ಭೂ ನಗ್ನೀಕರಣ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಭೂ ನಗ್ನೀಕರಣ ಕಾರಣಗಳು: ವಿವಿಧ ರೀತಿಯ ಪ್ರಾಕೃತಿಕ ಶಕ್ತಿಗಳು ಭೂಮಿಯ ಮೇಲ್ಬಾಗವನ್ನು ಸವೆಸುವ ಕಾರ್ಯ ಭೂ ನಗೀಕರಣ ಎನ್ನುವರು.ನಗ್ನೀಕರಣ ಎನ್ನುವರು. ನಗ್ನೀಕರಣದ ಕಾರಣ ಕರ್ತೃಗಳೆಂದರೆ;ನದಿ,ಹಿಮನದಿ,ಅಂತರ್ಜಲ,ಮಾರುತ ಹಾಗೂ ಸಮುದ್ರದ ಅಲೆಗಳು. ಇವು ಸವೆತ,ಸಾಗಾಣಿಕೆ ಮತ್ತು ಸಂಚಯನ ಎಂಬ ಮೂರು ಕಾರ್ಯಗಳನ್ನು ನಡೆಸಿ ಭೂಮಿಯ ಮೇಲ್ಬಾಗದಲ್ಲಿ ವಿಶಿಷ್ಟವಾದ ಭೂಸ್ವರೂಪಗಳನ್ನು ನಿರ್ಮಿಸುತ್ತವೆ.
ನದಿ:ಉಗಮದಿಂದ ಸಮುದ್ರದವರೆಗೆ ತನ್ನ ಕಣೀವೆಯಲ್ಲಿ ಹರಿಯುವ ಶುದ್ಧನೀರಿನ ಜಲಧಾರೆಯೇ ನದಿ. ಹರಿಯುವ ನದಿಯ ನೀರು ಭೂಮೇಲೆ ವಿಸ್ತಾರವಾದ ಭಾಗದಲ್ದಿ ನಗ್ನಿಕರಣ ಕಾರ್ಯವನ್ನು ನಿರ್ವಹಿಸುವ ಮುಖ‍್ಯ ಕರ್ತೃ. ನದಿಗಳು ಸಾಮಾನ್ಯವಾಗಿ ಚಿಲುಮೆ, ಹಿಮನದಿ ಅಥವಾ ಮಳೆನೀರಿನ ಮೂಲದಿಂದ ಉಗಮವಾಗುತ್ತದೆ. ನದಿ ಹರಿಯುವ ಮಾರ್ಗವೇ 'ನದಿಯ ಪಾತ್ರ'. ನದಿಯು ಆರಂಭಗೊಳ್ಳುವ ಸ‍್ಥಾನವನ್ನು 'ನದಿಯಮೂಲ' ಎಂದೂ,ನದಿ ಅಂತ್ಯಗೊಂಡು ಸಮುದ್ರ ಸೇರುವ ಭಾಗವನ್ನು 'ನದಿಮಖ' ಎಂದೂ ಕರೆಯುವರು. ಒಂದು ಸಣ‍್ಣ ನದಿಯು ತನ್ನ ಕಣಿವೆಯಲ್ಲಿ ಮತ್ತೊಂದು ಪ್ರಧಾನ ನದಿಯನ್ನು ಸೇರಿದಲ್ಲಿ ಅದನ್ನು 'ಉಪನದಿ' ಎಂದು ಕರೆಯುವರು.ಒಂದು ನದಿ ಮತ್ತೊಂದು ನದಿಯನ್ನು ಸೇರುವ ಸ‍್ಥಳವನ್ನು 'ಸಂಗಮ' ಎನ್ನುವರು.
ನದಿಯ ಪಾತ್ರ; ನದಿಯ ಪಾತ್ರವನ್ನು ಮೇಲ್ಕಣಿವೆ ಪಾತ್ರ, ಮದ್ಯಕಣಿವೆ ಪಾತ್ರ ಮತ್ತು ಕೆಳಕಣಿವೆ ಪಾತ್ರ ಎಂದು ಮೂರುಹಂತಗಳಾಗಿ ವಿಂಗಡಿಸಬಹುದು.ಈ ಹಂತಗಳ ನದಿಯ ನೀರಿನ ಪ್ರಮಾಣ,ನೀರಿನ ಪ್ರಮಾಣ,ನೀರಿನ ವೇಗ ಮತ್ತು ನದಿ ಪಾತ್ರದ ಭೂ ಸ್ವರೂಪ ಬೇರೆ ಬೇರೆ ರೀತಿಯಲ್ಲಿರುವುದು. ಪ್ರತಿ ಹಂತದಲ್ಲಿಯೂ ನದಿಯ ಕಾರ್ಯ ಹಾಗೂ ಅದರಿಂದ ಉಂಟಾಗುವ ಭೂ ಸ್ವರೂಪಗಳು ವಿಶಷ್ಡವಾಗಿವೆ.