ಕುಟುಂಬ

ಬದಲಾಯಿಸಿ

ನಮಸ್ಕಾರ ನನ್ನ ಹೆಸರು ನೂರ್ ಆಯೇಷಾ. ನಾನು ಮೂಲತಃ ಕರ್ನಾಟಕದಲ್ಲಿರುವ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಎಂಬ ಒಂದು ತಾಲ್ಲೂಕಿನವಳು. ನಾನು ಹೊಳಲ್ಕೆರೆಯಲ್ಲಿ ಸಿದ್ರಾಮಪ್ಪ ಬಡಾವಣೆಯ ಮೂರನೇ ಕ್ರಾಸಿನ ನಿವಾಸಿ.ಇದು ಹೊಳಲ್ಕೆರೆಯ ಬಸ್ಸು ನಿಲ್ದಾಣಕ್ಕೆ ತುಂಬಾ ಹತ್ತಿರವಿದೆ. ನನ್ನ ತಂದೆ ಸೈಯದ್ ಮುಸವೀರ್ ಇವರು ಹೊಳಲ್ಕೆರೆಯಾ ೧೧ ನೇ ವಾರ್ಡಿನ ಪಟ್ಟಣ ಪಂಚಾಯಿತಿ ಸದ್ಯಸರು. ಇವರು ಬಿ.ಕಾಂ ಪದವೀಧರರು ಹಾಗು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಇಲಾಖೆಯಲ್ಲಿ ಪ್ರಮುಖ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ನನ್ನ ತಾಯಿ ಗುಳ್ಝರ್ ಬಾನು ಒಬ್ಬ ಗೃಹಿಣಿ. ನಾನು ತುಂಬಾ ಅದೃಷ್ಠವಂತೆ ಏಕೆಂದರೆ ನನಿಗೆ ಅಜ್ಜ-ಆಜಿ ಇದ್ದಾರೆ. ಇವರ ಆಶೀರ್ವಾದ ಸದಾ ನನ್ನ ಮೇಲೆ ಇದೆ. ನನ್ನ ಅಜ್ಜನ ಹೆಸರು ಸ್.ಎಚ್ ಮಿಯಾನ್ ಸಾಬ್ ಇವರು ಕರ್ನಾಟಕ ವಿದ್ಯುತ್ ಇಲಾಖೆಯಲ್ಲಿ ನಿವೃತ್ತ ಮ್ಯಾನೇಜರ್ ನನ್ನ ಅಜ್ಜಿಯ ಹೆಸರು ಇಶ್ರತ್ ಬೇಗಮ್ ಇವರು ಸರ್ಕಾರಿ ಉರ್ದು ಹಿರಿಯ ಪ್ರೌಢ ಶಾಲೆಯಲ್ಲಿ ಗಣಿತ ವಿಷಯದ ನಿವೃತ್ತ ಶಿಕ್ಷಕಿ. ನನಿಗೆ ಎರಡು ಕಿರಿಯ ತಂಗಿಯರಿದ್ದಾರೆ. ಗೌಸಿಯಾ ಇರಾಂ ಇವಳು ಹೊಳಲ್ಕೆರೆಯ  ಸಾಂದೀಪನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ೯ನೆ ತರಗತಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಮೂರನೆಯವಳು ರೈಸನ್ ನೂರೈನ್. ಈಕೆ ಕೂಡ ಅದೇ ಶಾಲೆಯಲ್ಲಿ ೨ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ನಾನು ಜಂಟಿ ಕುಟುಂಬಕ್ಕೆ ಸೇರಿದವಳು. ನನ್ನ ಎಲ್ಲ ಸಂಭoದಿಕರು ಕರ್ನಾಟಕದೆಲ್ಲೆಡೆ ಹರಡಿಕೊಂಡಿದ್ದಾರೆ.

ಊರಿನ ಪರಿಚಯ

ಬದಲಾಯಿಸಿ

ಹೊಳಲ್ಕೆರೆಯಾ ಬಯಲು ಗಣಪತಿ ವಿಶ್ವ ಪ್ರಸಿದ್ಧ. ಈ ದೇವಾಲಯವನ್ನು ಚಿತ್ರದುರ್ಗದ ಪಾಳೇಗಾರ ಗುಟ್ಸೆಪ್ಪ ನಾಯಕನು ೧೭೭೫ ರಲ್ಲಿ ಕಟ್ಟಿಸಿದನೆಂದು ಶಾಸನಗಳು ತಿಳಿಸುತ್ತವೆ.

ವಿದ್ಯಾಭ್ಯಾಸ

ಬದಲಾಯಿಸಿ

ನಾನು ೧೦ ನೇ ತರಗತಿಯವರೆಗೆ ಓದಿದ್ದು ಹೊಳಲ್ಕೆರೆಯ ಸಾಂದೀಪನಿ ಅಂತಾರಾಷ್ಟ್ರೀಯ ಶಾಲೆ ಅಲ್ಲಿ. ಎಸ್. ಎಸ್ .ಎಲ್. ಸಿ ಯಾ ಪರೀಕ್ಷೆಯಲ್ಲಿ ನನಗೆ ೯೮% ಅಂಕಗಳು ದೊರಕಿದವು.ನಮ್ಮ ತಾಲ್ಲೂಕಿನಲ್ಲಿ ನನಿಗೆ ಮೊದಲ ಸ್ಥಾನ ದೊರಕಿತು. ನನ್ನ ಈ ಶ್ರೇಯಸ್ಸಿಗೆ ಪಟ್ಟಣ ಪಂಚಾಯತಿಯವರು ನನಗೆ ೫ ಸಾವಿರ ರೂಪಾಯಿಗಳ ನಗದು ಬಹುಮಾನ ಕೊಟ್ಟಿ ಸನ್ಮಾನಿಸಿದರು. ಇದರ ಜೊತೆಗೆ ಅಲ್ಪಸಂಖ್ಯಾತ ಇಲಾಖೆಯವರು ಕೂಡ ಒಂದು ಚಿನ್ನದ ಪದಕ ನೀಡಿ ಅಭಿನಂದಿಸಸಿದರು. ಹೀಗಿಯೇ ನನ್ನ ಗುರಿಯನ್ನು ಸಾಧಿಸುವ ಛಲದಿಂದ ನನ್ನ ದಾರಿ ಹುಡುಕಿಕೊಂಡು ನನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದೆ . ಬೆಂಗಳೂರಿನ ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಪದವಿ ಪೂರ್ವಶಿಕ್ಷಣ ಪೂರ್ಣಗೊಳಿಸಿದೆ . ದ್ವಿತೀಯ ಪಿಯುಸಿನಲ್ಲಿ ಕಲೆ ವಿಭಾಗದಲ್ಲಿ ೯೭% ಅಂಕಗಳು ಲಭಿಸಿದವು.ಇದನ್ನು ಕಂಡು ಬೆರಗಾದ ನಮ್ಮ ಕಾಲೇಜಿನವರು ನನಗೆ ಒಂದು ಚಿನ್ನದ ಪದಕ, ಸರ್ಟಿಫಿಕೇಟ್, ೧೦ ಸಾವಿರ ರೂಪಾಯಿಯ ನಗದು ಬಹುಮಾನ ನೀಡಿ ಸನ್ಮಾನಿಸಿದರು.ಉನ್ನತ ಶಿಕ್ಷಣಗಾಗಿ ಪ್ರಸ್ತುತ ನಾನು ಕ್ರೈಸ್ಟ್ ಯೂನಿವರ್ಸಿಟಿ ಯಲ್ಲಿ ಬಿ.ಎ. - ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿ ಮಾಡುತಿದ್ದೇನೆ.

ನೆಚ್ಚಿನ ಪ್ರವಾಸಿ ಸ್ಥಳಗಳು

ಬದಲಾಯಿಸಿ

ಪ್ರಯಾಣ ಮಾಡುವುದು ನನ್ನ ಪ್ರಿಯ ಹವ್ಯಾಸ ಗಳಲ್ಲೊಂದು . ನಾನು ಹೋಗಿ ವೀಕ್ಷಿಸಿದ ನನ್ನ ನೆಚ್ಚಿನ ತಾಣಗಳೆಂದರೆ - ವಿಜಯನಗರ ಸಾಮ್ರಾಜ್ಯದ ಪ್ರಮುಖ ನಗರಿ ಹಂಪಿ-ಹೊಸಪೇಟೆ, ಶಿವಮೊಗ್ಗದ ಜೋಗ ಜಲಪಾತ, ಚಿತ್ರದುರ್ಗದ ಏಳು ಸುತ್ತಿನ ಕೋಟೆ, ಮಡಿಕೇರಿ, ಊಟಿ, ಕೇರಳ, ಕುದುರೆಮುಖ, ಬನವಾಸಿ, ಶಿರಸಿ, ಕೊಲ್ಲೂರು ಮೂಕಾಂಬಿಕೆ, ಸಿಗಂಧೂರು, ಕುಶಾಲನಗರ,ಮೈಸೂರು ಅರಮನೆ, ನಂದಿ ಬೆಟ್ಟ, ಚಾಮುಂಡೇಶ್ವರಿ ದೇವಸ್ಥಾನ, ಮುರುಡೇಶ್ವರ, ಉಡುಪಿ ಕೃಷ್ಣ ದೇವಾಲಯ, ಮಲ್ಪೆ ಬೀಚ್, ಕುಂದಾಪುರ, ಬೆಳಗಾವಿ, ಚಿತ್ರದುರ್ಗದ ಮುರುಘಾ ಸ್ವಾಮಿ ಮಠ, ಕಾಡುಮಲ್ಲೇಶ್ವರ, ಬಾಬಬುಡನಗಿರಿ, ಬಿಜಾಪುರದ ಗೋಲಗುಂಬಜ್, ಆಲಮಟ್ಟಿ ಆಣೆಕಟ್ಟು, ಗುಲ್ಬರ್ಗ ಇತ್ಯಾದಿ. ಇವೆಲ್ಲ ದಕ್ಷಿಣ ಭಾರತದ ಪ್ರದೇಶಗಳಾದವು . ಪ್ರಯಾಣ ಹಾಗು ಭಾರತವನ್ನು ಅನ್ವೇಷಿಸುವ ಹಂಬಲದಿಂದ ಉತ್ತರ ಭಾರತವನ್ನು ಕಂಡಿದ್ದೇನೆ. ಉತ್ತರ ಭಾರತದ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಡೆಲ್ಲಿ, ಗುಜರಾತ್, ಬಿಹಾರ, ಅರುಣಾಚಲ ಪ್ರದೇಶ, ಉತ್ತರಾಖಂಡ್ ಇನ್ನು ಮುಂತಾದವು ಕಂಡಿದ್ದೇನೆ . ಅಜಮಿರ್ ದರ್ಗಾ, ಜೋಧಪುರ್, ಅಂಬರ್ ಕೋಟೆ,ತಾಜಮಹಲ್,ಹುಮಾಯೂನಿನ ಸ್ಮಾರಕ, ಫತೇಹಪುರ್ ಸಿಕ್ರಿ, ಬುಲಂದ್ ದರ್ವಾಝ, ಆಗ್ರಾದ ಕೋಟೆ, ಉದ್ಯಾನವನಗಳು, ಇತ್ಯಾದಿ- ಇವೆಲ್ಲವೂ ನನ್ನ ಅಚ್ಚುಮೆಚ್ಚಿನ ಐತಿಹಾಸಿಕ ತಾಣಗಳು. ಹವ್ಯಾಸಗಳು

ಹವ್ಯಾಸಗಳು

ಬದಲಾಯಿಸಿ

ಚಿಕ್ಕಂದಿನಿಂದ ನಟನೆ ಹಾಗು ನೃತ್ಯದ ಹಂಬಲ, ಗುಣ ನನ್ನಲಿ ಚಿಗುರಿ ಈಗ ಗಿಡವಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ, ಶಕುಂತಲೆ, ಒನಕೆ ಓಬವ್ವ, ಲಕ್ಷ್ಮಿ ಬಾಯಿ, ಚಾಚಾ ನೆಹರು - ಇವರೆಲ್ಲರ ನಟನೆ ಮಾಡಿ ಪ್ರಶಂಸೆ ಗಳಿಸಿದ್ದೇನೆ. ನಾನು ಭರತನಾಟ್ಯ ನೃತ್ಯದಲ್ಲಿ ಪಾಂಡಿತ್ಯ ಪಡೆದುಕೊಂಡಿದ್ದೇನೆ. ಶಾಲಾ-ಕಾಲೇಜಿನಲ್ಲಿ ಅನೇಕ ಸಮಾರಂಭಗಳಲ್ಲಿ ನನ್ನ ನೃತ್ಯ ವನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದೇನೆ .

ಜೀವನದ ಗುರಿ

ಬದಲಾಯಿಸಿ

ನನ್ನ ಜೀವನದ ಗುರಿ - ಐ.ಎ.ಎಸ್ ಆಫೀಸರ್ ಆಗುವುದು. ಇದು ನನ್ನ ಬಾಲ್ಯದ ಗುರಿಯಾಗಿದೆ. ನನಗೆ ಮಾರ್ಗದರ್ಶಕರಾಗಿ ದಾರಿ ತೋರಿಸಿದವರು ನನ್ನ ತಂದೆ. ಅವರ ಮೃದು ಸ್ವಭಾವ ನನಿಗೆ ಅತ್ಯಂತ ಪ್ರಿಯವಾದದ್ದು.ಅವರು ಪ್ರೀತಿಯಿಂದ ಹೇಳಿಕೊಡುವ ಬುದ್ಧಿ ಮಾತುಗಳು ಜೀವನದ ಕಷ್ಟಗಳನ್ನು ಎದುರಿಸುವುದಕ್ಕೆ ರಾಮಬಾಣ ಗಳಾಗಿವೆ. ನನ್ನ ಗುರಿಯ ಸ್ಪೂರ್ತಿ ೨೦೧೫ನೆ ಶಾಲಿನ ಕೇಂದ್ರ ಲೋಕ ಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿರುವ ದಿಲ್ಲಿಯ ಹುಡುಗಿ ಟೀನಾ ಡಾಬಿ. ಇವರು ನಡೆದ ದಾರಿಯಲ್ಲೆ ನಾನು ನಡೆಯಬೇಕು ಎನ್ನುವ ಸ್ವಇಚ್ಚೆ ಇದೆ. ದೇಶವನ್ನು ಪ್ರಗತಿಪರವಾಗಿ ಮಾಡಬೇಕಾಗಿದೆ. ಇದನ್ನು ಸಾಧಿಸುವುದಕ್ಕೆ ನಾನು ಪ್ರಾಮಾಣಿಕವಾಗಿ, ನಿಷ್ಠೆವಂತವಳಾಗಿ ಕೆಲಸಮಾಡುತೇನೆ. ಹಲವು ವಿಚಾರ ಸಂಕಿರಣಗಳಲ್ಲಿ ನಾನು ಭಾಗವಹಿಸಿದ್ದೇನೆ. ಪ್ರಸ್ತುತ ನಾನು ಬೆಂಗಳೂರಿನ ಲಕ್ಕಸಂದ್ರದ ನಿವಾಸಿ. ನಮ್ಮ ಮಾವ ಬೆಂಗಳೂರಿನ ಚಾಮರಾಜಪೇಟೆಯ ಪೊಲೀಸ್ ಅಧಿಕಾರಿ. ಓದುವುದೆಂದರೆ ನಾನಿದೇ ಪಂಚಪ್ರಾಣ. ನನ್ನ ಕೋಣೆಯಲ್ಲಿ ಉಡುಪುಗಳಿಗಿಂತ ಹೆಚ್ಚು ಪುಸ್ತಕಗಳಿವೆ.

ನೆಚ್ಚಿನ ಪುಸ್ತಕಗಳು

ಬದಲಾಯಿಸಿ

ಬೇರೆ-ಬೇರೆ ರೀತಿಯ ಪುಸ್ತಕಗಳು ಓದುವುದು ನನ್ನ ಹವ್ಯಾಸ . ಅನೇಕ ಪ್ರಸಿದ್ಧ ವ್ಯಕ್ತಿಗಳ ಆತ್ಮಕಥೆಯನ್ನು ಓದಲು ಇಷ್ಟ ಪಡುತೇನೆ. ಹೇಳುವುದೆಂದರೆ ಗಾಂಧೀಜಿಯವರ 'ಮೈ ಎಸ್ಪಿರಿಮೆಂಟ್ ವಿಥ್ ಟ್ರುಥ್' , ಜವಾಹರ್ಲಾಲ್ ನೆಹರುರವರ 'ಡಿಸ್ಕವರಿ ಆ ಇಂಡಿಯಾ', ಅಬ್ದುಲ್ ಕಲಾಂ ರವರ 'ಇಂಡಿಯಾ ೨೦೨೦' , 'ಇಗ್ನಿಟೆಡ್ ಮೈಂಡ್ಸ್ ' ಹಾಗು ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಅಬುಲ್ ಕಲಾಂ ಅಝಡ್ ಇತ್ಯಾದಿ ರವರ ಆತ್ಮಕಥೆಯನ್ನು ಸಹ  ಓದಿದ್ದೇನೆ.ಕನ್ನಡ ಸಾಹಿತ್ಯ ಅತಿ ಪ್ರಿಯವಾದದ್ದು. ಕುಮಾರವ್ಯಾಸ, ಹರಿಹರ, ಅಕ್ಕಮಹಾದೇವಿ, ಬಸವಣ್ಣ, ಪುರಂದರದಾಸ, ಕನಕದಾಸ, ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಅನಂತಮೂರ್ತಿ, ಜಿ.ಎಸ್. ಶಿವರುದ್ರಪ್ಪ, ಪಿ.ಲಂಕೇಶ್, ಮುದ್ದಣ್ಣ, ಕೆ.ಎಸ್ ನಿಸಾರ್ ಅಹ್ಮದ್ ಹಾಗು ಮುಂತಾದ ಪ್ರಸಿದ್ಧ ಕವಿಗಳ,ಲೇಖಕರ,ಬರಹಗಾರ ಪುಸ್ತಕಗಳನ್ನು ಓದಿದ್ದೇನೆ.

ನೆಚ್ಚಿನ ಸಿನಿಮಾ ನಟರು

ಬದಲಾಯಿಸಿ

ಚಿತ್ರರಂಗಕ್ಕೆ ಬಂದರೆ ಕನ್ನಡದ ಸ್ಯಾಂಡಲ್ವುಡ್ ಮತ್ತು ಹಿಂದಿಯ ಬಾಲಿವುಡ್ ಅತ್ಯಂತ ಪ್ರಿಯ.ಸ್ಯಾಂಡಲ್ವುಡ್ ನ ನೆಚ್ಚಿನ ನಾಯಕ :ರಾಜಕುಮಾರ್, ಸುದೀಪ್, ದರ್ಶನ,ಯಶ್, ರವಿಚಂದ್ರನ್ ಇತ್ಯಾದಿ. ನೆಚ್ಚಿನ ನಾಯಕಿ : ಮಂಜುಳಾ, ರಚಿತಾರಾಮ್ ,ರಾಧಿಕಾ ಪಂಡಿತ್, ಇತ್ಯಾದಿ. ಬಾಲಿವುಡ್ ನ ನೆಚ್ಚಿನ ನಾಯಕ: ಶಾರುಖ್ ಖಾನ್ , ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಅಮಿರ್ ಖಾನ್, ಇತ್ಯಾದಿ.

ನೆಚ್ಚಿನ ನಾಯಕಿ

ಬದಲಾಯಿಸಿ

ಕರೀನಾ ಕಪೂರ್, ದೀಪಿಕಾ ಪಡುಕೋಣೆ, ಸೋನಂ ಕಪೂರ್, ಪ್ರಿಯಾಂಕಾ ಚೋಪ್ರಾ , ತಾಪಸೀ ಪನ್ನು ಇತ್ಯಾದಿ.

ಇಷ್ಟವಾದ ಸಿನಿಮಾ

ಬದಲಾಯಿಸಿ

ಬಂಗಾರದ ಮನುಷ್ಯ, ರಾಜಕುಮಾರ, ಕವಿರತ್ನ ಕಾಳಿದಾಸ, ಮಯೂರ,ದಂಗಾಲ್, ಲಗಾನ್, ಓಂ ಶಾಂತಿ ಓಂ, ರೈಸ್ , ಬಾಜಿರಾವ್ ಮಸ್ತಾನಿ, ಸುಲ್ತಾನ್, ಭಜರಂಗಿ ಭಾಯಿಜಾನ್

ಇತ್ಯಾದಿ

ಬದಲಾಯಿಸಿ

ಹೀಗಿಯೇ ಜೀವನದಲ್ಲಿ ಏನಾದ್ರು ಒಂದು ಒಳ್ಳೆಯದನ್ನು ಸಾಧಿಸಿ , ಪೂರ್ತಿ ಜೀವನವನ್ನು ದೇವರಿಗೆ  ಮುಡಿಪಾಯವಾಗಿ ಇಟ್ಟಿ, ಅವನು ಕೊಟ್ಟ ಈ ಅತಿ ಅಮೂಲ್ಯ ಜೀವನವನ್ನು ಹಾಳುಮಾಡದಂತೆ ತನ್ನ ಗುರಿಯನ್ನು 'ಏನೇ ಬರಲಿ ಛಲವಿರಲಿ' ಎಂದಂತೆ ಸಾಧಿಸಿ, ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ, ಸಮಗ್ರತೆಯಿಂದ, ಸತ್ಯವಂತಳಾಗಿ ಉತ್ಸಾಹದಿಂದ ದೇಶದ ಪ್ರಗತಿಪರ ದುಡಿದು ತನ್ನ ಜೀವನವನ್ನು ಸಾರ್ಥಕಪಡಿಸಿಕೊಳ್ಳುತೇನೆ .