ಬಾಕ್ಸೈಟ್
ಬಾಕ್ಸೈಟ್ ದು ಅಲ್ಯುಮಿನಿಯಮ್‍ನ ಉತ್ಪಾದನೆಯಲ್ಲಿ ಬಳಕೆಯಾಗುವ ಅದಿರು.ಇದನ್ನು ಘರ್ಷಕಗಳ (abrasives) ಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ.ಉಕ್ಕು ಕರಗಿಸುವ ಕುಲುಮೆಗಳ ತಯಾರಿಯಲ್ಲಿ ಬಾಕ್ಸೈಟ್ ಮಿಶ್ರಿತ ಜೇಡಿಮಣ್ಣನ್ನು ಉಪಯೋಗಿಸುತ್ತಾರೆ.ಔಷದಗಳ ತಯಾರಿಯಲ್ಲಿ ಬಳಸುವ ಪಟಿಕ(Alum) ಇದರ ಉಪ ಉತ್ಪನ್ನವಾಗಿದೆ.ಇದು ಪ್ರಥಮ ಬಾರಿಗೆ ಪತ್ತೆಯಾದ ಸ್ಥಳವಾದ ಪ್ರಾನ್ಸ್ ನ ಲೆಸ್ ಬಾಕ್ಸ್ (Les Baux)ನ ಹೆಸರು ಇದರ ಹೆಸರಿನಲ್ಲಿ ಸೇರಿಕೊಂಡಿದೆ. ಬಾಕ್ಸೈಟ್‍ನಲ್ಲಿ ಮುಖ್ಯವಾಗಿ ಅಲ್ಯುಮಿನಿಯಮ್ ಹೈಡ್ರಾಕ್ಸೈಡ್ ಇರುತ್ತದೆ. ಹೆಚ್ಚಿನ ಬಾಕ್ಸೈಟ್ ನಲ್ಲಿ ೩೦ ರಿಂದ ೬೦ ಶೇಕಡಾ ಅಲ್ಯುಮಿನಿಯಮ್ ಇದ್ದು,೧೨ ರಿಂದ ೩೦ ಶೇಕಡಾ ನೀರು ಇರುತ್ತದೆ. ಅದರಲ್ಲಿರುವ ಇತರ ಸಂಯುಕ್ತಗಳ ಮೇಲೆ ಇದರ ಬಣ್ಣ ಕಡು ಕೆಂಪಿನಿಂದ ಕೆಂಪು, ಗುಲಾಬಿ ಅಥವಾ ಬಿಳಿ ಬಣ್ಣವಿರುತ್ತದೆ.
ಉತ್ಪಾದನೆಸಂಪಾದಿಸಿ
ಬಾಕ್ಸೈಟ್ ಉದ್ಯಮದಲ್ಲಿ ಆಸ್ತ್ರೇಲಿಯ ಮುಂಚೂಣಿಯಲ್ಲಿದೆ.ವಿವಿಧ ದೇಶಗಳಲ್ಲಿ ಲಭ್ಯವಿರುವ ಅದಿರಿನ ಪ್ರಮಾಣ, ಉತ್ಪಾದನೆ ಈ ಕೆಳಗಿನ ತಖ್ತೆಯಲ್ಲಿದೆ.
Country | Mine production | Reserves | Reserve base | |
---|---|---|---|---|
2007 | 2008 | |||
Guinea | 18,000 | 18,000 | 7,400,000 | 8,600,000 |
Australia | 62,400 | 63,000 | 5,800,000 | 7,900,000 |
Vietnam | 30 | 30 | 2,100,000 | 5,400,000 |
Jamaica | 14,600 | 15,000 | 2,000,000 | 2,500,000 |
Brazil | 24,800 | 25,000 | 1,900,000 | 2,500,000 |
Guyana | 1,600 | 1,600 | 700,000 | 900,000 |
India | 19,200 | 20,000 | 770,000 | 1,400,000 |
China | 30,000 | 32,000 | 700,000 | 2,300,000 |
Greece | 2,220 | 2,200 | 600,000 | 650,000 |
Iran | — | 500[೧] | — | — |
Suriname | 4,900 | 4,500 | 580,000 | 600,000 |
Kazakhstan | 4,800 | 4,800 | 360,000 | 450,000 |
Venezuela | 5,900 | 5,900 | 320,000 | 350,000 |
Russia | 6,400 | 6,400 | 200,000 | 250,000 |
United States | NA | NA | 20,000 | 40,000 |
Other countries | 7,150 | 6,800 | 3,200,000 | 3,800,000 |
World total (rounded) | 202,000 | 205,000 | 27,000,000 | 38,000,000 |
ಬಾಕ್ಶೈಟ್‍ನ ಸಂಸ್ಕರಣೆಗೆ ಅಪಾರ ಪ್ರಮಾಣದ ವಿದ್ಯುತ್ ಬೇಕಾಗುವುದರಿಂದ ಹಲವಾರು ಬಡ ದೇಶಗಳು ಅದಿರನ್ನೇ ನೇರವಾಗಿ ರಫ್ತು ಮಾಡುತ್ತವೆ.
ಬಾಹ್ಯ ಸಂಪರ್ಕಗಳುಸಂಪಾದಿಸಿ
ವಿಕಿಮೀಡಿಯ ಕಣಜದಲ್ಲಿ Bauxite ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |