ವಿಕಿಪೀಡಿಯಾದಲ್ಲಿ ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಮತ್ತು ದಕ್ಷಿಣ ಏಷ್ಯಾದ ಮಹಿಳೆಯರ ಜೀವನಚರಿತ್ರೆಗಳನ್ನು ರಚಿಸಲು ಲೇಖನ ಬರೆಯುವ ಸ್ಪರ್ಧೆಯಾಗಿದೆ. ಈ ವರ್ಷ ಈ ಯೋಜನೆ ಫೆಬ್ರವರಿ ೦೧, ೨೦೨೦ ರಂದು ಪ್ರಾರಂಭವಾಗಲಿದ್ದು, ಮಾರ್ಚ್ ೩೧, ೨೦೨೦ ಕ್ಕೆ ಕೊನೆಗೊಳ್ಳುತ್ತದೆ. ಈ ಯೋಜನೆಯ ಬಗ್ಗೆ ಮತ್ತು ಬಹುಮಾನಗಳ ಬಗ್ಗೆ ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಈ ವರ್ಷ ವಿಕಿ ಲವ್ಸ್ ವಿಮೆನ್ ಯೋಜನೆಗಾಗಿ ವಿಕಿಪೀಡಿಯಾದಲ್ಲಿ ಸ್ತ್ರೀವಾದ, ಮಹಿಳಾ ಜೀವನಚರಿತ್ರೆ ಮತ್ತು ಲಿಂಗ ತಾರತಮ್ಯ ಕೇಂದ್ರಿತ ವಿಷಯಗಳೊಂದಿಗೆ ಜಾನಪದ ಸಂಸ್ಕೃತಿ ಎಂಬ ವಿಷಯವನ್ನು ಹೊಂದಿದ್ದು, ಜಾನಪದ ಕಲಾವಿದರು, ಜಾನಪದ ನೃತ್ಯಗಾರರು, ಜಾನಪದ ಗಾಯಕರು, ಜಾನಪದ ಸಂಗೀತಗಾರರು, ಜಾನಪದ ಆಟದ ಕ್ರೀಡಾಪಟುಗಳು, ಪುರಾಣಗಳಲ್ಲಿ ಮಹಿಳೆಯರು, ಜಾನಪದ ಕಥೆಗಳಲ್ಲಿ ಮಹಿಳಾ ಯೋಧರು, ಮಾಟಗಾತಿಯರು ಮತ್ತು ಮಾಟಗಾತಿ ಬೇಟೆ, ಕಾಲ್ಪನಿಕ ಕಥೆಗಳನ್ನು ಒಳಗೊಂಡಿದೆ. ವಿಷಯಗಳನ್ನು ಈ ಪುಟದಲ್ಲಿ ನೋಡಬಹುದು
ಟಿ-ಶರ್ಟ್ ಅಥವಾ ಬ್ಯಾಗ್ ಮತ್ತು ಪ್ರಮಾಣಪತ್ರಗಳನ್ನು ಟಾಪ್ ೫ ಕೊಡುಗೆದಾರರಿಗೆ ಮತ್ತು ತೀರ್ಪುಗಾರರಿಗೆ ನೀಡಲಾಗುವುದು.
ಕನಿಷ್ಟ ೪ ಲೇಖನಗಳನ್ನು ಬರೆದವರಿಗೆ ಪೋಸ್ಟ್‌ಕಾರ್ಡ್‌ಗಳು ಮತ್ತು ಬಾರ್ನ್‌ಸ್ಟಾರ್‌ಗಳು ನೀಡಲಾಗುವುದು.
ಅಂತರರಾಷ್ಟ್ರೀಯ ಮಟ್ಟದಲ್ಲಿ,
ಉತ್ತಮ ಉಲ್ಲೇಖಗಳನ್ನು ಹೊಂದಿರುವ, ಸ್ಪರ್ಧೆಯ ವಿಷಯವನ್ನು ಒಳಗೊಂಡ ಅತ್ಯುತ್ತಮ ಲೇಖನವನ್ನು ಬರೆದ ಕೊಡುಗೆದಾರರಿಗೆ, ಲೆ ಸಾನ್ಸ್ ಪೇಜಸ್ ನವರ ಕಡೆಯಿಂದ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹುಮಾನವನ್ನು ನೀಡಲಾಗುವುದು.