ಬ್ರೆಟ್‌ ಲೀ (8 ನವೆಂಬರ್‌ 1976ರಂದು ಆಸ್ಟ್ರೇಲಿಯಾ ದೇಶದ ನ್ಯೂ ಸೌತ್‌ ವೇಲ್ಸ್‌ವುಲೊಂಗಾಂಗ್‌ನಲ್ಲಿ ಜನನ) ಆಸ್ಟ್ರೇಲಿಯಾ ತಂಡದ ಒಬ್ಬ ಕ್ರಿಕೆಟ್‌ ಆಟಗಾರ.

ಬ್ರೆಟ್ ಲೀ
Brett Lee
ಚಿತ್ರ:Brett Lee Northampton.JPG
ಆಸ್ಟ್ರೇಲಿಯಾ
ವೈಯಕ್ತಿಕ ಮಾಹಿತಿ
ಪೂರ್ಣಹೆಸರು Brett Lee
ಅಡ್ಡಹೆಸರು Bing, Binga, The Speedster
ಹುಟ್ಟು 11 8 1976
Wollongong, New South Wales, Australia
ಎತ್ತರ 1.87 m (6 ft 1+12 in)
ಪಾತ್ರ Bowler
ಬ್ಯಾಟಿಂಗ್ ಶೈಲಿ Right-handed
ಬೌಲಿಂಗ್ ಶೈಲಿ Right-arm fast
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ
ಟೆಸ್ಟ್ ಪಾದಾರ್ಪಣೆ (cap 383) 26 December 1999: v India
ಕೊನೆಯ ಟೆಸ್ಟ್ ಪಂದ್ಯ 26 December 2008: v South Africa
ODI ಪಾದಾರ್ಪಣೆ (cap 140) 9 January 2000: v Pakistan
ಕೊನೆಯ ODI ಪಂದ್ಯ 25 October 2009: v India
ODI ಅಂಗಿಯ ಸಂಖ್ಯೆ 58
ಪ್ರಾದೇಶಿಕ ತಂಡದ ಮಾಹಿತಿ
ವರ್ಷಗಳು ತಂಡ
1995 - New South Wales
2008 - Present Kings XI Punjab
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟ್ODIFCLA
ಪಂದ್ಯಗಳು 76 186 116 219
ಒಟ್ಟು ರನ್ನುಗಳು 1,451 897 2,120 1,071
ಬ್ಯಾಟಿಂಗ್ ಸರಾಸರಿ 20.15 16.30 18.59 16.22
೧೦೦/೫೦ 0/5 0/2 0/8 0/2
ಅತೀ ಹೆಚ್ಚು ರನ್ನುಗಳು 64 57 97 57
ಬೌಲ್ ಮಾಡಿದ ಚೆಂಡುಗಳು 16,531 9,478 24,193 11,274
ವಿಕೆಟ್ಗಳು 310 324 487 366
ಬೌಲಿಂಗ್ ಸರಾಸರಿ 30.81 23.01 28.22 23.82
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ 10 9 20 9
೧೦ ವಿಕೆಟುಗಳು ಪಂದ್ಯದಲ್ಲಿ 0 n/a 2 n/a
ಶ್ರೇಷ್ಠ ಬೌಲಿಂಗ್ 5/30 5/22 7/114 5/22
ಕ್ಯಾಚುಗಳು /ಸ್ಟಂಪಿಂಗ್‍ಗಳು 23/– 44/– 35/– 49/–

ದಿನಾಂಕ 21 November, 2009 ವರೆಗೆ.
ಮೂಲ: CricketArchive


ಆಸ್ಟ್ರೇಲಿಯನ್‌ ಟೆಸ್ಟ್‌ ತಂಡಕ್ಕೆ ಸೇರ್ಪಡೆಯಾದ ಮೇಲೆ, ಬ್ರೆಟ್‌ ಲೀ ವಿಶ್ವ ಕ್ರಿಕೆಟ್‌ನಲ್ಲಿ ಅತಿವೇಗದ ಬೌಲರ್‌ಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟರು. ತಮ್ಮ ಮೊದಲ ಎರಡು ವರ್ಷಗಳಲ್ಲಿ ಅವರ ಬೌಲಿಂಗ್‌ ಸರಾಸರಿ 20ಕ್ಕಿಂತಲೂ ಕಡಿಮೆಯಿತ್ತು. ಆದರೆ, ಅಂದಿನಿಂದಲೂ 30ರ ಆರಂಭದಲ್ಲಿ ತಮ್ಮ ಅತ್ಯುತ್ತಮ ಅಂಕಿಗಳನ್ನು ಸಾಧಿಸಿದ್ದಾರೆ.[೧]


ಅವರು ಒಬ್ಬ ಚುರುಕಾದ ಕ್ಷೇತ್ರರಕ್ಷಕ (ಫೀಲ್ಡರ್‌) ಮತ್ತು ಒಬ್ಬ ಉಪಯುಕ್ತ ಕೆಳ-ಕ್ರಮಾಂಕಬ್ಯಾಟ್ಸ್‌ಮನ್‌ ಕೂಡ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರ ಬ್ಯಾಟಿಂಗ್‌ ಸರಾಸರಿ 20ಕ್ಕಿಂತ ಹೆಚ್ಚಿದೆ. 2005-06(123)ರಿಂದೀಚೆಗೆ ODI‌ಗಳಲ್ಲಿ ಬ್ರೆಟ್‌ ಲೀ ಮೈಕ್ ಹಸಿಯವರೊಂದಿಗೆ ಆಸ್ಟ್ರೇಲಿಯಾ ಪರ ಏಳನೆಯ ವಿಕೆಟ್‌‌ಗೆ ಅತ್ಯಧಿಕ 123 ರನ್ ಜತೆಯಾಟವು ದಾಖಲೆಯಾಗಿ ಉಳಿದುಕೊಂಡಿದೆ.[೨]

ಶೈಲಿ ಬದಲಾಯಿಸಿ

ಬ್ರೆಟ್‌ ಲೀ ಕ್ರಿಕೆಟ್‌ ಆಟದ ಇತಿಹಾಸದಲ್ಲಿ ಅತಿವೇಗದ ಬೌಲರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ತಮ್ಮ ಉತ್ತುಂಗದಲ್ಲಿ ಅವರು ಗಂಟೆಗೆ 161 ಕಿಮೀ,(km/h) (ಗಂಟೆಗೆ 100.05 ಮೈಲುಗಳು)(mph) ವೇಗದಲ್ಲಿ ಬೌಲ್‌ ಮಾಡಬಲ್ಲವರಾಗಿದ್ದರು. ಬ್ರೆಟ್‌ ಲೀಯವರ ಇದುವರೆಗಿನ ಅತಿವೇಗದ ಚೆಂಡೆಸೆತವು 160.8 ಕಿಮೀ/ಗಂಟೆ (ಗಂಟೆಗೆ 99.9 ಮೈಲ್‌ಗಳು) ವೇಗದ್ದೆಂದು ದಾಖಲಿಸಲಾಗಿದೆ. ಇದನ್ನು 5 ಮಾರ್ಚ್‌ 2005ರಂದು ನ್ಯೂಜಿಲೆಂಡ್‌ನ ನೇಪಿಯರ್‌ನಲ್ಲಿ, ನ್ಯೂಜಿಲೆಂಡ್ ತಂಡದ ಕ್ರೇಗ್‌ ಕಮ್ಮಿಂಗ್‌ರತ್ತ ತಮ್ಮ ಮೊದಲ ಓವರ್‌ನಲ್ಲಿ ಎಸೆದಿದ್ದರು.[೩]


ಈ ದಶಕದುದ್ದಕ್ಕೂ, ಸಮಕಾಲೀನ ಕ್ರಿಕೆಟ್‌ನಲ್ಲಿ ಬ್ರೆಟ್‌ ಲೀ ಅತಿವೇಗದ ಬೌಲರ್‌ ಪಟ್ಟವನ್ನು ಪಾಕಿಸ್ತಾನದ ವೇಗದ ಬೌಲರ್‌ ಶೊಯೆಬ್‌ ಅಖ್ತರ್‌ರೊಂದಿಗೆ ಹಂಚಿಕೊಂಡಿದ್ದರು.[೪]

ಶೊಯೆಬ್‌ ಅಖ್ತರ್‌  161.3 ಕಿಮೀ/ಗಂಟೆಗೆ

100.23 ಮೈಲು ಪ್ರತಿಗಂಟೆಗೆ ವೇಗದಲ್ಲಿ ಬೌಲ್ ಮಾಡಿದ್ದು ಇದುವರೆಗೂ ದಾಖಲಾದ ಅತಿವೇಗದ ಚೆಂಡೆಸೆತ.[೫]

ತಮ್ಮ ವೃತ್ತಿಯ ಆರಂಭ ದಿನಗಳಲ್ಲಿ, ಬ್ರೆಟ್‌ ಲೀ ಶಂಕಾಸ್ಪದ ನಿಯಮಬಾಹಿರ ಬೌಲಿಂಗ್‌ ಶೈಲಿಯನ್ನು ಅನುಸರಿಸಿದ ದೂರನ್ನು ಎದುರಿಸಬೇಕಾಯಿತು. ಆದರೆ ಅದರಿಂದ ಅವರು ಮುಕ್ತರಾದರು.[೬] 2005ರ ಆರಂಭದಲ್ಲಿ ಅವರು ODIಗಳಲ್ಲಿ(ಏಕದಿನ ಕ್ರಿಕೆಟ್‌ ಪಂದ್ಯಗಳು) ಬ್ಯಾಟ್ಸ್‌ಮನ್‌ಗಳ ತಲೆಯ ಕಡೆ ಚೆಂಡೆಸೆತ(ಬೀಮರ್‌)ಗಳನ್ನು ಬೌಲ್‌ ಮಾಡಿದ್ದಕ್ಕೆ ಟೀಕೆಗೊಳಗಾಗಿದ್ದರು. ಅದರಲ್ಲೂ, ಅವರು ಉದ್ದೇಶಪೂರ್ವಕವಾಗಿ ಬ್ಯಾಟ್ಸ್‌ಮನ್‌ಗಳತ್ತ ನಿಯಮಬಾಹಿರವಾದ ತಲೆಯಷ್ಟು ಎತ್ತರದ ಫುಲ್‌-ಟಾಸ್‌ ಎಸೆಯುತ್ತಿದ್ದರೆಂದು ಕೆಲವರು ದೂರಲು ಕಾರಣವಾಯಿತು.[೭][೮]


ದಕ್ಷಿಣ ಗೋಲಾರ್ಧದಲ್ಲಿರುವ ಹೆಚ್ಚು ಪುಟಿತವಿರುವ ಕ್ರಿಕೆಟ್‌ ಅಂಕಣಗಳಲ್ಲಿ ಬ್ರೆಟ್‌ ಲೀ ಅತಿ ಪ್ರಭಾವಶಾಲಿ ಬೌಲಿಂಗ್ ದಾಳಿ ಮಾಡುತ್ತಾರೆ. ಉತ್ತರ ಗೋಲಾರ್ಧದಲ್ಲಿ ಅವರು ಆಡಿದ 19 ಟೆಸ್ಟ್‌ ಪಂದ್ಯಗಳಲ್ಲಿ 42.11 ಸರಾಸರಿಯಲ್ಲಿ 53 ವಿಕೆಟ್‌ಗಳನ್ನು ಗಳಿಸಿದ್ದಾರೆ. ದಕ್ಷಿಣ ಗೋಲಾರ್ಧದಲ್ಲಿ ಅವರು ಆಡಿದ 40 ಟೆಸ್ಟ್‌ ಪಂದ್ಯಗಳಲ್ಲಿ 28.48 ಸರಾಸರಿಯಲ್ಲಿ 178 ವಿಕೆಟ್‌ಗಳನ್ನು ಗಳಿಸಿದ್ದಾರೆ. ಅವರು ವೆಸ್ಟ್‌ ಇಂಡೀಸ್‌ ಮತ್ತು ನ್ಯೂಜಿಲೆಂಡ್‌ ವಿರುದ್ಧ, 20ಕ್ಕಿಂತಲೂ ಕಡಿಮೆ ಸರಾಸರಿಯಲ್ಲಿ ಅತಿಹೆಚ್ಚು ಯಶಸ್ಸು ಗಳಿಸಿದ್ದಾರೆ. ಅವರು ಇಂಗ್ಲೆಂಡ್‌, ಬಾಂಗ್ಲಾದೇಶ್‌ ಮತ್ತು ಪಾಕಿಸ್ತಾನದ ವಿರುದ್ಧ ತಲಾ 40 ಹಾಗೂ ಇತರೆ ತಂಡಗಳ ವಿರುದ್ಧ 30ರ ಸರಾಸರಿ ಹೊಂದಿದ್ದಾರೆ.[೯]

ಬಾಲ್ಯ ಮತ್ತು ಆರಂಭಿಕ ವೃತ್ತಿ ಬದಲಾಯಿಸಿ

ಲೋಹವಿಜ್ಞಾನಿ ಬಾಬ್‌ ಲೀ ಮತ್ತು ಪಿಯಾನೊ ಶಿಕ್ಷಕಿ ಹೆಲೆನ್‌ (ಕುಟುಂಬದ ಹೆಸರು ಬಕ್ಸ್‌ಟನ್‌) ದಂಪತಿಗಳಿಗೆ ಮೂವರು ಪುತ್ರರಲ್ಲಿ ಬ್ರೆಟ್‌ ಲೀ ಎರಡನೆಯವರು.[೧೦] ಮಾಜಿ ಆಸ್ಟ್ರೇಲಿಯನ್‌ ಸವ್ಯಸಾಚಿ (ಆಲ್‌ರೌಂಡರ್‌) ಹಾಗೂ ನ್ಯೂ ಸೌತ್‌ ವೇಲ್ಸ್‌ ಬ್ಲೂಸ್‌ ನಾಯಕ ಶೇನ್‌ ಲೀ ಅವರ ಅಣ್ಣ. ತಮ್ಮ ಗ್ರ್ಯಾಂಟ್‌ ಲೀ ಅಂಡರ್‌-19(19 ವರ್ಷದವರಿಗಿಂತ ಕೆಳಗಿನ) ಮಟ್ಟದ ಪಂದ್ಯಗಳಲ್ಲಿ ನ್ಯೂ ಸೌತ್‌ ವೇಲ್ಸ್‌ ತಂಡದ ಪರ ಕ್ರಿಕೆಟ್‌ ಆಡಿ, ಈಗ ಒಬ್ಬ ಲೆಕ್ಕಾಧಿಕಾರಿಯಾಗಿದ್ದಾರೆ. ಬ್ರೆಟ್‌ ಲೀ ಬಾಲಾರ‌್ಯಾಂಗ್‌ ಪಬ್ಲಿಕ್‌ ಸ್ಕೂಲ್‌ ಮತ್ತು ಓಕ್‌ ಫ್ಲ್ಯಾಟ್ಸ್‌ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದರು. ಅವರ ಗೌರವಾರ್ಥ, ಈ ಓಕ್‌ ಫ್ಲ್ಯಾಟ್ಸ್‌ ಪ್ರೌಢಶಾಲೆ ತನ್ನ ಕ್ರಿಕೆಟ್‌ ಮೈದಾನಕ್ಕೆ ಬ್ರೆಟ್‌ ಲೀ ಹೆಸರನ್ನಿಟ್ಟಿದೆ. ನ್ಯೂ ಸೌತ್‌ ವೇಲ್ಸ್‌ನಲ್ಲಿ ವಿದ್ಯುನ್ಮಾನ ಉತ್ಪನ್ನಗಳ ಅಂಗಡಿಗಳ ಸರಣಿ 'ಬಿಂಗ್‌ ಲೀ' ಹೆಸರು ಬ್ರೆಟ್‌ ಲೀಯವರ ಉಪನಾಮ 'ಬಿಂಗ್‌'ನ ಆಧಾರವಾಗಿದೆ.


ಸಹೋದರರು ಫುಟ್ಬಾಲ್‌, ಬ್ಯಾಸ್ಕೆಟ್‌ಬಾಲ್‌ ಮತ್ತು ಸ್ಕೀಯಿಂಗ್ ಆಟಗಳಲ್ಲಿ ಆನಂದಿಸುತ್ತಿದ್ದರು. ಅವರ ತಾಯಿ ಪಿಯಾನೊ ನುಡಿಸುವಂತೆ ಅ ಮೂವರಿಗೆ ಪ್ರೋತ್ಸಾಹಿಸುತ್ತಿದ್ದರು (ಗ್ರ್ಯಾಂಟ್‌ ಪರಿಣತಿ ಹೊಂದಿದ ಪಿಯಾನೊ ವಾದಕ).[೧೧]

ಬ್ರೆಟ್‌ ಲೀ ಅವರನ್ನು ತಮ್ಮ ಎಂಟನೆಯ ವಯಸ್ಸಿನಲ್ಲಿ ಅಣ್ಣ ಶೇನ್‌ ಲೀ ಕ್ರಿಕೆಟ್‌ ಆಟಕ್ಕೆ ಪರಿಚಯಿಸಿದರು. ತಮ್ಮ ಮೊದಲ ಔಪಚಾರಿಕ ಕ್ರಿಕೆಟ್‌ ಪಂದ್ಯವನ್ನು ಓಕ್‌ ಫ್ಲ್ಯಾಟ್ಸ್‌ ರ‌್ಯಾಟ್ಸ್‌  ತಂಡದ ಪರ ಆಡಿದರು. ಅವರು ಒಂದು ಓವರಿನಲ್ಲಿ 6/0 ವಿಕೆಟ್ ಪಡೆದರು ಅಥವಾ 0 ರನ್ನಿಗೆ 6 ವಿಕೆಟ್‌ಗಳನ್ನು ಪಡೆದರು. ಎಲ್ಲ ವಿಕೆಟ್‌ಗಳನ್ನು ಬೌಲ್ಡ್ (ಚೆಂಡು ವಿಕೆಟ್‌ಗೆ ಬಡಿಯುವುದು) ಮೂಲಕ ಪಡೆದಿದ್ದರು.[ಸೂಕ್ತ ಉಲ್ಲೇಖನ ಬೇಕು]

ತಮ್ಮ ಹದಿನಾರನೆಯ ವಯಸ್ಸಿನಲ್ಲಿ, ತಮ್ಮ ಪ್ರಥಮ ದರ್ಜೆಯ ಕ್ರಿಕೆಟ್‌ ವೃತ್ತಿಯನ್ನು ಕ್ಯಾಂಪ್ಬೆಲ್‌ಟೌನ್‌ ತಂಡದೊಂದಿಗೆ ಆರಂಭಿಸಿದರು. ಈ ಪಂದ್ಯಗಳಲ್ಲಿ ಅವರು ಕೆಲವು ನ್ಯೂ ಸೌತ್‌ ವೇಲ್ಸ್‌ ಕ್ರಿಕೆಟ್‌ ಆಟಗಾರರ ವಿಕೆಟ್‌ ಕಬಳಿಸುವಲ್ಲಿ ಯಶಸ್ವಿಯಾದರು. ನಂತರ, ಅವರು ಮಾಸ್ಮನ್‌ ತಂಡ ಸೇರಿದರು. ಒಂದು ಹಂತದಲ್ಲಿ ಅವರು ಶೊಯೆಬ್‌ ಅಖ್ತರ್‌ರೊಂದಿಗೆ ಹೊಸ ಚೆಂಡನ್ನು ಹಂಚಿಕೊಂಡಿದ್ದರು.[೧೨]

ಅವರು ಇಂದಿಗೂ ಸಿಡ್ನಿ ನಗರದ ಹೊರವಲಯದಲ್ಲಿರುವ ಲೇನ್‌ ಕೊವ್‌ಲೋಯರ್‌ ನಾರ್ತ್‌ ಷೋರ್‌ ರಸ್ತೆಯ ನಿವಾಸದಲ್ಲಿ ವಾಸಿಸುತ್ತಾರೆ.


ಬ್ರೆಟ್‌ ಲೀ ಆಸ್ಟ್ರೇಲಿಯಾದ ಅಂಡರ್‌-17 ಹಾಗೂ ಅಂಡರ್‌-19 ತಂಡಗಳ ಪರ ಆಡಿ, ಆಸ್ಟ್ರೇಲಿಯನ್‌ ಕ್ರಿಕೆಟ್‌ ಅಕಾಡೆಮಿಗೆ ಹಾಜರಾಗಲು ವಿದ್ಯಾರ್ಥಿವೇತನ ಸಂಪಾದಿಸಿದ್ದರು.


ಮಾರ್ಚ್‌ 1994ರಲ್ಲಿ, ತಮ್ಮ ಬೆನ್ನಿನ ಕೆಳಭಾಗದಲ್ಲಿ ಒತ್ತಡದ ಮೂಳೆಬಿರಿತ (ಸ್ಟ್ರೆಸ್‌ ಫ್ರ್ಯಾಕ್ಚರ್‌) ಕಾರಣ ಆಸ್ಟ್ರೇಲಿಯಾ ಅಂಡರ್‌-19 ತಂಡದೊಂದಿಗೆ ಭಾರತದ ಪ್ರವಾಸದಿಂದ ಹೊರಗುಳಿದರು. ಗುಣಮುಖರಾದ ನಂತರ ಅವರು 1997-98 ಋತುವಿನಲ್ಲಿ, ನ್ಯೂ ಸೌತ್‌ ವೇಲ್ಸ್‌ ಪರ ತಮ್ಮ 20ನೆಯ ವಯಸ್ಸಿನಲ್ಲಿ ಪ್ರಥಮ ದರ್ಜೆಯ ಕ್ರಿಕೆಟ್‌ ವೃತ್ತಿಯನ್ನು ಆರಂಭಿಸಿದರು. ಷೆಫೀಲ್ಡ್ ಷೀಲ್ಡ್‌ ಪಂದ್ಯಾವಳಿಯಲ್ಲಿ ವೆಸ್ಟರ್ನ್‌ ಆಸ್ಟ್ರೇಲಿಯಾ ವಿರುದ್ಧ ಒಂದು ಪಂದ್ಯವನ್ನಾಡಿ 114 ರನ್‌ ನೀಡಿ 3 ವಿಕೆಟ್‌ ಗಳಿಸಿದರು.[೧೩]


ಒಂದು ತಿಂಗಳ ನಂತರ, ದಕ್ಷಿಣ ಆಫ್ರಿಕಾದ ಪ್ರವಾಸ ಹೊರಟ ಆಸ್ಟ್ರೇಲಿಯಾ 'ಎ' ತಂಡದ ಆಟಗಾರರಾಗಿ ಬ್ರೆಟ್‌ ಲೀ ಆಯ್ಕೆಯಾದರು. ಅವರು ಎರಡು ವಿಕೆಟ್‌ ಗಳಿಸಿದರು. ಆದರೆ, ಇದೇ ಪಂದ್ಯವಾಡುತ್ತಿರುವಾಗ ಹಿಂದೆ ಸಂಭವಿಸಿದ ಬೆನ್ನಿನ ಒತ್ತಡದ ಮೂಳೆಬಿರಿತ ಮರುಕಳಿಸಿತು. ಸುಮಾರು ಮೂರು ತಿಂಗಳುಗಳಿಗಿಂತಲೂ ಹೆಚ್ಚು ಕಾಲ ಅವರು ಬೆನ್ನಿನ ಪಟ್ಟಿ ಧರಿಸಬೇಕಾಯಿತು. ತಮ್ಮ 21ನೆಯ ವಯಸ್ಸಿನಲ್ಲಿ ಬ್ರೆಟ್‌ ಲೀ ತಮ್ಮ ವೃತ್ತಿಯ ಸನಿಹದಲ್ಲಿರಲು ಸಿಡ್ನಿಗೆ ಸ್ಥಳಾಂತರಗೊಂಡರು.[ಸೂಕ್ತ ಉಲ್ಲೇಖನ ಬೇಕು]

1997-98 ಋತುವಿನಲ್ಲಿ, 10 ಷೆಫೀಲ್ಡ್‌ ಷೀಲ್ಡ್‌ ಪಂದ್ಯಗಳ ಪೈಕಿ ಐದರಲ್ಲಿ ಆಡಿ 30ರ ಸರಾಸರಿಯಲ್ಲಿ ಹದಿನಾಲ್ಕು ವಿಕೆಟ್‌ ಗಳಿಸಿದರು. ಪಂದ್ಯಾವಳಿಯ ಮೊದಲ 20 ಅಗ್ರ ಬೌಲರ್‌ಗಳಲ್ಲಿ, ವಿಕೆಟ್ ಪಡೆಯುವಿಕೆ ಹಾಗೂ ಬೌಲಿಂಗ್‌ ಸರಾಸರಿಗಳ ಪಟ್ಟಿಯಿಂದ ಹೊರಕ್ಕುಳಿದು ಬ್ರೆಟ್ ಲೀ ಕ್ರಿಕೆಟ್ ಋತು ಮುಗಿಸಿದರು.[೧೪]

1999ರಲ್ಲಿ, ಪರ್ತ್‌ನಲ್ಲಿ ನಡೆದ ಷೆಫೀಲ್ಡ್‌ ಷೀಲ್ಡ್‌ ಪಂದ್ಯವೊಂದರಲ್ಲಿ, ಪಶ್ಚಿಮ ಆಸ್ಟ್ರೇಲಿಯನ್‌ ಬ್ಯಾಟ್ಸ್‌ಮನ್‌ಗಳತ್ತ ಅತಿವೇಗದ ಚೆಂಡುಗಳನ್ನು ಎಸೆದರು. ಇದನ್ನು 1970ರ ದಶಕದಲ್ಲಿ ಜೆಫ್‌ ಥಾಮ್ಸನ್‌ನ ದಿನಗಳಿಂದ ಆಸ್ಟ್ರೇಲಿಯಾದಲ್ಲಿ ಕಂಡುಬಂದ ಅತಿವೇಗದ ಬೌಲಿಂಗ್‌ಗೆ ಹೋಲಿಸಲಾಗಿದೆ. ಆ ಹಂತದಿಂದ, ಅಂದಿನ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್‌ ವಾ ಮತ್ತು ಅಂದಿನ ಉಪನಾಯಕ ಶೇನ್‌ ವಾರ್ನ್‌, ಟೆಸ್ಟ್‌ ತಂಡದಲ್ಲಿ ಬ್ರೆಟ್‌ ಲೀಯವರನ್ನು ಸೇರಿಸಿಕೊಳ್ಳಲು ಒತ್ತಡ ಹೇರಿದರು.

ಟೆಸ್ಟ್‌ ವೃತ್ತಿಜೀವನ ಬದಲಾಯಿಸಿ

ಆರಂಭಿಕ ಟೆಸ್ಟ್‌ ವೃತ್ತಿಜೀವನ ಬದಲಾಯಿಸಿ

1990ರ ದಶಕದ ಕೊನೆಯಲ್ಲಿ, ಬ್ರೆಟ್‌ ಲೀ ಆಸ್ಟ್ರೇಲಿಯಾ ತಂಡಕ್ಕೆ ಸೇರ್ಪಡೆಯಾಗಬೇಕೆಂಬ ಕರೆಗಳು ಬರತೊಡಗಿದವು. 1999ರಲ್ಲಿ ಪಾಕಿಸ್ತಾನದ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಅಂತಿಮ 14 ಆಟಗಾರರ ಪೈಕಿ ಬ್ರೆಟ್‌ ಲೀ ತರುವಾಯ ಆಯ್ಕೆಯಾಗಿದ್ದರು. ಆದರೆ ಅಂತಿಮ 11 ಆಟಗಾರರ ತಂಡದಲ್ಲಿ ಅವರು ಸೇರ್ಪಡೆಯಾಗಲು ವಿಫಲರಾದರು. ಆನಂತರ, ಭಾರತ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಬ್ರೆಟ್‌ ಲೀ 12ನೆಯ ಆಟಗಾರರಾಗಿದ್ದರು. ಆದರೂ, ಡಿಸೆಂಬರ್ 1999ರಲ್ಲಿ ಆಸ್ಟ್ರೇಲಿಯಾ ಪರ ಬ್ರೆಟ್‌ ಲೀ ತಮ್ಮ ಟೆಸ್ಟ್‌ ಚೊಚ್ಚಲ ಪ್ರವೇಶವನ್ನು ಪ್ರವಾಸಿ ಭಾರತೀಯರ ವಿರುದ್ಧ ಆರಂಭಿಸಿ ಆಸ್ಟ್ರೇಲಿಯಾದ 383ನೆಯ ಟೆಸ್ಟ್‌ ಕ್ರಿಕೆಟಿಗರಾದರು.


ಮೊದಲ ಬದಲಾವಣೆಯ ಬೌಲರ್‌ ಆಗಿ, ಬ್ರೆಟ್‌ ಲೀ ಟೆಸ್ಟ್‌ ಕ್ರಿಕೆಟ್‌ ವೃತ್ತಿಯ ತಮ್ಮ ಮೊದಲನೆಯ ಒವರ್‌ನ ನಾಲ್ಕನೆಯ ಚೆಂಡೆಸತದಲ್ಲಿಯೇ ಸದಗೊಪ್ಪನ್‌ ರಮೇಶ್‌ ವಿಕೆಟ್‌ನ್ನು ಬೌಲ್ಡ್ ಮೂಲಕ ಕೆಡವಿದರು. ಆನಂತರ ಬ್ರೆಟ್‌ ಲೀ ತಮ್ಮ ಮೊದಲನೆಯ ಅವಧಿಯಲ್ಲಿ ರಾಹುಲ್ ದ್ರಾವಿಡ್‌ ವಿಕೆಟ್ ಪಡೆದುಕೊಂಡು,ನಂತರ ಆರು ಚೆಂಡುಗಳಲ್ಲಿ ಮೂರು ವಿಕೆಟ್‌ ಗಳಿಸಿದರು. 17 ಓವರುಗಳನ್ನು ನೀಡಿ 5/47 ಅಂಕಿಅಂಶದೊಂದಿಗೆ ಇನ್ನಿಂಗ್ಸ್ ಮುಗಿಸಿದರು. ಇದಕ್ಕೂ ಮುಂಚೇ ಆಸ್ಟ್ರೇಲಿಯಾ ಮೊದಲು ಬ್ಯಾಟ್‌ ಮಾಡಿದಾಗ, ಬ್ರೆಟ್‌ ಲೀ 27 ರನ್‌ ಗಳಿಸಿದ್ದರು. ಬ್ರೆಟ್‌ ಲೀ ತಮ್ಮ ಆರಂಭಿಕ ಎರಡು ಟೆಸ್ಟ್‌ಗಳಲ್ಲಿ, 14.15ರ ಕಡಿಮೆ ಸರಾಸರಿಯಲ್ಲಿ ಹದಿಮೂರು ವಿಕೆಟ್‌ ಗಳಿಸಿದರು.


ತಮ್ಮ ಟೆಸ್ಟ್‌ ವೃತ್ತಿ ಆರಂಭವಾದ ಕೂಡಲೇ, 2000ದ ಇಸವಿಯಲ್ಲಿ ನಡೆದ ಅಲ್ಯಾನ್‌ ಬಾರ್ಡರ್‌ ಪದಕ ಪ್ರಶಸ್ತಿ ಸಮಾರಂಭದಲ್ಲಿ ಡೊನಾಲ್ಡ್‌ ಬ್ರ್ಯಾಡ್ಮನ್‌ ವರ್ಷದ ಕಿರಿಯ ಆಟಗಾರ ಪ್ರಶಸ್ತಿ ಪುರಸ್ಕೃತರಾದರು.


2000ದ ಆರಂಭದಲ್ಲಿ ನ್ಯೂಜಿಲೆಂಡ್‌ ಪ್ರವಾಸದಲ್ಲಿ, ಅಂಪೈರ್‌ಗಳಾದ ಶ್ರೀನಿವಾಸ್‌ ವೆಂಕಟರಾಘವನ್‌ ಮತ್ತು ಅರಣಿ ಜಯಪ್ರಕಾಶ್ (ಎ.ವಿ. ಜಯಪ್ರಕಾಶ್)‌ ಬ್ರೆಟ್‌ ಲೀ ವಿರುದ್ಧ ಶಂಕಾಸ್ಪದ ನಿಯಮಬಾಹಿರ ಬೌಲಿಂಗ್‌ ಶೈಲಿಯ ದೂರು ಸಲ್ಲಿಸಿದರು. ಆನಂತರ ಬ್ರೆಟ್‌ ಲೀ ಈ ದೂರಿನಿಂದ ಮುಕ್ತರಾದರು.


ತಮ್ಮ ಆರಂಭಿಕ ಮೂರು ಸರಣಿಗಳಲ್ಲಿ ಬ್ರೆಟ್‌ ಲೀ ಏಳು ಪಂದ್ಯಗಳಲ್ಲಿ 42 ವಿಕೆಟ್‌ ಗಳಿಸಿದರು. ಇದು ಯಾವುದೇ ಆಸ್ಟ್ರೇಲಿಯನ್‌ ಬೌಲರ್‌ ಗಳಿಸಿದ ಅತಿ ಹೆಚ್ಚು ವಿಕೆಟ್‌ಗಳ ಸಾಧನೆಯಾಗಿದೆ. ಆದರೆ, ವೆಸ್ಟ್‌ ಇಂಡೀಸ್‌ ವಿರುದ್ಧ ಎರಡನೆಯ ಇನ್ನಿಂಗ್ಸ್‌ನಲ್ಲಿನ ಐದು ವಿಕೆಟ್‌ ಸಹಿತ ಏಳನೆಯ ಟೆಸ್ಟ್‌ನಲ್ಲಿ ಏಳು ವಿಕೆಟ್‌ ಗಳಿಸಿದ ಬ್ರೆಟ್‌ ಲೀ, ತಮ್ಮ ಕೆಳಬೆನ್ನಿನ ಒತ್ತಡದ ಮೂಳೆಬಿರಿತಕ್ಕೆ ತುತ್ತಾಗಿ, ಮುಂದಿನ ಮೂರು ಟೆಸ್ಟ್‌ಗಳನ್ನು ಆಡದೇ ಹೊರಗುಳಿದರು. ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಅವರು ಆಟಕ್ಕೆ ಮರಳಿದರು. ಆದರೆ, ಒಂದು ತಿಂಗಳ ನಂತರ, ತಮ್ಮ ಬಲ ಮೊಣಕೈ ಮುರಿತದ ಕಾರಣ, ಮೇ 2001ರ ತನಕ ಹೊರಗುಳಿಯಬೇಕಾಯಿತು.

ಗಾಯಾಳು ಸ್ಥಿತಿಯಿಂದ ವಾಪಸು ಬದಲಾಯಿಸಿ

ಮೊಣಕೈ ಗಾಯದಿಂದ ಗುಣಮುಖರಾದ ಬ್ರೆಟ್‌ ಲೀ ಅಂತಾರಾಷ್ಟ್ರೀಯ ತಂಡಕ್ಕೆ ಮರಳಿದರು. 2001ರಲ್ಲಿ ಇಂಗ್ಲೆಂಡ್‌ನ ಆಷಸ್‌ ಪ್ರವಾಸಕ್ಕೆ ತೆರಳಿದ ಆಸ್ಟ್ರೇಲಿಯಾ ತಂಡದ ಆಟಗಾರರಾದರು. ಗಾಯದ ಸ್ಥಿತಿಯಿಂದ ಮರಳುವಿಕೆ ನಂತರದ ಪ್ರವಾಸವು ಅವರ ಚೊಚ್ಚಲ ಪ್ರವೇಶಕ್ಕಿಂತ ಕಡಿಮೆ ಯಶಸ್ಸು ಕಂಡಿತು. ಐದು ಟೆಸ್ಟ್‌ಗಳಲ್ಲಿ, 55.11 ಸರಾಸರಿಯಲ್ಲಿ ಕೇವಲ ಒಂಬತ್ತು ವಿಕೆಟ್‌ ಗಳಿಸುವಲ್ಲಿ ಯಶಸ್ವಿಯಾದರು. ಆದರೆ, ಅದೇ ವರ್ಷದ ಅಪರಾರ್ಧದಲ್ಲಿ, ನ್ಯೂಜಿಲೆಂಡ್‌ ವಿರುದ್ಧ ಸರಣಿಯ ಮೊದಲ ಮತ್ತು ಮೂರನೆಯ ಟೆಸ್ಟ್‌ ಪಂದ್ಯದಲ್ಲಿ, ಬ್ರೆಟ್‌ ಲೀ ಪುನಃ ಆಸ್ಟ್ರೇಲಿಯಾ ಪರ ಅತಿಹೆಚ್ಚು ವಿಕೆಟ್‌ ಗಳಿಸಿದ ಬೌಲರ್‌ ಎಂಬ ಹಿರಿಮೆಗೆ ಪಾತ್ರರಾದರು. ಎರಡನೆಯ ಇನ್ನಿಂಗ್ಸ್‌ನಲ್ಲಿ ಅವರು ಐದು ವಿಕೆಟ್‌ ಗಳಿಸಿದ್ದಲ್ಲದೆ, ಮೊದಲ ಟೆಸ್ಟ್‌ ಪಂದ್ಯದ ಬ್ಯಾಟಿಂಗ್‌ನಲ್ಲಿ 61 ರನ್‌ ಕೊಡುಗೆ ಸಲ್ಲಿಸಿದರು. ಈ ಸರಣಿಯು 0–0 ಡ್ರಾದಲ್ಲಿ ಅಂತ್ಯಗೊಂಡಿತು. ಈ ಸರಣಿಯಲ್ಲಿ ಅವರು 25.14 ಸರಾಸರಿಯಲ್ಲಿ 14 ವಿಕೆಟ್‌ ಗಳಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ಸ್ವದೇಶಿ ಮತ್ತು ವಿದೇಶದಲ್ಲಿ ನಡೆದ ಸರಣಿಯಲ್ಲಿ ಅಷ್ಟೇನೂ ಫಲಪ್ರದವಾಗಲಿಲ್ಲ. ಆರು ಟೆಸ್ಟ್‌ಗಳಲ್ಲಿ 38.42 ಸರಾಸರಿಯಲ್ಲಿ 19 ವಿಕೆಟ್‌ ಗಳಿಸಿದರು.


ನ್ಯೂಜಿಲೆಂಡ್‌ ಸರಣಿಗಳು ಮತ್ತು 2003 ಕ್ರಿಕೆಟ್‌ ವಿಶ್ವ ಕಪ್‌ ಪಂದ್ಯಾವಳಿಯ ನಡುವೆ ಬ್ರೆಟ್‌ ಲೀ ಮೂರು ಸಂದರ್ಭಗಳಲ್ಲಿ ಪಂದ್ಯವೊಂದರಲ್ಲಿ ಕೇವಲ ಐದು ವಿಕೆಟ್‌ ಗಳಿಸಿದರು. 2002ರಲ್ಲಿ ಪಾಕಿಸ್ತಾನದ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 46.50 ಸರಾಸರಿಯಲ್ಲಿ ಕೇವಲ ಐದು ವಿಕೆಟ್‌ ಗಳಿಸಿದ ಬ್ರೆಟ್‌ ಲೀ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಒತ್ತಡ ಎದುರಿಸಬೇಕಾಯಿತು. ಗಾಯಾಳು ಜೇಸನ್‌ ಜಿಲೆಸ್ಪಿ ಬದಲಿಗೆ ಬಂದಿದ್ದ ಆಂಡಿ ಬಿಷೆಲ್‌ 13.25 ಸರಾಸರಿಯಲ್ಲಿ ಎಂಟು ವಿಕೆಟ್‌ ಪಡೆದರು. ಇತರೆ ಮುಂಚೂಣಿ ಬೌಲರ್‌ಗಳೆಲ್ಲರೂ 13ಕ್ಕಿಂತಲೂ ಕಡಿಮೆ ಸರಾಸರಿಯಲ್ಲಿ ವಿಕೆಟ್‌ ಗಳಿಸುವಲ್ಲಿ ಸಫಲರಾಗುವುದರೊಂದಿಗೆ,[೧೫] 2002-03 ಆಷಸ್‌ ಸರಣಿಯ ಮೊದಲ ಎರಡು ಟೆಸ್ಟ್‌ಗಳಿಗಾಗಿ ಜಿಲೆಸ್ಪಿ ತಂಡಕ್ಕೆ ಮರಳಿದಾಗ ಬ್ರೆಟ್‌ ಲೀಯವರನ್ನು ತಂಡದಿಂದ ಕೈಬಿಡಲಾಯಿತು. ನ್ಯೂ ಸೌತ್‌ ವೇಲ್ಸ್‌ ತಂಡದ ಪರ ಕ್ವೀನ್ಸ್‌ಲೆಂಡ್‌ ತಂಡದ ವಿರುದ್ಧ ಪ್ಯೂರಾ ಕಪ್‌ ಪಂದ್ಯವೊಂದರಲ್ಲಿ ಐದು ವಿಕೆಟ್‌ ಗಳಿಸಿದ ಬ್ರೆಟ್‌ ಲೀ ಪರ್ತ್‌ ಟೆಸ್ಟ್‌ ಪಂದ್ಯವನ್ನಾಡಲು ತಂಡಕ್ಕೆ ವಾಪಸಾದರು. ಮೂರು ಪಂದ್ಯಗಳಲ್ಲಿ ಆಂಡಿ ಬಿಷೆಲ್‌ 35.1 ಸರಾಸರಿಯಲ್ಲಿ ಹತ್ತು ವಿಕೆಟ್‌ ಗಳಿಸಿದ್ದಕ್ಕೆ ಹೋಲಿಸಿದರೆ, ಬ್ರೆಟ್‌ ಲೀ 41.23 ಸರಾಸರಿಯಲ್ಲಿ ಮೂರು ಪಂದ್ಯಗಳಲ್ಲಿ ಹದಿಮೂರು ವಿಕೆಟ್‌ ಗಳಿಸಿದರು.[೧೬]2003 ಕ್ರಿಕೆಟ್‌ ವಿಶ್ವ ಕಪ್‌ ನಂತರ, ವೆಸ್ಟ್‌ ಇಂಡೀಸ್‌ ವಿರುದ್ಧ ನಾಲ್ಕು ಟೆಸ್ಟ್‌ಗಳಲ್ಲಿ ಬ್ರೆಟ್‌ ಲೀ 28.88 ಸರಾಸರಿಯಲ್ಲಿ 17 ವಿಕೆಟ್‌ ಪಡೆದರು. ಎರಡು ವರ್ಷಗಳ ನಂತರ ಅವರು ಮೊದಲ ಬಾರಿಗೆ 30ಕ್ಕಿಂತಲೂ ಕಡಿಮೆ ಸರಾಸರಿ ಪಡೆದ ಪ್ರಥಮ ಸರಣಿಯಾಗಿದೆ ಹಾಗೂ ಅದೇ ಅವಧಿಯಲ್ಲಿ 40ಕ್ಕಿಂತಲೂ ಕಡಿಮೆ ಸರಾಸರಿ ಗಳಿಸಿದ ಎರಡನೇ ಸರಣಿಯಾಗಿದೆ.


ವರ್ಷದ ಮಧ್ಯದಲ್ಲಿ ವಿರಾಮ ತೆಗೆದುಕೊಂಡ ನಂತರ, ಬ್ರೆಟ್‌ ಲೀ ಉತ್ತರ ಆಸ್ಟ್ರೇಲಿಯಾದಲ್ಲಿ ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಪಾಲ್ಗೊಂಡರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಶ್ರೇಯಾಂಕದ ತಂಡ ಬಾಂಗ್ಲಾದೇಶದ ವಿರುದ್ಧ ಬ್ರೆಟ್‌ ಲೀ 31.66 ಸರಾಸರಿಯಲ್ಲಿ ಆರು ವಿಕೆಟ್‌ ಗಳಿಸಿ ಆಸ್ಟ್ರೇಲಿಯಾದ ಅತಿ ದುಬಾರಿ ಬೌಲರ್‌ ಎನಿಸಿದರು. ಇತರೆ ತಜ್ಞ ಬೌಲರ್‌ಗಳ ಸರಾಸರಿ 15.55 ಆಗಿತ್ತು. ಇದಾದ ನಂತರ, ಜಿಂಬಾಬ್ವೆ ವಿರುದ್ಧ ಲೀಲಾಜಾಲವಾದ 2-0 ಅಂತರದಲ್ಲಿ ಟೆಸ್ಟ್‌ ಸರಣಿ ವಿಜಯದಲ್ಲಿ ಬ್ರೆಟ್‌ ಲೀ 37.00 ಸರಾಸರಿಯಲ್ಲಿ ಆರು ವಿಕೆಟ್‌ ಗಳಿಸಿದರು. ಇತರೆ ಬೌಲರ್‌ಗಳು 23.15 ಸರಾಸರಿ ಗಳಿಸಿದ್ದರು.[೧೭]


ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಸಂಭವಿಸಿದ ಉದರ ಸ್ನಾಯು ಬೇನೆಯ ಕಾರಣ, ಬ್ರೆಟ್‌ ಲೀ (2003-04) ಭಾರತದ ವಿರುದ್ಧದ ಸ್ವದೇಶಿ ಸರಣಿಯ ಮೊದಲ ಎರಡು ಟೆಸ್ಟ್‌ಗಳಿಂದ ಹೊರಗುಳಿಯಬೇಕಾಯಿತು. ಈ ಸರಣಿಯು ಆಸ್ಟ್ರೇಲಿಯಕ್ಕೆ 1-1 ಡ್ರಾನಲ್ಲಿ ಅಂತಿಮ ಫಲಿತಾಂಶ ತಂದುಕೊಟ್ಟಿತು.[೧೮]

  ಜಿಂಬಾಬ್ವೆ ವಿರುದ್ಧ ಟೆಸ್ಟ್‌ ಸರಣಿಯು ನಡೆಯುವ ಮುಂಚೆ ಅವರು ಅನುಭವಿಸುತ್ತಿದ್ದ "ಕಣಕಾಲಿನ ಹಿಂಭಾಗದ ಊತ" ಹಾಗೂ ಉದರದ ಸ್ನಾಯು ಹರಿತವನ್ನು ಆಂಶಿಕವಾಗಿ ಸರಿಪಡಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಲು ತೀರ್ಮಾನಿಸಿದ್ದರು. ಆದರೆ, ಹಿಮ್ಮಡಿಯ ಗಂಟಿನ ಗಾಯದಿಂದ ಸಂಪೂರ್ಣ ಗುಣಮುಖರಾಗಿಲ್ಲದ ಬ್ರೆಟ್‌ ಲೀ, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಪುನಃ ಗಾಯಗೊಂಡರು. ಎರಡೂ ಶಸ್ತ್ರಚಿಕಿತ್ಸೆಗಳನ್ನೂ ಒಟ್ಟಿಗೆ ಮಾಡಿಸಿಕೊಳ್ಳುವುದರಿಂದ, ಏಕಕಾಲಿಕವಾಗಿ ಗುಣಮುಖರಾಗುವುದು ಬ್ರೆಟ್‌ ಲೀಯವರ ಲೆಕ್ಕಾಚಾರವಾಗಿತ್ತು.

ಟೆಸ್ಟ್‌ ತಂಡದಲ್ಲಿ ಸ್ಥಾನ ನಷ್ಟ ಬದಲಾಯಿಸಿ

2003-2004 ಋತುವಿನಲ್ಲಿ ಸ್ವದೇಶದಲ್ಲಿ ನಡೆದ ಭಾರತದ ವಿರುದ್ಧದ ಸರಣಿಯ ಕೊನೆಯ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಬ್ರೆಟ್‌ ಲೀ 100ಕ್ಕು ಹೆಚ್ಚು ಒವರ್‌ಗಳನ್ನು ಬೌಲ್‌ ಮಾಡಿ, 59.50 ಸರಾಸರಿಯಲ್ಲಿ ಎಂಟು ವಿಕೆಟ್‌ ಗಳಿಸಿದರು. ಭಾರತದ ಪ್ರಥಮ ಇನ್ನಿಂಗ್ಸ್‌ನಲ್ಲಿ 7/705 ರನ್‍‌ಗಳಲ್ಲಿ,ಸಂಚಿನ್ ತೆಂಡೂಲ್ಕರ್‌ಗೆ ದ್ವಿಶತಕ ಬಿಟ್ಟುಕೊಟ್ಟಿದ್ದು ಇದರಲ್ಲಿ ಸೇರಿದೆ. ಸಿಡ್ನಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸಚಿನ್ ಮತ್ತು V.V.S.ಲಕ್ಷ್ಮಣ್, ಲೀ ಮತ್ತಿತರ ಬೌಲರುಗಳನ್ನು ಮನಬಂದಂತೆ ಥಳಿಸಿದರು. ಈ ಸರಣಿಯ ಅಂತ್ಯದಲ್ಲಿ, ಆಸ್ಟ್ರೇಲಿಯಾದ ಪ್ರಮುಖ ಬೌಲರ್‌ಗಳ ಪೈಕಿ ಬ್ರೆಟ್‌ ಲೀಯವರ ಬೌಲಿಂಗ್ ಸರಾಸರಿ ಮತ್ತು ಅಂಕಿಅಂಶ ತೀರಾ ಕೆಟ್ಟದಾಗಿತ್ತು.[೧೯]


ನಂತರ,2004ರ ಶ್ರೀಲಂಕಾದ ಪ್ರವಾಸೀ ಸರಣಿಯಂದು ಬ್ರೆಟ್‌ ಲೀಯವರ ಹಿಮ್ಮಡಿಯ ಗಂಟಿನ ಸಮಸ್ಯೆ ಪುನಃ ಉಲ್ಬಣಗೊಂಡು ಶಸ್ತ್ರಚಿಕಿತ್ಸೆಗೆ ವಾಪಸಾಗಬೇಕಾಯಿತು. ಅವರ ಸ್ಥಾನವನ್ನು ವೇಗದ ಬೌಲಿಂಗ್‌ ಸಹವರ್ತಿ ಮೈಕಲ್‌ ಕ್ಯಾಸ್ಪ್ರೊವಿಕ್ಜ್‌ ತುಂಬಿದರು. ಈ ಗಾಯದಿಂದಾಗಿ ಸಂಪೂರ್ಣ ಗುಣಮುಖರಾಗಲು ಬ್ರೆಟ್‌ ಲೀ ಕ್ರಿಕೆಟ್‌ ಆಟದಿಂದ ಸುಮಾರು 4½ ತಿಂಗಳುಗಳ ಕಾಲ ಹೊರಗುಳಿಯಬೇಕಾಯಿತು. ಆ ಸಮಯದಲ್ಲಿ ಟೆಸ್ಟ್‌ ಸರಣಿಗಳಲ್ಲಿ ಬ್ರೆಟ್‌ ಲೀಯವರ ಬೌಲಿಂಗ್ ಲಯ(ಫಾರಂ) ಪರಿಣಾಮಕಾರಿಯಾಗಿರಲಿಲ್ಲ. ವೃತ್ತಿಯ ಆರಂಭಿಕ ಹಂತದಲ್ಲಿನ 16.07 ಸರಾಸರಿಗೆ ಹೋಲಿಸಿದರೆ, ಜುಲೈ 2001ರಿಂದ ಜನವರಿ 2004ರ ವರೆಗೂ ಅವರ ಟೆಸ್ಟ್‌ ಬೌಲಿಂಗ್‌ ಸರಾಸರಿಯು 38.42 ಆಗಿತ್ತು.[೨೦]


ಹದಿನೆಂಟು ತಿಂಗಳ ಕಾಲ ಆಸ್ಟ್ರೇಲಿಯಾ ಟೆಸ್ಟ್‌ ತಂಡದಲ್ಲಿ ತಮ್ಮ ಸ್ಥಾನವನ್ನು ಮರುಸಂಪಾದಿಸಲು ಬ್ರೆಟ್‌ ಲೀಯವರಿಗೆ ಅಸಾಧ್ಯವಾಯಿತು. ಮೈಕಲ್‌ ಕ್ಯಾಸ್ಪ್ರೊವಿಕ್ಜ್‌ ಹದಿಮೂರು ಟೆಸ್ಟ್‌ಗಳಲ್ಲಿ 23.74 ಸರಾಸರಿಯಲ್ಲಿ 47 ವಿಕೆಟ್‌ ಗಳಿಸಿದ್ದರು. ಅವರು ತಮ್ಮ ಹಿಂದಿನ ಮೂರು ವರ್ಷಗಳಲ್ಲಿನ ಸಾಧನೆಗಳಿಗಿಂತಲೂ ಕಡಿಮೆ ಮೌಲ್ಯಕ್ಕೆ ತಮ್ಮ ವಿಕೆಟ್ ಪಡೆದಿದ್ದರು. ಮೈಕಲ್‌ ಕಸ್ಪ್ರೊವಿಕ್ಜ್‌ ಭಾರತೀಯ ಉಪಖಂಡದಲ್ಲಿನ ಸ್ಪಿನ್‌-ಸ್ನೇಹಿ ಪಿಚ್‌ಗಳ ಮೇಲೆ ಬೌಲ್‌ ಮಾಡಿ,26.82 ಸರಾಸರಿಯಲ್ಲಿ 17 ವಿಕೆಟ್‌ ಗಳಿಸಿದ್ದು ಇದರಲ್ಲಿ ಸೇರಿದೆ. ಶ್ರೀಲಂಕಾ ವಿರುದ್ಧ ಮೊದಲ ಬಾರಿಗೆ ಸರಣಿಯ ಎಲ್ಲಾ ಟೆಸ್ಟ್‌ಗಳನ್ನು ಗೆದ್ದು ಸದೆಬಡಿಯಲು ಮತ್ತು ಭಾರತದ ನೆಲದಲ್ಲಿ 35 ವರ್ಷಗಳ ನಂತರ ಪ್ರಪ್ರಥಮವಾಗಿ ಸರಣಿ ಗೆಲುವು ಗಳಿಸಲು ಅದು ನೆರವಾಯಿತು.[೨೧]

ಟೆಸ್ಟ್‌ ಅಂಕಣಕ್ಕೆ ಮರಳಿದ ಬ್ರೆಟ್‌ ಲೀ ಬದಲಾಯಿಸಿ

 
2005ರಲ್ಲಿ ಪರ್ತ್‌ನ WACA ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬೌಲ್‌ ಮಾಡುತ್ತಿರುವ ಬ್ರೆಟ್‌ ಲೀ


18 ತಿಂಗಳುಗಳ ಕಾಲ ಹೊರಗುಳಿದು, ತಂಡದಲ್ಲಿ ಸತತವಾಗಿ ಹನ್ನೆರಡನೆಯ ಆಟಗಾರರಾಗಿ ಉಳಿದಿದ್ದಕ್ಕೆ ಸಂಬಂಧಪಟ್ಟಂತೆ ಆಯ್ಕೆದಾರರ ಮಂಡಳಿ ಹಾಗೂ ಮಾಧ್ಯಮಗಳಿಗೆ ಕೋರಿಕೊಂಡ ನಂತರ, 2005 ಆಷಸ್‌ ಸರಣಿಗಾಗಿ ಬ್ರೆಟ್‌ ಲೀಯವರು ತಂಡಕ್ಕೆ ಮರಳಿದರು. [[ಮೈಕಲ್‌ ಕ್ಯಾಸ್ಪ್ರೊವಿಕ್ ಮತ್ತು ಜಾಸನ್ ಗಿಲ್ಲೆಸ್ಪಿ ಅವರು ಲಯ ಗಳಿಸಲು ಹೆಣಗಾಡುವುದರೊಂದಿಗೆ, ಬ್ರೆಟ್‌ ಲೀ ಗ್ಲೆನ್‌ ಮೆಕ್‌ಗ್ರಾ|ಮೈಕಲ್‌ ಕ್ಯಾಸ್ಪ್ರೊವಿಕ್ ಮತ್ತು ಜಾಸನ್ ಗಿಲ್ಲೆಸ್ಪಿ ಅವರು ಲಯ ಗಳಿಸಲು ಹೆಣಗಾಡುವುದರೊಂದಿಗೆ, ಬ್ರೆಟ್‌ ಲೀ ಗ್ಲೆನ್‌ ಮೆಕ್‌ಗ್ರಾ]] ಅವರ ಆರಂಭಿಕ ವೇಗದ ಬೌಲಿಂಗ್‌‌ನಲ್ಲಿ ಜತೆಗೂಡಿದರು. ಈ ಸರಣಿಯಲ್ಲಿ ಬ್ರೆಟ್‌ ಲೀಯವರ ಬೌಲಿಂಗ್‌ ಸರಾಸರಿ 40 ಆಗಿತ್ತು. ಆ ಸಮಯದಲ್ಲಿ, ಅವಧಿಯೊಂದರಲ್ಲಿ ಅವರಿಗೆ ಅಭ್ಯಾಸಕ್ಕಿಂತಲೂ ಹೆಚ್ಚು ಕಾಲ ಬೌಲ್‌ ಮಾಡಬೇಕಾದ ಪರಿಸ್ಥಿತಿಯಿಂದ ಹೀಗಾಯಿತು ಎಂದು ವೀಕ್ಷಕವಿವರಣಾಕಾರರು ಅಭಿಪ್ರಾಯಪಟ್ಟರು. ಆದರೆ, ಅವರ ದಿಟ್ಟ ಬ್ಯಾಟಿಂಗ್‌ ಪ್ರದರ್ಶನವು 26.33 ಸರಾಸರಿಯಲ್ಲಿ ರನ್ ತಂದುಕೊಟ್ಟಿದ್ದರಿಂದ ಆಂಶಿಕವಾಗಿ ಬ್ರೆಟ್‌ ಲೀ ತಮ್ಮ ಸ್ಥಾನವನ್ನು ಕಾಪಾಡಿಕೊಳ್ಳಲು ಸಾಧ್ಯವಾಯಿತು. ಈ ಸರಣಿಯಲ್ಲಿ ಅವರ ಬೌಲಿಂಗ್‌ ಸರಾಸರಿಯ ಹೆಚ್ಚಳದ ನಡುವೆಯೂ, ಮೆಕ್‌ಗ್ರಾ ಗಾಯದೊಂದಿಗೆ, ಹಲವರು ಬ್ರೆಟ್‌ ಲೀಯವರನ್ನು ಲೆಗ್‌-ಸ್ಪಿನ್‌ ಬೌಲರ್‌ ಶೇನ್‌ ವಾರ್ನ್‌ ಮತ್ತು ಬ್ಯಾಟ್ಸ್‌ಮನ್‌ ಜಸ್ಟಿನ್‌ ಲ್ಯಾಂಗರ್‌ರೊಂದಿಗೆ ಆಸ್ಟ್ರೇಲಿಯಾದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಿದ್ದರು.[೨೨]


ಅವರ ಅತೀ ವೇಗದ ಬೌಲಿಂಗ್ ದಾಳಿಯ ಅನುಕೂಲಗಳಿಂದ ಬ್ಯಾಟ್ಸ್‌ಮನ್‌ಗೆ ಪ್ರತಿಕ್ರಿಯಿಸಲು ಕಡಿಮೆ ಕಾಲಾವಧಿ ಸಿಗುತ್ತದೆಯಾದರೂ,ಯದ್ವಾತದ್ವಾ ಬೌಲಿಂಗ್‌ನಲ್ಲಿ ಫಲಿತಾಂಶ ಕಾಣುವುದು ಟೆಸ್ಟ್ ಮಟ್ಟದಲ್ಲಿ ಲೀ ಅನುಭವಿಸಿದ ತೊಂದರೆಯ ಭಾಗವಾಗಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಬ್ರೆಟ್‌ ಲೀ ಕೇವಲ ನಿಖರತೆಯ ಮೇಲೆ ಕೇವಲ ಗಮನವಿರಿಸಿ, ತಮ್ಮ ವೇಗವನ್ನು ಕಡಿಮೆಗೊಳಿಸಲು ಯತ್ನಿಸಿದರು. ವೇಗವನ್ನು ತ್ಯಾಗ ಮಾಡಿ "ಲೈನ್ ಮತ್ತು ಲೆಂಗ್ತ್"ಗೆ ಹೆಚ್ಚು ಆದ್ಯತೆ ಕೊಡುವೆ ಎಂದು ಬ್ರೆಟ್‌ ಲೀ ಘೋಷಿಸಿದ ನಂತರ, ಗಾಬಾದಲ್ಲಿ 2005ರ ಕೊನೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಲೀ ತಮ್ಮ ಆರಂಭಿಕ ಶೈಲಿಯ ಬೌಲಿಂಗ್‌ಗೆ ಮರಳಿದರು.[೨೩] ಪ್ರಥಮ ಇನ್ನಿಂಗ್ಸ್‌ನಲ್ಲಿ ಅವರು ಹೊಸ ವಿಧಾನದ ಬೌಲಿಂಗ್ ವಿಫಲಗೊಂಡ ನಂತರ ನಾಯಕ ರಿಕಿ ಪಾಂಟಿಂಗ್ ಸಲಹೆ ಆಧಾರದ ಮೇಲೆ ತಮ್ಮ ಮುಂಚಿನ ಶೈಲಿಗೆ ಹಿಂತಿರುಗಿದರು.[೨೪] ಇದರ ಫಲವಾಗಿ, ಬ್ರೆಟ್‌ ಲೀ 30 ರನ್‌ ನೀಡಿ 5 ವಿಕೆಟ್‌ ಗಳಿಸಿದರು. ಇದು ಟೆಸ್ಟ್‌ ಪಂದ್ಯಗಳಲ್ಲಿ ಐದನೆಯ ಬಾರಿಗೆ ಇನ್ನಿಂಗ್ಸ್‌ ಒಂದರಲ್ಲಿ ಐದು ವಿಕೆಟ್‌ ಗಳಿಸುವ ಸಾಧನೆಯಾಯಿತು. ನಾಲ್ಕು ವರ್ಷಗಳಲ್ಲಿ ಅವರು ಐದು ವಿಕೆಟ್‌ ಗಳಿಸಿದ್ದು ಇದೇ ಮೊದಲ ಬಾರಿಗೆ.


2001-04 ಋತುಗಳಲ್ಲಿ ಬಹಳಷ್ಟು ಕಷ್ಟಗಳನ್ನು ಎದುರಿಸಿದ ನಂತರ, 2005-06 ಆಸ್ಟ್ರೇಲಿಯನ್‌ ಕ್ರಿಕೆಟ್‌ ಋತುವಿನಲ್ಲಿ, ಬ್ರೆಟ್‌ ಲೀಯವರ ಟೆಸ್ಟ್‌ ಅಂಕಿಅಂಶಗಳು ಸುಧಾರಣೆ ತೋರಿದವು. ಅವರ ಋತುವಾರು ಬೌಲಿಂಗ್‌ ಸರಾಸರಿ 25.74 ಆಗಿತ್ತು.


ದಕ್ಷಿಣ ಆಫ್ರಿಕಾ ತಂಡ 2005-06ರಲ್ಲಿ ಆಸ್ಟ್ರೇಲಿಯ ಪ್ರವಾಸ ಕೈಗೊಂಡಾಗ,ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ 5/93 ಅಂಕಿಅಂಶದೊಂದಿಗೆ, ಲೀ ಬೌಲಿಂಗ್ ಫಾರಂ ಸ್ಥಿರವಾದ ಸುಧಾರಣೆ ಕಂಡಿತು. 14 ವಿಕೆಟ್‌ ಗಳಿಸಿದ ಶೇನ್‌ ವಾರ್ನ್‌ ನಂತರ ಬ್ರೆಟ್‌ ಲೀ 13 ವಿಕೆಟ್‌ ಗಳಿಸಿ ಎರಡನೆ ಸ್ಥಾನ ಪಡೆದು ಆಸ್ಟ್ರೇಲಿಯಾದ ಅತಿ ಯಶಸ್ವೀ ಬೌಲರ್‌ ಎನಿಸಿ ಮೂರು ಟೆಸ್ಟ್‌ಗಳ ಸರಣಿಯನ್ನು ಮುಗಿಸಿದರು. ಅಂಪೈರ್‌ ಆಲೀಮ್‌ ದಾರ್‌ರತ್ತ ಅಸಮ್ಮತಿ ಸೂಚಿಸಿದ ಬ್ರೆಟ್‌ ಲೀ ಸೇರಿ ಮೂವರು ಆಸ್ಟ್ರೇಲಿಯನ್‌ ಕ್ರಿಕೆಟ್‌ ಆಟಗಾರರಿಗೆ ಸಿಡ್ನಿಯ ಮೂರನೇ ಟೆಸ್ಟ್‌ ಪಂದ್ಯದಲ್ಲಿ ವಾಗ್ದಂಡನೆ ವಿಧಿಸಲಾಯಿತು.[೨೫]

ಮಾರ್ಚ್‌-ಏಪ್ರಿಲ್‌ 2006ರಲ್ಲಿ ನಡೆದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಗ್ಲೆನ್‌ ಮೆಕ್‌‌ಗ್ರಾ ಅಲಭ್ಯರಾದ ಕಾರಣ, ಬ್ರೆಟ್‌ ಲೀ ಆಸ್ಟ್ರೇಲಿಯಾದ ವೇಗದ ಬೌಲಿಂಗ್‌ ಮುಂದಾಳತ್ವ ವಹಿಸಿದರು.[೨೬]ಡರ್ಬನ್‌ನಲ್ಲಿ ನಡೆದ ಆ ಸರಣಿಯ ಎರಡನೆಯ ಟೆಸ್ಟ್‌ ಪಂದ್ಯದಲ್ಲಿ, ಬ್ರೆಟ್‌‌ ಲೀ ತಮ್ಮ 51ನೆಯ ಟೆಸ್ಟ್‌ ಪಂದ್ಯದಲ್ಲಿ 200ನೆಯ ಟೆಸ್ಟ್‌ ವಿಕೆಟ್‌ ಮೈಲಿಗಲ್ಲು ಮುಟ್ಟಿದರು. 2005ರಲ್ಲಿ 49 ಟೆಸ್ಟ್‌ ವಿಕೆಟ್‌ ಗಳಿಸಿದ ನಂತರ ಈ ಪಂದ್ಯದಲ್ಲಿ 69 ರನ್‌ ನೀಡಿ 5 ವಿಕೆಟ್‌ ಗಳಿಸಿದರು.[೨೭]ವರ್ಷದ ವಿಸ್ಡೆನ್‌ ಕ್ರಿಕೆಟ್‌ ಆಟಗಾರರರಲ್ಲಿ ಒಬ್ಬರು ಎಂಬ ಗೌರವಕ್ಕೆ ಪಾತ್ರರಾದರು.

ಎರಡು ಟೆಸ್ಟ್‌ ಸರಣಿಗಾಗಿ ಅಸ್ಟ್ರೇಲಿಯಾ ಬಾಂಗ್ಲಾದೇಶದ ಪ್ರವಾಸ ಕೈಗೊಂಡಾಗ, ಬ್ರೆಟ್‌ ಲೀ 93 ರನ್‌ ನೀಡಿ ಕೇವಲ ಎರಡೇ ವಿಕೆಟ್‌ ಗಳಿಸಿ ತಮ್ಮ ಬೌಲಿಂಗ್ ಸಾಧನೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಆಸ್ಟ್ರೇಲಿಯಾದ ಬೌಲಿಂಗ್‌ ಸರಾಸರಿಗಳಲ್ಲಿ ಇವರದು ಅತ್ಯಂತ ಕೆಳಮಟ್ಟದ ಸರಾಸರಿಯಾಗಿತ್ತು.[೨೮]


2006-07 ಋತುವಿನಲ್ಲಿ ನಡೆದ ಆಷಸ್‌ ಸರಣಿಯಲ್ಲಿ, ಕಳಪೆ ಸ್ವರೂಪದ ಬೌಲಿಂಗ್‌ಗಾಗಿ ಬ್ರೆಟ್‌ ಲೀ ವ್ಯಾಪಕ ಟೀಕೆಗಳಿಗೆ ಒಳಗಾಗಿದ್ದರು. ಮೊದಲ ಮೂರು ಟೆಸ್ಟ್‌ಗಳಲ್ಲಿ ಅವರು ಕೇವಲ ಎಂಟು ವಿಕೆಟ್‌ ಗಳಿಸಿದರು. ಆಡಿಲೇಡ್‌ನಲ್ಲಿ ನಡೆದ ಮೂರನೆಯ ಟೆಸ್ಟ್‌ ಪಂದ್ಯದಲ್ಲಿ ಎಲ್‌ಬಿಡಬ್ಲ್ಯೂ ನಿರ್ಧಾರ ಅವರ ಪರವಾಗಿ ಬರದಿದ್ದರಿಂದ ಮಿತಿಮೀರಿದ ಅಪೀಲಿಂಗ್(ಮನವಿ) ಮಾಡಿದ್ದಕ್ಕಾಗಿ ದಂಡ ವಿಧಿಸಲಾಯಿತು. ಆಡಿಲೇಡ್ ಮತ್ತು ಮೆಲ್ಬರ್ನ್‌ ಟೆಸ್ಟ್‌ಗಳ ನಡುವಿನ ಒಂದು ವಾರದ ಬಿಡುವಿನಲ್ಲಿ, ಆಸ್ಟ್ರೇಲಿಯಾದ ಬೌಲಿಂಗ್‌ ತರಬೇತುದಾರ ಟ್ರಾಯ್‌ ಕೂಲೇರೊಂದಿಗೆ ಬ್ರೆಟ್‌ ಲೀ ಕಾರ್ಯೋನ್ಮುಖರಾಗಿ, ತಮ್ಮ ರನಪ್‌ ವೇಗವನ್ನು ಸರಿಹೊಂದಿಸಿಕೊಂಡು, ನಾಲ್ಕನೆಯ ಮತ್ತು ಅಂತಿಮ ಟೆಸ್ಟ್‌ ಪಂದ್ಯಗಳಲ್ಲಿ ಹೆಚ್ಚು ವಿಕೆಟ್‌ ಗಳಿಸುವಲ್ಲಿ ಸಫಲರಾದರು. ಈ ಆಷಸ್‌ ಸರಣಿ ಅಂತ್ಯಗೊಂಡಾಗ ಬ್ರೆಟ್‌ ಲೀ 20 ವಿಕೆಟ್‌ ಪಡೆದಿದ್ದರು. 33.20 ಸರಾಸರಿಯಲ್ಲಿ 47 ರನ್‌ ನೀಡಿ 4 ವಿಕೆಟ್‌ ಪಡೆದದ್ದು ಅವರ ಅತ್ಯುತ್ತಮ ಬೌಲಿಂಗ್‌ ಅಂಕಿಅಂಶಗಳಾಗಿತ್ತು. ಆಸ್ಟ್ರೇಲಿಯಾದ ಇತರೆ ಮೂವರು ಪ್ರಮುಖ ಬೌಲರ್‌ಗಳು ಬ್ರೆಟ್‌ ಲೀಗಿಂತಲೂ ಉತ್ತಮ ಪ್ರದರ್ಶನ ನೀಡಿದ್ದರು. ಸ್ಟುವರ್ಟ್‌ ಕ್ಲಾರ್ಕ್‌ (26 ವಿಕೆಟ್‌ಗಳು), ಶೇನ್‌ ವಾರ್ನ್‌ (23 ವಿಕೆಟ್‌ಗಳು) ಹಾಗೂ ಗ್ಲೆನ್‌ ಮೆಕ್‌ಗ್ರಾ (21 ವಿಕೆಟ್‌ಗಳು) ಲೀಗಿಂತ ಮುಂದಿದ್ದರು. ಆದರೆ, 2006-07 ಆಷಸ್‌ ಸರಣಿಯಲ್ಲಿ ಹೆಚ್ಚು ವಿಕೆಟ್‌ ಗಳಿಸಿದವರಲ್ಲಿ ನಾಲ್ಕನೆಯ ಸ್ಥಾನದಲ್ಲಿದ್ದ ಬ್ರೆಟ್‌ ಲೀ, ಎಲ್ಲಾ ಇಂಗ್ಲಿಷ್‌‌ ಬೌಲರ್‌ಗಳಿಗಿಂತಲೂ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ ಎನಿಸಿದರು.[೨೯] ಆಸ್ಟ್ರೇಲಿಯಾ ಈ ಸರಣಿಯಲ್ಲಿ ಎದುರಾಳಿ ತಂಡವನ್ನು ಸಂಪೂರ್ಣವಾಗಿ ಸದೆಬಡಿದಿದ್ದನ್ನು ಪ್ರತಿಬಿಂಬಿಸುತ್ತದೆ. ಆಸ್ಟ್ರೇಲಿಯಾಕ್ಕೆ ಆಗಾಗ್ಗೆ ಎರಡು ಪೂರ್ಣ ಇನ್ನಿಂಗ್ಸ್‌ ಅಗತ್ಯವಿರಲಿಲ್ಲದ ಕಾರಣ, ಇಂಗ್ಲಿಷ್‌ ಬೌಲರ್‌ಗಳಿಗೆ ಬಹಳ ಕಡಿಮೆ ಅವಕಾಶಗಳಿರುತ್ತಿದ್ದವು.

ಬೌಲಿಂಗ್‌ ದಾಳಿಯ ಮುಂಚೂಣಿ ಬದಲಾಯಿಸಿ

ಸರ್ವಕಾಲಿಕ ಮಹಾನ್‌ ಬೌಲರ್‌ಗಳೆಂದು ಪರಿಗಣಿಸಲಾದ ಗ್ಲೆನ್‌ ಮೆಕ್‌ಗ್ರಾ ಮತ್ತು ಶೇನ್‌ ವಾರ್ನ್‌ ಕ್ರಿಕೆಟ್‌ಗೆ ನಿವೃತ್ತಿಗಳನ್ನು ಘೋಷಿಸಿದ ಮೇಲೆ, ಬ್ರೆಟ್‌ ಲೀ ವೇಗದ ಬೌಲಿಂಗ್‌ ದಾಳಿಯ ಮುಂದಾಳತ್ವವನ್ನು ಹೇಗೆ ನಿರ್ವಹಿಸಬಲ್ಲರೆಂದು ಹಲವರು ಆಶ್ಚರ್ಯಪಟ್ಟರು. ಆದರೆ, ಅವರು ಈ ಸವಾಲನ್ನು ಸ್ವೀಕರಿಸಿ, ಆರಂಭಿಕ ವಾರ್ನ್‌-ಮುರಳಿಧರನ್‌ ಟ್ರೊಫಿಗಾಗಿ 2007ರ ಅಪರಾರ್ಧದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಬ್ರೆಟ್‌ ಲೀ ಸರಣಿಯ ಪುರುಷ ಪ್ರಶಸ್ತಿ ಗಳಿಸಿದರು. ಬೌಲಿಂಗ್‌ ಮುಂಚೂಣಿಯಾಗಿ ತಮ್ಮ ಮೊದಲ ಸರಣಿಯಲ್ಲಿ, ಬ್ರೆಟ್ ಲೀ 17.5ರ ಸರಾಸರಿಯಲ್ಲಿ 16 ವಿಕೆಟ್ ಗಳಿಸಿದರು. ನಿಖರತೆಯನ್ನು ಗಳಿಸಿಕೊಳ್ಳಲು ಅವರು ತಮ್ಮ ಬೌಲಿಂಗ್ ವೇಗವನ್ನು ಗಂಟೆಗೆ 5 ಕಿಮೀ.ನಷ್ಟು ನಿಧಾನಗೊಳಿಸಿ ಇದನ್ನು ಸಾಧಿಸಿದರು. ನಂತರ, ಸ್ವದೇಶದಲ್ಲಿ ಭಾರತದ ವಿರುದ್ಧದ ಸರಣಿಯಲ್ಲಿ, ನಾಲ್ಕು ಟೆಸ್ಟ್‌ಗಳಲ್ಲಿ ಬ್ರೆಟ್‌ ಲೀ 22.58 ಸರಾಸರಿಯಲ್ಲಿ 24 ವಿಕೆಟ್‌ ಗಳಿಸಿದರು. ಈ ಸರಣಿಯಲ್ಲಿ, ಅವರು ಜೇಸನ್‌ ಜಿಲೆಸ್ಪಿ ದಾಖಲೆಯನ್ನು ಹಿಂದಿಕ್ಕಿ ಆಸ್ಟ್ರೇಲಿಯಾದ ಐದನೆಯ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎನಿಸಿಕೊಂಡರು. ಬ್ರೆಟ್‌ ಲೀ ಅವರ ಸುಸಂಗತ ಯತ್ನಗಳ ಫಲವಾಗಿ, 2007-08ರಬಾರ್ಡರ್‌-ಗಾವಸ್ಕರ್‌ ಟ್ರೋಫಿಯ ಸರಣಿಯ ಪುರುಷ ಪ್ರಶಸ್ತಿಯಿಂದ ಪುರಸ್ಕೃತರಾದರು. ಹಿಂದಿನ ವರ್ಷದಲ್ಲಿ ಆಸ್ಟ್ರೇಲಿಯಾದ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರರಿಗೆ ನೀಡಲಾಗುವ ಅಲ್ಯಾನ್‌ ಬಾರ್ಡರ್‌ ಪದಕ ಪುರಸ್ಕೃತರಾಗಿ ಅವರು ಋತುವನ್ನು ಮುಕ್ತಾಯಗೊಳಿಸಿದರು.


ನಂತರ, ಆಸ್ಟ್ರೇಲಿಯಾ ತಂಡವು ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಂಡಾಗ, ಬ್ರೆಟ್‌ ಲೀ ಮೊದಲನೆಯ ಟೆಸ್ಟ್‌ ಪಂದ್ಯದಲ್ಲಿ ಕೇವಲ ಐದು ವಿಕೆಟ್ ಗಳಿಸಿ ಕಳಪೆ ಸಾಧನೆ ತೋರಿದರು. ಈ ಪಂದ್ಯವನ್ನಾಡುವ ವೇಳೆ ಅವರು ದಣಿದಿದ್ದಂತೆ ಕಂಡುಬಂದಿತು. ಎರಡನೆಯ ಟೆಸ್ಟ್‌ ಪಂದ್ಯದಲ್ಲಿ ಅವರು ತಮ್ಮ ಲಯ ಕಂಡುಕೊಂಡು, ಒಂದು ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಸೇರಿದಂತೆ ಎಂಟು ವಿಕೆಟ್‌ ಕಬಳಿಸಿದರು ಹಾಗೂ ಮೂರನೆಯ ಟೆಸ್ಟ್‌ನಲ್ಲಿ ಆರು ವಿಕೆಟ್‌ ಗಳಿಸಿದರು. ಒಟ್ಟಾರೆ, ಸರಣಿಯು ಮುಂದುವರೆದಂತೆ ಅವರು ತಮ್ಮ ಲಯ ಕಂಡುಕೊಂಡರೂ,ಹೆಚ್ಚುವರಿ ಬೌಲಿಂಗ್ ಹೊರೆಯಿಂದ ಆಗಾಗ್ಗೆ ಆಯಾಸಗೊಂಡರು. ಇತರೆ ಬೌಲರ್‌ಗಳು ತಮ್ಮ ಲಯ ಮತ್ತು ದೈಹಿಕ ಕ್ಷಮತೆಗಳ ಸಮಸ್ಯೆಗಳೊಂದಿಗೆ ಹೆಣಗಾಡುತ್ತಿದ್ದರು.


ಆಸ್ಟ್ರೇಲಿಯಾ ತಂಡವು ಭಾರತದ ಪ್ರವಾಸ ಕೈಗೊಂಡಾಗ, ಬ್ರೆಟ್‌ ಲೀಯವರಿಗೆ ಜಠರದ ವೈರಸ್‌ ಸೋಂಕು ತಗುಲಿ, ಸರಣಿಯುದ್ದಕ್ಕೂ ಅವರು ತಮ್ಮ ಉತ್ತಮ ಲಯವನ್ನು ಕಂಡುಕೊಳ್ಳಲು ವಿಫಲರಾದರು. ನ್ಯೂಜಿಲೆಂಡ್‌ ವಿರುದ್ಧ ಎರಡು ಟೆಸ್ಟ್‌ಗಳ ಸರಣಿ ಆಡಲು ತಂಡವು ಆಸ್ಟ್ರೇಲಿಯಕ್ಕೆ ಹಿಂತಿರುಗಿದಾಗ, ಬ್ರೆಟ್ ಲೀ ತಮ್ಮ ಅತ್ಯುತ್ತಮ ಲಯದ ಮಿನುಗು ನೋಟವನ್ನು ತೋರಿಸಿದರು. ಆದರೆ, ಬ್ರೆಟ್‌ ಲೀ ತಮ್ಮ ಬೌಲಿಂಗ್ ವೇಗವನ್ನು ಕಡಿತಗೊಳಿಸಿದ್ದು ಸ್ಪಷ್ಟವಾಗಿತ್ತು. ದಕ್ಷಿಣ ಆಫ್ರಿಕಾದ ವಿರುದ್ದದ ಸರಣಿಯಲ್ಲಿ ಅವರು ಎರಡು ಟೆಸ್ಟ್‌ಗಳಲ್ಲಿ ಲಯ ಕಂಡುಕೊಳ್ಳಲು ಸಾಕಷ್ಟು ಹೋರಾಡಬೇಕಾಯಿತು. ಈ ಸರಣಿಯಲ್ಲಿ ಆಸ್ಟ್ರೇಲಿಯಾ 1-2 ಅಂತರದಿಂದ ಸೋತಿತು. ಬ್ರೆಟ್‌ ಲೀಯವರ ಹಿಮ್ಮಡಿಯ ಗಂಟಿನ ಗಾಯ ಪುನಃ ಉಲ್ಬಣ ಮತ್ತು ಸರಣಿಯಲ್ಲಿ ಅವರಿಗೆ ಒತ್ತಡದ ಮೂಳೆಬಿರಿತ(ಎರಡೂ ಎಡ ಪಾದದಲ್ಲಿ)ದಿಂದ ಬಹುಶಃ ಆಸ್ಟ್ರೇಲಿಯ ಸೋತಿರಬಹುದು. 26 ಡಿಸೆಂಬರ್‌ 2008ರಂದು ಮೆಲ್ಬರ್ನ್‌ನಲ್ಲಿ ಆರಂಭಗೊಂಡ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಈ ಮೂಳೆಬಿರಿತವು ಸಂಪೂರ್ಣವಾಗಿ ಉಲ್ಬಣಿಸಿತು. ಅವರ ಹಿಮ್ಮಡಿಯ ಗಂಟಿನ ಮತ್ತು ಪಾದದ ಶಸ್ತ್ರಚಿಕಿತ್ಸೆ ನಡೆದು ಹತ್ತು ವಾರಗಳ ಕಾಲ ಆಟದಿಂದ ಹೊರಗುಳಿಯಬೇಕಾಯಿತು.


ಗಾಯಗಳಿಂದ ಗುಣಮುಖರಾಗಿ 2009ರಲ್ಲಿ ಆಶಸ್ ಸರಣಿಗಾಗಿ ಆಸ್ಟ್ರೇಲಿಯಾ ತಂಡಕ್ಕೆ ಮರಳುವ ಹೊತ್ತಿಗೆ ತಮ್ಮ ಮುಂಚೂಣಿ ಸ್ಥಾನವನ್ನು ಎಡಗೈ ವೇಗದ ಬೌಲರ್‌ ಮಿಚೆಲ್‌ ಜಾನ್ಸನ್‌ ಅಲಂಕರಿಸಿದ್ದರು. ಜೊತೆಗೆ, ಪೀಟರ್‌ ಸಿಡ್ಲ್‌, ಬೆನ್‌ ಹಿಲ್ಫೆನ್ಹಾಸ್‌ ಮತ್ತು ಡೊಗ್‌ ಬೊಲಿಂಗರ್‌ರಂತಹ ಬೌಲರ್‌ಗಳ ಆಗಮನದಿಂದಾಗಿ ಬ್ರೆಟ್‌ ಲೀ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಹೋರಾಡಬೇಕಾಯಿತು. ಆದರೂ, ಆಷಸ್‌ ಟೆಸ್ಟ್‌ ಸರಣಿಗೆ ಮುಂಚೆ, ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಅಭ್ಯಾಸ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬ್ರೆಟ್‌ ಲೀ ಆರು ವಿಕೆಟ್ ಗಳಿಸಿದರು. ಈ ಪಂದ್ಯದಲ್ಲಿ ರಿವರ್ಸ್‌ ಸ್ವಿಂಗ್‌ ಮಾಡಬಲ್ಲ ಏಕೈಕ ಬೌಲರ್‌ ಬ್ರೆಟ್‌ ಲೀ ಒಬ್ಬರೇ. ವೇಲ್ಸ್‌ ರಾಜಧಾನಿ ಕಾರ್ಡಿಫ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ ಪಂದ್ಯಕ್ಕೆ ಆಯ್ಕೆಯಾಗಲು ಸಾಲಿನಲ್ಲಿದ್ದರು. ಆದರೆ, ಎಡಪಕ್ಕದ ಸ್ನಾಯು ಎಳೆತ ಮತ್ತು ಪಕ್ಕೆಲುಬಿನ ನೋವಿನ ಕಾರಣ ಮೊದಲ ಮೂರು ಟೆಸ್ಟ್‌ಗಳಿಂದ ಬ್ರೆಟ್‌ ಲೀ ಹೊರಗುಳಿಯಬೇಕಾಯಿತು. ಪುನರಾಗಮನದ ಕುರಿತು ನಿರ್ಲಕ್ಷ್ಯಕ್ಕೆ ಒಳಗಾದ ಬ್ರೆಟ್‌ ಲೀ ಕೊನೆಯ ಎರಡು ಟೆಸ್ಟ್‌ಗಳಲ್ಲಿ ಆಡಲಿಲ್ಲ.

ಏಕದಿನ ಅಂತಾರಾಷ್ಟ್ರೀಯ ಕ್ರಿಕಟ್‌ ವೃತ್ತಿ ಬದಲಾಯಿಸಿ

 
2004-09-04 ಲಾರ್ಡ್ಸ್‌ನಲ್ಲಿ ಪಾಕಿಸ್ತಾನದ ವಿರುದ್ಧ ಬೌಲ್‌ ಮಾಡುತ್ತಿರುವ ಬ್ರೆಟ್‌ ಲೀ

ಬ್ರೆಟ್‌ ಲೀ ಆಸ್ಟ್ರೇಲಿಯಾ ಪರ ತಮ್ಮ ಏಕದಿನದ ಅಂತಾರಾಷ್ಟ್ರೀಯ ಕ್ರಿಕೆಟ್‌ ಚೊಚ್ಚಲ ಪ್ರವೇಶವನ್ನು 9 ಜನವರಿ 2000ದಂದು ಪಾಕಿಸ್ತಾನದ ವಿರುದ್ಧ, ಬ್ರಿಸ್ಬೇನ್‌ನ ಗಬ್ಬಾ ಕ್ರಿಕೆಟ್‌ ಮೈದಾನದಲ್ಲಿ ನಡೆದ ಕಾರ್ಲ್ಟನ್‌ ಅಂಡ್‌ ಯುನೈಟೆಡ್‌ ಬ್ರೂಯೆರೀಸ್‌ ಸೀರೀಸ್ ಪಂದ್ಯದೊಂದಿಗೆ ಆರಂಭಿಸಿದರು.

ಆಸ್ಟ್ರೇಲಿಯಾ ಪರ ಆಡಲು ಇವರು 140ನೆಯ ಏಕದಿನದ ಕ್ರಿಕೆಟ್‌ ಆಟಗಾರರಾದರು.


ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬ್ರೆಟ್‌ ಲೀ ವಿಶ್ವದಲ್ಲೇ ಅತ್ಯುತ್ತಮ ಮತ್ತು ಅಪಾಯಕಾರಿ ಬೌಲರ್‌ಗಳಲ್ಲೊಬ್ಬರು ಎಂದು ಪರಿಗಣಿತರಾಗಿದ್ದಾರೆ. ಜನವರಿ 2006ರಲ್ಲಿ ಬಿಡುಗಡೆಯಾದ ICC ಶ್ರೇಯಾಂಕಗಳಲ್ಲಿ ಬ್ರೆಟ್‌ ಲೀ ಅಗ್ರಸ್ಥಾನದ ಏಕದಿನ ಪಂದ್ಯದ ಬೌಲರ್‌‌ ಆಗಿದ್ದರು.[೩೦] 2003ರ ಆರಂಭದಿಂದಲೂ ಅವರು ಹತ್ತು ಉತ್ತಮ ODI ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅವರ ಬತ್ತಳಿಕೆಯಲ್ಲಿ ವಿವಿಧ ಚೆಂಡೆಸೆತಗಳ ಶ್ರೇಣಿಗಳಿವೆ. ಇವುಗಳಲ್ಲಿ ಅತ್ಯಂತ ಅಪಾಯಕಾರಿಯಾಗಿರುವುದು ಇನ್‌ಸ್ವಿಂಗಿಂಗ್ ಯಾರ್ಕರ್‌ಎಸೆತ. ಕ್ರಿಕೆಟ್‌ ಆಟದ ಈ ರೂಪದಲ್ಲಿ ಬ್ರೆಟ್‌ ಲೀಯವರ ಬೌಲಿಂಗ್ ಅಂಕಿಅಂಶ‌ ಸುಮಾರು 30ರಲ್ಲಿರುವ ಕಾರಣ, ಬ್ರೆಟ್‌ ಲೀ ಅತ್ಯಂತ ತೀಕ್ಷ್ಣ ಬೌಲರ್‌ಗಳಲ್ಲಿ ಒಬ್ಬರೆನಿಸಿದರು. ಅವರ ಹೆಸರಿನಲ್ಲಿ ಏಕದಿನದ ಹ್ಯಾಟ್ರಿಕ್‌ ಕೂಡ ಇದೆ. ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆದ 2003 ವಿಶ್ವ ಕಪ್‌ ಕ್ರಿಕೆಟ್‌ ಪಂದ್ಯದಲ್ಲಿ ಕೀನ್ಯಾ ವಿರುದ್ಧ ಹ್ಯಾಟ್ರಿಕ್‌ ಸಾಧಿಸಿದರು. ಕ್ರಿಕೆಟ್‌ ವಿಶ್ವಕಪ್‌ ಇತಿಹಾಸದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ ಮೊದಲ ಆಸ್ಟ್ರೇಲಿಯನ್ ಹಾಗೂ ನಾಲ್ಕನೆಯ ಬೌಲರ್‌ ಎನಿಸಿಕೊಂಡಿದ್ದಾರೆ.


2005-06 ಋತುವಿನಲ್ಲಿ ಆಸ್ಟ್ರೇಲಿಯಾ ಆಡಿದ ತ್ರಿಕೋನ ಏಕದಿನದ ಸರಣಿ ಪಂದ್ಯಗಳಲ್ಲಿ ಬ್ರೆಟ್‌ ಲೀ ತಮ್ಮ ಉಪಯುಕ್ತ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಬ್ರಿಸ್ಬೇನ್‌ನಲ್ಲಿ ನಡೆದ ಸರಣಿಯ ಎರಡನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಮೈಕಲ್‌ ಹಸ್ಸಿರೊಂದಿಗೆ 100 ರನ್‌ಗಳ ಜತೆಯಾಟದ ಮೂಲಕ ಆಸ್ಟ್ರೇಲಿಯವನ್ನು ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಕುಸಿತದಿಂದ ಪಾರು ಮಾಡಿದರು. ಆದರೆ, ಬ್ರೆಟ್‌ ಲೀ ಬ್ಯಾಟಿಂಗ್‌ಲ್ಲಿ ಇನ್ನಷ್ಟು ಸುಸಂಗತ ಕೊಡುಗೆ ಸಲ್ಲಿಸಬೇಕಾಗಿದೆ. ಅವರ ಪ್ರಸಕ್ತ ICC ಬ್ಯಾಟಿಂಗ್ ಶ್ರೇಯಾಂಕವು 90-100 ರ ಆಸುಪಾಸಿನಲ್ಲಿದೆ.


ಈ ಸರಣಿಯಲ್ಲಿ ಬ್ರೆಟ್‌ ಲೀ 15 ವಿಕೆಟ್‌ ಗಳಿಸಿದರು. ಇದು ನಾಥನ್ ಬ್ರ್ಯಾಕೆನ್‌ ಮತ್ತು ಮುತ್ತಯ್ಯ ಮುರಳಿಧರನ್‌ ನಂತರ ಮೂರನೆಯ ಅತಿ ಹೆಚ್ಚು ವಿಕೆಟ್‌ ಗಳಿಸಿದ ಬೌಲರ್‌ ಆದರು.


ಬ್ರೆಟ್ ಲೀಯವರ ಸರಾಸರಿ ಮತ್ತು ವಿಕೆಟ್ ಅಂಕಿಅಂಶವು ಏಕದಿನ ಪಂದ್ಯಗಳಲ್ಲಿ ಅತ್ಯುತ್ತಮ ಸ್ಟ್ರೈಕ್‌ ಬೌಲರ್‌ಗಳಲ್ಲಿ ಒಬ್ಬರೆಂಬ ದರ್ಜೆ ನೀಡಿದೆ. ಆದರೂ, ಅವರ ಬೌಲಿಂಗ್‌ ಕೆಲವೊಮ್ಮೆ ಎರ್ರಾಬಿರ್ರಿಯಾಗಿರುತ್ತದೆ ಎನ್ನುವುದು ಅದಕ್ಕೆ ಸಂಬಂಧಿಸಿದ ಅಧಿಕ ಬೌಲಿಂಗ್ ಅಂಕಿಅಂಶ ತೋರಿಸುತ್ತದೆ.


ಬ್ರೆಟ್‌ ಲೀ ಇನ್ನಿಂಗ್ಸ್‌ನ ಆರಂಭದಲ್ಲಿಯೇ ವಿಕೆಟ್‌ ಗಳಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.ಆಗಾಗ್ಗೆ ಇನ್ನಿಂಗ್ಸ್‌ನ ಮೊದಲ ಒವರ್‌ನಲ್ಲಿಯೇ ಎದುರಾಳಿ ಬ್ಯಾಟ್ಸ್‌ಮನ್‌ರನ್ನು ಔಟ್ ಮಾಡಿದ್ದಾರೆ.[೩೧] ದಕ್ಷಿಣ ಆಫ್ರಿಕಾದ ಪೋರ್ಟ್‌ ಎಲಿಜಬೆತ್‌ನಲ್ಲಿ ನಡೆದ 2003 ಕ್ರಿಕೆಟ್‌ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಬ್ರೆಟ್‌ ಲೀ ಶ್ರೀಲಂಕಾದ ಮರವನ್‌ ಅಟಪಟ್ಟುಗೆ ಬೌಲ್‌ ಮಾಡಿದ ಚೆಂಡಿನ ವೇಗ ಗಂಟೆಗೆ 160.1 ಕಿಮೀ (km/h)(99.5 mph) ಇತ್ತು.[೩೨]

ಬ್ಯಾಟಿಂಗ್ ಬದಲಾಯಿಸಿ

ಬ್ರೆಟ್‌ ಲೀಯವರ ಬ್ಯಾಟಿಂಗ್‌ ಯಾವಾಗಲೂ ಭರವಸೆಯನ್ನು ನೀಡುವಂತಿದೆ. ಇತ್ತೀಚೆಗಿನ ದಿನಗಳಲ್ಲಿ ಅವರ ಬ್ಯಾಟಿಂಗ್‌ ಸುಧಾರಣೆ ಕಾಣುತ್ತಿದೆ. ಕೊನೆಯ ಎರಡು ವರ್ಷಗಳಿಂದ, ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎರಡೂ ರೂಪಗಳಲ್ಲಿ ಇವರ ಬ್ಯಾಟಿಂಗ್‌ ಸರಾಸರಿ 20ಕ್ಕಿಂತ ತುಸು ಹೆಚ್ಚಿದೆ. ತಾವು ಆಲ್‌ರೌಂಡರ್ ಆಗಲು ಇಷ್ಟಪಟ್ಟಿದ್ದರೂ ಅದು ಮುಖ್ಯ ಆದ್ಯತೆಯಲ್ಲ ಎಂದು ಬ್ರೆಟ್‌ ಲೀ ಹೇಳಿದ್ದರು. 2005ರ ಆಷಸ್‌ ಸರಣಿಯಲ್ಲಿ ಬ್ರೆಟ್‌ ಲೀ ಹಲವು ಬಾರಿ ದೃಢವಾಗಿ ನಿಂತು ಬ್ಯಾಟ್‌ ಮಾಡಿ, ಬ್ಯಾಟ್ಸ್‌ಮನ್‌ ಆಗಿ ಭರವಸೆ ನೀಡಿದ್ದಾರೆ. ಬ್ರೆಟ್‌ ಲೀಯವರ ಆಕ್ರಮಣಕಾರಿ ಬ್ಯಾಟಿಂಗ್‌ ಶೈಲಿ ಮತ್ತು ಸಬಲ ಮೈಕಟ್ಟಿನ ಕಾರಣ ಅವರ ಬ್ಯಾಟಿಂಗ್‌‌ನಲ್ಲಿ ಅನೇಕ ಸಿಕ್ಸರ್‌ಗಳು ಬಂದಿವೆ. 2005ರಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಬ್ರೆಟ್‌ ಲೀ ಹೊಡೆದ ಒಂದು ಸಿಕ್ಸರ್‌ ಗಬ್ಬಾ(ಬ್ರಿಸ್ಬೇನ್) ಅಂಕಣದ ಆಚೆ ಹಾರಿಹೋಯಿತು. ಆ ಮೈದಾನದಲ್ಲಿ ಹೊಡೆಯಲಾದ ಅತಿ ಭಾರೀ ಸಿಕ್ಸರ್‌ ಎಂದು ಇದನ್ನು ಪರಿಗಣಿಸಲಾಗಿತ್ತು.


2 ಏಪ್ರಿಲ್‌ 2006ರಂದು, ಜೊಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಬ್ರೆಟ್‌ ಲೀ 68 ಚೆಂಡುಗಳನ್ನೆದುರಿಸಿ ತಮ್ಮ ಅತ್ಯಧಿಕ ಟೆಸ್ಟ್ ಸ್ಕೋರ್ 64 ರನ್‌ ಗಳಿಸಿದರು. ಇದಕ್ಕೆ ಮುಂಚಿನ ಅವರ ಅತ್ಯುನ್ನತ ಟೆಸ್ಟ್ ಸ್ಕೋರ್‌,2000ದಂದು ಗಬ್ಬಾದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಟೆಸ್ಟ್‌ ಪಂದ್ಯದಲ್ಲಿ ಅಜೇಯ 62 ಆಗಿತ್ತು. ಭಾರತದ ವಿರುದ್ಧ ಸಿಡ್ನಿಯಲ್ಲಿ 3 ಜನವರಿ 2008ರಂದು ನಡೆದ ಟೆಸ್ಟ್‌ ಪಂದ್ಯದಲ್ಲಿ ಬ್ರೆಟ್‌ ಲೀ 121 ಚೆಂಡುಗಳನ್ನೆದುರಿಸಿ 59 ರನ್‌ ಗಳಿಸಿದಾಗ ತಮ್ಮ ಅತ್ಯುನ್ನತ ಸ್ಕೋರ್‌ನ ಸನಿಹಕ್ಕೆ ಬಂದಿದ್ದರು. ಬ್ರೆಟ್‌ ಲೀ ಪುನಃ ತಮ್ಮ ಅತ್ಯಧಿಕ ಟೆಸ್ಟ್ ಸ್ಕೋರನ್ನು ಮೀರಿಸುವ ಸಮೀಪದಲ್ಲಿದ್ದರು. ಜೂನ್‌ 2008ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಆಂಟಿಗ್ವಾದಲ್ಲಿ ನಡೆದ 2ನೇ ಟೆಸ್ಟ್‌ ಪಂದ್ಯದಲ್ಲಿ ಅವರು ಅಜೇಯ 63 ರನ್‌ ಗಳಿಸಿದ್ದಾಗ ದುರದೃಷ್ಟವಶಾತ್ ರಿಕಿ ಪಾಂಟಿಂಗ್‌ ಆಸ್ಟ್ರೇಲಿಯಾ ತಂಡದ ಇನ್ನಿಂಗ್ಸ್‌ 'ಡಿಕ್ಲೇರ್‌' ಮಾಡಿಕೊಂಡರು. ಇದರ ಫಲವಾಗಿ ತಮ್ಮ ಅತ್ಯಧಿಕ ಸ್ಕೋರನ್ನು ಮುಟ್ಟಲು ಅವರಿಗೆ ಒಂದು ರನ್ ಕೊರತೆಯಾಯಿತು.


ಜನವರಿ 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಪಂದ್ಯದಲ್ಲಿ ಗಳಿಸಿದ 57 ರನ್‌ ಬ್ರೆಟ್‌ ಲೀಯವರ ಏಕದಿನ ಪಂದ್ಯದ ಅತ್ಯಧಿಕ ಸ್ಕೋರ್‌ ಆಗಿದೆ. ಇದಕ್ಕೂ ಮುಂಚೆ, 2002ರಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಗಳಿಸಿದ 51 ರನ್‌ ಅತ್ಯಧಿಕ ಸ್ಕೋರ್‌ ಆಗಿತ್ತು.

2003 ವಿಶ್ವ ಕಪ್‌ ಕ್ರಿಕೆಟ್‌ ಬದಲಾಯಿಸಿ

2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಬ್ರೆಟ್‌ ಲೀ ಆಸ್ಟ್ರೇಲಿಯಾ ತಂಡದ ಪರ ಪ್ರಮುಖ ಸಾಧನೆ ಮಾಡಿದ ಆಟಗಾರರಲ್ಲಿ ಒಬ್ಬರಾಗಿದ್ದರು. ಪಂದ್ಯಾವಳಿಯಲ್ಲಿ ಅವರು 83.1 ಒವರ್‌ಗಳನ್ನು ಬೌಲ್‌ ಮಾಡಿ, 17.90 ಸರಾಸರಿಯಲ್ಲಿ 22 ವಿಕೆಟ್‌ ಗಳಿಸಿದರು. ಈ ಪಂದ್ಯಾವಳಿಯಲ್ಲಿ 23 ವಿಕೆಟ್‌ ಗಳಿಸಿದ ಶ್ರೀಲಂಕಾ ತಂಡದ ಎಡಗೈ ಮಧ್ಯಮ ವೇಗದ ಬೌಲರ್‌ ಚಾಮಿಂಡಾ ವಾಸ್‌ ನಂತರ ಎರಡನೆಯವರಾಗಿ ಮುಗಿಸಿದರು. ಬ್ರೆಟ್‌ ಲೀ 22.68 ಸ್ಟ್ರೈಕ್ ರೇಟ್‌ನಲ್ಲಿ(ವಿಕೆಟ್ ಗಳಿಕೆ ಅಂಕಿಅಂಶ) ಮೂರನೆಯ ಪ್ರಮುಖ ಸ್ಥಾನದಲ್ಲಿದ್ದರು. ವೆಸ್ಟ್‌ ಇಂಡೀಸ್‌ ವೇಗದ ಬೌಲರ್‌ ವ್ಯಾಸ್ಬರ್ಟ್‌ ಡ್ರೇಕ್ಸ್‌ ಮತ್ತು ಆಸ್ಟ್ರೇಲಿಯಾ ಸಹಯೋಗಿ ಆಂಡ್ರೂ ಬಿಷೆಲ್‌ ಕ್ರಮವಾಗಿ 19.43 ಮತ್ತು 21.37ರಷ್ಟು ಸ್ಟ್ರೈಕ್‌ ರೇಟ್‌ನಲ್ಲಿ ಮೇಲ್ಮೈ ಸಾಧಿಸಿ ಮೊದಲೆರಡು ಸ್ಥಾನದಲ್ಲಿದ್ದರು.


ತಮ್ಮ 22 ವಿಕೆಟ್‌ಗಳ ಪೈಕಿ ಪಂದ್ಯಾವಳಿಯ ಗ್ರೂಪ್ ಹಂತದಲ್ಲಿ ಆರು, ಸೂಪರ್‌-ಸಿಕ್ಸ್‌ ಹಂತದಲ್ಲಿ 11, ಸೆಮಿಫೈನಲ್ ಪಂದ್ಯದಲ್ಲಿ ಮೂರು ಹಾಗೂ ಫೈನಲ್ ಪಂದ್ಯದಲ್ಲಿ ಎರಡು ವಿಕೆಟ್‌ ಗಳಿಸಿದರು. ಈ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅವರು ಆಸ್ಟ್ರೇಲಿಯಾದ ಟಾಸ್ಮಾನ್‌ ಆಚೆಯ ಎದುರಾಳಿ ನ್ಯೂಜಿಲೆಂಡ್‌ ವಿರುದ್ಧ, ಪೋರ್ಟ್‌ ಎಲಿಜಬೆತ್‌ನಲ್ಲಿ ನಡೆದ ಸುಪರ್‌-ಸಿಕ್ಸ್‌ ಪಂದ್ಯದಲ್ಲಿ ಬ್ರೆಟ್‌ ಲೀ 42 ರನ್‌ ನೀಡಿ 5 ವಿಕೆಟ್‌ ಗಳಿಸಿದರು. ಡರ್ಬನ್‌ನಲ್ಲಿ ಕೀನ್ಯಾದ ವಿರುದ್ಧ 14 ರನ್‌ ನೀಡಿ 3 ವಿಕೆಟ್ ಗಳಿಸಿ, ಸೂಪರ್‌-ಸಿಕ್ಸ್‌ ಹಂತದ ಕೊನೆಯ ಪಂದ್ಯದಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀಯ ಹ್ಯಾಟ್ರಿಕ್‌ ಗಳಿಸಿದರು.


ಈ ಪಂದ್ಯಾವಳಿಯ ಸಂದರ್ಭದಲ್ಲಿ ಬೌಲಿಂಗ್‌ ವೇಗದ ವಿಚಾರದಲ್ಲಿ, ಬ್ರೆಟ್‌ ಲೀ ಉತ್ತುಂಗಕ್ಕೇರಿದ್ದರು. ಇದೇ ಪಂದ್ಯಾವಳಿಯ ಗ್ರೂಪ್‌ ಹಂತದ ಪಂದ್ಯದಲ್ಲಿ ಬ್ರೆಟ್‌ ಲೀ,ಪೋರ್ಟ್‌ ಎಲಿಜಬೆತ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಗಂಟೆಗೆ 160.7 ಕಿಮೀkm/h ದಾಖಲಾದ ತಮ್ಮ ಹಿಂದಿನ ಅತಿವೇಗದ ಬೌಲಿಂಗ್‌ ಮಾಡಿದ್ದರು.

ಪ್ರಶಸ್ತಿಗಳು ಬದಲಾಯಿಸಿ



ಅಂಕಣದ ಹೊರಗಿನ ಜೀವನ ಬದಲಾಯಿಸಿ

ವೈಯಕ್ತಿಕ ಬದಲಾಯಿಸಿ

ಬ್ರೆಟ್‌ ಲೀ ಜೂನ್‌ 2006ರಲ್ಲಿ ಎಲಿಜಬೆತ್‌ ಕೆಂಪ್‌ರೊಂದಿಗೆ ವಿವಾಹವಾದರು. ಇವರಿಗೆ ಪ್ರೆಸ್ಟನ್‌ ಚಾರ್ಲ್ಸ್ ಎಂಬ ಪುತ್ರ 16 ನವೆಂಬರ್‌ 2006ರಲ್ಲಿ ಜನಿಸಿದ. ಆದರೆ, ಎರಡು ವರ್ಷಗಳ ವಿವಾಹದ ನಂತರ, 21 ಆಗಸ್ಟ್‌ 2008ರಂದು ಬ್ರೆಟ್‌ ಲೀ ಪತ್ನಿಯಿಂದ ಪ್ರತ್ಯೇಕವಾಗಿರುವುದನ್ನು ದೃಢಪಡಿಸಿದರು. [೧]. 2009ರಲ್ಲಿ ಅವರು ವಿಚ್ಛೇದನ ಪಡೆದರು.


ಸಿಕ್ಸ್‌‌ & ಔಟ್‌ ಎಂಬ ರಾಕ್‌ ವಾದ್ಯಗೋಷ್ಠಿಯ ಭಾಗವಾಗಿದ್ದರು. ಅವರ ಸಹೋದರ ಶೇನ್‌ ಹಾಗೂ ಮಾಜಿ ನ್ಯೂ ಸೌತ್‌ ವೇಲ್ಸ್‌ ಕ್ರಿಕೆಟರ್‌ಗಳಾದ ಬ್ರ್ಯಾಡ್‌ ಮ್ಯಾಕ್ನಾಮಾರಾ, ಗ್ಯಾವಿನ್‌ ರಾಬರ್ಟ್ಸನ್‌ ಮತ್ತು ರಿಚರ್ಡ್‌ ಚೀ ಕ್ವೀ ಈ ವಾದ್ಯವೃಂದದಲ್ಲಿದ್ದರು. ಈ ವಾದ್ಯವೃಂದದಲ್ಲಿ ಬ್ರೆಟ್‌ ಲೀ ಬಾಸ್‌ ಗಿಟಾರ್‌ ಅಥವಾ ಧ್ವನಿತರಂಗದ ಗಿಟಾರ್‌ ನುಡಿಸುತ್ತಾರೆ.[೩೪]


ಭಾರತದಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿ 2006ರ ಸಂದರ್ಭದಲ್ಲಿ, ಬ್ರೆಟ್ ಲೀ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆರೊಂದಿಗೆ ಯು'ರ್‌ ದಿ ಒನ್‌ ಫಾರ್‌ ಮಿ ಎಂಬ ಯುಗಳಗೀತೆ ದಾಖಲಿಸಿದರು. ಭಾರತದ ಹಾಗೂ ದಕ್ಷಿಣ ಆಫ್ರಿಕಾ ಸಂಗೀತ ಪಟ್ಟಿಗಳಲ್ಲಿ ಈ ಹಾಡು ಅತ್ಯುನ್ನತ ಎರಡನೆಯ ಸ್ಥಾನ ಗಿಟ್ಟಿಸಿತು. 2008ರಲ್ಲಿ ತಮ್ಮ ಮೊದಲ ಬಾಲಿವುಡ್‌ ಚಲನಚಿತ್ರ 'ವಿಕ್ಟರಿ 'ಗಾಗಿ ದೃಶ್ಯಗಳಲ್ಲಿ ನಟಿಸಿದರು.[೩೫][೩೬] ಅಲ್ಪಕಾಲ ಪ್ರಸಾರಗೊಂಡ 'ಪರ್ಸನಲ್‌ ಬೆಸ್ಟ್‌' ಎಂಬ ದೂರದರ್ಶನ ಕಾರ್ಯಕ್ರಮವನ್ನು ನಿರೂಪಿಸಿದರು.[೩೭]


2001ರಲ್ಲಿ ತಮ್ಮದೇ ಸ್ವಂತ ಉಡುಗೆಯ ಶೈಲಿಯ 'BL' ಆರಂಭಿಸಿದರು.

ಒಡಂಬಡಿಕೆಗಳು ಬದಲಾಯಿಸಿ

ಬ್ರೆಟ್‌ ಲೀಯವರ ಪ್ರಾಯೋಜಕತ್ವದ ಒಪ್ಪಂದಗಳಲ್ಲಿ ಉಪಾಹಾರ ಆಧಾರಿತ ದವಸ ವೀಟ್‌-ಬಿಕ್ಸ್‌ (ಒಂದು ಕಾಲದಲ್ಲಿ ಇದನ್ನು ಬ್ರೆಟ್‌-ಬಿಕ್ಸ್‌ ಎಂದು ಮಾರಾಟ ಮಾಡಲಾಗುತ್ತಿತ್ತು),[೩೮] ಗೆಟೊರೇಡ್‌ ಮತ್ತು ವೋಲ್ಕ್ಸ್‌ವ್ಯಾಗನ್‌ ಸೇರಿದ್ದವು. ಲೀ ಎರಡು ವೋಲ್ಕ್ಸ್‌ವ್ಯಾಗನ್‌ ವಾಹನಗಳ ಒಡೆಯರಾಗಿದ್ದಾರೆ.[೩೯]


ಅಂಕಣದೊಳಗಿನ ಪ್ರಾಯೋಜಕತ್ವದಲ್ಲಿ ಯುವೆಕ್ಸ್‌ ಸೇಫ್ಟಿ ಕನ್ನಡಕವೂ ಸೇರಿದೆ. ಇವರು ಸಧ್ಯಕ್ಕೆ ಯಾವುದೇ ಕ್ರಿಕೆಟ್‌ ಸಾಧನಾ ತಯಾರಕರೊಂದಿಗೂ ಪ್ರಾಯೋಜಿತರಾಗಿಲ್ಲ. ಟ್ರ್ಯಾವೆಲೆಕ್ಸ್‌ ಸಹ ಬ್ರೆಟ್‌ ಲೀ'ಸ್‌ ಬ್ಯಾಕ್ಯಾರ್ಡ್‌ ಕ್ರಿಕೆಟ್‌ ಎಂಬ ಆಟವನ್ನು ರಚಿಸಿದೆ. ಇದರಲ್ಲಿ ಬ್ರೆಟ್‌ ಲೀಯವರ ವ್ಯಂಗ್ಯಚಿತ್ರವನ್ನು ಕಾಣಬಹುದು.

ಭಾರತದಲ್ಲಿ ಬ್ರೆಟ್‌ ಲೀ ಅಪಾರ ಜನಪ್ರಿಯತೆ ಗಳಿಸಿರುವ ಕಾರಣ, ಭಾರತದಲ್ಲಿ ಅವರೊಂದಿಗೆ ಟೈಮೆಕ್ಸ್‌ ಕೈಗಡಿಯಾರಗಳು, ನ್ಯೂ ಬ್ಯಾಲೆನ್ಸ್‌ ಬೂಟುಗಳು, ಬೂಸ್ಟ್‌ ಶಕ್ತಿದಾಯಕ ಪಾನೀಯ ಮತ್ತು TVS (ಟಿವಿಎಸ್‌) ಮೊಟೊರ್‌ ಕಂಪನಿ ಸೇರಿದಂತೆ, ಹಲವು ಪ್ರಮುಖ ಪ್ರಾಯೋಜಕತ್ವದ ಒಪ್ಪಂದಗಳು ಚಾಲನೆಯಲ್ಲಿವೆ.

ಧರ್ಮದತ್ತಿ ಚಟುವಟಿಕೆ ಬದಲಾಯಿಸಿ

ಬ್ರೆಟ್‌ ಲೀ ಹಲವು ಧರ್ಮದತ್ತಿ ಸಂಸ್ಥೆಗಳಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಇದರಲ್ಲಿ ಸ್ಯಾಲ್ವೆಷನ್‌ ಆರ್ಮಿ, ಅಡ್ವೆಂಟಿಸ್ಟ್‌ ಡೆವೆಲಪ್ಮೆಂಟ್‌ ಅಂಡ್‌ ರಿಲೀಫ್‌ ಏಜೆನ್ಸಿ (ADRA) ಮತ್ತು ಮೇಕ್‌ ಎ ವಿಷ್‌ ಫೌಂಡೇಷನ್‌ ಸಂಸ್ಥೆಗಳು ಸೇರಿವೆ. ಈ ಪ್ರತಿಷ್ಠಾನದೊಂದಿಗಿನ ತಮ್ಮ ದೀರ್ಘಕಾಲದ ಸಂಬಂಧದ ಗೌರವಾರ್ಥವಾಗಿ ಬ್ರೆಟ್‌ ಲೀ 'ಆಫಿಷಿಯಲ್‌ ಪ್ರೆಂಡ್‌' ಆಗಿ ಹೆಸರಿಸಲ್ಪಟ್ಟಿದ್ದಾರೆ. ಆಪ್ತಮಿತ್ರನೊಬ್ಬ ಆತ್ಮಹತ್ಯೆ ಮಾಡಿಕೊಂಡಾಗ, ತಮ್ಮ ಅಣ್ಣ ಶೇನ್‌ರೊಂದಿಗೆ ಬ್ರೆಟ್‌ ಲೀ ADRAಗೆ ಬೆಂಬಲ ನೀಡಲಾರಂಭಿಸಿದರು.[೪೦]

ತಮ್ಮ ಪ್ರಾಯೋಜಕ ಗೆಟೊರೇಡ್‌ ಮೂಲಕ 'ಯೂತ್‌ ಆಫ್‌ ದಿ ಸ್ಟ್ರೀಟ್ಸ್‌' ಎಂಬ ಧರ್ಮದತ್ತಿ ಹರಾಜು ಜಾಲತಾಣದೊಂದಿಗೆ ಬ್ರೆಟ್‌ ಲೀ ಸಕ್ರಿಯರಾಗಿದ್ದಾರೆ. ಇಲ್ಲಿ, ಮುಖ್ಯವಾಹಿನಿಯ ಶಾಲೆ ವ್ಯವಸ್ಥೆಗಳಿಂದ ಹೊರಗುಳಿದು ಶಿಕ್ಷಣ ಮತ್ತು ಕೌಶಲ್ಯಗಳನ್ನು ಗಳಿಸಲು ಇಚ್ಛಿಸುವ ಯುವಕರಿಗಾಗಿ ಒಂದು ಕಾರ್ಯಕ್ರಮ ಒದಗಿಸುವ ಉದ್ದೇಶಕ್ಕಾಗಿ, ಚಿರಸ್ಮರಣೀಯ ವಸ್ತುಗಳನ್ನು ಹರಾಜು ಮಾಡಿ, ಹಣವನ್ನು ಕ್ರೋಢೀಕರಿಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]


ಅಕ್ಟೋಬರ್‌ನಲ್ಲಿ ಬ್ರೆಟ್‌ ಲೀಯವರನ್ನು ಭಾರತದಲ್ಲಿ ಡೀಕಿನ್‌ ಯುನಿವರ್ಸಿಟಿಯ ರಾಯಭಾರಿ ಎಂದು ಘೋಷಿಸಲಾಯಿತು. ಡೀಕಿನ್‌ ಇಂಡಿಯಾ ಸಂಶೋಧನಾ ಸಂಸ್ಥೆಯ ನಡೆಸುವ ಧರ್ಮಾರ್ಥ ಕಾರ್ಯಗಳ ಉತ್ತೇಜನಕ್ಕೆ ಅವರು ನೆರವು ನೀಡುವುದಾಗಿದೆ.


ಭಾರತದ ಪಟ್ಟಣ-ಹಳ್ಳಿಗಳಲ್ಲಿ ಉತ್ತಮ ರೀತಿಯ ನೈರ್ಮಲ್ಯ ಮತ್ತು ನೀರಿನ ಸೌಲಭ್ಯಗಳನ್ನು ಒದಗಿಸುವುದು ಇದರ ಧ್ಯೇಯಗಳಲ್ಲೊಂದು.  ಡೀಕಿನ್‌ ವಿಶ್ವವಿದ್ಯಾಲಯವು ಭಾರತದಲ್ಲಿ ಕಚೇರಿಯನ್ನು ಹೊಂದಿದ ಮೊದಲ ಆಸ್ಟ್ರೇಲಿಯನ್‌ ವಿಶ್ವವಿದ್ಯಾನಿಲಯವಾಗಿದೆ.  ಭಾರತದಲ್ಲಿ ತನ್ನದೇ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಂಸ್ಥೆಯನ್ನು ಸ್ಥಾಪಿಸುವಂತೆ ಕೋರಿಕೆ ಸ್ವೀಕರಿಸಿದ ಮೊದಲ ಸಂಸ್ಥೆಯಾಗಿದೆ.  ಧರ್ಮಾರ್ಥ ಕಾರ್ಯಕ್ರಮಗಳಿಗೆ ಬ್ರೆಟ್‌ ಲೀಯವರ ವಾದ್ಯವೃಂದ ಸಿಕ್ಸ್‌ ಅಂಡ್‌ ಔಟ್‌ ಸಂಗೀತ ಪ್ರದರ್ಶನಗಳನ್ನೂ ನೀಡುತ್ತಿದೆ.[ಸೂಕ್ತ ಉಲ್ಲೇಖನ ಬೇಕು]

ವೃತ್ತಿಜೀವನದ ಮುಖ್ಯಾಂಶಗಳು ಬದಲಾಯಿಸಿ

ಟೆಸ್ಟ್‌ಗಳು ಬದಲಾಯಿಸಿ

  • 2005ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಬ್ರಿಸ್ಬೇನ್‌ಗಬ್ಬಾದಲ್ಲಿ ನಡೆದ ಪಂದ್ಯದಲ್ಲಿ 30 ರನ್‌ ನೀಡಿ ಐದು ವಿಕೆಟ್‌ ಗಳಿಸಿರುವುದು ಬ್ರೆಟ್‌ ಲೀ ಅತ್ಯುತ್ತಮ ಟೆಸ್ಟ್‌ ಬೌಲಿಂಗ್‌ ಅಂಕಿಅಂಶವಾಗಿದೆ.
  • ಸಿಡ್ನಿಯಲ್ಲಿ 2003ರಲ್ಲಿ ಇಂಗ್ಲೆಂಡ್ ವಿರುದ್ಧ 27ನೇ ಟೆಸ್ಟ್ ಪಂದ್ಯದಲ್ಲಿ ಮಾರ್ಕಸ್ ಟ್ರೆಸ್‌ಕೋಥಿಕ್ ಅವರನ್ನು ಔಟ್ ಮಾಡಿದ್ದು ಲೀ ಅವರ 100ನೇ ವಿಕೆಟ್.
  • 2006ರಲ್ಲಿ ಬ್ರೆಟ್‌ ಲೀ ಡರ್ಬನ್‌ನಲ್ಲಿ ಆಡಿದ ತಮ್ಮ 51ನೆಯ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಮಾರ್ಕ್‌ ಬೌಷರ್‌) ಅವರನ್ನು ಔಟ್ ಮಾಡಿ, 200ನೆಯ ಟೆಸ್ಟ್‌ ವಿಕೆಟ್‌ ಗಳಿಸಿದರು.
  • 2006ನಲ್ಲಿ ಜೊಹಾನ್ಸ್‌ಬರ್ಗ್‌ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗಳಿಸಿದ 64 ರನ್‌ ಬ್ರೆಟ್‌ ಲೀಯವರ ಅತ್ಯುನ್ನತ ಟೆಸ್ಟ್‌ ಸ್ಕೋರ್‌ ಆಗಿದೆ.
  • 2006ರಲ್ಲಿ ಫತುಲ್ಲಾದಲ್ಲಿ ಬಾಂಗ್ಲಾದೇಶ ವಿರುದ್ಧ ಬ್ರೆಟ್‌ ಲೀ ತಮ್ಮ 53ನೆಯ ಟೆಸ್ಟ್‌ನಲ್ಲಿ 1,000 ರನ್‌ ಗಡಿ ತಲುಪಿದರು.
  • ಬ್ರೆಟ್‌ ಲೀ 2007ರಲ್ಲಿ, ಭಾರತದ ವಿರುದ್ಧ ಮೆಲ್ಬರ್ನ್‌ನಲ್ಲಿ ಆಡಿದ ತಮ್ಮ 62ನೆಯ ಟೆಸ್ಟ್‌ನಲ್ಲಿ ಅನಿಲ್‌ ಕುಂಬ್ಳೆ)ಅವರನ್ನು ಔಟ್ ಮಾಡಿ, 250ನೆಯ ವಿಕೆಟ್‌ ಗಳಿಸಿದರು.


  • 22 ನವೆಂಬರ್‌ 2008ರಂದು ಬ್ರೆಟ್‌ ಲೀ ಬ್ರಿಸ್ಬೇನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ ತಮ್ಮ 73ನೆಯ ಟೆಸ್ಟ್‌ನಲ್ಲಿ ಜಾಮೀ ಹೌ ಅವರನ್ನು ಔಟ್ ಮಾಡಿ,ತಮ್ಮ 300ನೆಯ ವಿಕೆಟ್‌ ಪಡೆದರು.

ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಬದಲಾಯಿಸಿ

ಚೊಚ್ಚಲ ODI(ಏಕದಿನ ಅಂತಾರಾಷ್ಟ್ರೀಯ) ಪಂದ್ಯ: ಪಾಕಿಸ್ತಾನದ ವಿರುದ್ಧ, ಬ್ರಿಸ್ಬೇನ್‌ನ ಗಬ್ಬಾದಲ್ಲಿ, 1999–00

ವಿರುದ್ಧ 22 ರನ್‌ ನೀಡಿ 5 ವಿಕೆಟ್‌


ಇತರೆ ಮಾಹಿತಿಗಳು ಬದಲಾಯಿಸಿ


  • ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಬಾಲಿವುಡ್‌ ನಟಿ ಪ್ರೀತಿ ಝಿಂಟಾ ಮತ್ತು ನೆಸ್‌ ವಾಡಿಯಾ ಸ್ವಾಮ್ಯದಲ್ಲಿರುವ ಕಿಂಗ್ಸ್‌ XI ಪಂಜಾಬ್‌ ತಂಡದ ಪರ ಆಡುವರು.
  • ಬ್ರೆಟ್‌ ಲೀ ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆಯಾದ ಕೂಡಲೇ, ಗ್ರೇಹೌಂಡ್‌ಓಟದ ಸ್ಪರ್ಧೆಯ ನಾಯಿಯೊಂದಕ್ಕೆ ಬ್ರೆಟ್‌ ಲೀ ಹೆಸರನ್ನಿಡಲಾಯಿತು. ನಾಲ್ಕು ಗ್ರೂಪ್‌ 1 ಓಟಗಳು ಮತ್ತು 7 ಟ್ರ್ಯಾಕ್‌ ರೆಕಾರ್ಡ್‌ಗಳು ಸೇರಿದಂತೆ 39 ಓಟಗಳಲ್ಲಿ 31ರಲ್ಲಿ ಗೆದ್ದಿರುವ ಈ ನಾಯಿಯು ಆಸ್ಟ್ರೇಲಿಯಾದ ಇತಿಹಾಸದಲ್ಲೇ ಅತ್ಯುತ್ತಮ ಗ್ರೇಹೌಂಡ್‌ ನಾಯಿಯೆಂದು ಪರಿಗಣಿತವಾಗಿದೆ.

ಆಕರಗಳು ಬದಲಾಯಿಸಿ

  1. http://www.howstat.com.au/cricket/Statistics/Players/PlayerYears.asp?PlayerID=2205
  2. http://www.howstat.com.au/cricket/Statistics/Matches/MatchPartnerships_ODI.asp?CountryCode=01
  3. ಲೀ ಅನ್‌ಲೀಶಸ್ ಹಿಸ್ ಫಾಸ್ಟೆಸ್ಟ್ ಡೆಲಿವರಿ: Cricinfo.com 25 ಜೂನ್‌ 2006ರಂದು ಹಿಂಪಡೆದದ್ದು.
  4. ಬ್ರೆಟ್‌ ಲೀ ಪ್ರೊಫೈಲ್ Archived 2009-11-22 ವೇಬ್ಯಾಕ್ ಮೆಷಿನ್ ನಲ್ಲಿ.: Yehhaicricket.com 27 ಜೂನ್‌ 2006ರಂದು ಹಿಂಪಡೆದದ್ದು.
  5. ಇಂಟರ್‌ನ್ಯಾಷನಲ್ ಬೌಲಿಂಗ್ ಸ್ಪೀಡ್ಸ್: Cricinfo.com 2 ಫೆಬ್ರುವರಿ 2007ರಂದು ಹಿಂಪಡೆದದ್ದು.
  6. Polack, John (2000-08-02). "Lee's action cleared by ICC panel". Cricinfo. {{cite news}}: |access-date= requires |url= (help)
  7. "Lee beamer lands him in hot water again". Cricinfo. 2005-07-04. Retrieved 2007-04-11.
  8. "Beamers are not intentional - Ponting". Cricinfo. 2005-02-28. Retrieved 2007-04-16.
  9. ಸ್ಟ್ಯಾಟ್ಸ್‌ಗುರು - ಬಿ ಲೀ - ಟೆಸ್ಟ್ಸ್ - ಕೆರೀರ್ ಸಮ್ಮರಿ[ಶಾಶ್ವತವಾಗಿ ಮಡಿದ ಕೊಂಡಿ]: Cricinfo.com 26 ಏಪ್ರಿಲ್‌ 2007.
  10. "ಜಿಯೊಸಿಟೀಸ್‌: ಬಾಬ್‌ ಮತ್ತು ಹೆಲೆನ್‌ ಲೀ". Archived from the original on 2009-10-26. Retrieved 2009-10-26.
  11. ದಿ ಟೈಮ್ಸ್‌ ಆಫ್‌ ಇಂಡಿಯಾ, ಬ್ರೆಟ್‌ ರಾಕ್ಸ್‌ ದಿ ಹೌಸ್‌ [ಶಾಶ್ವತವಾಗಿ ಮಡಿದ ಕೊಂಡಿ]
  12. ಬ್ರೆಟ್‌ ಲೀ ಅಂಡ್‌ ಶೊಯೆಬ್‌ ಮೇ ಸೂನ್‌ ಆಪರೇಟ್‌ ಟುಗೆದರ್‌ Archived 2006-06-20 ವೇಬ್ಯಾಕ್ ಮೆಷಿನ್ ನಲ್ಲಿ. Hinduonnet.com 27 ಜೂನ್‌ 2006ರಂದು ಹಿಂಪಡೆದಿದ್ದು.
  13. ಷೆಫೀಲ್ಡ್‌ ಷೀಲ್ಡ್‌ 1997/98: ಬೆಸ್ಟ್ ಬೌಲಿಂಗ್ ಎವರೇಜಸ್: Cricinfo.com 26 ಏಪ್ರಿಲ್‌ 2007ರಂದು ಹಿಂಪಡೆದದ್ದು.
  14. ಷೆಫೀಲ್ಡ್‌ ಷೀಲ್ಡ್‌, 1998/99 - ಎವರೇಜಸ್: Cricinfo.com 26 ಏಪ್ರಿಲ್‌ 2007ರಂದು ಹಿಂಪಡೆದದ್ದು.
  15. "Australia in Pakistan, 2002-03 Test Series Averages". Cricinfo. 2007-04-16.
  16. "England in Australia, 2002-03 Test Series Averages". Cricinfo. 2007-04-16.
  17. ಬಾಂಗ್ಲಾದೇಶ ಇನ್ ಆಸ್ಟ್ರೇಲಿಯ,2003 ಟೆಸ್ಟ್ ಸೀರೀಸ್ ಎವರೇಜಸ್: Cricinfo.com 26 ಏಪ್ರಿಲ್‌ 2007ರಂದು ಹಿಂಪಡೆದದ್ದು.
  18. ಇಂಜುರಿ ಡ್ಯಾಷಸ್‌ ಬ್ರೆಟ್‌ ಲೀ'ಸ್‌ ಪ್ಯಾಸೇಜ್ ಟು ಇಂಡಿಯಾ: SMH.com.au 27 ಜೂನ್‌ 2006ರಂದು ಹಿಂಪಡೆದದ್ದು.
  19. ಇಂಡಿಯ ಇನ್ ಆಸ್ಟ್ರೇಲಿಯ,2003-04 ಟೆಸ್ಟ್‌ ಸೀರೀಸ್ ಎವರೇಜಸ್: Cricinfo.com 26 ಏಪ್ರಿಲ್‌ 2007ರಂದು ಹಿಂಪಡೆದದ್ದು.
  20. ಸ್ಟ್ಯಾಟ್ಸ್‌ಗುರು - ಬ್ರೆಟ್‌ ಲೀ - ಟೆಸ್ಟ್‌ಗಳು - ಇನ್ನಿಂಗ್ಸ್‌ಬೈ ಇನ್ನಿಂಗ್ಸ್ ಲಿಸ್ಟ್[ಶಾಶ್ವತವಾಗಿ ಮಡಿದ ಕೊಂಡಿ], ಕ್ರಿಕ್ ಇನ್ಫೊದಿಂದ 26 ಜೂನ್ 2006ರಲ್ಲಿ ಹಿಂಪಡೆದದ್ದು
  21. ಸ್ಟ್ಯಾಟ್ಸ್‌ಗುರು - ಎಂಎಸ್‌ ಕ್ಯಾಸ್ಪ್ರೊವಿಕ್ಜ್‌ - ಟೆಸ್ಟ್‌ಗಳು - ಸೀರೀಸ್-ಎವರೇಜಸ್ [ಶಾಶ್ವತವಾಗಿ ಮಡಿದ ಕೊಂಡಿ]: Cricinfo.com 26 ಏಪ್ರಿಲ್‌ 2007ರಂದು ಹಿಂಪಡೆದದ್ದು.
  22. ಆಸ್ಟ್ರೇಲಿಯ ಇನ್ ಇಂಗ್ಲೆಂಡ್,2005 ಟೆಸ್ಟ್‌ ಸೀರೀಸ್,ಎವರೇಜಸ್, ಕ್ರಿಕ್ ಇನ್ಫೊದಿಂದ, 26 ಜೂನ್‌ 2006ರಂದು ಹಿಂಪಡೆದದ್ದು.
  23. ಲೀ ಆಪ್ಟ್ಸ್‌ ಫಾರ್‌ ಲೈನ್‌ ಅಂಡ್‌ ಲೆಂಗ್ತ್‌: Cricinfo.com 25 ಜೂನ್‌ 2006ರಂದು ಹಿಂಪಡೆದದ್ದು.
  24. ಐ'ಮ್‌ ದೇರ್‌ ಟು ಬೌಲ್‌‌ ಫಾಸ್ಟ್‌ - ಲೀ: Cricinfo.com 25 ಜೂನ್‌ 2006ರಂದು ಹಿಂಪಡೆದದ್ದು.
  25. "2006: Penalties imposed on players for breaches of ICC Code of Conduct". International Cricket Council. Archived from the original on 2007-02-20. Retrieved 2007-01-30.
  26. ಬ್ರೆಟ್‌ ಲೀ ದಿ ಲೀಡರ್‌ ರೆಡಿ ಫಾರ್‌ ಲೈಫ್‌ ವಿತೌಟ್‌ ಮೆಕ್‌ಗ್ರಾ: Cricinfo.com 26 ಜೂನ್‌ 2006ರಂದು ಹಿಂಪಡೆದದ್ದು.
  27. 2005 ಕ್ಯಾಲೆಂಡರ್‌ ಇಯರ್‌ ಟೆಸ್ಟ್‌ ಬೌಲಿಂಗ್‌ - ಮೋಸ್ಟ್‌ ವಿಕೆಟ್ಸ್‌, ಕ್ರಿಕ್ ಇನ್ಫೊದಿಂದ, 26 ಜೂನ್‌ 2006ರಂದು ಹಿಂಪಡೆದದ್ದು.
  28. ಆಸ್ಟ್ರೇಲಿಯ ಇನ್ ಬಾಂಗ್ಲಾದೇಶ್, 2005-06 ಟೆಸ್ಟ್‌ ಸೀರಿಸ್ ಎವರೇಜಸ್: Cricinfo.com 26 ಏಪ್ರಿಲ್‌ 2007ರಂದು ಹಿಂಪಡೆದದ್ದು.
  29. ದಿ ಆಷಸ್‌ 06/07 ಸ್ಟ್ಯಾಟಿಸ್ಟಿಕ್ಸ್‌ Archived 2007-09-28 ವೇಬ್ಯಾಕ್ ಮೆಷಿನ್ ನಲ್ಲಿ.: Cricketworld.com 31 ಜನವರಿ 2007ರಂದು ಹಿಂಪಡೆದದ್ದು.
  30. ಬ್ರೆಟ್‌ ಲೀ, ಗಿಲ್‌ಕ್ರಿಸ್ಟ್‌ ಟಾಪ್‌ ICC ODI ರ‌್ಯಾಂಕಿಂಗ್ಸ್‌ Rediff.com 25 ಜೂನ್‌ 2006ರಂದು ಹಿಂಪಡೆದದ್ದು.
  31. ಲೀ ಪಾಯ್ಸ್ಡ್‌ ಟು ರಿಕ್ಯಾಪ್‌ ಕೆರಿಯರ್‌ ಅಟ್‌ ಲಾರ್ಡ್ಸ್‌ Archived 2011-09-30 ವೇಬ್ಯಾಕ್ ಮೆಷಿನ್ ನಲ್ಲಿ.: BrettLee.net 26 ಜೂನ್‌ 2006 ಹಿಂಪಡೆದದ್ದು.
  32. "Australia v Sri Lanka at Port Elizabeth, 18 March 2003. Ball-by-Ball Commentary". cricinfo.com. Retrieved 2006-08-10.
  33. ೩೩.೦ ೩೩.೧ "Lee wins Allan Border Medal". Fox Sports. 2008-02-26. Retrieved 2008-02-26.
  34. ಬ್ರೆಟ್‌ ರಾಕ್ಸ್‌ ದಿ ಹೌಸ್‌! Indiatimes.com 25 ಜೂನ್‌ 2006ರಂದು ಹಿಂಪಡೆದದ್ದು.
  35. ಬ್ರೆಟ್ ಲೀ ಟು ಸ್ಟಾರ್ ಇನ್ ಬಾಲಿವುಡ್ ಫಿಲ್ಮ್ ಆನ್ ಕ್ರಿಕೆಟ್[ಶಾಶ್ವತವಾಗಿ ಮಡಿದ ಕೊಂಡಿ]
  36. "ಬ್ರೆಟ್‌ ಲೀ ಟು ಸಿಂಗ್ ಫಾರ್ ವಿಕ್ಟರಿ ಆಸ್ ವೆಲ್". Archived from the original on 2009-01-13. Retrieved 2010-02-25.
  37. "ಬ್ರೆಟ್‌ ಲೀ ಟ್ರಿವಿಯಾ". Archived from the original on 2011-07-14. Retrieved 2010-02-25.
  38. ಮೋರ್‌ ಕ್ರಿಕೆಟರ್ಸ್‌ ಹಿಟ್‌ ಸಿಕ್ಸೆಸ್‌ ಇನ್ ಅರ್ನಿಂಗ್ಸ್‌: theage.com.au 15 ಮಾರ್ಚ್‌ 2007ರಂದು ಹಿಂಪಡೆದದ್ದು.
  39. ಬ್ರೆಟ್‌ ಲೀ ಚೂಸಸ್‌ ಗಾಲ್ಫ್‌ GTI: nextcar.com.au 8 ಮಾರ್ಚ್‌ 2006ರಂದು ಹಿಂಪಡೆದದ್ದು.
  40. ಬ್ಯಾಟಿಂಗ್‌ ಫಾರ್‌ ಅಟ್‌-ರಿಸ್ಕ್‌ ಯೂತ್‌ Archived 2006-08-22 ವೇಬ್ಯಾಕ್ ಮೆಷಿನ್ ನಲ್ಲಿ. Signsofthetimes.org.au 26 ಜೂನ್‌ 2006ರಂದು ಹಿಂಪಡೆದದ್ದು.
  41. http://stats.cricinfo.com/ci/engine/stats/index.html?class=2;filter=advanced;ground=10;orderby=start;template=results;type=bowling;view=innings;wicketsmin1=5;wicketsval1=wickets

ಹೊರಗಿನ ಕೊಂಡಿಗಳು ಬದಲಾಯಿಸಿ


ಪೂರ್ವಾಧಿಕಾರಿ
Ricky Ponting
Allan Border Medal winner
2008
ಉತ್ತರಾಧಿಕಾರಿ
Michael Clarke
Ricky Ponting


ಟೆಂಪ್ಲೇಟು:300 ODI wickets club

  1. REDIRECT Template:New South Wales Cricket Team