ಮರುಬಳಕೆ
ಮರುಬಳಕೆ ಯು ಉಪಯೋಗಿಸಿದ ವಸ್ತುಗಳನ್ನು ಹೊಸ ಉತ್ಪನ್ನಗಳಾಗಿ ತಯಾರಿಸುವುದನ್ನು ಒಳಗೊಳ್ಳುತ್ತದೆ. ಆದ ಕಾರಣ ಉಪಯುಕ್ತ ವಸ್ತುಗಳು ವ್ಯರ್ಥವಾಗಿ ಹೋಗದಂತೆ ತಡೆಯಲು, ತಾಜಾ ಕಚ್ಚಾ ವಸ್ತುಗಳ ಅಪವ್ಯಯ ಮಾಡುವುದನ್ನು ಕಡಿಮೆ ಮಾಡಲು, ಇಂಧನಗಳ ಬಳಕೆ ಕಡಿಮೆ ಮಾಡಲು, ವಾಯು ಮಾಲಿನ್ಯ (ದಹನದ ಪ್ರಕ್ರಿಯೆ ಮಾಡುವುದರಿಂದ ಆಗುವ) ಮತ್ತು ಜಲಮಾಲಿನ್ಯವನ್ನು (ಭೂಮಿಯೊಳಗೆ ಬೇಡದ ವಸ್ತುಗಳನ್ನು ಹೂತುಹಾಕುವುದರಿಂದ ಆಗುವ) ಕಡಿಮೆ ಮಾಡಲು ನಡೆಸಲಾಗುತ್ತದೆ. ಇದು "ಸಾಂಪ್ರದಾಯಿಕ" ತ್ಯಾಜ್ಯ ವಿಸರ್ಜನೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಕಚ್ಚಾ ವಸ್ತುಗಳಿಂದ ತಯಾರಿಸುವುದಕ್ಕಿಂತ ಕಡಿಮೆ ಮಟ್ಟದ ಹಸಿರುಮನೆ ಅನಿಲ ಹೊರಸೂಸುವಿಕೆಗಳನ್ನು ಹೊಂದಿರುತ್ತದೆ.[೧][೨] ಮರುಬಳಕೆಯು ಆಧುನಿಕ ತ್ಯಾಜ್ಯ ಕಡಿಮೆ ಮಾಡುವುದರ ಒಂದು ಪ್ರಮುಖ ವಿಷಯವಾಗಿದೆ, ಅದಲ್ಲದೇ"ಕಡಿಮೆ ಮಾಡು, ಪುನಃಬಳಸು, ಮರುಬಳಕೆ" ಇತ್ಯಾದಿ ತ್ಯಾಜ್ಯ ಶ್ರೇಣಿ ವ್ಯವಸ್ಥೆಯ ಮೂರನೇ ಅಂಶ.
ಪುನಃ ಬಳಸಬಹುದಾದ ವಸ್ತುಗಳು ಅನೇಕ ರೀತಿಯನ್ನು ಒಳಗೊಳ್ಳುತ್ತವೆ - ಗಾಜು, ಕಾಗದ, ಲೋಹ, ಪ್ಲ್ಯಾಸ್ಟಿಕ್, ಬಟ್ಟೆ ಮತ್ತು ಇಲೆಕ್ಟ್ರಾನಿಕ್ ಸಂಬಂಧಿತ ವಸ್ತುಗಳು. ಪರಿಣಾಮದಲ್ಲಿ ಸಮಾನವಾಗಿದ್ದರೂ, ಆಹಾರ ಅಥವಾ ತೋಟದ ತ್ಯಾಜ್ಯದಂತಹ ಜೈವಿಕ ವಿಘಟನೀಯ ತ್ಯಾಜ್ಯಗಳ ಮರುಬಳಕೆಯನ್ನು ಅಥವಾ ಮಿಶ್ರ ಗೊಬ್ಬರ ತಯಾರಿಸುವುದನ್ನು ಮರುಬಳಕೆ ಎಂದು ಪರಿಗಣಿಸಲಾಗುವುದಿಲ್ಲ.[೨] ಮರುಬಳಕೆ ಕ್ರಿಯೆಗೆ ಒಳಪಡಿಸುವ ವಸ್ತುಗಳನ್ನು ಸಂಗ್ರಹ ಕೇಂದ್ರಕ್ಕೆ ತರಲಾಗುತ್ತದೆ, ಅಥವಾ ರಸ್ತೆ ಬದಿಯಿಂದ ಆರಿಸಲಾಗುತ್ತದೆ. ಅದನ್ನು ನಂತರ ವಿಂಗಡಿಸಿ, ಶುದ್ಧಗೊಳಿಸಿ, ಹೊಸ ವಸ್ತುಗಳಾಗಿ ಪುನಃಸಂಸ್ಕರಿಸಲಾಗುತ್ತದೆ.
ವಸ್ತುಗಳ ಮರುಬಳಕೆಯು ಅದೇ ವಸ್ತುವಿನ ತಾಜಾ ಪೂರೈಕೆಯನ್ನು ಉತ್ಪತ್ತಿ ಮಾಡುತ್ತದೆ. ಉದಾಹರಣೆಗಾಗಿ ಬಳಕೆ ಮಾಡಿದ ಕಛೇರಿ ಕಾಗದವು ಇನ್ನಷ್ಟು ಕಛೇರಿ ಕಾಗದವನ್ನು ಅಥವಾ ಉಪಯೋಗಿಸಿದ ನೊರೆ ಪಾಲಿಸ್ಟೈರೀನ್ ಮತ್ತಷ್ಟು ಪಾಲಿಸ್ಟೈರೀನ್ಅನ್ನು ನೀಡುತ್ತದೆ. ಆದರೆ ಇದು ತುಂಬಾ ಕಷ್ಟಕರವಾದುದು, ಅಥವಾ ತೀರ ದುಬಾರಿಯಾದುದು (ಅದೇ ಉತ್ಪನ್ನವನ್ನು ಕಚ್ಚಾ ವಸ್ತುಗಳಿಂದ ಅಥವಾ ಇತರ ಮೂಲಗಳಿಂದ ಉತ್ಪತ್ತಿ ಮಾಡುವುದಕ್ಕೆ ಹೋಲಿಸಿದರೆ). ಆದ್ದರಿಂದ ಇದರ ಬದಲಿಗೆ ಹೆಚ್ಚಿನ ಉತ್ಪನ್ನಗಳ ಅಥವಾ ವಸ್ತುಗಳ "ಪುನಃ ಉಪಯೋಗಿಸುವಿಕೆ" ಕ್ರಿಯೆಯಿಂದ ಬೇರೆಯೇ ವಸ್ತುಗಳನ್ನು (ಉದಾ. ಕಾಗದ ಹಲಗೆ) ಉತ್ಪಾದಿಸಿ, ಅವುಗಳನ್ನು ಮರುಬಳಕೆ ಮಾಡಲಾಗುತ್ತದೆ. ಮತ್ತೊಂದು ರೀತಿಯ ಮರುಬಳಕೆಯೆಂದರೆ ಪುನರ್ಬಳಕೆ ಎನ್ನುವುದು ವಸ್ತುಗಳನ್ನು ಉಳಿಸುವುದು(ರಕ್ಷಿಸುವುದು) , ಅವುಗಳ ನೈಜ ಮೌಲ್ಯದಿಂದ (ಉದಾ. ಕಾರು ಬ್ಯಾಟರಿಗಳಿಂದ ಸತುವನ್ನು ಅಥವಾ ಕಂಪ್ಯೂಟರ್ ಭಾಗಗಳಿಂದ ಚಿನ್ನವನ್ನು) ಅಥವಾ ಅವುಗಳ ಅಪಾಯಕರ ಗುಣದಿಂದ (ಉದಾ. ಅನೇಕ ವಸ್ತುಗಳಿಂದ ಪಾದರಸದ ತೆಗೆಯುವಿಕೆ ಮತ್ತು ಮರುಬಳಕೆ).
ವಿಮರ್ಶಕರು ಮರುಬಳಕೆಯಿಂದಾಗುವ ಒಟ್ಟು ಆರ್ಥಿಕ ಮತ್ತು ನೈಸರ್ಗಿಕ ಪ್ರಯೋಜನಗಳನ್ನು ಅದಕ್ಕೆ ವ್ಯಯವಾಗುವ ವೆಚ್ಚ್ಕಕ್ಕೆ ಹೋಲಿಸಿ ಖಂಡಿಸುತ್ತಾರೆ. ಅದಲ್ಲದೇ ಮರುಬಳಕೆ ಕ್ರಿಯೆಯು ಹೆಚ್ಚಾಗಿ ಉತ್ಪನ್ನಗಳನ್ನು ಕೆಲವೊಮ್ಮೆ ಕಳಪೆಯಾಗಿ ಉತ್ಪತ್ತಿ ಮಾಡುತ್ತದೆ. ಇದರಿಂದಾಗಿ ಗುಣಮಟ್ಟ ಅಥವಾ ದೃಢೀಕರಣ ಫಲಪ್ರಮಾದಕ್ಕೆ ಗುರಿಯಾಗುತ್ತದೆ. ನಿರ್ದಿಷ್ಟವಾಗಿ ವಿಮರ್ಶಕರು, ಸಂಗ್ರಹ ಮತ್ತು ಸಾಗಣೆಗೆ ಖರ್ಚಾದ ಹಣ ಮತ್ತು ಇಂಧನವು ಉತ್ಪನ್ನ ಕ್ರಿಯೆಯಲ್ಲಿ ಉಳಿತಾಯ ಮಾಡಿದ ಬೆಲೆ ಮತ್ತು ಇಂಧನವನ್ನು ಕಡಿಮೆ ಮಾಡುತ್ತದೆ;(ಮೀರಿಸುತ್ತದೆ) ಎಂದು ವಾದಿಸುತ್ತಾರೆ; ಮರುಬಳಕೆ ಉದ್ಯಮದಿಂದ ಒದಗಿಸಲ್ಪಟ್ಟ ಉದ್ಯೋಗಗಳು ಕಾಡಿನಿಂದ ತಂದ ಮರಗಳನ್ನು ಕತ್ತರಿಸಿ ಬಳಕೆಗೆ ತರುವುದು(ಲಾಗಿಂಗ್), ಗಣಿಗಾರಿಕೆ ಮತ್ತು ಕಚ್ಚಾ ಉತ್ಪಾದನೆಗೆ ಸಂಬಂಧಿತ ಇತರ ಉದ್ಯಮಗಳಿಂದ ಕಳೆದುಕೊಂಡ ಉದ್ಯೋಗಳಿಗಿಂತ ಕಡಿಮೆ ಮಟ್ಟದ್ದಾಗಿದೆ; ಕಾಗದದಂತಹ ವಸ್ತುಗಳನ್ನು ಕೆಲವು ಬಾರಿ, ಆ ವಸ್ತುವಿನ ಸರಳ ಸಂಯುಕ್ತಗಳಾಗಿ ಒಡೆಯುವ ಕ್ರಿಯೆಯು ಮುಂದಿನ ಮರುಬಳಕೆ ಮಾಡುವುದನ್ನು ತಡೆಯುವವರೆಗೆ ಮಾತ್ರ ಮರುಬಳಕೆ ಮಾಡಬಹುದು. ಮರುಬಳಕೆಯ ಸೂಚನೆಯು ಈ ದೂರುಗಳನ್ನು ಅಲ್ಲಗಳೆಯುತ್ತದೆ. ಈ ವಾದಗಳ ಅಂಗೀಕಾರಾರ್ಹತೆಯು ಎರಡೂ ಕಡೆಗಳಿಂದಲೂ ವಿವಾದವನ್ನು ಮುಂದುವರೆಸುವಂತೆ ಮಾಡಿದೆ.
ಈ ಪುಟ ಓದಬೇಡಿ
ಇತಿಹಾಸ
ಬದಲಾಯಿಸಿಆರಂಭಿಕ ಮರುಬಳಕೆ
ಬದಲಾಯಿಸಿಮರುಬಳಕೆಯು ಮಾನವ ಇತಿಹಾಸದಲ್ಲಿ ಸಾಮಾನ್ಯ ಅಭ್ಯಾಸವಾಗಿದೆ. ಬಹುಹಿಂದಿನಿಂದ ಕ್ರಿ.ಶ 400ರಲ್ಲಿನ ಪ್ಲೇಟೊನ ಕಾಲದಿಂದಲೇ ಈ ವಿಷಯ ದಾಖಲಾಗಿದೆ. ಸಂಪನ್ಮೂಲಗಳು ದುರ್ಲಭವಾಗಿದ್ದಾಗ, ಪುರಾತತ್ವ ಶಾಸ್ತ್ರದ ಅಧ್ಯಯನಗಳು ಪ್ರಾಚೀನ ಕಾಲದ ತ್ಯಾಜ್ಯ ರಾಶಿಗಳು ಕಡಿಮೆ ಮಟ್ಟದ ಮನೆಯ ತ್ಯಾಜ್ಯಗಳನ್ನು (ಬೂದಿ, ಒಡೆದ ಪರಿಕರಗಳು ಮತ್ತು ಮಡಿಕೆಯಂತಹ) ಹೊಂದಿದ್ದವೆಂದು ತೋರಿಸುತ್ತವೆ. ಇದರಿಂದ ಹೊಸ ವಸ್ತುಗಳಿರದಿದ್ದಾಗ ಹೆಚ್ಚಿನ ತ್ಯಾಜ್ಯ ವಸ್ತುಗಳನ್ನು ಮರುಬಳಕೆ ಮಾಡಲಾಗುತ್ತಿತ್ತು ಎಂಬುದು ತಿಳಿಯುತ್ತದೆ.[೩]
ಕೈಗಾರಿಕಾಭಿವೃದ್ಧಿಯಾಗುವುದಕ್ಕಿಂತ ಹಿಂದಿನ ಕಾಲದಲ್ಲಿ, ಯುರೋಪ್‌ನಲ್ಲಿ ಕಂಚಿನ ಚೂರುಗಳನ್ನು ಮತ್ತು ಇತರ ಲೋಹಗಳನ್ನು ಸಂಗ್ರಹಿಸಿ, ಸಾರ್ವಕಾಲಿಕ ಮರುಬಳಕೆಗಾಗಿ ಕರಗಿಸಲಾಗುತ್ತಿತ್ತು ಎಂಬುದಕ್ಕೆ ಸಾಕ್ಷ್ಯಾಧಾರವಿದೆ.[೪] ಬ್ರಿಟನ್‌ನಲ್ಲಿ ಮರದ ಕಸ ಮತ್ತು ಬೂದಿಯನ್ನು ಹಾಗೂ ಕಲ್ಲಿದ್ದಲು ಇದ್ದಿಲುಗಳನ್ನು 'ಕಸತೆಗೆಯುವವರು' ಸಂಗ್ರಹಿಸುತ್ತಿದ್ದರು. ನಂತರ ಇವುಗಳನ್ನು ಇಟ್ಟಿಗೆ ತಯಾರಿಸುವುಲ್ಲಿ ಆಧಾರ ವಸ್ತುವಾಗಿ ಪುನಃಬಳಸಲಾಗುತ್ತಿತ್ತು. ಈ ರೀತಿಯ ಮರುಬಳಕೆಯ ಪ್ರಮುಖ ಚಾಲಕವೆಂದರೆ, ಕಚ್ಚಾ ವಸ್ತುಗಳನ್ನು ಪಡೆಯುವ ಬದಲಿಗೆ ಮರುಬಳಕೆಯ ಪೂರಕ ಸಾಮಾಗ್ರಿಗಳನ್ನು ಹೊಂದುವುದರಿಂದ ಆಗುವ ಆರ್ಥಿಕ ಪ್ರಯೋಜನ ಹಾಗೂ ಅಧಿಕ ಜನರಿರುವ ಪ್ರದೇಶಗಳ ಸಾರ್ವಜನಿಕ ತ್ಯಾಜ್ಯವನ್ನು ತೆಗೆಯುವವರ ಅಭಾವ.[೩] 1813ರಲ್ಲಿ ಬೆಂಜಮಿನ್ ಲಾ ಯಾರ್ಕ್‌ಶೈರ್ನ ಬ್ಯಾಟ್ಲಿಯಲ್ಲಿ ಚಿಂದಿಯನ್ನು 'ಕಳಪೆ' ಮತ್ತು 'ಕಡಿಮೆ ಗುಣಮಟ್ಟದ' ಉಣ್ಣೆಯನ್ನಾಗಿ ಪರಿವರ್ತಿಸುವ ಕ್ರಿಯೆಯನ್ನು ಅಭಿವೃದ್ಧಿಪಡಿಸಿದನು. ಈ ಕ್ರಿಯೆಯು ಮರುಬಳಕೆಯ ನೂಲುಗಳನ್ನು ಕಚ್ಚಾ ಉಣ್ಣೆಯೊಂದಿಗೆ ಒಂದುಗೂಡಿಸಿತು. ಪಶ್ಚಿಮ ಯಾರ್ಕ್‌ಶೈರ್‌ನ ಕಳಪೆ ಬಟ್ಟೆಯ ಕೈಗಾರಿಕೆಯು, ಬ್ಯಾಟ್ಲಿ ಮತ್ತು ಡ್ಯೂಸ್‌ಬರಿಯಂತಹ ನಗರಗಳಲ್ಲಿ 19ನೇ ಶತಮಾನದಿಂದ ಮೊದಲ ಪ್ರಪಂಚ ಯುದ್ಧದವರೆಗೆ ಅಸ್ತಿತ್ವದಲ್ಲಿತ್ತು.
ಯುದ್ಧದ ಸಂದರ್ಭದ ಮರುಬಳಕೆ
ಬದಲಾಯಿಸಿಪ್ರಪಂಚ ಯುದ್ಧಗಳು ಮತ್ತು ಅದೇ ರೀತಿಯ ಇತರ ಪ್ರಪಂಚ-ಬದಲಾಯಿಸುವ ಘಟನೆಗಳು ಅತಿಹೆಚ್ಚಿನ ಪ್ರಮಾಣದಲ್ಲಿ ಮರುಬಳಕೆಯನ್ನು ಪ್ರೋತ್ಸಾಹಿಸಿದವು.[೫] ಪ್ರಪಂಚ ಯುದ್ಧ IIರ ಸಂದರ್ಭದಲ್ಲಿ ಯುದ್ಧದಲ್ಲಿ ಭಾಗವಹಿಸಿದ ಎಲ್ಲಾ ರಾಷ್ಟ್ರಗಳಲ್ಲಿ ಸರಕಾರ ಪ್ರೇರಿತ ಭಾರಿ ಕಾರ್ಯಾಚರಣೆಗಳು ನಡೆದವು. ಇವು ಲೋಹಗಳನ್ನು ಮತ್ತು ರಕ್ಷಿಸಿಟ್ಟ ನಾರುಪದಾರ್ಥಗಳನ್ನು ದೇಶಭಕ್ತಿಯ ಸಂಕೇತವಾಗಿ ನೀಡಬೇಕೆಂದು ನಾಗರಿಕರನ್ನು ಪ್ರಚೋದಿಸಿದವು. ಯುದ್ಧದ ಕಾಲದಲ್ಲಿ ಸ್ಥಾಪಿಸಲ್ಪಟ್ಟ ಸಂಪನ್ಮೂಲ ರಕ್ಷಣಾ ಯೋಜನೆಗಳು ಜಪಾನ್ ಮೊದಲಾದ ಕೆಲವು ರಾಷ್ಟ್ರಗಳಲ್ಲಿ ಯುದ್ಧ ಕೊನೆಗೊಂಡ ನಂತರ ನೈಸರ್ಗಿಕ ಸಂಪನ್ಮೂಲಗಳು ಹೇರಳವಾಗಿಲ್ಲದೆ ಮುಂದುವರಿದವು.
ಯುದ್ಧ-ನಂತರದ ಮರುಬಳಕೆ
ಬದಲಾಯಿಸಿಮುಂದಿನ ಮರುಬಳಕೆಯಲ್ಲಿನ ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆಯು 1970ರ ದಶಕದಲ್ಲಿ ಇಂಧನ ಬೆಲೆಗಳು ಹೆಚ್ಚಿದ್ದರಿಂದ ಕಂಡುಬಂದಿತು. ಅಲ್ಯೂಮಿನಿಯಂನ ಮರುಬಳಕೆಯು ಕಚ್ಚಾ ಉತ್ಪತ್ತಿಗೆ ಬೇಕಾಗುವ ಇಂಧನದ ಕೇವಲ 5%ನಷ್ಟನ್ನು ಮಾತ್ರ ಬಳಸಿಕೊಳ್ಳುತ್ತದೆ; ಮರುಬಳಕೆಗೊಳಿಸಿದ ಪೂರಕ ಸಾಮಗ್ರಿಯನ್ನು ಬಳಸಿದಾಗ ಗಾಜು, ಕಾಗದ ಮತ್ತು ಲೋಹಗಳು ಕಡಿಮೆ ಪರಿಣಾಮಕಾರಿ ಹೆಚ್ಚು ಗಮನಾರ್ಹ ಇಂಧನ ಉಳಿಕೆಯನ್ನು ಹೊಂದಿರುತ್ತವೆ.[೬]
ನ್ಯೂಜೆರ್ಸಿಯ ವುಡ್‌ಬರಿಯು ಸಂಪೂರ್ಣ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮರುಬಳಕೆಯನ್ನು ನಿರ್ದೇಶಿಸಿದ ಮೊದಲ ನಗರ.[೭] 1970ರ ಆರಂಭದಲ್ಲಿ ರೋಸ್ ರೋವನ್[೮] ಕಸ ಮತ್ತು ಮರುಬಳಕೆ ಮಾಡಬಹುದಾದ, ವಸ್ತುಗಳ ಸಂಗ್ರಹವನ್ನು ಸಕ್ರಿಯಗೊಳಿಸುವ ತ್ಯಾಜ್ಯ ನಿರ್ವಹಣೆಯ ಉದ್ದೇಶವನ್ನು ಹೊಂದಿರುವ "ಮರುಬಳಕೆ"ಯ ಯೋಜನೆ ಮಾಡಿದನು. ಇದನ್ನು ಅತಿಶೀಘ್ರದಲ್ಲಿ ಇತರ ಪಟ್ಟಣಗಳು ಮತ್ತು ನಗರಗಳು ಅನುಸರಿಸಿದವು. ಇಂದು U.S.ನ ಹೆಚ್ಚಿನ ನಗರಗಳು ಮರುಬಳಕೆಯನ್ನು ಒಂದು ಅವಶ್ಯಕತೆಯಾಗಿ ಮಾಡಿಕೊಂಡಿವೆ.
ಕಳೆದ 1987ರಲ್ಲಿ ಮೋಬ್ರೊ 4000 ಸರಕು-ದೋಣಿಯು ತ್ಯಾಜ್ಯವನ್ನು ನ್ಯೂಯಾರ್ಕ್‌ನಿಂದ ಉತ್ತರ ಕ್ಯಾರೊಲಿನಗೆ ಸಾಗಿಸಿತು; ಅಲ್ಲಿ ಅದನ್ನು ನಿರಾಕರಿಸಲಾಯಿತು. ನಂತರ ಅದನ್ನು ಬೆಲಿಜ್‌ಗೆ ಒಯ್ಯಲಾಯಿತು; ಅಲ್ಲಿಯೂ ಅದಕ್ಕೆ ಪ್ರವೇಶ ಅವಕಾಶ ಸಿಗಲಿಲ್ಲ. ಅಂತಿಮವಾಗಿ ಆ ಸರಕು-ದೋಣಿಯು ನ್ಯೂಯಾರ್ಕ್‌ಗೇ ಹಿಂದಿರುಗಿತು; ಅಲ್ಲದೇ ಅಲ್ಲೇ ತ್ಯಾಜ್ಯವನ್ನು ಸುಟ್ಟುಹಾಕಲಾಯಿತು. ಈ ಘಟನೆಯು ಮಾಧ್ಯಮದಲ್ಲಿ ತ್ಯಾಜ್ಯ ಹೊರಹಾಕುವಿಕೆ ಮತ್ತು ಮರುಬಳಕೆಯ ಬಗೆಗಿನ ಚರ್ಚೆಗಳ ಬಿಸಿ ಏರಿಕೆಗೆ ಕಾರಣವಾಯಿತು. ಈ ಘಟನೆಯನ್ನು 1990ರ ದಶಕದ ಮರುಬಳಕೆಯ "ತೀವ್ರತೆ"ಯನ್ನು ಹೆಚ್ಚು ಕಾವೇರಿಸಿದ ಅಂಶವೆಂದು ನಿರೂಪಿಸಲಾಗುತ್ತದೆ.[೪]
ಶಾಸನ ರಚನೆ
ಬದಲಾಯಿಸಿಪೂರೈಕೆ
ಬದಲಾಯಿಸಿಮರುಬಳಕೆ ಯೋಜನೆಯು ಕೆಲಸ ಮಾಡಲು ಪುನಃಬಳಸಬಹುದಾದ ವಸ್ತುಗಳ ಅತಿದೊಡ್ಡ ಪ್ರಮಾಣದ, ಸ್ಥಿರ ಪೂರೈಕೆಯು ಬಹುಮುಖ್ಯ. ಅಂತಹ ಪೂರೈಕೆಯನ್ನು ಒದಗಿಸಲು ಮೂರು ಶಾಸನ ರಚನೆಯ ಆಯ್ಕೆಗಳನ್ನು ಬಳಸಿಕೊಳ್ಳಲಾಗುತ್ತದೆ: ಕಡ್ಡಾಯವಾದ ಮರುಬಳಕೆ ಸಂಗ್ರಹ, ವಸ್ತುಗಳನ್ನು ಒಟ್ಟುಗೂಡಿಸುವ ಶಾಸನ, ಮತ್ತು ತ್ಯಾಜ್ಯ ನಿಷೇಧ. ಕಡ್ಡಾಯವಾದ ಸಂಗ್ರಹ ಕಾನೂನುಗಳು ನಗರದ ತ್ಯಾಜ್ಯದಿಂದ ನಿಗದಿತ ದಿನಾಂಕದೊಳಗೆ ಕೆಲವು ವಸ್ತುಗಳನ್ನು ಹೊರತೆಗೆಯಬೇಕು ಎಂಬ ರೀತಿಯಲ್ಲಿ ನಗರಗಳಿಗೆ ಮರುಬಳಕೆ ಗುರಿಗಳನ್ನು ಗೊತ್ತುಪಡಿಸುತ್ತವೆ. ನಗರವು ನಂತರ ಈ ಗುರಿಯನ್ನು ಸಾಧಿಸುವುದಕ್ಕಾಗಿ ಕೆಲಸ ಮಾಡಲು ಜವಾಬ್ದಾರಿಯಾಗಿರುತ್ತದೆ.[೨]
ವಸ್ತುಗಳನ್ನು ಒಟ್ಟುಗೂಡಿಸುವ ಶಾಸನವು, ಗಾಜು, ಪ್ಲ್ಯಾಸ್ಟಿಕ್ ಮತ್ತು ಲೋಹದಂತಹ ಕೆಲವು ವಸ್ತುಗಳನ್ನು ಹಿಂದಿರುಗಿಸಿದುದಕ್ಕೆ ಮರುಪಾವತಿ ಮಾಡುವುದನ್ನು ಒಳಗೊಳ್ಳುತ್ತದೆ. ಅಂತಹ ವಸ್ತುವಿನಲ್ಲಿ ಒಂದು ಉತ್ಪನ್ನವನ್ನು ಕೊಂಡುಕೊಂಡರೆ, ಮೂಲ ದರಕ್ಕೆ ಒಂದು ಸಣ್ಣ ಅಧಿಕ-ಬೆಲೆಯನ್ನು ಸೇರಿಸಲಾಗುತ್ತದೆ. ಗ್ರಾಹಕರು ಆ ವಸ್ತುವನ್ನು ಸಂಗ್ರಹ ಕೇಂದ್ರಕ್ಕೆ ಹಿಂದಿರುಗಿಸಿದರೆ ಈ ಅಧಿಕ-ಬೆಲೆಯನ್ನು ಅವರಿಗೆ ವಾಪಸು ನೀಡಲಾಗುತ್ತದೆ. ಈ ಯೋಜನೆಗಳು 80%ನಷ್ಟು ಮರುಬಳಕೆ ದರದೊಂದಿಗೆ ತುಂಬಾ ಯಶಸ್ವಿಯಾದವು. ಅಷ್ಟೊಂದು ಉತ್ತಮ ಫಲಿತಾಂಶಗಳಿದ್ದರೂ, ಸಂಗ್ರಹ ದರಗಳು ಸ್ಥಳೀಯ ಸರಕಾರದಿಂದ ಉದ್ಯಮವಾಗಿ ಬದಲಾವಣೆಗೊಂಡವು. ಅದಲ್ಲದೇ ಕೆಲವು ಪ್ರದೇಶಗಳಲ್ಲಿ ಗ್ರಾಹಕರು ಅಂತಹ ಯೋಜನೆಗಳ ರಚನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.[೨]
ಮರುಬಳಸಬಹುದಾದ ವಸ್ತುಗಳ ಪೂರೈಕೆಯನ್ನು ಹೆಚ್ಚಿಸುವ ಮೂರನೇ ವಿಧಾನವೆಂದರೆ ಬಳಸಿದ ಎಣ್ಣೆ, ಹಳೆಯ ಬ್ಯಾಟರಿಗಳು, ಟೈರುಗಳು ಮತ್ತು ತೋಟದ ತ್ಯಾಜ್ಯದಂತಹ ಕೆಲವು ವಸ್ತುಗಳನ್ನು ಹೊರಗೆ ಎಸೆಯುವುದನ್ನು ನಿಷೇಧಿಸುವುದು. ನಿಷೇಧಿಸಿದ ವಸ್ತುಗಳನ್ನು ವ್ಯವಸ್ಥಿತವಾಗಿ ಹೊರಹಾಕುವುದಕ್ಕೆ ಮಿತವ್ಯಯದ ವ್ಯವಸ್ಥೆಯನ್ನು ರಚಿಸುವುದು , ಈ ವಿಧಾನದ ಒಂದು ಗುರಿ. ಈ ಮರುಬಳಕೆ ಸೇವೆಗಳು ಸಾಕಷ್ಟು ಅಸ್ತಿತ್ವದಲ್ಲಿರುವಂತೆ ಅಥವಾ ಅಂತಹ ನಿಷೇಧಗಳು ಅಕ್ರಮವಾಗಿ ರಾಶಿಹಾಕುವುದಕ್ಕೆ ಕಾರಣವಾಗದಂತೆ ಜಾಗೃತೆ ವಹಿಸಬೇಕು.[೨]
ಸರಕಾರ-ಆದೇಶಿತ ಕಡ್ಡಾಯದ ಬೇಡಿಕೆ
ಬದಲಾಯಿಸಿಶಾಸನವನ್ನು ಮರುಬಳಕೆಯ ವಸ್ತುಗಳ ಬೇಡಿಕೆಯನ್ನು ಹೆಚ್ಚಿಸಲು ಮತ್ತು ನಿರ್ವಹಿಸಲೂ ಬಳಸಲಾಗುತ್ತದೆ. ಅಂತಹ ಶಾಸನಗಳ ನಾಲ್ಕು ವಿಧಾನಗಳೆಂದರೆ: ಕನಿಷ್ಠ ಮರುಬಳಕೆಯ-ವಸ್ತುಗಳ ಆದೇಶಗಳು, ಬಳಕೆಯ ದರಗಳು, ಗಳಿಸುವ ನಿಯಮಗಳು, ಮರುಬಳಕೆಯ ಉತ್ಪನ್ನಕ್ಕೆ ಗುರುತು ಪಟ್ಟಿ ಅಂಟಿಸುವುದು.[೨]
ಕನಿಷ್ಠ ಮರುಬಳಕೆಯ-ವಸ್ತುಗಳ ಆದೇಶಗಳು ಮತ್ತು ಬಳಕೆಯ ದರಗಳೆರಡೂ ತಯಾರಕರಿಗೆ ಅವರ ಕಾರ್ಯಾಚರಣೆಯಲ್ಲಿ ಮರುಬಳಕೆಯನ್ನೂ ಸೇರಿಸುವಂತೆ ಒತ್ತಾಯಪಡಿಸುವ ಮೂಲಕ ನೇರವಾಗಿ ಬೇಡಿಕೆಯನ್ನು ಹೆಚ್ಚಿಸುತ್ತವೆ. ಹೊಸ ಉತ್ಪನ್ನವು ಸ್ವಲ್ಪ ಮಟ್ಟಿಗೆ ಮರುಬಳಕೆಯ ಅಂಶವನ್ನು ಹೊಂದಿರಬೇಕೆಂದು ವಸ್ತುಗಳ ಆದೇಶಗಳು ಸೂಚಿಸುತ್ತವೆ. ಬಳಕೆಯ ದರಗಳು ಹೆಚ್ಚು ಹೊಂದಿಕೊಳ್ಳುವ ಆಯ್ಕೆಯಾಗಿದೆ: ಉದ್ಯಮಗಳಿಗೆ ಅವುಗಳ ಕಾರ್ಯದ ಯಾವುದೇ ಹಂತದಲ್ಲಿ ಮರುಬಳಕೆ ಗುರಿಗಳನ್ನು ತಲುಪಲು ಅಥವಾ ಒಪ್ಪಂದದ ಮರುಬಳಕೆಗೆ ವ್ಯಾಪಾರಸಾಧ್ಯ, ಎಂಬ ಉದ್ದೇಶದಿಂದ ವಿನಿಮಯ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ಈ ಎರಡೂ ವಿಧಾನಗಳ ವಿರೋಧಿಗಳು, ಈ ಉದ್ಯಮವು ಪ್ರಭಾವ ಬೀರುವ ಅವಶ್ಯಕತೆಗಳು ಹೆಚ್ಚಾಗುತ್ತವೆ, ಎಂದು ಸೂಚಿಸುತ್ತಾರೆ. ಅಲ್ಲದೇ ಅವಶ್ಯಕ ಹೊಂದಿಕೊಳ್ಳುವ ಉದ್ಯಮವನ್ನು ಅವು ದೋಚುತ್ತವೆ ಎಂದೂ ದೂರುತ್ತಾರೆ.[೨][೯]
ಸರಕಾರಗಳು ಮರುಬಳಕೆಯ ಬೇಡಿಕೆಯನ್ನು ಹೆಚ್ಚಿಸಲು ತಮ್ಮದೇ ಆದ ಖರೀದಿಸುವ ಶಕ್ತಿಯನ್ನು ಬಳಸಿಕೊಂಡಿವೆ. ಇದನ್ನೇ "ಗಳಿಸುವ ನಿಯಮಗಳು" ಎಂದು ಕರೆಯಲಾಗುತ್ತದೆ. ಈ ನಿಯಮಗಳು "ಮೀಸಲಿಡುವವುಗಳಾಗಿರಬಹುದು" - ಇವು ಖರ್ಚಿನ ಸ್ವಲ್ಪ ಪ್ರಮಾಣವನ್ನು ಮರುಬಳಕೆಯ ಉತ್ಪನ್ನಗಳಿಗಾಗಿ ಮಾತ್ರ ಮೀಸಲಿಡುತ್ತವೆ, ಅಥವಾ "ದರ ರಿಯಾಯಿತಿ"ಯ ಯೋಜನೆಗಳು - ಇವು ಮರುಬಳಕೆಯ ವಸ್ತುಗಳನ್ನು ಖರೀದಿಸಿದಾಗ ಹೆಚ್ಚಿನ ಹಣವನ್ನು ಒದಗಿಸುತ್ತವೆ. ಹೆಚ್ಚುವರಿ ನಿಬಂಧನೆಗಳು ನಿರ್ದಿಷ್ಟ ಸಂದರ್ಭಗಳನ್ನು ನಿರ್ದೇಶಿಸಬಹುದು: ಉದಾಹರಣೆಗಾಗಿ, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಎನ್ವೈರ್ನ್‌ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯು ತೈಲ, ಕಾಗದ, ಟೈರು ಮತ್ತು ಕಟ್ಟಡದ ಬೇರ್ಪಡಿಕೆಗಳನ್ನು ಸಾಧ್ಯವಾದಷ್ಟು ಮರುಬಳಕೆಯ ಅಥವಾ ಸಂಸ್ಕರಿಸಿದ ಮೂಲಗಳಿಂದಲೇ ಖರೀದಿಸಬೇಕೆಂದು ಆದೇಶಿಸುತ್ತದೆ.[೨]
ಬೇಡಿಕೆಯನ್ನು ಹೆಚ್ಚಿಸುವ ಬಗೆಗಿನ ಸರಕಾರದ ಅಂತಿಮ ನಿಯಮವೆಂದರೆ, ಮರುಬಳಕೆಯ ಉತ್ಪನಕ್ಕೆ ಗುರುತು ಪಟ್ಟಿ ಅಂಟಿಸುವುದು. ಉತ್ಪಾದಕರು ಅವರ ಮರುಬಳಕೆಯ ವಸ್ತುಗಳಿಗೆ ಗುರುತು ಪಟ್ಟಿ ಅಂಟಿಸುವಾಗ ಗ್ರಾಹಕರಿಗೆ ಹೆಚ್ಚಾಗಿ ಉತ್ತಮವಾದುದನ್ನು ಆರಿಸಲು ಸಾಧ್ಯವಾಗುವಂತೆ ಮಾಡಬೇಕು. ಇದರಿಂದ ಸಾಕಷ್ಟು ಖರೀದಿಸುವ ಶಕ್ತಿಯನ್ನು ಹೊಂದಿರುವ ಗ್ರಾಹಕರು, ಹೆಚ್ಚು ನೈಸರ್ಗಿಕ ಪ್ರಜ್ಞೆಯುಳ್ಳ ಉತ್ಪನ್ನಗಳನ್ನು ಆರಿಸಬಹುದು. ಇದು ಉತ್ಪಾದಕರನ್ನು ಅವರ ಉತ್ಪನ್ನಗಳಲ್ಲಿ ಮರುಬಳಕೆಯ ವಸ್ತುಗಳ ಪ್ರಮಾಣವನ್ನು ಹೆಚ್ಚಿಸುವಂತೆ ಉತ್ತೇಜಿಸುತ್ತದೆ. ಅದು ನೇರವಾಗಿ ಬೇಡಿಕೆಯನ್ನೂ ವರ್ಧಿಸುತ್ತದೆ. ಗುರುತುಪಟ್ಟಿ ಅಂಟಿಸುವ ಕ್ರಿಯೆಯು ಉತ್ಪನ್ನವನ್ನು ಹೇಗೆ ಮತ್ತು ಎಲ್ಲಿ ಮರುಬಳಕೆ ಮಾಡಲಾಗಿದೆ; ಎಂಬ ಮಾಹಿತಿಯನ್ನು ಹೊಂದಿದ್ದರೆ, ಪ್ರಮಾಣಿತ ಮರುಬಳಕೆ ಉತ್ಪನ್ನಗಳ ಗುರುತುಪಟ್ಟಿ ಅಂಟಿಸುವುದೂ ಸಹ ಪುನಃಉಪಯೋಗಿಸುವ ವಸ್ತುಗಳ ಪೂರೈಕೆಯ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು.[೨]
ಕಾರ್ಯವಿಧಾನ
ಬದಲಾಯಿಸಿಸಂಗ್ರಹ
ಬದಲಾಯಿಸಿಸಾಮಾನ್ಯ ತ್ಯಾಜ್ಯ ರಾಶಿಯಿಂದ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಸಂಗ್ರಹಿಸಲು ಅನೇಕ ರೀತಿಯ ವ್ಯವಸ್ಥೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ಈ ವ್ಯವಸ್ಥೆಗಳು ಲೋಕೋಪಯೋಗಿ ಹಾಗು ಸರಕಾರದ ಸುಗಮತೆ ಮತ್ತು ಖರ್ಚಿನ ನಡುವಿನ ವಿನಿಮಯದ ಆಧಾರದ ಮೇಲೆ ನೆಲೆಸಿವೆ. ಸಂಗ್ರಹದ ಮೂರು ಪ್ರಮುಖ ವರ್ಗಗಳೆಂದರೆ - "ಕಸ ಸಂಗ್ರಹದ ಕೇಂದ್ರಗಳು", "ವಾಪಸು-ಕೊಂಡುಕೊಳ್ಳುವ ಕೇಂದ್ರಗಳು" ಮತ್ತು "ರಸ್ತೆ ಬದಿಯ ಸಂಗ್ರಹ".[೨]
ಕಸ ಸಂಗ್ರಹ ಕೇಂದ್ರಗಳು ತ್ಯಾಜ್ಯ ಉತ್ಪಾದಕರು ಮರುಬಳಕೆಯ ವಸ್ತುಗಳನ್ನು ಕೇಂದ್ರ ಸ್ಥಳಕ್ಕೆ, ನೆಲೆಯಾದ ಅಥವಾ ಸಂಚಾರಿ ಸಂಗ್ರಹ-ಸ್ಥಾನಕ್ಕೆ ಅಥವಾ ಪುನಸ್ಸಂಸ್ಕರಿಸುವ ಘಟಕಕ್ಕೆ, ತೆಗೆದುಕೊಂಡು ಬರುವಂತೆ ನೋಡಿಕೊಳ್ಳುತ್ತವೆ. ಅದು ಸುಲಭ ರೀತಿಯ ಸಂಗ್ರಹ ಕಾರ್ಯವಾಗಿದೆ. ಆದರೆ ಕಡಿಮೆ ಮತ್ತು ಊಹಿಸಲಾಗದ ಪ್ರಮಾಣವನ್ನು ಮಾತ್ರ ಹೇಳಲಾಗದೆಂಬ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ವಾಪಸು ಕೊಂಡುಕೊಳ್ಳುವ ಕೇಂದ್ರಗಳಲ್ಲಿ ಶುದ್ಧ ಮರುಬಳಕೆಯ ವಸ್ತುಗಳನ್ನು ಖರೀದಿಸಲಾಗುತ್ತದೆ. ಆದ್ದರಿಂದ ಇವು ಸ್ಥಿರ ಪೂರೈಕೆಯನ್ನು ಬಳಸಲು ಮತ್ತು ರಚಿಸಲು ಸ್ಪಷ್ಟ ಪ್ರೋತ್ಸಾಹ ಒದಗಿಸುತ್ತವೆ. ಇವುಗಳಿಂದ ತಯಾರಿಸಿದ ವಸ್ತುಗಳನ್ನು ನಂತರ ಲಾಭದ ನಿರೀಕ್ಷೆಯೊಂದಿಗೆ ಮಾರಾಟ ಮಾಡಬಹುದು. ಹಿಂದಿರುಗಿ ಕೊಂಡುಕೊಳ್ಳುವ ಕೇಂದ್ರಗಳನ್ನು ಮಾಡಲು ದುರದೃಷ್ಟವಶಾತ್ ಸರಕಾರದ ಧನಸಹಾಯ ಅವಶ್ಯಕವಾಗಿರುತ್ತದೆ. ಯುನೈಟೆಡ್ ಸ್ಟೇಟ್ಸ್ ನೇಷನ್ ಸೊಲಿಡ್ ವೇಸ್ಟ್ಸ್ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್‌ನ ಪ್ರಕಾರ, ಒಂದು ಟನ್ ವಸ್ತುವನ್ನು ಸಂಸ್ಕರಿಸಲು ಸರಾಸರಿ US$50ನಷ್ಟು ಖರ್ಚಾಗುತ್ತದೆ. ಅಲ್ಲದೇ ಅದರ ಮರುಮಾರಾಟದಿಂದ ಬರುವುದು ಕೇವಲ US$30.[೨]
ರಸ್ತೆ ಬದಿಯ ಸಂಗ್ರಹ
ಬದಲಾಯಿಸಿರಸ್ತೆ ಬದಿಯ ಸಂಗ್ರಹವು ಸೂಕ್ಷ್ಮವಾಗಿ ವಿವಿಧ ವ್ಯವಸ್ಥೆಗಳನ್ನು ಒಳಗೊಳ್ಳುತ್ತದೆ. ಇವು ಮರುಬಳಕೆಯ ವಸ್ತುಗಳನ್ನು ಎಲ್ಲಿ ವರ್ಗೀಕರಿಸಲಾಗಿದೆ; ಹೇಗೆ ಶುದ್ಧಗೊಳಿಸಲಾಗಿದೆ ಎಂಬುದರಲ್ಲಿ ಭಿನ್ನವಾಗಿರುತ್ತವೆ. ಪ್ರಮುಖ ವರ್ಗಗಳೆಂದರೆ ಮಿಶ್ರ ತ್ಯಾಜ್ಯ ಸಂಗ್ರಹ, ಒಟ್ಟಿಗೆ ಬೆರೆತ ಪುನರುಪಯೋಗಾರ್ಹವಾಗಿರುವ ವಸ್ತುಗಳು ಮತ್ತು ಮೂಲ ಬೇರ್ಪಡಿಕೆ.[೨] ತ್ಯಾಜ್ಯ ಸಂಗ್ರಹ ವಾಹನವು ಸಾಮಾನ್ಯವಾಗಿ ತ್ಯಾಜ್ಯವನ್ನು ಒಟ್ಟುಗೂಡಿಸುತ್ತದೆ.
ಮಿಶ್ರ ತ್ಯಾಜ್ಯ ಸಂಗ್ರಹದಲ್ಲಿ, ಇತರ ತ್ಯಾಜ್ಯದೊಂದಿಗೆ ಮಿಶ್ರವಾಗಿರುವ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಸಂಗ್ರಹಿಸಲಾಗುತ್ತದೆ. ನಂತರ ಬೇಕಾದ ವಸ್ತುಗಳನ್ನು ಬೇರ್ಪಡಿಸಿ, ಪ್ರಮುಖ ಬೇರ್ಪಡಿಸುವ ಸೌಕರ್ಯದ ಘಟಕದಲ್ಲಿ ಶುದ್ಧಗೊಳಿಸಲಾಗುತ್ತದೆ. ಇದರಿಂದ ಅತಿ ಹೆಚ್ಚಿನ ಪ್ರಮಾಣದ ಪುನರ್ಬಳಕೆ ಮಾಡಬಹುದಾದ ತ್ಯಾಜ್ಯವನ್ನು, ವಿಶೇಷವಾಗಿ ಕಾಗದವನ್ನು, ಪಡೆಯಬಹುದು. ಇವು ಪುನಸ್ಸಂಸ್ಕರಿಸಲು ತುಂಬಾ ಮಣ್ಣಿನಿಂದ ಕೂಡಿರುತ್ತವೆ, ಆದರೆ ಇವುಗಳಿಂದ ಪ್ರಯೋಜನಗಳೂ ಇವೆ: ಮರುಬಳಕೆಯ ವಸ್ತುಗಳ ಪ್ರತ್ಯೇಕ ಸಂಗ್ರಹಕ್ಕಾಗಿ ನಗರವು ಪಾವತಿ ಮಾಡುವ ಅವಶ್ಯಕತೆ ಇಲ್ಲ; ಅಲ್ಲದೇ ಸಾರ್ವಜನಿಕರಿಗೆ ಜಾಗೃತಿಯ ಅಗತ್ಯವೂ ಇಲ್ಲ. ಎಲ್ಲಾ ರೀತಿಯ ಪ್ರತ್ಯೇಕಿಸುವ ಕಾರ್ಯವು ಕೇಂದ್ರ ಸ್ಥಳದಲ್ಲಿ ನಡೆಯುವುದರಿಂದ, ಮರುಬಳಕೆಯ ವಸ್ತುಗಳಿಗೆ ಮಾಡಬಹುದಾದ ಯಾವುದೇ ಬದಲಾವಣೆಗಳು ತುಂಬಾ ಸುಲಭ.[೨]
ಒಟ್ಟಿಗೆ ಬೆರೆತ ಅಥವಾ ಒಂದೇ-ಗುಂಪಿನ ವ್ಯವಸ್ಥೆಯಲ್ಲಿ, ಸಂಗ್ರಹದ ಸಂದರ್ಭದಲ್ಲಿ ಎಲ್ಲಾ ಮರುಬಳಕೆ ವಸ್ತುಗಳು ಮಿಶ್ರವಾಗಿರುತ್ತವೆ. ಆದರೆ ಇತರ ತ್ಯಾಜ್ಯದಿಂದ ಬೇರ್ಪಟ್ಟಿರುತ್ತವೆ. ಇದು ಸಂಗ್ರಹದ-ನಂತರ ಶುದ್ಧಗೊಳಿಸುವ ಕಾರ್ಯವನ್ನು ಕಡಿಮೆ ಮಾಡುತ್ತದೆ. ಆದರೆ ಇದಕ್ಕೆ ಯಾವ ವಸ್ತುವಿನ ಮೇಲೆ ಮರುಬಳಕೆ ಮಾಡಬಹುದು, ಎಂಬುದರ ಸಾವರ್ಜನಿಕ ತಿಳಿವಳಿಕೆ ಅಗತ್ಯವಾಗಿರುತ್ತದೆ.[೨][೪]
ಮೂಲ ಬೇರ್ಪಡಿಸುವಿಕೆಯಲ್ಲಿ ಪ್ರತಿಯೊಂದು ವಸ್ತುವನ್ನೂ ಸಂಗ್ರಹಕ್ಕಿಂತ ಮೊದಲು ಶುದ್ಧಗೊಳಿಸಿ, ಬೇರ್ಪಡಿಸಲಾಗುತ್ತದೆ. ಈ ವಿಧಾನವು ಕಡಿಮೆ ಪ್ರಮಾಣದ ಸಂಗ್ರಹ-ನಂತರದ ಬೇರ್ಪಡಿಸುವುದನ್ನು ಒಳಗೊಳ್ಳುತ್ತದೆ. ಅದಲ್ಲದೇ ಶುದ್ಧ ಮರುಬಳಕೆ ವಸ್ತುಗಳನ್ನು ಉತ್ಪತ್ತಿ ಮಾಡುತ್ತದೆ. ಆದರೆ ಪ್ರತಿಯೊಂದು ಬೇರ್ಪಟ್ಟ ವಸ್ತುಗಳ ಸಂಗ್ರಹಕ್ಕೆ ಹೆಚ್ಚುವರಿ ಉತ್ಪಾದನಾ ವೆಚ್ಚವನ್ನು ತೆಗೆದುಕೊಳ್ಳುತ್ತದೆ. ಮರುಬಳಕೆ ಉತ್ಪನ್ನ ಅಶುದ್ಧವಾಗುವಿಕೆಯನ್ನು ತಡೆಗಟ್ಟಬೇಕಾದರೆ ಸಾರ್ವಜನಿಕರನ್ನು ಸುಶಿಕ್ಷಿತರನ್ನಾಗಿಸುವುದು ಅತಿ ಅಗತ್ಯ.[೨]
ಒಟ್ಟಿಗೆ ಬೆರೆತ ವಸ್ತುಗಳ ಸಂಗ್ರಹದ ಬೇರ್ಪಡಿಸುವಿಕೆಗೆ ಹೆಚ್ಚಿನ ವೆಚ್ಚ ತಗುಲುವುದರಿಂದ ಮೂಲ ಬೇರ್ಪಡಿಸುವಿಕೆ ವಿಧಾನವು ಹೆಚ್ಚು ಉಪಯುಕ್ತವಾದುದು. ಆದರೂ ಪ್ರತ್ಯೇಕಿಸುವ ತಂತ್ರಜ್ಞಾನದಲ್ಲಿನ (ಕೆಳಗಿನ ಪ್ರತ್ಯೇಕಿಸುವಿಕೆ ಗಮನಿಸಿ) ಸುಧಾರಣೆಗಳು ಇದನ್ನು ಕಡಿಮೆ ಮಾಡಿವೆ. ಆದ್ದರಿಂದ ಮೂಲ ಬೇರ್ಪಡಿಸುವಿಕೆ ವಿಧಾನವನ್ನು ಬಳಸುತ್ತಿದ್ದ ಹೆಚ್ಚಿನ ಪ್ರದೇಶಗಳು ಈಗ ಒಟ್ಟಿಗೆ ಬೆರೆತ ವಸ್ತುಗಳ ಸಂಗ್ರಹಕ್ಕೆ ಬದಲಾವಣೆಗೊಂಡಿವೆ.[೪]
ಪ್ರತ್ಯೇಕಿಸುವಿಕೆ
ಬದಲಾಯಿಸಿಒಮ್ಮೆ ಒಟ್ಟಿಗೆ ಬೆರೆತ ಮರುಬಳಕೆಯ ವಸ್ತುಗಳನ್ನು ಸಂಗ್ರಹ ಮಾಡಿ, ಕೇಂದ್ರೀಯ ಸಂಗ್ರಹ ಸೌಕರ್ಯಕ್ಕೆ ಸಾಗಿಸಿದ ನಂತರ, ಬೇರೆ ಬೇರೆ ವಿಧದ ವಸ್ತುಗಳನ್ನು ಮೊದಲು ಪ್ರತ್ಯೇಕಿಸಬೇಕು. ಇದನ್ನು ಅನೇಕ ಹಂತಗಳಲ್ಲಿ ಮಾಡಲಾಗುತ್ತದೆ. ಹೆಚ್ಚಿನವು ಸ್ವಯಂಚಾಲಿತ ಕ್ರಿಯೆಗಳನ್ನು ಒಳಗೊಂಡಿರುತ್ತವೆ. ಒಂದು ಲಾರಿ-ಹೊರೆಯ ವಸ್ತುಗಳನ್ನು ಒಂದು ಗಂಟೆಯೊಳಗೆ ಸಂಪೂರ್ಣವಾಗಿ ಪ್ರತ್ಯೇಕಿಸಬಹುದು.[೪] ಕೆಲವು ಘಟಕಗಳು ಈಗ ವಸ್ತುಗಳನ್ನು ಸ್ವಯಂಚಾಲಿತವಾಗಿ ಬೇರ್ಪಡಿಸುತ್ತವೆ, ಇವನ್ನು ಒಂದೇ-ಗುಂಪಿನ ಮರುಬಳಕೆ ಎನ್ನುತ್ತಾರೆ. ಈ ಘಟಕಗಳಿರುವ ಪ್ರದೇಶಗಳಲ್ಲಿ ಮರುಬಳಕೆಯಲ್ಲಿ 30 ಶೇಕಡ ಹೆಚ್ಚಳವಾಗಿರುವುದು ಕಂಡುಬಂದಿದೆ.[೧೦]
ಆರಂಭದಲ್ಲಿ ಒಟ್ಟಿಗೆ ಬೆರೆತ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಸಂಗ್ರಹ ವಾಹನದಿಂದ ತೆಗೆದು, ಏಕಪದರದಲ್ಲಿ ಹರಡಿರುವ ಸಾಗಣೆ ಬೆಲ್ಟಿನಲ್ಲಿರಿಸಲಾಗುತ್ತದೆ. ರಟ್ಟಿನ ದೊಡ್ಡ ತುಂಡುಗಳು ಮತ್ತು ಪ್ಲ್ಯಾಸ್ಟಿಕ್ ಚೀಲಗಳು ನಂತರ ಯಂತ್ರ ಸ್ಥಗಿತಗೊಳ್ಳಲು ಕಾರಣವಾಗಬಹುದಾದ್ದರಿಂದ ಅವನ್ನು ಈ ಹಂತದಲ್ಲಿ ಕೈಯಿಂದ ತೆಗೆದುಹಾಕಲಾಗುತ್ತದೆ.[೪]
ನಂತರ, ಸ್ವಯಂಚಾಲಿತ ಯಂತ್ರವು ಹಗುರದ ಕಾಗದ ಮತ್ತು ಪ್ಲ್ಯಾಸ್ಟಿಕ್‌ಗಳನ್ನು ಭಾರದ ಗಾಜು ಮತ್ತು ಲೋಹಗಳಿಂದ ಬೇರ್ಪಡಿಸುವ ಮೂಲಕ ಭಾರದ ಆಧಾರದಲ್ಲಿ ಮರುಬಳಕೆಯ ವಸ್ತುಗಳನ್ನು ಪ್ರತ್ಯೇಕಿಸುತ್ತದೆ. ರಟ್ಟುಗಳನ್ನು ಮಿಶ್ರ ಕಾಗದದಿಂದ ತೆಗೆಯಲಾಗುತ್ತದೆ. PET (#1) ಮತ್ತು HDPE (#2) ಮೊದಲಾದ ಹೆಚ್ಚು ಸಾಮಾನ್ಯವಾಗಿರುವ ಪ್ಲ್ಯಾಸ್ಟಿಕ್‌ಗಳನ್ನು ಸಂಗ್ರಹಿಸಲಾಗುತ್ತದೆ. ಈ ಬೇರ್ಪಡಿಸುವಿಕೆಯನ್ನು ಸಾಮಾನ್ಯವಾಗಿ ಕೈಯಿಂದ ಮಾಡಲಾಗುತ್ತದೆ. ಆದರೆ ಕೆಲವು ಪ್ರತ್ಯೇಕಿಸುವ ಕೇಂದ್ರಗಳಲ್ಲಿ ಇದು ಸ್ವಯಂಚಾಲಿತವಾಗಿದೆ: ವಿವಿಧ ಪ್ರಕಾರದ ಕಾಗದ ಮತ್ತು ಪ್ಲ್ಯಾಸ್ಟಿಕ್‌ಗಳನ್ನು ಅವು ಹೀರಿಕೊಳ್ಳುವ ತರಂಗಾಂತರಗಳ ಆಧಾರದಲ್ಲಿ ಬೇರ್ಪಡಿಸಲು ಮತ್ತು ಆನಂತರ ಪ್ರತಿಯೊಂದು ವಸ್ತುವನ್ನು ಯೋಗ್ಯ ಸಂಗ್ರಹ ಸಾಧನಕ್ಕೆ ಕಳುಹಿಸಲು ರೋಹಿತ ದರ್ಶಕದ(ಸ್ಪೆಕ್ಟ್ರೋಸ್ಪೋಪಿಕ್) ಸ್ಕ್ಯಾನರ್ಅನ್ನು ಬಳಸಲಾಗುತ್ತದೆ.[೪]
ಕಬ್ಬಿಣ, ಉಕ್ಕು ಮತ್ತು ತವರ-ಲೇಪಿತ ಉಕ್ಕಿನ ಕ್ಯಾನುಗಳಂತಹ ("ತವರ ಕ್ಯಾನುಗಳು") ಕಬ್ಬಿಣಯುಕ್ತ ಲೋಹಗಳನ್ನು ಬೇರ್ಪಡಿಸಲು ಪ್ರಬಲ ಅಯಸ್ಕಾಂತಗಳನ್ನು ಉಪಯೋಗಿಸಲಾಗುತ್ತದೆ. ಕಬ್ಬಿಣಾಂಶವಿಲ್ಲದ ಲೋಹಗಳನ್ನು ಕಾಂತೀಯ ಆವರ್ತಪ್ರವಾಹದಿಂದ ಹೊರಹಾಕಲಾಗುತ್ತದೆ. ಇದರಲ್ಲಿ ಆವರ್ತನೀಯ ಕಾಂತಕ್ಷೇತ್ರವು ಅಲ್ಯೂಮಿನಿಯಂ ಕ್ಯಾನುಗಳ ಸುತ್ತ ವಿದ್ಯುತ್ಪ್ರವಾಹವನ್ನು ಉಂಟುಮಾಡುತ್ತದೆ, ಇದು ಕ್ಯಾನುಗಳ ಒಳಗೆ ಕಾಂತೀಯ ಆವರ್ತಪ್ರವಾಹವನ್ನು ಸೃಷ್ಟಿಸುತ್ತದೆ. ಈ ಕಾಂತೀಯ ಆವರ್ತಪ್ರವಾಹವು ಅತಿಹೆಚ್ಚಿನ ಕಾಂತಕ್ಷೇತ್ರದಿಂದ ಹಿಮ್ಮೆಟ್ಟಿಸಲ್ಪಡುತ್ತದೆ. ಅಲ್ಲದೇ ಕ್ಯಾನುಗಳು ಉಳಿದ ಮರುಬಳಕೆಯ ವಸ್ತುಗಳ ರಾಶಿಯಿಂದ ಬೇರ್ಪಡಿಸಲ್ಪಡುತ್ತವೆ.[೪]
ಅಂತಿಮವಾಗಿ ಗಾಜನ್ನು ಅದರ ಬಣ್ಣದ ಆಧಾರದಲ್ಲಿ ಕೈಯಿಂದ ಪ್ರತ್ಯೇಕಿಸಬೇಕು: ಕಂದುಬಣ್ಣ, ಕಿತ್ತಲೆಹಳದಿ, ಹಸಿರು ಅಥವಾ ಪಾರದರ್ಶಕ.[೪]
ಉತ್ಪಾದನಾ ವೆಚ್ಚದಿಂದ ಲಾಭ-ನಷ್ಟ ವಿಶ್ಲೇಷಣೆ
ಬದಲಾಯಿಸಿ+ ಮರುಬಳಕೆಯ ನೈಸರ್ಗಿಕ ಪರಿಣಾಮಗಳು[೧೧] | ||
ವಸ್ತು | ಇಂಧನ ಉಳಿತಾಯ | ವಾಯು ಮಾಲಿನ್ಯದ ತಡೆತ |
---|---|---|
ಅಲ್ಯೂಮಿನಿಯಂ | 95%[೨][೬] | 95%[೨][೧೨] |
ರಟ್ಟು | 24% | — |
ಗಾಜು | 5-30% | 20% |
ಕಾಗದ | 40%[೬] | 73% |
ಪ್ಲ್ಯಾಸ್ಟಿಕ್‌ಗಳು | 70%[೬] | — |
ಉಕ್ಕು | 60%[೪] | — |
ಮರುಬಳಕೆಯು ಆರ್ಥಿಕವಾಗಿ ಪರಿಣಾಮಕಾರಿಯೇ ಎಂಬುದರ ಬಗ್ಗೆ ವಾದವಿವಾದಗಳಿವೆ. ಭೂಮಿಯೊಳಗೆ ಬೇಡದ ವಸ್ತುಗಳನ್ನು ಹೂತುಹಾಕುವುದು, ಕಡಿಮೆ ಖರ್ಚಿನಲ್ಲಿ ಆಗುವುದರಿಂದ, ಪುರಸಭೆಗಳು ಹೆಚ್ಚಾಗಿ ಮರುಬಳಕೆ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತವೆ.ಇದರಿಂದ ಆಗಬಹುದಾದ ಹಣಕಾಸಿನ ಪ್ರಯೋಜನಗಳ ಬಗ್ಗೆ ಗಮನ ಹರಿಸುತ್ತವೆ.[೧೩] ಟೆಕ್ನಿಕಲ್ ಯೂನಿವರ್ಸಿಟಿ ಆಫ್ ಡೆನ್ಮಾರ್ಕ್ ನಡೆಸಿದ ಅಧ್ಯಯನವು, 83% ರಷ್ಟು ಪ್ರಕರಣಗಳಲ್ಲಿ ಮನೆಯ ತ್ಯಾಜ್ಯವನ್ನು ಹೊರಹಾಕುವುದಕ್ಕೆ ಮರುಬಳಕೆಯು ಹೆಚ್ಚು ಪರಿಣಾಮಕಾರಿ ವಿಧಾನವೆಂದು ಕಂಡುಹಿಡಿದಿದೆ.[೪][೬] ಆದರೂ ಡ್ಯಾನಿಶ್ ಎನ್ವೈರ್ನ್‌ಮೆಂಟಲ್ ಅಸೆಸ್ಮೆಂಟ್ ಇನ್‌ಸ್ಟಿಟ್ಯೂಟ್‌ನ 2004ರ ನಿರ್ಧಾರಣೆಯು, ಅಲ್ಯೂಮಿನಿಯಂ ವಸ್ತುಗಳನ್ನೂ ಒಳಗೊಂಡಂತೆ ಪಾನೀಯಗಳ ಸೀಸೆಗಳ ಹೊರಹಾಕುವಿಕೆಗೆ, ಅವುಗಳನ್ನು ಸುಟ್ಟುಹಾಕುವುದು ಹೆಚ್ಚು ಪರಿಣಾಮಕಾರಿ ವಿಧಾನವೆಂದು ನಿರ್ಣಯಿಸಿದೆ.[೧೪]
ಹಣಕಾಸಿನ ದಕ್ಷತೆಗೆ ಆರ್ಥಿಕ ಫಲಕಾರಿತ್ವದಿಂದ ಬೇರೆಯೇ ಆಗಿದೆ. ಮರುಬಳಕೆಯ ಆರ್ಥಿಕ ವಿಶ್ಲೇಷಣೆಯು, ಖಾಸಗಿ ಕಾರ್ಯಾಚರಣೆಯ ಹೊರತು, ಹೊರಗಿನಿಂದ ಒದಗಿಬರುವ ಮೌಲ್ಯ ತಿಳಿದಿಲ್ಲದ ಲಾಭ ಮತ್ತು ನಷ್ಟಗಳಾದ ಬಾಹ್ಯವಸ್ತುಗಳನ್ನು ಆರ್ಥಿಕ ತಜ್ಞರು ಏನೆಂದು ಕರೆಯುತ್ತಾರೆ ಎಂಬುದನ್ನು ಒಳಗೊಳ್ಳುತ್ತದೆ. ಉದಾಹರಣೆಗಳೆಂದರೆ: ದಹಿಸುವುದರಿಂದ ಕಡಿಮೆಯಾದ ವಾಯು ಮಾಲಿನ್ಯ ಮತ್ತು ಹಸಿರುಮನೆ ಅನಿಲಗಳು, ಬೇಡದ ವಸ್ತುಗಳನ್ನು ಭೂಮಿಯೊಳಕ್ಕೆ ಹೂತುಹಾಕುವುದರಿಂದ ತಗ್ಗಿದ ಅಪಾಯಕಾರಿ ತ್ಯಾಜ್ಯ, ಕಡಿಮೆಯಾದ ಇಂಧನ ಬಳಕೆ ಹಾಗೂ ಕಡಿಮೆಯಾದ ತ್ಯಾಜ್ಯ ಮತ್ತು ಸಂಪನ್ಮೂಲಗಳ ಬಳಕೆ. ಇವು ನಿಸರ್ಗಕ್ಕೆ ಹಾನಿಕಾರಕವಾದ ಗಣಿಗಾರಿಕೆ ಮತ್ತು ಮರಮಟ್ಟುಗಳ ಚಟುವಟಿಕೆಯನ್ನು ಕಡಿಮೆ ಮಾಡುತ್ತವೆ. ಸುಮಾರು 4,000 ಖನಿಜಗಳು ಪತ್ತೆಹಚ್ಚಲ್ಪಟ್ಟಿವೆ. ಅವುಗಳಲ್ಲಿ ಸುಮಾರು 100 ಖನಿಜಗಳು ಅತಿ ಸಾಮಾನ್ಯವಾಗಿರುವವು, ಮತ್ತೆ ಕೆಲವು ನೂರು ಹೆಚ್ಚುಕಡಿಮೆ ಸಾಮಾನ್ಯವಾಗಿರುವವು ಹಾಗೂ ಉಳಿದವು ವಿರಳವಾಗಿರುವವು.[೧೫] ಹೆಚ್ಚು ಮರುಬಳಕೆ ಮಾಡದೆ, ಸತುವನ್ನು 2037ರವರೆಗೆ ಬಳಸಬಹುದು, ಇಂಡಿಯಂ ಮತ್ತು ಹ್ಯಾಫ್ನಿಯಂಗಳೆರಡನ್ನೂ 2017ರವರೆಗೆ ಉಪಯೋಗಿಸಬಹುದು. ಅದಲ್ಲದೇ ಟರ್ಬಿಯಂ 2012ರೊಳಗೆ ಮುಗಿದುಹೋಗಬಹುದು.[೧೬] ಬಾಹ್ಯವಸ್ತುಗಳನ್ನು ವೈಯಕ್ತಿಗೊಳಿಸುವಿಕೆಗೆ ಕಂದಾಯ ಅಥವಾ ವಿಶೇಷ ತೆರಿಗೆಳಂತಹ ಕಾರ್ಯಾಚರಣೆಗಳನ್ನು ವಿಧಿಸದಿದ್ದರೆ, ವ್ಯವಹಾರಗಳು ಸಮಾಜದ ಮೇಲೆ ನಷ್ಟವನ್ನು ಹೇರಿದರೂ ಪರಿಗಣಿಸದೆ ಅವುಗಳನ್ನು ನಿರ್ಲಕ್ಷಿಸುತ್ತವೆ. ಅಂತಹ ಹಣಕಾಸಿಲ್ಲದ-ಲಾಭಗಳನ್ನು ಆರ್ಥಿಕ-ಸಂಗತವಾಗಿಸಲು, ಸಲಹೆಗಾರರು ಮರುಬಳಕೆ ವಸ್ತುಗಳ ಬೇಡಿಕೆಯನ್ನು ಹೆಚ್ಚಿಸುವ ಶಾಸನ ರಚನೆಯನ್ನು ಮಾಡುವಂತೆ ಸೂಚಿಸಿದ್ದಾರೆ.[೨] ಅಮೆರಿಕ ಸಂಯುಕ್ತ ಸಂಸ್ಥಾನ ಎನ್ವೈರ್ನ್‌ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯು (EPA), ಮರುಬಳಕೆಯ ಪ್ರಯತ್ನಗಳು 2005ರಲ್ಲಿ ರಾಷ್ಟ್ರದ ಇಂಗಾಲ ಹೊರಸೂಸುವಿಕೆಗಳನ್ನು ಒಟ್ಟು 49 ದಶಲಕ್ಷ ಮೀಟರ್ ಮಾನದ ಟನ್‌ಗಳಷ್ಟು ಕಡಿಮೆ ಮಾಡಿದೆ, ಎಂದು ಮರುಬಳಕೆಯ ಪರವಾಗಿ ನಿರ್ಣಯ ನೀಡಿದೆ.[೪] ಯುನೈಟೆಡ್ ಕಿಂಗ್ಡಮ್‌ನಲ್ಲಿ ವೇಸ್ಟ್ ಆಂಡ್ ರಿಸೋರ್ಸಸ್ ಆಕ್ಷನ್ ಪ್ರೋಗ್ರಾಂ, ಗ್ರೇಟ್ ಬ್ರಿಟನ್‌ನ ಮರುಬಳಕೆ ಪ್ರಯತ್ನಗಳು CO2 ಹೊರಸೂಸುವಿಕೆಗಳನ್ನು ವರ್ಷವೊಂದಕ್ಕೆ 10-15 ದಶಲಕ್ಷ ಟನ್‌ಗಳಷ್ಟು ತಗ್ಗಿಸಿವೆ, ಎಂದು ಹೇಳಿದೆ.[೪] ಜನಸಾಂದ್ರತೆಯ ಪ್ರದೇಶಗಳಲ್ಲಿ ಪ್ರಮಾಣಾನುಗುಣ ಉಳಿತಾಯ ಇರುವುದರಿಂದ ಅಲ್ಲಿ ಮರುಬಳಕೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.[೨]
ಮರುಬಳಕೆಯನ್ನು ಆರ್ಥಿಕವಾಗಿ ಅನುಕೂಲ ಮತ್ತು ನೈಸರ್ಗಿಕವಾಗಿ ಪರಿಣಾಮಕಾರಿಯಾಗಿಸಲು ಕೆಲವು ಅವಶ್ಯಕತೆಗಳನ್ನು ಪೂರೈಸಬೇಕು. ಅವುಗಳೆಂದರೆ ಮರುಬಳಕೆ ವಸ್ತುಗಳ ಸಮರ್ಪಕ ಸಂಪನ್ಮೂಲ, ಆ ಮರುಬಳಕೆಯ ವಸ್ತುಗಳನ್ನು ತ್ಯಾಜ್ಯ ರಾಶಿಯಿಂದ ಬೇರ್ಪಡಿಸುವ ಒಂದು ವ್ಯವಸ್ಥೆ, ಅವುಗಳನ್ನು ಪುನಸ್ಸಂಸ್ಕರಿಸಲು ಸಮರ್ಥವಾಗಿರುವ ಹತ್ತಿರದ ಒಂದು ಕಾರ್ಖಾನೆ ಮತ್ತು ಮರುಬಳಕೆ ಮಾಡಿದ ಉತ್ಪನ್ನಗಳ ಪ್ರಬಲ ಬೇಡಿಕೆ. ಕೊನೆಯ ಎರಡು ಅವಶ್ಯಕತೆಗಳು ಹೆಚ್ಚು ಪ್ರಮುಖವಾದವುಗಳು. ಸಂಗ್ರಹಿಸಿದ ವಸ್ತುಗಳಿಂದ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕಾ ಮಾರುಕಟ್ಟೆ ಮತ್ತು ತಯಾರಿಸಿದ ಸರಕುಗಳಿಗೆ ಗ್ರಾಹಕ ಮಾರುಕಟ್ಟೆಗಳು ಎರಡೂ ಇಲ್ಲದಿದ್ದರೆ, ಮರುಬಳಕೆಯು ಅಪೂರ್ಣವಾಗುತ್ತದೆ. ಅಲ್ಲದೇ ಅದು ಕೇವಲ "ಸಂಗ್ರಹ"ವಾಗುತ್ತದೆ.[೨]
ಹೆಚ್ಚಿನ ಆರ್ಥಿಕ-ನಿರ್ವಾಹಕರು ಮರುಬಳಕೆ ಸೇವೆಗಳನ್ನು ಒದಗಿಸುವಲ್ಲಿ, ಸರಕಾರದ ಮಧ್ಯಮ ಮಟ್ಟದ ಹಸ್ತಕ್ಷೇಪವನ್ನು ಬಯಸುತ್ತಾರೆ. ಈ ಭಾವನೆ ಹೊಂದಿರುವ ಆರ್ಥಿಕ-ನಿರ್ವಾಹಕರು ಉತ್ಪನ್ನದ ಮಾರಾಟವನ್ನು ತಯಾರಿಕೆಯ ಬಾಹ್ಯಾವಸ್ಥೆಯಾಗಿ ಕಾಣುತ್ತಾರೆ. ಅಲ್ಲದೇ ಅಂತಹ ಇಕ್ಕಟ್ಟನ್ನು ಪರಿಹರಿಸಲು ಸರಕಾರವೇ ಹೆಚ್ಚು ಸಮರ್ಥವಾದುದೆಂದು ವಾದಿಸುತ್ತಾರೆ. ಪುರಸಭೆಯ ಮರುಬಳಕೆ ಕ್ರಿಯೆಯ ಬಗ್ಗೆ ತಟಸ್ಥ-ಧೋರಣೆ ಇರುವವರು ಉತ್ಪನ್ನದ ಮಾರಾಟವನ್ನು ಗ್ರಾಹಕ-ಪ್ರಾಮುಖ್ಯತೆಯ ಸೇವೆಯಾಗಿ ಕಾಣುತ್ತಾರೆ. ಮುಕ್ತ ಮಾರುಕಟ್ಟೆಯು ಗ್ರಾಹಕರ ಆದ್ಯತೆಗಳನ್ನು ಹೆಚ್ಚು ಸೂಕ್ತವಾಗಿ ತೃಪ್ತಿಪಡಿಸುತ್ತವೆ; ಏಕೆಂದರೆ ಲಾಭ-ಗಳಿಸುವ ಉದ್ದೇಶ ಹೊಂದಿರುವ ವ್ಯವಹಾರಗಳು ಸರಕಾರ ಮಾಡುವುದಕ್ಕಿಂತ ಹೆಚ್ಚು ಉತ್ತಮ ಗುಣಮಟ್ಟದ ಉತ್ಪನ್ನ ಅಥವಾ ಸೇವೆಯನ್ನು ಒದಗಿಸುತ್ತವೆ. ಆರ್ಥಿಕ-ನಿರ್ವಾಹಕರು ಹೆಚ್ಚಾಗಿ ಯಾವುದೇ ಬಾಹ್ಯವಸ್ತುಗಳಿಲ್ಲದ ಮಾರುಕಟ್ಟೆಯಲ್ಲಿ ಸರಕಾರದ ಮಧ್ಯಪ್ರವೇಶವನ್ನು ವಿರೋಧಿಸುತ್ತಾರೆ.[೧೭]
ಮರುಬಳಕೆ ವಸ್ತುಗಳ ವ್ಯಾಪಾರ
ಬದಲಾಯಿಸಿಕೆಲವು ರಾಷ್ಟ್ರಗಳು ಸಂಸ್ಕರಿಸದ ಮರುಬಳಕೆ-ವಸ್ತುಗಳ ವ್ಯವಹಾರ ನಡೆಸುತ್ತವೆ. ಮತ್ತೊಂದು ರಾಷ್ಟ್ರಕ್ಕೆ ಮಾರಾಟ ಮಾಡಿದ ಮರುಬಳಕೆ-ವಸ್ತುಗಳ ಅಂತಿಮ ಸ್ಥಿತಿಯ ಬಗ್ಗೆ ತಿಳಿದಿರುವುದಿಲ್ಲ. ಅದಲ್ಲದೇ ಅವರು ಪುನಸ್ಸಂಸ್ಕರಿಸುವ ಬದಲು ಅವನ್ನು ಭೂಮಿಯಲ್ಲಿ ಹೂತುಹಾಕಿರಬಹುದು, ಎಂದು ಕೆಲವರು ಟೀಕಿಸಿದ್ದಾರೆ. ಅಮೆರಿಕಾದ ಒಂದು ವರದಿಯ ಪ್ರಕಾರ, ಮರುಬಳಕೆ ಮಾಡಲೆಂದು ಬರುವ 50-80%ನಷ್ಟು ಕಂಪ್ಯೂಟರ್‌ಗಳು ನಿಜವಾಗಿ ಮರುಬಳಕೆಯಾಗಿಲ್ಲ.[೧೮][೧೯] ಚೀನಾಕ್ಕೆ ಆಮದಾದ ಅಕ್ರಮ-ತ್ಯಾಜ್ಯವನ್ನು ಹಣ ಗಳಿಕೆಯ ಉದ್ದೇಶದಿಂದ ಕಾರ್ಮಿಕರ ಆರೋಗ್ಯ ಮತ್ತು ನೈಸರ್ಗಿಕ ಹಾನಿಯನ್ನು ಪರಿಗಣಿಸದೆ ಮರುಬಳಕೆ ಮಾಡಲಾಗಿದೆ, ಎಂಬುದರ ಬಗ್ಗೆ ವರದಿಗಳಿವೆ. ಚೀನಾ ಸರಕಾರವು ಇಂತಹ ಚಟುವಟಿಕೆಗಳನ್ನು ನಿಷೇಧಿಸಿದರೂ, ಅವನ್ನು ಬೇರುಸಹಿತ ತೊಡೆದುಹಾಕಲು ಸಾಧ್ಯವಾಗಲಿಲ್ಲ.[೨೦] ಕಳೆದ 2008ರಲ್ಲಿ ಮರುಬಳಕೆ ಮಾಡಬಹುದಾದ ತ್ಯಾಜ್ಯದ ಬೆಲೆಯು ಏಕಾಏಕಿ ಕುಸಿತ ಕಂಡಿತು. ನಂತರ 2009ರಲ್ಲಿ ಪೂರ್ವಸ್ಥಿತಿಗೆ ಮರಳಿತು. ರಟ್ಟಿನ ಬೆಲೆಯು 2004-2008ರಲ್ಲಿ ಸುಮಾರು £53/ಟನ್‌ನಷ್ಟಿದ್ದುದು £19/ಟನ್‌ಗೆ ಇಳಿಯಿತು. ಆನಂತರ 2009ರ ಮೇನಲ್ಲಿ £59/ಟನ್‌ವರೆಗೆ ಏರಿತು. PET ಪ್ಲ್ಯಾಸ್ಟಿಕ್‌ನ ದರವು ಸುಮಾರು £156/ಟನ್‌ನಷ್ಟಿದ್ದುದು £75/ಟನ್‌ವರೆಗೆ ಇಳಿದು, ನಂತರ 2009ರ ಮೇನಲ್ಲಿ £195/ಟನ್‌ವರೆಗೆ ಹೆಚ್ಚಾಯಿತು.[೨೧] ಕೆಲವು ಪ್ರದೇಶಗಳು ಮರುಬಳಕೆ ಮಾಡಿದಷ್ಟು ಆ ಉತ್ಪನ್ನಗಳನ್ನು ಬಳಸಲು ಅಥವಾ ರಫ್ತುಮಾಡಲು ಅಡಚಣೆಯನ್ನು ಹೊಂದಿರುತ್ತವೆ. ಈ ತೊಂದರೆಯು ಗಾಜಿಗೆ ಹೆಚ್ಚು ಪ್ರಚಲಿತವಾಗಿದೆ: ಬ್ರಿಟನ್ ಮತ್ತು U.S. ರಾಷ್ಟ್ರಗಳೆರಡೂ ವೈನ್ಅನ್ನು ಹಸಿರು ಗಾಜಿನ ಸೀಸೆಗಳಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತವೆ. ಇಂತಹ ಹೆಚ್ಚಿನ ಗಾಜುಗಳು ಮರುಬಳಕೆಗೆ ಹೋದರೂ, ಅಮೆರಿಕಾದ ಮಿಡ್ಲ್‌ವೆಸ್ಟ್‌ನ ಹೊರಗೆ ಪುನಸ್ಸಂಸ್ಕರಿಸಿದ ವಸ್ತುವನ್ನು ಬಳಸಲು ಸಾಕಷ್ಟು ವೈನ್ ಉತ್ಪಾದನೆ ಇಲ್ಲ. ಹೆಚ್ಚುವರಿಯನ್ನು ಕಟ್ಟಡದ ವಸ್ತುಗಳಾಗಿ ಮರುಬಳಕೆ ಮಾಡಬೇಕಾಗುತ್ತದೆ ಅಥವಾ ಎಂದಿನ ತ್ಯಾಜ್ಯವಾಗಿ ಪುನಃ-ಸೇರಿಸಬೇಕಾಗುತ್ತದೆ.[೨]
ಅದೇ ರೀತಿ ವಾಯುವ್ಯ ಅಮೆರಿಕ ಸಂಯುಕ್ತ ಸಂಸ್ಥಾನವು ಮರುಬಳಕೆಗೊಳಿಸಿದ ಸುದ್ದಿಪತ್ರಿಕೆಗಳಿಗೆ ಮಾರುಕಟ್ಟೆ ಒದಗಿಸುವಲ್ಲಿ ತೊಂದರೆ ಅನುಭವಿಸುತ್ತಿದೆ. ಆ ಪ್ರದೇಶದ ಮತ್ತು ಹತ್ತಿರದ ಹೆಚ್ಚಿನ ಕಳಪೆ ಪತ್ರಿಕೆಗಳ ಮಿಲ್ಲುಗಳನ್ನು ಏಷ್ಯಾದ ಮಾರುಕಟ್ಟೆಗಳಿಗೆ ನೀಡಲಾಗಿದೆ. U.S.ನ ಇತರ ಪ್ರದೇಶಗಳಲ್ಲಿ ಬಳಸಿದ ಪತ್ರಿಕೆಗಳ ಬೇಡಿಕೆಯು ಹೆಚ್ಚಾಗಿ ಏರಿಳಿತವಾಗುತ್ತಿರುವುದು ಕಂಡುಬಂದಿದೆ.[೨]
U.S.ನ ಕೆಲವು ರಾಜ್ಯಗಳಲ್ಲಿ ರಿಸೈಕಲ್‌ಬ್ಯಾಂಕ್ ಎಂಬ ಒಂದು ಯೋಜನೆಯು, ಕೊಂಡುಕೊಳ್ಳಲೇ ಬೇಕಾದ ಬೇಡದ-ವಸ್ತುಗಳನ್ನು ಹೂತುಹಾಕುವ ಜಾಗಗಳಿಗಾಗಿ ಸ್ಥಳೀಯ ಪುರಸಭೆಗಳಿಂದ ಹಣವನ್ನು ಪಡೆಯುವ ಮೂಲಕ ಜನರಿಗೆ ಮರುಬಳಕೆಗಾಗಿ ಕೂಪನ್‌ಗಳೊಂದಿಗೆ ಪಾವತಿಸುತ್ತದೆ. ಇದು ಏಕ-ಪ್ರವಾಹದ ಕಾರ್ಯವ್ಯವಸ್ಥೆಯನ್ನು ಬಳಸುತ್ತದೆ, ಅದರಲ್ಲಿ ಎಲ್ಲಾ ವಸ್ತುಗಳು ಸ್ವಯಂಚಾಲಿತವಾಗಿ ಪ್ರತ್ಯೇಕಿಸಲ್ಪಡುತ್ತವೆ.[೨೨]
ಟೀಕೆಗಳು
ಬದಲಾಯಿಸಿExpression error: Unexpected < operator.
ಮರುಬಳಕೆಗೆ ಸಂಬಂಧಿಸಿದಂತೆ ಹೆಚ್ಚಿನ ತೊಂದರೆಗಳು, ಉತ್ಪನ್ನಗಳನ್ನು ಮರುಬಳಕೆಯ ಉದ್ದೇಶವನ್ನಿಟ್ಟುಕೊಂಡು ವಿನ್ಯಾಸಗೊಳಿದೇ ಇರುವುದರಿಂದ ಕಾಣಿಸಿಕೊಳ್ಳುತ್ತವೆ. ಸಮರ್ಥನೀಯ ವಿನ್ಯಾಸವು ಈ ಸಮಸ್ಯೆಯನ್ನು ಪರಿಹರಿಸುವ ಗುರಿ ಹೊಂದಿದೆ. ಇದನ್ನು ಮೊದಲು ವಿನ್ಯಾಸಕ ವಿಲಿಯಂ ಮ್ಯಾಕ್‌ಡೊನಫ್ ಮತ್ತು ರಸಾಯನಶಾಸ್ತ್ರಜ್ಞ ಮೈಕೆಲ್ ಬ್ರಾಂಗಾರ್ಟ್ "Cradle to Cradle: Remaking the Way We Make Things " ಪುಸ್ತಕದಲ್ಲಿ ಪ್ರಕಟಗೊಳಿಸಿದರು. ಪ್ರತಿಯೊಂದು ಉತ್ಪನ್ನವು (ಮತ್ತು ಅವಶ್ಯಕವಾಗಿರುವ ಎಲ್ಲಾ ಪ್ಯಾಕಿಂಗ್ ಪದಾರ್ಥಗಳು) ಪ್ರತಿ ವಸ್ತುವಿಗಾಗಿ ರೂಪಿತವಾದ ಒಂದು ಸಂಪೂರ್ಣ "ಮುಚ್ಚಿದ-ಸುತ್ತಿನ" ಆವರ್ತವನ್ನು ಹೊಂದಿರಬೇಕು; ಎಂದು ಅವರು ಸೂಚಿಸಿದ್ದಾರೆ. ಈ ಆವರ್ತವು ಪ್ರತಿಯೊಂದು ವಸ್ತುವೂ ಜೈವಿಕ ವಿಘಟನೆಯ ಮೂಲಕ ಪರಿಸರ ವ್ಯವಸ್ಥೆಗೆ ಹಿಂದಿರುಗುವ ಅಥವಾ ಅನಿಶ್ಚಿತವಾಗಿ ಮರುಬಳಕೆಯಾಗುವ ಒಂದು ವಿಧಾನವಾಗಿದೆ.[೪]
ನೈಸರ್ಗಿಕ ಆರ್ಥಿಕ ಸ್ಥಿತಿಯೊಂದಿಗಿನ ಸಂಬಂಧದಿಂದಾಗಿ, ಲಾಭ ಮತ್ತು ನಷ್ಟದ ಬಗೆಗಿನ ಸಂಪೂರ್ಣ ಅವಲೋಕನ ಪಡೆಯಲು ಜಾಗೃತೆವಹಿಸಬೇಕು. ಉದಾಹರಣೆಗೆ, ಆಹಾರ ಉತ್ಪನ್ನಗಳ ರಟ್ಟಿನ ಪ್ಯಾಕಿಂಗ್ ಪದಾರ್ಥಗಳನ್ನು ಪ್ಲ್ಯಾಸ್ಟಿಕ್‌ಗಳಿಗಿಂತ ಹೆಚ್ಚು ಸುಲಭದಲ್ಲಿ ಮರುಬಳಕೆ ಮಾಡಬಹುದು. ಆದರೆ ಇದನ್ನು ಹಡಗಿನಲ್ಲಿ ಸಾಗಿಸಲು ತುಂಬಾ ಭಾರವಾಗಿರುತ್ತದೆ ಮತ್ತು ಬೇಗ ಹಾಳಾಗುವುದರಿಂದ ಇನ್ನಷ್ಟು ಹೆಚ್ಚು ತ್ಯಾಜ್ಯವಾಗಬಹುದು.[೨೩]
ಮರುಬಳಕೆಯ ಬಗೆಗಿನ ಹೆಚ್ಚು ಪ್ರಖ್ಯಾತ ವಿಮರ್ಶೆಗಳು ಈ ಕೆಳಗಿನಂತಿದೆ.
ಇಂಧನವನ್ನು ಉಳಿಸುತ್ತದೆ
ಬದಲಾಯಿಸಿಮರುಬಳಕೆಯಿಂದ ಎಷ್ಟು ಇಂಧನ ಉಳಿಯುತ್ತದೆ, ಎಂಬುದರ ಬಗ್ಗೆ ವಿವಾದವಿದೆ. ಎನರ್ಜಿ ಇನ್ಫರ್ಮೇಶನ್ ಅಡ್ಮಿನಿಸ್ಟ್ರೇಶನ್ (EIA) ಅದರ ವೆಬ್‌ಸೈಟ್‌ನಲ್ಲಿ ಹೀಗೆಂದು ಹೇಳುತ್ತದೆ - "ಒಂದು ಕಾಗದ ಮಿಲ್ಲು ಮರುಬಳಕೆಯ ಕಾಗದದಿಂದ ಕಾಗದ ತಯಾರಿಸಲು ಕಚ್ಚಾ ತಿರುಳಿನಿಂದ ಅದನ್ನು ಮಾಡಲು ಬೇಕಾಗುವುದಕ್ಕಿಂತ 40 ಶೇಕಡ ಕಡಿಮೆ ಇಂಧನ ಬಳಸಿಕೊಳ್ಳುತ್ತದೆ." ಒಟ್ಟು ಕ್ರಿಯೆಯಲ್ಲಿ ಮರುಬಳಕೆಯ ಉತ್ಪನ್ನಗಳನ್ನು ತಯಾರಿಸಲು, ಬೇಡದ ವಸ್ತುಗಳನ್ನು ಭೂಮಿಯೊಳಗೆ ಹೂತುಹಾಕುವ, ಸಾಂಪ್ರದಾಯಿಕ ವಿಧಾನಗಳಲ್ಲಿ ಅವನ್ನು ಹೊರಹಾಕಲು ಬೇಕಾಗುವುದಕ್ಕಿಂತ ಹೆಚ್ಚು ಇಂಧನ ಬೇಕಾಗುತ್ತದೆ; ಎಂದು ವಿಮರ್ಶಕರು ವಾದಿಸುತ್ತಾರೆ. ಈ ವಾದವು ಎರಡನೆ ಹಂತದ ತ್ಯಾಜ್ಯ ಲಾರಿಯಿಂದ ಸಾಗಿಸಲಾಗುವ ಮರುಬಳಕೆ ಮಾಡಬಹುದಾದ ವಸ್ತುಗಳ ರಸ್ತೆ ಬದಿಯ ಸಂಗ್ರಹದಿಂದ ಮುಂದುವರಿಯಿತು. ಕಾಗದವನ್ನು ಮರುಬಳಕೆಗಾಗಿ ಸಂಗ್ರಹಿಸಿದಾಗ ಎರಡನೆ ಹಂತದ ಮರದ ಅಥವಾ ಕಾಡಿನಿಂದ ಮರವನ್ನು ಕತ್ತರಿಸಿ ತರುವ ಲಾರಿಯನ್ನು ಗಣನೆಗೆ ತಾರದೆ ಬಿಟ್ಟುಬಿಡಲಾಗುತ್ತದೆ,ಎಂದು ಮರುಬಳಕೆ ಕ್ರಿಯಾವಿಧಾನ ಸೂಚಿಸುತ್ತದೆ.
ತ್ಯಾಜ್ಯ ಹೊರಹಾಕುವಿಕೆ ಕ್ರಿಯೆಯಿಂದ ಉತ್ಪತ್ತಿಯಾದ ಅಥವಾ ಅದಕ್ಕೆ ಬಳಕೆಯಾದ ಇಂಧನದ ಪ್ರಮಾಣವನ್ನು ನಿಖರವಾಗಿ ಕಂಡುಹಿಡಿಯುವುದು ಕಷ್ಟಕರವಾಗಿದೆ. ಮರುಬಳಕೆಗೆ ಬಳಸಿದ ಇಂಧನದ ಪ್ರಮಾಣವು ಹೆಚ್ಚಾಗಿ ಮರುಬಳಕೆ ಮಾಡಿದ ವಸ್ತುಗಳ ಪ್ರಕಾರ, ಮತ್ತು ಅದನ್ನು ಮಾಡಲು ಉಪಯೋಗಿಸಿದ ಕ್ರಿಯೆಯನ್ನು ಆಧರಿಸಿರುತ್ತದೆ. ಕಲಬೆರಕೆಯಿಂದ ತಯಾರಿಸಲು ಬೇಕಾಗುವುದಕ್ಕಿಂತ ಅಲ್ಯೂಮಿನಿಯಂ ಮರುಬಳಕೆ ಮಾಡುವಾಗ ತುಂಬಾ ಕಡಿಮೆ ಇಂಧನವನ್ನು ಬಳಸಿಕೊಳ್ಳುತ್ತದೆ; ಎಂದು ನಂಬಲಾಗಿದೆ. EPA ಹೀಗೆಂದು ಹೇಳುತ್ತದೆ - "ಉದಾಹರಣೆಗಾಗಿ, ಮರುಬಳಕೆ ಮಾಡಬಹುದಾದ ಅಲ್ಯೂಮಿನಿಯಂ ಕ್ಯಾನುಗಳು, ಅದರ ಕಚ್ಚಾ ಮೂಲ ಬಾಕ್ಸೈಟ್ನಿಂದ ಅಷ್ಟೇ ಪ್ರಮಾಣದ ಅಲ್ಯೂಮಿನಿಯಂನ್ನು ತಯಾರಿಸಲು ಬೇಕಾಗುವುದಕ್ಕಿಂತ 95 ಶೇಕಡಾ ಇಂಧನವನ್ನು ಉಳಿಸುತ್ತವೆ."[೨೪]
ಬೇಡದ ವಸ್ತುಗಳನ್ನು ಭೂಮಿಯೊಳಗೆ ಹೂತುಹಾಕುವ ಜಾಗವನ್ನು ಕಡಿಮೆ ಮಾಡುವುದರ ಏಕೈಕ ಪ್ರಯೋಜನ - ಮರುಬಳಕೆ ಕ್ರಿಯೆಗೆ ಬೇಕಾಗುವ ಇಂಧನ ಮತ್ತು ಅದರಿಂದಾಗುವ ಮಾಲಿನ್ಯದ ಲಾಭ ಪಡೆಯುವುದು, ಎಂದು ಆರ್ಥಿಕ-ನಿರ್ವಾಹಕ ಸ್ಟೀವನ್ ಲ್ಯಾಡ್ಸ್‌ಬರ್ಗ್ ಸೂಚಿಸಿದ್ದಾನೆ.[೨೫] ಮರುಬಳಕೆಯ ಕಾಗದ ತಯಾರಿಸುವುದು, ನಿಷ್ಪಾಪಿ ಮರಗಳನ್ನು ಕತ್ತರಿಸುವುದು, ತಿರುಳು ತೆಗೆಯುವುದು, ಸಂಸ್ಕರಿಸುವುದು ಮತ್ತು ಸಾಗಿಸುವುದಕ್ಕಿಂತ ಕಡಿಮೆ ಇಂಧನ ಮತ್ತು ನೀರನ್ನು ಬಳಸಿಕೊಳ್ಳುತ್ತದೆ, ಎಂದು ಇತರರು ಬದುಕಿನ ಜೀವನ ಚಕ್ರ ನಿರ್ಧಾರಣೆಯ ಮೂಲಕ ಅಂದಾಜಿಸಿದ್ದಾರೆ.[೨೬] ಕಡಿಮೆ ಮರುಬಳಕೆ ಮಾಡಿದ ಕಾಗದವನ್ನು ಉಪಯೋಗಿಸುವುದರಿಂದ, ಕಾಡುಗಳನ್ನು ಬೆಳೆಸಲು ಮತ್ತು ನಿರ್ವಹಿಸಲು ಅವು ಸಹಜಾರಣ್ಯಗಳಷ್ಟು ಊರ್ಜಿತವಾಗುವವರೆಗೆ ಹೆಚ್ಚುವರಿ ಇಂಧನದ ಅವಶ್ಯಕತೆ ಇರುತ್ತದೆ.
ಸಾರ್ವಜನಿಕ ನಿಯಮ ವಿಶ್ಲೇಷಕ ಜೇಮ್ಸ್ V. ಡಿಲಾಂಗ್, ಮರುಬಳಕೆಯು ಒಂದು ಉತ್ಪಾದನಾ ಕ್ರಿಯೆ. ಅದಲ್ಲದೇ ಇದರ ಹೆಚ್ಚಿನ ವಿಧಾನಗಳು ಅವು ಉಳಿಸುವುದಕ್ಕಿಂತ ಅಧಿಕ ಇಂಧನವನ್ನು ಬಳಸಿಕೊಳ್ಳುತ್ತವೆ, ಎಂದು ಸೂಚಿಸಿದ್ದಾನೆ. ಇಂಧನ ಬಳಕೆಯ ಜೊತೆಗೆ ಅವನು, ಮರುಬಳಕೆಗೆ ಕೆಲವು ತ್ಯಾಜ್ಯವನ್ನು ತಯಾರಿಸಲು ರಾಜ್ಯ ಮತ್ತು ಕಾರ್ಮಿಕರ ಅವಶ್ಯಕತೆ ಇರುತ್ತದೆ; ಎಂದೂ ಹೇಳಿದ್ದಾನೆ. ಈ ಕ್ರಿಯೆಗಳು ಮೂಲ ಕಚ್ಚಾ ಪದಾರ್ಥದಿಂದ ಉತ್ಪಾದಿಸುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿರಬೇಕು; ಮತ್ತು/ಅಥವಾ ಮರುಬಳಕೆಗಾಗಿ ಮಾಡುವ ಸಾಂಪ್ರದಾಯಿಕ ತ್ಯಾಜ್ಯ ಹೊರಹಾಕುವಿಕೆಯು ಅತ್ಯುತ್ತಮ ವಿಧಾನದ್ದಾಗಿರಬೇಕು.[೨೭]
ಹಣ ಉಳಿತಾಯ ಮಾಡುತ್ತದೆ
ಬದಲಾಯಿಸಿಮರುಬಳಕೆಯಿಂದ ನಿಜವಾಗಿ ಉಳಿತಾಯವಾದ ಹಣವು, ಅದನ್ನು ಮಾಡಲು ಬಳಸಿದ ಮರುಬಳಕೆ ಕಾರ್ಯದ ಪ್ರತಿಕ್ರಿಯೆಯನ್ನು ಆಧರಿಸಿರುತ್ತದೆ. ಭೂಮಿಯೊಳಗೆ ಹೂತುಹಾಕಲು ಆಗುವ ಖರ್ಚಿನಂತಹ ಮರುಬಳಕೆ ಮಾಡುವ ಸಮೂಹದ ಅನೇಕ ಅಂಶಗಳನ್ನು ಮತ್ತು ಆ ಸಮೂಹ ಹೊರಹಾಕುವ ಪ್ರಮಾಣವನ್ನು ಮರುಬಳಕೆಯ ವೆಚ್ಚ್ಕಆಧರಿಸಿರುತ್ತದೆ; ಎಂದು ಇನ್‌ಸ್ಟಿಟ್ಯೂಟ್ ಫಾರ್ ಲೋಕಲ್ ಸೆಲ್ಫ್-ರಿಲಯನ್ಸ್ ವಾದಿಸುತ್ತದೆ. ಸಮೂಹಗಳು ಸಾಂಪ್ರದಾಯಿಕ ತ್ಯಾಜ್ಯ ವ್ಯವಸ್ಥೆಗೆ ಮತ್ತಷ್ಟು ಸೇರಿಸುವ ಬದಲು, ಮರುಬಳಕೆಯು ಇದಕ್ಕೆ ಒಂದು ಬದಲಿ-ವ್ಯವಸ್ಥೆ ಎಂದು ತಿಳಿಯುವುದರಿಂದ ಮತ್ತು "ಅವುಗಳ ಸಂಗ್ರಹ ಕಾರ್ಯಯೋಜನೆಗಳನ್ನು ಮತ್ತು/ಅಥವಾ ಸಾಗಣೆಯನ್ನು ಪುನಃರೂಪಿಸುವುದರಿಂದ" ಹಣ ಉಳಿತಾಯ ಮಾಡಬಹುದು; ಎಂದು ಈ ಸಂಸ್ಥೆ ಹೇಳುತ್ತದೆ.[೨೮]
ಅನೇಕ ಸಂದರ್ಭಗಳಲ್ಲಿ ಮರುಬಳಕೆಯ ವಸ್ತುಗಳ ಬೆಲೆಯು ಕಚ್ಚಾ ಪದಾರ್ಥಗಳ ಬೆಲೆಯನ್ನು ಮೀರಿಸುತ್ತದೆ. ಕಚ್ಚಾ ಪ್ಲ್ಯಾಸ್ಟಿಕ್ ರಾಳವು ಮರುಬಳಕೆಯ ರಾಳಕ್ಕಿಂತ 40% ಕಡಿಮೆ ಬೆಲೆ ಹೊಂದಿದೆ.[೨೯] ಕಳೆದ 1991ರ ಜುಲೈ 15ರಿಂದ ಆಗಸ್ಟ್ 2ರವರೆಗಿನ ಪಾರದರ್ಶಕ ನಿರಪಯೋಗಿ ಗಾಜುಸಾಮಾನುಗಳ ಬೆಲೆಯನ್ನು ಪತ್ತೆಹಚ್ಚಿದ ಅಮೆರಿಕ ಸಂಯುಕ್ತ ಸಂಸ್ಥಾನ, ಎನ್ವೈರ್ನ್‌ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯ (EPA) ಅಧ್ಯಯನವೊಂದು, ಪ್ರತಿ ಟನ್‌ನ ಸರಾಸರಿ ಬೆಲೆಯು $40ರಿಂದ $60ರಷ್ಟಿದೆ ಎಂದು ಕಂಡುಹಿಡಿದಿದೆ.[೩೦] ಒಂದು ಟನ್ ಕಚ್ಚಾ ಸಿಲಿಕ ಮರಳಿನ ಬೆಲೆಯು 1993ರಿಂದ 1997ರವರೆಗಿನ ಅವಧಿಯಲ್ಲಿ $17.33 ಮತ್ತು $18.10ರ ಮಧ್ಯದ ಬೆಲೆಯಷ್ಟಿತ್ತು; ಎಂದು USGS ವರದಿಯೊಂದು ತೋರಿಸಿಕೊಟ್ಟಿದೆ.[೩೧]
ದ ನ್ಯೂಯಾರ್ಕ್ ಟೈಮ್ಸ್ ನ 1996ರ ಲೇಖನದಲ್ಲಿ ಜಾನ್ ಟೈರ್ನಿ, ನ್ಯೂಯಾರ್ಕ್ ನಗರದ ತ್ಯಾಜ್ಯವನ್ನು ಮರುಬಳಕೆ ಮಾಡುವ ಸಲುವಾಗಿ, ಅದನ್ನು ಭೂಮಿಯೊಳಗೆ ಹೂತುಹಾಕಲು ಬೇಕಾಗುವುದಕ್ಕಿಂತ ಹೆಚ್ಚು ಹಣ ಖರ್ಚಾಗುತ್ತದೆ, ಎಂದು ಹೇಳಿದ್ದಾನೆ. ಮರುಬಳಕೆ ಕ್ರಿಯೆಯು ಹೆಚ್ಚುವರಿ ತ್ಯಾಜ್ಯವನ್ನು ಹೊರಹಾಕಲು, ಬೇರ್ಪಡಿಸಲು ಮತ್ತು ಪರಿಶೀಲಿಸಲು ಜನರನ್ನು ಬಳಸಿಕೊಳ್ಳುತ್ತದೆ. ಅದಲ್ಲದೇ ಅಂತಿಮ ಉತ್ಪನ್ನವನ್ನು ತಯಾರಿಸಲು ಆಗುವ ಖರ್ಚು, ಅದರ ಮಾರಾಟದಿಂದ ಬರುವ ಲಾಭಕ್ಕಿಂತ ಹೆಚ್ಚಾಗಿರುವುದರಿಂದ ಇದು ಹೆಚ್ಚುವರಿ ವೆಚ್ಚಕ್ಕೆ ಗುರಿಮಾಡುತ್ತದೆ; ಎಂದು ಟೈರ್ನಿ ಎಂದು ವಾದಿಸಿದ್ದಾನೆ.[೩೨] ಟೈರ್ನಿಯು ಸಾಲಿಡ್ ವೇಸ್ಟ್ ಅಸೋಸಿಯೇಶನ್ ಆಫ್ ನಾರ್ತ್ ಅಮೆರಿಕ (SWANA) ನಿರ್ವಹಿಸಿದ ಅಧ್ಯಯನವೊಂದರ ಬಗ್ಗೆಯೂ ಉಲ್ಲೇಖಿಸಿದ್ದಾನೆ. ಆರು ಸಮೂಹಗಳು ಭಾಗವಹಿಸಿದ ಈ ಅಧ್ಯಯನವು "ರಸ್ತೆಬದಿ-ವಸ್ತುಗಳ ಮರುಬಳಕೆ ಕಾರ್ಯಗಳು, ಎಲ್ಲಾ ಮಿಶ್ರಗೊಬ್ಬರ ತಯಾರಿಸುವ ಕಾರ್ಯಾಚರಣೆಗಳು ಮತ್ತು ತ್ಯಾಜ್ಯದಿಂದ ಇಂಧನ ತಯಾರಿಸುವ ಇನ್ಸಿನರೇಟರ್‌ಗಳು , ತ್ಯಾಜ್ಯ ಹೊರಹಾಕುವಿಕೆಯ ಬೆಲೆಯನ್ನು ಹೆಚ್ಚಿಸಿವೆ" ಎಂದು ಹೇಳುತ್ತದೆ.[೩೩]
ಟೈರ್ನಿ ಹೀಗೆಂದೂ ಸೂಚಿಸಿದ್ದಾನೆ - "ಚಿಂದಿ ವಸ್ತುಗಳಿಗೆ ಪಾವತಿಸುವ ಬೆಲೆಯು, ಮರುಬಳಕೆಯ ವಸ್ತುಗಳಾಗಿ ಅವುಗಳ ನೈಸರ್ಗಿಕ ಮೌಲ್ಯವನ್ನು ಅಳತೆ ಮಾಡುವ ಮಾಪನವಾಗಿದೆ. ಅಲ್ಯೂಮಿನಿಯಂನ ಮರುಬಳಕೆಯು ಹೊಸತನ್ನು ತಯಾರಿಸಲು ಬೇಕಾಗುವುದಕ್ಕಿಂತ ತುಂಬಾ ಕಡಿಮೆ ಇಂಧನವನ್ನು ಉಪಯೋಗಿಸಿಕೊಳ್ಳುವುದರಿಂದ ಚಿಂದಿ ಅಲ್ಯೂಮಿನಿಯಂ ಹೆಚ್ಚು ಬೆಲೆ ಹೊಂದಿದೆ."
ಕೆಲಸದ ಸ್ಥಿತಿ
ಬದಲಾಯಿಸಿಮರುಬಳಕೆಯು ಉದ್ಯೋಗವನ್ನು ಸೃಷ್ಟಿಸಬಹುದು; ಆದರೆ ಅವು ಕಡಿಮೆ ಸಂಬಳದ್ದಾಗಿರುತ್ತವೆ, ಅಲ್ಲದೇ ಕೆಲಸದ ಸ್ಥಿತಿಯು ಭೀಕರವಾಗಿರುತ್ತದೆ, ಎಂದು ವಿಮರ್ಶಕರು ಟೀಕಿಸುತ್ತಾರೆ.[೩೪] ಈ ಉದ್ಯೋಗಗಳನ್ನು ಕೆಲವೊಮ್ಮೆ ಕಡಿಮೆ ಮೌಲ್ಯದ ಉದ್ಯೋಗವೆಂದು ಪರಿಗಣಿಸಲಾಗುತ್ತದೆ. ಅವು ಹೆಚ್ಚು ಸಂಬಳ ನೀಡುವಷ್ಟು ಉದ್ಯೋಗಗಳನ್ನು ಕೊಡುವುದಿಲ್ಲ. ಹೆಚ್ಚಿನ ನೈಸರ್ಗಿಕ ನಿಬಂಧನೆಗಳಿಲ್ಲದ ಮತ್ತು/ಅಥವಾ ಕಾರ್ಮಿಕರಿಗೆ ರಕ್ಷಣೆಗಳಿಲ್ಲದ ಪ್ರದೇಶಗಳಲ್ಲಿ, ಹಡಗು ಒಡೆಯುವಿಕೆಯಂತಹ ಮರುಬಳಕೆಯ ಉದ್ಯೋಗಗಳು ಕಾರ್ಮಿಕರಿಗೆ, ಸುತ್ತಮುತ್ತಲಿನ ಸಮುದಾಯಗಳಿಗೆ ವಿಷಾದಕರ ಸ್ಥಿತಿಯನ್ನು ಒದಗಿಸುತ್ತವೆ.
ಕಚ್ಚಾ ಪದಾರ್ಥಗಳು ನೀಡುವ ಉದ್ಯೋಗಗಳಿಗೆ ಸರಿಸಮನಾಗಿ ಉದ್ಯೋಗಗಳನ್ನು ಒದಗಿಸುವ, ಮರುಬಳಕೆ ಕಾರ್ಯವು ಅತಿಕಳಪೆ ಮಟ್ಟದ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಮರಗಳನ್ನು ಕಡಿಯುವುದು ಮತ್ತು ಅದಿರುಗಳ ಗಣಿಗಾರಿಕೆಯು, ಕಾಗದವನ್ನು ಮರುಬಳಕೆ ಮಾಡುವುದು ಮತ್ತು ಲೋಹಗಳ ಮರುಬಳಕೆ ಮಾಡುವುದಕ್ಕಿಂತ ಹೆಚ್ಚು ಅಪಾಯಕಾರಿ.[ಸೂಕ್ತ ಉಲ್ಲೇಖನ ಬೇಕು]
ಮರಗಳನ್ನು ಉಳಿಸುತ್ತದೆ
ಬದಲಾಯಿಸಿಆರ್ಥಿಕ-ನಿರ್ವಾಹಕ ಸ್ಟೀವನ್ ಲ್ಯಾಂಡ್ಸ್‌ಬರ್ಗ್ ಕಾಗದದ ಮರುಬಳಕೆಯು ನಿಜವಾಗಿ ಮರಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ, ಎಂದು ದೂರುತ್ತಾನೆ. ಕಾಗದ ಕಂಪೆನಿಗಳು ಸ್ವಂತವಾಗಿ-ಹೊಂದಿರುವ ಕಾಡುಗಳನ್ನು ಮತ್ತೆ ಬೆಳೆಸುವ ಪ್ರೇರಣೆಯನ್ನು ಪಡೆದಿರುತ್ತವೆ. ಕಾಗದದ ಹೆಚ್ಚಿನ ಬೇಡಿಕೆಗಳು ಕಾಡುಗಳನ್ನು ಬೆಳೆಸುವಂತೆ ಮಾಡುತ್ತವೆ, ಎಂದು ಅವನು ವಾದಿಸುತ್ತಾನೆ. ಅದಕ್ಕೆ ಪ್ರತಿಯಾಗಿ, ಕಾಗದದ ಬೇಡಿಕೆ ಕಡಿಮೆಯಾದಾಗ ಕಾಡುಗಳನ್ನು "ಬೆಳೆಸುವುದೂ" ಕಡಿಮೆಯಾಗುತ್ತದೆ.[೩೫] ಅಂತಹುದೇ ವಾದಗಳು 1995ರಲ್ಲಿ ದ ಫ್ರೀ ಮಾರ್ಕೆಟ್‌ನ ಲೇಖನದಲ್ಲಿ ಪ್ರಕಟಗೊಂಡಿದೆ.[೩೬]
ಕಾಡುಗಳನ್ನು ಬೆಳೆಸುವ ಕಂಪೆನಿಗಳು ಮರಗಳನ್ನು ಕಡಿದಾಗ, ಅವುಗಳ ಜಾಗದಲ್ಲಿ ಇನ್ನಷ್ಟು ಸಸ್ಯಗಳನ್ನು ನೆಡಲಾಗುತ್ತದೆ. ಹೆಚ್ಚಿನ ಕಾಗದವನ್ನು ವಿಶೇಷವಾಗಿ ಕಾಗದ ಉತ್ಪಾದನೆಗೆಂದೇ ಬೆಳೆಯುವ ಕಾಡುಗಳಿಂದ ಪಡೆಯಲಾಗುತ್ತದೆ.[೨೭][೩೩][೩೬][೩೭] "ಬೆಳೆಸುವ" ಕಾಡುಗಳು ಸಹಜಾರಣ್ಯಗಳಿಗೆ ಹೋಲಿಸಿದರೆ ಅನೇಕ ವಿಧಗಳಲ್ಲಿ ಕೀಳುಮಟ್ಟದ್ದಾಗಿವೆ; ಎಂದು ಹೆಚ್ಚಿನ ಪರಿಸರವಾದಿಗಳು ಸೂಚಿಸುತ್ತಾರೆ. ಬೆಳೆಸಿದ ಕಾಡುಗಳು ಸಹಜಾರಣ್ಯಗಳಷ್ಟು ಚುರುಕಾಗಿ ಮಣ್ಣನ್ನು ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿರುವುದಿಲ್ಲ. ಇದು ವ್ಯಾಪಕ ಮಣ್ಣಿನ ಸವಕಳಿಗೆ ಕಾರಣವಾಗುತ್ತದೆ. ಸಹಜಾರಣ್ಯಗಳಿಗೆ ಹೋಲಿಸಿದರೆ ಕಡಿಮೆ ಮರ ಮತ್ತು ವನ್ಯಜೀವಿಗಳ ಜೈವಿಕ-ವೈವಿಧ್ಯತೆಯನ್ನು ಹೊಂದಿರುವಾಗ, ಹೆಚ್ಚಿನ ಪ್ರಮಾಣದ ಫಲವತ್ತತೆಗಳ ಅವಶ್ಯಕತೆ ಇರುತ್ತದೆ.[೩೮] ಅಲ್ಲದೆ, ನೆಟ್ಟ ಮರಗಳು ಕಡಿದ ಮರಗಳಷ್ಟು ದೊಡ್ಡದಾಗಿರುವುದಿಲ್ಲ. ಅರಣ್ಯಾಧಿಕಾರಗಳು ಸಸಿಗಳನ್ನು ಲೆಕ್ಕ ಮಾಡುವಾಗ ಅವರ ಗಮನಕ್ಕೆ ಬಂದಿರದ ಅನೇಕ ಮರಗಳು ಇರಬಹುದು.
ಕಾಗದದ ಮರುಬಳಕೆ ಮಾಡುವುದೆಂದರೆ ಉಷ್ಣವಲಯದ ಕಾಡುಗಳನ್ನು ಉಳಿಸುವುದು ಎಂದು ತಪ್ಪಾಗಿ ತಿಳಿಯಬಾರದು. ಹೆಚ್ಚಿನ ಜನರು ಕಾಗದ-ತಯಾರಿಸುವುದು ಉಷ್ಣವಲಯದ ಮಳೆಕಾಡುಗಳ ನಾಶಕ್ಕೆ ಕಾರಣವಾಗುತ್ತದೆ, ಎಂಬ ತಪ್ಪು ಗ್ರಹಿಕೆ ಹೊಂದಿದ್ದಾರೆ. ಆದರೆ ಕಾಗದ ತಯಾರಿಸಲು ಉಷ್ಣವಲಯದ ಮರಗಳನ್ನು ಅತಿ ವಿರಳವಾಗಿ ಉಪಯೋಗಿಸಲಾಗುತ್ತದೆ. ಅರಣ್ಯನಾಶವು ಮುಖ್ಯವಾಗಿ, ಕೃಷಿಗೆ ಅಥವಾ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಭೂಮಿಯ ಅವಶ್ಯಕವಾಗುವಂತಹ ಜನಸಂಖ್ಯೆಯ ಒತ್ತಡದಿಂದ ಆಗುತ್ತದೆ. ಆದ್ದರಿಂದ, ಕಾಗದದ ಮರುಬಳಕೆಯು ಮರಗಳ ಬೇಡಿಕೆಯನ್ನು ಕಡಿಮೆ ಮಾಡಿದರೂ, ಇದರಿಂದ ಉಷ್ಣವಲಯದ ಮಳೆಕಾಡುಗಳಿಗೆ ಹೆಚ್ಚು ಪ್ರಯೋಜನವಾಗುವುದಿಲ್ಲ.[೩೯]
ಸಂಭಾವ್ಯ ಆದಾಯ ನಷ್ಟ ಮತ್ತು ಸಾಮಾಜಿಕ ವೆಚ್ಚ
ಬದಲಾಯಿಸಿಪ್ರಪಂಚದ ಕೆಲವು ಶ್ರೀಮಂತ ಮತ್ತು ಹೆಚ್ಚಿನ ಕಡಿಮೆ-ಶ್ರೀಮಂತ ರಾಷ್ಟ್ರಗಳಲ್ಲಿ, ಮರುಬಳಕೆಯ ಸಾಂಪ್ರದಾಯಿಕ ಕೆಲಸವನ್ನು ಕರುಂಗ್ ಗುನಿ, ಜಬಲೀನ್, ಚಿಂದಿ ಮತ್ತು ಅವಶೇಷಗಳನ್ನು ಹೆಕ್ಕುವ ವ್ಯಕ್ತಿ, ತ್ಯಾಜ್ಯ ಆರಿಸುವವ ಮತ್ತು ಕಳಪೆ ವಸ್ತುಗಳನ್ನು ಸಂಗ್ರಹಿಸುವ ವ್ಯಕ್ತಿ(ಜಂಕ್ ಮ್ಯಾನ್) ಮೊದಲಾದ ವಾಣಿಜ್ಯವಾಗಿ-ಸಾಮಾನ್ಯ ಸ್ಥಿತಿಯಲ್ಲಿರುವವರು ಮಾಡುತ್ತಾರೆ. ಕಾನೂನಿನಿಂದ ಅಥವಾ ಪ್ರಮಾಣಾನುಗುಣ ಉಳಿತಾಯದಿಂದ ಲಾಭದಾಯಕವಾದ ಅತಿಹೆಚ್ಚಿನ ಮರುಬಳಕೆಯ ಸಂಸ್ಥೆಗಳ ನಿರ್ಮಾಣದಿಂದಾಗಿ,[೪೦][೪೧] ಸಾಮಾನ್ಯರು ಮರುಬಳಕೆಯಿಂದ ಮತ್ತು ಪುನಃ-ತಯಾರಿಕಾ ಮಾರುಕಟ್ಟೆಯಿಂದ ಹೊರದೂಡಲ್ಪಟ್ಟಿದ್ದಾರೆ. ಸಾಮಾನ್ಯರ ಈ ಆದಾಯದ ನಷ್ಟವನ್ನು ಸರಿದೂಗಿಸಲು, ಸಮಾಜವೊಂದು ಹೆಚ್ಚುವರಿ ಸಾಮಾಜಿಕ ಯೋಜನೆಗಳನ್ನು ರಚಿಸುವ ಅವಶ್ಯಕತೆ ಇದೆ[೪೨]. ಬ್ರೋಕನ್ ವಿಂಡೊ ಕಥೆಯಂತೆ, ಸಾಮಾನ್ಯರಿಗೆ ಮತ್ತು ಕಾನೂನಿನ ಮೂಲಕ ಮರುಬಳಕೆಯನ್ನು ಕೃತಕವಾಗಿ ಲಾಭದಾಯಕವಾಗಿ ಮಾಡಲು ಪ್ರಯತ್ನಿಸುವ ಸಮಾಜಕ್ಕೆ ಒಟ್ಟು ನಷ್ಟವಾಗುತ್ತದೆ.
ರಾಷ್ಟ್ರದ ಸಾಮಾಜಿಕ ಬೆಂಬಲವು ಮರುಬಳಕೆ ಕೆಲಸ ಮಾಡುವ ಸಾಮಾನ್ಯರ ಆದಾಯದ ನಷ್ಟಕ್ಕಿಂತ ಕಡಿಮೆ ಇರುವುದರಿಂದ, ಸಾಮಾನ್ಯರು ಮರುಬಳಕೆ ಸಂಸ್ಥೆಗಳೊಂದಿಗೆ ಸಂಘರ್ಷಕ್ಕೊಳಗಾಗುವ ಸಂಭವವು ಅಧಿಕವಾಗಿರುತ್ತವೆ.[೪೩][೪೪] ಕೆಲವು ತ್ಯಾಜ್ಯವು ಪುನಸ್ಸಂಸ್ಕರಿಸುವುದಕ್ಕಿಂತ ಅದರ ಪ್ರಸ್ತುತ ರೂಪದಲ್ಲೇ ಹೆಚ್ಚು ಆರ್ಥಿಕವಾಗಿ ಮರುಬಳಸುವಂತಿರುತ್ತವೆ; ಎಂದು ಕೆಲವರು ನಿರ್ಧರಿಸಬಹುದು ಎಂಬುದು ಇದರರ್ಥ. ಮರುಬಳಕೆ ಮಾಡುವ ಸಾಮಾನ್ಯರಿಗೆ ವಿರುದ್ಧವಾಗಿ, ಅವರ ಮರುಬಳಕೆ ಮಾಡುವ ಕಾರ್ಯಚಟುವಟಿಕೆಯು ನಿಜವಾಗಿ ಕೆಲವು ವಸ್ತುಗಳಿಗೆ ಹೆಚ್ಚಾಗಿರಬಹುದು; ಏಕೆಂದರೆ “ತ್ಯಾಜ್ಯ” ಎಂದು ತಿಳಿದಿರುವವುಗಳ ಮೇಲೆ ಅವರು ಹೆಚ್ಚಿನ ನಿಯಂತ್ರಣ ಹೊಂದಿರುತ್ತಾರೆ.[೪೫]
ಕಾರ್ಮಿಕರನ್ನು ಹೆಚ್ಚಾಗಿ ಬಳಸಿಕೊಳ್ಳುವ ಒಂದು ತ್ಯಾಜ್ಯವೆಂದರೆ ಇಲೆಕ್ಟ್ರಾನಿಕ್ ಮತ್ತು ಕಂಪ್ಯೂಟರ್ ತ್ಯಾಜ್ಯ. ಏಕೆಂದರೆ ಈ ತ್ಯಾಜ್ಯವು ಪುನ:ಕಾರ್ಯ ಮಾಡಬಹುದು, ಅಲ್ಲದೇ ಸಾಮಾನ್ಯರಿಗೆ ಹೆಚ್ಚು ಅವಶ್ಯಕವಾಗಬಹುದು. ಸಾಮಾನ್ಯರು ಇದನ್ನು ಮಾರಾಟ ಮಾಡಬಹುದು, ಅಥವಾ ಮರುಬಳಕೆ ಮಾಡುವವರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು.
ಹೆಚ್ಚಿನ ಮರುಬಳಕೆ ಬೆಂಬಲಿಗರು ಈ ತಟಸ್ಥ್ಯ-ಧೋರಣೆಯ ಮರುಬಳಕೆಯು ಸಮಾಜದ ಎಲ್ಲಾ ಮರುಬಳಕೆ ಅವಶ್ಯಕತೆಗಳನ್ನು ಸರಿಹೊಂದಿಸುವುದಿಲ್ಲ, ಎಂದು ನಂಬುತ್ತಾರೆ. ಆದ್ದರಿಂದ ಇದು ಆಯೋಜಿತ ಮರುಬಳಕೆ ಕಾರ್ಯದ ಅವಶ್ಯಕತೆಯನ್ನು ನಿರಾಕರಿಸಬಾರದು[೪೫]. ಸ್ಥಳೀಯ ಸರಕಾರವು ಮರುಬಳಕೆ ಚಟುವಟಿಕೆಗಳು ಭೂಮಿಯ ನಾಶಕ್ಕೆ ಕಾರಣವಾಗುವುದರಿಂದ ಅವು ಉತ್ತಮವಾದುದಲ್ಲವೆಂದು ಪರಿಗಣಿಸುತ್ತದೆ.
ವೃತ್ತಪತ್ರಿಕೆ ಕಾಗದ
ಬದಲಾಯಿಸಿಪ್ರಪಂಚದಲ್ಲಿ ವೃತ್ತಪತ್ರಿಕೆ ಕಾಗದವನ್ನು ಮರುಬಳಸಿದ ನಾರಿನಿಂದ ಅತಿಹೆಚ್ಚಿನ ಪ್ರಮಾಣದಲ್ಲಿ ತಯಾರಿಸುತ್ತಾರೆ. ಈ ಅತಿಹೆಚ್ಚಿನ ಉಪಯೋಗವು ಮರುಬಳಕೆಯ ಕ್ರಿಯೆದಿಂದ ಆಗುತ್ತಿದೆ. ಯಾವುದೇ ಮರುಬಳಕೆಯ ಕಳಪೆ-ಪತ್ರಿಕೆಗಳ ಮಿಲ್ಲನ್ನು ಪ್ರವೇಶಿಸುವ ಕೆಲವು ನಾರುಗಳು ತಿರುಳು ತೆಗೆಯುವ ಕ್ರಿಯೆಯಲ್ಲಿ ಹಾಳಾಗುತ್ತವೆ. ಕಾರ್ಯವು ಪರಿಣಾಮಕಾರಿ ಅಲ್ಲದಿರುವುದರಿಂದ ಹೀಗಾಗುತ್ತದೆ. ಫ್ರೆಂಡ್ಸ್ ಆಫ್ ಅರ್ಥ್‌ನ[೪೬] U.K. ವಿಭಾಗದ ವೆಬ್‌ಸೈಟ್‌ನ ಪ್ರಕಾರ, ಮರದ ನಾರು ಒಂದನ್ನೇ ಸಾಮಾನ್ಯವಾಗಿ ನಾರಿಗೆ ಹಾನಿಯಾಗುವವರೆಗೆ ಐದು ಬಾರಿ ಮರುಬಳಕೆ ಮಾಡಬಹುದು. ಆದ್ದರಿಂದ ಪ್ರಪಂಚದಾದ್ಯಂತ ಪ್ರತಿ ವರ್ಷ ಬಳಸಲ್ಪಡುವ ವೃತ್ತಪತ್ರಿಕೆ ಕಾಗದದ ಪ್ರಮಾಣವು ಬಳಸದ-ನಾರನ್ನು ಉಪಯೋಗಿಸುವುದನ್ನು ಕಡಿಮೆಮಾಡಬೇಕಾಗುತ್ತದೆ.ಅದಲ್ಲದೇ ಪ್ರತಿಯೊಂದು ವೃತ್ತಪತ್ರಿಕೆ ಕಾಗದ ಮಿಲ್ಲು 100% ಮರುಬಳಸಿದ ನಾರನ್ನೇ ಬಳಸಲು ಆರಂಭಿಸಿದರೂ ಜಾಗತಿಕವಾಗಿ ಪ್ರತಿ ವರ್ಷ ನಿಶ್ಚಿತ ಪ್ರಮಾಣದ ಹೊಸ (ಕಚ್ಚಾ) ನಾರು ಬೇಕಾಗಬಹುದು.
ಕೆಲವು ಹಳೆಯ ಪತ್ರಿಕೆಗಳು ಮರುಬಳಸಲ್ಪಡುವುದಿಲ್ಲ, ಮನೆಯ ಅಥವಾ ಕೈಗಾರಿಕೆಗಳ ವಿವಿಧ ಕೆಲಸಗಳಿಗೆ ಉಪಯೋಗಿಸಲ್ಪಡುತ್ತವೆ, ಅಥವಾ ಭೂಮಿಯಲ್ಲಿ ಹೂತುಹಾಕಲಾಗುತ್ತದೆ. ಮರುಬಳಕೆಯ ದರಗಳು (ನಂತರ ಮರುಬಳಸಲ್ಪಡುವ ವಾರ್ಷಿಕ ವೃತ್ತಪತ್ರಿಕೆ ಕಾಗದದ ಬಳಕೆ) ರಾಷ್ಟ್ರದಿಂದ ರಾಷ್ಟ್ರಕ್ಕೆ ಮತ್ತು ರಾಷ್ಟ್ರಗಳೊಳಗೆ, ನಗರದಿಂದ ಗ್ರಾಮೀಣ ಪ್ರದೇಶಗಳಿಗೆ ಮತ್ತು ನಗರದಿಂದ ನಗರಕ್ಕೆ ವ್ಯತ್ಯಾಸಗೊಳ್ಳುತ್ತದೆ. ಅಮೆರಿಕನ್ ಫಾರೆಸ್ಟ್ & ಪೇಪರ್ ಅಸೋಸಿಯೇಶನ್, ಉತ್ತರ ಅಮೆರಿಕಾದಲ್ಲಿ 2006ರಲ್ಲಿ ತಯಾರಾದ 72%ಗಿಂತಲೂ ಹೆಚ್ಚು ವೃತ್ತಪತ್ರಿಕೆ ಕಾಗದವನ್ನು ಮರುಬಳಕೆ ಅಥವಾ ರಫ್ತಿಗಾಗಿ ಪಡೆದುಕೊಳ್ಳಲಾಯಿತು. ಅದರಲ್ಲಿ ಸುಮಾರು 58%ನಷ್ಟು ಮರುಬಳಕೆಗಾಗಿ ಕಾಗದ ಅಥವಾ ರಟ್ಟಿನ ಮಿಲ್ಲಿಗೆ ಹಿಂದಿರುಗಿಸಲ್ಪಟ್ಟಿತು, 16%ನಷ್ಟು ಕಳಪೆ ಪತ್ರಿಕೆಗಳ ಮಿಲ್ಲುಗಳಿಂದ (ಮೊಟ್ಟೆಯ ಕಾರ್ಟೂನುಗಳನ್ನು ತಯಾರಿಸಲು) ಬಳಸಲ್ಪಟ್ಟಿತು. ಇನ್ನುಳಿದವು ಕಡಲಾಚೆಯ ಪ್ರದೇಶಗಳಿಗೆ ಹಡಗಿನ ಮೂಲಕ ಸಾಗಿಸಲ್ಪಟ್ಟವು, ಎಂದು ಅಂದಾಜು ಮಾಡಿದೆ. ಉತ್ತರ ಅಮೆರಿಕಾದ ಕಾಗದ ಅಥವಾ ರಟ್ಟಿನ ಮಿಲ್ಲು ಮರುಬಳಸಿದ ಪ್ರಮಾಣದಲ್ಲಿ ಸುಮಾರು ಮೂರು ಭಾಗದಷ್ಟು ವೃತ್ತಪತ್ರಿಕೆ ಕಾಗದ ತಯಾರಿಸುವುದಕ್ಕೇ ಹಿಂದಿರುಗಿಸಲ್ಪಟ್ಟಿತು, ಎಂದು AFPA ಅಂದಾಜಿಸಿದೆ. ಮರುಬಳಕೆಯ ದರಗಳು ಹಳೆಯ ಪತ್ರಿಕೆಗಳಿಗೆ ಮಾರುಕಟ್ಟೆಯು ಪಾವತಿಸುವ ಬೆಲೆಯೊಂದಿಗೆ ಕಾಲದಿಂದ ಕಾಲಕ್ಕೆ ವ್ಯತ್ಯಾಸಗೊಳ್ಳಬಹುದು. ಇದು ಸ್ವಲ್ಪಮಟ್ಟಿಗೆ ಅಸ್ಥಿರವಾಗಿರುತ್ತದೆ. ಉದಾಹರಣೆಗೆ, ಇತ್ತೀಚಿನ ವರ್ಷಗಳಲ್ಲಿ U.S. ಮತ್ತು ಬೇರೆ ಕಡೆಗಳಿಂದ ಆಮದು ಮಾಡಿಕೊಂಡ ಮರುಬಳಕೆ ನಾರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಂಡು, ಚೀನಾವು ವಿವಿಧ ಪ್ರಕಾರದ ಕಾಗದ ಮತ್ತು ಪ್ಯಾಕಿಂಗ್ ಪದಾರ್ಥಗಳ ತಯಾರಕವಾಗಿ ಬೆಳೆಯುತ್ತಿರುವುದರಿಂದ, ಹಳೆಯ ಪತ್ರಿಕೆಗಳ ಬೇಡಿಕೆಯು ಪ್ರಪಂಚದಾದ್ಯಂತ ಮರುಬಳಕೆಯ ನಾರಿನ ಬೆಲೆಗಳ ಮೇಲೆ ಪ್ರಭಾವ ಬೀರುವಷ್ಟು ಪ್ರಬಲವಾಗಿದೆ. ಮರುಬಳಕೆಯ ನಾರಿನ ಬೆಲೆ ಏರುವುದರಿಂದ ಬೇಡದ ವಸ್ತುಗಳನ್ನು ಭೂಮಿಯೊಳಗೆ ಹೂತುಹಾಕುವುದನ್ನು ಕಡಿಮೆ ಮಾಡಬಹುದು. ಅಲ್ಲದೆ ಇದು ಮರುಬಳಕೆಯ ನಾರನ್ನು ಉಪಯೋಗಿಸುವ ವೃತ್ತಪತ್ರಿಕೆ ಕಾಗದ ಮಿಲ್ಲುಗಳಿಗೆ ಲಾಭ ಒದಗಿಸುತ್ತದೆ.
ಬೆಲೆ ಏರಿದ ಹೊರತಾಗಿಯೂ ವೃತ್ತಪತ್ರಿಕೆ ಕಾಗದ ಮಿಲ್ಲುಗಳು ನಾರನ್ನು ಆರಿಸಲು ಪ್ರಮುಖ ಕಾರಣವೆಂದರೆ, ಅತಿಹೆಚ್ಚಿನ ವೇಗದ ಆಧುನಿಕ ವೃತ್ತಪತ್ರಿಕೆ ಕಾಗದ ಯಂತ್ರಗಳು ಮತ್ತು ಆಧುನಿಕ ಪತ್ರಿಕಾ ಮುದ್ರಣಾಲಯಗಳು. ಕೈಗಾರಿಕಾ ಮಾಹಿತಿ ಗುಂಪು RISI ಇಂಕ್.ನ ಪ್ರಕಾರ, ಪ್ರತಿ ನಿಮಿಷಕ್ಕೆ 1,400 ಮೀಟರ್ ವೇಗದ ವೃತ್ತಪತ್ರಿಕೆ ಕಾಗದ ಯಂತ್ರಗಳು U.S.ನಲ್ಲಿವೆ. ಪ್ರಪಂಚದ ಹೊಚ್ಚಹೊಸ ಯಂತ್ರಗಳು (ಚೀನಾದಲ್ಲಿ ಇತ್ತೀಚಿಗೆ ಸ್ಥಾಪಿಸಲಾದ ಕೆಲವನ್ನು ಒಳಗೊಂಡು) ಪ್ರತಿ ನಿಮಿಷಕ್ಕೆ 1,800 ಮೀಟರ್‌ಗಳಷ್ಟು ವೇಗವನ್ನು ಹೊಂದಿವೆ. ಆಧುನಿಕ ಪತ್ರಿಕೆ ಮುದ್ರಣಾಲಯಗಳು ಪ್ರತಿ ಗಂಟೆಗೆ 90,000 ಪ್ರತಿಗಳನ್ನು ತಯಾರಿಸುವಷ್ಟು ವೇಗದಲ್ಲಿ ಕೆಲಸ ಮಾಡಬಹುದು. (ಪ್ರಕಾಶನ ಉದ್ಯಮ ಸಂಸ್ಥೆ IFRA ಪ್ರಕಾರ), ಕೆಲವು ಪ್ರತಿ ಗಂಟೆಗೆ 100,000 ಪ್ರತಿಗಳಷ್ಟು ವೇಗ ಹೊಂದಿವೆ.
ಅಂತಹ ಅಧಿಕ ವೇಗವು, ಕಾಗದ ತಯಾರಿಕಾ ಕಾರ್ಯದ ಸಂದರ್ಭದಲ್ಲಿ ಯಂತ್ರ ಮತ್ತು ಮುದ್ರಣದಲ್ಲಿ ಮುದ್ರಣಾಲಯವು ಹೆಚ್ಚಿನ ಪ್ರಮಾಣದ ಹಾಳೆಯನ್ನು ಉಳಿಸಲು ನೆರವಾಗುತ್ತದೆ. ಪ್ರಪಂಚದಾದ್ಯಂತ ಇರುವ ಅನೇಕ ವೃತ್ತಪತ್ರಿಕೆ ಕಾಗದ ಮಿಲ್ಲುಗಳು, 100% ಮರುಬಳಕೆಯ ನಾರನ್ನು ಬಳಸಿಕೊಂಡು ವಾಣಿಜ್ಯ ರೀತಿಯಲ್ಲಿ ಸ್ವೀಕಾರಾರ್ಹ ಗುಣಮಟ್ಟದ ವೃತ್ತಪತ್ರಿಕೆ ಕಾಗದವನ್ನು ತಯಾರಿಸುತ್ತವೆ. ಅಂತಹ ಮಿಲ್ಲು ಕಾರ್ಯಾಚರಣೆಯು ತ್ಯಾಜ್ಯ ರಾಶಿಯ ಶುದ್ಧತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅವು ಕನಿಷ್ಟ ದೋಷಗಳನ್ನು ಹೊಂದಿರುವಂತೆ ಮತ್ತು ಸಾಧ್ಯವಾದಷ್ಟು ಉದ್ದ-ನಾರಿನ ಹಳೆಯ ವೃತ್ತಪತ್ರಿಕೆ ಕಾಗದವನ್ನು ಬಳಸಿಕೊಳ್ಳುವಂತೆ ದೃಢಪಡಿಸಿಕೊಳ್ಳಬೇಕು. ಕಚ್ಚಾ ವೃತ್ತಪತ್ರಿಕೆ ಕಾಗದವನ್ನು ಸ್ಪ್ರೂಸ್, ಫರ್‌ಮರ, ಬಾಲ್ಸಮ್ ಮತ್ತು ಪೈನ್‌ಮರದಂತಹ ಉದ್ದ-ನಾರಿನ (ಮೆದುದಾರ) ಮರಗಳಿಂದ ಮಾಡಲಾಗುತ್ತದೆ. ಕೆಲವು ಕಾಗದ ಮತ್ತು ರಟ್ಟಿನ ಉತ್ಪನ್ನಗಳನ್ನು ಸಣ್ಣ-ನಾರಿನ ಗಟ್ಟಿಮರದ ಜಾತಿಗಳಿಂತ ತಯಾರಿಸಲಾಗುತ್ತದೆ. ವೃತ್ತಪತ್ರಿಕೆ ಕಾಗದ ಮಿಲ್ಲುಗಳು ಇತರ ಕಾಗದಗಳನ್ನು ಮರುಬಳಕೆ ಮಾಡುವ ಬದಲು, ಹಳೆಯ ಪತ್ರಿಕೆಗಳನ್ನು ಅಥವಾ ಹಳೆಪತ್ರಿಕೆಗಳ ಮತ್ತು ಹಳೆಯ ನಿಯತಕಾಲಿಕಗಳ ಮಿಶ್ರಣವನ್ನು ಬಳಸಲು ಹೆಚ್ಚು ಆದ್ಯತೆ ಕೊಡುತ್ತವೆ. U.S. ಪುರಸಭೆಗಳು ಇತ್ತೀಚಿಗೆ ವಿವಿಧ ತ್ಯಾಜ್ಯ ಉತ್ಪನ್ನಗಳನ್ನು ಏಕ ವಿಭಾಗದ ವಾಹನದಿಂದ ಸಂಗ್ರಹಿಸುವ “ಏಕ ರಾಶಿ”ಯ ಮರುಬಳಕೆ ಕ್ರಿಯೆಯನ್ನು ಆರಂಭಿಸಿವೆ. ಮಿಲ್ಲುಗಳು ತಿರುಳು ತೆಗೆಯುವ ಕೆಲಸಗಳಿಗಾಗಿ ಸ್ವಚ್ಛ, ಸರಿಯಾದ ತ್ಯಾಜ್ಯವನ್ನು ಸಂಗ್ರಹಿಸಲು ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗಿದೆ.
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ
ಬದಲಾಯಿಸಿಸರಕಾರ ನಿರ್ದೇಶಿಸಿದ ಮರುಬಳಕೆಯು ಸಂಪನ್ಮೂಲಗಳನ್ನು ಉಳಿಸುವುದಕ್ಕಿಂತ ಹೆಚ್ಚು ಹಾಳುಮಾಡುತ್ತದೆ; ಎಂದು ದ ನ್ಯೂಯಾರ್ಕ್ ಟೈಮ್ಸ್ ನ 1996ರ ಲೇಖನವೊಂದರಲ್ಲಿ ಜಾನ್ ಟೈರ್ನಿ ಹೇಳಿದ್ದಾನೆ.[೨೩] ಆ ಲೇಖನದ ಕೆಲವು ಮುಖ್ಯಾಂಶಗಳು:
- ಮರುಬಳಕೆಯು ನಿಜವಾಗಿಯೂ ಅಲ್ಯೂಮಿನಿಯಂ ಚೂರುಗಳಂತಹ ಸಂಪನ್ಮೂಲಗಳನ್ನು ಉಳಿಸಿದರೆ, ಇದು ಮಾರುಕಟ್ಟೆ ದರದಲ್ಲಿ ಪ್ರತಿಬಿಂಬಿಸಲ್ಪಡುತ್ತದೆ. ಅದಲ್ಲದೇ ಇಲ್ಲಿ ಸ್ವಯಂಪ್ರೇರಿತವಾಗಿ ಮರುಬಳಕೆ ಮಾಡಲು ಆರಂಭಿಸಬಹುದು. ಆದ್ದರಿಂದ ಸರಕಾರವು ಇದನ್ನು ನಿರ್ದೇಶಿಸುವ ಅಗತ್ಯವಿಲ್ಲ.
- 'ಎಸೆದಾಗ ಹಣ ಪಾವತಿಸುವ' ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಜನರು "ಮರುಬಳಕೆ ತೊಟ್ಟಿಯು ಎಷ್ಟೊಂದು ಬೆಲೆಯುಳ್ಳದ್ದಾಗಿದೆ" ಎಂದು ಕಂಡುಹಿಡಿಯುವುದನ್ನು ಪ್ರೇರೇಪಿಸುತ್ತದೆ. ಆದ್ದರಿಂದ ಮರುಬಳಕೆ ಕಾನೂನುಗಳು ಅಸ್ತಿತ್ವಕ್ಕೆ ಬರುವ ಅವಶ್ಯಕತೆ ಇರುವುದಿಲ್ಲ. ಇದನ್ನು ಕೆಲವು ನೈಸರ್ಗಿಕ ಗುಂಪುಗಳು ಬೆಂಬಲಿಸಿದರೆ ಹೆಚ್ಚು ಉತ್ತಮ.
- ಮರಗಳನ್ನು ಬೆಳೆಸುವವರು ಕಡಿಯುವುದಕ್ಕಿಂತ ಹೆಚ್ಚು ಸಸಿಗಳನ್ನು ಅವರು ನೆಡುತ್ತಾರೆ.
- ಸರಕಾರ ನಿರ್ದೇಶಿಸಿದ ಮರುಬಳಕೆಯು, ತ್ಯಾಜ್ಯವನ್ನು ಭೂಮಿಯೊಳಗೆ ಹೂತುಹಾಕುವುದಕ್ಕಿಂತ ಹೆಚ್ಚು ದುಬಾರಿಯಾಗಿದೆ.
- ಬೇಡದ ವಸ್ತುಗಳನ್ನು ಭೂಮಿಯೊಳಗೆ ಹೂತುಹಾಕುವ ಕೆಲವು ಸಣ್ಣ ಪಟ್ಟಣಗಳು, ಇತರ ನಗರಗಳಿಂದ ಮತ್ತು ರಾಜ್ಯಗಳಿಂದ ತ್ಯಾಜ್ಯವನ್ನು ಸಂತೋಷದಿಂದ ಆಮದು ಮಾಡಿಕೊಳ್ಳುತ್ತವೆ, ಏಕೆಂದರೆ ಅದು ಉದ್ಯೋಗ ಮತ್ತು ತೆರಿಗೆ ಆದಾಯವನ್ನು ಒದಗಿಸುತ್ತದೆ.
- ಇಂದಿನ ಆಧುನಿಕ ಭೂಮಿಯೊಳಗೆ-ಹೂತುಹಾಕುವ ವ್ಯವಸ್ಥೆಯು ಹೆಚ್ಚು ಚೊಕ್ಕಟವಾದುದು. ಅಲ್ಲದೇ ಸುರಕ್ಷಿತವಾದುದು ಹೀಗೆ ಸೋರಿಹೋಗುವ ಮತ್ತು ಕುಲಷಿತಗೊಳ್ಳುವ ಸಂಭವ ಹಿಂದಿನದಕ್ಕಿಂತ ತುಂಬಾ ಕಡಿಮೆ ಇದೆ.
- ಸುಟ್ಟು ಹಾಕುವುದು ಮರುಬಳಕೆ ಉಳಿಸುವುದಕ್ಕಿಂತ ಹೆಚ್ಚು ಇಂಧನವನ್ನು ಕೊಡುತ್ತದೆ. ಹೊಳಪು ಕಾಗದದಂತಹ ಕೆಲವು ವಸ್ತುಗಳನ್ನು ಮರುಬಳಕೆ ಮಾಡಲಾಗುವುದಿಲ್ಲ. ಅಂತಹವನ್ನು ಇಂಧನ ಪಡೆಯಲು ಸುಟ್ಟುಹಾಕುವುದೇ ಉತ್ತಮ.
- U.S. ಹೆಚ್ಚು ಭೂಮಿಯೊಳಗೆ ಹೂತುಹಾಕುವ ಜಾಗವನ್ನು ಬಳಸಿಕೊಳ್ಳುತ್ತದೆ, ಎಂಬ ದೂರಿನ ಬಗ್ಗೆ ಟೈರ್ನಿಯು ಹೀಗೆ ಬರೆದಿದ್ದಾನೆ - "ಅಮೇರಿಕನ್ನರು ತ್ಯಾಜ್ಯ ಉತ್ಪಾದಿಸುವುದನ್ನು ಪ್ರಸ್ತುತ ಇರುವ ದರದಲ್ಲೇ 1,000 ವರ್ಷಗಳವರೆಗೆ ಮಾಡಿದರೆ ಮತ್ತು ಅವರ ಎಲ್ಲಾ ತ್ಯಾಜ್ಯವನ್ನು 100 yards (91 m)ನಷ್ಟು ಆಳದಲ್ಲಿ ಭೂಮಿಯೊಳಗೆ ಹೂತುಹಾಕಿದರೆ, 3000 ವರ್ಷದ ಹೊತ್ತಿಗೆ ಈ ರಾಷ್ಟ್ರೀಯ ತ್ಯಾಜ್ಯ ರಾಶಿಯು ಪ್ರತಿ ಬದಿಯಲ್ಲಿ 35 miles (56 km) ಭೂಮಿಯ ಚದರ ಭಾಗವನ್ನು ತುಂಬಬಹುದು, ಎಂದು ವಾಶಿಂಗ್ಟನ್‌ನ ಸ್ಪೊಕೇನ್‌ನ ಗೊಂಜಾಗ ವಿಶ್ವವಿದ್ಯಾನಿಲಯದ ಆರ್ಥಿಕ-ನೀರ್ವಾಹಕ A. ಕ್ಲಾರ್ಕ್ ವೈಸ್‌ಮ್ಯಾನ್ ಅಂದಾಜು ಮಾಡಿದ್ದಾನೆ. ಅಮೆರಿಕಾದ ಗಾತ್ರಕ್ಕೆ ಹೋಲಿಸಿದರೆ ಇದು ಹೆಚ್ಚು ಗಂಭೀರ ಅನಿಸುವುದಿಲ್ಲ. ತ್ಯಾಜ್ಯವು ಪರಿಸರವಾದಿಗಳು ಸೂಚಿಸಿದ ಸೌರ ಹಲಗೆಗಳ ರಾಷ್ಟ್ರೀಯ ಶ್ರೇಣಿಗೆ ಬೇಕಾದ ಪ್ರದೇಶದ ಕೇವಲ ಶೇಕಡ 5 ರಷ್ಟು ಜಾಗವನ್ನು ಮಾತ್ರ ಆವರಿಸುತ್ತದೆ. ಸಹಸ್ರವರ್ಷದ ಭೂಮಿಯೊಳಗೆ ಹೂತುಹಾಕುವಿಕೆಯು, ಅಮೆರಿಕ ಸಂಯುಕ್ತ ಸಂಸ್ಥಾನ ಭೂಖಂಡದಲ್ಲಿ ಈಗ ಮೇಯುವುದಕ್ಕೆ ಲಭ್ಯವಾಗಿರುವ ಭೂಮಿಯ 1 ಶೇಕಡಾ ಜಾಗದ ಹಂತನೇ ಒಂದರಷ್ಟು ಭಾಗಕ್ಕೆ ಸರಿಹೊಂದಬಹುದು. 35-mile (56 km) ಚದರ ಭೂಭಾಗದ ಭವಿಷ್ಯದ ಅನುಭೋಗವನ್ನು ಇದು ತಪ್ಪಿಸುತ್ತದೆ, ಎಂದು ಭಾವಿಸಿದರೆ, ಆ ನಷ್ಟವು ಕೇವಲ ತಾತ್ಕಾಲಿಕವಾದುದು; ಎಂಬುದನ್ನು ನೆನಪಿಡಬೇಕಾಗುತ್ತದೆ. ಹಿಂದಿನ ಭೂಮಿಯೊಳಗೆ ಹೂತುಹಾಕುವಂತೆ, ಅಂತಿಮವಾಗಿ ತ್ಯಾಜ್ಯದ ರಾಶಿಯು ಹುಲ್ಲಿನಿಂದ ಮುಚ್ಚಲ್ಪಡುತ್ತದೆ. ಅಲ್ಲದೇ ರಾಷ್ಟ್ರದ 150,000 square miles (390,000 km2)ನಷ್ಟು ಉದ್ಯಾನ ಭೂಮಿಗೆ ಸಣ್ಣ ಪ್ರಮಾಣದ ಸೇರಿಕೆಯಾಗುತ್ತದೆ."
ಟೈರ್ನಿಯ ಲೇಖನವು ಎನ್ವೈರ್ನ್‌ಮೆಂಟಲ್ ಡಿಫೆನ್ಸ್ ಫಂಡ್‌ನಿಂದ ಉಲ್ಲೇಖನೀಯ ವಿಮರ್ಶೆಯನ್ನು ಪಡೆಯಿತು. ಅದು ಹೀಗೆಂದು ಸೂಚಿಸಿದೆ - "ಲೇಖನವು ಅನೇಕ ಸಲಹಾರ್ಥಿಗಳ ಉಲ್ಲೇಖಗಳು ಮತ್ತು ಮಾಹಿತಿಯನ್ನು ಹಾಗೂ ಮರುಬಳಕೆಗೆ ಪ್ರಬಲ ತಾತ್ವಿಕ ವಿರೋಧವನ್ನು ಹೊಂದಿರುವ ಚಿಂತನಾ ಲಹರಿಯನ್ನು ಆಧರಿಸಿದೆ".[೪೭] 2003ರಲ್ಲಿ ಕ್ಯಾಲಿಫೋರ್ನಿಯಾದ ಸ್ಯಾಂಟ ಕ್ಲಾರಿಟ ನಗರವು ತ್ಯಾಜ್ಯವನ್ನು ಭೂಮಿಯೊಳಗೆ ಹೂತುಹಾಕಲು ಪ್ರತಿ ಟನ್‌ಗೆ $28ನಷ್ಟು ಪಾವತಿಸುತ್ತಿತ್ತು. ನಂತರ ನಗರವು ಪ್ರತಿ ಟನ್‌ಗೆ $1,800 ಖರ್ಚಿನ ಕಡ್ಡಾಯವಾದ ಮರುಬಳಕೆ ಯೋಜನೆಯೊಂದನ್ನು ಆರಿಸಿಕೊಂಡಿತು.[೪೮] 2007ರ ಲೇಖನವೊಂದರಲ್ಲಿ ಡ್ಯೂಕ್ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಅಧ್ಯಕ್ಷ ಮೈಕೆಲ್ ಮುಂಗರ್ ಹೀಗೆಂದು ಬರೆದಿದ್ದಾನೆ - "ಮರುಬಳಕೆಯು ಹೊಸ ವಸ್ತುಗಳನ್ನು ಬಳಸುವುದಕ್ಕಿಂತ ಹೆಚ್ಚು ದುಬಾರಿಯಾದರೆ, ಅದು ಪರಿಣಾಮಕಾರಿಯಾಗಲು ಸಾಧ್ಯವಿಲ್ಲ. ಯಾವುದಾದರೊಂದು ವಸ್ತುವು ಉಪಯುಕ್ತವಾದುದೇ ಅಥವಾ ಕೇವಲ ತ್ಯಾಜ್ಯವೇ ಎಂಬುದನ್ನು ಕಂಡುಹಿಡಿಯಲು ಒಂದು ಸರಳ ಪರೀಕ್ಷೆ ಇದೆ. ಆ ವಸ್ತುವಿಗೆ ಯಾರಾದರೂ ನಿಮಗೆ ಹಣ ನೀಡಿದರೆ, ಅದು ಉಪಯುಕ್ತವಾದುದು. ಅದೇ ಆ ವಸ್ತುವಿಗಾಗಿ ನೀವು ಹಣ ತೆರಬೇಕಾದರೆ, ಅದು ತ್ಯಾಜ್ಯವಾಗಿರುತ್ತದೆ."[೪೯] ಕಳೆದ 2002ರಲ್ಲಿ ಕ್ಯಾಟೊ ಇನ್‌ಸ್ಟಿಟ್ಯೂಟ್‌ನ ನೈಸರ್ಗಿಕ ಸಂಪನ್ಮೂಲ ಅಧ್ಯಯನಗಳ ನಿರ್ದೇಶಕ ಜೆರ್ರಿ ಟೈಲರ್ ದ ಹಾರ್ಟ್‌ಲ್ಯಾಂಡ್ ಇನ್‌ಸ್ಟಿಟ್ಯೂಟ್‌ಗಾಗಿ ಬರೆದ ಲೇಖನದಲ್ಲಿ ಹೀಗಿದೆ - "ಉದಾಹರಣೆಗಾಗಿ, ಹೊಸತಾಗಿ ತಯಾರಾದ ಪ್ಲ್ಯಾಸ್ಟಿಕ್ಅನ್ನು ಮಾರುಕಟ್ಟೆಗೆ ವಿತರಣೆ ಮಾಡಲು X ಖರ್ಚಾದರೆ, ಮರುಬಳಸಿದ ಪ್ಲ್ಯಾಸ್ಟಿಕ್‌ಅನ್ನು ಮಾರುಕಟ್ಟೆಗೆ ಹಂಚಲು 10X ಖರ್ಚಾಗುತ್ತದೆ. ಪ್ಲ್ಯಾಸ್ಟಿಕ್‌ಅನ್ನು ಮರುಬಳಕೆ ಮಾಡಲು ಬೇಕಾಗುವ ಮೂಲಸಂಪತ್ತುಗಳು ಚಿಂದಿಯಿಂದ ಪ್ಲ್ಯಾಸ್ಟಿಕ್‌ಅನ್ನು ತಯಾರಿಸಲು ಬೇಕಾಗುವುದಕ್ಕಿಂತ 10 ಪಟ್ಟು ಹೆಚ್ಚು ದುರ್ಲಭವಾಗಿರುತ್ತವೆ ಎಂದು ಇದರಿಂದ ನಾವು ನಿರ್ಧರಿಸಬಹುದು. ಸಂಪನ್ಮೂಲಗಳ ರಕ್ಷಣೆಗಾಗಿ ಮರುಬಳಕೆ ಮಾಡುವುದರಿಂದ, ಅಂತಹ ಸಂದರ್ಭಗಳಲ್ಲಿ ಮರುಬಳಕೆಯನ್ನು ಕಡ್ಡಾಯಮಾಡುವುದರಿಂದ ಒಳ್ಳೆಯದಕ್ಕಿಂತ ಹಾನಿಯಾಗುವ ಸಂಭವವೇ ಹೆಚ್ಚಿದೆ."[೫೦] 2002ರಲ್ಲಿ WNYC, ನ್ಯೂಯಾರ್ಕ್ ನಗರದ ನಿವಾಸಿಗರು ಮರುಬಳಕೆಗಾಗಿ ಬೇರ್ಪಡಿಸಿದ 40%ನಷ್ಟು ತ್ಯಾಜ್ಯವನ್ನು ಅಂತಿಮವಾಗಿ ಭೂಮಿಯೊಳಗೆ ಹೂತುಹಾಕಲಾಯಿತು, ಎಂದು ವರದಿ ಮಾಡಿದೆ.[೫೧]
ಸಾಮಾನ್ಯ ಮರುಬಳಕೆ ಮಾಡುವಂತಹವು
ಬದಲಾಯಿಸಿಅನೇಕ ವಿವಿಧ ಪ್ರಕಾರದ ವಸ್ತುಗಳನ್ನು ಮರುಬಳಕೆ ಮಾಡಬಹುದು. ಆದರೆ ಪ್ರತಿಯೊಂದು ಪ್ರಕಾರಕ್ಕೂ ಬೇರೆ ಬೇರೆ ತಂತ್ರಜ್ಞಾನದ ಅವಶ್ಯಕತೆ ಇರುತ್ತದೆ.
ಸಿಮೆಂಟು ಜಲ್ಲಿ ಮತ್ತು ಕಾಂಕ್ರೀಟು(ಜಲ್ಲಿಕಲ್ಲು, ಮರಳು ಮತ್ತು ಸಿಮೆಂಟುಗಳ ಮಿಶ್ರಣ)
ಬದಲಾಯಿಸಿಕಟ್ಟಡಗಳ ಕೆಡಹುವಿಕೆಯಿಂದ ಸಂಗ್ರಹಿಸಲಾದ ಕಾಂಕ್ರೀಟು ಸಿಮೆಂಟುಜಲ್ಲಿಯನ್ನು ಹೆಚ್ಚಾಗಿ ಕಪ್ಪುರಾಳ, ಇಟ್ಟಿಗೆ, ಕಸ ಮತ್ತು ಕಲ್ಲು ಮೊದಲಾದವುಗಳೊಂದಿಗೆ ಜಜ್ಜಿಹಾಕುವ ಯಂತ್ರದೊಳಗೆ ಹಾಕಲಾಗುತ್ತದೆ. ಸಿಮೆಂಟು ಜಲ್ಲಿಯ ಸಣ್ಣ ತುಂಡುಗಳನ್ನು ಹೊಸ ನಿರ್ಮಾಣ ಯೋಜನೆಗಳಲ್ಲಿ ಜಲ್ಲಿಯಾಗಿ ಬಳಸಲಾಗುತ್ತದೆ. ಜಜ್ಜಿದ ಮರುಬಳಕೆಯ ಕಾಂಕ್ರೀಟು ಕಶ್ಮಲವನ್ನು ಹೊಂದಿಲ್ಲದಿದ್ದರೆ, ಅದನ್ನು ಹೊಸ ಕಾಂಕ್ರೀಟಿನಲ್ಲಿ ಒಣ ಸಿಮೆಂಟುಜಲ್ಲಿಯಾಗಿಯೂ ಉಪಯೋಗಿಸಲಾಗುತ್ತದೆ. ಇದು ಇತರ ಕಲ್ಲುಗಳನ್ನು ನೆಲದಿಂದ ತೋಡಿ ತೆಗೆಯುವುದನ್ನು ಕಡಿಮೆ ಮಾಡುತ್ತದೆ. ಆ ಮೂಲಕ ಇದು ಮರಗಳನ್ನು ಮತ್ತು ಆವಾಸಸ್ಥಾನಗಳನ್ನು ಉಳಿಸುತ್ತದೆ.[೫೨]
ಬ್ಯಾಟರಿಗಳು
ಬದಲಾಯಿಸಿಬ್ಯಾಟರಿಗಳು ಗಾತ್ರ ಮತ್ತು ಪ್ರಕಾರಗಳಲ್ಲಿ ಅತಿಹೆಚ್ಚಾಗಿ ವ್ಯತ್ಯಾಸಗೊಳ್ಳುವುದರಿಂದ, ಅವುಗಳ ಮರುಬಳಕೆಯು ತುಂಬಾ ಕಷ್ಟಕರವಾಗಿದೆ: ಒಂದೇ ಪ್ರಕಾರದವುಗಳನ್ನು ಮೊದಲು ಬೇರ್ಪಡಿಸಬೇಕು, ನಂತರ ಪ್ರತಿಯೊಂದು ಪ್ರಕಾರಕ್ಕೂ ಬೇರೆಯೇ ಆದ ಮರುಬಳಕೆ ಕ್ರಿಯೆಯ ಅವಶ್ಯಕತೆ ಇರುತ್ತದೆ. ಇದಕ್ಕೆ ಹೆಚ್ಚುವರಿಯಾಗಿ, ಹಳೆಯ ಬ್ಯಾಟರಿಗಳು ಪಾದರಸ ಮತ್ತು ಕ್ಯಾಡ್ಮಿಯಂಅನ್ನು ಹೊಂದಿರುತ್ತವೆ. ಇವು ತುಂಬಾ ಹಾನಿಕರ ಅಂಶಗಳಾಗಿರುವುದರಿಂದ ಹೆಚ್ಚು ಜಾಗೃತೆಯಿಂದ ನಿರ್ವಹಿಸಬೇಕು. ನೈಸರ್ಗಿಕವಾಗಿ ಅಧಿಕ ಹಾನಿಯನ್ನು ಉಂಟುಮಾಡುವುದರಿಂದ ಬಳಸಿದ ಬ್ಯಾಟರಿಗಳ ಯೋಗ್ಯ ಹೊರಹಾಕುವಿಕೆಗೆ ಅನೇಕ ಪ್ರದೇಶಗಳಲ್ಲಿ ಕಾನೂನಿನ ಅಗತ್ಯ ಇರುತ್ತದೆ. ದುರದೃಷ್ಟವಶಾತ್, ಈ ಕರಾರನ್ನು ಅನುಸರಿಸುವುದು ಕಷ್ಟ.[೫೩]
ಮೋಟಾರು ಗಾಡಿಗಳಲ್ಲಿ ಬಳಸುವಂತಹ ಸತು-ಆಮ್ಲದ ಬ್ಯಾಟರಿಗಳನ್ನು ಮರುಬಳಕೆ ಮಾಡುವುದು, ಸ್ವಲಮಟ್ಟಿಗೆ ಸುಲಭ. ಅನೇಕ ಪ್ರದೇಶಗಳು ಬಳಸಿದ-ಉತ್ಪನ್ನಗಳನ್ನು ಸ್ವೀಕರಿಸಲು ಮಾರಾಟಗಾರರಿಗೆ ಅವಶ್ಯಕವಾಗಿರುವ ಕಾನೂನನ್ನು ಹೊಂದಿವೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ಹೊಸ ಬ್ಯಾಟರಿಗಳು 80%ನಷ್ಟು ಮರುಬಳಸಿದ ವಸ್ತುಗಳನ್ನು ಹೊಂದಿರುವುದರೊಂದಿಗೆ ಮರುಬಳಕೆಯ ದರವು 90%ನಷ್ಟಿದೆ.[೫೩]
ಜೈವಿಕ ವಿಘಟನೀಯ ತ್ಯಾಜ್ಯ
ಬದಲಾಯಿಸಿಅಡಿಗೆ ಮನೆಯ, ತೋಟದ ಮತ್ತು ಇತರ ಹಸಿರು ತ್ಯಾಜ್ಯಗಳನ್ನು, ಮಿಶ್ರ ಗೊಬ್ಬರ ತಯಾರಿಸುವ ಮೂಲಕ ಉಪಯುಕ್ತ ವಸ್ತುವಾಗಿ ಮರುಬಳಕೆ ಮಾಡಬಹುದು. ಈ ಕ್ರಿಯೆಯು ನೈಸರ್ಗಿಕ ಆಮ್ಲಜನಕ ಇರುವಲ್ಲಿ ಮಾತ್ರ ಜೀವಿಸುವ(ಏರೋಬಿಕ್) ಬ್ಯಾಕ್ಟೀರಿಯವು ತ್ಯಾಜ್ಯವನ್ನು ಫಲವತ್ತಾದ ಮಣ್ಣಾಗಿ ವಿಭಜಿಸುವಂತೆ ಮಾಡುತ್ತದೆ. ಹೆಚ್ಚಿನ ಮಿಶ್ರಗೊಬ್ಬರವನ್ನು ಮನೆಯ ತ್ಯಾಜ್ಯದಿಂದ ಮಾಡಲಾಗುತ್ತದೆ. ಪುರಸಭೆಯ ಹಸಿರು-ತ್ಯಾಜ್ಯ ಸಂಗ್ರಹ ಯೋಜನೆಗಳೂ ಅಸ್ತಿತ್ವದಲ್ಲಿದೆ. ಈ ಯೋಜನೆಗಳು ಉತ್ಪತ್ತಿಯಾದ ಫಲವತ್ತಾದ ಮಣ್ಣನ್ನು ಮಾರಾಟ ಮಾಡುವ ಮೂಲಕ ಅವುಗಳ ಬಂಡವಾಳವನ್ನು ಪೂರೈಸಿಕೊಳ್ಳುತ್ತವೆ.
ಉಡುಗೆ-ತೊಡುಗೆ
ಬದಲಾಯಿಸಿಮರುಬಳಕೆ ಉಡುಪುಗಳು ರವಾನಿಸುವ ಅಥವಾ ವಿನಿಮಯದ ಮೂಲಕ ಹೆಚ್ಚು ಜನಪ್ರಿಯವಾಗುತ್ತಿವೆ. ಉಡುಪಿನ ವಿನಿಮಯದಲ್ಲಿ, ಹೆಚ್ಚಿನ ಜನರು ಉಡುಪುಗಳನ್ನು ವಿನಿಮಯ ಮಾಡಿಕೊಳ್ಳಲು ಒಂದು ನಿರ್ಧಿಷ್ಟ ಕೇಂದ್ರದಲ್ಲಿ ಒಂದುಗೂಡುತ್ತಾರೆ. ಕ್ಲೋತಿಂಗ್ ಸ್ವ್ಯಾಪ್, ಇಂಕ್‌ನಂತಹ ಸಂಸ್ಥೆಗಳಲ್ಲಿ, ಹಕ್ಕುದಾರರಿಲ್ಲದ ಉಡುಪುಗಳನ್ನು ಸ್ಥಳೀಯ ಅನಾಥಾಶ್ರಮಕ್ಕೆ ದಾನ ಮಾಡಲಾಗುತ್ತದೆ.
ಇಲೆಕ್ಟ್ರಾನಿಕ್ಸ್ ಅಸಂಯೋಜನೆ ಮತ್ತು ಸುಧಾರಣೆ
ಬದಲಾಯಿಸಿಹಳೆಯ ಕಂಪ್ಯೂಟರ್‌ಗಳು ಮತ್ತು ಮೊಬೈಲ್ ದೂರವಾಣಿಗಳಂತಹ ವಿದ್ಯುತ್ ಸಾಧನಗಳ ನೇರವಾದ ಹೊರಹಾಕುವಿಕೆಯು, ಕೆಲವು ವಸ್ತುಗಳ ವಿಷಕಾರಿ ಅಂಶಗಳಿಂದಾಗಿ ಅನೇಕ ಪ್ರದೇಶಗಳಲ್ಲಿ ನಿಷೇಧಿಸಲ್ಪಟ್ಟಿದೆ. ಮರುಬಳಕೆ ಕ್ರಿಯೆಯು ಉಪಕರಣಗಳಲ್ಲಿರುವ ಲೋಹ, ಪ್ಲ್ಯಾಸ್ಟಿಕ್ ಮತ್ತು ವಿದ್ಯುನ್ಮಂಡಲ ಫಲಕಗಳನ್ನು ಯಾಂತ್ರಿಕವಾಗಿ ಬೇರ್ಪಡಿಸುವ ಮೂಲಕ ಕೆಲಸ ಮಾಡುತ್ತದೆ. ಇದನ್ನು ದೊಡ್ಡ ಪ್ರಮಾಣದ ಇಲೆಕ್ಟ್ರಾನಿಕ್ ತ್ಯಾಜ್ಯ ಮರುಬಳಕೆಯ ಸ್ಥಾವರಗಳಲ್ಲಿ ಮಾಡುವಾಗ, ವಸ್ತುಗಳ ಪುನರ್ಲಾಭವನ್ನು ಬೆಲೆ-ಪರಿಣಾಕಾರಿ ರೀತಿಯಲ್ಲಿ ಪಡೆಯಲಾಗುತ್ತದೆ.
ಕಬ್ಬಿಣಾಂಶವನ್ನು ಹೊಂದಿರುವ ಲೋಹಗಳು
ಬದಲಾಯಿಸಿಕಬ್ಬಿಣ ಮತ್ತು ಉಕ್ಕನ್ನು ತ್ಯಾಜ್ಯ ರಾಶಿಯಿಂದ ಅಯಸ್ಕಾಂತವನ್ನು ಬಳಸಿಕೊಂಡು ಬೇರ್ಪಡಿಸಬಹುದಾಗಿದೆ. ಅವು ಪ್ರಪಂಚದಲ್ಲೇ ಅತಿಹೆಚ್ಚು ಮರುಬಳಕೆಯಾಗುವ ಮತ್ತು ಸುಲಭವಾಗಿ ಪುನಸ್ಸಂಸ್ಕರಿಸಲಾಗುವ ವಸ್ತುಗಳಾಗಿವೆ. ಉಕ್ಕಿನ ಚೂರನ್ನು ವಿದ್ಯುಚ್ಚಾಲಿತ ಬಿಲ್ಲಿನಾಕಾರದ ಕುಲುಮೆಯಲ್ಲಿ ಕರಗಿಸಲಾಗುತ್ತದೆ. (90-100% ಚೂರು) ಅಥವಾ ಮೂಲ ಆಮ್ಲಜನಕ ಕುಲುಮೆಯಲ್ಲಿ ಶಕ್ತಿಯನ್ನೊದಗಿಸುವ ಭಾಗವಾಗಿ ಬಳಸಲಾಗುತ್ತದೆ. (ಸುಮಾರು 25% ಚೂರು).[೫೪] ಯಾವುದೇ ವರ್ಗದ ಉಕ್ಕನ್ನು ಉತ್ಕೃಷ್ಟ ಗುಣಮಟ್ಟದ ಹೊಸ ಲೋಹವಾಗಿ ಮರುಬಳಕೆ ಮಾಡಬಹುದು. ಉಕ್ಕನ್ನು ಪುನಃಪುನಃ ಮರುಬಳಕೆ ಮಾಡಿದಂತೆ ಅದರ ಗುಣಮಟ್ಟವು ಉತ್ತಮತೆಯಿಂದ ಕೆಳಮಟ್ಟಕ್ಕೆ ಇಳಿಯುವುದಿಲ್ಲ. ಉತ್ಪಾದಿಸಲಾದ 42% ಕಚ್ಚಾ ಉಕ್ಕು ಮರುಬಳಕೆಯಾದ ವಸ್ತುವಾಗಿದೆ.[೫೫]
ಕಬ್ಬಿಣಾಂಶವಿಲ್ಲದ ಲೋಹಗಳು
ಬದಲಾಯಿಸಿಅಲ್ಯೂಮಿನಿಯಂ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ವ್ಯಾಪಕವಾಗಿ ಮರುಬಳಕೆಯಾಗುವ ಲೋಹಗಳಲ್ಲಿ ಒಂದು.[೫೬][೫೭] ಅಲ್ಯೂಮಿನಿಯಂನ್ನು ಸಣ್ಣ ತುಣುಕುಗಳಾಗಿ ಚೂರುಮಾಡಲಾಗುತ್ತದೆ, ಅದಲ್ಲದೇ ಪುಡಿಮಾಡಲಾಗುತ್ತದೆ, ಅಥವಾ ಪಿಂಡಿಗಳಾಗಿ ಜಜ್ಜಲಾಗುತ್ತದೆ. ಈ ಚೂರುಗಳನ್ನು ಅಥವಾ ಪಿಂಡಿಗಳನ್ನು ದ್ರವವಾಗಿಸಿದ ಅಲ್ಯೂಮಿನಿಯಂನ್ನು ಉತ್ಪಾದಿಸಲು ಅಲ್ಯೂಮಿನಿಯಂ-ಕುಲುಮೆಯಲ್ಲಿ ಕರಗಿಸಲಾಗುತ್ತದೆ. ಈ ಹಂತದವರೆಗೆ ಮರುಬಳಕೆಯ ಅಲ್ಯೂಮಿನಿಯಂ ಮತ್ತು ಕಚ್ಚಾ ಅಲ್ಯೂಮಿನಿಯಂ ಬೇರೆ ಬೇರೆ ವಿಧಾನಗಳನ್ನು ಹೊಂದಿರುತ್ತವೆ. ನಂತರದ ಕ್ರಿಯೆಯು ಎರಡಕ್ಕೂ ಒಂದೇ ರೀತಿಯದಾಗಿರುತ್ತದೆ. ಈ ಕ್ರಿಯೆಯು ಲೋಹದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ. ಆದ್ದರಿಂದ ಅಲ್ಯೂಮಿನಿಯಂನ್ನು ಅಪರಿಮಿತವಾಗಿ ಮರುಬಳಕೆ ಮಾಡಬಹುದು.
ಮರುಬಳಕೆ ಅಲ್ಯೂಮಿನಿಯಂ, ಹೊಸ ಅಲ್ಯೂಮಿನಿಯಂನ್ನು ತಯಾರಿಸುವುದಕ್ಕಿಂತ 95%ನಷ್ಟು ಇಂಧನ ಖರ್ಚನ್ನು ಉಳಿತಾಯ ಮಾಡುತ್ತದೆ.[೬] ಏಕೆಂದರೆ ಮರುಬಳಕೆಯ ಅಲ್ಯೂಮಿನಿಯಂನ್ನು ಕರಗಿಸಲು ಸುಮಾರು 600 °C ಉಷ್ಣತೆ ಬೇಕಾಗುತ್ತದೆ. ಅದೇ ಅದಿರಿನಿಂದ ಅಲ್ಯೂಮಿನಿಯಂನ್ನು ಹೊರತೆಗೆಯಲು 900 °C ತಾಪದ ಅವಶ್ಯಕತೆ ಇರುತ್ತದೆ. ಈ ಅತಿಹೆಚ್ಚಿನ ತಾಪಮಾನವನ್ನು ತಲುಪಲು, ಅಧಿಕ ಪ್ರಮಾಣದ ಇಂಧನ ಬೇಕಾಗುತ್ತದೆ. ಆದ್ದರಿಂದ ಅಲ್ಯೂಮಿನಿಯಂ ಮರುಬಳಕೆಯಿಂದ ಹೆಚ್ಚಿನ ನೈಸರ್ಗಿಕ ಪ್ರಯೋಜನಗಳಿವೆ. ಅಮೇರಿಕನ್ನರು ಅವರ ಸಂಪೂರ್ಣ ವಾಣಿಜ್ಯ ವಿಮಾನ ತಂಡವನ್ನು ಪುನಃನಿರ್ಮಿಸಲು, ಪ್ರತಿ ವರ್ಷ ಸಾಕಷ್ಟು ಅಲ್ಯೂಮಿನಿಯಂನ್ನು ಹೊರಹಾಕುತ್ತಿದೆ. ಒಂದು ಅಲ್ಯೂಮಿನಿಯಂ ಕ್ಯಾನ್‌ಅನ್ನು ಮರುಬಳಕೆ ಮಾಡುವುದರಿಂದ ಉಳಿಸುವ ಇಂಧನವು, ಒಂದು ದೂರದರ್ಶನವನ್ನು ಮೂರು ವರ್ಷಗಳವರೆಗೆ ನಡೆಸಲು ಸಾಕಾಗುವಷ್ಟಿರುತ್ತದೆ.[೧೨]
ಗಾಜು
ಬದಲಾಯಿಸಿಗಾಜಿನ ಸೀಸೆಗಳನ್ನು ಮತ್ತು ಜಾಡಿಗಳನ್ನು ರಸ್ತೆಬದಿಯ ವಸ್ತುಗಳನ್ನು ಸಂಗ್ರಹಿಸುವ ಲಾರಿ ಮತ್ತು ಬಾಟಲ್-ಬ್ಯಾಂಕ್‌ಗಳು ಒಟ್ಟುಗೂಡಿಸುತ್ತವೆ. ನಂತರ ಗಾಜನ್ನು ಬಣ್ಣದ ಆಧಾರದಲ್ಲಿ ಬೇರ್ಪಡಿಸಲಾಗುತ್ತದೆ. ಸಂಗ್ರಹಿಸಲಾದ ನಿರುಪಯೋಗಿ ಗಾಜುಸಾಮಾನು ಗಳನ್ನು ಗಾಜು ಮರುಬಳಕೆ ಮಾಡುವ ಸ್ಥಾವರಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಅವುಗಳ ಶುದ್ಧತೆಯನ್ನು ಪರೀಕ್ಷಿಸಲಾಗುತ್ತದೆ. ಅಲ್ಲದೇ ಕಶ್ಮಲಕಾರಕಗಳನ್ನು ತೆಗೆದುಹಾಕಲಾಗುತ್ತದೆ. ಈ ನಿರುಪಯೋಗಿ ಗಾಜುಗಳನ್ನು ಪುಡಿಮಾಡಿ, ಕಚ್ಚಾ ವಸ್ತುವಿಗೆ ಸೇರಿಸಿ, ಕುಲುಮೆಯಲ್ಲಿ ಕರಗಿಸಲಾಗುತ್ತದೆ. ನಂತರ ಇದನ್ನು ಯಾಂತ್ರಿಕವಾಗಿ ಊದಿ ಹೊಸ ಜಾಡಿಗಳಾಗಿ ಅಥವಾ ಸೀಸೆಗಳಾಗಿ ನಿರ್ದಿಷ್ಟ ಆಕಾರ ಕೊಡಲಾಗುತ್ತದೆ. ಒಡೆದ ಗಾಜನ್ನು ನಿರ್ಮಾಣ ಕೈಗಾರಿಕೆಯಲ್ಲಿಯೂ ಸಿಮೆಂಟುಜಲ್ಲಿಯಲ್ಲಿ ಮತ್ತು ಗಾಜಿನರಾಳದಲ್ಲಿ ಬಳಸಲಾಗುತ್ತದೆ. ಗಾಜಿನರಾಳವು ರಸ್ತೆ ನಿರ್ಮಾಣ ಕಾರ್ಯದಲ್ಲಿ ಬಳಸುವ ಒಂದು ವಸ್ತು. ಅದು ಸುಮಾರು 30%ನಷ್ಟು ಮರುಬಳಕೆಯ ಗಾಜನ್ನು ಒಳಗೊಂಡಿರುತ್ತದೆ. ಪುನಸ್ಸಂಸ್ಕರಿಸಿದಾಗ ಗಾಜಿನ ರಚನೆಯು ಕೆಡುವುದಿಲ್ಲವಾದ್ದರಿಂದ, ಅದನ್ನು ಅಪರಿಮಿತವಾಗಿ ಮರುಬಳಕೆ ಮಾಡಬಹುದು.
ಬಣ್ಣ
ಬದಲಾಯಿಸಿಬಣ್ಣವು ಹೆಚ್ಚಾಗಿ ಸರಕಾರ-ನಿರ್ವಹಿಸುವ ಮನೆಯ ಹಾನಿಕರ ತ್ಯಾಜ್ಯವನ್ನು ವಿಲೇವಾರಿ ಮಾಡುವ ಸೌಕರ್ಯದಿಂದ ಸಂಗ್ರಹಿಸಲ್ಪಡುತ್ತದೆ. ಅಲ್ಲಿಂದ ಅದನ್ನು ಬಣ್ಣ ಮರುಬಳಕೆ ಮಾಡುವವರಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಗುಣಮಟ್ಟದ ಆಧಾರದಲ್ಲಿ ಅದನ್ನು ಪ್ರತ್ಯೇಕಿಸಲಾಗುತ್ತದೆ. ಪುನಸ್ಸಂಸ್ಕರಿಸಲಾಗದ ಮತ್ತು ಮರುಮಾರಾಟ ಮಾಡಲಾಗದ ಬಣ್ಣದ ಉಪಯೋಗವು ಮರುಬಳಕೆಯಿಂದ ವ್ಯತ್ಯಾಸಗೊಳ್ಳುತ್ತದೆ.
ಕಾಗದ
ಬದಲಾಯಿಸಿಕಾಗದವನ್ನು ತಿರುಳಿನ ರೂಪಕ್ಕೆ ಪರಿವರ್ತಿಸಿ ಮತ್ತು ಹೊಸದಾಗಿ ಕಡಿದ ಮರಗಳಿಂದ ಪಡೆದ ತಿರುಳಿನೊಂದಿಗೆ ಸೇರಿಸುವುದರ ಮೂಲಕ ಮರುಬಳಕೆ ಮಾಡಬಹುದು. ಮರುಬಳಕೆ ಕ್ರಿಯೆಯು ಕಾಗದದ ನಾರನ್ನು ಒಡೆಯುವುದರಿಂದ, ಪ್ರತಿ ಬಾರಿ ಕಾಗದವನ್ನು ಮರುಬಳಕೆ ಮಾಡಿದಾಗ ಅದರ ಗುಣಮಟ್ಟವು ಕಡಿಮೆಯಾಗುತ್ತದೆ. ಅಂದರೆ ಹೊಸ ನಾರಿನ ಪ್ರಮಾಣವನ್ನು ಹೆಚ್ಚು ಸೇರಿಸಬೇಕು. ಇಲ್ಲದಿದ್ದರೆ ಕಾಗದವು ಕಡಿಮೆ ಗುಣಮಟ್ಟದ ಉತ್ಪನ್ನವಾಗಿ ತಯಾರಾಗುತ್ತದೆ. ಕಾಗದದ ಯಾವುದೇ ಬರಹ ಅಥವಾ ಬಣ್ಣವನ್ನು ಮೊದಲು ಡೈಯಂಕಿಂಗ್ ಮೂಲಕ ತೆಗೆದುಹಾಕಬೇಕು. ಇದು ಭರ್ತಿಸಾಮಾಗ್ರಿ, ಮಣ್ಣು ಮತ್ತು ನಾರಿನ ತುಣುಕುಗಳನ್ನೂ ತೆಗೆದುಹಾಕುತ್ತದೆ.[೫೮]
ಹೆಚ್ಚುಕಡಿಮೆ ಎಲ್ಲಾ ಕಾಗದವನ್ನು ಇಂದು ಮರುಬಳಕೆ ಮಾಡಬಹುದು. ಆದರೆ ಕೆಲವು ಪ್ರಕಾರಗಳು ಮರುಬಳಕೆ ಮಾಡಲು ಇತರೆಗಿಂತ ಹೆಚ್ಚು ಕಷ್ಟವಾಗಿರುತ್ತವೆ. ಪ್ಲ್ಯಾಸ್ಟಿಕ್ ಅಥವಾ ಅಲ್ಯೂಮಿನಿಯಂ ಹಾಳೆಯಿಂದ ಮುಚ್ಚಲ್ಪಟ್ಟ ಕಾಗದ ಮತ್ತು ಮೇಣ ಲೇಪಿತ, ಅಂಟಿದ ಅಥವಾ ಅಂಟು ಹಚ್ಚಿದ ಕಾಗದಗಳನ್ನು ಸಾಮಾನ್ಯವಾಗಿ ಮರುಬಳಕೆ ಮಾಡಲಾಗುವುದಿಲ್ಲ, ಏಕೆಂದರೆ ಆ ಕ್ರಿಯೆಯು ತುಂಬಾ ದುಬಾರಿಯಾಗಿರುತ್ತದೆ. ಆಕರ್ಷಕ ಕವಚದ ಕಾಗದವನ್ನೂ ಸಹ ಅದರ ಕಳಪೆ ಗುಣಮಟ್ಟದಿಂದಾಗಿ ಮರುಬಳಕೆ ಮಾಡಲಾಗುವುದಿಲ್ಲ.[೫೮]
ಮರುಬಳಕೆ ಮಾಡುವವರು ಕೆಲವೊಮ್ಮೆ, ಹೊಳಪು ಕಾಗದಗಳು ಭಿನ್ನ ಪ್ರಕಾರದ ಕಾಗದವಾಗಿರುವುದರಿಂದ, ಅವುಗಳನ್ನು ಪತ್ರಿಕೆಗಳಿಂದ ಹೊರಗೆ ಇಡಬೇಕೆಂದು ಕೆಲವರು ಕೇಳುತ್ತಾರೆ. ಹೊಳಪು ಕಾಗದಗಳು ಅತಿಹೆಚ್ಚಿನ ಮಣ್ಣಿನ ಹೊದಿಕೆಯನ್ನು ಹೊಂದಿರುತ್ತವೆ. ಇಂತಹದನ್ನು ಕೆಲವು ಕಾಗದ ಮಿಲ್ಲುಗಳು ಸ್ವೀಕರಿಸುವುದಿಲ್ಲ. ಮರುಬಳಕೆ ಮಾಡುವ ತಿರುಳಿನಿಂದ ಹೊರಹಾಕಲೇಬೇಕಾಗಿರುವ ಹೆಚ್ಚಿನ ಮಣ್ಣನ್ನು ರಾಡಿಯಾಗಿ ತೆಗೆದುಹಾಕಲಾಗುತ್ತದೆ. ಹೊದಿಕೆಯಿರುವ ಕಾಗದವು 20%ನಷ್ಟು ಮಣ್ಣನ್ನು ಹೊಂದಿದ್ದರೆ, ಒಂದು ಟನ್ ಹೊಳಪಿನ ಕಾಗದವು 200 ಕೆಜಿಗಿಂತಲೂ ಹೆಚ್ಚು ರಾಡಿ ಮತ್ತು 800 ಕೆಜಿಗಿಂತ ಕಡಿಮೆ ನಾರನ್ನು ಉತ್ಪಾದಿಸುತ್ತದೆ.[೫೮]
ಪ್ಲ್ಯಾಸ್ಟಿಕ್
ಬದಲಾಯಿಸಿಪ್ಲ್ಯಾಸ್ಟಿಕ್ ಮರುಬಳಕೆಯೆಂದರೆ ಚೂರಾದ ಮತ್ತು ಉಪಯೋಗವಿಲ್ಲದ ಪ್ಲ್ಯಾಸ್ಟಿಕ್‌ಅನ್ನು ಪುನಃಪಡೆಯುವ ಮತ್ತು ಅದನ್ನು ಉಪಯುಕ್ತ ಉತ್ಪನ್ನಗಳಾಗಿ ಪುನಸ್ಸಂಸ್ಕರಿಸುವ ಕ್ರಿಯೆ. ಗಾಜು ಅಥವಾ ಲೋಹದ ವಸ್ತುಗಳಿಗೆ ಹೋಲಿಸಿದರೆ ಪ್ಲ್ಯಾಸ್ಟಿಕ್ ಅಸಾಧಾರಣ ಸವಾಲುಗಳನ್ನು ಹೊಂದಿದೆ. ಪ್ಲ್ಯಾಸ್ಟಿಕ್‌ಗಳಲ್ಲಿ ಅನೇಕ ವಿಧಗಳಿರುವುದರಿಂದ, ಪ್ರತಿಯೊಂದೂ ಒಂದು ರಾಳ ಗುರುತಿಸುವ ಸಂಕೇತವನ್ನು ಹೊಂದಿರುತ್ತವೆ. ಅಲ್ಲದೇ ಅವನ್ನು ಮರುಬಳಕೆ ಮಾಡುವ ಮೊದಲು ಬೇರ್ಪಡಿಸಬೇಕು. ಇದು ಹೆಚ್ಚು ದುಬಾರಿಯಾಗಿರುತ್ತದೆ; ಲೋಹಗಳನ್ನು ವಿದ್ಯುತ್ಕಾಂತಗಳನ್ನು ಬಳಸಿಕೊಂಡು ಪ್ರತ್ಯೇಕಿಸಬಹುದು, ಆದರೆ ಪ್ಲ್ಯಾಸ್ಟಿಕ್‌ಗಳಿಗೆ ಅಂತಹ ಯಾವುದೇ 'ಸುಲಭವಾಗಿ ಬೇರ್ಪಡಿಸುವ' ವಿಧಾನಗಳಿಲ್ಲ. ಇದಕ್ಕೆ ಹೆಚ್ಚುವರಿಯಾಗಿ, ಮುಚ್ಚಳಗಳನ್ನು ಹೆಚ್ಚಾಗಿ ವಿವಿಧ ರೀತಿಯ ಮರುಬಳಕೆ-ಮಾಡಲಾಗದ ಪ್ಲ್ಯಾಸ್ಟಿಕ್‌ಗಳಿಂದ ಮಾಡಲಾಗಿರುವುದರಿಂದ ಸೀಸೆಗಳಿಂದ ಗುರುತುಪಟ್ಟಿಗಳನ್ನು ಮರುಬಳಕೆಗಾಗಿ ತೆಗೆದುಹಾಕಬಾರದು.
ವಿವಿಧ ಪ್ಲ್ಯಾಸ್ಟಿಕ್ ವಸ್ತುಗಳಲ್ಲಿರುವ ಅಂಶಗಳನ್ನು ಗುರುತಿಸಲು, ಆರು ಸಾಮಾನ್ಯ ಪ್ರಕಾರದ ಮರುಬಳಕೆ ಮಾಡಲಾಗುವ ಪ್ಲ್ಯಾಸ್ಟಿಕ್ ರಾಳಗಳಿಗೆ 1-6ರವರೆಗಿನ ರಾಳ ಗುರುತಿಸುವ ಸಂಕೇತ ಸಂಖ್ಯೆಗಳನ್ನು ಸೂಚಿಸಲಾಗಿದೆ. ಈ ಸಂಖ್ಯೆಗಳು ಪ್ಲ್ಯಾಸ್ಟಿಕ್‌ಅನ್ನು ಮರುಬಳಕೆ ಮಾಡಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಗುರುತಿಸುತ್ತವೆ. ಸಂಖ್ಯೆ 7 ಬೇರೆ ಬೇರೆ ಯಾವುದೊ ಪ್ಲ್ಯಾಸ್ಟಿಕ್ ಪ್ರಕಾರವನ್ನು ಸೂಚಿಸುತ್ತದೆ. ಈ ಪ್ರತಿಯೊಂದು ರಾಳ ಸಂಕೇತಗಳನ್ನು ಸಂಯೋಜಿಸುವ ಪ್ರಮಾಣಿತ ಗುರುತಗಳು ಲಭ್ಯ ಇವೆ.
ಜವಳಿ ಉದ್ಯಮಗಳು
ಬದಲಾಯಿಸಿಬಟ್ಟೆ ಮರುಬಳಕೆಯನ್ನು ಪರಿಗಣಿಸುವಾಗ ಅದು ಒಳಗೊಂಡಿರುವ ಅಂಶದ ಬಗ್ಗೆ ತಿಳಿಯುವುದು ಅತಿಅಗತ್ಯ. ಹೆಚ್ಚಿನ ಬಟ್ಟೆಬರೆಗಳು ಹತ್ತಿ (ಜೈವಿಕ ವಿಘಟನೀಯ ವಸ್ತು) ಮತ್ತು ಕೃತಕ ಪ್ಲ್ಯಾಸ್ಟಿಕ್‌ಗಳ ಸಂಯೋಜಿತ ವಸ್ತುಗಳಾಗಿವೆ. ಬಟ್ಟೆಯ ಸಂಯೋಜನೆಯು ಅದರ ಬಾಳಿಕೆ ಮತ್ತು ಮರುಬಳಕೆಯ ವಿಧಾನದ ಮೇಲೆ ಪ್ರಭಾವ ಬೀರುತ್ತದೆ.
ಕೆಲಸಗಾರರು ಸಂಗ್ರಹಿಸಿದ ಜವಳಿಗಳನ್ನು ಮರುಬಳಕೆ ಮಾಡಬಹುದಾದ ಅಥವಾ ಧರಿಸಬಹುದಾದ ಉತ್ತಮ ಗುಣಮಟ್ಟದ ಬಟ್ಟೆ ಮತ್ತು ಶೂಗಳಾಗಿ ವಿಂಗಡಿಸಿ ಬೇರ್ಪಡಿಸುತ್ತಾರೆ. ಈ ಸೌಕರ್ಯಗಳನ್ನು ಅನಾಥಾಶ್ರಮಗಳಿಗಾಗಿ ಅಥವಾ ಅಗ್ಗದ ದರದಲ್ಲಿ ಮಾರಾಟ ಮಾಡವುದಕ್ಕಾಗಿ ಅಭಿವೃದ್ಧಿಹೊಂದಿದ ರಾಷ್ಟ್ರಗಳಿಂದ ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರಗಳಿಗೆ ಸಾಗಿಸುವ ಪದ್ದತಿ ಇದೆ.[೫೯] ಹೆಚ್ಚಿನ ಅಂತಾರಾಷ್ಟ್ರೀಯ ಸಂಸ್ಥೆಗಳು, ತೃತೀಯ ಜಗತ್ತಿನ ರಾಷ್ಟ್ರಗಳಿಗೆ ಕೊಡುಗೆ ನೀಡುವುದಕ್ಕಾಗಿ ಅಭಿವೃದ್ಧಿಹೊಂದಿದ ರಾಷ್ಟ್ರಗಳಿಂದ ಬಳಸಿದ ಬಟ್ಟೆಬರೆಗಳನ್ನು ಸಂಗ್ರಹಿಸುತ್ತವೆ. ಈ ರೀತಿಯ ಮರುಬಳಕೆಯು ಪ್ರೋತ್ಸಾಹಿಸಲ್ಪಡುತ್ತಿದೆ; ಏಕೆಂದರೆ ಇದು ಬೇಡವಾದ ತ್ಯಾಜ್ಯವನ್ನು ಕಡಿಮೆಮಾಡುವಲ್ಲಿ ಸಹಾಯ ಮಾಡುತ್ತದೆ, ಅಲ್ಲದೆ ಅವು ಅವಶ್ಯಕ ಬಟ್ಟೆಗಳನ್ನು ಒದಗಿಸುತ್ತವೆ.[೬೦] ಹಾಳಾದ ಜವಳಿಗಳನ್ನು ಕಾರ್ಖಾನೆಗಳಲ್ಲಿ ಒರೆಸುವ ಬಟ್ಟೆಗಳಾಗಿ ಹಾಗೂ ಕಾಗದ ತಯಾರಿಕೆಯಲ್ಲಿ ಬಳಸುವ ಅಥವಾ ನಾರಿನ ಸುಧಾರಣೆಗೆ ಮತ್ತು ಭರ್ತಿಸಾಮಾಗ್ರಿಗಳಿಗೆ ಹೊಂದುವ ವಸ್ತುಗಳಾಗಿ ಅನೇಕ ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಜವಳಿ ಪುನಸ್ಸಂಸ್ಕರಣೆ ಮಾಡುವವರು, ಒದ್ದೆಯಾದ ಅಥವಾ ಮಣ್ಣಾದ ಬಟ್ಟೆಗಳನ್ನು ಪಡೆದರೆ, ಅವುಗಳನ್ನು ತೊಳೆದು ಒಣಗಿಸುವ ಸೌಕರ್ಯಗಳು ಬೇರ್ಪಡಿಸುವ ಕ್ರಿಯೆಯಲ್ಲಿ ಇಲ್ಲದಿರುವುದರಿಂದ ಅಂತಹ ಬಟ್ಟೆಗಳನ್ನು ಭೂಮಿಯೊಳಗೆ ಹೂತುಹಾಕಲಾಗುತ್ತದೆ.[೬೧]
ನಾರಿನ ಪುನಸ್ಸಂಸ್ಕರಣಾ ಮಿಲ್ಲುಗಳು ನಾರಿನ ಬಗೆ ಮತ್ತು ಬಣ್ಣದ ಆಧಾರದಲ್ಲಿ ಬಟ್ಟೆಗಳನ್ನು ವರ್ಗೀಕರಿಸುತ್ತವೆ. ಬಣ್ಣದ ಆಧಾರದಲ್ಲಿ ಮಾಡುವ ವರ್ಗೀಕರಣವು ಮರುಬಳಕೆ ಮಾಡಿದ ಬಟ್ಟೆಗೆ ಮತ್ತೊಮ್ಮೆ ಬಣ್ಣ ಕೊಡುವುದನ್ನು ತೆಗೆದುಹಾಕುತ್ತದೆ. ಬಟ್ಟೆಗಳನ್ನು ಕಳಪೆ ನಾರುಗಳಾಗಿ ಚೂರುಚೂರು ಮಾಡಿ, ಮರುಬಳಕೆಯ ಉತ್ಪನ್ನದ ಅಪೇಕ್ಷಿತ ಬಳಕೆಯ ಆಧಾರದಲ್ಲಿ ಇತರ ಆಯ್ದ ನಾರುಗಳೊಂದಿಗೆ ಸಂಮಿಶ್ರಣ ಮಾಡಲಾಗುತ್ತದೆ. ಈ ಸಂಯೋಜಿತ ಮಿಶ್ರಣವನ್ನು ಹಿಂಜಿ ಸ್ವಚ್ಛಗೊಳಿಸಲಾಗುತ್ತದೆ. ನಂತರ ಅದರಿಂದ ನೇಯಲು ಅಥವಾ ಹೆಣೆಯಲು ಬೇಕಾಗುವ ನೂಲನ್ನು ತೆಗೆಯಲಾಗುತ್ತದೆ. ಈ ನಾರುಗಳನ್ನು ಹಾಸಿಗೆಯನ್ನು ತಯಾರಿಸಲೂ ಸಂಮರ್ಧಿಸಲಾಗುತ್ತದೆ. ಚಿಂದಿಬಟ್ಟೆ ಉದ್ಯಮಕ್ಕೆ ಕಳುಹಿಸಲಾಗುವ ಬಟ್ಟೆಗಳನ್ನು ಕಾರು ಬೇರ್ಪಡಿಕೆ, ಚಾವಣಿ ಫೆಲ್ಟ್, ಧ್ವನಿವರ್ಧಕ ಸಲಕರಣೆ, ಮರದ ತುಂಡುಗಳ ಸಾಲುಜೋಡಿಸುವಿಕೆ ಮತ್ತು ಪೀಠೋಪಕರಣಗಳ ಮೆತ್ತೆಗಳಲ್ಲಿ ಭರ್ತಿಸಾಮಾಗ್ರಿಯಾಗಿ ಬಳಸಲು ಚೂರುಚೂರು ಮಾಡಲಾಗುತ್ತದೆ.
ಮರ
ಬದಲಾಯಿಸಿಮರದ ಮರುಬಳಕೆಯು ನೈಸರ್ಗಿಕವಾಗಿ ಸ್ನೇಹಪೂರ್ಣವಾದುದೆಂಬ ಭಾವನೆ ಇರುವುದರಿಂದ ಇದು ಹೆಚ್ಚು ಜನಪ್ರಿಯಾಗಿದೆ. ಗ್ರಾಹಕರು ಸಾಮಾನ್ಯವಾಗಿ ಮರುಬಳಕೆಯ ಮರವನ್ನು ಕೊಂಡುಕೊಳ್ಳುವುದರಿಂದ ಕಚ್ಚಾ ಮರದ ಬೇಡಿಕೆಯು ಕಡಿಮೆಯಾಗುತ್ತದೆ. ಅಲ್ಲದೇ ಇದರಿಂದ ಪರಿಸರಕ್ಕೆ ಉಪಯೋಗವಾಗುತ್ತದೆ, ಎಂದು ನಂಬಿದ್ದಾರೆ. ಗ್ರೀನ್‌ಪೀಸ್ ಅದರ ವೆಬ್‌ಸೈಟ್‌ನಲ್ಲಿ ಮರುಬಳಕೆಯ ಮರವನ್ನು ಹೆಚ್ಚು ಯೋಗ್ಯವಾದ ಮರದ-ಮೂಲವೆಂದು ನಮೂದಿಸುವ ಮೂಲಕ, ಇದು ನೈಸರ್ಗಿಕವಾಗಿ ಅನುಕೂಲಕರವಾದ ಉತ್ಪನ್ನವೆಂದು ಹೇಳಿದೆ. ಮರುಬಳಕೆಯ ಮರವನ್ನು ನಿರ್ಮಾಣ ಉತ್ಪನ್ನವಾಗಿ ಬಳಸುವುದು ಉದ್ಯಮವನ್ನು ಬೆಳೆಸುವುದರಲ್ಲಿ, ಗ್ರಾಹಕರಲ್ಲಿ ಅರಣ್ಯನಾಶದ ಬಗ್ಗೆ ಜಾಗೃತಿ ಮೂಡಿಸುವುದರಲ್ಲಿ ಸಫಲವಾಗಿವೆ. ಮರದ ಮಿಲ್ಲುಗಳು ಹೆಚ್ಚು ನಿಸರ್ಗ-ಸ್ನೇಹಿ ಕ್ರಿಯೆಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದರಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.
ಮರದ ಮರುಬಳಕೆಯು ಇತ್ತೀಚಿನ ವರ್ಷಗಳಲ್ಲಿ ನಮ್ಮ ಜೀವನದಲ್ಲಿ ಅತಿಮುಖ್ಯ ಪಾತ್ರವಹಿಸಿದ ವಿಷಯವಾಗಿದೆ. ಅನೇಕ ಸ್ಥಳೀಯ ಸಂಸ್ಥೆಗಳು ಮರುಬಳಕೆಯ ಯೋಚನೆಯನ್ನು ಹೊಂದಿದ್ದರೂ, ಅವು ಸಂಪೂರ್ಣ ಬೆಂಬಲ ನೀಡದೇ ಇರುವುದು ಮುಖ್ಯ ಸಮಸ್ಯೆಯಾಗಿದೆ. ಸುದ್ದಿಯಲ್ಲಿರುವ ಒಂದು ಪ್ರಮುಖ ವಿಷಯವೆಂದರೆ, ಮರುಬಳಕೆಯ ಮರಗಳು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿದೆ. ಅವುಗಳೆಂದರೆ ಮರುಬಳಕೆಯ ಮರ, ದಿಮ್ಮಿ ಮತ್ತು ಇತರ ಮೂಲಗಳು.[೬೨]
ಇತರ ವಿಧಾನಗಳು
ಬದಲಾಯಿಸಿಅನೇಕ ಇತರ ವಸ್ತುಗಳನ್ನೂ ಸಹ ಉದ್ಯಮದ ಹಂತದಲ್ಲಿ ಸಾಮಾನ್ಯವಾಗಿ ಮರುಬಳಕೆ ಮಾಡಬಹುದು.
ಹಡಗನ್ನು ಒಡೆಯುವುದು ಅದು ನಡೆಯುವ ಪ್ರದೇಶಕ್ಕೆ ನೈಸರ್ಗಿಕವಾಗಿ ಮತ್ತು ಆರೋಗ್ಯಕರವಾಗಿ ಸುರಕ್ಷಿತವಾದ ಒಂದು ಉದಾಹರಣೆಯಾಗಿದೆ; ಇದು ಈ ಎಲ್ಲಾ ವಿಚಾರಗಳನ್ನು ಪರಿಸರವಾದಿ ನ್ಯಾಯಶೀಲವಾಗಿ ಸರಿಹೊಂದಿಸುತ್ತದೆ.
ಟೈರು ಮರುಬಳಕೆಯೂ ಸಾಮಾನ್ಯವಾಗಿದೆ. ಬಳಸಿದ ಟೈರುಗಳನ್ನು ರಸ್ತೆಯ ಮೇಲ್ಮೈಗೆ ಹಾಕುವ ಆಸ್ಫಾಲ್ಟ್‌ಗೆ ಅಥವಾ ಆಟದ ಮೈದಾನಗಳಲ್ಲಿ ಸುರಕ್ಷತೆಗಾಗಿ ಬಳಸುವ ರಬ್ಬರ್ ಮಿಶ್ರಣವನ್ನು ಮಾಡಲು ಸೇರಿಸಬಹುದು. ಅರ್ತ್‌ಶಿಪ್‌ಗಳೆಂದು ಕರೆಯುವ ವಿಶೇಷವಾಗಿ ನಿರ್ಮಿಸಿದ ಮನೆಗಳಲ್ಲಿ ಬಿಸಿ ಹೀರಿಕೊಳ್ಳುವ/ಬಿಡುಗಡೆ ಮಾಡುವ ವಸ್ತುವಾಗಿ ಮತ್ತು ನಿರೋಧನವಾಗಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಇವನ್ನೂ ಗಮನಿಸಿ
ಬದಲಾಯಿಸಿ- ಜೀವವೈವಿಧ್ಯತೆ
- ಪರಿಸರಕ್ಕಾಗಿ ವಿನ್ಯಾಸ
- ಡಿಗರ್ ಚಿನ್ನ
- ಇಲೆಕ್ಟ್ರಾನಿಕ್ ತ್ಯಾಜ್ಯ ಮರುಬಳಕೆ ಶುಲ್ಕ
- I-ಮರುಬಳಕೆ
- ಮರುಬಳಕೆ ಮಾಡಿ, ಬಿಸಾಡಬೇಡಿ!
- ಮರುಬಳಕೆಯ ವಿಮರ್ಶೆಗಳು
- ಊರ್ಜಿತವಾಗುವಿಕೆ
- ತ್ಯಾಜ್ಯ ಸರಕು
- ಅರ್ಬನ್ ಲಂಬರ್ಜ್ಯಾಕಿಂಗ್
- ಧಾರಕಗಳಲ್ಲಿ ಸಂಗ್ರಹಿಸುವ ಕಾನೂನು
- ಮರುಬಳಕೆಯ ವಿಧಗಳು
- ಕ್ರಿಯಾತ್ಮಕ ಮರುಬಳಕೆ
- ಸಂಪೂರ್ಣ ಗಣನೀಯ ಮರುಬಳಕೆ
- ಹಡಗು-ಜಲಾಂತರ್ಗಾಮಿ ನೌಕೆಗಳ ಮರುಬಳಕೆ ಯೋಜನೆ
- ಏಕ-ಸಮೂಹದ ಮರುಬಳಕೆ
- ಶಾಖ ಡೀಪಾಲಿಮರೀಕರಣ
- ರಾಸಾಯನಿಕ ಸುಧಾರಣೆ, ಉದಾಹರಣೆಗಾಗಿ ಹೈಡ್ರೋಕ್ಲೋರಿಕ್ ಆಮ್ಲದ ಪುನರುತ್ಪಾದನೆ
- ಸಾಮಾನ್ಯ ವಿಷಯಗಳು
- ವ್ಯಾಪಾರ ಸಂಸ್ಥೆಗಳು
ಆಕರಗಳು
ಬದಲಾಯಿಸಿ- ↑ "Lets recycle". Archived from PM Advisor hails recycling as climate change action the original on 2009-01-12. Retrieved 2006-11-08.
{{cite web}}
: Check|url=
value (help) - ↑ ೨.೦೦ ೨.೦೧ ೨.೦೨ ೨.೦೩ ೨.೦೪ ೨.೦೫ ೨.೦೬ ೨.೦೭ ೨.೦೮ ೨.೦೯ ೨.೧೦ ೨.೧೧ ೨.೧೨ ೨.೧೩ ೨.೧೪ ೨.೧೫ ೨.೧೬ ೨.೧೭ ೨.೧೮ ೨.೧೯ ೨.೨೦ ೨.೨೧ The League of Women Voters (1993). The Garbage Primer. New York: Lyons & Burford. pp. 35–72. ISBN 1558218507.
{{cite book}}
: Check|isbn=
value: checksum (help) - ↑ ೩.೦ ೩.೧ Black Dog Publishing (2006). Recycle : a source book. London, UK: Black Dog Publishing. ISBN 1904772366.
- ↑ ೪.೦೦ ೪.೦೧ ೪.೦೨ ೪.೦೩ ೪.೦೪ ೪.೦೫ ೪.೦೬ ೪.೦೭ ೪.೦೮ ೪.೦೯ ೪.೧೦ ೪.೧೧ ೪.೧೨ ೪.೧೩ "The truth about recycling". The Economist. June 7, 2007.
{{cite news}}
: Italic or bold markup not allowed in:|publisher=
(help) - ↑ ಔಟ್ ಆಫ್ ದ ಗಾರ್ಬೇಜ್-ಪೈಲ್ ಇನ್ಟು ದ ಫೈರ್: ಫ್ಯುಯೆಲ್ ಬ್ರಿಕ್ಸ್ ನೌ ಆಡೆಡ್ ಟು ದ ಲಿಸ್ಟ್ ಆಫ್ ಥಿಂಗ್ಸ್ ಸಾಲ್ವೇಜ್ಡ್ ಬೈ ಸೈನ್ಸ್ ಫ್ರಮ್ ದ ನೇಶನ್ಸ್ ವೇಸ್ಟ್ , ಪಾಪ್ಯುಲರ್ ಸೈನ್ಸ್ ಮಾಸಿಕ, ಫೆಬ್ರವರಿ ಪುಟ 50-51, ಗೂಗಲ್ ಬುಕ್ಸ್‌ನಿಂದ ವಿಂಗಡಿಸಲಾಗಿದೆ: https://books.google.com/books?id=7igDAAAAMBAJ&pg=PA50
- ↑ ೬.೦ ೬.೧ ೬.೨ ೬.೩ ೬.೪ ೬.೫ "The price of virtue". The Economist. June 7, 2007.
{{cite news}}
: Italic or bold markup not allowed in:|publisher=
(help) - ↑ ರೋವನ್ & ಅಸೋಸಿಯೇಟ್ಸ್ ಗೊ ಗ್ರೀನ್ Archived 2009-01-23 ವೇಬ್ಯಾಕ್ ಮೆಷಿನ್ ನಲ್ಲಿ.: ಜುಲೈ 18, 2007 ಪ್ರೆಸ್ ಬಿಡುಗಡೆ - NJBiz.com. 2007ರ ಜುಲೈ 22ರಲ್ಲಿ ಪುನಃಪಡೆಯಲಾಗಿದೆ.
- ↑ ಪ್ರಸ್ತುತದ ಜಾಹೀರಾತಿನ ಉತ್ಪನ್ನಗಳ ಅಂಗಡಿ ರೋವನ್ & ಅಸೋಸಿಯೇಟ್ಸ್ Archived 2010-12-15 ವೇಬ್ಯಾಕ್ ಮೆಷಿನ್ ನಲ್ಲಿ..
- ↑ "Regulatory Policy Center - PROPERTY MATTERS - James V. DeLong". Archived from the original on 2008-04-14. Retrieved 2008-02-28.
- ↑ ಸೈನ್ಸ್‌ಡೈಲಿ. (2007). ರಿಸೈಕ್ಲಿಂಗ್ ವಿದೌಟ್ ಸಾರ್ಟಿಂಗ್ ಇಂಜಿನಿಯರ್ಸ್ ಕ್ರಿಯೇಟ್ ರಿಸೈಕ್ಲಿಂಗ್ ಪ್ಲ್ಯಾಂಟ್ ದಾಟ್ ರಿಮೂವ್ಸ್ ದ ನೀಡ್ ಟು ಸಾರ್ಟ್ Archived 2008-08-31 ವೇಬ್ಯಾಕ್ ಮೆಷಿನ್ ನಲ್ಲಿ..
- ↑ ಈ ಮಾಹಿತಿಯನ್ನು The League of Women Voters (1993). The Garbage Primer. New York: Lyons & Burford. pp. 35–72. ISBN 1558218507.
{{cite book}}
: Check|isbn=
value: checksum (help)ನಿಂದ ತೆಗೆದುಕೊಳ್ಳಲಾಗಿದೆ, ಎನರ್ಜಿ ಸೇವಿಂಗ್ಸ್ ಫ್ರಂ ರಿಸೈಕ್ಲಿಂಗ್ ನಲ್ಲಿ ಉಲ್ಲೇಖಿಸಿದಂತೆ ಅದು "ಗಾರ್ಬೇಜ್ ಸೊಲ್ಯೂಶನ್ಸ್: ಎ ಪಬ್ಲಿಕ್ ಅಫೀಶಿಯಲ್ಸ್ ಗೈಡ್ ಟು ರಿಸೈಕ್ಲಿಂಗ್ ಆಂಡ್ ಆಲ್ಟರ್ನೇಟಿವ್ ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಟೆಕ್ನಾಲಜೀಸ್ ಗೆ ಸೇರಿದೆ, ಜನವರಿ/ಫೆಬ್ರವರಿ 1989; ಮತ್ತು ವರ್ಲ್ಡ್‌ವಾಚ್ 76 ಮೈನಿಂಗ್ ಅರ್ಬನ್ ವೇಸ್ಟ್ಸ್: ದ ಪೊಟೆನ್ಶಿಯಲ್ ಫಾರ್ ರಿಸೈಕ್ಲಿಂಗ್ , ಎಪ್ರಿಲ್ 1987." - ↑ ೧೨.೦ ೧೨.೧ "Recycling metals - aluminium and steel". Archived from the original on 2007-10-16. Retrieved 2007-11-01.
- ↑ ಲ್ಯೂವೀ D. (2007). ಈಸ್ ಮುನ್ಸಿಪಾಲ್ ಸಾಲಿಡ್ ವೇಸ್ಟ್ ರಿಸೈಕ್ಲಿಂಗ್ ಇಕಾನಮಿಕಲಿ ಎಫೀಸಿಯೆಂಟ್?[ಶಾಶ್ವತವಾಗಿ ಮಡಿದ ಕೊಂಡಿ] ಎನ್ವೈರ್ನ್‌ಮೆಂಟ್ ಮ್ಯಾನೇಜ್ಮೆಂಟ್ .
- ↑ Vigso, Dorte (2004). "Deposits on single use containers - a social cost-benefit analysis of the Danish deposit system for single use drink containers". Waste Management & Research. 22 (6): 477. doi:10.1177/0734242X04049252. PMID 15666450.
- ↑ "ಮಿನರಲ್ಸ್ ಆಂಡ್ ಫಾರೆನ್ಸಿಕ್ ಸೈನ್ಸ್" (PDF). ಯೂನಿವರ್ಸಿಟಿ ಆಫ್ ಮಸ್ಸಾಚ್ಯುಸೆಟ್ಸ್ ಲಾವೆಲ್, ಡಿಪಾರ್ಟ್ಮೆಂಟ್ ಆಫ್ ಎನ್ವೈರ್ನ್‌ಮೆಂಟಲ್, ಅರ್ಥ್ & ಅಟ್ಮೋಸ್ಫೆರಿಕ್ ಸೈನ್ಸಸ್.
- ↑ "ಅರ್ಥ್ಸ್ ನ್ಯಾಚುರಲ್ ವೆಲ್ತ್: ಆನ್ ಆಡಿಟ್". ನ್ಯೂ ಸೈಂಟಿಸ್ಟ್. ಮೇ 23, 2007.
- ↑ ಗುಂಟರ್, ಮ್ಯಾಥಿವ್. "ಡು ಇಕನಾಮಿಸ್ಟ್ಸ್ ರೀಚ್ ಎ ಕಂಕ್ಲೂಜನ್ ಆನ್ ಹೌಸ್‌ಹೋಲ್ಡ್ ಆಂಡ್ ಮುನಿಸಿಪಾಲ್ ರಿಸೈಕ್ಲಿಂಗ್?" (ಜನವರಿ 2007). [೧]
- ↑ ಮಚ್ ಟಾಕ್ಸಿಕ್ ಕಂಪ್ಯೂಟರ್ ವೇಸ್ಟ್ ಲ್ಯಾಂಡ್ಸ್ ಇನ್ ಥರ್ಡ್ ವರ್ಲ್ಡ್
- ↑ ಚೀನಾದಲ್ಲಿನ ನೈಸರ್ಗಿಕ ಮತ್ತು ಆರೋಗ್ಯ ಹಾನಿ
- ↑ ಇಲ್ಲೀಗಲ್ ಡಂಪಿಂಗ್ ಆಂಡ್ ಡ್ಯಾಮೇಜ್ ಟು ಹೆಲ್ತ್ ಆಂಡ್ ಎನ್ವೈರ್ನ್‌ಮೆಂಟ್
- ↑ ಹಾಗ್ M. ವೇಸ್ಟ್ ಔಟ್‌ಶೈನ್ಸ್ ಗೋಲ್ಡ್ ಆಸ್ ಪ್ರೈಸಸ್ ಸರ್ಜ್. ಫೈನಾನ್ಶಿಯಲ್ ಟೈಮ್ಸ್ .(registration required)
- ↑ ಬೊನ್ನೀ ಡಿಸೈಮನ್. (2006). ರಿವಾರ್ಡಿಂಗ್ ರಿಸೈಕ್ಲರ್ಸ್ ಆಂಡ್ ಫೈಂಡಿಂಗ್ ಗೋಲ್ಡ್ ಇನ್ ದ ಗಾರ್ಬೇಜ್. ನ್ಯೂಯಾರ್ಕ್ ಟೈಮ್ಸ್.
- ↑ ೨೩.೦ ೨೩.೧ Tierney, John (June 30, 1996). "Recycling Is Garbage". New York: New York Times. p. 3. Retrieved 2008-02-28.
- ↑ ಎನ್ವೈರ್ನ್‌ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ ಫ್ರೀಕ್ವೆಂಟ್ಲಿ ಆಸ್ಕ್ಡ್ ಕ್ವೇಶನ್ಸ್ ಎಬೌಟ್ ರಿಸೈಕ್ಲಿಂಗ್ ಆಂಡ್ ವೇಸ್ಟ್. ಅಕ್ಟೋಬರ್ 18ರ 2006ರಲ್ಲಿ ಪುನಃಪಡೆಯಲಾಗಿದೆ.
- ↑ ಲ್ಯಾಂಡ್ಸ್‌ಬರ್ಗ್, ಸ್ಟೀವನ್ A. ದ ಆರ್ಮ್‌ಚೈರ್ ಇಕಾನಮಿಸ್ಟ್ . ಪುಟ 86.
- ↑ ಸೆಲ್ಕೆ 116
- ↑ ೨೭.೦ ೨೭.೧ ರೆಗ್ಯುಲೇಟರಿ ಪಾಲಿಸಿ ಸೆಂಟರ್ WASTING AWAY: ಮಿಸ್‌ಮ್ಯಾನೇಜಿಂಗ್ ಮುನಿಸಿಪಾಲ್ ಸಾಲಿಡ್ ವೇಸ್ಟ್ Archived 2008-04-14 ವೇಬ್ಯಾಕ್ ಮೆಷಿನ್ ನಲ್ಲಿ.. ನವೆಂಬರ್ 4ರ 2006ರಲ್ಲಿ ಪುನಃಪಡೆಯಲಾಗಿದೆ.
- ↑ ವೇಸ್ಟ್ ಟು ವೆಲ್ತ್ ದ ಫೈವ್ ಮೋಸ್ಟ್ ಡೇಂಜರಸ್ ಮಿಥ್ಸ್ ಎಬೌಟ್ ರಿಸೈಕ್ಲಿಂಗ್ Archived 2009-05-29 ವೇಬ್ಯಾಕ್ ಮೆಷಿನ್ ನಲ್ಲಿ.. ಅಕ್ಟೋಬರ್ 18ರ 2006ರಲ್ಲಿ ಪುನಃಪಡೆಯಲಾಗಿದೆ.
- ↑ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಎನರ್ಜಿ ಕನ್ಸರ್ವಿಂಗ್ ಎನರ್ಜಿ - ರಿಸೈಕ್ಲಿಂಗ್ ಪ್ಲ್ಯಾಸ್ಟಿಕ್ಸ್. ನವೆಂಬರ್ 10ರ 2006ರಂದು ಪುನಃಪಡೆಯಲಾಗಿದೆ.
- ↑ ಎನ್ವೈರ್ನ್‌ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ ಮಾರ್ಕೆಟ್ಸ್ ಫಾರ್ ರಿಕವರ್ಡ್ ಗ್ಲಾಸ್. ನವೆಂಬರ್ 10ರ 2006ರಲ್ಲಿ ಪುನಃಪಡೆಯಲಾಗಿದೆ.
- ↑ ಯುನೈಟೆಡ್ ಸ್ಟೇಟ್ಸ್ ಜಿಯಲಾಜಿಕಲ್ ಸರ್ವೆ ಮಿನರಲ್ ಕಮೊಡಿಟಿ ಸಮ್ಮರೀಸ್. ನವೆಂಬರ್ 10ರ 2006ರಲ್ಲಿ ಪುನಃಪಡೆಯಲಾಗಿದೆ.
- ↑ ರಿಸೈಕ್ಲಿಂಗ್ ಸಡೆನ್ಲಿ ಗೆಟ್ಸ್ ಎಕ್ಸ್‌ಪೆನ್ಸಿವ್ : NPR
- ↑ ೩೩.೦ ೩೩.೧ ನ್ಯೂಯಾರ್ಕ್ ಟೈಮ್ಸ್ ರಿಸೈಕ್ಲಿಂಗ್... ಈಸ್ ಗಾರ್ಬೇಜ್ (nytimes.com ಜೂನ್ 30ರ 1996ರಲ್ಲಿ ಪ್ರಕಟಿಸಲಾಗಿದೆ) ರಿಸೈಕ್ಲಿಂಗ್... ಈಸ್ ಗಾರ್ಬೇಜ್ (ಲೇಖನವನ್ನು ನಕಲು ಮಾಡಲಾಗಿದೆ) ರಿಸೈಕ್ಲಿಂಗ್... Archived 2007-09-29 ವೇಬ್ಯಾಕ್ ಮೆಷಿನ್ ನಲ್ಲಿ.ಈಸ್ ಗಾರ್ಬೇಜ್ (ಲೇಖನವನ್ನು ನಕಲು ಮಾಡಲಾಗಿದೆ) Archived 2007-09-29 ವೇಬ್ಯಾಕ್ ಮೆಷಿನ್ ನಲ್ಲಿ.. ಅಕ್ಟೋಬರ್ 18ರ 2006ರಲ್ಲಿ ಪುನಃಪಡೆಯಲಾಗಿದೆ.
- ↑ ಹಾರ್ಟ್‌ಲ್ಯಾಂಡ್ ಇನ್‌ಸ್ಟಿಟ್ಯೂಟ್ ರಿಸೈಕ್ಲಿಂಗ್: ಇಟ್ಸ್ ಎ ಬ್ಯಾಡ್ ಐಡಿಯಾ ಇನ್ ನ್ಯೂಯಾರ್ಕ್ Archived 2007-09-29 ವೇಬ್ಯಾಕ್ ಮೆಷಿನ್ ನಲ್ಲಿ.. ಅಕ್ಟೋಬರ್ 18ರ 2006ರಲ್ಲಿ ಪುನಃಪಡೆಯಲಾಗಿದೆ.
- ↑ ಲ್ಯಾಂಡ್ಸ್‌ಬರ್ಗ್, ಸ್ಟೀವನ್ A. ದ ಆರ್ಮ್‌ಚೈರ್ ಇಕಾನಮಿಸ್ಟ್ . ಪುಟ 81.
- ↑ ೩೬.೦ ೩೬.೧ ದ ಫ್ರೀ ಮಾರ್ಕೆಟ್ ಡೋಂಟ್ ರಿಸೈಕಲ್: ಥ್ರೊ ಇಟ್ ಎವೆ!. ನವೆಂಬರ್ 4ರ 2006ರಲ್ಲಿ ಪುನಃಪಡೆಯಲಾಗಿದೆ.
- ↑ ಜ್ಯೂಸ್ ವರ್ಲ್ಡ್ ರಿವ್ಯೂ ದ ವೇಸ್ಟ್ ಆಫ್ ರಿಸೈಕ್ಲಿಂಗ್. ನವೆಂಬರ್ 4ರ 2006ರಲ್ಲಿ ಪುನಃಪಡೆಯಲಾಗಿದೆ.
- ↑ ಬೈರ್ಡ್, ಕೋಲಿನ್ (2004) ಎನ್ವೈರ್ಮ್‌ಮೆಂಟಲ್ ಕೆಮೆಸ್ಟ್ರಿ (3ನೇ ಆವೃತ್ತಿ). W. H. ಫ್ರೀಮ್ಯಾನ್ ISBN 0-7167-4877-0
- ↑ "All About Paper". Paper University. Archived from the original on 2007-05-10. Retrieved 2009-02-12.
- ↑ "NRDC: ಟೂ ಗುಡ್ ಟು ಥ್ರೊ ಎವೆ - ಅಪೆಂಡಿಕ್ಸ್ A". Archived from the original on 2010-01-24. Retrieved 2010-04-22.
- ↑ ಮಿಶನ್ ಪೋಲಿಸ್ ಸ್ಟೇಶನ್
- ↑ PBS ನ್ಯೂಸ್‌ಅವರ್, ಫೆಬ್ರವರಿ 16,2010. ಜಬಲೀನ್‌ನಲ್ಲಿ ವರದಿಯಾಗಿದೆ.
- ↑ ದ ನ್ಯೂಸ್-ಹೆರಾಲ್ಡ್ - ಸ್ಕ್ರಾಪ್ ಮೆಟಲ್ ಎ ಸ್ಟೀಲ್[ಶಾಶ್ವತವಾಗಿ ಮಡಿದ ಕೊಂಡಿ]
- ↑ ರೈಡ್ಸ್ ಆನ್ ರಿಸೈಕ್ಲಿಂಗ್ ಬಿನ್ಸ್ ಕಾಸ್ಟ್ಲಿ ಟು ಬೆ ಏರಿಯಾ : NPR
- ↑ ೪೫.೦ ೪೫.೧ PBS ನ್ಯೂಸ್ಅವರ್, ಫೆಬ್ರವರಿ 16, 2010. ಜಬಲೀನ್‌ನಲ್ಲಿ ವರದಿಯಾಗಿದೆ.
- ↑ "ಫ್ರೆಂಡ್ಸ್ ಆಫ್ ದ ಅರ್ಥ್". Archived from the original on 2010-05-29. Retrieved 2010-04-22.
- ↑ Richard A. Dension, Ph.D. (July 16, 1996). "Anti-Recycling Myths". Environmental Defense Fund. Archived from the original on ಜನವರಿ 30, 2009. Retrieved ಏಪ್ರಿಲ್ 22, 2010.
{{cite web}}
: Unknown parameter|coauthor=
ignored (|author=
suggested) (help) - ↑ ಡೈಯಾಪರ್ ರಿಸೈಕ್ಲಿಂಗ್ ಇನ್ ಕ್ಯಾಲಿಫೋರ್ನಿಯಾ ದ ಫ್ರೀ ಲಿಬರಲ್, ಸೆಪ್ಟೆಂಬರ್ 8, 2003
- ↑ "ಥಿಂಕ್ ಗ್ಲೋಬಲಿ, ಆಕ್ಟ್ ಇರ್ಯಾಶನಲಿ: ರಿಸೈಕ್ಲಿಂಗ್
- ↑ ರಿಸೈಕ್ಲಿಂಗ್: ಇಟ್ಸ್ ಎ ಬ್ಯಾಡ್ ಐಡಿಯಾ ಇನ್ ನ್ಯೂಯಾರ್ಕ್ Archived 2007-09-29 ವೇಬ್ಯಾಕ್ ಮೆಷಿನ್ ನಲ್ಲಿ. ದ ಹಾರ್ಟ್‌ಲ್ಯಾಂಡ್ ಇನ್‌ಸ್ಟಿಟ್ಯೂಟ್, ಮೇ 1, 2002
- ↑ ಸಿಟಿ ಕೌನ್ಸಿಲ್ ಹೋಲ್ಡ್ಸ್ ಹಿಯರಿಂಗ್ಸ್ ಆನ್ ಸೇವಿಂಗ್ ರಿಸೈಕ್ಲಿಂಗ್, WNYC, ಎಪ್ರಿಲ್ 18, 2002
- ↑ "Concrete Recycling". Associated Construction Publications. Archived from the original on 2008-06-18. Retrieved 2008-02-21.
- ↑ ೫೩.೦ ೫೩.೧ "Batteries". United States Environmental Protection Agency. Retrieved 2008-02-21.
{{cite web}}
: Text "Municipal Solid Waste (MSW)" ignored (help); Text "U.S. EPA" ignored (help) - ↑ "Sustainable Development and Steel, Canadian Institute of Steel Construction". Archived from the original on 2011-07-06. Retrieved 2006-11-16.
- ↑ "Steel: The Foundation of a Sustainable Future—Sustainability Report of the World Steel Industry 2005" (PDF). Archived from the original (PDF) on 2010-07-05. Retrieved 2006-11-16.[ಮಡಿದ ಕೊಂಡಿ]
- ↑ DRLP ಫ್ಯಾಕ್ಟ್ ಶೀಟ್ಸ್
- ↑ ಎನ್ವೈರ್ನ್‌ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ ಫ್ರೀಕ್ವೆಂಟ್ಲಿ ಆಸ್ಕ್ಡ್ ಕ್ವೆಶನ್ಸ್ ಎಬೌಟ್ ರಿಸೈಕ್ಲಿಂಗ್ ಆಂಡ್ ವೇಸ್ಟ್ ಮ್ಯಾನೇಜ್ಮೆಂಟ್
- ↑ ೫೮.೦ ೫೮.೧ ೫೮.೨ "EarthAnswers - How is Paper Recycled?". Archived from the original on 2008-04-13. Retrieved 2008-02-23.
- ↑ "www.letsrecycle.com". Archived from UK in 'frightening' reliance on foreign textile sorting the original on 2009-01-13. Retrieved 2006-11-08.
{{cite web}}
: Check|url=
value (help) - ↑ "Salvation Army". Archived from Salvation Army the original on 2010-05-23. Retrieved 2008-02-29.
{{cite web}}
: Check|url=
value (help) - ↑ "www.letsrecycle.com". Archived from Councils "need to understand" importance of textile quality the original on 2009-01-12. Retrieved 2006-11-24.
{{cite web}}
: Check|url=
value (help) - ↑ , www.citywood.co.uk. ದಿನಾಂಕ 10 ನವೆಂಬರ್ 2008ರಂದು ಮರುಪಡೆಯಲಾಯಿತು.
ಹೆಚ್ಚಿನ ಮಾಹಿತಿಗಾಗಿ
ಬದಲಾಯಿಸಿ- ಆಕರ್ಮ್ಯಾನ್, ಪ್ರ್ಯಾಂಕ್. (1997). ವೈ ಡು ವಿ ರಿಸೈಕಲ್?: ಮಾರ್ಕೆಟ್ಸ್, ವ್ಯಾಲ್ಯೂಸ್ ಆಂಡ್ ಪಬ್ಲಕ್ . ಐಲ್ಯಾಂಡ್ ಪ್ರೆಸ್. ISBN 1-55963-504-5, 9781559635042
- ಪೋರ್ಟರ್, ರಿಚಾರ್ಡ್ C. (2002). ದ ಇಕಾನಮಿಕ್ಸ್ ಆಫ್ ವೇಸ್ಟ್ . ರಿಸೋರ್ಸಸ್ ಫಾರ್ ದ ಫ್ಯೂಚರ್. ISBN 1-891853-42-2, 9781891853425
ಬಾಹ್ಯ ಕೊಂಡಿಗಳು
ಬದಲಾಯಿಸಿ- ಮರುಬಳಕೆ ಓಪನ್ ಡೈರೆಕ್ಟರಿ ಪ್ರಾಜೆಕ್ಟ್