ಮುತ್ತೂಟ್ ಫೈನಾನ್ಸ್
ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಒಂದು ಭಾರತೀಯ ಹಣಕಾಸು ನಿಗಮವಾಗಿದೆ. ಇದೆ ದೇಶದ ಚಿನ್ನದ ಸಾಲ ಎನ್‌ಬಿಎಫ಼್‌ಸಿ ಆಗಿದೆ.[೪] ಚಿನ್ನದ ಸಾಲಗಳಿಗೆ ಹಣಕಾಸು ಒದಗಿಸುವುದರ ಜೊತೆಗೆ ಕಂಪನಿಯು ಇತರ ರೀತಿಯ ಸಾಲಗಳು, ವಿಮೆ ಮತ್ತು ಹಣ ವರ್ಗಾವಣೆ ಸೇವೆಗಳನ್ನು ನೀಡುತ್ತದೆ. ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಕಂಪನಿಯು ಕೇರಳದ ಕೊಚ್ಚಿಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ಇದು ದೇಶಾದ್ಯಂತ ೫೦೦೦ ಶಾಖೆಗಳನ್ನು ನಿರ್ವಹಿಸುತ್ತದೆ. ಮುತ್ತೂಟ್ ಫೈನಾನ್ಸ್ ಅನ್ನು ಯುಕೆ, ಯುಎಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸಹ ಸ್ಥಾಪಿಸಲಾಗಿದೆ.
ಸಂಸ್ಥೆಯ ಪ್ರಕಾರ | ಸಾರ್ವಜನಿಕ |
---|---|
ಸ್ಥಾಪನೆ | ೧೯೩೯ |
ಮುಖ್ಯ ಕಾರ್ಯಾಲಯ | ಕೊಚ್ಚಿ, ಕೇರಳ, ಭಾರತ |
ಪ್ರಮುಖ ವ್ಯಕ್ತಿ(ಗಳು) |
|
ಉದ್ಯಮ | ಹಣಕಾಸು ಸೇವೆಗಳು |
ಉತ್ಪನ್ನ | ಅಡಮಾನ ಸಾಲಗಳು, ವಿಮೆ, ಮ್ಯೂಚುಯಲ್ ಫಂಡ್‌ಗಳು; |
ಆದಾಯ | ₹೧೨,೨೩೭ ಕೋಟಿ (ಯುಎಸ್$೨.೭೨ ಶತಕೋಟಿ) (FY22)[೧] |
ಆದಾಯ(ಕರ/ತೆರಿಗೆಗೆ ಮುನ್ನ) | ₹೯,೬೬೬ ಕೋಟಿ (ಯುಎಸ್$೨.೧೫ ಶತಕೋಟಿ) (FY22)[೧] |
ನಿವ್ವಳ ಆದಾಯ | ₹೪,೦೩೧ ಕೋಟಿ (ಯುಎಸ್$೮೯೪.೮೮ ದಶಲಕ್ಷ) (FY22)[೧] |
ಒಟ್ಟು ಆಸ್ತಿ | ₹೫೪,೮೮೧ ಕೋಟಿ (ಯುಎಸ್$೧೨.೧೮ ಶತಕೋಟಿ) (2020)[೨] |
ಒಟ್ಟು ಪಾಲು ಬಂಡವಾಳ | ₹೧೧,೪೧೪ ಕೋಟಿ (ಯುಎಸ್$೨.೫೩ ಶತಕೋಟಿ) (2020)[೨] |
ಉದ್ಯೋಗಿಗಳು | ೨೫,೫೪೪ (೨೦೨೦)[೨] |
ಪೋಷಕ ಸಂಸ್ಥೆ | ಮುತ್ತೂಟ್ ಗ್ರೂಪ್ |
ಉಪಸಂಸ್ಥೆಗಳು |
|
ಜಾಲತಾಣ | www |
ಕಾರ್ಪೊರೇಟ್ ಹಿನ್ನೆಲೆ
ಬದಲಾಯಿಸಿಮಾರ್ಚ್ ೧೪ ೧೯೯೭ ರಂದು ಮಥಾಯ್ ಜಾರ್ಜ್ ಮುತ್ತೂಟ್ ಅವರು ಮುತ್ತೂಟ್ ಫೈನಾನ್ಸ್ ಅನ್ನು ಸಂಸ್ಥಾಪಿಸಿದರು.[೫] ೨೦೦೯- ೧೦ ರ ಅವಧಿಯಲ್ಲಿ ಕಂಪನಿಯು ೬೨೦ ಹೊಸ ಶಾಖೆಗಳನ್ನು ಸೇರಿಸಿತು.[೬]
ಸಾರ್ವಜನಿಕ ಠೇವಣಿಗಳನ್ನು ಸ್ವೀಕರಿಸದೆಯೇ ನಾನ್-ಬ್ಯಾ೦ಕಿ೦ಗ್ ಕ೦ಪೆನಿ ಫೈನಾನ್ಸಿಯಲ್ ಕ೦ಪನಿಯಾಗಿ ಇದು ಕಾರ್ಯ ನಿರ್ವಹಿಸುತ್ತದೆ.
ಪ್ರಶಸ್ತಿಗಳು
ಬದಲಾಯಿಸಿ- ೨೦೧೩ ರಲ್ಲಿ ಸ್ಕೋಚ್ ಫೈನಾನ್ಸಿಯಲ್ ಇನ್‌ಕ್ಲೂಷನ್ ಅವಾರ್ಡ್.[೭]
- ೨೦೧೨ ರಲ್ಲಿ ಬೆಸ್ಟ್ ರೂರಲ್ ಔಟ್‌ರೀಚ್‌ಗಾಗಿ ಏಷ್ಯನ್ ಸಸ್ಟೈನಬಿಲಿಟಿ ಲೀಡರ್‌ಶಿಪ್ ಅವಾರ್ಡ್.[೮]
- ೨೦೧೨ ರಲ್ಲಿ ದುಬೈನಲ್ಲಿ ನಡೆದ ಏಷ್ಯನ್ ಲೀಡರ್‌ಶಿಪ್ ಅವಾರ್ಡ್ಸ್‌ನಲ್ಲಿ ಬಿಎಸ್‌ಎಫ಼್‌ಐ ಪ್ರಶಸ್ತಿ.[೯]
- ದುಬೈ ಗ್ಲೋಬಲ್ ಕನ್ವೆನ್ಷನ್ ೨೦೧೨ ರಲ್ಲಿ ಸಾಮಾಜಿಕ ಜವಾಬ್ದಾರಿಯ ೭ ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಹಣಕಾಸು ಸೇವಾ ವಲಯದಲ್ಲಿ ಮುತ್ತೂಟ್ ಫೈನಾನ್ಸ್ ಲಿಮಿಟೆಡ್‌ಗೆ ಸಿಎಸ್‌ಆರ್‌ಗಾಗಿ ಗೋಲ್ಡನ್ ಪೀಕಾಕ್ ಪ್ರಶಸ್ತಿಯನ್ನು ನೀಡಲಾಯಿತು.[೧೦]
ಭಾರತದಲ್ಲಿರುವ ಶಾಖೆಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ೧.೨ "Muthoot Finance Q4 profit slides to Rs 1,006 cr as interest income falls". Business Standard. Retrieved 25 ಆಗಸ್ಟ್ 2023.
- ↑ ೨.೦ ೨.೧ ೨.೨ "Muthoot Finance Ltd. Financial Statements". moneycontrol.com.
- ↑ "Muthoot Finance". muthootfinance.com. Archived from the original on 19 ಜನವರಿ 2019. Retrieved 1 ಆಗಸ್ಟ್ 2020.
- ↑ "Muthoot Finance cashback scheme launched for customers amid COVID-19 pandemic". Zee Business. 14 ಜುಲೈ 2020.
- ↑ "Muthoot Finance History". The Economic Times.
- ↑ "Muthoot Finance Ltd". Business Standard.
- ↑ "Muthoot Finance, the flagship company of Muthoot Group, won the coveted Skoch Financial Inclusion Award". HT Syndication. Archived from the original on 25 ಮಾರ್ಚ್ 2016. Retrieved 8 ಮಾರ್ಚ್ 2024.
- ↑ "Muthoot Finance, Asian sustainability award". Award Website. Archived from the original on 4 ಮಾರ್ಚ್ 2016. Retrieved 8 ಮಾರ್ಚ್ 2024.
- ↑ "Muthoot Finance, bags 2 prestigious awards". Rupee Times. Archived from the original on 29 ಸೆಪ್ಟೆಂಬರ್ 2022. Retrieved 8 ಮಾರ್ಚ್ 2024.
- ↑ "Muthoot Finance receives Golden Peacock Award for CSR". India Infoline.