ವಾಸುದೇವ್ ಸುನೀಲ್ ಕುಮಾರ್ (15 ಆಗಸ್ಟ್ 1975) [] ಭಾರತ ದೇಶದ ರಾಜಕಾರಣಿ. ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಇವರು, 2021 ರಿಂದ 2023ರವರೆಗೆ ಕರ್ನಾಟಕ ಸರ್ಕಾರದಲ್ಲಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದರು. ಇದಕ್ಕೂ ಮೊದಲು ಕರ್ನಾಟಕ ಶಾಸಕಾಂಗ ಸಭೆಯ ಬಿಜೆಪಿ ಸರ್ಕಾರದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿರುವರು. 2020 ನವೆಂಬರ್‌ನಲ್ಲಿ ಇವರನ್ನು ಕೇರಳದ ಬಿಜೆಪಿಯ ಸಹ-ಉಸ್ತುವಾರಿಯಾಗಿ ನೇಮಿಸಲಾಯಿತು.

ವಾಸುದೇವ ಸುನಿಲ್ ಕುಮಾರ್

ಕರ್ನಾಟಕದ ಸರಕಾರದ ಕ್ಯಾಬಿನೆಟ್ ಸಚಿವರು
ಹಾಲಿ
ಅಧಿಕಾರ ಸ್ವೀಕಾರ 
4 ಆಗಸ್ಟ್ 2021
ಇಂಧನ ಸಚಿವರು 4 ಆಗಸ್ಟ್ 2021
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು 4 ಆಗಸ್ಟ್ 2021

ಕರ್ನಾಟಕ ವಿಧಾನ ಸಭೆ ಸದಸ್ಯರು
ಹಾಲಿ
ಅಧಿಕಾರ ಸ್ವೀಕಾರ 
2013
ಪೂರ್ವಾಧಿಕಾರಿ ಎಚ್. ಗೋಪಾಲ ಭಂಡಾರಿ
ಮತಕ್ಷೇತ್ರ ಕಾರ್ಕಳ
ಅಧಿಕಾರ ಅವಧಿ
2004 – 2008
ಪೂರ್ವಾಧಿಕಾರಿ ಎಚ್. ಗೋಪಾಲ ಭಂಡಾರಿ
ಉತ್ತರಾಧಿಕಾರಿ ಎಚ್. ಗೋಪಾಲ ಭಂಡಾರಿ
ಮತಕ್ಷೇತ್ರ ಕಾರ್ಕಳ
ವೈಯಕ್ತಿಕ ಮಾಹಿತಿ
ಜನನ ವಾಸುದೇವ ಸುನಿಲ್ ಕುಮಾರ್
(1975-08-15) ೧೫ ಆಗಸ್ಟ್ ೧೯೭೫ (ವಯಸ್ಸು ೪೯)
ಮೂಡಿಗೆರೆ
ರಾಜಕೀಯ ಪಕ್ಷ ಭಾರತೀಯ ಜನತಾ ಪಾರ್ಟಿ
ಸಂಗಾತಿ(ಗಳು) ಪ್ರಿಯಾಂಕ
ಮಕ್ಕಳು ಮೂವರು ಮಕ್ಕಳು


ವೈಯಕ್ತಿಕ ಜೀವನ

ಬದಲಾಯಿಸಿ

ಅಗಸ್ಟ್ 15, 1975 ರಲ್ಲಿ ಜನಿಸಿದ ಇವರ ತಂದೆ ಎಂ ಕೆ ವಾಸುದೇವ ಹಾಗೂ ತಾಯಿ ಕೆ ಪಿ ಪ್ರಮೋದ. ಇವರ ಹೆಂಡತಿ ಪ್ರಿಯಾಂಕ ಹಾಗೂ ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.

ಶಿಕ್ಷಣ

ಬದಲಾಯಿಸಿ

ಕಾರ್ಕಳದ ರಾಮಪ್ಪ ಹಿರಿಯ ಪ್ರಾಥಮಿಕ ಶಾಲೆ ಪುಲ್ಕೇರಿ ಇಲ್ಲಿ ಒಂದರಿಂದ ನಾಲ್ಕನೇ ತರಗತಿ, ಬಸವನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದರಿಂದ ಏಳನೇ ತರಗತಿ ಮತ್ತು ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಮಾಡಿದರು. ಚಿಕ್ಕಮಗಳೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಕಲಾ ಪದವಿ ಪಡೆದು ಪತ್ರಕರ್ತರಾಗಿ ಸೇವೆ ಸಲ್ಲಿಸಿ ತದನಂತರ ಸಂಪೂರ್ಣವಾಗಿ ಸಮಾಜ ಸೇವೆಗಾಗಿ ತನ್ನನ್ನು ತಾನು ಸಮರ್ಪಣೆ.

ರಾಜಕೀಯ ಹಿನ್ನೆಲೆ

ಬದಲಾಯಿಸಿ

ಸುನೀಲ್ ಕುಮಾರ್ ತನ್ನ ರಾಜಕೀಯ ವೃತ್ತಿಜೀವನವನ್ನು ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗದ ನಾಯಕನಾಗಿ ಆರಂಭಿಸಿದರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್. ನಂತರ ಅವರು 2004 ರಲ್ಲಿ ಭಾರತೀಯ ಜನತಾ ಪಾರ್ಟಿ ಸೇರಿದರು.

  1. 2004ರ ಕರ್ನಾಟಕ ಶಾಸಕಾಂಗ ಚುನಾವಣೆಯಲ್ಲಿ ಅವರು ಹಾಲಿ ಸದಸ್ಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಗೋಪಾಲ್ ಭಂಡಾರಿ ವಿರುದ್ಧ ಸ್ಪರ್ಧಿಸಿದರು ಕಾರ್ಕಳ ಕ್ಷೇತ್ರದಿಂದ ಕರ್ನಾಟಕ ಶಾಸಕಾಂಗ ಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು 10,000 ಮತಗಳ ಅಂತರದಿಂದ ಸೋಲಿಸಿದರು.[]
  2. ಸುನಿಲ್ ಕುಮಾರ್ ಅವರು ಎಚ್. ಗೋಪಾಲ್ ಭಂಡಾರಿ ಅವರನ್ನು 2008ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 1537 ಮತಗಳ ಕಡಿಮೆ ಅಂತರದಿಂದ ಗೆದ್ದರು.
  3. ಡಿ. ವಿ. ಸದಾನಂದ ಗೌಡ ಕರ್ನಾಟಕಮುಖ್ಯಮಂತ್ರಿ ಆದಾಗ ಸುನಿಲ್ ಕುಮಾರ್ 2012ರ ಲೋಕಸಭಾ ಉಡುಪಿ-ಚಿಕ್ಕಮಗಳೂರು ಉಪಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್‍ನ ಜಯಪ್ರಕಾಶ್ ಹೆಗ್ಡೆಯವರ ವಿರುದ್ಧ ಭಾರೀ ಅಂತರದಿಂದ ಸೋತರು.
  4. ಸುನಿಲ್ ಕುಮಾರ್ ಅವರು ಕಾರ್ಕಳ ಕ್ಷೇತ್ರದಿಂದ 2013ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎಚ್. ಗೋಪಾಲ್ ಭಂಡಾರಿ ಅವರ ವಿರುದ್ಧ 4000 ಮತಗಳ ಅಂತರದಿಂದ ಜಯ ಸಾಧಿಸಿದರು.[]
  5. ಸೆಪ್ಟೆಂಬರ್ 2019ರಿಂದ 2021ರ ವರೆಗೆ ಕರ್ನಾಟಕ ಸರ್ಕಾರದಲ್ಲಿ ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.[]

ರಾಜಕೀಯ ಹಾದಿ

ಬದಲಾಯಿಸಿ
  1. ಶಾಲಾ ಶಿಕ್ಷಣದ ಜೊತೆಜೊತೆಯಲ್ಲೇ ಅಪ್ಪಟ ದೇಶ ಪ್ರೇಮಿಯಾಗಿ ರೂಪುಗೊಳ್ಳುವಿಕೆ
  2. ರಾಷ್ಟ್ರೀಯವಾದಿ ಚಿಂತನೆಯ ಒಲವು ಹೊಂದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕಡೆಗೆ ಆಕರ್ಷಿತರಾಗಿ ಸಂಘದ ಗರಡಿಯಲ್ಲಿ ಶಿಸ್ತಿನ ಶಿಪಾಯಿಯಾಗಿ ವ್ಯಕ್ತಿತ್ವ ನಿರ್ಮಾಣ.
  3. ಬಾಲ್ಯದಿಂದಲೇ ವಾಕ್ಚಾತುರ್ಯವನ್ನು ಬೆಳೆಸಿಕೊಂಡು ವಿವಿಧ ರೀತಿಯ ಭಾಷಣ, ಚರ್ಚೆ, ಭಾವಗೀತೆ, ದೇಶಪ್ರೇಮದ ಗೀತೆಗಳಲ್ಲಿ ಮುಂಚೂಣಿಯ ಸಾಧನೆ. ಹಿತ್ತಲ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲೇ ವಿದ್ಯಾರ್ಥಿ ಸಂಘದ ಅಧ್ಯಕ್ಷ
  4. ಹಿಂದುತ್ವದ ಸಿದ್ದಾಂತವನ್ನು ಮೈಗೂಡಿಸಿಕೊಂಡು ಬಜರಂಗದಳದ ಮೂಲಕ ಹಿಂದೂಪರ ಹೋರಾಟ. 1997ರಲ್ಲಿ ರಾಷ್ಟ್ರದ ಗಮನ ಸೆಳೆದ ದತ್ತಪೀಠದ ಹೋರಾಟವನ್ನು ಒಂದು ವ್ರತದಂತೆ ಕೈಗೊಂಡ ರೀತಿ ಲಕ್ಷಾಂತರ ಜನರ ಮೆಚ್ಚುಗೆಯನ್ನು ಗಳಿಸಿತು. ಸಹಸ್ರ ಸಹಸ್ರ ಹಿಂದುಗಳನ್ನು ಒಟ್ಟುಗೂಡಿಸಿದರಲ್ಲದೆ ಅವರನ್ನು ದತ್ತಮಾಲೆಯನ್ನು ಧರಿಸಿ ಒಂದು ದೀಕ್ಷೆಯನ್ನು ಪಡೆಯುವಂತೆ ಪ್ರೇರೇಪಿಸಿತು. ಮುಂದೆ ಬಜರಂಗದಳ ಚಿಕ್ಕಮಗಳೂರು ಜಿಲ್ಲಾ ಸಂಚಾಲಕರಾಗಿ, ಕರ್ನಾಟಕ ರಾಜ್ಯ ಸಂಚಾಲಕರಾಗಿ ಸಂಘಟನೆಯನ್ನು ಬಲಪಡಿಸಿದ್ದು ಈಗ ಇತಿಹಾಸ.
  5. ನಿರಂತರ ಹೋರಾಟ, ಕಠಿಣ ಪರಿಶ್ರಮ, ನ್ಯಾಯ ನಿಷ್ಠುರತೆ , ಜನಪರ ಕಾಳಜಿ, ದೇಶಪ್ರೇಮ, ಅಂದಿನ ಸರಕಾರಗಳ ಸುಳ್ಳು ಪ್ರಕರಣಗಳ ಯಾವುದೇ ಬೆದರಿಕೆಗಳಿಗೆ ಜಗ್ಗದೆ, ಎದೆಗುಂದದೆ ಧೈರ್ಯವಾಗಿ ಎದುರಿಸಿದ್ದರಿಂದಲೇ ಮುಂದೆ ಅವಕಾಶಗಳು ಅರಸುತ್ತಾ ಬಂದುವು.
  6. ಪರಿಣಾಮವಾಗಿ 2004ರಲ್ಲಿ ಭಾರತೀಯ ಜನತಾ ಪಕ್ಷದ ಪ್ರತಿನಿಧಿಯಾಗಿ ಮೂರು ದಶಕಗಳ ಹಿನ್ನೆಲೆಯನ್ನು ಹೊಂದಿದ್ದು ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ಕಾರ್ಕಳದಲ್ಲಿ ಭಾರೀ ಬಹುಮತದೊಂದಿಗೆ ವಿಜಯ ಪತಾಕೆಯನ್ನು ಹಾರಿಸಿದ್ದು ಒಂದು ಐತಿಹಾಸಿಕ ದಾಖಲೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಶಾಸಕಾರಿ ಆಯ್ಕೆಯಾಗಿ ಬಂದು ಪ್ರಸ್ತುತ ರಾಜ್ಯ ಸಚಿವರ ಸ್ಥಾನಮಾನ ಹೊಂದಿರುವ ಕರ್ನಾಟಕ ಸರಕಾರದ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಆಯ್ಕೆಯಾಗಿದ್ದು ಶ್ರೀ ವಿ.ಸುನಿಲ್ ಕುಮಾರ್ ರವರ ನಾಯಕತ್ವಕ್ಕೆ ಸಾಕ್ಷಿ.

ರಾಷ್ಟ್ರೀಯ ಪ್ರಜ್ಞೆ

ಬದಲಾಯಿಸಿ

ಅಪ್ರತಿಮ ಹೋರಾಟಗಾರರಾಗಿದ್ದ ವಿನಾಯಕ ದಾಮೋದರ ಸಾವರ್ಕರ್ ಅವರ ಜನ್ಮ ಶತಮಾನೋತ್ಸವದ ಅರ್ಥಪೂರ್ಣ ಅಚರಣೆ ನಡೆಸಿ ಕಾರ್ಕಳ ತಾಲೂಕಿನಾದ್ಯಂತ ಯುವಜನರಿಗೆ, ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಸರಣಿಗಳನ್ನು ನಡೆಸಿ ರಾಷ್ಟ್ರ ಪ್ರೇಮದ ಕಹಳೆ ಮೊಲಗಿಸಿದ್ದು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ 150ನೇ ವರ್ಷಾಚರಣೆಯ ಅದ್ಧೂರಿ ಆಚರಣೆ ತಾಲೂಕಿನ ವಿದ್ಯಾರ್ಥಿಗಳೊಂದಿಗೆ ಚಹಾ ಕೂಟದ ಒಡನಾಟದೊಂದಿಗೆ ದೇಶ ಪ್ರೇಮವನ್ನು ಮೂಡಿಸಿದ ಸಾರ್ಥಕ ಸೇವೆ.

  1. ಹುಟ್ಟು ಹೋರಾಟಗಾರನಾಗಿ ಅನೇಕ ಹೋರಾಟಗಳಿಗೆ ನೇತೃತ್ವ ನೀಡಿ ಕಾಶ್ಮೀರ ಚಲೋದಂತಹ ಹೋರಾಟಕ್ಕೆ ನಾಯಕತ್ವ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಪ್ರಮಾಣ ವಚನ ಸ್ವೀಕರಿಸಿದ ಮರುಗಳಿಗೆಯಲ್ಲೇ ಪ್ರಥಮ ವಿಧಾನಸಭಾಧಿವೇಶನದಲ್ಲೇ ಹೆಬ್ರಿ ಸುಚೇತಾ ಶೆಟ್ಟಿ ಕೊಲೆ ಪ್ರಕರಣವನ್ನು ಪ್ರಸ್ತಾಪಿಸಿ ನ್ಯಾಯಕ್ಕಾಗಿ ಹೋರಾಟ. ತನ್ನ ಛಲಭರಿತ ಹೋರಾಟದಿಂದ ಕಾರ್ಕಳದ ವಿಶ್ವಕರ್ಮ ಸಮಾಜ ಬಾಂದವರ ಆಡಳಿತಕ್ಕೊಳಪಟ್ಟ ಶ್ರೀ ಕಾಳಿಕಾಂಬ ದೇವಾಲಯದ ಜಮೀನಿನ ಸಮಸ್ಯೆಯನ್ನು ಬಗೆಹರಿಸಿದ್ದು.
  2. ತನ್ನ ಶಾಸಕತ್ವದ ಪ್ರಥಮ ಅವಧಿಯಲ್ಲೇ ಎಲ್ಲಾ ಕಾನೂನಿನ ತೊಡಕುಗಳನ್ನು ಪರಿಹರಿಸಿ ಸರಕಾರದ ಸವಲತ್ತುಗಳನ್ನು ಪಡೆಯುವಲ್ಲಿ ಅವಕಾಶ ವಂಚಿತರಾದ ಜನರಿಗೆ ಪರಿಹಾರ. ಆ ನೆಲೆಯಲ್ಲಿ ಅತ್ಯಂತ ಬಡವರ ಮನೆಗೆ ದಾನಿಗಳ ನೆರವಿನಿಂದ ಮೂರು ಲಕ್ಷ ಹಂಚುಗಳ ಕೊಡುಗೆ. ಆ ಪ್ರಕ್ರಿಯೆಯನ್ನು ಈ ತನಕವೂ ಮುಂದುವರೆಸಿಕೊಂಡು ಬಂದಿರುವುದು ಒಂದು ಐತಿಹಾಸಿಕ ಸಾಧನೆ.
  3. ಜಾತಿ ತಾರತಮ್ಯವನ್ನು ಹೋಗಲಾಡಿಸಿ ದುಂದುವೆಚ್ಚವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಕಳದಲ್ಲಿ ಸಾಮೂಹಿಕ ವಿವಾಹ ಪರಿಕಲ್ಪನೆಯನ್ನು ಸಾಕಾರಗೊಳಿಸಿ ತಾನೂ ಕೂಡ ಸಾಮೂಹಿಕ ವಿವಾಹದಲ್ಲೇ ಮದುವೆಯಾಗಿ ಸಮಾಜಕ್ಕೆ ಅನುಸರಣೀಯವಾದುದು. ಕ್ಷೇತ್ರದ ಜನರ ಉಪಯೋಗಕ್ಕಾಗಿ ಉದ್ಯೋಗ ಮೇಳ ನಡೆಸಿ ಅನೇಕ ಜನರಿಗೆ ಉದ್ಯೋಗ ದೊರಕಿಸಿ ಕೊಡುವಲ್ಲಿ ಪ್ರಾಮಾಣಿಕ ಕಾಳಜಿ. 2000 ಉದ್ಯೋಗಾಂಕ್ಷಿಗಳು, 50 ಕಂಪನಿಗಳು ಭಾಗವಹಿಸಿ 600 ಕ್ಕೂ ಹೆಚ್ಚು ಜನರಿಗೆ ಹೊಟ್ಟೆ ಹೊರೆಯುವ ಕಾಯಕ.
  4. ಹಿಂದು ಪರ ಹೋರಾಟಗಾರರಾಗಿ ರಾಜಾದಾದ್ಯಂತ ಪ್ರವಾಸ ಮಾಡಿದ್ದ ಇವರು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿರುವ ದತ್ತಪೀಠದ ಬಗ್ಗೆ ವಿಧಾನಸಭೆಯಲ್ಲಿ ಹೋರಾಟ ನಡೆಸಿ ಅಧಿವೇಶನದ ಸಂದರ್ಭದಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ. ಹಿಂದುಗಳ ಆರಾಧ್ಯ ದೇವರಾದ ಶ್ರೀ ರಾಮಚಂದ್ರನೇ ನಿರ್ಮಿಸಿದ ರಾಮಸೇತುವನ್ನು ಧ್ವಂಸ ಮಾಡಲು ಹೊರಟ ಸರಕಾರಗಳ ಹುನ್ನಾರದ ವಿರುದ್ಧ ದ್ವನಿಯೆತ್ತಿ ಜಾಗೃತಿ ಮೂಡಿಸಿ ಸಾವಿರಾರು ಜನರನ್ನು ಸಂಘಟಿಸಿ ರಾಮೇಶ್ವರದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಪಾಲ್ಗೊಂಡಿದ್ದು. ರಾಜಕೀಯದಲ್ಲಿ ಗುರುತರ ಜವಾಬ್ದಾರಿಯನ್ನು ನಿಭಾಯಿಸಿದ ಹೆಗ್ಗಳಿಕೆ. ಬಾಜಪದ ರಾಜ್ಯ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಯುವ ಮೋರ್ಚಾದ ಕಾರ್ಯದರ್ಶಿಯಾಗಿ ಸೇವೆ, ಗೋವಾ ಚುನಾವಣೆಯ ಉಸ್ತುವಾರಿ ವಹಿಸಿ ರಾಜಕೀಯ ಪ್ರಬುದ್ಧತೆಯ ಪ್ರದರ್ಶನ. ರಾಜ್ಯ ಯುವಮೋರ್ಚಾ ಅಧ್ಯಕ್ಷರಾಗಿ ಮೂರು ವರ್ಷ ರಾಜ್ಯದಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಹಲವು ಯಶಸ್ವಿ ಸಮಾವೇಶಗಳ ಸಂಯೋಜನೆ. ವಿನೂತನ ರೀತಿಯ ಸಮಾವೇಶಗಳು, ಅಭ್ಯಾಸ ವರ್ಗಗಳ ಸಂಯೋಜನೆ. ದೇಶದಲ್ಲೇ ಪ್ರಥಮ ಬಾರಿಗೆ ಒಂದು ವಿಧಾನ ಸಭಾ ವ್ಯಾಪ್ತಿಯಲ್ಲಿ ಅಭೂತ ಪೂರ್ವ ಮಹಿಳಾ ಸಮಾವೇಶವನ್ನು ಸಂಘಟಿಸಿ ಹನ್ನೆರಡು ಸಾವಿರ ಮಹಿಳೆಯರನ್ನು ಬಾಜಪದ ಪತಾಕೆಯಡಿ ಸೇರಿಸಿದ ಪರಾಕ್ರಮ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮಾವೇಶವನ್ನು ಸಂಘಟಿಸಿ ಒಂದು ವಿಧಾನಸಭಾ ವ್ಯಾಪ್ತಿಯಲ್ಲಿ ಎರಡು ಸಾವಿರ ಜನರನ್ನು ಸೇರಿಸಿದ ಪ್ರಯತ್ನ.
  5. ಸ್ವಾತಂತ್ರ್ಯ ಭಾರತದ ಆರು ದಶಕಗಳಲ್ಲಾಗದ ಕಾರ್ಯಗಳನ್ನು ಕೈಗೆತ್ತಿಕೊಂಡು ಕ್ರಿಯಾಶೀಲತೆ ಮತ್ತು ಜನಪರ ಕಾಳಜಿಯಿಂದ ತಾಲೂಕಿನ ಹಳ್ಳಿ ಹಳ್ಳಿಗಳಿಗೆ ಸಂಪರ್ಕ ಸಾಧಿಸಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ. 91 ಊರುಗಳಿಗೆ ವಿದ್ಯುತ್ ಸಂಪರ್ಕ, ಕುಗ್ರಾಮಗಳಿಗೆ ರಸ್ತೆ, ಸೇತುವೆಗಳ ನಿರ್ಮಾಣ, ಕಾರ್ಕಳದ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸರಕಾರದಿಂದ 87 ಕೋಟಿ ಅನುದಾನ ತರಿಸಿದ ಕೀರ್ತಿ.
  6. ಅಧಿವೇಶನದಲ್ಲಿ 100% ಭಾಗವಹಿಸಿದ್ದು ಪಡಿತರ ಚೀಟಿ, ಭಯೋತ್ಪಾದನೆ ಇತ್ಯಾದಿ ಹತ್ತು ಹಲವು ವಿಷಯಗಳ ಪ್ರಸ್ತಾಪ, ವಿಸ್ತøತ ಚರ್ಚೆ, ಯಶಸ್ವಿ ಪಾಲ್ಗೊಳ್ಳುವಿಕೆಯಿಂದ ಹಲವು ಸಮಸ್ಯೆಗಳಿಗೆ ಪರಿಹಾರ. ವಿಧಾನಸಭಾ ಅಧಿವೇಶನದ ಪ್ರಶ್ನೋತ್ತರ ವೇಳೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜನಪ್ರತಿನಿಧಿಗಳಲ್ಲಿ ಮುಂಚೂಣಿ ಸಾಲಿನಲ್ಲಿರುವ ಶಾಸಕ ಜನನಾಯಕ.
  7. ಕಾರ್ಕಳ ತಾಲೂಕಿನ ಅತ್ಯಂತ ಕುಗ್ರಾಮಗಳ ಕಾಡಿನಲ್ಲಿ ಹತ್ತಾರು ವರ್ಷಗಳಿಂದ ಅನೇಕ ಕಷ್ಟ ಕಾರ್ಪಣ್ಯಗಳ ನಡುವೆಯೇ ವಾಸವಿರುವ, ಈ ತನಕ ಯಾರೂ ಗಮನ ಹರಿಸದ ಬಡ ಮಲೆಕುಡಿಯ ಜನಾಂಗದ ನೊವುಗಳನ್ನು ಆಲಿಸಿದ ಮೊದಲ ಶಾಸಕ. ನಕ್ಸಲ್ ಪೀಡಿತ ಪ್ರದೇಶದ ಜನರ ಬಳಿ ಸಾಗಿ ಅವರೊಂದಿಗೆ ಮುಕ್ತ ಚರ್ಚೆ ಹಾಗೂ ಅವರನ್ನು ಮುಖ್ಯ ವಾಹಿನಿಗೆ ತರುವಲ್ಲಿ ಗಂಭೀರ ಪ್ರಯತ್ನ.
  8. ಪ್ರಸ್ತುತ ಇರುವ ಭೀಕರ ಸಮಸ್ಯೆಗಳಾದ ವಾತಾವರಣದಲ್ಲಿ ಏರುತ್ತಿರುವ ಉಷ್ಣತೆ ಮತ್ತು ಕುಸಿಯುತ್ತಿರುವ ಅಂತರ್ಜಲ ಇವುಗಳಿಂದಾಗಿ ಕಾರ್ಕಳ ತಾಲೂಕಿಗೂ ಬಿಸಿ ಮುಟ್ಟಿರುವ ನೀರಿನ ಸಮಸ್ಯೆಯಿಂದ ಜನರು ಎಚ್ಚೆತ್ತು ಕೊಳ್ಳಬೇಕೆಂಬ ದೃಷ್ಟಿಯಿಂದ ತನ್ನ ಕ್ಷೇತ್ರವಿಡೀ ಜಾಗೃತಿ ಕಾರ್ಯಕ್ರಮ “ಒಂದು ಜನ-ಒಂದು ಸಸಿ, ಒಂದು ಮನೆ – ಒಂದು ಇಂಗುಗುಂಡಿ” ಎಂಬ ಧ್ಯೇಯ ವಾಕ್ಯದೊಂದಿಗೆ ತಾಲೂಕಿನ ಹಳ್ಳಿ ಹಳ್ಳಿಗಳನ್ನು ಸಂಚರಿಸಿ, ಯುವಕರನ್ನು ವಿವಿಧ ಸಂಘಟನೆಗಳನ್ನು ಒಟ್ಟುಗೂಡಿಸಿದ ದೇಶದ ಮೊದಲ ಪರಿಸರ ಸ್ನೇಹ ಶಾಸಕ ಎಂಬ ಬಿರುದು. 40 ಕೋಟಿಗೂ ಹೆಚ್ಚು ಅನುದಾನವನ್ನು ಬಲಸಿಕೊಂಡು 50ಕ್ಕೂ ಹೆಚ್ಚು ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣಕ್ಕೆ ಚಾಲನೆ ನೀಡಿ, ರೈತರ ಬೆಳೆಗಳಿಗೆ ಉಂಟಾಗುವ ನೀರಿನ ಸಮಸ್ಯೆಯಿಂದ ಹೊರಬರಲು ಭಗೀರಥ ಪ್ರಯತ್ನ ಮಾಡಿರುವುದು ರಾಜ್ಯದಲ್ಲಿ ದಾಖಲೆಯೇ ಸರಿ.
  9. ಬಡ ವಿದ್ಯಾರ್ಥಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕಾರ್ಕಳದಲ್ಲಿ ಪಾಲಿಟೆಕ್ನಿಕ್ ಕಾಲೇಜು, ಮಿಯ್ಯಾರಿನ ಮೋರಾರ್ಜಿ ದೇಸಾಯಿ ವಸತಿ ಶಾಲೆ, ಕಾರ್ಕಳ ತಾಲೂಕಿನ ಬಹುತೇಕ ಎಲ್ಲಾ ಸರಕಾರಿ ಶಾಲಾ-ಕಾಲೇಜುಗಳಿಗೆ ಪುನಶ್ಚೇತನ. ತುಳುನಾಡಿನ ಅಮರ ವೀರರಾದ ಕೋಟಿ ಚೆನ್ನಯರ ಹೆಸರಿನಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕೋಟಿ ಚೆನ್ನಯ ಥೀಂ ಪಾರ್ಕ್ ನಿರ್ಮಾಣ. ಕಾರ್ಕಳ ಹಿರಿಯಂಗಡಿ ಬಳಿ ಅರುವತ್ತು ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಯಾತ್ರಿ ನಿವಾಸ.
  10. ಕ್ರೀಡೆಯಲ್ಲಿ ವಿಶೇಷ ಒಲವು ಹೊಂದಿರುವ ಇವರು ಕಾರ್ಕಳ ತಾಲೂಕಿನಲ್ಲಿ ಸುಸಜ್ಜಿತವಾದ ಕ್ರೀಡಾಂಗಣಗಳ ನಿರ್ಮಿಸುವಲ್ಲಿ ಎಡೆಬಿಡದ ಪ್ರಯತ್ನ. ಕ್ರೀಡಾಸಕ್ತರಿಗಾಗಿ ಈಜುಕೊಳದ ನಿರ್ಮಾಣ. ನಾಡು-ನುಡಿ ಮತ್ತು ಗ್ರಾಮೀಣ ಸಂಸ್ಕøತಿಯ ಬಗೆಗೆ ವಿಶೇಷ ಒಲವು ಹೊಂದಿರುವ ಶಾಸಕರು, ಆಧುನಿಕ ಭರಾಟೆಯಲ್ಲಿ ತೆರೆಯ ಮರೆಗೆ ಸರಿಯುತ್ತಿರುವ ಗ್ರಾಮೀಣ ಸಂಸ್ಕøತಿ ಮತ್ತು ಕ್ರೀಡೆಯನ್ನು ಉತ್ತೇಜಿಸುವ ಸಲುವಾಗಿ ಆಟಿ ತಿಂಗಳ ಆಚರಣೆ, ದೀಪಾವಳಿ ಆಚರಣೆಗಳು, ‘ಆಟಿಡೊಂಜಿ ಕಮಲ ಕೂಟ’ ದಂತಹ ಕಾರ್ಯಕ್ರಮಗಳ ಮೂಲಕ ಮಣ್ಣಿನ ಸಂಸ್ಕತಿ ಮತ್ತು ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಿದ್ದು ಜನಜನಿತ.
  11. ಜನರ ಭಾವನೆಗಳಿಗೆ ಧಕ್ಕೆಯಾದಾಗ ಜೀವನವನ್ನು ಕಸಿದುಕೊಳ್ಳುವ ಯತ್ನಗಳಾದಾಗಲೆಲ್ಲಾ ತೀವ್ರವಾದ ಹೋರಾಟಗಳನ್ನು ಸಂಘಟಿಸಿ ಹಳ್ಳಿಯಿಂದ ರಾಜ್ಯ ರಾಜಧಾನಿಯವರೆಗೂ ಗಮನ ಸೆಳೆದು ನ್ಯಾಯಕ್ಕಾಗಿ ಹೋರಾಡುವ ಛಲ. ವಿದ್ಯುತ್ ಕಡಿತ, ಮರಳು ನೀತಿ, ಭ್ರಷ್ಟಾಚಾರ, ನಕ್ಸಲ್ ಸಮಸ್ಯೆ, ಕಸ್ತೂರಿ ರಂಗನ್ ವರದಿ, ಹುಲಿಯೋಜನೆ ಇವೇ ಮೊದಲಾದ ವಿಚಾರಗಳ ಕುರಿತಾಗಿ ತೀವ್ರವಾದ ಹೋರಾಟ ಸಂಘಟಿಸಿ ಸರಕಾರದ ಕಣ್ತೆರೆಸುವ ಕೆಲಸ.
  12. “ಯುವ ಶಕ್ತಿ ರಾಷ್ಟ್ರ ಶಕ್ತಿ” ಎಂಬ ವಿಚಾರವನ್ನು ಮನಗಂಡು ಕಾರ್ಕಳದ ಯುವ ಶಕ್ತಿಯ ಅನಾವರಣಕ್ಕೆ ಪ್ರಯತ್ನ. ಯುವ ಕಾರ್ಯಕರ್ತರ ಯುವ ಸಂಕಲ್ಪ ಸಮಾವೇಶ, ಮಹಾ ಸಂಪರ್ಕ ಅಭಿಯಾನ ಮುಂತಾದ ವಿನೂತನ ಸಂಘಟನಾ ಚತುರತೆ.
  13. ಬಡರೋಗಿಗಳಿಗೆ ಅತ್ಯುತ್ತಮ ಸೇವೆ ಲಭ್ಯವಾಗಬೆಕೆಂಬ ಕಾರಣಕ್ಕಾಗಿ ಕರ್ನಾಟಕದಲ್ಲಿ ಬಾಜಪ ಸರಕಾರವಿದ್ದು ಸನ್ಮಾನ್ಯ ಆರ್. ಅಶೋಕ್ ರವರು ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಸುಸಜ್ಜಿತವಾದ ವ್ಯವಸ್ಥೆಗಳನ್ನು ಕಲ್ಪಸಿದ್ದು. ಇದೀಗ 6 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ. ಮಿಯ್ಯಾರಿನಲ್ಲಿ 120 ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ಪಾಂಗಣ ರಚನೆ.
  14. ಕಾರ್ಕಳ ತಾಲೂಕಿನಾದ್ಯಂತ ಬದಲಾದ ರಸ್ತೆಗಳು, ಸುಂದರವಾದ ರಸ್ತೆಗಳು ವಿ. ಸುನಿಲ್ ಕುಮಾರ್‍ರವರ ಕರ್ತತ್ವ ಶಕ್ತಿಗೆ ಉದಾಹರಣೆ. ಪುಲ್ಕೆರಿ ಜಂಕ್ಷನ್‍ನಿಂದ ಜೋಡುರಸ್ತೆಯನ್ನು ಸಂಪರ್ಕಿಸುವ ರಸ್ತೆ, ಬೈಲೂರಿನ ರಸ್ತೆ ಹೀಗೆ ಜನ ಜೀವನವನ್ನು ಬೆಸೆಯುವ ರಸ್ತೆಗಳು ಶಾಸಕರು ಕ್ಷೇತ್ರದ ಪ್ರಗತಿಯ ಬಗೆಗೆ ಹೊಂದಿರುವ ದೂರದೃಷ್ಟಿಯನ್ನು ಪ್ರತಿಫಲಿಸುತ್ತದೆ.
  15. ಕೇಂದ್ರ ಸರಕಾರದ 39 ಕೋಟಿ ರೂಪಾಯಿ ಅನುದಾನದೊಂದಿಗೆ ಕಾರ್ಕಳ-ಸಾಣೂರು-ಬೆಳುವಾಯಿಯನ್ನು ಸಂಪರ್ಕಿಸುವ ರಸ್ತೆ, 29 ಕೋಟಿ ರೂಪಾಯಿ ಅನುದಾನದೊಂದಿಗೆ ಕಾರ್ಕಳ - ಬಜಗೋಳಿ-ಮಾಳಗಳನ್ನು ಸಂಪರ್ಕಿಸುವ ರಸ್ತೆಗಳು ಅತ್ಯಂತ ಕಡಿಮೆ ಅವದಿಯಲ್ಲಿ ಯಾವುದೇ ಶಾಸಕರು ಮಾಡಬಹುದಾದ ಅತ್ಯಂತ ವಿರಳ ಸಾಧನೆಯನ್ನು ಹೇಳಲೇಬೇಕು.

ಬಾಹ್ಯ ಕೊಂಡಿ

ಬದಲಾಯಿಸಿ
  1. ಗೆಲುವು

ಉಲ್ಲೇಖ

ಬದಲಾಯಿಸಿ
  1. cite web|title=V. Sunil Kumar bio|url=http://www.kla.kar.nic.in/assembly/member/14thWhoSwho/5.pdf%7Cpublisher=kla.kar.nic.in%7Caccessdate=27[ಶಾಶ್ವತವಾಗಿ ಮಡಿದ ಕೊಂಡಿ] February 2018
  2. https://www.thehindu.com/news/cities/Mangalore/fiery-sunil-takes-on-witty-gopal/article4673097.ece
  3. http://www.kla.kar.nic.in/assembly/member/14thWhoSwho/5.pdf
  4. https://www.indiatvnews.com/politics/national/karnataka-polls-list-of-winners-constituency-wise-results--9969.html?page=3