ಲಿಂಬಾ ರಾಮ್ ಭಾರತೀಯ ಬಿಲ್ಲುಗಾರ ಸ್ಪರ್ಧಿಯಾಗಿದ್ದು, ಮೂರು ಒಲಿಂಪಿಕ್ಸ್‌ಗಳು ಸೇರಿದಂತೆ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.[೧] 1992ರ ಬೀಜಿಂಗ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬಿಲ್ಲುಗಾರಿಕೆಯ ವಿಶ್ವದಾಖಲೆಯನ್ನು ಅವರು ಸಮಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಲ್ಲುಗಾರಿಕೆಯಲ್ಲಿ ಶ್ಲಾಘನೆ ಗಳಿಸಿದ ಬಿಲ್ಲುಗಾರ ಲಿಂಬಾ ರಾಮ್ ಅಖಿಲ ಭಾರತೀಯ ವನವಾಸಿ ಕಲ್ಯಾಣ್ ಆಶ್ರಮದ ಉತ್ಪನ್ನ. ಅದು ಭಾರತದ ದೂರದ ಬುಡಕಟ್ಟು ಪ್ರದೇಶಗಳಲ್ಲಿರುವ ಸ್ಥಳೀಯ ಬುಡಕಟ್ಟು ಜನರ ಸಾಮಾಜಿಕ-ಆರ್ಥಿಕ ಉನ್ನತಿ ಮತ್ತು ಅಭಿವೃದ್ಧಿಗೆ ದುಡಿಯುತ್ತಿದೆ.[೨]

Limba Ram
ವೈಯುಕ್ತಿಕ ಮಾಹಿತಿ
ರಾಷ್ರೀಯತೆIndian
ಎತ್ತರ1.57 m (5 ft 2 in)
ತೂಕ58 kg (128 lb)
Sport
ದೇಶIndia
ಕ್ರೀಡೆArchery

ಆರಂಭಿಕ ಜೀವನ ಬದಲಾಯಿಸಿ

ಲಿಂಬಾ ರಾಮ್ ಸರದೀತ್ ಗ್ರಾಮದಲ್ಲಿ(ಭಾರತರಾಜಸ್ಥಾನ ರಾಜ್ಯದ ಉದಯ್‌ಪುರ ಜಿಲ್ಲೆಯ ಜಾಡೋಲ್ ತಹಸಿಲ್‌)1972ರ ಜನವರಿ 30ರಂದು ಜನಿಸಿದರು. ಅವರ ಕುಟುಂಬವು ಅಹರಿ ಬುಡಕಟ್ಟು ಜನಾಂಗಕ್ಕೆ ಸೇರಿದ್ದು, ಬಡತನದ ಕಾರಣದಿಂದಾಗಿ ಲಿಂಬಾ ರಾಮ್ ಗುಬ್ಬಚ್ಚಿ, ಕವುಜಗ ಮುಂತಾದ ಪಕ್ಷಿಗಳನ್ನು ಮತ್ತು ಕಾಡಿನ ಪ್ರಾಣಿಗಳನ್ನು ತನ್ನ ಸ್ಥಳೀಯ ಬಿಲ್ಲು(ಬಿದಿರು ಮಳೆಯಿಂದ ತಯಾರಿಸಿದ್ದು) ಮತ್ತು ಲಾಳದ ಕಡ್ಡಿಯ ಬಾಣಗಳಿಂದ ಬೇಟೆಯಾಡುತ್ತಿದ್ದರು. 1987ರಲ್ಲಿ ಸಮೀಪದ ಗ್ರಾಮ ಮಕ್ರದಿವೊನಲ್ಲಿ ಉತ್ತಮ ಬಿಲ್ಲುಗಾರರಿಗೆ ತರಬೇತಿ ನೀಡಲು ಸರ್ಕಾರವು ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ಅವರ ಚಿಕ್ಕಪ್ಪ ಸುದ್ದಿಯನ್ನು ತಂದರು. ಈ ಪರೀಕ್ಷೆಯಲ್ಲಿ 15ವರ್ಷ ವಯಸ್ಸಿನ ಲಿಂಬಾ ರಾಮ್ ಮತ್ತು ಇನ್ನೂ ಮೂವರು ಬಾಲಕರನ್ನು(ಇದರಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಬಿಲ್ಲುಗಾರ ಶ್ಯಾಮ್ ಲಾಲ್ ಸೇರಿದ್ದಾರೆ)ಭಾರತದ ಕ್ರೀಡಾ ಪ್ರಾಧಿಕಾರದ ಆಯ್ಕೆದಾರರು ಗುರುತಿಸಿದರು. ಅದಾದನಂತರ ಇವೆರಲ್ಲ ನಾಲ್ಕು ಬಾಲಕರನ್ನು ಆರ್. ಎಸ್.ಸೋಧಿ ಮೇಲ್ವಿಚಾರಣೆಯ ತರಬೇತಿಯಲ್ಲಿ ನಾಲ್ಕು ತಿಂಗಳ ತರಬೇತಿ ಶಿಬಿರಕ್ಕಾಗಿ(ವಿಶೇಷ ಪ್ರದೇಶದ ಕ್ರೀಡಾ ಕಾರ್ಯಕ್ರಮ) ನವದೆಹಲಿಗೆ ಕಳಿಸಲಾಯಿತು.[೩][೪]

ವೃತ್ತಿಜೀವನ ಬದಲಾಯಿಸಿ

ಲಿಂಬಾರಾಮ್ ಅವರನ್ನು 1987ರಲ್ಲಿ ಭಾರತದ ಕ್ರೀಡಾಪ್ರಾಧಿಕಾರ ಗುರುತಿಸಿ, ತರಬೇತಿ ನೀಡಿತು. ಅದೇ ವರ್ಷ, 1987ರಲ್ಲಿ ಬೆಂಗಳೂರಿನಲ್ಲಿ ನಡೆದ ಕಿರಿಯ ಮಟ್ಟದ ರಾಷ್ಟ್ರೀಯ ಬಿಲ್ಲುಗಾರಿಕೆ ಪಂದ್ಯಾವಳಿಗಳಲ್ಲಿ ಅವರು ಸಮಗ್ರ ಚಾಂಪಿಯನ್ ಆದರು. ನಂತರದ ವರ್ಷ 1988ರಲ್ಲಿ ಅವರು ಹಿರಿಯ ಮಟ್ಟದ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಸಮಗ್ರ ಚಾಂಪಿಯನ್ ಆಗಿ ಸಿಯೋಲ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾದರು. 1989ರಲ್ಲಿ ಅವರು ಸ್ವಿಟ್ಜರ್‌ಲೆಂಡ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್ ಕ್ವಾರ್ಟರ್‌ಫೈನಲ್ ತಲುಪಿದರು. ಅದೇ ವರ್ಷ,1989ರಲ್ಲಿ, ಏಷ್ಯನ್ ಕಪ್ ವೈಯಕ್ತಿಕ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗಳಿಸಿದರು ಮತ್ತು ಭಾರತವು ತಂಡದ ಚಿನ್ನವನ್ನು ಗಳಿಸಿತು. 1990ರಲ್ಲಿ ಬೀಜಿಂಗ್ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವು ನಾಲ್ಕನೇ ಸ್ಥಾನ ಪಡೆಯಲು ನೆರವಾದರು. ಅವರು ಮೂರು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 1992ರಲ್ಲಿ ಅವರು ಬೀಜಿಂಗ್ ಏಷ್ಯನ್ ಚಾಂಪಿಯನ್‌ಷಿಪ್‌ನ 30 ಮೀಟರ್ ಸ್ಪರ್ಧೆಯಲ್ಲಿ ತಕಾಯೋಶಿ ಮ್ಯಾಟ್‌ಸುಶಿತ ಅವರ ವಿಶ್ವದಾಖಲೆಯನ್ನು ಸಮಗೊಳಿಸಿ 357 /360 ಅಂಕಗಳೊಂದಿಗೆ ಚಿನ್ನದ ಪದಕವನ್ನು ಗಳಿಸಿದರು.[೫] ಈ ಸುದ್ದಿಯನ್ನು ತಿಳಿದ ನಂತರ ಭಾರತದ ಸಂಸತ್ತು ಲಿಂಬಾ ರಾಮ್ ಅವರನ್ನು ಅಭಿನಂದಿಸಿತು.[೬][೭] 1993ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಅವರಿಗೆ 70 ಮೀಟರ್ ವಿಭಾಗದಲ್ಲಿ ಒಂದು ಪಾಯಿಂಟ್‍‌ನೊಂದಿಗೆ ಕಂಚಿನ ಪದಕ ತಪ್ಪಿಹೋಯಿತು ಮತ್ತು 10ನೇ ಸ್ಥಾನ ಗಳಿಸಿದರು. 1995ರಲ್ಲಿ ಅವರು ಎರಡನೇ ಸ್ಥಾನ ಗಳಿಸಿದರು ಮತ್ತು ನವದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅವರ ತಂಡವು ಚಿನ್ನದ ಪದಕ ಗಳಿಸಿತು.ನವ ದೆಹಲಿ 1996ರಲ್ಲಿ ಅವರು ಏಷ್ಯಾದ ದಾಖಲೆಯೊಂದಿಗೆ ರಾಷ್ಟ್ರೀಯ ಚಾಂಪಿಯನ್ ಆದರು.[೮]

ಪ್ರಶಸ್ತಿಗಳು ಬದಲಾಯಿಸಿ

ಭಾರತ ಸರ್ಕಾರ 1991ರಲ್ಲಿ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿತು. [೯]

ದುರ್ದೆಶೆ ಬದಲಾಯಿಸಿ

1996ರಲ್ಲಿ ಲಿಂಬಾ ರಾಮ್ TATA ಕಂಪೆನಿಯನ್ನು ಸೇರಿದರು. ಅದೇ ವರ್ಷ ಕೋಲ್ಕತಾದ ತರಬೇತಿ ಶಿಬಿರದಲ್ಲಿ ಫುಟ್ಬಾಲ್ ಆಟವಾಡುವಾಗ ಗಂಭೀರ ಭುಜದ ಗಾಯಕ್ಕೆ ಒಳಗಾದರು. ಭುಜದ ಗಾಯದಿಂದ ಬಿಲ್ಲನ್ನು ಎಳೆಯಲು ಅಸಮರ್ಥರಾಗಿ ಏಕಾಗ್ರತೆ ಕಳೆದುಕೊಂಡರು. 1999ರಲ್ಲಿ ಅವರು TATAದಲ್ಲಿ ಕಳಪೆ ನಿರ್ವಹಣೆಯ ಕಾರಣ ಕೆಲಸವನ್ನು ಕೂಡ ಕಳೆದುಕೊಂಡರು. ನಂತರ ಅವರು 2001ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ನಗದು ಗುಮಾಸ್ತೆಯಾಗಿ ಸೇರಿದರು. 2003ರಲ್ಲಿ ಭಾರತ ಕ್ರೀಡಾ ಪ್ರಾಧಿಕಾರ ಆಯೋಜಿಸಿದ್ದ ಮೂರನೇ ರಾಷ್ಟ್ರೀಯ ಶ್ರೇಯಾಂಕ ಬಹುಮಾನ ಹಣದ ಬಿಲ್ಲುಗಾರಿಕೆ ಪಂದ್ಯಾವಳಿಯಲ್ಲಿ ಪಾಲ್ಗೊಂಡು 16ನೇ ಸ್ಥಾನ ಗಳಿಸಿದರು.[೧೦] ಲಿಂಬಾ ರಾಮ್ ಅವರು MLA ಅರ್ಜುನ್ ಸಿಂಗ್ ಬವಾನಿಯ ಅವರಿಗೆ ಸೇರಿದ ಗ್ಯಾರೇಜ್‌ನಲ್ಲಿ ವಾಸಮಾಡುತ್ತಿದ್ದು, ಹೆಚ್ಚುಕಡಿಮೆ ವಸತಿಹೀನರಾಗಿದ್ದಾರೆ ಎಂದು 2009 ಜನವರಿಯಲ್ಲಿ ಭಾರತದ ಸುದ್ದಿ ಮಾಧ್ಯಮವರದಿಮಾಡಿತು.[೧೧][೧೨][೧೩][೧೪]

ಪ್ರಸಕ್ತ ಸ್ಥಿತಿಗತಿ ಬದಲಾಯಿಸಿ

ಕೆಲವು ವರ್ಷಗಳ ಕಾಲ ಲಿಂಬಾ ರಾಮ್ ನಿರುದ್ಯೋಗಿಯಾಗಿ ಉಳಿದ ನಂತರ 2009ರ ಜನವರಿ 10ರಂದು ಭಾರತದ ಬಿಲ್ಲುಗಾರಿಕೆ ಒಕ್ಕೂಟವು 2010ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕಾಗಿ ರಾಷ್ಟ್ರೀಯ ಬಿಲ್ಲುಗಾರಿಕೆ ಕೋಚ್‌ ಸ್ಥಾನದಲ್ಲಿ ಲಿಂಬಾ ರಾಮ್ ಅವರನ್ನು ನೇಮಕಮಾಡಿ ಒಂದು ವರ್ಷದ ಒಪ್ಪಂದಕ್ಕೆ ಸಹಿಹಾಕಿತು. [೧೫] [೧೬][೧೭][೧೮][೧೯][೨೦][೨೧]

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2020-04-18. Retrieved 2010-12-13.
  2. ಏಮಿಂಗ್ ಹೈ -ವನವಾಸಿ ಕಲ್ಯಾಣ ಆಶ್ರಮ್ ಈಸ್ ಹೆಲ್ಪಿಂಗ್ ಟ್ರೈಬಲ್ಸ್ ಅಚೀವ್ ಸೆಲ್ಫ್-ರಿಲೈಯೆನ್ಸ್ Archived 2011-06-04 ವೇಬ್ಯಾಕ್ ಮೆಷಿನ್ ನಲ್ಲಿ. - ದಿ ಹಿಂದು,ಸಾಟರ್ಡೆ,ಫೆ. 25, 2006
  3. http://www.tribuneindia.com/2003/20030923/sports.htm#7
  4. http://www.mapsofindia.com/who-is-who/sports/limba-ram.html
  5. http://www.indianarchery.info/htdocs/iarhist.htm
  6. "ಆರ್ಕೈವ್ ನಕಲು". Archived from the original on 2011-06-15. Retrieved 2010-12-13.
  7. "ಆರ್ಕೈವ್ ನಕಲು". Archived from the original on 2011-06-15. Retrieved 2010-12-13.
  8. http://www.indianexpress.com/oldStory/27496/
  9. http://www.iloveindia.com/sports/archery/indian-archers/limba-ram.html
  10. "ಆರ್ಕೈವ್ ನಕಲು". Archived from the original on 2003-04-22. Retrieved 2010-12-13.
  11. "ಆರ್ಕೈವ್ ನಕಲು". Archived from the original on 2009-01-14. Retrieved 2010-12-13.
  12. "ಆರ್ಕೈವ್ ನಕಲು". Archived from the original on 2009-01-22. Retrieved 2010-12-13.
  13. "ಆರ್ಕೈವ್ ನಕಲು". Archived from the original on 2011-08-12. Retrieved 2010-12-13.
  14. http://www.tribuneindia.com/2009/20090112/sports.htm#4
  15. "ಆರ್ಕೈವ್ ನಕಲು". Archived from the original on 2011-07-18. Retrieved 2010-12-13.
  16. http://www.headlinesindia.com/sports-news/commonwealth-games/limba-ram-expecting-a-good-show-in-the-commonwealth-games-6493.html
  17. http://www.dnaindia.com/india/report_archer-limba-ram-now-seeks-fresh-rural-talent_1190856
  18. http://news4u.co.in/?tag=coach-limba-ram
  19. "ಆರ್ಕೈವ್ ನಕಲು". Archived from the original on 2009-02-14. Retrieved 2010-12-13.
  20. "ಆರ್ಕೈವ್ ನಕಲು". Archived from the original on 2009-02-21. Retrieved 2010-12-13.
  21. http://timesofindia.indiatimes.com/sports/more-sports/archery/Indian-archers-strong-contenders-in-World-Cup-Limba-Ram/articleshow/4945959.cms