ಸಿಂಹೇಂದ್ರಮಧ್ಯಮ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಸಿಂಹೇಂದ್ರಮಧ್ಯಮ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೫೭ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಸುಮದ್ಯುತಿ ಎಂದು ಹೆಸರಿಸಿದ್ದಾರೆ.[೧][೨]
ರಾಗ ಸ್ವರೂಪ ಮತ್ತು ಲಕ್ಷಣ
ಬದಲಾಯಿಸಿ
ಇದು ಹತ್ತನೆಯ ದಿಸಿ ಚಕ್ರದ ಮೂರನೆಯ ರಾಗ.ಇದರ ನೆನೆಪಿನ ಹೆಸರು ದಿಸಿ-ಗೊ ನೆನಪಿನ ನುಡಿಕಟ್ಟು:ಸ ರಿ ಗಿ ಮಿ ಪ ಧ ನಿ [೧] ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ.
ಆರೋಹಣ ಸ ರಿ೨ ಗ೨ ಮ೨ ಪ ದ೧ ನಿ೩ ಸ
ಅವರೋಹಣ ಸ ನಿ೩ ದ೧ ಪ ಮ೨ ಗ೨ ರಿ೨ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಚತುಶ್ರುತಿ ರಿಷಭ,ಸಾಧಾರಣ ಗಾಂಧಾರ,ಪ್ರತಿಮಧ್ಯಮ,ಪಂಚಮ,ಶುದ್ಧ ಧೈವತಮತ್ತು ಕಾಕಲಿ ನಿಷಾಧ.ಇದು ೨೧ನೆಯ ಮೇಳಕರ್ತ ರಾಗವಾದ ಕೀರ್ವಾಣಿ
ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ.
ಜನ್ಯ ರಾಗಗಳು
ಬದಲಾಯಿಸಿಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ.ಇವುಗಳಲ್ಲಿ ಮುತ್ತಯ್ಯ ಭಾಗವತರ್ ಬಳಕೆಗೆ ತಂದ ರಾಗ ವಿಜಯಸರಸ್ವತಿ ಹೆಚ್ಚಾಗಿ ಕಛೇರಿಗಳಲ್ಲಿ ಹಾಡಲ್ಪಡುತ್ತದೆ.
ಜನಪ್ರಿಯ ರಚನೆಗಳು
ಬದಲಾಯಿಸಿಸಿಂಹೇಂದ್ರಮಧ್ಯಮ ರಾಗದಲ್ಲಿ ಕೆಲವು ಜನಪ್ರಿಯ ಕೃತಿಗಳು ಈ ಕೆಳಗಿನಂತಿವೆ.
- ನೀದು ಚರಣಮುಲೆ-ತ್ಯಾಗರಾಜ
- ಕಾಮಾಕ್ಷಿ ಕಾಮಕೋಟಿ ಪೀಠ ವಾಸಿನಿ - ಮುತ್ತುಸ್ವಾಮಿ ದೀಕ್ಷಿತ
- ಪಾಮರಜನಪಾಲಿನಿ- ಮುತ್ತುಸ್ವಾಮಿ ದೀಕ್ಷಿತ
- ಆಶೈಂಧದಮ್ ಮಾಯಿಲ್ ಒಂಡ್ರು - ಒಟ್ಟುಕ್ಕಾಡು ವೆಂಕಟ ಕವಿ
- ನಿನ್ನೇ ನಮ್ಮಿತಿ ನಯ್ಯ - ಮೈಸೂರು ವಾಸುದೇವಾಚಾರ್ಯ
- ಇನ್ನುಂ ಒರುತಾರಮ್- ಮುತ್ತು ತಾಂಡವರ್
- ಅಯ್ಯಪ್ಪ- ಕೆ.ಜೆ.ಜೇಸುದಾಸ್
- ಉಣ್ಣಯಲ್ಲಾಲ್ ವೀರೇ ಗತಿ- ಕೋಟೀಶ್ವರ ಅಯ್ಯರ್
- ರಾಮ ರಾಮ ಗುಣ ಸೀಮ - ಸ್ವಾತಿ ತಿರುನಾಳ್
- ಮರಕತ ಸಿಂಹಾಸನ- ಎಂ. ಬಾಲಮುರಳಿ ಕೃಷ್ಣ
- "ಇಹ ಪರಮ್ ಯೆನ್ನುಂ"- ಮಹಾ ವೈದ್ಯನಾಥ ಅಯ್ಯರ್
ಸಂಬಂಧಿತ ರಾಗಗಳು
ಬದಲಾಯಿಸಿಗ್ರಹಭೇದಮ್ ಸೂತ್ರವನ್ನು ಸಿಂಹೇಂದ್ರಮಧ್ಯಮ ರಾಗಕ್ಕೆ ಅನ್ವಯಿಸಿದಾಗ ಎರಡು ರಾಗಗಳು ದೊರೆಯುತ್ತದೆ.ಅವುಗಳು ಮಾಯಮಾಳವಗೌಳ ಮತ್ತು ರಸಿಕಪ್ರಯ
ಉಲ್ಲೇಖಗಳು
ಬದಲಾಯಿಸಿ