Chandanv89
ಬೇಬಲ್ ಬಳಕೆದಾರರ ಮಾಹಿತಿ | ||||||||
---|---|---|---|---|---|---|---|---|
| ||||||||
ಭಾಷೆಯ ಬಳಕೆದಾರರು |
ನನ್ನ ಹೆಸರು ಚಂದನ್. ಮೂಲತಃ ಕನ್ನಡಿಗ. ಭಾಷೆ ಹಾಗೂ ಅದಕ್ಕೂ ಮಿಗಿಲಾಗಿ, ಲಿಪಿಗಳ ಮೇಲಿನ ಒಲವಿನಿಂದ ಹಾಗೂ ಕಂಪ್ಯೂಟರ್ ನೆರವಿನಿಂದ ಮುಖ್ಯವಾದ ದಕ್ಷಿಣ ಭಾರತೀಯ ಭಾಷೆಗಳಾದ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಓದಲು ಬರೆಯಲು ಕಲಿತೆ.
ಇತ್ತೀಚೆಗೆ ನನ್ನ ಈ ಲಿಪಿಗಳ ಪಟ್ಟಿಗೆ ಸೇರಿದ್ದು, ಉರ್ದು! ಮೊದ ಮೊದಲು ಉರ್ದುವನ್ನು ಕೇವಲ ಕ್ಯಾಲಿಗ್ರಫ಼ಿಗಾಗಿ ಮಾತ್ರ ಕಲಿಯಬೇಕೆಂದಿದ್ದೆ. ಆದರೆ, ಕೆಲ ಅಂಕಣಗಳನ್ನು ಓದುತ್ತಾ ಓದುತ್ತಾ ಹಾಗೂ, ಕನ್ನಡ ಲಿಪಿಗೆ ಯಾವುದೇ ಹೋಲಿಕೆಯಿಲ್ಲದ ಲಿಪಿಯೊಂದನ್ನು ಕಲಿಯಬೇಕೆನ್ನುವ ನನ್ನ ಬಹಳ ದಿನಗಳ ಆಸೆಯಿಂದ, ಉರ್ದು ಕಲಿಯಲು ನಿರ್ಧರಿಸಿದೆ. ನೋಡಲು ಎಷ್ಟು ಕ್ಲಿಷ್ಟ ಎನಿಸುವುದೋ, ಉರ್ದು ಲಿಪಿ ಕಲಿಯಲು ನನಗೆ ತಗುಲಿದ ಸಮಯವು ಅದಕ್ಕೆ ವಿರುದ್ಧವಾಗಿ ಅಷ್ಟೇ ಕಡಿಮೆ!
ಭಾರತೀಯ ಭಾಷೆ/ಲಿಪಿಗಳು ಮಾತ್ರವಲ್ಲದೆ, ಭೌಗೋಳಿಕ ಭಾಷೆಗಳ ಪಟ್ಟಿಯಲ್ಲಿ ಸದ್ಯಕ್ಕೆ ಸ್ಪಾನಿಷ್ ಹಾಗೂ ರಷಿಯನ್ ಲಿಪಿಗಳಿವೆ. ಸ್ಪಾನಿಷ್ ತರಗತಿಗಳ ಮೂಲಕ ಕಲಿತಿದ್ದರಿಂದ, ಬೇರೆ ಭಾಷೆಗಳಿಗೆ ಹೋಲಿಸಿದರೆ, ಈ ಭಾಷೆಯ ಬಗ್ಗೆ ಸ್ವಲ್ಪ ಹೆಚ್ಚೇ ಒಲವು. ಸದ್ಯದ ಪ್ರಯತ್ನ ರಷ್ಯನ್ ಮತ್ತು ಕೊರಿಯನ್ ಲಿಪಿಗಳನ್ನು ಬಿಡುವಿನ ಸಮಯದಲ್ಲಿ ಕಲಿಯುವುದಾಗಿದೆ...
ಚಂದನ್ ವೀರಭದ್ರಪ್ಪ | Chandan Veerabhadrappa | चन्दन वीरभद्रप्पा | చందన్ వీరభద్రప్ప | சந்தன் வீரபத்திரப்பா | ചന്ദൻ വീരഭദ്രപ്പ | چندن ویربھدرپہ
Twitter | Wordpress | Medium | 500px
ಹೊಸ ವಿಕಿ ಲೇಖನಗಳು
ಕೆಳಗಿನ ಬಹುತೇಕ ಲೇಖನಗಳು ಇತರ ಭಾಷೆಗಳ ಲೇಖನಗಳಿಂದ ತರ್ಜುಮೆಗೊಂಡಂಥಹವು.
ಶೈಕ್ಷಣಿಕ/ಐತಿಹಾಸಿಕ/ಸಂಶೋಧನಾತ್ಮಕ
ಸಿನಿಮಾ/ಟಿವಿ
ಅಂಕಿ-ಅಂಶಗಳು
ತಂತ್ರಜ್ಞಾನ
ಜಾಗತಿಕ/ಭೌಗೋಳಿಕ
ಹೊಸ ಲೇಖನ
ಪ್ರಗತಿಯಲ್ಲಿದೆ.