ಖಲೀದ್ ಮಸೂದ್ ಅಲಿಯಾಸ್ ಖಲೀದ್ ಚೌಧರಿಯನ್ನು ೨೦೧೭ರ ಲಂಡನ್ನಿನ ವೆಸ್ಟ್ಮಿನ್ಸ್ಟರ್ ಮೇಲಿನ ಮಾರಣಾಂತಿಕ ದಾಳಿಯ ಏಕೈಕ ದೋಷಿಯೆಂದು ಗುರುತಿಸಲಾಗಿದೆ. ಈ ದಾಳಿಯ ಸಂದರ್ಭದಲ್ಲಿ ಈತನು ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.[]

ಖಲೀದ್ ಮಸೂದ್
ಜನನ೨೫ ಡಿಸೆಂಬರ್ ೧೯೬೪
ಕೆಂಟ್, ಇಂಗ್ಲೆಂಡ್
ಮರಣ (aged 52)
ಲಂಡನ್, ಇಂಗ್ಲೆಂಡ್
Alias(es)ಖಲೀದ್ ಮಸೂದ್
Conviction(s)ಕ್ರಿಮಿನಲ್ ಹಾನಿ (೧೯೮೩)

ಚಾಕು ಒಡೆತನ (೨೦೦೩)

ಇತರೆ ಹಲ್ಲೆಗಳು, ಗಂಭೀರ ದೈಹಿಕ ಹಾನಿ, ಸಾರ್ವಜನಿಕ ಅಪರಾಧಗಳು
ಮಕ್ಕಳುuಒಂದು ಅಥವಾ ಮೂರು[]

ಹಿನ್ನೆಲೆ

ಬದಲಾಯಿಸಿ

ದೇಶದ ದೇಶೀಯ ಗುಪ್ತಚರ ಸಂಸ್ಥೆಯಾದ MI5 ನಡೆಸಿರುವ ಪ್ರಾಥಮಿಕ ತನಿಖೆಗಳ[] ಮೂಲಕ ಈತನು ಹಿಂದೊಮ್ಮೆ ಹಿಂಸಾತ್ಮಕ ಉಗ್ರಗಾಮಿತ್ವವನ್ನು ಹೊಂದಿದ್ದ[] ಎನ್ನುವ ಅಂಶವು ಬೆಳಕಿಗೆ ಬಂದಿದೆ. ಹಲವಾರು ಪತ್ರಿಕಾವರದಿಗಳು ಸೂಚಿಸುವಂತೆ ಈತನು ಇನ್ನೂ ಹಲವಾರು ಹೆಸರುಗಳಿಂದ ಕರೆಯಲ್ಪಟ್ಟಿದ್ದಿರಬಹುದು.[]

ಮಸೂದ್ ಎಸಗಿದ್ದ ಹಲವಾರು ಕ್ರಿಮಿನಲ್ ಆರೋಪಗಳಿಂದಾಗಿ ಪೊಲೀಸರಿಗೆ ಈ ಮೊದಲೇ ಪರಿಚಿತನಾಗಿದ್ದನು. ಹಳೆಯ ಕ್ರಿಮಿನಲ್ ಆರೋಪವೆಂದರೆ ೧೯೮೩ರ ಕ್ರಿಮಿನಲ್ ಹಾನಿ ಹಾಗೂ ಇತ್ತೀಚಿನ ಆರೋಪವೆಂದರೆ ಡಿಸೆಂಬರ್ ೨೦೦೩ರಲ್ಲಿ ಅನಧಿಕೃತ ಚಾಕುವಿನ ಒಡೆತನವಾಗಿವೆ.[] ಅವುಗಳೊಂದಿಗೆ, ಹಲ್ಲೆಗಳಿಗೆ ಸಂಬಂಧಿಸಿದ ಆರೋಪಗಳು, ಗಂಭೀರ ದೈಹಿಕ ಹಾನಿ ಮತ್ತು ಇತರ ಸಾರ್ವಜನಿಕ ಅಪರಾಧಗಳ ಮೇಲಿನ ಆರೋಪಗಳೂ ಸೇರಿವೆ.[]

ವೈಯಕ್ತಿಕ ಜೀವನ

ಬದಲಾಯಿಸಿ

ಮಸೂದ್ ಡಿಸೆಂಬರ್ ೨೫, ೧೯೬೪ರಲ್ಲಿ ಇಂಗ್ಲೆಡಿನ ಕೆಂಟ್‍ನಲ್ಲಿ ಜನಿಸಿದ. ಈತನ ಹುಟ್ಟುಹೆಸರು ಇನ್ನೂ ತಿಳಿದಿಲ್ಲದೇ ಇರಬಹುದೆದು ಪೊಲೀಸರು ಶಂಕಿಸಿದ್ದಾರೆ.[]

ಮಸೂದ್ ಒಬ್ಬ ಪರಿವರ್ತಿತ ಮುಸಲ್ಮಾನನಾಗಿದ್ದ. ಈತನಿಗೆ ಮದುವೆಯಾಗಿದ್ದು[] ಒಂದು ಅಥವಾ ಮೂರು ಮಕ್ಕಳ ತಂದೆಯಾಗಿದ್ದ[೧೦]. ಈತನಿಗೆ ದೇಹದಾರ್ಢ್ಯದಲ್ಲಿ ಆಸಕ್ತಿಯಿತ್ತೆಂದೂ[೧೧][೧೨][೧೩], ವಿನ್‍ಸನ್‍ ಗ್ರೀನ್‍ನ ಹೇಗ್ಲಿ ರಸ್ತೆಯ ರೆಸ್ಟೋರೆಂಟೊಂದರ ಮೇಲೆ ವಾಸವಿದ್ದನೆಂದೂ, ಸಾಮಾನ್ಯವಾಗಿ ಸಾಂಪ್ರದಾಯಿಕ ಇಸ್ಲಾಂ ಬಿಳಿ ನಿಲುವಂಗಿಯನ್ನು ಧರಿಸುತ್ತಿದ್ದನೆಂದೂ ತಿಳಿದುಬಂದಿದೆ. ಹಿಂದಿನ ನೆರೆಹೊರೆಯವರ ಪ್ರಕಾರ ಮಸೂದ್ "ತನ್ನ ತೋಟದ ಆರೈಕೆ ಮಾಡಲಿಚ್ಛಿಸುವ ಯಾವುದೇ ಸಾಮಾನ್ಯ ಕೌಟುಂಬಿಕ ವ್ಯಕ್ತಿಯಂತೆ ಕಾಣುತ್ತಿದ್ದ[೧೪]" ಎಂದೂ, "ಸಂಜೆಯಾದ ಬಳಿಕ ವಿರಳವಾಗಿ ಹೊರನಡೆಯುತ್ತಿದ್ದ" ಎಂದು, ಮತ್ತು "ಮಸೂದ್ ತನ್ನ ಮಕ್ಕಳನ್ನು ಶಾಲೆಗೆ ನಡೆದೇ ಕರೆದುಕೊಂಡು ಹೋಗುತ್ತಿದ್ದ" ಎಂದೂ ತಿಳಿದುಬಂದಿದೆ.

ಉಲ್ಲೇಖಗಳು

ಬದಲಾಯಿಸಿ
  1. "London terror attack: Killer identified as 52-year-old Khalid Masood".
  2. "Khalid Masood named by London police as man behind terror attack".
  3. "London attack: 8 arrests as police probe attacker's links". Archived from the original on 2017-05-16. Retrieved 2017-03-23.
  4. "London Attacker Identified as Khalid Masood".
  5. "U.K. attacker ID'd as Khalid Masood, British-born man once investigated for 'violent extremism'".
  6. "London attack: Terrorist named as Khalid Masood by police".
  7. "London attack: Khalid Masood named as perpetrator".
  8. "Khalid Masood: London attacker was known to MI5 but had no terror convictions".
  9. "Everything we know about Khalid Masood, the London attacker".
  10. "Birmingham neighbour: Khalid Masood seemed calm and reserved".
  11. "London attack: 75-year-old man dies in hospital becoming fourth victim of terror outrage – as police name attacker as British-born Khalid Masood".
  12. "Who was London terror attacker Khalid Masood?".
  13. "Live: Kent-born man, 52, named as Westminster attacker".
  14. "Khalid Masood Identified as London Parliament Attacker".