ದೀಪಿಕಾ ಪಡುಕೋಣೆ (ನಟಿ)
ದೀಪಿಕಾ ಪಡುಕೋಣೆ (ಜನನ, ಜನವರಿ 5, 1986) ಮೊದಲು ಭಾರತೀಯ ಮೂಲದ ರೂಪದರ್ಶಿಯಾಗಿದ್ದು ಈಗ ಬಾಲಿವುಡ್ ಚಲನಚಿತ್ರಗಳಲ್ಲಿ ಅಭಿನೇತ್ರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
- ಭೂಮಿಕೆ= ಸೀರೆಯುದುಗೆಯಲ್ಲಿ
- ವೃತ್ತಿ = ರೂಪದರ್ಶಿ, ನಟಿ
- ರಾಷ್ಟ್ರೀಯತೆ = ಭಾರತೀಯ
- ಜನ್ಮ ಸ್ಥಳ = ಡೆನ್ಮಾರ್ಕ್‌ನ ಕೊಪೆನ್‌ಹೆಗನ್,
- ಜನನ ದಿನಾಂಕ = ಜನನ ಜನವರಿ ೫, ೧೯೮೬) (ವಯಸ್ಸು 3೦)
- ವೃತ್ತಿಯ ಆರಂಭ = 2004 ರಿಂದ
- ಬಂಧುಗಳು = ತಂದೆ ಪ್ರಕಾಶ್ ಪಡುಕೋಣೆ; ತಾಯಿ, ಉಜ್ಜಲಾ.ತಂಗಿ-ಅನೀಶಾ
- 2007:ಸ್ಟಾರ್‌ನ ಎಲ್ಲರ ಮೆಚ್ಚುಗೆಯ, ಎಲ್ಲರ ಮೆಚ್ಚುಗೆಯ ಹೊಸ ನಾಯಕಿ ; ಓಂ ಶಾಂತಿ ಓಂ.
- 2008: ಮಧ್ಯ ಯುರೋಪಿಯನ್ ವಾರ್ಷಿಕ ಬಾಲಿವುಡ್ ಪ್ರಶಸ್ತಿ, ಹೊಸ ಸಾಧನೆಯ ಪಾತ್ರ (ಮಹಿಳೆ) ; ಓಂ ಶಾಂತಿ ಓಂ
ಆರಂಭಿಕ ಜೀವನ ಮತ್ತು ಹಿನ್ನೆಲೆ
ಬದಲಾಯಿಸಿಪಡುಕೋಣೆ ಅವರು ಜನವರಿ ೫, ೧೯೮೬ರಲ್ಲಿ ಡೆನ್ಮಾರ್ಕ್‌ನ ಕೊಪೆನ್‌ಹೆಗನ್‌ನಲ್ಲಿ ಜನಿಸಿದರು. ಅವರು ಹನ್ನೊಂದು ತಿಂಗಳ ಮಗುವಾಗಿದ್ದಾಗ ಅವರ ಕುಟುಂಬದವರು ಭಾರತದ ಬೆಂಗಳೂರಿಗೆ ತಮ್ಮ ವಾಸವನ್ನು ಬದಲಿಸಿದರು.[೧] ಮಂಗಳೂರು ಮೂಲದವರಾಗಿರುವ ಪಡುಕೋಣೆಯವರ ಮಾತೃಭಾಷೆ ಕೊಂಕಣಿ ಆಗಿದೆ. ಅವರು ಚಿತ್ರಾಪುರ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, ಅವರ ಪೂರ್ವಜರು ಭಾರತದ ಕರ್ನಾಟಕ ರಾಜ್ಯದಲ್ಲಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪಡುಕೋಣೆ ಊರಿನಿಂದ ಬಂದವರಾಗಿದ್ದಾರೆ[೨].ಇವರ ತಂದೆ ಪ್ರಕಾಶ್ ಪಡುಕೋಣೆ ಅಂತರಾಷ್ಟ್ರೀಯ ಖ್ಯಾತಿಯ ಬ್ಯಾಡ್‌ಮಿಟನ್ ಆಟಗಾರರಾಗಿದ್ದು ಈಗ ನಿವೃತ್ತರಾಗಿದ್ದಾರೆ. ತಾಯಿ ಟ್ರಾವೆಲ್ ಎಜೆಂಟ್ ಆಗಿದ್ದಾರೆ. ಪಡುಕೋಣೆ ಅವರಿಗೆ ೧೯೯೧ರಲ್ಲಿ ಜನಿಸಿರುವ ಅನಿಶಾ ಎಂಬ ತಂಗಿಯಿದ್ದಾಳೆ.[೩]
ಪಡುಕೋಣೆ ಅವರು ಬೆಂಗಳೂರಿನ ಸೋಫಿಯಾ ಹೈಸ್ಕೂಲ್‌ನ ವಿದ್ಯಾರ್ಥಿನಿ. ಅವರು ಬೆಂಗಳೂರಿನ ಮೌಂಟ್‌ಕಾರ್ಮೆಲ್ ಕಾಲೇಜ್‌ನಲ್ಲಿ ತಮ್ಮ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದರು.[೪] ಹೈಸ್ಕೂಲ್ ಶಿಕ್ಷಣದ ಸಂದರ್ಭದಲ್ಲಿ ಅವರು ಬ್ಯಾಡ್‌ಮಿಟನ್ ಕ್ರೀಡೆಯಲ್ಲಿ ರಾಜ್ಯಮಟ್ಟದ ಆಟಗಾರ್ತಿಯಾಗಿದ್ದರು.[೫] ಆದರೆ ಅವರು ಬ್ಯಾಡ್‌ಮಿಟನ್ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೆ ತಾವು ಕುಳಿತುಕೊಳ್ಳುತ್ತಿರುವ ಐಸಿಎಸ್‌ಸಿ ಪರೀಕ್ಷೆಯ ತಯಾರಿಗೆ ಹೆಚ್ಚಿನ ಒತ್ತು ನೀಡಿದರು.[೬]
ವೃತ್ತಿ
ಬದಲಾಯಿಸಿಮಾಡೆಲಿಂಗ್
ಬದಲಾಯಿಸಿಪಡುಕೋಣೆ ಅವರು ಕಾಲೇಜ್ ಶಿಕ್ಷಣದಲ್ಲಿದ್ದಾಗ ಮಾಡೆಲಿಂಗ್ ವೃತ್ತಿಯನ್ನು ಆಯ್ದುಕೊಂಡರು.[೭] ಮಾಡೆಲಿಂಗ್ ಅನ್ನು ವೃತ್ತಿಯಾಗಿ ಸ್ವೀಕರಿಸಿದ ನಂತರ ಅವರು ಭಾರತದ ಹಲವಾರು ಬ್ರಾಂಡ್‌ಗಳಿಗೆ ರೂಪದರ್ಶಿಯಾಗಿ ಕಾರ್ಯನಿರ್ವಹಿಸಿದರು. ಅವುಗಳಲ್ಲಿ ಪ್ರಮುಖವಾಗಿ ಲಿರಿಲ್, ಡಾಬರ್ ಲಾಲ್ ಪೌಡರ್, ಕ್ಲೋಸ್ ಅಪ್ ಟೂಥ್‌ಪೇಸ್ಟ್ ಮತ್ತು ಲಿಮ್ಕಾ ಮುಖ್ಯವಾದವು. ಅಲ್ಲದೆ ಅವರು ಜ್ಯೂವೆಲ್ಸ್ ಆಫ್ ಇಂಡಿಯಾ ರಿಟೇಲ್ ಎಂಬ ಆಭರಣ ಪ್ರದರ್ಶನಕ್ಕೆ "ರಾಯಭಾರಿ"ಯಾಗಿದ್ದಾರೆ.[೮] ಸೌಂಧರ್ಯವರ್ಧಕಗಳ ಕಂಪೆನಿಯಾಗಿರುವ ಮೆಬಿಲ್ಲೈನ್ ಪಡುಕೋಣೆಯವರನ್ನು ಅಂತರಾಷ್ಟ್ರೀಯ ವಕ್ತಾರರನ್ನಾಗಿ ನೇಮಕ ಮಾಡಿದೆ.[೯]
ಕಿಂಗ್‌ಫಿಷರ್‌ನ ಐದನೇ ವಾರ್ಷಿಕ ಫ್ಯಾಷನ್ ಪ್ರಶಸ್ತಿಯಲ್ಲಿ ಇವರಿಗೆ "ವರ್ಷದ ರೂಪದರ್ಶಿ" ಪ್ರಶಸ್ತಿಯನ್ನು ನೀಡಲಾಗಿದೆ.[೧೦] ಇದಾದ ಕೆಲವೇ ದಿನಗಳ ನಂತರ ಅವರು 2006ನೇ ವರ್ಷದ ಕಿಂಗ್‌ಫಿಷರ್ ಈಜುಡುಗೆ ಕ್ಯಾಲೆಂಡ್‌ರ್‌ಗೆ ರೂಪದರ್ಶಿಗಳಲ್ಲೊಬ್ಬರಾಗಿ ಕಾರ್ಯನಿರ್ವಹಿಸಿ ಐಡಿಯಾ ಝೀ ಫ್ಯಾಷನ್ ಪ್ರಶಸ್ತಿಯಲ್ಲಿ "ವರ್ಷದ ಮಹಿಳಾ ರೂಪದರ್ಶಿ (ಜಾಹೀರಾತು ವಿಭಾಗ)" ಹಾಗೂ ವರ್ಷದ ಹೊಸಮುಖ" ಎಂಬ ಎರಡು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.[೧೧][೧೨] ಪಡುಕೋಣೆ ಅವರು ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಹಾಗೂ ನಂತರದಲ್ಲಿ ಲೆವಿ ಸ್ಟ್ರಾಟಸ್ ಮತ್ತು ಟಿಸ್ಸಾಟ್ ಎಸ್‌ಎ ಉತ್ಪನ್ನಗಳಿಗೆ ರಾಯಭಾರಿಯಾಗಿ ಆಯ್ಕೆಯಾದರು.[೧೩]
ನಟನೆ
ಬದಲಾಯಿಸಿಮಾಡೆಲಿಂಗ್ ಕ್ಷೇತ್ರದಲ್ಲಿ ಯಶಸ್ಸು ಗಳಿಸಿದ ಪಡುಕೋಣೆ, ನಂತರ ತಮ್ಮ ಕಾರ್ಯಕ್ಷೇತ್ರವನ್ನು ನಟನೆಗೆ ವಿಸ್ತರಿಸಿಕೊಂಡರು. ಅವರು ಹಿಮೇಶ್ ರೇಶಮಿಯಾ ಅವರ ಸ್ವತಂತ್ರ ವಿಡಿಯೋ ಪಾಪ್ ಆಲ್ಬಮ್ ಆಪ್ ಕಾ ಸುರೂರ್ ಮ್ಯೂಸಿಕ್ ವಿಡಿಯೋದಲ್ಲಿ ನಾಮ್ ಹೈ ತೇರಾ ಎಂಬ ಹಾಡಿಗೆ ಮೊಟ್ಟಮೊದಲು ನಟಿಯಾಗಿ ಕಾಣಿಸಿಕೊಂಡರು.
ಪಡುಕೋಣೆ ಅವರು 2006ರಲ್ಲಿ ಕನ್ನಡ ಸಿನೆಮಾ ’ಐಶ್ವರ್ಯ ’ದಲ್ಲಿ ಮೊಟ್ಟಮೊದಲು ನಾಯಕಿಯಾಗಿ ಉಪೇಂದ್ರ ಜೊತೆ ಪೂರ್ಣ ಪ್ರಮಾಣದಲ್ಲಿ ಚಲನಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ಅವರು 2007ರಲ್ಲಿ ಫ್ಹರಾ ಖಾನ್ ನಿರ್ದೇಶನದ ಅಂತರಾಷ್ಟ್ರೀಯ ಖ್ಯಾತಿ ಗಳಿಸಿದ ಬಾಲಿವುಡ್ ಚಲನಚಿತ್ರ ’ಓಂ ಶಾಂತಿ ಓಂ’ ನಲ್ಲಿ ಪ್ರಪ್ರಥಮವಾಗಿ ಶಾರುಖ್ ಖಾನ್ ಜೊತೆ ನಟಿಸಿದರು.[೧೪][೧೫] ಈ ಚಲನಚಿತ್ರದಲ್ಲಿ ಪಡುಕೋಣೆಯವರು ಮೊದಲರ್ಧದಲ್ಲಿ 1970ರಲ್ಲಿಯ ನಟಿ ಶಾಂತಿಪ್ರಿಯಾಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ನಂತರದಲ್ಲಿ ಶಾಂತಿಪ್ರಿಯಾಳಂತೆ ಕಾಣುವ ಯುವತಿ ಸಂಧ್ಯಾ ಅಲಿಯಾಸ್ ಸ್ಯಾಂಡಿಯಾಗಿ ಕಾಣಿಸಿಕೊಳ್ಳುತ್ತಾರೆ. ಈ ಚಲನಚಿತ್ರದಲ್ಲಿ ಪಡುಕೋಣೆಯವರ ನಟನೆಯು ವಿಮರ್ಶಕರಿಂದ ಉತ್ತಮ ಮೆಚ್ಚುಗೆಯನ್ನು ಪಡೆಯಿತು. ಅಷ್ಟೇ ಅಲ್ಲದೆ ಈ ಸಿನೆಮಾದ ನಟನೆ ಅವರಿಗೆ ಫಿಲ್ಮ್‌ಫೇರ್ ಶ್ರೇಷ್ಠ ಹೊಸನಟಿ ಪ್ರಶಸ್ತಿಯನ್ನೂ ಹಾಗೂ ಫಿಲ್ಮ್‌ಫೇರ್ ಶ್ರೇಷ್ಠ ನಟಿ ಪ್ರಶಸ್ತಿಗೆ ಅವರನ್ನು ನಾಮನಿರ್ದೇಶಿತರನ್ನಾಗಿ ಮಾಡುವಲ್ಲಿ ಸಫಲವಾಯಿತು. ಇಂಡಿಯಾ ಎಫ್ಎಂ ನ ತರಣ್ ಆದರ್ಶ್ ಹೇಳುವಂತೆ "ದೀಪಿಕಾ ಅವರು ಟಾಪ್ ಸ್ಟಾರ್ ಆಗಲು ಬೇಕಾದ ವ್ಯಕ್ತಿತ್ವ, ನೋಟ, ಕಣ್ಣು ಮತ್ತು ಅಗತ್ಯವಾದ ಪ್ರತಿಭೆ ಎಲ್ಲವನ್ನೂ ಹೊಂದಿದ್ದಾರೆ. ಶಾರುಖ್ ಖಾನ್ ಜೊತೆ ನಟಿಸಿ ಅವರಿಗಿಂತ ಒಂದು ಕೈ ಹೆಚ್ಚೇ ಎನಿಸಿಕೊಳ್ಳುವುದು ಸಾಮಾನ್ಯದ ಮಾತಲ್ಲ. ಅವರು ತಂಗಾಳಿಯ ಅಲೆಯಂತೆ ಬಂದು ತಮ್ಮ ಪ್ರತಿಭೆಯನ್ನು ಸಾಭೀತು ಪಡಿಸಿದ್ದಾರೆ !"[೧೬]
ಪಡುಕೋಣೆ ಅವರು ಓಂ ಶಾಂತಿ ಓಂ ಚಲನಚಿತ್ರದ ನಂತರ ಸಿದ್ದಾರ್ಥ್ ಆನಂದ್ ಅವರ ಬಚ್ನಾ ಏ ಹಸೀನೊ (2008) ಚಿತ್ರದಲ್ಲಿ ರಣ್‌ಬೀರ್ ಕಪೂರ್ ಅವರ ಜೊತೆ ನಟಿಸಿದರು. ನಂತರ ಜನವರಿ 16, 2009ರಲ್ಲಿ ಬಿಡುಗಡೆಯಾದ ವಾರ್ನರ್ ಬ್ರದರ್ಸ್ ಮತ್ತು ರೋಹನ್ ಸಿಪ್ಪಿ ನಿರ್ಮಾಣದ ಚಾಂದನಿ ಚೌಕ್ ಟು ಚೈನಾ ಚಿತ್ರದಲ್ಲಿ ನಟಿಸಿದರು. ಸೈಫ್ ಅಲಿ ಖಾನ್ ಜೊತೆಯಾಗಿ ಇತ್ತೀಚೆಗೆ ಇಮ್ತಿಯಾಜ್ ಅಲಿ ನಿರ್ದೇಶನದಲ್ಲಿ ಲವ್ ಆಜ್ ಕಲ್ (2009) ಸಿನೆಮಾದಲ್ಲಿ ನಟಿಸಿದ್ದಾರೆ.
ವೈಯುಕ್ತಿಕ ಜೀವನ
ಬದಲಾಯಿಸಿಕಲಾವಿದರಾದ ರಿಶಿ ಕಪೂರ್ ಮತ್ತು ನೀತು ಸಿಂಗ್[೧೭] ಅವರ ಮಗನಾದ ಹಾಗೂ ಸಹ ನಟನಾದ ರಣಬೀರ್ ಕಪೂರ್ ಜೊತೆ ಪಡುಕೋಣೆ ಡೇಟಿಂಗ್ ನಡೆಸಿದ್ದರು. ಆದರೆ ಆ ಸಂಬಂಧ ಬಹುಬೇಗ ಹಳಸಿತು.
ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
ಬದಲಾಯಿಸಿಫಿಲ್ಮ್ಫೇರ್ ಪ್ರಶಸ್ತಿಗಳು
ಬದಲಾಯಿಸಿವಿಜೇತರು
- 2008: ಶ್ರೇಷ್ಠ ಹೊಸ ನಟಿ ಪ್ರಶಸ್ತಿ; ಓಂ ಶಾಂತಿ ಓಂ [೧೮]
- 2008: ಸೋನಿ ಹೆಡ್ ಅಂಡ್ ಶೋಲ್ಡರ್ಸ್ ವರ್ಷದ ಹೊಸಮುಖ ಪ್ರಶಸ್ತಿ ; ಓಂ ಶಾಂತಿ ಓಂ [೧೮]
ನಾಮನಿರ್ದೇಶಿತ
- 2008: ಶ್ರೇಷ್ಠನಟಿ ಫಿಲ್ಮ್‌ಫೇರ್ ಪ್ರಶಸ್ತಿ ; ಓಂ ಶಾಂತಿ ಓಂ [೧೯]
ಸ್ಟಾರ್ ಸ್ಕ್ರೀನ್ ಪ್ರಶಸ್ತಿ
ಬದಲಾಯಿಸಿವಿಜೇತರು
- 2008: ಭರವಸೆಯ ಹೊಸಮುಖ-ಮಹಿಳೆಗಾಗಿನ ಸ್ಟಾರ್‌ಡಸ್ಟ್ ಪ್ರಶಸ್ತಿ; ಓಂ ಶಾಂತಿ ಓಂ [೨೦]
- 2008: ಶಾರುಖ್ ಖಾನ್ ಜೊತೆಗೆ ಸ್ಟಾರ್ ಸ್ಕ್ರೀನ್ ಜೋಡಿ ನಂ.1 ಪ್ರಶಸ್ತಿ ; ಓಂ ಶಾಂತಿ ಓಂ [೨೦]
ಝೀ ಸಿನೆ ಪ್ರಶಸ್ತಿ
ಬದಲಾಯಿಸಿವಿಜೇತರು
- 2008: ಝೀ ಸಿನೆ ಅವಾರ್ಡ್ ಶ್ರೇಷ್ಠ ಹೊಸ ನಟಿ; ಓಂ ಶಾಂತಿ ಓಂ [೨೧]
ನಾಮನಿರ್ದೇಶಿತ
- 2008: ಝೀ ಸಿನೆ ಅವಾರ್ಡ್ ಶ್ರೇಷ್ಠನಟಿ; ಓಂ ಶಾಂತಿ ಓಂ [೨೨]
ಐಐಎಫ್‌ಎ ಪ್ರಶಸ್ತಿ
ಬದಲಾಯಿಸಿವಿಜೇತರು
- 2008: ಐಐಎಫ್‌ಎ ಯ ಅತ್ಯುತ್ತಮ ಹೊಸನಟಿ (ಮಹಿಳೆ) ಪ್ರಶಸ್ತಿ; ಓಂ ಶಾಂತಿ ಓಂ [೨೩]
ನಾಮನಿರ್ದೇಶಿತ
- 2008: ಐಐಎಫ್‌ಎ ಶ್ರೇಷ್ಠನಟಿ ಪ್ರಶಸ್ತಿ; ಓಂ ಶಾಂತಿ ಓಂ [೨೪]
ಸ್ಟಾರ್‌ಡಸ್ಟ್ ಪ್ರಶಸ್ತಿ
ಬದಲಾಯಿಸಿನಾಮನಿರ್ದೇಶಿತ
- 2008: ಸ್ಟಾರ್‌ಡಸ್ಟ್ ಭವಿಷ್ಯದ ಸೂಪರ್‌ಸ್ಟಾರ್ - ಮಹಿಳೆ; ಓಂ ಶಾಂತಿ ಓಂ [೨೫]
ಅಪ್ಸರಾ ಚಲನಚಿತ್ರ ಮತ್ತು ಕಿರುತೆರೆ ನಿರ್ಮಾಪಕರ ಸಂಘದ ಪ್ರಶಸ್ತಿ
ಬದಲಾಯಿಸಿವಿಜೇತರು
- 2008: ಅಪ್ಸರಾ ಚಲನಚಿತ್ರ ಮತ್ತು ಕಿರುತೆರೆ ನಿರ್ಮಾಪಕರ ಸಂಘದ ಪ್ರಶಸ್ತಿ ಶ್ರೇಷ್ಠ ಹೊಸಮುಖ ; ಓಂ ಶಾಂತಿ ಓಂ [೨೬]
ಏಷ್ಯಾ ಚಲನಚಿತ್ರ ಪ್ರಶಸ್ತಿ
ಬದಲಾಯಿಸಿನಾಮನಿರ್ದೇಶಿತ
- 2008: ಏಷ್ಯಾ ಚಲನಚಿತ್ರ ಪ್ರಶಸ್ತಿಶ್ರೇಷ್ಠ ನಟಿ; ಓಂ ಶಾಂತಿ ಓಂ
- 2009: ಏಷ್ಯಾ ಚಲನಚಿತ್ರ ಪ್ರಶಸ್ತಿ ಶ್ರೇಷ್ಠ ನಟಿ; ಚಾಂದನಿ ಚೌಕ್ ಟು ಚೈನಾ
ಇತರೇ ಪ್ರಶಸ್ತಿಗಳು
ಬದಲಾಯಿಸಿ- 2007:ಸ್ಟಾರ್‌ನ ಎಲ್ಲರ ಮೆಚ್ಚುಗೆಯ, ಎಲ್ಲರ ಮೆಚ್ಚುಗೆಯ ಹೊಸ ನಾಯಕಿ ; ಓಂ ಶಾಂತಿ ಓಂ [೨೭]
- 2007: ಎಚ್‌ಟಿ ಕೆಫೆ ಚಲನಚಿತ್ರ ಪ್ರಶಸ್ತಿ, ಶ್ರೇಷ್ಠ ಹೊಸಮುಖ ಪ್ರಶಸ್ತಿ(ಮಹಿಳೆ) ; ಓಂ ಶಾಂತಿ ಓಂ [೨೮]
- 2008: ರಿಬಾಕ್ ಝೂಮ್ ಗ್ಲಾಮ್ ಪ್ರಶಸ್ತಿ, ಹೊಸ ಗ್ಲಾಮರ್ ಪ್ರತಿಭೆ(ಮಹಿಳೆ) ; ಓಂ ಶಾಂತಿ ಓಂ [೨೯]
- 2008: ಮಧ್ಯ ಯುರೋಪಿಯನ್ ವಾರ್ಷಿಕ ಬಾಲಿವುಡ್ ಪ್ರಶಸ್ತಿ, ಹೊಸ ಸಾಧನೆಯ ಪಾತ್ರ (ಮಹಿಳೆ) ; ಓಂ ಶಾಂತಿ ಓಂ [೩೦]
ಚಲನಚಿತ್ರಗಳ ಪಟ್ಟಿ
ಬದಲಾಯಿಸಿವರ್ಷ | ಚಿತ್ರ | ಪಾತ್ರ | ಭಾಷೆ | ಇತರೆ ಟಿಪ್ಪಣಿಗಳು |
---|---|---|---|---|
2006 | ಐಶ್ವರ್ಯಾ | ಐಶ್ವರ್ಯಾ | ಕನ್ನಡ | |
2007 | ಓಂ ಶಾಂತಿ ಓಂ | ಶಾಂತಿಪ್ರಿಯಾ ಮತ್ತು ಸಂಧ್ಯಾ ಅಲಿಯಾಸ್ ಸ್ಯಾಂಡಿ |
ಹಿಂದಿ | ಡಬಲ್-ವಿನ್ನರ್ , ಶ್ರೇಷ್ಠ ಹೊಸ ಕಲಾವಿದೆ ಫಿಲ್ಮ್‌ಫೇರ್ ಪ್ರಶಸ್ತಿ ಮತ್ತು ಸೋನಿ ಹೆಡ್ ಅಂಡ್ ಶೋಲ್ಡರ್‌ನ ವರ್ಷದ ಹೊಸಮುಖ ಆಯ್ಕೆಪಟ್ಟಿಯಲ್ಲಿ, ಫಿಲ್ಮ್‌ಫೇರ್ ಶ್ರೇಷ್ಠ ಕಲಾವಿದೆ |
2008 | ಬಚ್ನಾ ಏ ಹಸೀನೊ | ಗಾಯತ್ರಿ | ಹಿಂದಿ | |
2009 | ಚಾಂದನಿ ಚೌಕ್ ಟು ಚೀನಾ | ಸಾಖಿ(ಶ್ರೀಮತಿ.ಟಿಎಸ್‌ಎಮ್) ಮತ್ತು ಮಿಯಾಂವ್ ಮಿಯಾಂವ್(ಸುಝಿ) |
ಹಿಂದಿ | ದ್ವಿಪಾತ್ರ |
ಬಿಲ್ಲು | ಆಕೆ | ಹಿಂದಿ | ಲವ್ ಮೇರಾ ಹಿಟ್ ಹಿಟ್ ಹಾಡಿನಲ್ಲಿ ವಿಶೇಷ ಪಾತ್ರದಲ್ಲಿ | |
ಲವ್ ಆಜ್ ಕಲ್ | ಮೀರಾ ಪಂಡಿತ್ | ಹಿಂದಿ | ||
ಲವ್ 4 ಎವರ್ | ಆಕೆ | ತೆಲುಗು | (ಐಟಮ್ ನಂಬರ್) ವಿಶೇಷ ಪಾತ್ರದಲ್ಲಿ | |
೨೦೧೦ | ಕಾರ್ತಿಕ್ ಕಾಲಿಂಗ್ ಕಾರ್ತಿಕ್ | ಹಿಂದಿ | [೩೧] | |
ಹೌಸ್‌ಫುಲ್ | ಹಿಂದಿ | [೩೨] |
ವಿವರಗಳಿಗಾಗಿ ನೋಡಿ
ಬದಲಾಯಿಸಿ- ಭಾರತೀಯ ಚಲನಚಿತ್ರ ನಟಿಯರ ಪಟ್ಟಿ
ಟಿಪ್ಪಣಿಗಳು
ಬದಲಾಯಿಸಿ- ↑ "A smashing success". Newindpress.com. Retrieved 2005-06-24.
- ↑ "Padukone village". Daijiworld.com. Archived from the original on 2009-01-16. Retrieved 2008-11-26.
- ↑ "'I'm completely charmed by Ranbir'". ಟೈಮ್ಸ್ ಆಫ್ ಇಂಡಿಯ (Chaturvedi, Vinita). Retrieved 2008-08-29.
- ↑ "entertainment.oneindia.in/celebrities/star-profile/deepika-padukone-profile-040907.html".
- ↑ "Transcript of LIVE CHAT with Model, Deepika Padukone at noon on Thursday, March 3, 2005 in Mumbai". Indiatimes.com. Archived from the original on 2007-12-19. Retrieved 2005-03-03.
- ↑ "Deepika Padukone - Biography". DeepikaPadukone.com. Archived from the original on 2008-04-10. Retrieved 2008-04-12.
- ↑ "Smash hit on the ramp". Indiatimes.
- ↑ "ದೀಪಿಕಾ ಅವರೇ ಆಭರಣವಾಗಿದ್ದಾರೆ". Archived from the original on 2010-04-18. Retrieved 2009-12-16.
- ↑ http://www.screenindia.com/old/fullstory.php?content_id=17776
- ↑ http://www.thetimes.co.za/Entertainment/Article.aspx?id=614845
- ↑ "ವರ್ಷದ ರೂಪದರ್ಶಿ". Archived from the original on 2012-10-04. Retrieved 2009-12-16.
- ↑ "ವರ್ಷದ ಹೊಸಮುಖ". Archived from the original on 2009-04-27. Retrieved 2009-12-16.
- ↑ "Buy Deepika Padukone's pair of jeans". oneindia.com.
- ↑ "Box Office 2007". BoxOffice India.com. Archived from the original on 2012-07-30. Retrieved March 7.
{{cite web}}
: Check date values in:|accessdate=
(help); Unknown parameter|accessyear=
ignored (|access-date=
suggested) (help) - ↑ "Overseas Earnings (Figures in Ind Rs)". BoxOffice India.com. Archived from the original on 2012-05-25. Retrieved March 7.
{{cite web}}
: Check date values in:|accessdate=
(help); Unknown parameter|accessyear=
ignored (|access-date=
suggested) (help) - ↑ Adarsh, Taran (November 7, 2007). "Movie Review: Om Shanti Om". IndiaFM. Retrieved 2007-12-18.
- ↑ Masand, Rajeev (July 12, 2009). "To catch a star: Actors can't be pals, says Deepika". CNN-IBN. Archived from the original on 2009-07-17. Retrieved 2009-08-06.
- ↑ ೧೮.೦ ೧೮.೧ Bollywood Hungama News Network (February 23, 2008). "Winners of 53rd Fair One Filmfare Awards". IndiaFM. Retrieved 2008-02-23.
- ↑ Bollywood Hungama News Network (February 6, 2008). "Nominees - 53rd Annual Filmfare Awards". IndiaFM. Retrieved 2008-02-06.
- ↑ ೨೦.೦ ೨೦.೧ IBNLive.com (January 10, 2008). "Taare... sweeps Screen Awards, but Chak De named best film". CNN-IBN. Archived from the original on 2008-01-15. Retrieved 2008-01-10.
- ↑ Bollywood Hungama News Network (April 27, 2008). "Winners of the Zee Cine Awards 2008". IndiaFM. Archived from the original on 2011-08-14. Retrieved 2008-04-27.
- ↑ Nijjar, Lucky (March 29, 2008). "ZEE Cine Awards nominations list announced". Biz Asia. Archived from the original on 2011-07-16. Retrieved 2008-04-01.
- ↑ "And the award goes to..." IBNLive. June 9, 2008. Archived from the original on 2008-07-01. Retrieved 2008-06-08.
- ↑ Bollywood Hungama News Network (April 16, 2008). "Nominations for the IIFA Awards 2008". IndiaFM. Retrieved 2008-06-08.
- ↑ IndiaFM News Bureau (December 25, 2007). "Nominations for Max Stardust Awards 2008". IndiaFM. Retrieved 2007-12-31.
- ↑ PTI (March 31, 2008). "'Chak De..' has a field day at Producers Guild Awards". ದಿ ಹಿಂದೂ. Archived from the original on 2013-10-23. Retrieved 2008-04-01.
- ↑ Indiantelevision.com Team (December 24, 2007). "SRK is Star Gold's 'Sabsey' favourite hero". Indiantelevision.com. Retrieved 2007-12-24.
- ↑ Kotwani, Hiren (December 30, 2007). "Starry debut for HT Café Film Awards". Hindustan Times. Archived from the original on 2012-06-30. Retrieved 2007-12-31.
- ↑ TNN (January 16, 2008). "Deepika:2008 Glam Debutante". ದಿ ಟೈಮ್ಸ್ ಆಫ್ ಇಂಡಿಯಾ. Retrieved 2008-01-15.
- ↑ IANS (March 11, 2008). "OSO sweeps Central European Awards". Sify. Retrieved 2008-03-11.
- ↑ Jha, Subhash K (May 16, 2009). ""In Kartik Calling Kartik, I'm totally out of character" - Farhan Akhtar". IndiaFM. Retrieved 2009-08-06.
- ↑ Jha, Subhash K (July 31, 2009). ""I'm so much like my character in Love Aaj Kal" - Deepika Padukone". IndiaFM. Retrieved 2009-08-06.