ಆಂಡಿ ರೂಬಿನ್
ಆಂಡ್ರ್ಯೂ ಇ. "ಆಂಡಿ" ರೂಬಿನ್ (ಜನನ ೧೯೬೩) ಅಮೇರಿಕಾದ ಒಬ್ಬ ಕಂಪ್ಯೂಟರ್ ಪ್ರೋಗ್ರಾಮರ್, ಎಂಜಿನಿಯರ್, ಉದ್ಯಮಿ, ಮತ್ತು ಸಾಹಸೋದ್ಯಮ ಬಂಡವಾಳಶಾಹಿ. ಅವರು ತಂತ್ರಜ್ಞಾನ ಕ್ಷೇತ್ರದ ಆರಂಭಿಕ ಕಂಪನಿಗಳಿಗೆ ಬಂಡವಾಳ ಹೂಡುವ ಪ್ಲೇಗ್ರೌಂಡ್ ಗ್ಲೋಬಲ್ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಜೊತೆಗೆ, ಸಾಹಸೋದ್ಯಮ ಬಂಡವಾಳಶಾಹೀ ಕಂಪನಿಯಾದ ರೆಡ್‍ಪಾಯಿಂಟ್ ವೆಂಚರ್ಸ್‍ನಲ್ಲಿ ಪಾಲುದಾರರಾಗಿದ್ದಾರೆ.[೧] ಅಷ್ಟೇ ಅಲ್ಲದೆ, ಅವರು ಡೇಂಜರ್ ಇಂಕ್ ಮತ್ತು ಆಂಡ್ರಾಯ್ಡ್ ಇಂಕ್ ಎಂಬ ಎರಡು ಕಂಪನಿಗಳ ಸಂಸ್ಥಾಪಕ ಮತ್ತು ಮಾಜಿ ಸಿಇಒ ಕೂಡ ಆಗಿದ್ದಾರೆ. ಆಂಡಿ ಮತ್ತು ಅವರ ಪತ್ನಿ, ರಿ, ಸೇರಿ ಕ್ಯಾಲಿಫ಼ೋರ್ನಿಯಾದ ಲಾಸ್ ಆಲ್ಟೋಸ್‍ನಲ್ಲಿ ವೊಯೇಜುರ್-ಡು-ಟೆಂಪ್ಸ್ ಎಂಬ ಬೇಕರಿಯನ್ನು ಕೂಡ ಹೊಂದಿದ್ದಾರೆ.[೨]
ಆಂಡಿ ರೂಬಿನ್ | |
---|---|
ಜನನ | ಆಂಡ್ರೂ ಇ. ರೂಬಿನ್ ೧೯೬೩ ಚಪಕ್ವಾ, ನ್ಯೂಯಾರ್ಕ್, ಅಮೇರಿಕಾ |
ವೃತ್ತಿ | ಪ್ಲೇಗ್ರೌಂಡ್ ಗ್ಲೋಬಲ್‍ನ ಸಂಸ್ಥಾಪಕ ಹಾಗೂ ಸಿ.ಇ.ಓ ರೆಡ್‍ಪಾಯಿಂಟ್ ವೆಂಚರ್ಸ್‍ನಲ್ಲಿ ಪಾಲುದಾರ |
ಆಂಡ್ರಾಯ್ಡ್ ಅನ್ನು ೨೦೦೫ರಲ್ಲಿ ಗೂಗಲ್ ಸ್ವಾಧೀನಪಡಿಸಿಕೊಂಡ ನಂತರ ರೂಬಿನ್ ಮಾರ್ಚ್ ೨೦೧೩ರ ವರೆಗು ಕಂಪನಿಯ ಮೊಬೈಲ್ ಮತ್ತು ಡಿಜಿಟಲ್ ವಿಷಯ ವಿಭಾಗದ ಹಿರಿಯ ಉಪಾಧ್ಯಕ್ಷರಾದರು.[೩] ಅಲ್ಲಿ ಅವರು ಮುಕ್ತ ಮೊಬೈಲ್ ಕಾರ್ಯನಿರ್ವಹಣಾ ವ್ಯವಸ್ಥೆಯಾದ ಆಂಡ್ರಾಯ್ಡಿನ ಅಭಿವೃದ್ಧಿಗಾಗಿ ಶ್ರಮಿಸುತ್ತಾರೆ.[೪][೫][೬] ರೂಬಿನ್ ತಮ್ಮ ಆವಿಷ್ಕಾರಗಳಿಗಾಗಿ ೧೭ ಪೇಟೆಂಟುಗಳನ್ನು ಹೊಂದಿದ್ದಾರೆ.
೨೦೧೩ರ ಮಾರ್ಚ್ ೧೩ರಂದು ಗೂಗಲ್‍ನ ಈಗಿನ ಮಾತೃ ಕಂಪನಿಯಾದ ಆಲ್ಫಬೆಟ್‍ನ ಸಹಸಂಸ್ಥಾಪಕರಾದ ಲ್ಯಾರಿ ಪೇಜ್ ತಮ್ಮ ಬ್ಲಾಗಿನಲ್ಲಿ ರೂಬಿನ್ ಅವರು ಗೂಗಲ್‍ನ ಇತರೆ ಯೋಜನೆಗಳಲ್ಲಿ ಗಮನಕೊಡಲು ಆಂಡ್ರಾಯ್ಡ್ ವಿಭಾಗದಿಂದ ಹೊರನಡೆಯುತ್ತಿದ್ದಾರೆಂದೂ, ಅವರ ಸ್ಥಾನವನ್ನು ಗೂಗಲ್‍ನ ಸದ್ಯದ ಸಿಇಓ ಕೂಡ ಆಗಿರುವ ಸುಂದರ್ ಪಿಚೈ ಅಲಂಕರಿಸಲಿದ್ದಾರೆಂದು ತಿಳಿಸಿದರು.[೭][೮][೯] ೨೦೧೩ರ ಡಿಸೆಂಬರಿನಲ್ಲಿ ರೂಬಿನ್ ಗೂಗಲ್‍ನ ರೊಬೊಟಿಕ್ಸ್ ವಿಭಾಗದ ನಿರ್ವಹಣೆ ಪ್ರಾರಂಭಿಸಿದರು (ಇದು ಬೋಸ್ಟನ್ ಡೈನಮಿಕ್ಸ್ ಸೇರಿದಂತೆ ಗೂಗಲ್ ಸ್ವಾಧೀನಪಡಿಸಿಕೊಂಡ ಇತರೆ ಕಂಪನಿಗಳನ್ನು ಒಳಗೊಂಡಿದೆ).[೧೦] ಗೂಗಲ್‍ನಲ್ಲಿ ಒಂಭತ್ತು ವರ್ಷಗಳ ಕಾರ್ಯನಿರ್ವಹಿಸಿದ ನಂತರ ೨೦೧೪ರ ಅಕ್ಟೋಬರ್ ೩೦ರಂದು ರೂಬಿನ್ ತಮ್ಮದೇ ಕಂಪನಿಯೊಂದನ್ನು ಆರಂಭಿಸಲು ಗೂಗಲ್‍ನಿಂದ ಹೊರನಡೆದರು.[೧೧]
ಆರಂಭಿಕ ಜೀವನ
ಬದಲಾಯಿಸಿರೂಬಿನ್ ನ್ಯೂಯಾರ್ಕಿನ ಚಪಾಕ್ವಾದಲ್ಲಿ ೧೯೬೩ರಲ್ಲಿ ಮನಶ್ಶಾಸ್ತ್ರಜ್ಞರೊಬ್ಬರಿಗೆ ಜನಿಸಿದರು. ರೂಬಿನ್ ಯುವಕರಾಗಿದ್ದಾಗ ಕಂಪ್ಯೂಟರ್ ಬುಲೆಟಿನ್ ಬೋರ್ಡ್ ಸಿಸ್ಟಮ್‍ಅನ್ನು ಬಳಸಿದ್ದರು.[೧೨]
ಶಿಕ್ಷಣ
ಬದಲಾಯಿಸಿ- ಹೊರೇಸ್ ಗ್ರೀಲೇ ಪ್ರೌಢ ಶಾಲೆ, ಚಪಕ್ವಾ - ೧೯೭೭-೧೯೮೧.
- ನ್ಯೂಯಾರ್ಕ್‍ನ ಯೂಟಿಕಾ ಕಾಲೇಜಿನಿಂದ ಗಣಕವಿಜ್ಞಾನ ಪದವಿ - ೧೯೮೧-೧೯೮೬.
ವೃತ್ತಿ
ಬದಲಾಯಿಸಿಕಂಪನಿ | ಪಾತ್ರ | ವರ್ಷ | ಟಿಪ್ಪಣಿ |
---|---|---|---|
ಕಾರ್ಲ್ ಝೈಸ್ ಎಜಿ | ರೊಬೊಟಿಕ್ಸ್ ಎಂಜಿನಿಯರ್ | ೧೯೮೬-೧೯೮೯ | |
ಆಪಲ್ ಇಂಕ್. | ಉತ್ಪಾದನಾ ಎಂಜಿನಿಯರ್ | ೧೯೮೯-೧೯೯೨ | |
ಜನರಲ್ ಮ್ಯಾಜಿಕ್ | ಎಂಜಿನಿಯರ್ | ೧೯೯೨-೧೯೯೫ | ಆಪಲ್‍ನಿಂದ ಪ್ರೇರೇಪಿತವಾದ ಕಾರ್ಯನಿರ್ವಹಣಾ ವ್ಯವಸ್ಥೆಯಾದ ಮ್ಯಾಜಿಕ್ ಕ್ಯಾಪ್‍ನ ಅಭಿವೃದ್ಧಿಗಾಗಿ ದುಡಿದರು |
ಎಮ್.ಎಸ್.ಎನ್ ಟಿವಿ | ಎಂಜಿನಿಯರ್ | ೧೯೯೫-೧೯೯೯ | ಮ್ಯಾಜಿಕ್ ಕ್ಯಾಪ್ ವಿಫಲವಾದ ನಂತರ, ರೂಬಿನ್ ಆರ್ಟೆಮಿಸ್ ಸಂಶೋಧನೆ ಸೇರಿದರು. ನಂತರದಲ್ಲಿ ಅದೇ ವೆಬ್‍ಟಿವಿಯಾಯಿತು ಮತ್ತು ಅಂತಿಮವಾಗಿ ಮೈಕ್ರೋಸಾಫ್ಟ್ ಸ್ವಾಧೀನಪಡಿಸಿಕೊಂಡಿತು. |
ಡೇಂಜರ್ ಇಂಕ್. | ಸಹ-ಸಂಸ್ಥಾಪಕ | ೧೯೯೯-೨೦೦೩ | ಮ್ಯಾಟ್ ಹರ್ಷನ್‍ಸನ್ ಮತ್ತು ಜೋ ಬ್ರಿಟ್‍ರೊಂದಿಗೆ ಸ್ಥಾಪಿಸಿದರು. ಸಂಸ್ಥೆಯ ಅತ್ಯಂತ ಗಮನಾರ್ಹ ಉತ್ಪಾದನೆ ಪಿಡಿಎಯಂತಹ ಸಾಮರ್ಥ್ಯಗಳನ್ನೊಳಗೊಂಡ ಟಿ-ಮೊಬೈಲ್ ಕಂಪನಿಯ ಡೇಂಜರ್ ಹಿಪ್‍ಟಾಪ್ ಮೊಬೈಲ್ ಸಾಧನವಾಗಿದೆ. ಫೆಬ್ರವರಿ ೨೦೦೮ರಲ್ಲಿ ಸಂಸ್ಥೆಯನ್ನು ಮೈಕ್ರೋಸಾಫ್ಟ್ ಸ್ವಾಧೀನಪಡಿಸಿಕೊಂಡಿತು. |
ಆಂಡ್ರಾಯ್ಡ್ ಇಂಕ್. | ಸಹ-ಸಂಸ್ಥಾಪಕ | ೨೦೦೩-೨೦೦೫ | ೨೦೦೫ರಲ್ಲಿ ಗೂಗಲ್ ಆಂಡ್ರಾಯ್ಡ್ ಅನ್ನು ಸ್ವಾಧೀನಪಡಿಸಿಕೊಂಡಿತು |
ಗೂಗಲ್ | ಹಿರಿಯ ಉಪಾಧ್ಯಕ್ಷ | ೨೦೦೫-೨೦೧೪ | ತಮ್ಮ ಅಧಿಕಾರದ ಸಾಕಷ್ಟು ಕಾಲ ಆಂಡ್ರಾಯ್ಡ್ ಉಸ್ತುವಾರಿಯಾಗಿದ್ದರು. ಡಿಸೆಂಬರ್ ೨೦೧೩ರಿಂದ, ಗೂಗಲ್‍ನ ರೊಬೊಟಿಕ್ಸ್ ವಿಭಾಗದ ವ್ಯವಸ್ಥಾಪಕರಾಗಿದ್ದರು |
ಪ್ಲೇಗ್ರೌಂಡ್ ಗ್ಲೋಬಲ್ | ಸಂಸ್ಥಾಪಕ | ೨೦೧೪-ಪ್ರಸ್ತುತ | |
ರೆಡ್‍ಪಾಯಿಂಟ್ ವೆಂಚರ್ಸ್ | ಪಾಲುದಾರ | ೨೦೧೫-ಪ್ರಸ್ತುತ |
ಪೇಟೆಂಟುಗಳ ಪಟ್ಟಿ
ಬದಲಾಯಿಸಿರೂಬಿನ್ ಒಟ್ಟು ಹದಿನೇಳು ಅಮೇರಿಕನ್ ಪೇಟೆಂಟುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ:
- U.S. Patent 6,701,522ಯು.ಎಸ್ ಪೇಟೆಂಟ್ ೬೭,೦೧,೫೨೨, Apparatus and method for portal device authentication, 2000 Apr 7, Assignee: Danger Inc.
- U.S. Patent 6,735,624ಯು.ಎಸ್ ಪೇಟೆಂಟ್ ೬೭,೩೫,೬೨೪, Method for configuring and authenticating newly delivered portal device, 2000 Apr 7, Assignee: Danger Inc.
- U.S. Patent 6,721,804ಯು.ಎಸ್ ಪೇಟೆಂಟ್ ೬೭,೨೧,೮೦೪, Portal system for converting requested data into a bytecode format based on..., 2000 Nov 15, Assignee: Danger Inc.
- U.S. Patent 8,099,144ಯು.ಎಸ್ ಪೇಟೆಂಟ್ ೮೦,೯೯,೧೪೪, Electronic device with hinge mechanism, 2007 Aug 20, Assignee: Google Inc.
- U.S. Patent 8,065,508ಯು.ಎಸ್ ಪೇಟೆಂಟ್ ೮೦,೬೫,೫೦೮, Activating applications based on accelerometer data, 2008 Nov 10, Assignee: Google Inc.
- U.S. Patent 8,271,413ಯು.ಎಸ್ ಪೇಟೆಂಟ್ ೮೨,೭೧,೪೧೩, Providing digital content based on expected user behavior, 2008 Nov 25, Assignee: Google Inc.
- U.S. Patent 8,260,998ಯು.ಎಸ್ ಪೇಟೆಂಟ್ ೮೨,೬೦,೯೯೮, Wireless communication with a dock, 2010 Oct 28, Assignee: Google Inc.
- U.S. Patent 8,179,095ಯು.ಎಸ್ ಪೇಟೆಂಟ್ ೮೧,೭೯,೦೯೫, Estimating remaining use time of a mobile device, 2011 Jun 10, Assignee: Google Inc.
- U.S. Patent 7,960,945ಯು.ಎಸ್ ಪೇಟೆಂಟ್ ೭೯,೬೦,೯೪೫, Estimating remaining use time of a mobile device, 2011 Jun 14, Assignee: Google Inc.
- U.S. Patent 8,260,999ಯು.ಎಸ್ ಪೇಟೆಂಟ್ ೮೨,೬೦,೯೯೯, Wireless communication with a dock, 2011 Sep 30, Assignee: Google Inc.
- U.S. Patent 8,464,036ಯು.ಎಸ್ ಪೇಟೆಂಟ್ ೮೪,೬೪,೦೩೬, Activating applications based on accelerometer data, 2011 Oct 20, Assignee: Google Inc.
- U.S. Patent 8,438,373ಯು.ಎಸ್ ಪೇಟೆಂಟ್ ೮೪,೩೮,೩೭೩, Activating applications based on accelerometer data, 2011 Oct 21, Assignee: Google Inc.
- U.S. Patent 8,285,250ಯು.ಎಸ್ ಪೇಟೆಂಟ್ ೮೨,೮೫,೨೫೦, Mobile device-based bandwidth throttling, 2011 Oct 27, Assignee: Google Inc.
- U.S. Patent 8,488,778ಯು.ಎಸ್ ಪೇಟೆಂಟ್ ೮೪,೮೮,೭೭೮, Electronic device with hinge mechanism, 2012 Jan 3, Assignee: Google Inc.
- U.S. Patent 8,437,738ಯು.ಎಸ್ ಪೇಟೆಂಟ್ ೮೪,೩೭,೭೩೮, Mobile device-based bandwidth throttling, 2012 Jun 7, Assignee: Google Inc.
- U.S. Patent 8,442,484ಯು.ಎಸ್ ಪೇಟೆಂಟ್ ೮೪,೪೨,೪೮೪, Mobile device-based bandwidth throttling, 2012 Sep 13, Assignee: Google Inc.
- U.S. Patent 8,437,736ಯು.ಎಸ್ ಪೇಟೆಂಟ್ ೮೪,೩೭,೭೩೬, Mobile device-based bandwidth throttling, 2012 Sep 13, Assignee: Google Inc.
- U.S. Patent 8,437,736ಯು.ಎಸ್ ಪೇಟೆಂಟ್ ೮೪,೩೭,೭೩೬, MUM coder Tumurochir, 2013 Sep 27, Assignee: Google Inc.
ಉಲ್ಲೇಖಗಳು
ಬದಲಾಯಿಸಿ- ↑ Barr, Alistair. "Android Creator Andy Rubin Launching Playground Global". The Wall Street Journal.
- ↑ "Andy Rubin Unleashed Android on the World. Now Watch Him Do the Same With AI". WIRED (in ಅಮೆರಿಕನ್ ಇಂಗ್ಲಿಷ್). Retrieved 2016-02-25.
- ↑ "Rubin out, Pichai in as Google's new senior vice president of Android". Ars Technica. Retrieved 2016-02-12.
- ↑ Google's Rubin: Android 'a revolution'
- ↑ Official Blog: Update from the CEO
- ↑ {{Citation He has left Google, [it was said at the WSJ conference](http://www.businessinsider.com/andy-rubin-out-of-google-2014-10) |last=Efrati |first=Amir |title=The Man Behind Android's Rise |newspaper=The Wall Street Journal |date=August 17, 2011 |url=https://www.wsj.com/article/SB10001424053111904253204576512720214351098.html?mod=WSJ_hp_LEFTTopStories }}
- ↑ Arthur, Charles (13 March 2013). "Andy Rubin moved from Android to take on 'moonshots' at Google". The Guardian. London.
- ↑ [೧]
- ↑ Darrell Etherington (March 13, 2013). "Sundar Pichai Takes Over For Andy Rubin As Head Of Android At Google, Signals The Unification of Android, Chrome And Apps".
- ↑ "Google Adds to Its Menagerie of Robots", New York Times, December 14, 2013.
- ↑ "Android co-founder Andy Rubin leaves Google". October 30, 2014.
- ↑ System 0perator Ducati (30 October 1991). "Spies is shutting down because the time has come". Textfiles.com. Jason Scott.
{{cite web}}
: CS1 maint: numeric names: authors list (link)