೨೦೧೭ರ ವೆಸ್ಟ್ಮಿನ್ಸ್ಟರ್ ಮೇಲಿನ ದಾಳಿ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
- ನೋಡಿ:ಭಯೋತ್ಪಾದನೆ
೨೦೧೭ರ ಮಾರ್ಚ್ ೨೨ರಂದು ಇಂಗ್ಲೆಂಡ್‍ನ ವೆಸ್ಟ್‍ಮಿನ್ಸ್ಟರ್ ಸೇತುವೆಯ ಬಳಿ ಶುರುವಾದ ಭಯೋತ್ಪಾದಕ ದಾಳಿ, ನಂತರದಲ್ಲಿ ಪಾರ್ಲಿಮೆಂಟ್ ಚೌಕ ಹಾಗೂ ವೆಸ್ಟ್‍ಮಿನ್ಸ್ಟರ್ ಅರಮನೆಗಳ ಬಳಿಯೂ ನಡೆಯಿತು. ೫೨ ವರ್ಷದ ಬ್ರಿಟನ್ ಪ್ರಜೆಯಾದ ಖಲೀದ್ ಮಸೂದ್‍ನನ್ನು ಈ ಕೃತ್ಯದ ಏಕೈಕ ಆರೋಪಿಯೆಂದು ಗುರುತಿಸಲಾಗಿದ್ದು, ವೆಸ್ಟ್‍ಮಿನ್ಸ್ಟರ್ ಸೇತುವೆಯ ಪಾದಾಚಾರಿ ಮಾರ್ಗದಲ್ಲಿ ಈತ ಚಲಾಯಿಸಿದ ಕಾರಿನಿಂದ ೫೦ಕ್ಕೂ ಹೆಚ್ಚು ಮಂದಿ ಗಾಯಗೊಂಡರಲ್ಲದೆ, ಮೂರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ತರುವಾತ ಅರಮನೆಯ ಮೈದಾನದ ಬಳಿ ನಿಶ್ಶಸ್ತ್ರ ಪೊಲೀಸ್ ಅಧಿಕಾರಿಯೊಬ್ಬರನ್ನು ಮಾರಾಣಾಂತಿಕವಾಗಿ ಇರುದು ಕೊಲೆಗೈದನು. ನಂತರ ಪೊಲೀಸ್ ಅಧಿಕಾರಿಯೊಬ್ಬರ ಗುಂಡಿಗೆ ಬಲಿಯಾದನು.