ಲತಾಂಗಿ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಲತಾಂಗಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೬೩ ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಗೀತಪ್ರಿಯ ಎಂದು ಹೆಸರಿಸಿದ್ದಾರೆ.[೧][೨] .ಇದು ಹಿಂದೂಸ್ತಾನಿ ಪದ್ಧತಿಯಲ್ಲಿ ಹೆಚ್ಚು ಬಳಕೆಯಲ್ಲಿದೆ.
ರಾಗ ಸ್ವರೂಪ ಮತ್ತು ಲಕ್ಷಣ
ಬದಲಾಯಿಸಿಇದು ಹನ್ನೊಂದನೆಯ ರುದ್ರ ಚಕ್ರದ ಮೂರನೆಯ ರಾಗ.ಇದರ ನೆನೆಪಿನ ಹೆಸರು ರುದ್ರ-ಗೊ ನೆನಪಿನ ನುಡಿಕಟ್ಟು:ಸ ರಿ ಗು ಮಿ ಪ ಧ ನು [೧] ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ.
ಆರೋಹಣ ಸ ರಿ೨ ಗ೩ ಮ೨ ಪ ದ೧ ನಿ೩ ಸ
ಅವರೋಹಣ ಸ ನಿ೩ ದ೧ ಪ ಮ೨ ಗ೩ ರಿ೨ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಚತುಶ್ರುತಿ ರಿಷಭ,ಅಂತರ ಗಾಂಧಾರ,ಪ್ರತಿಮಧ್ಯಮ,ಪಂಚಮ,ಶುದ್ಧ ಧೈವತಮತ್ತು ಕಾಕಲಿ ನಿಷಾಧ.ಇದು 27ನೆಯ ಮೇಳಕರ್ತ ರಾಗವಾದ ಸರಸಾಂಗಿಗೆ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ.
ಜನ್ಯ ರಾಗಗಳು
ಬದಲಾಯಿಸಿಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ.
ಜನಪ್ರಿಯ ರಚನೆಗಳು
ಬದಲಾಯಿಸಿಲತಾಂಗಿ ರಾಗದಲ್ಲಿ ಹಲವಾರು ಜನಪ್ರಿಯ ರಚನೆಗಳಿದ್ದು, ಕೆಲವು
- ದಿನಮೆ ಸುದಿನಮು-ತ್ಯಾಗರಾಜ
- ಅಪರಾಧಮುಲ- ತ್ಯಾಗರಾಜ
- ಮರಿವೆರೆ - ಪಟ್ನಂ ಸುಬ್ರಹ್ಮಣ್ಯ ಅಯ್ಯರ್
- ಪಿರವ ವರಮ್ ತಾರುಮ್- ಪಾಪನಾಶಮ್ ಶಿವನ್
- ವೆಂಕಟರಮನ- ಪಾಪನಾಶಮ್ ಶಿವನ್
- ಶ್ರಿಲಲಿತೆ ಶ್ರಿಕಾಂತಸಹಿತೆ- ಜಯಚಾಮರಾಜೇಂದ್ರ ವೊಡೆಯರ್
- ತಾಮ್ರಲೋಚನಿ ಲತಾಂಗಿ- ಎಂ. ಬಾಲಮುರಳಿ ಕೃಷ್ಣ
- ಕೊಂಜುಮ್ ಸಾಲಂಗೈ ತಿಜಗುಮ್-ವರ್ಣ- ಮದುರೈ ಆರ್.ಮುರಳೀದರನ್
ಸಂಬಂಧಿತ ರಾಗಗಳು
ಬದಲಾಯಿಸಿಗ್ರಹಭೇದಮ್ ಸೂತ್ರವನ್ನು ಲತಾಂಗಿ ರಾಗಕ್ಕೆ ಅನ್ವಯಿಸಿದಾಗ ಎರಡು ರಾಗಗಳು ದೊರೆಯುತ್ತದೆ.ಸೂರ್ಯಕಾಂತಮತ್ತು ಸೇನಾವತಿ.