ನಪುಂಸಕತೆ
ನಪುಂಸಕತೆ - ವಯಸ್ಕಪುರುಷ ವ್ಯಕ್ತಿಯಲ್ಲಿ ವಯೋಧರ್ಮಕ್ಕೆ ತಕ್ಕಂಥ ಸಂಭೋಗಸಾಮರ್ಥ್ಯ ಇಲ್ಲದಿರುವಿಕೆ ( ಇಂಪೊಟೆನ್ಸ್).
ನಪುಂಸಕತ್ವ ಮತ್ತು ಬರಡುತನ
ಬದಲಾಯಿಸಿ- ಲೈಂಗಿಕ ವಿಚಾರಗಳಿಂದ ಉದ್ರೇಕಗೊಂಡು ನಿಮಿರಬೇಕಾದ ಶಿಶ್ನ ನಿಮಿರದಿರುವುದೇ ನಪುಂಸಕತ್ವಕ್ಕೆ ಮುಖ್ಯ ಕಾರಣ. ಶಿಶ್ನ ನಿಮಿರದೆ ಸಂಭೋಗಕ್ರಿಯೆ ಸಫಲವಾಗಲಾರದು; ವೀರ್ಯಸ್ಖಲನ ವಾಗಲಾರದು. ಆದ್ದರಿಂದ ನಪುಂಸಕರು ಬರಡರಾಗಿರುವುದು ಸಹಜ.
- ಲೈಂಗಿಕಾಸಕ್ತಿ, ಸಂಭೋಗಸಾಮರ್ಥ್ಯ, ವೀರ್ಯಾಣುಗಳ ಉತ್ಪತ್ತಿ ಮತ್ತು ವೀರ್ಯಸ್ಖಲನ ಇವುಗಳ ಹತೋಟಿ ಕ್ರಮಗಳು ಬೇರೆಬೇರೆಯೇ ಆಗಿದ್ದರೂ ಇವೆಲ್ಲ ಕ್ರಿಯೆಗಳನ್ನೂ ಕೊಂಡಿಹಾಕಿದಂತೆ ಜೋಡಿಸಿ ಮಾನಸಿಕ ಮತ್ತು ದೈಹಿಕ ವ್ಯಾಪಾರಗಳು ಇರುವುದರಿಂದ ಒಂದು ಕ್ರಿಯೆಯ ಮೇಲೆ ಇನ್ನೊಂದರ ಅವ್ಯವಸ್ಥೆ ಪರಿಣಾಮವನ್ನು ಉಂಟುಮಾಡುವುದು ಆಶ್ಚರ್ಯವಲ್ಲ.
- ಆದರೆ ಈ ರೀತಿ ಪರಿಣಾಮಗಳು ಯಾವಾಗಲೂ ಕಂಡುಬರಬೇಕೆಂಬುದು ಖಚಿತವಲ್ಲ. ಸಂಭೋಗಾಭಿಲಾಷೆ ಇಲ್ಲದಿರುವವರು ನಪುಂಸಕತೆಯನ್ನು ತೋರುವುದು ವ್ಯಕ್ತವೇ. ಆದರೆ ಅವರಲ್ಲಿ ವೀರ್ಯಾಣುಗಳ ಹಾಗೂ ವೀರ್ಯದ ಉತ್ಪತ್ತಿಕ್ರಿಯೆ ಕುಂದಿಲ್ಲದೆ ಇರಬಹುದು. ಮಾನಸಿಕ, ದೈಹಿಕ ಕಾರಣಗಳಿಂದ ಸಂಭೋಗಾಭಿಲಾಷೆ ತಾತ್ಕಾಲಿಕವಾಗಿ ನಾಶವಾಗಿರಬಹುದು.
- ಅಂಥವರಲ್ಲಿ ನಪುಂಸಕತೆಯೂ ತಾತ್ಕಾಲಿಕ. ಅನೇಕ ಬರಡರು ನಪುಂಸಕರಾಗಿರುತ್ತಾರೆ. ಆದರೆ ವೀರ್ಯೋತ್ಪತ್ತಿ ಸಾಮರ್ಥ್ಯವಿಲ್ಲದೆ ಇರುವವರೆಲ್ಲರೂ ಸಂಭೋಗಾಭಿಲಾಷೆ ಸಾಮರ್ಥ್ಯಗಳಿಲ್ಲದ ನಪುಂಸಕರಾಗಿರುತ್ತಾರೆಂಬುದು ಸುಳ್ಳು.
ಕಾರಣಗಳು
ಬದಲಾಯಿಸಿ- ನಪುಂಸಕತೆ ನಾನಾ ಕಾರಣಗಳಿಂದ ಸಂಭವಿಸಬಹುದು. ಜನನಾಂಗಗಳ ಆಜನ್ಮ ಹಾಗೂ ಆರ್ಜಿತನ್ಯೂನತೆ ವೈಪರೀತ್ಯಗಳಿಂದ, ಉದಾಹರಣೆಗೆ ಹೈಪೋಸ್ಪೇಡಿಯಾಸ್, ಪ್ರಬುದ್ಧಗೊಳ್ಳದ ಶಿಶ್ನವೃಷಣಗಳು, ಆಘಾತದಿಂದ ಪರಿಣಮಿಸಿದ ಕುಂಠಿತ ಮೂತ್ರನಾಳ ಇವುಗಳಿಂದ ನಪುಂಸಕತೆ ಉಂಟಾಗಬಹುದು.
- ದೈಹಿಕ ಹಾಗೂ ಮಾನಸಿಕ ದಣಿವು ದೀರ್ಘಕಾಲಿಕ ಮೂತ್ರಪಿಂಡರೋಗ, ಸಿಹಿಮೂತ್ರ ರೋಗ, ಪರಂಗಿರೋಗ ಇವುಗಳಿಂದ ನಪುಂಸಕತೆ ಕಂಡುಬರಬಹುದು. ಅನೇಕ ವೇಳೆ ದೀರ್ಘಕಾಲಿಕವಾದ ಮುಷ್ಟಿಮೈಥುನ ಹಾಗೂ ಅತಿ ಸಂಭೋಗಗಳಿಂದಲೂ ದಂಪತಿಗಳಲ್ಲಿ ಸಂಭೋಗ ಕ್ರಿಯೆಯಲ್ಲಿ ದೈಹಿಕ ಹಾಗೂ ಮಾನಸಿಕ ಹೊಂದಾಣಿಕೆ ಒದಗಿ ಬರದಿರುವುದರಿಂದಲೂ ನಪುಂಸಕತೆ ಪರಿಣಮಿಸಬಹುದು.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: