ವೇಷ
ವೇಷ (ವೇಷಾಂತರ) ವಿಗ್, ಕನ್ನಡಕ, ಮೇಕಪ್, ಉಡುಪು ಅಥವಾ ಇತರ ವಸ್ತುಗಳು ಸೇರಿದಂತೆ, ಒಬ್ಬ ವ್ಯಕ್ತಿಯ ದೈಹಿಕ ನೋಟವನ್ನು ಮರೆಮಾಚುವ ಅಥವಾ ಬದಲಾಯಿಸುವ ಏನಾದರೂ ಆಗಿರಬಹುದು. ಛದ್ಮವೇಷ ಜನರು, ಪ್ರಾಣಿಗಳು ಮತ್ತು ವಸ್ತುಗಳಿಗಾಗಿ ಒಂದು ಬಗೆಯ ವೇಷ. ಟೋಪಿಗಳು, ಕನ್ನಡಕ, ಕೇಶವಿನ್ಯಾಸದಲ್ಲಿ ಮಾರ್ಪಾಡುಗಳು ಅಥವಾ ವಿಗ್‍ಗಳು, ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ, ಮತ್ತು ಮೇಕಪ್ ಅನ್ನೂ ಬಳಸಲಾಗುತ್ತದೆ.
ಗುರುತಿಸುವಿಕೆಯನ್ನು ತಪ್ಪಿಸಲು ಪ್ರಯತ್ನಿಸುವ ಅಪರಾಧಿಗಳು ಮತ್ತು ಗೂಢಚಾರರು ವೇಷಾಂತರಗಳನ್ನು ಬಳಸಬಹುದು. ಒಂದು ಸಂಸ್ಥೆಗಾಗಿ ಕೆಲಸಮಾಡುವ ವ್ಯಕ್ತಿಯು ಮಾಹಿತಿಪಡೆಯಲು ಯತ್ನಿಸುವಾಗ ಸಾರ್ವಜನಿಕರಿಂದ ಗುರುತಿಸಲ್ಪಡದಿರಲು ರಹಸ್ಯವಾಗಿ ಉಳಿಯಬಹುದು; ಒಬ್ಬ ಪ್ರಸಿದ್ಧ ವ್ಯಕ್ತಿಯು ಇಷ್ಟವಿಲ್ಲದ ಮಾಧ್ಯಮದ ಗಮನವನ್ನು ತಪ್ಪಿಸಿಕೊಳ್ಳಲು ಅಜ್ಙಾತವೇಷ ಧರಿಸಬಹುದು. ಕಾಮಿಕ್ ಪುಸ್ತಕಗಳು ಮತ್ತು ಚಲನಚಿತ್ರಗಳಲ್ಲಿ, ಮಹಾವೀರರು ಹಲವುವೇಳೆ ವೇಷಾಂತರಗಳನ್ನು ಬಳಸುತ್ತಾರೆ, ಮತ್ತು ವೈಜ್ಞಾನಿಕ ಕಾದಂಬರಿಗಳಲ್ಲಿ ಅವನ್ನು ಅನ್ಯಗ್ರಹಜೀವಿಗಳು ಬಳಸಬಹುದು. ವೇಷಭೂಷಣಗಳನ್ನು ಧರಿಸುವುದು ಒಂದು ಹ್ಯಾಲೊವೀನ್ ಸಂಪ್ರದಾಯವಾಗಿದೆ.
ಕಥಾಸಾಹಿತ್ಯದಲ್ಲಿ
ಬದಲಾಯಿಸಿಕಾಮಿಕ್ ಪುಸ್ತಕಗಳು ಮತ್ತು ಮಹಾವೀರರ ಕಥೆಗಳಲ್ಲಿ, ರಹಸ್ಯ ಗುರುತುಗಳನ್ನು ಮುಚ್ಚಿಡಲು ಮತ್ತು ಸಾಮಾನ್ಯ ಜನರಿಂದ ವಿಶೇಷ ಶಕ್ತಿಗಳನ್ನು ರಹಸ್ಯವಾಗಿಡಲು ವೇಷಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ, ಸೂಪರ್‍ಮ್ಯಾನ್ ಕ್ಲಾರ್ಕ್ ಕೆಂಟ್ ಆಗಿ ನಿರೂಪಿಸಿಕೊಳ್ಳುತ್ತಾನೆ, ಮತ್ತು ಪೀಟರ್ ಪಾರ್ಕರ್ ಆಗಿ ಗುರುತಿಸಲ್ಪಡದಿರಲು ಸ್ಪೈಡರ್-ಮ್ಯಾನ್ ವೇಷ ಬದಲಿಸುತ್ತಾನೆ.
ಶರ್ಲಾಕ್ ಹೋಮ್ಸ್ ಗುರುತಿಸಲ್ಪಡದಿರಲು ಹಲವುವೇಳೆ ವೇಷ ಬದಲಿಸುತ್ತಿದ್ದನು. ಉದಾಹರಣೆಗೆ ದ ಹೌಂಡ್ ಆಫ಼್ ಬಾಸ್ಕರ್‍ವಿಲ್ಸ್‌ನಲ್ಲಿ ತನ್ನ ತನಿಖಾ ಕೆಲಸ ಮಾಡಲು ಬಂಜರ ಭೂಮಿಯಲ್ಲಿ ಕಾಣಿಸಿಕೊಳ್ಳುವುದನ್ನು ತಪ್ಪಿಸಲು ಅಲೆಮಾರಿ ವ್ಯಾಪಾರಿಯಾಗಿ ವೇಷ ಬದಲಿಸಿಕೊಳ್ಳುತ್ತಾನೆ.
ಕಥಾಸಾಹಿತ್ಯದಲ್ಲಿ, ಅನ್ಯಗ್ರಹಜೀವಿಗಳು ಹಲವುವೇಳೆ ವೇಷಾಂತರವಾಗಿ ಮಾನವ ಸೂಟುಗಳನ್ನು ಧರಿಸಿ ಮಾನವ ವೇಷ ಪಡೆಯುತ್ತಾರೆ. ವೇಷಾಂತರವನ್ನು ಕೆಲವೊಮ್ಮೆ ಆಪರಾಧಿಕ ಚಟುವಟಿಕೆ ಮತ್ತು ಬೇಹುಗಾರಿಕೆಯಲ್ಲಿ ಬಳಸಲಾಗುತ್ತದೆ, ಮತ್ತು ಪತ್ತೆದಾರಿ ಕಥಾಸಾಹಿತ್ಯ ಮತ್ತು ಬೇಹುಗಾರ ಕಥೆಗಳಲ್ಲಿ ಒಂದು ಸಾಮಾನ್ಯ ಪ್ರವೃತ್ತಿಯಾಗಿದೆ.