ಮ್ಯೂಚುಯಲ್ ಫಂಡ್
ಮ್ಯೂಚುಯಲ್ ಫಂಡ್ ಎಂದರೆ ವೃತ್ತಿಪರವಾಗಿ ನಿರ್ವಹಿಸುವಂತಹಾ ರೀತಿಯ ಅನೇಕ ಹೂಡಿಕೆದಾರರುಗಳಿಂದ ಹಣ ಪಡೆದು ಸ್ಟಾಕ್‌ಗಳು, ಬಾಂಡ್‌ಗಳು, ಅಲ್ಪಕಾಲೀನ ವಿತ್ತ ಮಾರುಕಟ್ಟೆ ಪತ್ರಗಳು, ಮತ್ತು/ಅಥವಾ ಇನ್ನಿತರೆ ಭದ್ರತಾ ಠೇವಣಿ ಸೌಲಭ್ಯ ಗಳಲ್ಲಿ ಹೂಡುವಂತಹಾ ಸಂಗ್ರಹೀಕೃತವಾದ ಹೂಡಿಕೆ ವ್ಯವಸ್ಥೆ.[೧] ಮ್ಯೂಚುಯಲ್ ಫಂಡ್ ಸಂಗ್ರಹವಾದ ಹಣವನ್ನು ನಿಯತವಾಗಿ ವ್ಯವಹಾರದಲ್ಲಿ ತೊಡಗಿಸಿಕೊಳ್ಳಬಲ್ಲ ನಿಧಿ ವ್ಯವಸ್ಥಾಪಕರನ್ನು ಹೊಂದಿರುತ್ತದೆ. ನಿವ್ವಳ ಉತ್ಪತ್ತಿ ಅಥವಾ ನಷ್ಟಗಳನ್ನು ನಂತರ ಸಾಧಾರಣ ವಾರ್ಷಿಕವಾಗಿ ಹೂಡಿಕೆದಾರರಿಗೆ ಹಂಚಲಾಗುತ್ತದೆ.
U.S.ನಲ್ಲಿ ಮ್ಯೂಚುಯಲ್ ಫಂಡ್ ಸಂಗ್ರಹವೆಂದು ಹೆಸರಾಗಿರುವ ಮುಕ್ತ-ದ್ವಾರ ನಿಧಿಸಂಗ್ರಹ; ಘಟಕ ಹೂಡಿಕೆ ಟ್ರಸ್ಟ್‌ಗಳು (UITಗಳು); ಮತ್ತು ಸೀಮಿತ/ಪರಿಮಿತ ನಿಧಿಸಂಗ್ರಹ ಎಂಬ ಮೂರು ಪ್ರಾಥಮಿಕ ವಿಧದ ಹೂಡಿಕೆ ಕಂಪೆನಿಗಳು 1940ರಿಂದ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿವೆ. ಇದೇ ರೀತಿಯ ನಿಧಿಸಂಗ್ರಹಗಳು ಕೆನಡಾದಲ್ಲೂ ಸಹಾ ಕಾರ್ಯಾಚರಿಸುತ್ತವೆ. ಆದರೆ ವಿಶ್ವದ ಉಳಿದ ಭಾಗಗಳಲ್ಲಿ, ಮ್ಯೂಚುಯಲ್ ಫಂಡ್ ಎಂಬ ಪದವನ್ನು ಸಾಮಾನ್ಯವಾಗಿ ಅನೇಕ ವಿಧವಾದ ಸಂಗ್ರಹೀಕೃತ ಹೂಡಿಕೆ ವ್ಯವಸ್ಥೆಗಳಾದ, ಯುನಿಟ್ ಟ್ರಸ್ಟ್‌ಗಳು, ಮುಕ್ತ-ದ್ವಾರ ಹೂಡಿಕೆ ಕಂಪೆನಿಗಳು (OEICಗಳು), ಘಟಕೀಕರಿಸಿದ ವಿಮಾ ನಿಧಿಸಂಗ್ರಹ, ಮತ್ತು ಹಸ್ತಾಂತರಿಸಬಹುದಾದ ಭದ್ರತಾ ಠೇವಣಿ ವ್ಯವಸ್ಥೆಗಳಲ್ಲಿನ ಸಂಗ್ರಹೀಕೃತ ಹೂಡಿಕೆಗಳನ್ನು (UCITS) ಉಲ್ಲೇಖಿಸಲು ಬಳಸಲಾಗುತ್ತದೆ.
ಇತಿಹಾಸ
ಬದಲಾಯಿಸಿಮೆಸಾಚುಸೆಟ್ಸ್ ಇನ್‌ವೆಸ್ಟರ್ಸ್ ಟ್ರಸ್ಟ್ (ಇದೀಗ MFS ಇನ್‌ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್) ಅನ್ನು ಮಾರ್ಚ್ 21, 1924ರಂದು ಸ್ಥಾಪಿಸಲಾಯಿತು. ಅದಾಗಿ ಕೇವಲ ಒಂದು ವರ್ಷದಲ್ಲೇ, 200 ಮಂದಿ ಷೇರುದಾರರನ್ನು ಹಾಗೂ $392,000 ಮೊತ್ತದ ಆಸ್ತಿಯನ್ನು ಸಂಸ್ಥೆ ಹೊಂದಿತ್ತು. 1924ರಲ್ಲಿ ಕೆಲ ಸೀಮಿತ ನಿಧಿಸಂಗ್ರಹ ಸಂಸ್ಥೆಗಳೂ ಸೇರಿದಂತೆ ಇಡೀ ಉದ್ಯಮದ ವಹಿವಾಟು $10 ದಶಲಕ್ಷ ಮೊತ್ತವನ್ನು ಸಹಾ ಮುಟ್ಟಿರಲಿಲ್ಲ.
1929ರ ಸ್ಟಾಕ್ ಮಾರುಕಟ್ಟೆ ಕುಸಿತವು ಮ್ಯೂಚುಯಲ್ ಫಂಡ್ ಸಂಸ್ಥೆಗಳ ಬೆಳವಣಿಗೆಯನ್ನು ಸಂಕುಚಿಸಿತು. ಸ್ಟಾಕ್ ಮಾರುಕಟ್ಟೆ ಕುಸಿತಕ್ಕೆ ಪ್ರತಿಕ್ರಿಯೆಯಾಗಿ, ಶಾಸನಸಭೆಯು 1933ರ ಭದ್ರತಾ ನಿಧಿ ಕಾಯ್ದೆ ಮತ್ತು 1934ರ ಭದ್ರತಾ ವಿನಿಮಯ ಕಾಯ್ದೆಗಳನ್ನು ಅಂಗೀಕರಿಸಿತು. ಪ್ರತಿ ನಿಧಿಸಂಗ್ರಹ ಸಂಸ್ಥೆಯು U.S. ಭದ್ರತಾನಿಧಿಗಳ ಮತ್ತು ವಿನಿಮಯ ಸಮಿತಿಯೊಂದಿಗೆ (SEC) ನೋಂದಣಿ ಮಾಡಿಸಿಕೊಂಡು ನಿರೀಕ್ಷಿತ ಹೂಡಿಕೆದಾರರಿಗೆ ನಿಧಿಸಂಗ್ರಹ ಸಂಸ್ಥೆಯ ಬಗ್ಗೆ, ಭದ್ರತಾಠೇವಣಿಗಳ ಬಗ್ಗೆ ಮತ್ತು ನಿಧಿಸಂಗ್ರಹ ನಿರ್ವಾಹಕರ ಬಗ್ಗೆ ಅತ್ಯಗತ್ಯ ಪ್ರಕಟಣೆಗಳನ್ನು ಹೊಂದಿರುವಂತಹಾ ವಿವರಣ ಪತ್ರವನ್ನು ನೀಡಬೇಕೆಂದು ಮೇಲ್ಕಂಡ ಎರಡೂ ಕಾಯ್ದೆಗಳು ಆದೇಶಿಸುತ್ತವೆ. 1940ರ ಹೂಡಿಕೆ ಕಂಪೆನಿ ಕಾಯ್ದೆಯು, ಎಲ್ಲಾ SEC-ನೊಂದಾಯಿತ ನಿಧಿಸಂಸ್ಥೆಗಳು ಇಂದಿಗೂ ಪಾಲಿಸಬೇಕಾಗಿರುವ ಮಾರ್ಗದರ್ಶಿ ಸೂತ್ರಗಳನ್ನು ನಿರ್ದೇಶಿಸಿತ್ತು.
ಸ್ಟಾಕ್ ಮಾರುಕಟ್ಟೆಯಲ್ಲಿ ಪುನಃ ಪಡೆದ ಆತ್ಮವಿಶ್ವಾಸದೊಂದಿಗೆ, ಮ್ಯೂಚುಯಲ್ ಫಂಡ್ ಸಂಗ್ರಹವು ವಿಕಾಸಗೊಳ್ಳಲು ಆರಂಭಿಸಿತು. 1960ರ ದಶಕದ ಅಂತ್ಯದ ಹೊತ್ತಿಗೆ, $48 ಶತಕೋಟಿ ಮೊತ್ತದ ಆಸ್ತಿಯೊಂದಿಗೆ ಸರಿ ಸುಮಾರು 270 ನಿಧಿಸಂಗ್ರಹ ಸಂಸ್ಥೆಗಳಿದ್ದವು. ಪ್ರಥಮ ಚಿಲ್ಲರೆ ಸೂಚಿತ ನಿಧಿಸಂಗ್ರಹ ಸಂಸ್ಥೆಯಾದ, ಫಸ್ಟ್ ರೀಟೇಲ್ ಇಂಡೆಕ್ಸ್ ಟ್ರಸ್ಟ್, ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ[೨] ಕ್ಕೆ ಸಲ್ಲಿಸಿದ ತನ್ನ 1951ರ ಹಿರಿಯ ಮಹಾಪ್ರಬಂಧದಲ್ಲಿ ಉದ್ಯಮಕ್ಕೆ ಅನೇಕ ಪ್ರಮುಖ ಸಿದ್ಧಾಂತಗಳನ್ನು ಕಲ್ಪನೆಯನ್ನು ಕೊಟ್ಟ ಜಾನ್ ಬೋಗಲ್‌ರ ನೇತೃತ್ವದಲ್ಲಿ 1976ರಲ್ಲಿ ಸ್ಥಾಪಿತವಾಯಿತು. ಈ ಸಂಸ್ಥೆಯನ್ನು ಈಗ ವ್ಯಾನ್‌ಗಾರ್ಡ್ 500 ಸೂಚಿತ ನಿಧಿ ಎಂದು ಕರೆಯಲಾಗುತ್ತಿದೆಯಲ್ಲದೇ ವಿಶ್ವದ ಅತಿದೊಡ್ಡ ಹಾಗೂ $100 ಶತಕೋಟಿಗೂ ಮೀರಿದ ಸೊತ್ತುಗಳನ್ನು ಹೊಂದಿರುವ ಮ್ಯೂಚುಯಲ್ ಫಂಡ್ ಸಂಸ್ಥೆಯಾಗಿದೆ.
ಮ್ಯೂಚುಯಲ್-ಫಂಡ್ಸಂಗ್ರಹದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದುದು 1975ರ ಇಂಟರ್ನಲ್ ರೆವಿನ್ಯೂ ಕೋಡ್(IRAಗಳು)ನಲ್ಲಿನ ವ್ಯಕ್ತಿಗತ ನಿವೃತ್ತಿ ಖಾತೆಗಳನ್ನು ತೆರೆಯಲು ಅನುಮತಿಸಿದ ಬದಲಾವಣೆ. ಸಾಂಸ್ಥಿಕ ನಿವೃತ್ತಿವೇತನ ಯೋಜನೆಗಳಿಗೆ ಮುಂಚೆಯೇ ನೊಂದಾಯಿಸಿಕೊಂಡಿದ್ದವರೂ ಸಹಾ ಸೀಮಿತ ಮೊತ್ತವನ್ನು ವಂತಿಗೆಯಾಗಿ (ಒಮ್ಮೆಗೆ, ಪ್ರತಿ ವರ್ಷಕ್ಕೆ $2,000ದವರೆಗೆ) ನೀಡಬಹುದಿತ್ತು. ಮ್ಯೂಚುಯಲ್ ಫಂಡ್ ಸಂಸ್ಥೆಗಳು ಉದ್ಯೋಗದಾತ-ಬೆಂಬಲಿತ "ನಿಗದಿತ-ವಂತಿಗೆ" ನಿವೃತ್ತಿ ಯೋಜನೆಗಳಾದ (401(ಕೆ)ಗಳು) ಮತ್ತು 403(ಬಿ)ಗಳು ರಾತ್ IRAಗಳೂ ಸೇರಿದಂತೆ IRAಗಳಲ್ಲಿ ಈಗ ಜನಪ್ರಿಯವಾಗಿವೆ.
ಅಕ್ಟೋಬರ್ 2007ರ ಪ್ರಕಾರ, ಒಟ್ಟಾರೆ ಸಾಂಘಿಕವಾಗಿ $12.356 ಲಕ್ಷ ಕೋಟಿ[೩] ಗಳಷ್ಟು ಮೊತ್ತದ ಆಸ್ತಿ ಹೊಂದಿರುವ ಅಮೇರಿಕಾ ಸಂಯುಕ್ತ ಸಂಸ್ಥಾನನ ಹೂಡಿಕೆ ಕಂಪೆನಿಗಳ ರಾಷ್ಟ್ರೀಯ ವ್ಯಾಪಾರ ಸಂಘಟನೆಯಾದ ಇನ್‌ವೆಸ್ಟ್‌ಮೆಂಟ್ ಕಂಪೆನಿ ಇನ್‌ಸ್ಟಿಟ್ಯೂಟ್(ICI)ನ ಸದಸ್ಯತ್ವ ಹೊಂದಿರುವ 8,015 ಮ್ಯೂಚುಯಲ್ ಫಂಡ್ ಸಂಸ್ಥೆಗಳಿವೆ. 2008ರ ಮೊದಲ ಭಾಗದಲ್ಲಿ, ವಿಶ್ವದಾದ್ಯಂತ ಎಲ್ಲಾ ಮ್ಯೂಚುಯಲ್ ಫಂಡ್ ಸಂಗ್ರಹಗಳ ಮೌಲ್ಯದ ಒಟ್ಟು ಮೊತ್ತ $26 ಲಕ್ಷ ಕೋಟಿಗಳಿಗೂ[೪] ಮೀರಿತ್ತು.
ಬಳಕೆ
ಬದಲಾಯಿಸಿ1940ರ ಹೂಡಿಕೆ ಕಂಪೆನಿ ಕಾಯ್ದೆಯ ನಂತರ, ಮ್ಯೂಚುಯಲ್ ಫಂಡ್ ಸಂಗ್ರಹವು ಅಮೇರಿಕಾ ಸಂಯುಕ್ತ ಸಂಸ್ಥಾನ[೫]ನಲ್ಲಿ ಲಭ್ಯವಿರುವ ಹೂಡಿಕೆ ಕಂಪೆನಿಗಳ ಮೂರು ಮೂಲ ವಿಧಗಳಲ್ಲಿ ಒಂದಾಗಿದೆ.
ಮ್ಯೂಚುಯಲ್ ಫಂಡ್ ಸಂಗ್ರಹವು ಅನೇಕ ವಿಧವಾದ ಭದ್ರತಾಠೇವಣಿ ಸಂಸ್ಥೆಗಳಲ್ಲಿ ಹಣ ಹೂಡಬಹುದಾಗಿದೆ. ಅವುಗಳಲ್ಲಿ ಅತಿ ಸಾಮಾನ್ಯವಾದವೆಂದರೆ ನಗದು ಪತ್ರಗಳು, ಸ್ಟಾಕ್, ಮತ್ತು ಬಾಂಡ್‌ಗಳು, ಆದರೆ ಅವುಗಳಲ್ಲೇ ನೂರಾರು ಉಪ-ವಿಭಾಗಗಳಿವೆ. ಸ್ಟಾಕ್ ನಿಧಿಸಂಗ್ರಹಗಳು ಉದಾಹರಣೆಗೆ, ತಂತ್ರಜ್ಞಾನ ಅಥವಾ ಯುಟಿಲಿಟಿಗಳಂತಹಾ ನಿರ್ದಿಷ್ಟ ಉದ್ಯಮದ ಷೇರುಗಳಲ್ಲಿ ಮುಖ್ಯವಾಗಿ ಹಣ ಹೂಡಬಹುದಾಗಿರುತ್ತದೆ. ಇವುಗಳನ್ನು ವಲಯ ನಿಧಿಸಂಗ್ರಹಗಳೆಂದು ಕರೆಯಲಾಗುತ್ತದೆ. ಬಾಂಡ್ ನಿಧಿಸಂಗ್ರಹಗಳು ಹಾನಿಯ ಸಂಭವತೆಯ ಅನುಸಾರ (e.g., ಹೆಚ್ಚು-ಉತ್ಪತ್ತಿಯ ಜಂಕ್ ಬಾಂಡ್‌ಗಳು ಅಥವಾ ಹೂಡಿಕೆ-ದರ್ಜೆ ಕಾರ್ಪೊರೇಟ್ ಬಾಂಡ್‌ಗಳು), ನೀಡಿಕೆದಾರರ ಅನುಸಾರ (e.g., ಸರ್ಕಾರೀ ಸಂಸ್ಥೆಗಳು, ಕಾರ್ಪೊರೇಷನ್‌ಗಳು, ಅಥವಾ ಪುರಸಭೆಗಳು), ಅಥವಾ ಬಾಂಡ್‌ಗಳು ವಾಯಿದೆಯ ಪ್ರಕಾರ (ಅಲ್ಪ- ಅಥವಾ ದೀರ್ಘಾವಧಿ) ವ್ಯತ್ಯಾಸಗೊಳ್ಳುತ್ತವೆ. ಸ್ಟಾಕ್ ಮತ್ತು ಬಾಂಡ್ ನಿಧಿಸಂಗ್ರಹಗಳೆರಡೂ ಪ್ರಾಥಮಿಕವಾಗಿ U.S. ಭದ್ರತಾ ಠೇವಣಿ ಸಂಸ್ಥೆಗಳಲ್ಲಿ (ದೇಶೀಯ ನಿಧಿಸಂಗ್ರಹಗಳು), U.S. ಮತ್ತು ವಿದೇಶೀ ಭದ್ರತಾ ಠೇವಣಿ ಸಂಸ್ಥೆಗಳಲ್ಲಿ (ಜಾಗತಿಕ ನಿಧಿಸಂಗ್ರಹಗಳು), ಅಥವಾ ಪ್ರಾಥಮಿಕವಾಗಿ ವಿದೇಶೀ ಭದ್ರತಾ ಠೇವಣಿ ಸಂಸ್ಥೆಗಳಲ್ಲಿ (ಅಂತರರಾಷ್ಟ್ರೀಯ ನಿಧಿಸಂಗ್ರಹಗಳು) ಹಣ ಹೂಡಬಹುದು.
ಬಹಳಷ್ಟು ಮ್ಯೂಚುಯಲ್ ಫಂಡ್ ಸಂಗ್ರಹಗಳ ಹೂಡಿಕೆ ಬಂಡವಾಳಪಟ್ಟಿಗಳನ್ನು ಸತತವಾಗಿ ಹೂಡಿಕೆದಾರರಿಂದಾಗಬಹುದಾದ ನಿಧಿಸಂಗ್ರಹದ ಹಣಕಾಸಿನ ಒಳ ಹಾಗೂ ಹೊರ ಹರಿವನ್ನು, ಹಾಗೂ ಭವಿಷ್ಯದ ನಿಧಿಸಂಗ್ರಹಕ್ಕೆ ಸೂಕ್ತವಾಗಬಹುದಾದ ಹೂಡಿಕೆಗಳ ಬಗ್ಗೆ ಅಂದಾಜಿಸಿ ನಿಧಿಸಂಗ್ರಹದ ಸೂಚಿತ ಹೂಡಿಕೆ ಉದ್ದೇಶಕ್ಕೆ ಸಾಕಷ್ಟು ಸಮೀಪದ ಹೂಡಿಕೆಗಳನ್ನು ಸೂಚಿಸಬಲ್ಲ ವೃತ್ತಿಪರ ನಿರ್ವಾಹಕರ ಮೇಲ್ವಿಚಾರಣೆಯಲ್ಲಿ ಸಮೀಕರಿಸಲಾಗುತ್ತಿರುತ್ತದೆ. ನಿಧಿಸಂಸ್ಥೆ ನಿರ್ವಾಹಕರನ್ನು ನೇಮಿಸುವ ಅಥವಾ ವಜಾಮಾಡಬಲ್ಲ ಅಧಿಕಾರವಿರುವ ಸಲಹಾ ಸಮಿತಿಯ ಮೇಲ್ವಿಚಾರಣೆಯಲ್ಲಿ ಮ್ಯೂಚುಯಲ್ ಫಂಡ್ ಸಂಸ್ಥೆ ನಡೆಯುತ್ತದೆ.
ಮ್ಯೂಚುಯಲ್ ಫಂಡ್ ಸಂಗ್ರಹಗಳು ವಿಶೇಷ ನಿಯಂತ್ರಿತ, ಕರಣಿಕ/ಅಕೌಂಟಿಂಗ್ ಮತ್ತು ತೆರಿಗೆ ನಿಯಮಗಳಿಗೆ ಒಳಪಟ್ಟಿರುತ್ತವೆ. U.S.ನಲ್ಲಿ, ಇತರೆ ವಿಧವಾದ ಉದ್ಯಮಗಳಂತಲ್ಲದೇ ಇವುಗಳು ತಮ್ಮ ಆದಾಯದ 90%ರಷ್ಟನ್ನು ಷೇರುದಾರರಿಗೆ ಹಂಚಿಕೆ ಮಾಡುತ್ತಿರುವಷ್ಟು ಕಾಲ ತೆರಿಗೆ ಕಟ್ಟಬೇಕಿಲ್ಲ, ಅಲ್ಲದೇ ಇಂಟರ್ನಲ್ ರೆವಿನ್ಯೂ ಕೋಡ್‌ನ ನಿಗದಿತ ಬಂಡವಾಳ ವಿತರಣಾ ಅಗತ್ಯಗಳನ್ನು ನಿಧಿಸಂಗ್ರಹವು ಪಾಲಿಸಬೇಕಿರುತ್ತದೆ. ಇಷ್ಟೇ ಅಲ್ಲದೇ ಅವರ ಆದಾಯವು ಷೇರುದಾರರಿಗೆ ತಲುಪುವುದರಿಂದ ಮೂಲಕ ಅದರ ವಿಧವೂ ಸಹಾ ಬಹಳಷ್ಟು ಮಟ್ಟಿಗೆ ಬದಲಾಗುವುದಿಲ್ಲ. ಮ್ಯೂಚುಯಲ್ ಫಂಡ್ಯಿಂದ ವಿತರಣೆಯಾದ ಸ್ಥಳೀಯ ಸಂಸ್ಥೆಗಳ ಬಾಂಡ್ ತೆರಿಗೆ-ಮುಕ್ತ ಆದಾಯಗಳು ಷೇರುದಾರರಿಗೆ ಸಹಾ ತೆರಿಗೆ-ಮುಕ್ತವಾಗಿರುತ್ತವೆ. ತೆರಿಗೆಸಹಿತ ವಿತರಣೆಗಳೆಂದರೆ ನಿಧಿಸಂಗ್ರಹವು ಆ ವಿತರಣೆಗಳನ್ನು ಸಂಪಾದಿಸಿದ ರೀತಿಯ ಮೇಲೆ ಅವಲಂಬಿತವಾಗಿ ಸಾಧಾರಣ ಆದಾಯ ಅಥವಾ ಬಂಡವಾಳ ಲಾಭಗಳು. ನಿಧಿ ಹೂಡಿಕೆದಾರರಿಗೆ ನಿವ್ವಳ ನಷ್ಟಗಳ ವಿತರಣೆ ಇಲ್ಲವೇ ದಾಟಿಸುವಿಕೆ ಇರುವುದಿಲ್ಲ.
ನಿವ್ವಳ ಆಸ್ತಿ ಮೌಲ್ಯ
ಬದಲಾಯಿಸಿನಿವ್ವಳ ಆಸ್ತಿ ಮೌಲ್ಯ , ಅಥವಾ NAVಯನ್ನು, ನಿಧಿಸಂಗ್ರಹದ ಹಿಡುವಳಿಯ ಪ್ರಸಕ್ತ ಮಾರುಕಟ್ಟೆ ಮೌಲ್ಯದಲ್ಲಿ, ನಿಧಿಸಂಗ್ರಹದ ಹೊಣೆಗಾರಿಕೆಯನ್ನು ಕಳೆದು ಸಾಧಾರಣವಾಗಿ ತಲಾ-ಷೇರು ಮೊತ್ತವಾಗಿ ಗಣಿಸಲ್ಪಡುತ್ತದೆ. ಬಹಳಷ್ಟು ನಿಧಿಸಂಸ್ಥೆಗಳಲ್ಲಿ, ನಿಗದಿತ ವಾಣಿಜ್ಯ ವಿನಿಮಯ ಕೇಂದ್ರದೊಂದಿಗಿನ ವ್ಯವಹಾರ ಕೊನೆಗೊಂಡ ನಂತರ NAVಯನ್ನು ದೈನಂದಿನವಾಗಿ ಲೆಕ್ಕಹಾಕಿದರೆ, ಇನ್ನು ಕೆಲವು ನಿಧಿಸಂಸ್ಥೆಗಳು ತಮ್ಮ NAVಯನ್ನು ದಿನಕ್ಕೆ ಅನೇಕ ಬಾರಿ ನವೀಕರಿಸುತ್ತವೆ. ಸಾರ್ವಜನಿಕ ಕೊಡುಗೆ ಬೆಲೆ, ಅಥವಾ POP ಎಂದರೆ, ಮಾರಾಟ ಶುಲ್ಕ ಹಾಗೂ NAVಗಳ ಮೊತ್ತ. ಮುಕ್ತ-ದ್ವಾರ ನಿಧಿಸಂಸ್ಥೆಗಳು ಷೇರುಗಳನ್ನು POP ಬೆಲೆಯಲ್ಲಿ ಮಾರುತ್ತವೆ ಹಾಗೂ NAV ಬೆಲೆಯಲ್ಲಿ ಪಡೆದುಕೊಳ್ಳುತ್ತವೆ, ಹಾಗಾಗಿ ಆರ್ಡರ್‌ಗಳನ್ನು NAVಯನ್ನು ನಿರ್ಣಯಿಸಿದ ನಂತರವೇ ಕಾರ್ಯಗತಗೊಳಿಸಲಾಗುತ್ತದೆ. ಸೀಮಿತ ನಿಧಿಸಂಸ್ಥೆಗಳು (ಹೂಡಿಕೆದಾರರಿಂದ ವ್ಯವಹರಿಸಲ್ಪಟ್ಟ ಷೇರುಗಳು) ತಮ್ಮ NAVಗಿಂತ ಹೆಚ್ಚಿನ ಅಥವಾ ಕಡಿಮೆ ಬೆಲೆಯಲ್ಲಿ ವ್ಯವಹರಿಸಬಹುದು; ಇದನ್ನು ಕ್ರಮವಾಗಿ ಪ್ರೀಮಿಯಂ ಅಥವಾ ಡಿಸ್ಕೌಂಟ್ ಎನ್ನಲಾಗುತ್ತದೆ. ನಿಧಿಸಂಸ್ಥೆಯನ್ನು ಅನೇಕ ದರ್ಜೆಗಳ ಷೇರುಗಳಾಗಿ ವಿಂಗಡಿಸಿದರೆ, ವಿವಿಧ ವರ್ಗಗಳ ಶುಲ್ಕಗಳ ವ್ಯತ್ಯಾಸಗಳು ಹಾಗೂ ತೆತ್ತ ವೆಚ್ಚವನ್ನು ಪ್ರತಿನಿಧಿಸುವಂತೆ ಪ್ರತಿ ವರ್ಗವು ಸಾಮಾನ್ಯವಾಗಿ ತನ್ನದೇ ಆದ NAVಯನ್ನು ಹೊಂದಿರುತ್ತದೆ.
ಕೆಲ ಮ್ಯೂಚುಯಲ್ ಫಂಡ್ ಸಂಸ್ಥೆಗಳು ನಿಯತವಾಗಿ ಯಾವುದೇ ವಿಧ್ಯುಕ್ತ ವಿನಿಮಯ ಕೇಂದ್ರಗಳಲ್ಲಿ ವ್ಯವಹರಿಸದ ಭದ್ರತಾಠೇವಣಿ ಸಂಸ್ಥೆಗಳನ್ನು ಹೊಂದಿರುತ್ತವೆ. ಇವುಗಳು ತೀರ ಸಣ್ಣ ಅಥವಾ ದಿವಾಳಿಯಾದ ಕಂಪೆನಿಗಳಲ್ಲಿನ ಷೇರುಗಳಿರಬಹುದು; ಇಲ್ಲವೇ ಉತ್ಪನ್ನವಾದ ಷೇರುಗಳಿರಬಹುದು; ಅಥವಾ ಅವು ನೊಂದಾಯಿಸಿಲ್ಲದ ವಾಣಿಜ್ಯ ಪತ್ರಗಳಲ್ಲಿನ (ಅಸಾರ್ವಜನಿಕ ಕಂಪೆನಿಯ ಸ್ಟಾಕ್‌ನಂತಹಾ) ಖಾಸಗೀ ಹೂಡಿಕೆಗಳಿರಬಹುದು. ಈ ಭದ್ರತಾಠೇವಣಿಗಳಿಗೆ ಸಾರ್ವಜನಿಕ ಮಾರುಕಟ್ಟೆ ಇಲ್ಲದ ಕಾರಣ NAVಯನ್ನು ನಿರ್ಣಯಿಸುವಾಗ ಇವುಗಳ ಮೌಲ್ಯವನ್ನು ಅಂದಾಜಿಸುವ ಜವಾಬ್ದಾರಿ ನಿಧಿಸಂಸ್ಥೆಯ ನಿರ್ವಾಹಕರಿಗೆ ಸೇರಿರುತ್ತದೆ. ನಿಧಿಸಂಸ್ಥೆಯ ವಿವರಣಾ ಪತ್ರದಲ್ಲಿ ನಿಧಿಸಂಸ್ಥೆಯ ಎಷ್ಟು ಆಸ್ತಿಯನ್ನು ಅಂತಹಾ ಭದ್ರತಾಸಂಸ್ಥೆಗಳಲ್ಲಿ ಹೂಡಬಹುದು ಎಂದು ಸೂಚಿಸಲಾಗಿರುತ್ತದೆ.
ಸರಾಸರಿ ವಾರ್ಷಿಕ ಹುಟ್ಟುವಳಿ
ಬದಲಾಯಿಸಿUS ಮ್ಯೂಚುಯಲ್ ಫಂಡ್ ಸಂಸ್ಥೆಗಳು ಪ್ರತಿ ನಿಧಿಸಂಸ್ಥೆಗೆ ಅನ್ವಯಿಸುವಂತೆ "ಸರಾಸರಿ ವಾರ್ಷಿಕ ಒಟ್ಟು ಹುಟ್ಟುವಳಿ"ಯಾಗಿ 1-ವರ್ಷ, 5-ವರ್ಷ ಮತ್ತು 10-ವರ್ಷಗಳ ಅವಧಿಗೆ ಸರಾಸರಿ ವಾರ್ಷಿಕ ತೀರುವಳಿಯ ಚಕ್ರಬಡ್ಡಿದರವನ್ನು ಪ್ರಕಟಿಸಲು SEC ಫಾರ್ಮ್ N-1Aಯನ್ನು ಬಳಸುತ್ತವೆ. ಈ ಕೆಳಕಂಡ ಸೂತ್ರವನ್ನು ಬಳಸಲಾಗುತ್ತದೆ:[೬]
- P(1+T)n = ERV
ಇದರಲ್ಲಿ:
- P = ಕಾಲ್ಪನಿಕ ಪ್ರಾಸ್ತಾವಿಕ $1,000ರ ಪಾವತಿ.
- T = ಸರಾಸರಿ ವಾರ್ಷಿಕ ಒಟ್ಟು ಹುಟ್ಟುವಳಿ.
- n = ವರ್ಷಗಳಲ್ಲಿ ಕಾಲಾವಧಿ/ವರ್ಷಗಳ ಸಂಖ್ಯೆ.
ERV = 1-, 5-, ಅಥವಾ 10-ವರ್ಷಗಳ ಅವಧಿಯ ಮೊದಲಿನಲ್ಲಿ ಮಾಡಿದ ಕಾಲ್ಪನಿಕ ಪ್ರಾಸ್ತಾವಿಕ $1,000ರ ಪಾವತಿ ಕೊನೆಗೊಳ್ಳುವ ಮರುಕಳಿಕೆಯ ಮೌಲ್ಯ (ಅಥವಾ ಅದರ ಆಂಶಿಕ ಭಾಗ).
ವಹಿವಾಟು ಮೌಲ್ಯ
ಬದಲಾಯಿಸಿನಿಧಿಸಂಸ್ಥೆಯ ಭದ್ರತಾ ವ್ಯವಹಾರಗಳ ವಾರ್ಷಿಕವಾಗಿ ಗಣನೆಯಾಗುವ ನಿವ್ವಳ ಆಸ್ತಿ ಮೌಲ್ಯದ ಶೇಕಡಾ ಲೆಕ್ಕದಲ್ಲಿ ಮಾಡಲಾಗುವ ಗಣನೆಯೇ ವಹಿವಾಟು ಮೌಲ್ಯ .
ಈ ಮೌಲ್ಯವನ್ನು ಸಾಮಾನ್ಯವಾಗಿ ಎಲ್ಲಾ ವ್ಯವಹಾರಗಳ (ಮಾರುವಿಕೆ,ಕೊಳ್ಳುವಿಕೆ) ಮೌಲ್ಯವನ್ನು 2ರಿಂದ ಭಾಗಿಸಿ, ನಂತರ ನಿಧಿಸಂಸ್ಥೆಯ ಒಟ್ಟಾರೆ ಹಿಡುವಳಿಯಿಂದ ಭಾಗಿಸಿ ಪಡೆಯಲಾಗುತ್ತದೆ; i.e., ನಿಧಿಸಂಸ್ಥೆಯು ಒಂದು ಠೇವಣಿಯನ್ನು ಮಾರಿ ಮತ್ತೊಂದನ್ನು ಕೊಳ್ಳುವುದನ್ನು ಒಂದು “ವಹಿವಾಟು” ಎಂದು ಪರಿಗಣಿಸುತ್ತದೆ. ಆದ್ದರಿಂದ ವಹಿವಾಟು ಹಿಡುವಳಿಗಳ ಬದಲಿಕೆಯನ್ನು ಅಳೆಯುತ್ತದೆ.
ಕೆನಡಾದಲ್ಲಿ, NI 81-106ರ ಅಡಿಯಲ್ಲಿ (ಹೂಡಿಕೆ ನಿಧಿಸಂಸ್ಥೆಗಳಿಗೆ ಅಗತ್ಯವಾದ ಪ್ರಕಟಣೆ) ವಹಿವಾಟು ಅನುಪಾತವನ್ನು ಖರೀದಿ ಅಥವಾ ಮಾರಾಟಗಳಲ್ಲಿ ಕಡಿಮೆ ಮೊತ್ತವಾದದ್ದನ್ನು (ನಗದೂ ಸೇರಿದಂತೆ) ಬಂಡವಾಳ ಪಟ್ಟಿಯ ಸರಾಸರಿ ಗಾತ್ರದಿಂದ ಭಾಗಿಸಿ ಪಡೆಯಲಾಗುತ್ತದೆ.
ವೆಚ್ಚಗಳು ಮತ್ತು TERಗಳು
ಬದಲಾಯಿಸಿಮ್ಯೂಚುಯಲ್ ಫಂಡ್ ಸಂಸ್ಥೆಗಳು ಇತರೆ ಕಂಪೆನಿಗಳ ಹಾಗೆಯೇ ತಮ್ಮ ವೆಚ್ಚವನ್ನು ಭರಿಸುತ್ತವೆ. ಮ್ಯೂಚುಯಲ್ ಫಂಡ್ ಸಂಸ್ಥೆಯ ಶುಲ್ಕ ವ್ಯವಸ್ಥೆಯನ್ನು ಎರಡು ಅಥವಾ ಮೂರು ಪ್ರಮುಖ ಅಂಶಗಳಾಗಿ ವಿಭಜಿಸಬಹುದು: ನಿರ್ವಹಣಾ ಶುಲ್ಕ, ನಿರ್ವಹಣೆಗೆ ಸಂಬಂಧಿಸಿಲ್ಲದ ಇತರೆ ವೆಚ್ಚಗಳು, ಮತ್ತು 12ಬಿ-1/12ಬಿ-1 ಅಲ್ಲದ ಶುಲ್ಕಗಳು. ಎಲ್ಲಾ ವೆಚ್ಚಗಳನ್ನು ನಿಧಿಸಂಸ್ಥೆಯ ಸರಾಸರಿ ದೈನಿಕ ನಿವ್ವಳ ಆಸ್ತಿಯ ಶೇಕಡಾ ಅಂಶವನ್ನಾಗಿ ಗಣಿಸಲಾಗುತ್ತದೆ.
ನಿರ್ವಹಣಾ ಶುಲ್ಕ
ಬದಲಾಯಿಸಿನಿಧಿಸಂಸ್ಥೆಗಳ ನಿರ್ವಹಣಾ ಶುಲ್ಕವು ಸಾಧಾರಣವಾಗಿ ಕರಾರಿನ ಹೂಡಿಕೆ ಸಲಹಾ ಸಮಿತಿ ಪಡೆಯುವ ನಿಧಿಸಂಸ್ಥೆಯ ಹೂಡಿಕೆಗಳ ನಿರ್ವಹಣೆಯ ಶುಲ್ಕಕ್ಕೆ ಸಮಾನವಾಗಿರುತ್ತದೆ. ಆದಾಗ್ಯೂ, ವಿವಿಧ ನಿಧಿಸಂಸ್ಥೆಗಳ ನಿರ್ವಹಣಾ ವೆಚ್ಚವನ್ನು ಹೋಲಿಕೆ ಮಾಡುವಾಗ ಅನೇಕ ನಿಧಿಸಂಸ್ಥೆ ಕಂಪೆನಿಗಳು ಸಲಹಾಸಮಿತಿಯ ಶುಲ್ಕದ ಭಾಗವಾಗಿ ಆಡಳಿತಾತ್ಮಕ ಶುಲ್ಕವನ್ನು ಸೇರಿಸಿಕೊಳ್ಳುತ್ತವೆ, ಇದೇಕೆಂದರೆ ನಿರ್ವಹಣಾ ಶುಲ್ಕವನ್ನು ಕರಾರಿನ ಸಲಹಾ ಶುಲ್ಕ ಹಾಗೂ ಕರಾರಿನ ಆಡಳಿತಾತ್ಮಕ ಶುಲ್ಕಗಳ ಮೊತ್ತವೆಂದು ಗಣಿಸುವುದು ಹೆಚ್ಚು ಅನುಕೂಲಕರ. ವಿವಿಧ ನಿಧಿಸಂಸ್ಥೆಗಳ ನಿರ್ವಹಣಾ ಶುಲ್ಕಾಂಶಗಳ ಹೋಲಿಕೆ ಮಾಡುವ ಸಮಯದಲ್ಲಿ “ಸಮಾನತೆಯ ಕಾಯ್ದುಕೊಳ್ಳುವಿಕೆ”ಗೆ ಅದು ಸಹಾಯ ಮಾಡುತ್ತದೆ.
ಕರಾರಿನ ಸಲಹಾ ಶುಲ್ಕವನ್ನು “ಸಗಟು” ಶುಲ್ಕದ ರಚನೆಯನ್ನು ನಿಧಿಸಂಸ್ಥೆಗೆ ಏಕಶುಲ್ಕ i.e., ನಿಧಿಸಂಸ್ಥೆಯ ಆಸ್ತಿಯ ಗಾತ್ರವನ್ನವಲಂಬಿಸದೇ ನಿಗದಿಪಡಿಸಿದ ಶುಲ್ಕ ಎಂದು ಹೇಳಬಹುದು. ಆದಾಗ್ಯೂ, ಅನೇಕ ನಿಧಿಸಂಸ್ಥೆಗಳು ತಮ್ಮ ಕರಾರಿನ ಶುಲ್ಕ ವ್ಯವಸ್ಥೆಯಲ್ಲಿ ನಿಧಿಸಂಸ್ಥೆಯ ಆಸ್ತಿ ಹೆಚ್ಚಾದಂತೆ ಸಲಹಾ ಸಮಿತಿಯ ಶುಲ್ಕವು ಕಡಿಮೆಯಾಗುವಂತಹಾ ಕ್ರಮಭಂಗ ಸೌಲಭ್ಯವನ್ನು ಹೊಂದಿವೆ. ಸಲಹಾ ಸಮಿತಿಯ ಶುಲ್ಕವು ಸ್ಪರ್ಧಾತ್ಮಕವಾಗಿರಬಲ್ಲ ವ್ಯವಸ್ಥೆಯೆಂದರೆ, ಏಕ ನಿಧಿಸಂಸ್ಥೆಯ ಬದಲಿಗೆ, ನಿಧಿಸಂಸ್ಥೆಗಳ ಸಂಕೀರ್ಣ ಇಲ್ಲವೇ ಸಮೂಹಗಳ ಎಲ್ಲಾ ಆಸ್ತಿಯ ಒಟ್ಟು ಮೌಲ್ಯದ ಮೇಲೆ ಅವಲಂಬಿತವಾಗಿ ಶುಲ್ಕವನ್ನು ನಿಗದಿಪಡಿಸುವುದು.
ಆಡಳಿತಾತ್ಮಕವಲ್ಲದ ವೆಚ್ಚಗಳು
ಬದಲಾಯಿಸಿಆಡಳಿತಾತ್ಮಕ ಶುಲ್ಕವಲ್ಲದೇ, ಬಹಳಷ್ಟು ಮಟ್ಟಿಗೆ ನಿಧಿಸಂಸ್ಥೆಗಳು ಪಾವತಿಸಲೇಬೇಕಾದ ಆಡಳಿತಾತ್ಮಕವಲ್ಲದ ವೆಚ್ಚಗಳಿರುತ್ತವೆ. ಕೆಲ ಗಮನಾರ್ಹ (ಮೊತ್ತಕ್ಕೆ ಸಂಬಂಧಿಸಿದಂತೆ) ಆಡಳಿತಾತ್ಮಕವಲ್ಲದ ವೆಚ್ಚಗಳೆಂದರೆ: ವರ್ಗಾವಣೆ ದಳ್ಳಾಳಿ ವೆಚ್ಚಗಳು (ಈತ ಸಾಮಾನ್ಯವಾಗಿ ನಿಧಿಸಂಸ್ಥೆಗಳ ಷೇರುಗಳ ಕೊಂಡುಕೊಳ್ಳುವಿಕೆ/ಮಾರಾಟದ ಸಂದರ್ಭದಲ್ಲಿ ದೂರವಾಣಿ ಕರೆಯ/ವ್ಯವಹಾರದ ಇನ್ನೊಂದು ಬದಿಯಲ್ಲಿರುವ ವ್ಯಕ್ತಿ), ಪಾಲಕಾ ವೆಚ್ಚ (ನಿಧಿಗಳ ಆಸ್ತಿಗಳನ್ನು ಒಂದು ಬ್ಯಾಂಕ್‌ನ ವಶದಲ್ಲಿ ಇಟ್ಟಿರಲಾಗುತ್ತದೆ, ಇದಕ್ಕೆಂದು ಶುಲ್ಕ ಸಹಾ ವಿಧಿಸಲಾಗುತ್ತದೆ), ನ್ಯಾಯಿಕ/ಲೆಕ್ಕಪರಿಶೋಧಕ ವೆಚ್ಚಗಳು, ನಿಧಿಸಂಸ್ಥೆ ಕರಣಿಕ ವೆಚ್ಚಗಳು, ನೋಂದಣಿ ವೆಚ್ಚ (ನಿಧಿಸಂಸ್ಥೆಯು ನೊಂದಣಿ ದಾಖಲೆಗಳನ್ನು ನೀಡಿದಾಗ SEC ಅದಕ್ಕೆ ನೊಂದಣಿ ವೆಚ್ಚವನ್ನು ವಿಧಿಸುತ್ತದೆ), ನಿರ್ದೇಶಕರ/ಧರ್ಮದರ್ಶಿಗಳ ಮಂಡಳಿ ವೆಚ್ಚ (ನಿಧಿಸಂಸ್ಥೆಯ ಮೇಲ್ವಿಚಾರಣಾ ಮಂಡಳಿಯ ಸದಸ್ಯರಿಗೆ ಅವರು ಸಭೆಗಳಲ್ಲಿ ವ್ಯಯಿಸಿದ/ಭಾಗವಹಿಸಿದ ಸಮಯಕ್ಕೆ ಶುಲ್ಕವನ್ನು ನೀಡಲಾಗುತ್ತದೆ), ಮತ್ತು ಮುದ್ರಣ ಮತ್ತು ಅಂಚೆ ವೆಚ್ಚಗಳು (ಷೇರುದಾರರ ವರದಿಗಳನ್ನು ಮುದ್ರಿಸಿ ಕಳಿಸಲು ತಗಲುವ ವೆಚ್ಚಗಳು).
12ಬಿ-1/12ಬಿ-1 ಅಲ್ಲದ ಸೇವಾ ಶುಲ್ಕಗಳು
ಬದಲಾಯಿಸಿಅಮೇರಿಕಾ ಸಂಯುಕ್ತ ಸಂಸ್ಥಾನನಲ್ಲಿ, 12ಬಿ-1 ಸೇವಾ ಶುಲ್ಕ/ಷೇರುದಾರರ ಸೇವಾಶುಲ್ಕಗಳೆಂದರೆ ನಿಧಿಸಂಸ್ಥೆಯೊಂದು ತನ್ನ ಪ್ರಚಾರ ವೆಚ್ಚಗಳನ್ನು ಕ್ರೋಢೀಕರಿಸಲು ವಿಧಿಸುವ ಕರಾರಿನ ಶುಲ್ಕಗಳು. 12ಬಿ-1 ಅಲ್ಲದ ಸೇವಾ ಶುಲ್ಕಗಳೆಂದರೆ SEC ನಿಯಮ 12ಬಿ-1ರ ಅಡಿಯಲ್ಲಿ ಬರದ ಪ್ರಚಾರ/ಷೇರುದಾರರ ಸೇವಾಶುಲ್ಕಗಳು. ನಿಧಿಸಂಸ್ಥೆಯೊಂದು ಪೂರ್ಣ ಕರಾರಿನ 12ಬಿ-1 ಶುಲ್ಕವನ್ನು ವಿಧಿಸಬೇಕಿಲ್ಲವಾದರೂ, ಅವು ಸಾಮಾನ್ಯವಾಗಿ ಹಾಗೆ ಮಾಡುತ್ತವೆ. ಫ್ರಂಟ್-ಎಂಡ್ ಲೋಡ್ ಇಲ್ಲವೇ ನೋ-ಲೋಡ್ ನಿಧಿಸಂಸ್ಥೆಗಳಲ್ಲಿ ಹೂಡಬೇಕಾದರೆ, ನಿಧಿಸಂಸ್ಥೆಗಳಿಗೆ 12ಬಿ-1 ಶುಲ್ಕಗಳಾಗಿ ಸಾಮಾನ್ಯವಾಗಿ .250% (ಅಥವಾ 25 ಬೇಸಿಸ್ ಪಾಯಿಂಟ್‌ಗಳು)ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಬ್ಯಾಕ್-ಎಂಡ್ ಮತ್ತು ಲೆವೆಲ್-ಲೋಡ್ ಷೇರುವರ್ಗಗಳಿಗೆ 12ಬಿ-1 ಶುಲ್ಕಗಳು ಸಾಮಾನ್ಯವಾಗಿ 50ರಿಂದ 75 ಬೇಸಿಸ್ ಪಾಯಿಂಟ್‌ಗಳಿದ್ದರೂ ಕೆಲವೊಮ್ಮೆ 100 ಬೇಸಿಸ್ ಪಾಯಿಂಟ್‌ಗಳನ್ನೂ ಸಹಾ ಮುಟ್ಟಬಹುದು. ನಿಧಿಸಂಸ್ಥೆಗಳು ಸಾಮಾನ್ಯವಾಗಿ "ನೋ-ಲೋಡ್ " ನಿಧಿಸಂಸ್ಥೆಗಳೆಂದು ತಮ್ಮನ್ನು ಪ್ರಚಾರಪಡಿಸಿಕೊಂಡರೂ ಸಹಾ, ಬೇರೆ ರೀತಿಯಲ್ಲಿ ವಿತರಣಾ ಶುಲ್ಕವನ್ನು ವಿಧಿಸುವುದಿಲ್ಲವೆಂದು ಅರ್ಥವಲ್ಲ. ಆನ್‌ಲೈನ್ ದಳ್ಳಾಳಿ ಜಾಲತಾಣದಲ್ಲಿ ಲಭ್ಯವಿರುವ ನಿಧಿಸಂಸ್ಥೆಯೊಂದು ಅಲ್ಲಿನ “ಪ್ರಚಾರ ಸ್ಥಳ”ಕ್ಕೆಂದು 12ಬಿ-1 ಶುಲ್ಕದ ಮೂಲಕ ನೇರವಾಗಿ ಪಾವತಿಸದೇ ಹೋದರೂ ಬೇರೆ ರೀತಿಯಲ್ಲಿ ಪಾವತಿಸಬೇಕಾಗುತ್ತದೆ ಎಂಬುದು ನಿರೀಕ್ಷಿತ ವಿಚಾರ.
ಹೂಡಿಕೆದಾರ ಶುಲ್ಕಗಳು ಮತ್ತು ವೆಚ್ಚಗಳು
ಬದಲಾಯಿಸಿಹೂಡಿಕೆದಾರರು ಭರಿಸಬೇಕಾಗುವ ಶುಲ್ಕ ಮತ್ತು ವೆಚ್ಚಗಳು ಅವರು ತಮ್ಮ ದಳ್ಳಾಳಿಯೊಂದಿಗೆ ಮಾಡಿಕೊಂಡ ವ್ಯವಸ್ಥೆಯ ಮೇಲೆ ವ್ಯತ್ಯಾಸವಾಗುತ್ತವೆ. ನಿಧಿಸಂಸ್ಥೆಯ ಕಾರ್ಯಾಚರಣೆ ವಿವರಗಳಲ್ಲಿ ನಮೂದಾಗಿರುವುದಿಲ್ಲವಾದುದರಿಂದ ಮಾರಾಟ ಲೋಡ್‌ಗಳ(ಅಥವಾ ಸಂಭವನೀಯ ವಿಳಂಬಿತ ಮಾರಾಟ ಲೋಡ್‌ಗಳು (CDSL))ನ್ನು ನಿಧಿಸಂಸ್ಥೆಯ ಒಟ್ಟು ವೆಚ್ಚದ ಅನುಪಾತಕ್ಕೆ (TER) ಸೇರಿಸಿಕೊಳ್ಳಲಾಗುವುದಿಲ್ಲ. ಇದರೊಂದಿಗೆ, ನಿಧಿಸಂಸ್ಥೆಯು ಅಗತ್ಯವಾದ ನಗದೀಕರಣವನ್ನು ಪಡೆಯಲು ನಿಧಿಗೆ ನಷ್ಟದ ವ್ಯವಹಾರಗಳನ್ನು ಮಾಡಬೇಕಾದ ಅನಿವಾರ್ಯತೆಯನ್ನು ತಪ್ಪಿಸಲು ಹೂಡಿಕೆದಾರರು ಒಳಕ್ಕೆ ಹಾಗೂ ಹೊರಕ್ಕೆ ಹಣವನ್ನು ಶೀಘ್ರವಾಗಿ ವಿನಿಮಯಿಸುವುದನ್ನು ತಡೆಯಲು ನಿಧಿಸಂಸ್ಥೆಯ ಪೂರ್ವಭಾವಿ ಮರುಕಳಿಕೆ ಶುಲ್ಕಗಳನ್ನು ವಿಧಿಸುತ್ತದೆ. ಉದಾಹರಣೆಗೆ ಫಿಡಿಲಿಟಿ ಡೈವರ್ಸಿಫೈಡ್ ಇಂಟರ್‌ನ್ಯಾಷನಲ್ ನಿಧಿಸಂಸ್ಥೆಯು (FDIVX) ನಿಧಿಸಂಸ್ಥೆಯಿಂದ 30 ದಿನಗಳೊಳಗೆ ಮರುಪಡೆದ ಹಣಕ್ಕೆ 1 ಪ್ರತಿಶತ ಶುಲ್ಕ ವಿಧಿಸುತ್ತದೆ.
ದಳ್ಳಾಳಿ ಹಣ/ಕಮಿಷನ್
ಬದಲಾಯಿಸಿಕಾರ್ಯಾಚರಣೆ ವಿವರಗಳಲ್ಲಿ ನಮೂದಾಗಿರದ ಹಾಗೂ ಹೂಡಿಕೆದಾರರಿಂದ ನಿಯಂತ್ರಣಕ್ಕೊಳಪಡಿಸಲಾಗದ ಮತ್ತೊಂದು ವೆಚ್ಚವೆಂದರೆ ದಳ್ಳಾಳಿ ಹಣ. ಸಾಮಾನ್ಯವಾಗಿ ನಿಧಿಸಂಸ್ಥೆಯ ವಾರ್ಷಿಕ ವರದಿಯಲ್ಲಿನ ಹೆಚ್ಚುವರಿ ಮಾಹಿತಿ ಬಿಡುಗಡೆಯ ಮೂರು ತಿಂಗಳ ನಂತರ ನಿಗದಿಪಡಿಸಿದ ದಳ್ಳಾಳಿ ಹಣವನ್ನು ನಿಧಿಯ ಬೆಲೆಯಲ್ಲಿ ಸೇರಿಸಲಾಗಿರುತ್ತದೆ. ದಳ್ಳಾಳಿ ಹಣ ನೇರವಾಗಿ ಬಂಡವಾಳ ಪಟ್ಟಿಯ ವಹಿವಾಟು ಮೌಲ್ಯದ ಮೇಲೆ ಆಧಾರಿತವಾಗಿರುತ್ತದೆ (ಬಂಡವಾಳ ಪಟ್ಟಿಯ ವಹಿವಾಟು ಮೌಲ್ಯವು ಒಂದು ವರ್ಷದಲ್ಲಿ ನಿಧಿಸಂಸ್ಥೆಯ ಆಸ್ತಿಗಳ ಮಾರಾಟ ಹಾಗೂ ಕೊಳ್ಳುವಿಕೆ ಎಷ್ಟು ಬಾರಿ ಆಯಿತು ಎಂಬುದನ್ನು ಸೂಚಿಸುತ್ತದೆ). ಸಾಮಾನ್ಯವಾಗಿ, ಹೆಚ್ಚಿನ ಮೊತ್ತದ ಬಂಡವಾಳ ಪಟ್ಟಿಯ ವಹಿವಾಟು ಮೌಲ್ಯವು ಹೆಚ್ಚಿನ ದಳ್ಳಾಳಿ ಹಣವನ್ನು ನೀಡುತ್ತದೆ. ಮ್ಯೂಚುಯಲ್ ಫಂಡ್ ಸಂಸ್ಥೆ ಕಂಪೆನಿಗಳ ಸಲಹಾಕಾರರಿಗೆ ನಿಧಿಸಂಸ್ಥೆಗೆ ವಿಧಿಸಲಾಗುವ ದಳ್ಳಾಳಿ ಹಣ ಮಿತಿಮೀರದಿರುವಂತೆ ಕಾರ್ಯನಿರ್ವಹಿಸುವಿಕೆಯು ಒಂದು ಪ್ರಮುಖ ಜವಾಬ್ದಾರಿ.
ಮ್ಯೂಚುಯಲ್ ಫಂಡ್ ಸಂಸ್ಥೆಗಳ ವಿಧಗಳು
ಬದಲಾಯಿಸಿಮುಕ್ತ-ದ್ವಾರ ನಿಧಿ
ಬದಲಾಯಿಸಿಮ್ಯೂಚುಯಲ್ ಫಂಡ್ ಸಂಸ್ಥೆ ಎಂಬ ಪದವನ್ನು SECಯಿಂದ ಮುಕ್ತ-ದ್ವಾರ ಹೂಡಿಕೆ ಕಂಪೆನಿಯೆಂದು ವರ್ಗೀಕರಿಸಲ್ಪಟ್ಟ ಸಂಸ್ಥೆಯನ್ನು ಸೂಚಿಸಲು ಬಳಸಲಾಗುತ್ತದೆ. ಪ್ರತಿ ದಿನದ ಕೊನೆಯಲ್ಲಿ, ಹೂಡಿಕೆದಾರರಿಗೆ ಹೊಸ ಷೇರುಗಳನ್ನು ವಿತರಿಸುವಿಕೆ, ನಿಧಿಸಂಸ್ಥೆಯಿಂದ ಹಣ ವಾಪಸ್ ಪಡೆಯುವ ಇಚ್ಚೆಯಿರುವ ಹೂಡಿಕೆದಾರರಿಂದ ಷೇರುಗಳನ್ನು ಕೊಂಡುಕೊಳ್ಳುವಿಕೆಯು ಮುಕ್ತ-ದ್ವಾರ ನಿಧಿಯ ಕಾರ್ಯವೈಖರಿಯನ್ನು ಸೂಚಿಸುತ್ತದೆ.
ಮ್ಯೂಚುಯಲ್ ಫಂಡ್ ಸಂಸ್ಥೆಯನ್ನು ವಾಣಿಜ್ಯ ಟ್ರಸ್ಟ್‌ಗಳಂತಹಾ ಕಾರ್ಪೊರೇಷನ್ ಇಲ್ಲವೇ ಟ್ರಸ್ಟ್‌ಗಳನ್ನಾಗಿ ರೂಪಿಸಬೇಕಿರುತ್ತದೆ. ಸರ್ಕಾರೇತರ ಭದ್ರತಾ ಠೇವಣಿ ಸಂಸ್ಥೆಗಳಲ್ಲಿ ಹಣ ಹೂಡುವಂತವಾ ಟ್ರಸ್ಟ್ ಇಲ್ಲವೇ ಕಾರ್ಪೋರೇಷನ್ ಅನ್ನು SEC ಹೂಡಿಕೆ ಕಂಪೆನಿಯೆಂದು ವರ್ಗೀಕರಿಸುತ್ತದೆ. ಸೂಚಿತ ಭದ್ರತಾ ಸಂಸ್ಥೆಗಳಿಗೆ ಅವಿಭಜಿತ ಬಡ್ಡಿಯನ್ನು ನೀಡದಿರುವ (ಘಟಕ ಹೂಡಿಕೆ ಟ್ರಸ್ಟ್‌ಗಳು ಅಥವಾ UITಗಳನ್ನು ಸೂಚಿಸುವ ವೈಶಿಷ್ಟ್ಯತೆ) ಹಾಗೂ ಮರುಪಡೆಯಲು ಸಾಧ್ಯವಿರುವ ಭದ್ರತಾಠೇವಣಿಗಳನ್ನು ವಿತರಿಸುತ್ತಿದ್ದರೆ ಅಂತಹಾ ಹೂಡಿಕೆ ಕಂಪೆನಿಯನ್ನು SEC ಮುಕ್ತ-ದ್ವಾರ ಹೂಡಿಕೆ ಕಂಪೆನಿಯೆಂದು ವರ್ಗೀಕರಿಸುತ್ತದೆ. UIT ಅಥವಾ ಮುಕ್ತ-ದ್ವಾರ ಹೂಡಿಕೆ ಕಂಪೆನಿಗಳಲ್ಲದ ನೊಂದಾಯಿತ ಹೂಡಿಕೆ ಕಂಪೆನಿಗಳನ್ನು ಪರಿಮಿತ ನಿಧಿಸಂಸ್ಥೆಗಳೆನ್ನಲಾಗುತ್ತದೆ. UITಗಳು ಹಾಗೂ ಪರಿಮಿತ ನಿಧಿಸಂಸ್ಥೆಗಳು ಮ್ಯೂಚುಯಲ್ ಫಂಡ್ ಸಂಸ್ಥೆ (USನ ಪದಬಳಕೆಯನುಸಾರ)ಗಳಲ್ಲ.
ವಿನಿಮಯ-ವ್ಯವಹಾರದ ನಿಧಿಸಂಸ್ಥೆ
ಬದಲಾಯಿಸಿಸಾಪೇಕ್ಷವಾಗಿ ಇತ್ತೀಚಿನ ವ್ಯವಸ್ಥೆಯಾದ, ವಿನಿಮಯ-ವ್ಯವಹಾರದ ನಿಧಿಸಂಸ್ಥೆ ಅಥವಾ ETF ಅನ್ನು, ಸಾಧಾರಣವಾಗಿ ಮುಕ್ತ-ದ್ವಾರ ಹೂಡಿಕೆ ಕಂಪೆನಿಯಂತೆಯೇ ರೂಪಿಸಲಾಗುತ್ತದೆ. ETFಗಳು ಮ್ಯೂಚುಯಲ್ ಫಂಡ್ ಸಂಸ್ಥೆ ಮತ್ತು ಪರಿಮಿತ ನಿಧಿಸಂಸ್ಥೆಗಳೆರಡರ ಗುಣಲಕ್ಷಣಗಳನ್ನೂ ಪಡೆದಿರುತ್ತವೆ. ETFಗಳು ಪರಿಮಿತ ನಿಧಿಸಂಸ್ಥೆಗಳಂತೆಯೇ, ಆದರೆ ETFಗಳ ನಿವ್ವಳ ಆಸ್ತಿ ದರದ ಸಾಮಾನ್ಯ ಅಂದಾಜಿನ ಬೆಲೆಗಳಲ್ಲಿ ಇಡೀ ದಿನ ಸ್ಟಾಕ್ ವಿನಿಮಯ ಕೇಂದ್ರದಲ್ಲಿ ವ್ಯವಹರಿಸುತ್ತವೆ. ಬಹಳಷ್ಟು ETFಗಳು ಸೂಚ್ಯಂಕ ನಿಧಿಸಂಸ್ಥೆಗಳಾಗಿದ್ದು, ಸ್ಟಾಕ್ ಮಾರುಕಟ್ಟೆ ಸೂಚ್ಯಂಕಗಳನ್ನು ಅನುಸರಿಸುತ್ತವೆ. ಸಾಂಸ್ಥಿಕ ಹೂಡಿಕೆದಾರರು ದೊಡ್ಡ ಮೊತ್ತದ(ಸಾಮಾನ್ಯವಾಗಿ 50,000ರ ಪ್ರಮಾಣದಲ್ಲಿ) ಷೇರುಗಳನ್ನು ಕೊಂಡುಕೊಳ್ಳುತ್ತವೆ ಇಲ್ಲವೇ ಮರುಪಡೆಯುತ್ತವೆ. ಬಹಳಷ್ಟು ಹೂಡಿಕೆದಾರರು ಷೇರುಗಳನ್ನು ಮಾರುಕಟ್ಟೆ ವ್ಯವಹಾರಗಳಲ್ಲಿ ದಳ್ಳಾಳಿಗಳ ಮೂಲಕ ಕೊಳ್ಳುವುದು ಹಾಗೂ ಮಾರುವುದನ್ನು ಮಾಡುತ್ತಾರೆ. ಸಾಂಸ್ಥಿಕ ಹೂಡಿಕೆದಾರರು ಸಾಮಾನ್ಯವಾಗಿ ವಸ್ತು ರೂಪದಲ್ಲಿ ಕೊಳ್ಳುವಿಕೆ ಹಾಗೂ ಮಾರುವಿಕೆ ಮಾಡುತ್ತಾರಾದ್ದರಿಂದ, ETFಗಳು (ಸತತವಾಗಿ ಭದ್ರತಾಠೇವಣಿಗಳನ್ನು ಮಾರುವಿಕೆ ಮತ್ತು ಕೊಳ್ಳುವಿಕೆಯನ್ನು ಬೆಂಬಲಿಸುತ್ತಾ ಹಾಗೂ ಅದಕ್ಕಾಗಿ ತಾನೂ ಸತತವಾಗಿ ಮಾರುತ್ತಾ ಹಾಗೂ ಕೊಳ್ಳುತ್ತಾ ನಗದೀಕರಿಸುವಿಕೆ ನಿರ್ವಹಿಸುವ) ಸಾಂಪ್ರದಾಯಿಕ ಮ್ಯೂಚುಯಲ್ ಫಂಡ್ ಸಂಸ್ಥೆಗಳಿಗಿಂತ ಹೆಚ್ಚು ಸಮರ್ಥವಾಗಿ ಕಾರ್ಯನಿರ್ವಹಿಸುವುದಲ್ಲದೇ ವೆಚ್ಚದ ಮಟ್ಟವನ್ನು ಕಡಿಮೆಗೊಳಿಸಿಕೊಳ್ಳುತ್ತವೆ.
ವಿನಿಮಯ-ವ್ಯವಹಾರದ ನಿಧಿಸಂಸ್ಥೆಗಳು ಸ್ಟಾಕ್ ಮಾರುಕಟ್ಟೆಯಲ್ಲಿ ಭದ್ರತಾಠೇವಣಿಗಳನ್ನು ಮಾರಬಲ್ಲ ಹಾಗೂ ಕೊಳ್ಳಬಲ್ಲ ಆದರೆ ನಿಯಂತ್ರಣ ವ್ಯವಸ್ಥೆಯ ಕಾರಣದಿಂದ ಸಾಂಪ್ರದಾಯಿಕ U.S. ಮ್ಯೂಚುಯಲ್ ಫಂಡ್ ಸಂಸ್ಥೆಗಳಲ್ಲಿ ಹೂಡಲಾಗದ ವಿದೇಶೀ ಹೂಡಿಕೆದಾರರಿಗೆ ಸಹಾ ಉಪಯುಕ್ತವಾಗಿವೆ.
ಸ್ಥಿರಬಡ್ಡಿ ನಿಧಿಸಂಸ್ಥೆಗಳು
ಬದಲಾಯಿಸಿಪ್ರಮುಖವಾಗಿ ಸ್ಟಾಕ್ ಹೂಡಿಕೆಗಳನ್ನು ಹೊಂದಿರುವ ಸ್ಥಿರಬಡ್ಡಿ ನಿಧಿಸಂಸ್ಥೆಗಳು, ಮ್ಯೂಚುಯಲ್ ಫಂಡ್ ಸಂಸ್ಥೆಗಳ ಅತಿ ಸಾಮಾನ್ಯ ವಿಧ. ಸ್ಥಿರಬಡ್ಡಿ ನಿಧಿಸಂಸ್ಥೆಗಳು ಅಮೇರಿಕಾ ಸಂಯುಕ್ತ ಸಂಸ್ಥಾನನಲ್ಲಿ ಮ್ಯೂಚುಯಲ್ ಫಂಡ್ ಸಂಸ್ಥೆಗಳಲ್ಲಿ ಹೂಡಿರುವ ಪೂರ್ತಿ ಮೊತ್ತದ 50 ಪ್ರತಿಶತವನ್ನು ಹೊಂದಿವೆ.[೭] ಸಾಮಾನ್ಯವಾಗಿ ಸ್ಥಿರಬಡ್ಡಿ ನಿಧಿಸಂಸ್ಥೆಗಳು ನಿಗದಿತ ತಂತ್ರದ ಹಾಗೂ ನಿಗದಿತ ರೀತಿಯ ನೀಡಿಕೆದಾರರ ಹೂಡಿಕೆಗಳಲ್ಲಿ ಮಾತ್ರ ಗಮನ ಕೇಂದ್ರೀಕರಿಸಿರುತ್ತವೆ.
ಬಂಡವಾಳೀಕರಣ
ಬದಲಾಯಿಸಿನಿಧಿ ನಿರ್ವಾಹಕರು ಹಾಗೂ ಇತರೆ ಹೂಡಿಕೆ ವೃತ್ತಿಪರರು ಮಧ್ಯ-ಮಿತಿ ಹಾಗೂ ಉನ್ನತ-ಮಿತಿಗಳಿಗೆ ತಮ್ಮದೇ ಆದ ವ್ಯಾಪ್ತಿಗಳನ್ನು ಹೊಂದಿರುತ್ತಾರೆ. ರಸ್ಸೆಲ್ ಸೂಚ್ಯಂಕದ ಪ್ರಕಾರ ಈ ಕೆಳಗಿನ ವ್ಯಾಪ್ತಿಗಳು ಬಳಕೆಯಲ್ಲಿವೆ:[೮]
- ರಸ್ಸೆಲ್ ಸೂಕ್ಷ್ಮಮಿತಿ ಸೂಚ್ಯಂಕ– ಸೂಕ್ಷ್ಮ-ಮಿತಿ ($54.8 – 539.5 ದಶಲಕ್ಷ)
- ರಸ್ಸೆಲ್ 2000 ಸೂಚ್ಯಂಕ– ಅಲ್ಪ-ಮಿತಿ ($182.6 ದಶಲಕ್ಷ – 1.8 ಶತಕೋಟಿ)
- ರಸ್ಸೆಲ್ ಮಧ್ಯಮಿತಿ ಸೂಚ್ಯಂಕ– ಮಧ್ಯ-ಮಿತಿ ($1.8 – 13.7 ಶತಕೋಟಿ)
- ರಸ್ಸೆಲ್ 1000 ಸೂಚ್ಯಂಕ– ಉನ್ನತ-ಮಿತಿ ($1.8 – 386.9 ಶತಕೋಟಿ)
ಅಭಿವೃದ್ಧಿ/ಬೆಳವಣಿಗೆ vs. ದರ
ಬದಲಾಯಿಸಿಉನ್ನತ ಬಂಡವಾಳ ಲಾಭಗಳ ಕ್ಷಮತೆ ಇರುವಂತಹಾ ಕಂಪೆನಿಗಳ ಸ್ಟಾಕ್‌ಗಳಲ್ಲಿ ಹೂಡುವಂತಹಾ ಅಭಿವೃದ್ಧಿ ನಿಧಿಸಂಸ್ಥೆ, ಹಾಗೂ ಕಡಿಮೆ ಬೆಲೆಗೆ ಸಿಗುವಂತಹಾ ಸ್ಟಾಕ್‌ಗಳ ಮೇಲೆ ಕೇಂದ್ರಿತವಾಗಿರುವ ಬೆಲೆ/ದರ ನಿಧಿಸಂಸ್ಥೆಗಳಲ್ಲಿ ಪ್ರತ್ಯೇಕತೆ ಕಾಣಬಹುದು. ಮೌಲಿಕ ಸ್ಟಾಕ್‌ಗಳು ಐತಿಹಾಸಿಕವಾಗಿ ಹೆಚ್ಚಿನ ಉತ್ಪತ್ತಿಯನ್ನು ಕೊಟ್ಟಿವೆ, ಆದರೆ ವ್ಯಾವಹಾರಿಕ ನೀತಿಯ ಪ್ರಕಾರ ಅದು ಆ ವ್ಯವಹಾರದಲ್ಲಿರುವ ಹೆಚ್ಚಿನ ನಷ್ಟದ ಸಾಧ್ಯತೆಗೆ ಸಿಕ್ಕ ಪರಿಹಾರ. ಅಭಿವೃದ್ಧಿ ನಿಧಿಸಂಸ್ಥೆಯು ಕ್ರಮಬದ್ಧ ಲಾಭಾಂಶಗಳನ್ನು ಕೊಡುತ್ತಿರುವುದಿಲ್ಲ. ಆದಾಯಕೇಂದ್ರಿತ ನಿಧಿಸಂಸ್ಥೆಗಳು ಹೆಚ್ಚು ಲಾಭಾಂಶವನ್ನು ಪಾವತಿಸಬಲ್ಲ ಸ್ಟಾಕ್‌ಗಳ ಮೇಲೆ ಕೇಂದ್ರೀಕೃತವಾಗಿ ಕೇವಲ ಹಿಡಿತದ ಹೂಡಿಕೆಗಳನ್ನು ಮಾಡುತ್ತವೆ. ಸಮತೂಲಿತ ನಿಧಿಸಂಸ್ಥೆಯು ಇವೆಲ್ಲ ತಂತ್ರಗಳ ಸಂಯೋಜನೆಯನ್ನು ಒಂದು ಹಂತದವರೆಗೆ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿಕೊಂಡು, ನಷ್ಟಸಾಧ್ಯತೆಯ ವಿಚಾರದಲ್ಲಿ ಹೆಚ್ಚು ರಕ್ಷಣಾತ್ಮಕವಾಗಿ ಯೋಚಿಸಿ ತಕ್ಕ ಮಟ್ಟಿನ ಬೆಳವಣಿಗೆಯನ್ನು ಗುರಿಯಾಗಿಟ್ಟುಕೊಂಡಿರುತ್ತವೆ.[ಸಾಕ್ಷ್ಯಾಧಾರ ಬೇಕಾಗಿದೆ]
ಸೂಚ್ಯಂಕ ನಿಧಿಸಂಸ್ಥೆ ಹಾಗೂ ಕ್ರಿಯಾತ್ಮಕ ನಿರ್ವಹಣೆ
ಬದಲಾಯಿಸಿಸೂಚ್ಯಂಕ ನಿಧಿಸಂಸ್ಥೆಯು ಪ್ರಮುಖ ಸ್ಟಾಕ್ (ಅಥವಾ ಬಾಂಡ್) ಸೂಚ್ಯಂಕಗಳ ಭಾಗವಾಗಿರುವ, S&P 500ಯಂತಹಾ ಕಂಪೆನಿಗಳಲ್ಲಿ ಹೂಡಿಕೆಗಳನ್ನು ಮಾಡಿದರೆ, ಕ್ರಿಯಾತ್ಮಕ ನಿರ್ವಹಣೆಯ ನಿಧಿಸಂಸ್ಥೆ ಉನ್ನತ ಸ್ಟಾಕ್-ಸಂಗ್ರಹ ತಂತ್ರಗಳೊಂದಿಗೆ ಪ್ರಸಕ್ತ ಸೂಚ್ಯಂಕವನ್ನು ಮೀರಿ ನಡೆಯಲು ಪ್ರಯತ್ನಿಸುತ್ತದೆ. ಸೂಚ್ಯಂಕ ನಿಧಿಸಂಸ್ಥೆಯ ಆಸ್ತಿಗಳ ನಿರ್ವಹಣೆಯನ್ನು ನಿಗದಿತ ಸೂಚ್ಯಂಕ ಪ್ರಕಟಣೆಗೆ ಸರಿಹೊಂದುವ ಮಟ್ಟಿಗೆ ನಿರ್ವಹಿಸಲಾಗುತ್ತಿರುತ್ತದೆ. ಸೂಚ್ಯಂಕದ ಪ್ರಕೃತಿಯು ವಿರಳವಾಗಿ ಬದಲಾಗುವುದರಿಂದ, ಸರಾಸರಿಯಾಗಿ ಕ್ರಿಯಾತ್ಮಕ ನಿಧಿಸಂಸ್ಥೆ ನಿರ್ವಾಹಕನು ಮಾಡುವುದಕ್ಕಿಂತ ಕಡಿಮೆ ವ್ಯವಹಾರಗಳನ್ನು ಸೂಚ್ಯಂಕ ನಿಧಿಸಂಸ್ಥೆಯ ನಿರ್ವಾಹಕನು ನಡೆಸುವನು. ಇದೇ ಕಾರಣದಿಂದಾಗಿ, ಕ್ರಿಯಾತ್ಮಕ ನಿರ್ವಹಿತ ನಿಧಿಸಂಸ್ಥೆಗಿಂತ ಸೂಚ್ಯಂಕ ನಿಧಿಸಂಸ್ಥೆಯು ಸಾಮಾನ್ಯವಾಗಿ ಅಲ್ಪ ವ್ಯಾವಹಾರಿಕ ವೆಚ್ಚಗಳನ್ನು ಹೊಂದಿದ್ದು, ಷೇರುದಾರರಿಗೆ ನೀಡಬೇಕಾಗುವ ಕೆಲವೇ ಅಲ್ಪಾವಧಿಯ ಬಂಡವಾಳ ಲಾಭಗಳನ್ನು ಹೊಂದುತ್ತದೆ. ಇವುಗಳೊಂದಿಗೆ, ಸೂಚ್ಯಂಕ ನಿಧಿಸಂಸ್ಥೆಯು ವೈಯಕ್ತಿಕ ಸ್ಟಾಕ್‌ಗಳ ಆಯ್ಕೆ (ಪಾರಂಪರಿಕ ಒಡೆತನದ ಆಯ್ಕೆಯ ತಂತ್ರಗಳು, ಸಂಶೋಧನೆ, ಇತ್ಯಾದಿ.) ಮತ್ತು ವೈಯಕ್ತಿಕ ಹಿಡುವಳಿಗಳನ್ನು ಯಾವಾಗ ಕೊಳ್ಳುವುದು, ಪಡೆದುಕೊಳ್ಳುವುದು ಅಥವಾ ಮಾರುವುದರ ಬಗೆಗಿನ ವೆಚ್ಚಗಳನ್ನು ಭರಿಸುವುದಿಲ್ಲ. ಬದಲಿಗೆ, ಸರಳೀಕೃತ ಗಣಕ ಮಾದರಿಯು ನಿಧಿಸಂಸ್ಥೆಯ ನಿಗದಿತ ಗುರಿಯನ್ನು ತಲುಪಲು ಮಾಡಬೇಕಾದ ಬದಲಾವಣೆಯನ್ನು ಸೂಚಿಸುತ್ತದೆ.
ನಿರ್ದಿಷ್ಟ ಸೈದ್ಧಾಂತಿಕ ಆಧಾರಗಳು ಮ್ಯೂಚುಯಲ್ ಫಂಡ್ ಸಂಸ್ಥೆ ಮಾರುಕಟ್ಟೆಯನ್ನು ಮತ್ತು ಕ್ರಿಯಾತ್ಮಕ ನಿರ್ವಹಿತ ಮ್ಯೂಚುಯಲ್ ಫಂಡ್ ಸಂಸ್ಥೆಗಳನ್ನು ಹಿಂದೆ ಹಾಕಲು ಸಾಧ್ಯವಿಲ್ಲದರ ಜೊತೆಗೆ ಅದೇ ಗುಣಲಕ್ಷಣಗಳುಳ್ಳ ಇತರೆ ವಿಶಾಲ-ತಳಹದಿಯ ಬಂಡವಾಳ ಪಟ್ಟಿ ಸಂಸ್ಥೆಗಳಿಗಿಂತ ಕಳಪೆ ಸಾಧನೆ ಮಾಡುತ್ತದೆ. ಒಂದು ಅಧ್ಯಯನದ ಪ್ರಕಾರ 1962ರಿಂದ 1992[೯] ರವರೆಗಿನ ಅವಧಿಯ ಅರ್ಧಭಾಗದಲ್ಲಿ 1,500ಕ್ಕೆ ಸಮೀಪ ಸಂಖ್ಯೆಯ U.S. ಮ್ಯೂಚುಯಲ್ ಫಂಡ್ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಕಳಪೆ ಸಾಧನೆ ಮೆರೆದವು. ಇಷ್ಟೇ ಅಲ್ಲದೇ, ಹಿಂದೆ ಉತ್ತಮ ಸಾಧನೆ ತೋರಿದ ನಿಧಿಸಂಸ್ಥೆಗಳೂ ಸಹಾ ಮುಂದಿನ ವರ್ಷಗಳಲ್ಲಿ ಮಾರುಕಟ್ಟೆಯನ್ನು ಮೀರಿಸಲು ಸಾಧ್ಯವಾಗಿಲ್ಲ (ಜೆನ್‌ಸೆನ್, 1968ರಲ್ಲಿ; ಗ್ರಿಂಬ್ಲಾಟ್ ಮತ್ತು ಷೆರಿಡನ್ ಟಿಟ್‌ಮನ್, 1989ರಲ್ಲಿ ತೋರಿದ ಹಾಗೆ).[೧೦]
ಬಾಂಡ್ ನಿಧಿಸಂಸ್ಥೆಗಳು
ಬದಲಾಯಿಸಿಮ್ಯೂಚುಯಲ್ ಫಂಡ್ ಸಂಸ್ಥೆ ಆಸ್ತಿಗಳ 18% ಭಾಗವನ್ನು ಬಾಂಡ್ ನಿಧಿಸಂಸ್ಥೆಗಳು ಆಕ್ರಮಿಸಿಕೊಂಡಿವೆ.[೭] ಬಾಂಡ್ ನಿಧಿಸಂಸ್ಥೆಗಳ ವಿಧಗಳಲ್ಲಿ ನಿಗದಿತ ವಾಯಿದೆ (ಅಲ್ಪ-, ಮಧ್ಯಮ-, ಅಥವಾ ದೀರ್ಘಾವಧಿ)ಯ ನಂತರ ಲಭ್ಯವಾಗುವ ಕಾಲಾವಧಿ ನಿಧಿಸಂಸ್ಥೆಗಳೂ ಸಹಾ ಸೇರಿವೆ. ಸ್ಥಳೀಯಸಂಸ್ಥೆ ಬಾಂಡ್ ನಿಧಿಗಳು ಸಾಮಾನ್ಯವಾಗಿ ಅಲ್ಪ ಉತ್ಪತ್ತಿಯನ್ನು ಹೊಂದಿದ್ದರೂ, ತೆರಿಗೆ ಅನುಕೂಲಗಳು ಹಾಗೂ ಅಲ್ಪ ಹಾನಿಸಾಧ್ಯತೆಗಳನ್ನೂ ಹೊಂದಿರುತ್ತವೆ. ಹೆಚ್ಚು-ಉತ್ಪತ್ತಿಯ ಬಾಂಡ್ ನಿಧಿಸಂಸ್ಥೆಗಳು ಹೆಚ್ಚು-ಉತ್ಪತ್ತಿಯ ಅಥವಾ ಜಂಕ್ ಬಾಂಡ್‌ಗಳೂ ಸೇರಿದಂತೆ ಕಾರ್ಪೋರೇಟ್ ಬಾಂಡ್‌ಗಳಲ್ಲಿ ಹೂಡುತ್ತವೆ. ಹೆಚ್ಚಿನ ಉತ್ಪತ್ತಿಯ ಸಾಧ್ಯತೆಯಿರುವುದರಿಂದ ಈ ಬಾಂಡ್‌ಗಳ ಹಾನಿಯ ಸಾಧ್ಯತೆಯೂ ಹೆಚ್ಚು.
ವಿತ್ತಪೇಟೆ ನಿಧಿಸಂಸ್ಥೆ
ಬದಲಾಯಿಸಿವಿತ್ತಪೇಟೆ ನಿಧಿಸಂಸ್ಥೆಗಳು ಅಮೇರಿಕಾ ಸಂಯುಕ್ತ ಸಂಸ್ಥಾನನ ಮ್ಯೂಚುಯಲ್ ಫಂಡ್ ಸಂಸ್ಥೆ ಆಸ್ತಿಗಳಲ್ಲಿ 26% ಪಾಲು ಹೊಂದಿವೆ.[೧೧] ವಿತ್ತಪೇಟೆ ನಿಧಿಸಂಸ್ಥೆಗಳು ಅಲ್ಪ ಪ್ರಮಾಣದ ಹಾನಿಸಾಧ್ಯತೆಯನ್ನು ಹೊಂದಿದ್ದು, ಅದರಿಂದಾಗಿಯೇ ಅಲ್ಪ ಉತ್ಪತ್ತಿಯನ್ನು ಹೊಂದಿವೆ. ಠೇವಣಾತಿಗಳ ಪ್ರಮಾಣಪತ್ರಗಳ ಹಾಗಲ್ಲದೇ (CDಗಳು), ವಿತ್ತಪೇಟೆ ಷೇರುಗಳು ಯಾವುದೇ ಸಮಯದಲ್ಲಿ ನಗದೀಕರಿಸುವಿಕೆ ಹಾಗೂ ಮರುಕಳಿಕೆಯ ಸೌಲಭ್ಯವನ್ನು ಹೊಂದಿರುತ್ತವೆ.
ನಿಧಿಸಂಸ್ಥೆಗಳ ನಿಧಿಗಳು
ಬದಲಾಯಿಸಿನಿಧಿಸಂಸ್ಥೆಗಳ ನಿಧಿಗಳೆಂದರೆ (FoF) ಇತರೆ ಆಧಾರಭೂತ ಮ್ಯೂಚುಯಲ್ ಫಂಡ್ ಸಂಸ್ಥೆಗಳಲ್ಲಿ (ಅಂದರೆ, ಬೇರೆ ನಿಧಿಸಂಸ್ಥೆಗಳನ್ನೊಳಗೊಂಡಿರುವ ನಿಧಿಸಂಸ್ಥೆಗಳು) ಹೂಡುವ ಮ್ಯೂಚುಯಲ್ ಫಂಡ್ ಸಂಸ್ಥೆಗಳು. ಆಧಾರಭೂತ ನಿಧಿಸಂಸ್ಥೆಗಳೆಂದರೆ ಓರ್ವ ಹೂಡಿಕೆದಾರ ನೇರವಾಗಿ ಹೂಡಬಹುದಾದ ನಿಧಿಸಂಸ್ಥೆ. ನಿಧಿಸಂಸ್ಥೆಗಳ ನಿಧಿಯು ಸಾಮಾನ್ಯವಾಗಿ ಆಸ್ತಿ ವಿತರಣೆಯ ಶುಲ್ಕಗಳೆಂದು ಗಣಿಸುವುದರಿಂದ ಸಾಮಾನ್ಯ ನಿಧಿಸಂಸ್ಥೆಗಿಂತ ಕಡಿಮೆ ನಿರ್ವಹಣಾ ಶುಲ್ಕವನ್ನು ಪಡೆಯುತ್ತವೆ. ಆಧಾರಭೂತ ನಿಧಿಸಂಸ್ಥೆಗಳಲ್ಲಿ ವಿಧಿಸಲಾದ ಶುಲ್ಕಗಳು ಕಾರ್ಯಾಚರಣೆ ಪ್ರಕಟಣೆಗಳಲ್ಲಿ ಸೂಚಿತವಾಗಿರದಿದ್ದರೂ, ಸಾಮಾನ್ಯವಾಗಿ ನಿಧಿಸಂಸ್ಥೆಯ ವಾರ್ಷಿಕ ವರದಿ, ವಿವರಣಾ ಪತ್ರ ಅಥವಾ ಹೆಚ್ಚಿನ ಮಾಹಿತಿ ಪತ್ರದಲ್ಲಿ ವಿಷದಗೊಳಿಸಲಾಗಿರುತ್ತದೆ. ನಿಧಿ-ಮಟ್ಟದ ವೆಚ್ಚಗಳು ಮತ್ತು ಆಧಾರಭೂತ ನಿಧಿಸಂಸ್ಥೆಗಳ ವೆಚ್ಚಗಳೆರಡೂ ಹೂಡಿಕೆದಾರರ ಉತ್ಪತ್ತಿಯನ್ನು ಕಡಿಮೆಗೊಳಿಸುವುದರಿಂದ ಅವೆರಡರ ಸಂಯೋಜನೆಯಲ್ಲಿ ಮೌಲ್ಯೀಕರಿಸಲಾಗುತ್ತದೆ.
ಬಹಳಷ್ಟು FoFಗಳು ಅಂಗೀಕೃತ ನಿಧಿಸಂಸ್ಥೆ (ಅಂದರೆ, ತಮ್ಮದೇ ಸಲಹಾಸಮಿತಿಯ ನಿರ್ವಹಣೆಯಲ್ಲಿರುವ ಮ್ಯೂಚುಯಲ್ ಫಂಡ್ ಸಂಸ್ಥೆ)ಗಳಲ್ಲಿ ಮಾತ್ರವೇ ಹೂಡುತ್ತವೆ, ಕೆಲವು ಮಾತ್ರವೇ ಇತರೆ ಸಲಹಾಕಾರ(ಅಂಗೀಕೃತವಲ್ಲದ)ರಿಂದ ನಿರ್ವಹಿತ ನಿಧಿಸಂಸ್ಥೆಗಳಲ್ಲಿ ಹೂಡುತ್ತವೆ. ಪ್ರತ್ಯೇಕ ಸಲಹಾಕಾರರನ್ನು ಹೊಂದಿರುವ ನಿಧಿಸಂಸ್ಥೆಯ ಹೂಡಿಕೆ, ನಿರ್ವಹಣಾ ಸಂಶೋಧನಾ ವೆಚ್ಚದ ಕಾರಣದಿಂದ, ಅಂಗೀಕೃತ ವ್ಯವಸ್ಥೆಗಿಂತ ಅಂಗೀಕೃತವಾಗದ ಆಧಾರಭೂತ ನಿಧಿಸಂಸ್ಥೆಯಲ್ಲಿ ಹೂಡುವ ವೆಚ್ಚವು ಹೆಚ್ಚಾಗಿರುತ್ತವೆ. ಇತ್ತೀಚೆಗೆ, FoFಗಳನ್ನು ಕ್ರಿಯಾತ್ಮಕ ನಿರ್ವಹಿತ (ಮಾರುಕಟ್ಟೆಯ ಬದಲಾವಣೆಗಳಿಗನುಗುಣವಾಗಿ ಆಧಾರಭೂತ ನಿಧಿಸಂಸ್ಥೆಗಳನ್ನು ಹೂಡಿಕೆ ಸಲಹಾಕಾರ ಆಗಾಗ್ಗೆ ಬದಲಾಯಿಸುವಂತಹಾ) ಮತ್ತು ಜಡ ನಿರ್ವಹಿತ(ನಿಯತವಾಗಿ ಸಮತೋಲವನ್ನು ಕಾಯ್ದುಕೊಳ್ಳುವ ರೀತಿಯಲ್ಲಿ ಆಸ್ತಿಗಳನ್ನು ಹೂಡಿಕೆ ಸಲಹಾಕಾರ ಹಂಚುವಂತಹಾ) ನಿಧಿಸಂಸ್ಥೆಗಳೆಂದು ವರ್ಗೀಕರಿಸಲಾಗಿವೆ.
FoFಗಳ ವಿನ್ಯಾಸವನ್ನು ತಮ್ಮದೇ ಸ್ವಂತದ ಆಸ್ತಿ ಹೊಂದಾಣಿಕಾ ಮಾದರಿಯನ್ನು ಕಂಡುಕೊಳ್ಳಲಾರದ ಅಥವಾ ಕಂಡುಕೊಳ್ಳಲಿಚ್ಛಿಸದ ಹೂಡಿಕೆದಾರರಿಗೆ ಸಿದ್ಧಮಿಶ್ರಣವಾದ ಮ್ಯೂಚುಯಲ್ ಫಂಡ್ ಸಂಸ್ಥೆಯಂತೆ ರೂಪಿಸಲಾಗಿದೆ. ನಿಧಿಸಂಸ್ಥೆ ಕಂಪೆನಿಗಳಾದ TIAA-CREF, ಅಮೇರಿಕನ್ ಸೆಂಚುರಿ ಇನ್‌ವೆಸ್ಟ್‌ಮೆಂಟ್ಸ್, ವ್ಯಾನ್‌ಗಾರ್ಡ್, ಮತ್ತು ಫಿಡಿಲಿಟಿಗಳೂ ಕೂಡ ಈ ಮಾರುಕಟ್ಟೆಯನ್ನು ಪ್ರವೇಶಿಸಿದ್ದು ಹೂಡಿಕೆದಾರರಿಗೆ ಅವಕಾಶವನ್ನು ನೀಡಿ ನಿಧಿಸಂಸ್ಥೆಯನ್ನು ಆಯ್ಕೆ ಮಾಡುವಲ್ಲಿನ “ಅಂದಾಜಿನ ಕೆಲಸ”ವನ್ನು ವಹಿಸಿಕೊಂಡಿವೆ. ವಿತರಣಾ ಸಂಯೋಜನೆಗಳು ಸಾಮಾನ್ಯವಾಗಿ ಹೂಡಿಕೆದಾರರು ನಿವೃತ್ತರಾಗುವ ಅವಧಿಯ ಮೇಲೆ ಅವಲಂಬಿತವಾಗಿ: 2020, 2030, 2050, ಇತ್ಯಾದಿ. ಬದಲಾಗುತ್ತವೆ. ನಿವೃತ್ತಿಯ ಅವಧಿಯು ದೂರವಿದ್ದಷ್ಟೂ, ಆಸ್ತಿ ಸಂಯೋಜನೆಯು ಹೆಚ್ಚು ತೀವ್ರವಾಗಿರುತ್ತದೆ.
ಅನಿಯಂತ್ರಿತ/ರಕ್ಷಣಾತ್ಮಕ ನಿಧಿಸಂಸ್ಥೆ
ಬದಲಾಯಿಸಿಅಮೇರಿಕಾ ಸಂಯುಕ್ತ ಸಂಸ್ಥಾನನಲ್ಲಿನ ಅನಿಯಂತ್ರಿತ/ರಕ್ಷಣಾತ್ಮಕ ನಿಧಿಸಂಸ್ಥೆಗಳೆಂದರೆ ಮ್ಯೂಚುಯಲ್ ಫಂಡ್ ಸಂಸ್ಥೆಗಳಂತೆ ಹೆಚ್ಚಿನ SEC ನಿಯಂತ್ರಣವಿಲ್ಲದ ಸಂಗ್ರಹೀಕೃತ ಹೂಡಿಕೆ ನಿಧಿಸಂಸ್ಥೆಗಳು. ಕೆಲ ಅನಿಯಂತ್ರಿತ ನಿಧಿಸಂಸ್ಥೆ ನಿರ್ವಾಹಕರು ಹೂಡಿಕೆ ಸಲಹೆದಾರರಾಗಿ ಹೂಡಿಕೆ ಸಲಹಾಕಾರರ ಕಾಯ್ದೆಯಡಿ SECನೊಂದಿಗೆ ನೊಂದಾಯಿಸಿಕೊಳ್ಳಬೇಕಾಗುತ್ತದೆ.[೧೨][೧೨] ನಿಗದಿತ ಹೂಡಿಕೆ ತಂತ್ರಗಳನ್ನು ಪಾಲಿಸುವುದಾಗಲಿ ಅಥವಾ ನಿರಾಕರಿಸುವುದಾಗಲಿ, ನಿಗದಿತ ಹೂಡಿಕೆಗಳನ್ನು ಮಾಡಲೇಬೇಕೆಂಬ ಕಟ್ಟಳೆ ಅಥವಾ ಮಾಡಬಾರದೆಂಬ ನಿಷೇಧ ಯಾವುದನ್ನೂ ಈ ಕಾಯ್ದೆ ಸಲಹಾಕಾರರಿಗೆ ವಿಧಿಸುವುದಿಲ್ಲ. ಅನಿಯಂತ್ರಿತ ನಿಧಿಸಂಸ್ಥೆಯು ಸಾಮಾನ್ಯವಾಗಿ 1% ಅಥವಾ ಹೆಚ್ಚಿನ ನಿರ್ವಹಣಾ ಶುಲ್ಕದೊಂದಿಗೆ “ಸಾಮರ್ಥ್ಯ ಶುಲ್ಕ” ಅನಿಯಂತ್ರಿಂತ ನಿಧಿಯ ಲಾಭದ 20%ರಷ್ಟನ್ನು ವಿಧಿಸುತ್ತದೆ. ಕೆಲವೊಮ್ಮೆ ಹೂಡಿಕೆದಾರರು ಷೇರುಗಳನ್ನು ನಗದೀಕರಿಸಲಾಗದಂತಹಾ "ನಿರ್ಬಂಧಿತ" ಅವಧಿ ಸಹಾ ವಿಧಿಸಬಹುದು. ವೈಯಕ್ತಿಕ ಹೂಡಿಕೆದಾರರಿಗಿರುವ 130-30 ನಿಧಿಸಂಸ್ಥೆಯು ಅನಿಯಂತ್ರಿತ ತಂತ್ರದ ಒಂದು ವಿಧ.
ಮ್ಯೂಚುಯಲ್ ಫಂಡ್ ಸಂಸ್ಥೆ vs. ಇತರೆ ಹೂಡಿಕೆಗಳು
ಬದಲಾಯಿಸಿವೈಯಕ್ತಿಕ ಸ್ಟಾಕ್‌ಗಳ ಹೂಡಿಕೆಗಿಂತ ಮ್ಯೂಚುಯಲ್ ಫಂಡ್ ಸಂಸ್ಥೆಗಳು ಹೆಚ್ಚಿನ ಅನುಕೂಲಗಳನ್ನು ನೀಡುತ್ತವೆ. ಉದಾಹರಣೆಗೆ, ಮ್ಯೂಚುಯಲ್ ಫಂಡ್ ಸಂಸ್ಥೆಯ ಎಲ್ಲಾ ಷೇರುದಾರರಗಳಲ್ಲಿ ವ್ಯಾವಹಾರಿಕ ವೆಚ್ಚಗಳು ಹಂಚಿಹೋಗುವುದರಿಂದ, ಅಲ್ಪ-ವೆಚ್ಚದ ಬಂಡವಾಳ ವಿತರಣೆ ಸಾಧ್ಯವಾಗುತ್ತದೆ. ವೃತ್ತಿಪರ ನಿಧಿಸಂಸ್ಥೆಗಳ ನಿರ್ವಾಹಕರು, ಎಷ್ಟರಮಟ್ಟಿಗೆ ಸಾರ್ವಜನಿಕ ಸೂಚ್ಯಂಕಗಳನ್ನು ಅನುಕರಿಸಲೆತ್ನಿಸುವ ಸರಳ ಸೂಚ್ಯಂಕ ನಿಧಿಸಂಸ್ಥೆಗಳನ್ನು ಮೀರಿಸುವ ಕಾರ್ಯನಿರ್ವಹಣೆ ತೋರಿಸಬಲ್ಲರೆಂಬ ಬಗ್ಗೆ ವಿವಾದವಿದ್ದರೂ, ಹೂಡಿಕೆದಾರರಿಗೆ ಸಹಾ ಮತ್ತೋರ್ವರಿಂದ (ವೃತ್ತಿಪರ ನಿಧಿಸಂಸ್ಥೆ ನಿರ್ವಾಹಕರು) ಕೌಶಲ್ಯ ಹಾಗೂ ಹೂಡಿಕೆ ಅವಕಾಶಗಳ ಸಂಶೋಧನೆ ಮತ್ತು ನಿರ್ವಹಣೆಯ ವಿನಿಯೋಗವನ್ನು ಪಡೆದುಕೊಳ್ಳುವ ಅನುಕೂಲವಿದೆಯೆನ್ನಲಾಗುತ್ತದೆ. ಆದರೂ, ವಾಲ್‌ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ 2006ರಿಂದ 2008ರವರೆಗಿನ ಒಟ್ಟು 25 ವಿಧಗಳಿರುವ ಕಡೆ 22 ವಿಧದ ವ್ಯವಹಾರಗಳಲ್ಲಿ ಪ್ರತ್ಯೇಕ ನಿರ್ವಹಿತ ಖಾತೆಗಳು (SMA ಅಥವಾ SMAಗಳು) ಮ್ಯೂಚುಯಲ್ ಫಂಡ್ ಸಂಸ್ಥೆಗಳಿಗಿಂತ ಉತ್ತಮ ಸಾಧನೆ ತೋರಿವೆ. ಇದರಲ್ಲಿ ಜಾಗತಿಕ ಸ್ಟಾಕ್ ಮಾರುಕಟ್ಟೆಯು US$21 ಲಕ್ಷಕೋಟಿ ಮೊತ್ತವನ್ನು ಕಳೆದುಕೊಂಡ ಕಷ್ಟದ ವರ್ಷದಲ್ಲಿ ಮ್ಯೂಚುಯಲ್ ಫಂಡ್ ಸಂಸ್ಥೆಯ ಸಾಧನೆಯನ್ನು ಮೀರಿಸಿದ್ದ ಸಾಧನೆಯೂ ಸೇರಿದೆ.[೧೩][೧೪] ಆ ಲೇಖನದಲ್ಲಿ, ಮಾರ್ನಿಂಗ್‌ಸ್ಟಾರ್, Inc ಮ್ಯೂಚುಯಲ್ ಫಂಡ್ ಸಂಸ್ಥೆಗಳು ಒಟ್ಟು 36 ಸ್ಟಾಕ್ ಮತ್ತು ಬಾಂಡ್ ಮಾರುಕಟ್ಟೆ ವಿಧಗಳಲ್ಲಿ 25 ವಿಧಗಳಲ್ಲಿ SMAಗಳು ತಮ್ಮ ಉತ್ತಮ ಸಾಧನೆ ತೋರಿವೆ ಎಂದಿದೆ. ಕ್ರಿಯಾತ್ಮಕ ನಿರ್ವಹಿತವಾಗಲಿ ಇಲ್ಲವೇ ಜಡ ಸೂಚಿತವಾದದ್ದಾಗಲಿ, ಮ್ಯೂಚುಯಲ್ ಫಂಡ್ ಸಂಸ್ಥೆಗಳು ನಷ್ಟಗಳಿಂದ ಹೊರತಾದುವಲ್ಲ. ಹೂಡಿಕೆಗಳಿಗೆ ಸಂಬಂಧಪಟ್ಟ ಎಲ್ಲಾ ನಷ್ಟದ ಸಾಧ್ಯತೆಗಳನ್ನು ಅವೂ ಅನುಭವಿಸಲೇಬೇಕು. ನಿಧಿಸಂಸ್ಥೆಯೊಂದು ಪ್ರಮುಖವಾಗಿ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಿದರೆ, ಅದೂ ಸಹಾ ಸಾಮಾನ್ಯವಾಗಿ ಸ್ಟಾಕ್ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ನಷ್ಟದ ಅಪಾಯಗಳಿಗೆ ಈಡಾಗುತ್ತದೆ.
ಷೇರುಗಳ ವರ್ಗಗಳು
ಬದಲಾಯಿಸಿಅನೇಕ ಮ್ಯೂಚುಯಲ್ ಫಂಡ್ ಸಂಸ್ಥೆಗಳು ಒಂದಕ್ಕಿಂತ ಹೆಚ್ಚು ವರ್ಗದ ಷೇರುಗಳನ್ನು ನೀಡಬಲ್ಲವು. ಉದಾಹರಣೆಗೆ, "ಕ್ಲಾಸ್ A" ಮತ್ತು "ಕ್ಲಾಸ್ B" ಷೇರುಗಳನ್ನು ವಿತರಿಸಬಲ್ಲ ನಿಧಿಸಂಸ್ಥೆಗಳನ್ನು ನೀವು ನೋಡಿರಬಹುದು. ಪ್ರತಿ ವರ್ಗವು ಅದೇ ಭದ್ರತಾಠೇವಣಿ ಸಂಚಯದಲ್ಲಿಯೇ ಹಣ ಹೂಡಿರುತ್ತವಲ್ಲದೇ (ಅಥವಾ ಹೂಡಿಕೆ ಬಂಡವಾಳಪಟ್ಟಿ) ಅದೇ ಹೂಡಿಕೆ ಉದ್ದೇಶ ಹಾಗೂ ನಿಯಮಾವಳಿಗಳನ್ನು ಹೊಂದಿರುತ್ತವೆ. ಆದರೆ ಪ್ರತಿ ವರ್ಗವು ತಮ್ಮದೇ ಆದ ಪ್ರತ್ಯೇಕ ಶುಲ್ಕಗಳು ಮತ್ತು ವೆಚ್ಚಗಳನ್ನು ಹೊಂದಿದ್ದು ಪ್ರತ್ಯೇಕ ಷೇರುದಾರ ಸೇವೆಗಳು ಹಾಗೂ/ಅಥವಾ ವಿತರಣಾ ವ್ಯವಸ್ಥೆಗಳನ್ನು ಹೊಂದಿರುತ್ತವೆ. ಈ ವ್ಯತ್ಯಾಸಗಳು ವಿವಿಧ ವರ್ಗಗಳ ಹೂಡಿಕೆದಾರ ಸೇವಾವೆಚ್ಚವನ್ನು ಪ್ರತಿನಿಧಿಸುವಂತಿರುತ್ತವೆ; ಉದಾಹರಣೆಗೆ, ವರ್ಗವೊಂದನ್ನು ಫ್ರಂಟ್-ಎಂಡ್ ಲೋಡ್‌ನೊಂದಿಗೆ ದಲ್ಲಾಳಿಗಳ ಮೂಲಕ ಮಾರಿದ್ದರೆ, ಮತ್ತೊಂದು ವರ್ಗವನ್ನು ನೇರವಾಗಿ ಸಾರ್ವಜನಿಕರಿಗೆ ಯಾವುದೇ ಲೋಡ್ ಇಲ್ಲದೇ ಆದರೆ ವರ್ಗದ ವೆಚ್ಚಗಳಲ್ಲಿ (ಕೆಲವೊಮ್ಮೆ "ಕ್ಲಾಸ್ C" ಷೇರುಗಳು ಎಂದು ಕರೆಯಲ್ಪಡುವ) "12ಬಿ-1 ಶುಲ್ಕ"ವನ್ನು ಸೇರಿಸಿಕೊಂಡು ನೀಡಲಾಗಿರುತ್ತದೆ. ಇಷ್ಟೆಲ್ಲಾ ಆದರೂ ಮೂರನೇ ವರ್ಗವೊಂದು $10,000,000ರ ಕನಿಷ್ಠ ಹೂಡಿಕೆಯೊಂದಿಗೆ ಕೇವಲ ಹಣಕಾಸು ಸಂಸ್ಥೆಗಳಿಗೆ ಮಾತ್ರವೇ ಲಭ್ಯವಾಗಿರಬಹುದು("ಸಾಂಸ್ಥಿಕ" ಷೇರುಗಳು ಎಂದು ಕರೆಯಲ್ಪಡುವ ವರ್ಗ). ಅನೇಕ ಸಂದರ್ಭಗಳಲ್ಲಿ, ಅನೇಕ ವ್ಯಕ್ತಿಗಳಿಂದಾದ ನಿಯತ ಹೂಡಿಕೆಗಳನ್ನು ಕ್ರೋಢೀಕರಿಸಿ ಮಾಡಿದ ನಿವೃತ್ತಿ ಯೋಜನೆಯು (401(ಕೆ) ಯೋಜನೆಯಂತಹಾ) "ಸಾಂಸ್ಥಿಕ" ಷೇರುಗಳನ್ನು ಕೊಳ್ಳಲು ಅರ್ಹತೆ ಪಡೆಯಬಹುದಾದರೂ (ಅದರ ಅಲ್ಪ ವೆಚ್ಚದ ಅನುಪಾತದ ಅನುಕೂಲ ಪಡೆದುಕೊಳ್ಳಬಹುದು) ಯೋಜನೆಯ ಯಾವುದೇ ಸದಸ್ಯರು ವೈಯಕ್ತಿಕವಾಗಿ ಅರ್ಹತೆ ಪಡೆದಿರುವುದಿಲ್ಲ.[೧೫] ಇದರ ಪರಿಣಾಮವಾಗಿ ಪ್ರತಿ ವರ್ಗವು ಪ್ರತ್ಯೇಕವಾದ ಸಾಧನಾ ಫಲಿತಾಂಶಗಳನ್ನು ಹೊಂದಿರುವುದು ಸರ್ವೇಸಾಮಾನ್ಯವಾಗಿರುತ್ತದೆ.[೧೬]
ಬಹು-ವರ್ಗ ಸ್ವರೂಪದ ಹೂಡಿಕೆಯು ತಮ್ಮ ಹೂಡಿಕೆ ಗುರಿಗಳಿಗೆ ಸೂಕ್ತವಾದ (ನಿಧಿಸಂಸ್ಥೆಯಲ್ಲಿ ಎಷ್ಟು ಕಾಲದವರೆಗೆ ಇರಬೇಕೆಂದು ಬಯಸುವುದನ್ನೂ ಸೇರಿಸಿ) ಹೂಡಿಕೆದಾರರು ಶುಲ್ಕ ಮತ್ತು ವೆಚ್ಚದ ಸ್ವರೂಪವನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡುತ್ತದೆ.[೧೬]
ಲೋಡ್ ಮತ್ತು ವೆಚ್ಚಗಳು
ಬದಲಾಯಿಸಿಫ್ರಂಟ್-ಎಂಡ್ ಲೋಡ್ ಅಥವಾ ಮಾರಾಟ ಶುಲ್ಕವೆಂದರೆ ಷೇರುಗಳನ್ನು ಕೊಂಡಾಗ ಹೂಡಿದ ಮೊತ್ತದ ಶೇಕಡಾವಾರು ಮೊತ್ತವಾಗಿ ಮ್ಯೂಚುಯಲ್ ಫಂಡ್ ಸಂಸ್ಥೆಯಿಂದ ದಳ್ಳಾಳಿಗೆ ನೀಡಲಾಗುವ ದಳ್ಳಾಳಿ ಹಣ. ಹೂಡಿಕೆಯ ಮೌಲ್ಯವು ಲೋಡ್‌ನ ಮೊತ್ತಕ್ಕನುಸಾರವಾಗಿ ಇಳಿಕೆಗೊಳ್ಳುತ್ತದೆ. ಕೆಲ ನಿಧಿಸಂಸ್ಥೆಗಳು ಮುಂದೆ ಹಾಕಲಾಗುವ ಮಾರಾಟ ಶುಲ್ಕ ಅಥವಾ ಬ್ಯಾಕ್-ಎಂಡ್ ಲೋಡ್ ವ್ಯವಸ್ಥೆಯನ್ನು ಹೊಂದಿರುತ್ತವೆ. ಈ ಮಾದರಿಯ ನಿಧಿಸಂಸ್ಥೆಗಳಲ್ಲಿ ಹೂಡಿಕೆದಾರ ಷೇರುಗಳನ್ನು ಕೊಳ್ಳುವಾಗ ಯಾವುದೇ ಮಾರಾಟ ಶುಲ್ಕವನ್ನು ಪಾವತಿಸಿರುವುದಿಲ್ಲ, ಆದರೆ ವಾಪಸಾತಿ ಪಡೆಯುವಾಗ ಎಷ್ಟು ಸಮಯ ನಿಧಿಯಲ್ಲಿತ್ತು ಎಂಬುದರ ಮೇಲೆ ಆಧಾರವಾಗಿ ದಳ್ಳಾಳಿ ಹಣವನ್ನು ನೀಡಬೇಕಾಗುತ್ತದೆ. ಇನ್ನೊಂದು ಉತ್ಪನ್ನ ವ್ಯವಸ್ಥೆಯೆಂದರೆ ಲೆವಲ್-ಲೋಡ್ ನಿಧಿ, ನಿಧಿ ಷೇರುಗಳನ್ನು ಕೊಳ್ಳಬೇಕಾದರೆ ಯಾವುದೇ ಮಾರಾಟ ಶುಲ್ಕ ಪಾವತಿಸದೇ, ಕೊಂಡ ಷೇರುಗಳು ವರ್ಷದೊಳಗೆ ಮರುಮಾರಾಟವಾದರೆ ಬ್ಯಾಕ್-ಎಂಡ್ ಲೋಡ್‌ಅನ್ನು ವಿಧಿಸಲಾಗುತ್ತದೆ.
ಲೋಡ್ ನಿಧಿಗಳನ್ನು ಹಣಕಾಸು ಮಧ್ಯವರ್ತಿಗಳಾದ ದಳ್ಳಾಳಿಗಳು, ಹಣಕಾಸು ಯೋಜನಾಕಾರರು ಮತ್ತು ತಮ್ಮ ಸೇವೆಗೆ ಶುಲ್ಕ ವಿಧಿಸುವ ಇನ್ನಿತರ ನೊಂದಾಯಿತ ಪ್ರತಿನಿಧಿಗಳ ಮೂಲಕ ಮಾರಲಾಗುತ್ತವೆ. ಫ್ರಂಟ್-ಎಂಡ್ ಲೋಡ್ ನಿಧಿಸಂಸ್ಥೆಗಳ ಷೇರುಗಳು ಅನೇಕ ಮಾರ್ಪಡಿಕೆಯಾಗಬಲ್ಲ ಅಂಶಗಳ ಮೇಲೆ (ಅಂದರೆ, ದಳ್ಳಾಳಿ ಮೊತ್ತದಲ್ಲಿನ ಇಳಿಕೆಗೆ) ಆಗಾಗ್ಗೆ ಕ್ರಮಭಂಗ ಸೌಲಭ್ಯಕ್ಕೆ ಅರ್ಹತೆ ಪಡೆದಿರುತ್ತವೆ. ಇವು ಇತರ ವಿವರಗಳನ್ನೂ ಒಳಗೊಂಡಿರುತ್ತವೆ.
ವಿವರಗಳಿಗಾಗಿ ನೋಡಿ
ಬದಲಾಯಿಸಿ- ಪರಿಮಿತ ನಿಧಿ
- ಮುಕ್ತ-ದ್ವಾರ ನಿಧಿ
- ವಿನಿಮಯ-ವ್ಯವಹಾರದ ನಿಧಿ
- ಉತ್ಪನ್ನ ನಿಧಿ
- ಸೂಚ್ಯಂಕನಿಧಿ
- ಹಣಕಾಸು ನಿಧಿ
- ಹೂಡಿಕೆ ನಿರ್ವಹಣೆ
- ನಿರ್ವಹಣೆಯಲ್ಲಿರುವ ಜಾಗತಿಕ ಆಸ್ತಿಗಳು
- ತಮ್ಮ ನಿರ್ವಹಣೆಯಲ್ಲಿರುವ ಆಸ್ತಿಗಳ ಮೇಲೆ ಅವಲಂಬಿತವಾಗಿ US ಮ್ಯೂಚುಯಲ್ ಫಂಡ್ ಸಂಸ್ಥೆಗಳ ಪಟ್ಟಿ
- ಅಮೇರಿಕಾ ಸಂಯುಕ್ತ ಸಂಸ್ಥಾನನಲ್ಲಿನ ಮ್ಯೂಚುಯಲ್-ಫಂಡ್ ಶ್ರೇಣಿ/ಕುಟುಂಬಗಳ ಪಟ್ಟಿ
- ಕೆನಡಾದಲ್ಲಿನ ಮ್ಯೂಚುಯಲ್ ಫಂಡ್ ಸಂಸ್ಥೆ ಕಂಪೆನಿಗಳ ಪಟ್ಟಿ
- ಮ್ಯೂಚುಯಲ್ -ನಿಧಿ ಹಗರಣ (2003)
- ಪ್ರತ್ಯೇಕ ನಿರ್ವಹಿತ ಖಾತೆಗಳುಪ್ರತ್ಯೇಕ ನಿರ್ವಹಿತ ಖಾತೆ ಅಥವಾ SMAಗಳು
- ಸಾಮಾಜಿಕ ಜವಾಬ್ದಾರಿಯುತ ಹೂಡಿಕೆ
- ಯೂನಿಟ್ ಟ್ರಸ್ಟ್
- ಮೌಲ್ಯ ಹೂಡಿಕೆ
- ಸಾಹಸೋದ್ಯಮ ಬಂಡವಾಳ
- ಕ್ರಿಯಾತ್ಮಕ ನಿರ್ವಹಣೆ
ಆಕರಗಳು
ಬದಲಾಯಿಸಿ- ↑ "US SEC answers on Mutual Funds". U.S. Securities and Exchange Commission (SEC). Retrieved 2006-04-11.
- ↑ "Princeton Alumni Weekly article on pioneering work of John Bogle '51".
- ↑ "About ICI". Investment Company Institute (ICI). Archived from the original on 2008-01-12. Retrieved 2007-12-01.
- ↑ "ವಿಶ್ವಾದ್ಯಂತ ಮ್ಯೂಚುಯಲ್ ಫಂಡ್ ಸಂಸ್ಥೆಗಳ ಆಸ್ತಿಗಳು ಮತ್ತು ಹರಿವು, ನಾಲ್ಕನೇ ತ್ರೈಮಾಸಿಕ 2007". Archived from the original on 2009-02-21. Retrieved 2009-10-28.
- ↑ "Investment Companies". U.S. Securities and Exchange Commission (SEC). Retrieved 2006-04-11.
- ↑ "Final Rule: Registration Form Used by Open-End Management Investment Companies: Sample Form and instructions". U.S. Securities and Exchange Commission (SEC). Retrieved 2008-09-25.
- ↑ ೭.೦ ೭.೧ "Frequently Asked Questions About Bond Mutual Funds". Investment Company Institute. Archived from the original on 2006-06-30. Retrieved 2006-04-11.
- ↑ "U.S. Indexes: Construction & Methodology". Retrieved 2006-04-23.
- ↑ Mark Carhart (1997). "On Persistence in Mutual Fund Performance". Journal of Finance. 52 (1): 56–82.
{{cite journal}}
: Unknown parameter|month=
ignored (help) - ↑ M. Grimblatt and S. Titman (1989). "Mutual Fund Performance: an Analysis of Quarterly Portfolio Holdings". Journal of Business. 62: 393–416. doi:10.1086/296468.
- ↑ "Frequently Asked Questions About Money Market Mutual Funds". Investment Company Institute. Archived from the original on 2006-05-03. Retrieved 2006-04-11.
- ↑ ೧೨.೦ ೧೨.೧ "Hedging Your Bets: A Heads Up on Hedge Funds and Funds of Hedge Funds". U.S. Securities and Exchange Commission (SEC). Retrieved 2006-04-11.
- ↑ "SMAs beat funds in 2008". The Wall Street Times.
- ↑ "Global stock market losses total $21 trillion". Times Online. Archived from the original on 2011-06-12. Retrieved 2009-10-28.
- ↑ Christine Benz. "Which Is the Right Fund Share Class for You?". Morningstar (registration required). Retrieved 2006-04-11.[permanent dead link]
- ↑ ೧೬.೦ ೧೬.೧ Sources of Information "Invest Wisely: An Introduction to Mutual Funds". U.S. Securities and Exchange Commission (SEC). Retrieved 2006-04-11.
{{cite web}}
: Check|url=
value (help)