ್ಲಿ ಬಂದ ಕಂದಸ್ವಾಮಿ ಎಂಬ ತಮಿಳು ಚಲನಚಿತ್ರದಲ್ಲಿ ಕಂದಸ್ವಾಮಿ ಎಂಬ ಓರ್ವ CBI ಅಧಿಕಾರಿಯ ಪಾತ್ರವನ್ನು ವಿಕ್ರಮ್‌ ವಹಿಸಿದ್ದಾನೆ.

ಇವನ್ನೂ ಗಮನಿಸಿ

ಬದಲಾಯಿಸಿ
  • ಬೊಮ್ಮಲಾಟ್ಟಂ

ಹೊರ ಸಂಪರ್ಕ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "CBI - Organisation Chart". Archived from the original on 2009-04-06. Retrieved 2011-01-18.
  2. Mohan, Vishwa (27 November 2006). "Origin of Hawala funds were not traced". India Times. Archived from the original on 24 ಆಗಸ್ಟ್ 2017. Retrieved 18 ಜನವರಿ 2011.
  3. Saikat Datta (21 September 2009). "Grease On The Lens". outlookindia.com. Retrieved 9 October 2010.
  4. ರಫೇಲ್ ದಾಖಲೆ ಕೇಳಿದ್ದು ಅಲೋಕ್ ವರ್ಮಾ ಮಾಡಿದ ತಪ್ಪೇ?: 24 ಅಕ್ಟೋಬರ್ 2018
  5. ವಿವಾದದ ಸುಳಿಯಲ್ಲಿ ಸಿಬಿಐ
  6. ಸಿಬಿಐ: ಸುಪ್ರೀಂ ಸಮತೋಲನ;; 27 ಅಕ್ಟೋಬರ್ 2018
  7. "Central Bureau of Investigation (CBI) - India".
  8. "Vineet Narain Case, Directions of the Court". 2 November 2006. Archived from the original on 2 ಏಪ್ರಿಲ್ 2007. Retrieved 18 ಜನವರಿ 2011.
  9. "Sr Abhaya murder: CBI Lies in HC kerala". mathrubhumi.com. Archived from the original on 2008-09-01. Retrieved 2011-01-18.
  10. J. Venkatesan (29 august 2010). "CBI putting pressure on me: Geeta Johri". ದಿ ಹಿಂದೂ. Archived from the original on 31 ಆಗಸ್ಟ್ 2010. Retrieved 9 October 2010. {{cite news}}: Check date values in: |date= (help)
  11. "Malankara Varghese murder: HC questions CBI". expressbuzz.com. 1 June 2010. Retrieved 9 October 2010.
  12. "Was told to go soft on Warren Anderson: Former CBI official". NDTV.
  13. "CBI annual report 2008" (PDF). cbi.gov.in. Archived from the original (PDF) on 2010-07-02. Retrieved 2011-01-18.
  14. "CBI annual report 2007" (PDF). cib.gov.in. Archived from the original (PDF) on 2008-12-01. Retrieved 2011-01-18.
  15. "Welcome to CBI Academy School of eLearning". cbiacademy.gov.in. Archived from the original on 2010-12-19. Retrieved 2011-01-18.

ಹೆಚ್ಚಿನ ಓದಿಗಾಗಿ

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ