ಶಿಥಿಲೀಕರಣ ಮತ್ತು ಸವೆತ

ಭೂ ಮೇಲ್ಮೈ ಸ್ವರೂಪಗಳು ಎರಡು ರೀತಿಯ ನೈಸರ್ಗಿಕ ಕರ್ತೃಗಳಿಂದ ಹಿಂದಿನ ಕಾಲದಿಂದಲೂ ಬದಲಾಗುತ್ತಾ ಬಂದಿವೆ, ಅವು ೧) ಅಂತರ್ ಜನಿತ ಶಕ್ತಿಗಳು ಮತ್ತು ೨) ಬಹಿರ್ ಜನಿತ ಶಕ್ತಿಗಳು.

  1. ಅಂತರ್ ಜನಿತ ಶಕ್ತಿಗಳು: ಭೂ ಅಂತರಾಳದಲ್ಲಿ ತಮ್ಮ ಕಾರ್ಯನಿರ್ವಹಿಸುವ ಭೂ ಅಂತರಾಳ ಶಕ್ತಿಗಳು. ಉದಾ: ಜ್ವಾಲಮುಖಿ ಸ್ಟೋಟನೆ, ಭೂಕಂಪಗಳು ಮತ್ತು ಭೂಚಲನೆ (ಭೂವಿಕೃತಿ).[]
  2. ಬಹಿರ್ ಜನಿತ ಶಕ್ತಿಗಳು: ಭೂ ಮೇಲ್ಮೈ ಮೇಲೆ ನೇರವಾಗಿ ತಮ್ಮ ಕರ್ತವ್ಯ ನಿರ್ವಹಿಸುವ "ಬಾಹ್ಯಶಕ್ತಿಗಳು". ಉದಾ: ಗಾಳಿ, ಮಳೆ, ನೀರು, ಅಂತರ್ಜಲ, ಸಮುದ್ರ ಅಲೆ, ಪ್ರವಾಹಗಳು ಹಿಮನದಿ, ಇತ್ಯಾದಿ.
ಶಿಥಿಲೀಕರಣ

ಬಾಹ್ಯಶಕ್ತಿಗಳು ಭೂ ಮೇಲ್ಮೈಯನ್ನು ನಿರಂತರವಾಗಿ ಕ್ಷಯಿಸುತ್ತಾ ಇರುತ್ತವೆ. ಈ ಕಾರಣದಿಂದ 'ನಗ್ನೀಕರಣ'[] ಉಂಟಾಗುತ್ತದೆ. ನಗ್ನೀಕರಣವು 'ಸವೆತ' ಮತ್ತು 'ಸಂಚಯನ' ಕಾರ್ಯಗಳನ್ನು ಒಳಗೊಂಡಿದೆ. ಅನೇಕ ಭೂ ಗರ್ಭದ ಅಂಶಗಳಿಂದಾಗಿ (ಚಲಿಸುವ ನೀರು ಮತ್ತು ಹಿಮ, ಬೀಸುವ ಗಾಳಿ ಇತ್ಯಾದಿ) ಉನ್ನತ ಭಾಗಗಳನ್ನು ಕ್ಷಯಿಸಿ ಮಟ್ಟಸ ಮಾಡುವ ಪ್ರಕ್ರಿಯೆಗೆ 'ಸವೆತ' ಅಥವಾ 'ಡೀಗ್ರೆಡೇಶನ್'[] ಎನ್ನುವರು. ಹಳ್ಳ/ತಗ್ಗಿನ ಪ್ರದೇಶಳಲ್ಲಿ ವಸ್ತುಗಳ ಶೇಖರಣೆ ಮಾಡಿ, ಭೂಭಾಗವನ್ನು ಮಟ್ಟಸ ಮಾಡುವ ಪ್ರಕ್ರಿಯೆಗೆ ಸಂಚಯನ/ಅಗ್ರಡೇಶನ್ ಎನ್ನುವರು. 'ಸವೆತವು' ಮುಖ್ಯವಾಗಿ ಶಿಥಿಲೀಕರಣದಿಂದ ಉಂಟಾಗುತ್ತದೆ.

ಶಿಥಿಲೀಕರಣ

ಬದಲಾಯಿಸಿ

ಭೂ ಮೇಲ್ಮೈಯಲ್ಲಿನ ಕಠಿಣವಾದ ಶಿಲೆಗಳು ಹವಾಮಾನದ ಮೂಲಾಂಶಗಳಾದ ಉಷ್ಣಾಂಶ, ವೃಷ್ಟಿ, ಒತ್ತಡ, ತೇವಾಂಶ ಮುಂತಾದವುಗಳ ಕ್ರಿಯೆಗಳಿಂದ ಒಡೆದು ಚೂರಾಗುವ ಅಥವಾ ಕ್ಷಯಿಸುವ ಪ್ರಕ್ರಿಯೆಗೆ ಶಿಥಿಲೀಕರಣ ಎನ್ನುವರು.[] ಅಂದರೆ ಹವಾಮಾನದ ಮೂಲಾಂಶಗಳಿಂದ ಉಂಟಾಗುವುದರಿಂದ 'ವೆದರಿಂಗ್' ಎನ್ನುತ್ತೇವೆ. ಶಿಥಿಲೀಕರಣವು ಶಿಲೆಗಳ 'ವಿಯೋಜನೆ' ಮತ್ತು 'ವಿಭಜನೆ'ಯನ್ನು ಒಳಗೊಂಡಿದ್ದು, ಉತ್ಪತ್ತಿಯಾದ ಉತ್ಪನ್ನಗಳ ಸಾಗಾಣಿಕೆ ಕಾರ್ಯ ನಡೆಯುವುದಿಲ್ಲ.

ಶಿಥಿಲೀಕರಣವನ್ನು ನಿಯಂತ್ರಿಸುವ ಅಂಶಗಳು

ಬದಲಾಯಿಸಿ

ಇವು ಭೌಗೋಳಿಕ, ಭೂಮೇಲ್ಮೈ, ವಾಯುಗುಣದ ಮತ್ತು ರಾಸಾಯನಿಕ ಅಂಶಗಳಿವೆ.

ಭೌಗೋಳಿಕ ಅಂಶಗಳು

ಬದಲಾಯಿಸಿ
  1. ಮೂಲಶಿಲೆಯ ಸ್ವಭಾವ: ಗ್ರಾನೈಟ್ ಶಿಲೆಗಳಿಂದ ಮೆರಳುಶಿಲೆಗಳಲ್ಲಿ ಕಾಳಾದ ಮತ್ತು ಹರಳಿನ ರಚನೆಗಳು ಬಂಧಿಸಲ್ಪಟ್ಟಿರುವುದರಿಂದ ಶಿಥಲೀಕರಣದಲ್ಲಿ ಬೇಗ ವಿಭಜನೆ ಹೊಂದುತ್ತವೆ. ಅಂದರೆ ಶಿಥಿಲೀಕರಣಕ್ಕೆ ಮರಳು ಶಿಲೆಗಳ ಪ್ರತಿರೋಧ ಗ್ರಾನೈಟ್ ಶಿಲೆಗಳಿಗಿಂತ ಕಡಿಮೆ. ಶಿಲೆಗಳ ಖನಿಜೀಯ ಮತ್ತು ರಾಸಾಯನಿಕ ಸಂಯೋಜನೆಯೂ ಶಿಲೆಗಳ ಸ್ವಭಾವವನ್ನು ತಿಳಿಸುತ್ತದೆ, ಶಿಥಿಲೀಕರಣದ ದರ ಮತ್ತು ವಿಧವನ್ನು ಸಹ ತಿಳಿಸುತ್ತದೆ . ಉದಾ: ಕಾರ್ಬೋನೇಟ್ ಶಿಲೆಗಳು ಸುಣ್ಣಕಲ್ಲು (ಕ್ಯಾಲ್ಸಿಯಂ ಕಾರ್ಬೋನೇಟ್) ಖನಿಜದಿಂದ ಸಂಯೋಜನಗೊಂಡಿದ್ದು, ಶೀಘ್ರವಾದ ಮತ್ತು ರಾಸಾಯನಿಕ ರೀತಿಯ ಶಿಥಿಲೀಕರಣವುಂಟು ಮಾಡುತ್ತದೆ.
  2. ಮೂಲಶಿಲೆಯ ರಚನೆ: ಇದು ಖನಿಜಗಳ ಸಂಯೋಜನೆ, ಬಿರುಕುಗಳಿರುವಿಕೆ, ಬೆಡ್ಡಿಂಗ್, ಪ್ಲೇನ್ಸ್ ಇತ್ಯಾದಿಗಳಿರಿವಿಕೆಯನ್ನೊಳಗೊಂಡಿದೆ. ಬಿರುಕುಗಳು ಅಥವಾ ಜಾಯಿಂಗಳಿದ್ದರೆ ದ್ರಾವಣ ಸುಲಭವಾಗಿ ಪ್ರವೇಶಿಸಿ ವಿಭಜಿಸುವುದರಿಂದ ಶಿಥಿಲೀಕರಣಕ್ಕೆ ಪ್ರತಿರೋಧ ಕಡಿಮೆ ಅಂತೆಯೇ ಬೆಡ್ಡಿಂಗ್, ಪ್ಲೇನ್ಸ್ ಇದ್ದರೆ ಸಹ ಪ್ರತಿರೋಧ ಕಡಿಮೆ ಇರುತ್ತದೆ

ಭೂಮೇಲ್ಮೈ ಅಂಶಗಳು

ಬದಲಾಯಿಸಿ
  1. ಎತ್ತರ: ಎತ್ತರ ಹೆಚ್ಚಾದಂತೆ ಹರಿಯುವ ನೀರಿನ ಶಕ್ತಿಯು ಹೆಚ್ಚಾಗಿ, ಹೆಚ್ಚು ಶಿಥಿಲೀಕರಣವುಂಟಾಗುತ್ತದೆ. ಆದರೆ ತಗ್ಗಿನ ಪ್ರದೇಶಗಳಲ್ಲಿನ ನೀರಿನ ಇಂಗುವಿಕೆ ಸಮಸ್ಯೆ ಇರುವುದರಿಂದ ದ್ರಾವಣಿಕರಣ ಕ್ರಿಯೆ ಕಡಿಮೆ, ಆದ್ದರಿಂದ ಸವೆತವೂ ಕಡಿಮೆ.
  2. ಇಳಿಜಾರು: ಹೆಚ್ಚು ಮತ್ತು ಕಡಿದಾದ ಇಳಿಜಾರುಗಳಲ್ಲಿ ಶಿಥಿಲೀಕರಣ ಹೆಚ್ಚು. ಇಲ್ಲಿ ನೀರಿನ ಕ್ರಿಯೆಯೂ ಹೆಚ್ಚು.
  3. ಇಳಿಜಾರು ಸ್ವಭಾವ: ಮಳೆ ಮತ್ತು ಮಾರುತಗಳಿಗೆ ಎದುರಾಗುವ ಇಳಿಜಾರುಗಳಲ್ಲಿ, ರಕ್ಷಿಸಲ್ಪಟ್ಟ ಇಳಿಜಾರುಗಳಿಗಿಂತ ಶಿಥಿಲೀಕರಣ ಹೆಚ್ಚು. ಸೂರ್ಯನಿಗೆ ಎದುರಾಗುವ ಹೆಚ್ಚು ಎತ್ತರದ ಇಳಿಜಾರು ಹೆಪ್ಪುಗಟ್ಟುವಿಕೆ ಪ್ರಕ್ರಿಯೆಗೊಳಗಾಗುತ್ತದೆ ಮತ್ತು ಧ್ರುವ ಪ್ರದೇಶಗಳ ದಿಕ್ಕಿನ ಇಳಿಜಾರುಗಳು ಸೂರ್ಯನಿಗೆದುರಾಗದೆ ತುಂಬಾ ಶೀತವಾಗಿರುತ್ತದೆ.

ವಾಯುಗುಣದ ಅಂಶಗಳು

ಬದಲಾಯಿಸಿ

ಉಷ್ಣಾಂಶ ಮತ್ತು ಆರ್ದ್ರತೆಗಳು ಶಿಥಿಲೀಕರಣದ ದರ ಮತ್ತು ವಿಧವನ್ನು ನಿರ್ಧರಿಸುತ್ತವೆ. ಉದಾ: ತೇವಯುತ ಪ್ರದೇಶಗಳಲ್ಲಿ ವಾಯುಗುಣವು ಮತ್ತು ಬೆಚ್ಚನೆಯದ್ದಾಗಿರುವುದರಿಂದ ಶೀಘ್ರದರದಲ್ಲಿ ರಾಸಾಯನಿಕ ಶಿಥಿಲೀಕರಣವೂ ಹಾಗೂ ಮರುಭೂಮಿಗಳಲ್ಲಿನ ಒಣ ವಾಯುಗುಣಗಳಲ್ಲಿ ಮತ್ತು ಹಿಮಹೊದಿಕೆ ಪ್ರದೇಶಗಳಲ್ಲಿ ಭೌತಿಕ ಮತ್ತು ನಿಧಾನಗತಿಯ ಶಿಥಿಲೀಕರಣವೂ ಕಂಡುಬರುತ್ತದೆ.

ಯಾಂತ್ರಿಕ ಅಂಶಗಳು (ಭೌತಿಕ)

ಬದಲಾಯಿಸಿ
  1. ಹಿಮ
  2. ಉಷ್ಣಾಂಶದ ವೈಪರೀತ್ಯತೆ
  3. ಜೀವಿಗಳು

ರಾಸಾಯನಿಕ ಅಂಶಗಳು

ಬದಲಾಯಿಸಿ
  1. ಉಷ್ಣಾಂಶ
  2. ಮಳೆ
  3. ಜೀವಿಗಳು

ಅಂದರೆ ಶಿಲೆಗಳ ಶಿಥಿಲೀಕರಣದ ಕರ್ತೃಗಳು ನಡೆಸುವ ಪ್ರತಿಕ್ರಿಯೆಗೆ ತೆಗೆದುಕೊಳ್ಳುವ ಕಾಲ. ಹೆಚ್ಚು ಸಮಯದವರೆಗೆ ಶಿಲೆಗಳು ಪ್ರಕ್ರಿಯೆಗೊಳಗಾದರೆ ಹೆಚ್ಚು ಶಿಥಿಲೀಕರಣ ಉಂಟಾಗುತ್ತದೆ.

ಶಿಥಿಲೀಕರಣದ ವಿಧಗಳು

ಬದಲಾಯಿಸಿ

ಇದರಲ್ಲಿ ಮುಖ್ಯವಾಗಿ ೩ ವಿಧಗಳುಂಟು.

  1. ಭೌತಿಕ ಶಿಥಿಲೀಕರಣ
  2. ರಾಸಾಯನಿಕ ಶಿಥಿಲೀಕರಣ
  3. ಜೀವ-ರಾಸಾಯನಿಕ ಶಿಥಿಲೀಕರಣ

ಭೌತಿಕ ಶಿಥಿಲೀಕರಣ

ಬದಲಾಯಿಸಿ
 
ಭೌತಿಕ ಶಿಥಿಲೀಕರಣ

ಇದು ಶಿಲೆಗಳ ಯಾಂತ್ರಿಕ / ಭೌತಿಕ ವಿಭಜನೆಯನ್ನು ಒಳಗೊಂಡಿದೆ. ಉನ್ನತ ಅಕ್ಷಾಂಶಗಳಲ್ಲಿನ / ಒಣ ವಾಯುಗುಣ ಪ್ರದೇಶಗಳಲ್ಲಿ ಕಂಡುಬರುತ್ತದೆ. ಪರ್ವತ, ಮರುಭೂಮಿ, ಹಿಮ ಮತ್ತು ಮಂಜಿನಿಂದ ಆವೃತವಾದ ಪ್ರದೇಶಗಳಲ್ಲಿ ವಿಭಜನೆ ಇಲ್ಲದಿರುವುದರಿಂದ ಈ ವಿಧವು ಹೆಚ್ಚಾಗಿ ಉಂಟಾಗುತ್ತದೆ.

  1. ಭಾರ ಇಳಿಕೆಯಿಂದ ವಿಕಸನ: ಸವೆತದಿಂದಾಗಿ ಮೇಲ್ಭಾಗದ ಶಿಲೆಗಳ ಭಾರ ಕಡಿಮೆಯಾದಾಗ, ಕೆಳಶಿಲೆಗಳ ಮೇಲಿನ ಭಾರವೂ ಕಡಿಮೆಯಾಗುತ್ತದೆ (ಒತ್ತಡ ಕಡಿಮೆ) ಆಗ ಕೆಳಗಿನ ಶಿಲೆಗಳ ವಿಕಸನಗೊಳ್ಳುವುದರಿಂದ ಅವುಗಳಲ್ಲಿ ಹಾಳೆಗಳಂತೆ ರಚನೆ ಉಂಟಾಗುತ್ತದೆ. ಉದಾ: ಗ್ರಾನೈಟ್ ಮತ್ತು ಸಂಭದಪಟ್ಟ ಶಿಲೆಗಳು.
  2. ಹಿಮ ವಿಕಸನ: ನೀರು ಘನರೂಪವಾದ ಹಿಮ ರೂಪಕ್ಕೆ ಹೆಪ್ಪುಗಟ್ಟಿದಾಗ ವಿಕಸನ ಹೊಂದುತ್ತದೆ. ಈ ವಿಕಸನದ ಪ್ರಮಾಣ ಶೇ.10 ರಷ್ಟಿರುತ್ತದೆ. ಶಿಲೆಗಳ ಬಿರುಕುಗಳಲ್ಲಿ, ಸಂಧಿಗಳಲ್ಲಿ ಮತ್ತು ಜಾಯಿಂಟ್‍ಗಳಲ್ಲಿ ಶೇಖರವಾಗಿರುತ್ತದೆ. ರಾತ್ರಿ ವೇಳೆ ಉಷ್ಣಾಂಶ ಹೆಪ್ಪು ಗಟ್ಟುವಿಕೆಗಿಂತಲೂ ಕಡಿಮೆಯಾದಾಗ (ಘನೀಕರಣದಿಂದ) ನೀರಿನ ಗಾತ್ರದಲ್ಲಿ ಹೆಚ್ಚಳವಾಗಿ, ಹಿಮದ ಹರಳುಗಳು ನಿರಂತರವಾಗಿ ಶಿಲೆಗಳ ಗೋಡೆಗಳ ಮೇಲೆ ಹೆಚ್ಚು ಒತ್ತಡ ಉಂಟು ಮಾಡುತ್ತವೆ. ಆದರೆ ಹಗಲಿನ ವೇಳೆ ಹಿಮ ನೀರಾಗಿ ಪರಿರ್ವತನೆಯಾಗುವುದರಿಂದ ಒತ್ತಡ ಶಿಲೆಗಳ ಮೇಲೆ ಕಡಿಮೆಯಾಗುತ್ತದೆ. ಇದೇ ರೀತಿಯ ಪ್ರಕ್ರಿಯೆಯು ಬೇಸಿಗೆ ಮತ್ತು ಚಳಿಗಾಲದಲ್ಲಿ(ಕಡಿಮೆ ಒತ್ತಡ ಮತ್ತು ಹೆಚ್ಚು ಒತ್ತದ) ಕಂಡು ಬರುತ್ತದೆ. ಈ ಪ್ರಕ್ರಿಯೆ ನಿರಂತರವಾಗಿ ಸಾಗುವುದರಿಂದ ಬಿರುಕು/ಸೀಳುಗಳು ವಿಸ್ತಾರಗೊಂಡು ಶಿಲೆಗಳು ಚೂರುಗಳಾಗುತ್ತವೆ. ಈ ಪರಿಸ್ಥಿತಿ ಹೆಚ್ಚು ಎತ್ತರದ ಮತ್ತು ಉನ್ನತ ಆಕ್ಷಾಂಶಗಳಲ್ಲಿ (ಶೀತ ಮತ್ತು ಸಮಶೀತೋಷ್ಣ ವಲಯ) ಕಂಡುಬರುತ್ತದೆ. ಹೆಚ್ಚು ಹಗಲಿನ ಉಷ್ಣಾಂಶದ ವ್ಯತ್ಯಾಸವು 'ಹಿಮ ವಿಕಸನವನ್ನು' ಉಂಟು ಮಾಡುತ್ತದೆ.[]
  3. ಉಷ್ಣಾಂಶದ ಪರಿಣಾಮ- ಶಿಲಾ ಪಲ್ಲವ: ಶುಷ್ಕ ಮತ್ತು ಅರೆಶುಷ್ಕ ಪ್ರದೇಶಗಳಲ್ಲಿ ಹಗಲಿನ ಮತ್ತು ರಾತ್ರಿಯ ಉಷ್ಣಾಂಶಗಳಲ್ಲಿ ಹೆಚ್ಚು ವ್ಯತ್ಯಾಸವಿರುತ್ತದೆ. ಶಿಲೆಗಳು ಹಗಲಿನ ವೇಳೆ ಹೆಚ್ಚು ಉಷ್ಣಾಂಶದಿಂದಾಗಿ ವಿಕಾಸ ಹೊಂದಿ ಹಿಗ್ಗುತ್ತವೆ. ಆದರೆ ರಾತ್ರಿ ವೇಳೆ ಕಡಿಮೆ ಉಷ್ಣಾಂಶದಿಂದಾಗಿ ಸಂಕುಚಿತಗೊಂಡು ಕುಗ್ಗುತ್ತವೆ. ಈ ರೀತಿಯ ಗರಿಷ್ಠ ದೈನಂದಿನ ಉಷ್ಣಾಂಶದ ವ್ಯತ್ಯಾಸವು ಶಿಲೆಗಳು ಭೌತಿಕವಾಗಿ ಅಶಕ್ತವಾಗುವಂತೆ ಮಾಡುತ್ತದೆ. ಶಿಲೆಗಳಲ್ಲಿನ ಖನಿಜಗಳು ವಿಭಿನ್ನ ವಿಕಸನದ ಕೋ-ಎಪಿಷಿಯಂಟ್ ಗಳನ್ನು ಹೊಂದಿರುವುದರಿಂದ ಶಿಲೆಗಳೂ ಸಹಾ ಡೆಪೆರೆನ್ಸಿಯಲ್ ವಿಕಸನದ ಮತ್ತು ಸಂಕುಚನಗೊಳಗಾಗುತ್ತವೆ. ಅಲ್ಲದೆ ಭೂ ಹೊರಮೆಲ್ಮೈಯಲ್ಲಿ ವಾಯುಮಂಡಲಕ್ಕೆ ತೆರೆಯಲ್ಪಟ್ಟಿರುವ ಹೊರ ಪದರುಗಳು ಹೆಚ್ಚಿನ ವಿಕಸನ ಮತ್ತು ಸಂಕುಚನ ಹೊಂದುತ್ತದೆ. ಈ ಹಿಗ್ಗುವಿಕೆ ಮತ್ತು ಕುಗ್ಗುವಿಕೆ ಕಾರ್ಯದಿಂದ ಬಿರುಕು ಮತ್ತು ಸೀಳುಗಳು ಉಂಟಾಗಿ ಅನಂತರ ವಿಸ್ತಾರಗೊಂಡು ಅಂತಿಮವಾಗಿ ಶಿಲೆಗಳು ಚೂರುಗಳಾಗಿ ಶಿಥಿಲೀಕರಣ ಹೊಂದುತ್ತವೆ. ಉಷ್ಣಾಂಶದ ಪರಿಣಾಮದಿಂದಾಗಿ ಶಿಲೆಗಳ ಹೊರ ಪದರುಗಳು ಬಳೆಗಳು ಅಥವಾ ವೃತ್ತಾಕಾರದಲ್ಲಿ ಕಳಚಲ್ಪವುದಕ್ಕೆ 'ರಾಶಿಶಿಲಾಪಲ್ಲವ'/'ಪದರು ವಿಭಜನೆ' ಅಥವಾ ವೃತ್ತಾಕಾರದ ಶಿಥಿಲೀಕರಣ ಎನ್ನುವರು. ವಿಭಿನ್ನ ವಿಕಸನ ಮತ್ತು ಸಂಕುಚನದಿಂದಾಗಿ ಉಂಟಾಗುವ ಶಿಲೆಗಳ ವಿಭಜನೆಯನ್ನು (ಸಣ್ಣ ಸಣ್ಣ ಕಣಗಳಾಗಿ) 'ಕಣ ವಿಭಜನೆ' ಎನ್ನುವರು. ವರ್ತುಲಾಕಾರದ ಶಿಥಿಲೀಕರಣ ಗ್ರಾನೈಟ್ ಮತ್ತು ಬಸಾಲ್ಟ್ ಶಿಲೆಗಳಲ್ಲಿ ಹೆಚ್ಚಾಗಿದ್ದು. ಅವುಗಳ ಪದರ ವಿಭಜನೆಯು ಶಿಲಾ ಪಲ್ಲವದ ಗುಮ್ಮಟಗಳನ್ನುಂಟು ಮಾಡುತ್ತದೆ.[]
  4. ಗಾಳಿಯ ಪರಿಣಾಮ: ಬೀಸುವಾಗ ತಮ್ಮೊಡನೆ ಕೊಂಡೊಯ್ಯುವ ಸಣ್ಣ ಮರಳಿನ ಚೂರುಗಳು ಶಿಲೆಗಳಿಗೆ ಉಜ್ವಲ್ಪಡುವುದರಿಂದ ಶಿಥಿಲೀಕರಣ ಉಂಟಾಗುತ್ತದೆ. ಈ ರೀತಿ ಶಿಥಿಲೀಕರಣ ಸಸ್ಯರಹಿತ ಮತ್ತು ಒಣ ಮರುಭೂಮಿ ಪ್ರದೇಶಗಳಲ್ಲಿ ಕಂಡುಬರುತ್ತದೆ.
  5. ಮಳೆಯ ಪರಿಣಾಮ: ಶೇಲ್‍ಗಳಂತಹ ಮೃದು ಶಿಲೆಗಳು ರಭಸದಿಂದ ಬೀಳುವ ಟಾರೆನ್ಸಿಯಲ್ ಮಳೆಗೆ ತೆರೆಯಲ್ಪಟ್ಟಾಗ, ಕುಳಿಗಳು ಉಂಟಾಗುತ್ತವೆ ಮತ್ತು ಕೆಲವೊಮ್ಮೆ ರಭಸದ ಹನಿಗಳಿಂದ ಶಿಲಾಕಣಗಳು ಸಡಿಲಗೊಳ್ಳುತ್ತವೆ. ಅನಂತರ ನಿಧಾನವಾಗಿ ಕ್ಷೀಣಿಸುತ್ತಾ ಶಿಲೆಗಳು ವಿಭಜನೆ ಹೊಂದುತ್ತವೆ. ಈ ಶಿಥಿಲತೆ ತೇವಯುತ ಉಷ್ಣಾವಲಯದ ವಾಯುಗುಣದ ಪ್ರದೇಶಗಳಲ್ಲಿ ಕಂಡುಬರುತ್ತದೆ.
  6. ಅಲೆಗಳು: ಅಲೆಗಳು ಅಪ್ಪಳಿಸಿ ಒತ್ತಡವುಂಟು ಮಾಡಿ ಅನಂತರ ಹಿಂದೆ ಬಂದಾಗ ಕಡಿಮೆಯಾಗಿ ಪುನಃ ಈ ನಿರಂತರ ಕ್ರಿಯೆಯಿಂದ ಶಿಲಾಕಣಗಳ ವಿಭಜನೆಯಿಂದ ತೀರ ಪ್ರದೇಶದಲ್ಲಿ ಈ ರೀತಿಯ ಶಿಥಿಲೀಕರಣವನ್ನು ಅಲೆಗಳು ಉಂಟುಮಾಡುತ್ತವೆ.
  7. ಜೀವಿಗಳ ಚಟುವಟಿಕೆ: ಶಿಲೆಗಳಲ್ಲಿನ ಸಂದುಗಳವರೆಗೆ ಸಸ್ಯಗಳು ಬಿಡುವುದರಿಂದ ಹಿಮ ಉಂಟುಮಾಡುವ ಪರಿಣಾಮವನ್ನು ಉಂಟುಮಾಡುತ್ತವೆ. ಅಂದರೆ ಬೇರುಗಳು ಶಿಲಾಗೋಡೆಗಳ ಮೇಲೆ ಒತ್ತಡವನ್ನುಂಟು ಮಾಡುವುದರಿಂದ ಶಿಥಿಲೀಕರಣ ಉಂಟಾಗುತ್ತದೆ. ಎರೆಹುಳುಗಳು, ಇರುವೆ ಮುಂತಾದ ಜೀವಿಗಳು ಶಿಲಾವಸ್ತುಗಳನ್ನು ತೆರೆಯಲ್ಪಡುವುದರಿಂದ ಇತರ ಶಿಥಿಲೀಕರಣ ಉಂಟಾಗುತ್ತವೆ.
  8. ಗುರುತ್ವಾಕರ್ಷಣಾ ಶಕ್ತಿ: ಭೌತಿಕ ಅಂಶಗಳಾದ ಉಷ್ಣಾಂಶ, ಗಾಳಿ, ಹಿಮ, ವೃಷ್ಠಿ ಮುಂತಾದ ಕರ್ತೃಗಳಿಂದ ಈಗಾಗಲೇ ಶಿಥಿಲೀಕರಣ ಹೊಂದಿದ ಶಿಲಾಚೂರುಗಳು ಎತ್ತರದ ಭಾಗಗಳಿಂದ ಗುರುತ್ವಬಲದಿಂದ ಕೆಳಗಿಳಿಯುವಾಗ ಮಾರ್ಗದಲ್ಲಿನ ಶಿಲೆಗಳನ್ನು ಘರ್ಷಿಸಿ, ಸಣ್ಣದಾಗಿ ಬಿರುಕುಗಳನ್ನು ಉಂಟುಮಾಡುತ್ತವೆ. ಪರ್ವತ ಮತ್ತು ಬೆಟ್ಟ ಪ್ರದೇಶಗಳಲ್ಲಿ ಈ ರೀತಿಯ ಶಿಥಿಲೀಕರಣ ಕಂಡು ಬರುತ್ತದೆ.

ರಾಸಾಯನಿಕ ಶಿಥಿಲೀಕರಣ

ಬದಲಾಯಿಸಿ
 
ರಾಸಾಯನಿಕ ಶಿಥಿಲೀಕರಣ

ವಾಯುಮಂಡಲದ ಅವಶ್ಯಕಗಳಾದ ಅನಿಲಗಳು ಮಳೆನೀರಿನೊಂದಿಗೆ ಮಿಶ್ರಣ ಹೊಂದಿ ಉಂಟಾದ ದ್ರಾವಣ ಮತ್ತು ಶಿಲಾಪದಾರ್ಥಗಳಲ್ಲಿನ ಖನಿಜಗಳ ನಡುವಿನ ರಾಸಾಯನಿಕ ಕ್ರಿಯೆಗಳಿಂದ ಉಂಟಾಗುವ ಶಿಥಿಲೀಕರಣಕ್ಕೆ ರಾಸಾಯನಿಕ ಶಿಥಿಲೀಕರಣ ಎಂದು ಹೆಸರು. ಉಷ್ಣ ಮತ್ತು ತೇವಯುತ ವಾಯುಗುಣ ಪ್ರದೇಶಗಳಲ್ಲಿ ಈ ರೀತಿಯ ಶಿಥಿಲೀಕರಣ ಉಂಟಾಗುತ್ತದೆ. ಶಿಲೆಗಳ ಗಾತ್ರದ ಹೆಚ್ಚಳ ಮತ್ತು ಅದರಿಂದಾಗಿ ಸ್ಟ್ರೈನ್ ಹೆಚ್ಚಳ, ಶಿಲಾ ಪದಾರ್ಥಗಳ ಗಾತ್ರ ಕಡಿಮೆಯಾಗುವಿಕೆ ಮತ್ತು ಇದರಿಂದಾಗಿ ಪ್ರತಿ ಘಟಕ ಗಾತ್ರದ ಶಿಲೆಗಳ ಮೇಲ್ಮೈ ಹೆಚ್ಚಳ, ಸಾಪೇಕ್ಷವಾಗಿ ಕಡಿಮೆ ಸಾಂದ್ರ ಮತ್ತು ಸ್ಥಿರ ಖನಿಜಗಳುಂಟಾಗುವಿಕೆ- ಇವು ರಾಸಾಯನಿಕ ಶಿಥಿಲೀಕರಣದಿಂದಾಗುವ ಬದಲಾವಣೆಗಳು.

ರಾಸಾಯನಿಕ ಶಿಥಿಲೀಕರಣದ ವಿಧಗಳು
ಬದಲಾಯಿಸಿ
  1. ಆಮ್ಲಜನಕ ಸಂಯೋಜನೆ: ಆಮ್ಲಜನಕವು ಇತರ ಖನಿಜಗಳ ಧಾತುಗಳೊಂದಿಗೆ ಸಂಯೋಗ ಹೊಂದಿದಾಗ ದ್ರಾವಣದಲ್ಲಿ ಆಮ್ಲಜನಕಕ್ಕೆ ಧಾತುಗಳು ಎಲೆಕ್ಟ್ರಾನ್ಗಳನ್ನು ಬಿಟ್ಟುಕೊಡುತ್ತವೆ. ಈ ಕ್ರಿಯೆಗೆ 'ಭಸ್ಮೀಕರಣ' ಎನ್ನುವರು. ಶಿಲೆಗಳಲ್ಲಿನ ಸಲ್ಮೈಡ್, ಮೈಕಾ, ಪೆರಸ್ ಸ್ಥಿತಿಯ ಕಬ್ಬಿಣ ಮತ್ತು ಇಂಗಾಲಮ್ಲದ ಸಾವಯುವ ವಸ್ತುಗಳ ಜೊತೆ ಆಮ್ಲಜನಕ ಭಸ್ಮೀಕರಣ ಹೊಂದಿ ಶಿಥಿಲೀಕರಣ ಹೊಂದುತ್ತವೆ. ಬಸಾಲ್ಟ್, ಹಾರ್ನ್ ಬ್ಲೆಂಡ್, ಅಗಾಯಿಟ್ ಮತ್ತು ಪೈರೇಟ್ ಶಿಲೆಗಳು ಈ ರೀತಿಯ ಶಿಥಿಲೀಕರಣಕ್ಕೆ ಒಳಗಾಗುತ್ತವೆ.
  2. ಜಲ ಸಂಯೋಜನೆ: ನೀರಿನ ಅಣುಗಳು ಶಿಲೆಗಳ ಖನಿಜಗಳೊಂದಿಗೆ ಸಂಯೋಜನೆ ಹೊಂದಿ ಖನಿಜಗಳ ಗಾತ್ರ ದಪ್ಪದಾಗುವುದಕ್ಕೆ ಜಲಸಂಯೋಜನೆ ಎನ್ನುವರು. ಶಿಲೆಗಳಲ್ಲಿನ ಕೆಲ ಖನಿಜಗಳ (ಪೊಟ್ಯಾಶ್ ಪೆಲ್ಡ್ ಸ್ಪಾರ್) ನೀರನ್ನು ಹೀರುವ ಗುಣವನ್ನು ಹೊಂದಿವೆ. ನೀರನ್ನು ಹೀರಿ ಖನಿಜಗಳು ದಪ್ಪಗಾದಾಗ, ಶಿಲೆಗಳು ವಿಸ್ತಾರಗೊಂಡು, ಶಿಲೆಗಳು ಚೂರಿಗಳಾಗುತ್ತವೆ. ಉದಾ: ಪೊಟ್ಯಾಶ್ ಪೆಲ್ಡ್ ಸ್ಟಾರ್ ಜಲಸಂಯೋಜನೆಯಿಂದ ಜಿಪ್ಲಂ ಮತ್ತು ಹೆಮಟೈಟ್ ಜಲಸಂಯೋಜನೆಯಿಂದ ಲಿಮಾನೈಟ್ ಉಂಟಾಗುತ್ತವೆ.
  3. ಇಂಗಾಲ ಸಂಯೋಜನೆ: ವಾಯುಮಂಡಲದ ಇಂಗಾಲಾಮ್ಲ ಮಳೆ ನೀರಿನೊಂದಿಗೆ ಸಂಯೋಜನೆ ಹೊಂದಿ ದುರ್ಬಲ ಇಂಗಾಲಾಮ್ಲವಾಗಿ ಪರಿವರ್ತನೆಯಾಗಿ, ಕಾರ್ಬೋನೇಟ್ (ಕ್ಯಾಲ್ಸಿಯಂ ಉಳ್ಳ ಶಿಲೆಗಳು) ಶಿಲೆಗಳೊಂದಿಗೆ ಸಂಪರ್ಕ ಹೊಂದಿದಾಗ ಬೈಕಾರ್ಬೋನೇಟ್‍ಗಳಾಗಿ, ಆ ಶಿಲೆಗಳು ನೀರಿನಲ್ಲಿ ಸುಲಭವಾಗಿ ಕರಗಲ್ಪಡುವುದರಿಂದ ಶಿಲೆಗಳ ಶಿಥಿಲೀಕರಣಕ್ಕೆ 'ಇಂಗಾಲ ಸಂಯೋಜನೆ'ಯ ಶಿಥಿಲೀಕರಣ ಎನ್ನುವರು. ಉದಾ: ಸುಣ್ಣಕಲ್ಲಿನ ಶಿಲೆಗಳ ಪ್ರದೇಶಗಳಲ್ಲಿ ಈ ವಿಧದ ಶಿಥಿಲೀಕರಣ ಹೆಚ್ಚು.
  4. ದ್ರಾವಣೀಕರಣ: ನೀರಿನಿಂದ ಅನೇಕ ಖನಿಜಗಳು ಕರಗಲ್ಪಡುವ ರಾಸಾಯನಿಕ ಕ್ರಿಯೆಯೇ ದ್ರಾವಣೀಕರಣ. ಮಳೆನೀರು ಶಿಲೆಗಳನ್ನು ಪ್ರವೇಶಿಸಿದಾಗ, ಅವು ಕರಗಲ್ಪಟ್ಟು ಈ ರೀತಿಯ ಶಿಥಿಲೀಕರಣ ಉಂಟಾಗುತ್ತದೆ. ಉದಾ: ರಾಕ್ ಸಾಲ್ಟ್ (ಕಲ್ಲುಪ್ಪು), ಜಿಪ್ಸ್ಂ, ಪೊಟಾಷ್, ಇತ್ಯಾದಿ ಶಿಲೆಗಳು

ಜೀವ-ರಾಸಾಯನಿಕ ಶಿಥಿಲೀಕರಣ

ಬದಲಾಯಿಸಿ

ಕ್ಯಾಟ್ಅಯನ್ ವಿನಿಯಮ ಬೇರುಗಳಿಂದ ಹೊರ ಬೀಳುವ ಆಮ್ಲಗಳು (ಲವಣಗಳು) ಮತ್ತು ಸಾವಯವ ಆಮ್ಲಗಳ ಉತ್ಪನ್ನದಿಂದಾಗಿ ಈ ವಿಧದ ಶಿಥಿಲೀಕರಣ ಉಂಟಾಗುತ್ತದೆ. ಸತ್ತ ಸಸ್ಯಗಳಿಂದ ದೊರೆಯುವ ಜೈವಿಕಾಂಶವು ಶಿಲೆಗಳ ವಿಭಜನೆಯನ್ನು ಉಂಟು ಮಾಡುತ್ತದೆ, ಪ್ರಾಣಿಗಳ ವಿಸರ್ಜನೆಯಿಂದ ಉತ್ಪತ್ತಿಯಾಗುವ ಮಣ್ಣು ಮತ್ತು ಶಿಲೆಗಳನ್ನು ಶಿಥಿಲೀಕರಿಸಲು ಸಹಾಯ ಮಾಡುತ್ತವೆ. ಹುಳುಗಳು, ಮೊಲಗಳು, ಬಿಲ್ಲಗಳನ್ನುಂಟುಮಾಡುವುದರ ಮೂಲಕ ಮಣ್ಣನ್ನು ಸಡಿಲಗೊಳಿಸುತ್ತವೆ. ಮಾನವ ಚಟುವಟಿಕೆಗಳಾದ ಗಣಿಗಾರಿಕೆ, ತೀಡುವಿಕೆ, ಅರಣ್ಯನಾಶ, ರಸ್ತೆ ಮತ್ತು ಕಟ್ಟಡಗಳ ನಿರ್ಮಾಣಗಳಿಂದ ಶಿಲೆಗಳು ಶಿಥಿಲೀಕರಣಕ್ಕೊಳಗಾಗುತ್ತವೆ.

ಶಿಥಿಲೀಕರಣದ ಉತ್ಪನ್ನಗಳು

ಬದಲಾಯಿಸಿ
  1. ಎಲ್ಯೂವಿಯಂ: ಶಿಥಿಲೀಕರಣದಿಂದ ಉಂಟಾಗಿ ಮೂಲಶಿಲೆಯ ಮೇಲೆ ಪದರವಾಗಿ ಇರುವ ಶಿಥಿಲೀಕರಣದ ಕೊನೆ ಉತ್ಪನ್ನವೇ ಇದು. ಇದನ್ನು 'ರಿಗೋಲಿತ್' ಅಂತಲೂ ಕರೆಯುವರು.
  2. ಡೆಲ್ಯೂವಿಯಂ: ಗುರುತ್ವದ ಪ್ರಭಾವದಿಂದಾಗಿ ಇಳಿಜಾರು ಮತ್ತು ಪರ್ವತಪಾದಗಳಿಗೆ ಸ್ಥಳಾಂತರಿಸಲ್ಪಟ್ಟ ಶಿಥಿಲೀಕರಣದ ಕೊನೆ ಉತ್ಪನ್ನವೇ ಇದು.
 
ಸವೆತ

ಭೂ ಮೇಲ್ಮೈನ ಭಾಗಗಳು ನೈಸರ್ಗಿಕ ಕರ್ತೃಗಳಿಂದ ಸವೆಸಿ ಕ್ಷಯಿಸುವ ಕಾರ್ಯಕ್ಕೆ ನಗ್ನೀಕರಣ ಎನ್ನುವರು. ನಗ್ನೀಕರಣ ೩ ರೀತಿಯಲ್ಲಿ ಉಂಟಾಗಿತ್ತದೆ ೧) ಸವೆತ ೨) ಸಾಗಾಣಿಕೆ ೩) ಸಂಚಯನ. ನಗ್ನೀಕರಣ ಮೊದಲ ಹಂತವೇ ಸವೆತ. ಭೂ ರಚನಾ ಅಂಶಗಳಾದ ಗಾಳಿ, ನೀರು, ಹಿಮ, ಅಲೆಗಳು, ಪ್ರವಾಹಗಳು ಇತ್ಯಾದಿಗಳಿಂದ ಕೊರೆಯುವಿಕೆ, ಉಜ್ಜುವಿಕೆ ಮತ್ತು ಕಿತ್ತೆಸೆಯುವಿಕೆ ಇತ್ಯಾದಿ ಕ್ರಿಯೆಗಳಿಂದ ಶಿಲಾದ್ರವ್ಯಗಳನ್ನು/ಭೂಮೇಲ್ಮೈವಲಯವನ್ನು ಸವೆಸುವುದಕ್ಕೆ 'ಸವೆತ' ಎನ್ನುವರು.[]

ಸವೆತದ ವಿಧಗಳು

ಬದಲಾಯಿಸಿ
  1. ಹೈಡ್ರಾಲಿಕ್ ಕ್ರಿಯೆ: ಚಲಿಸುತ್ತಿರುವ ನೀರು ಶಿಲಾ ಪದಾರ್ಥಗಳನ್ನು ಸವೆಸುವುದಕ್ಕೆ "ನೀರೊತ್ತಡ ಕ್ರಿಯೆ" ಎನ್ನುವರು.
  2. ಅಪವಹನ: ಸಡಿಲ ಶಿಲಾ ಚೂರುಗಳನ್ನು ಗಾಳಿ ಮೇಲಕ್ಕೆ ಹಾರಿಸಿಕೊಡು ಹೋಗುವುದಕ್ಕೆ "ಅಪವಹನ" ಎನ್ನುವರು.
  3. ಗೀಚುವಿಕೆ: ಭೂಮೇಲ್ಮೈ ಮೇಲಿನ ವಸ್ತುಗಳನ್ನು ಹಿಮನದಿಯು ಚಲಿಸುವುದರಿಂದ ಸಡಿಲಗೊಳಿಸುವುದಕ್ಕೆ 'ಗೀಚುವಿಕೆ' ಎನ್ನುವರು.
  4. ಕರೊಷನ್: ದ್ರಾವಣದಿಂದಾಗಿ ವಸ್ತುಗಳು ಸವೆಯಲ್ಪಡುವುದಕ್ಕೆ ಕರೋಷನ್ ಎನ್ನುವರು.
  5. ಘರ್ಷಣೆ: ಶಿಲಾ ಚೂರುಗಳು ಗಾಳಿಯಿಂದ ಕೊಂಡೊಯ್ಯಲ್ಪಟ್ಟಾಗ ತಮ್ಮ ತಮ್ಮಲ್ಲೇ ಉಜ್ಜಲ್ಪಟ್ಟು ಮತ್ತು ತಾಕಲಾಟದಿಂದ ಪುಡಿಯಾಗುವ ಸವೆತಕ್ಕೆ ಘರ್ಷಣೆ ಎನ್ನುವರು.
  6. ಪ್ಲಕ್ಕಿಂಗ್: ಶಿಲೆಗಳ ಸೀಳು/ಸಂಧಿಗಳಲ್ಲಿ ನೀರು ಪ್ರವೇಶಿಸಿ, ಘನೀಕವರಿಸಿ/ಹೆಪ್ಪುಗಟ್ಟಿ ಹಿಮನದಿಯಾಗಿ ಶಿಲೆಗಳ ಮೂಲಶಿಲಾಭಾಗಕ್ಕೆ ಪ್ರವೇಶಿಸಿ, ಚಲಿಸುತ್ತಿರುವ ಹಿಮನದಿಯಿಂದಾಗಿ ಸಡಿಲಗೊಂಡು ಕಳಚಲ್ಪಡುವ ಶಿಲಾ ಪದಾರ್ಥಗಳಿಗೆ 'ಪ್ಲಕ್ಕಿಂಗ್' ಎನ್ನುವರು.

ಸಾಗಾಣಿಕೆ ವಿಧಗಳು

ಬದಲಾಯಿಸಿ

ಸಾಗಾಣಿಕೆಯ ಸವೆತದ ಒಂದು ಭಾಗವಾದ್ದರಿಂದ ಸವೆತ ವಿಧಗಳಂತೆ ಸಾಗಾಣಿಕೆಯ ವಿಧಗಳೂ ಅತ್ಯವಶ್ಯಕ.

  1. ಉರುಳುವೆಕೆ: ಗಾಳಿ/ನೀರಿನಿಂದ ಶಿಲಾ ಪಧಾರ್ಥಗಳ ಸಾಗಾಣಿಕೆ.
  2. ಜಿಗಿತ ಚಲನೆ: ಎಗುರತ್ತಾ ಕುಪ್ಪಳಿಸುತ್ತಾ ಬಹುದೂರದವರೆಗೆ ಗಾಳಿಯಿಂದ ಸಾಗಿಸಲ್ಪಡುವ ಮರಳಿನ ಕಣಗಳನ್ನು ಜಿಗಿತ ಚಲನೆ ಎನ್ನುವರು.
  3. ತೇಲುವಿಕೆ: ಚಲಿಸುವ ನೀರು ಅಥವಾ ಗಾಳಿಯಲ್ಲಿ ತೇಲುತ್ತಾ ಸಾಗುವ ಹಗುರ ಸೂಕ್ಷ್ಮಶಿಲಾಕಣಗಳಿಗೆ 'ತೇಲುವಿಕೆ' ಎನ್ನುವರು.
  4. ದ್ರಾವಣೀಕರಣ: ನೀರಿನಲ್ಲಿ ಶಿಲಾ ಮತ್ತು ಖನಿಜ ವಸ್ತುಗಳು ಕರಗಿ ಸಾಗಿಸಲ್ಪಡುವುದೇ ದ್ರಾವಣೀಕರಣ.

ಸವೆತವನ್ನುಂಟು ಮಾಡುವ ನೈಸರ್ಗಿಕ ಕರ್ತೃಗಳು

ಬದಲಾಯಿಸಿ
  1. ನದಿ ಕಾರ್ಯ- ಚಲಿಸುವ ನೀರು
  2. ಚಲಿಸುವ ಹಿಮನದಿ
  3. ಅಂತರ್ಜಲ
  4. ಗಾಳಿ[]
  5. ಸಮುದ್ರ/ಸಾಗರಗಳ ಅಲೆ/ಪ್ರವಾಹಗಳು

ಬಾಹ್ಯ ಸಂಪರ್ಕ

ಬದಲಾಯಿಸಿ

ಇವನ್ನೂ ನೋಡಿ

ಬದಲಾಯಿಸಿ
  1. ಗ್ರ್ಯಾಫೈಟ್‌
  2. ಭೂ ನಗ್ನೀಕರಣ
  3. ಭೂಕುಸಿತ
  4. ಮಣ್ಣು
  1. Rakovan, John (November–December 2003). "A Word to the Wise: Hypogene & Supergene" (PDF). Rocks & Minerals (Taylor & Francis) 78 (6): 419. doi:10.1080/00357529.2003.9926759. Retrieved August 18, 2012.
  2. Smithson, P et al (2008) Fundamentals of the Physical Environment (4th ed.)
  3. Galay, V. J. (1983). "Causes of River Bed Degradation". Water Resources Research 19 (5): 1057. Bibcode:1983WRR....19.1057G. doi:10.1029/WR019i005p01057.
  4. Gore, Pamela J. W. Weathering. Georgia Perimeter College
  5. Taber, Stephen (1930). "The mechanics of frost heaving" (PDF). Journal of Geology 38 (4): 303–315. Bibcode:1930JG.....38..303T. doi:10.1086/623720
  6. Hall, K. The role of thermal stress fatigue in the breakdown of rock in cold regions, Geomorphology, 1999.
  7. Blanco, Humberto & Lal, Rattan (2010). "Soil and water conservation". Principles of Soil Conservation and Management. Springer. p. 2. ISBN 978-90-481-8529-0.
  8. Blanco, Humberto & Lal, Rattan (2010). "Water erosion". Principles of Soil Conservation and Management. Springer. pp. 29–31. ISBN 978-90-481-8529-0.