ಸದಸ್ಯ:Praptha/sandbox1
ಮರಗಾಲು ಕುಣಿತ
ಬದಲಾಯಿಸಿಮುನ್ನುಡಿ
ಬದಲಾಯಿಸಿಜಾತ್ರೆ ಉತ್ಸವಗಳಲ್ಲಿ ಗ್ರಾಮೀಣರು ಮನರಂಜನೆಗಾಗಿ ಮರದ ಕಾಲುಗಳನ್ನು ಕಟ್ಟಿಕೊಂಡು ಕುಣಿಯುವುದೇ 'ಮರಗಾಲು' ಕುಣಿತ.
ಮರಗಾಲು ಮಾಡುವ ವಿಧಾನ
ಬದಲಾಯಿಸಿಮರಗಾಲುಗಳನ್ನು ಹಗುರವಾದ, ಆದರೆ ಗಟ್ಟಿಯಾದ ಮರದಿಂದ ಮಾಡಿರುತ್ತಾರೆ. ಮೂರು-ನಾಲ್ಕು ಅಡಿ ಉದ್ದದ ಮತ್ತು ನಾಲ್ಕೈದು ಅಂಗುಲ ಸುತ್ತಳತೆಯ ಎರಡು ಮರದ ತುಂಡುಗಳನ್ನು ತೆಗೆದುಕೊಂಡು, ಮೇಲ್ಬಾಗದಲ್ಲಿ ಹೆಜ್ಜೆಯನ್ನು ಇಡಲು ಅನುಕೂಲವಾಗುವಂತೆ ಮೆಟ್ಟಿಲಿನಂತೆ 'ಕಂಡು' ಮಾಡಿ ಮರವನ್ನು ನಯಗೊಳಿಸಿರುತ್ತಾರೆ. ಸಣ್ಣಗಿರುವ ಕೆಳಗಿನ ಭಾಗದಲ್ಲಿ ಕಟ್ಟಲು ಅನುಕೂಲವಾಗುವಂತೆ ಇನ್ನೊಂದು ಕಂಡು ಮಾಡಿರುತ್ತಾರೆ. ಕಲಾವಿದರು ಈ ಮರಗಾಲುಗಳ ಮೇಲೆ ನಿಂತು ಅವುಗಳನ್ನು ಭದ್ರವಾಗಿ ಕಾಲಿಗೆ ಕಟ್ಟಿಕೊಂಡು, ಸಮಭಾರದ 'ಹಿಡಿತ' ಸಿಕ್ಕುವವರೆಗೂ ಕೈ ಆಸರೆಗೆ ಉದ್ದ ಕೋಲು ಅಥವಾ ಸಹಾಯಕರ ನೆರವು ಪಡೆದು ನಂತರ ಯಾವ ಆಸರೆಯು ಇಲ್ಲದೆ ಹೆಜ್ಜೆ ಹಾಕುತ್ತಾ ತಮಟೆಯ ತಾಳಕ್ಕೆ ವಿವಿಧ ಭಂಗಿಗಳಲ್ಲಿ ಕುಣಿಯುತ್ತಾರೆ. ಹೆಜ್ಜೆ ಹಾಕುವಾಗ ಸ್ವಲ್ಪ ಸಮತೂಕ ತಪ್ಪಿದರೂ ಕುಣಿಯುವವನಿಗೆ ಅಪಾಯವಿದೆ. ಆದರೂ ಮರಗಾಲು ಕಟ್ಟಿಕೊಂಡು ವೇಗವಾಗಿ ಓಡಾಡುವ ನುರಿತ ಕಲಾವಿದರು ಇದ್ದಾರೆ. ಸಮಭಾರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಕೆಲವು ಕೊಡೆಗಳನ್ನು ಹಿಡಿದು ಕೊಳ್ಳುವುದುಂಟು.
ಕಲಾವಿದರ ವೇಷಭೂಷಣ
ಬದಲಾಯಿಸಿಸಾಮಾನ್ಯವಾಗಿ ಕಲಾವಿದರ ವೇಷಭೂಷಣ ನಿತ್ಯದ ಉಡುಗೆ ತೊಡಿಗೆಯೇ. ಕೆಲವರು ಆಕರ್ಷಣೆಗಾಗಿ ತಮಗೆ ಬೇಕಾದ ವೇಷ ಹಾಕುತ್ತಾರೆ. ಮರಗಾಲು ಕುಣಿತದ ಮುಂದಿನ ಹಂತವೇ 'ಕೀಲು ಕುದುರೆ ಕುಣಿತ. ಕುಣಿಯುವವನೆದುರಿಗೆ ಒಬ್ಬ ವ್ಯಕ್ತಿಯನ್ನು ನಿಲ್ಲಿಸಿ ಅವನ ತಲೆಯ ಮೇಲೆ ಕರವಸ್ತ್ರ ಅಥವಾ ರೂಪಾಯಿ ನೋಟನ್ನು ಇಟ್ಟರೆ, ಮರಗಾಲಿನವರು ಕುಣಿಯುತ್ತಲೇ ಕೆಳಕ್ಕೆ ಬಾಗಿ, ಬಾಯಿ ಅಥವಾ ಕಣ್ಣಿನ ರೆಪ್ಪೆಯಿಂದ ಆ ವಸ್ತುವನ್ನು ಮೇಲೆತ್ತುವುದು ಮೊದಲಾದ ಕೆಲವು ಚಮತ್ಕಾರಗಳನ್ನು ತೋರಿಸಿ ಪ್ರೇಕ್ಷಕರನ್ನು ರಂಜಿಸುತ್ತಾರೆ.
ಉಲ್ಲೇಖ
ಬದಲಾಯಿಸಿ- ಗೊ.ರು.ಚನ್ನಬಸಪ್ಪ, ಕರ್ನಾಟಕ ಜನಪದ ಕಲೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.