ಮಿರ್ಜಾನ್ ಕೋಟೆ

ರಾಣಿ ಚೆನ್ನಭೈರಾದೇವಿ ಕಟ್ಟಿಸಿದ ಕೋಟೆ
(ಮಿರ್ಜಾನ ಕೋಟೆ ಇಂದ ಪುನರ್ನಿರ್ದೇಶಿತ)

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೀರ್ಜನ್ ಎಂಬಲ್ಲಿರುವ ಮೀರ್ಜನ್ ಕೋಟೆಯು ಕುಮುಟ-ಗೋಕರ್ಣ ರಾಷ್ಟ್ರೀಯ ಹೆದ್ದಾರಿ ೬೬ (ಹಿಂದಿನ ರಾ.ಹೆ ಸಂಖ್ಯೆ ೧೭)ರಲ್ಲಿ ಗೋಕರ್ಣದಿಂದ ೯ ಕಿ.ಮೀ ದಕ್ಷಿಣಕ್ಕೆ ಹೆದ್ದಾರಿಯಿಂದ ಪಶ್ಚಿಮ ದಿಕ್ಕಿನಲ್ಲಿ ಸುಮಾರು ೦.೫ ಕಿ.ಮೀ ದೂರದಲ್ಲಿ ಅಘನಾಶಿನಿ ನದಿಯ ದಂಡೆಯ ಮೇಲೆ ನಿರ್ಮಾಣವಾಗಿದೆ.

ಮಿರ್ಜಾನ್ ಕೋಟೆ
ಉತ್ತರ ಕನ್ನಡ ಇದರ ಭಾಗ
Mirjan Fort, Uttara Kannada, Karnataka
ಶೈಲಿದಖ್ಖಣ ಮತ್ತು ಮೊಗಲ್ ವಾಸ್ತು ಶೈಲಿಗಳ ಮಿಶ್ರಣ
ಸ್ಥಳದ ಮಾಹಿತಿ
ಇವರ ಹಿಡಿತದಲ್ಲಿದೆಕರ್ನಾಟಕ ಸರ್ಕಾರ
ಇವರಿಗೆ ಮುಕ್ತವಾಗಿದೆ
 ಸಾರ್ವಜನಿಕರಿಗೆ
ವೀಕ್ಷಣೆಗೆ ತೆರೆದಿದೆ.
ಪರಿಸ್ಥಿತಿಅವಶೇಷಗಳು
ಸ್ಥಳದ ಇತಿಹಾಸ
ಕಟ್ಟಿದ್ದು16ನೆಯ ಶತಮಾನದಲ್ಲಿ ಕಟ್ಟಿದ್ದು ಮುಂದೆ 17 ನೆಯ ಶತಮಾನದಲ್ಲಿ ನವೀಕರಣಗೊಂಡಿದೆ.
ಕಟ್ಟಿದವರು ರಾಣಿ ಚನ್ನ ಬೈರಾದೇವಿ
ಸಾಮಗ್ರಿಗಳುಲ್ಯಾಟರೈಟು ಮತ್ತು ಮಣ್ಣು


ಮೀರ್ಜನ್ ಕೋಟೆಯ ಒಂದು ಬದಿನೋಟ

ಕೋಟೆಯ ನಿರ್ಮಾಣ

ಬದಲಾಯಿಸಿ

ಕರಿಮೆಣಸು(ಪೆಪ್ಪರ್) ರಾಣಿ ಎಂದೇ ಪ್ರಖ್ಯಾತಳಾಗಿರುವ ಗೇರುೊಪ್ಪೆಯ ರಾಣಿ ಚೆನ್ನಭೈರಾದೇವಿ ಈ ಕೋಟೆಯನ್ನು ೧೬೦೮-೧೬೪೦ರ ನಡುವೆ ಕಟ್ಟಿದಳು ಎಂದು ನಂಬಲಾಗಿದೆ.[]

ಕೋಟೆಯ ಲಕ್ಷಣಗಳು

ಬದಲಾಯಿಸಿ
 
ಮೀರ್ಜನ್ ಕೋಟೆಯ ನಕಾಶೆ ಫಲಕ

ಮೀರ್ಜನ್ ಕೋಟೆಯು ತನ್ನ ಅದ್ಭುತವಾದ ನಿರ್ಮಾಣ ಕೌಶಲ್ಯಕ್ಕೆ ಹೆಸರಾಗಿದೆ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಸ್ಥಿತಿಯಲ್ಲಿರುವ ಕೆಲವೆ ಕೋಟೆಗಳಲ್ಲಿ ಒಂದು. ಈ ಕೋಟೆಯು ಸುಮಾರು ೧೧.೫ ಎಕರೆಗಳಷ್ಟು ವಿಸ್ತಾರವಾಗಿದೆ ಮತ್ತು ಇದನ್ನು ನಿರ್ಮಿಸಲು ಸ್ಥಳೀಯವಾಗಿ ದೊರೆಯುವ ಕೆಂಪು ಕಲ್ಲು (ಲ್ಯಾಟರೈಟ್) ಗಳನ್ನು ಬಳಸಲಾಗಿದೆ. ಕೋಟೆಯು ನಾಲ್ಕು ದ್ವಾರಗಳನ್ನು ಹೊಂದಿದ್ದು, ಪ್ರತಿಯೊಂದು ದ್ವಾರದಲ್ಲು ಅಗಲವಾದ ಮೆಟ್ಟಿಲುಗಳಿವೆ. ಕೋಟೆಯ ಒಳಗಡೆ ಒಂದು ಮುಖ್ಯ ದ್ವಾರ, ಒಂದು ಗುಪ್ತ ದ್ವಾರ, ಒಂಬತ್ತು ಬಾವಿ, ಹಾಳು ಬಿದ್ದ ದೊಡ್ಡ ದರ್ಬಾರ್ ಹಾಲ್ ಮತ್ತು ಬಹಳ ವಿಸ್ತಾರವಾದ ಮಾರುಕಟ್ಟೆ ಜಾಗವಿದೆ. ಕೋಟೆಯ ಸುತ್ತ ೧೨ ಬುರುಜುಗಳಿವೆ.

  1. "Mirjan Fort, a delight for history buffs".


Forts of Karnataka. ()

ಈ ಟೆಂಪ್ಲೇಟ್ ಅನ್ನು ಕರ್ನಾಟಕದ ಕೋಟೆಗಳು ಲೇಖನದಲ್ಲಿ ಬಳಸಲಾಗಿದೆ.