ರೊಮೇಶ್ ಶಾಂತ ಕಲುವಿತರಣ (ಸಿಂಹಳ: රොමේෂ් ශාන්ත කලුවිතාරණ; ಹುಟ್ಟು: ೨೪ ನವೆಂಬರ್ ೧೯೬೯) ಮಾಜಿ ಶ್ರೀಲಂಕಾದ ಕ್ರಿಕೆಟಿಗ. ಇವರು ೧೯೯೦ ರಿಂದ ೨೦೦೪ ರವರೆಗೆ ೪೯ ಟೆಸ್ಟ್ ಮತ್ತು ೧೮೯ ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ.[] ೧೭ ಮೇ ೨೦೦೮ ರಂದು ಇವರನ್ನು ಮಲೇಷ್ಯಾದ ಹಂಗಾಮಿ ಕ್ರಿಕೆಟ್ ತರಬೇತುದಾರರಾಗಿ ನೇಮಿಸಲಾಯಿತು.[] ಇವರು ೧೯೯೬ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ಪ್ರಮುಖ ಸದಸ್ಯ ಮತ್ತು ವಿಕೆಟ್ ಕೀಪರ್ ಆಗಿದ್ದು, ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾಗಿದ್ದರು.

ರೊಮೇಶ್ ಕಲುವಿತರಣ
රොමේෂ් කලුවිතාරණ
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ರೊಮೇಶ್ ಶಾಂತ ಕಲುವಿತರಣ
ಹುಟ್ಟು (1969-11-24) ೨೪ ನವೆಂಬರ್ ೧೯೬೯ (ವಯಸ್ಸು ೫೫)
ಕೊಲಂಬೊ, ಸಿಲೋನ್
ಅಡ್ಡಹೆಸರುಲಿಟಲ್ ಕಲು, ಲಿಟಲ್ ಡೈನಮೈಟ್
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ ಮಧ್ಯಮ ವೇಗ
ಪಾತ್ರಬ್ಯಾಟ್ಸ್‌ಮನ್, ವಿಕೆಟ್-ಕೀಪರ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ ೫೨)೧೭ ಆಗಸ್ಟ್ ೧೯೯೨ v ಆಸ್ಟ್ರೇಲಿಯಾ
ಕೊನೆಯ ಟೆಸ್ಟ್೨೮ ಅಕ್ಟೋಬರ್ ೨೦೦೪ v ಪಾಕಿಸ್ತಾನ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೬೧)೮ ಡಿಸೆಂಬರ್ ೧೯೯೦ v ಭಾರತ
ಕೊನೆಯ ಅಂ. ಏಕದಿನ​೨೨ ಫೆಬ್ರವರಿ ೨೦೦೪ v ಆಸ್ಟ್ರೇಲಿಯಾ
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
ಸೆಬಾಸ್ಟಿಯನೈಟ್ಸ್ ಕ್ರಿಕೆಟ್ ಮತ್ತು ಅಥ್ಲೆಟಿಕ್ಸ್ ಕ್ಲಬ್
ಕೋಲ್ಟ್ಸ್ ಕ್ರಿಕೆಟ್ ಕ್ಲಬ್
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ಓಡಿಐ
ಪಂದ್ಯಗಳು ೪೯ ೧೮೯
ಗಳಿಸಿದ ರನ್ಗಳು ೧,೯೩೩ ೩,೭೧೧
ಬ್ಯಾಟಿಂಗ್ ಸರಾಸರಿ ೨೬.೧೨ ೨೨.೨೨
೧೦೦/೫೦ ೨/೯ ೩/೨೩
Top score ೧೩೨* ೧೦೨*
ಹಿಡಿತಗಳು/ ಸ್ಟಂಪಿಂಗ್‌ ೯೩/೨೬ ೧೩೨/೭೫
ಮೂಲ: Cricinfo, ೧ ನವೆಂಬರ್ ೨೦೨೦

ಅಂತಾರಾಷ್ಟ್ರೀಯ ವೃತ್ತಿಜೀವನ

ಬದಲಾಯಿಸಿ

ಅವರ ಆರಂಭಿಕ ವೃತ್ತಿಜೀವನದ ಒಳ್ಳೆಯ ಪ್ರದರ್ಶನದಿಂದಾಗಿ ಶ್ರೀಲಂಕಾ ತಂಡದ ಉತ್ತಮ ನಿರೀಕ್ಷೆಯಾಗಿ ಕಾಣುವಂತೆ ಮಾಡಿತು. ನಿಸ್ಸಂದೇಹವಾಗಿ ಅವರ ವೃತ್ತಿಯ ಪ್ರಮುಖ ಗಳಿಗೆಯೆಂದರೆ ೧೯೯೨ರಲ್ಲಿ ಪ್ರಬಲವಾದ ಆಸ್ಟ್ರೇಲಿಯಾ ತಂಡದ ವಿರುದ್ಧದ ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ೧೩೨ ನಾಟ್ ಔಟ್ ಇನ್ನಿಂಗ್ಸ್ (೨೬ ಬೌಂಡರಿಗಳನ್ನು ಒಳಗೊಂಡಂತೆ). ಆದಾಗ್ಯೂ ಕಳೆಗುಂದುತ್ತಿದ್ದ ಶ್ರೀಲಂಕಾದ ತಂಡದಲ್ಲಿ (೧೯೯೬ರ ವಿಶ್ವಕಪ್‌ನಲ್ಲಿ ಶ್ರೀಲಂಕಾ ಕ್ರಿಕೆಟ್‌ನ ಪುನರುಜ್ಜೀವನದ ಮುಂಚೆ) ಅವರ ಮೇಲಿದ್ದ ಭರವಸೆಯನ್ನು ಪೂರೈಸುವಲ್ಲಿ ವಿಫಲರಾದರು.

ರಾಷ್ಟ್ರೀಯ ತಂಡದಲ್ಲಿದ್ದಾಗ ಕೆಟ್ಟ ಶಾಟ್ ಆಯ್ಕೆಯಿಂದಾಗಿ ಕೆಲವೊಮ್ಮೆ ತಮ್ಮ ವಿಕೆಟ್ ಒಪ್ಪಿಸುತ್ತಿದ್ದರು. ಸ್ವಿಂಗಿಂಗ್ ಎಸೆತ ಅವರ ದೌರ್ಬಲ್ಯವಾಗಿತ್ತು. ಆದರೂ ಅವರು ವೇಗದ ಎಸೆತಗಳನ್ನು ಎದುರಿಸಲು ಇಷ್ಟಪಡುತ್ತಿದ್ದರು. ಕೆಟ್ಟ ಎಸೆತಗಳನ್ನು ಬೇಗನೇ ದಂಡಿಸುತ್ತಿದ್ದರು. ೧೯೯೫-೯೬ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸನತ್ ಜಯಸೂರ್ಯ ಅವರೊಂದಿಗೆ ಆರಂಭಿಕ ಬ್ಯಾಟ್ಸ್‌ಮನ್ ಆಗಲು ಬಡ್ತಿ ನೀಡಲಾಯಿತು. ಆಮೇಲೆ ಇದು ಏಕದಿನ ಪಂದ್ಯಗಳಲ್ಲಿ ಮೊದಲ ಹದಿನೈದು ಓವರ್‌ನಲ್ಲಿ ಕ್ಷೇತ್ರರಕ್ಷಣೆಯ ನಿರ್ಬಂಧಗಳು ಇದ್ದಾಗ, ಆಕ್ರಮಣಕಾರಿ ಬ್ಯಾಟಿಂಗ್‌ನ ಹೊಸ ತಂತ್ರ ರಚನೆ ಕಾರಣವಾಯಿತು. ಇದು ಕ್ರಿಕೆಟ್‌ಗೆ ಕಲುವಿತರಣ ಅವರ ಬಹುದೊಡ್ಡ ಕೊಡುಗೆ ಆಗಿದೆ. ಆರಂಭದಿಂದಲೇ ಆಕ್ರಮಣ ಮಾಡುವ ಈ ಹೊಸ ಕಾರ್ಯತಂತ್ರವು ಶ್ರೀಲಂಕಾಕ್ಕೆ ೧೯೯೬ರ ಕ್ರಿಕೆಟ್ ವಿಶ್ವಕಪ್ ಗೆಲ್ಲಲು ಮುಖ್ಯ ಕಾರಣವಾಯಿತು. ಏಕೆಂದರೆ ಬೇರ್ಯಾವ ತಂಡಗಳೂ ಇಂತಹ ದಾಳಿಗೆ ಸಿದ್ಧವಾಗಿರಲಿಲ್ಲ. ಅರ್ಜುನ ರಣತುಂಗ ನಾಯಕರಾಗಿದ್ದ ಆ ವಿಶ್ವಕಪ್ ಸರಣಿಯಲ್ಲಿ ಕಲುವಿತರಣ ಜಯಸೂರ್ಯ ಅವರೊಂದಿಗೆ ಓಪನರ್ ಮತ್ತು ವಿಕೆಟ್ ಕೀಪರ್ ಆಗಿದ್ದರು.

ಕ್ರಿಕೆಟ್ ಹೊರಗೆ

ಬದಲಾಯಿಸಿ

ಅವರು ಕಲೂಸ್ ಹೈಡವೆ ಎಂಬ ಯೋಜನೆಯನ್ನು ಆರಂಭಿಸಿದರು. ಇದು ಉದವಾಲವೆಯಲ್ಲಿ ಇರುವ ಐಷಾರಾಮಿ ಕಾಡಿನ ರೆಸಾರ್ಟ್ ಆಗಿದೆ.[]

ಉಲ್ಲೇಖಗಳು

ಬದಲಾಯಿಸಿ
  1. "Romesh Kaluwitharana". ESPN Cricinfo. Retrieved 13 March 2019.
  2. "Where are Herath's team-mates from his 1999 Test debut?". ESPN Cricinfo. Retrieved 13 March 2019.
  3. "Kalu's Hideaway for nature lovers". Sunday Times. Retrieved 11 December 2019.