ವಸಂತ್
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ | |
---|---|
ಪರಿಕಲ್ಪನೆಗಳು | |
ಶೃತಿ · ಸ್ವರ · ಅಲಂಕಾರ · ರಾಗ | |
ತಾಳ · ಘರಾನಾ · ಥಾಟ್ | |
ಸಂಗೀತೋಪಕರಣಗಳು | |
ಭಾರತೀಯ ಸಂಗೀತೋಪಕರಣಗಳು | |
ಶೈಲಿಗಳು | |
ದ್ರುಪದ್ · ಧಮಾರ್ · ಖಯಾಲ್ · ತರಾನ | |
ಠುಮ್ರಿ · ದಾದ್ರ · ಖವ್ವಾಲಿ · ಘಝಲ್ | |
ವಿದಾನಗಳು (ಥಾಟ್‌ಗಳು) | |
ಬಿಲಾವಲ್ · ಖಮಾಜ್ · ಕಾಫಿ · ಅಸಾವರಿ · ಭೈರವ್ | |
ಭೈರವಿ · ತೋಡಿ · ಪೂರ್ವಿ · ಮಾರ್ವ · ಕಲ್ಯಾಣಿ |
ರಾಗ ಬಸಂತ್ ವು ಒಂದುಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ರಾಗ.ಇದು ಸಿಖ್ ಸಂಪ್ರದಾಯದ ಗುರು ಗ್ರಂಥ್ ಸಾಹಿಬ್ ನ ಒಂದು ಭಾಗವಾಗಿ ಉಲ್ಲೇಖಿಸಲ್ಪಟ್ಟಿದೆ . ಪ್ರತಿ ರಾಗವೂ ಒಂದು ಸಿದ್ದ ಚೌಕಟ್ಟು ಹೊಂದಿರುತ್ತದೆ.ಇದರಿಂದಾಗಿ ಪ್ರತೀ ರಾಗದಲ್ಲಿ ಉಪಯೋಗಿಸಬಹುದಾದ ಸ್ವರಗಳು ,ಸ್ವರಗಳ ಸಂಖ್ಯೆ,ಅವುಗಳ ನಡುವೆ ಇರುವ ಅನ್ಯೋನ್ಯತೆ ಇವುಗಳು ರಾಗ ಸಂಯೋಜನೆಯಲ್ಲಿ ಪ್ರಮುಖವಾಗುತ್ತದೆ. ಗುರು ಗ್ರಂಥ್ ಸಾಹಿಬ್ ನಲ್ಲಿ ೩೧ ರಾಗ ಸಂಯೋಜನೆಗಳಿದ್ದು ಈ ರಾಗವು ೨೫ನೆಯದಾಗಿದೆ. ಈ ರಾಗದ ರಚನೆ ಒಟ್ಟು ೪೩ ಪುಟಗಳಲ್ಲಿ ಪುಟ ಸಂಖ್ಯೆ ೧೧೨೫ ರಿಂದ ೧೧೬೮ ಇದೆ. ಬಸಂತ್ ಎಂಬ ಹೆಸರು ಸಂಸ್ಕೃತದ "ವಸಂತ್ " ಎಂದರೆ "ವಸಂತ ಋತು" ಇದರಿಂದ ಬಂದಿದ್ದು, ಈ ಋತುವಿನಲ್ಲಿ ಈ ರಾಗವನ್ನು ದಿನ ರಾತ್ರಿ ಎಂಬ ಭೇದವಿಲ್ಲದೆ ಯಾವುದೇ ಸಮಯದಲ್ಲಿ ಹಾಡಬಹುದಾಗಿದೆ.ಇಲ್ಲವಾದರೆ ಈ ರಾಗವು ರಾತ್ರಿಯ ೯ ಗಂಟೆಯಿಂದ ಮಧ್ಯರಾತ್ರಿ ಯಾ ವೇಳೆಯಲ್ಲಿ ಹಾಡಲ್ಪಡುವ ರಾಗವಾಗಿದೆ.ರಾಗಮಾಲ ವು ಬಸಂತ್ ರಾಗವನ್ನು ರಾಗ ಹಿಂದೋಳದ ಪುತ್ರನೆಂದು ಗುರುತಿಸಿದೆ. ಇದು ಕೂಡ ವಸಂತ ಋತುವಿನ ರಾಗವಾಗಿದೆ. ಇಂದು ಇದು ಪೂರ್ವಿ ಥಾಟ್ ಗೆ ಸೇರಿದೆ. ಪವಿತ್ರ ಗ್ರಂಥದಲ್ಲಿ ಉಲ್ಲೇಖಿಸಿದ ಇದರ ಭಿನ್ನ ರಾಗವೆಂದರೆ ಬಸಂತ್ -ಹಿಂದೋಳ.ಬಸಂತ್ ರಾಗವು ಒಂದು ಹಳೆಯ ರಾಗವಾಗಿದ್ದು ೮ನೆಯ ಶತಮಾನದಿಂದಲೂ ಬಳಕೆಯಲ್ಲಿದೆ.ಗುರು ನಾನಕ್ ,ಗುರು ಅಮರ್ ದಾಸ್ ,ಗುರು ರಾಮ್ ದಾಸ್, ಗುರು ಅರ್ಜನ್ ಮತ್ತು ಗುರು ತೇಜ್ ಬಹಾದುರ್ ರು ಹಲವಾರು ಶಾಬಾದ್ ಗಳನ್ನು ಈ ರಾಗದಲ್ಲಿ ರಚಿಸಿದ್ದಾರೆ. ನಿಧಾನ ಗತಿಯಲ್ಲಿ ಹಾಡಿದಾಗ ಈ ರಾಗವು ಮೃದು ಮಾಧುರ್ಯಪೂರ್ಣ ಸಂತೋಷವನ್ನು ನಿರೂಪಿಸುತ್ತದೆ.
- ಆರೋಹ್ : ಸ ಗ ಮ ಧಾ ನಿ ಸ
- ಅವರೋಹ್: ಸ ನಿ ಧ ಪ ಮ , ಗ ರಿ ಸ
- ವಾದಿ: ಸ
- ಸಂವಾದಿ : ಮ
ಇವನ್ನೂ ಗಮನಿಸಿ
ಬದಲಾಯಿಸಿ- ಗುರು ಗ್ರಂಥ್ ಸಾಹಿಬ್ ನಲ್ಲಿ ರಾಗಗಳು
- ಕಿರ್ತನ್
- ರಾಗಗಳು
- ತಾಳ (ಸಂಗೀತ )
ಬಾಹ್ಯ ಕೊಂಡಿಗಳು
ಬದಲಾಯಿಸಿ- ಜ್ಞಾನಿ ದರ್ಶನ್ ಸಿಂಗ್ ಸೋಹಲ್ Archived 2010-10-30 ವೇಬ್ಯಾಕ್ ಮೆಷಿನ್ ನಲ್ಲಿ.
- ಗುರ್ಮತ್ ಸಂಗೀತ ಪ್ರಾಜೆಕ್ಟ್ Archived 2012-02-17 ವೇಬ್ಯಾಕ್ ಮೆಷಿನ್ ನಲ್ಲಿ.
- ರಾಜ್ ಅಕಾಡೆಮಿ ಆಫ್ ಎಸಿಯನ್ ಮ್ಯೂಸಿಕ್
- ಸಿಖನೆತ್: ಶಾಬಾದ್ ಫಾರ್ ಪ್ರಿಂಟಿಂಗ್
- ರಾಗ್ ಬಸಂತ್ ಆಧಾರಿತ ಚಲನಚಿತ್ರ ಗೀತೆಗಳು Archived 2021-11-27 ವೇಬ್ಯಾಕ್ ಮೆಷಿನ್ ನಲ್ಲಿ.