ವಯಾಗ್ರ ಎನ್ನುವುದು ಪುರುಷ ನಪುಂಸಕತೆಗೆ (ಇಂಪೊಟೆನ್ಸಿ) ಒಂದು ಕಾರಣವಾದ ಶಿಶ್ನದ ನಿಮಿರು ಅವಕ್ರಿಯೆ (ಎರೆಕ್ಟೈಲ್ ಡಿಸ್‌ಫ಼ಂಕ್ಷನ್) ದೌರ್ಬಲ್ಯಕ್ಕೆ ಬಾಯಿಯ ಔಷಧಿಯಾಗಿ (ಯುಎಸ್ ಫು಼ಡ್ ಅ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಮಾನ್ಯತೆ: ಮಾರ್ಚ್ 1998)[][][][] ಬಳಸುವ ಸಿಲ್ಡೆನಾಫಿ಼ಲ್ ಸಿಟ್ರೇಟ್ ಎಂಬ ರಾಸಾಯನಿಕದ ಜನಪ್ರಿಯ ನಾಮ.[]

ಸಿಲ್ಡೆನಾಫ಼ಿಲ್‍ನ ರಚನಾಸೂತ್ರ

ಲೈಂಗಿಕವಾಗಿ ಉದ್ರಿಕ್ತನಾದ ಪುರುಷನ ಶಿಶ್ನ ನಿಮಿರಿ ಸಂಭೋಗಯೋಗ್ಯ ಆಗದಿರುವುದು ಅಥವಾ ಸಂಭೋಗಾವಧಿಯ ಆದ್ಯಂತ ಶಿಶ್ನ ತನ್ನ ನಿಮಿರು ಸ್ಥಿತಿಯನ್ನು ಉಳಿಸಿಕೊಳ್ಳದಿರುವುದೇ ನಿಮಿರು ಅವಕ್ರಿಯೆ.

ನಿಮಿರು ಅವಕ್ರಿಯೆಗೆ ಕಾರಣಗಳು

ಬದಲಾಯಿಸಿ

ಮಾನಸಿಕ, ದೈಹಿಕ ರೋಗ, ಔಷಧಗಳ ಪಾರ್ಶ್ವಪರಿಣಾಮ ಅಥವಾ ಹಾರ್ಮೋನ್ ಅಸಂತುಲನೆ. ನಿಮಿರುವಿಕೆಯ ಅವಕ್ರಿಯೆಗೆ ಫಾ಼ಸ್ಪೋಡೈ ಎಸ್ಟೆರೇಸ್ ಎಂಬ ರಾಸಾಯನಿಕದ ಪ್ರಭಾವದಿಂದ ಸೈಕ್ಲಿಕ್ ಗ್ವಾನೋಸಿನ್ ಮಾನೋಫಾಸ್ಫೇಟ್‌ನ ಪ್ರಮಾಣ ಕಡಿಮೆಯಾಗುವುದು ಕಾರಣ.

ನಿಮಿರು ಪ್ರಕ್ರಿಯೆ

ಬದಲಾಯಿಸಿ

ನಿಮಿರಿಸಲಾಗುವ ಊತಕಗಳ (ಎರೆಕ್ಟೈಲ್ ಟಿಶ್ಯು) ಮೂರು ಪದರಗಳ ಭಿತ್ತಿ ಇರುವ (ಕಾರ್ಪೊರ ಕ್ಯಾವರ್ನೋಸ 2 ಪದರ, ಕಾರ್ಪೊರ ಸ್ಪಾಂಜಿಯೋಸಮ್ 1 ಪದರ) ಕೊಳವೆ ಮಾನವ ಶಿಶ್ನ. ಪುರುಷ ಲೈಂಗಿಕವಾಗಿ ಉದ್ರಿಕ್ತನಾದಾಗ ನಿಮಿರಿಸಲಾಗುವ ಊತಕಗಳೊಳಕ್ಕೆ ಹೆಚ್ಚು ರಕ್ತ ತಂತಾನೇ ಪ್ರವಹಿಸುತ್ತದೆ. ಶಿಶ್ನದ ಬುಡದಲ್ಲಿ ರಕ್ತವನ್ನು ಹೊರಗೊಯ್ಯುವ ಅಭಿಧಮನಿ ತಂತಾನೇ ಸಂಕುಚಿಸುತ್ತದೆ. ಇದರಿಂದಾಗಿ ನಿಮಿರಿಸಲಾಗುವ ಊತಕಗಳೊಳಗಿನ ರಕ್ತದ ಸಂಮರ್ದ ಹೆಚ್ಚಿ ಶಿಶ್ನ ಹಿಗ್ಗಿ ದೃಢವಾಗಿ ಸಂಭೋಗಕ್ಕೆ ಸಿದ್ಧವಾಗುತ್ತದೆ.

ಶಿಶ್ನ ನಿಮಿರುವಿಕೆಯ ಪ್ರಸಾಮಾನ್ಯ ಶರೀರಕ್ರಿಯಾಯಂತ್ರತೆ ಇಂತಿದೆ: ಕಾರ್ಪೊರ ಕ್ಯಾವರ್ನೋಸಕ್ಕೆ ನೈಟ್ರಿಕ್ ಆಕ್ಸೈಡ್ ಬಿಡುಗಡೆ, ಗ್ವಾನೈಲೇಟ್ ಸೈಕ್ಲೇಸ್ ಕಿಣ್ವದ ಪಟುಕರಣ, ಸೈಕ್ಲಿಕ್ ಗ್ವಾನೋಸಿನ್ ಮಾನೋಫಾಸ್ಫೇ಼ಟ್ ರಾಸಾಯನಿಕದ ಪ್ರಮಾಣದ ಹೆಚ್ಚಳ, ಕಾರ್ಪೊರ ಕ್ಯಾವರ್ನೋಸದ ಸ್ನಾಯುಬಿಗಿತ ಸಡಿಲವಾಗಿ ಹೆಚ್ಚು ರಕ್ತ ಪ್ರವಹಿಸುವಿಕೆ.

ವಯಾಗ್ರದ ಕಾರ್ಯ

ಬದಲಾಯಿಸಿ

ವಯಾಗ್ರ ಫಾ಼ಸ್ಪೋಡೈಎಸ್ಟೆರೇಸನ್ನು ನಿರೋಧಿಸಿ ನೈಟ್ರಿಕ್ ಆಕ್ಸೈಡಿನ ಪ್ರಭಾವವನ್ನು ವರ್ಧಿಸುತ್ತದೆ. 25, 50 ಮತ್ತು 100 ಮಿಲಿಗ್ರಾಮ್ ಗುಳಿಗೆಗಳ ರೂಪದಲ್ಲಿ ವಯಾಗ್ರ ಲಭ್ಯ. ಸೇವಿಸಿದ ಬಳಿಕ 30-120 ನಿಮಿಷಗಳ ಒಳಗೆ ಕ್ರಿಯಾಶೀಲವಾಗುವ ಇದರ ಪ್ರಭಾವ 2-4 ಗಂಟೆಗಳ ಕಾಲವಿರುತ್ತದೆ.[] ಇದರ ಉಪಾಪಚಯವಾಗುವದು ಯಕೃತ್ತಿನಲ್ಲಿ. ಉಪಾಪಚಯಗಳ 80% ಭಾಗ ಮಲದ ಮೂಲಕವೂ 20% ಭಾಗ ಮೂತ್ರದ ಮೂಲಕವೂ ವಿಸರ್ಜನೆಯಾಗುತ್ತವೆ.

ಪಾರ್ಶ್ವ ಪರಿಣಾಮಗಳು

ಬದಲಾಯಿಸಿ

ರಕ್ತದೊತ್ತಡ, ಹೃತ್ಸಂಬಂಧಿತ ಪ್ರಾಚಲಗಳು, ದೃಷ್ಟಿ ಮುಂತಾದವನ್ನು ವಯಾಗ್ರ ಪ್ರಭಾವಿಸುವುದರ ಜೊತೆಗೆ ಕೆಲವರಲ್ಲಿ ತಲೆನೋವು, ಹಸಿವು ಕಡಿಮೆಯಾಗುವಿಕೆ, ಮೈ ಬೆಚ್ಚಗಾಗುವಿಕೆ, ಮೂಗು ಕಟ್ಟಿಕೊಳ್ಳುವಿಕೆ, ಮೂತ್ರನಾಳ ಸೋಂಕು, ಭೇದಿ, ತಲೆಸುತ್ತು ಇವೇ ಮೊದಲಾದ ಪಾರ್ಶ್ವಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಯೂ ಇರುವುದರಿಂದ ಇದನ್ನು ವೈದ್ಯರೊಂದಿಗೆ ಸಮಾಲೋಚಿಸಿದ ಬಳಿಕವೇ ಸೇವಿಸಬೇಕು.

ಉಲ್ಲೇಖಗಳು

ಬದಲಾಯಿಸಿ
  1. "Viagra EPAR". European Medicines Agency. 17 September 2018. Retrieved 6 October 2020.
  2. "Sildenafil Citrate". The American Society of Health-System Pharmacists. Retrieved 1 December 2014.
  3. Goldstein I, Burnett AL, Rosen RC, Park PW, Stecher VJ (January 2019). "The Serendipitous Story of Sildenafil: An Unexpected Oral Therapy for Erectile Dysfunction". Sexual Medicine Reviews. 7 (1): 115–128. doi:10.1016/j.sxmr.2018.06.005. PMID 30301707. S2CID 52945888.
  4. "Drug Approval Package: Viagra (sildenafil citrate) NDA #020895". U.S. Food and Drug Administration (FDA). 27 March 1998. Retrieved 15 February 2021.
  5. "Viagra- sildenafil citrate tablet, film coated". DailyMed. Retrieved 6 October 2020.
  6. Eardley I, Ellis P, Boolell M, Wulff M (2002). "Onset and duration of action of sildenafil for the treatment of erectile dysfunction". British Journal of Clinical Pharmacology. 53 (Suppl 1): 61S–65S. doi:10.1046/j.0306-5251.2001.00034.x. PMC 1874251. PMID 11879261.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ವಯಾಗ್ರ&oldid=1220287" ಇಂದ ಪಡೆಯಲ್ಪಟ್ಟಿದೆ