ಭಾರತೀಯ ನಾಗರಿಕ ಸೇವೆಗಳು

ಭಾರತೀಯ ನಾಗರಿಕ ಸೇವೆಗಳ

ಕೇವಲ ನಾಗರಿಕ ಸೇವೆಗಳ ಇಲಾಖೆ ಎಂದೂ ಕರೆಸಿಕೊಳ್ಳುವ ಭಾರತದ ನಾಗರಿಕ ಸೇವೆಗಳ ಇಲಾಖೆ ಯು ಭಾರತೀಯ ಗಣರಾಜ್ಯ ಸರ್ಕಾರದ ಒಂದು ನಾಗರಿಕ ಸೇವೆಗಳ ಶಾಶ್ವತ ಆಡಳಿತಶಾಹಿ ವ್ಯವಸ್ಥೆಯಾಗಿದೆ.

ಭಾರತದ ಸಂಸತ್ತಿನ ಮೂಲಕ ಜಾರಿಗೊಳಿಸಲಾದ ಪ್ರಜಾಪ್ರಭುತ್ವದಲ್ಲಿ ಆಡಳಿತವನ್ನು ನಿರ್ವಹಿಸುವ ಸಂಪೂರ್ಣ ಹೊಣೆಗಾರಿಕೆಯು ಸಾರ್ವಜನಿಕರಿಂದ ಚುನಾಯಿತರಾದ ಆಯ್ಕೆಗೊಂಡ ಪ್ರಜಾಪ್ರತಿನಿಧಿಗಳಾದ ಸಚಿವರುಗಳ ಮೇಲಿರುತ್ತದೆ. ಇಂತಹಾ ಸಚಿವರುಗಳು ಸಾರ್ವತ್ರಿಕ ಪ್ರಬುದ್ಧರ ಚುನಾವಣೆಯ ಹಕ್ಕನ್ನು ಚಲಾಯಿಸುವ ಮೂಲಕ ಜನರಿಂದ ಚುನಾಯಿತವಾಗಿ ರೂಪುಗೊಂಡ ಶಾಸನಸಭೆಗಳಿಗೆ ಉತ್ತರದಾಯಿಯಾಗಿರುತ್ತಾರೆ. ಈ ಸಚಿವರುಗಳು ಪರೋಕ್ಷವಾಗಿ ತಮ್ಮನ್ನು ಆಯ್ಕೆ ಮಾಡಿದ ಜನಸಮೂಹಕ್ಕೆ ಉತ್ತರದಾಯಿಗಳಾಗಿರುತ್ತಾರೆ. ಆದರೆ ಕೇವಲ ಹಿಡಿಯಷ್ಟು ಜನ ಸಚಿವರುಗಳು ಆಧುನಿಕ ಆಡಳಿತ ವ್ಯವಸ್ಥೆಯ ಸಂಕೀರ್ಣ ಸಮಸ್ಯೆಗಳನ್ನು ವೈಯಕ್ತಿಕವಾಗಿ ನಿರ್ವಹಿಸಬೇಕೆಂದು ನಿರೀಕ್ಷಿಸಲಾಗುವುದಿಲ್ಲ. ಆದುದರಿಂದ ಅಂತಹಾ ಸಚಿವರುಗಳು ಕಾರ್ಯನೀತಿಗಳನ್ನು ರೂಪಿಸುತ್ತಾರೆ ಹಾಗೂ ಅದನ್ನು ಜಾರಿಗೊಳಿಸುವ ಜವಾಬ್ದಾರಿಯು ಪ್ರಶಾಸನ/ಪೌರ ನೌಕರರ ಹೊಣೆಯಾಗಿರುತ್ತದೆ.

ಕಾರ್ಯಕಾರಿ ನೀತಿನಿರ್ಧಾರಗಳನ್ನು ಜಾರಿಗೆ ತರುವ ಹೊಣೆಯನ್ನು ಭಾರತೀಯ ಪ್ರಶಾಸನ/ಪೌರ ನೌಕರರು ಹೊತ್ತಿರುತ್ತಾರೆ. ಪ್ರಶಾಸನ/ಪೌರ ನೌಕರರು ಭಾರತ ಸರ್ಕಾರದ ಉದ್ಯೋಗಿಗಳಾಗಿರುತ್ತಾರೆಯೇ ಹೊರತು ಭಾರತೀಯ ಸಂವಿಧಾನದ ಉದ್ಯೋಗಿಗಳಾಗಿರುವುದಿಲ್ಲ. ಪ್ರಶಾಸನ/ಪೌರ ನೌಕರರು ಹಲವು ಸಾಂಪ್ರದಾಯಿಕ ಹಾಗೂ ಶಾಸನೋಕ್ತ/ಶಾಸನವಿಹಿತ ಜವಾಬ್ದಾರಿಗಳನ್ನು ಕೂಡಾ ಹೊಂದಿದ್ದು, ಇದು ಅಧಿಕಾರದಲ್ಲಿರುವ ಪಕ್ಷವು ಸ್ವಲ್ಪ ಮಟ್ಟಿಗೆ ರಾಜಕೀಯ ಅನುಕೂಲತೆಗಳಿಗೋಸ್ಕರ ಅವರನ್ನು ಬಳಸಿಕೊಳ್ಳಲಾಗದಂತೆ ರಕ್ಷಣೆ ನೀಡಿರುತ್ತದೆ. ಹಿರಿಯ ಪ್ರಶಾಸನ/ಪೌರ ನೌಕರರನ್ನು ಸಂಸತ್ತಿಗೆ ಜವಾಬ್ದಾರಿ ನಿರ್ವಹಣೆಯ ಸಮರ್ಥನೆಗಳನ್ನು ನೀಡಲು ಕರೆಸಿಕೊಳ್ಳಬಹುದಾಗಿರುತ್ತದೆ.

ನಾಗರಿಕ ಸೇವಾ ಕ್ಷೇತ್ರವು ಸರ್ಕಾರದ ಸಚಿವರುಗಳು (ರಾಜಕೀಯ ರೀತಿಯಲ್ಲಿ ನೇಮಕಗೊಂಡವರು), ಸಂಸತ್ತಿನ ಸದಸ್ಯರು, ಶಾಸನಸಭೆಗಳ ಸದಸ್ಯರು, ಭಾರತೀಯ ಸೇನಾಪಡೆಯ ಸದಸ್ಯರು, ನಾಗರಿಕವಲ್ಲದ ಸೇವಾ ಕ್ಷೇತ್ರದ ಆರಕ್ಷಕ ಅಧಿಕಾರಿಗಳು ಮತ್ತು ಸ್ಥಳೀಯ ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡಿರುವುದಿಲ್ಲ.

ಇತಿಹಾಸ

ಬದಲಾಯಿಸಿ

ಬ್ರಿಟಿಷ್‌ ಆಡಳಿತದ ಭಾರತೀಯ ನಾಗರಿಕ ಸೇವಾ ಕ್ಷೇತ್ರವನ್ನು ಆಧರಿಸಿ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯ ಬಂದ ನಂತರ ಇದನ್ನು ರೂಪಿಸಲಾಯಿತು.

ಸಂವಿಧಾನ, ಅಧಿಕಾರ ಮತ್ತು ಉದ್ದೇಶ

ಬದಲಾಯಿಸಿ

ಸಂವಿಧಾನವು ಹೊಸದಾದ ಅಖಿಲ ಭಾರತ ಸೇವೆಗಳು ಅಥವಾ ಕೇಂದ್ರ ಸೇವೆಗಳನ್ನು ಸ್ಥಾಪಿಸಲಾಗುವಂತೆ ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಪಡೆದುಕೊಂಡರೆ ಮತ್ತಷ್ಟು ನಾಗರಿಕ ಸೇವೆಗಳ ಶಾಖೆಗಳನ್ನು ಆರಂಭಿಸುವ ಅಧಿಕಾರವನ್ನು ನೀಡುವ ವಿಧಿಯನ್ನು ಕೊಡಮಾಡಿದೆ. ಸದರಿ ಸಾಂವಿಧಾನಿಕ ವಿಧಿಯಡಿಯಲ್ಲಿ ಕಲ್ಪಿಸಿಕೊಡಲಾದ ಎರಡು ಸೇವೆಗಳಲ್ಲಿ ಭಾರತೀಯ ಅರಣ್ಯ ಸೇವೆಗಳ ಇಲಾಖೆ ಹಾಗೂ ಭಾರತೀಯ ವಿದೇಶಾಂಗ ಇಲಾಖಾ ಸೇವೆಗಳು ಸೇರಿವೆ.

ಭಾರತದ ಆಡಳಿತವನ್ನು ಪರಿಣಾಮಕಾರಿಯಾಗಿ ಹಾಗೂ ದಕ್ಷವಾಗಿ ನಡೆಸಿಕೊಂಡು ಹೋಗುವುದು ನಾಗರಿಕ ಸೇವೆಗಳ ಇಲಾಖೆಯ ಜವಾಬ್ದಾರಿಯಾಗಿರುತ್ತದೆ. ಭಾರತದಂತಹಾ ವ್ಯಾಪಕವಾದ ಹಾಗೂ ವೈವಿಧ್ಯಮಯ ರಾಷ್ಟ್ರದ ಆಡಳಿತವನ್ನು ನಿರ್ವಹಿಸಲು ಅದರ ನೈಸರ್ಗಿಕ, ಆರ್ಥಿಕ ಹಾಗೂ ಮಾನವ ಸಂಪನ್ಮೂಲಗಳ ದಕ್ಷ ನಿರ್ವಹಣೆಯು ಅತ್ಯಗತ್ಯ ಎಂದು ಭಾವಿಸಲಾಗುತ್ತದೆ. ಈ ರಾಷ್ಟ್ರವನ್ನು ಸಾಕಷ್ಟು ಸಂಖ್ಯೆಯ ಕೇಂದ್ರ ಸರ್ಕಾರಿ ಸಂಸ್ಥೆಗಳಿಂದ ಸಚಿವಾಲಯಗಳು ಅನುಮೋದಿಸಿದ ಕಾರ್ಯನೀತಿಗಳ ನಿರ್ದೇಶನಗಳ ಅನುಸಾರ ಕಾರ್ಯಗತಗೊಳಿಸುವ ಮೂಲಕ ನಿರ್ವಹಿಸಿಕೊಂಡು ಬರಲಾಗುತ್ತಿದೆ.

ನಾಗರಿಕ ಸೇವೆಗಳ ಸದಸ್ಯರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಲ್ಲಿ ಕಾರ್ಯನಿರ್ವಾಹಕರಾಗಿ; ವಿದೇಶಾಂಗ ನಿಯೋಗಗಳು/ದೂತಾವಾಸಗಳಲ್ಲಿ ವಿಶೇಷ ಪ್ರತಿನಿಧಿ/ಗೂಢಾಚಾರರಾಗಿ ; ತೆರಿಗೆ ಸಂಗ್ರಾಹಕರು ಹಾಗೂ ಆದಾಯಕರ ನಿಯೋಗಿ ಕಮೀಷನರ್‌ಗಳಾಗಿ; ನಾಗರಿಕ ಸೇವಾ ಕ್ಷೇತ್ರದ ನಿಯೋಜಿತ ಆರಕ್ಷಕ ಅಧಿಕಾರಿಗಳಾಗಿ ; ನಿಯೋಗಗಳು ಹಾಗೂ ಸಾರ್ವಜನಿಕ ಕಂಪೆನಿಗಳಲ್ಲಿ ಕಾರ್ಯನಿರ್ವಾಹಕರುಗಳಾಗಿ ಮತ್ತು ಸಂಯುಕ್ತರಾಷ್ಟ್ರ ಸಂಸ್ಥೆ ಹಾಗೂ ಅದರ ಸೇವಾಸಂಸ್ಥೆಗಳಲ್ಲಿ ಶಾಶ್ವತ ಪ್ರತಿನಿಧಿಯಾ(ಗಳಾ)ಗಿ ಪ್ರತಿನಿಧಿಸಿಕೊಳ್ಳುತ್ತಾರೆ.

ಭಾರತೀಯ ನಾಗರಿಕ ಸೇವಾ ಕ್ಷೇತ್ರದ ಮುಖ್ಯಸ್ಥರು

ಬದಲಾಯಿಸಿ

ಅತ್ಯುನ್ನತ ದರ್ಜೆಯ ಪೌರ ನೌಕರರೆಂದರೆ ಭಾರತೀಯ ಗಣರಾಜ್ಯದ ಸಚಿವ ಸಂಪುಟದ ಆಡಳಿತ ಕಚೇರಿಯ ಮುಖ್ಯಸ್ಥರಾಗಿದ್ದು ಅವರೇ ಸಂಪುಟ ಕಾರ್ಯದರ್ಶಿಗಳೂ ಆಗಿದ್ದಾರೆ. ಅವರು ಭಾರತೀಯ ಗಣರಾಜ್ಯ ನಾಗರಿಕ ಸೇವೆಗಳ ಮಂಡಳಿಯ ಅಧಿಕಾರನಿಮಿತ್ತ ಸದಸ್ಯ ಹಾಗೂ ಅಧ್ಯಕ್ಷರಾಗಿರುತ್ತಾರೆ ; ಭಾರತೀಯ ಆಡಳಿತಾತ್ಮಕ ಸೇವೆಗಳ ಮುಖ್ಯಸ್ಥರು ಹಾಗೂ ಭಾರತ ಸರ್ಕಾರದ ವ್ಯಾವಹಾರಿಕ ನಿಯಮಗಳಡಿ ಎಲ್ಲಾ ನಾಗರಿಕ ಸೇವೆಗಳ ಮುಖ್ಯಸ್ಥರಾಗಿರುತ್ತಾರೆ.

ಈ ಸ್ಥಾನದಲ್ಲಿರುವವರು ನಾಗರಿಕ ಸೇವಾ ಕ್ಷೇತ್ರವು ತಾನು ಪ್ರತಿದಿನವೂ ಎದುರಿಸಬೇಕಾಗಬಹುದಾದ ಸವಾಲುಗಳನ್ನು ಎದುರಿಸಲು ಅಗತ್ಯವಾದ ಕೌಶಲ್ಯಗಳು ಹಾಗೂ ಸಾಮರ್ಥ್ಯಗಳನ್ನು ಹೊಂದಿರುವ ಸಿಬ್ಬಂದಿ ವರ್ಗವನ್ನು ಹೊಂದಿದೆ ಎಂಬುದನ್ನು ಹಾಗೂ ಪ್ರಶಾಸನ/ಪೌರ ನೌಕರರು ಹಿತಕರವಾದ ಹಾಗೂ ಶಿಷ್ಟ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿರುವರು ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾದ ಜವಾಬ್ದಾರಿಗೆ ಬಾಧ್ಯರಾಗಿರುತ್ತಾರೆ.

ಹೆಸರು ಕಾರ್ಯಾವಧಿ
N. R. ಪಿಳ್ಳೈ ೧೯೫೦ರಿಂದ ೧೯೫೩
Y.N.ಶುಕ್ತಾಂಕರ್‌ ೧೯೫೩ರಿಂದ ೧೯೫೭
M.K.ವೆಲ್ಲೋಡಿ ೧೯೫೭ರಿಂದ ೧೯೫೮
ವಿಷ್ಣು ಸಹಾಯ್‌ ೧೯೫೮ರಿಂದ ೧೯೬೦
B.N.ಝಾ ೧೯೬೦ರಿಂದ ೧೯೬೧
ವಿಷ್ಣು ಸಹಾಯ್‌ ೧೯೬೧ರಿಂದ ೧೯೬೨
S.S.ಖೇರಾ ೧೯೬೨ರಿಂದ ೧೯೬೪
ಧರಮ್‌ ವೀರ ೧೯೬೪ರಿಂದ ೧೯೬೬
D.S.ಜೋಷಿ ೧೯೬೬ರಿಂದ ೧೯೬೮
B. ಶಿವರಾಮನ್‌ ೧೯೬೯ರಿಂದ ೧೯೭೦
T. ಸ್ವಾಮಿನಾಥನ್‌ ೧೯೭೦ರಿಂದ ೧೯೭೨
B.D.ಪಾಂಡೆ ೧೯೭೨ರಿಂದ ೧೯೭೭
N.K. ಮುಖರ್ಜಿ ೧೯೭೭ರಿಂದ ೧೯೮೦
S.S. ಗರೆ/ಗ್ರೆವಾಲ್‌ ೧೯೮೦ರಿಂದ ೧೯೮೧
C.R. ಕೃಷ್ಣಸ್ವಾಮಿ ರಾವ್‌ ೧೯೮೧ರಿಂದ ೧೯೮೫
P.K. ಕೌಲ್‌ ೧೯೮೫ರಿಂದ ೧೯೮೬
B.G.ದೇಶ್‌ಮುಖ್‌ ೧೯೮೬ರಿಂದ ೧೯೮೯
T.N. ಶೇಷನ್‌ ೧೯೮೯ರಿಂದ ೧೯೮೯
V.C.ಪಾಂಡೆ ೧೯೮೯ರಿಂದ ೧೯೯೦
ನರೇಶ್‌ ಚಂದ್ರ ೧೯೯೦ರಿಂದ ೧೯೯೨
S. ರಾಜ್‌ಗೋಪಾಲ್‌ ೧೯೯೨ರಿಂದ ೧೯೯೩
ಝಾಫರ್‌ ಸೈಫುಲ್ಲಾ ೧೯೯೩ರಿಂದ ೧೯೯೪
ಸುರೇಂದ್ರ ಸಿಂಗ್‌ ೧೯೯೪ರಿಂದ ೧೯೯೬
T.S.R. ಸುಬ್ರಮಣಿಯಮ್‌ ೧೯೯೬ರಿಂದ ೧೯೯೮
ಪ್ರಭಾತ್‌ ಕುಮಾರ್‌ ೧೯೯೮ರಿಂದ ೨೦೦೦
T.R. ಪ್ರಸಾದ್‌‌ ೨೦೦೦ರಿಂದ ೨೦೦೨
ಕಮಲ್‌ ಪಾಂಡೆ ೨೦೦೨ರಿಂದ ೨೦೦೪
B. K. ಚತುರ್ವೇದಿ ೨೦೦೪ರಿಂದ ೨೦೦೭
K M ಚಂದ್ರಶೇಖರ್‌ ೨೦೦೭ರಿಂದ ಇಲ್ಲಿಯವರೆಗೆ

ಸಂರಚನೆ

ಬದಲಾಯಿಸಿ

ನಾಗರಿಕ ಸೇವೆಗಳ ಇಲಾಖೆಯ ಸಂರಚನೆಯು ನಿರ್ದಿಷ್ಟ ಮಾದರಿಯನ್ನು ಅನುಸರಿಸುತ್ತದೆ. ಅಖಿಲ ಭಾರತ ನಾಗರಿಕ ಸೇವೆಗಳು ಹಾಗೂ ಕೇಂದ್ರ ನಾಗರಿಕ ಸೇವೆಗಳಿಂದ (A ಮತ್ತು B ಎರಡೂ ದರ್ಜೆಗಳೂ ಸೇರಿದೆ) ಮಾತ್ರವೇ ಪ್ರಸ್ತುತ ಆಧುನಿಕ ಭಾರತೀಯ ನಾಗರಿಕ ಸೇವಾ ಕ್ಷೇತ್ರವು ರಚನೆಯಾಗಿದೆ. ಇದಕ್ಕೆ ನೇಮಕಗೊಳ್ಳುವಂತಹವರು ವಿಶ್ವವಿದ್ಯಾಲಯಗಳಿಂದ ಪದವಿಶಿಕ್ಷಣ ಪಡೆದವರಾಗಿದ್ದು ಲಿಖಿತ ಹಾಗೂ ಮೌಖಿಕ ಪರೀಕ್ಷೆಗಳ ಕಠಿಣ ವ್ಯವಸ್ಥೆಗಳ ಮೂಲಕ ಆಯ್ಕೆಯಾಗಿರುತ್ತಾರೆ. ಅಖಿಲ ಭಾರತ ನಾಗರಿಕ ಸೇವೆಗಳ (ಎಲ್ಲಾ ಮೂರೂ ಸೇವೆಗಳು) ಹಾಗೂ ಕೇಂದ್ರ ನಾಗರಿಕ ಸೇವೆಗಳ (A ಮತ್ತು B ಎರಡೂ ದರ್ಜೆಗಳೂ ಸೇರಿದೆ) ಸಂಭಾವ್ಯ ಅಭ್ಯರ್ಥಿಗಳನ್ನು ಕೇಂದ್ರ ನಾಗರಿಕ ಸೇವಾ ಆಯೋಗದಿಂದ ನೇಮಕಾತಿ ಮಾಡಲಾಗುತ್ತದೆ.

ಅಖಿಲ ಭಾರತ ನಾಗರಿಕ ಸೇವೆಗಳು

ಬದಲಾಯಿಸಿ
  • ಭಾರತೀಯ ಆಡಳಿತಾತ್ಮಕ ಸೇವೆಗಳು.(IAS)
  • ಭಾರತೀಯ ಅರಣ್ಯ ಸೇವೆ.(IFS)
  • ಭಾರತೀಯ ಆರಕ್ಷಕ ಸೇವೆ.(IPS)

ಕೇಂದ್ರ ನಾಗರಿಕ ಸೇವೆಗಳು

ಬದಲಾಯಿಸಿ

ಕೇಂದ್ರ ನಾಗರಿಕ ಸೇವೆಗಳು ಕೇಂದ್ರ ಸರ್ಕಾರದ ಆಡಳಿತಕ್ಕೆ ಸಂಬಂಧಪಟ್ಟಂತೆ ಕಾರ್ಯಾಚರಿಸುತ್ತವೆ. ಈ ವಿಭಾಗವು ವಿದೇಶಾಂಗ ವ್ಯವಹಾರಗಳು, ರಕ್ಷಣಾ ಖಾತೆ, ಆದಾಯ ತೆರಿಗೆ, ಸುಂಕಜಕಾತಿ ಖಾತೆ-, ಅಂಚೆ ಮತ್ತು ತಂತಿ ಇಲಾಖೆ, etc.ಗಳಂತಹಾ ವಿವಿಧ ವಿಷಯಗಳೊಂದಿಗೆ ವ್ಯವಹರಿಸುತ್ತದೆ. ಈ ಎಲ್ಲಾ ಸೇವೆಗಳ ಅಧಿಕಾರಿಗಳು ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಾರೆ ಹಾಗೂ ಅದರಿಂದಲೇ ನೇಮಕಗೊಂಡಿರುತ್ತಾರೆ.

  • ಭಾರತೀಯ ವಿದೇಶಾಂಗ ಸೇವೆ, ಪಂಗಡ 'A'.
  • ಕೇಂದ್ರ ಸಚಿವಾಲಯ ಸೇವೆ ಪಂಗಡ 'A' (ಆಯ್ಕೆಯ ದರ್ಜೆ ಹಾಗೂ ದರ್ಜೆ I ಅಧಿಕಾರಿಗಳು)
  • ಪುರಾತತ್ವಶಾಸ್ತ್ರೀಯ ಸೇವೆಗಳು, ಪಂಗಡ 'A'.
  • ಭಾರತೀಯ ಸಸ್ಯಶಾಸ್ತ್ರೀಯ ಸರ್ವೇಕ್ಷಣಾ ಇಲಾಖೆ, ಪಂಗಡ 'A'.
  • ಕೇಂದ್ರ ತಾಂತ್ರಿಕ (ಸಿವಿಲ್‌/ಕಟ್ಟಡ ನಿರ್ಮಾಣ) ಪಂಗಡ 'A' ಸೇವೆಗಳು.
  • ಕೇಂದ್ರ ತಾಂತ್ರಿಕ (ವಿದ್ಯುದ್ಯಂತ್ರ ಮತ್ತು ಯಾಂತ್ರಿಕ) ಪಂಗಡ 'A' ಸೇವೆಗಳು.
  • ಕೇಂದ್ರ ಆರೋಗ್ಯ ಸೇವೆಗಳು , ಪಂಗಡ 'A'.
  • ಕೇಂದ್ರ ಕಂದಾಯ ರಾಸಾಯನಿಕ ಸೇವೆಗಳು, ಪಂಗಡ 'A'.
  • ಸಾರ್ವತ್ರಿಕ ಕೇಂದ್ರ ಸೇವೆಗಳು, ಪಂಗಡ 'A'.
  • ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ, ಪಂಗಡ 'A'.
  • ಭಾರತೀಯ ಲೆಕ್ಕಪರಿಶೋಧನೆ ಹಾಗೂ ಖಾತೆಗಳ ಸೇವೆಗಳು, ಪಂಗಡ 'A'.
  • ಭಾರತೀಯ ನಾಗರಿಕ ಖಾತೆಗಳ ಸೇವೆಗಳು.
  • ಭಾರತೀಯ ರಕ್ಷಣಾ ಖಾತೆಗಳ ಸೇವೆಗಳು
  • ಭಾರತೀಯ ಪವನಶಾಸ್ತ್ರೀಯ ಸೇವೆಗಳು, ಪಂಗಡ 'A'.
  • ಭಾರತೀಯ ಅಂಚೆ ಸೇವೆಗಳು, ಪಂಗಡ 'A'.
  • ಭಾರತೀಯ ಅಂಚೆ ಮತ್ತು ತಂತಿ ಸರಕು ಸೇವೆಗಳು, ಪಂಗಡ 'A'.
  • ಭಾರತೀಯ ಕಂದಾಯ ಸೇವೆಗಳು, ಪಂಗಡ 'A' (ಕಂದಾಯ ಶಾಖೆ , ಕೇಂದ್ರ ಸುಂಕ ಶಾಖೆ ಮತ್ತು ಆದಾಯ ಕರ ಶಾಖೆ)
  • ಭಾರತೀಯ ಲವಣ ಸೇವೆಗಳು, ಪಂಗಡ 'A'.
  • ವಾಣಿಜ್ಯ ನೌಕಾಪಡೆಯ ತರಬೇತಿ ಹಡಗು ಸೇವೆಗಳು, ಪಂಗಡ 'A'.
  • ಗಣಿಗಳ ಸುರಕ್ಷತೆಯ ಪ್ರಧಾನ ನಿರ್ದೇಶಕ ಮಂಡಳಿ, ಪಂಗಡ 'A'.
  • ಸಾಗರೋತ್ತರ ಸಂಪರ್ಕ ಸೇವೆಗಳು, ಪಂಗಡ 'A'.
  • ಭಾರತೀಯ ಸರ್ವೇಕ್ಷಣಾ ಇಲಾಖೆ, ಪಂಗಡ 'A'.
  • ಭಾರತೀಯ ದೂರಸಂಪರ್ಕ ಸೇವೆಗಳು, ಪಂಗಡ 'A'.
  • ಭಾರತೀಯ ಪ್ರಾಣಿವಿಜ್ಞಾನ ಸರ್ವೇಕ್ಷಣಾ ಇಲಾಖೆ, ಪಂಗಡ 'A'.
  • ಭಾರತೀಯ ಸರಹದ್ದು ಆಡಳಿತಾತ್ಮಕ ಸೇವೆಗಳು , ಪಂಗಡ 'A' (ದರ್ಜೆ I ಮತ್ತು ದರ್ಜೆ II ಅಧಿಕಾರಿಗಳು )
  • ಕೇಂದ್ರ ನ್ಯಾಯಿಕ ಸೇವೆಗಳು (I, II, III ಮತ್ತು IV ದರ್ಜೆಗಳು)
  • ರೈಲ್ವೇ ಪರಿಶೀಲನಾಧಿಕರಣ ಸೇವೆಗಳು, ಪಂಗಡ 'A'
  • ಭಾರತೀಯ ವಿದೇಶಾಂಗ ಸೇವೆಗಳು , ಶಾಖೆ (B) (ಮೊದಲು)- (ಸಾಧಾರಣ ದರ್ಜೆ, ದರ್ಜೆ I ಮತ್ತು ಸಾಧಾರಣ ದರ್ಜೆ, ದರ್ಜೆ II)
  • ದೆಹಲಿ ಹಾಗೂ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಸಮೂಹದ ನಾಗರಿಕ ಸೇವಾ ಕ್ಷೇತ್ರ , ದರ್ಜೆ I.
  • ದೆಹಲಿ ಹಾಗೂ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಸಮೂಹದ ಆರಕ್ಷಕ ಸೇವೆಗಳು , ದರ್ಜೆ II.
  • ಭಾರತೀಯ ಪರಿಶೀಲನಾ ಸೇವೆಗಳು, ಪಂಗಡ 'A'
  • ಭಾರತೀಯ ಸರಬರಾಜು ಸೇವೆಗಳು, ಪಂಗಡ 'A'
  • ಕೇಂದ್ರ ಮಾಹಿತಿ ಸೇವೆಗಳು (ಆಯ್ಕೆಯ ದರ್ಜೆ, ಹಿರಿಯ ಆಡಳಿತಾತ್ಮಕ ದರ್ಜೆ, ಕಿರಿಯ ಆಡಳಿತಾತ್ಮಕ ದರ್ಜೆ, ದರ್ಜೆ I ಮತ್ತು ದರ್ಜೆ II)
  • ಭಾರತೀಯ ಅಂಕಿಅಂಶಗಳ ಸೇವೆಗಳು
  • ಭಾರತೀಯ ಆರ್ಥಿಕ ಸೇವೆಗಳು
  • ತಂತಿ ಸರಕು ಸೇವೆಗಳು, ಪಂಗಡ 'A'
  • ಕೇಂದ್ರ ಜಲ ತಾಂತ್ರಿಕ ಸೇವೆಗಳು, ಪಂಗಡ 'A'
  • ಕೇಂದ್ರ ವಿದ್ಯುತ್‌ ತಾಂತ್ರಿಕ ಸೇವೆಗಳು, ಪಂಗಡ 'A'
  • ಕಂಪೆನಿಗಳ ಕಾನೂನು ಮಂಡಳಿ ಸೇವೆಗಳು
  • ಲೇಬರ್‌ ಆಫೀಸರ್ಸ್‌ ಆಫ್‌‌ ಸೆಂಟ್ರಲ್‌ ಪೂಲ್‌ ಸೇವೆಗಳು, ಪಂಗಡ 'A'
  • ಕೇಂದ್ರ ತಾಂತ್ರಿಕ ಸೇವೆಗಳು (ರಸ್ತೆಗಳು), ಪಂಗಡ 'A'
  • ಭಾರತೀಯ ಅಂಚೆ ಮತ್ತು ತಂತಿ ಖಾತೆಗಳು ಹಾಗೂ ಹಣಕಾಸು ಸೇವೆಗಳು, ಪಂಗಡ 'A'
  • ಭಾರತೀಯ ಪ್ರಸಾರ (ಶಿಲ್ಪಶಾಸ್ತ್ರಜ್ಞರು/ಎಂಜಿನಿಯರ್‌ಗಳು) ಸೇವೆಗಳು
  • ಕೇಂದ್ರ ವಾಣಿಜ್ಯ ಸೇವೆಗಳು, ಪಂಗಡ 'A'
  • ಸೇನಾಪಡೆಗಳ ಪ್ರಧಾನಕಚೇರಿಗಳ ನಾಗರಿಕ ಸೇವೆಗಳು (ಪಂಗಡ 'A')
  • ಕೇಂದ್ರ ಸಚಿವಾಲಯದ ಅಧಿಕೃತ ಭಾಷಾ ಸೇವೆಗಳು (ಪಂಗಡ 'A')
  • ಕೇಂದ್ರ ಸಚಿವಾಲಯದ ಸೇವೆಗಳು , ಪಂಗಡ 'B' (ಉಪವಿಭಾಗ ಮತ್ತು ಸಹಾಯಕ ಶ್ರೇಣಿಯ ಅಧಿಕಾರಿಗಳು)
  • ಕೇಂದ್ರ ಸಚಿವಾಲಯದ ಅಧಿಕೃತ ಭಾಷಾ ಸೇವೆಗಳು , ಪಂಗಡ ‘B’
  • ಕೇಂದ್ರ ಸಚಿವಾಲಯದ ಶೀಘ್ರಲಿಪಿಗಾರರ ಸೇವೆಗಳು, (ದರ್ಜೆ I, ದರ್ಜೆ II ಮತ್ತು ಆಯ್ಕೆ ದರ್ಜೆ ಅಧಿಕಾರಿಗಳು)
  • ಕೇಂದ್ರ ಆರೋಗ್ಯ ಸೇವೆಗಳು , ಪಂಗಡ ‘B’
  • ಭಾರತದ ಪವನಶಾಸ್ತ್ರೀಯ ಸೇವೆಗಳು, ಪಂಗಡ ‘B
  • ಅಂಚೆ ಸೂಪರಿಂಟೆಂಡೆಂಟರ ಸೇವೆಗಳು , ಪಂಗಡ ‘B’
  • ಪೋಸ್ಟ್‌ಮಾಸ್ಟರ್‌ಗಳ ಸೇವೆಗಳು, ಪಂಗಡ ‘B’
  • ದೂರಸಂಪರ್ಕ ತಂತ್ರಜ್ಞಾನ/ತಾಂತ್ರಿಕ ಸೇವೆಗಳು , ಪಂಗಡ ‘B’
  • ಭಾರತೀಯ ಅಂಚೆ ಮತ್ತು ತಂತಿ ಖಾತೆಗಳು ಹಾಗೂ ಹಣಕಾಸು ಸೇವೆಗಳು, ಪಂಗಡ ‘B’ ದೂರಸಂಪರ್ಕ ವಿಭಾಗ.
  • ಭಾರತೀಯ ಅಂಚೆ & ತಂತಿ ಖಾತೆಗಳು & ಹಣಕಾಸು ಸೇವೆಗಳು , ಅಂಚೆ ವಿಭಾಗ , ಪಂಗಡ ‘B’
  • ತಂತಿ ಸರಕು ಸೇವೆಗಳು , ಪಂಗಡ ‘B
  • ಕೇಂದ್ರ ಸುಂಕಜಕಾತಿ ಸೇವೆಗಳು, ಪಂಗಡ ‘B’
  • ಕಂದಾಯ ಮೌಲ್ಯಮಾಪಕರ ಸೇವೆಗಳು , ಪಂಗಡ ‘B’- (ಪ್ರಧಾನ ಮೌಲ್ಯಮಾಪಕರು ಹಾಗೂ ಮುಖ್ಯ ಮೌಲ್ಯಮಾಪಕರು)
  • ಕಂದಾಯ ಪ್ರತಿಬಂಧಕ ಸೇವೆಗಳು , ಪಂಗಡ ‘B’ – (ಮುಖ್ಯ ಪರಿಶೀಲನಾಧಿಕಾರಿಗಳು)
  • ರಕ್ಷಣಾ ಸಚಿವಾಲಯದ ಸೇವೆಗಳು
  • ಕೇಂದ್ರಾಡಳಿತ ಪ್ರದೇಶಗಳ ಆಡಳಿತಾತ್ಮಕ ಸೇವೆಗಳು
  • ಕೇಂದ್ರಾಡಳಿತ ಪ್ರದೇಶಗಳ ಆರಕ್ಷಕ ಸೇವೆಗಳು

ರಾಜ್ಯ ನಾಗರಿಕ ಸೇವೆಗಳು

ಬದಲಾಯಿಸಿ

ರಾಜ್ಯ ನಾಗರಿಕ ಸೇವೆಗಳಿಗೆ ಪರೀಕ್ಷೆಗಳು ಹಾಗೂ ನೇಮಕಾತಿಗಳನ್ನು ಭಾರತದ ಆಯಾ ರಾಜ್ಯಗಳು ಕೈಗೊಳ್ಳುತ್ತವೆ. ರಾಜ್ಯ ನಾಗರಿಕ ಸೇವೆಗಳು ಭೂಕಂದಾಯ, ಕೃಷಿ, ಅರಣ್ಯಗಳು, ಶಿಕ್ಷಣ etc.ಗಳಂತಹಾ ವಿಷಯಗಳಿಗೆ ಸಂಬಂಧಪಟ್ಟಿರುತ್ತವೆ. ರಾಜ್ಯ ನಾಗರಿಕ ಸೇವೆಗಳ ಅಧಿಕಾರಿಗಳನ್ನು ರಾಜ್ಯಗಳ ನಾಗರಿಕ ಸೇವಾ ಆಯೋಗಗಳ ಮೂಲಕ ಆಯಾ ರಾಜ್ಯಗಳು ನೇಮಕ ಮಾಡಿಕೊಳ್ಳುತ್ತವೆ. ರಾಜ್ಯ ನಾಗರಿಕ ಸೇವೆಗಳ (SCS) ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸೇವೆಗಳ ವಿಭಾಗಗಳು ಈ ಕೆಳಕಂಡಂತಿವೆ :

  • ರಾಜ್ಯ ನಾಗರಿಕ ಸೇವೆಗಳು, ಶ್ರೇಣಿ-I (SCS)
  • ರಾಜ್ಯ ಆರಕ್ಷಕ ಸೇವೆಗಳು, ಶ್ರೇಣಿ-I (SPS).
  • ಬ್ಲಾಕ್‌ ಅಭಿವೃದ್ಧಿ ಅಧಿಕಾರಿ.
  • ತಹಸೀಲ್ದಾರ್‌ /ತಾಲೂಕಾದಾರ್‌/ಸಹಾಯಕ ಜಿಲ್ಲಾಧಿಕಾರಿ.
  • ಕಂದಾಯ ಮತ್ತು ತೆರಿಗೆ ಅಧಿಕಾರಿ.
  • ಜಿಲ್ಲಾ ಉದ್ಯೋಗಾಧಿಕಾರಿ.
  • ಜಿಲ್ಲಾ ಖಜಾನಾಧಿಕಾರಿ.
  • ಜಿಲ್ಲಾ ಕ್ಷೇಮಾಭಿವೃದ್ಧಿ ಅಧಿಕಾರಿ.
  • ಸಹಾಯಕ ನೋಂದಣಾಧಿಕಾರಿ ಸಹಕಾರಸಂಘಗಳು.
  • ಜಿಲ್ಲಾ ಆಹಾರ ಮತ್ತು ಸರಬರಾಜು ನಿಯಂತ್ರಣಾಧಿಕಾರಿ/ಅಧಿಕಾರಿ.
  • ಸಂಬಂಧಿತ ರಾಜ್ಯದ ನಿಯಮಗಳಡಿಯಲ್ಲಿ ಸೂಚಿತವಾದ ಇತರೆ ಯಾವುದೇ ಶ್ರೇಣಿ-I/ಶ್ರೇಣಿ-II ಸೇವೆಗಳು.

ಇತರೆ ವಿಷಯಗಳು

ಬದಲಾಯಿಸಿ

ನಾಗರಿಕ ಸೇವಾ ಕ್ಷೇತ್ರ ದಿನ

ಬದಲಾಯಿಸಿ

ನಾಗರಿಕ ಸೇವಾ ಕ್ಷೇತ್ರ ದಿನವನ್ನು ಏಪ್ರಿಲ್‌ ತಿಂಗಳ ೨೧ರಂದು ಆಚರಿಸಲಾಗುತ್ತದೆ. ಈ ದಿನಾಚರಣೆಯನ್ನು ಆಚರಿಸುವ ಉದ್ದೇಶ ತಮ್ಮನ್ನು ತಾವು ಸಾರ್ವಜನಿಕರ ಸೇವೆಗೆ ಮತ್ತೊಮ್ಮೆ ಮುಡಿಪಾಗಿಟ್ಟುಕೊಳ್ಳುವ ಹಾಗೂ ಮತ್ತೊಮ್ಮೆ ತಮ್ಮ ಬದ್ಧತೆಯನ್ನು ಖಚಿತಪಡಿಸಿಕೊಳ್ಳುವುದಾಗಿರುತ್ತದೆ. ಇದನ್ನು ಎಲ್ಲಾ ನಾಗರಿಕ ಸೇವೆಗಳ ಇಲಾಖೆಗಳು ಆಚರಿಸುತ್ತವೆ. ಈ ದಿನವು ಪ್ರಶಾಸನ/ಪೌರ ನೌಕರರಿಗೆ ಆತ್ಮನಿರೀಕ್ಷಣೆಗೆ ಅವಕಾಶ ನೀಡುತ್ತದೆ ಹಾಗೂ ಬದಲಾಗುತ್ತಿರುವ ಸಮಯದಲ್ಲಿ ಉಂಟಾಗಬಹುದಾದ ಸವಾಲುಗಳನ್ನು ಎದುರಿಸುವ ಬಗ್ಗೆ ಭವಿಷ್ಯದ ತಂತ್ರೋಪಾಯಗಳ ಬಗ್ಗೆ ಆಲೋಚಿಸುವ ಅವಕಾಶ ನೀಡುತ್ತದೆ.[]"

ಈ ಸಂದರ್ಭದಲ್ಲಿ ಭಾರತದ ಪ್ರಧಾನಮಂತ್ರಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಾ ಅಧಿಕಾರಿಗಳನ್ನು ಸಾರ್ವಜನಿಕ ಆಡಳಿತದಲ್ಲಿ ಸಾಧಿಸಿದ ಉತ್ಕೃಷ್ಟತೆಗಾಗಿ ಗೌರವಿಸುತ್ತಾರೆ. 'ಸಾರ್ವಜನಿಕ ಆಡಳಿತದಲ್ಲಿನ ಉತ್ಕೃಷ್ಟತೆಗಾಗಿ ನೀಡುವ ಪ್ರಧಾನ ಮಂತ್ರಿಗಳ ಪ್ರಶಸ್ತಿ'ಯನ್ನು ಮೂರು ವಿಭಾಗಗಳಡಿ ನೀಡಲಾಗುತ್ತದೆ. ೨೦೦೬ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಗಳ ಯೋಜನೆಯಡಿ, ಎಲ್ಲಾ ಅಧಿಕಾರಿಗಳು ವೈಯಕ್ತಿಕವಾಗಿ ಅಥವಾ ಒಂದು ತಂಡವಾಗಿ ಅಥವಾ ಒಂದು ಸಂಸ್ಥೆಯಾಗಿ ಅರ್ಹರಾಗಿರುತ್ತಾರೆ.

ಒಂದು ಪದಕ, ಬಿರುದುಪಟ್ಟಿಯ ಸುರುಳಿ ಹಾಗೂ Rs.೧ ಲಕ್ಷದ ನಗದು ಮೊತ್ತವನ್ನು ಈ ಪ್ರಶಸ್ತಿಯು ಒಳಗೊಂಡಿರುತ್ತದೆ. ತಂಡವಾಗಿ ನೀಡುವ ಸಂದರ್ಭದಲ್ಲಿ ಒಟ್ಟು ಪ್ರಶಸ್ತಿಯ ಮೊತ್ತವು ಪ್ರತಿ ವ್ಯಕ್ತಿಗೆ Rs.೧ ಲಕ್ಷವನ್ನು ಮೀರದಿರುವಂತೆ Rs.೫ ಲಕ್ಷಗಳಾಗಿರುತ್ತದೆ. ಸಂಸ್ಥೆಗಳಿಗೆ ನಗದು ಮೊತ್ತವನ್ನು Rs.೫ ಲಕ್ಷಗಳಿಗೆ ಮಿತಿಗೊಳಿಸಲಾಗಿರುತ್ತದೆ.

ಟಿಪ್ಪಣಿಗಳು

ಬದಲಾಯಿಸಿ
  1. "ಭಾರತದ ಕೇಂದ್ರ ನಾಗರಿಕ ಸೇವೆಗಳ A ಪಂಗಡದ ಸಂಪೂರ್ಣ ನಾಗರಿಕ ಸೇವಾ ಕ್ಷೇತ್ರದ ತಪ್ಸೀಲು ಪಟ್ಟಿ Archived 2011-07-18 ವೇಬ್ಯಾಕ್ ಮೆಷಿನ್ ನಲ್ಲಿ.." ಕೇಂದ್ರ ನಾಗರಿಕ ಸೇವಾ ಕ್ಷೇತ್ರ ಪಂಗಡ A - ಭಾರತ ಸರ್ಕಾರ ೧ ಜನವರಿ ೨೦೧೧.
  2. "ಭಾರತದ ಕೇಂದ್ರ ನಾಗರಿಕ ಸೇವೆಗಳ B ಪಂಗಡದ ಸಂಪೂರ್ಣ ನಾಗರಿಕ ಸೇವಾ ಕ್ಷೇತ್ರದ ತಪ್ಸೀಲು ಪಟ್ಟಿ Archived 2011-07-18 ವೇಬ್ಯಾಕ್ ಮೆಷಿನ್ ನಲ್ಲಿ.." ಕೇಂದ್ರ ನಾಗರಿಕ ಸೇವಾ ಕ್ಷೇತ್ರ ಪಂಗಡ B - ಭಾರತ ಸರ್ಕಾರ ೧ ಜನವರಿ ೨೦೧೧.
  3. "ನಾಗರಿಕ ಸೇವಾ ಕ್ಷೇತ್ರ ದಿನ : ಭಾರತ Archived 2011-02-05 ವೇಬ್ಯಾಕ್ ಮೆಷಿನ್ ನಲ್ಲಿ.." ನಾಗರಿಕ ಸೇವಾ ಕ್ಷೇತ್ರ ದಿನ - ಭಾರತ ಸರ್ಕಾರ ಏಪ್ರಿಲ್‌ ೨೦೧೦.

ಬಾಹ್ಯ ಕೊಂಡಿಗಳು‌

ಬದಲಾಯಿಸಿ