ರನ್ನ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ರನ್ನ 2015 ರ ಕನ್ನಡ ಭಾಷೆಯ ಆಕ್ಷನ್ ಹಾಸ್ಯ ಚಿತ್ರವಾಗಿದ್ದು, ಇದನ್ನು ನಂದ ಕಿಶೋರ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಕಿಚ್ಚ ಸುದೀಪ, ಪ್ರಕಾಶ್ ರಾಜ್, ರಚಿತಾ ರಾಮ್, ಹರಿಪ್ರಿಯಾ, ಮಧು, ದೇವರಾಜ್, ಅವಿನಾಶ್, ಶರತ್ ಲೋಹಿತಾಶ್ವ, ಸಾಧು ಕೋಕಿಲ ಮತ್ತಿತರರು ನಟಿಸಿದ್ದಾರೆ. ಇದು ೨೦೧೩ ರ ತೆಲುಗು ಚಲನಚಿತ್ರ ಅತ್ತಾರಿಂಟಿಕಿ ದಾರೇದಿಯ ಅಧಿಕೃತ ರಿಮೇಕ್ ಆಗಿದೆ.

ರನ್ನ
ಚಿತ್ರ:Ranna 1.jpg
ನಿರ್ದೇಶನನಂದ ಕಿಶೋರ್
ನಿರ್ಮಾಪಕಎಂ. ಚಂದ್ರಶೇಖರ್
ಚಿತ್ರಕಥೆನಂದ ಕಿಶೋರ್
ಆಧಾರಅತ್ತಾರಿಂಟಿಕಿ ದಾರೇದಿ (ತೆಲುಗು)
ಪಾತ್ರವರ್ಗ
ಸಂಗೀತವಿ.ಹರಿಕೃಷ್ಣ
ಛಾಯಾಗ್ರಹಣಸುಧಾಕರ್ ಎಸ್. ರಾಜ್
ಸಂಕಲನಕೆ. ಎಂ. ಪ್ರಕಾಶ್
ಸ್ಟುಡಿಯೋಶ್ರೀ ನಿಮಿಷಾಂಬ ಪ್ರೊಡಕ್ಷನ್ಸ್
ವಿತರಕರುಶ್ರೀ ಗೋಕುಲ್ ಫಿಲ್ಮ್ಸ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 4 ಜೂನ್ 2015 (2015-06-04)
ಅವಧಿ೧೫೨ ನಿಮಿಷಗಳು
ದೇಶಭಾರತ
ಭಾಷೆಕನ್ನಡ
ಬಾಕ್ಸ್ ಆಫೀಸ್೨೦ ಕೋಟಿ[]

ಸುಧಾಕರ್ ಎಸ್.ರಾಜ್ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಸ್ವೀಕರಿಸಿದ ಈ ಚಿತ್ರವು, ೪ ಜೂನ್ ೨೦೧೫ ರಂದು ಬಿಡುಗಡೆಯಾಯಿತು. ಇದು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. [] []

ಕಥಾವಸ್ತು

ಬದಲಾಯಿಸಿ

ಶರತ್ ಚಂದ್ರ ಒಬ್ಬ ಜ್ಯೂರಿಚ್ ನಿವಾಸಿ ಶ್ರೀಮಂತ, ಆದರೆ ಅತೃಪ್ತ ಉದ್ಯಮಿ. ಪ್ರಕಾಶ್‌ರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಕಾರಣ, ಅವರು ಹೊರಹಾಕಿದ ತಮ್ಮ ಮಗಳು ಸರಸ್ವತಿಯೊಂದಿಗೆ ರಾಜಿ ಮಾಡಿಕೊಳ್ಳಲು ಶರತ್ ಬಯಸುತ್ತಾರೆ. ಅವರ ಮೊಮ್ಮಗ ಭಾರ್ಗವ ಚಂದ್ರನು ಶರತ್ ಚಂದ್ರ ಅವರನ್ನು ತಮ್ಮ ೭೫ನೇ ಹುಟ್ಟುಹಬ್ಬದಂದು ತಮ್ಮ ಮನೆಗೆ ಕರೆತರುವುದಾಗಿ ಭರವಸೆ ನೀಡುತ್ತಾನೆ. ಸರಸ್ವತಿಗೆ ಮೂವರು ಹೆಣ್ಣು ಮಕ್ಕಳು; ಅವರಲ್ಲಿ ಇಬ್ಬರು ಇಂದಿರಾ ಮತ್ತು ರುಕ್ಮಿಣಿ. ಪ್ರಕಾಶ್ ಅವರನ್ನು ಹೃದಯಾಘಾತದಿಂದ ರಕ್ಷಿಸಿದ ನಂತರ ಭಾರ್ಗವನು ಚಾಲಕನಾಗಿ ನೇಮಕಗೊಂಡು, ಚಂದು ಎಂಬ ಹೆಸರಿನಿಂದ ಮನೆಗೆ ಪ್ರವೇಶಿಸುತ್ತಾನೆ. ಭಾರ್ಗವ ಇಂದಿರಾರನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ ಆದರೆ ಅವಳು ಇನ್ನೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಾಳೆಂದು ತಿಳಿದಾಗ ಬಿಟ್ಟುಬಿಡುತ್ತಾನೆ. ಮತ್ತೊಂದೆಡೆ, ರುಕ್ಮಿಣಿ ಭಾರ್ಗವನನ್ನು ದ್ವೇಷಿಸುತ್ತಾಳೆ ಮತ್ತು ಅವನ ಮೇಲೆ ಅನುಮಾನ ವ್ಯಕ್ತಪಡಿಸುತ್ತಾಳೆ. ಸರಸ್ವತಿ ಭಾರ್ಗವನಿಗೆ ಅವನ ನಿಜವಾದ ಗುರುತನ್ನು ಮುಂಚೆಯೇ ತಿಳಿದಿರುವುದಾಗಿ ಹೇಳುತ್ತಾಳೆ ಮತ್ತು ಅವಳನ್ನು ಶರತ್ ಚಂದ್ರರ ಬಳಿಗೆ ಕರೆದೊಯ್ಯುವ ಪ್ರಯತ್ನ ಮಾಡದಂತೆ ಎಚ್ಚರಿಕೆ ನೀಡುತ್ತಾಳೆ.

ಇಂದಿರಾಳ ಪ್ರೀತಿಯನ್ನು ಉಳಿಸಲು, ಭಾರ್ಗವ ಮತ್ತು ಅವನ ಸ್ನೇಹಿತ ನರ್ಸ್ ಲಕ್ಷ್ಮಿ ಒಂದು ಹಳ್ಳಿಗೆ ಹೋಗುತ್ತಾರೆ ಮತ್ತು ಆಕಸ್ಮಿಕವಾಗಿ ರುಕ್ಮಿಣಿ ತಲೆಗೆ ಗಾಯವಾಗಿ ಜೀಪಿಗೆ ಬೀಳುತ್ತಾಳೆ, ಹೀಗೆ ವಿಸ್ಮೃತಿಯಿಂದ ಬಳಲುತ್ತಾಳೆ. ಭಾರ್ಗವ ಸದ್ಯಕ್ಕೆ ತನ್ನನ್ನು ಇವಳ ಪ್ರೇಮಿ ಎಂದು ಪರಿಚಯಿಸಿಕೊಳ್ಳುತ್ತಾನೆ ಮತ್ತು ಅವಳು ಅದನ್ನು ನಂಬುತ್ತಾಳೆ. ಮೂವರು ಸ್ಥಳಕ್ಕೆ ಹೋಗುತ್ತಾರೆ; ಭಾರ್ಗವ ಮತ್ತು ಲಕ್ಷ್ಮಿ ಮನೆಯನ್ನು ಪ್ರವೇಶಿಸುತ್ತಾರೆ. ಮದುಮಗನ ಕುಟುಂಬ ಸದಸ್ಯರೊಂದಿಗೆ ಹಿಂಸಾತ್ಮಕ ವಾಗ್ವಾದದ ನಂತರ, ಅವರು ಮತ್ತು ಮದುಮಗ ಅಲ್ಲಿಂದ ತಪ್ಪಿಸಿಕೊಂಡು ಸರಸ್ವತಿಯ ಮನೆಗೆ ತಲುಪುತ್ತಾರೆ, ಅಲ್ಲಿ ರುಕ್ಮಿಣಿಯ ನೆನಪು ಮರುಕಳಿಸುತ್ತದೆ. ವಧುವಿನ ತಂದೆ ವೀರಪ್ಪ ಚಂದುನಿಂದ ಉಂಟಾದ ಹಾನಿಗೆ ಪರಿಹಾರವನ್ನು ಕೇಳುತ್ತಾನೆ. ಅದಕ್ಕೆ ಸರಸ್ವತಿ ತನ್ನ ಹಿರಿಯ ಮಗನೊಂದಿಗೆ ರುಕ್ಮಿಣಿಯ ಮದುವೆಯ ಭರವಸೆ ನೀಡುತ್ತಾಳೆ. ತೊಡಕುಗಳನ್ನು ತಪ್ಪಿಸಲು, ಪ್ರಕಾಶ್ ಭಾರ್ಗವನನ್ನು ವಜಾ ಮಾಡುತ್ತಾರೆ. ರುಕ್ಮಿಣಿ ಮೊದಲಿನಿಂದಲೂ ಅವನನ್ನು ಪ್ರೀತಿಸುತ್ತಿದ್ದಳು ಆದರೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯುತ್ತಿದ್ದಳು ಎಂದು ಭಾರ್ಗವನಿಗೆ ನಂತರ ತಿಳಿಯುತ್ತದೆ. ಮಹಿಳೆಯರ ಬಗ್ಗೆ ಒಲವು ಹೊಂದಿರುವ ಉಗಾಂಡಾದಲ್ಲಿ ನೆಲೆಸಿರುವ ಶ್ರೀಮಂತ ಎನ್‌ಆರ್‌ಐ ಭಾಸ್ಕರನನ್ನು ಬಲೆಗೆ ಬೀಳಿಸಿ ಸರಸ್ವತಿಯ ಮನೆಗೆ ಅವನ ಸಹಾಯಕನಾಗಿ ಭಾರ್ಗವನು ಪ್ರವೇಶಿಸುತ್ತಾನೆ.

ಭಾಸ್ಕರ್ ರುಕ್ಮಿಣಿಯನ್ನು ಪ್ರೀತಿಸುತ್ತಾನೆ. ಆದರೆ ಅವನ ಪ್ರಯತ್ನಗಳು ಭಾರ್ಗವನಿಂದ ಪದೇ ಪದೇ ವಿಫಲಗೊಳ್ಳುತ್ತವೆ. ತನ್ನ ಮದುವೆಯ ದಿನ, ರುಕ್ಮಿಣಿ ಭಾರ್ಗವನ ಜೊತೆ ಓಡಿಹೋಗುತ್ತಾಳೆ. ಮುಂಬೈಗೆ ಹೋಗುವ ರೈಲಿಗಾಗಿ ಅವನೊಂದಿಗೆ ಕಾಯುತ್ತಿರುವಾಗ, ವೀರಪ್ಪನ ಹಿಂಬಾಲಕರು ಅವರನ್ನು ನಿಲ್ಲಿಸಲು ನಿಲ್ದಾಣವನ್ನು ತಲುಪುತ್ತಾರೆ, ಭಾರ್ಗವನಿಂದ ಏಟು ತಿನ್ನುತ್ತಾರೆ. ಕೋಪಗೊಂಡ ಪ್ರಕಾಶ್, ಸರಸ್ವತಿಯೊಂದಿಗೆ, ಭಾರ್ಗವನನ್ನು ಶೂಟ್ ಮಾಡಲು ಆಗಮಿಸುತ್ತಾನೆ, ಆದರೆ ಪ್ರಕಾಶ್ ತನ್ನ ನಿಜವಾದ ಗುರುತನ್ನು ತಿಳಿದ ನಂತರ ದಿಗ್ಭ್ರಮೆಗೊಳ್ಳುತ್ತಾನೆ. ಸರಸ್ವತಿ ಮನೆಯಿಂದ ಹೊರಬಂದ ದಿನ, ಶರತ್ ಚಂದ್ರ ಆತ್ಮಹತ್ಯೆಗೆ ಯತ್ನಿಸಿದರು ಆದರೆ ಆಕಸ್ಮಿಕವಾಗಿ ಭಾರ್ಗವನ ತಾಯಿಯನ್ನು ಕೊಂದರು ಎಂದು ಭಾರ್ಗವ ಬಹಿರಂಗಪಡಿಸುತ್ತಾನೆ. ತಾಯಿಯನ್ನು ಕೊಂದರೂ ತಾತನನ್ನೇ ಪ್ರೀತಿಸಲು ಆಯ್ಕೆ ಮಾಡಿಕೊಂಡೆ ಎನ್ನುತ್ತಾನೆ ಭಾರ್ಗವ. ಮತ್ತೊಂದೆಡೆ, ಸರಸ್ವತಿ ಅವರು ಶರತ್ ಚಂದ್ರನನ್ನು ದ್ವೇಷಿಸಲು ಆರಿಸಿಕೊಂಡರು, ಏಕೆಂದರೆ ಅವರು ಪ್ರಕಾಶ್ ಅವರನ್ನು ಗಾಯಗೊಳಿಸಿ ಅವರನ್ನು ಹೊರಹಾಕಿದರು.

ಸರಸ್ವತಿ ಮತ್ತು ಪ್ರಕಾಶ್ ತಮ್ಮ ತಪ್ಪನ್ನು ಅರಿತು ಭಾರ್ಗವನ ಜೊತೆ ರಾಜಿ ಮಾಡಿಕೊಳ್ಳುತ್ತಾರೆ. ಭಾಸ್ಕರ್ ನೇಮಿಸಿದ ನಾಲ್ವರು ಸಹಾಯಕರು ರುಕ್ಮಿಣಿಯನ್ನು ಅಪಹರಿಸುತ್ತಾರೆ. ಅಲ್ಲಿ ಅವಳು ಅವರಿಗೆ ಈ ಕಥೆಯನ್ನು ಹೇಳುತ್ತಾಳೆ. ಭಾರ್ಗವ ಮತ್ತು ಲಕ್ಷ್ಮಿ ಸ್ಥಳಕ್ಕೆ ತಲುಪುತ್ತಾರೆ ಮತ್ತು ರುಕ್ಮಿಣಿ ಭಾರ್ಗವನ ಜೊತೆಯಾಗುತ್ತಾಳೆ. ಶರತ್ ಚಂದ್ರ ಸರಸ್ವತಿಯೊಂದಿಗೆ ರಾಜಿಯಾಗುತ್ತಾರೆ. ಭಾರ್ಗವನು ಸರಸ್ವತಿ ಮತ್ತು ಶರತ್ ಚಂದ್ರರ ಬೆಂಬಲದಿಂದಾಗಿ ಅವಿರೋಧವಾಗಿ ಕಂಪನಿಯ ಸಿಇಒ ಆಗಿ ನೇಮಕಗೊಳ್ಳುತ್ತಾನೆ. ಡೈನಿಂಗ್ ಟೇಬಲ್ ಮೇಲೆ ಭಾರ್ಗವ ಶರತ್ ಚಂದ್ರನ ಕೈಯನ್ನು ಪ್ರೀತಿಯಿಂದ ಹಿಡಿದುಕೊಳ್ಳುವುದರೊಂದಿಗೆ ಚಿತ್ರ ಮುಗಿಯುತ್ತದೆ.

ತಾರಾಗಣ

ಬದಲಾಯಿಸಿ

ನಿರ್ಮಾಣ

ಬದಲಾಯಿಸಿ

ಮೂಲ ಚಿತ್ರದಲ್ಲಿ ಸಮಂತಾ ನಿರ್ವಹಿಸಿದ ಪಾತ್ರಕ್ಕೆ ರಚಿತಾ ರಾಮ್ , ಮತ್ತು ಪ್ರಣಿತಾ ಸುಭಾಷ್ ಪಾತ್ರವನ್ನು ಹರಿಪ್ರಿಯಾ ನಿರ್ವಹಿಸಲು ಸಹಿ ಹಾಕಿದರು. [] ಚಿತ್ರದಲ್ಲಿ ಪ್ರಮುಖ ಪಾತ್ರಕ್ಕಾಗಿ ನಟಿ ಮಧು ಅವರನ್ನು ಆಯ್ಕೆ ಮಾಡಲಾಯಿತು, [] ಇದನ್ನು ಮೂಲ ಚಿತ್ರದಲ್ಲಿ ನಾಧಿಯಾ ನಿರ್ವಹಿಸಿದ್ದರು. [] ಚಿತ್ರತಂಡವು ಅತ್ತಾರಿಂಟಿಕಿ ದಾರೇದಿಯನ್ನು ವೀಕ್ಷಿಸಲು ಸಲಹೆ ನೀಡಿತು, ಆದರೆ ಮಧು ಅವರು "ನಾಧಿಯಾದಿಂದ ಪ್ರಭಾವಿತರಾಗಲು ಬಯಸುವುದಿಲ್ಲ, ನನ್ನ ರೀತಿಯಲ್ಲಿ ಪಾತ್ರವನ್ನು ಅರ್ಥಮಾಡಿಕೊಳ್ಳಲು ಮತ್ತು ಅರ್ಥೈಸಲು ಬಯಸುತ್ತೇನೆ" ಎಂದು ಹೇಳಿದರು. [] ಅಕ್ಟೋಬರ್ ಆರಂಭದಲ್ಲಿ, ಪ್ರಕಾಶ್ ರಾಜ್ ಕೂಡ ಪಾತ್ರವರ್ಗದ ಭಾಗವಾಗಿದ್ದಾರೆ ಎಂದು ವರದಿಯಾಗಿತ್ತು. []

ಚಿತ್ರಕ್ಕೆ ರಾಯರು ಬಂದರು ಅತ್ತೆಯ ಮನೆಗೆ, ಸಂಜೀವ ಸರೋವರ, ರಾಯಭಾರಿ, ಭಗೀರಥ ಮತ್ತು ಭಾರ್ಗವ ಎಂಬ ಶೀರ್ಷಿಕೆಗಳನ್ನು ಮೊದಲು ಯೋಜಿಸಲಾಗಿತ್ತು . [] ಅಂತಿಮವಾಗಿ, ಚಿತ್ರಕ್ಕೆ ಸೆಪ್ಟೆಂಬರ್ ೨೦೧೪ ರಲ್ಲಿ ರನ್ನ ಎಂದು ಹೆಸರಿಸಲಾಯಿತು. ಆದರೆ, ಶೀರ್ಷಿಕೆಯನ್ನು ಸೈಕೋ ಚಿತ್ರದ ನಿರ್ದೇಶಕ ದೇವದತ್ತ ನೋಂದಾಯಿಸಿದ್ದರು, ನಂತರ ಶೀರ್ಷಿಕೆಯನ್ನು ರೂ.5 ಲಕ್ಷಕ್ಕೆ ಖರೀದಿಸಲಾಯಿತು. [೧೦]

ರನ್ನ ಮೊದಲ ಶೆಡ್ಯೂಲ್ ಹೈದರಾಬಾದ್‌ನಲ್ಲಿ ಪೂರ್ಣಗೊಂಡಿತು. ಚಿತ್ರದ ಎರಡನೇ ಶೆಡ್ಯೂಲ್ ೧೬ ಸೆಪ್ಟೆಂಬರ್ ೨೦೧೪ ರಂದು ಪ್ರಾರಂಭವಾಯಿತು [] ಅಕ್ಟೋಬರ್ ಆರಂಭದಲ್ಲಿ, ರಾಕ್ಲೈನ್ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಸಲಾಯಿತು. [೧೧] ಒಂದು ಹಾಡನ್ನು ಹಾಂಗ್ ಕಾಂಗ್‌ನಲ್ಲಿ ಚಿತ್ರೀಕರಿಸಲು ಚಿತ್ರತಂಡ ಯೋಜಿಸಿತ್ತು. ಆದರೆ, ಚೀನೀ ಹೊಸ ವರ್ಷಾಚರಣೆಯ ಅಡಚಣೆಯ ಕಾರಣ, ನಂತರ ಇಟಲಿಗೆ ಸ್ಥಳಾಂತರಗೊಂಡಿತು. ಚಲನಚಿತ್ರವು ಜೂನ್ ೪ ರಂದು ಬಿಡುಗಡೆಯಾಯಿತು ಮತ್ತು ಸುದೀಪ ಅವರ ಅಭಿನಯಕ್ಕಾಗಿ ಮೆಚ್ಚುಗೆಯನ್ನು ಪಡೆಯಿತು. [೧೨]

ಧ್ವನಿಮುದ್ರಿಕೆ

ಬದಲಾಯಿಸಿ

ವಿ.ಹರಿಕೃಷ್ಣ ಚಿತ್ರದ ಸಂಗೀತಕ್ಕಾಗಿ, ಸುದೀಪ ಅವರೊಂದಿಗೆ ನಾಲ್ಕನೇ ಬಾರಿಗೆ ಸಹಕರಿಸಿದ್ದಾರೆ. ಧ್ವನಿಮುದ್ರಿಕೆಯ ಆಲ್ಬಂ ಅನ್ನು ೧೫ ಏಪ್ರಿಲ್ ೨೦೧೫ ರಂದು ಸಂಯೋಜಕರ ಲೇಬಲ್ ಡಿ-ಬೀಟ್ಸ್ , ಆಡಿಯೊ ಹಕ್ಕುಗಳನ್ನು ಪಡೆದುಕೊಂಡಿತು. [೧೩]

ಬಿಡುಗಡೆ

ಬದಲಾಯಿಸಿ

ರನ್ನ ಚಿತ್ರದ ಇಡೀ ಕರ್ನಾಟಕ ಪ್ರದೇಶದ ವಿತರಣಾ ಹಕ್ಕುಗಳನ್ನು ಶ್ರೀ ಗೋಕುಲ್ ಫಿಲ್ಮ್ಸ್ ೨೫ ಕೋಟಿ (ಯುಎಸ್$೫.೫೫ ದಶಲಕ್ಷ)ಗೆ ಪಡೆದುಕೊಂಡಿದೆ. [೧೪]

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಬದಲಾಯಿಸಿ
ಐಐಎಫ್ಎ ಉತ್ಸವಂ
ಐಬಿಎನ್ ಲೈವ್ ಚಲನಚಿತ್ರ ಪ್ರಶಸ್ತಿಗಳು
  • ದಕ್ಷಿಣದ ಅತ್ಯುತ್ತಮ ನಟ (2015) - ಸುದೀಪ - ನಾಮನಿರ್ದೇಶಿತ [೧೬]
೬೩ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್
  • ವಿಮರ್ಶಕರು ಅತ್ಯುತ್ತಮ ನಟಿ – ಕನ್ನಡ (2015) - ರಚಿತಾ ರಾಮ್ - ಗೆದ್ದಿದ್ದಾರೆ
  • ಅತ್ಯುತ್ತಮ ನಟಿ - ಕನ್ನಡ (2015) - ರಚಿತಾ ರಾಮ್ - ನಾಮನಿರ್ದೇಶಿತ [೧೭]
  • ಅತ್ಯುತ್ತಮ ಪೋಷಕ ನಟಿ - ಕನ್ನಡ (2015) - ಮಧು - ನಾಮನಿರ್ದೇಶಿತ [೧೭]
೫ನೇ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

ಉಲ್ಲೇಖಗಳು

ಬದಲಾಯಿಸಿ
  1. TNM (2015-06-30). "Southern cinema in 2015: Content ruled over star power in first half". The News Minute (in ಇಂಗ್ಲಿಷ್). Retrieved 2024-05-08.
  2. Sudeep’s Attarintiki Daredi remake to be named Ranna?
  3. ೩.೦ ೩.೧ Sudeep Plays Everybody’s Sweetheart in Ranna.
  4. Sudeepa to romance Rachita Ram and Hariprriya –
  5. Sudeep caught crying in Madhoo's lap!
  6. Madhoo returns to Kannada.
  7. Back in the limelight.
  8. Sudeep and Prakash Raj together for the first time –
  9. Sudeep's new film title Ranna - Exclusive - chitraloka.com | Kannada Movie News, Reviews | Image Archived 2018-07-26 ವೇಬ್ಯಾಕ್ ಮೆಷಿನ್ ನಲ್ಲಿ..
  10. Ranna title costs a bomb.
  11. Features, Express.
  12. Ranna Cancels Hong Kong, Going to Italy - Exclusive - chitraloka.com | Kannada Movie News, Reviews | Image Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ..
  13. "Ranna Audio Release on 16th of April and the movie successfully joined 20 crore club in 1st week itself which is first in sandalhood". Chitraloka. 11 April 2015. Archived from the original on 10 ಆಗಸ್ಟ್ 2022. Retrieved 5 ಸೆಪ್ಟೆಂಬರ್ 2024.
  14. "ವಿತರಣೆಗೂ ಬಂತು ಚೈತ್ರಕಾಲ".
  15. "IIFA Utsavam Awards 2015 Kannada Nominees & Winners". updatebro.com. January 24, 2016.
  16. "IBNLive Movie Awards 2016: Nominees for Best Actor (South)". ibnlive.com. February 3, 2016. Archived from the original on ಏಪ್ರಿಲ್ 15, 2016. Retrieved ಸೆಪ್ಟೆಂಬರ್ 5, 2024.
  17. ೧೭.೦ ೧೭.೧ "63rd Filmfare Awards (South) 2016 nominations". ibtimes.co.in. June 8, 2016.
  18. "SIIMA 2016 Kannada Nominations". ibtimes.com. May 26, 2016.


ಬಾಹ್ಯ ಕೊಂಡಿಗಳು

ಬದಲಾಯಿಸಿ