ಮಲ ಸಣ್ಣ ಕರುಳಿನಲ್ಲಿ ಜೀರ್ಣಿಸಲಾಗದ, ಆದರೆ ದೊಡ್ಡ ಕರುಳಿನಲ್ಲಿ ಬ್ಯಾಕ್ಟೀರಿಯಾದಿಂದ ಕೊಳೆಸಲಾದ ಆಹಾರದ ಘನ ಅಥವಾ ಅರೆಘನ ಶೇಷ.[] ಇದು ತುಲಾನಾತ್ಮಕವಾಗಿ ಸಣ್ಣ ಪ್ರಮಾಣದ ಬ್ಯಾಕ್ಟೀರಿಯಾದಿಂದ ಮಾರ್ಪಾಡಾದ ಬಿಲಿರೂಬಿನ್‍ನಂತಹ ಚಯಾಪಚಯ ತ್ಯಾಜ್ಯ ಉತ್ಪನ್ನಗಳು, ಮತ್ತು ಅಂತ್ರದ ಒಳಪದರದ ಸತ್ತ ಎಪಿತೀಲಿಕ ಜೀವಕೋಶಗಳನ್ನೂ ಹೊಂದಿರುತ್ತದೆ. ಇದು ಮಲವಿಸರ್ಜನೆ ಪ್ರಕ್ರಿಯೆಯ ಅವಧಿಯಲ್ಲಿ ಗುದ ಅಥವಾ ಮಲಕುಳಿಯ ಮೂಲಕ ವಿಸರ್ಜಿಸಲ್ಪಡುತ್ತದೆ.

ಆನೆಯ ಮಲ

ಸಂಗ್ರಹಿಸಲಾದ ಮಲವು ವಿವಿಧ ಬಳಕೆಗಳನ್ನು ಹೊಂದಿದೆ, ಅವುಗಳೆಂದರೆ ಕೃಷಿಯಲ್ಲಿ ಗೊಬ್ಬರ ಅಥವಾ ಮಣ್ಣಿನ ಸ್ಥಿತಿಕಾರಕವಾಗಿ, ಇಂಧನದ ಮೂಲವಾಗಿ, ನಿರ್ಮಾಣ ಸಾಮಗ್ರಿಯಾಗಿ, ಅಥವಾ ಔಷಧೀಯ ಉದ್ದೇಶಗಳಿಗಾಗಿ (ಮಲ ಕಸಿ ಅಥವಾ ಮಾನವ ಮಲದ ವಿಷಯದಲ್ಲಿ ಮಲ ಬ್ಯಾಕ್ಟೀರಿಯಾ ಚಿಕಿತ್ಸೆ).

ತಿಂದ ವಸ್ತುವನ್ನು ಒಂದು ಪ್ರಾಣಿಯು ಜೀರ್ಣಿಸಿದ ನಂತರ, ಆ ವಸ್ತುವಿನ ಶೇಷ ಅದರ ದೇಹದಿಂದ ತ್ಯಾಜ್ಯವಾಗಿ ವಿಸರ್ಜಿಸಲ್ಪಡುತ್ತದೆ. ಈ ತ್ಯಾಜ್ಯ ತಿಂದ ಆಹಾರಕ್ಕಿಂತ ಕಡಿಮೆ ಶಕ್ತಿ ಹೊಂದಿದ್ದರೂ, ಇದು ದೊಡ್ಡ ಪ್ರಮಾಣದ ಶಕ್ತಿಯನ್ನು ಉಳಿಸಿಕೊಂಡಿರಬಹುದು, ಹಲವುವೇಳೆ ಮೂಲ ಆಹಾರದ ಶೇಕಡ ೫೦ರಷ್ಟು. ಇದರರ್ಥ ತಿಂದ ಎಲ್ಲ ಆಹಾರದ ಪೈಕಿ, ಗಣನೀಯ ಪ್ರಮಾಣದ ಶಕ್ತಿ ಪರಿಸರ ವ್ಯವಸ್ಥೆಗಳ ವಿಭಜಕಗಳಿಗೆ ಉಳಿದುಕೊಳ್ಳುತ್ತದೆ. ಬ್ಯಾಕ್ಟೀರಿಯಾ, ಶಿಲೀಂಧ್ರ, ಸಗಣಿ ದುಂಬಿಗಳಂತಹ ಕೀಟಗಳು ಮತ್ತು ಇನ್ನೂ ಅನೇಕ ಜೀವಿಗಳು ಮಲವನ್ನು ಸೇವಿಸುತ್ತವೆ ಮತ್ತು ಬಹಳ ದೂರದಿಂದ ವಾಸನೆಗಳನ್ನು ಗ್ರಹಿಸಬಲ್ಲವು. ಕೆಲವು ವಿಶಿಷ್ಟವಾಗಿ ಮಲವನ್ನೇ ಅವಲಂಬಿಸಿರುತ್ತವೆ, ಇತರ ಪ್ರಾಣಿಗಳು ಜೊತೆಗೆ ಬೇರೆ ಆಹಾರಗಳನ್ನು ತಿನ್ನಬಹುದು. ಮಲ ಮೂಲ ಆಹಾರವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ, ಕೆಲವು ಪ್ರಾಣಿಗಳ ಸಾಮಾನ್ಯ ಆಹಾರದ ಪೂರಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಇದನ್ನು ಮಲಭಕ್ಷಣೆ ಎಂದು ಕರೆಯಲಾಗುತ್ತದೆ, ಮತ್ತು ಅಗತ್ಯ ಕರುಳು ಸಸ್ಯಗಳನ್ನು ಪಡೆಯಲು ಆನೆ ಮರಿಗಳು ತಮ್ಮ ತಾಯಂದಿರ ಮಲವನ್ನು ತಿನ್ನುವುದು, ನಾಯಿಗಳು, ಮೊಲಗಳು, ಮತ್ತು ಕೋತಿಗಳಂತಹ ಇತರ ಪ್ರಾಣಿಗಳಂತಹ ವಿವಿಧ ಪ್ರಾಣಿ ಪ್ರಜಾತಿಗಳಲ್ಲಿ ಕಂಡುಬರುತ್ತದೆ.

ಅತಿನೇರಳೆ ಬೆಳಕನ್ನು ಪ್ರತಿಫಲಿಸುವ ಮಲಮೂತ್ರಗಳು ಕಿರು ಡೇಗೆಗಳಂತಹ ಹಿಂಸ್ರಪಕ್ಷಿಗಳಿಗೆ ಮುಖ್ಯವಾಗಿವೆ. ಇವು ಹತ್ತಿರದ ಅತಿನೇರಳೆಯನ್ನು ನೋಡಬಲ್ಲವು ಮತ್ತು ಹಾಗಾಗಿ ತಮ್ಮ ಬೇಟೆಯನ್ನು ಅವುಗಳ ಮಲ ಮತ್ತು ಪ್ರಾಂತ್ಯ ಗುರುತುಚಿಹ್ನೆಗಳಿಂದ ಹುಡುಕಬಲ್ಲವು.

ಉಲ್ಲೇಖಗಳು

ಬದಲಾಯಿಸಿ
  1. Tortora, Gerard J.; Anagnostakos, Nicholas P. (1987). Principles of anatomy and physiology (Fifth ed.). New York: Harper & Row, Publishers. p. 624. ISBN 0-06-350729-3.
"https://kn.wikipedia.org/w/index.php?title=ಮಲ&oldid=798626" ಇಂದ ಪಡೆಯಲ್ಪಟ್ಟಿದೆ