ತಾಪಮಾನ

(ಉಷ್ಣಾಂಶ ಇಂದ ಪುನರ್ನಿರ್ದೇಶಿತ)

ತಾಪಮಾನವು ಭೌತಶಾಸ್ತ್ರದಲ್ಲಿ ವಸ್ತು ಅಥವಾ ವ್ಯವಸ್ಥೆಯೊಂದರ ಭೌತಿಕ ಗುಣಲಕ್ಷಣ.ಈ ಭೌತಿಕ ಗುಣಲಕ್ಷಣವೇ ವಸ್ತುವು "ಬಿಸಿ" ಅಥವಾ "ತಣ್ಣಗಿದೆ" ಎಂದು ಅನುಭವಕ್ಕೆ ಬರುವ ಸಂವೇದನೆಯ ಆಧಾರ. ಯಾವುದೇ ವಸ್ತುವು ಬಿಸಿಯಾಗುತ್ತಾ ಹೋದಂತೆ ಅದರ ತಾಪಮಾನವು ಹೆಚ್ಚುತ್ತದೆ.ತಾಪಮಾನವು ಥರ್ಮೋಡೈನಾಮಿಕ್ಸ್ ನಲ್ಲಿ ಒಂದು ಪ್ರಮುಖ ಅಧ್ಯಯನದ ಅಂಶ.ಏರಡು ವಸ್ತುಗಳ ಮಧ್ಯೆ ಯಾವುದೇ ರೀತಿಯ ಉಷ್ಣತೆ ಪ್ರವಹಿಸದಿದ್ದಲ್ಲಿ, ಆ ಎರಡು ವಸ್ತುಗಳು ಒಂದೇ ತಾಪಮಾನದಲ್ಲಿವೆಯೆಂದು ತಿಳಿಯಬೇಕು.ಇಲ್ಲದಿದ್ದಲ್ಲಿ ಹೆಚ್ಚು ತಾಪಮಾನದ ವಸ್ತುವಿನಿಂದ ಕಡಿಮೆ ತಾಪಮಾನದ ವಸ್ತುವಿಗೆ ಉಷ್ಣತೆ ಪ್ರವಹಿಸುತ್ತದೆ. ಒಂದು ವಸ್ತುವಿನ ತಾಪವನ್ನು ಅಳೆಯಲು ನಾವು ಮುಖ್ಯವಾಗಿ ಮೂರು ರೀತಿಯ ತಾಪಮಾನ ಪದ್ದತಿಗಳನ್ನು ಬಳಸುತ್ತೇವೆ ಅವುಗಳೆಂದರೆ, ೧)ಸೆಲ್ಸಿಯಸ್ ಪದ್ದತಿ ೨)ಫ್ಯಾರನ್ ಹೀಟ್ ಪದ್ದತಿ ಮತ್ತು ೩) ಕೆಲ್ವಿನ್ ಪದ್ದತಿ. ಸೈದ್ಧಾಂತಿಕ ಅತಿ ಕಡಿಮೆ ತಾಪಮಾನ ಸಂಪೂರ್ಣ ಶೂನ್ಯ ತಾಪಮಾನ.

"https://kn.wikipedia.org/w/index.php?title=ತಾಪಮಾನ&oldid=718916" ಇಂದ ಪಡೆಯಲ್ಪಟ್ಟಿದೆ